We will send you 4 digit OTP to confirm your number
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೆ, ನಾವು ಕೆಲ ದಿನಗಳ ಹಿಂದೆ 'ಮನದ ಮಾತಿನಲ್ಲಿ' ಕಾಶಿ-ತಮಿಳು ಸಂಗಮಂ, ಸೌರಾಷ್ಟ್ರ-ತಮಿಳು ಸಂಗಮಂ ಬಗ್ಗೆ ಮಾತನಾಡಿದ್ದೇವೆ. ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ಕಾಶಿ-ತೆಲುಗು ಸಂಗಮಂ ಕೂಡ ನಡೆದಿತ್ತು. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವಕ್ಕೆ ಶಕ್ತಿ ತುಂಬುವ ಇಂತಹ ಮತ್ತೊಂದು ವಿಶಿಷ್ಟ ಪ್ರಯತ್ನ ದೇಶದಲ್ಲಿ ನಡೆದಿದೆ. ಅದೇ ಯುವ ಸಂಗಮದ ಪ್ರಯತ್ನ. ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾದ ಜನರಿಂದ ಈ ಕುರಿತು ವಿವರವಾಗಿ ಕೇಳಬೇಕೆಂದು ನಾನು ಆಲೋಚಿಸಿದೆ. ಅದಕ್ಕಾಗಿಯೇ ಇಬ್ಬರು ಯುವಕರು ಇದೀಗ ನನ್ನೊಂದಿಗೆ ಫೋನ್ನ ಸಂಪರ್ಕದಲ್ಲಿದ್ದಾರೆ - ಒಬ್ಬರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಅವರು ಮತ್ತು ಇನ್ನೊಬ್ಬರು ಬಿಹಾರದ ಪುತ್ರಿ ವಿಶಾಖಾ ಸಿಂಗ್. ಮೊದಲು ಗ್ಯಾಮರ್ ನ್ಯೋಕುಮ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ನಮಸ್ಕಾರ!
ಗ್ಯಾಮರ್: ನಮಸ್ತೆ ಮೋದಿ ಜೀ!
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ಎಲ್ಲಕ್ಕಿಂತ ಮೊದಲು ನಾನು ನಿಮ್ಮ ಬಗ್ಗೆ ತಿಳಿಯಲು ಬಯಸುತ್ತೇನೆ
ಗ್ಯಾಮರ್ ಜೀ - ಮೋದಿ ಜೀ, ಮೊದಲನೆಯದಾಗಿ ತಾವು ಬಹಳ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ ನನ್ನೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಮತ್ತು ಭಾರತ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾನು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ.
ಪ್ರಧಾನ ಮಂತ್ರಿ: ನಿಮ್ಮ ತಂದೆ ಮತ್ತು ಕುಟುಂಬದ ಇತರರು ಏನು ಮಾಡುತ್ತಾರೆ.
ಗ್ಯಾಮರ್ ಜಿ: ನನ್ನ ತಂದೆ ಸಣ್ಣ ವ್ಯಾಪಾರ ಮತ್ತು ಅದರ ಜೊತೆಗೆ ಎಲ್ಲರೂ ಸೇರಿ ಒಂದಷ್ಟು ಕೃಷಿ ಕೆಲಸ ಮಾಡುತ್ತಾರೆ.
ಪ್ರಧಾನಿ: ಯುವ ಸಂಗಮ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು, ಯುವಾ ಸಂಗಮಕ್ಕೆ ಎಲ್ಲಿಗೆ ಹೋದಿರಿ? ಹೇಗೆ ಹೋದಿರಿ, ಅಲ್ಲಿ ಏನಾಯಿತು?
ಗ್ಯಾಮರ್ : ಮೋದಿ ಜೀ, ನನಗೆ, ನನ್ನ ಸಂಸ್ಥೆ, ಎನ್ಐಟಿ ಯುವ ಸಂಗಮ್ ಬಗ್ಗೆ ಮಾಹಿತಿ ನೀಡಿತು. ನೀವು ಅದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿತು. ನಾನು ಮತ್ತೆ ಅಂತರ್ಜಾಲದಲ್ಲಿ ಸ್ವಲ್ಪ ಮಾಹಿತಿ ಹುಡುಕಿದೆ, ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಎಂದು ನನಗೆ ತಿಳಿಯಿತು, ನನ್ನ ಏಕ್ ಭಾರತ್ ಶ್ರೇಷ್ಠ ಭಾರತ್ನ ದೃಷ್ಟಿಕೋನಕ್ಕೆ ಇದು ಬಹಳಷ್ಟು ಕೊಡುಗೆ ನೀಡಬಲ್ಲದು ಮತ್ತು ನನಗೆ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ ಎಂದು ಅರಿತು ತಕ್ಷಣವೇ, ನಾನು, ವೆಬ್ಸೈಟ್ ಮೂಲಕ ಅದಕ್ಕೆ ಸೇರ್ಪಡೆಗೊಂಡೆ. ನನ್ನ ಅನುಭವ ತುಂಬಾ ಸಂತೋಷದಾಯಕವಾಗಿತ್ತು, ತುಂಬಾ ಚೆನ್ನಾಗಿತ್ತು.
ಪ್ರಧಾನಿ: ನೀವು ಯಾವುದಾದರೂ ಆಯ್ಕೆ ಮಾಡಬೇಕಿತ್ತೇ?
ಗ್ಯಾಮರ್: ಮೋದಿ ಜಿ ವೆಬ್ಸೈಟ್ ತೆರೆದಾಗ, ಅರುಣಾಚಲದ ನಿವಾಸಿಗಳಿಗೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಆಂಧ್ರಪ್ರದೇಶ ಐಐಟಿ ತಿರುಪತಿ ಮತ್ತು ಎರಡನೆಯದು ಕೇಂದ್ರೀಯ ವಿಶ್ವವಿದ್ಯಾಲಯ, ರಾಜಸ್ಥಾನ ಆದ್ದರಿಂದ ನಾನು ನನ್ನ ಮೊದಲ ಆದ್ಯತೆಯನ್ನು ರಾಜಸ್ಥಾನ ಎಂದು ಆಯ್ಕೆಮಾಡಿದೆ, ಎರಡನೇ ಆದ್ಯತೆ ನಾನು ಐಐಟಿ ತಿರುಪತಿ ಮಾಡಿದೆ. ಹಾಗಾಗಿ ರಾಜಸ್ಥಾನಕ್ಕೆ ಆಯ್ಕೆಯಾದೆ. ಆದ್ದರಿಂದ ನಾನು ರಾಜಸ್ಥಾನಕ್ಕೆ ಹೋದೆ.
ಪ್ರಧಾನಿ: ನಿಮ್ಮ ರಾಜಸ್ಥಾನ ಭೇಟಿ ಹೇಗಿತ್ತು? ನೀವು ಮೊದಲ ಬಾರಿಗೆ
ರಾಜಸ್ಥಾನಕ್ಕೆ ಹೋಗಿದ್ದಿರೋ!
ಗ್ಯಾಮರ್: ಹೌದು, ನಾನು ಮೊದಲ ಬಾರಿಗೆ ಅರುಣಾಚಲದಿಂದ ಹೊರಗೆ ಹೋಗಿದ್ದೆ.
ರಾಜಸ್ಥಾನದ ಈ ಎಲ್ಲಾ ಕೋಟೆಗಳನ್ನು ನಾನು ಚಲನ ಚಿತ್ರ ಮತ್ತು ಫೋನ್ನಲ್ಲಿ ಮಾತ್ರ ನೋಡಿದ್ದೆ, ಹಾಗಾಗಿ ಮೊದಲ ಬಾರಿಗೆ ನಾನು ಹೋದಾಗ ನನ್ನ ಅನುಭವ ತುಂಬಾ ಚೆನ್ನಾಗಿತ್ತು, ಅಲ್ಲಿನ ಜನರು ತುಂಬಾ ಒಳ್ಳೆಯವರು ಮತ್ತು ನಮಗೆ ನೀಡಿದ ಆತಿಥ್ಯ ತುಂಬಾ ಚೆನ್ನಾಗಿತ್ತು. ನಾವು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಲಭಿಸಿತು, ರಾಜಸ್ಥಾನದ ದೊಡ್ಡ ಸರೋವರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ, ನಾನು ಅರಿಯದೇ ಇರುವ ಮಳೆ ನೀರು ಕೊಯ್ಲು ಮುಂತಾದ ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು , ಆದ್ದರಿಂದ ರಾಜಸ್ಥಾನ ಭೇಟಿ ನನಗೆ ತುಂಬಾ ಇಷ್ಟವಾಯಿತು .
ಪ್ರಧಾನಿ: ಅರುಣಾಚಲವೂ ವೀರರ ನಾಡು, ರಾಜಸ್ಥಾನವೂ ವೀರರ ನಾಡು, ಸೇನೆಯಲ್ಲಿ ರಾಜಸ್ಥಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅರುಣಾಚಲದ ಗಡಿಯಲ್ಲಿರುವ ಸೈನಿಕರ ಮಧ್ಯೆ ರಾಜಸ್ಥಾನದವರನ್ನು ಭೇಟಿಯಾದಾಗ, ನೀವು ಖಂಡಿತವಾಗಿಯೂ ಅವರೊಂದಿಗೆ ಮಾತನಾಡುತ್ತೀರಿ. ಅವರನ್ನು ನೋಡಿ, ನಾನು ರಾಜಸ್ಥಾನಕ್ಕೆ ಹೋಗಿದ್ದೆ, ನನಗೆ ಅದ್ಭುತ ಅನುಭವವಾಯಿತು ಎಂದು ಹೇಳಿದಾಗ, ನಿಮ್ಮ ನಿಕಟತೆಯೂ ಹೆಚ್ಚುತ್ತದೆ. ರಾಜಸ್ಥಾನದಲ್ಲಿ ಕೆಲವು ಸಾಮ್ಯತೆಗಳನ್ನು ನೀವು ಗಮನಿಸಿರಬಹುದು, ಅರುಣಾಚಲದಲ್ಲೂ ಅದೇ ರೀತಿಯದ್ದನ್ನು ಕಂಡಾಗ ನಿಮಗೆ ವಿಶಿಷ್ಟ ಅನುಭೂತಿಯಾಗುತ್ತದೆ ಅಲ್ಲವೇ, ಇದು ನಿಮಗೆ ದೊರೆತ ಬಹುದೊಡ್ಡ ಅನುಕೂಲ.
ಗ್ಯಾಮರ್: ಮೋದಿ ಜೀ, ನಾನು ಕಂಡುಕೊಂಡ ಒಂದೇ ಒಂದು ಸಾಮ್ಯತೆ ಎಂದರೆ ಅದು ದೇಶ ಪ್ರೇಮ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಬಗ್ಗೆ ನನ್ನ ಭಾವನೆ, ನನ್ನ ಅನುಭೂತಿ ಏಕೆಂದರೆ ಅರುಣಾಚಲದಲ್ಲಿಯೂ ಸಹ ಜನರು ತಾವು ಭಾರತೀಯರು ಎಂದು ತುಂಬಾ ಹೆಮ್ಮೆಪಡುತ್ತಾರೆ, ಮತ್ತು ರಾಜಸ್ಥಾನದ ಜನರು ತಮ್ಮ ಮಾತೃಭೂಮಿಯನ್ನು ತುಂಬಾ ಪ್ರೀತಿಸುತ್ತಾರೆ ಎಂಬುದು ನನಗೆ ತಿಳಿಯಿತು. ವಿಶೇಷವಾಗಿ ಯುವ ಪೀಳಿಗೆ ನನ್ನ ದೇಶಕ್ಕಾಗಿ ಏನು ಮಾಡಬಲ್ಲೆ ಎಂಬ ಚಿಂತನೆ ಹೊಂದಿದೆ. ಅದು ತುಂಬಾ ಹೆಮ್ಮೆ ಎನಿಸುತ್ತದೆ, ಏಕೆಂದರೆ ನಾನು ಅಲ್ಲಿ ಅನೇಕ ಯುವಕರೊಂದಿಗೆ ಸಂವಹನ ನಡೆಸಿದ್ದೇನೆ, ಅವರಲ್ಲಿ ಮತ್ತು ಅರುಣಾಚಲ ಯುವಜನತೆಯಲ್ಲಿ ಸಾಕಷ್ಟು ಸಾಮ್ಯತೆಯನ್ನು ಕಂಡಿದ್ದೇನೆ. ದೇಶಕ್ಕಾಗಿ ತುಡಿಯುವ ಮತ್ತು ಎನನ್ನಾದರೂ ಮಾಡಬೇಕೆನ್ನುವ ಹಂಬಲದ ವಿಷಯದಲ್ಲಿ ಎರಡೂ ರಾಜ್ಯಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.
ಪ್ರಧಾನಿ: ಅಲ್ಲಿ ಭೇಟಿಯಾದ ಸ್ನೇಹಿತರೊಂದಿಗೆ ಸ್ನೇಹ ಮುಂದುವರಿಯಿತೋ, ಇಲ್ಲಿ
ಬಂದ ಮೇಲೆ ಮರೆತುಬಿಟ್ಟಿರೊ?
ಗ್ಯಾಮರ್ : ಇಲ್ಲ, ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಸ್ನೇಹ ವೃದ್ಧಿಯಾಗುತ್ತಿದೆ.
ಪ್ರಧಾನಿ: ಹಾಂ...! ಹಾಗಾದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಾ?
ಗ್ಯಾಮರ್: ಹೌದು ಮೋದಿ ಜೀ, ನಾನು ಸಕ್ರಿಯವಾಗಿದ್ದೇನೆ.
ಪ್ರಧಾನಿ: ಹಾಗಾದರೆ ನೀವು ಬ್ಲಾಗ್ ಬರೆಯಬೇಕು, ನಿಮ್ಮ ಈ ಯುವ ಸಂಗಮದ ಅನುಭವ ಹೇಗಿತ್ತು, ನೀವು ಹೇಗೆ ನೋಂದಾಯಿಸಿಕೊಂಡಿರಿ, ರಾಜಸ್ಥಾನದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂಬುದನ್ನು ವಿವರಿಸಿ. ಇದರಿಂದ ದೇಶದ ಯುವಕರು ಏಕ್ ಭಾರತ್ ಶ್ರೇಷ್ಠ ಭಾರತ್ನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ, ಈ ಯೋಜನೆ ಏನಿದೆ, ಯುವಕರು ಇದರ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ಅರಿಯುತ್ತಾರೆ. ನಿಮ್ಮ ಅನುಭವದ ಬಗೆಗೆ ಸಂಪೂರ್ಣ ಬ್ಲಾಗ್ ಬರೆಯಿರಿ, ಅದು ಅನೇಕ ಜನರಿಗೆ ಓದಲು ಉಪಯುಕ್ತವಾಗುತ್ತದೆ.
ಗ್ಯಾಮರ್ : ಹೌದು, ನಾನು ಖಂಡಿತವಾಗಿಯೂ ಬರೆಯುತ್ತೇನೆ.
ಪ್ರಧಾನ ಮಂತ್ರಿ: ಗ್ಯಾಮರ್ ಜೀ, ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು. ನೀವೆಲ್ಲ ಯುವಕರು ದೇಶಕ್ಕೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ಬಹಳ ಮುಖ್ಯ. ಏಕೆಂದರೆ ಈ 25 ವರ್ಷಗಳು - ನಿಮ್ಮ ಜೀವನಕ್ಕಾಗಿ ಮತ್ತು ದೇಶದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿವೆ. ಆದ್ದರಿಂದ ನಿಮಗೆ ಅನಂತ ಶುಭಾಷಯಗಳು ಧನ್ಯವಾದ.
ಗ್ಯಾಮರ್: ತಮಗೂ ಧನ್ಯವಾದಗಳು ಮೋದಿಜೀ.
ಪ್ರಧಾನಿ: ನಮಸ್ಕಾರ, ಸೋದರ.
ಸ್ನೇಹಿತರೇ, ಅರುಣಾಚಲದ ಜನತೆ ಎಷ್ಟು ಆತ್ಮೀಯರು ಎಂದರೆ ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುತ್ತೇನೆ. ಯುವ ಸಂಗಮದಲ್ಲಿ ಗ್ಯಾಮರ್ ಅವರ ಅನುಭವ ಅತ್ಯುತ್ತಮವಾಗಿತ್ತು. ಬನ್ನಿ, ಈಗ ಬಿಹಾರದ ಮಗಳು ವಿಶಾಖಾ ಸಿಂಗ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ವಿಶಾಖಾ ಅವರೇ, ನಮಸ್ಕಾರ.
ವಿಶಾಖಾ: ಮೊದಲನೆಯದಾಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ನಮಸ್ಕಾರಗಳು ಮತ್ತು ನನ್ನೊಂದಿಗೆ ಎಲ್ಲಾ ಪ್ರತಿನಿಧಿಗಳ ಪರವಾಗಿಯೂ ನಿಮಗೆ ಅನಂತ ನಮನಗಳು.
ಪ್ರಧಾನಿ: ಸರಿ ವಿಶಾಖಾ ಅವರೆ, ಮೊದಲು ನಿಮ್ಮ ಬಗ್ಗೆ ಹೇಳಿ. ಜೊತೆಗೆ ಯುವ ಸಂಗಮದ ಬಗ್ಗೆ ಕೂಡ ನಾನು ತಿಳಿಯಬಯಸುತ್ತೇನೆ.
ವಿಶಾಖಾ ಜಿ: ನಾನು ಬಿಹಾರದ ಸಸಾರಂ ನಗರದ ನಿವಾಸಿಯಾಗಿದ್ದು, ನನ್ನ ಕಾಲೇಜಿನ ವಾಟ್ಸಾಪ್ ಗುಂಪಿನ ಸಂದೇಶದ ಮೂಲಕ ಯುವ ಸಂಗಮದ ಬಗ್ಗೆ ಮೊದಲ ಬಾರಿಗೆ ನನಗೆ ತಿಳಿಯಿತು. ತದನಂತರ ನಾನು ಅದರ ಬಗ್ಗೆ ಅದು ಏನು ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡೆ. ಹಾಗಾಗಿ ಇದು ಪ್ರಧಾನಮಂತ್ರಿ ಅವರ ಯೋಜನೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಮೂಲಕ ಇದೊಂದು ಯುವ ಸಂಗಮ ಎಂಬುದು ತಿಳಿಯಿತು. ಆ ನಂತರ ಅರ್ಜಿ ಸಲ್ಲಿಸಿದೆ, ಅರ್ಜಿ ಹಾಕಿದಾಗ ಅದಕ್ಕೆ ಸೇರಲು ಬಹಳ ಉತ್ಸುಕಳಾಗಿದ್ದೆ. ಅಲ್ಲಿಂದ ತಮಿಳುನಾಡಿಗೆ ಪ್ರಯಾಣಿಸಿ ಮರಳಿ ಬಂದೆ. ನನಗೆ ದೊರೆತ exposure ನಿಂದಾಗಿ, ನಾನು ಈ ಕಾರ್ಯಕ್ರಮದ ಭಾಗವಾಗಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ, ಆದ್ದರಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವೆನಿಸಿದೆ ಮತ್ತು ನಮ್ಮಂತಹ ಯುವಕರಿಗಾಗಿ ಭಾರತದ ವಿವಿಧ ಭಾಗಗಳ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವಂತೆ ಮಾಡಿದ ಇಂತಹ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದ್ದಕ್ಕೆ ನಿಮಗೆ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಪ್ರಧಾನ ಮಂತ್ರಿ: ವಿಶಾಖಾ ಅವರೆ, ನೀವು ಏನು ಅಧ್ಯಯನ ಮಾಡುತ್ತಿದ್ದೀರಿ?
ವಿಶಾಖಾ ಜಿ: ನಾನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಎರಡನೇ ವರ್ಷದ ವಿದ್ಯಾರ್ಥಿ.
ಪ್ರಧಾನ ಮಂತ್ರಿ: ಸರಿ, ವಿಶಾಖಾ ಅವರೆ, ನೀವು ಯಾವ ರಾಜ್ಯಕ್ಕೆ ಹೋಗಬೇಕು, ಎಲ್ಲಿ ಪಾಲ್ಗೊಳ್ಳಬೇಕು? ಮುಂತಾದ ನಿರ್ಧಾರವನ್ನು ಹೇಗೆ ತೆಗೆದುಕೊಂಡಿರಿ?
ವಿಶಾಖಾ: ನಾನು ಈ ಯುವ ಸಂಗಮ್ ಬಗ್ಗೆ ಗೂಗಲ್ನಲ್ಲಿ ಹುಡುಕಲು ಪ್ರಾರಂಭಿಸಿದಾಗ, ಬಿಹಾರದ ಪ್ರತಿನಿಧಿಗಳನ್ನು ತಮಿಳುನಾಡಿನ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದಿತ್ತು. ತಮಿಳುನಾಡು ನಮ್ಮ ದೇಶದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ರಾಜ್ಯ, ಹಾಗಾಗಿ ಬಿಹಾರದ ಜನರನ್ನು ತಮಿಳುನಾಡಿಗೆ ಕಳುಹಿಸುತ್ತಿರುವುದನ್ನು ಅಲ್ಲಿಗೆ ಹೋದಾಗ ನೋಡಿದೆ, ಇದು ನಾನು ಅರ್ಜಿ ತುಂಬಬೇಕು ಮತ್ತು ಅಲ್ಲಿಗೆ ಹೋಗಿ, ಬೇಕೋ ಬೇಡವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ತುಂಬಾ ಸಹಾಯ ಮಾಡಿತು. ನಾನು ಅದರಲ್ಲಿ ಭಾಗವಹಿಸಿದ್ದಕ್ಕಾಗಿ ಇಂದು ತುಂಬಾ ಹೆಮ್ಮೆಪಡುತ್ತೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ.
ಪ್ರಧಾನಿ: ಇದು ತಮಿಳುನಾಡಿಗೆ ನಿಮ್ಮ ಮೊದಲ ಭೇಟಿಯಾಗಿತ್ತೇ?
ವಿಶಾಖಾ: ಹೌದು, ನಾನು ಮೊದಲ ಬಾರಿಗೆ ಹೋಗಿದ್ದೆ.
ಪ್ರಧಾನ ಮಂತ್ರಿ : ಸರಿ, ಯಾವುದಾದರೂ ವಿಶೇಷವಾಗಿ ನೆನಪಿಟ್ಟುಕೊಳ್ಳುವ ವಿಷಯ ಹೇಳಬೇಕೆಂದರೆ ನೀವು ಯಾವುದನ್ನು ಹೇಳುವಿರಿ? ದೇಶದ ಯುವ ಸಮುದಾಯ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ವಿಶಾಖಾ: ಸರ್, ಇಡೀ ಪ್ರಯಾಣವನ್ನು ನಾನು ಪರಿಗಣಿಸಿದರೆ ಅದು ನನಗೆ ಬಹಳ ಚೆನ್ನಾಗಿತ್ತು. ಪ್ರತಿಯೊಂದು ಹಂತದಲ್ಲೂ ನಾವು ಬಹಳ ಉತ್ತಮ ವಿಷಯಗಳನ್ನು ಕಲಿತೆವು. ನಾನು ತಮಿಳುನಾಡಿನಲ್ಲಿ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ. ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡೆ. ಅಲ್ಲಿನ ಜನರನ್ನು ನಾನು ಭೇಟಿಯಾದೆ. ಆದರೆ ನನಗೆ ಅಲ್ಲಿ ಬಹಳ ಇಷ್ಟವಾದ ವಿಷಯಗಳಲ್ಲಿ ಮೊದಲನೆಯದೆಂದರೆ ಇಸ್ರೋಗೆ ಹೋಗಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ, ಮತ್ತು ನಾವು ಪ್ರತಿನಿಧಿಗಳಾಗಿದ್ದರಿಂದ ಅದಕ್ಕಾಗಿ ನಮಗೆ ಇಸ್ರೋಗೆ ಪ್ರವೇಶ ದೊರೆಯಿತು. ಜೊತೆಗೆ ಎರಡನೆಯ ಬಹಳ ಒಳ್ಳೆಯ ವಿಷಯವೆಂದರೆ, ನಾವು ರಾಜಭವನಕ್ಕೆ ಹೋಗಿದ್ದು, ಮತ್ತು ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿದ್ದು. ಈ ಎರಡೂ ಸಂದರ್ಭಗಳು ನನಗೆ ಬಹಳ ಇಷ್ಟವಾಯಿತು. ನಮ್ಮಂತಹ ಯುವ ಜನತೆಗೆ ಸಾಮಾನ್ಯವಾಗಿ ದೊರೆಯದ ಈ ಅವಕಾಶ ನಮಗೆ ಯುವಾ ಸಂಗಮ್ ಮುಖಾಂತರ ದೊರೆಯಿತು. ಇದು ನನ್ನ ಪಾಲಿಗೆ ಬಹಳ ಉತ್ತಮವಾದ ಮತ್ತು ನೆನಪಿನಲ್ಲಿ ಉಳಿಯುವಂತಹ ಕ್ಷಣವಾಗಿದೆ.
ಪ್ರಧಾನ ಮಂತ್ರಿ : ಬಿಹಾರದಲ್ಲಿ ಆಹಾರ ಪದ್ಧತಿಯೇ ಬೇರೆ ಮತ್ತು ತಮಿಳುನಾಡಿನಲ್ಲಿ ಆಹಾರ ಪದ್ಧತಿಯೇ ಬೇರೆ.
ವಿಶಾಖಾ : ಹೌದು ಸರ್.
ಪ್ರಧಾನಮಂತ್ರಿ : ಹಾಗಾದರೆ ನೀವು ಪೂರ್ತಿಯಾಗಿ ಹೊಂದಿಕೊಂಡಿರೇ?
ವಿಶಾಖಾ: ನಾವು ಅಲ್ಲಿಗೆ ಹೋದಾಗ, ಅಲ್ಲಿ ತಮಿಳುನಾಡಿನಲ್ಲಿ ಒಂದು ಸೌತ್ ಇಂಡಿಯನ್ ಕ್ಯುಸಿನ್ ಇತ್ತು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ನಮಗೆ ದೋಸೆ, ಇಡ್ಲಿ, ಸಾಂಬಾರ್, ಉತ್ತಪ್ಪಮ್, ವಡಾ, ಉಪ್ಪಿಟ್ಟು ಇವುಗಳನ್ನೆಲ್ಲಾ ನೀಡಲಾಯಿತು. ನಾವು ಅದನ್ನು ಮೊದಲ ಬಾರಿ ತಿಂದಾಗಲೇ ಅವು ನಮಗೆ ಬಹಳ ಇಷ್ಟವಾಯಿತು. ಅಲ್ಲಿನ ಆಹಾರ ಪದ್ಧತಿ ಬಹಳವೇ ಆರೋಗ್ಯಕರವಾಗಿದೆ, ವಾಸ್ತವದಲ್ಲಿ ರುಚಿಯಲ್ಲಿ ಕೂಡಾ ಬಹಳ ಉತ್ತಮವಾಗಿರುತ್ತದೆ. ನಮ್ಮ ಉತ್ತರ ಭಾಗದ ಆಹಾರಕ್ಕಿಂತ ಬಹಳ ಭಿನ್ನವಾಗಿರುತ್ತದೆ. ನನಗೆ ಅಲ್ಲಿನ ಆಹಾರ ಬಹಳ ಇಷ್ಟವಾಯಿತು. ಹಾಗೆಯೇ ಅಲ್ಲಿನ ಜನರು ಕೂಡಾ ಬಹಳ ಇಷ್ಟವಾದರು.
ಪ್ರಧಾನಮಂತ್ರಿ : ಹಾಗಾದರೆ ನಿಮಗೆ ತಮಿಳುನಾಡಿನಲ್ಲಿ ಸ್ನೇಹಿತರು ಕೂಡಾ ದೊರೆತರಲ್ಲವೇ?
ವಿಶಾಖಾ : ಹೌದು ಸರ್! ನಾವು ಅಲ್ಲಿ NIT ಟ್ರಿಚಿಯಲ್ಲಿ ಉಳಿದುಕೊಂಡಿದ್ದೆವು, ಅದಾದ ನಂತರ IIT ಮದ್ರಾಸ್ ನಲ್ಲಿ. ಎರಡೂ ಕಡೆಗಳಲ್ಲೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನನಗೆ ಸ್ನೇಹವಾಯಿತು. ಅಲ್ಲದೇ, ಒಂದು ಸಿಐಐ ನ ಸ್ವಾಗತ ಸಮಾರಂಭ ಕೂಡಾ ಇತ್ತು, ಅಲ್ಲಿಗೆ ಸುತ್ತಮುತ್ತಲಿನ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಕೂಡಾ ಬಂದಿದ್ದರು. ನಾವು ಆ ವಿದ್ಯಾರ್ಥಿಗಳೊಂದಿಗೆ ಕೂಡಾ ಮಾತನಾಡಿದೆವು ಮತ್ತು ಅವರನ್ನೆಲ್ಲಾ ಭೇಟಿಯಾಗಿದ್ದು ನನಗೆ ಬಹಳ ಸಂತೋಷ ನೀಡಿತು. ಇವರಲ್ಲಿ ಬಹಳಷ್ಟು ಜನ ನನ್ನ ಸ್ನೇಹಿತರು. ತಮಿಳುನಾಡಿನಿಂದ ಬಿಹಾರಕ್ಕೆ ಬರುತ್ತಿರುವ ಕೆಲವು ಪ್ರತಿನಿಧಿಗಳನ್ನು ಕೂಡಾ ಭೇಟಿ ಮಾಡಿದೆವು ಮತ್ತು ನಾವು ಅವರೊಂದಿಗೆ ಕೂಡಾ ಮಾತುಕತೆ ನಡೆಸಿದೆವು. ನಾವು ಈಗಲೂ ಕೂಡಾ ಅವರೊಂದಿಗೆ ಮಾತನಾಡುತ್ತಿರುತ್ತೇವೆ ಇದಿಂದ ನನಗೆ ಬಹಳ ಸಂತೋಷವಾಗುತ್ತದೆ.
ಪ್ರಧಾನಮಂತ್ರಿ: ವಿಶಾಖಾ ಅವರೇ ನೀವು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಗ್ ಬರೆಯಿರಿ ಮತ್ತು ಈ ಯುವ ಸಂಗಮ್, ಏಕ್ ಭಾರತ್ ಶ್ರೇಷ್ಠ್ ಭಾರತ್, ಮತ್ತು ತಮಿಳುನಾಡಿನಲ್ಲಿ ನಿಮಗೆ ದೊರೆತ ಪರಿಚಯ, ಅಲ್ಲಿ ನಿಮಗೆ ದೊರೆತ ಆದರ, ಆತ್ಮೀಯತೆ, ಸ್ವಾಗತ, ಆತಿಥ್ಯ ತಮಿಳು ಜನರ ಪ್ರೀತಿ ನಿಮಗೆ ದೊರೆತ ಬಗ್ಗೆ ಕೂಡಾ ದೇಶಕ್ಕೆ ನೀವು ತಿಳಿಯಪಡಿಸಿ. ಬರೆಯುತ್ತೀರಲ್ಲವೇ ?
ವಿಶಾಖಾ : ಖಂಡಿತಾ ಸರ್ !
ಪ್ರಧಾನಮಂತ್ರಿ : ನಿಮಗೆ ನನ್ನ ಅನೇಕಾನೇಕ ಶುಭ ಹಾರೈಕೆಗಳು ಮತ್ತು ಅನೇಕಾನೇಕ ಧನ್ಯವಾದ.
ವಿಶಾಖಾ : ಧನ್ಯವಾದ ಸರ್. ನಮಸ್ಕಾರ
ಗ್ಯಾಮರ್ ಮತ್ತು ವಿಶಾಖಾ ನಿಮಗೆ ನನ್ನ ಶುಭಹಾರೈಕೆಗಳು. ಯುವ ಸಂಗಮ್ ನಲ್ಲಿ ನೀವು ಕಲಿತ ವಿಷಯಗಳು ಜೀವನಪೂರ್ತಿ ನಿಮ್ಮೊಂದಿಗೆ ಇರಲಿ. ಇದು ನಿಮಗೆಲ್ಲರಿಗೂ ನನ್ನ ಶುಭ ಹಾರೈಕೆ.
ಸ್ನೇಹಿತರೇ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ನಮ್ಮ ದೇಶದಲ್ಲಿ ನೋಡಲು ಬಹಳಷ್ಟಿದೆ. ಇದನ್ನು ಮನಗಂಡ ಶಿಕ್ಷಣ ಸಚಿವಾಲಯವು, ಯುವ ಸಂಗಮ್ ಹೆಸರಿನಲ್ಲಿ ಒಂದು ಅತ್ಯುತ್ತಮ ಉಪಕ್ರಮ ಕೈಗೊಂಡಿದೆ. ಜನರಿಂದ ಜನರಿಗೆ ಸಂಪರ್ಕ ಹೆಚ್ಚಿಸುವುದರೊಂದಿಗೆ ದೇಶದ ಯುವಜನತೆಗೆ ಪರಸ್ಪರ ಬೆರೆಯುವ ಅವಕಾಶ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇದರೊಂದಿಗೆ ಜೋಡಣೆ ಮಾಡಲಾಗಿದೆ. ‘ಯುವಸಂಗಮ್’ ನಲ್ಲಿ ಯುವಜನತೆ ಬೇರೆ ರಾಜ್ಯಗಳ ನಗರ ಮತ್ತು ಗ್ರಾಮಗಳಿಗೆ ಹೋಗುತ್ತಾರೆ, ಅವರಿಗೆ ಬೇರೆ ಬೇರೆ ರೀತಿಯ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಯುವಸಂಗಮ್ ನ ಮೊದಲ ಸುತ್ತಿನಲ್ಲಿ ಸುಮಾರು 1200 ಮಂದಿ ಯುವಜನತೆ ದೇಶದ 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಇದರ ಭಾಗವಾಗುವ ಯುವಜನತೆ, ಜೀವನಪೂರ್ತಿ ತಮ್ಮ ಹೃದಯದಲ್ಲಿ ಉಳಿಯುವಂತಹ ಉತ್ತಮ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಅನೇಕ ದೊಡ್ಡ ಕಂಪೆನಿಗಳ ಸಿಇಒಗಳು, ವ್ಯಾಪಾರ ಮುಖಂಡರು ಬ್ಯಾಗ್ ಪ್ಯಾಕರ್ ಗಳಂತೆ ಭಾರತದಲ್ಲಿ ಸಮಯ ಕಳೆದಿರುವುದನ್ನು ನಾವು ನೋಡಿದ್ದೇವೆ. ನಾನು ಬೇರೆ ದೇಶಗಳ ಮುಖಂಡರನ್ನು ಭೇಟಿ ಮಾಡಿದಾಗ, ತಾವು ತಮ್ಮ ಯೌವನಾವಸ್ಥೆಯಲ್ಲಿ ಭಾರತಕ್ಕೆ ಪ್ರವಾಸ ಬಂದು ತಿರುಗಾಡಿದ್ದಾಗಿ ಅವರು ನನಗೆ ಹೇಳುತ್ತಾರೆ. ನಮ್ಮ ಭಾರತ ದೇಶದಲ್ಲಿ ತಿಳಿದುಕೊಳ್ಳುವ ಮತ್ತು ನೋಡಬೇಕಾದ ಎಷ್ಟೊಂದು ವಿಷಯಗಳು ಮತ್ತು ಸ್ಥಳಗಳಿವೆ ಎಂದರೆ ಪ್ರತಿಬಾರಿಯೂ ನಿಮ್ಮ ಕುತೂಹಲ ಹೆಚ್ಚುತ್ತಲೇ ಇರುತ್ತದೆ. ಈ ರೋಮಾಂಚನಕಾರಿ ಅನುಭವಗಳನ್ನು ತಿಳಿದ ನಂತರ ನೀವು ಕೂಡಾ ದೇಶದ ಬೇರೆ ಬೇರೆ ಭಾಗಗಳ ಪ್ರವಾಸ ಮಾಡುವುದಕ್ಕೆ ಪ್ರೇರಿತರಾಗುತ್ತೀರಿ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನು ಜಪಾನ್ ದೇಶದ ಹಿರೋಷಿಮಾದಲ್ಲಿ ಇದ್ದೆ. ಅಲ್ಲಿ ನನಗೆ Hiroshima Peace Memorial museum ಗೆ ಭೇಟಿ ನೀಡುವ ಅವಕಾಶ ದೊರೆಯಿತು. ಇದೊಂದು ಭಾವನಾತ್ಮಕ ಅನುಭವವಾಗಿತ್ತು. ನಾವು ನಮ್ಮ ಇತಿಹಾಸದ ನೆನಪುಗಳನ್ನು ರಕ್ಷಿಸಿ ಇರಿಸಿದಾಗ, ಮುಂಬರುವ ಪೀಳಿಗೆಗೆ ಅದು ಬಹಳ ಸಹಾಯವಾಗುತ್ತದೆ. ಕೆಲವೊಮ್ಮೆ ನಮಗೆ ಸಂಗ್ರಹಾಲಯದಲ್ಲಿ ಹೊಸ ಪಾಠ ದೊರೆತರೆ, ಕೆಲವೊಮ್ಮೆ ನಮಗೆ ಕಲಿಯಲು ಬಹಳಷ್ಟು ವಿಚಾರಗಳು ದೊರೆಯುತ್ತವೆ. ಕೆಲವೇ ದಿನಗಳ ಹಿಂದೆ ಭಾರತದಲ್ಲಿ International Museum Expo ಕೂಡಾ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಪಂಚದ 1200 ಕ್ಕೂ ಅಧಿಕ ಸಂಗ್ರಹಾಲಯಗಳ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು. ಇಲ್ಲಿ ನಮ್ಮ ಭಾರತದಲ್ಲಿ, ನಮ್ಮ ಭೂತಕಾಲಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರದರ್ಶಿಸುವಂತಹ, ಬೇರೆ ಬೇರೆ ರೀತಿಯ ಸಂಗ್ರಹಾಲಯಗಳಿವೆ, ಗುರುಗ್ರಾಮ್ ನಲ್ಲಿ - Museo Camera ಎನ್ನುವ ವಿಶಿಷ್ಠ ಸಂಗ್ರಹಾಲಯವಿದೆ, ಇದರಲ್ಲಿ 1860 ರ ನಂತರದ ಸುಮಾರು 8 ಸಾವಿರಕ್ಕೂ ಅಧಿಕ ಕ್ಯಾಮೆರಾಗಳ ಸಂಗ್ರಹವಿದೆ. ತಮಿಳುನಾಡಿನ Museum of Possibilities ಅನ್ನು ನಮ್ಮ ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು, ವಿನ್ಯಾಸ ಮಾಡಲಾಗಿದೆ. ಮುಂಬಯಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಅಧಿಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇರಿಸಲಾಗಿದೆ. 2010 ರಲ್ಲಿ ಸ್ಥಾಪನೆಯಾದ Indian Memory Project ಒಂದು ರೀತಿಯಲ್ಲಿ Online museum ಆಗಿದೆ. ಪ್ರಪಂಚಾದ್ಯಂತ ಕಳುಹಿಸಲಾದ ಚಿತ್ರಗಳು ಮತ್ತು ಕತೆಗಳ ಮೂಲಕ ಭಾರತದ ಭವ್ಯ ಇತಿಹಾಸದ ಕೊಂಡಿಗಳನ್ನು ಸಂಪರ್ಕಿಸುವಲ್ಲಿ ಇದು ತೊಡಗಿಸಿಕೊಂಡಿದೆ. ವಿಭಜನೆಯ ಭೀಕರತೆಗೆ ಸಂಬಂಧಿಸಿದ ನೆನಪುಗಳನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಕಳೆದ ವರ್ಷಗಳಲ್ಲಿ ಭಾರತದಲ್ಲಿ ಹೊಸ ಹೊಸ ರೀತಿಯ ಸಂಗ್ರಹಾಲಯಗಳು ಸ್ಥಾಪನೆಯಾಗಿರುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸೋದರ ಸೋದರಿಯರ ಕೊಡುಗೆಯನ್ನು ಸ್ಮರಣಾರ್ಥ 10 ಹೊಸ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿರುವ ವಿಪ್ಲವ ಭಾರತ ಗ್ಯಾಲರಿಯೇ ಆಗಿರಲಿ ಅಥವಾ ಜಲಿಯನ್ ವಾಲಾ ಬಾಗ್ ಸ್ಮಾರಕಗಳ ಪುನರುಜ್ಜೀವನವೇ ಇರಲಿ, ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಸಮರ್ಪಿಸಲಾದ ಪಿಎಂ ಮ್ಯೂಸಿಯಂ ಕೂಡಾ ಇಂದು ದೆಹಲಿಯ ಶೋಭೆಯನ್ನು ಹೆಚ್ಚಿಸುತ್ತಿದೆ. ದೆಹಲಿಯಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ, (ನ್ಯಾಷನಲ್ ವಾರ್ ಮೆಮೋರಿಯಲ್ ) ಮತ್ತು ಪೊಲೀಸ್ ಸ್ಮಾರಕ (ಪೊಲೀಸ್ ಮೆಮೋರಿಯಲ್) ನಲ್ಲಿ ಪ್ರತಿದಿನ ಅನೇಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಬರುತ್ತಾರೆ. ಐತಿಹಾಸಿಕ ದಂಡಿ ಸತ್ಯಾಗ್ರಹಕ್ಕೆ ಸಮರ್ಪಿಸಲಾದ ದಂಡಿ ಸ್ಮಾರಕ ಅಥವಾ Statue of Unity Museum ಆಗಿರಲಿ. ಸರಿ ನಾನು ಇಲ್ಲಿಗೆ ನಿಲ್ಲಿಸಬೇಕಾಗುತ್ತದೆ ಏಕೆಂದರೆ ದೇಶಾದ್ಯಂತ ಇರುವ ಸಂಗ್ರಹಾಲಯಗಳ ಪಟ್ಟಿ ಬಹಳ ದೊಡ್ಡದಿದೆ ಮತ್ತು ಮೊದಲ ಬಾರಿಗೆ ದೇಶದಲ್ಲಿ ಎಲ್ಲಾ ಸಂಗ್ರಹಾಲಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಕಂಪೈಲ್ ಕೂಡಾ ಮಾಡಲಾಗಿದೆ. ಮ್ಯೂಸಿಯಂ ಯಾವ ವಿಷಯದ ಮೇಲೆ ಆಧರಿತವಾಗಿದೆ, ಅಲ್ಲಿ ಯಾವ ರೀತಿಯ ವಸ್ತುಗಳನ್ನು ಇರಿಸಲಾಗಿದೆ, ಅಲ್ಲಿನ ಸಂಪರ್ಕ ವಿವರಗಳೇನು – ಇವೆಲ್ಲವನ್ನೂ ಒಂದು ಆನ್ಲೈನ್ ಡೈರೆಕ್ಟರಿಯಲ್ಲಿ ಅಡಕಗೊಳಿಸಲಾಗಿದೆ. ನಿಮಗೆ ಅವಕಾಶ ದೊರೆತಾಗ, ದೇಶದ ಈ ಸಂಗ್ರಹಾಲಯಗಳನ್ನು ನೋಡಲು ನೀವು ಖಂಡಿತವಾಗಿಯೂ ಹೋಗಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿಯಾಗಿದೆ. ನೀವು ಅಲ್ಲಿನ ಆಕರ್ಷಕ ಚಿತ್ರಗಳನ್ನು #(Hashtag) Museum Memories ನಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದರಿಂದ ನಮ್ಮ ವೈಭವೋಪೇತ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕ ಮತ್ತಷ್ಟು ಬಲಿಷ್ಠವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ಒಂದು ಹೇಳಿಕೆಯನ್ನು ಅನೇಕ ಬಾರಿ ಕೇಳಿರಬಹುದು, ಆಗಿಂದಾಗ್ಗೆ ಕೇಳಿರಬಹುದು, ಅದೆಂದರೆ – ನೀರಿಲ್ಲದೇ ಎಲ್ಲವೂ ಶೂನ್ಯ . ನೀರಿಲ್ಲದೇ ಜೀವನದಲ್ಲಿ ಬಿಕ್ಕಟ್ಟಂತೂ ಇದ್ದೇ ಇರುತ್ತದೆ ಮಾತ್ರವಲ್ಲದೇ ವ್ಯಕ್ತಿ ಮತ್ತು ದೇಶದ ಅಭಿವೃದ್ಧಿಯೂ ನಿಂತು ಹೋಗುತ್ತದೆ. ಭವಿಷ್ಯದ ಈ ಸವಾಲನ್ನು ನೋಡಿ, ಇಂದು ದೇಶದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಅಮೃತ ಸರೋವರ ಏತಕ್ಕಾಗಿ ವಿಶೇಷವೆಂದರೆ, ಇವುಗಳನ್ನು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಜನರ ಅಮೃತ ಪ್ರಯತ್ನವಿದೆ. ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.
ಸ್ನೇಹಿತರೇ, ನಾವು ಪ್ರತಿ ಬೇಸಿಗೆಯಲ್ಲೂ ಇದೇ ರೀತಿ ನೀರಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಈ ಬಾರಿ ಕೂಡಾ ನಾವು ಈ ವಿಷಯ ತೆಗೆದುಕೊಳ್ಳೋಣ, ಆದರೆ ಈ ಬಾರಿ ನಾವು ಜಲ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನವೋದ್ಯಮಗಳ ಬಗ್ಗೆ ಮಾತನಾಡೋಣ. FluxGen ಎಂಬ ಒಂದು ನವೋದ್ಯಮವಿದೆ. ಈ ಸ್ಟಾರ್ಟ್ ಅಪ್ ಐ ಒಟಿ ಹೊಂದಿದ ತಂತ್ರಜ್ಞಾನದ ಮೂಲಕ ಜಲ ನಿರ್ವಹಣೆಯ ಆಯ್ಕೆಗಳನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ನೀರಿನ ಬಳಕೆಯ ಮಾದರಿಗಳನ್ನು ತಿಳಿಸುತ್ತದೆ ಮತ್ತು ನೀರಿನ ಪರಿಣಾಮಕಾರಿ ಉಪಯೋಗದಲ್ಲಿ ಸಹಾಯ ಮಾಡುತ್ತದೆ. LivNSense ಎನ್ನುವ ಹೆಸರಿನ ಮತ್ತೊಂದು ಸ್ಟಾರ್ಟ್ ಅಪ್ ಇದೆ. ಇದೊಂದು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಆಧರಿತ ವೇದಿಕೆಯಾಗಿದೆ. ಇದರ ನೆರವಿನಿಂದ water distribution ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸಲಾಗುತ್ತದೆ. ಎಲ್ಲಿ ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಕೂಡಾ ತಿಳಿದುಕೊಳ್ಳಬಹುದಾಗಿದೆ. ಮತ್ತೊಂದು ಸ್ಟಾರ್ಟ್ ಅಪ್ ಇದೆ ಅದರ ಹೆಸರು ‘ಕುಂಭೀ ಕಾಗಜ್(Kumbhi Kagaz)’. ಈ ಕುಂಭಿ ಕಾಗಜ್ ನಲ್ಲಿ ಎಂತಹ ವಿಶೇಷತೆಯಿದೆ ಎಂದರೆ ಖಂಡಿತವಾಗಿಯೂ ಅದು ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ‘ಕುಂಭೀ ಕಾಗಜ್’ (Kumbhi Kagaz) ಸ್ಟಾರ್ಟ್ ಅಪ್ ಒಂದು ವಿಶೇಷ ಕೆಲಸ ಪ್ರಾರಂಭಿಸಿದೆ. ಇವರು ಜಲಕುಂಭಿ ಸಸ್ಯದಿಂದ ಕಾಗದ ತಯಾರಿಸುವ ಕೆಲಸ ಮಾಡುತ್ತಿದ್ದಾರೆ ಅಂದರೆ ಜಲ ಸಂಪನ್ಮೂಲಕ್ಕೆ ಸಮಸ್ಯೆ ಎನಿಸಿದ್ದ ಈ ಜಲಸಸ್ಯದಿಂದ ಕಾಗದ ತಯಾರಿಸಲು ಆರಂಭಿಸಿದ್ದಾರೆ.
ಸ್ನೇಹಿತರೇ, ಅನೇಕ ಯುವಕರು ಆವಿಷ್ಕಾರ ಮತ್ತು ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತಿದ್ದರೆ ಕೆಲವರು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರಲ್ಲಿ ಕೆಲವರೆಂದರೆ ಛತ್ತೀಸ್ ಗಢದ ಬಾಲೋದ್ ಜಿಲ್ಲೆಯ ಯುವಕರು. ಇಲ್ಲಿನ ಯುವಜನತೆ ನೀರನ್ನು ಸಂರಕ್ಷಿಸುವುದಕ್ಕಾಗಿ ಒಂದು ಅಭಿಯಾನ ಆರಂಭಿಸಿದ್ದಾರೆ. ಇವರು ಮನೆ ಮನೆಗೆ ತೆರಳಿ, ಜನರಿಗೆ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ. ವಿವಾಹದಂತಹ ಸಮಾರಂಭಗಳಿದ್ದಲ್ಲಿ, ಯುವಕರ ಈ ಗುಂಪು ಅಲ್ಲಿಗೆ ಹೋಗಿ ನೀರಿನ ದುರ್ಬಳಕೆಯನ್ನು ಹೇಗೆ ತಡೆಯಬಹುದು ಎಂಬ ಕುರಿತು ಅರಿವು ಮೂಡಿಸುತ್ತಾರೆ. ನೀರಿನ ಸದ್ಬಳಕೆಗೆ ಸಂಬಂಧಿಸಿದ ಒಂದು ಪ್ರೇರಣಾತ್ಮಕ ಪ್ರಯತ್ನ ಜಾರ್ಖಂಡ್ ನ ಖೂಂಟೀ ಜಿಲ್ಲೆಯಲ್ಲಿಯೂ ಕೂಡಾ ನಡೆಯುತ್ತಿದೆ. ಖೂಂಟಿಯ ಜನರು ನೀರಿನ ಬಿಕ್ಕಟ್ಟಿನಿಂದ ಹೊರಬರಲು ಬೋರಿ ಅಣೆಕಟ್ಟಿನ ಮಾರ್ಗ ಕಂಡುಕೊಂಡಿದ್ದಾರೆ. ಬೋರಿ ಅಣೆಕಟ್ಟಿನಿಂದ ನೀರು ಸಂಗ್ರಹವಾಗುವುದರಿಂದ ಇಲ್ಲಿ ಹಸಿರು-ತರಕಾರಿ ಕೂಡಾ ಬೆಳೆಯಲಾರಂಭಿಸಿವೆ. ಇದರಿಂದ ಜನರ ವರಮಾನವೂ ಹೆಚ್ಚಾಗುತ್ತಿದೆ ಮತ್ತು ಕ್ಷೇತ್ರದ ಅಗತ್ಯತೆಗಳೂ ಈಡೇರುತ್ತಿವೆ. ಸಾರ್ವಜನಿಕರ ಸಹಭಾಗಿತ್ವದಿಂದ ಯಾವುದೇ ಪ್ರಯತ್ನ ಯಾವರೀತಿ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಖೂಂಟಿ ಒಂದು ಆಕರ್ಷಕ ಉದಾಹರಣೆಯಾಗಿದೆ. ಇಲ್ಲಿನ ಜನರ ಈ ಪ್ರಯತ್ನಕ್ಕಾಗಿ ನಾನು ಅವರಿಗೆ ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, 1965 ರ ಯುದ್ಧದ ಸಮಯದಲ್ಲಿ, ನಮ್ಮ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ನ ಘೋಷಣೆ ಮಾಡಿದರು. ನಂತರ ಅಟಲ್ ಜೀ ಇದಕ್ಕೆ ಜೈ ವಿಜ್ಞಾನವನ್ನೂ ಸೇರಿಸಿದ್ದರು. ಕೆಲವು ವರ್ಷಗಳ ಹಿಂದೆ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ನಾನು, ಜೈ ಅನುಸಂಧಾನ್ ಬಗ್ಗೆ ಕೂಡಾ ಮಾತನಾಡಿದ್ದೆ. ‘ಮನದ ಮಾತಿನಲ್ಲಿ’ ನಾನು ಇಂದು ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನಸಂಧಾನ್ ಈ ನಾಲ್ಕೂ ಅಂಶಗಳ ಪ್ರತಿಬಿಂಬವಾಗಿರುವಂತಹ ಓರ್ವ ವ್ಯಕ್ತಿಯ ಬಗ್ಗೆ, ಒಂದು ಸಂಸ್ಥೆಯ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ. ಮಹಾರಾಷ್ಟ್ರದ ಶ್ರೀ ಶಿವಾಜಿ ಶಾಮರಾವ್ ಡೋಲೇ ಅವರೇ ಈ ಸಜ್ಜನರು. ಶಿವಾಜಿ ಡೋಲೆ ಅವರು ನಾಸಿಕ್ ಜಿಲ್ಲೆಯ ಒಂದು ಸಣ್ಣ ಗ್ರಾಮದ ನಿವಾಸಿಗಳು. ಅವರು ಬಡ ಬುಡಕಟ್ಟು ರೈತ ಕುಟುಂಬಕ್ಕೆ ಸೇರಿದವರು ಮತ್ತು ಓರ್ವ ಮಾಜಿ ಸೈನಿಕರು ಕೂಡಾ. ಸೈನ್ಯದಲ್ಲಿರುವಾಗ ಅವರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ನಿವೃತ್ತಿ ಹೊಂದಿದ ನಂತರ ಅವರು ಹೊಸದನ್ನೇನಾದರೂ ಕಲಿಯಬೇಕೆಂದು ನಿರ್ಧರಿಸಿದರು. ಮತ್ತು ಕೃಷಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಅಂದರೆ ಅವರು ಜೈ ಜವಾನ್ ನಿಂದ ಜೈ ಕಿಸಾನ್ ನಿಟ್ಟಿನಲ್ಲಿ ಸಾಗಿದರು. ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ತಾವು ಹೆಚ್ಚು ಹೆಚ್ಚು ಕೊಡುಗೆ ನೀಡಬಹುದು ಎನ್ನುವುದು ಈಗ ಅವರ ಪ್ರತಿ ಕ್ಷಣದ ಪ್ರಯತ್ನವಾಗಿದೆ. ತಮ್ಮ ಈ ಅಭಿಯಾನದಲ್ಲಿ ಶಿವಾಜಿ ಡೋಲೆ ಅವರು 20 ಜನರ ಒಂದು ಸಣ್ಣ ತಂಡ ಕಟ್ಟಿದರು ಮತ್ತು ಕೆಲವು ಮಾಜಿ ಸೈನಿಕರನ್ನೂ ಇದರಲ್ಲಿ ಸೇರಿಸಿಕೊಂಡರು. ನಂತರ ಅವರ ಈ ತಂಡವು Venkateshwara Co-Operative Power & Agro Processing Limited ಹೆಸರಿನ ಒಂದು ಸಹಕಾರಿ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿತು. ಈ ಸಹಕಾರಿ ಸಂಸ್ಥೆ ನಿಷ್ಕ್ರಿಯವಾಗಿತ್ತು, ಇದನ್ನು ಪುನಶ್ಚೇತನಗೊಳಿಸುವ ಹೊಣೆಯನ್ನು ಇವರು ಹೊತ್ತರು. ನೋಡುತ್ತಿದ್ದಂತೆಯೇ,ಇಂದು Venkateshwara Co-Operative ನ ವ್ಯಾಪ್ತಿ ಹಲವು ಜಿಲ್ಲೆಗಳಲ್ಲಿ ಹರಡಿದೆ. ಇಂದು ಈ ತಂಡ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರೊಂದಿಗೆ ಸುಮಾರು 18 ಸಾವಿರ ಜನರು ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಮಾಜಿ ಯೋಧರಿದ್ದಾರೆ. ನಾಸಿಕ್ ನ ಮಾಲೇಗಾಂವ್ ನಲ್ಲಿ ಈ ತಂಡದ ಸದಸ್ಯರು 500 ಎಕರೆಗಿಂತ ಹೆಚ್ಚಿನ ಭೂಮಿಯಲ್ಲಿ Agro Farming ಮಾಡುತ್ತಿದ್ದಾರೆ. ಈ ತಂಡ ಜಲ ಸಂರಕ್ಷಣೆಗಾಗಿ ಕೂಡಾ ಅನೇಕ ಕೊಳಗಳ ನಿರ್ಮಾಣದಲ್ಲಿ ತೊಡಗಿದೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನೂ ಆರಂಭಿಸಿದ್ದಾರೆ. ಈಗ ಇವರು ಬೆಳೆಸಿದ ದ್ರಾಕ್ಷಿಯನ್ನು ಯೂರೋಪ್ ಗೆ ಕೂಡಾ ರಫ್ತು ಮಾಡಲಾಗುತ್ತಿದೆ. ಈ ತಂಡದ ಎರಡು ವಿಶೇಷತೆಗಳಿವೆ. ಇದು ನನ್ನ ಗಮನವನ್ನು ಸೆಳೆಯಿತು. ಅದೆಂದರೆ, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್. ಈ ತಂಡದ ಸದಸ್ಯರು ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಎರಡನೇ ವಿಶೇಷತೆಯೆಂದರೆ, ಇವರು ರಫ್ತಿಗಾಗಿ ಅಗತ್ಯವಿರುವ ಅನೇಕ ಪ್ರಮಾಣೀಕರಣಗಳ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ‘ಸಹಕಾರದಿಂದ ಸಮೃದ್ಧಿ’ ಭಾವನೆಯೊಂದಿಗೆ ಕೆಲಸ ಮಾಡುತ್ತಿರುವ ಈ ತಂಡವನ್ನು ನಾನು ಪ್ರಶಂಸಿಸುತ್ತೇನೆ. ಈ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಸಬಲೀಕರಣಗೊಳ್ಳುವುದು ಮಾತ್ರವಲ್ಲದೇ ಜೀವನೋಪಾಯದ ಅನೇಕ ಮಾರ್ಗಗಳನ್ನೂ ಕೂಡಾ ಕಂಡುಕೊಳ್ಳಲಾಗಿದೆ. ಈ ಪ್ರಯತ್ನ ಮನದ ಮಾತಿನ ಶ್ರೋತೃಗಳಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 28 ರಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ ಕರ್ ಅವರ ಜಯಂತಿಯೂ ಆಗಿದೆ. ಅವರ ತ್ಯಾಗ, ಸಾಹಸ ಮತ್ತು ಸಂಕಲ್ಪ ಶಕ್ತಿಯ ಗಾಥೆಗಳು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ನಾನು ಅಂಡಮಾನ್ ನಲ್ಲಿ, ವೀರ್ ಸಾವರ್ಕರ್ ಅವರು ಕಾಲಾಪಾನಿ ಶಿಕ್ಷೆ ಅನುಭವಿಸಿದ ಆ ಕೋಣೆಗೆ ಹೋಗಿದ್ದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ವೀರ ಸಾವರ್ಕರ್ ಅವರ ವ್ಯಕ್ತಿತ್ವವು ದೃಢತೆ ಮತ್ತು ಉದಾತ್ತತೆಯ ಸಮ್ಮಿಲನವಾಗಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಒಪ್ಪಿಕೊಳ್ಳಲಿಲ್ಲ. ಸ್ವಾತಂತ್ರ್ಯ ಚಳುವಳಿ ಮಾತ್ರವಲ್ಲ, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೂಡಾ ವೀರ್ ಸಾವರ್ಕರ್ ಮಾಡಿರುವ ಕೆಲಸಗಳು ಇಂದಿಗೂ ಸ್ಮರಣೀಯ.
ಸ್ನೇಹಿತರೇ, ಕೆಲವು ದಿನಗಳ ಬಳಿಕ ಜೂನ್ 4 ರಂದು ಸಂತ ಕಬೀರ್ ದಾಸರ ಜಯಂತಿ ಬರಲಿದೆ. ಕಬೀರ್ ದಾಸರು ನಮಗೆ ತೋರಿದ ಹಾದಿ ಇಂದಿಗೂ ಪ್ರಸ್ತುತವಾಗಿದೆ. ಕಬೀರ್ ದಾಸರು ಹೇಳುತ್ತಿದ್ದರು,
“ಕಬೀರಾ ಕುಂವಾ ಏಕ್ ಹೈ, ಪಾನೀ ಭರೇ ಅನೇಕ್ |
ಬರ್ತನ್ ಮೇ ಹೀ ಭೇದ್ ಹೈ, ಪಾನೀ ಸಬ್ ಮೇ ಏಕ್ ಹೈ|”
ಅಂದರೆ, ಬಾವಿಯಲ್ಲಿ ಬೇರೆ ಬೇರೆ ರೀತಿಯ ಜನರು ನೀರು ತುಂಬಿಕೊಳ್ಳಲು ಬರುತ್ತಾರೆ, ಆದರೆ ಬಾವಿ ಯಾವುದೇ ತಾರತಮ್ಯ ಮಾಡುವುದಿಲ್ಲ, ನೀರು ಎಲ್ಲಾ ಪಾತ್ರೆಯಲ್ಲೂ ಒಂದೇ ಆಗಿರುತ್ತದೆ. ಸಮಾಜವನ್ನು ವಿಭಜಿಸುವ ಪ್ರತಿಯೊಂದು ಅನಿಷ್ಠ ಪದ್ಧತಿಯನ್ನೂ ಕಬೀರರು ವಿರೋಧಿಸಿದರು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇಂದು ದೇಶ ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವಾಗ, ನಾವು ಸಂತ ಕಬೀರರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ಸಮಾಜವನ್ನು ಸಶಕ್ತವಾಗಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನು ನಿಮ್ಮೊಂದಿಗೆ ರಾಜಕೀಯ ಮತ್ತು ಚಲನಚಿತ್ರ ಪ್ರಪಂಚದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಛಾಪು ಮೂಡಿಸಿದಂತಹ ಓರ್ವ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಮಹಾನ್ ವ್ಯಕ್ತಿಯ ಹೆಸರು ಎನ್. ಟಿ. ರಾಮರಾವ್. ನಾವೆಲ್ಲರೂ ಅವರನ್ನು ಎನ್ ಟಿ ಆರ್ ಎಂಬ ಹೆಸರಿನಿಂದ ಅರಿತಿದ್ದೇವೆ. ಇಂದು ಎನ್ ಟಿ ಆರ್ ಅವರ ನೂರನೇ ಜಯಂತಿ. ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅವರು ಕೇವಲ ತೆಲುಗು ಸಿನಿಮಾ ಜಗತ್ತಿನ ಮಹಾನಾಯಕರಾಗಿದ್ದು ಮಾತ್ರವಲ್ಲದೇ, ಕೋಟ್ಯಂತರ ಜನರ ಮನವನ್ನೂ ಗೆದ್ದಿದ್ದರು. ಅವರು 300 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆಂದು ನಿಮಗೆ ಗೊತ್ತೇ? ಕೆಲವು ಐತಿಹಾಸಿಕ ಚಲನಚಿತ್ರಗಳಲ್ಲಿ ಅವರು ತಮ್ಮ ಮನೋಜ್ಞ ಅಭಿನಯದಿಂದ ಆ ಪಾತ್ರಗಳಿಗೆ ಜೀವ ತುಂಬಿ ಜೀವಂತಗೊಳಿಸಿದ್ದಾರೆ. ಕೃಷ್ಣ, ರಾಮ ಇತ್ಯಾದಿ ಪಾತ್ರಗಳಲ್ಲಿ ಎನ್ ಟಿ ಆರ್ ಅವರ ನಟನೆಯನ್ನು ಜನರು ಎಷ್ಟೊಂದು ಇಷ್ಟ ಪಡುತ್ತಿದ್ದರೆಂದರೆ ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಎನ್ ಟಿ ಆರ್ ಅವರು ಚಿತ್ರ ಜಗತ್ತು ಮಾತ್ರವಲ್ಲದೇ ರಾಜಕೀಯದಲ್ಲಿ ಕೂಡಾ ತಮ್ಮದೇ ಆದ ಗುರುತು ಮೂಡಿಸಿದ್ದರು. ಇಲ್ಲಿ ಕೂಡಾ ಅವರಿಗೆ ಜನರಿಂದ ಸಾಕಷ್ಟು ಪ್ರೀತಿ ಮತ್ತು ಆಶೀರ್ವಾದ ದೊರೆಯಿತು. ದೇಶದಲ್ಲಿ, ವಿಶ್ವದಲ್ಲಿ ಲಕ್ಷಾಂತರ ಜನರ ಹೃದಯ ಸಿಂಹಾಸನದಲ್ಲಿ ಇಂದಿಗೂ ವಿರಾಜಮಾನರಾಗಿರುವ ಎನ್ ಟಿ ರಾಮಾರಾವ್ ಅವರಿಗೆ ನನ್ನ ವಿನಯಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನದ ಮಾತು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ಕೆಲವು ಹೊಸ ವಿಷಯಗಳೊಂದಿಗೆ ನಿಮ್ಮ ನಡುವೆ ಬರುತ್ತೇನೆ. ಆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಬಹುದು. ಕೆಲವು ಪ್ರದೇಶಗಳಲ್ಲಿ ಮಳೆಯೂ ಆರಂಭವಾಗಬಹುದು. ಪ್ರತಿಯೊಂದು ಋತುವಿನಲ್ಲೂ ನೀವು ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಜೂನ್ 21 ರಂದು ನಾವು ವಿಶ್ವ ಯೋಗ ದಿನ ಆಚರಿಸೋಣ. ಅದಕ್ಕಾಗಿ ಕೂಡಾ ದೇಶ ವಿದೇಶಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನೀವು ಈ ಸಿದ್ಧತೆಗಳ ಬಗ್ಗೆ ಕೂಡಾ ನಮ್ಮ ಈ ಮನ್ ಕಿ ಬಾತ್ ನಲ್ಲಿ ಬರೆಯುತ್ತಿರಿ. ಬೇರಾವುದೇ ವಿಷಯ ಕುರಿತು ನಿಮಗೇನಾದರೂ ತಿಳಿದುಬಂದರೆ ಅದನ್ನು ಕೂಡಾ ನೀವು ನನಗೆ ತಿಳಿಯಪಡಿಸಿ. ಸಾಧ್ಯವಾದಷ್ಟು ಹೆಚ್ಚು ಸಲಹೆ ಸೂಚನೆಗಳನ್ನು ಮನ್ ಕಿ ಬಾತ್ ನಲ್ಲಿ ತೆಗೆದುಕೊಳ್ಳಬೇಕೆನ್ನುವುದು ನನ್ನ ಪ್ರಯತ್ನವಾಗಿದೆ. ನಿಮಗೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಧನ್ಯವಾದ. ಮುಂದಿನ ಬಾರಿ, ಮುಂದಿನ ತಿಂಗಳು ಪುನಃ ಭೇಟಿಯಾಗೋಣ. ಅಲ್ಲಿಯವರೆಗೂ ನನಗೆ ಅನುಮತಿ ಕೊಡಿ. ನಮಸ್ಕಾರ.
ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಮತ್ತೊಮ್ಮೆ, 'ಮನದ ಮಾತಿಗೆ' ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಈ ಬಾರಿಯ 'ಮನದ ಮಾತಿನ' ಸಂಚಿಕೆ 2ನೇ ಶತಕದ ಆರಂಭವಾಗಿದೆ. ಕಳೆದ ತಿಂಗಳು ನಾವೆಲ್ಲರೂ ಶತಕದ ಸಂಭ್ರಮವನ್ನು ವಿಶೇಷವಾಗಿ ಆಚರಿಸಿದ್ದೇವೆ. ನಿಮ್ಮ ಭಾಗವಹಿಸುವಿಕೆ ಈ ಕಾರ್ಯಕ್ರಮದ ಬಹು ದೊಡ್ಡ ಶಕ್ತಿಯಾಗಿದೆ. 100ನೇ ಸಂಚಿಕೆ ಪ್ರಸಾರವಾಗುವ ಸಮಯದಲ್ಲಿ ಸಂಪೂರ್ಣ ದೇಶ ಒಂದು ಸೂತ್ರದಲ್ಲಿ ಬಂಧಿಸಿದಂತಾಗಿತ್ತು. ನಮ್ಮ ಸ್ವಚ್ಛತಾ ಕರ್ಮಚಾರಿ ಸಹೋದರ ಮತ್ತು ಸಹೋದರಿಯರು ಅಥವಾ ವಿವಿಧ ಕ್ಷೇತ್ರಗಳ ಅನುಭವಿಗಳಾಗಿರಲಿ, 'ಮನದ ಮಾತು' ಎಲ್ಲರನ್ನೂ ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ. 'ಮನದ ಮಾತಿಗೆ' ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಅದು ಭಾವುಕರನ್ನಾಗಿಸುವಂತಿದೆ. 'ಮನದ ಮಾತು' ಪ್ರಸಾರವಾದಾಗ, ಪ್ರಪಂಚದ ವಿವಿಧ ದೇಶಗಳಲ್ಲಿ, ಬೇರೆ ಬೇರೆ ಸಮಯಕ್ಕೆ ಅಂದರೆ, ಎಲ್ಲೋ ಸಂಜೆ ಮತ್ತು ಎಲ್ಲೋ ತಡರಾತ್ರಿಯಾಗಿತ್ತು, ಇದನ್ನು ಲೆಕ್ಕಿಸದೆ, 100 ನೇ ಸಂಚಿಕೆಯನ್ನು ಹೆಚ್ಚಿನ ಸಂಖ್ಯೆಯ ಜನರು ಆಲಿಸಲು ಸಮಯ ಮೀಸಲಿಟ್ಟರು. ನಾನು ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ನ್ಯೂಜಿಲೆಂಡ್ನ ಆ ವೀಡಿಯೊವನ್ನು ಕೂಡ ನೋಡಿದೆ, ಅದರಲ್ಲಿ 100 ವರ್ಷದ ತಾಯಿಯೊಬ್ಬರು ಆಶೀರ್ವಾದ ನೀಡುತ್ತಿದ್ದರು. ದೇಶ ವಿದೇಶದ ಜನರು 'ಮನದ ಮಾತಿನ' ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಜನರು ರಚನಾತ್ಮಕ ವಿಶ್ಲೇಷಣೆಯನ್ನು ಸಹ ಮಾಡಿದ್ದಾರೆ. ‘ಮನದ ಮಾತಿನಲ್ಲಿ’ ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಮಾತ್ರ ಚರ್ಚೆಯಾಗಿರುವುದನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಆಶೀರ್ವಾದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಗೌರವಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶಬಾಂಧವರೆ, ನಾವು ಕೆಲ ದಿನಗಳ ಹಿಂದೆ 'ಮನದ ಮಾತಿನಲ್ಲಿ' ಕಾಶಿ-ತಮಿಳು ಸಂಗಮಂ, ಸೌರಾಷ್ಟ್ರ-ತಮಿಳು ಸಂಗಮಂ ಬಗ್ಗೆ ಮಾತನಾಡಿದ್ದೇವೆ. ಕೆಲ ದಿನಗಳ ಹಿಂದೆ ವಾರಣಾಸಿಯಲ್ಲಿ ಕಾಶಿ-ತೆಲುಗು ಸಂಗಮಂ ಕೂಡ ನಡೆದಿತ್ತು. ಏಕ್ ಭಾರತ್, ಶ್ರೇಷ್ಠ ಭಾರತ್ ಎಂಬ ಮನೋಭಾವಕ್ಕೆ ಶಕ್ತಿ ತುಂಬುವ ಇಂತಹ ಮತ್ತೊಂದು ವಿಶಿಷ್ಟ ಪ್ರಯತ್ನ ದೇಶದಲ್ಲಿ ನಡೆದಿದೆ. ಅದೇ ಯುವ ಸಂಗಮದ ಪ್ರಯತ್ನ. ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗಿಯಾದ ಜನರಿಂದ ಈ ಕುರಿತು ವಿವರವಾಗಿ ಕೇಳಬೇಕೆಂದು ನಾನು ಆಲೋಚಿಸಿದೆ. ಅದಕ್ಕಾಗಿಯೇ ಇಬ್ಬರು ಯುವಕರು ಇದೀಗ ನನ್ನೊಂದಿಗೆ ಫೋನ್ನ ಸಂಪರ್ಕದಲ್ಲಿದ್ದಾರೆ - ಒಬ್ಬರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಅವರು ಮತ್ತು ಇನ್ನೊಬ್ಬರು ಬಿಹಾರದ ಪುತ್ರಿ ವಿಶಾಖಾ ಸಿಂಗ್. ಮೊದಲು ಗ್ಯಾಮರ್ ನ್ಯೋಕುಮ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ನಮಸ್ಕಾರ!
ಗ್ಯಾಮರ್: ನಮಸ್ತೆ ಮೋದಿ ಜೀ!
ಪ್ರಧಾನ ಮಂತ್ರಿ: ಗ್ಯಾಮರ್ ಅವರೆ, ಎಲ್ಲಕ್ಕಿಂತ ಮೊದಲು ನಾನು ನಿಮ್ಮ ಬಗ್ಗೆ ತಿಳಿಯಲು ಬಯಸುತ್ತೇನೆ
ಗ್ಯಾಮರ್ ಜೀ - ಮೋದಿ ಜೀ, ಮೊದಲನೆಯದಾಗಿ ತಾವು ಬಹಳ ಅಮೂಲ್ಯವಾದ ಸಮಯವನ್ನು ವಿನಿಯೋಗಿಸಿ ನನ್ನೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ನಾನು ನಿಮಗೆ ಮತ್ತು ಭಾರತ ಸರ್ಕಾರಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾನು ಅರುಣಾಚಲ ಪ್ರದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಮೊದಲನೇ ವರ್ಷದಲ್ಲಿ ಓದುತ್ತಿದ್ದೇನೆ.
ಪ್ರಧಾನ ಮಂತ್ರಿ: ನಿಮ್ಮ ತಂದೆ ಮತ್ತು ಕುಟುಂಬದ ಇತರರು ಏನು ಮಾಡುತ್ತಾರೆ.
ಗ್ಯಾಮರ್ ಜಿ: ನನ್ನ ತಂದೆ ಸಣ್ಣ ವ್ಯಾಪಾರ ಮತ್ತು ಅದರ ಜೊತೆಗೆ ಎಲ್ಲರೂ ಸೇರಿ ಒಂದಷ್ಟು ಕೃಷಿ ಕೆಲಸ ಮಾಡುತ್ತಾರೆ.
ಪ್ರಧಾನಿ: ಯುವ ಸಂಗಮ್ ಬಗ್ಗೆ ನಿಮಗೆ ಹೇಗೆ ಗೊತ್ತಾಯಿತು, ಯುವಾ ಸಂಗಮಕ್ಕೆ ಎಲ್ಲಿಗೆ ಹೋದಿರಿ? ಹೇಗೆ ಹೋದಿರಿ, ಅಲ್ಲಿ ಏನಾಯಿತು?
ಗ್ಯಾಮರ್ : ಮೋದಿ ಜೀ, ನನಗೆ, ನನ್ನ ಸಂಸ್ಥೆ, ಎನ್ಐಟಿ ಯುವ ಸಂಗಮ್ ಬಗ್ಗೆ ಮಾಹಿತಿ ನೀಡಿತು. ನೀವು ಅದರಲ್ಲಿ ಭಾಗವಹಿಸಬಹುದು ಎಂದು ತಿಳಿಸಿತು. ನಾನು ಮತ್ತೆ ಅಂತರ್ಜಾಲದಲ್ಲಿ ಸ್ವಲ್ಪ ಮಾಹಿತಿ ಹುಡುಕಿದೆ, ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಎಂದು ನನಗೆ ತಿಳಿಯಿತು, ನನ್ನ ಏಕ್ ಭಾರತ್ ಶ್ರೇಷ್ಠ ಭಾರತ್ನ ದೃಷ್ಟಿಕೋನಕ್ಕೆ ಇದು ಬಹಳಷ್ಟು ಕೊಡುಗೆ ನೀಡಬಲ್ಲದು ಮತ್ತು ನನಗೆ ಹೊಸದನ್ನು ಕಲಿಯುವ ಅವಕಾಶ ಸಿಗುತ್ತದೆ ಎಂದು ಅರಿತು ತಕ್ಷಣವೇ, ನಾನು, ವೆಬ್ಸೈಟ್ ಮೂಲಕ ಅದಕ್ಕೆ ಸೇರ್ಪಡೆಗೊಂಡೆ. ನನ್ನ ಅನುಭವ ತುಂಬಾ ಸಂತೋಷದಾಯಕವಾಗಿತ್ತು, ತುಂಬಾ ಚೆನ್ನಾಗಿತ್ತು.
ಪ್ರಧಾನಿ: ನೀವು ಯಾವುದಾದರೂ ಆಯ್ಕೆ ಮಾಡಬೇಕಿತ್ತೇ?
ಗ್ಯಾಮರ್: ಮೋದಿ ಜಿ ವೆಬ್ಸೈಟ್ ತೆರೆದಾಗ, ಅರುಣಾಚಲದ ನಿವಾಸಿಗಳಿಗೆ ಎರಡು ಆಯ್ಕೆಗಳಿದ್ದವು. ಮೊದಲನೆಯದು ಆಂಧ್ರಪ್ರದೇಶ ಐಐಟಿ ತಿರುಪತಿ ಮತ್ತು ಎರಡನೆಯದು ಕೇಂದ್ರೀಯ ವಿಶ್ವವಿದ್ಯಾಲಯ, ರಾಜಸ್ಥಾನ ಆದ್ದರಿಂದ ನಾನು ನನ್ನ ಮೊದಲ ಆದ್ಯತೆಯನ್ನು ರಾಜಸ್ಥಾನ ಎಂದು ಆಯ್ಕೆಮಾಡಿದೆ, ಎರಡನೇ ಆದ್ಯತೆ ನಾನು ಐಐಟಿ ತಿರುಪತಿ ಮಾಡಿದೆ. ಹಾಗಾಗಿ ರಾಜಸ್ಥಾನಕ್ಕೆ ಆಯ್ಕೆಯಾದೆ. ಆದ್ದರಿಂದ ನಾನು ರಾಜಸ್ಥಾನಕ್ಕೆ ಹೋದೆ.
ಪ್ರಧಾನಿ: ನಿಮ್ಮ ರಾಜಸ್ಥಾನ ಭೇಟಿ ಹೇಗಿತ್ತು? ನೀವು ಮೊದಲ ಬಾರಿಗೆ
ರಾಜಸ್ಥಾನಕ್ಕೆ ಹೋಗಿದ್ದಿರೋ!
ಗ್ಯಾಮರ್: ಹೌದು, ನಾನು ಮೊದಲ ಬಾರಿಗೆ ಅರುಣಾಚಲದಿಂದ ಹೊರಗೆ ಹೋಗಿದ್ದೆ.
ರಾಜಸ್ಥಾನದ ಈ ಎಲ್ಲಾ ಕೋಟೆಗಳನ್ನು ನಾನು ಚಲನ ಚಿತ್ರ ಮತ್ತು ಫೋನ್ನಲ್ಲಿ ಮಾತ್ರ ನೋಡಿದ್ದೆ, ಹಾಗಾಗಿ ಮೊದಲ ಬಾರಿಗೆ ನಾನು ಹೋದಾಗ ನನ್ನ ಅನುಭವ ತುಂಬಾ ಚೆನ್ನಾಗಿತ್ತು, ಅಲ್ಲಿನ ಜನರು ತುಂಬಾ ಒಳ್ಳೆಯವರು ಮತ್ತು ನಮಗೆ ನೀಡಿದ ಆತಿಥ್ಯ ತುಂಬಾ ಚೆನ್ನಾಗಿತ್ತು. ನಾವು ಹೊಸ ವಿಷಯಗಳನ್ನು ಕಲಿಯಲು ಅವಕಾಶ ಲಭಿಸಿತು, ರಾಜಸ್ಥಾನದ ದೊಡ್ಡ ಸರೋವರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ, ನಾನು ಅರಿಯದೇ ಇರುವ ಮಳೆ ನೀರು ಕೊಯ್ಲು ಮುಂತಾದ ಅನೇಕ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು , ಆದ್ದರಿಂದ ರಾಜಸ್ಥಾನ ಭೇಟಿ ನನಗೆ ತುಂಬಾ ಇಷ್ಟವಾಯಿತು .
ಪ್ರಧಾನಿ: ಅರುಣಾಚಲವೂ ವೀರರ ನಾಡು, ರಾಜಸ್ಥಾನವೂ ವೀರರ ನಾಡು, ಸೇನೆಯಲ್ಲಿ ರಾಜಸ್ಥಾನದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅರುಣಾಚಲದ ಗಡಿಯಲ್ಲಿರುವ ಸೈನಿಕರ ಮಧ್ಯೆ ರಾಜಸ್ಥಾನದವರನ್ನು ಭೇಟಿಯಾದಾಗ, ನೀವು ಖಂಡಿತವಾಗಿಯೂ ಅವರೊಂದಿಗೆ ಮಾತನಾಡುತ್ತೀರಿ. ಅವರನ್ನು ನೋಡಿ, ನಾನು ರಾಜಸ್ಥಾನಕ್ಕೆ ಹೋಗಿದ್ದೆ, ನನಗೆ ಅದ್ಭುತ ಅನುಭವವಾಯಿತು ಎಂದು ಹೇಳಿದಾಗ, ನಿಮ್ಮ ನಿಕಟತೆಯೂ ಹೆಚ್ಚುತ್ತದೆ. ರಾಜಸ್ಥಾನದಲ್ಲಿ ಕೆಲವು ಸಾಮ್ಯತೆಗಳನ್ನು ನೀವು ಗಮನಿಸಿರಬಹುದು, ಅರುಣಾಚಲದಲ್ಲೂ ಅದೇ ರೀತಿಯದ್ದನ್ನು ಕಂಡಾಗ ನಿಮಗೆ ವಿಶಿಷ್ಟ ಅನುಭೂತಿಯಾಗುತ್ತದೆ ಅಲ್ಲವೇ, ಇದು ನಿಮಗೆ ದೊರೆತ ಬಹುದೊಡ್ಡ ಅನುಕೂಲ.
ಗ್ಯಾಮರ್: ಮೋದಿ ಜೀ, ನಾನು ಕಂಡುಕೊಂಡ ಒಂದೇ ಒಂದು ಸಾಮ್ಯತೆ ಎಂದರೆ ಅದು ದೇಶ ಪ್ರೇಮ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಬಗ್ಗೆ ನನ್ನ ಭಾವನೆ, ನನ್ನ ಅನುಭೂತಿ ಏಕೆಂದರೆ ಅರುಣಾಚಲದಲ್ಲಿಯೂ ಸಹ ಜನರು ತಾವು ಭಾರತೀಯರು ಎಂದು ತುಂಬಾ ಹೆಮ್ಮೆಪಡುತ್ತಾರೆ, ಮತ್ತು ರಾಜಸ್ಥಾನದ ಜನರು ತಮ್ಮ ಮಾತೃಭೂಮಿಯನ್ನು ತುಂಬಾ ಪ್ರೀತಿಸುತ್ತಾರೆ ಎಂಬುದು ನನಗೆ ತಿಳಿಯಿತು. ವಿಶೇಷವಾಗಿ ಯುವ ಪೀಳಿಗೆ ನನ್ನ ದೇಶಕ್ಕಾಗಿ ಏನು ಮಾಡಬಲ್ಲೆ ಎಂಬ ಚಿಂತನೆ ಹೊಂದಿದೆ. ಅದು ತುಂಬಾ ಹೆಮ್ಮೆ ಎನಿಸುತ್ತದೆ, ಏಕೆಂದರೆ ನಾನು ಅಲ್ಲಿ ಅನೇಕ ಯುವಕರೊಂದಿಗೆ ಸಂವಹನ ನಡೆಸಿದ್ದೇನೆ, ಅವರಲ್ಲಿ ಮತ್ತು ಅರುಣಾಚಲ ಯುವಜನತೆಯಲ್ಲಿ ಸಾಕಷ್ಟು ಸಾಮ್ಯತೆಯನ್ನು ಕಂಡಿದ್ದೇನೆ. ದೇಶಕ್ಕಾಗಿ ತುಡಿಯುವ ಮತ್ತು ಎನನ್ನಾದರೂ ಮಾಡಬೇಕೆನ್ನುವ ಹಂಬಲದ ವಿಷಯದಲ್ಲಿ ಎರಡೂ ರಾಜ್ಯಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.
ಪ್ರಧಾನಿ: ಅಲ್ಲಿ ಭೇಟಿಯಾದ ಸ್ನೇಹಿತರೊಂದಿಗೆ ಸ್ನೇಹ ಮುಂದುವರಿಯಿತೋ, ಇಲ್ಲಿ
ಬಂದ ಮೇಲೆ ಮರೆತುಬಿಟ್ಟಿರೊ?
ಗ್ಯಾಮರ್ : ಇಲ್ಲ, ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಸ್ನೇಹ ವೃದ್ಧಿಯಾಗುತ್ತಿದೆ.
ಪ್ರಧಾನಿ: ಹಾಂ...! ಹಾಗಾದರೆ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಾ?
ಗ್ಯಾಮರ್: ಹೌದು ಮೋದಿ ಜೀ, ನಾನು ಸಕ್ರಿಯವಾಗಿದ್ದೇನೆ.
ಪ್ರಧಾನಿ: ಹಾಗಾದರೆ ನೀವು ಬ್ಲಾಗ್ ಬರೆಯಬೇಕು, ನಿಮ್ಮ ಈ ಯುವ ಸಂಗಮದ ಅನುಭವ ಹೇಗಿತ್ತು, ನೀವು ಹೇಗೆ ನೋಂದಾಯಿಸಿಕೊಂಡಿರಿ, ರಾಜಸ್ಥಾನದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂಬುದನ್ನು ವಿವರಿಸಿ. ಇದರಿಂದ ದೇಶದ ಯುವಕರು ಏಕ್ ಭಾರತ್ ಶ್ರೇಷ್ಠ ಭಾರತ್ನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ, ಈ ಯೋಜನೆ ಏನಿದೆ, ಯುವಕರು ಇದರ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ಅರಿಯುತ್ತಾರೆ. ನಿಮ್ಮ ಅನುಭವದ ಬಗೆಗೆ ಸಂಪೂರ್ಣ ಬ್ಲಾಗ್ ಬರೆಯಿರಿ, ಅದು ಅನೇಕ ಜನರಿಗೆ ಓದಲು ಉಪಯುಕ್ತವಾಗುತ್ತದೆ.
ಗ್ಯಾಮರ್ : ಹೌದು, ನಾನು ಖಂಡಿತವಾಗಿಯೂ ಬರೆಯುತ್ತೇನೆ.
ಪ್ರಧಾನ ಮಂತ್ರಿ: ಗ್ಯಾಮರ್ ಜೀ, ನಿಮ್ಮೊಂದಿಗೆ ಮಾತನಾಡಿ ಬಹಳ ಸಂತೋಷವಾಯಿತು. ನೀವೆಲ್ಲ ಯುವಕರು ದೇಶಕ್ಕೆ, ದೇಶದ ಉಜ್ವಲ ಭವಿಷ್ಯಕ್ಕಾಗಿ ಬಹಳ ಮುಖ್ಯ. ಏಕೆಂದರೆ ಈ 25 ವರ್ಷಗಳು - ನಿಮ್ಮ ಜೀವನಕ್ಕಾಗಿ ಮತ್ತು ದೇಶದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿವೆ. ಆದ್ದರಿಂದ ನಿಮಗೆ ಅನಂತ ಶುಭಾಷಯಗಳು ಧನ್ಯವಾದ.
ಗ್ಯಾಮರ್: ತಮಗೂ ಧನ್ಯವಾದಗಳು ಮೋದಿಜೀ.
ಪ್ರಧಾನಿ: ನಮಸ್ಕಾರ, ಸೋದರ.
ಸ್ನೇಹಿತರೇ, ಅರುಣಾಚಲದ ಜನತೆ ಎಷ್ಟು ಆತ್ಮೀಯರು ಎಂದರೆ ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುತ್ತೇನೆ. ಯುವ ಸಂಗಮದಲ್ಲಿ ಗ್ಯಾಮರ್ ಅವರ ಅನುಭವ ಅತ್ಯುತ್ತಮವಾಗಿತ್ತು. ಬನ್ನಿ, ಈಗ ಬಿಹಾರದ ಮಗಳು ವಿಶಾಖಾ ಸಿಂಗ್ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ: ವಿಶಾಖಾ ಅವರೇ, ನಮಸ್ಕಾರ.
ವಿಶಾಖಾ: ಮೊದಲನೆಯದಾಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ನನ್ನ ನಮಸ್ಕಾರಗಳು ಮತ್ತು ನನ್ನೊಂದಿಗೆ ಎಲ್ಲಾ ಪ್ರತಿನಿಧಿಗಳ ಪರವಾಗಿಯೂ ನಿಮಗೆ ಅನಂತ ನಮನಗಳು.
ಪ್ರಧಾನಿ: ಸರಿ ವಿಶಾಖಾ ಅವರೆ, ಮೊದಲು ನಿಮ್ಮ ಬಗ್ಗೆ ಹೇಳಿ. ಜೊತೆಗೆ ಯುವ ಸಂಗಮದ ಬಗ್ಗೆ ಕೂಡ ನಾನು ತಿಳಿಯಬಯಸುತ್ತೇನೆ.
ವಿಶಾಖಾ ಜಿ: ನಾನು ಬಿಹಾರದ ಸಸಾರಂ ನಗರದ ನಿವಾಸಿಯಾಗಿದ್ದು, ನನ್ನ ಕಾಲೇಜಿನ ವಾಟ್ಸಾಪ್ ಗುಂಪಿನ ಸಂದೇಶದ ಮೂಲಕ ಯುವ ಸಂಗಮದ ಬಗ್ಗೆ ಮೊದಲ ಬಾರಿಗೆ ನನಗೆ ತಿಳಿಯಿತು. ತದನಂತರ ನಾನು ಅದರ ಬಗ್ಗೆ ಅದು ಏನು ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಂಡೆ. ಹಾಗಾಗಿ ಇದು ಪ್ರಧಾನಮಂತ್ರಿ ಅವರ ಯೋಜನೆ ‘ಏಕ್ ಭಾರತ್ ಶ್ರೇಷ್ಠ ಭಾರತ್’ ಮೂಲಕ ಇದೊಂದು ಯುವ ಸಂಗಮ ಎಂಬುದು ತಿಳಿಯಿತು. ಆ ನಂತರ ಅರ್ಜಿ ಸಲ್ಲಿಸಿದೆ, ಅರ್ಜಿ ಹಾಕಿದಾಗ ಅದಕ್ಕೆ ಸೇರಲು ಬಹಳ ಉತ್ಸುಕಳಾಗಿದ್ದೆ. ಅಲ್ಲಿಂದ ತಮಿಳುನಾಡಿಗೆ ಪ್ರಯಾಣಿಸಿ ಮರಳಿ ಬಂದೆ. ನನಗೆ ದೊರೆತ exposure ನಿಂದಾಗಿ, ನಾನು ಈ ಕಾರ್ಯಕ್ರಮದ ಭಾಗವಾಗಿದ್ದೇನೆ ಎಂದು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ, ಆದ್ದರಿಂದ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷವೆನಿಸಿದೆ ಮತ್ತು ನಮ್ಮಂತಹ ಯುವಕರಿಗಾಗಿ ಭಾರತದ ವಿವಿಧ ಭಾಗಗಳ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳುವಂತೆ ಮಾಡಿದ ಇಂತಹ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದ್ದಕ್ಕೆ ನಿಮಗೆ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಪ್ರಧಾನ ಮಂತ್ರಿ: ವಿಶಾಖಾ ಅವರೆ, ನೀವು ಏನು ಅಧ್ಯಯನ ಮಾಡುತ್ತಿದ್ದೀರಿ?
ವಿಶಾಖಾ ಜಿ: ನಾನು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಎರಡನೇ ವರ್ಷದ ವಿದ್ಯಾರ್ಥಿ.
ಪ್ರಧಾನ ಮಂತ್ರಿ: ಸರಿ, ವಿಶಾಖಾ ಅವರೆ, ನೀವು ಯಾವ ರಾಜ್ಯಕ್ಕೆ ಹೋಗಬೇಕು, ಎಲ್ಲಿ ಪಾಲ್ಗೊಳ್ಳಬೇಕು? ಮುಂತಾದ ನಿರ್ಧಾರವನ್ನು ಹೇಗೆ ತೆಗೆದುಕೊಂಡಿರಿ?
ವಿಶಾಖಾ: ನಾನು ಈ ಯುವ ಸಂಗಮ್ ಬಗ್ಗೆ ಗೂಗಲ್ನಲ್ಲಿ ಹುಡುಕಲು ಪ್ರಾರಂಭಿಸಿದಾಗ, ಬಿಹಾರದ ಪ್ರತಿನಿಧಿಗಳನ್ನು ತಮಿಳುನಾಡಿನ ಪ್ರತಿನಿಧಿಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದಿತ್ತು. ತಮಿಳುನಾಡು ನಮ್ಮ ದೇಶದ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ರಾಜ್ಯ, ಹಾಗಾಗಿ ಬಿಹಾರದ ಜನರನ್ನು ತಮಿಳುನಾಡಿಗೆ ಕಳುಹಿಸುತ್ತಿರುವುದನ್ನು ಅಲ್ಲಿಗೆ ಹೋದಾಗ ನೋಡಿದೆ, ಇದು ನಾನು ಅರ್ಜಿ ತುಂಬಬೇಕು ಮತ್ತು ಅಲ್ಲಿಗೆ ಹೋಗಿ, ಬೇಕೋ ಬೇಡವೋ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ತುಂಬಾ ಸಹಾಯ ಮಾಡಿತು. ನಾನು ಅದರಲ್ಲಿ ಭಾಗವಹಿಸಿದ್ದಕ್ಕಾಗಿ ಇಂದು ತುಂಬಾ ಹೆಮ್ಮೆಪಡುತ್ತೇನೆ ಮತ್ತು ನನಗೆ ತುಂಬಾ ಸಂತೋಷವಾಗಿದೆ.
ಪ್ರಧಾನಿ: ಇದು ತಮಿಳುನಾಡಿಗೆ ನಿಮ್ಮ ಮೊದಲ ಭೇಟಿಯಾಗಿತ್ತೇ?
ವಿಶಾಖಾ: ಹೌದು, ನಾನು ಮೊದಲ ಬಾರಿಗೆ ಹೋಗಿದ್ದೆ.
ಪ್ರಧಾನ ಮಂತ್ರಿ : ಸರಿ, ಯಾವುದಾದರೂ ವಿಶೇಷವಾಗಿ ನೆನಪಿಟ್ಟುಕೊಳ್ಳುವ ವಿಷಯ ಹೇಳಬೇಕೆಂದರೆ ನೀವು ಯಾವುದನ್ನು ಹೇಳುವಿರಿ? ದೇಶದ ಯುವ ಸಮುದಾಯ ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ವಿಶಾಖಾ: ಸರ್, ಇಡೀ ಪ್ರಯಾಣವನ್ನು ನಾನು ಪರಿಗಣಿಸಿದರೆ ಅದು ನನಗೆ ಬಹಳ ಚೆನ್ನಾಗಿತ್ತು. ಪ್ರತಿಯೊಂದು ಹಂತದಲ್ಲೂ ನಾವು ಬಹಳ ಉತ್ತಮ ವಿಷಯಗಳನ್ನು ಕಲಿತೆವು. ನಾನು ತಮಿಳುನಾಡಿನಲ್ಲಿ ಉತ್ತಮ ಸ್ನೇಹಿತರನ್ನು ಪಡೆದುಕೊಂಡೆ. ಅಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡೆ. ಅಲ್ಲಿನ ಜನರನ್ನು ನಾನು ಭೇಟಿಯಾದೆ. ಆದರೆ ನನಗೆ ಅಲ್ಲಿ ಬಹಳ ಇಷ್ಟವಾದ ವಿಷಯಗಳಲ್ಲಿ ಮೊದಲನೆಯದೆಂದರೆ ಇಸ್ರೋಗೆ ಹೋಗಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ, ಮತ್ತು ನಾವು ಪ್ರತಿನಿಧಿಗಳಾಗಿದ್ದರಿಂದ ಅದಕ್ಕಾಗಿ ನಮಗೆ ಇಸ್ರೋಗೆ ಪ್ರವೇಶ ದೊರೆಯಿತು. ಜೊತೆಗೆ ಎರಡನೆಯ ಬಹಳ ಒಳ್ಳೆಯ ವಿಷಯವೆಂದರೆ, ನಾವು ರಾಜಭವನಕ್ಕೆ ಹೋಗಿದ್ದು, ಮತ್ತು ತಮಿಳುನಾಡಿನ ರಾಜ್ಯಪಾಲರನ್ನು ಭೇಟಿಯಾಗಿದ್ದು. ಈ ಎರಡೂ ಸಂದರ್ಭಗಳು ನನಗೆ ಬಹಳ ಇಷ್ಟವಾಯಿತು. ನಮ್ಮಂತಹ ಯುವ ಜನತೆಗೆ ಸಾಮಾನ್ಯವಾಗಿ ದೊರೆಯದ ಈ ಅವಕಾಶ ನಮಗೆ ಯುವಾ ಸಂಗಮ್ ಮುಖಾಂತರ ದೊರೆಯಿತು. ಇದು ನನ್ನ ಪಾಲಿಗೆ ಬಹಳ ಉತ್ತಮವಾದ ಮತ್ತು ನೆನಪಿನಲ್ಲಿ ಉಳಿಯುವಂತಹ ಕ್ಷಣವಾಗಿದೆ.
ಪ್ರಧಾನ ಮಂತ್ರಿ : ಬಿಹಾರದಲ್ಲಿ ಆಹಾರ ಪದ್ಧತಿಯೇ ಬೇರೆ ಮತ್ತು ತಮಿಳುನಾಡಿನಲ್ಲಿ ಆಹಾರ ಪದ್ಧತಿಯೇ ಬೇರೆ.
ವಿಶಾಖಾ : ಹೌದು ಸರ್.
ಪ್ರಧಾನಮಂತ್ರಿ : ಹಾಗಾದರೆ ನೀವು ಪೂರ್ತಿಯಾಗಿ ಹೊಂದಿಕೊಂಡಿರೇ?
ವಿಶಾಖಾ: ನಾವು ಅಲ್ಲಿಗೆ ಹೋದಾಗ, ಅಲ್ಲಿ ತಮಿಳುನಾಡಿನಲ್ಲಿ ಒಂದು ಸೌತ್ ಇಂಡಿಯನ್ ಕ್ಯುಸಿನ್ ಇತ್ತು. ನಾವು ಅಲ್ಲಿಗೆ ಹೋಗುತ್ತಿದ್ದಂತೆಯೇ ನಮಗೆ ದೋಸೆ, ಇಡ್ಲಿ, ಸಾಂಬಾರ್, ಉತ್ತಪ್ಪಮ್, ವಡಾ, ಉಪ್ಪಿಟ್ಟು ಇವುಗಳನ್ನೆಲ್ಲಾ ನೀಡಲಾಯಿತು. ನಾವು ಅದನ್ನು ಮೊದಲ ಬಾರಿ ತಿಂದಾಗಲೇ ಅವು ನಮಗೆ ಬಹಳ ಇಷ್ಟವಾಯಿತು. ಅಲ್ಲಿನ ಆಹಾರ ಪದ್ಧತಿ ಬಹಳವೇ ಆರೋಗ್ಯಕರವಾಗಿದೆ, ವಾಸ್ತವದಲ್ಲಿ ರುಚಿಯಲ್ಲಿ ಕೂಡಾ ಬಹಳ ಉತ್ತಮವಾಗಿರುತ್ತದೆ. ನಮ್ಮ ಉತ್ತರ ಭಾಗದ ಆಹಾರಕ್ಕಿಂತ ಬಹಳ ಭಿನ್ನವಾಗಿರುತ್ತದೆ. ನನಗೆ ಅಲ್ಲಿನ ಆಹಾರ ಬಹಳ ಇಷ್ಟವಾಯಿತು. ಹಾಗೆಯೇ ಅಲ್ಲಿನ ಜನರು ಕೂಡಾ ಬಹಳ ಇಷ್ಟವಾದರು.
ಪ್ರಧಾನಮಂತ್ರಿ : ಹಾಗಾದರೆ ನಿಮಗೆ ತಮಿಳುನಾಡಿನಲ್ಲಿ ಸ್ನೇಹಿತರು ಕೂಡಾ ದೊರೆತರಲ್ಲವೇ?
ವಿಶಾಖಾ : ಹೌದು ಸರ್! ನಾವು ಅಲ್ಲಿ NIT ಟ್ರಿಚಿಯಲ್ಲಿ ಉಳಿದುಕೊಂಡಿದ್ದೆವು, ಅದಾದ ನಂತರ IIT ಮದ್ರಾಸ್ ನಲ್ಲಿ. ಎರಡೂ ಕಡೆಗಳಲ್ಲೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನನಗೆ ಸ್ನೇಹವಾಯಿತು. ಅಲ್ಲದೇ, ಒಂದು ಸಿಐಐ ನ ಸ್ವಾಗತ ಸಮಾರಂಭ ಕೂಡಾ ಇತ್ತು, ಅಲ್ಲಿಗೆ ಸುತ್ತಮುತ್ತಲಿನ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಕೂಡಾ ಬಂದಿದ್ದರು. ನಾವು ಆ ವಿದ್ಯಾರ್ಥಿಗಳೊಂದಿಗೆ ಕೂಡಾ ಮಾತನಾಡಿದೆವು ಮತ್ತು ಅವರನ್ನೆಲ್ಲಾ ಭೇಟಿಯಾಗಿದ್ದು ನನಗೆ ಬಹಳ ಸಂತೋಷ ನೀಡಿತು. ಇವರಲ್ಲಿ ಬಹಳಷ್ಟು ಜನ ನನ್ನ ಸ್ನೇಹಿತರು. ತಮಿಳುನಾಡಿನಿಂದ ಬಿಹಾರಕ್ಕೆ ಬರುತ್ತಿರುವ ಕೆಲವು ಪ್ರತಿನಿಧಿಗಳನ್ನು ಕೂಡಾ ಭೇಟಿ ಮಾಡಿದೆವು ಮತ್ತು ನಾವು ಅವರೊಂದಿಗೆ ಕೂಡಾ ಮಾತುಕತೆ ನಡೆಸಿದೆವು. ನಾವು ಈಗಲೂ ಕೂಡಾ ಅವರೊಂದಿಗೆ ಮಾತನಾಡುತ್ತಿರುತ್ತೇವೆ ಇದಿಂದ ನನಗೆ ಬಹಳ ಸಂತೋಷವಾಗುತ್ತದೆ.
ಪ್ರಧಾನಮಂತ್ರಿ: ವಿಶಾಖಾ ಅವರೇ ನೀವು ಸೋಷಿಯಲ್ ಮೀಡಿಯಾದಲ್ಲಿ ಬ್ಲಾಗ್ ಬರೆಯಿರಿ ಮತ್ತು ಈ ಯುವ ಸಂಗಮ್, ಏಕ್ ಭಾರತ್ ಶ್ರೇಷ್ಠ್ ಭಾರತ್, ಮತ್ತು ತಮಿಳುನಾಡಿನಲ್ಲಿ ನಿಮಗೆ ದೊರೆತ ಪರಿಚಯ, ಅಲ್ಲಿ ನಿಮಗೆ ದೊರೆತ ಆದರ, ಆತ್ಮೀಯತೆ, ಸ್ವಾಗತ, ಆತಿಥ್ಯ ತಮಿಳು ಜನರ ಪ್ರೀತಿ ನಿಮಗೆ ದೊರೆತ ಬಗ್ಗೆ ಕೂಡಾ ದೇಶಕ್ಕೆ ನೀವು ತಿಳಿಯಪಡಿಸಿ. ಬರೆಯುತ್ತೀರಲ್ಲವೇ ?
ವಿಶಾಖಾ : ಖಂಡಿತಾ ಸರ್ !
ಪ್ರಧಾನಮಂತ್ರಿ : ನಿಮಗೆ ನನ್ನ ಅನೇಕಾನೇಕ ಶುಭ ಹಾರೈಕೆಗಳು ಮತ್ತು ಅನೇಕಾನೇಕ ಧನ್ಯವಾದ.
ವಿಶಾಖಾ : ಧನ್ಯವಾದ ಸರ್. ನಮಸ್ಕಾರ
ಗ್ಯಾಮರ್ ಮತ್ತು ವಿಶಾಖಾ ನಿಮಗೆ ನನ್ನ ಶುಭಹಾರೈಕೆಗಳು. ಯುವ ಸಂಗಮ್ ನಲ್ಲಿ ನೀವು ಕಲಿತ ವಿಷಯಗಳು ಜೀವನಪೂರ್ತಿ ನಿಮ್ಮೊಂದಿಗೆ ಇರಲಿ. ಇದು ನಿಮಗೆಲ್ಲರಿಗೂ ನನ್ನ ಶುಭ ಹಾರೈಕೆ.
ಸ್ನೇಹಿತರೇ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿ ಅಡಗಿದೆ. ನಮ್ಮ ದೇಶದಲ್ಲಿ ನೋಡಲು ಬಹಳಷ್ಟಿದೆ. ಇದನ್ನು ಮನಗಂಡ ಶಿಕ್ಷಣ ಸಚಿವಾಲಯವು, ಯುವ ಸಂಗಮ್ ಹೆಸರಿನಲ್ಲಿ ಒಂದು ಅತ್ಯುತ್ತಮ ಉಪಕ್ರಮ ಕೈಗೊಂಡಿದೆ. ಜನರಿಂದ ಜನರಿಗೆ ಸಂಪರ್ಕ ಹೆಚ್ಚಿಸುವುದರೊಂದಿಗೆ ದೇಶದ ಯುವಜನತೆಗೆ ಪರಸ್ಪರ ಬೆರೆಯುವ ಅವಕಾಶ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಬೇರೆ ಬೇರೆ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಇದರೊಂದಿಗೆ ಜೋಡಣೆ ಮಾಡಲಾಗಿದೆ. ‘ಯುವಸಂಗಮ್’ ನಲ್ಲಿ ಯುವಜನತೆ ಬೇರೆ ರಾಜ್ಯಗಳ ನಗರ ಮತ್ತು ಗ್ರಾಮಗಳಿಗೆ ಹೋಗುತ್ತಾರೆ, ಅವರಿಗೆ ಬೇರೆ ಬೇರೆ ರೀತಿಯ ಜನರೊಂದಿಗೆ ಬೆರೆಯುವ ಅವಕಾಶ ದೊರೆಯುತ್ತದೆ. ಯುವಸಂಗಮ್ ನ ಮೊದಲ ಸುತ್ತಿನಲ್ಲಿ ಸುಮಾರು 1200 ಮಂದಿ ಯುವಜನತೆ ದೇಶದ 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಇದರ ಭಾಗವಾಗುವ ಯುವಜನತೆ, ಜೀವನಪೂರ್ತಿ ತಮ್ಮ ಹೃದಯದಲ್ಲಿ ಉಳಿಯುವಂತಹ ಉತ್ತಮ ನೆನಪುಗಳೊಂದಿಗೆ ಹಿಂದಿರುಗುತ್ತಿದ್ದಾರೆ. ಅನೇಕ ದೊಡ್ಡ ಕಂಪೆನಿಗಳ ಸಿಇಒಗಳು, ವ್ಯಾಪಾರ ಮುಖಂಡರು ಬ್ಯಾಗ್ ಪ್ಯಾಕರ್ ಗಳಂತೆ ಭಾರತದಲ್ಲಿ ಸಮಯ ಕಳೆದಿರುವುದನ್ನು ನಾವು ನೋಡಿದ್ದೇವೆ. ನಾನು ಬೇರೆ ದೇಶಗಳ ಮುಖಂಡರನ್ನು ಭೇಟಿ ಮಾಡಿದಾಗ, ತಾವು ತಮ್ಮ ಯೌವನಾವಸ್ಥೆಯಲ್ಲಿ ಭಾರತಕ್ಕೆ ಪ್ರವಾಸ ಬಂದು ತಿರುಗಾಡಿದ್ದಾಗಿ ಅವರು ನನಗೆ ಹೇಳುತ್ತಾರೆ. ನಮ್ಮ ಭಾರತ ದೇಶದಲ್ಲಿ ತಿಳಿದುಕೊಳ್ಳುವ ಮತ್ತು ನೋಡಬೇಕಾದ ಎಷ್ಟೊಂದು ವಿಷಯಗಳು ಮತ್ತು ಸ್ಥಳಗಳಿವೆ ಎಂದರೆ ಪ್ರತಿಬಾರಿಯೂ ನಿಮ್ಮ ಕುತೂಹಲ ಹೆಚ್ಚುತ್ತಲೇ ಇರುತ್ತದೆ. ಈ ರೋಮಾಂಚನಕಾರಿ ಅನುಭವಗಳನ್ನು ತಿಳಿದ ನಂತರ ನೀವು ಕೂಡಾ ದೇಶದ ಬೇರೆ ಬೇರೆ ಭಾಗಗಳ ಪ್ರವಾಸ ಮಾಡುವುದಕ್ಕೆ ಪ್ರೇರಿತರಾಗುತ್ತೀರಿ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ ನಾನು ಜಪಾನ್ ದೇಶದ ಹಿರೋಷಿಮಾದಲ್ಲಿ ಇದ್ದೆ. ಅಲ್ಲಿ ನನಗೆ Hiroshima Peace Memorial museum ಗೆ ಭೇಟಿ ನೀಡುವ ಅವಕಾಶ ದೊರೆಯಿತು. ಇದೊಂದು ಭಾವನಾತ್ಮಕ ಅನುಭವವಾಗಿತ್ತು. ನಾವು ನಮ್ಮ ಇತಿಹಾಸದ ನೆನಪುಗಳನ್ನು ರಕ್ಷಿಸಿ ಇರಿಸಿದಾಗ, ಮುಂಬರುವ ಪೀಳಿಗೆಗೆ ಅದು ಬಹಳ ಸಹಾಯವಾಗುತ್ತದೆ. ಕೆಲವೊಮ್ಮೆ ನಮಗೆ ಸಂಗ್ರಹಾಲಯದಲ್ಲಿ ಹೊಸ ಪಾಠ ದೊರೆತರೆ, ಕೆಲವೊಮ್ಮೆ ನಮಗೆ ಕಲಿಯಲು ಬಹಳಷ್ಟು ವಿಚಾರಗಳು ದೊರೆಯುತ್ತವೆ. ಕೆಲವೇ ದಿನಗಳ ಹಿಂದೆ ಭಾರತದಲ್ಲಿ International Museum Expo ಕೂಡಾ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಪಂಚದ 1200 ಕ್ಕೂ ಅಧಿಕ ಸಂಗ್ರಹಾಲಯಗಳ ವಿಶೇಷತೆಗಳನ್ನು ಪ್ರದರ್ಶಿಸಲಾಗಿತ್ತು. ಇಲ್ಲಿ ನಮ್ಮ ಭಾರತದಲ್ಲಿ, ನಮ್ಮ ಭೂತಕಾಲಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರದರ್ಶಿಸುವಂತಹ, ಬೇರೆ ಬೇರೆ ರೀತಿಯ ಸಂಗ್ರಹಾಲಯಗಳಿವೆ, ಗುರುಗ್ರಾಮ್ ನಲ್ಲಿ - Museo Camera ಎನ್ನುವ ವಿಶಿಷ್ಠ ಸಂಗ್ರಹಾಲಯವಿದೆ, ಇದರಲ್ಲಿ 1860 ರ ನಂತರದ ಸುಮಾರು 8 ಸಾವಿರಕ್ಕೂ ಅಧಿಕ ಕ್ಯಾಮೆರಾಗಳ ಸಂಗ್ರಹವಿದೆ. ತಮಿಳುನಾಡಿನ Museum of Possibilities ಅನ್ನು ನಮ್ಮ ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು, ವಿನ್ಯಾಸ ಮಾಡಲಾಗಿದೆ. ಮುಂಬಯಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಅಧಿಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಇರಿಸಲಾಗಿದೆ. 2010 ರಲ್ಲಿ ಸ್ಥಾಪನೆಯಾದ Indian Memory Project ಒಂದು ರೀತಿಯಲ್ಲಿ Online museum ಆಗಿದೆ. ಪ್ರಪಂಚಾದ್ಯಂತ ಕಳುಹಿಸಲಾದ ಚಿತ್ರಗಳು ಮತ್ತು ಕತೆಗಳ ಮೂಲಕ ಭಾರತದ ಭವ್ಯ ಇತಿಹಾಸದ ಕೊಂಡಿಗಳನ್ನು ಸಂಪರ್ಕಿಸುವಲ್ಲಿ ಇದು ತೊಡಗಿಸಿಕೊಂಡಿದೆ. ವಿಭಜನೆಯ ಭೀಕರತೆಗೆ ಸಂಬಂಧಿಸಿದ ನೆನಪುಗಳನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನೂ ಮಾಡಲಾಗಿದೆ. ಕಳೆದ ವರ್ಷಗಳಲ್ಲಿ ಭಾರತದಲ್ಲಿ ಹೊಸ ಹೊಸ ರೀತಿಯ ಸಂಗ್ರಹಾಲಯಗಳು ಸ್ಥಾಪನೆಯಾಗಿರುವುದನ್ನು ನಾವು ನೋಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಸೋದರ ಸೋದರಿಯರ ಕೊಡುಗೆಯನ್ನು ಸ್ಮರಣಾರ್ಥ 10 ಹೊಸ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿರುವ ವಿಪ್ಲವ ಭಾರತ ಗ್ಯಾಲರಿಯೇ ಆಗಿರಲಿ ಅಥವಾ ಜಲಿಯನ್ ವಾಲಾ ಬಾಗ್ ಸ್ಮಾರಕಗಳ ಪುನರುಜ್ಜೀವನವೇ ಇರಲಿ, ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಸಮರ್ಪಿಸಲಾದ ಪಿಎಂ ಮ್ಯೂಸಿಯಂ ಕೂಡಾ ಇಂದು ದೆಹಲಿಯ ಶೋಭೆಯನ್ನು ಹೆಚ್ಚಿಸುತ್ತಿದೆ. ದೆಹಲಿಯಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕ, (ನ್ಯಾಷನಲ್ ವಾರ್ ಮೆಮೋರಿಯಲ್ ) ಮತ್ತು ಪೊಲೀಸ್ ಸ್ಮಾರಕ (ಪೊಲೀಸ್ ಮೆಮೋರಿಯಲ್) ನಲ್ಲಿ ಪ್ರತಿದಿನ ಅನೇಕರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಬರುತ್ತಾರೆ. ಐತಿಹಾಸಿಕ ದಂಡಿ ಸತ್ಯಾಗ್ರಹಕ್ಕೆ ಸಮರ್ಪಿಸಲಾದ ದಂಡಿ ಸ್ಮಾರಕ ಅಥವಾ Statue of Unity Museum ಆಗಿರಲಿ. ಸರಿ ನಾನು ಇಲ್ಲಿಗೆ ನಿಲ್ಲಿಸಬೇಕಾಗುತ್ತದೆ ಏಕೆಂದರೆ ದೇಶಾದ್ಯಂತ ಇರುವ ಸಂಗ್ರಹಾಲಯಗಳ ಪಟ್ಟಿ ಬಹಳ ದೊಡ್ಡದಿದೆ ಮತ್ತು ಮೊದಲ ಬಾರಿಗೆ ದೇಶದಲ್ಲಿ ಎಲ್ಲಾ ಸಂಗ್ರಹಾಲಯಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಕಂಪೈಲ್ ಕೂಡಾ ಮಾಡಲಾಗಿದೆ. ಮ್ಯೂಸಿಯಂ ಯಾವ ವಿಷಯದ ಮೇಲೆ ಆಧರಿತವಾಗಿದೆ, ಅಲ್ಲಿ ಯಾವ ರೀತಿಯ ವಸ್ತುಗಳನ್ನು ಇರಿಸಲಾಗಿದೆ, ಅಲ್ಲಿನ ಸಂಪರ್ಕ ವಿವರಗಳೇನು – ಇವೆಲ್ಲವನ್ನೂ ಒಂದು ಆನ್ಲೈನ್ ಡೈರೆಕ್ಟರಿಯಲ್ಲಿ ಅಡಕಗೊಳಿಸಲಾಗಿದೆ. ನಿಮಗೆ ಅವಕಾಶ ದೊರೆತಾಗ, ದೇಶದ ಈ ಸಂಗ್ರಹಾಲಯಗಳನ್ನು ನೋಡಲು ನೀವು ಖಂಡಿತವಾಗಿಯೂ ಹೋಗಿ ಎನ್ನುವುದು ನಿಮ್ಮಲ್ಲಿ ನನ್ನ ಮನವಿಯಾಗಿದೆ. ನೀವು ಅಲ್ಲಿನ ಆಕರ್ಷಕ ಚಿತ್ರಗಳನ್ನು #(Hashtag) Museum Memories ನಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದರಿಂದ ನಮ್ಮ ವೈಭವೋಪೇತ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕ ಮತ್ತಷ್ಟು ಬಲಿಷ್ಠವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ಒಂದು ಹೇಳಿಕೆಯನ್ನು ಅನೇಕ ಬಾರಿ ಕೇಳಿರಬಹುದು, ಆಗಿಂದಾಗ್ಗೆ ಕೇಳಿರಬಹುದು, ಅದೆಂದರೆ – ನೀರಿಲ್ಲದೇ ಎಲ್ಲವೂ ಶೂನ್ಯ . ನೀರಿಲ್ಲದೇ ಜೀವನದಲ್ಲಿ ಬಿಕ್ಕಟ್ಟಂತೂ ಇದ್ದೇ ಇರುತ್ತದೆ ಮಾತ್ರವಲ್ಲದೇ ವ್ಯಕ್ತಿ ಮತ್ತು ದೇಶದ ಅಭಿವೃದ್ಧಿಯೂ ನಿಂತು ಹೋಗುತ್ತದೆ. ಭವಿಷ್ಯದ ಈ ಸವಾಲನ್ನು ನೋಡಿ, ಇಂದು ದೇಶದಲ್ಲಿ ಪ್ರತಿ ಜಿಲ್ಲೆಯಲ್ಲೂ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಅಮೃತ ಸರೋವರ ಏತಕ್ಕಾಗಿ ವಿಶೇಷವೆಂದರೆ, ಇವುಗಳನ್ನು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಜನರ ಅಮೃತ ಪ್ರಯತ್ನವಿದೆ. ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.
ಸ್ನೇಹಿತರೇ, ನಾವು ಪ್ರತಿ ಬೇಸಿಗೆಯಲ್ಲೂ ಇದೇ ರೀತಿ ನೀರಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಈ ಬಾರಿ ಕೂಡಾ ನಾವು ಈ ವಿಷಯ ತೆಗೆದುಕೊಳ್ಳೋಣ, ಆದರೆ ಈ ಬಾರಿ ನಾವು ಜಲ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನವೋದ್ಯಮಗಳ ಬಗ್ಗೆ ಮಾತನಾಡೋಣ. FluxGen ಎಂಬ ಒಂದು ನವೋದ್ಯಮವಿದೆ. ಈ ಸ್ಟಾರ್ಟ್ ಅಪ್ ಐ ಒಟಿ ಹೊಂದಿದ ತಂತ್ರಜ್ಞಾನದ ಮೂಲಕ ಜಲ ನಿರ್ವಹಣೆಯ ಆಯ್ಕೆಗಳನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ನೀರಿನ ಬಳಕೆಯ ಮಾದರಿಗಳನ್ನು ತಿಳಿಸುತ್ತದೆ ಮತ್ತು ನೀರಿನ ಪರಿಣಾಮಕಾರಿ ಉಪಯೋಗದಲ್ಲಿ ಸಹಾಯ ಮಾಡುತ್ತದೆ. LivNSense ಎನ್ನುವ ಹೆಸರಿನ ಮತ್ತೊಂದು ಸ್ಟಾರ್ಟ್ ಅಪ್ ಇದೆ. ಇದೊಂದು ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಆಧರಿತ ವೇದಿಕೆಯಾಗಿದೆ. ಇದರ ನೆರವಿನಿಂದ water distribution ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸಲಾಗುತ್ತದೆ. ಎಲ್ಲಿ ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಕೂಡಾ ತಿಳಿದುಕೊಳ್ಳಬಹುದಾಗಿದೆ. ಮತ್ತೊಂದು ಸ್ಟಾರ್ಟ್ ಅಪ್ ಇದೆ ಅದರ ಹೆಸರು ‘ಕುಂಭೀ ಕಾಗಜ್(Kumbhi Kagaz)’. ಈ ಕುಂಭಿ ಕಾಗಜ್ ನಲ್ಲಿ ಎಂತಹ ವಿಶೇಷತೆಯಿದೆ ಎಂದರೆ ಖಂಡಿತವಾಗಿಯೂ ಅದು ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ‘ಕುಂಭೀ ಕಾಗಜ್’ (Kumbhi Kagaz) ಸ್ಟಾರ್ಟ್ ಅಪ್ ಒಂದು ವಿಶೇಷ ಕೆಲಸ ಪ್ರಾರಂಭಿಸಿದೆ. ಇವರು ಜಲಕುಂಭಿ ಸಸ್ಯದಿಂದ ಕಾಗದ ತಯಾರಿಸುವ ಕೆಲಸ ಮಾಡುತ್ತಿದ್ದಾರೆ ಅಂದರೆ ಜಲ ಸಂಪನ್ಮೂಲಕ್ಕೆ ಸಮಸ್ಯೆ ಎನಿಸಿದ್ದ ಈ ಜಲಸಸ್ಯದಿಂದ ಕಾಗದ ತಯಾರಿಸಲು ಆರಂಭಿಸಿದ್ದಾರೆ.
ಸ್ನೇಹಿತರೇ, ಅನೇಕ ಯುವಕರು ಆವಿಷ್ಕಾರ ಮತ್ತು ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತಿದ್ದರೆ ಕೆಲವರು ಸಮಾಜದಲ್ಲಿ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರಲ್ಲಿ ಕೆಲವರೆಂದರೆ ಛತ್ತೀಸ್ ಗಢದ ಬಾಲೋದ್ ಜಿಲ್ಲೆಯ ಯುವಕರು. ಇಲ್ಲಿನ ಯುವಜನತೆ ನೀರನ್ನು ಸಂರಕ್ಷಿಸುವುದಕ್ಕಾಗಿ ಒಂದು ಅಭಿಯಾನ ಆರಂಭಿಸಿದ್ದಾರೆ. ಇವರು ಮನೆ ಮನೆಗೆ ತೆರಳಿ, ಜನರಿಗೆ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಾರೆ. ವಿವಾಹದಂತಹ ಸಮಾರಂಭಗಳಿದ್ದಲ್ಲಿ, ಯುವಕರ ಈ ಗುಂಪು ಅಲ್ಲಿಗೆ ಹೋಗಿ ನೀರಿನ ದುರ್ಬಳಕೆಯನ್ನು ಹೇಗೆ ತಡೆಯಬಹುದು ಎಂಬ ಕುರಿತು ಅರಿವು ಮೂಡಿಸುತ್ತಾರೆ. ನೀರಿನ ಸದ್ಬಳಕೆಗೆ ಸಂಬಂಧಿಸಿದ ಒಂದು ಪ್ರೇರಣಾತ್ಮಕ ಪ್ರಯತ್ನ ಜಾರ್ಖಂಡ್ ನ ಖೂಂಟೀ ಜಿಲ್ಲೆಯಲ್ಲಿಯೂ ಕೂಡಾ ನಡೆಯುತ್ತಿದೆ. ಖೂಂಟಿಯ ಜನರು ನೀರಿನ ಬಿಕ್ಕಟ್ಟಿನಿಂದ ಹೊರಬರಲು ಬೋರಿ ಅಣೆಕಟ್ಟಿನ ಮಾರ್ಗ ಕಂಡುಕೊಂಡಿದ್ದಾರೆ. ಬೋರಿ ಅಣೆಕಟ್ಟಿನಿಂದ ನೀರು ಸಂಗ್ರಹವಾಗುವುದರಿಂದ ಇಲ್ಲಿ ಹಸಿರು-ತರಕಾರಿ ಕೂಡಾ ಬೆಳೆಯಲಾರಂಭಿಸಿವೆ. ಇದರಿಂದ ಜನರ ವರಮಾನವೂ ಹೆಚ್ಚಾಗುತ್ತಿದೆ ಮತ್ತು ಕ್ಷೇತ್ರದ ಅಗತ್ಯತೆಗಳೂ ಈಡೇರುತ್ತಿವೆ. ಸಾರ್ವಜನಿಕರ ಸಹಭಾಗಿತ್ವದಿಂದ ಯಾವುದೇ ಪ್ರಯತ್ನ ಯಾವರೀತಿ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಖೂಂಟಿ ಒಂದು ಆಕರ್ಷಕ ಉದಾಹರಣೆಯಾಗಿದೆ. ಇಲ್ಲಿನ ಜನರ ಈ ಪ್ರಯತ್ನಕ್ಕಾಗಿ ನಾನು ಅವರಿಗೆ ಅನೇಕಾನೇಕ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, 1965 ರ ಯುದ್ಧದ ಸಮಯದಲ್ಲಿ, ನಮ್ಮ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರೀಯವರು ಜೈ ಜವಾನ್ ಜೈ ಕಿಸಾನ್ ನ ಘೋಷಣೆ ಮಾಡಿದರು. ನಂತರ ಅಟಲ್ ಜೀ ಇದಕ್ಕೆ ಜೈ ವಿಜ್ಞಾನವನ್ನೂ ಸೇರಿಸಿದ್ದರು. ಕೆಲವು ವರ್ಷಗಳ ಹಿಂದೆ ದೇಶದ ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ನಾನು, ಜೈ ಅನುಸಂಧಾನ್ ಬಗ್ಗೆ ಕೂಡಾ ಮಾತನಾಡಿದ್ದೆ. ‘ಮನದ ಮಾತಿನಲ್ಲಿ’ ನಾನು ಇಂದು ಜೈ ಜವಾನ್ ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನಸಂಧಾನ್ ಈ ನಾಲ್ಕೂ ಅಂಶಗಳ ಪ್ರತಿಬಿಂಬವಾಗಿರುವಂತಹ ಓರ್ವ ವ್ಯಕ್ತಿಯ ಬಗ್ಗೆ, ಒಂದು ಸಂಸ್ಥೆಯ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ. ಮಹಾರಾಷ್ಟ್ರದ ಶ್ರೀ ಶಿವಾಜಿ ಶಾಮರಾವ್ ಡೋಲೇ ಅವರೇ ಈ ಸಜ್ಜನರು. ಶಿವಾಜಿ ಡೋಲೆ ಅವರು ನಾಸಿಕ್ ಜಿಲ್ಲೆಯ ಒಂದು ಸಣ್ಣ ಗ್ರಾಮದ ನಿವಾಸಿಗಳು. ಅವರು ಬಡ ಬುಡಕಟ್ಟು ರೈತ ಕುಟುಂಬಕ್ಕೆ ಸೇರಿದವರು ಮತ್ತು ಓರ್ವ ಮಾಜಿ ಸೈನಿಕರು ಕೂಡಾ. ಸೈನ್ಯದಲ್ಲಿರುವಾಗ ಅವರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟಿದ್ದರು. ನಿವೃತ್ತಿ ಹೊಂದಿದ ನಂತರ ಅವರು ಹೊಸದನ್ನೇನಾದರೂ ಕಲಿಯಬೇಕೆಂದು ನಿರ್ಧರಿಸಿದರು. ಮತ್ತು ಕೃಷಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಅಂದರೆ ಅವರು ಜೈ ಜವಾನ್ ನಿಂದ ಜೈ ಕಿಸಾನ್ ನಿಟ್ಟಿನಲ್ಲಿ ಸಾಗಿದರು. ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ತಾವು ಹೆಚ್ಚು ಹೆಚ್ಚು ಕೊಡುಗೆ ನೀಡಬಹುದು ಎನ್ನುವುದು ಈಗ ಅವರ ಪ್ರತಿ ಕ್ಷಣದ ಪ್ರಯತ್ನವಾಗಿದೆ. ತಮ್ಮ ಈ ಅಭಿಯಾನದಲ್ಲಿ ಶಿವಾಜಿ ಡೋಲೆ ಅವರು 20 ಜನರ ಒಂದು ಸಣ್ಣ ತಂಡ ಕಟ್ಟಿದರು ಮತ್ತು ಕೆಲವು ಮಾಜಿ ಸೈನಿಕರನ್ನೂ ಇದರಲ್ಲಿ ಸೇರಿಸಿಕೊಂಡರು. ನಂತರ ಅವರ ಈ ತಂಡವು Venkateshwara Co-Operative Power & Agro Processing Limited ಹೆಸರಿನ ಒಂದು ಸಹಕಾರಿ ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡಿತು. ಈ ಸಹಕಾರಿ ಸಂಸ್ಥೆ ನಿಷ್ಕ್ರಿಯವಾಗಿತ್ತು, ಇದನ್ನು ಪುನಶ್ಚೇತನಗೊಳಿಸುವ ಹೊಣೆಯನ್ನು ಇವರು ಹೊತ್ತರು. ನೋಡುತ್ತಿದ್ದಂತೆಯೇ,ಇಂದು Venkateshwara Co-Operative ನ ವ್ಯಾಪ್ತಿ ಹಲವು ಜಿಲ್ಲೆಗಳಲ್ಲಿ ಹರಡಿದೆ. ಇಂದು ಈ ತಂಡ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರೊಂದಿಗೆ ಸುಮಾರು 18 ಸಾವಿರ ಜನರು ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ಮಾಜಿ ಯೋಧರಿದ್ದಾರೆ. ನಾಸಿಕ್ ನ ಮಾಲೇಗಾಂವ್ ನಲ್ಲಿ ಈ ತಂಡದ ಸದಸ್ಯರು 500 ಎಕರೆಗಿಂತ ಹೆಚ್ಚಿನ ಭೂಮಿಯಲ್ಲಿ Agro Farming ಮಾಡುತ್ತಿದ್ದಾರೆ. ಈ ತಂಡ ಜಲ ಸಂರಕ್ಷಣೆಗಾಗಿ ಕೂಡಾ ಅನೇಕ ಕೊಳಗಳ ನಿರ್ಮಾಣದಲ್ಲಿ ತೊಡಗಿದೆ. ವಿಶೇಷವೆಂದರೆ ಇವರು ಸಾವಯವ ಕೃಷಿ ಮತ್ತು ಹೈನುಗಾರಿಕೆಯನ್ನೂ ಆರಂಭಿಸಿದ್ದಾರೆ. ಈಗ ಇವರು ಬೆಳೆಸಿದ ದ್ರಾಕ್ಷಿಯನ್ನು ಯೂರೋಪ್ ಗೆ ಕೂಡಾ ರಫ್ತು ಮಾಡಲಾಗುತ್ತಿದೆ. ಈ ತಂಡದ ಎರಡು ವಿಶೇಷತೆಗಳಿವೆ. ಇದು ನನ್ನ ಗಮನವನ್ನು ಸೆಳೆಯಿತು. ಅದೆಂದರೆ, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್. ಈ ತಂಡದ ಸದಸ್ಯರು ತಂತ್ರಜ್ಞಾನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಎರಡನೇ ವಿಶೇಷತೆಯೆಂದರೆ, ಇವರು ರಫ್ತಿಗಾಗಿ ಅಗತ್ಯವಿರುವ ಅನೇಕ ಪ್ರಮಾಣೀಕರಣಗಳ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ‘ಸಹಕಾರದಿಂದ ಸಮೃದ್ಧಿ’ ಭಾವನೆಯೊಂದಿಗೆ ಕೆಲಸ ಮಾಡುತ್ತಿರುವ ಈ ತಂಡವನ್ನು ನಾನು ಪ್ರಶಂಸಿಸುತ್ತೇನೆ. ಈ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯ ಜನರು ಸಬಲೀಕರಣಗೊಳ್ಳುವುದು ಮಾತ್ರವಲ್ಲದೇ ಜೀವನೋಪಾಯದ ಅನೇಕ ಮಾರ್ಗಗಳನ್ನೂ ಕೂಡಾ ಕಂಡುಕೊಳ್ಳಲಾಗಿದೆ. ಈ ಪ್ರಯತ್ನ ಮನದ ಮಾತಿನ ಶ್ರೋತೃಗಳಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 28 ರಂದು, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ ಕರ್ ಅವರ ಜಯಂತಿಯೂ ಆಗಿದೆ. ಅವರ ತ್ಯಾಗ, ಸಾಹಸ ಮತ್ತು ಸಂಕಲ್ಪ ಶಕ್ತಿಯ ಗಾಥೆಗಳು ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ನಾನು ಅಂಡಮಾನ್ ನಲ್ಲಿ, ವೀರ್ ಸಾವರ್ಕರ್ ಅವರು ಕಾಲಾಪಾನಿ ಶಿಕ್ಷೆ ಅನುಭವಿಸಿದ ಆ ಕೋಣೆಗೆ ಹೋಗಿದ್ದ ದಿನವನ್ನು ನಾನು ಮರೆಯಲು ಸಾಧ್ಯವಿಲ್ಲ. ವೀರ ಸಾವರ್ಕರ್ ಅವರ ವ್ಯಕ್ತಿತ್ವವು ದೃಢತೆ ಮತ್ತು ಉದಾತ್ತತೆಯ ಸಮ್ಮಿಲನವಾಗಿತ್ತು. ಅವರ ನಿರ್ಭೀತ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಯನ್ನು ಒಪ್ಪಿಕೊಳ್ಳಲಿಲ್ಲ. ಸ್ವಾತಂತ್ರ್ಯ ಚಳುವಳಿ ಮಾತ್ರವಲ್ಲ, ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೂಡಾ ವೀರ್ ಸಾವರ್ಕರ್ ಮಾಡಿರುವ ಕೆಲಸಗಳು ಇಂದಿಗೂ ಸ್ಮರಣೀಯ.
ಸ್ನೇಹಿತರೇ, ಕೆಲವು ದಿನಗಳ ಬಳಿಕ ಜೂನ್ 4 ರಂದು ಸಂತ ಕಬೀರ್ ದಾಸರ ಜಯಂತಿ ಬರಲಿದೆ. ಕಬೀರ್ ದಾಸರು ನಮಗೆ ತೋರಿದ ಹಾದಿ ಇಂದಿಗೂ ಪ್ರಸ್ತುತವಾಗಿದೆ. ಕಬೀರ್ ದಾಸರು ಹೇಳುತ್ತಿದ್ದರು,
“ಕಬೀರಾ ಕುಂವಾ ಏಕ್ ಹೈ, ಪಾನೀ ಭರೇ ಅನೇಕ್ |
ಬರ್ತನ್ ಮೇ ಹೀ ಭೇದ್ ಹೈ, ಪಾನೀ ಸಬ್ ಮೇ ಏಕ್ ಹೈ|”
ಅಂದರೆ, ಬಾವಿಯಲ್ಲಿ ಬೇರೆ ಬೇರೆ ರೀತಿಯ ಜನರು ನೀರು ತುಂಬಿಕೊಳ್ಳಲು ಬರುತ್ತಾರೆ, ಆದರೆ ಬಾವಿ ಯಾವುದೇ ತಾರತಮ್ಯ ಮಾಡುವುದಿಲ್ಲ, ನೀರು ಎಲ್ಲಾ ಪಾತ್ರೆಯಲ್ಲೂ ಒಂದೇ ಆಗಿರುತ್ತದೆ. ಸಮಾಜವನ್ನು ವಿಭಜಿಸುವ ಪ್ರತಿಯೊಂದು ಅನಿಷ್ಠ ಪದ್ಧತಿಯನ್ನೂ ಕಬೀರರು ವಿರೋಧಿಸಿದರು, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಇಂದು ದೇಶ ಅಭಿವೃದ್ಧಿ ಹೊಂದುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವಾಗ, ನಾವು ಸಂತ ಕಬೀರರಿಂದ ಸ್ಫೂರ್ತಿ ಪಡೆದುಕೊಳ್ಳುತ್ತಾ, ಸಮಾಜವನ್ನು ಸಶಕ್ತವಾಗಿಸುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾನು ನಿಮ್ಮೊಂದಿಗೆ ರಾಜಕೀಯ ಮತ್ತು ಚಲನಚಿತ್ರ ಪ್ರಪಂಚದಲ್ಲಿ ತನ್ನ ಅದ್ಭುತ ಪ್ರತಿಭೆಯಿಂದ ಛಾಪು ಮೂಡಿಸಿದಂತಹ ಓರ್ವ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಮಹಾನ್ ವ್ಯಕ್ತಿಯ ಹೆಸರು ಎನ್. ಟಿ. ರಾಮರಾವ್. ನಾವೆಲ್ಲರೂ ಅವರನ್ನು ಎನ್ ಟಿ ಆರ್ ಎಂಬ ಹೆಸರಿನಿಂದ ಅರಿತಿದ್ದೇವೆ. ಇಂದು ಎನ್ ಟಿ ಆರ್ ಅವರ ನೂರನೇ ಜಯಂತಿ. ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅವರು ಕೇವಲ ತೆಲುಗು ಸಿನಿಮಾ ಜಗತ್ತಿನ ಮಹಾನಾಯಕರಾಗಿದ್ದು ಮಾತ್ರವಲ್ಲದೇ, ಕೋಟ್ಯಂತರ ಜನರ ಮನವನ್ನೂ ಗೆದ್ದಿದ್ದರು. ಅವರು 300 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆಂದು ನಿಮಗೆ ಗೊತ್ತೇ? ಕೆಲವು ಐತಿಹಾಸಿಕ ಚಲನಚಿತ್ರಗಳಲ್ಲಿ ಅವರು ತಮ್ಮ ಮನೋಜ್ಞ ಅಭಿನಯದಿಂದ ಆ ಪಾತ್ರಗಳಿಗೆ ಜೀವ ತುಂಬಿ ಜೀವಂತಗೊಳಿಸಿದ್ದಾರೆ. ಕೃಷ್ಣ, ರಾಮ ಇತ್ಯಾದಿ ಪಾತ್ರಗಳಲ್ಲಿ ಎನ್ ಟಿ ಆರ್ ಅವರ ನಟನೆಯನ್ನು ಜನರು ಎಷ್ಟೊಂದು ಇಷ್ಟ ಪಡುತ್ತಿದ್ದರೆಂದರೆ ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಎನ್ ಟಿ ಆರ್ ಅವರು ಚಿತ್ರ ಜಗತ್ತು ಮಾತ್ರವಲ್ಲದೇ ರಾಜಕೀಯದಲ್ಲಿ ಕೂಡಾ ತಮ್ಮದೇ ಆದ ಗುರುತು ಮೂಡಿಸಿದ್ದರು. ಇಲ್ಲಿ ಕೂಡಾ ಅವರಿಗೆ ಜನರಿಂದ ಸಾಕಷ್ಟು ಪ್ರೀತಿ ಮತ್ತು ಆಶೀರ್ವಾದ ದೊರೆಯಿತು. ದೇಶದಲ್ಲಿ, ವಿಶ್ವದಲ್ಲಿ ಲಕ್ಷಾಂತರ ಜನರ ಹೃದಯ ಸಿಂಹಾಸನದಲ್ಲಿ ಇಂದಿಗೂ ವಿರಾಜಮಾನರಾಗಿರುವ ಎನ್ ಟಿ ರಾಮಾರಾವ್ ಅವರಿಗೆ ನನ್ನ ವಿನಯಪೂರ್ವಕ ನಮನಗಳನ್ನು ಅರ್ಪಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ಮನದ ಮಾತು ಇಲ್ಲಿಗೆ ಮುಗಿಸುತ್ತಿದ್ದೇನೆ. ಮುಂದಿನ ಬಾರಿ ಕೆಲವು ಹೊಸ ವಿಷಯಗಳೊಂದಿಗೆ ನಿಮ್ಮ ನಡುವೆ ಬರುತ್ತೇನೆ. ಆ ವೇಳೆಗೆ ಕೆಲವು ಪ್ರದೇಶಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾಗಬಹುದು. ಕೆಲವು ಪ್ರದೇಶಗಳಲ್ಲಿ ಮಳೆಯೂ ಆರಂಭವಾಗಬಹುದು. ಪ್ರತಿಯೊಂದು ಋತುವಿನಲ್ಲೂ ನೀವು ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಜೂನ್ 21 ರಂದು ನಾವು ವಿಶ್ವ ಯೋಗ ದಿನ ಆಚರಿಸೋಣ. ಅದಕ್ಕಾಗಿ ಕೂಡಾ ದೇಶ ವಿದೇಶಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ನೀವು ಈ ಸಿದ್ಧತೆಗಳ ಬಗ್ಗೆ ಕೂಡಾ ನಮ್ಮ ಈ ಮನ್ ಕಿ ಬಾತ್ ನಲ್ಲಿ ಬರೆಯುತ್ತಿರಿ. ಬೇರಾವುದೇ ವಿಷಯ ಕುರಿತು ನಿಮಗೇನಾದರೂ ತಿಳಿದುಬಂದರೆ ಅದನ್ನು ಕೂಡಾ ನೀವು ನನಗೆ ತಿಳಿಯಪಡಿಸಿ. ಸಾಧ್ಯವಾದಷ್ಟು ಹೆಚ್ಚು ಸಲಹೆ ಸೂಚನೆಗಳನ್ನು ಮನ್ ಕಿ ಬಾತ್ ನಲ್ಲಿ ತೆಗೆದುಕೊಳ್ಳಬೇಕೆನ್ನುವುದು ನನ್ನ ಪ್ರಯತ್ನವಾಗಿದೆ. ನಿಮಗೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಧನ್ಯವಾದ. ಮುಂದಿನ ಬಾರಿ, ಮುಂದಿನ ತಿಂಗಳು ಪುನಃ ಭೇಟಿಯಾಗೋಣ. ಅಲ್ಲಿಯವರೆಗೂ ನನಗೆ ಅನುಮತಿ ಕೊಡಿ. ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು 'ಮನದ ಮಾತಿನ' ನೂರನೇ ಸಂಚಿಕೆ. ನಿಮ್ಮೆಲ್ಲರಿಂದ ನನಗೆ ಸಾವಿರಾರು ಪತ್ರಗಳು, ಲಕ್ಷಗಟ್ಟಲೆ ಸಂದೇಶಗಳು ಬಂದಿವೆ ಮತ್ತು ನಾನು ಸಾಧ್ಯವಾದಷ್ಟು ಪತ್ರಗಳನ್ನು ಓದಲು, ಅವುಗಳನ್ನು ನೋಡಲು ಮತ್ತು ಸಂದೇಶಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ನಿಮ್ಮ ಪತ್ರಗಳನ್ನು ಓದುವಾಗ ಹಲವು ಬಾರಿ ನಾನು ಭಾವುಕನಾದೆ, ಭಾವೋದ್ವೇಗಕ್ಕೆ ಒಳಗಾದೆ, ಭಾವೋದ್ವೇಗದ ಹೊಳೆಯಲ್ಲಿ ತೇಲಿ ಹೋದೆ ಜೊತೆಗೆ ನನ್ನನ್ನೂ ನಿಯಂತ್ರಿಸಿಕೊಂಡೆ. 'ಮನದ ಮಾತಿನ' 100 ನೇ ಸಂಚಿಕೆಗಾಗಿ ನೀವು ನನ್ನನ್ನು ಅಭಿನಂದಿಸಿದ್ದೀರಿ, ಆದರೆ ನಾನು ಮನಃ ಪೂರ್ವಕವಾಗಿ ಹೇಳುತ್ತಿದ್ದೇನೆ, ವಾಸ್ತವವಾಗಿ, ನೀವೆಲ್ಲರೂ 'ಮನದ ಮಾತಿನ' ಶ್ರೋತೃಗಳು, ನಮ್ಮ ದೇಶವಾಸಿಗಳು, ಅಭಿನಂದನೆಗೆ ಅರ್ಹರಾಗಿದ್ದೀರಿ. 'ಮನದ ಮಾತು' ಕೋಟ್ಯಂತರ ಭಾರತೀಯರ 'ಮನದ ಮಾತಾಗಿದೆ', ಅದು ಅವರ ಭಾವನೆಗಳ ಅಭಿವ್ಯಕ್ತಿಯಾಗಿದೆ.
ಸ್ನೇಹಿತರೇ, ಅಕ್ಟೋಬರ್ 3, 2014 ವಿಜಯ ದಶಮಿಯ ಹಬ್ಬದಂದು ನಾವೆಲ್ಲರೂ ಒಗ್ಗೂಡಿ ವಿಜಯ ದಶಮಿಯ ದಿನದಂದು 'ಮನದ ಮಾತಿನ' ಪಯಣವನ್ನು ಆರಂಭಿಸಿದ್ದೆವು. ವಿಜಯ ದಶಮಿ ಎಂದರೆ ದುಷ್ಟ ಮರ್ದನ ಶಿಷ್ಟ ರಕ್ಷಣೆಯ ವಿಜಯದ ಹಬ್ಬ. 'ಮನದ ಮಾತು' ದೇಶವಾಸಿಗಳ ಒಳ್ಳೆಯತನ ಮತ್ತು ಸಕಾರಾತ್ಮಕತೆಯ ಒಂದು ವಿಶಿಷ್ಟ ಹಬ್ಬವಾಗಿದೆ. ಎಂಥ ಹಬ್ಬ ಎಂದರೆ ಪ್ರತಿ ತಿಂಗಳು ಬರುವ ಹಬ್ಬವಿದು. ಅದಕ್ಕಾಗಿ ನಾವೆಲ್ಲ ಕಾತುರದಿಂದ ಕಾಯುತ್ತಿರುತ್ತೇವೆ. ನಾವು ಇದರಲ್ಲಿ ಸಕಾರಾತ್ಮಕತೆಯನ್ನು ಆಚರಿಸುತ್ತೇವೆ. ಜನರ ಸಹಭಾಗಿತ್ವವನ್ನು ಆಚರಿಸುತ್ತೇವೆ. ‘ಮನದ ಮಾತು’ಗೆ ಇಷ್ಟು ತಿಂಗಳುಗಳು ಇಷ್ಟು ವರ್ಷಗಳು ತುಂಬಿದೆ ಎಂದರೆ ಕೆಲವೊಮ್ಮೆ ನಂಬುವುದು ಕಷ್ಟವಾಗುತ್ತದೆ. ಪ್ರತಿಯೊಂದು ಸಂಚಿಕೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿತ್ತು. ಪ್ರತಿ ಬಾರಿ, ಹೊಸ ಉದಾಹರಣೆಗಳ ನಾವೀಣ್ಯತೆ, ಪ್ರತಿ ಬಾರಿಯೂ ದೇಶವಾಸಿಗಳ ಯಶಸ್ಸಿನ ಹೊಸ ಅಧ್ಯಾಯ ಇದರಲ್ಲಿ ಮಿಳಿತವಾಗಿತ್ತು. 'ಮನದ ಮಾತು' ನೊಂದಿಗೆ ದೇಶದ ಮೂಲೆ ಮೂಲೆಯ ಜನರು, ಎಲ್ಲಾ ವಯೋಮಾನದವರು ಸೇರಿಕೊಂಡರು. ಭೇಟಿ ಬಚಾವೋ ಭೇಟಿ ಪಢಾವೋ ಆಂದೋಲನವಾಗಲಿ, ಸ್ವಚ್ಛ ಭಾರತ ಆಂದೋಲನವಾಗಲಿ, ಖಾದಿ ಅಥವಾ ಪ್ರಕೃತಿ ಪ್ರೀತಿಯೇ ಆಗಿರಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಥವಾ ಅಮೃತ ಸರೋವರವೇ ಆಗಿರಲಿ, 'ಮನದ ಮಾತು' ಯಾವ ವಿಷಯವನ್ನು ಪ್ರಸ್ತಾಪಿಸಿತೊ, ಅದು ಜನಾಂದೋಲನವಾಗಿ ರೂಪುಗೊಂಡಿತು. ನೀವು ಜನರು ಅದನ್ನು ಸಾಧ್ಯವಾಗಿಸಿದ್ದೀರಿ. ನಾನು ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ‘ಮನದ ಮಾತು’ ಹಂಚಿಕೊಂಡಾಗ ಅದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಸ್ನೇಹಿತರೇ, 'ಮನದ ಮಾತು' ನನಗೆ ಇತರರ ಗುಣಗಳನ್ನು ಆರಾಧಿಸುವ ವೇದಿಕೆಯಂತಿದೆ. ನನಗೆ ಶ್ರೀ ಲಕ್ಷ್ಮಣರಾವ್ ಜಿ ಇನಾಮದಾರ್ ಎಂಬ ಒಬ್ಬ ಮಾರ್ಗದರ್ಶಕರಿದ್ದರು . ನಾವು ಅವರನ್ನು ವಕೀಲ್ ಸಾಹೇಬ್ ಎಂದು ಕರೆಯುತ್ತಿದ್ದೆವು. ನಾವು ಇತರರ ಗುಣಗಳನ್ನು ಮೆಚ್ಚಬೇಕು ಆರಾಧಿಸಬೇಕೆಂದು ಅವರು ಯಾವಾಗಲೂ ಹೇಳುತ್ತಿದ್ದರು. ನಿಮ್ಮ ಮುಂದೆ ಯಾರೇ ಇರಲಿ, ನಿಮ್ಮ ಜೊತೆಗಿರುವವರಾಗಿರಲಿ, ನಿಮ್ಮ ಎದುರಾಳಿಯಾಗಿರಲಿ, ಅವರ ಉತ್ತಮ ಗುಣಗಳನ್ನು ತಿಳಿದುಕೊಳ್ಳಲು ಮತ್ತು ಅವರಿಂದ ಕಲಿಯಲು ನಾವು ಪ್ರಯತ್ನಿಸಬೇಕು. ಅವರ ಈ ಮಾತು ನನಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ. 'ಮನದ ಮಾತು' ಇತರರ ಗುಣಗಳಿಂದ ಕಲಿಯಲು ಉತ್ತಮ ಮಾಧ್ಯಮವಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, ಈ ಕಾರ್ಯಕ್ರಮವು ನನ್ನನ್ನು ನಿಮ್ಮಿಂದ ದೂರ ಹೋಗದಂತೆ ನೋಡಿಕೊಂಡಿದೆ. ನನಗೆ ನೆನಪಿದೆ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಜನಸಾಮಾನ್ಯರನ್ನು ಭೇಟಿಯಾಗುವುದು, ಸಂವಾದ ನಡೆಸುವುದು ಸಹಜವಾಗಿತ್ತು . ಮುಖ್ಯಮಂತ್ರಿಗಳ ಕೆಲಸ ಮತ್ತು ಅಧಿಕೃತ ಕಚೇರಿ ಹೀಗಿಯೇ ಇರುತ್ತದೆ, ಭೇಟಿಯಾಗುವ ಹಲವಾರು ಅವಕಾಶಗಳು ಲಭಿಸುತ್ತವೆ. ಆದರೆ 2014ರಲ್ಲಿ ದೆಹಲಿಗೆ ಬಂದ ನಂತರ ಇಲ್ಲಿನ ಜೀವನ ತುಂಬಾ ವಿಭಿನ್ನವಾಗಿದೆ ಎಂಬುದನ್ನು ಕಂಡುಕೊಂಡೆ. ಕೆಲಸದ ಸ್ವರೂಪವೇ ಬೇರೆ, ಜವಾಬ್ದಾರಿಯೇ ಬೇರೆ, ಸ್ಥಿತಿ ಮತ್ತು ಪರಿಸ್ಥಿತಿಗಳು ವಿಭಿನ್ನವಾಗಿದ್ದವು, ಭದ್ರತೆಯ ಅತಿರೇಕ, ಕಾಲಮಿತಿ ಎಲ್ಲವೂ ಹೇರಿದಂತಿತ್ತು. ಆರಂಭದ ದಿನಗಳಲ್ಲಿ, ಏನೋ ವಿಭಿನ್ನ ಭಾವನೆ, ಶೂನ್ಯ ಭಾವನೆ ತುಂಬಿತ್ತು. ಒಂದು ದಿನ ನನ್ನ ಸ್ವಂತ ದೇಶದ ಜನರನ್ನು ಸಂಪರ್ಕಿಸುವುದು ಕಷ್ಟಕರವೆನಿಸುವ ಸ್ಥಿತಿಯನ್ನು ಎದುರಿಸಲು ನಾನು ಐವತ್ತು ವರ್ಷಗಳ ಹಿಂದೆ ನನ್ನ ಮನೆಯನ್ನು ತೊರೆದಿರಲಿಲ್ಲ. ನನ್ನ ಸರ್ವಸ್ವವೂ ಆಗಿರುವ ದೇಶವಾಸಿಗಳಿಂದ ಬೇರ್ಪಟ್ಟು ಬದುಕಲು ಸಾಧ್ಯವಿರಲಿಲ್ಲ. ಈ ಸವಾಲನ್ನು ಎದುರಿಸಲು 'ಮನದ ಮಾತು' ನನಗೆ ಪರಿಹಾರವನ್ನು ನೀಡಿತು, ಸಾಮಾನ್ಯ ಜನರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನು ಕಲ್ಪಿಸಿತು. ಅಲಂಕರಿಸಿದ ಹುದ್ದೆ ಮತ್ತು ಶಿಷ್ಟಾಚಾರ ಎಂಬುದು ವ್ಯವಸ್ಥೆಗೆ ಸೀಮಿತವಾಗಿ ಉಳಿಯಿತು ಮತ್ತು ಸಾರ್ವಜನಿಕ ಭಾವನೆಗಳು, ಕೋಟಿಗಟ್ಟಲೆ ಜನರೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳುವುದು ನನ್ನ ಪ್ರಪಂಚದ ಅವಿಭಾಜ್ಯ ಅಂಗವಾಗಿದೆ. ಪ್ರತಿ ತಿಂಗಳು ನಾನು ದೇಶದ ಜನರ ಸಾವಿರಾರು ಸಂದೇಶಗಳನ್ನು ಓದುತ್ತೇನೆ, ಪ್ರತಿ ತಿಂಗಳು ನಾನು ದೇಶವಾಸಿಗಳ ಅದ್ಭುತ ಸ್ವರೂಪವನ್ನು ಕಾಣುತ್ತೇನೆ. ದೇಶವಾಸಿಗಳ ತಪಸ್ಸು ಮತ್ತು ತ್ಯಾಗದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತೇನೆ ಮತ್ತು ಅದನ್ನು ಅನುಭವಿಸುತ್ತೇನೆ. ನಾನು ನಿಮ್ಮಿಂದ ಸ್ವಲ್ಪವೂ ದೂರದಲ್ಲಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ನನಗೆ 'ಮನದ ಮಾತು' ಕೇವಲ ಕಾರ್ಯಕ್ರಮವಲ್ಲ, ನನಗೆ ಅದು ನಂಬಿಕೆ, ಪೂಜೆ, ವೃತದಂತೆ. ಜನರು ದೇವರ ಪೂಜೆಗೆ ಹೋದಾಗ ಪ್ರಸಾದದ ತಟ್ಟೆ ತರುತ್ತಾರೆ. ನನ್ನ ಪಾಲಿಗೆ 'ಮನದ ಮಾತು' ಎಂಬುದು ಭಗವಂತನ ಸ್ವರೂಪಿಯಾದ ಜನತಾ ಜನಾರ್ಧನನ ಪಾದಗಳಿಗೆ ಅರ್ಪಿಸುವ ಪ್ರಸಾದದ ತಟ್ಟೆ ಇದ್ದಂತೆ. 'ಮನದ ಮಾತು' ನನ್ನ ಮನಸ್ಸಿನ ಆಧ್ಯಾತ್ಮಿಕ ಯಾತ್ರೆಯಾಗಿದೆ.
'ಮನದ ಮಾತು' ಎಂಬುದು ವ್ಯಕ್ತಿಯಿಂದ ಸಮಷ್ಟಿಯತ್ತ ಪಯಣ.
'ಮನದ ಮಾತು' ಅಹಂ ನಿಂದ ವಯಂನೆಡೆಗೆ ಸಾಗುವ ಪಯಣ.
ಇದು ನಾನಲ್ಲ, ಬದಲಾಗಿ ನೀವುಗಳು ಈ ಸಂಸ್ಕೃತಿಯ ಸಾಧನೆಯಾಗಿದ್ದೀರಿ .
ನೀವು ಊಹಿಸಿಕೊಳ್ಳಿ, ನನ್ನ ದೇಶದ ಕೆಲ ದೇಶವಾಸಿಗಳು 40-40 ವರ್ಷಗಳಿಂದ ನಿರ್ಜನವಾದ ಬೆಟ್ಟಗಳಲ್ಲಿ ಮತ್ತು ಬರಡು ಭೂಮಿಯಲ್ಲಿ ಮರಗಳನ್ನು ನೆಡುತ್ತಿದ್ದಾರೆ, ಅದೆಷ್ಟೋ ಜನರು 30-30 ವರ್ಷಗಳಿಂದ ನೀರಿನ ಸಂರಕ್ಷಣೆಗಾಗಿ ಬಾವಿಗಳನ್ನು ಮತ್ತು ಕೊಳಗಳನ್ನು ನಿರ್ಮಿಸುತ್ತಿದ್ದಾರೆ, ಅವುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕೆಲವರು 25-30 ವರ್ಷಗಳಿಂದ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ, ಕೆಲವರು ಬಡವರ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ‘ಮನದ ಮಾತಿನಲ್ಲಿ’ ಅವರನ್ನು ಹಲವು ಬಾರಿ ಪ್ರಸ್ತಾಪಿಸುವಾಗ ನಾನು ಭಾವುಕನಾಗಿದ್ದೇನೆ. ಆಕಾಶವಾಣಿಯ ಸಹೋದ್ಯೋಗಿಗಳು ಹಲವು ಬಾರಿ ಅದನ್ನು ಪುನಃ ಧ್ವನಿ ಮುದ್ರಿಸಬೇಕಾಯಿತು. ಇಂದು ಅದೆಷ್ಟೋ ಗತಕಾಲದ ನೆನಪುಗಳು ಕಣ್ಣ ಮುಂದೆ ಬರುತ್ತಿವೆ. ದೇಶವಾಸಿಗಳ ಈ ಪ್ರಯತ್ನಗಳು ನನ್ನನ್ನು ನಿರಂತರವಾಗಿ ಶ್ರಮಿಸುವಂತೆ ಪ್ರೇರೇಪಿಸಿದೆ.
ಸ್ನೇಹಿತರೇ, ನಾವು 'ಮನದ ಮಾತಿನಲ್ಲಿ” ಯಾರ ಬಗ್ಗೆ ಪ್ರಸ್ತಾಪಿಸುತ್ತೇವೆಯೋ ಅವರೆಲ್ಲರೂ ಈ ಕಾರ್ಯಕ್ರಮಕ್ಕೆ ಜೀವಕಳೆ ತುಂಬಿದ ನಮ್ಮ ಹೀರೋಗಳು. ಇಂದು, ನಾವು 100 ನೇ ಸಂಚಿಕೆಯ ಘಟ್ಟವನ್ನು ತಲುಪಿರುವಾಗ, ನಾವು ಮತ್ತೊಮ್ಮೆ ಈ ಎಲ್ಲಾ ಹೀರೋಗಳ ಬಳಿ ಹೋಗಿ ಅವರ ಪಯಣದ ಬಗ್ಗೆ ತಿಳಿಯಬೇಕೆಂದು ಬಯಸುತ್ತೇನೆ. ಇಂದು ನಾವು ಕೆಲವು ಸ್ನೇಹಿತರೊಂದಿಗೆ ಮಾತನಾಡಲು ಪ್ರಯತ್ನಿಸೋಣ. ಹರಿಯಾಣದ ಸಹೋದರ ಸುನಿಲ್ ಜಗ್ಲಾನ್ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಸುನಿಲ್ ಜಗ್ಲಾನ್ ಅವರು ನನ್ನ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಲು ಕಾರಣವೇನೆಂದರೆ ಹರಿಯಾಣದಲ್ಲಿ ಲಿಂಗ ಅನುಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು ಮತ್ತು ನಾನು ಹರಿಯಾಣದಿಂದಲೇ 'ಬೇಟಿ ಬಚಾವೋ-ಬೇಟಿ ಪಢಾವೋ' ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಧ್ಯೆ ಸುನೀಲ್ ಅವರ 'ಸೆಲ್ಫಿ ವಿತ್ ಡಾಟರ್' ಅಭಿಯಾನದತ್ತ ನನ್ನ ಗಮನ ಹರಿಯಿತು. ಅದನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ನಾನೂ ಅವರಿಂದ ಅರಿತು ಮತ್ತು ‘ಮನದ ಮಾತಿನಲ್ಲಿ’ ಈ ಪ್ರಸ್ತಾಪ ಮಾಡಿದೆ. ನೋಡ ನೋಡುತ್ತಿದ್ದಂತೆ, 'ಸೆಲ್ಫಿ ವಿತ್ ಡಾಟರ್' ಜಾಗತಿಕ ಅಭಿಯಾನವಾಗಿ ಮಾರ್ಪಟ್ಟಿತು. ಮತ್ತು ಇದರಲ್ಲಿ ವಿಷಯ ಸೆಲ್ಫಿಯಲ್ಲ, ತಂತ್ರಜ್ಞಾನವೂ ಅಲ್ಲ, ಮಗಳು, ಮಗಳಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಈ ಅಭಿಯಾನದ ಮೂಲಕ ಜೀವನದಲ್ಲಿ ಹೆಣ್ಣು ಮಗಳ ಸ್ಥಾನ ಎಷ್ಟು ಮಹತ್ವವಾಗಿದೆ ಎಂಬುದು ತಿಳಿದುಬಂತು. ಇಂತಹ ಹಲವು ಪ್ರಯತ್ನಗಳ ಫಲವೇ ಇಂದು ಹರಿಯಾಣದಲ್ಲಿ ಲಿಂಗ ಅನುಪಾತ ಸುಧಾರಿಸಿದೆ. ಇಂದು ಸುನೀಲ್ ಅವರ ಜೊತೆ ಹರಟೆ ಹೊಡೆಯೋಣ.
ಪ್ರಧಾನಮಂತ್ರಿ: ನಮಸ್ಕಾರ ಸುನೀಲ್ ಅವರೇ
ಸುನೀಲ್: ನಮಸ್ಕಾರ ಸರ್, ನಿಮ್ಮ ಧ್ವನಿ ಕೇಳಿ ನನ್ನ ಖುಷಿ ಇಮ್ಮಡಿಯಾಗಿದೆ ಸರ್.
ಪ್ರಧಾನಮಂತ್ರಿ: ಸುನೀಲ್ ಅವರೇ, 'ಸೆಲ್ಫಿ ವಿತ್ ಡಾಟರ್' ಎಲ್ಲರಿಗೂ ನೆನಪಿದೆ... ಈಗ ಮತ್ತೆ ಇದರ ಬಗ್ಗೆ ಚರ್ಚೆಯಾಗುತ್ತಿರುವಾಗ, ನಿಮಗೆ ಏನನಿಸುತ್ತದೆ?
ಸುನೀಲ್: ಪ್ರಧಾನಮಂತ್ರಿಯವರೆ, ವಾಸ್ತವವಾಗಿ, ನಮ್ಮ ರಾಜ್ಯ ಹರಿಯಾಣದಿಂದ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸವನ್ನು ತರಲು ಪ್ರಾರಂಭಿಸಿದ ನಾಲ್ಕನೇ ಪಾಣಿಪತ್ ಯುದ್ಧವನ್ನು ಇಡೀ ದೇಶವು ನಿಮ್ಮ ನಾಯಕತ್ವದಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಈ ವಿಷಯ ನನಗೆ ಮತ್ತು ಮಗಳನ್ನು ಪ್ರೀತಿಸುವ ಪ್ರತಿಯೊಬ್ಬ ತಂದೆಗೆ ಬಹಳ ಮಹತ್ವದ ವಿಷಯವಾಗಿದೆ.
ಪ್ರಧಾನಮಂತ್ರಿ: ಸುನೀಲ್ ಜೀ, ನಿಮ್ಮ ಮಗಳು ಈಗ ಹೇಗಿದ್ದಾಳೆ, ಈಗ ಏನು ಮಾಡುತ್ತಿದ್ದಾಳೆ?
ಸುನೀಲ್: ಹೌದು ಸರ್, ನನ್ನ ಹೆಣ್ಣುಮಕ್ಕಳು ನಂದನಿ ಮತ್ತು ಯಾಚಿಕಾ, ಒಬ್ಬಳು 7 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಒಬ್ಬಳು 4 ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ಅವಳು ನಿಮ್ಮ ದೊಡ್ಡ ಅಭಿಮಾನಿ. ಅವಳು ತನ್ನ ಸ್ನೇಹಿತರೊಂದಿಗೆ ನಿಮಗೆ ಥ್ಯಾಂಕ್ಯು ಪಿ ಎಂ ಎಂದು ಪತ್ರವನ್ನು ಸಿದ್ಧಪಡಿಸಿ ಕಳುಹಿಸಿದ್ದರು
ಪ್ರಧಾನಮಂತ್ರಿ: ವಾಹ್ ವಾಹ್! ಒಳ್ಳೆಯದು, ನೀವು ಮಕ್ಕಳಿಗೆ ನನ್ನ ಮತ್ತು ಮನದ ಮಾತಿನ ಕೇಳುಗರ ವತಿಯಿಂದ ಬಹಳಷ್ಟು ಆಶೀರ್ವಾದಗಳನ್ನು ತಿಳಿಸಿ
ಸುನೀಲ್: ತುಂಬಾ ಧನ್ಯವಾದಗಳು, ನಿಮ್ಮಿಂದಾಗಿ ದೇಶದ ಹೆಣ್ಣುಮಕ್ಕಳ ಮುಖದಲ್ಲಿ ನಗು ನಿರಂತರವಾಗಿ ನೆಲೆ ನಿಂತಿದೆ.
ಪ್ರಧಾನಮಂತ್ರಿ: ಅನಂತ ಧನ್ಯವಾದಗಳು ಸುನಿಲ್ ಅವರೇ.
ಸುನೀಲ್: ಧನ್ಯವಾದಗಳು ಸರ್
ಸ್ನೇಹಿತರೇ, 'ಮನದ ಮಾತಿನಲ್ಲಿ’ ನಾವು ದೇಶದ ಮಹಿಳಾ ಶಕ್ತಿಯ ನೂರಾರು ಸ್ಪೂರ್ತಿದಾಯಕ ಕಥೆಗಳನ್ನು ಉಲ್ಲೇಖಿಸಿದ್ದೇವೆ ಎಂಬುದು ನನಗೆ ತುಂಬಾ ತೃಪ್ತಿಯಾಗಿದೆ. ನಮ್ಮ ಸೈನ್ಯವೇ ಆಗಿರಲಿ, ಕ್ರೀಡಾ ಜಗತ್ತೇ ಇರಲಿ, ನಾನು ಮಹಿಳೆಯರ ಸಾಧನೆಯ ಬಗ್ಗೆ ಮಾತನಾಡಿದಾಗಲೆಲ್ಲ ಆ ಕುರಿತು ಸಾಕಷ್ಟು ಪ್ರಶಂಸೆ ಕೇಳಿ ಬಂದಿದೆ. ಛತ್ತೀಸ್ ಗಢದ ದೇವೂರ್ ಗ್ರಾಮದ ಮಹಿಳೆಯರ ಬಗ್ಗೆ ನಾವು ಚರ್ಚಿಸಿದ್ದೆವು. ಈ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮದ ಕೂಡು ರಸ್ತೆಗಳು, ರಸ್ತೆಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ಆರಂಬಿಸಿದ್ದರು. ಅದೇ ರೀತಿ, ಸಾವಿರಾರು ಪರಿಸರ ಸ್ನೇಹಿ ಟೆರಾಕೋಟಾ ಕಪ್ ಗಳನ್ನು ರಫ್ತು ಮಾಡಿದ ತಮಿಳುನಾಡಿನ ಬುಡಕಟ್ಟು ಮಹಿಳೆಯರಿಂದ ದೇಶವು ಸಾಕಷ್ಟು ಸ್ಫೂರ್ತಿ ಪಡೆದಿದೆ. ತಮಿಳುನಾಡಿನಲ್ಲಿಯೇ 20 ಸಾವಿರ ಮಹಿಳೆಯರು ಒಗ್ಗೂಡಿ ವೆಲ್ಲೂರಿನಲ್ಲಿ ನಾಗ್ ನದಿಯನ್ನು ಪುನರುಜ್ಜೀವನಗೊಳಿಸಿದ್ದರು. ನಮ್ಮ ಮಹಿಳಾ ಶಕ್ತಿಯ ನೇತೃತ್ವದಲ್ಲಿ ಇಂತಹ ಅನೇಕ ಅಭಿಯಾನಗಳು ನಡೆದಿವೆ ಮತ್ತು ಅವರ ಪ್ರಯತ್ನಗಳನ್ನು ಪ್ರಸ್ತಾಪಿಸಲು 'ಮನದ ಮಾತು' ವೇದಿಕೆಯಾಗಿದೆ.
ಸ್ನೇಹಿತರೇ, ಈಗ ನಮ್ಮೊಂದಿಗೆ ಫೋನ್ ಲೈನ್ ನಲ್ಲಿ ಮತ್ತೊಬ್ಬರು ಸಂಪರ್ಕದಲ್ಲಿದ್ದಾರೆ. ಅವನ ಹೆಸರು ಮಂಜೂರ್ ಅಹಮದ್. 'ಮನದ ಮಾತಿನಲ್ಲಿ' ಜಮ್ಮು ಮತ್ತು ಕಾಶ್ಮೀರದ ಪೆನ್ಸಿಲ್ ಸ್ಲೇಟ್ ಗಳ ಬಗ್ಗೆ ಪ್ರಸ್ತಾಪಿಸಿದಾಗ ಮಂಜೂರ್ ಅಹ್ಮದ್ ಅವರ ಬಗ್ಗೆಯೂ ಉಲ್ಲೇಖಿಸಲಾಗಿತ್ತು.
ಪ್ರಧಾನಮಂತ್ರಿ: ಮಂಜೂರ್ ಅವರೇ ಹೇಗಿದ್ದೀರಾ?
ಮಂಜೂರ್: ಧನ್ಯವಾದ ಸರ್, ತುಂಬಾ ಚೆನ್ನಾಗಿದ್ದೇನೆ
ಪ್ರಧಾನಮಂತ್ರಿ: ಮನದ ಮಾತಿನ 100 ನೇ ಕಂತಿನಲ್ಲಿ ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವೆನಿಸುತ್ತಿದೆ
ಮಂಜೂರ್: ಧನ್ಯವಾದ ಸರ್
ಪ್ರಧಾನಮಂತ್ರಿ: ಪೆನ್ಸಿಲ್ ಸ್ಲೇಟ್ ಕೆಲಸ ಹೇಗೆ ಸಾಗಿದೆ
ಮಂಜೂರ್: ತುಂಬಾ ಚೆನ್ನಾಗಿ ನಡೆದಿದೆ. ನೀವು ನಮ್ಮ ಬಗ್ಗೆ ಮನದ ಮಾತಿನಲ್ಲಿ ಪ್ರಸ್ತಾಪಿಸಿದ ನಂತರ ತುಂಬಾ ಕೆಲಸ ಹೆಚ್ಚಿದೆ. ಬಹಳಷ್ಟು ಜನರಿಗೆ ಈ ಕೆಲಸ ಉದ್ಯೋಗ ಒದಗಿಸಿದೆ.
ಪ್ರಧಾನಮಂತ್ರಿ: ಈಗ ಎಷ್ಟು ಜನರಿಗೆ ಉದ್ಯೋಗ ಲಭಿಸುತ್ತಿದೆ?
ಮಂಜೂರ್ : ಈಗ ನನ್ನ ಬಳಿ 200 ಕ್ಕೂ ಹೆಚ್ಚು ಜನರಿದ್ದಾರೆ...
ಪ್ರಧಾನಮಂತ್ರಿ: ಓಹ್! ತುಂಬಾ ಸಂತೋಷವಾಯಿತು
ಮಂಜೂರ್: ಹೌದು ಸರ್.....ಈಗ ಇದನ್ನು ಒಂದೆರಡು ತಿಂಗಳಲ್ಲಿ ವಿಸ್ತರಿಸುತ್ತಿದ್ದೇನೆ ಮತ್ತು 200 ಜನರಿಗೆ ಉದ್ಯೋಗಾವಕಾಶ ಹೆಚ್ಚಲಿದೆ ಸರ್.
ಪ್ರಧಾನಮಂತ್ರಿ: ವಾಹ್ ವಾಹ್! ಮಂಜೂರ್ ನೋಡಿ...
ಮಂಜೂರ್: ಹೇಳಿ ಸರ್
ಪ್ರಧಾನಮಂತ್ರಿ: ಆ ದಿನ ಇದನ್ನು ಯಾರೂ ಗುರುತಿಸುವುದಿಲ್ಲ, ಪರಿಗಣನೆ ಇಲ್ಲದ ಕೆಲಸ ಇದು ಎಂದು ನೀವು ನನಗೆ ಹೇಳಿದ್ದಿರಿ, ಅದು ನನಗೆ ಚೆನ್ನಾಗಿ ನೆನಪಿದೆ ಮತ್ತು ನಿಮಗೆ ಈ ಕುರಿತು ತುಂಬಾ ನೋವಿತ್ತು. ಇದರಿಂದ ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಈಗ ನಿಮ್ಮನ್ನು ಗುರುತಿಸಲಾಗಿದೆ ಮತ್ತು ನೀವು 200 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದೀರಿ.
ಮಂಜೂರ್: ಹೌದು ಸರ್, ಹೌದು ಸರ್ ..
ಪ್ರಧಾನಮಂತ್ರಿ: ನೀವು ಮತ್ತಷ್ಟು ಇದನ್ನು ವಿಸ್ತರಿಸಿ 200 ಜನರಿಗೆ ಉದ್ಯೋಗ ನೀಡುವ ಮೂಲಕ ಅತ್ಯಂತ ಸಂತೋಷದ ಸುದ್ದಿಯನ್ನು ನೀಡಿದ್ದೀರಿ.
ಮಂಜೂರ್: ಇಷ್ಟೇ ಅಲ್ಲ ಸರ್, ಇಲ್ಲಿಯ ರೈತರಿಗೂ ಇದರಿಂದ ಬಹಳ ಲಾಭವಾಗಿದೆ. ಹಿಂದೆ ರೂ. 2000 ಮೌಲ್ಯಕ್ಕೆ ಮರವನ್ನು ಮಾರಾಟ ಮಾಡುತ್ತಿದ್ದರು, ಈಗ ಅದೇ ಮರ ರೂ 5000 ಕ್ಕೆ ಮಾರಾಟವಾಗುತ್ತಿದೆ. ಅಂದಿನಿಂದ ತುಂಬಾ ಬೇಡಿಕೆ ಹೆಚ್ಚಿದೆ. ಹಾಗೂ ಇದು ತನ್ನದೇ ಛಾಪನ್ನೂ ಮೂಡಿಸಿದೆ, ಇದಕ್ಕೆ ನನ್ನ ಬಳಿ ಹಲವು ಆರ್ಡರ್ ಗಳಿವೆ, ಈಗ ನಾನು ಒಂದೆರಡು ತಿಂಗಳಲ್ಲಿ ಮತ್ತಷ್ಟು ವಿಸ್ತರಿಸಲಿದ್ದೇನೆ ಮತ್ತು ಎರಡು-ನಾಲ್ಕು ಹಳ್ಳಿಗಳ ಎರಡು ನೂರರಿಂದ – 250 ಜನರಿಗೆ ಇದರಲ್ಲಿ ಉದ್ಯೋಗ ನೀಡಲು ಪ್ರಯತ್ನಿಸುತ್ತೇನೆ. ಇದರಿಂದ ಯುವಕ ಯುವತಿಯರಿಗೆ ಜೀವನೋಪಾಯ ಮುಂದುವರಿಯಬಹುದು ಸರ್.
ಪ್ರಧಾನಮಂತ್ರಿ: ಮಂಜೂರ್ ಜೀ ನೋಡಿದಿರಾ, ಸ್ಥಳೀಯ ವಸ್ತುಗಳಿಗಾಗಿ ಧ್ವನಿ ಎತ್ತುವುದರ ಶಕ್ತಿ ಎಷ್ಟು ಅದ್ಭುತವಾಗಿದೆ, ನೀವು ಅದನ್ನು ನಿಮ್ಮ ತಾಯ್ನೆಲದಲ್ಲಿ ಸಾಧಿಸಿ ತೋರಿಸಿದ್ದೀರಿ.
ಮಂಜೂರ್: ಹೌದು ಸರ್
ಪ್ರಧಾನಮಂತ್ರಿ: ನಿಮಗೆ ಮತ್ತು ಗ್ರಾಮದ ಎಲ್ಲಾ ರೈತರಿಗೆ ಮತ್ತು ನಿಮ್ಮೊಂದಿಗೆ ಕೆಲಸ ಮಾಡುವ ಎಲ್ಲಾ ಸಹೋದ್ಯೋಗಿಗಳಿಗೆ ಅನಂತ ಅಭಿನಂದನೆಗಳು, ಧನ್ಯವಾದಗಳು ಸಹೋದರ.
ಮಂಜೂರ್: ಧನ್ಯವಾದಗಳು ಸರ್
ಸ್ನೇಹಿತರೇ, ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವನ್ನು ತಲುಪಿದ ಅನೇಕ ಪ್ರತಿಭಾವಂತರು ನಮ್ಮ ದೇಶದಲ್ಲಿದ್ದಾರೆ. ನನಗೆ ನೆನಪಿದೆ, ವಿಶಾಖಪಟ್ಟಣಂನ ವೆಂಕಟ್ ಮುರಳಿ ಪ್ರಸಾದ್ ಅವರು ಸ್ವಾವಲಂಬಿ ಭಾರತದ ಒಂದು ಚಾರ್ಟ್ ಅನ್ನು ಹಂಚಿಕೊಂಡಿದ್ದರು. ಅವರು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಉತ್ಪನ್ನಗಳನ್ನು ಮಾತ್ರ ಹೇಗೆ ಬಳಸುತ್ತಾರೆ ಎಂದು ಹೇಳಿದ್ದರು. ಬೆತಿಯಾದ ಪ್ರಮೋದ್ ಅವರು ಎಲ್ ಇ ಡಿ ಬಲ್ಬ್ ತಯಾರಿಸುವ ಸಣ್ಣ ಘಟಕವನ್ನು ಸ್ಥಾಪಿಸಿದಾಗ ಅಥವಾ ಗಡಮುಕ್ತೇಶ್ವರದ ಸಂತೋಷ್ ಅವರು ಮ್ಯಾಟ್ ತಯಾರಿಸುವ ಉದ್ಯೋಗ ಪ್ರಾರಂಭಿಸಿದಾಗ, ಅವರ ಉತ್ಪನ್ನಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಲು 'ಮನದ ಮಾತು' ಮಾಧ್ಯಮವಾಯಿತು. ನಾವು 'ಮನದ ಮಾತಿನಲ್ಲಿ' ಮೇಕ್ ಇನ್ ಇಂಡಿಯಾ ದಿಂದ ಸ್ಪೇಸ್ ಸ್ಟಾರ್ಟ್-ಅಪ್ ಗಳ ಅನೇಕ ಉದಾಹರಣೆಗಳನ್ನು ಚರ್ಚಿಸಿದ್ದೇವೆ.
ಸ್ನೇಹಿತರೇ, ಕೆಲವು ಸಂಚಿಕೆಗಳ ಹಿಂದೆ ನಾನು ಮಣಿಪುರದ ಸಹೋದರಿ ವಿಜಯಶಾಂತಿ ದೇವಿಯವರ ಬಗ್ಗೆಯೂ ಪ್ರಸ್ತಾಪಿಸಿದ್ದುದು ನಿಮಗೆ ನೆನಪಿರಬಹುದು. ವಿಜಯಶಾಂತಿ ಅವರು ಕಮಲದ ನಾರುಗಳಿಂದ ಬಟ್ಟೆಗಳನ್ನು ಸಿದ್ಧಪಡಿಸುತ್ತಾರೆ. ಅವರ ಈ ಅನನ್ಯ ಪರಿಸರ ಸ್ನೇಹಿ ಕಲ್ಪನೆಯನ್ನು 'ಮನದ ಮಾತಿನಲ್ಲಿ’ ಚರ್ಚಿಸಲಾಗಿತ್ತು ಮತ್ತು ಅವರ ಕೆಲಸವು ಹೆಚ್ಚು ಜನಪ್ರಿಯವಾಯಿತು. ಇಂದು ವಿಜಯಶಾಂತಿಯವರು ನಮ್ಮೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದಾರೆ.
ಪ್ರಧಾನಮಂತ್ರಿ:- ನಮಸ್ತೆ ವಿಜಯ ಶಾಂತಿಯವರೆ. ಹೇಗಿದ್ದೀರಿ?
ವಿಜಯಶಾಂತಿ:-ಸರ್, ನಾನು ಚೆನ್ನಾಗಿದ್ದೇನೆ.
ಪ್ರಧಾನಮಂತ್ರಿ:- ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ ?
ವಿಜಯಶಾಂತಿ:- ಸರ್, ಈಗಲೂ ನನ್ನ ತಂಡದ 30 ಮಹಿಳೆಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇನೆ
ಪ್ರಧಾನಮಂತ್ರಿ:- ಇಷ್ಟು ಕಡಿಮೆ ಅವಧಿಯಲ್ಲಿ ನೀವು 30 ಮಂದಿ ತಂಡದ ಗುರಿ ತಲುಪಿದ್ದೀರಿ!
ವಿಜಯಶಾಂತಿ:- ಹೌದು ಸರ್, ಈ ವರ್ಷ ಕೂಡಾ ನಾನಿರುವ ಪ್ರದೇಶದಲ್ಲಿ ಸುಮಾರು 100 ಮಹಿಳೆಯರನ್ನು ಒಳಗೊಳ್ಳುವಂತೆ ವಿಸ್ತರಿಸುವ ಯೋಜನೆ ಇದೆ.
ಪ್ರಧಾನಮಂತ್ರಿ:- ನಿಮ್ಮ ಗುರಿ 100 ಮಹಿಳೆಯರು
ವಿಜಯಶಾಂತಿ:- ಹೌದು ! 100 ಮಹಿಳೆಯರು
ಪ್ರಧಾನಮಂತ್ರಿ:- ಈಗ ಜನರು ತಾವರೆ ಕಾಂಡದ ನಾರಿನ ಕುರಿತು ಪರಿಚಿತರಾಗಿದ್ದಾರೆ
ವಿಜಯಶಾಂತಿ :- ಹೌದು ಸರ್, ಭಾರತದಾದ್ಯಂತ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರಿಗೂ ಈ ಮಾಹಿತಿ ಇದೆ.
ಪ್ರಧಾನಮಂತ್ರಿ:- ಹಾಗಾದರೆ ಈಗ ಇದು ಬಹಳ ಜನಪ್ರಿಯವಾಗಿದೆ
ವಿಜಯಶಾಂತಿ:- ಹೌದು ಸರ್, ಪ್ರಧಾನ ಮಂತ್ರಿಯವರ ಮನದ ಮಾತು ಕಾರ್ಯಕ್ರಮದಿಂದ ಪ್ರತಿಯೊಬ್ಬರೂ ತಾವರೆ ನಾರಿನ ಕುರಿತು ಅರಿತಿದ್ದಾರೆ
ಪ್ರಧಾನಮಂತ್ರಿ:- ಹಾಗಾದರೆ ನಿಮಗೆ ಈಗ ಮಾರುಕಟ್ಟೆಯೂ ದೊರೆತಿದೆ ಅಲ್ಲವೇ?
ವಿಜಯಶಾಂತಿ:- ಹೌದು, ನನಗೆ ಅಮೆರಿಕದಿಂದ ಮಾರುಕಟ್ಟೆ ಅವಕಾಶ ದೊರೆತಿದೆ, ಮತ್ತು ಅವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಬಯಸುತ್ತಾರೆ, ನಾನು ಈ ವರ್ಷದಿಂದ ಅಮೆರಿಕಾಗೆ ರಫ್ತು ಮಾಡಲು ಪ್ರಾರಂಭಿಸುವವಳಿದ್ದೇನೆ.
ಪ್ರಧಾನಮಂತ್ರಿ:- ಹಾಗಾದರೆ, ಈಗ ನೀವು ರಫ್ತುದಾರರು ?
ವಿಜಯಶಾಂತಿ:- ಹೌದು ಸರ್, ಈ ವರ್ಷದಿಂದ ನಾನು ಭಾರತದಲ್ಲಿ ತಾವರೆ ನಾರಿನಿಂದ ತಯಾರಿಸಿದ ನಮ್ಮ ಉತ್ಪನ್ನವನ್ನು ರಫ್ತು ಮಾಡುತ್ತೇನೆ.
ಪ್ರಧಾನಮಂತ್ರಿ:- ಸರಿ, ನಾನು ವೋಕಲ್ ಫಾರ್ ಲೋಕಲ್ ಎನ್ನುತ್ತಿದ್ದೆ ಈಗ ಲೋಕಲ್ ಫಾರ್ ಗ್ಲೋಬಲ್
ವಿಜಯಶಾಂತಿ:- ಹೌದು ಸರ್, ನನ್ನ ಉತ್ಪನ್ನಗಳು ವಿಶ್ವದ ಎಲ್ಲೆಡೆ ತಲುಪಬೇಕೆಂದು ನಾನು ಬಯಸುತ್ತೇನೆ.
ಪ್ರಧಾನಮಂತ್ರಿ:- ಅಭಿನಂದನೆಗಳು ಮತ್ತು ನಿಮಗೆ ಶುಭವಾಗಲಿ
ವಿಜಯಶಾಂತಿ:- ಧನ್ಯವಾದ ಸರ್
ಪ್ರಧಾನಮಂತ್ರಿ:- ಧನ್ಯವಾದ. ಧನ್ಯವಾದ ವಿಜಯಶಾಂತಿ
ವಿಜಯಶಾಂತಿ:- ಧನ್ಯವಾದ ಸರ್
ಸ್ನೇಹಿತರೇ, ಮನದ ಮಾತಿನ ಮತ್ತೊಂದು ವಿಶೇಷತೆಯಿದೆ. ‘ಮನದ ಮಾತಿನ’ ಮೂಲಕ ಎಷ್ಟೊಂದು ಜನಾಂದೋಲನಗಳು ಜನ್ಮತಾಳಿವೆ ಮತ್ತು ವೇಗವನ್ನೂ ಪಡೆದುಕೊಂಡಿವೆ. ನಮ್ಮ ಆಟಿಕೆಗಳು, ನಮ್ಮ ಆಟಿಕೆ ಉದ್ಯಮವನ್ನು ಮರುಸ್ಥಾಪಿಸುವ ಯೋಜನೆ ಕೂಡಾ ಮನದ ಮಾತಿನಿಂದಲೇ ಆರಂಭವಾಯಿತು. ನಮ್ಮ ಭಾರತೀಯ ತಳಿಯಾದ ದೇಶೀಯ ನಾಯಿಗಳ ಕುರಿತಂತೆ ಅರಿವು ಮೂಡಿಸುವ ಆರಂಭ ಕೂಡಾ ಮನದ ಮಾತಿನಿಂದಲೇ ಆಯಿತಲ್ಲವೇ. ನಾವು ಬಡ ಸಣ್ಣ ಪುಟ್ಟ ಅಂಗಡಿಯವರೊಂದಿಗೆ ಚೌಕಾಸಿ ಮಾಡುವುದಿಲ್ಲ, ಅವರೊಂದಿಗೆ ಜಗಳವಾಡುವುದಿಲ್ಲ ಎಂಬ ಮತ್ತೊಂದು ಅಭಿಯಾನವನ್ನು ಕೂಡಾ ನಾವು ಆರಂಭಿಸಿದೆವು. ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನ ಆರಂಭಿಸಿದಾಗ, ದೇಶವಾಸಿಗಳು ಈ ಸಂಕಲ್ಪದೊಂದಿಗೆ ತಮ್ಮನ್ನು ತಾವು ಸೇರಿಕೊಳ್ಳುವ ವಿಷಯದಲ್ಲಿ ‘ಮನದ ಮಾತು’ ಬಹು ದೊಡ್ಡ ಪಾತ್ರ ವಹಿಸಿತು. ಹೀಗೆ ಪ್ರತಿಯೊಂದು ಉದಾಹರಣೆಯೂ ಸಮಾಜದ ಬದಲಾವಣೆ ತರಲು ಕಾರಣವಾಗಿದೆ. ಪ್ರದೀಪ್ ಸಾಂಗ್ವಾನ್ ಅವರು ಕೂಡಾ ಸಮಾಜಕ್ಕೆ ಪ್ರೇರಣೆಯಾಗುವಂತಹ ಕಾರ್ಯವನ್ನು ಕೈಗೊಂಡಿದ್ದಾರೆ. ‘ಮನದ ಮಾತಿನಲ್ಲಿ’ ನಾವು ಪ್ರದೀಪ್ ಸಾಂಗವಾನ್ ಅವರ ‘ಹೀಲಿಂಗ್ ಹಿಮಾಲಯಾಜ್’ ಅಭಿಯಾನ ಕುರಿತು ಮಾತನಾಡಿದ್ದೆವವು. ಅವರು ನಮ್ಮೊಂದಿಗೆ ದೂರವಾಣಿ ಸಂಭಾಷಣೆಯಲ್ಲಿದ್ದಾರೆ.
ಮೋದಿ – ಪ್ರದೀಪ್ ಅವರೆ ನಮಸ್ಕಾರ !
ಪ್ರದೀಪ್ – ಸರ್ ಜೈ ಹಿಂದ್.
ಮೋದಿ – ಜೈ ಹಿಂದ್. ಜೈ ಹಿಂದ್ ಸೋದರಾ. ನೀವು ಹೇಗಿದ್ದೀರಿ?
ಪ್ರದೀಪ್ – ಸರ್ ಚೆನ್ನಾಗಿದ್ದೇನೆ. ನಿಮ್ಮ ಧ್ವನಿ ಕೇಳಿ ಮತ್ತಷ್ಟು ಸಂತೋಷವಾಗುತ್ತಿದೆ.
ಮೋದಿ – ನೀವು ಹಿಮಾಲಯದ ಸ್ವಾಸ್ಥ್ಯ ಕುರಿತು ಆಲೋಚಿಸಿದಿರಿ.
ಪ್ರದೀಪ್ – ಹೌದು ಸರ್.
ಮೋದಿ – ಅಭಿಯಾನವನ್ನೂ ಕೈಗೊಂಡಿದ್ದೀರಿ. ಈಗ ನಿಮ್ಮ ಅಭಿಯಾನ ಹೇಗೆ ನಡೆಯುತ್ತಿದೆ?
ಪ್ರದೀಪ್ – ಬಹಳ ಚೆನ್ನಾಗಿ ನಡೆಯುತ್ತಿದೆ ಸರ್. ನಂಬಿ ಸರ್, ನಾವು ಯಾವ ಕೆಲಸವನ್ನು ಐದು ವರ್ಷಗಳಲ್ಲಿ ಮಾಡುತ್ತಿದ್ದೆವೋ ಅದೇ ಕೆಲಸ 2020 ರ ನಂತರ ಈಗ ಒಂದು ವರ್ಷದಲ್ಲೇ ಆಗಿಬಿಡುತ್ತಿದೆ.
ಮೋದಿ – ಅರೆ ವಾಹ್ !
ಪ್ರದೀಪ್ – ಹೌದು ಹೌದು ಸರ್. ಆರಂಭದಲ್ಲಿ ಬಹಳ ಆತಂಕವಾಗಿತ್ತು. ಜೀವನದಲ್ಲಿ ಇದನ್ನು ಮಾಡಲು ಸಾಧ್ಯವಾಗುತ್ತದೋ ಅಥವಾ ಇಲ್ಲವೋ ಎಂಬ ಹೆದರಿಕೆ ಬಹಳವಿತ್ತು ಆದರೆ ಸ್ವಲ್ಪ ಬೆಂಬಲ ದೊರೆತಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ, 2020 ರವರೆಗೆ ನಾವು ಬಹಳ ಕಷ್ಟ ಪಟ್ಟಿದ್ದೇವೆ. ಬಹಳ ಕಡಿಮೆ ಜನರು ನಮ್ಮೊಡನೆ ಕೈಜೋಡಿಸಿದ್ದರು ಮತ್ತು ಬೆಂಬಲ ನೀಡದೇ ಇದ್ದಂತಹ ಜನರು ಕೂಡಾ ಬಹಳಷ್ಟಿದ್ದರು. ನಮ್ಮ ಪ್ರಚಾರಕ್ಕೆ ಹೆಚ್ಚು ಗಮನ ಕೂಡಾ ನೀಡುತ್ತಿರಲಿಲ್ಲ. ಆದರೆ 2020 ರಲ್ಲಿ ಮನದ ಮಾತಿನಲ್ಲಿ ವಿಷಯ ಪ್ರಸ್ತಾಪವಾದ ನಂತರ, ಬಹಳಷ್ಟು ಬದಲಾವಣೆಗಳಾದವು. ಅಂದರೆ ಮೊದಲು ನಾವು ವರ್ಷವೊಂದರಲ್ಲಿ 6-7 ಸ್ವಚ್ಛತಾ ಅಭಿಯಾನ ಕೈಗೊಳ್ಳುತ್ತಿದ್ದೆವು, 10 ಸ್ವಚ್ಛತಾ ಅಭಿಯಾನ ಮಾಡುತ್ತಿದ್ದೆವು. ಇಂದು ನಾವು ದಿನಂಪ್ರತಿ ಬೇರೆ ಬೇರೆ ಪ್ರದೇಶಗಳಿಂದ ಐದು ಟನ್ ತ್ಯಾಜ್ಯ ಸಂಗ್ರಹಿಸುತ್ತಿದ್ದೇವೆ.
ಮೋದಿ – ಅರೆ ವಾಹ್!
ಪ್ರದೀಪ್ – ನಾನು ಒಂದು ಸಮಯದಲ್ಲಿ ಹೆಚ್ಚುಕಡಿಮೆ ಇದನ್ನು ಬಿಟ್ಟುಬಿಡುವ ಹಂತ ತಲುಪಿದ್ದೆ , ಮನದ ಮಾತಿನಲ್ಲಿ ಈ ಕುರಿತು ಪ್ರಸ್ತಾಪವಾದ ನಂತರ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು. ನಂತರ ನಾವು ಯೋಚಿಸದೇ ಇದ್ದ ವಿಷಯಗಳೂ ಅಪಾರ ವೇಗ ಪಡೆದುಕೊಂಡವು. ನಮ್ಮಂತಹ ಜನರನ್ನು ನೀವು ಹೇಗೆ ಪತ್ತೆ ಮಾಡುತ್ತೀರಿ? ಎಂದು ತಿಳಿಯದು ಆದರೆ ಸರ್ ನಾನು ಬಹಳ ಕೃತಜ್ಞನಾಗಿದ್ದೇನೆ. ಇಷ್ಟು ದೂರದ ಪ್ರದೇಶದಲ್ಲಿ ಯಾರು ಕೆಲಸ ಮಾಡುತ್ತಾರೆ, ಹಿಮಾಲಯ ಹೋಗಿ ಅಲ್ಲೇ ಇದ್ದು ನಾವು ಕೆಲಸ ಮಾಡುತ್ತಿದ್ದೇವೆ. ಇಷ್ಟು ಎತ್ತರದ ಪ್ರದೇಶದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅಲ್ಲಿ ನೀವು ನಮ್ಮನ್ನು ಹುಡುಕಿದ್ದೀರಿ. ನಮ್ಮ ಕೆಲಸವನ್ನು ಪ್ರಪಂಚದ ಎದುರು ತಂದಿರಿ. ನಾನು ನಮ್ಮ ದೇಶದ ಪ್ರಥಮ ಸೇವಕ ಎಂದು ಕರೆದುಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದೇನೆ. ಅಂದು ಮತ್ತು ಇಂದು ಕೂಡಾ ನನಗೆ ಇದು ಬಹಳ ಭಾವನಾತ್ಮಕ ಕ್ಷಣವಾಗಿದೆ ಸರ್. ನನ್ನ ಪಾಲಿಗೆ ಇದಕ್ಕಿಂತ ಹೆಚ್ಚಿನ ಸೌಭಾಗ್ಯದ ವಿಷಯ ಬೇರೊಂದಿಲ್ಲ.
ಮೋದಿ – ಪ್ರದೀಪ್ ಅವರೆ! ನೀವು ಹಿಮಾಲಯದ ಶಿಖರಗಳಲ್ಲಿ ನಿಜವಾದ ಅರ್ಥದಲ್ಲಿ ಸಾಧನೆ ಮಾಡುತ್ತಿರುವಿರಿ ಮತ್ತು ಈಗ ನಿಮ್ಮ ಹೆಸರು ಕೇಳುತ್ತಲೇ ಜನರಿಗೆ ನೀವು ಪರ್ವತಗಳ ಸ್ವಚ್ಛತಾ ಅಭಿಯಾನದಲ್ಲಿ ಹೇಗೆ ತೊಡಗಿಕೊಂಡಿದ್ದೀರಿ ಎನ್ನುವುದು ನೆನಪಿಗೆ ಬರುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ.
ಪ್ರದೀಪ್ – ಹೌದು ಸರ್.
ಮೋದಿ – ನೀವು ಹೇಳಿದ ಹಾಗೆ ಈಗ ತಂಡ ದೊಡ್ಡದಾಗುತ್ತಾ ಬರುತ್ತಿದೆ ಮತ್ತು ನೀವು ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿದಿನ ಕೆಲಸ ಮಾಡುತ್ತಿರುವಿರಿ.
ಪ್ರದೀಪ್ – ಹೌದು ಸರ್
ಮೋದಿ – ನನಗೆ ಪೂರ್ಣ ವಿಶ್ವಾಸವಿದೆ, ನಿಮ್ಮ ಇಂತಹ ಪ್ರಯತ್ನಗಳಿಂದ, ಅದರ ಕುರಿತ ಮಾತುಕತೆಯಿಂದ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪರ್ವತಾರೋಹಿಗಳೆಲ್ಲಾ ಫೋಟೋ ಪೋಸ್ಟ್ ಮಾಡಲಾರಂಭಿಸಿದ್ದಾರೆ.
ಪ್ರದೀಪ್ – ಹೌದು ಸರ್. ನಿಜ.
ಮೋದಿ – ಇದು ಬಹಳ ಒಳ್ಳೆಯ ವಿಚಾರ, ನಿಮ್ಮಂತಹ ಸ್ನೇಹಿತರ ಪ್ರಯತ್ನಗಳ ಕಾರಣದಿಂದಾಗಿ ತ್ಯಾಜ್ಯ ಕೂಡಾ ಸಂಪತ್ತು, (ಕಸದಿಂದ ರಸ) ಎಂಬುದು ಜನರ ಮನಸ್ಸಿನಲ್ಲಿ ಈಗ ಸ್ಥಿರವಾಗಿದೆ. ಹಾಗೆಯೇ ಪರಿಸರದ ರಕ್ಷಣೆಯೂ ಆಗುತ್ತಿದೆ ಮತ್ತು ನಮ್ಮ ಹೆಮ್ಮೆಯೆನಿಸಿರುವ ಹಿಮಾಲಯದ ಸ್ವಾಸ್ಥ್ಯ ಸಂರಕ್ಷಣೆಗೆ, ನಿರ್ವಹಣೆಗೆ ನಾಗರಿಕರು ಕೂಡಾ ಕೈಜೋಡಿಸುತ್ತಿದ್ದಾರೆ. ಪ್ರದೀಪ್ ಅವರೆ ನನಗೆ ಬಹಳ ಸಂತೋಷವೆನಿಸುತ್ತಿದೆ. ಅನೇಕಾನೇಕ ಧನ್ಯವಾದ ಸೋದರಾ.
ಪ್ರದೀಪ್ – ಧನ್ಯವಾದ ಸರ್. ಬಹಳ ಧನ್ಯವಾದ. ಜೈಹಿಂದ್.
ಸ್ನೇಹಿತರೆ, ಇಂದು ದೇಶದಲ್ಲಿ ಪ್ರವಾಸೋದ್ಯಮ ಬಹಳ ವೇಗವಾಗಿ ಅಭಿವೃದ್ಧಿಹೊಂದುತ್ತಿದೆ. ನಮ್ಮ ದೇಶಧ ಈ ಪ್ರಾಕೃತಿಕ ಸಂಪನ್ಮೂಲವಿರಲಿ, ನದಿಗಳಿರಲಿ, ಬೆಟ್ಟಗಳಿರಲಿ, ಕೆರೆ ಸರೋವರಗಳಿರಲಿ, ಅಂತೆಯೇ ನಮ್ಮ ಪುಣ್ಯ ಕ್ಷೇತ್ರಗಳಿರಲಿ, ಅವುಗಳನ್ನು ಸ್ವಚ್ಛವಾಗಿರಿಸುವುದು ಅತ್ಯಗತ್ಯವಾಗಿದೆ. ಇದು ಪ್ರವಾಸೋದ್ಯಮಕ್ಕೆ ಬಹಳ ನೆರವಾಗುತ್ತದೆ. ಪ್ರವಾಸೋದ್ಯದಲ್ಲಿ ಸ್ವಚ್ಛತೆಯೊಂದಿಗೆ ನಾವು Incredible India movement ಬಗ್ಗೆ ಕೂಡಾ ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ. ಈ ಆಂದೋಲನದಿಂದ ಜನರಿಗೆ ತಮ್ಮ ಸುತ್ತ ಮುತ್ತಲು ಇರುವಂತಹ ಅನೇಕ ಸ್ಧಳಗಳ ಬಗ್ಗೆ ಮೊದಲ ಬಾರಿಗೆ ತಿಳಿದು ಬಂದಿತು. ನಾವು ವಿದೇಶ ಪ್ರವಾಸ ಮಾಡುವುದಕ್ಕೆ ಮೊದಲು ನಮ್ಮ ದೇಶದಲ್ಲೇ ಇರುವಂತಹ ಪ್ರವಾಸಿ ತಾಣಗಳ ಪೈಕಿ ಕನಿಷ್ಠ 15 ತಾಣಗಳಿಗೆ ಖಂಡಿತವಾಗಿಯೂ ಹೋಗಬೇಕೆಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಪ್ರವಾಸಿ ತಾಣಗಳು ನೀವು ವಾಸ ಮಾಡುತ್ತಿರುವ ರಾಜ್ಯದಲ್ಲೇ ಇರಬೇಕೆಂದಿಲ್ಲ, ನಿಮ್ಮ ರಾಜ್ಯದ ಹೊರಗೆ ಇರುವ ಬೇರೊಂದು ರಾಜ್ಯದಲ್ಲಿರಬೇಕು. ಅಂತೆಯೇ ನಾವು ಸ್ವಚ್ಛ ಸಿಯಾಚಿನ್, ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಇ-ತ್ಯಾಜ್ಯದಂತಹ ಗಂಭೀರ ವಿಷಯಗಳ ಬಗ್ಗೆ ಕೂಡಾ ಸತತವಾಗಿ ಮಾತನಾಡಿದ್ದೇವೆ. ಇಂದು ಇಡೀ ವಿಶ್ವ ಪರಿಸರಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಸಮಸ್ಯೆ ಎದುರಿಸುತ್ತಿರುವಾಗ, ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಮನದ ಮಾತಿನ ಈ ಪ್ರಯತ್ನ ಬಹಳ ಮುಖ್ಯವಾಗಿದೆ.
ಸ್ನೇಹಿತರೇ, ‘ಮನದ ಮಾತಿಗೆ’ ಸಂಬಂಧಿಸಿದಂತೆ ನನಗೆ ಈ ಬಾರಿ ಮತ್ತೊಂದು ಮತ್ತು ವಿಶೇಷ ಸಂದೇಶವೊಂದು UNESCO ದ DG ಆದ್ರೇ ಅಜುಲೇ (Audrey Azoulay) ಅವರಿಂದ ಬಂದಿದೆ. ಅವರು ಎಲ್ಲಾ ದೇಶವಾಸಿಗಳಿಗೆ ನೂರು ಸಂಚಿಕೆಗಳ ಈ ಅದ್ಭುತ ಪಯಣಕ್ಕೆ ಶುಭ ಹಾರೈಸಿದ್ದಾರೆ. ಅದರೊಂದಿಗೆ, ಅವರು ಕೆಲವು ಪ್ರಶ್ನೆಗಳನ್ನು ಕೂಡಾ ಕೇಳಿದ್ದಾರೆ. ಬನ್ನಿ ಮೊದಲು UNESCO ದ DG ಯವರ ಮನದ ಮಾತುಗಳನ್ನು ಆಲಿಸೋಣ.
#ಆಡಿಯೋ (UNESCO DG)#
ಡಿಜಿ ಯುನೆಸ್ಕೊ: ನಮಸ್ತೆ ಗೌರವಾನ್ವಿತ, ಆತ್ಮೀಯ ಪ್ರಧಾನಿಯವರೆ, ಮನದ ಮಾತು ರೇಡಿಯೋ ಪ್ರಸಾರದ 100 ನೇ ಸಂಚಿಕೆಯ ಭಾಗವಾಗುವ ಈ ಅವಕಾಶಕ್ಕಾಗಿ ಯುನೆಸ್ಕೋ ಪರವಾಗಿ ನಿಮಗೆ ಧನ್ಯವಾದ ಹೇಳುತ್ತಿದ್ದೇನೆ. ಯುನೆಸ್ಕೊ ಮತ್ತು ಭಾರತ ಎರಡೂ ದೀರ್ಘಕಾಲೀನ ಸಮಾನ ಇತಿಹಾಸ ಹೊಂದಿವೆ. ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಮತ್ತು ಮಾಹಿತಿ ಈ ಎಲ್ಲಾ ವಲಯಗಳಲ್ಲಿ ನಾವು ಒಟ್ಟಾಗಿ ಬಲವಾದ ಪಾಲುದಾರಿಕೆ ಹೊಂದಿದ್ದೇವೆ. ಶಿಕ್ಷಣದ ಪ್ರಾಮುಖ್ಯತೆ ಕುರಿತು ಮಾತನಾಡುವುದಕ್ಕೆ ನಾನು ಇಂದಿನ ಈ ಅವಕಾಶ ಬಳಸಿಕೊಳ್ಳುತ್ತೇನೆ. 2030 ರ ವೇಳೆಗೆ ವಿಶ್ವದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಯುನೆಸ್ಕೊ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾಗಿರುವ ನೀವು, ಈ ಉದ್ದೇಶ ಸಾಧನೆಗೆ ಭಾರತದ ಮಾರ್ಗಗಳನ್ನು ದಯವಿಟ್ಟು ವಿವರಿಸುವಿರಾ. ಸಂಸ್ಕೃತಿಗಳನ್ನು ಬೆಂಬಲಿಸಲು ಮತ್ತು ಪರಂಪರೆಯನ್ನು ರಕ್ಷಿಸಲು ಯುನೆಸ್ಕೋ ಕೂಡಾ ಕೆಲಸ ಮಾಡುತ್ತದೆ ಮತ್ತು ಭಾರತ ಈ ವರ್ಷ ಜಿ20 ಅಧ್ಯಕ್ಷತೆ ವಹಿಸಿದೆ. ಈ ಸಮಾರಂಭದಲ್ಲಿ ಭಾಗವಹಿಸಲು ಜಾಗತಿಕ ಮುಖಂಡರು ನವದೆಹಲಿಗೆ ಆಗಮಿಸಲಿದ್ದಾರೆ. ಮಾನ್ಯರೇ, ಅಂತಾರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಸಂಸ್ಕೃತಿ ಮತ್ತು ಶಿಕ್ಷಣವನ್ನು ಭಾರತ ಅಗ್ರಸ್ಥಾನದಲ್ಲಿ ಯಾವರೀತಿ ಇರಿಸಲು ಬಯಸುತ್ತದೆ? ಈ ಅವಕಾಶಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ ಮತ್ತು ಭಾರತೀಯರಿಗೆ ನಿಮ್ಮ ಮೂಲಕ ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ಶೀಘ್ರದಲ್ಲೇ ಭೇಟಿಯಾಗೋಣ. ಧನ್ಯವಾದ.
ಪ್ರಧಾನಿ ಮೋದಿ: ಧನ್ಯವಾದ ಮಾನ್ಯರೇ. ಮನದ ಮಾತು ಕಾರ್ಯಕ್ರಮದ 100 ನೇ ಸಂಚಿಕೆಯಲ್ಲಿ ನಿಮ್ಮೊಂದಿಗೆ ಸಂವಾದ ನಡೆಸಿದ್ದು ನನಗೆ ಬಹಳ ಸಂತೋಷವೆನಿಸಿದೆ. ಶಿಕ್ಷಣ ಮತ್ತು ಸಂಸ್ಕೃತಿಯ ಪ್ರಮುಖ ವಿಷಯಗಳ ಕುರಿತು ನೀವು ಮಾತನಾಡಿದ್ದು ನನಗೆ ಕೂಡಾ ಸಂತಸವೆನಿಸಿದೆ.
ಸ್ನೇಹಿತರೆ, UNESCO ದ DG ಯವರು, Education ಮತ್ತು Cultural Preservation, ಅಂದರೆ ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯ ಕುರಿತಂತೆ ಭಾರತದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾರೆ. ಇವೆರಡೂ ವಿಷಯಗಳು ಮನದ ಮಾತಿನ ಅತ್ಯಂತ ನೆಚ್ಚಿನ ವಿಷಯಗಳೆನಿಸಿವೆ.
ಶಿಕ್ಷಣ ಕುರಿತ ಮಾತಾಗಿರಲಿ, ಅಥವಾ ಸಂಸ್ಕೃತಿ ಕುರಿತಾಗಿರಲಿ, ಅವುಗಳ ಸಂರಕ್ಷಣೆಯಾಗಿರಲಿ ಅಥವಾ ಪ್ರಗತಿಯಾಗಿರಲಿ, ಇದು ಭಾರತದ ಪ್ರಾಚೀನ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಇಂದು ನಡೆಯುತ್ತಿರುವ ಕೆಲಸ ಕಾರ್ಯಗಳು ನಿಜಕ್ಕೂ ಬಹಳ ಪ್ರಶಂಸನೀಯವಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ, ಅಥವಾ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಆಯ್ಕೆ, ಶಿಕ್ಷಣದಲ್ಲಿ ತಂತ್ರಜ್ಞಾನದ ಏಕೀಕರಣ, ನಿಮಗೆ ಇಂತಹ ಅನೇಕ ಪ್ರಯತ್ನಗಳು ಕಂಡುಬರುತ್ತವೆ. ಬಹಳ ವರ್ಷಗಳ ಹಿಂದೆ ಗುಜರಾತ್ ನಲ್ಲಿ ಉತ್ತಮ ಶಿಕ್ಷಣ ನೀಡುವ ಮತ್ತು ಅರ್ಧದಲ್ಲೇ ಶಿಕ್ಷಣ ನಿಲ್ಲಿಸಿಬಿಡುವವರ ಪ್ರಮಾಣ ಕಡಿಮೆ ಮಾಡುವುದಕ್ಕಾಗಿ, ‘ಗುಣೋತ್ಸವ ಮತ್ತು ಶಾಲಾ ಪ್ರವೇಶೋತ್ಸವ’ ದಂತಹ ಕಾರ್ಯಕ್ರಮ ಜನರ ಪಾಲುದಾರಿಕೆಯಿಂದಾಗಿ ಒಂದು ಅದ್ಭುತ ಉದಾಹರಣೆಯಾಯಿತು. ನಿಸ್ವಾರ್ಥ ಮನೋಭಾವದಿಂದ ಶಿಕ್ಷಣಕ್ಕಾಗಿ ಕೆಲಸ ಮಾಡುವ ಇಂತಹ ಅದೆಷ್ಟೋ ಜನರ ಪ್ರಯತ್ನಗಳನ್ನು ನಾವು ‘ಮನದ ಮಾತು’ ಕಾರ್ಯಕ್ರಮದಲ್ಲಿ Highlight ಮಾಡಿದ್ದೇವೆ. ನಿಮಗೆ ನೆನಪಿರಬಹುದು, ಒಡಿಶಾದಲ್ಲಿ ತಳ್ಳುವ ಗಾಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದ ದಿವಂಗತ ಡಿ. ಪ್ರಕಾಶ್ ರಾವ್ ಅವರ ಬಗ್ಗೆ ಮಾತನಾಡಿದ್ದೆವು. ಇವರು ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದರು. ಜಾರ್ಖಂಡ್ ನಲ್ಲಿ ಹಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ನಡೆಸುವ ಸಂಜಯ್ ಕಶ್ಯಪ್ ಇರಬಹುದು, ಕೋವಿಡ್ ಸಮಯದಲ್ಲಿ ಇ-ಲರ್ನಿಂಗ್ ಮುಖಾಂತರ ಹಲವಾರು ಮಕ್ಕಳಿಗೆ ನೆರವಾದಂತಹ ಹೇಮಲತಾ ಎನ್ ಕೆ ಇರಬಹುದು, ಇಂತಹ ಅನೇಕ ಶಿಕ್ಷಕರ ಉದಾಹರಣೆಗಳನ್ನು ನಾವು ‘ಮನದ ಮಾತಿನಲ್ಲಿ’ ನೀಡಿದ್ದೇವೆ. ನಾವು ಸಾಂಸ್ಕೃತಿಕ ರಕ್ಷಣೆಯ ಪ್ರಯತ್ನಗಳ ಬಗ್ಗೆ ಕೂಡಾ ಮನದ ಮಾತಿನಲ್ಲಿ ಸಾಕಷ್ಟು ಬಾರಿ ಮಾತನಾಡಿದ್ದೇವೆ.
ಲಕ್ಷದ್ವೀಪದ Kummel Brothers Challengers Club ಇರಬಹುದು, ಅಥವಾ ಕರ್ನಾಟಕದ ಕ್ವೇಮ್ ಶ್ರೀ ಅವರ ಕಲಾಚೇತನದಂತಹ ವೇದಿಕೆಯಿರಬಹುದು, ದೇಶದ ಮೂಲೆ ಮೂಲೆಗಳಿಂದ ಜನರು ನನಗೆ ಪತ್ರ ಬರೆದು ಹಲವು ಉದಾಹರಣೆಗಳನ್ನು ಕಳುಹಿಸಿಕೊಡುತ್ತಾರೆ. ದೇಶ ಭಕ್ತಿ ಕುರಿತ ಹಾಡು, ಜೋಗುಳ ಮತ್ತು ರಂಗೋಲಿ ಸ್ಪರ್ಧೆ ಈ ಮೂರು ಸ್ಪರ್ಧೆಗಳ ಕುರಿತು ಕೂಡಾ ನಾವು ಮಾತನಾಡಿದ್ದೆವು. ನಿಮಗೆ ನೆನಪಿರಬಹುದು ಒಂದು ಬಾರಿ ನಾವು ದೇಶಾದ್ಯಂತ ಕತೆ ಹೇಳುವವರಿಂದ ಕಥೆ ಹೇಳುತ್ತಾ ಶಿಕ್ಷಣ ನೀಡುವಂತಹ ಭಾರತೀಯ ವಿಧಾನಗಳ ಬಗ್ಗೆ ಕೂಡಾ ಮಾತನಾಡಿದ್ದೆವು. ಸಾಮೂಹಿಕ ಪ್ರಯತ್ನದಿಂದ ದೊಡ್ಡ ದೊಡ್ಡ ಬದಲಾವಣೆಗಳನ್ನು ತರಬಹುದು ಎನ್ನುವುದು ನನ್ನ ಅಚಲ ನಂಬಿಕೆಯಾಗಿದೆ. ಈ ವರ್ಷ ನಾವು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಮುಂದೆ ಸಾಗುತ್ತಿದ್ದೇವೆ, ಜಿ 20 ಅಧ್ಯಕ್ಷತೆಯನ್ನೂ ವಹಿಸುತ್ತಿದ್ದೇವೆ. ಶಿಕ್ಷಣದೊಂದಿಗೆ ವೈವಿಧ್ಯಮಯ ಜಾಗತಿಕ ಸಂಸ್ಕೃತಿಗಳನ್ನು ಸಮೃದ್ಧಿಗೊಳಿಸುವ ನಮ್ಮ ಸಂಕಲ್ಪ ಮತ್ತಷ್ಟು ಬಲಿಷ್ಠಗೊಳ್ಳಲು ಇದು ಕೂಡಾ ಒಂದು ಕಾರಣವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳಲ್ಲಿ ಒಂದು ಮಂತ್ರ ಶತಮಾನಗಳಿಂದ ನಮ್ಮ ಮನಸ್ಸಿಗೆ ಪ್ರೇರಣೆ ನೀಡುತ್ತಾ ಬಂದಿದೆ.
ಚರೈವೇತಿ ಚರೈವೇತಿ ಚರೈವೇತಿ
ಚಲತೇ ರಹೋ – ಚಲತೇ ರಹೋ – ಚಲತೇ ರಹೋ
(चरैवेति चरैवेति चरैवेति |
चलते रहो-चलते रहो-चलते रहो |)
ನಾವು ಇಂದು ಇದೇ ಮುಂದೆ ಸಾಗಿ ಮುಂದೆ ಸಾಗಿ ಎನ್ನುವ ಭಾವನೆಯೊಂದಿಗೆ ಮನದ ಮಾತಿನ 100 ನೇ ಸಂಚಿಕೆ ಪೂರ್ಣಗೊಳಿಸುತ್ತಿದ್ದೇವೆ. ಭಾರತದ ಸಾಮಾಜಿಕ ರಚನೆಯನ್ನು ಬಲಿಷ್ಠಗೊಳಿಸುವಲ್ಲಿ, ಮನದ ಮಾತು ಯಾವುದೇ ಹಾರದ ದಾರ ಮಣಿಗಳನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ, ಪ್ರತಿಯೊಬ್ಬರನ್ನೂ ಒಂದುಗೂಡಿಸುತ್ತದೆ. ಪ್ರತಿಯೊಂದು ಸಂಚಿಕೆಯಲ್ಲಿ ದೇಶವಾಸಿಗಳ ಸೇವೆ ಮತ್ತು ಸಾಮರ್ಥ್ಯ ಇತರರಿಗೆ ಸ್ಫೂರ್ತಿಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರತಿ ದೇಶವಾಸಿ ಮತ್ತೊಬ್ಬ ದೇಶವಾಸಿಗೆ ಪ್ರೇರಣೆಯಾಗುತ್ತಾರೆ. ಒಂದು ರೀತಿಯಲ್ಲಿ ಮನದ ಮಾತಿನ ಪ್ರತಿ ಸಂಚಿಕೆಯೂ ಮುಂದಿನ ಸಂಚಿಕೆಗೆ ಭದ್ರ ಬುನಾದಿ ಸಿದ್ಧಪಡಿಸುತ್ತದೆ. ‘ಮನದ ಮಾತು’ ಯಾವಾಗಲೂ ಸದ್ಭಾವನೆ, ಸೇವಾ ಮನೋಭಾವ ಮತ್ತು ಕರ್ತವ್ಯ ಮನೋಭಾವದಿಂದ ಮುಂದೆ ಸಾಗಿ ಬಂದಿದೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಇದೇ ಸಕಾರಾತ್ಮಕ ಭಾವನೆ ದೇಶವನ್ನು ಮುಂದೆ ಕರೆದೊಯ್ಯಲಿದೆ, ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಮತ್ತು ಅಂದು ಆರಂಭಗೊಂಡ ಮನದ ಮಾತು ಇಂದು ದೇಶದ ಹೊಸ ಪರಂಪರೆಗೆ ನಾಂದಿಯಾಗಿದೆ ಎಂದು ತಿಳಿದು ನನಗೆ ಸಂತಸವೆನಿಸುತ್ತಿದೆ. ಈ ಪರಂಪರೆಯಿಂದ ಪ್ರತಿಯೊಬ್ಬರ ಪ್ರಯತ್ನವನ್ನೂ ಅರಿಯುವ ಅವಕಾಶ ದೊರೆತಿದೆ.
ಸ್ನೇಹಿತರೇ, ಅತ್ಯಂತ ಧೈರ್ಯದಿಂದ ಈ ಇಡೀ ಕಾರ್ಯಕ್ರಮ ರೆಕಾರ್ಡ್ ಮಾಡುವಂತಹ ಆಕಾಶವಾಣಿಯ ಸ್ನೇಹಿತರಿಗೆ ಕೂಡಾ ನಾನು ಇಂದು ಧನ್ಯವಾದ ಹೇಳುತ್ತಿದ್ದೇನೆ. ಬಹಳ ಕಡಿಮೆ ಸಮಯದಲ್ಲಿ, ಬಹಳ ವೇಗವಾಗಿ, ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡುವಂತಹ ಅನುವಾದಕರಿಗೆ ಕೂಡಾ ನಾನು ಕೃತಜ್ಞನಾಗಿದ್ದೇನೆ. ನಾನು ದೂರದರ್ಶನ ಮತ್ತು MyGov ನ ಸ್ನೇಹಿತರಿಗೆ ಕೂಡಾ ಧನ್ಯವಾದ ಹೇಳುತ್ತಿದ್ದೇನೆ. ಮನ್ ಕಿ ಬಾತ್ ಕಾರ್ಯಕ್ರಮವನ್ನು ವಾಣಿಜ್ಯ ವಿರಾಮ ಇಲ್ಲದೇ ಪ್ರಸಾರ ಮಾಡುವ ದೇಶಾದ್ಯಂತದ ಟಿವಿ ವಾಹಿನಿಗಳಿಗೆ, ವಿದ್ಯುನ್ಮಾನ ಮಾಧ್ಯಮದ ಮಿತ್ರರಿಗೂ ನಾನು ಕೃತಜ್ಞನಾಗಿದ್ದೇನೆ. ಕೊನೆಯದಾಗಿ ಮನದ ಮಾತಿನ ಚುಕ್ಕಾಣಿ ಹಿಡಿದಿರುವ, ನಿಭಾಯಿಸುತ್ತಿರುವ ಭಾರತದ ಜನರಿಗೆ, ಭಾರತದ ಮೇಲೆ ವಿಶ್ವಾಸ ಇರಿಸಿರುವ ಎಲ್ಲರಿಗೂ ನಾನು ನನ್ನ ಕೃತಜ್ಞತೆ ವ್ಯಕ್ತ ಪಡಿಸುತ್ತಿದ್ದೇನೆ. ಇವೆಲ್ಲವೂ ನಿಮ್ಮೆಲ್ಲರ ಪ್ರೇರಣೆ, ಸ್ಫೂರ್ತಿ ಮತ್ತು ಶಕ್ತಿಯಿಂದಲೇ ಸಾಧ್ಯವಾಯಿತು.
ಸ್ನೇಹಿತರೇ, ನನ್ನ ಮನದಲ್ಲಿ ಇಂದು ಇನ್ನೂ ಬಹಳ ಹೇಳಬೇಕೆಂಬ ಆಸೆ ಇದೆ ಆದರೆ ಸಮಯ ಮತ್ತು ಪದಗಳು ಎರಡೂ ಕಡಿಮೆ ಎನಿಸುತ್ತಿದೆ. ಆದರೂ ನೀವೆಲ್ಲರೂ ನನ್ನ ಅನಿಸಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ನನಗಿದೆ. ನಿಮ್ಮ ಕುಟುಂಬದ ಓರ್ವ ಸದಸ್ಯನ ರೂಪದಲ್ಲಿ ಮನದ ಮಾತಿನ ಮುಖಾಂತರ ನಿಮ್ಮೊಂದಿಗಿದ್ದೇನೆ. ನಿಮ್ಮ ನಡುವೆಯೇ ಇರುತ್ತೇನೆ. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಮತ್ತೊಮ್ಮೆ ಹೊಸ ವಿಚಾರಗಳೊಂದಿಗೆ, ಹೊಸ ಮಾಹಿತಿಯೊಂದಿಗೆ ದೇಶವಾಸಿಗಳ ಯಶಸ್ಸನ್ನು ಆಚರಿಸೋಣ. ಅಲ್ಲಿಯವರೆಗೆ ನನಗೆ ಅನುಮತಿ ನೀಡಿ ಹಾಗೆಯೇ ನಿಮ್ಮ ಹಾಗೂ ನಿಮ್ಮವರ ಬಗ್ಗೆ ಕಾಳಜಿ ವಹಿಸಿ. ಅನೇಕಾನೇಕ ಧನ್ಯವಾದ. ನಮಸ್ಕಾರ.
ನನ್ನ ಪ್ರಿಯ ದೇಶಬಾಂಧವರೆ. ಮನದ ಮಾತಿನಲ್ಲಿ ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂಥ ಸಾವಿರಾರು ಜನರ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟವರು ಹಲವರಿದ್ದರೆ, ಇನ್ನೂ ಎಷ್ಟೋ ಜನರು ತಮ್ಮ ಜೀವನವದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸಿಬಿಡುತ್ತಾರೆ. ನಮ್ಮ ದೇಶದಲ್ಲಿ ಪರಮಾರ್ಥವನ್ನು ಎಷ್ಟು ಉತ್ತುಂಗದಲ್ಲಿರಿಸಿದ್ದಾರೆಂದರೆ ಬೇರೆಯವರ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ಬಾಲ್ಯದಿಂದಲೂ ನಮಗೆ ಶಿಬಿ ಮತ್ತು ದಧೀಚಿಯಂತಹ ದೇಹ ದಾನ ಮಾಡಿದವರ ಕಥೆಗಳನ್ನು ಹೇಳುತ್ತಾರೆ.
ಸ್ನೇಹಿತರೆ ಆಧುನಿಕ ವೈದ್ಯವಿಜ್ಞಾನದ ಈ ಕಾಲಘಟ್ಟದಲ್ಲಿ ಅಂಗ ದಾನ, ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಮಾಧ್ಯಮವಾಗಿದೆ. ಒಬ್ಬ ವ್ಯಕ್ತಿ ಮೃತ್ಯುವಿನ ನಂತರ ತನ್ನ ದೇಹದಾನ ಮಾಡಿದಲ್ಲಿ ಅದರಿಂದ 8-9 ಜನರಿಗೆ ಹೊಸ ಜೀವನ ಲಭಿಸುವ ಸಂಭಾವ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗ ದಾನದ ಬಗ್ಗೆ ಜಾಗರೂಕತೆ ಹೆಚ್ಚಾಗುತ್ತಿದೆ ಎಂಬುದು ಸಂತೋಷದ ಸಂಗತಿ. 2013 ರಲ್ಲಿ ಅಂಗ ದಾನದ 5000 ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದವು ಆದರೆ 2022 ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದೆ. ಅಂಗ ದಾನ ಮಾಡುವ ವ್ಯಕ್ತಿ ಮತ್ತು ಅವರ ಕುಟುಂಬ ನಿಜಕ್ಕೂ ಪುಣ್ಯದ ಕೆಲಸ ಮಾಡಿದೆ.
ಸ್ನೇಹಿತರೆ, ಬಹಳ ಸಮಯದಿಂದ ಇಂಥ ಪುಣ್ಯದ ಕೆಲಸ ಮಾಡಿದವರ ಮನದ ಮಾತನ್ನು ಅರಿಯುವ ಮತ್ತು ಇತರ ದೇಶಬಾಂಧವರೊಂದಿಗೆ ಅದನ್ನು ಹಂಚಿಕೊಳ್ಳಬೇಕು ಎಂಬ ಬಯಕೆ ಇತ್ತು. ಆದ್ದರಿಂದ ಇಂದು ಮನದ ಮಾತಿನಲ್ಲಿ ಒಬ್ಬ ಪುಟ್ಟ ಹೆಣ್ಣುಮಗು ಮತ್ತು ಓರ್ವ ಸುಂದರ ಹೆಣ್ಣುಮಗುವಿನ ತಂದೆ ಹಾಗೂ ತಾಯಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ತಂದೆಯ ಹೆಸರು ಸುಖಬೀರ್ ಸಿಂಗ್ ಸಂಧು ಮತ್ತು ತಾಯಿಯ ಹೆಸರು ಸುಪ್ರೀತಾ ಕೌರ್. ಈ ಕುಟುಂಬ ಪಂಜಾಬ್ ನ ಅಮೃತಸರದಲ್ಲಿ ವಾಸಿಸುತ್ತಾರೆ. ಬಹಳಷ್ಟು ಹರಕೆ ಹೊತ್ತ ನಂತರ ಅವರಿಗೆ ಒಬ್ಬ ಸುಂದರ ಹೆಣ್ಣುಮಗುವನ್ನು ಭಗವಂತ ಕರುಣಿಸಿದ. ಕುಟುಂಬದವರೆಲ್ಲ ಬಹಳ ಪ್ರೀತಿಯಿಂದ ಅವಳಿಗೆ ಅಬಾಬತ್ ಕೌರ್ ಎಂದು ಹೆಸರಿಟ್ಟಿದ್ದರು. ಅಬಾಬತ್ ಎಂಬುದರ ಅರ್ಥ ಬೇರೆಯವರ ಸೇವೆಯೊಂದಿಗೆ, ಇತರರ ಕಷ್ಟಗಳನ್ನು ಪರಿಹರಿಸುವುದರೊಂದಿಗೆ ಸೇರಿದೆ. ಅಬಾಬತ್ 39 ದಿನಗಳ ಮಗುವಾಗಿದ್ದಾಗಲೇ ಅಸುನೀಗಿದಳು. ಆದರೆ ಸುಖಬೀರ್ ಸಿಂಗ್ ಸಂಧು, ಅವರ ಪತ್ನಿ ಸುಪ್ರೀತ್ ಕೌರ್ ಹಾಗೂ ಅವರ ಕುಟುಂಬ 39 ದಿನಗಳ ತಮ್ಮ ಮಗುವಿನ ಅಂಗದಾನ ಮಾಡುವಂತಹ ಅತ್ಯಂತ ಪ್ರೇರಣಾತ್ಮಕ ನಿರ್ಣಯ ತೆಗೆದುಕೊಂಡರು. ಈಗ ದೂರವಾಣಿ ಕರೆಯಲ್ಲಿ ಸುಖಬೀರ್ ಸಿಂಗ್ ಮತ್ತು ಅವರ ಪತ್ನಿ ನಮ್ಮ ಜೊತೆಗಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ.
ಪ್ರಧಾನಮಂತ್ರಿ: ಸುಖಬೀರ್ ಅವರೆ ನಮಸ್ಕಾರ.
ಸುಖಬೀರ್ ಸಿಂಗ್: ಗೌರವಾನ್ವಿತ ಪ್ರಧಾನಮಂತ್ರಿಗಳೇ ನಮಸ್ಕಾರ, ಸತ್ ಶ್ರೀ ಅಕಾಲ
ಪ್ರಧಾನಮಂತ್ರಿ: ಸತ್ ಶ್ರೀ ಅಕಾಲ್ ಜಿ, ಸತ್ ಶ್ರೀ ಅಕಾಲ್ … ಸುಖಬೀರ್ ಅವರೆ ಇಂದು ನಾನು ಮನದ ಮಾತಿನ ಬಗ್ಗೆ ಆಲೋಚಿಸುತ್ತಿದ್ದಾಗ, ಅಬಾಬತ್ ವಿಷಯ ಅದೆಷ್ಟು ಪ್ರೇರಣಾದಾಯಕವಾಗಿದೆ ಎಂಬುದನ್ನು ನಿಮ್ಮ ಮಾತುಗಳಲ್ಲೇ ಕೇಳಬೇಕು ಎಂದೆನಿಸಿತು. ಏಕೆಂದರೆ ಮನೆಯಲ್ಲಿ ಹೆಣ್ಣುಮಗುವಿನ ಜನನದೊಂದಿಗೆ ಅವರ ಕನಸುಗಳು ಸಾಕಷ್ಟು ಸಂತಸ ಸಂಭ್ರಮವನ್ನು ಹೊತ್ತು ತರುತ್ತವೆ. ಆದರೆ ಮಗಳು ಇಷ್ಟು ಬೇಗ ತೊರೆದು ಹೋದರೆ ಆ ಕಷ್ಟ ಎಷ್ಟು ವೇದನೆಯನ್ನು ತಂದು ಕೊಡುತ್ತದೆ ಎಂಬುದನ್ನು ನಾನು ಊಹಿಸಬಲ್ಲೆ. ನೀವು ಯಾವ ರೀತಿ ನಿರ್ಣಯ ಕೈಗೊಂಡಿರಿ ಎಂಬುದರ ಬಗ್ಗೆ ವಿವರವಾಗಿ ತಿಳಿಯಬಯಸುತ್ತೇನೆ.
ಸುಖಬೀರ್ ಸಿಂಗ್: ಸರ್, ಭಗವಂತ ನಮಗೆ ಬಹಳ ಒಳ್ಳೇ ಮಗುವನ್ನು ಕರುಣಿಸಿದ್ದ. ನಮ್ಮ ಮನೆಗೆ ಬಹಳ ಸುಂದರ ಹೆಣ್ಣುಮಗುವನ್ನು ದಯಪಾಲಿಸಿದ್ದ. ಆದರೆ ಅವಳ ಜನ್ಮದ ನಂತರ ನಮಗೆ ಅವಳ ಮೆದುಳಿನಲ್ಲಿ ಕೆಲ ನರಗಳು ಗಂಟು ಕಟ್ಟಿಕೊಂಡರುವುದರಿಂದ ಅವಳ ಹೃದಯದ ಗಾತ್ರ ದೊಡ್ಡದಾಗುತ್ತಾ ಸಾಗಿದೆ ಎಂಬುದು ತಿಳಿಯಿತು. ಆದರೆ, ಮಗುವಿನ ಆರೋಗ್ಯ ತುಂಬಾ ಚೆನ್ನಾಗಿತ್ತು, ಎಷ್ಟೊಂದು ಸುಂದರ ಮಗು ಎಂಥ ದೊಡ್ಡ ಸಮಸ್ಯೆಯೊಂದಿಗೆ ಜನ್ಮ ತಳೆದಿದೆ ಎಂಬುದು ನಮ್ಮಲ್ಲಿ ಆತಂಕ ಮೂಡಿಸಿತು. ಮೊದಲ ಆರಂಭದ 24 ದಿನಗಳು ಮಗು ತುಂಬಾ ಚೆನ್ನಾಗಿತ್ತು. Normal ಆಗೇ ಇತ್ತು. ಇದ್ದಕ್ಕಿದ್ದಂತೆ ಅವಳ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೂಡಲೇ ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು. ಆದರೆ ಅವಳ ಸಮಸ್ಯೆಯೇನೆಂದು ತಿಳಿಯಲು ಸಮಯ ಬೇಕಾಯಿತು. ಅಷ್ಟು ಪುಟ್ಟ ಮಗುವಿಗೆ ಹೃದಯಾಘಾತವಾಯಿತು, ನಾವು ಚಿಕಿತ್ಸೆಗಾಗಿ ಅವಳನ್ನು ಚಂದೀಘಡದ ಪಿ ಜಿ ಐ ಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಬಹಳ ಧೈರ್ಯದಿಂದ ಮಗು ಚಿಕಿತ್ಸೆಗೆ ಸ್ಪಂದಿಸುವ ಪ್ರಯತ್ನ ಮಾಡಿತು. ಆದರೆ ರೋಗ ಎಷ್ಟು ಗಂಭೀರವಾಗಿತ್ತೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದರ ಚಿಕಿತ್ಸೆ ಅಸಾಧ್ಯವಾಗಿತ್ತು. ವೈದ್ಯರು ಅವಳು ಚೇತರಿಕೊಳ್ಳುವಂತಾಗಲು ಬಹಳ ಪ್ರಯತ್ನಪಟ್ಟರು. 6 ತಿಂಗಳವರೆಗೆ ಮಗು ಚೇತರಿಸಿಕೊಂಡರೆ ಆಪರೇಷನ್ ಮಾಡಬಹುದಾಗಿತ್ತು. ಆದರೆ ದೇವರ ಇಚ್ಛೇ ಬೆರೆಯೇ ಆಗಿತ್ತು. ಮಗು 39 ದಿನದವಳಾಗಿದ್ದಾಗ ಮತ್ತೆ ಅವಳಿಗೆ ಹೃದಯಾಘಾತವಾಗಿದೆ ಅಲ್ಲದೆ ಅವಳ ಬದುಕುಳಿಯುವ ಸಂಭಾವ್ಯತೆ ಬಹಳ ಕಡಿಮೆ ಎಂದು ವೈದ್ಯರು ಹೇಳಿದರು. ಆಗ ನಾವಿಬ್ಬರೂ ದಂಪತಿಗಳು ಆ ಮಗು ಮತ್ತೆ ಮತ್ತೆ ಸಾವಿನೊಂದಿಗೆ ಹೋರಾಡಿ ಚೇತರಿಸಿಕೊಳ್ಳುತ್ತಿರುವುದನ್ನು ನಾವು ಕಂಡಿದ್ದೆವು, ಇನ್ನೇನು ಕೈಬಿಟ್ಟು ಹೋಗುತ್ತಾಳೆ ಎನ್ನುತ್ತಿರುವಾಗಲೇ ಚೇತರಿಸಿಕೊಳ್ಳುತ್ತಿದ್ದಳು. ಅವಳು ಕೊನೆಯುಸಿರೆಳೆದಾಗ ಈ ಮಗು ಈ ಲೋಕಕ್ಕೆ ಬಂದಿರುವುದರ ಹಿಂದೆ ಯಾವುದೋ ಉದ್ದೇಶವಿದೆ ಆದ್ದರಿಂದ ಯಾಕೆ ನಾವು ಅವಳ ಅಂಗದಾನ ಮಾಡಬಾರದು, ಬೇರೆ ಯಾವುದೋ ಮಗುವಿನ ಜೀವನದಲ್ಲಿ ಬೆಳಕು ಮೂಡಬಹುದಲ್ಲ ಎಂದು ಆಲೋಚಿಸಿದೆವು. ಆಗ ನಾವು ಪಿಜಿಐ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿದೆವು. ಇಷ್ಟು ಪುಟ್ಟ ಮಗುವಿನ ಮೂತ್ರಪಿಂಡವನ್ನು ಮಾತ್ರವೇ ತೆಗೆದುಕೊಳ್ಳಬಹುದು ಎಂದು ಅವರು ನಮಗೆ ಮಾರ್ಗದರ್ಶನ ನೀಡಿದರು. ಆ ಭಗವಂತನೇ ನಮಗೆ ಶಕ್ತಿ ತುಂಬಿದ ಗುರುನಾನಕ ದೇವ್ ಅವರ ತತ್ವ ಇದನ್ನೇ ಹೇಳುತ್ತದೆ ಎಂದು ತಿಳಿದು ನಾವು ನಿರ್ಣಯ ಕೈಗೊಂಡೆವು
ಪ್ರಧಾನಮಂತ್ರಿ: ಗುರು ತೋರಿದ ದಾರಿಯಲ್ಲಿ ನಡೆಯುವುದು ಮಾತ್ರವಲ್ಲ ಅದನ್ನೇ ಜೀವಿಸಿ ತೋರಿಸಿದ್ದೀರಿ. ಸುಪ್ರೀತ್ ಅವರಿದ್ದಾರೆಯೇ? ಅವರೊಂದಿಗೆ ಮಾತನಾಡಬಹುದೇ?
ಸುಖಬೀರ್ ಸಿಂಗ್: ಇದ್ದಾರೆ ಸರ್
ಸುಪ್ರೀತ್: ಹಲ್ಲೋ
ಪ್ರಧಾನಮಂತ್ರಿ: ಹಲ್ಲೋ, ಸುಪ್ರೀತ್ ಅವರೆ ನಮಸ್ಕಾರ
ಸುಖಬೀರ್ ಸಿಂಗ್: ನಮಸ್ಕಾರ ಸರ್, ನೀವು ನಮ್ಮೊಂದಿಗೆ ಮಾತನಾಡುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ.
ಪ್ರಧಾನಮಂತ್ರಿ: ನೀವು ಎಷ್ಟು ದೊಡ್ಡ ಕೆಲಸ ಮಾಡಿದ್ದೀರಿ. ದೇಶದ ಜನರು ನಿಮ್ಮ ಮಾತುಗಳನ್ನು ಕೇಳಿದಾಗ ಜನರು ಇತರರ ಜೀವ ಉಳಿಸಲೆಂದು ಮುಂದೆ ಬರುತ್ತಾರೆ ಎಂಬುದು ನನ್ನ ಆಶಯ.ತೆಗೆದುಹಾಕಬೇಕೆಂದುಕೊಂಡೆವು ಅಬಾಬತ್ ಳ ಕೊಡುಗೆ ಬಹಳ ದೊಡ್ಡದು.
ಸುಪ್ರೀತ್: ಸರ್, ಬಹುಶಃ ಗುರು ನಾನಕ್ ಜಿ ಅವರ ಪ್ರೇರಣೆಯೇ ಇರಬೇಕು - ನಾವು ಇಷ್ಟು ದೊಡ್ಡ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಯಿತು.
ಪ್ರಧಾನಮಂತ್ರಿ: ಗುರುಗಳ ಕೃಪೆಯಿಲ್ಲದೆ ಏನೂ ಸಾಧ್ಯವಿಲ್ಲ.
ಸುಪ್ರೀತ್: ಖಂಡಿತ ಸರ್,
ಪ್ರಧಾನಮಂತ್ರಿ: ಸುಖಬೀರ್ ಅವರೆ ನೀವು ಆಸ್ಪತ್ರೆಯಲ್ಲಿದ್ದಾಗ ಎದೆ ಝಲ್ಲೆನ್ನುವಂತಹ ವಿಷಯವನ್ನು ನಿಮಗೆ ತಿಳಿಸಿದಾಗ್ಯೂ ನೀವು ಮತ್ತು ನಿಮ್ಮ ಪತ್ನಿ ಎದೆಗುಂದದೆ ಇಷ್ಟು ದೊಡ್ಡ ನಿರ್ಣಯ ಕೈಗೊಂಡಿರಿ. ಗುರುಗಳ ಆಶೀರ್ವಾದದಿಂದಲೇ ನಿಮ್ಮ ಮನದಲ್ಲಿ ಇಷ್ಟು ಉದಾತ್ತ ವಿಚಾರಗಳು ಬಂದಿವೆ. ಸಾಮಾನ್ಯ ಮಾತುಗಳಲ್ಲಿ ಹೇಳುವುದಾದರೆ ಅಬಾಬತ್ ಅರ್ಥವೇ ಬೇರೆಯವರಿಗೆ ನೆರವಾಗುವುದು ಎಂದಿದೆ. ಇಂಥ ಉದಾತ್ತ ಕಾರ್ಯ ಮಾಡಿದ ಕ್ಷಣದ ಬಗ್ಗೆ ನಾನು ಕೇಳಬಯಸುತ್ತೇನೆ.
ಸುಖಬೀರ್: ಸರ್, ಪ್ರಿಯಾ ಎಂಬ ನಮ್ಮ ಕುಟುಂಬ ಸ್ನೇಹಿತರೊಬ್ಬರಿದ್ದಾರೆ. ಅವರು ತಮ್ಮ ಅಂಗದಾನ ಮಾಡಿದ್ದರು. ಅವರಿಂದಲೂ ನಮಗೆ ಪ್ರೇರಣೆ ದೊರೆಯಿತು. ಆಗ ನಮಗೆ ಈ ಶರೀರ ಪಂಚತತ್ವಗಳಲ್ಲಿ ವಿಲೀನವಾಗಿಹೋಗುವುದು ಎಂದೆನಿಸಿತು. ಯಾರಾದರೂ ನಮ್ಮನ್ನಗಲಿದಾಗ ಅವರ ಶರೀರವನ್ನು ಅಗ್ನಿಯಲ್ಲಿ ದಹಿಸಲಾಗುತ್ತದೆ ಇಲ್ಲವೆ ಹೂಳಲಾಗುತ್ತದೆ. ಆದರೆ ಅವರ ಅಂಗ ಯಾರಿಗಾದರೂ ಉಪಯೋಗಕ್ಕೆ ಬಂದರೆ ಅದು ಒಳ್ಳೆಯದೇ ಅಲ್ಲವೇ. ವೈದ್ಯರು ನಮಗೆ ನಿಮ್ಮ ಮಗಳು ಭಾರತದ ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿಯಾಗಿದ್ದಾಳೆ ಮತ್ತು ಅವಳ ಅಂಗ ಯಶಸ್ವಿಯಾಗಿ ಬೇರೆಯವರಿಗೆ ಕಸಿ ಮಾಡಲಾಗಿದೆ ಎಂದು ಹೇಳಿದಾಗ ನಮಗೆ ಬಹಳ ಹೆಮ್ಮೆಯೆನಿಸಿತು. ನಾವು ಇಷ್ಟು ವರ್ಷಗಳಲ್ಲಿ ನಮ್ಮ ಪಾಲಕರ ಹೆಸರನ್ನು ಬೆಳಗಲಾಗಲಿಲ್ಲ, ಆದರೆ ಒಂದು ಪುಟ್ಟ ಮಗು ಕೆಲವೇ ದಿನಗಳಲ್ಲಿ ನಮ್ಮ ಹೆಸರನ್ನು ಬೆಳಗಿಸಿದ್ದಾಳೆ. ಇಷ್ಟೇ ಅಲ್ಲ ಈ ವಿಷಯದ ಕುರಿತು ನಿಮ್ಮೊಂದಿಗೆ ನಾವು ಮಾತನಾಡುತ್ತಿರುವುದು ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ.
ಪ್ರಧಾನಮಂತ್ರಿ: ಸುಖಬೀರ್ ಅವರೇ ಇಂದು ನಿಮ್ಮ ಮಗುವಿನ ಅಂಗ ಮಾತ್ರ ಜೀವಂತವಾಗಿದೆ ಎಂದಲ್ಲ, ನಿಮ್ಮ ಮಗಳು ಮಾನವತೆಯ ಅಮರಗಾಥೆಯ ಅಮರ ಯಾತ್ರಿಕಳಾಗಿದ್ದಾಳೆ. ತನ್ನ ಶರೀರದ ಅಂಶದೊಂದಿಗೆ ಅವಳು ಇಂದಿಗೂ ಜೀವಂತವಾಗಿದ್ದಾಳೆ. ಈ ಉತ್ತಮ ಕೆಲಸಕ್ಕಾಗಿ ನಿಮ್ಮನ್ನು, ನಿಮ್ಮ ಶ್ರೀಮತಿಯವರನ್ನು ಮತ್ತು ಕುಟುಂಬದವರನ್ನು ನಾನು ಪ್ರಶಂಸಿಸುತ್ತೇನೆ.
ಸುಖಬೀರ್: ಧನ್ಯವಾದಗಳು ಸರ್…
ಸ್ನೇಹಿತರೆ, ನಾವು ಶಾಶ್ವತವಾಗಿ ಹೊರಟು ಹೋಗುವಾಗಲೂ ಒಬ್ಬರ ಜೀವವನ್ನು ಉಳಿಸಬೇಕು ಎಂಬುದೇ ಅಂಗಾಂಗ ದಾನದ ಬಹುದೊಡ್ಡ ಧ್ಯೇಯವಾಗಿರುತ್ತದೆ. ಅಂಗಾಂಗ ದಾನಕ್ಕಾಗಿ ಕಾಯುವ ಜನರಿಗೆ, ಕಾಯುವ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಕಷ್ಟದಾಯಕ ಎಂಬುದು ತಿಳಿದಿರುತ್ತದೆ ಮತ್ತು ಅಂತಹ ಸ್ಥಿತಿಯಲ್ಲಿ, ಅಂಗದಾನಿ ಅಥವಾ ದೇಹದಾನಿ ದೊರೆತಲ್ಲಿ ಅವರು ದೇವರ ಪ್ರತಿರೂಪದಂತೆ ಕಾಣುತ್ತಾರೆ. ಜಾರ್ಖಂಡ್ ನಿವಾಸಿ ಸ್ನೇಹಲತಾ ಚೌಧರಿ ಕೂಡ ದೇವರಂತೆ ಇತರರಿಗೆ ಜೀವನ ನೀಡಿದವರು. 63 ವರ್ಷದ ಸ್ನೇಹಲತಾ ಚೌಧರಿ ಅವರು ತಮ್ಮ ಹೃದಯ, ಮೂತ್ರಪಿಂಡ ಮತ್ತು ಯಕೃತ್ತು ದಾನ ಮಾಡಿದ್ದಾರೆ. ಇಂದು 'ಮನ್ ಕಿ ಬಾತ್' ನಲ್ಲಿ ಅವರ ಮಗ – ಸೋದರ ಅಭಿಜಿತ್ ಚೌಧರಿ ನಮ್ಮೊಂದಿಗಿದ್ದಾರೆ. ಅವರೊಂದಿಗೆ ಮಾತನಾಡೋಣ.
ಪ್ರಧಾನಮಂತ್ರಿ – ಅಭಿಜೀತ್ ಅವರೇ ನಮಸ್ಕಾರ
ಅಭಿಜೀತ್ ಜೀ- ನಮಸ್ಕಾರ ಸರ್.
ಪ್ರಧಾನಮಂತ್ರಿ- ಅಭಿಜೀತ್ ಅವರೆ, ನಿಮ್ಮ ತಾಯಿ ನಿಮಗೆ ಜನ್ಮ ನೀಡುವ ಮೂಲಕ ತಾಯಿಯಾದರೂ ತಮ್ಮ ಮರಣಾ ನಂತರವೂ ಅನೇಕ ಜನರಿಗೆ ಜೀವನ ನೀಡಿದ ಮಹಾತಾಯಿಯ ಮಗ ನೀವು. ಮಗನಾಗಿ ಅಭಿಜಿತ್ ನಿಮಗೆ ಬಹಳ ಹೆಮ್ಮೆ ಎನಿಸುತ್ತಿರಬೇಕು.
ಅಭಿಜೀತ್: ಹೌದು ಸರ್.
ಪ್ರಧಾನಮಂತ್ರಿ: ನಿಮ್ಮ ತಾಯಿಯ ಬಗ್ಗೆ ಸ್ವಲ್ಪ ಹೇಳಿ, ಯಾವ ಸಂದರ್ಭದಲ್ಲಿ ಅಂಗಾಂಗ ದಾನದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು?
ಅಭಿಜೀತ್: ಜಾರ್ಖಂಡ್ನಲ್ಲಿ ಸರಾಯಿಕೆಲಾ ಎಂಬ ಒಂದು ಪುಟ್ಟ ಗ್ರಾಮವಿದೆ, ಅಲ್ಲಿ ನನ್ನ ತಂದೆ-ತಾಯಿ ಇಬ್ಬರೂ ವಾಸಿಸುತ್ತಿದ್ದರು. ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ನಮ್ಮ ತಾಯಿ ಬೆಳಗಿನ ವಾಕಿಂಗ್ ಮಾಡುತ್ತಿದ್ದರು, ಅವರು ತಮ್ಮ ಅಭ್ಯಾಸಬಲದಂತೆ ಬೆಳಗಿನ ಜಾವ 4 ಗಂಟೆಗೆ ತಮ್ಮ ಬೆಳಗಿನ ವಾಕಿಂಗ್ ಗೆ ಹೊರಟಿದ್ದರು. ಆ ವೇಳೆ ಬೈಕ್ ಸವಾರನೊಬ್ಬ ಅವರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ನಾವು ಅವರನ್ನು ಸರಾಯಿಕೆಲಾ ಆಸ್ಪತ್ರೆಗೆ ಕರೆದೊಯ್ದೆವು, ವೈದ್ಯರು ಅವರಿಗೆ ಔಷಧೋಪಚಾರ ಮಾಡಿದರು, ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ತಕ್ಷಣ ಅವರನ್ನು ಟಾಟಾ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು, 48 ಗಂಟೆಗಳ ವೀಕ್ಷಣೆಯ ನಂತರ, ವೈದ್ಯರು ಅವರು ಬದುಕುಳಿಯುವ ಅವಕಾಶಗಳು ಬಹಳ ಕಡಿಮೆ ಎಂದು ಹೇಳಿದರು. ನಂತರ ನಾವು ಅವರನ್ನು ವಿಮಾನದಲ್ಲಿ ಕರೆತಂದು ದೆಹಲಿಯ ಏಮ್ಸ್ಗೆ ಕರೆದುಕೊಂಡುಹೋದವು.. ಸುಮಾರು 7-8 ದಿನಗಳ ಕಾಲ ಅಲ್ಲಿ ಚಿಕಿತ್ಸೆ ನಡೆಯಿತು. ಅನಂತರ ಅವರ ಸ್ಥಿತಿ ಸುಧಾರಿಸಿತ್ತು. ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡ ತುಂಬಾ ಕಡಿಮೆಯಾಯಿತು, ಆ ನಂತರ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ ಎಂದು ಗೊತ್ತಾಯಿತು. ನಂತರ ಶಿಷ್ಟಾಚಾರದಂತೆ ವೈದ್ಯರು ಅಂಗಾಂಗ ದಾನದ ಬಗ್ಗೆ ನಮಗೆ ತಿಳಿಸುತ್ತಿದ್ದರು. ಅಂಗಾಂಗ ದಾನ ಎಂಬುದು ಕೂಡ ಅಸ್ತಿತ್ವದಲ್ಲಿದೆ ಎಂದು ನಮ್ಮ ತಂದೆಗೆ ನಾವು ಹೇಳಲು ಸಾಧ್ಯವಿರಲಿಲ್ಲ. ಏಕೆಂದರೆ ಸಹಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ಅವರ ಮನಸ್ಸಿನಿಂದ ತೆಗೆದುಹಾಕಬೇಕೆಂದುಕೊಂಡೆವು. ನಾವು ಅವರಿಗೆ ಅಂಗಾಂಗ ದಾನದ ಮಾತು ನಡೆಯುತ್ತಿದೆ ಎಂದು ಹೇಳಿದ ತಕ್ಷಣ ಅವರು “ಇದೇ ನಿಮ್ಮ ತಾಯಿಯ ಇಚ್ಛೆಯಾಗಿತ್ತು ಮತ್ತು ನಾವು ಇದನ್ನು ಖಂಡಿತ ಮಾಡಲೇಬೇಕು ಎಂದು ಹೇಳಿದರು. ನಮ್ಮ ತಾಯಿ ಬದುಕುಳಿಯುವುದಿಲ್ಲ ಎಂದು ತಿಳಿದಾಗ ನಮಗೆ ತುಂಬಾ ನಿರಾಸೆಯಾಗಿತ್ತು ಆದರೆ ಅಂಗಾಂಗ ದಾನದ ಬಗ್ಗೆ ಚರ್ಚೆ ಪ್ರಾರಂಭವಾದ ನಂತರ, ಆ ನಿರಾಶಾವಾದವು ಸಕಾರಾತ್ಮಕವಾಗಿ ಬದಲಾಗಿಹೋಯಿತು ಮತ್ತು ನಾವು ತುಂಬಾ ಸಕಾರಾತ್ಮಕ ವಾತಾವರಣಕ್ಕೆ ಮರಳಿದೆವು. . ಹೀಗೆ ಚರ್ಚೆ ಮುಂದುವರಿದು ರಾತ್ರಿ 8 ಗಂಟೆಗೆ ಆಪ್ತಸಮಾಲೋಚನೆ ನಡೆಸಲಾಯಿತು. ಎರಡನೇ ದಿನ ಅಂಗಾಂಗ ದಾನ ಮಾಡಿದೆವು. ನಮ್ಮ ತಾಯಿ ಈ ಹಿಂದೆ ನೇತ್ರದಾನ ಮತ್ತು ಸಾಮಾಜಿಕ ಚಟುವಟಿಕೆಯಂಥ ವಿಷಯಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಬಹುಶಃ ನಾವು ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತು ಈ ವಿಷಯದ ಬಗ್ಗೆ ನನ್ನ ತಂದೆಯ ನಿರ್ಧಾರದಿಂದಾಗಿ ಅಂತಹ ದೊಡ್ಡ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು.
ಪ್ರಧಾನಮಂತ್ರಿ: ಎಷ್ಟು ಜನರಿಗೆ ಅಂಗಾಂಗ ಉಪಯುಕ್ತವಾದವು?
ಅಭಿಜೀತ್: ಅವರ ಹೃದಯ, ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡೂ ಕಣ್ಣುಗಳನ್ನು ದಾನ ಮಾಡಲಾಯಿತು, ಇದರಿಂದ ನಾಲ್ಕು ಜನರಿಗೆ ಜೀವದಾನ ದೊರೆಯಿತು ಮತ್ತು ಇಬ್ಬರಿಗೆ ದೃಷ್ಟಿ ಲಭಿಸಿತು.
ಪ್ರಧಾನಮಂತ್ರಿ- ಅಭಿಜೀತ್ ಅವರೇ, ನಿಮ್ಮ ತಂದೆ ಮತ್ತು ತಾಯಿ ಇಬ್ಬರೂ ಗೌರವಕ್ಕೆ ಅರ್ಹರು. ನಾನು ಅವರಿಗೆ ಮತ್ತು ನಿಮ್ಮ ತಂದೆ ನಿಮ್ಮ ಕುಟುಂಬ ಸದಸ್ಯರ ಇಂತಹ ದೊಡ್ಡ ನಿರ್ಧಾರಕ್ಕೆ ನೇತೃತ್ವವಹಿಸಿದ್ದು, ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಮತ್ತು ತಾಯಿ ಎಲ್ಲರಿಗೂ ತಾಯಿಯೇ ಎಂದು ನಾನು ನಂಬುತ್ತೇನೆ. ತಾಯಿ ಸ್ಫೂರ್ತಿಯ ಸೆಲೆ. ಆದರೆ ತಾಯಿ ಬಿಟ್ಟು ಹೋಗುವ ಸಂಸ್ಕಾರ ಪೀಳಿಗೆಯಿಂದ ಪೀಳಿಗೆಗೆ ಅಗಾಧ ಶಕ್ತಿಯಾಗುತ್ತಾ ಸಾಗುತ್ತದೆ. ಅಂಗಾಂಗ ದಾನದ ವಿಷಯದಲ್ಲಿ ನಿಮ್ಮ ತಾಯಿಯ ಪ್ರೇರಣೆ ಇಂದು ಇಡೀ ದೇಶವನ್ನೇ ತಲುಪುತ್ತಿದೆ. ಈ ಪವಿತ್ರ ಮತ್ತು ಉತ್ತಮ ಕೆಲಸಕ್ಕಾಗಿ ನಿಮ್ಮ ಇಡೀ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ. ಧನ್ಯವಾದಗಳು ಅಭಿಜೀತ್ ಅವರೆ, ಮತ್ತು ನಿಮ್ಮ ತಂದೆಗೆ ಖಂಡಿತ ನಮನಗಳನ್ನು ತಿಳಿಸಿ.
ಅಭಿಜೀತ್: ಖಂಡಿತವಾಗಿ, ಧನ್ಯವಾದಗಳು.
ಸ್ನೇಹಿತರೇ, 39 ದಿನಗಳ ಕಾಲ ಜೀವಿಸಿದ್ದಅಬಾಬತ್ಕೌರ್ ಇರಬಹುದು ಅಥವಾ 63 ವರ್ಷ ವಯಸ್ಸಿನ ಸ್ನೇಹಲತಾಚೌಧರಿ ಇರಬಹುದು, ಇಂತಹ ದಾನವೀರರು ನಮಗೆ ಜೀವನದ ಮಹತ್ವ ಅರ್ಥಮಾಡಿಸಿಹೋಗುತ್ತಾರೆ. ನಮ್ಮ ದೇಶದಲ್ಲಿ ಇಂದು, ಆರೋಗ್ಯಪೂರ್ಣ ಜೀವನ ನಡೆಸುವ ಆಸೆಯಿಂದ, ಅಂಗಾಂಗ ದಾನ ಪಡೆದುಕೊಳ್ಳುವ ಅಗತ್ಯವಿರುವ, ಅದಕ್ಕಾಗಿ ನಿರೀಕ್ಷಿಸುತ್ತಿರುವಂತಹ ಜನರು ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಂಗಾಗದಾನವನ್ನು ಸುಲಭ ಮಾಡುವುದಕ್ಕಾಗಿ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ದೇಶಾದ್ಯಂತ ಇಂತಹ ಏಕರೂಪದನೀತಿಯ ಪ್ರಕಾರ ಕೆಲಸ ನಡೆಯುತ್ತಿದೆ ಎಂಬ ತೃಪ್ತಿ ನನಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ವಾಸಸ್ಥಳದಷರತ್ತುಗಳನ್ನುತೆಗೆದುಹಾಕುವ ನಿರ್ಣಯ ಕೂಡಾ ಕೈಗೊಳ್ಳಲಾಗುತ್ತಿದೆ, ಅಂದರೆ, ರೋಗಿಯು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಅಂಗಪಡೆದುಕೊಳ್ಳುವುದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಸರ್ಕಾರವು ಅಂಗಾಂಗ ದಾನಕ್ಕಾಗಿ 65 ವರ್ಷಕ್ಕಿಂತ ಕಡಿಮೆ ವಯಸ್ಸಿನ, ವಯಸ್ಸು ಮಿತಿಯನ್ನು ಕೂಡಾ ಕೊನೆಗೊಳಿಸುವ ನಿರ್ಣಯ ಕೈಗೊಂಡಿದೆ. ಈ ಪ್ರಯತ್ನಗಳ ನಡುವೆಯೇ, ಅಂಗಾಂಗ ದಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರಬೇಕೆಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ಇಂತಹ ಒಂದು ನಿರ್ಧಾರ, ಅನೇಕರ ಜೀವ ಉಳಿಸಬಹುದಾಗಿದೆ, ಅನೇಕರಿಗೆ ಜೀವನ ನೀಡಬಹುದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇದು ನವರಾತ್ರಿಯ ಸಮಯ, ಶಕ್ತಿ ದೇವತೆಯ ಆರಾಧನೆಯ ಸಮಯ. ಇಂದು ಹೊಸ ಕೋನದಿಂದ ಹೊರಹೊಮ್ಮುತ್ತಾ ಮುಂದೆ ಬರುತ್ತಿರುವ ಭಾರತದ ಸಾಮರ್ಥ್ಯದಲ್ಲಿ, ಅತ್ಯಂತ ದೊಡ್ಡ ಪಾತ್ರ ನಮ್ಮ ಮಹಿಳೆಯರ ಶಕ್ತಿಯಾಗಿದೆ. ಇತ್ತೀಚೆಗೆ ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದೆ ಬಂದಿವೆ. ಇತ್ತೀಚೆಗೆ ನೀವು ಸೋಷಿಯಲ್ ಮೀಡಿಯಾದಲ್ಲಿ ಏಷ್ಯಾದ ಪ್ರಥಮ ಮಹಿಳಾ ಲೋಕೋಪೈಲಟ್ ಸುರೇಖಾ ಯಾದವ್ ಅವರನ್ನು ಖಂಡಿತವಾಗಿಯೂ ನೋಡಿಯೇ ಇರುತ್ತೀರಿ. ಸುರೇಖಾ ಅವರು, ವಂದೇ ಭಾರತ್ ಎಕ್ಸ್ ಪ್ರೆಸ್ ನ ಪ್ರಥಮ ಮಹಿಳಾ ಲೋಕೋ ಪೈಲಟ್ ಆಗಿ ಮತ್ತೊಂದು ಹೆಗ್ಗಳಿಕೆಯ ದಾಖಲೆಗೆ ಪಾತ್ರರಾಗಿದ್ದಾರೆ. ಇದೇ ತಿಂಗಳು, ಚಿತ್ರ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕೀ ಗೋಂಜಾಲ್ವಿಸ್ ಅವರುಗಳು ತಮ್ಮ ಡಾಕ್ಯುಮೆಂಟರಿ ‘Elephant Whisperers’ ಗಾಗಿ Oscar ಪ್ರಶಸ್ತಿ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ. ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ, ಜ್ಯೋತಿರ್ಮಯಿ ಮೊಹಾಂತಿ ಅವರು ಕೂಡಾ ದೇಶಕ್ಕಾಗಿ ಮತ್ತೊಂದು ಸಾಧನೆ ಮಾಡಿದ್ದಾರೆ. ಜ್ಯೋತಿರ್ಮಯಿ ಅವರಿಗೆ ಕೆಮಿಕಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ IUPAC ನ ವಿಶೇಷ ಪ್ರಶಸ್ತಿ ದೊರೆತಿದೆ. ಈ ವರ್ಷದ ಆರಂಭದಲ್ಲಿ, ಭಾರತದ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳಾ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಪ್ರಶಸ್ತಿ ತನ್ನದಾಗಿಸಿಕೊಂಡು ಹೊಸದೊಂದು ಇತಿಹಾಸ ಸೃಷ್ಟಿಸಿತು. ನೀವು ರಾಜಕೀಯದತ್ತ ನೋಡಿದರೆ, ಒಂದು ಹೊಸ ಆರಂಭ ನಾಗಾಲ್ಯಾಂಡ್ ನಲ್ಲಿ ನಡೆದಿದೆ. ನಾಗಾಲ್ಯಾಂಡ್ ನಲ್ಲಿ 75 ವರ್ಷಗಳಲ್ಲಿ ಮೊದಲಬಾರಿಗೆ ಇಬ್ಬರು ಮಹಿಳಾ ಶಾಸಕರು ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿದ್ದಾರೆ. ಇವರಲ್ಲಿ ಒಬ್ಬರನ್ನು ನಾಗಾಲ್ಯಾಂಡ್ ಸರ್ಕಾರವು ಸಚಿವರನ್ನಾಗಿ ಕೂಡಾ ನೇಮಿಸಿದೆ ಅಂದರೆ, ರಾಜ್ಯದ ಜನತೆಗೆ ಪ್ರಥಮ ಬಾರಿಗೆ ಮಹಿಳಾ ಸಚಿವರೊಬ್ಬರು ದೊರೆತಿದ್ದಾರೆ.
ಸ್ನೇಹಿತರೇ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಅಲ್ಲಿನ ಜನರಿಗೆ ಸಹಾಯ ಮಾಡಲು ಹೋಗಿದ್ದಂತಹ ಆ ಧೈರ್ಯಶಾಲಿ ಹೆಣ್ಣುಮಕ್ಕಳನ್ನು ನಾನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ಇವರೆಲ್ಲರೂ NDRF ತಂಡದಲ್ಲಿ ಸೇರಿದ್ದರು. ಇವರ ಧೈರ್ಯ ಮತ್ತು ಕೌಶಲ್ಯವನ್ನು ಇಡೀ ಜಗತ್ತೇ ಪ್ರಶಂಸಿಸುತ್ತಿದೆ. ಭಾರತವು ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ಶಾಂತಿ ಪಾಲನಾ ಸೇನೆಯಲ್ಲಿ ಕೇವಲ ಮಹಿಳೆಯರನ್ನು ಒಳಗೊಂಡ ತುಕಡಿಯನ್ನು ಕೂಡಾ ನಿಯೋಜಿಸಿದೆ.
ಇಂದು ದೇಶದ ಹೆಣ್ಣು ಮಕ್ಕಳು, ನಮ್ಮ ಮೂರು ಸೇನೆಗಳಲ್ಲಿ ತಮ್ಮ ಶೌರ್ಯ, ಸಾಹಸದ ಬಾವುಟ ಹಾರಿಸುತ್ತಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶಾಲಿಜಾಧಾಮಿ ಅವರು Combat Unit ನಲ್ಲಿ Command Appointment ಪಡೆದುಕೊಂಡ ಪ್ರಥಮ ಮಹಿಳಾ ವಾಯುಸೇನಾ ಅಧಿಕಾರಿಯಾಗಿದ್ದಾರೆ. ಅವರು ಸುಮಾರು 3 ಸಾವಿರ ಗಂಟೆಗಳ flying experience- ವಿಮಾನ ಹಾರಟದ ಅನುಭವ ಹೊಂದಿದ್ದಾರೆ. ಇದೇ ರೀತಿ ಭಾರತೀಯ ಸೇನೆಯ ಕ್ಯಾಪ್ಟನ್ ಶಿವಾ ಚೌಹಾಣ್ ಅವರು ಸಿಯಾಚಿನ್ ನಲ್ಲಿ ನೇಮಕಗೊಡ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಾಪಮಾನ ಮೈನಸ್ ಅರವತ್ತು ಡಿಗ್ರಿ ಸೆಲ್ಷಿಯಸ್ ಗೆ ಕುಸಿಯುವ ಸಿಯಾಚಿನ್ ಪ್ರದೇಶದಲ್ಲಿ ಶಿವಾ ಅವರು ಮೂರು ತಿಂಗಳ ಕಾಲ ನೆಲೆಸುತ್ತಾರೆ.
ಸ್ನೇಹಿತರೇ, ಪಟ್ಟಿ ಎಷ್ಟೊಂದು ಉದ್ದವಿದೆಯೆಂದರೆ ಎಲ್ಲರ ಬಗ್ಗೆ ಮಾತನಾಡುವುದು ಸಾಧ್ಯವಾಗುವುದಿಲ್ಲ. ಇಂತಹ ಎಲ್ಲ ಮಹಿಳೆಯರು, ನಮ್ಮ ಹೆಣ್ಣು ಮಕ್ಕಳು, ಭಾರತ ಮತ್ತು ಭಾರತದ ಕನಸಿಗೆ ಬಲ ತುಂಬುತ್ತಿದ್ದಾರೆ. ನಾರಿ ಶಕ್ತಿಯ ಈ ಬಲವು ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೀವಾಳವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ವಿಶ್ವದೆಲ್ಲಡೆ ಸ್ವಚ್ಛ ಇಂಧನ, ಮರುನವೀಕರಿಸಬಹುದಾದ ಇಂಧನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾನು ವಿಶ್ವದ ಜನರನ್ನು ಭೇಟಿ ಮಾಡಿದಾಗ ಅವರು, ಈ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಯಶಸ್ಸಿನ ಬಗ್ಗೆ ಖಂಡಿತವಾಗಿಯೂ ಮಾತುಗಳನ್ನು ಆಡುತ್ತಾರೆ. ವಿಶೇಷವಾಗಿ, ಭಾರತ, ಸೌರ ಇಂಧನದ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ವೇಗವು ನಿಜಕ್ಕೂ ಒಂದು ದೊಡ್ಡ ಸಾಧನೆಯಾಗಿದೆ. ಭಾರತದ ಜನರು ಶತಮಾನಗಳಿಂದಲೂ ಸೂರ್ಯನೊಂದಿಗೆ ವಿಶೇಷ ಅನುಬಂಧ ಹೊಂದಿದ್ದಾರೆ. ನಮ್ಮಲ್ಲಿ ಸೂರ್ಯನ ಶಕ್ತಿಯ ಬಗ್ಗೆ ಇರುವ ವೈಜ್ಞಾನಿಕ ತಿಳುವಳಿಕೆ, ಸೂರ್ಯನ ಆರಾಧನೆಯ ಸಂಪ್ರದಾಯ ಇತರ ಪ್ರದೇಶಗಳಲ್ಲಿ ವಿರಳವಾಗಿ ಕಂಡುಬರುತ್ತದೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಸೌರ ಶಕ್ತಿಯ ಪ್ರಾಮುಖ್ಯವನ್ನು ಅರಿಯುತ್ತಿದ್ದಾರೆ ಮತ್ತು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಲು ಬಯಸುತ್ತಿದ್ದಾರೆಂದು ನನಗೆ ಬಹಳ ಸಂತೋಷವಿದೆ. ‘ಸಬ್ ಕಾ ಪ್ರಯಾಸ್’ ನ ಈ ಸ್ಫೂರ್ತಿಯು ಇಂದು ಭಾರತದ Solar Mission ಅನ್ನು ಮುಂದೆ ನಡೆಸುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ, ಇಂತಹ ಒಂದು ಉತ್ತಮ ಪ್ರಯತ್ನವು ನನ್ನ ಗಮನವನ್ನು ತನ್ನೆಡೆಗೆ ಸೆಳೆಯಿತು. ಇಲ್ಲಿ MSR-Olive Housing Society ಯ ಜನರು, ಸೊಸೈಟಿಯಲ್ಲಿ ಕುಡಿಯುವ ನೀರು, ಲಿಫ್ಟ್ ಮತ್ತು ಲೈಟ್ ನಂತಹ ಸಾಮೂಹಿಕ ಬಳಕೆಯ ವಸ್ತುಗಳನ್ನು, ಈಗ ಸೌರ ಶಕ್ತಿಯಿಂದಲೇ ಚಾಲನೆಗೊಳಿಸಬೇಕೆಂದು ನಿರ್ಧರಿಸಿದರು. ನಂತರ ಸೊಸೈಟಿಯ ಎಲ್ಲ ಜನರು ಒಂದುಗೂಡಿ Solar Panel ಅಳವಡಿಸಿಕೊಂಡರು. ಇಂದು ಈ ಸೋಲಾರ್ ಪ್ಯಾನೆಲ್ ನಿಂದ ಪ್ರತಿ ವರ್ಷ ಸುಮಾರು 90 ಸಾವಿರ ಕಿಲೋವ್ಯಾಟ್ ಗಂಟೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳೂ ಸುಮಾರು 40ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಪ್ರಯೋಜನ ಸೊಸೈಟಿಯಲ್ಲಿ ಪ್ರತಿಯೊಬ್ಬರಿಗೂ ದೊರೆಯುತ್ತಿದೆ. ಸ್ನೇಹಿತರೇ, ಪುಣೆಯಂತೆಯೇ, ದಮನ್-ಡಿಯುದಲ್ಲಿ ಡಿಯು ಒಂದು ಪ್ರತ್ಯೇಕ ಜಿಲ್ಲೆಯಾಗಿದೆ. ಅಲ್ಲಿನ ಜನರು ಕೂಡಾ ಒಂದು ಅದ್ಭುತ ಕೆಲಸ ಮಾಡಿ ತೋರಿಸಿದ್ದಾರೆ. ಡಿಯು ದ್ವೀಪ ಸೋಮನಾಥ್ ಗೆ ಸಮೀಪದಲ್ಲಿದೆ ಎಂಬುದು ನಿಮಗೆ ತಿಳಿದೇ ಇದೆ. ಹಗಲಿನ ವೇಳೆಯಲ್ಲಿ ಎಲ್ಲ ರೀತಿಯ ಅಗತ್ಯ ಕೆಲಸಗಳಿಗಾಗಿ ಶೇಕಡಾ ನೂರರಷ್ಟು ಕ್ಲೀನ್ ಎನರ್ಜಿ ಬಳಕೆ ಮಾಡುತ್ತಿರುವ ಭಾರತದ ಪ್ರಥಮ ಜಿಲ್ಲೆ ಈ ದ್ವೀಪವಾಗಿದೆ. ಡಿಯುವಿನ ಈ ಯಶಸ್ಸಿನ ಹಿಂದಿನ ಮಂತ್ರ ಕೂಡಾ ‘ಎಲ್ಲರ ಪ್ರಯತ್ನ,’ ಅಂದರೆ ‘ಸಬ್ ಕಾ ಪ್ರಯಾಸ್’ ಎಂಬುದೇ ಆಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸಂಪನ್ಮೂಲಗಳ ಸವಾಲಿತ್ತು, ಜನರು ಈ ಸವಾಲಿನ ಉತ್ತರವಾಗಿ ಸೌರ ಶಕ್ತಿಯನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಬರಡು ಭೂಮಿಗಳಲ್ಲಿ ಮತ್ತು ಅನೇಕ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಯಿತು. ಈ ಪ್ಯಾನೆಲ್ ಗಳಿಂದ ಡಿಯುನಲ್ಲಿ ಹಗಲಿನ ವೇಳೆಯಲ್ಲಿ ಎಷ್ಟು ವಿದ್ಯುತ್ತಿನ ಅಗತ್ಯವಿರುತ್ತದೆಯೋ ಅದಕ್ಕಿಂತ ಹಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಸೌರ ಯೋಜನೆಯಿಂದ, ವಿದ್ಯುತ್ ಖರೀದಿಗಾಗಿ ವೆಚ್ಚವಾಗುತ್ತಿದ್ದ ಸುಮಾರು 52 ಕೋಟಿ ರೂಪಾಯಿ ಉಳಿತಾಯವಾಗಿದೆ. ಇದರಿಂದ ಪರಿಸರದ ರಕ್ಷಣೆಯೂ ಆಗಿದೆ.
ಸ್ನೇಹಿತರೇ, ಪುಣೆ ಮತ್ತು ದೀವ್ ನ ಜನರು ಮಾಡಿ ತೋರಿಸಿರುವಂತಹ ಪ್ರಯತ್ನವು ದೇಶಾದ್ಯಂತ ಅನೇಕ ಕಡೆ ಕೂಡಾ ನಡೆಯುತ್ತಿದೆ. ಪರಿಸರ ಮತ್ತು ಪ್ರಕೃತಿಯ ವಿಷಯದಲ್ಲಿ ನಾವು ಭಾರತೀಯರು ಎಷ್ಟು ಸಂವೇದನಾಶೀಲರಾಗಿದ್ದೇವೆ, ಮತ್ತು ನಮ್ಮ ದೇಶ ಯಾವರೀತಿ ಭವಿಷ್ಯದ ಪೀಳಿಗೆಗಾಗಿ ಎಷ್ಟು ಜಾಗರೂಕತೆ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇಂತಹ ಎಲ್ಲ ಪ್ರಯತ್ನಗಳನ್ನೂ ನಾನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಾಲಕಾಲಕ್ಕೆ, ಸ್ಥಿತಿ-ಪರಿಸ್ಥಿತಿಗಳಿಗೆ ಅನುಗುಣವಾಗಿ, ಅನೇಕ ಸಂಪ್ರದಾಯಗಳು ಅಭಿವೃದ್ಧಿ ಹೊಂದುತ್ತಿರುತ್ತವೆ. ಇದೇ ಸಂಪ್ರದಾಯಗಳು ನಮ್ಮ ಸಂಸ್ಕೃತಿಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದು ಪ್ರತಿದಿನಕ್ಕೆ ಬೇಕಾಗಿರುವ ಪ್ರಾಣಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ, ಕಾಶಿಯಲ್ಲಿ ಇಂತಹದ್ದೇ ಸಂಪ್ರದಾಯವೊಂದು ಆರಂಭವಾಯಿತು. ಕಾಶಿ-ತಮಿಳ್ ಸಂಗಮಮ್ ಸಮಯದಲ್ಲಿ, ಕಾಶಿ ಮತ್ತು ತಮಿಳು ಕ್ಷೇತ್ರದ ನಡುವೆ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸಂಭ್ರಮದಿಂದ ಆಚರಿಸಲಾಯಿತು. ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆ ನಮ್ಮ ದೇಶಕ್ಕೆ ಬಲ ತುಂಬುತ್ತದೆ. ನಾವು ಪರಸ್ಪರರ ಬಗ್ಗೆ ಅರಿತುಕೊಂಡಾಗ, ಪರಸ್ಪರರಿಂದ ಕಲಿತಾಗ, ಏಕತೆಯ ಈ ಅನಿಸಿಕೆ ಮತ್ತಷ್ಟು ಗಾಢವಾಗುತ್ತದೆ. ಏಕತೆಯ ಈ ಸ್ಫೂರ್ತಿಯೊಂದಿಗೆ ಮುಂದಿನ ತಿಂಗಳು ಗುಜರಾತ್ ನ ವಿವಿಧ ಭಾಗಗಳಲ್ಲಿ ‘ಸೌರಾಷ್ಟ್ರ-ತಮಿಳ್ ಸಂಗಮಮ್’ನಡೆಯಲಿದೆ. ‘ಸೌರಾಷ್ಟ್ರ-ತಮಿಳ್ ಸಂಗಮಮ್’ ಏಪ್ರಿಲ್ ತಿಂಗಳಿನಲ್ಲಿ 17 ರಿಂದ 30 ರವರೆಗೂ ನಡೆಯಲಿದೆ. ಗುಜರಾತ್ ರಾಜ್ಯಕ್ಕೆ ತಮಿಳುನಾಡಿನೊಂದಿಗೆ ಏನು ಸಂಬಂಧ? ಎಂದು ‘ಮನದ ಮಾತಿನ‘ ಕೆಲವು ಶ್ರೋತೃಗಳು ಆಲೋಚಿಸುತ್ತಿರಬಹುದು. ವಾಸ್ತವದಲ್ಲಿ, ಶತಮಾನಗಳ ಹಿಂದೆಯೇ, ಸೌರಾಷ್ಟ್ರದ ಅನೇಕ ಮಂದಿ ತಮಿಳು ನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಇವರನ್ನು ಇಂದಿಗೂ ಸೌರಾಷ್ಟ್ರೀ ತಮಿಳರು ಎಂದೇ ಕರೆಯಲಾಗುತ್ತಿದೆ. ಇವರ ತಿಂಡಿ-ತಿನಿಸು, ಉಡುಗೆ-ತೊಡುಗೆ, ಜೀವನ ಶೈಲಿ, ಸಾಮಾಜಿಕ ಪದ್ಧತಿಗಳಲ್ಲಿ ಇಂದು ಕೂಡಾ ಸೌರಾಷ್ಟ್ರದ ನೋಟ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಈ ಕಾರ್ಯಕ್ರಮದ ಆಯೋಜನೆ ಕುರಿತಂತೆ ನನಗೆ ತಮಿಳುನಾಡಿನಿಂದ ಬಹಳಷ್ಟು ಮಂದಿ ಸಲಹೆ ನೀಡುತ್ತಾ ಪತ್ರ ಬರೆದಿದ್ದಾರೆ. ಮಧುರೈ ನಿವಾಸಿ ಜಯಚಂದ್ರನ್ ಅವರು ಒಂದು ಭಾವನಾತ್ಮಕ ವಿಷಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರು ಹೇಳಿದ್ದಾರೆ –“ಸಾವಿರ ವರ್ಷಗಳ ನಂತರ, ಮೊದಲ ಬಾರಿಗೆ ಸೌರಾಷ್ಟ್ರ-ತಮಿಳರ ಬಗ್ಗೆ ಆಲೋಚಿಸಲಾಗಿದೆ, ಸೌರಾಷ್ಟ್ರದಿಂದ ತಮಿಳುನಾಡಿಗೆ ಬಂದು ನೆಲೆಸಿರುವ ಜನರ ಬಗ್ಗೆ ಕೇಳಲಾಗುತ್ತಿದೆ” ಜಯಚಂದ್ರನ್ ಅವರು ಈ ಮಾತುಗಳು, ಸಾವಿರಾರು ತಮಿಳು ಸೋದರ-ಸೋದರಿಯರ ಅಭಿವ್ಯಕ್ತಿಯಾಗಿದೆ.
ಸ್ನೇಹಿತರೇ, ‘ಮನದ ಮಾತಿನ’ ಶ್ರೋತೃಗಳಿಗೆ ನಾನು ಅಸ್ಸಾಂಗೆ ಸಂಬಂಧಿಸಿದ ಒಂದು ವಿಷಯ ಹೇಳಲು ಬಯಸುತ್ತೇನೆ. ಇದು ಕೂಡಾ ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆಯನ್ನು ಬಲಿಷ್ಠಗೊಳಿಸುತ್ತದೆ. ನಾವು ವೀರ ಲಾಸಿತ್ ಬೋರ್ ಫುಕನ್ ಅವರ 400 ನೇ ಜಯಂತಿ ಆಚರಿಸುತ್ತಿದ್ದೇವೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ವೀರ ಲಾಸಿತ್ ಬೋರ್ ಫುಕನ್ ಅವರು ಗುವಾಹಟಿಯನ್ನು ಮೊಘಲ್ ಸುಲ್ತಾನರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರು. ಇಂದು ದೇಶಕ್ಕೆ, ಈ ಮಹಾನ್ ಸೇನಾನಿಯ ಅದಮ್ಯ ಸಾಹಸದ ಪರಿಚಯವಾಗುತ್ತಿದೆ. ಕೆಲ ದಿನಗಳ ಹಿಂದೆ ಲಾಸಿತ್ ಬೋರ್ ಫುಕನ್ ಅವರ ಜೀವನಾಧಾರಿತ ಪ್ರಬಂಧ ಬರೆಯುವ ಒಂದು ಅಭಿಯಾನ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು 45 ಲಕ್ಷ ಮಂದಿ ಪ್ರಬಂಧ ಬರೆದು ಕಳುಹಿಸಿದ್ದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಈಗ ಇದೊಂದು ಗಿನ್ನೀಸ್ ದಾಖಲೆಯಾಗಿದೆಯೆಂದು ತಿಳಿದು ಕೂಡಾ ನಿಮಗೆ ಸಂತೋಷವೆನಿಸಬಹುದು. ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ವೀರ ಲಾಸಿತ್ ಬೋರ್ ಫುಕನ್ ಕುರಿತಂತೆ ಬರೆದ ಪ್ರಬಂಧಗಳನ್ನು ಸುಮಾರು 23 ಬೇರೆ ಬೇರೆ ಭಾಷೆಗಳಲ್ಲಿ ಬರೆದು ಕಳುಹಿಸಲಾಗಿತ್ತು. ಈ ಭಾಷೆಗಳಲ್ಲಿ ಅಸ್ಸಾಮಿ ಭಾಷೆ ಮಾತ್ರವಲ್ಲದೇ ಹಿಂದೀ, ಇಂಗ್ಲೀಷ್, ಬಂಗಾಳಿ, ಬೋಡೋ, ನೇಪಾಳಿ, ಸಂಸ್ಕೃತ, ಸಂಥಾಲಿಯಂತಹ ಅನೇಕ ಭಾಷೆಗಳ ಜನರು ಪ್ರಬಂಧ ಬರೆದು ಕಳುಹಿಸಿದ್ದರು. ಈ ಪ್ರಯತ್ನದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರನ್ನೂ ನಾನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕಾಶ್ಮೀರ ಅಥವಾ ಶ್ರೀನಗರದ ವಿಷಯ ಬಂದಾಗ, ಎಲ್ಲಕ್ಕಿಂತ ಮೊದಲು, ನಮ್ಮ ಕಣ್ಣುಗಳ ಮುಂದೆ, ಅಲ್ಲಿನ ಕಣಿವೆಗಳು, ಮತ್ತು ದಾಲ್ ಸರೋವರದ ಚಿತ್ರ ಮೂಡಿ ಬರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ದಾಲ್ ಸರೋವರವನ್ನು ನೋಡಿ ಕಣ್ತುಂಬಿಕೊಳ್ಳಲು ಬಯಸುತ್ತೇವೆ, ಈ ಸರೋವರದಲ್ಲಿ ಮತ್ತೊಂದು ವಿಶೇಷತೆಯಿದೆ, ಅದೆಂದರೆ, ಈ ಸರೋವರವು ತನ್ನ ಸ್ವಾದಿಷ್ಟ ಲೋಟಸ್ ಸ್ಸ್ಟೆಮ್ಸ್– ತಾವರೆಯ ಕಾಂಡಗಳಿಗಾಗಿ ಕೂಡಾ ಹೆಸರುವಾಸಿಯಾಗಿದ್ದು, ಇದನ್ನು ಕಮಲ್ಕಕಡಿ ಎಂದು ಕರೆಯಲಾಗುತ್ತದೆ. ತಾವರೆಯ ಕಾಂಡವನ್ನು ದೇಶದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕಾಶ್ಮೀರದಲ್ಲಿ ಇದನ್ನು ನಾದರೂ ಎಂದು ಕರೆಯುತ್ತಾರೆ. ಕಾಶ್ಮೀರದ ನಾದರೂಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲಿದೆ. ಈ ಬೇಡಿಕೆಯನ್ನು ಮನಗಂಡು, ದಾಲ್ ಸರೋವರದಲ್ಲಿ ನಾದರೂ ಬೆಳೆಯುವ ರೈತರು ಒಂದು FPO ಸಿದ್ಧಪಡಿಸಿದರು. ಈ FPO ದಲ್ಲಿ ಸುಮಾರು 250 ರೈತರು ಒಳಗೊಂಡಿದ್ದಾರೆ. ಇಂದು ಈ ರೈತರು ತಮ್ಮ ನಾದರೂ ಬೆಳೆಯನ್ನು ವಿದೇಶಗಳಿಗೂ ಕಳುಹಿಸಲಾರಂಭಿಸಿದ್ದಾರೆ. ಈಗ ಕೆಲವು ದಿನಗಳ ಹಿಂದೆ ಈ ರೈತರು ಯುಎಇಗೆ ಎರಡು ಲೋಡ್ ಸರಕು ಕಳುಹಿಸಿದ್ದಾರೆ. ಈ ಯಶಸ್ಸು ಕಾಶ್ಮೀರಕ್ಕೆ ಹೆಸರು ತಂದುಕೊಡುತ್ತಿರುವುದು ಮಾತ್ರವಲ್ಲದೇ, ನೂರಾರು ರೈತರ ವರಮಾನ ಹೆಚ್ಚಳಕ್ಕೆ ಕೂಡಾ ಕಾರಣವಾಗುತ್ತಿದೆ.
ಸ್ನೇಹಿತರೇ, ಕಾಶ್ಮೀರದ ಕೃಷಿಗೆ ಸಂಬಂಧಪಟ್ಟಂತೆ ಮತ್ತೊಂದು ಇಂತಹದ್ದೇ ಪ್ರಯತ್ನ ತನ್ನ ಯಶಸ್ಸಿನ ಪರಿಮಳವನ್ನು ಪಸರಿಸುತ್ತಿದೆ. ನಾನು ಯಶಸ್ಸಿನ ಪರಿಮಳದ ಬಗ್ಗೆ ಏಕೆ ಮಾತನಾಡುತ್ತಿದ್ದೇನೆಂದು ನೀವು ಯೋಚಿಸುತ್ತಿರಬಹುದು–ಹೌದು ಇದು ಪರಿಮಳದ ಮಾತು, ಸುಗಂಧದ ಮಾತು.! ವಾಸ್ತವದಲ್ಲಿ, ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಭದರ್ವಾಹ್ ಎಂಬ ಊರು ಇದೆ! ಇಲ್ಲಿನ ರೈತರು, ದಶಕಗಳಿಂದಲೂ ಜೋಳದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು, ಆದರೆ, ಕೆಲವು ರೈತರು ಏನನ್ನಾದರೂ ಹೊಸತನ್ನು ಮಾಡಬೇಕೆಂದು ಆಲೋಚಿಸಿದರು. ಅವರು floriculture ಅಂದರೆ ಹೂಗಳ ಕೃಷಿ ಮಾಡಬೇಕೆಂದು ಆಲೋಚಿಸಿದರು. ಇಂದು ಸುಮಾರು ಎರಡೂವರೆ ಸಾವಿರ ರೈತರು ಲ್ಯಾವೆಂಡರ್ ಕೃಷಿ ಕೈಗೊಂಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದಿಂದ aroma mission ಅಡಿಯಲ್ಲಿ ಸಹಾಯ ಕೂಡಾ ದೊರೆತಿದೆ. ಈ ಹೊಸ ಕೃಷಿಯು ರೈತರ ಆದಾಯವನ್ನು ಸಾಕಷ್ಟು ಹೆಚ್ಚಳ ಮಾಡಿದೆ ಮತ್ತು ಇಂದು ಲ್ಯಾವೆಂಡರ್ ಬೆಳೆಯೊಂದಿಗೆ ಇದರ ಯಶಸ್ಸಿನ ಪರಿಮಳ ಕೂಡಾ ದೂರದೂರವರೆಗೂ ವ್ಯಾಪಿಸುತ್ತಿದೆ.
ಸ್ನೇಹಿತರೇ, ಕಾಶ್ಮೀರದ ವಿಷಯಕ್ಕೆ ಬಂದಾಗ, ಕಮಲದ ಹೂವಿನ ಮಾತು, ಹೂವಿನ ಮಾತು, ಸುಗಂಧದ ಮಾತು, ಹಾಗೆಯೇ ಕಮಲದ ಪುಷ್ಪದಲ್ಲಿ ವಿರಾಜಮಾನಳಾಗಿರುವ ತಾಯಿ ಶಾರದೆಯ ಸ್ಮರಣೆ ಬರುವುದು ಸಹಜವೇ ತಾನೇ. ಕೆಲವು ದಿನಗಳ ಹಿಂದಷ್ಟೇ, ಕುಪ್ವಾರಾದಲ್ಲಿ ತಾಯಿ ಶಾರದೆಯ ಭವ್ಯ ದೇವಾಲಯ ಲೋಕಾರ್ಪಣೆಗೊಂಡಿದೆ. ಶಾರದಾ ಪೀಠಕ್ಕೆ ಬೇಟಿ ನೀಡಲು ಸಾಗುತ್ತಿದ್ದ ಅದೇ ಮಾರ್ಗದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜನತೆ ಈ ದೇವಾಲಯದ ನಿರ್ಮಾಣಕ್ಕೆ ಬಹಳ ಸಹಾಯ ಮಾಡಿದ್ದಾರೆ. ನಾನು ಜಮ್ಮು ಕಾಶ್ಮೀರದ ಜನರಿಗೆ ಈ ಶುಭ ಕಾರ್ಯಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇವು ಈ ಬಾರಿಯ‘ಮನದ ಮಾತು’ ಗಳು. ಮುಂದಿನ ಬಾರಿ, ಮನದ ಮಾತಿನ 100 ನೇ ಸಂಚಿಕೆಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ನೀವೆಲ್ಲರೂ ಸಲಹೆ ಸೂಚನೆಗಳನ್ನು ಖಂಡಿತವಾಗಿಯೂ ಕಳುಹಿಸಿಕೊಡಿ. ಈ ಮಾರ್ಚ್ ತಿಂಗಳಿನಲ್ಲಿ, ನಾವು ಹೋಳಿ ಹಬ್ಬದಿಂದ ನವರಾತ್ರಿಯವರೆಗೂ ಅನೇಕ ಹಬ್ಬಗಳ ಆಚರಣೆಯಲ್ಲಿ ನಿರತರಾಗಿದ್ದೆವು. ರಂಜಾನ್ ನ ಪವಿತ್ರ ತಿಂಗಳು ಕೂಡಾ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶ್ರೀ ರಾಮನವಮಿ ಹಬ್ಬ ಕೂಡಾ ಬರಲಿದೆ. ಆ ನಂತರ ಮಹಾವೀರ ಜಯಂತಿ, ಶುಭ ಶುಕ್ರವಾರ (ಗುಡ್ ಫ್ರೈಡೇ) ಮತ್ತು ಈಸ್ಟರ್ ಹಬ್ಬಗಳು ಕೂಡಾ ಇರಲಿವೆ, ಏಪ್ರಿಲ್ ತಿಂಗಳಿನಲ್ಲಿ ನಾವು, ಇಬ್ಬರು ಭಾರತದ ಮಹಾಪುರುಷರ ಜಯಂತಿಯನ್ನು ಕೂಡಾ ಆಚರಿಸಲಿದ್ದೇವೆ. ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್. ಈ ಇಬ್ಬರು ಮಹಾಪುರುಷರು ಸಮಾಜದಲ್ಲಿನ ಭೇದಭಾವ ತೊಡೆದುಹಾಕಲು ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಇಂದು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ನಾವು, ಇಂತಹ ಮಹಾನ್ ಪುರುಷರಿಂದ ಕಲಿಯಬೇಕಾದ ಮತ್ತು ಪ್ರೇರಣೆ ಹೊಂದುವ ಅಗತ್ಯವಿದೆ. ನಾವು ನಮ್ಮ ಕರ್ತವ್ಯಗಳನ್ನು ಆದ್ಯತೆಯಾಗಿಸಿಕೊಳ್ಳಬೇಕುಸ್ನೇಹಿತರೇ, ಕೆಲವು ಸ್ಥಳಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಆದ್ದರಿಂದ ನೀವೆಲ್ಲರೂ ಜಾಗರೂಕತೆಯಿಂದ ಇರಬೇಕು, ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಮುಂದಿನ ತಿಂಗಳು, ಮನದ ಮಾತಿನ 100 ನೇಸಂಚಿಕೆಯಲ್ಲಿ ನಾವು ಪುನಃ ಭೇಟಿಯಾಗೋಣ, ಅಲ್ಲಿಯವರೆಗೂ ನನಗೆ ವಿದಾಯ ಹೇಳಿ,
ಧನ್ಯವಾದ, ನಮಸ್ಕಾರ
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಮನದ ಮಾತಿನ ಈ 98 ನೇ ಸಂಚಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ನೂರನೇ ಸಂಚಿಕೆಯತ್ತ ಸಾಗುತ್ತಿರುವ ಈ ಪ್ರಯಾಣದಲ್ಲಿ ಮನದ ಮಾತನ್ನು, ನೀವೆಲ್ಲರೂ ಜನಭಾಗಿದಾ ಅಭಿವ್ಯಕ್ತಿಯ ಅದ್ಭುತ ವೇದಿಕೆಯನ್ನಾಗಿ ಮಾಡಿದ್ದೀರಿ. ಪ್ರತಿ ತಿಂಗಳೂ, ಲಕ್ಷಾಂತರ ಸಂದೇಶಗಳಲ್ಲಿ ಎಷ್ಟೊಂದು ಜನರ ಮನದ ಮಾತು ನನಗೆ ತಲುಪುತ್ತದೆ. ನೀವೆಲ್ಲರೂ ನಿಮ್ಮ ಮನದ ಸಾಮರ್ಥ್ಯವನ್ನಂತೂ ಅರಿತೇ ಇದ್ದೀರಿ, ಅಂತೆಯೇ ಸಮಾಜದ ಶಕ್ತಿ ಸಾಮರ್ಥ್ಯದಿಂದ ದೇಶದ ಶಕ್ತಿ ಸಾಮರ್ಥ್ಯ ಹೇಗೆ ಹೆಚ್ಚಾಗುತ್ತದೆಂದು ನಾವು ಮನದ ಮಾತಿನ ಬೇರೆ ಬೇರೆ ಸಂಚಿಕೆಗಳಲ್ಲಿ ನೋಡಿದ್ದೇವೆ, ಅರ್ಥ ಮಾಡಿಕೊಂಡಿದ್ದೇವೆ, ಮತ್ತು ನನ್ನ ಅನುಭವಕ್ಕೂ ಬಂದಿದೆ ಅಂತೆಯೇ ಅಂಗೀಕರಿಸಿದ್ದೇನೆ ಕೂಡಾ. ನಾವು ಮನದ ಮಾತಿನಲ್ಲಿ ಭಾರತದ ಸಾಂಪ್ರದಾಯಿಕ ಆಟಗಳಿಗೆ ಪ್ರೋತ್ಸಾಹ ನೀಡುವ ಕುರಿತು ಮಾತನಾಡಿದ ಆ ದಿನ ನನಗೆ ನೆನಪಿದೆ. ಆ ಸಮಯದಲ್ಲಿ ತಕ್ಷಣವೇ ದೇಶದಲ್ಲಿ ಭಾರತೀಯ ಕ್ರೀಡೆಗಳೊಡನೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಆನಂದಿಸಲು ಮತ್ತು ಅವುಗಳನ್ನು ಕಲಿಯಲು ಒಂದು ಅಲೆಯೇ ಮೇಲೆ ಎದ್ದಿತ್ತು. ಮನದ ಮಾತಿನಲ್ಲಿ ಭಾರತೀಯ ಆಟಿಕೆಗಳ ಮಾತು ಬಂದಾಗ, ದೇಶದ ಜನತೆ ಇದಕ್ಕೆ ಕೂಡಾ ಕೈಜೋಡಿಸಿ ಪ್ರಚಾರಕ್ಕೆ ಮುಂದಾದರು. ಈಗಂತೂ ಭಾರತೀಯ ಆಟಿಕೆಗಳ ಮೇಲೆ ಜನರಲ್ಲಿ ಎಷ್ಟು ಇಷ್ಟ ಮೂಡಿದೆಯೆಂದರೆ, ವಿದೇಶಗಳಲ್ಲೂ ಇವುಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ. ಮನದ ಮಾತಿನಲ್ಲಿ ನಾವು ಕತೆ ಹೇಳುವ ಭಾರತೀಯ ಶೈಲಿಗಳ ಬಗ್ಗೆ ಮಾತನಾಡಿದಾಗ, ಇದರ ಜನಪ್ರಿಯತೆ ಕೂಡಾ ದೂರದೂರವರೆಗೂ ತಲುಪಿತು. ಜನರು ಭಾರತೀಯ ಕತೆ ಹೇಳುವ ಶೈಲಿಗಳತ್ತ ಹೆಚ್ಚು ಹೆಚ್ಚು ಆಕರ್ಷಿತರಾಗತೊಡಗಿದರು.
ಸ್ನೇಹಿತರೇ, ನಿಮಗೆ ನೆನಪಿರಬಹುದು, ಸರ್ದಾರ್ ಪಟೇಲರ ಜಯಂತಿ ಅಂದರೆ ಏಕತಾ ದಿವಸ್ ಸಂದರ್ಭದಲ್ಲಿ ಮನ್ ಕಿ ಬಾತ್ ನಲ್ಲಿ ನಾವು ಮೂರು ಸ್ಪರ್ಧೆಗಳ ಬಗ್ಗೆ ಮಾತನಾಡಿದ್ದೆವು. ಈ ಸ್ಪರ್ಧೆಗಳಲ್ಲಿ ದೇಶಭಕ್ತಿ ಆಧಾರಿತ ಗೀತೆಗಳು, ಲಾಲಿ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳು ಸೇರಿದ್ದವು. ದೇಶಾದ್ಯಂತ 700 ಕ್ಕಿಂತಲೂ ಅಧಿಕ ಜಿಲ್ಲೆಗಳ 5 ಲಕ್ಷಕ್ಕೂ ಅಧಿಕ ಜನರು ಬಹಳ ಉತ್ಸಾಹದಿಂದ ಇವುಗಳಲ್ಲಿ ಪಾಲ್ಗೊಂಡಿದ್ದರೆಂದು ನಿಮಗೆ ಹೇಳಲು ನನಗೆ ಬಹಳ ಹರ್ಷವೆನಿಸುತ್ತದೆ. ಮಕ್ಕಳು, ದೊಡ್ಡವರು, ವೃದ್ಧರೂ ಎಲ್ಲರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು ಮತ್ತು 20 ಕ್ಕೂ ಅಧಿಕ ಭಾಷೆಗಳಲ್ಲಿ ತಮ್ಮ ಪ್ರವೇಶ ಅರ್ಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ನನ್ನ ಕಡೆಯಿಂದ ಅನೇಕ ಶುಭಾಶಯಗಳು. ನಿಮ್ಮಲ್ಲಿ ಪ್ರತಿಯೊಬ್ಬರೂ, ನಿಮಗೆ ನೀವೇ ಛಾಂಪಿಯನ್ ಗಳು, ಕಲಾ ಸಾಧಕರಾಗಿದ್ದೀರಿ. ನಿಮ್ಮೆಲ್ಲರ ಹೃದಯದಲ್ಲಿ ದೇಶದ ವಿವಿಧತೆ ಮತ್ತು ಸಂಸ್ಕೃತಿಯ ಕುರಿತು ಎಷ್ಟೊಂದು ಪ್ರೀತಿಯಿದೆ ಎಂದು ನೀವೆಲ್ಲರೂ ತೋರಿಸಿದ್ದೀರಿ.
ಸ್ನೇಹಿತರೇ, ಇಂದು ಈ ಸಂದರ್ಭದಲ್ಲಿ ನನಗೆ ಲತಾ ಮಂಗೇಶ್ಕರ್, ಲತಾ ದೀದಿಯ ನೆನಪು ಬರುವುದು ಬಹಳ ಸಹಜವಾಗಿದೆ. ಏಕೆಂದರೆ ಈ ಸ್ಪರ್ಧೆ ಪ್ರಾರಂಭವಾದಾಗ, ಲತಾ ಅವರು ದೇಶದ ಜನತೆ ಈ ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬೇಕೆಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಸ್ನೇಹಿತರೇ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕರ್ನಾಟಕದ ಚಾಮರಾಜ ನಗರದ ಜಿಲ್ಲೆಯ ಬಿ. ಎಂ ಮಂಜುನಾಥ್ ಅವರಿಗೆ ಸಂದಿದೆ. ಅವರು ಕನ್ನಡದಲ್ಲಿ ಬರೆದ ಲಾಲಿ ಮಲಗು ಕಂದಾ ಹಾಡಿಗೆ ಈ ಬಹುಮಾನ ಸಂದಿದೆ. ತಮ್ಮ ತಾಯಿ ಮತ್ತು ಅಜ್ಜಿ ಹಾಡುತ್ತಿದ್ದ ಜೋಗುಳದ ಹಾಡುಗಳಿಂದ ಇವರಿಗೆ ಲಾಲಿ ಹಾಡು ಬರೆಯುವ ಪ್ರೇರಣೆ ದೊರೆಯಿತು. ಇದನ್ನು ಕೇಳಿದರೆ ನಿಮಗೆ ಕೂಡಾ ಖಂಡಿತವಾಗಿಯೂ ಸಂತೋಷವಾಗುತ್ತದೆ.
(Kannad Sound Clip (35 seconds) HINDI Translation)
ಮಲಗು ಮಲಗು ಮಗುವೇ ಮಲಗು
ನನ್ನ ಜಾಣ ಮುದ್ದು ಮಗುವೇ ಮಲಗು,
ದಿನ ಕಳೆದು ಕತ್ತಲಾಗಿದೆ,
ನಿದ್ರಾದೇವಿ ಬರುತ್ತಾಳೆ, ತಾರೆಗಳ ತೋಟದಿಂದ.
ಕನಸು ಕಿತ್ತು ತರುತ್ತಾಳೆ, ಮಲಗು ಮಲಗು
ಜೋ ಜೋಜೋ..
ಜೋ. ಜೋಜೋ
(“ಸೋ ಜಾವೋ ಸೋ ಜಾವೋ ಬೇಬಿ,
ಮೇರೆ ಸಮಜ್ ದಾರ್ ಲಾಡಲೇ, ಸೋ ಜಾವೋ
ದಿನ್ ಚಲಾ ಗಯಾ ಹೈ ಔರ್ ಅಂಧೇರಾ ಹೈ
ನಿದ್ರಾ ದೇವೀ ಆ ಜಾಯೇಗೀ, ಸಿತಾರೋಂ ಕೆ ಬಾಗ್ ಸೇ,
ಸಪನೇ ಕಾಟ್ ಲಾಯೇಗೀ,
ಸೋ ಜಾವೋ, ಸೋ ಜಾವೋ,
ಜೋಜೋ..ಜೋ..ಜೋ,”)
ಅಸ್ಸಾಂನಲ್ಲಿ ಕಾಮರೂಪ್ ಜಿಲ್ಲೆಯ ನಿವಾಸಿ ದಿನೇಶ್ ಗೋವಾಲಾ ಅವರು ಈ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ವಿಜೇತರಾಗಿತ್ತಾರೆ. ಇವರು ಬರೆದಿರುವ ಲಾಲಿ ಹಾಡಿನಲ್ಲಿ, ಸ್ಥಳೀಯ ಮಣ್ಣು ಮತ್ತು ಲೋಹದ ಪಾತ್ರೆಗಳನ್ನು ತಯಾರಿಸುವ ಕುಶಲ ಕರ್ಮಿಗಳ ಜನಪ್ರಿಯ ಕಲೆಯ ಛಾಪು ಕೂಡಾ ಇದೆ.
(Assamese Sound Clip (35 seconds) HINDI Translation)
ಕುಂಬಾರಜ್ಜ ಜೋಳಿಗೆ ತಂದಿದ್ದಾರೆ
ಜೋಳಿಗೆಯಲ್ಲಿ ಇರುವುದಾದರೂ ಏನು?
ಕುಂಬಾರಜ್ಜನ ಜೋಳಿಗೆ ತೆರೆದು ನೋಡಿದೆ,
ಜೋಳಿಗೆಯಲ್ಲಿತ್ತು ಸುಂದರ ಬಟ್ಟಲೊಂದು!
ನಮ್ಮ ಪುಟ್ಟ ಹೆಣ್ಣುಮಗು ಕುಂಬಾರನನ್ನು ಕೇಳಿತು,
ಹೇಗಿದೆ ಈ ಪುಟ್ಟ ಬಟ್ಟಲು!
(ಕುಮ್ಹಾರ ದಾದಾ ಝೋಲಾ ಲೇಕರ್ ಆಯೇ ಹೈ,
ಝೋಲೇ ಮೇ ಭಲಾ ಕ್ಯಾ ಹೈ?
ಖೋಲ್ ಕರ್ ದೇಖಾ ಕುಮ್ಹಾರಾ ಕೇ ಝೋಲೇ ಕೋ ತೋ,
ಝೋಲೇ ಮೇ ಥೀ ಪ್ಯಾರೀ ಸೀ ಕಟೋರೀ!
ಹಮಾರೀ ಗುಡಿಯಾ ನೇ ಕುಮ್ಹಾರಾ ಸೇ ಪೂಛಾ,
ಕೈಸೀ ಹೈ ಛೋಟೀ ಸೀ ಕಟೋರೀ!)
ಗೀತೆಗಳು ಮತ್ತು ಲಾಲಿ ಹಾಡಿನಂತೆಯೇ ರಂಗೋಲಿ ಸ್ಪರ್ಧೆ ಕೂಡಾ ಬಹಳ ಜನಪ್ರಿಯವಾಯಿತು. ಇದರಲ್ಲಿ ಪಾಲ್ಗೊಂಡವರು ಒಂದಕ್ಕಿಂತ ಒಂದು ಸುಂದರವಾದ ರಂಗೋಲಿಗಳನ್ನು ಬಿಡಿಸಿ ಕಳುಹಿಸಿದ್ದರು. ಇದರಲ್ಲಿ ಪಂಜಾಬ್ ನ ಕಮಲ್ ಕುಮಾರ್ ಅವರು ಕಳುಹಿಸಿದ ರಂಗೋಲಿಗೆ ಬಹುಮಾನ ದೊರೆಯಿತು. ಇವರು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಹುತಾತ್ಮ ವೀರ ಭಗತ್ ಸಿಂಗ್ ಅವರುಗಳ ಚಿತ್ರಗಳನ್ನು ಬಹಳ ಸುಂದರವಾಗಿ ರಂಗೋಲಿಯಲ್ಲಿ ಮೂಡಿಸಿದ್ದರು. ಮಹಾರಾಷ್ಟ್ರದ ಸಾಂಗ್ಲಿಯ ಸಚಿನ್ ನರೇಂದ್ರ ಅವಸಾರಿ ಅವರು ಜಲಿಯನ್ ವಾಲಾ ಬಾಗ್, ಅಲ್ಲಿ ನಡೆದ ನರಮೇಧ, ಮತ್ತು ಹುತಾತ್ಮ ಉಧಮ್ ಸಿಂಗ್ ಅವರ ಪರಾಕ್ರಮ ರಂಗೋಲಿಯಲ್ಲಿ ಪ್ರದರ್ಶಿತಗೊಳಿಸಿದ್ದರು. ಗೋವಾ ನಿವಾಸಿ ಗುರುದತ್ ವಾಂಟೇಕರ್ ಅವರು ಗಾಂಧೀಜಿಯವರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದರೆ, ಪುದುಚೆರಿಯ ಮಾಲತಿ ಸೆಲ್ವಮ್ ಅವರು ಸ್ವಾತಂತ್ರ್ಯ ಹೋರಾಟದ ಅನೇಕ ಮಹಾನ್ ಸೈನಿಕರ ಚಿತ್ರ ಬಿಡಿಸುವಲ್ಲಿ ತಮ್ಮ ಏಕಾಗ್ರತೆ ತೋರಿಸಿದ್ದರು. ದೇಶ ಭಕ್ತಿ ಗೀತೆಯ ಸ್ಪರ್ಧೆಯಲ್ಲಿ ವಿಜೇತರಾದ ಟಿ ವಿಜಯ ದುರ್ಗಾ ಆಂಧ್ರಪ್ರದೇಶಕ್ಕೆ ಸೇರಿದವರು. ಅವರು ತೆಲುಗಿನಲ್ಲಿ ತಮ್ಮ ಎಂಟ್ರಿ ಕಳುಹಿಸಿ ಕೊಟ್ಟಿದ್ದರು. ಅವರು ತಮ್ಮ ಕ್ಷೇತ್ರದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ನರಸಿಂಹ ರೆಡ್ಡಿ ಅವರಿಂದ ಪ್ರೇರಿತರಾಗಿದ್ದರು. ವಿಜಯ ದುರ್ಗಾ ಅವರ ಎಂಟ್ರಿಯ ಈ ಭಾಗವನ್ನು ನೀವು ಕೂಡಾ ಕೇಳಿಸಿಕೊಳ್ಳಿ
(Telugu Sound Clip (27 seconds) HINDI Translation)
ರೇನಾಡು ಪ್ರಾಂತ್ಯದ ಸೂರ್ಯ
ಹೇ ವೀರ ನರಸಿಂಹ
ಭಾರತ ಸ್ವಾತಂತ್ರ್ಯ ಸಂಗ್ರಾಮ ಮೊಳಕೆಯೊಡೆಯಿತು, ಅಂಕುಶವಾದೆ ನೀ
ಬ್ರಿಟಿಷರ ನ್ಯಾಯರಹಿತ ನಿರಂಕುಶ ದಮನ ಕಾಂಡ ನೋಡಿ
ನಿನ್ನ ನೆತ್ತುರು ಕುದಿಯಿತು, ಬೆಂಕಿಯ ಕಾರಿತು
ರೇನಾಡು ಪ್ರಾಂತ್ಯದ ಸೂರ್ಯ
ಹೇ ವೀರ ನರಸಿಂಹ
(ರೇನಾಡೂ ಪ್ರಾಂತ್ ಕೇ ಸೂರಜ್,
ಹೇ ವೀರ ನರಸಿಂಹ!
ಭಾರತೀಯ ಸ್ವತಂತ್ರತಾ ಸಂಗ್ರಾಮ್ ಕೇ ಅಂಕುರ್ ಹೋ, ಅಂಕುಶ್ ಹೋ!
ಅಂಗ್ರೇಜೋ ಕೇ ನ್ಯಾಯ ರಹಿತ ನಿರಂಕುಶ ದಮನ ಕಾಂಡ್ ಕೋ ದೇಖ್
ಖೂನ್ ತೇರಾ ಸುಲಗಾ ಔರ್ ಆಗ್ ಉಗಲಾ!
ರೇನಾಡೂ ಪ್ರಾಂತ್ ಕೇ ಸೂರಜ್
ಹೇ ವೀರ ನರಸಿಂಹ!)
ತೆಲುಗಿನ ನಂತರ, ಈಗ ನಾನು ನಿಮಗೆ ಮೈಥಿಲಿಯಲ್ಲಿ ಒಂದು ಕ್ಲಿಪ್ ಕೇಳಿಸುತ್ತೇನೆ. ಇದನ್ನು ದೀಪಕ್ ವತ್ಸ್ ಅವರು ಕಳುಹಿಸಿಕೊಟ್ಟಿದ್ದಾರೆ. ಅವರು ಕೂಡಾ ಈ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
(Maithili Sound Clip (30 seconds) HINDI Translation)
ಭಾರತ ಪ್ರಪಂಚದ ಹೆಮ್ಮೆ ಸೋದರಾ
ನಮ್ಮ ದೇಶ ಶ್ರೇಷ್ಠವಾದುದು
ಮೂರು ಕಡೆ ಸಮುದ್ರದಿಂದ ಸುತ್ತುರಿದಿದೆ
ಉತ್ತರದಲ್ಲಿ ಕೈಲಾಸ ಪರ್ವತ ಬಲಿಷ್ಟವಾಗಿದೆ
ಗಂಗಾ, ಯಮುನಾ, ಕೃಷ್ಣಾ, ಕಾವೇರಿ
ಕೋಶಿ, ಕಮಲಾ ಬಲಾನ್ ಇದೆ
ನಮ್ಮ ದೇಶ ಶ್ರೇಷ್ಠವಾದುದು ಸೋದರಾ
ತ್ರಿವರ್ಣ ಧ್ವಜದಲ್ಲಿ ನಮ್ಮ ಜೀವವಿದೆ
(ಭಾರತ್ ದುನಿಯಾ ಕೀ ಶಾನ್ ಹೈ ಭಯ್ಯಾ,
ಅಪನಾ ದೇಶ್ ಮಹಾನ್ ಹೈ,
ತೀನ್ ದಿಶಾ ಸಮುನ್ದರ್ ಸೇ ಧಿರಾ,
ಉತ್ತರ್ ಮೇ ಕೈಲಾಶ್ ಬಲವಾನ್ ಹೈ,
ಗಂಗಾ, ಯಮುನಾ, ಕೃಷ್ಣಾ, ಕಾವೇರಿ,
ಕೋಶೀ, ಕಮಲಾ ಬಲಾನ್ ಹೈ,
ಅಪನಾ ದೇಶ್ ಮಹಾನ್ ಹೈ ಭಯ್ಯಾ,
ತಿರಂಗೇ ಮೇ ಬಸಾ ಪ್ರಾಣ್ ಹೈ )
ಸ್ನೇಹಿತರೇ ನಿಮಗೆ ಇದು ಇಷ್ಟವಾಯಿತೆಂದು ನಾನು ನಂಬುತ್ತೇನೆ. ಸ್ಪರ್ಧೆಗಾಗಿ ಬಂದಂತಹ ಇಂತಹ ಅರ್ಜಿಗಳ ಪಟ್ಟಿ ಬಹಳ ಉದ್ದವಾಗಿದೆ. ನೀವು, ಸಂಸ್ಕೃತಿ ಸಚಿವಾಲಯ ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಕುಟುಂಬದವರೊಡನೆ ನೋಡಿ ಮತ್ತು ಕೇಳಿಸಿಕೊಳ್ಳಿ – ನಿಮಗೆ ಬಹಳ ಪ್ರೇರಣೆ ದೊರೆಯುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬನಾರಸ್ ವಿಷಯವಾಗಿರಲಿ, ಶಹನಾಯಿ ವಿಷಯವಾಗಿರಲಿ, ಉಸ್ತಾದ್ ಬಿಸ್ಮಿಲ್ಲಾ ಖಾನ್ ವಿಷಯವಾಗಿರಲಿ, ನನ್ನ ಗಮನ ಅತ್ತ ಹೋಗುವುದು ಸಹಜವೇ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಈ ಪುರಸ್ಕಾರವನ್ನು ಸಂಗೀತ ಮತ್ತು ಪ್ರದರ್ಶನ ಕಲೆಗಳಲ್ಲಿ ಹೊರಹೊಮ್ಮುತ್ತಿರುವ ಪ್ರತಿಭಾವಂತ ಕಲಾವಿದರಿಗೆ ಪ್ರದಾನ ಮಾಡಲಾಗುತ್ತದೆ. ಇದು ಕಲೆ ಮತ್ತು ಸಂಗೀತ ಪ್ರಪಂಚದ ಜನಪ್ರಿಯತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಏಳಿಗೆಗೂ ತನ್ನ ಕೊಡುಗೆ ನೀಡುತ್ತಿದೆ. ಕಾಲ ಕ್ರಮೇಣ ಜನಪ್ರಿಯತೆ ಕಡಿಮೆಯಾಗುತ್ತಿರುವ ಸಂಗೀತ ವಾದ್ಯಗಳಿಗೆ ಹೊಸ ಜೀವ ತುಂಬಿದ ಕಲಾವಿದರೂ ಇವರಲ್ಲಿ ಸೇರಿದ್ದಾರೆ. ಈಗ ನೀವೆಲ್ಲರೂ ಈ ಸ್ವರವನ್ನು ಗಮನವಿಟ್ಟು ಆಲಿಸಿರಿ...
(Sound Clip (21 seconds) Instrument- ‘सुरसिंगार’, Artist -जॉयदीप मुखर्जी)
ಇದು ಯಾವ ಸಂಗೀತ ವಾದ್ಯವೆಂದು ನಿಮಗೆ ತಿಳಿದಿದೆಯೇ? ನಿಮಗೆ ತಿಳಿಯದೇ ಇರುವ ಸಾಧ್ಯತೆಯೂ ಇದೆ! ಈ ಸಂಗೀತ ವಾದ್ಯದ ಹೆಸರು ಸುರಸಿಂಗಾರ್ ಎಂದಾಗಿದೆ ಮತ್ತು ಈ ಸ್ವರವನ್ನು ಸಂಯೋಜಿಸಿದವರು ಜೊಯಿದೀಪ್ ಮುಖರ್ಜಿಯವರು. ಜೊಯಿದೀಪ್ ಅವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಪುರಸ್ಕಾರಕ್ಕೆ ಭಾಜನರಾದ ಯುವ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಈ ವಾದ್ಯದ ಸ್ವರವನ್ನು ಸುಮಾರು 50 ಮತ್ತು 60 ದಶಗಳಿಂದ ಕೇಳುವುದು ಅಸಾಧ್ಯವಾಗಿತ್ತು, ಆದರೆ ಜೊಯಿದೀಪ್ ಅವರು ಸುರ್ ಸಿಂಗಾರ್ ಅನ್ನು ಪುನಃ ಜನಪ್ರಿಯಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಸೋದರಿ ಉಪ್ಲಪೂ ನಾಗಮಣಿಯವರ ಪ್ರಯತ್ನ ಕೂಡಾ ಬಹಳ ಪ್ರೇರಣಾದಾಯಕವಾಗಿದೆ, ಇವರಿಗೆ ಮ್ಯಾಂಡೋಲಿನ್ ನಲ್ಲಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತಕ್ಕಾಗಿ ಈ ಪುರಸ್ಕಾರ ನೀಡಲಾಗಿದೆ. ಸಂಗ್ರಾಮ್ ಸಿಂಗ್ ಸುಹಾಸ್ ಭಂಡಾರೆ ಅವರಿಗೆ ವಾರ್ಕರಿ ಕೀರ್ತನ್ ಗಾಗಿ ಈ ಪುರಸ್ಕಾರ ಸಂದಿದೆ. ಈ ಪಟ್ಟಿಯಲ್ಲಿ ಕೇವಲ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕಲಾವಿದರು ಮಾತ್ರ ಅಲ್ಲ – ವಿ ದುರ್ಗಾ ದೇವಿಯವರು, ನಾಟ್ಯದ ಒಂದು ಪ್ರಾತೀನ ಶೈಲಿಯಾದ ಕರಕಟ್ಟಂದಿ ಪುರಸ್ಕೃತರಾಗಿದ್ದಾರೆ. ಈ ಪುರಸ್ಕಾರಕ್ಕೆ ಭಾಜನರಾದ ರಾಜ್ ಕುಮಾರ್ ನಾಯಕ್ ಅವರು, ತೆಲಂಗಾಣದ 31 ಜಿಲ್ಲೆಗಳಲ್ಲಿ, 101 ದಿನಗಳ ಕಾಲ ನಡೆಯುವ ಪೆರಿನೀ ಒಡಿಸೀ ಆಯೋಜಿಸಿದ್ದರು. ಇಂದು ಜನರು ಅವರನ್ನು ಪೆರಿನಿ ರಾಜ್ ಕುಮಾರ್ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ. ಪೆರಿನೀ ನಾಟ್ಯ, ಭಗವಂತ ಶಿವನಿಗೆ ಅರ್ಪಿಸುವ ಒಂದು ನೃತ್ಯವಾಗಿದ್ದು, ಇದು ಕಾಕತೀಯ ರಾಜವಂಶಸ್ಥರ ಕಾಲದಲ್ಲಿ ಬಹಳ ಜನಪ್ರಿಯವಾಗಿತ್ತು. ಈ ರಾಜವಂಶದ ಬೇರುಗಳು ಇಂದಿನ ತೆಲಂಗಾಣದೊಂದಿಗೆ ಬೆಸೆದುಕೊಂಡಿವೆ. ಈ ಪುರಸ್ಕಾರಕ್ಕೆ ಭಾಜನರಾಗಿರುವ ಮತ್ತೊಬ್ಬ ವ್ಯಕ್ತಿಯೆಂದರೆ ಸಾಯಿಖೋಮ್ ಸುರ್ ಚಂದ್ರಾ ಸಿಂಗ್. ಮೈತೇಯಿ ಪುಂಗ್ ವಾದ್ಯ ತಯಾರಿಸುವುದರಲ್ಲಿ ಪಾಂಡಿತ್ಯ ಸಾಧಿಸಿ ಇವರು ಹೆಸರಾಗಿದ್ದಾರೆ. ಈ ವಾದ್ಯ ಮಣಿಪುರದೊಂದಿಗೆ ಬೆಸೆದುಕೊಂಡಿದೆ. ಪೂರಣ್ ಸಿಂಗ್ ಓರ್ವ ದಿವ್ಯಾಂಗ ಕಲಾವಿದರಾಗಿದ್ದು, ರಾಜೂಲಾ-ಮಲುಶಾಹೀ, ನ್ಯೂಯೋಲಿ, ಹುಡಕ ಬೋಲ್, ಜಾಗರ್ ನಂತಹ ವಿಭಿನ್ನ ಸಂಗೀತ ವಿಧಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಆಡಿಯೋ ರೆಕಾರ್ಡಿಂಗ್ ಗಳನ್ನು ಕೂಡಾ ಇವರು ಸಿದ್ಧಪಡಿಸಿದ್ದಾರೆ. ಉತ್ತರಾಖಂಡ್ ನ ಜನಪದ ಸಂಗೀತದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅನೇಕ ಬಹುಮಾನಗಳನ್ನು ಪೂರಣ್ ಸಿಂಗ್ ಗಳಿಸಿದ್ದಾರೆ. ಸಮಯದ ಮಿತಿಯ ಕಾರಣದಿಂದಾಗಿ ಪ್ರಶಸ್ತಿ ಪುರಸ್ಕೃತರೆಲ್ಲರ ಬಗ್ಗೆ ನನಗೆ ಮಾತನಾಡಲು ಸಾಧ್ಯವಾಗುವುದಿಲ್ಲ, ಆದರೆ, ನೀವೆಲ್ಲರೂ ಇವರೆಲ್ಲರ ಬಗ್ಗೆ ಖಂಡಿತಾ ಓದುತ್ತೀರೆಂಬ ನಂಬಿಕೆ ನನಗಿದೆ. ಎಲ್ಲಾ ಕಲಾವಿದರೂ, ಪ್ರದರ್ಶನ ಕಲೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಎಲ್ಲರಿಗೂ ತಳಮಟ್ಟದಿಂದಲೂ ಸ್ಪೂರ್ತಿ ನೀಡುತ್ತಲೇ ಇರುತ್ತಾರೆ ಎಂಬ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕ್ಷಿಪ್ರಗತಿಯಿಂದ ಮುಂದೆ ಸಾಗುತ್ತಿರುವ ನಮ್ಮ ದೇಶದಲ್ಲಿ ಡಿಜಿಟಲ್ ಭಾರತದ ಸಾಮರ್ಥ್ಯ ಪ್ರತಿಯೊಂದು ಮೂಲೆಯಲ್ಲೂ ಕಂಡುಬರುತ್ತಿದೆ. Digital India ದ ಸಾಮರ್ಥ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ವಿಧ ವಿಧದ ಆಪ್ ಗಳ ಪಾತ್ರ ಬಹಳ ದೊಡ್ಡದಿರುತ್ತದೆ. ಅಂತಹದ್ದೇ ಒಂದು ಆಪ್ E-Sanjeevani . ಈ ಆಪ್ ಮೂಲಕ Tele-consultation ಅಂದರೆ ದೂರದಲ್ಲಿದ್ದುಕೊಂಡೇ, ವಿಡಿಯೋ ಕಾನ್ಫರೆನ್ಸ್ ಮುಖಾಂತರ ನೀವು ತಮ್ಮ ಅನಾರೋಗ್ಯ ಕುರಿತಂತೆ ವೈದ್ಯರೊಂದಿಗೆ ಸಮಾಲೋಚಿಸಬಹುದು. ಈ ಅನ್ವಯಿಕವನ್ನು ಬಳಸಿ ಇದುವರೆಗೂ ಟೆಲಿ ಕನ್ಸಲ್ಟೇಷನ್ ಮಾಡಿರುವವರ ಸಂಖ್ಯೆ 10 ಕೋಟಿ ದಾಟಿದೆ. ನೀವು ಊಹೆ ಮಾಡಬಹುದು, ವಿಡಿಯೋ ಕಾನ್ಫರೆನ್ಸ್ ಮುಖಾಂತರ 10 ಕೋಟಿ ಸಮಾಲೋಚನೆಗಳು! ರೋಗಿ ಮತ್ತು ವೈದ್ಯರ ನಡುವೆ ಅದ್ಭುತ ಸಂಬಂಧ – ಇದೊಂದು ಬಹುದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ನಾನು ಎಲ್ಲಾ ವೈದ್ಯರಿಗೆ ಮತ್ತು ಇದರ ಪ್ರಯೋಜನ ಪಡೆದುಕೊಂಡಿರುವ ಎಲ್ಲಾ ರೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತದ ಜನತೆ, ತಂತ್ರಜ್ಞಾನವನ್ನು ಯಾವರೀತಿ ತಮ್ಮ ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ, ಎನ್ನುವುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಕೊರೋನಾ ಸಮಯದಲ್ಲಿ ಇ-ಸಂಜೀವಿನಿ ಆಪ್ ಮೂಲಕ ಟೆಲಿ ಕನ್ಸಲ್ಟೇಷನ್ ಎನ್ನುವುದು ಜನರಿಗೆ ಯಾವರೀತಿ ಒಂದು ದೊಡ್ಡ ವರದಾನವಾಯಿತು ಎಂಬುದನ್ನು ನಾವು ನೋಡಿದ್ದೇವೆ. ಮನದ ಮಾತಿನಲ್ಲಿ ಓರ್ವ ವೈದ್ಯರೊಂದಿಗೆ ಮತ್ತು ಓರ್ವ ರೋಗಿಯೊಂದಿಗೆ ನಾವು ಮಾತನಾಡಬಾರದೇಕೆ, ಸಂವಾದ ನಡೆಸಬಾರದೇಕೇ ಮತ್ತು ಇದನ್ನು ನಿಮಗೆ ತಲುಪಿಸಬಾರದೇಕೆ ಎಂದು ನನಗೆ ಅನಿಸಿತು. ಟೆಲಿ ಕನ್ಸಲ್ಟೇಷನ್ ಜನರಿಗೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಯುವ ಪ್ರಯತ್ನ ಮಾಡಿದೆವು. ನಮ್ಮೊಂದಿಗೆ ಸಿಕ್ಕಿಂನ ವೈದ್ಯ ಡಾಕ್ಟರ್ ಮದನ್ ಮಣಿ ಅವರಿದ್ದಾರೆ. ಡಾಕ್ಟರ್ ಮದನ್ ಮಣಿ ಸಿಕ್ಕಿಂ ನಿವಾಸಿಗಳೇನೋ ನಿಜ ಆದರೆ ಅವರು ಧನ್ ಬಾದ್ ನಲ್ಲಿ ತಮ್ಮ ಎಂಬಿಬಿಎಸ್ ಪದವಿ ಪಡೆದರು ಮತ್ತು ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಡಿ ಪದವಿ ಪಡೆದರು. ಇವರು ಗ್ರಾಮೀಣ ಭಾಗದ ನೂರಾರು ಜನರೊಂದಿಗೆ ಟೆಲಿ ಕನ್ಸಲ್ಟೇಷನ್ ನಡೆಸಿದ್ದಾರೆ.
ಪ್ರಧಾನ ಮಂತ್ರಿ: ನಮಸ್ಕಾರ.. ಮದನ್ ಮಣಿ ಅವರೆ
ಡಾ. ಮದನ್ ಮಣಿ: ನಮಸ್ಕಾರ ಸರ್
ಪ್ರಧಾನ ಮಂತ್ರಿ: ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ
ಡಾ. ಮದನ್ ಮಣಿ: ಹೇಳಿ ಸರ್...
ಪ್ರಧಾನ ಮಂತ್ರಿ: ನೀವು ಬನಾರಸ್ ನಲ್ಲಿ ಓದಿದ್ದೀರಲ್ಲವೇ
ಡಾ. ಮದನ್ ಮಣಿ: ಹೌದು ಸರ್ ನಾನು ಬನಾರಸ್ ನಲ್ಲಿ ಓದಿದ್ದೇನೆ
ಪ್ರಧಾನ ಮಂತ್ರಿ: ನಿಮ್ಮ ವೈದ್ಯಕೀಯ ಶಿಕ್ಷಣ ಅಲ್ಲಿಯೇ ಆಯಿತಲ್ಲವೇ
ಡಾ. ಮದನ್ ಮಣಿ: ಹೌದು ಸರ್ ಹೌದು
ಪ್ರಧಾನ ಮಂತ್ರಿ: ಹಾಗಿದ್ದರೆ ಅಲ್ಲಿ ಇದ್ದಾಗಿನ ಬನಾರಸ್ ಮತ್ತು ಈಗಿನ ಬದಲಾವಣೆಯಾಗಿರುವ ಬನಾರಸ್ ನೋಡಲು ಹೋಗಿರುವಿರೋ ಅಥವಾ ಹೋಗಿಲ್ಲವೋ|
ಡಾ. ಮದನ್ ಮಣಿ: ಪ್ರಧಾನ ಮಂತ್ರಿಯವರೇ ನಾನು ಸಿಕ್ಕಿಂಗೆ ಹಿಂದಿರುಗಿ ಬಂದಾಗಿನಿಂದ ನನಗೆ ಹೋಗಲು ಸಾಧ್ಯವಾಗಿಲ್ಲ, ಆದರೆ ಅಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದು ನಾನು ಕೇಳಿದ್ದೇನೆ.
ಪ್ರಧಾನ ಮಂತ್ರಿ: ನೀವು ಬನಾರಸ್ ನಿಂದ ಹೊರಟುಬಂದು ಎಷ್ಟು ವರ್ಷಗಳಾಗಿವೆ?
ಡಾ. ಮದನ್ ಮಣಿ: ನಾನು ಬನಾರಸ್ ನಿಂದ 2006 ರಲ್ಲಿ ಹೊರಟು ಬಂದೆ ಸರ್
ಪ್ರಧಾನ ಮಂತ್ರಿ: ಓ.. ಹಾಗಾದರೆ ನೀವು ಖಂಡಿತಾ ಹೋಗಲೇ ಬೇಕು
ಡಾ. ಮದನ್ ಮಣಿ: ಹೌದು... ಹೌದು
ಪ್ರಧಾನ ಮಂತ್ರಿ: ಸರಿ, ನೀವು ಸಿಕ್ಕಿಂನಲ್ಲಿ ದೂರ ಬೆಟ್ಟಗುಡ್ಡಗಳ ಪ್ರಾಂತ್ಯದಲ್ಲಿ ನೆಲೆಸಿ ಅಲ್ಲಿನ ಜನರಿಗೆ ಟೆಲಿ ಕನ್ಸಲ್ಟೇಷನ್ ನ ಬಹು ದೊಡ್ಡ ಸೇವೆ ನೀಡುತ್ತೀರೆಂದು ಕೇಳಿ ನಿಮಗೆ ನಾನು ಕರೆ ಮಾಡುತ್ತಿದ್ದೇನೆ.
. ಮದನ್ ಮಣಿ: ಸರಿ ಸರ್
ಪ್ರಧಾನ ಮಂತ್ರಿ: ಮನದ ಮಾತಿನ ಶ್ರೋತೃಗಳಿಗೆ ನಾನು ನಿಮ್ಮ ಅನುಭವ ಕೇಳಿಸಬೇಕೆಂದು ಬಯಸುತ್ತೇನೆ.
ಡಾ. ಮದನ್ ಮಣಿ: ಸರಿ ಸರ್
ಪ್ರಧಾನ ಮಂತ್ರಿ: ಅನುಭವ ಹೇಗಿತ್ತೆಂದು ನನಗೆ ಹೇಳಿ?
ಡಾ. ಮದನ್ ಮಣಿ: ಅನುಭ ಬಹಳ ಚೆನ್ನಾಗಿತ್ತು ಪ್ರಧಾನ ಮಂತ್ರಿಯವರೆ. ಏನೆಂದರೆ ಸಿಕ್ಕಿಂನಲ್ಲಿ ಅತ್ಯಂತ ಸಮೀಪವಿರುವ ಪಿಹೆಚ್ ಸಿ ಗೆ ಹೋಗಬೇಕೆಂದರೂ ಜನರು ವಾಹನದಲ್ಲಿ ಹೋಗಬೇಕು ಮತ್ತು ಕನಿಷ್ಠ ಒಂದು ಅಥವಾ ಎರಡುನೂರು ರೂಪಾಯಿ ತೆಗೆದುಕೊಂಡು ಹೋಗಬೇಕಿತ್ತು. ಅಲ್ಲದೇ ವೈದ್ಯರು ಸಿಗುತ್ತಾರೋ ಇಲ್ಲವೋ ಅದು ಕೂಡಾ ಸಮಸ್ಯೆಯೇ. ಹೀಗಾಗಿ ದೂರ ದೂರದ ಜನರು ಟೆಲಿ ಕನ್ಸಲ್ಟೇಷನ್ ಮುಖಾಂತರ ನಮ್ಮೊಂದಿಗೆ ಸಂಪರ್ಕ ಹೊಂದುತ್ತಿದ್ದರು. Health & Wellness Centre ನ CHOಗಳು ನಮ್ಮನ್ನು ಜನರೊಂದಿಗೆ ಕನೆಕ್ಟ್ ಮಾಡಿಸುತ್ತಾರೆ. ಮತ್ತು ನಮಗೆ ರೋಗಿಗಳ ವರದಿಗಳು, ಅವರ ಪ್ರಸಕ್ತ ಸ್ಥಿತಿ ಈ ಎಲ್ಲಾ ವಿಷಯಗಳ ಕುರಿತು ನಮಗೆ ತಿಳಿಯಪಡಿಸುತ್ತಾರೆ.
ಪ್ರಧಾನ ಮಂತ್ರಿ: ಅಂದರೆ ದಾಖಲೆಗಳನ್ನು ವರ್ಗಾವಣೆ ಮಾಡುತ್ತಾರೆ.
ಡಾ. ಮದನ್ ಮಣಿ: ಹೌದು ಸರ್. ದಾಖಲೆಗಳ ವರ್ಗಾವಣೆ ಮಾಡುತ್ತಾರೆ ಮತ್ತು ಒಂದುವೇಳೆ ವರ್ಗಾವಣೆ ಮಾಡಲಾಗದೇ ಇದ್ದಲ್ಲಿ, ಅದರಲ್ಲಿರುವುದನ್ನು ನಮಗೆ ಓದಿ ಹೇಳುತ್ತಾರೆ.
ಪ್ರಧಾನ ಮಂತ್ರಿ: ಅಂದರೆ ಕ್ಷೇಮ ಕೇಂದ್ರದ ವೈದ್ಯರು ಹೇಳುತ್ತಾರೆ
ಡಾ. ಮದನ್ ಮಣಿ: ಹೌದು, ಕ್ಷೇಮ ಕೇಂದ್ರದಲ್ಲಿರುವ ಸಿಹೆಚ್ ಓ, ಸಮುದಾಯ ಆರೋಗ್ಯ ಅಧಿಕಾರಿ.
ಪ್ರಧಾನ ಮಂತ್ರಿ: ಮತ್ತು ರೋಗಿ ತಮ್ಮ ತೊಂದರೆಗಳನ್ನು ನಿಮಗೆ ನೇರವಾಗಿ ತಿಳಿಯಪಡಿಸುತ್ತಾರೆ.
ಡಾ. ಮದನ್ ಮಣಿ: ಹೌದು. ರೋಗಿ ಕೂಡಾ ತಮ್ಮ ಸಮಸ್ಯೆಗಳನ್ನು ನಮಗೆ ಹೇಳುತ್ತಾರೆ. ಹಿಂದಿನ ರೆಕಾರ್ಡ್ ಗಳನ್ನು ನೋಡಿ ಇನ್ನೇನಾದರೂ ಹೊಸ ಸಮಸ್ಯೆ ಇದ್ದರೆ ಅದನ್ನು ನಾವು ತಿಳಿದುಕೊಳ್ಳಬೇಕು. ಅಂದರೆ ರೋಗಿಗೆ Chest Auscultate ಮಾಡಬೇಕಾದರೆ, ಅವರ ಕಾಲು ಊದಿಕೊಂಡಿದೆಯೇ ಅಥವಾ ಇಲ್ಲವೇ? ಒಂದುವೇಳೆ CHO ನೋಡಿಲ್ಲವೆಂದರೆ, ಕಾಲು ಊದಿದೆಯೇ ಅಥವಾ ಇಲ್ಲವೇ ಎಂದು ನೋಡಿ, ಕಣ್ಣುಗಳನ್ನು ನೋಡಿ, ರಕ್ತ ಹೀನತೆ ಇದೆಯೋ ಇಲ್ಲವೋ ನೋಡಿ, ಒಂದುವೇಳೆ ಅವರಿಗೆ ಕೆಮ್ಮು ಇದ್ದಲ್ಲಿ Chest ಅನ್ನು Auscultate ಮಾಡಿ ಮತ್ತು ಶಬ್ದ ಬರುತ್ತಿದೆಯೋ ಇಲ್ಲವೋ ಎಂದು ಕಂಡುಕೊಳ್ಳಿ ಎಂದು ಹೇಳುತ್ತೇವೆ.
ಪ್ರಧಾನ ಮಂತ್ರಿ: ನೀವು ವಾಯ್ಸ್ ಕಾಲ್ ನಲ್ಲಿ ಮಾತನಾಡುತ್ತೀರೋ ಅಥವಾ ವಿಡಿಯೋ ಕಾಲ್ ಕೂಡಾ ಬಳಸುತ್ತೀರೋ ?
ಡಾ. ಮದನ್ ಮಣಿ: ಸರ್, ವಿಡಿಯೋ ಕಾಲ್ ಬಳಸುತ್ತೇವೆ
ಪ್ರಧಾನ ಮಂತ್ರಿ: ಅಂದರೆ ನೀವು ರೋಗಿಯನ್ನು ನೋಡುತ್ತೀರಿ ಕೂಡಾ ಅಲ್ಲವೇ
ಡಾ. ಮದನ್ ಮಣಿ: ಹೌದು ಸರ್. ರೋಗಿಯನ್ನು ನೋಡುತ್ತೇವೆ ಕೂಡಾ
ಪ್ರಧಾನ ಮಂತ್ರಿ: ರೋಗಿಗೆ ಯಾವ ರೀತಿಯ ಅನಿಸಿಕೆ ಉಂಟಾಗುತ್ತದೆ ?
ಡಾ. ಮದನ್ ಮಣಿ: ರೋಗಿಗೆ ಸಂತೋಷವಾಗುತ್ತದೆ ಏಕೆಂದರೆ ಅವರು ವೈದ್ಯರನ್ನು ಸಮೀಪದಿಂದ ನೋಡುತ್ತಾರೆ. ಔಷಧ ಕಡಿಮೆ ಮಾಡಬೇಕೋ, ಜಾಸ್ತಿ ಮಾಡಬೇಕೋ ಎಂದು ಅವರಿಗೆ ಗೊಂದಲವಿರುತ್ತದೆ. ಏಕೆಂದರೆ ಸಿಕ್ಕಿಂನಲ್ಲಿರುವ ಜನರಲ್ಲಿ ರೋಗಿಗಳು ಮಧು ಮೇಹ ಮತ್ತು ಹೈಪರ್ ಟೆನ್ಷನ್ ನಿಂದ ಬರುತ್ತಾರೆ ಮತ್ತು ಮಧು ಮೇಹ ಮತ್ತು ಹೈಪರ್ ಟೆನ್ಷನ್ ಔಷಧಗಳನ್ನು ಬದಲಾಯಿಸುವುದಕ್ಕಾಗಿ ಅವರು ವೈದ್ಯರನ್ನು ಕಾಣಲು ಬಹಳ ದೂರ ಹೋಗಬೇಕಾಗುತ್ತದೆ. ಆದರೆ, ಟೆಲಿ ಕನ್ಸಲ್ಟೇಷನ್ ಮುಖಾಂತರ ವೈದ್ಯರು ಅಲ್ಲೇ ಸಿಗುತ್ತಾರೆ ಮತ್ತು ಔಷಧ ಕೂಡಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಉಚಿತ ಔಷಧ ಉಪಕ್ರಮದ ಅಡಿಯಲ್ಲಿ ದೊರೆಯುತ್ತದೆ. ಹೀಗಾಗಿ ಅವರು ಅಲ್ಲಿಂದಲೇ ಔಷಧವನ್ನೂ ತೆಗೆದುಕೊಂಡು ಹೋಗುತ್ತಾರೆ.
ಪ್ರಧಾನಮಂತ್ರಿಯವರು: ಸರಿ ಮದನ್ ಮಣಿ ಅವರೆ, ರೋಗಿಗಳಿಗೆ ಒಂದು ಅಭ್ಯಾಸವಿರುತ್ತದೆ. ಎಲ್ಲಿವರೆಗೆ ವೈದ್ಯರು ಬರುವುದಿಲ್ಲ, ವೈದ್ಯರು ತಮ್ಮನ್ನು ನೋಡುವುದಿಲ್ಲ, ಅವರು ತೃಪ್ತಿ ಹೊಂದುವುದಿಲ್ಲ ಎಂಬುದು ನಿಮಗೆ ತಿಳಿದಿದೆ ಮತ್ತು ರೋಗಿಯನ್ನು ನೋಡಬೇಕು ಎಂದು ವೈದ್ಯರಿಗೆ ಕೂಡ ಅನಿಸುತ್ತದೆ. ಈಗ ಅಲ್ಲಿ ಎಲ್ಲಾ ಸಮಾಲೋಚನೆಗಳನ್ನು ಟೆಲಿಕಾಂ ಮೂಲಕವೇ ಮಾಡಲಾಗುತ್ತದೆ, ಆದ್ದರಿಂದ ವೈದ್ಯರಿಗೆ ಏನು ಅನಿಸುತ್ತದೆ, ರೋಗಿಗೆ ಏನು ಅನಿಸುತ್ತದೆ?
ಡಾ. ಮದನ್ ಮಣಿ: ಹೌದು, ರೋಗಿಯು ವೈದ್ಯರನ್ನು ನೋಡಬೇಕು ಎಂದು ಭಾವಿಸಿದಂತೆ, ನಾವು ಏನನ್ನು ನೋಡಬೇಕು ಎಂದು ಅನಿಸುತ್ತದೆಯೋ ಅದನ್ನು CHO ಗೆ ನೋಡಲು ಹೇಳಿ ವೀಡಿಯೊ ಮೂಲಕವೇ ನಾವು ನೋಡಲು ಹೇಳಿ ಮಾತನಾಡುತ್ತೇವೆ. ಕೆಲವೊಮ್ಮೆ, ವೀಡಿಯೊದಲ್ಲಿಯೇ ರೋಗಿಯನ್ನು ಹತ್ತಿರ ಬರುವಂತೆ ಹೇಳಿ, ಅವನು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಮಗೆ ತೋರಿಸಲು ಹೇಳುತ್ತೇವೆ. ಯಾರಿಗಾದರೂ ಚರ್ಮದ ಸಮಸ್ಯೆ ಇದ್ದರೆ, skin problem ಇದ್ದರೆ ಅವರು ವೀಡಿಯೊದ ಮೂಲಕವೇ ನಮಗೆ ತೋರಿಸುತ್ತಾರೆ. ಹೀಗೆ ಆ ರೋಗಿಯೂ ತೃಪ್ತರಾಗಿರುತ್ತಾರೆ.
ಪ್ರಧಾನಮಂತ್ರಿಯವರು: ಅವರಿಗೆ ಚಿಕಿತ್ಸೆ ನೀಡಿದ ನಂತರ, ಅವರು ತೃಪ್ತಿ ಪಡೆಯುತ್ತಾರೆಯೇ, ಅವರು ಏನು ಭಾವಿಸುತ್ತಾರೆ? ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆಯೇ?
ಡಾ.ಮದನ್ ಮಣಿ: ಹೌದು, ನನಗೆ ತುಂಬಾ ತೃಪ್ತಿ ಎನಿಸುತ್ತದೆ. ರೋಗಿಗಳಿಗೂ ತೃಪ್ತಿ ಸಿಗುತ್ತದೆ ಸರ್. ನಾನು ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿದ್ದೇನೆ ಜೊತೆ ಜೊತೆಗೆ ಟೆಲಿ-ಕನ್ಸಲ್ಟೇಶನ್ ಮಾಡುವುದರಿಂದ, ಫೈಲ್ ಜೊತೆಗೆ ರೋಗಿಯನ್ನು ನೋಡುವುದು ನನಗೆ ತುಂಬಾ ಒಳ್ಳೆಯ, ಅನುಭವವನ್ನು ನೀಡುತ್ತಿದೆ.
ಪ್ರಧಾನ ಮಂತ್ರಿ: ಸರಾಸರಿ ಎಷ್ಟು ರೋಗಿಗಳನ್ನು ಟೆಲಿ ಕನ್ಸಲ್ಟೇಶನ್ ಮೂಲಕ ಪರೀಕ್ಷಿಸುತ್ತೀರಿ?
ಡಾ.ಮದನ್ ಮಣಿ: ಇಲ್ಲಿಯವರೆಗೆ ನಾನು 536 ರೋಗಿಗಳನ್ನು ನೋಡಿದ್ದೇನೆ.
ಪ್ರಧಾನಿಯವರು: ಓಹ್... ಅಂದರೆ ನೀವು ಅದನ್ನು ಸಾಕಷ್ಟು ಪರಿಣಿತಿ ಹೊಂದಿದ್ದೀರಿ.
ಡಾ.ಮದನ್ ಮಣಿ: ಹೌದು, ಒಳ್ಳೇ ಅನುಭವ
ಪ್ರಧಾನಿಯವರು: ಒಳ್ಳೆಯದು, ನಿಮಗೆ ಶುಭ ಹಾರೈಕೆಗಳು. ಈ ತಂತ್ರಜ್ಞಾನವನ್ನು ಬಳಸಿಕೊಂಡು, ನೀವು ಸಿಕ್ಕಿಂನ ದೂರದ ಕಾಡುಗಳಲ್ಲಿ, ಪರ್ವತಗಳಲ್ಲಿ ವಾಸಿಸುವ ಜನರಿಗೆ ಅಂತಹ ದೊಡ್ಡ ಸೇವೆಯನ್ನು ಮಾಡುತ್ತಿದ್ದೀರಿ. ಮತ್ತು ನಮ್ಮ ದೇಶದ ದೂರದ ಪ್ರದೇಶಗಳಲ್ಲೂ ಇಂತಹ ತಂತ್ರಜ್ಞಾನದ ಸದ್ಬಳಕೆಯಾಗುತ್ತಿರುವುದು ಸಂತಸದ ವಿಚಾರ. ನನ್ನ ಪರವಾಗಿ ನಿಮಗೆ ಅನಂತ ಅಭಿನಂದನೆಗಳು.
ಡಾ. ಮದನ್ ಮಣಿ: ಧನ್ಯವಾದಗಳು!
ಸ್ನೇಹಿತರೇ, ಇ-ಸಂಜೀವಿನಿ ಆ್ಯಪ್ ಅವರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದು ಡಾ.ಮದನ್ ಮಣಿ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಡಾ. ಮದನ್ ಅವರ ನಂತರ, ಈಗ ನಾವು ಮತ್ತೊಬ್ಬ ಮದನ್ ಜಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ಇವರು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ್ ಮೋಹನ್ ಲಾಲ್ ಜಿ. ಈಗ ಚಂದೌಲಿ ಕೂಡ ಬನಾರಸ್ ಗೆ ಹೊಂದಿಕೊಂಡಿರುವುದು ಕಾಕತಾಳೀಯ. ಇ- ಸಂಜೀವಿನಿ ಸಂಬಂಧಿಸಿದಂತೆ ರೋಗಿಯಾಗಿ ಅವರ ಅನುಭವ ಏನು ಎಂದು ಮದನ್ ಮೋಹನ್ ಜಿ ಅವರಿಂದ ತಿಳಿಯೋಣ?
ಪ್ರಧಾನಮಂತ್ರಿ: ಮದನ್ ಮೋಹನ್ ಅವರೆ ನಮಸ್ಕಾರ!
ಮದನ್ ಮೋಹನ್ ಜಿ: ನಮಸ್ಕಾರ, ನಮಸ್ಕಾರ ಸರ್.
ಪ್ರಧಾನಿಯವರು: ನಮಸ್ಕಾರ! ನೀವು ಮಧುಮೇಹ ರೋಗಿ ಎಂದು ನನಗೆ ಹೇಳಲಾಗಿದೆ.
ಮದನ್ ಮೋಹನ್ ಜಿ: ಹೌದು.
ಪ್ರಧಾನ ಮಂತ್ರಿ: ನೀವು ತಂತ್ರಜ್ಞಾನವನ್ನು ಬಳಸಿಕೊಂಡು ಟೆಲಿ ಸಮಾಲೋಚನೆಯ ಮೂಲಕ ನಿಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದ ಸಹಾಯವನ್ನು ಪಡೆಯುತ್ತಿದ್ದೀರಿ.
ಮದನ್ ಮೋಹನ್ ಜಿ: ಹೌದು ಸರ್.
ಪ್ರಧಾನ ಮಂತ್ರಿ: ಒಬ್ಬ ರೋಗಿಯಾಗಿ, ಪೀಡಿತನಾಗಿ, ನಾನು ನಿಮ್ಮ ಅನುಭವಗಳನ್ನು ಕೇಳಬಯಸುತ್ತೇನೆ, ಈ ಮೂಲಕ ನಮ್ಮ ಗ್ರಾಮಗಳಲ್ಲಿ ವಾಸಿಸುವ ಜನರು ಇಂದಿನ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ದೇಶವಾಸಿಗಳಿಗೆ ತಿಳಿಸಲು ನಾನು ಬಯಸುತ್ತೇನೆ. ತಾವು ಅದನ್ನು ಹೇಗೆ ಬಳಸಿಕೊಳ್ಳುತ್ತಿದ್ದೀರಿ ಎಂದು ಹೇಳಿ?
ಮದನ್ ಮೋಹನ್ ಜೀ : ಸರ್, ಆಸ್ಪತ್ರೆಗಳು ದೂರದಲ್ಲಿವೆ, ಮಧುಮೇಹ ಕಾಯಿಲೆ ಬಂದಾಗ 5-6 ಕಿ.ಮೀ ದೂರ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ನೀವು ವ್ಯವಸ್ಥೆ ಮಾಡಿರುವುದರಿಂದ. ಈಗ ನಾವು ಹೋಗುತ್ತೇವೆ, ನಮ್ಮನ್ನು ಪರೀಕ್ಷಿಸಲಾಗುತ್ತದೆ, ನಮ್ಮನ್ನು ದೂರದ ವೈದ್ಯರೊಂದಿಗೆ ಮಾತನಾಡುವಂತೆ ಕೂಡ ಅನುಕೂಲ ಮಾಡುತ್ತಾರೆ ಮತ್ತು ನಮಗೆ ಔಷಧಿಗಳನ್ನೂ ನೀಡುತ್ತಾರೆ. ಇದರಿಂದ ನಮಗೆ ಹೆಚ್ಚಿನ ಪ್ರಯೋಜನವಾಗಿದೆ ಮತ್ತು ಇತರ ಜನರು ಸಹ ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ಪ್ರಧಾನಿಯವರು: ಹಾಗಾದರೆ ಪ್ರತಿ ಬಾರಿಯೂ ಅದೇ ವೈದ್ಯರು ನಿಮ್ಮನ್ನು ನೋಡುತ್ತಾರೋ ಅಥವಾ ವೈದ್ಯರು ಬದಲಾಗುತ್ತಿರುತ್ತಾರೆಯೇ?
ಮದನ್ ಮೋಹನ್ ಜಿ: ಅವರಿಗೆ ತಿಳಿಯದಿದ್ದರೆ ಬೇರೆ ವೈದ್ಯರಿಗೆ ತೋರಿಸುತ್ತಾರೆ. ಅವರು ಸ್ವತಃ ಬೇರೆ ವೈದ್ಯರೊಂದಿಗೆ ಮಾತನಾಡುತ್ತಾರೆ ಮತ್ತು ಆ ವೈದ್ಯರೊಂದಿಗೆ ನಮ್ಮನ್ನು ಮಾತನಾಡುವಂತೆ ಮಾಡುತ್ತಾರೆ.
ಪ್ರಧಾನ ಮಂತ್ರಿ: ವೈದ್ಯರು ನಿಮಗೆ ನೀಡುವ ಮಾರ್ಗದರ್ಶನದಿಂದ ಪೂರ್ಣ ಪ್ರಯೋಜನವನ್ನು ಪಡೆಯುತ್ತೀರಾ.
ಮದನ್ ಮೋಹನ್ ಜಿ: ನಮಗೆ ಲಾಭವಾಗಿದೆ. ಇದರಿಂದ ನಮಗೆ ಬಹಳ ಲಾಭವಿದೆ. ಗ್ರಾಮದ ಜನರಿಗೂ ಇದರ ಪ್ರಯೋಜನವಿದೆ. ಅಲ್ಲಿದ್ದವರೆಲ್ಲ, ನಮಗೆ ಬಿಪಿ ಇದೆ, ಶುಗರ್ ಇದೆ, ಪರೀಕ್ಷೆ ಮಾಡಿ, ಔಷಧಿ ಕೊಡಿ ಎಂದು ಕೇಳುತ್ತಾರೆ. ಈ ಮೊದಲು ಅವರು 5-6 ಕಿಲೋಮೀಟರ್ ದೂರ ಹೋಗುತ್ತಿದ್ದರು, ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದರು , ರೋಗ ಪರೀಕ್ಷೆಗೆ ಸರತಿ ಸಾಲುಗಳು ಇರುತ್ತಿದ್ದವು. ಸಂಪೂರ್ಣ ದಿನ ನಷ್ಟವಾಗುತ್ತಿತ್ತು.
ಪ್ರಧಾನಿಯವರು: ಅಂದರೆ ಈಗ ನಿಮ್ಮ ಸಮಯವೂ ಉಳಿತಾಯವಾಗುತ್ತದೆ.
ಮದನ್ ಮೋಹನ್ ಜಿ: ಹಣ ಸಹ ಖರ್ಚು ಮಾಡಬೇಕಿತ್ತು ಆದರೆ ಇಲ್ಲಿ ಎಲ್ಲಾ ಸೇವೆಗಳು ಉಚಿತವಾಗಿ ಲಭಿಸುತ್ತಿವೆ.
ಪ್ರಧಾನಿಯವರು: ನಿಮ್ಮ ವೈದ್ಯರನ್ನು ನೋಡಿದಾಗ, ಒಂದು ವಿಶ್ವಾಸ ಮೂಡುತ್ತದೆ. ಸರಿ, ಡಾಕ್ಟರ್ ಇದ್ದಾರೆ, ಅವರು ನನ್ನ ನಾಡಿ, ಕಣ್ಣು, ನಾಲಿಗೆಯನ್ನೂ ಪರೀಕ್ಷಿಸಿದ್ದಾರೆ. ಅದೊಂದು ವಿಭಿನ್ನ ಭಾವನೆ ಮೂಡಿಸುತ್ತದೆ. ಈಗ ಅವರು ಟೆಲಿ ಕನ್ಸಲ್ಟೇಶನ್ ಮಾಡಿದರೆ ನಿಮಗೆ ಅದೇ ತೃಪ್ತಿ ಸಿಗುತ್ತದೆಯೇ?
ಮದನ್ ಮೋಹನ್ ಜಿ: ಹೌದು, ತೃಪ್ತಿ ಇದೆ. ಅವರು ನಮ್ಮ ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದಾರೆ, ಎದೆ ಬಡಿತ ಪರೀಕ್ಷಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ನೀವು ಇಷ್ಟು ಒಳ್ಳೆಯ ವ್ಯವಸ್ಥೆ ಮಾಡಿದ್ದೀರಿ ಎಂದು ನನಗೆ ತುಂಬಾ ಸಂತೋಷವಾಗಿದೆ, ಹಿಂದೆ ನಾವು ಕಷ್ಟಪಟ್ಟು ಇಲ್ಲಿಗೆ ಹೋಗಬೇಕಾಗಿತ್ತು, ಕಾರಿಗೆ ಹಣ ತೆರಬೇಕಾಗುತ್ತಿತ್ತು, ಅಲ್ಲಿ ಸಾಲಾಗಿ ನಿಲ್ಲಬೇಕಿತ್ತು. ಆದರೆ ಈಗ ಮನೆಯಲ್ಲಿ ಕುಳಿತೇ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ.
ಪ್ರಧಾನಿಯವರು: ಮದನ್ ಮೋಹನ್ ಅವರೇ, ನನ್ನ ಪರವಾಗಿ ನಿಮಗೆ ಅನಂತ ಶುಭ ಹಾರೈಕೆಗಳು. ಈ ವಯಸ್ಸಿನಲ್ಲೂ ನೀವು ತಂತ್ರಜ್ಞಾನವನ್ನು ಕಲಿತಿದ್ದೀರಿ, ತಂತ್ರಜ್ಞಾನವನ್ನು ಬಳಸುತ್ತಿದ್ದೀರಿ. ಇತರರಿಗೂ ತಿಳಿಸಿ ಇದರಿಂದ ಜನರ ಸಮಯ ಉಳಿತಾಯವಾಗುತ್ತದೆ, ಹಣವೂ ಉಳಿತಾಯವಾಗುತ್ತದೆ ಮತ್ತು ಅವರು ಮಾರ್ಗದರ್ಶನ ಪಡೆದು ಉತ್ತಮ ರೀತಿಯಲ್ಲಿ ಔಷಧಗಳನ್ನು ಬಳಸಬಹುದು.
ಮದನ್ ಮೋಹನ್ ಜಿ: ಹೌದು ಸರ್, ಮತ್ತಿನ್ನೇನು.
ಪ್ರಧಾನ ಮಂತ್ರಿ: ಮದನ್ ಮೋಹನ್ ಅವರೇ ನಿಮಗೆ ನನ್ನ ಅನಂತ ಶುಭಾಶಯಗಳು.
ಮದನ್ ಮೋಹನ್ ಜಿ: ಸರ್, ನೀವು ಬನಾರಸ್ ಅನ್ನು ಕಾಶಿ ವಿಶ್ವನಾಥ ಸ್ಟೇಷನ್ ಮಾಡಿದ್ದೀರಿ, ಅದನ್ನು ಅಭಿವೃದ್ಧಿಪಡಿಸಿದ್ದೀರಿ. ನಿಮಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು.
ಪ್ರಧಾನಿಯವರು: ನಿಮಗೆ ಧನ್ಯವಾದ ತಿಳಿಸಬಯಸುತ್ತೇನೆ. ನಾವೇನು ಮಾಡಿದ್ದೇವೆ, ಬನಾರಸ್ ಜನರು ಬನಾರಸ್ ಅಭಿವೃದ್ಧಿ ಮಾಡಿದ್ದಾರೆ | ನಾನು ಕೇವಲ ಗಂಗಾಮಾತೆಯ ಸೇವೆಗಾಗಿ ಇದ್ದೇನೆ. ಗಂಗಾಮಾತೆ ಕರೆದಿದ್ದಷ್ಟೇ ನನಗೆ ಗೊತ್ತು. ಒಳ್ಳೆಯದು, ನಿಮಗೆ ಅನಂತ ಶುಭಾಷಯಗಳು. ನಮಸ್ಕಾರ
ಮದನ್ ಮೋಹನ್ ಜಿ: ನಮಸ್ಕಾರ ಸರ್!
ಪ್ರಧಾನಿಯವರು: ನಮಸ್ಕಾರ!
ಸ್ನೇಹಿತರೇ, ಇ-ಸಂಜೀವನಿ ದೇಶದ ಸಾಮಾನ್ಯ ಜನರಿಗೆ, ಮಧ್ಯಮ ವರ್ಗದವರಿಗೆ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀವ ರಕ್ಷಕ ಅಪ್ಲಿಕೇಶನ್ ಆಗುತ್ತಿದೆ. ಇದು ಭಾರತದ ಡಿಜಿಟಲ್ ಕ್ರಾಂತಿಯ ಶಕ್ತಿ ಮತ್ತು ಇಂದು ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅದರ ಪರಿಣಾಮವನ್ನು ಕಾಣುತ್ತಿದ್ದೇವೆ. ಭಾರತದ UPI ಯ ಶಕ್ತಿಯ ಬಗ್ಗೆಯೂ ನಿಮಗೆ ತಿಳಿದಿದೆ. ಪ್ರಪಂಚದ ಅದೆಷ್ಟೋ ದೇಶಗಳು ಇದರತ್ತ ಆಕರ್ಷಿತವಾಗಿವೆ. ಕೆಲವು ದಿನಗಳ ಹಿಂದೆ, ಭಾರತ ಮತ್ತು ಸಿಂಗಾಪುರದ ಮಧ್ಯೆ ಯುಪಿಐ-ಪೇ ನೌ ಲಿಂಕ್ ಅನ್ನು ಪ್ರಾರಂಭಿಸಲಾಯಿತು. ಈಗ, ಸಿಂಗಾಪುರ ಮತ್ತು ಭಾರತದ ಜನರು ತಮ್ಮ ತಮ್ಮ ದೇಶಗಳಲ್ಲಿ ಮಾಡುವ ರೀತಿಯಲ್ಲಿಯೇ ತಮ್ಮ ಮೊಬೈಲ್ ಫೋನ್ಗಳಿಂದ ಪರಸ್ಪರ ಹಣವನ್ನು ವರ್ಗಾಯಿಸುತ್ತಿದ್ದಾರೆ. ಜನರು ಅದರ ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಅದು ಭಾರತದ ಇ-ಸಂಜೀವಿನಿ ಆ್ಯಪ್ ಆಗಿರಲಿ ಅಥವಾ UPI, ಜೀವನವನ್ನು ಸುಲಭಗೊಳಿಸಲು ಇವು ತುಂಬಾ ಸಹಾಯಕರ ಎಂದು ಸಾಬೀತಾಗಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಒಂದು ದೇಶದಲ್ಲಿ ನಶಿಸಿ ಹೋಗುತ್ತಿರುವ ಒಂದು ಪ್ರಜಾತಿಯ ಪಕ್ಷಿ, ಪ್ರಾಣಿಯನ್ನು ಉಳಿಸಿದಾಗ, ಅದು ಪ್ರಪಂಚದಾದ್ಯಂತ ಚರ್ಚೆಯಾಗುತ್ತದೆ. ನಮ್ಮ ದೇಶದಲ್ಲಿ ಕಣ್ಮರೆಯಾಗಿದ್ದ, ಜನಮಾನಸದಿಂದ ದೂರವಾಗಿದ್ದ ಇಂತಹ ಹಲವಾರು ಶ್ರೇಷ್ಠ ಸಂಪ್ರದಾಯಗಳಿವೆ, ಆದರೆ ಈಗ ಸಾರ್ವಜನಿಕ ಸಹಭಾಗಿತ್ವದ ಶಕ್ತಿಯಿಂದ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ, ಹಾಗಾಗಿ ಈ ಕುರಿತು ಚರ್ಚಿಸಲು ಮನದ ಮಾತಿಗಿಂತ ಉತ್ತಮ ವೇದಿಕೆ ಯಾವುದಿದೆ?
ಈಗ ನಾನು ನಿಮಗೆ ಹೇಳಲಿರುವುದನ್ನು ತಿಳಿದು, ನಿಜವಾಗಿಯೂ ಸಂತೋಷಪಡುತ್ತೀರಿ, ನಿಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೀರಿ. ಅಮೆರಿಕಾದಲ್ಲಿ ನೆಲೆಸಿರುವ ಶ್ರೀ ಕಂಚನ್ ಬ್ಯಾನರ್ಜಿಯವರು ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಇಂತಹ ಒಂದು ಅಭಿಯಾನದ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಸ್ನೇಹಿತರೇ, ಈ ತಿಂಗಳು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬಾನ್ಸ್ ಬೇರಿಯಾದಲ್ಲಿ 'ತ್ರಿವೇಣಿ ಕುಂಭ ಮಹೋತ್ಸವ' ಆಯೋಜಿಸಲಾಗಿದೆ. ಇದರಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು ಆದರೆ ಇದು ಏಕೆ ವಿಶೇಷವಾಗಿದೆ ಎಂದು ನಿಮಗೆ ತಿಳಿದಿದೆಯೇ? ವಿಶೇಷವೇನೆಂದರೆ 700 ವರ್ಷಗಳ ನಂತರ ಈ ಪದ್ಧತಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಸಂಪ್ರದಾಯವು ಸಾವಿರಾರು ವರ್ಷಗಳಷ್ಟು ಹಳೆಯದಾದರೂ, ದುರದೃಷ್ಟವಶಾತ್ ಬಂಗಾಳದ ತ್ರಿವೇಣಿಯಲ್ಲಿ ನಡೆಯುತ್ತಿದ್ದ ಈ ಉತ್ಸವವನ್ನು 700 ವರ್ಷಗಳ ಹಿಂದೆ ನಿಲ್ಲಿಸಲಾಗಿತ್ತು. ಸ್ವಾತಂತ್ರ್ಯಾನಂತರ ಇದನ್ನು ಆರಂಭಿಸಬೇಕಿತ್ತು, ಆದರೆ ಅದೂ ಸಾಧ್ಯವಾಗಲಿಲ್ಲ. ಎರಡು ವರ್ಷಗಳ ಹಿಂದೆ, ಸ್ಥಳೀಯ ಜನರು ಮತ್ತು 'ತ್ರಿವೇಣಿ ಕುಂಭ ಪರಿಚಲನಾ ಸಮಿತಿ' ಮೂಲಕ ಈ ಉತ್ಸವವು ಮತ್ತೆ ಪ್ರಾರಂಭವಾಗಿದೆ. ಅದರ ಸಂಘಟನೆಗೆ ಸಂಬಂಧಿಸಿದ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ. ನೀವು ಕೇವಲ ಸಂಪ್ರದಾಯವನ್ನು ಜೀವಂತವಾಗಿಸಿಕೊಳ್ಳುತ್ತಿಲ್ಲ, ನೀವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಹ ರಕ್ಷಿಸುತ್ತಿದ್ದೀರಿ.
ಸ್ನೇಹಿತರೇ, ಪಶ್ಚಿಮ ಬಂಗಾಳದ ತ್ರಿವೇಣಿ ಶತಮಾನಗಳಿಂದಲೂ ಪವಿತ್ರ ಸ್ಥಳವೆಂದು ಹೆಸರುವಾಸಿಯಾಗಿದೆ. ಇದನ್ನು ವಿವಿಧ ಮಂಗಳಕಾವ್ಯ, ವೈಷ್ಣವ ಸಾಹಿತ್ಯ, ಶಾಕ್ತ ಸಾಹಿತ್ಯ ಮತ್ತು ಇತರ ಬಂಗಾಳಿ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶವು ಒಂದು ಕಾಲದಲ್ಲಿ ಸಂಸ್ಕೃತ, ಶಿಕ್ಷಣ ಮತ್ತು ಭಾರತೀಯ ಸಂಸ್ಕೃತಿಯ ಕೇಂದ್ರವಾಗಿತ್ತು ಎಂದು ವಿವಿಧ ಐತಿಹಾಸಿಕ ದಾಖಲೆಗಳಿಂದ ತಿಳಿಯುತ್ತದೆ. ಅನೇಕ ಸಂತರು ಇದನ್ನು ಮಾಘ ಸಂಕ್ರಾಂತಿಯಲ್ಲಿ ಕುಂಭ ಸ್ನಾನಕ್ಕೆ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ. ತ್ರಿವೇಣಿಯಲ್ಲಿ, ನೀವು ಅನೇಕ ಗಂಗಾ ಘಾಟ್ಗಳು, ಶಿವ ದೇವಾಲಯಗಳು ಮತ್ತು ಟೆರಾಕೋಟಾ ವಾಸ್ತುಕಲೆಯಿಂದ ಅಲಂಕರಿಸಲ್ಪಟ್ಟ ಪ್ರಾಚೀನ ಕಟ್ಟಡಗಳನ್ನು ಕಾಣಬಹುದು. ತ್ರಿವೇಣಿಯ ಪರಂಪರೆಯನ್ನು ಮರುಸ್ಥಾಪಿಸಲು ಮತ್ತು ಕುಂಭ ಸಂಪ್ರದಾಯದ ವೈಭವವನ್ನು ಪುನರುಜ್ಜೀವನಗೊಳಿಸಲು ಕಳೆದ ವರ್ಷ ಇಲ್ಲಿ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಏಳು ಶತಮಾನಗಳ ನಂತರ, ಮೂರು ದಿನಗಳ ಕುಂಭ ಮಹಾಸ್ನಾನ ಮತ್ತು ಜಾತ್ರೆಯು ಈ ಪ್ರದೇಶಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಮೂರು ದಿನಗಳ ಕಾಲ ಪ್ರತಿದಿನ ನಡೆಯುತ್ತಿದ್ದ ಗಂಗಾ ಆರತಿ, ರುದ್ರಾಭಿಷೇಕ, ಯಜ್ಞದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ಬಾರಿಯ ಉತ್ಸವದಲ್ಲಿ ವಿವಿಧ ಆಶ್ರಮಗಳು, ಮಠಗಳು ಮತ್ತು ಅಖಾಡಗಳು ಸಹ ಸೇರಿವೆ. ಬೆಂಗಾಲಿ ಸಂಪ್ರದಾಯಗಳಿಗೆ ಸಂಬಂಧಿಸಿದ ವಿವಿಧ ಪ್ರಕಾರಗಳಾದ ಕೀರ್ತನೆ, ಬೌಲ್, ಗೋಡಿಯೋ ನೃತ್ಯ, ಶ್ರೀ-ಖೋಲ್, ಪೋಟೆರ್ ಗಾಯನ, ಛೌ-ನೃತ್ಯ , ಸಂಜೆ ಕಾರ್ಯಕ್ರಮಗಳ ಆಕರ್ಷಣೆಯ ಕೇಂದ್ರವಾಗಿದ್ದವು. ನಮ್ಮ ಯುವಜನರನ್ನು ದೇಶದ ಸುವರ್ಣ ಗತಕಾಲದೊಂದಿಗೆ ಬೆರೆಯುವಂತೆ ಮಾಡಲು ಇದು ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿದೆ. ಭಾರತದಲ್ಲಿ ಇಂತಹ ಇನ್ನೂ ಅನೇಕ ಆಚರಣೆಗಳಿವೆ, ಅವುಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಅವುಗಳ ಬಗೆಗಿನ ಚರ್ಚೆ ಈ ದಿಶೆಯಲ್ಲಿ ಖಂಡಿತವಾಗಿಯೂ ಜನರನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಅರ್ಥವೇ ಬದಲಾಗಿದೆ. ದೇಶದಲ್ಲಿ ಎಲ್ಲಿಯೇ ಆಗಲಿ ಶುಚಿತ್ವಕ್ಕೆ ಸಂಬಂಧಿಸಿದಂತೆ ಏನಾದರೂ ವಿಷಯಗಳಿದ್ದರೆ, ಜನರು ಖಂಡಿತವಾಗಿಯೂ ಅದರ ಬಗ್ಗೆ ನನಗೆ ತಿಳಿಸುತ್ತಾರೆ. ಅದರಂತೆ ಹರಿಯಾಣದ ಯುವಕರು ಸ್ವಚ್ಛತಾ ಅಭಿಯಾನದತ್ತ ನನ್ನ ಗಮನ ಸೆಳೆದಿದ್ದಾರೆ. ಹರಿಯಾಣದಲ್ಲಿ ದುಲ್ಹೇರಿ ಎಂಬ ಒಂದು ಹಳ್ಳಿಯಿದೆ -. ಸ್ವಚ್ಛತೆಯ ವಿಷಯದಲ್ಲಿ ಭಿವಾನಿ ನಗರವನ್ನು ಮಾದರಿಯಾಗಿಸಬೇಕು ಎಂದು ಇಲ್ಲಿನ ಯುವಕರು ನಿರ್ಧರಿಸಿದ್ದಾರೆ. ಅವರೆಲ್ಲ ಸೇರಿ ಯುವ ಸ್ವಚ್ಛತಾ ಮತ್ತು ಜನ ಸೇವಾ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ಸಮಿತಿಯ ಯುವಕರು ಮುಂಜಾನೆ 4 ಗಂಟೆಗೆ ಭಿವಾನಿ ತಲುಪುತ್ತಾರೆ. ಅವರೆಲ್ಲ ಸೇರಿ ನಗರದ ವಿವಿಧೆಡೆ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದಾರೆ. ಈ ಜನರು ಇದುವರೆಗೆ ನಗರದ ವಿವಿಧ ಪ್ರದೇಶಗಳಿಂದ ಟನ್ಗಟ್ಟಲೆ ಕಸವನ್ನು ತೆರವುಗೊಳಿಸಿದ್ದಾರೆ.
ಸ್ನೇಹಿತರೇ, waste to wealth (ಕಸದಿಂದ ರಸ) ಎಂಬುದು ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಅಂಶವಾಗಿದೆ. ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಸಹೋದರಿ ಕಮಲಾ ಮೊಹರಾನಾ ಸ್ವಸಹಾಯ ಸಂಘವನ್ನು ನಡೆಸುತ್ತಿದ್ದಾರೆ. ಈ ಗುಂಪಿನ ಮಹಿಳೆಯರು ಹಾಲಿನ ಚೀಲಗಳು ಮತ್ತು ಇತರ ಪ್ಲಾಸ್ಟಿಕ್ ಪ್ಯಾಕಿಂಗ್ಗಳಿಂದ ಬುಟ್ಟಿಗಳು ಮತ್ತು ಮೊಬೈಲ್ ಸ್ಟ್ಯಾಂಡ್ಗಳಂತಹ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ. ಸ್ವಚ್ಛತೆಯ ಜತೆಗೆ ಅವರಿಗೆ ಉತ್ತಮ ಆದಾಯದ ಮೂಲವೂ ದೊರೆಯುತ್ತಿದೆ. ನಾವು ಸಂಕಲ್ಪಗೈದರೆ ಸ್ವಚ್ಛ ಭಾರತದಲ್ಲಿ ದೊಡ್ಡ ಕೊಡುಗೆ ನೀಡಬಹುದು. ಕನಿಷ್ಠ ನಾವೆಲ್ಲರೂ ಪ್ಲಾಸ್ಟಿಕ್ ಚೀಲಗಳನ್ನು ಬಟ್ಟೆಯ ಚೀಲಗಳೊಂದಿಗೆ ಬದಲಾಯಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು. ನಿಮ್ಮ ಈ ನಿರ್ಣಯವು ನಿಮಗೆ ಎಷ್ಟು ತೃಪ್ತಿಯನ್ನು ನೀಡುತ್ತದೆ ಮತ್ತು ಇತರ ಜನರಿಗೆ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ ಎಂದು ನೀವೇ ಕಾಣುತ್ತೀರಿ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನೀವು ಮತ್ತು ನಾನು ಒಟ್ಟಿಗೆ ಸೇರಿ ಮತ್ತೊಮ್ಮೆ ಅನೇಕ ಸ್ಪೂರ್ತಿದಾಯಕ ವಿಷಯಗಳ ಕುರಿತು ಮಾತನಾಡಿದ್ದೇವೆ. ಮನೆಯವರ ಜೊತೆ ಕೂತು ಅದನ್ನು ಕೇಳಿದ್ದೇವೆ ಈಗ ದಿನವಿಡೀ ಅದನ್ನೇ ಗುನುಗುಣಿಸುತ್ತೇವೆ. ದೇಶದ ಶ್ರಮಿಕತನದ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ನಮಗೆ ಶಕ್ತಿ ಬರುತ್ತದೆ. ಈ ಶಕ್ತಿಯ ಪ್ರವಾಹದೊಂದಿಗೆ ಚಲಿಸುತ್ತಾ, ಇಂದು ನಾವು 'ಮನದ ಮಾತಿನ' 98 ನೇ ಸಂಚಿಕೆಯನ್ನು ತಲುಪಿದ್ದೇವೆ. ಹೋಳಿ ಹಬ್ಬ ಇಂದಿನಿಂದ ಕೆಲವೇ ದಿನಗಳಲ್ಲಿ ಬರಲಿದೆ. ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ವೋಕಲ್ ಫಾರ್ ಲೋಕಲ್ ಎಂಬ ಸಂಕಲ್ಪದೊಂದಿಗೆ ನಮ್ಮ ಹಬ್ಬಗಳನ್ನು ಆಚರಿಸಬೇಕು. ನಿಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ. ಅಲ್ಲಿಯವರೆಗೆ ನನ್ನನ್ನು ಬೀಳ್ಕೊಡಿ. ಮುಂದಿನ ಬಾರಿ ನಾವು ಹೊಸ ವಿಷಯಗಳೊಂದಿಗೆ ಮತ್ತೆ ಭೇಟಿಯಾಗೋಣ. ಅನಂತ ಧನ್ಯವಾದಗಳು ನಮಸ್ಕಾರ
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇದು 2023 ನೇ ಮೊದಲ ಮನದ ಮಾತು ಜೊತೆಗೆ ಈ ಕಾರ್ಯಕ್ರಮದ 97 ನೇ ಕಂತು ಇದಾಗಿದೆ. ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಮಾತನಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳು ಬಹಳಷ್ಟು ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತದೆ. ಈ ತಿಂಗಳಿನಲ್ಲಿ ಜನವರಿ 14 ರಂದು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ಹಬ್ಬಗಳ ಉತ್ಸಾಹವಿರುತ್ತದೆ. ಇದರ ನಂತರ ದೇಶ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವರ್ಷವೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಹಳಷ್ಟು ಅಂಶಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮೂಡಿಬರುತ್ತಿದೆ. ಜೈಸಲ್ಮೇರ್ ನಿಂದ ಪುಲ್ಕಿತ್ ಅವರು ನನಗೆ ಹೀಗೆ ಬರೆದಿದ್ದಾರೆ - ಜನವರಿ 26 ರ ಕವಾಯತಿನ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ಪಥವನ್ನು ನಿರ್ಮಿಸುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು. ಕಾನ್ಪುರದಿಂದ ಜಯಾ ಅವರು ಮೆರವಣಿಗೆಯಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಂಡು ಆನಂದಿಸಿರುವುದಾಗಿ ಬರೆದಿದ್ದಾರೆ. ಈ ಪರೇಡ್ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ ಸಿಆರ್ಪಿಎಫ್ನ ಮಹಿಳಾ ತುಕಡಿ ಕೂಡ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.
ಸ್ನೇಹಿತರೇ, ಡೆಹ್ರಾಡೂನ್ನ ವತ್ಸಲ್ ಜೀ ಅವರು “ನಾನು ಯಾವಾಗಲೂ ಜನವರಿ 25 ಕ್ಕಾಗಿ ಕಾಯುತ್ತೇನೆ ಏಕೆಂದರೆ ಆ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ ಮತ್ತು 25 ರ ಸಂಜೆಯೇ ಜನವರಿ 26 ರ ನನ್ನ ಉತ್ಸಾಹ ಮತ್ತಷ್ಟು ಹೆಚ್ಚುತ್ತದೆ” ಎಂದು ಬರೆದಿದ್ದಾರೆ. ಮೂಲ ಹಂತದಿಂದ ತಮ್ಮ ಸಮರ್ಪಣೆ ಮತ್ತು ಸೇವೆಯ ಮೂಲಕ ಸಾಧನೆ ಮಾಡಿದವರಿಗೆ ಕೊಡಮಾಡುವ ಪೀಪಲ್ಸ್ ಪದ್ಮ ಪ್ರಶಸ್ತಿ ಬಗ್ಗೆಯೂ ಅನೇಕರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಬುಡಕಟ್ಟು ಸಮುದಾಯ ಮತ್ತು ಬುಡಕಟ್ಟು ಜೀವನದೊಂದಿಗೆ ಸಂಬಂಧವನ್ನು ಹೊಂದಿರುವ ಜನರ ಸಾಕಷ್ಟು ಪ್ರತಿನಿದಹಿತ್ವವಿತ್ತು. ಬುಡಕಟ್ಟು ಜನರ ಜೀವನವು ನಗರಗಳ ಗಡಿಬಿಡಿಗಿಂತ ಭಿನ್ನವಾಗಿದೆ, ಅದರ ಸವಾಲುಗಳು ಕೂಡಾ ವಭಿನ್ನವಾಗಿರುತ್ತವೆ. ಇದರ ಹೊರತಾಗಿಯೂ, ಬುಡಕಟ್ಟು ಸಮಾಜಗಳು ತಮ್ಮ ಸಂಪ್ರದಾಯಗಳನ್ನು ಉಳಿಸಲು ಯಾವಾಗಲೂ ಸನ್ನದ್ಧವಾಗಿರುತ್ತವೆ. ಬುಡಕಟ್ಟು ಸಮಾಜಗಳಿಗೆ ಸಂಬಂಧಿಸಿದ ವಸ್ತುಗಳ ಸಂರಕ್ಷಣೆ ಮತ್ತು ಅವುಗಳ ಮೇಲೆ ಸಂಶೋಧನೆಯ ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತದೆ. ಹೀಗೆ ಟೊಟೊ, ಕುಇ, ಕುವಿ ಮತ್ತು ಮಾಂಡಾದಂತಹ ಬುಡಕಟ್ಟು ಭಾಷೆಗಳ ಮೇಲೆ ಕೆಲಸ ಮಾಡಿದಂತಹ ಅನೇಕ ಮಹಾನುಭಾವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಧಾನಿರಾಮ್ ಟೊಟೊ, ಜಾನುಮ್ ಸಿಂಗ್ ಸೋಯ್ ಮತ್ತು ಬಿ ರಾಮಕೃಷ್ಣ ರೆಡ್ಡಿ ಇವರ ಹೆಸರು ಈಗ ಸಂಪೂರ್ಣ ದೇಶಕ್ಕೆ ಪರಿಚಿತವಾಗಿದೆ. ಸಿದ್ಧಿ, ಜಾರವಾ ಮತ್ತು ಓಂಗೆಯಂತಹ ಮೂಲ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡುವ ಹೀರಾಬಾಯಿ ಲೋಬಿ, ರತನ್ ಚಂದ್ರ ಕಾರ್ ಮತ್ತು ಈಶ್ವರ್ ಚಂದ್ರ ವರ್ಮಾರಂತಹ ಮಹನೀಯರಿಗೂ ಈ ಬಾರಿ ಸನ್ಮಾನಿಸಲಾಗಿದೆ. ಬುಡಕಟ್ಟು ಜನಾಂಗ ನಮ್ಮ ಭೂಮಿ, ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವಪೂರ್ಣವಾಗಿದೆ. ಅವರಿಗಾಗಿ ಕೆಲಸ ಮಾಡುವ ವ್ಯಕ್ತಿತ್ವಗಳನ್ನು ಸನ್ಮಾನಿಸುವುದು ಹೊಸ ಪೀಳಿಗೆಗೂ ಪ್ರೇರಣೆ ನೀಡುತ್ತದೆ. ಈ ವರ್ಷ ಪದ್ಮ ಪ್ರಶಸ್ತಿಯ ನಿನಾದ ನಕ್ಸಲ್ ಪ್ರಭಾವಕ್ಕೆ ಒಳಗಾದಂತಹ ಪ್ರದೇಶಗಳಲ್ಲೂ ಮೊಳಗುತ್ತಿದೆ. ನಕ್ಸಲ್ ಪ್ರಭಾವಿತ ಕ್ಷೇತ್ರಗಳಲ್ಲಿ ದಾರಿ ತಪ್ಪಿದ ಯುವಜನತೆಗೆ ತಮ್ಮ ಪ್ರಯತ್ನದಿಂದ ಸೂಕ್ತ ಮಾರ್ಗವನ್ನು ತೋರಿದಂತಹವರಿಗೂ ಈ ಬಾರಿ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಹಿನ್ನಲೆಯಲ್ಲಿ ಕಾಂಕೇರ್ ನಲ್ಲಿ ಕಟ್ಟಿಗೆಯ ಮೇಲೆ ನಕ್ಷೆ ಬಿಡಿಸುವಅಜಯ್ ಕುಮಾರ್ ಮಾಂಡವಿ ಮತ್ತು ಗಡ್ಚಿರೋಲಿಯ ಪ್ರಸಿದ್ಧ ಝಾಡಿಪಟ್ಟಿ ರಂಭೂಮಿಯೊಂದಿಗೆ ಕೆಲಸ ಮಾಡುವ ಪರಶುರಾಮ್ ಕೋಮಾಜಿ ಖುಣೇ ಅವರಿಗೂ ಈ ಸನ್ಮಾನ ಲಭಿಸಿದೆ. ಇದೇ ರೀತಿ ಈಶಾನ್ಯ ಭಾಗದಲ್ಲಿ ತಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ತೊಡಗಿರುವ ರಾಮ್ ಕುಯಿ ವಾಂಗ್ಬೆ ನಿವುಮೆ, ವಿಕ್ರಂ ಬಹಾದೂರ್ ಜಮಾತಿಯಾ ಮತ್ತು ಕರಮಾ ವಾಂಗ್ಚು ಅವರನ್ನೂ ಸನ್ಮಾನಿಸಲಾಗಿದೆ.
ಸ್ನೇಹಿತರೇ, ಈ ಬಾರಿ ಪದ್ಮ ಪ್ರಶಸ್ತಿ ಪರಸ್ಕೃತರಾಗುವವರಲ್ಲಿ ಸಂಗೀತ ಲೋಕವನ್ನು ಮತ್ತಷ್ಟು ಸಮೃದ್ಧಗೊಳಿಸಿದಂಥವರೂ ಇದ್ದಾರೆ. ಯಾರಿಗೆ ತಾನೇ ಸಂಗೀತ ಷ್ಟವಾಗುವುದಿಲ್ಲ. ಪ್ರತಿಯೊಬ್ಬನ ಸಂಗೀತದ ಅಭಿರುಚಿ ಬೇರೆ ಬೇರೆಯಾಗಿರಬಹುದು ಆದರೆ ಸಂಗೀತ ಪ್ರತಿಯೊಬ್ಬರ ಜೀವನದ ಭಾಗವಾಗಿರುತ್ತದೆ. ಈ ಬಾರಿ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಸಂತೂರ್, ಬಮ್ಹುಮ್, ದ್ವಿತಾರಾದಂತಹ ನಮ್ಮ ಪಾರಂಪರಿಕ ವಾದ್ಯಗಳ ನಿನಾದವನ್ನು ಪಸರಿಸುವಲ್ಲಿ ಪಾಂಡಿತ್ಯವನ್ನು ಹೊಂದಿರುವವರೂ ಸೇರಿದ್ದಾರೆ. ಗುಲಾಂ ಮೊಹಮ್ಮದ್ ಜಾಜ್, ಮೊವಾ ಸು-ಪೊಂಗ್, ರಿ ಸಿಂಹಬೊರ್ ಕುರಕಾ-ಲಾಂಗ್, ಮುನಿವೆಂಕಟಪ್ಪ ಮತ್ತು ಮಂಗಲ ಕಾಂತಿ ರಾಯ್ ಇಂಥ ಅದೆಷ್ಟೋ ವ್ಯಕ್ತಿಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಸ್ನೇಹಿತರೇ, ಪದ್ಮ ಪ್ರಶಸ್ತಿ ಪರಸ್ಕೃತರಲ್ಲಿ ಅನೇಕರು, ನಮ್ಮ ಮಧ್ಯೆಯೇ ಇದ್ದು ಎಂದೆಂದಿಗೂ ದೇಶಕ್ಕೆ ಪ್ರಥಮ ಆದ್ಯತೆ ನೀಡಿದಂತಹವರಾಗಿದ್ದಾರೆ, ದೇಶ ಮೊದಲು ಎಂಬ ಸಿದ್ಧಾಂತಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರು ಸೇವಾಭಾವನೆಯಿಂದ ತಮ್ಮ ಕೆಲಸದಲ್ಲಿ ತೊಡಗಿದ್ದರು ಮತ್ತು ಇದಕ್ಕಾಗಿ ಎಂದಿಗೂ ಪ್ರಶಸ್ತಿ ಪುರಸ್ಕಾರಗಳ ಅಪೇಕ್ಷೆಪಟ್ಟವರಲ್ಲ. ಅವರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಅವರ ಮುಖದ ಮೇಲಿನ ಮಂದಹಾಸವೇ ಅವರಿಗೆ ಬಹುದೊಡ್ಡ ಪ್ರಶಸ್ತಿಯಾಗಿದೆ. ಇಂಥ ಸಮರ್ಪಿತ ಜನರನ್ನು ಸನ್ಮಾನ ಮಾಡುವ ಮೂಲಕ ನಾವು ದೇಶವಾಸಿಗಳ ಗೌರವ ಮತ್ತಷ್ಟು ಹೆಚ್ಚಿದೆ. ನಾನು ಎಲ್ಲ ಪದ್ಮ ಪುರಸ್ಕೃತರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಲಾಗುವುದಿಲ್ಲ ಆದರೆ, ನೀವು ಪದ್ಮ ಪುರಸ್ಕೃತರ ಜೀವನದ ಬಗ್ಗೆ ವಿಸ್ತೃತವಾಗಿ ಅರಿಯಿರಿ ಮತ್ತು ಇನ್ನುಳಿದವರಿಗೂ ಅದರ ಬಗ್ಗೆ ತಿಳಿಸಿ ಎಂದು ನಾನು ಆಗ್ರಹಿಸುತ್ತೇನೆ
ಸ್ನೇಹಿತರೇ ಇಂದು ನಾವು ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಗಣರಾಜ್ಯೋತ್ಸವದ ಬಗ್ಗೆ ಚರ್ಚಿಸುತ್ತಿರುವಾಗ, ಒಂದು ಆಸಕ್ತಿದಾಯಕ ಪುಸ್ತಕದ ಬಗ್ಗೆ ಪ್ರಸ್ತಾಪಿಸಬಯಸುತ್ತೇನೆ. ಕೆಲ ವಾರಗಳ ಹಿಂದೆ ನನಗೆ ದೊರೆತ ಪುಸ್ತಕದಲ್ಲಿ ಒಂದು ಆಸಕ್ತಿಕರ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಈ ಪುಸ್ತಕದ ಹೆಸರು “ಇಂಡಿಯಾ ದಿ ಮದರ್ ಆಫ್ ಡೆಮಾಕ್ರಸಿ” ಎಂದಿದೆ. ಇದರಲ್ಲಿ ಬಹಳಷ್ಟು ಉತ್ತಮ ಪ್ರಬಂಧಗಳಿವೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ನಾವು ಭಾರತೀಯರಿಗೆ ನಮ್ಮ ದೇಶ ಮದರ್ ಆಫ್ ಡೆಮಾಕ್ರಸಿ ಬಗ್ಗೆ ಬಹಳ ಹೆಮ್ಮೆಯಿದೆ. ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ನಮ್ಮ ಸಂಸ್ಕೃತಿಯಲ್ಲಿದೆ. ಶತಮಾನಗಳಿಂದ ಇದು ನಮ್ಮ ಕಾರ್ಯವೈಖರಿಯ ಅವಿಭಾಜ್ಯ ಅಂಗವಾಗಿದೆ. ಸ್ವಭಾವತಃ ನಾವು ಒಂದು ಪ್ರಜಾಪ್ರಭುತ್ವ ಸಮಾಜವಾಗಿದ್ದೇವೆ. ಡಾ. ಅಂಬೇಡ್ಕರ್ ಅವರು ಬೌದ್ಧ ಭಿಕ್ಷುಗಳ ಸಂಘದ ಸಾಮ್ಯತೆಯನ್ನು ಭಾರತೀಯ ಸಂಸತ್ತಿಗೆ ಹೋಲಿಸಿದ್ದರು. ನಡೆ, ನಿರ್ಣಯಗಳು, ಸರ್ವಾನುಮತ, ಮತದಾನ ಮತ್ತು ಮತಗಳ ಎಣಿಕೆಗಳಿಗೆ ಅನೇಕ ನಿಯಮಗಳನ್ನು ಹೊಂದಿದ ದು ಸಂಸ್ಥೆ ಎಂದು ಅವರು ಅದನ್ನು ಬಣ್ಣಿಸಿದ್ದರು. ಭಗವಾನ್ ಬುದ್ಧನಿಗೆ ಇದರ ಪ್ರೇರಣೆ ಅಂದಿನ ರಾಜನೈತಿಕ ವ್ಯವಸ್ಥೆಗಳಿಂದ ದೊರೆತಿರಬಹುದು ಎಂಬುದು ಬಾಬಾಸಾಹೇಬರ ನಂಬಿಕೆಯಾಗಿತ್ತು.
ತಮಿಳುನಾಡಿನಲ್ಲಿ ಉತಿರಮೆರೂರ್ ಎಂಬ ಒಂದು ಪುಟ್ಟ ಆದರೆ ಪ್ರಸಿದ್ಧ ಗ್ರಾಮವಿದೆ. ಇಲ್ಲಿರುವ 1100-1200 ವರ್ಷಗಳ ಹಿಂದಿನ ಕಲ್ಲಿನ ಶಾಸನವೊಂದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸುತ್ತಿದೆ. ಈ ಶಿಲಾಶಾಸನ ಒಂದು ಪುಟ್ಟ ಸಂವಿಧಾನದಂತಿದೆ. ದರಲ್ಲಿ ಗ್ರಾಮ ಸಭೆಯನ್ನು ಹೇಗೆ ನಡೆಸಬೇಕು ಮತ್ತು ಅದರ ಸದಸ್ಯರ ಆಯ್ಕೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ವಿವರವಾಗಿ ವಿವರಿಸಲಾಗಿದೆ. ನಮ್ಮ ದೇಶದ ಇತಿಹಾಸದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಮತ್ತೊಂದು ಉದಾಹರಣೆಯೆಂದರೆ - 12 ನೇ ಶತಮಾನದ ಭಗವಾನ್ ಬಸವೇಶ್ವರರ ಅನುಭವ ಮಂಟಪ. ಇಲ್ಲಿ ಮುಕ್ತ ಸಂವಾದ ಮತ್ತು ಚರ್ಚೆಗೆ ಉತ್ತೇಜನ ನೀಡಲಾಗುತ್ತಿತ್ತು. ಇದು ಮ್ಯಾಗ್ನಾ ಕಾರ್ಟಾಕ್ಕಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ವಾರಂಗಲ್ನ ಕಾಕತೀಯ ರಾಜವಂಶದ ರಾಜರ ಗಣರಾಜ್ಯ ಸಂಪ್ರದಾಯಗಳು ಸಹ ಬಹಳ ಪ್ರಸಿದ್ಧವಾಗಿದ್ದವು. ಭಕ್ತಿ ಚಳುವಳಿಯು ಪಶ್ಚಿಮ ಭಾರತದಲ್ಲಿ ಪ್ರಜಾಪ್ರಭುತ್ವದ ಸಂಸ್ಕೃತಿಯನ್ನು ವೃದ್ಧಿಸಿತ್ತು. ಗುರುನಾನಕ್ ದೇವ್ ಜಿ ಯವರ ಒಮ್ಮತದಿಂದ ತೆಗೆದುಕೊಂಡ ನಿರ್ಧಾರಗಳ ಮೇಲೆ ಬೆಳಕು ಚೆಲ್ಲುವ ಸಿಖ್ ಪಂಥ್ನ ಪ್ರಜಾಪ್ರಭುತ್ವ ಮನೋಭಾವದ ಕುರಿತಾದ ಲೇಖನವನ್ನು ಸಹ ಪುಸ್ತಕದಲ್ಲಿ ಸೇರಿಸಲಾಗಿದೆ. ಮಧ್ಯ ಭಾರತದ ಉರಾಂವ್ ಮತ್ತು ಮುಂಡಾ ಬುಡಕಟ್ಟುಗಳಲ್ಲಿ ಸಮುದಾಯ ಚಾಲಿತ ಮತ್ತು ಒಮ್ಮತದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕೂಡಾ ಈ ಪುಸ್ತಕದಲ್ಲಿ ಉತ್ತಮ ಮಾಹಿತಿ ಲಭ್ಯವಿದೆ. ನೀವು ಈ ಪುಸ್ತಕ ಓದಿದ ಮೇಲೆ ದೇಶದ ಎಲ್ಲ ಭಾಗಗಳಲ್ಲಿ ಶತಮಾನಗಳಿಂದ ಹೇಗೆ ಪ್ರಜಾಸತ್ತಾತ್ಮಕ ಭಾವನೆ ಪ್ರವಹಿಸುತ್ತಿದೆ ಎಂಬುದು ಅನುಭವಕ್ಕೆ ಬರುತ್ತದೆ. Mother of Democracy ಯ ರೂಪದಲ್ಲಿ, ನಾವು ನಿರಂತರವಾಗಿ ಈ ವಿಷಯದ ಬಗ್ಗೆ ಆಳವಾಗಿ ಯೋಚಿಸಬೇಕು, ಚರ್ಚಿಸಬೇಕು ಮತ್ತು ವಿಶ್ವಕ್ಕೆ ಅದರ ಅರಿವೂ ಮೂಡಿಸಬೇಕಿದೆ. ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಭಾವನೆ ಮತ್ತಷ್ಟು ಬಲಗೊಳ್ಳುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಯೋಗ ದಿನ ಮತ್ತು ನಮ್ಮ ವಿವಿಧ ರೀತಿಯ ಗಟ್ಟಿ ಧಾನ್ಯಗಳು – ಸಿರಿ ಧಾನ್ಯಗಳ ನಡುವೆ ಏನು ಸಾಮಾನ್ಯ ಅಂಶವಿದೆ ಎಂದು ನಾನು ನಿಮ್ಮನ್ನು ಕೇಳಿದರೆ, ಇದೆಂಥ ಹೋಲಿಕೆ ಎಂದು ನೀವು ಯೋಚಿಸುತ್ತೀರಿ? ಎರಡರಲ್ಲೂ ಸಾಮ್ಯತೆ ಇದೆ ಎಂದು ನಾನು ಹೇಳಿದರೆ, ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವದಲ್ಲಿ ವಿಶ್ವಸಂಸ್ಥೆಯು, ಭಾರತದ ಪ್ರಸ್ತಾಪದ ನಂತರ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎರಡರ ನಿರ್ಧಾರವನ್ನು ತೆಗೆದುಕೊಂಡಿದೆ. ಎರಡನೆಯದಾಗಿ, ಯೋಗವು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಸಿರಿಧಾನ್ಯಗಳು ಕೂಡ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೂರನೆಯ ವಿಷಯವು ಹೆಚ್ಚು ಮಹತ್ವಪೂರ್ಣವಾಗಿದೆ- ಎರಡೂ ಅಭಿಯಾನಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯಿಂದಾಗಿ ಕ್ರಾಂತಿ ಮೂಡುತ್ತಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ದೇಹದಾರ್ಢ್ಯವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಂತೆ, ಜನರು ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಕೂಡಾ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಜನರು ಈಗ ಸಿರಿಧಾನ್ಯಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯ ದೊಡ್ಡ ಪರಿಣಾಮವೂ ಗೋಚರಿಸುತ್ತಿದೆ. ಸಾಂಪ್ರದಾಯಿಕವಾಗಿ ಸಿರಿಧಾನ್ಯಗಳ ಉತ್ಪಾದನೆ ಮಾಡುತ್ತಿದ್ದ ಸಣ್ಣ ರೈತರು ಉತ್ಸಾಹಭರಿತರಾಗಿದ್ದಾರೆ. ವಿಶ್ವ ಇಂದು ಸಿರಿಧಾನ್ಯಗಳ ಮಹತ್ವವನ್ನು ಅರಿತುಕೊಳ್ಳಲು ಪ್ರಾರಂಭಿಸಿದೆ ಎಂದು ಅವರು ತುಂಬಾ ಸಂತೋಷಪಡುತ್ತಿದ್ದಾರೆ. ಮತ್ತೊಂದೆಡೆ, ಎಫ್ಪಿಒಗಳು ಮತ್ತು ಉದ್ಯಮಿಗಳು ಸಿರಿಧಾನ್ಯಗಳನ್ನು ಮಾರುಕಟ್ಟೆಗೆ ತಲುಪಿಸುವ ಮತ್ತು ಜನರಿಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ.
ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ನಿವಾಸಿ ಕೆ.ವಿ. ರಾಮ ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳಿಗಾಗಿ ಉತ್ತಮ ಸಂಬಳದ ಉದ್ಯೋಗವನ್ನು ತೊರೆದರು. ಅಮ್ಮನ ಕೈಯಿಂದ ಮಾಡಿದ ಸಿರಿಧಾನ್ಯಗಳ ರುಚಿ ಎಷ್ಟಿತ್ತೆಂದರೆ ಅವರು ತಮ್ಮ ಗ್ರಾಮದಲ್ಲಿ ಸಜ್ಜೆಯ ಸಂಸ್ಕರಣಾ ಘಟಕವನ್ನೇ ಪ್ರಾರಂಭಿಸಿದರು. ಸುಬ್ಬಾರೆಡ್ಡಿ ಅವರು ಸಿರಿಧಾನ್ಯಗಳ ಪ್ರಯೋಜನಗಳನ್ನು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ಅವು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ಸಮೀಪದ ಕೆನಾಡ್ ಗ್ರಾಮದ ನಿವಾಸಿ ಶರ್ಮಿಳಾ ಓಸ್ವಾಲ್ ಕಳೆದ 20 ವರ್ಷಗಳಿಂದ ಸಿರಿಧಾನ್ಯಗಳ ಉತ್ಪಾದನೆ ಮೂಲಕ ವಿಶಿಷ್ಟ ರೀತಿಯ ಕೊಡುಗೆ ನೀಡುತ್ತಿದ್ದಾರೆ. ರೈತರಿಗೆ ಸ್ಮಾರ್ಟ್ ಕೃಷಿಯ ತರಬೇತಿ ನೀಡುತ್ತಿದ್ದಾರೆ. ಇವರ ಪ್ರಯತ್ನದಿಂದ ಸಿರಿಧಾನ್ಯಗಳ ಇಳುವರಿ ಮಾತ್ರವಲ್ಲದೆ ರೈತರ ಆದಾಯವೂ ಹೆಚ್ಚಿದೆ.
ಛತ್ತೀಸ್ಗಢದ ರಾಯ್ಗಡ್ಗೆ ಭೇಟಿ ನೀಡುವ ಅವಕಾಶ ನಿಮಗೆ ದೊರೆತರೆ, ನೀವು ಮಿಲೆಟ್ಸ್ ಕೆಫೆಗೆ ಖಂಡಿತ ಭೇಟಿ ನೀಡಿ. ಕೆಲವು ತಿಂಗಳ ಹಿಂದೆ ಆರಂಭವಾದ ಈ ಮಿಲ್ಲೆಟ್ಸ್ ಕೆಫೆಯಲ್ಲಿ ಚೀಲಾ, ದೋಸೆ, ಮೊಮೊಸ್, ಪಿಜ್ಜಾ, ಮಂಚೂರಿಯನ್ ಮುಂತಾದ ವಸ್ತುಗಳು ಹೆಚ್ಚು ಜನಪ್ರಿಯವಾಗುತ್ತಿವೆ.
ನಾನು ನಿಮಗೆ ಇನ್ನೊಂದು ವಿಷಯ ಕೇಳಬಹುದೇ? ನೀವು ಉದ್ಯಮಿ ಎಂಬ ಪದವನ್ನು ಕೇಳಿರಬೇಕು, ಆದರೆ ನೀವು Milletpreneurs ಅನ್ನು ಕೇಳಿದ್ದೀರಾ? ಒಡಿಶಾದ Milletpreneurs ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದ್ದಾರೆ. ಬುಡಕಟ್ಟು ಜಿಲ್ಲೆ ಸುಂದರ್ಗಢ್ನ ಸಮೀಪ ಸುಮಾರು 1500 ಮಹಿಳೆಯರ ಸ್ವಸಹಾಯ ಗುಂಪೊಂದು ಒಡಿಶಾ ಮಿಲೆಟ್ಸ್ ಮಿಷನ್ ಜೊತೆಗೆ ಕೈಜೋಡಿಸಿದೆ. ಇಲ್ಲಿ ಮಹಿಳೆಯರು ಸಿರಿಧಾನ್ಯಗಳಿಂದ ಕುಕ್ಕೀಸ್, ರಸಗುಲ್ಲಾ, ಗುಲಾಬ್ ಜಾಮೂನ್ ಮತ್ತು ಕೇಕ್ ಕೂಡಾ ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿಂದಾಗಿ, ಮಹಿಳೆಯರ ಆದಾಯವೂ ಹೆಚ್ಚುತ್ತಿದೆ.
ಕರ್ನಾಟಕದ ಕಲಬುರ್ಗಿಯಲ್ಲಿರುವ ಆಳಂದ ಭೂತಾಯಿ (ಆಳಂದ್ ಭೂತಾಯಿ) ಮಿಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯು ಕಳೆದ ವರ್ಷ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಮೇಲ್ವಿಚಾರಣೆಯಲ್ಲಿ ಕೆಲಸವನ್ನು ಪ್ರಾರಂಭಿಸಿತು. ಇಲ್ಲಿನ ಖಾಕ್ರಾ, ಬಿಸ್ಕೆಟ್, ಲಡ್ಡೂಗಳನ್ನು ಜನರು ಇಷ್ಟಪಡುತ್ತಿದ್ದಾರೆ. ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ, ಹುಲ್ಸೂರು ಉತ್ಪಾದಕ ಕಂಪನಿಗೆ ಸೇರಿದ ಮಹಿಳೆಯರು ಸಿರಿಧಾನ್ಯ ಕೃಷಿಯ ಜೊತೆಗೆ ಅವರ ಹಿಟ್ಟನ್ನು ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಅವರ ಆದಾಯವೂ ಸಾಕಷ್ಟು ಹೆಚ್ಚಿದೆ. ನೈಸರ್ಗಿಕ ಕೃಷಿ ಕೈಗೊಳ್ಳುತ್ತಿರುವ ಛತ್ತೀಸ್ಗಢದ ಸಂದೀಪ್ ಶರ್ಮಾ ಅವರ ಎಫ್ಪಿಒ ಜೊತೆಗೆ ಇಂದು 12 ರಾಜ್ಯಗಳ ಕೃಷಿಕರು ಕೈಜೋಡಿಸಿದ್ದಾರೆ. ಬಿಲಾಸ್ಪುರದ ಎಫ್ಪಿಒ 8 ಬಗೆಯ ಸಿರಿಧಾನ್ಯಗಳ ಹಿಟ್ಟು ಮತ್ತು ಅದರ ಭಕ್ಷ್ಯಗಳನ್ನು ತಯಾರಿಸುತ್ತಿದೆ.
ಸ್ನೇಹಿತರೇ, ಇಂದು ಭಾರತದ ಮೂಲೆ ಮೂಲೆಯಲ್ಲಿ ನಿರಂತರವಾಗಿ G-20 ಶೃಂಗಸಭೆಗಳು ನಡೆಯುತ್ತಿವೆ ಮತ್ತು G-20 ಶೃಂಗಸಭೆ ನಡೆಯುವಲ್ಲೆಲ್ಲಾ, ಸಿರಿಧಾನ್ಯಗಳಿಂದ ಮಾಡಿದ ಪೌಷ್ಟಿಕ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಇಲ್ಲಿ ತಯಾರಿಸಿದ ಸಜ್ಜೆಯಿಂದ ತಯಾರಿಸಿದ ಖಿಚಡಿ, ಪೋಹಾ, ಖೀರ್ ಮತ್ತು ರೊಟ್ಟಿಯಂತಹ ಖಾದ್ಯಗಳ ಜೊತೆ ಜೊತೆಗೆ ರಾಗಿಯಿಂದ ತಯಾರಿಸಿದ ಪಾಯಸ, ಪೂರಿ ಮತ್ತು ದೋಸೆಗಳನ್ನು ಸಹ ಉಣಬಡಿಸಲಾಗುತ್ತದೆ. G20 ನಡೆಯುತ್ತಿರುವ ಎಲ್ಲ ಸ್ಥಳಗಳಲ್ಲೂ ಸಿರಿಧಾನ್ಯಗಳ ಪ್ರದರ್ಶನಗಳಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಆರೋಗ್ಯ ಪಾನೀಯಗಳು, ಧಾನ್ಯಗಳು ಮತ್ತು ನೂಡಲ್ಸ್ ಅನ್ನು ಪ್ರದರ್ಶಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಭಾರತೀಯ ಮಿಷನ್ಗಳು ಇವುಗಳ ಜನಪ್ರಿಯತೆಯನ್ನು ಹೆಚ್ಚಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿವೆ. ದೇಶದ ಈ ಪ್ರಯತ್ನ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಸಿರಿಧಾನ್ಯ ಬೇಡಿಕೆಯು ನಮ್ಮ ಸಣ್ಣಪುಟ್ಟ ರೈತರಿಗೆ ಷ್ಟೊಂದು ಬಲವನ್ನು ನೀಡಲಿದೆ ಎಂದು ನೀವು ಊಹಿಸಬಹುದು. ಇಂದು ಸಿರಿಧಾನ್ಯಗಳಿಂದ ಸಿದ್ಧಪಡಿಸಲಾಗುತ್ತಿರುವ ವಿವಿಧ ರೀತಿಯ ಹೊಸ ತಿಂಡಿ ತಿನಿಸುಗಳು ಯುವ ಪೀಳಿಗೆಗೆ ಕೂಡಾ ಅಷ್ಟೇ ಇಷ್ಟವಾಗುತ್ತಿರುವುದನ್ನು ಕಂಡು ನನಗೂ ಬಹಳ ಸಂತೋಷವೆನಿಸಿದೆ. ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಅದ್ಭುತವಾಗಿ ಪ್ರಾರಂಭಿಸಿದ್ದಕ್ಕಾಗಿ ಮತ್ತು ಅದನ್ನು ನಿರಂತರವಾಗಿ ಮುನ್ನಡೆಸುತ್ತಿರುವುದಕ್ಕಾಗಿ ನಾನು 'ಮನದ ಮಾತಿನ' ಶ್ರೋತೃಗಳನ್ನು ಅಭಿನಂದಿಸುತ್ತೇನೆ.ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೊಂದಿಗೆ ಯಾರಾದರೂ ಟೂರಿಸ್ಟ್ ಹಬ್ ಗೋವಾ ಬಗ್ಗೆ ಮಾತನಾಡಿದಾಗ, ನಿಮಗೆ ಏನು ನೆನಪಿಗೆ ಬರುತ್ತದೆ? ಗೋವಾ ಹೆಸರು ಕೇಳುತ್ತಲೇ ಎಲ್ಲಕ್ಕಿಂತ ಮೊದಲು ಅಲ್ಲಿನ ಸುಂದರ ಕರಾವಳಿ, ಸಮುದ್ರ ತೀರಗಳು ಮತ್ತು ರುಚಿಯಾದ ಊಟ ತಿಂಡಿಗಳ ನೆನಪು ಬರುವುದು ಸರ್ವೇಸಾಮಾನ್ಯ. ಆದರೆ ಈ ಬಾರಿ ಗೋವಾದಲ್ಲಿ ಮತ್ತೊಂದು ಘಟನೆ ಕೂಡಾ ನಡೆದಿದ್ದು ಅದು ಬಹಳ ಮುಖ್ಯವಾದ ವಿಷಯವಾಗಿತ್ತು. ಇಂದು ಮನದ ಮಾತಿನಲ್ಲಿ ನಾನು ನಿಮ್ಮೊಂದಿಗೆ ಈ ವಿಷಯ ಹಂಚಿಕೊಳ್ಳಲು ಬಯಸುತ್ತೇನೆ. ಗೋವಾದಲ್ಲಿ ಆಯೋಜನೆಯಾಗಿದ್ದ ಈ ಕಾರ್ಯಕ್ರಮವೆಂದರೆ – ಪರ್ಪಲ್ ಫೆಸ್ಟ್. ಈ ನೇರಳೆ ಉತ್ಸವ ಅಥವಾ ಪರ್ಪಲ್ ಫೆಸ್ಟ್ ಅನ್ನು ಗೋವಾದ ಪಣಜಿಯಲ್ಲಿ ಇದೇ ತಿಂಗಳು ಅಂದರೆ ಜನವರಿ 6 ರಿಂದ 8 ರವರೆಗೆ ಆಯೋಜಿಸಲಾಗಿತ್ತು. ದಿವ್ಯಾಂಗರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಇದೊಂದು ಬಹಳ ವಿಶಿಷ್ಟವಾದ ಪ್ರಯತ್ನವಾಗಿತ್ತು. 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಸೋದರ ಸೋದರಿಯರು ಇದರಲ್ಲಿ ಪಾಲ್ಗೊಂಡಿದ್ದರೆಂದು ತಿಳಿದಾಗ ಈ ಪರ್ಪಲ್ ಫೆಸ್ಟ್ ಎಷ್ಟು ದೊಡ್ಡ ಅವಕಾಶವಾಗಿತ್ತೆಂಬ ಅಂದಾಜು ನಿಮಗೆ ದೊರೆಯುತ್ತದೆ. ಇಲ್ಲಿಗೆ ಬಂದಿದ್ದ ಜನರು ತಾವು “ಮೀರಾಮಾರ್ ತೀರ”ದಲ್ಲಿ ತಿರುಗಾಟ ನಡೆಸುವ ಸಂಪೂರ್ಣ ಆನಂದ ಪಡೆಯಬಹುದೆಂದು ತಿಳಿದು ಬಹಳ ರೋಮಾಂಚಿತರಾಗಿದ್ದರು. ವಾಸ್ತವದಲ್ಲಿ ಮೀರಾಮಾರ್ ತೀರವನ್ನು ನಮ್ಮ ದಿವ್ಯಾಂಗ ಸೋದರ ಸೋದರಿಯರು ಸುಲಭವಾಗಿ ತಲುಪುವಂತಹ ಗೋವಾದಲ್ಲಿನ ಸಮುದ್ರ ತೀರಗಳಲ್ಲಿ ಒಂದಾಗಿ ಮಾಡಲಾಗಿದೆ. ಇಲ್ಲಿ ಕ್ರಿಕೆಟ್ ಪಂದ್ಯಾವಳಿ, ಟೇಬಲ್ ಟೆನ್ನಿಸ್ ಪಂದ್ಯಾವಳಿ, ಮ್ಯಾರಥಾನ್ ಸ್ಪರ್ಧೆಯೊಂದಿಗೆ ಒಂದು ಮಾತು ಬಾರದವರ – ದೃಷ್ಟಿ ಹೀನರ ಸಮಾವೇಶ ಕೂಡಾ ಆಯೋಜಿಸಲಾಗಿತ್ತು. ಇಲ್ಲಿ ಒಂದು ವಿಶಿಷ್ಟ ಪಕ್ಷಿ ವೀಕ್ಷಣಾ ಕಾರ್ಯಕ್ರಮ ಮಾತ್ರವಲ್ಲದೇ ಒಂದು ಚಿತ್ರ ಕೂಡಾ ಪ್ರದರ್ಶಿಸಲಾಯಿತು. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು, ಇದರಿಂದಾಗಿ ನಮ್ಮೆಲ್ಲಾ ದಿವ್ಯಾಂಗ ಸೋದರ ಸೋದರಿಯರು ಮತ್ತು ಮಕ್ಕಳು ಇದರ ಸಂಪೂರ್ಣ ಆನಂದ ಪಡೆಯುವಂತಾಯಿತು. ಪರ್ಪಲ್ ಫೆಸ್ಟ್ ನ ವಿಶೇಷ ಅಂಶವೆಂದರೆ ಇದರಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆ. ದಿವ್ಯಾಂಗ ಸ್ನೇಹಿ ಉತ್ಪನ್ನಗಳನ್ನು ಈ ಖಾಸಗಿ ವಲಯದ ಪಾಲುದಾರಿಕೆ ಮೂಲಕ ಪ್ರದರ್ಶಿಸಲಾಗಿತ್ತು. ಈ ಉತ್ಸವದಲ್ಲಿ ದಿವ್ಯಾಂಗರ ಕಲ್ಯಾಣ ಕುರಿತು ಜಾಗರೂಕತೆ ಮೂಡಿಸುವ ಅನೇಕ ಪ್ರಯತ್ನಗಳು ಕಂಡುಬಂದವು. ಪರ್ಪಲ್ ಉತ್ಸವ ಯಶಸ್ವಿಯಾಗಿಸುವುದಕ್ಕೆ ಕಾರಣರಾದ, ಇದರಲ್ಲಿ ಪಾಲ್ಗೊಂಡ ಪ್ರತಿಯೊಬ್ಬರನ್ನೂ ನಾನು ಅಭಿನಂದಿಸುತ್ತಿದ್ದೇನೆ. ಇದನ್ನು ಆಯೋಜಿಸಲು ಹಗಲು ರಾತ್ರಿ ಸತತವಾಗಿ ಶ್ರಮಿಸಿದ ಸ್ವಯಂ ಸೇವಕರನ್ನು ಕೂಡಾ ನಾನು ಅಭಿನಂದಿಸುತ್ತೇನೆ. ಆಕ್ಸೆಸಬಲ್ ಇಂಡಿಯಾ ಕುರಿತ ನಮ್ಮ ಮುನ್ನೋಟವನ್ನು ಸಾಕಾರಗೊಳಿಸುವುದಕ್ಕೆ ಈ ರೀತಿಯ ಅಭಿಯಾನಗಳು ಬಹಳ ಪರಿಣಾಮಕಾರಿ ಎನ್ನುವುದನ್ನು ಸಾಬೀತು ಪಡಿಸುತ್ತವೆ ಎಂಬ ಸಂಪೂರ್ಣ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ಮನದ ಮಾತಿನಲ್ಲಿ ನಾನು ಹೇಳುವ ಒಂದು ವಿಷಯ ಕೇಳಿ ನಿಮಗೆ ಬಹಳ ಸಂತೋಷವೆನಿಸುತ್ತದೆ, ಬಹಳ ಹೆಮ್ಮೆಯುಂಟಾಗುತ್ತದೆ ಹಾಗೆಯೇ ನಿಮ್ಮ ಮನಸ್ಸು ಆಹಾ ಆಹಾ ಎಂದು ಸಂತೋಷದಿಂದ ಕೂಗುತ್ತದೆ.! ದೇಶದ ಅತ್ಯಂತ ಹಳೆಯ ವಿಜ್ಞಾನ ಸಂಸ್ಥೆಗಳಲ್ಲಿ ಒಂದೆನಿಸಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಎಂದರೆ, IISc ಒಂದು ಅದ್ಭುತ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಮನದ ಮಾತಿನಲ್ಲಿ ನಾನು ಈ ಮೊದಲು ಕೂಡಾ ಇದರ ಕುರಿತು ಮಾತನಾಡಿದ್ದೇನೆ, ಭಾರತದ ಇಬ್ಬರು ಮಹಾನ್ ಪುರುಷರೆನಿಸಿದ ಜೆಮ್ ಶೆಡ್ ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದರು ಯಾವ ರೀತಿ ಈ ಸಂಸ್ಥೆಯ ಹಿಂದಿನ ಸ್ಫೂರ್ತಿಯಾಗಿದ್ದಾರೆಂದು ಹೇಳಿದ್ದೇನೆ. ನನಗೆ ಮತ್ತು ನಿಮಗೆಲ್ಲರಿಗೂ ಸಂತಸ ಮತ್ತು ಹೆಮ್ಮೆ ತರುವ ವಿಷಯವೆಂದರೆ 2022 ನೇ ಇಸವಿಯಲ್ಲಿ, ಈ ಸಂಸ್ಥೆಯ ಹೆಸರಿನಲ್ಲಿ ಒಟ್ಟು 145 ಪೇಟೆಂಟ್ ಗಳಿವೆ. ಇದರ ಅರ್ಥವೆಂದರೆ – ಪ್ರತಿ ಐದು ದಿನಗಳಿಗೊಮ್ಮೆ ಎರಡು ಪೇಟೆಂಟ್ ಗಳು. ಈ ದಾಖಲೆ ನಿಜಕ್ಕೂ ಒಂದು ಅದ್ಭುತವೇ ಸರಿ. ಈ ಯಶಸ್ಸಿಗಾಗಿ ನಾನು IISc ನ ಸಂಪೂರ್ಣ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಸ್ನೇಹಿತರೇ, ಇಂದು Patent Filing ನಲ್ಲಿ ಭಾರತ 7 ನೇ ಸ್ಥಾನದಲ್ಲಿದೆ ಮತ್ತು ವ್ಯಾಪಾರ ಗುರುತಿನಲ್ಲಿ 5 ನೇ ಸ್ಥಾನದಲ್ಲಿದೆ. ಕೇವಲ ಪೇಟೆಂಟ್ ಗಳ ವಿಷಯಕ್ಕೆ ಬಂದರೆ, ಕಳೆದ ಐದು ವರ್ಷಗಳಲ್ಲಿ ಇದರಲ್ಲಿ ಸುಮಾರು 50 ಪ್ರತಿಶತ ವೃದ್ಧಿಯಾಗಿದೆ. Global Innovation Index ನಲ್ಲಿ ಕೂಡಾ ಭಾರತದ ranking ನಲ್ಲಿ, ಅತ್ಯಂತ ಸುಧಾರಣೆಯಾಗಿದೆ ಮತ್ತು ಈಗ 40 ನೇ ಸ್ಥಾನ ತಲುಪಿದೆ. 2015 ರಲ್ಲಿ ಭಾರತ ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ 80ನೇ ಸ್ಥಾನಕ್ಕಿಂತಲೂ ಹಿಂದಿತ್ತು. ನಿಮಗೆ ಮತ್ತೊಂದು ಆಸಕ್ತಿದಾಯಕ ವಿಷಯ ಹೇಳಲು ಬಯಸುತ್ತೇನೆ. ಭಾರತದಲ್ಲಿ ಕಳೆದ 11 ವರ್ಷಗಳಲ್ಲಿ ಮೊದಲ ಬಾರಿಗೆ Domestic Patent Filing ನ ಸಂಖ್ಯೆ Foreign Filing ಗಿಂತ ಹೆಚ್ಚು ಕಂಡು ಬಂದಿದೆ. ಇದು ಭಾರತದ ವೃದ್ಧಿಯಾಗುತ್ತಿರುವ ವೈಜ್ಞಾನಿಕ ಸಾಮರ್ಥ್ಯವನ್ನು ತೋರುತ್ತದೆ.
ಸ್ನೇಹಿತರೇ, 21 ನೇ ಶತಮಾನದ ಜಾಗತಿಕ ಆರ್ಥಿಕತೆಯಲ್ಲಿ ಜ್ಞಾನವೇ ಅತ್ಯುನ್ನತ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಭಾರತದ Techade ನ ಕನಸು ನಮ್ಮೆಲ್ಲಾ Innovators ಮತ್ತು ಅವರ ಪೇಟೆಂಟ್ ಗಳ ಬಲದಿಂದ ಖಂಡಿತವಾಗಿಯೂ ನನಸಾಗುತ್ತದೆಂಬ ವಿಶ್ವಾಸ ನನಗಿದೆ. ಇದರಿಂದ ನಾವೆಲ್ಲರೂ ನಮ್ಮ ದೇಶದಲ್ಲೇ ತಯಾರಿಸಲಾದ ವಿಶ್ವ ಶ್ರೇಣಿಯ ತಂತ್ರಜ್ಞಾನ ಮತ್ತು ಉತ್ಪನ್ನಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, NaMoApp ನಲ್ಲಿ ನಾನು ತೆಲಂಗಾಣದ ಇಂಜಿನಿಯರ್ ವಿಜಯ್ ಅವರ ಪೋಸ್ಟ್ ನೋಡಿದೆ. ಇದರಲ್ಲಿ ವಿಜಯ್ ಅವರು ಇ-ತ್ಯಾಜ್ಯ ಕುರಿತು ಬರೆದಿದ್ದಾರೆ. ಮನದ ಮಾತಿನಲ್ಲಿ ನಾನು ಈ ವಿಷಯದ ಬಗ್ಗೆ ಮಾತನಾಡಬೇಕೆಂದು ವಿಜಯ್ ಅವರು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾವು ಈ ಮೊದಲು ಕೂಡಾ ವೇಸ್ಟ್ ಟು ವೆಲ್ತ್ ಅಂದರೆ ಕಸದಿಂದ ರಸ ಕುರಿತು ಮಾತನಾಡಿದ್ದೇವೆ. ಆದರೆ, ಬನ್ನಿ ಇಂದು ಇ-ತ್ಯಾಜ್ಯ ಕುರಿತು ಚರ್ಚಿಸೋಣ.
ಸ್ನೇಹಿತರೇ, ಇಂದು ಪ್ರತಿ ಮನೆಯಲ್ಲೂ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ನಂತಹ ಸಾಧನಗಳು ಸಾಮಾನ್ಯವಾಗಿವೆ. ಇಡೀ ದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ಕೋಟಿಗಳಷ್ಟಿರಬಹುದು. ಇಂದಿನ ನವೀನ ಸಾಧನಗಳು ಮುಂದಿನ ಭವಿಷ್ಯದ ಇ-ತ್ಯಾಜ್ಯಗಳೇ ಆಗುತ್ತವೆ. ಯಾರೇ ಆಗಲಿ ಹೊಸ ಸಾಧನವನ್ನು ಖರೀದಿಸಿದಾಗ ಅಥವಾ ತಮ್ಮ ಹಳೆಯ ಸಾಧನವನ್ನು ಬದಲಾಯಿಸಿದಾಗ, ಅದನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆಯೋ ಇಲ್ಲವೋ ಎಂಬ ವಿಷಯದ ಮೇಲೆ ಗಮನ ಹರಿಸುವುದು ಬಹಳ ಅಗತ್ಯವಾಗಿದೆ. ಒಂದುವೇಳೆ ಇ-ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇದ್ದರೆ, ನಮ್ಮ ಪರಿಸರಕ್ಕೆ ಕೂಡಾ ಹಾನಿಯುಂಟಾಗಬಹುದು. ಆದರೆ, ಜಾಗರೂಕತೆಯಿಂದ ಈ ರೀತಿ ಮಾಡಿದಾಗ, ಇದು Recycle ಮತ್ತು ಮರುಬಳಕೆಯ Circular ಆರ್ಥಿಕತೆಯ ಬಹುದೊಡ್ಡ ಶಕ್ತಿಯಾಗಬಹುದು. ಪ್ರತಿ ವರ್ಷ 50 ದಶಲಕ್ಷ ಟನ್ ಇ-ತ್ಯಾಜ್ಯವನ್ನು ಬಿಸಾಡಲಾಗುತ್ತದೆ ಎಂದು ವಿಶ್ವಸಂಸ್ಥೆಯ ಒಂದು ವರದಿ ಹೇಳುತ್ತದೆ. ಎಷ್ಟಾಗುತ್ತದೆಂದು ನೀವು ಅಂದಾಜಿಸಬಹುದೇ? ಮಾನವ ಇತಿಹಾಸದಲ್ಲಿ ಎಷ್ಟು ವಾಣಿಜ್ಯ ವಿಮಾನಗಳನ್ನು ತಯಾರಿಸಲಾಗಿದೆಯೋ ಅವುಗಳೆಲ್ಲದರ ತೂಕವನ್ನು ಒಟ್ಟು ಸೇರಿಸಿದರೂ ಕೂಡಾ, ಈಗ ಉತ್ಪತ್ತಿಯಾಗುತ್ತಿರುವ ಇ-ತ್ಯಾಜ್ಯದ ತೂಕಕ್ಕೆ ಅದು ಸಮನಾಗುವುದಿಲ್ಲ. ಇದು ಪ್ರತಿ ಸೆಕೆಂಡಿಗೆ ಸುಮಾರು 800 ಲ್ಯಾಪ್ ಟಾಪ್ ಗಳನ್ನು ಬಿಸಾಡುತ್ತಿರುವಂತಿದೆ. ಬೇರೆ ಬೇರೆ ಪ್ರಕ್ರಿಯೆಗಳ ಮೂಲಕ ಈ ಇ-ತ್ಯಾಜ್ಯದಿಂದ ಸುಮಾರು 17 ವಿಧದ ಅಮೂಲ್ಯ ಲೋಹ ತೆಗೆಯಬಹುದೆಂದು ತಿಳಿದು ನೀವು ಬೆಚ್ಚಿ ಬೀಳುತ್ತೀರಿ. ಇವುಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ ಮತ್ತು ನಿಕ್ಕೆಲ್ ಸೇರಿವೆ. ಆದ್ದರಿಂದ ಇ-ತ್ಯಾಜ್ಯದ ಸದುಪಯೋಗ ಪಡೆದುಕೊಳ್ಳುವುದೆಂದರೆ ಕಸದಿಂದ ರಸ ತಯಾರಿಸುವುದಕ್ಕಿಂತ ಕಡಿಮೆಯೇನಲ್ಲ. ಈ ನಿಟ್ಟಿನಲ್ಲಿ ಇನ್ನೋವೇಟಿವ್ ಕೆಲಸ ಮಾಡುತ್ತಿರುವ ನವೋದ್ಯಮಗಳು ಕಡಿಮೆಯೇನಿಲ್ಲ. ಇಂದು ಸುಮಾರು, 500 E-Waste Recyclers ಈ ಕ್ಷೇತ್ರದೊಂದಿಗೆ ತೊಡಗಿಕೊಂಡಿವೆ ಮತ್ತು ಅನೇಕ ಹೊಸ ಉದ್ಯಮಿಗಳನ್ನು ಕೂಡಾ ಇದರಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಈ ವಲಯವು ಸಾವಿರಾರು ಮಂದಿಗೆ ನೇರ ಉದ್ಯೋಗವನ್ನೂ ನೀಡಿದೆ. ಬೆಂಗಳೂರಿನ E-Parisaraa ಇಂತಹದ್ದೇ ಒಂದು ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಇದು Printed Circuit Boards ನ ದುಬಾರಿ ಲೋಹಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಇದೇ ರೀತಿ ಮುಂಬೈನಲ್ಲಿ ಕೆಲಸ ಮಾಡುತ್ತಿರುವ Ecoreco (ಇಕೋ- ರೀಕೋ) ಸಂಸ್ಥೆಯು Mobile App ನಿಂದ ಇ-ತ್ಯಾಜ್ಯ ಸಂಗ್ರಹಿಸುವ ಸಿಸ್ಟಂ ಸಿದ್ಧಪಡಿಸಿದೆ. ಉತ್ತರಾಖಂಡದ ರೂಡಕೀ ನಲ್ಲಿರುವ Attero (ಎಟೆರೋ) Recycling ಈ ವಲಯದಲ್ಲಿ ವಿಶ್ವಾದ್ಯಂತ ಅನೇಕ Patents ತನ್ನದಾಗಿಸಿಕೊಂಡಿದೆ. ಈ ಸಂಸ್ಥೆ ಕೂಡಾ ತನ್ನದೇ ಆದ E-Waste Recycling Technology ಅಭಿವೃದ್ಧಿಪಡಿಸಿ ಸಾಕಷ್ಟು ಹೆಸರು ಗಳಿಸಿದೆ. ಭೋಪಾಲ್ ನಲ್ಲಿ Mobile App ಮತ್ತು ಜಾಲತಾಣ ‘ಕಬಾಡೀವಾಲ’ ಮೂಲಕ ಟನ್ ಗಳಷ್ಟು ಇ-ತ್ಯಾಜ್ಯ ಸಂಗ್ರಹಿಸುತ್ತಿದೆ. ಇಂತಹ ಅನೇಕ ಉದಾಹರಣೆಗಳಿವೆ. ಇವೆಲ್ಲವೂ ಭಾರತವನ್ನು ಜಾಗತಿಕ ರೀಸೈಕ್ಲಿಂಗ್ ಹಬ್ ಮಾಡುವಲ್ಲಿ ಸಹಾಯ ಮಾಡುತ್ತಿವೆ, ಆದರೆ ಇಂತಹ ಉಪಕ್ರಮಗಳ ಯಶಸ್ಸಿಗಾಗಿ ಒಂದು ಅತ್ಯಗತ್ಯ ಷರತ್ತು ಕೂಡಾ ಇದೆ – ಅದೆಂದರೆ, ಇ-ತ್ಯಾಜ್ಯ ವಿಲೇವಾರಿ ಮಾಡುವ ಸುರಕ್ಷಿತ ವಿಧಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರಬೇಕು. ಪ್ರತಿ ವರ್ಷ ಕೇವಲ ಶೇಕಡಾ 15-17 ರಷ್ಟು ಇ-ತ್ಯಾಜ್ಯವನ್ನು ಮಾತ್ರಾ ರೀಸೈಕಲ್ ಮಾಡಲಾಗುತ್ತಿದೆ ಎಂದು ಇ-ತ್ಯಾಜ್ಯದ ವಲಯದಲ್ಲಿ ಕೆಲಸ ಮಾಡುವವರು ಹೇಳುತ್ತಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಇಡೀ ವಿಶ್ವದಲ್ಲಿ ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯದ ಸಂರಕ್ಷಣೆ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಬಲವಾದ ಪ್ರಯತ್ನಗಳ ಬಗ್ಗೆ ನಾವು ಸತತವಾಗಿ ಮಾತನಾಡುತ್ತಿದ್ದೇವೆ. ಭಾರತ ತನ್ನ wetlands ಗಾಗಿ ಮಾಡಿರುವ ಕೆಲಸವನ್ನು ತಿಳಿದರೆ, ನಿಮಗೆ ಕೂಡಾ ಬಹಳ ಸಂತಸವೆನಿಸುತ್ತದೆ. wetlands ಅಂದರೇನು ಎಂದು ಕೆಲವು ಶ್ರೋತೃಗಳು ಯೋಚಿಸುತ್ತಿರಬಹುದು? Wetland sites ಅಥವಾ ಜೌಗು ಪ್ರದೇಶಗಳು ಎಂದರೆ ಜೌಗು ಮಣ್ಣಿರುವ ಭೂಮಿಯಲ್ಲಿ ವರ್ಷವಿಡೀ ನೀರು ಸಂಗ್ರಹವಾಗಿರುವ ಸ್ಥಳಗಳು ಎಂದರ್ಥ. ಕೆಲವೇ ದಿನಗಳ ನಂತರ ಫೆಬ್ರವರಿ 2 ರಂದು World Wetlands day ಬರಲಿದೆ. ನಮ್ಮ ಭೂಮಿಯ ಅಸ್ತಿತ್ವಕ್ಕೆ ಜೌಗು ಪ್ರದೇಶಗಳು ಬಹಳ ಅತ್ಯಗತ್ಯ, ಏಕೆಂದರೆ ಇವುಗಳನ್ನು ಅನೇಕ ಪಕ್ಷಿಗಳು, ಜೀವಜಂತುಗಳು ಅವಲಂಬಿಸಿರುತ್ತವೆ. ಈ ಜೀವವೈವಿಧ್ಯವನ್ನು ಸಮೃದ್ಧವಾಗಿಸುವುದರೊಂದಿಗೆ ಇದು ಪ್ರವಾಹ ನಿಯಂತ್ರಣ ಮತ್ತು ಅಂತರ್ಜಲ ಮರುಪೂರಣವನ್ನು ಕೂಡಾ ಖಚಿತ ಪಡಿಸುತ್ತದೆ. Ramsar (ರಾಮ್ ಸರ್) Sites ಇಂತಹ ಜೌಗು ಪ್ರದೇಶಗಳಾಗಿವೆ, ಮತ್ತು ಇದಕ್ಕೆ ಅಂತಾರಾಷ್ಟ್ರೀಯ ಪ್ರಾಮುಖ್ಯ ಇದೆ ಎನ್ನುವುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. Wetlands ಯಾವುದೇ ದೇಶದಲ್ಲಿರಲಿ, ಅದು ಅನೇಕ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ, ಆಗ ಅವುಗಳನ್ನು Ramsar Sites ಎಂದು ಘೋಷಿಸಲಾಗುತ್ತದೆ. Ramsar Sites ನಲ್ಲಿ 20,000 ಅಥವಾ ಅದಕ್ಕಿಂತ ಅಧಿಕ water birds ಇರಬೇಕಾಗುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಜಾತಿಯ ಮೀನುಗಳಿರಬೇಕಾಗುತ್ತದೆ. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ, ಅಮೃತ ಮಹೋತ್ಸವದ ಸಂದರ್ಭದಲ್ಲಿ Ramsar Sites ಕುರಿತ ಒಂದು ಒಳ್ಳೆಯ ಸಮಾಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಈಗ Ramsar Sites ಗಳ ಒಟ್ಟು ಸಂಖ್ಯೆ 75 ರಷ್ಟಿದೆ, 2014 ಕ್ಕೂ ಮೊದಲು ದೇಶದಲ್ಲಿ ಕೇವಲ 26 Ramsar Sites ಇದ್ದವು. ಈ ಜೀವವೈವಿಧ್ಯವನ್ನು ಸಂರಕ್ಷಿಸಿರುವ ಸ್ಥಳೀಯ ಸಮುದಾಯ ಪ್ರಶಂಸೆಗೆ ಅರ್ಹವಾಗಿದೆ. ಈ ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬಾಳುವ ನಮ್ಮ ಶತಮಾನಗಳಷ್ಟು ಹಳೆಯದಾದ ಸಂಸ್ಕೃತಿ ಮತ್ತು ಪರಂಪರೆ ಗೌರವಪ್ರದವೆನಿಸಿದೆ. ಭಾರತದ ಈ Wetlands ನಮ್ಮ ನೈಸರ್ಗಿಕ ಸಾಮರ್ಥ್ಯದ ಉದಾಹರಣೆಯೂ ಆಗಿದೆ. ಒಡಿಶಾದ ಚಿಲ್ಕಾ ಸರೋವರಕ್ಕೆ 40 ಕ್ಕಿಂತಲೂ ಅಧಿಕ ಜಲ ಪಕ್ಷಿ ಪ್ರಭೇದಗಳಿಗೆ ಆಶ್ರಯ ನೀಡುತ್ತದೆಂದು ಹೇಳಲಾಗುತ್ತದೆ. ಕಯಿಬುಲ್ – ಲಮ್ಜಾವು, ಲೋಕಟಾಕ್ ಅನ್ನು Swamp ಜಿಂಕೆಯ ಏಕೈಕ ನೈಸರ್ಗಿಕ ವಾಸಸ್ಥಾನ - Natural Habitat (ಹೆಬಿಟೇಟ್) ಎಂದು ಹೇಳಲಾಗುತ್ತದೆ. ತಮಿಳುನಾಡಿನ ವೇದಂತಂಗಲ್ ಅನ್ನು 2022 ರಲ್ಲಿ Ramsar Site ಎಂದು ಘೋಷಿಸಲಾಯಿತು. ಇಲ್ಲಿ ಪಕ್ಷಿ ಸಂಕುಲವನ್ನು ಸಂರಕ್ಷಿಸುವ ಸಂಪೂರ್ಣ ಶ್ರೇಯಸ್ಸು ಆ ಪ್ರದೇಶದ ಸುತ್ತಮುತ್ತಲಿನ ರೈತರಿಗೆ ಸಲ್ಲುತ್ತದೆ. ಕಾಶ್ಮೀರದಲ್ಲಿ ಪಂಜಾತ್ ನಾಗ್ ಸಮುದಾಯವು Annual Fruit Blossom festival ಮೂಲಕ ಒಂದು ದಿನವನ್ನು ವಿಶೇಷ ರೀತಿಯಲ್ಲಿ ಹಳ್ಳಿಯ ನೀರಿನ ಚಿಲುಮೆ, ಕಾಲವೆಗಳ ಸ್ವಚ್ಛತೆಗೆ ಮೀಸಲಿಟ್ಟಿದೆ. ವಿಶ್ವದ Ramsar Sites ಗಳ ಪೈಕಿ ಹೆಚ್ಚಿನವು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿವೆ. ಮಣಿಪುರದ ಲೋಕಟಾಕ್ ಮತ್ತು ಪವಿತ್ರ ಸರೋವರವೆನಿಸಿರುವ ರೇಣುಕಾ ಅಲ್ಲಿನ ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಹೊಂದಿವೆ. ಇದೇ ರೀತಿ Sambhar ಸಂಬಂಧ ದುರ್ಗಾದೇವಿಯ ಅವತಾರ ಶಾಕಾಂಬರಿ ದೇವಿಯೊಂದಿಗೆ ಕೂಡಾ ಇದೆ. ಭಾರತದಲ್ಲಿ Wetlands ನ ವ್ಯಾಪ್ತಿಯ ಕಾರಣವೆಂದರೆ Ramsar Sites ನ ಸುತ್ತಮುತ್ತ ವಾಸಿಸುವ ಜನರು. ನಾನು ಇವರೆಲ್ಲರನ್ನೂ ಪ್ರಶಂಸಿಸುತ್ತೇನೆ ಮತ್ತು ಮನ್ ಕಿ ಬಾತ್ ನ ಶ್ರೋತೃಗಳ ಪರವಾಗಿ ಶುಭಾಶಯಗಳನ್ನು ಕೋರುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿ ನಮ್ಮ ದೇಶದಲ್ಲಿ ವಿಶೇಷವಾಗಿ ಉತ್ತರ ಭಾರದಲ್ಲಿ ತೀವ್ರವಾದ ಚಳಿಯಿತ್ತು. ಈ ಚಳಿಗಾಲದಲ್ಲಿ ಜನರು ಬೆಟ್ಟಗಳ ಮೇಲೆ ಬಿದ್ದ ಹಿಮದ ಆನಂದವನ್ನೂ ಕೂಡಾ ಸಾಕಷ್ಟು ಅನುಭವಿಸಿದರು. ಜಮ್ಮು ಕಾಶ್ಮೀರದಿಂದ ಇಂತಹದ್ದೇ ಕೆಲವು ಚಿತ್ರಗಳು ಬಂದಿದ್ದು ಇಡೀ ದೇಶದ ಮನಸೂರೆಗೊಂಡವು. ಸಾಮಾಜಿಕ ಮಾಧ್ಯಮದಲ್ಲಂತೂ, ಇಡೀ ವಿಶ್ವದ ಜನರು ಈ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಹಿಮಪಾತದಿಂದಾಗಿ ನಮ್ಮ ಕಾಶ್ಮೀರ ಕಣಿವೆಯು ಪ್ರತಿ ವರ್ಷದಂತೆ ಈ ಬಾರಿ ಕೂಡಾ ಬಹಳ ಸುಂದರವಾಗಿ ಕಂಗೊಳಿಸುತ್ತಿದೆ. ಬನಿಹಾಲ್ ನಿಂದ ಬಡಗಾಮ್ ಗೆ ಹೋಗುವ ರೈಲಿನ ವಿಡಿಯೋವನ್ನು ಕೂಡಾ ಜನರು ವಿಶೇಷವಾಗಿ ನೋಡಿ ಇಷ್ಟಪಡುತ್ತಿದ್ದಾರೆ. ಅತಿ ಸುಂದರ ಹಿಮದಿಂದ ತುಂಬಿದ, ನಾಲ್ಕೂ ದಿಕ್ಕುಗಳಲ್ಲಿ ಬಿಳಿ ಬಣ್ಣದ ಹೊದಿಕೆಯಂತೆ ಕಾಣುವ ಮಂಜು. ಈ ದೃಶ್ಯ ಕಿನ್ನರ ಲೋಕದ ಕತೆಯ ದೃಶ್ಯಗಳಂತೆ ಕಾಣುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಇದು ಯಾವುದೋ ವಿದೇಶದ ಚಿತ್ರವಲ್ಲ ನಮ್ಮ ದೇಶದ ಕಾಶ್ಮೀರದ ಚಿತ್ರವೆಂದು ಹೇಳುತ್ತಿದ್ದಾರೆ.
ಓರ್ವ ಸಾಮಾಜಿಕ ಜಾಲತಾಣ ಬಳಕೆದಾರ ಹೀಗೆಂದು ಬರೆದಿದ್ದಾರೆ – ಸ್ವರ್ಗ ಇದಕ್ಕಿಂತ ಸುಂದರವಾಗಿ ಇರಲು ಹೇಗೆ ಸಾಧ್ಯ?’ ಈ ಮಾತು ಖಂಡಿತವಾಗಿಯೂ ಸರಿಯಾಗಿದೆ – ಆದ್ದರಿಂದಲೇ ಅಲ್ಲವೇ ಕಾಶ್ಮೀರವನ್ನು ಭೂಮಿಯ ಸ್ವರ್ಗ ಎಂದು ಕರೆಯುವುದು. ನೀವು ಕೂಡಾ ಈ ಚಿತ್ರಗಳನ್ನು ನೋಡಿ ಕಾಶ್ಮೀರ ಪ್ರವಾಸ ಮಾಡಬೇಕೆಂದು ಖಂಡಿತವಾಗಿ ಯೋಚಿಸಿರುತ್ತೀರಿ ಅಲ್ಲವೇ. ನೀವು ಖಂಡಿತವಾಗಿಯೂ ಹೋಗಿ ಮತ್ತು ನಿಮ್ಮೊಂದಿಗೆ ನಿಮ್ಮ ಸ್ನೇಹಿತರನ್ನು ಕೂಡಾ ಕರೆದೊಯ್ಯಿರಿ. ಕಾಶ್ಮೀರದಲ್ಲಿ ಹಿಮಚ್ಛಾದಿತ ಬೆಟ್ಟಗಳು, ಪ್ರಾಕೃತಿಕ ಸೌಂದರ್ಯ ಮಾತ್ರವಲ್ಲದೇ ನೋಡಲು-ಅರಿಯಲು ಬಹಳಷ್ಟಿದೆ. ಕಾಶ್ಮೀರದ ಸಯ್ಯದಾಬಾದ್ ನಲ್ಲಿ Winter games ಆಯೋಜಿಸಲಾಗಿತ್ತು. ಈ Games ಗಳ ಧ್ಯೇಯ – ಹಿಮ ಕ್ರಿಕೆಟ್ -Snow Cricket ಎಂದಾಗಿತ್ತು. ಸ್ನೋ ಕ್ರಿಕೆಟ್ ಬಹಳ ರೋಮಾಂಚನವಾಗಿರುತ್ತದೆ ಎಂದು ನೀವು ಯೋಚಿಸುತ್ತಿರಬಹುದಲ್ಲವೇ – ನೀವು ಸರಿಯಾಗಿ ಯೋಚಿಸುತ್ತಿದ್ದೀರಿ. ಕಾಶ್ಮೀರದ ಯುವಜನತೆ ಹಿಮದ ನಡುವೆ ಕ್ರಿಕೆಟ್ ಆಟವನ್ನು ಮತ್ತಷ್ಟು ಅದ್ಭುತವನ್ನಾಗಿಸುತ್ತಾರೆ. ಇದರ ಮೂಲಕ ಕಾಶ್ಮೀರದಲ್ಲಿ ಮುಂದೆ ಟೀಮ್ ಇಂಡಿಯಾ ಪರವಾಗಿ ಆಡಬಹುದಾದ ಯುವ ಕ್ರೀಡಾಪಟುಗಳ ಅನ್ವೇಷಣೆ ಕೂಡಾ ನಡೆಯುತ್ತದೆ. ಇದು ಒಂದು ರೀತಿಯಲ್ಲಿ Khelo India Movement ನ ವಿಸ್ತರಣೆಯೇ ಆಗಿದೆ. ಕಾಶ್ಮೀರದಲ್ಲಿ ಯುವಜನತೆಯಲ್ಲಿ ಕ್ರೀಡೆಗಳ ಬಗ್ಗೆ ಉತ್ಸಾಹ ಹೆಚ್ಚಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವರ ಪೈಕಿ ಅನೇಕ ಯುವಕರು ಯುವತಿಯರು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಾರೆ, ತ್ರಿವರ್ಣ ಧ್ವಜ ಹಾರಿಸುತ್ತಾರೆ. ಮುಂದಿನ ಬಾರಿ ನೀವು ಕಾಶ್ಮೀರ ಪ್ರವಾಸ ಯೋಜಿಸುವಾಗ, ಇಂತಹ ವಿಶೇಷತೆಗಳನ್ನು ನೋಡಲು ಕೂಡಾ ಸಮಯ ಮೀಸಲಿಡಿ ಎನ್ನುವುದು ನಿಮಗೆ ನನ್ನ ಸಲಹೆಯಾಗಿದೆ. ಈ ಅನುಭವ ನಿಮ್ಮ ಪ್ರವಾಸವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಗಣತಂತ್ರವನ್ನು ಬಲಿಷ್ಠಗೊಳಿಸುವ ನಮ್ಮ ಪ್ರಯತ್ನ ನಿರಂತರ ಸಾಗುತ್ತಲೇ ಇರಬೇಕು. ಜನರ ಸಹಕಾರದಿಂದ, ಎಲ್ಲರ ಪ್ರಯತ್ನದಿಂದ, ದೇಶಕ್ಕಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದರಿಂದ, ಗಣತಂತ್ರ ಸುದೃಢಗೊಳ್ಳುತ್ತದೆ. ನಮ್ಮ ಮನ್ ಕಿ ಬಾತ್ ಕಾರ್ಯಕ್ರಮ ಕರ್ತವ್ಯನಿಷ್ಟ ಹೋರಾಟಗಾರರ ಗಟ್ಟಿ ಧ್ವನಿಯಾಗಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮುಂದಿನ ಬಾರಿ ಪುನಃ ಭೇಟಿಯಾಗೋಣ ಇಂತಹ ಕರ್ತವ್ಯನಿಷ್ಟ ಹೋರಾಟಗಾರರ ಆಸಕ್ತಿಪೂರ್ಣ ಮತ್ತು ಸ್ಫೂರ್ತಿದಾಯಕ ಕತೆಗಳೊಂದಿಗೆ. ಅನಂತಾನಂತ ಧನ್ಯವಾದಗಳು.
ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇಂದು ನಾವು ಮನದ ಮಾತಿನ 96 ನೇ ಕಂತಿನಲ್ಲಿ ಭೇಟಿಯಾಗುತ್ತಿದ್ದೇವೆ. ಮನದ ಮಾತಿನ ಮುಂದಿನ ಕಂತು 2023 ರ ಮೊದಲ ಕಂತಾಗಲಿದೆ. ನೀವು ಕಳುಹಿಸಿದ ಸಂದೇಶಗಳಲ್ಲಿ ಕಳೆದುಹೋಗುತ್ತಿರುವ 2022 ನೇ ಸಾಲಿನ ಬಗ್ಗೆ ಮಾತನಾಡುವಂತೆ ಆಗ್ರಹಿಸಲಾಗಿದೆ. ಮುಗಿದ ಅಧ್ಯಾಯದ ಅವಲೋಕನ ನಮಗೆ ಸದಾ ವರ್ತಮಾನ ಮತ್ತು ಭವಿಷ್ಯದ ತಯಾರಿಗೆ ಪ್ರೇರಣೆಯನ್ನು ನೀಡುತ್ತದೆ. 2022 ರಲ್ಲಿ ದೇಶದ ಜನತೆಯ ಸಾಮರ್ಥ್ಯ, ಅವರ ಸಹಯೋಗ, ಅವರ ಸಂಕಲ್ಪ, ಅವರ ಸಫಲತೆಯ ವಿಸ್ತಾರ ಎಷ್ಟು ವಿಶಾಲವಾಗಿತ್ತು ಎಂದರೆ ಮನದ ಮಾತಿನಲ್ಲಿ ಅದನ್ನು ಒಗ್ಗೂಡಿಸುವುದು ಕಷ್ಟಸಾಧ್ಯ. 2022 ಬಹಳಷ್ಟು ವಿಧಗಳಲ್ಲಿ ಪ್ರೇರಣಾದಾಯಕವಾಗಿತ್ತು, ಅದ್ಭುತವಾಗಿತ್ತು. ಈ ವರ್ಷ ಭಾರತ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದೆ. ಇದೇ ವರ್ಷ ಅಮೃತ ಕಾಲವೂ ಪ್ರಾರಂಭವಾಯಿತು. ಈ ವರ್ಷ ದೇಶ ಹೊಸ ವೇಗವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬ ಭಾರತೀಯನೂ ಒಂದಕ್ಕಿಂತ ಒಂದು ಉತ್ತಮ ಕೆಲಸವನ್ನು ಮಾಡಿದ್ದಾನೆ. 2022 ರ ವಿಭಿನ್ನ ರೀತಿಯ ಸಫಲತೆ ಇಂದು ಸಂಪೂರ್ಣ ವಿಶ್ವದಲ್ಲಿ ಭಾರತಕ್ಕೆ ಒಂದು ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ. 2022 ಅಂದರೆ ಭಾರತದ ಮುಖಾಂತರ ವಿಶ್ವದ 5 ನೇ ಅತಿ ದೊಡ್ಡ ಅರ್ಥವ್ಯವಸ್ಥೆಯ ಗುರಿ ತಲುಪಿದ್ದಾಗಿದೆ. 2022 ಅಂದರೆ ಭಾರತ ಊಹಿಸಲಸಾಧ್ಯವಾದ 220 ಕೋಟಿಗೂ ಹೆಚ್ಚು ಲಸಿಕೆಗಳನ್ನು ಪೂರೈಸಿರುವ ದಾಖಲೆ. 2022 ಎಂದರೆ ಭಾರತವು 400 ಬಿಲಿಯನ್ ಡಾಲರ್ ರಫ್ತುಗಳ ಮಾಂತ್ರಿಕ ಸಂಖ್ಯೆಯನ್ನು ಮೀರಿದ ಸಾಧನೆ, 2022 ಎಂದರೆ ದೇಶದ ಜನರು 'ಸ್ವಾವಲಂಬಿ ಭಾರತ' ಎಂಬ ಸಂಕಲ್ಪವನ್ನು ಅಳವಡಿಸಿಕೊಳ್ಳುವುದು ಮತ್ತು ಅದನ್ನು ಅನುಸರಿಸಿ ತೋರಿಸುವುದಾಗಿದೆ. 2022 ಎಂದರೆ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ್ ಗೆ ಸ್ವಾಗತ ಕೋರಿದ ವರ್ಷ, 2022 ಎಂದರೆ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ವಲಯದಲ್ಲಿ ಭಾರತದ ವೈಭವ, 2022 ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತನ್ನ ಶಕ್ತಿಯನ್ನು ಮೆರೆದ ವರ್ಷ. ಕಾಮನ್ವೆಲ್ತ್ ಕ್ರೀಡಾಕೂಟವಾಗಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ವಿಜಯವಾಗಲಿ ಕ್ರೀಡಾ ಕ್ಷೇತ್ರದಲ್ಲಿಯೂ ಸಹ, ನಮ್ಮ ಯುವಕರು ಅದ್ಭುತ ಸಾಮರ್ಥ್ಯವನ್ನು ತೋರಿದ್ದಾರೆ.
ಸ್ನೇಹಿತರೇ, ಇದೆಲ್ಲದರ ಜೊತೆಗೆ, 2022 ರ ವರ್ಷವು ಇನ್ನೂ ಒಂದು ಕಾರಣಕ್ಕಾಗಿ ಎಂದಿಗೂ ಸ್ಮರಣೆಯಲ್ಲಿ ಉಳಿಯುತ್ತದೆ. ಇದು ‘ಏಕ್ ಭಾರತ್-ಶ್ರೇಷ್ಠ ಭಾರತ’ ದ ಚೈತನ್ಯದ ವಿಸ್ತರಣೆಯಾಗಿದೆ. ದೇಶದ ಜನರು ಏಕತೆ ಮತ್ತು ಒಗ್ಗಟ್ಟನ್ನು ಆಚರಿಸಲು ಕೂಡ ಹಲವಾರು ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದರು. ರುಕ್ಮಿಣಿಯ ವಿವಾಹ ಮತ್ತು ಶ್ರೀಕೃಷ್ಣನ ಪೂರ್ವ ಸಂಬಂಧವನ್ನು ಆಚರಿಸುವ ಗುಜರಾತ್ ನ ಮಾಧವಪುರ ಮೇಳವಾಗಲಿ ಇಲ್ಲವೆ ಕಾಶಿ-ತಮಿಳು ಸಂಗಮವಾಗಲಿ, ಈ ಹಬ್ಬಗಳಲ್ಲಿ ಏಕತೆಯ ಹಲವು ಬಣ್ಣಗಳು ಗೋಚರಿಸಿದವು. 2022ರಲ್ಲಿ ದೇಶವಾಸಿಗಳು ಮತ್ತೊಂದು ಅಮರ ಇತಿಹಾಸ ಬರೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿದ 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಾರು ಮರೆಯಲು ಸಾಧ್ಯ. ದೇಶದ ಪ್ರತಿ ಪ್ರಜೆಯ ಮೈನವಿರೇಳುವಂತಹ ಕ್ಷಣಗಳವು. ಸ್ವಾತಂತ್ರ್ಯದ 75 ವರ್ಷಗಳ ಈ ಅಭಿಯಾನದಲ್ಲಿ ಇಡೀ ದೇಶವೇ ತ್ರಿವರ್ಣ ಧ್ವಜಮಯವಾಯಿತು. 6 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಂದಿನ ವರ್ಷವೂ ಇದೇ ರೀತಿ ಮುಂದುವರಿಯುತ್ತದೆ - ಇದು ಅಮೃತ ಕಾಲದ ಅಡಿಪಾಯವನ್ನು ಮತ್ತಷ್ಟು ಸಬಲಗೊಳಿಸಲಿದೆ.
ಸ್ನೇಹಿತರೇ, ಈ ವರ್ಷ ಭಾರತಕ್ಕೆ ಜಿ-20 ರಾಷ್ಟ್ರಗಳ ಸಮೂಹದ ಅಧ್ಯಕ್ಷತೆಯ ಜವಾಬ್ದಾರಿ ದೊರೆತಿದೆ. ಕಳೆದ ಬಾರಿ ನಾನು ಈ ಬಗ್ಗೆ ವಿವರವಾಗಿ ಚರ್ಚಿಸಿದ್ದೆ. 2023 ರಲ್ಲಿ, ನಾವು G-20 ಯ ಉತ್ಸಾಹವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ, ಈ ಕಾರ್ಯಕ್ರಮವನ್ನು ಜನಾಂದೋಲನವನ್ನಾಗಿ ಮಾಡಬೇಕಿದೆ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ಕ್ರಿಸ್ಮಸ್ ಹಬ್ಬವನ್ನು ಪ್ರಪಂಚದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದು ಯೇಸುಕ್ರಿಸ್ತನ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ನಿಮ್ಮೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಅನಂತ ಶುಭಾಶಯಗಳನ್ನು ಕೋರುತ್ತೇನೆ
ಸ್ನೇಹಿತರೇ, ಇಂದು ನಮ್ಮ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೌದು. ಅವರು ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜಕಾರಿಣಿ ಆಗಿದ್ದರು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ನನಗೆ ಕೋಲ್ಕತ್ತಾದಿಂದ ಆಸ್ತಾಜಿಯವರ ಪತ್ರ ಬಂದಿದೆ. ಈ ಪತ್ರದಲ್ಲಿ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಸಮಯದಲ್ಲಿ ಅವರು ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದೆ ಎಂದು ಅವರು ಬರೆದಿದ್ದಾರೆ. ಈ ಸಂಗ್ರಹಾಲಯದಲ್ಲಿರುವ ಅಟಲ್ ಜಿ ಅವರ ಗ್ಯಾಲರಿ ಅವರಿಗೆ ತುಂಬಾ ಇಷ್ಟವಾಗಿತ್ತು. ಅಟಲ್ ಜೀ ಅವರೊಂದಿಗೆ ಕ್ಲಿಕ್ಕಿಸಿದ ಚಿತ್ರವು ಅವರಿಗೆ ಸ್ಮರಣೀಯವಾಗಿದೆ. ಅಟಲ್ ಜಿ ಅವರ ಗ್ಯಾಲರಿಯಲ್ಲಿ, ದೇಶಕ್ಕೆ ಅವರ ಅಮೂಲ್ಯ ಕೊಡುಗೆಯ ಪ್ರಮುಖ ಅಂಶಗಳನ್ನು ನಾವಿಲ್ಲಿ ಕಾಣಬಹುದು. ಮೂಲಸೌಕರ್ಯ, ಶಿಕ್ಷಣ ಅಥವಾ ವಿದೇಶಾಂಗ ನೀತಿಯಾಗಿರಲಿ, ಅವರು ಪ್ರತಿ ಕ್ಷೇತ್ರದಲ್ಲೂ ಭಾರತವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದ್ದರು. ನಾನು ಮತ್ತೊಮ್ಮೆ ನನ್ನ ಹೃದಯಪೂರ್ವಕವಾಗಿ ಅಟಲ್ ಜೀ ಅವರಿಗೆ ನಮಸ್ಕರಿಸುತ್ತೇನೆ.
ಸ್ನೇಹಿತರೇ, ನಾಳೆ ಡಿಸೆಂಬರ್ 26 ರಂದು 'ವೀರ್ ಬಾಲ್ ದಿವಸ್' ಆಚರಿಸಲಾಗುತ್ತದೆ. ಮತ್ತು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಹಿಬ್ ಜಾದಾ ಜೋರಾವರ್ ಸಿಂಗ್ ಜಿ ಮತ್ತು ಸಾಹಿಬ್ ಜಾದಾ ಫತೇ ಸಿಂಗ್ ಜಿ ಯಂತಹ ಹುತಾತ್ಮರಿಗೆ ಮೀಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ದೊರೆಯಲಿದೆ. ಸಾಹಿಬ್ ಜಾದಾ ಮತ್ತು ಮಾತಾ ಗುಜರಿ ಅವರ ತ್ಯಾಗವನ್ನು ದೇಶವು ಯಾವಾಗಲೂ ಸ್ಮರಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆ ಹೇಳುತ್ತಾರೆ -
ಸತ್ಯಂ ಕಿಂ ಪ್ರಮಾಣಮ್, ಪ್ರತ್ಯಕ್ಷಂ ಕಿಂ ಪ್ರಮಾಣಮ್ ।
ಅಂದರೆ, ಸತ್ಯಕ್ಕೆ ಪುರಾವೆ ಅಗತ್ಯವಿಲ್ಲ, ಪ್ರತ್ಯಕ್ಷವಾಗಿ ಕಾಣುವುದಕ್ಕೂ ಪುರಾವೆ ಬೇಕಾಗಿಲ್ಲ. ಆದರೆ ಆಧುನಿಕ ವೈದ್ಯಕೀಯ ವಿಜ್ಞಾನದ ಮಾತನಾಡುವುದಾದರೆ, ಪುರಾವೆ- ಸಾಕ್ಷ್ಯ ಅತ್ಯಂತ ಹೆಚ್ಚಿನ ಮಹತ್ವ ಪಡೆಯುತ್ತದೆ. ಶತಮಾನಗಳಿಂದ ಭಾರತೀಯರ ಜೀವನದ ಅಂಗವಾಗಿದ್ದ ಯೋಗ ಮತ್ತು ಆಯುರ್ವೇದದಂತಹ ನಮ್ಮ ಧರ್ಮಗ್ರಂಥಗಳಿಗೆ ಹೋಲಿಸಿದಾಗ ಸಾಕ್ಷ್ಯಾಧಾರಿತ ಸಂಶೋಧನೆಯ ಕೊರತೆಯು ಇಂದಿಗೂ ಒಂದು ಸವಾಲಾಗಿಯೇ ಉಳಿದಿದೆ - ಫಲಿತಾಂಶಗಳು ಗೋಚರಿಸುತ್ತವೆ, ಆದರೆ ಪುರಾವೆ ಇರುವುದಿಲ್ಲ. ಆದರೆ, ಸಾಕ್ಷ್ಯಾಧಾರಿತ ಔಷಧದ ಯುಗದಲ್ಲಿ, ಯೋಗ ಮತ್ತು ಆಯುರ್ವೇದವು ಆಧುನಿಕ ಯುಗದ ಪರಿಶೀಲನೆ ಮತ್ತು ಪರೀಕ್ಷೆಗಳಲ್ಲಿ ಅಪ್ಪಟವೆಂದು ಸಾಬೀತಾಗಿದೆ ಎಂಬುದು ನನಗೆ ಸಂತೋಷವೆನಿಸಿದೆ. ಮುಂಬೈನಲ್ಲಿರುವ ಟಾಟಾ ಸ್ಮಾರಕ ಕೇಂದ್ರದ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಈ ಸಂಸ್ಥೆ ಸಂಶೋಧನೆ, ನಾವೀನ್ಯತೆ ಮತ್ತು ಕ್ಯಾನ್ಸರ್ ಆರೈಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗವು ತುಂಬಾ ಪರಿಣಾಮಕಾರಿ ಎಂದು ಈ ಕೇಂದ್ರ ನಡೆಸಿದ ತೀವ್ರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಟಾಟಾ ಮೆಮೋರಿಯಲ್ ಸೆಂಟರ್ ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ ಸ್ತನ ಕ್ಯಾನ್ಸರ್ ಸಮ್ಮೇಳನದಲ್ಲಿ ತನ್ನ ಸಂಶೋಧನೆಯ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ. ಈ ಫಲಿತಾಂಶಗಳು ವಿಶ್ವದ ಅತಿದೊಡ್ಡ ತಜ್ಞರ ಗಮನವನ್ನು ಸೆಳೆದಿವೆ. ಏಕೆಂದರೆ, ಯೋಗದಿಂದ ರೋಗಿಗಳು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬುದನ್ನು ಟಾಟಾ ಸ್ಮಾರಕ ಕೇಂದ್ರವು ಸಾಕ್ಷಿ ಸಮೇತ ಪ್ರಸ್ತುತಪಡಿಸಿದೆ. ಈ ಕೇಂದ್ರದ ಸಂಶೋಧನೆಯ ಪ್ರಕಾರ, ಯೋಗದ ನಿಯಮಿತ ಅಭ್ಯಾಸ ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ರೋಗದ ಮರುಕಳಿಸುವಿಕೆ ಮತ್ತು ಸಾವಿನ ಅಪಾಯವನ್ನು ಶೇಕಡಾ 15 ರಷ್ಟು ಕಡಿಮೆ ಮಾಡುತ್ತದೆ. ಪಾಶ್ಚಿಮಾತ್ಯ ವಿಧಾನಗಳ ಕಟ್ಟುನಿಟ್ಟಾದ ಮಾನದಂಡಗಳ ಪ್ರಕಾರ ಭಾರತೀಯ ಸಾಂಪ್ರದಾಯಿಕ ಔಷಧವನ್ನು ಪರೀಕ್ಷಿಸಿದ ಮೊದಲ ಉದಾಹರಣೆ ಇದಾಗಿದೆ. ಅಲ್ಲದೆ, ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಯೋಗವು ಜೀವನದ ಗುಣಮಟ್ಟವನ್ನು ಸುಧಾರಿಸಿದೆ ಎಂದು ಸಾಬೀತುಪಡಿಸಿರುವ ಮೊದಲ ಅಧ್ಯಯನವೂ ಇದಾಗಿದೆ. ಇದರ ದೀರ್ಘಾವಧಿಯ ಪ್ರಯೋಜನಗಳೂ ಬೆಳಕಿಗೆ ಬಂದಿವೆ. ಪ್ಯಾರಿಸ್ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಮೆಡಿಕಲ್ ಆಂಕೊಲಾಜಿ ಸಮ್ಮೇಳನದಲ್ಲಿ ಟಾಟಾ ಮೆಮೋರಿಯಲ್ ಸೆಂಟರ್ ತನ್ನ ಅಧ್ಯಯನದ ಫಲಿತಾಂಶಗಳನ್ನು ಪ್ರಸ್ತುತಪಡಿಸಿದೆ.
ಸ್ನೇಹಿತರೇ, ಇಂದಿನ ಯುಗದಲ್ಲಿ, ಭಾರತೀಯ ವೈದ್ಯಕೀಯ ವ್ಯವಸ್ಥೆಗಳು ಹೆಚ್ಚು ಸಾಕ್ಷ್ಯಾಧಾರಿತವಾಗಿವೆ, ಇಡೀ ಪ್ರಪಂಚದಲ್ಲಿ ಅವುಗಳ ಸ್ವೀಕಾರಾರ್ಹತೆ ಹೆಚ್ಚಾಗುತ್ತದೆ. ಇದೇ ನಿಟ್ಟಿನಲ್ಲಿ ದೆಹಲಿಯ ಏಮ್ಸ್ ನಲ್ಲೂ ಪ್ರಯತ್ನ ನಡೆಯುತ್ತಿದೆ. ಇಲ್ಲಿ, ಆರು ವರ್ಷಗಳ ಹಿಂದೆ ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಮೌಲ್ಯೀಕರಿಸಲು ಸೆಂಟರ್ ಫಾರ್ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ಅನ್ನು ಸ್ಥಾಪಿಸಲಾಯಿತು. ಇದರಲ್ಲಿ ಆಧುನಿಕ ತಂತ್ರಗಳು ಮತ್ತು ಸಂಶೋಧನಾ ವಿಧಾನಗಳನ್ನು ಬಳಸಲಾಗುತ್ತದೆ. ಕೇಂದ್ರವು ಈಗಾಗಲೇ 20 ಪ್ರಬಂಧಗಳನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಮೂರ್ಛೆಯಿಂದ ಬಳಲುತ್ತಿರುವ ರೋಗಿಗಳಿಗೆ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಅದೇ ರೀತಿ, ನ್ಯೂರಾಲಜಿ ಜರ್ನಲ್ ಪತ್ರಿಕೆಯಲ್ಲಿ, ಅರೆ ತಲೆಶೂಲೆಯಲ್ಲಿ ಯೋಗದ ಪ್ರಯೋಜನಗಳನ್ನು ವಿವರಿಸಲಾಗಿದೆ. ಇಷ್ಟೇ ಅಲ್ಲದೆ, ಹೃದ್ರೋಗ, ಖಿನ್ನತೆ, ನಿದ್ರಾಹೀನತೆ ಮತ್ತು ಗರ್ಭಾವಸ್ಥೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳಂತಹ ಇನ್ನೂ ಅನೇಕ ರೋಗಗಳಲ್ಲಿ ಯೋಗದ ಪ್ರಯೋಜನಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ಪಾಲ್ಗೊಳ್ಳಲು ಗೋವಾದಲ್ಲಿದ್ದೆ. 40ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಮತ್ತು 550ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಇಲ್ಲಿ ಮಂಡಿಸಲಾಯಿತು. ಇಲ್ಲಿ ನಡೆದ ಪ್ರದರ್ಶನದಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತದ ಸುಮಾರು 215 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದವು. ನಾಲ್ಕು ದಿನಗಳ ಕಾಲ ನಡೆದ ಈ ಎಕ್ಸಪೋದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಆಯುರ್ವೇದಕ್ಕೆ ಸಂಬಂಧಿಸಿದ ತಮ್ಮ ಅನುಭವವನ್ನು ಆನಂದಿಸಿದರು. ಆಯುರ್ವೇದ ಕಾಂಗ್ರೆಸ್ನಲ್ಲಿ, ಪ್ರಪಂಚದಾದ್ಯಂತದ ಆಯುರ್ವೇದ ತಜ್ಞರಲ್ಲಿ ನಾನು ಸಾಕ್ಷಾಧಾರಿತ ಸಂಶೋಧನೆಗಾಗಿ ಮತ್ತೊಮ್ಮೆ ಆಗ್ರಹಿಸಿದೆ. ಜಾಗತಿಕ ಮಹಾಮಾರಿಯಾದ ಕೊರೊನಾ ಸಮಯದಲ್ಲಿ ಯೋಗ ಮತ್ತು ಆಯುರ್ವೇದದ ಶಕ್ತಿಯನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಇವುಗಳಿಗೆ ಸಂಬಂಧಿಸಿದ ಪುರಾವೆ ಆಧಾರಿತ ಸಂಶೋಧನೆ ಬಹಳ ಮಹತ್ವಪೂರ್ಣ ಎಂದು ಸಾಬೀತಾಗುತ್ತದೆ. ಯೋಗ, ಆಯುರ್ವೇದ ಮತ್ತು ನಮ್ಮ ಸಾಂಪ್ರದಾಯಿಕ ವೈದ್ಯಕೀಯ ವಿಧಾನಗಳಿಗೆ ಸಂಬಂಧಿಸಿದ ಪ್ರಯತ್ನಗಳ ಬಗ್ಗೆ ನಿಮ್ಮಲ್ಲಿ ಯಾವುದೇ ಮಾಹಿತಿ ಇದ್ದಲ್ಲಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿತ ಹಂಚಿಕೊಳ್ಳಿ ಎಂದು ನಾನು ವಿನಂತಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಸವಾಲುಗಳನ್ನು ಜಯಿಸಿದ್ದೇವೆ. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ವೈದ್ಯಕೀಯ ತಜ್ಞರು, ವಿಜ್ಞಾನಿಗಳು ಮತ್ತು ದೇಶವಾಸಿಗಳ ಇಚ್ಛಾಶಕ್ತಿಗೆ ಸಲ್ಲುತ್ತದೆ. ನಾವು ಭಾರತದಿಂದ ಸಿಡುಬು, ಪೋಲಿಯೊ ಮತ್ತು 'ಗಿನಿ ವರ್ಮ್' ಅಂತಹ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ.
ಇಂದು, ನಾನು 'ಮನದ ಮಾತು' ಶ್ರೋತೃಳಿಗೆ ಮತ್ತೊಂದು ಸವಾಲಿನ ಬಗ್ಗೆ ಹೇಳಬಯಸುತ್ತೇನೆ, ಈಗ ಅದು ನಿರ್ಮೂಲನೆಯ ಹಂತದಲ್ಲಿದೆ. ಅದೇನೆಂದರೆ– 'ಕಾಲಾ-ಅಜಾರ್' ಎಂಬ ಪರಾವಲಂಬಿ ಮರಳು ನೊಣದ ಕಡಿತದಿಂದ ಹರಡುವ ಜ್ವರ. ‘ಕಾಲಾ-ಅಜಾರ್’ ಪೀಡಿತರಿಗೆ ತಿಂಗಳಾನುಗಟ್ಟಲೆ ಜ್ವರ, ರಕ್ತಹೀನತೆ, ದೇಹ ಬಲಹೀನವಾಗುವುದು ಮತ್ತು ತೂಕ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತವೆ. ಈ ರೋಗವು ಮಕ್ಕಳಿಂದ ಹಿರಿಯರವರೆಗೆ ಯಾರಿಗಾದರೂ ಬರಬಹುದು. ಆದರೆ ಎಲ್ಲರ ಪ್ರಯತ್ನದಿಂದ ಪ್ರಸ್ತುತ ‘ಕಾಲಾ-ಅಜಾರ್’ ಹೆಸರಿನ ಈ ರೋಗ ವೇಗವಾಗಿ ನಿರ್ಮೂಲನೆಯಾಗುತ್ತಿದೆ. ಇತ್ತೀಚೆಗೆ ಕಾಲಾ-ಅಜಾರ್ ತೀವ್ರತೆ ಏಕಾಏಕಿ 4 ರಾಜ್ಯಗಳ 50 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹರಡಿತ್ತು. ಆದರೆ ಈಗ ಈ ರೋಗವು ಬಿಹಾರ ಮತ್ತು ಜಾರ್ಖಂಡ್ನ 4 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಬಿಹಾರ-ಜಾರ್ಖಂಡ್ನ ಜನತೆಯ ಸಾಮರ್ಥ್ಯ ಮತ್ತು ಅರಿವು ಈ ನಾಲ್ಕು ಜಿಲ್ಲೆಗಳಿಂದಲೂ ‘ಕಾಲಾ-ಅಜಾರ್’ ಅನ್ನು ತೊಡೆದುಹಾಕುವ ಸರ್ಕಾರದ ಪ್ರಯತ್ನಗಳಿಗೆ ನೆರವಾಗಲಿದೆ ಎಂದು ನನಗೆ ವಿಶ್ವಾಸವಿದೆ. ‘ಕಾಲಾ-ಅಜಾರ್’ ಪೀಡಿತ ಪ್ರದೇಶಗಳ ಜನರು ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಒಂದು - ಮರಳು ನೊಣ ನಿಯಂತ್ರಣ, ಮತ್ತು ಎರಡನೆಯದಾಗಿ, ತ್ವರಿತಗತಿಯಲ್ಲಿ ಈ ರೋಗವನ್ನು ಗುರುತಿಸುವುದು ಮತ್ತು ಸಂಪೂರ್ಣ ಚಿಕಿತ್ಸೆ. ‘ಕಾಲಾ-ಅಜಾರ್’ ಚಿಕಿತ್ಸೆ ಸುಲಭ, ಇದಕ್ಕೆ ಬಳಸುವ ಔಷಧಿಗಳೂ ತುಂಬಾ ಪರಿಣಾಮಕಾರಿ. ನೀವು ಜಾಗೃತವಾಗಿರಬೇಕು. ಜ್ವರ ಬಂದರೆ ನಿರ್ಲಕ್ಷಿಸಬೇಡಿ ಮತ್ತು ಮರಳು ನೊಣವನ್ನು ನಾಶಪಡಿಸುವ ಔಷಧಗಳನ್ನು ಸಿಂಪಡಿಸುತ್ತಿರಿ. ನಮ್ಮ ದೇಶ ‘ಕಾಲಾ-ಅಜಾರ್’ ದಿಂದ ಮುಕ್ತವಾದಲ್ಲಿ ನಮಗೆಲ್ಲರಿಗೂ ಎಷ್ಟು ಸಂತಸ ತರಲಿದೆ ಎಂದು ಒಮ್ಮೆ ಯೋಚಿಸಿ. ಸಬ್ಕಾ ಪ್ರಾಯಸ್ ನ ಇದೇ ಹುಮ್ಮಸ್ಸಿನೊಂದಿಗೆ, 2025 ರ ವೇಳೆಗೆ ನಾವು, ಭಾರತವನ್ನು ಕ್ಷಯದಿಂದಲೂ ಮುಕ್ತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಈ ಹಿಂದೆ, ಕ್ಷಯರೋಗ ಮುಕ್ತ ಭಾರತ ಅಭಿಯಾನ ಆರಂಭ ಮಾಡಿದಾಗ ಕ್ಷಯರೋಗ ಪೀಡಿತರ ಸಹಾಯಕ್ಕೆ ಸಾವಿರಾರು ಜನರು ಮುಂದೆ ಬಂದಿರುವುದನ್ನು ನೀವು ನೋಡಿರಬಹುದು. ಈ ಜನರು, ನಿಕ್ಷಯ್ ಮಿತ್ರರ ರೂಪದಲ್ಲಿ, ಕ್ಷಯ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಅವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತಿದ್ದಾರೆ. ಜನ ಸೇವೆ ಮತ್ತು ಸಾರ್ವಜನಿಕರು ಭಾಗವಹಿಸುವಿಕೆಯ ಈ ಶಕ್ತಿ ಪ್ರತಿ ಕಷ್ಟಕರ ಗುರಿಯನ್ನು ಸಾಧಿಸಿಯೇ ತೋರುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯು ಗಂಗಾ ಮಾತೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಗಂಗಾ ಜಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಮತ್ತು ನಮ್ಮ ಪುರಾಣ, ಧರ್ಮಗ್ರಂಥಗಳಲ್ಲಿ ಹೀಗೆಂದು ಹೇಳಲಾಗಿದೆ :-
ನಮಾಮಿ ಗಂಗೆ ತವ ಪಾದ ಪಂಕಜಂ,
ಸುರ ಅಸುರೈಃ ವಂದಿತ ದಿವ್ಯ ರೂಪಂ
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವ ಅನುಸಾರೇಣ ಸದಾ ನರಾಣಾಂ.
ಅಂದರೆ, ಹೇ ಗಂಗಾ ಮಾತೆ, ನೀವು ನಿಮ್ಮ ಭಕ್ತರಿಗೆ ಅವರವರ ಇಚ್ಛೆಗೆ ಅನುಗುಣವಾಗಿ – ಲೌಕಿಕ ಸುಖ, ಆನಂದ, ಮತ್ತು ಮೋಕ್ಷವನ್ನು ಪ್ರಸಾದಿಸುತ್ತೀಯೆ. ಎಲ್ಲರೂ ನಿಮ್ಮ ಪವಿತ್ರ ಚರಣಗಳಿಗೆ ವಂದಿಸುತ್ತಾರೆ. ನಾನು ಕೂಡಾ ನಿಮ್ಮ ಪವಿತ್ರ ಚರಣಗಳಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ ಎಂದರ್ಥ.
ಹೀಗಿರುವಾಗ ಶತಮಾನಗಳಿಂದ ಕಲ ಕಲ ಧ್ವನಿಯಿಂದ ಪ್ರವಹಿಸುತ್ತಿರುವ ಗಂಗಾ ಮಾತೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಅತಿ ದೊಡ್ಡ ಜವಾಬ್ದಾರಿಯಾಗಿದೆ. ಇದೇ ಉದ್ದೇಶದಿಂದ, ಎಂಟು ವರ್ಷಗಳ ಹಿಂದೆ, ನಾವು ‘ನಮಾಮಿ ಗಂಗೆ ಅಭಿಯಾನ’ ಆರಂಭಿಸಿದೆವು. ಭಾರತದ ಈ ಉಪಕ್ರಮಕ್ಕೆ ಇಂದು ವಿಶ್ವಾದ್ಯಾಂತ ಪ್ರಶಂಸೆ ದೊರೆಯುತ್ತಿದೆ ಎನ್ನುವುದು ನಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ವಿಶ್ವಸಂಸ್ಥೆಯು ‘ನಮಾಮಿ ಗಂಗೆ’ ಅಭಿಯಾನವನ್ನು ಪರಿಸರ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ವಿಶ್ವದ ಹತ್ತು ಅಗ್ರ ಉಪಕ್ರಮಗಳಲ್ಲಿ ಸೇರಿಸಿದೆ. ಇಡೀ ವಿಶ್ವದ ಇಂತಹ 160 ಉಪಕ್ರಮಗಳ ಪೈಕಿ ‘ನಮಾಮಿ ಗಂಗೆ’ ಉಪಕ್ರಮಕ್ಕೆ ಈ ಗೌರವ ದೊರೆತಿರುವುದು ಮತ್ತಷ್ಟು ಸಂತೋಷದ ವಿಷಯವಾಗಿದೆ.
ಸ್ನೇಹಿತರೇ, ‘ನಮಾಮಿ ಗಂಗೆ’ ಅಭಿಯಾನದ ಅತಿ ದೊಡ್ಡ ಶಕ್ತಿಯೆಂದರೆ ಅದು ಜನರ ನಿರಂತರ ಸಹಭಾಗಿತ್ವ. ‘ನಮಾಮಿ ಗಂಗೆ’ ಅಭಿಯಾನದಲ್ಲಿ, ದೂತರು ಮತ್ತು ಪ್ರಹರಿಗಳ ಪಾತ್ರ ಬಹಳ ದೊಡ್ಡದಿದೆ. ಅವರು ಗಿಡ ನೆಡುವುದು, ಘಾಟ್ ಗಳ ಸ್ವಚ್ಛತೆ, ಗಂಗಾ ಆರತಿ, ಬೀದಿ ನಾಟಕಗಳು, ಪೈಂಟಿಂಗ್ ಮತ್ತು ಕವಿತೆಗಳ ಮೂಲಕ ಜನರಲ್ಲಿ ಜಾಗರೂಕತೆ ಮೂಡಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಅಭಿಯಾನದಿಂದಾಗಿ ಜೀವವೈವಿಧ್ಯತೆಯಲ್ಲಿ ಕೂಡಾ ಸಾಕಷ್ಟು ಸುಧಾರಣೆ ಕಂಡುಬರುತ್ತಿದೆ. ಹಿಲ್ಸಾ ಮೀನು, ಗಂಗಾ ಡಾಲ್ಫಿನ್ ಮತ್ತು ಆಮೆಗಳ ವಿವಿಧ ಜಾತಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಗಂಗೆಯ ಪರಿಸರ ವ್ಯವಸ್ಥೆ ಸ್ವಚ್ಛವಾಗುತ್ತಿರುವುದರಿಂದ, ಜೀವನೋಪಾಯದ ಅವಕಾಶಗಳು ಕೂಡಾ ಹೆಚ್ಚಾಗುತ್ತಿವೆ. ಇಲ್ಲಿ ನಾನು ‘ಜಲವಾಸಿ ಜೀವನೋಪಾಯ ಮಾದರಿ’ ಯ ಕುರಿತು ಮಾತನಾಡಲು ಬಯಸುತ್ತೇನೆ, ಇದನ್ನು ಜೀವವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಈ ಪ್ರವಾಸೋದ್ಯಮ-ಆಧರಿತ ಬೋಟ್ ಸಫಾರಿಗಳನ್ನು 26 ಸ್ಥಳಗಳಲ್ಲಿ ಆರಂಭಿಸಲಾಗಿದೆ. ನಿಸ್ಸಂಶಯವಾಗಿ, ‘ನಮಾಮಿ ಗಂಗೆ’ ಅಭಿಯಾನದ ವಿಸ್ತಾರ, ಅದರ ವ್ಯಾಪ್ತಿ, ನದಿಯನ್ನು ಸ್ವಚ್ಛಗೊಳಿಸುವುದನ್ನು ಮೀರಿ ದೊಡ್ಡದಾಗಿದೆ. ಇದು ಯಾವರೀತಿ ನಮ್ಮ ಇಚ್ಛಾಶಕ್ತಿ ಮತ್ತು ದಣಿವರಿಯದ ಪ್ರಯತ್ನಗಳ ಪ್ರತ್ಯಕ್ಷ ರುಜುವಾತಾಗಿದೆಯೋ ಅಂತೆಯೇ, ಪರಿಸರದ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಪಂಚಕ್ಕೆ ಒಂದು ಹೊಸ ಮಾರ್ಗ ತೋರಿಸುವಂತಹ ಪ್ರಯತ್ನವೂ ಆಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಕಲ್ಪಶಕ್ತಿ ಯಾವಾಗ ಬಲವಾಗಿರುತ್ತದೆಯೋ, ಆಗ ದೊಡ್ಡ ದೊಡ್ಡ ಸವಾಲುಗಳು ಕೂಡಾ ಬಹಳ ಸುಲಭವೆನಿಸಿಬಿಡುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಸಿಕ್ಕಿಂನ ಥೆಗೂ ಗ್ರಾಮದ ‘ಸಂಗೆ ಶೆರ್ಪಾ’ ಅವರು. ಇವರು ಕಳೆದ 14 ವರ್ಷಗಳಿಂದ 12,000 ಅಡಿಗಿಂತ ಹೆಚ್ಚು ಎತ್ತರದ ಪ್ರದೇಶದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಂಗೆ ಅವರು ಸಾಂಸ್ಕೃತಿಕ ಮತ್ತು ಪೌರಾಣಿಕ ಪ್ರಾಮುಖ್ಯತೆಯಿರುವ Tsomgo (ಸೋಮಗೋ) ಸರೋವರವನ್ನು ಸ್ವಚ್ಛವಾಗಿರಿಸುವ ಕಾರ್ಯ ಕೈಗೊಂಡಿದ್ದಾರೆ. ತಮ್ಮ ಅವಿರತ ಪರಿಶ್ರಮದಿಂದ ಅವರು ಈ ಗ್ಲೇಷಿಯರ್ ಸರೋವರದ ರೂಪರೇಷೆ ಬದಲಾಯಿಸಿದ್ದಾರೆ. 2008 ರಲ್ಲಿ ಸ್ವಚ್ಛತೆಯ ಈ ಅಭಿಯಾನ ಆರಂಭಿಸಿದಾಗ, ಸಂಗೆ ಶೆರ್ಪಾ ಅವರು, ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಕ್ರಮೇಣ ಕೆಲಸಮಯದಲ್ಲೇ ಅವರ ಈ ಉದಾತ್ತ ಕೆಲಸಕ್ಕೆ ಯುವಕರು ಮತ್ತು ಗ್ರಾಮೀಣ ಜನತೆಯೊಂದಿಗೆ ಪಂಚಾಯಿತ್ ನಿಂದ ಕೂಡಾ ಸಾಕಷ್ಟು ಸಹಕಾರ ದೊರೆಯಲಾರಂಭಿಸಿತು. ಒಂದುವೇಳೆ ನೀವು Tsomgo (ಸೋಮಗೋ) ಸರೋವರ ನೋಡಲು ಹೋದರೆ, ನಿಮಗೆ ಅಲ್ಲಿ ನಾಲ್ಕೂ ದಿಕ್ಕಿನಲ್ಲೂ ದೊಡ್ಡ ದೊಡ್ಡ ಕಸದ ಬುಟ್ಟಿಗಳು ಕಾಣಸಿಗುತ್ತವೆ. ಈಗ ಇಲ್ಲಿ ಸಂಗ್ರಹವಾಗುವ ಕಸ-ಕಡ್ಡಿಯನ್ನು ರೀಸೈಕ್ಲಿಂಗ್ ಗಾಗಿ ಕಳುಹಿಸಿಕೊಡಲಾಗುತ್ತದೆ. ಕಸ-ಕಡ್ಡಿಯನ್ನು ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿ ಇಲ್ಲಿ ಎಸೆಯಬಾರದೆಂಬ ಉದ್ದೇಶದಿಂದ ಪ್ರವಾಸಿಗರಿಗೆ ಬಟ್ಟೆಯಿಂದ ತಯಾರಿಸಿದ ಗಾರ್ಬೇಜ್ ಚೀಲಗಳನ್ನು ಕೂಡಾ ನೀಡಲಾಗುತ್ತದೆ. ಈಗ ಸಾಕಷ್ಟು ಸ್ವಚ್ಛವಾಗಿರುವ ಈ ಸರೋವರವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸುಮಾರು 5 ಲಕ್ಷ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. Tsomgo (ಸೋಮಗೊ) ಸರೋವರದ ಸಂರಕ್ಷಣೆಯ ಈ ಅನನ್ಯ ಪ್ರಯಾಸಕ್ಕಾಗಿ ಸಂಗೆ ಶೆರ್ಪಾ ಅವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಇಂತಹ ಪ್ರಯತ್ನಗಳ ಕಾರಣದಿಂದಾಗಿ ಇಂದು ಸಿಕ್ಕಿಂ ಅನ್ನು ಭಾರತದ ಅತ್ಯಂತ ಸ್ವಚ್ಛ ಸುಂದರ ರಾಜ್ಯಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ. ನಾನು ಸಂಗೆ ಶೆರ್ಪಾ ಮತ್ತು ಅವರ ಸ್ನೇಹಿತರು ಮತ್ತು ದೇಶಾದ್ಯಂತ ಪರಿಸರ ಸಂರಕ್ಷಣೆಯ ಉದಾತ್ತ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.
ಸ್ನೇಹಿತರೆ, ಇಂದು ಸ್ವಚ್ಛ ಭಾರತ ಅಭಿಯಾನ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ನೆಲೆಯೂರಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. 2014 ರಲ್ಲಿ ಈ ಅಭಿಯಾನದ ಆರಂಭದೊಂದಿಗೇ, ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ, ಜನರು ಅನೇಕ ವಿಶಿಷ್ಠ ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಈ ಪ್ರಯತ್ನ ಕೇವಲ ಸಮಾಜದೊಳಗೆ ಮಾತ್ರವಲ್ಲದೇ ಸರ್ಕಾರದೊಳಗೂ ನಡೆಯುತ್ತಿದೆ. ಇಂತಹ ಸತತ ಪ್ರಯತ್ನಗಳ ಪರಿಣಾಮವಾಗಿ, ಕಸ ಕಡ್ಡಿ ತೊಲಗಿಸಿದ್ದರಿಂದ, ಅನಗತ್ಯ ವಸ್ತುಗಳನ್ನು ತೊಲಗಿಸಿದ್ದರಿಂದ, ಕಛೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶ ಉಂಟಾಗಿದೆ. ಈ ಹಿಂದೆ ಸ್ಥಳ ಅಭಾವದ ಕಾರಣದಿಂದಾಗಿ ದೂರ ದೂರದಲ್ಲಿ ಬಾಡಿಗೆಗೆ ಕಛೇರಿ ತೆರೆಯಬೇಕಿತ್ತು. ಇತ್ತೀಚಿನ ದಿನಗಳಲ್ಲಿ ಈ ಸ್ವಚ್ಛತೆಯ ಕಾರಣದಿಂದಾಗಿ ಎಷ್ಟೊಂದು ಸ್ಥಳ ದೊರೆತಿದೆಯೆಂದರೆ, ಈಗ ಒಂದೇ ಸ್ಥಳದಲ್ಲಿ ಎಲ್ಲಾ ಕಛೇರಿಗಳೂ ನೆಲೆಗೊಂಡಿವೆ. ಕೆಲ ದಿನಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡಾ ಮುಂಬಯಿ, ಅಹಮದಾಬಾದ್, ಕೊಲ್ಕತ್ತಾ, ಶಿಲ್ಲಾಂಗ್, ಇತರ ಅನೇಕ ನಗರಗಳಲ್ಲಿ ತಮ್ಮ ಕಛೇರಿಗಳಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ ಮತ್ತು ಇದರಿಂದಾಗಿ ಸಚಿವಾಲಯಕ್ಕೆ ಸಂಪೂರ್ಣ ಹೊಸದರಂತೆ ಎರಡು, ಮೂರು ಮಹಡಿಗಳು, ಕಾರ್ಯ ನಿರ್ವಹಿಸುವುದಕ್ಕೆ ಲಭ್ಯವಾದಂತಾಗಿವೆ. ಈ ಸ್ವಚ್ಛತೆಯ ಕಾರಣದಿಂದಾಗಿ, ನಮ್ಮ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯ ಅನುಭವ ನಮಗೆ ದೊರೆಯುತ್ತಿದೆ. ಸಮಾಜದಲ್ಲಿ, ಗ್ರಾಮಗಳಲ್ಲಿ, ನಗರಗಳಲ್ಲಿ ಕೂಡಾ, ಅಂತೆಯೇ ಕಛೇರಿಗಳಲ್ಲಿ ಕೂಡಾ ಈ ಅಭಿಯಾನವು ದೇಶಕ್ಕಾಗಿ ಪ್ರತಿಯೊಂದು ರೀತಿಯಲ್ಲಿಯೂ ಉಪಯುಕ್ತವೆಂದು ಸಾಬೀತಾಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಕಲೆ-ಸಂಸ್ಕೃತಿಯ ಕುರಿತು ಒಂದು ಹೊಸ ಅರಿವು ಮೂಡುತ್ತಿದೆ, ಒಂದು ಹೊಸ ಚೈತನ್ಯ ಜಾಗೃತವಾಗುತ್ತಿದೆ. ‘ಮನದ ಮಾತಿ’ ನಲ್ಲಿ, ನಾವು ಇಂತಹ ಉದಾಹರಣೆಗಳ ಬಗ್ಗೆ ಕೂಡಾ ಮಾತನಾಡುತ್ತಿರುತ್ತೇವೆ. ಯಾವರೀತಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಸಾಮೂಹಿಕ ಬಂಡವಾಳವಾಗಿದೆಯೋ ಅದೇ ರೀತಿ ಅವುಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಕೂಡಾ ಸಮಾಜಕ್ಕೆ ಇರುತ್ತದೆ. ಇಂತಹ ಒಂದು ಯಶಸ್ವೀ ಪ್ರಯತ್ನ ಲಕ್ಷದ್ವೀಪದಲ್ಲಿ ನಡೆಯುತ್ತಿದೆ. ಇಲ್ಲಿ ‘ಕಲ್ಪೆನಿ’ ದ್ವೀಪದಲ್ಲಿ ಒಂದು ಕ್ಲಬ್ ಇದೆ – ಅದರ ಹೆಸರು ‘ಕೂಮೇಲ್ ಬ್ರದರ್ಸ್ ಛಾಲೆಂಜರ್ಸ್ ಕ್ಲಬ್’. ಸ್ಥಳೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಸಂರಕ್ಷಿಸುವುದಕ್ಕೆ ಯುವಜನತೆಗೆ ಈ ಕ್ಲಬ್ ಪ್ರೇರೇಪಿಸುತ್ತದೆ. ಇಲ್ಲಿ ಸ್ಥಳೀಯ ಕಲೆ ‘ಕೊಲ್ ಕಲಿ’, ‘ಪರೀಚಾಕಲೀ’, ‘ಕಿಲಿಪ್ಪಾಟ್’ ಮತ್ತು ಸಾಂಪ್ರದಾಯಿಕ ಹಾಡುಗಳ ಬಗ್ಗೆ ಯುವಜನತೆಗೆ ತರಬೇತಿ ಕೂಡಾ ನೀಡಲಾಗುತ್ತದೆ. ಅಂದರೆ, ಪ್ರಾಚೀನ ಪರಂಪರೆ, ಹೊಸ ಪೀಳಿಗೆಯ ಕೈಯಲ್ಲಿ ಸುರಕ್ಷಿತವಾಗುತ್ತಿದೆ, ಮುಂದುವರಿಯುತ್ತಿದೆ ಮತ್ತು ಸ್ನೇಹಿತರೆ, ಇಂತಹ ಪ್ರಯತ್ನಗಳು ಕೇವಲ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡಾ ನಡೆಯುತ್ತಿರುವುದು ನನಗೆ ಬಹಳ ಸಂತೋಷದ ವಿಷಯವೆನಿಸಿದೆ. ಇತ್ತೀಚೆಗೆ ದುಬೈನ ‘ಕಲಾರಿ’ ಕ್ಲಬ್, ‘ಗಿನ್ನೀಸ್ ವಿಶ್ವ ದಾಖಲೆಯ ಪುಸ್ತಕ’ದಲ್ಲಿ ಹೆಸರು ನೋಂದಾಯಿಸಿದೆ ಎಂದು ಅಲ್ಲಿಂದ ಸುದ್ದಿ ಬಂದಿದೆ. ದುಬೈನ ಕ್ಲಬ್ ದಾಖಲೆ ಸಾಧಿಸಿದರೆ ಅದರಲ್ಲಿ ಭಾರತಕ್ಕೆ ಏನು ಸಂಬಂಧ? ಎಂದು ಯಾರಿಗಾದರೂ ಅನಿಸಬಹುದು. ವಾಸ್ತವದಲ್ಲಿ ಈ ದಾಖಲೆ, ಭಾರತದ ಪ್ರಾಚೀನ ಸಮರ ಕಲೆ ‘ಕಲರೀಪಯಟ್’ ನೊಂದಿಗೆ ಸಂಬಂಧ ಹೊಂದಿದೆ. ಒಟ್ಟಿಗೆ ಅನೇಕ ಮಂದಿ ಸೇರಿ ಮಾಡಿದ ಕಲರಿ ಪ್ರದರ್ಶನದ ದಾಖಲೆ ಇದಾಗಿದೆ. ‘ದುಬೈ ಕಲಾರಿ ಕ್ಲಬ್’, ದುಬೈ ಪೊಲೀಸರೊಡಗೂಡಿ ಈ ಯೋಜನೆ ಸಿದ್ಧಪಡಿಸಿತ್ತು ಮತ್ತು ಯುಎಇ ನ ರಾಷ್ಟ್ರೀಯ ದಿನದಂದು ಪ್ರದರ್ಶಿಸಲಾಯಿತು. ಈ ಆಯೋಜನೆಯಲ್ಲಿ ನಾಲ್ಕು ವರ್ಷದ ಮಕ್ಕಳಿಂದ ಹಿಡಿದು 60 ವರ್ಷ ವಯೋಮಾನದವರೆಗಿನವರು ‘ಕಲಾರಿ’ ಕಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಬೇರೆ ಬೇರೆ ಪೀಳಿಗೆಗಳು ಯಾವ ರೀತಿ ಒಂದು ಪ್ರಾಚೀನ ಪರಂಪರೆಯನ್ನು ಮುಂದುರಿಸಿಕೊಂಡು ಹೋಗುತ್ತಿವೆ, ಸಂಪೂರ್ಣ ಉತ್ಸಾಹದಿಂದ ಮುನ್ನಡೆಸಿಕೊಂಡು ಹೋಗುತ್ತಿವೆ ಎನ್ನುವುದಕ್ಕೆ ಇದೊಂದು ಅದ್ಭುತ ಉದಾಹರಣೆಯಾಗಿದೆ.
ಸ್ನೇಹಿತರೇ, ‘ಮನದ ಮಾತಿ’ ನ ಶ್ರೋತೃಗಳಿಗೆ ನಾನು ಕರ್ನಾಟಕದ ಗದಗ ಜಿಲ್ಲೆಯ ನಿವಾಸಿ ಕ್ವೇಮ್ ಶ್ರೀ ಅವರ ಬಗ್ಗೆ ಹೇಳಲು ಬಯಸುತ್ತೇನೆ. ಕ್ವೇಮ್ ಶ್ರೀ ಅವರು ದಕ್ಷಿಣ ಭಾರತದಲ್ಲಿ ಕರ್ನಾಟಕದ ಕಲಾ-ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಅಭಿಯಾನದಲ್ಲಿ ಕಳೆದ 25 ವರ್ಷಗಳಿಂದ ಸತತವಾಗಿ ತೊಡಗಿಕೊಂಡಿದ್ದಾರೆ. ಅವರ ಈ ತಪಸ್ಸು ಎಷ್ಟೊಂದು ದೊಡ್ಡದೆಂದು ನೀವು ಊಹಿಸಬಹುದು. ಮೊದಲು ಅವರು ಹೊಟೇಲ್ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಆದರೆ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅವರಿಗೆ ಆಳವಾದ ಬಾಂಧವ್ಯ ಎಷ್ಟಿತ್ತೆಂದರೆ, ಅವರು ಇದನ್ನು ತಮ್ಮ ಧ್ಯೇಯವಾಗಿಸಿಕೊಂಡರು. ಅವರು ‘ಕಲಾ ಚೇತನ’ ಎಂಬ ಹೆಸರಿನ ಒಂದು ವೇದಿಕೆ ಸಿದ್ಧಪಡಿಸಿದರು. ಈ ವೇದಿಕೆ ಇಂದು, ಕರ್ನಾಟಕದ, ಮತ್ತು ದೇಶ-ವಿದೇಶದ ಕಲಾವಿದರ, ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದರಲ್ಲಿ ಸ್ಥಳೀಯ ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಅನೇಕ ನವೀನ ಆವಿಷ್ಕಾರಕ ಕೆಲಸ ಕಾರ್ಯಗಳು ಕೂಡಾ ಒಳಗೊಂಡಿರುತ್ತವೆ.
ಸ್ನೇಹಿತರೇ, ನಮ್ಮ ಕಲೆ-ಸಂಸ್ಕೃತಿಯ ಬಗ್ಗೆ ದೇಶವಾಸಿಗಳ ಈ ಉತ್ಸಾಹವು, ‘ನಮ್ಮ ಪರಂಪರೆಯ ಕುರಿತು ಹೆಮ್ಮೆಯ’ ಭಾವನೆಯ ದ್ಯೋತಕವೇ ಆಗಿದೆ. ನಮ್ಮ ದೇಶದಲ್ಲಂತೂ, ಪ್ರತಿಯೊಂದು ಮೂಲೆಯಲ್ಲೂ ಇಂತಹ ಅದೆಷ್ಟೊಂದು ಬಣ್ಣಗಳು ಹರಡಿವೆ. ಇವುಗಳನ್ನು ಅಲಂಕರಿಸಲು, ಸಂರಕ್ಷಿಸಲು ನಾವೆಲ್ಲರೂ ಸತತವಾಗಿ ಕೆಲಸ ಮಾಡಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಅನೇಕ ಪ್ರದೇಶಗಳಲ್ಲಿ ಬಿದಿರಿನಿಂದ ಅನೇಕ ಸುಂದರ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸಲಾಗುತ್ತದೆ. ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಬಿದಿರಿನ ವಸ್ತುಗಳನ್ನು ತಯಾರಿಸುವ ಕುಶಲಕರ್ಮಿಗಳು, ನುರಿತ ಕಲೆಗಾರರಿದ್ದಾರೆ. ಬಿದಿರಿಗೆ ಸಂಬಂಧಿಸಿದ, ಬ್ರಿಟಿಷರ ಕಾಲದ ಕಾನೂನನ್ನು ದೇಶ ಬದಲಾವಣೆ ಮಾಡಿದ ನಂತರ, ಬಿದಿರಿನ ದೊಡ್ಡ ಮಾರುಕಟ್ಟೆಯೇ ಸಿದ್ಧವಾಗಿಬಿಟ್ಟಿತು. ಮಹಾರಾಷ್ಟ್ರದ ಪಾಲ್ಘರ್ ನಂತಹ ಪ್ರದೇಶದಲ್ಲಿ ಕೂಡಾ ಬುಡಕಟ್ಟು ಸಮಾಜದ ಜನರು ಬಿದಿರಿನಿಂದ ಅನೇಕ ಸುಂದರ, ಆಕರ್ಷಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಬಿದಿರಿನಿಂದ ತಯಾರಿಸಲಾಗುವ ಪೆಟ್ಟಿಗೆಗಳು, ಕುರ್ಚಿ, ಚಹಾದಾನಿ, ಬುಟ್ಟಿಗಳು ಮತ್ತು ಟ್ರೇ ಇತ್ಯಾದಿ ವಸ್ತುಗಳು ಬಹಳ ಜನಪ್ರಿಯವಾಗುತ್ತಿವೆ. ಅಷ್ಟೇ ಅಲ್ಲ, ಈ ಜನರು, ಬಿದಿರಿನ ಹುಲ್ಲಿನಿಂದ ಸುಂದರ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದರಿಂದಾಗಿ ಬುಡಕಟ್ಟು ಮಹಿಳೆಯರಿಗೆ ಜೀವನೋಪಾಯವೂ ದೊರೆಯುತ್ತಿದೆ, ಹಾಗೆಯೇ ಅವರ ಕೌಶಲ್ಯಕ್ಕೆ ಮನ್ನಣೆಯೂ ದೊರೆಯುತ್ತಿದೆ.
ಸ್ನೇಹಿತರೇ, ಕರ್ನಾಟಕದ ಓರ್ವ ದಂಪತಿ ಅಡಿಕೆ ನಾರು ಅಥವಾ ಹಾಳೆಯಿಂದ ತಯಾರಿಸಲಾದ ಅನೇಕ ವಿಶಿಷ್ಠ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಈ ದಂಪತಿಯೆಂದರೆ ಕರ್ನಾಟಕದ ಶಿವಮೊಗ್ಗ ನಿವಾಸಿಗಳಾದ ಶ್ರೀ ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಮೈಥಿಲಿ ಜೋಡಿ. ಇವರು ಅಡಿಕೆಯ ಹಾಳೆಯಿಂದ ಟ್ರೇ, ತಟ್ಟೆ ಮತ್ತು ಕೈ ಚೀಲದಿಂದ ಹಿಡಿದು, ಅನೇಕ ಅಲಂಕಾರಿಕ ವಸ್ತುಗಳನ್ನು ಕೂಡಾ ತಯಾರಿಸುತ್ತಾರೆ. ಇದೇ ಅಡಿಕೆ ಹಾಳೆಯಿಂದ ತಯಾರಿಸಲಾದ ಪಾದರಕ್ಷೆಗಳಿಗೆ ಕೂಡಾ ಈಗ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ತಯಾರಿಸುವ ಉತ್ಪನ್ನಗಳು ಈಗ ಲಂಡನ್ ಮತ್ತು ಯೂರೋಪ್ ನ ಇತರೆ ಮಾರುಕಟ್ಟೆಗಳಲ್ಲಿ ಕೂಡಾ ಮಾರಾಟವಾಗುತ್ತಿದೆ. ಇದೇ ನಮ್ಮ ಪ್ರಾಕೃತಿಕ ಸಂಪನ್ಮೂಲಗಳ ಮತ್ತು ಸಾಂಪ್ರದಾಯಿಕ ಕೌಶಲ್ಯಗಳ ವೈಶಿಷ್ಟ್ಯವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗುತ್ತಿದೆ. ಭಾರತದ ಈ ಸಾಂಪ್ರದಾಯಿಕ ಅರಿವಿನಲ್ಲಿ ವಿಶ್ವ, ಸುಸ್ಥಿರ ಭವಿಷ್ಯದ ಹಾದಿಯನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ನಾವು ಸ್ವಯಂ ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯವಿದೆ. ನಾವು ಸ್ವಯಂ ಇಂತಹ ದೇಶೀಯ ಮತ್ತು ಸ್ಥಳೀಯ ಉತ್ಪನ್ನವನ್ನು ಉಪಯೋಗಿಸಬೇಕು ಮತ್ತು ಇತರರಿಗೆ ಕೂಡಾ ಇದನ್ನು ಉಡುಗೊರೆಯ ರೂಪದಲ್ಲಿ ನೀಡಬೇಕು. ಇದರಿಂದ ನಮ್ಮ ಗುರುತು ಬಲಿಷ್ಠವಾಗುತ್ತದೆ, ಸ್ಥಳೀಯ ಆರ್ಥಿಕತೆ ಬಲಿಷ್ಠವಾಗುತ್ತದೆ, ಮತ್ತು ದೊಡ್ಡ ಪ್ರಮಾಣದಲ್ಲಿ, ಜನರ ಭವಿಷ್ಯ ಕೂಡಾ ಉಜ್ವಲವಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಕ್ರಮೇಣ ಮನದ ಮಾತಿನ 100 ನೇ ಸಂಚಿಕೆಯ ಅಭೂತಪೂರ್ವ ಮೈಲುಗಲ್ಲಿನ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ. ನನಗೆ ದೇಶವಾಸಿಗಳಲ್ಲಿ ಅನೇಕರಿಂದ ಪತ್ರಗಳು ಬಂದಿವೆ, ಇದರಲ್ಲಿ ಅವರು 100 ನೇ ಸಂಚಿಕೆಯ ಕುರಿತು ಹೆಚ್ಚಿನ ಕುತೂಹಲ ವ್ಯಕ್ತಪಡಿಸಿದ್ದಾರೆ. 100 ನೇ ಸಂಚಿಕೆಯಲ್ಲಿ ನಾವು ಯಾವ ವಿಷಯ ಕುರಿತು ಮಾತನಾಡಬೇಕು, ಅದನ್ನು ಯಾವರೀತಿ ವಿಶೇಷವಾಗಿಸಬಹುದು, ಇವುಗಳ ಬಗ್ಗೆ ನೀವು ನನಗೆ ಸಲಹೆ, ಅಭಿಪ್ರಾಯ ಕಳುಹಿಸಿಕೊಟ್ಟಲ್ಲಿ, ನನಗೆ ಬಹಳ ಸಂತೋಷವಾಗುತ್ತದೆ. ಮುಂದಿನಬಾರಿ ನಾವು ಹೊಸ ವರ್ಷ 2023 ರಲ್ಲಿ ಭೇಟಿಯಾಗೋಣ. ನಿಮ್ಮೆಲ್ಲರಿಗೂ 2023 ರ ವರ್ಷಕ್ಕಾಗಿ ನಾನು ಶುಭಾಶಯ ಕೋರುತ್ತೇನೆ. ಈ ವರ್ಷ ಕೂಡಾ ದೇಶಕ್ಕೆ ವಿಶೇಷವೆನಿಸಲಿ, ದೇಶ ಮತ್ತಷ್ಟು ಎತ್ತರಗಳನ್ನು ಮುಟ್ಟಲಿ, ಇದಕ್ಕಾಗಿ ನಾವೆಲ್ಲರೂ ಸಂಕಲ್ಪವನ್ನೂ ಮಾಡಬೇಕು, ಸಾಕಾರಗೊಳಿಸಲೂ ಬೇಕು. ಈಗ ಬಹುತೇಕ ಜನರು ರಜಾದಿನಗಳ ಮೂಡ್ ನಲ್ಲಿದ್ದಾರೆ. ನೀವೆಲ್ಲರೂ ಈ ರಜಾ ದಿನಗಳ, ಹಬ್ಬದ ಸಂದರ್ಭವನ್ನು ಸಂಪೂರ್ಣವಾಗಿ ಆನಂದಿಸಿ, ಆದರೆ, ಸ್ವಲ್ಪ ಜಾಗರೂಕರಾಗಿ ಕೂಡಾ ಇರಿ. ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ, ಆದ್ದರಿಂದ ನಾವು ಮುಖ ಗವುಸು ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವಂತಹ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ನಾವು ಎಚ್ಚರಿಕೆಯಿಂದ ಇದ್ದಲ್ಲಿ ಸುರಕ್ಷಿತವಾಗಿ ಇರಬಹುದು. ಆಗ ನಮ್ಮ ಸಂತೋಷಕ್ಕೆ ಯಾವುದೇ ಅಡಚಣೆ ಕೂಡಾ ಉಂಟಾಗುವುದಿಲ್ಲ. ಇದರೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಅನೇಕಾನೇಕ ಶುಭಹಾರೈಕೆಗಳು. ಅನೇಕಾನೇಕ ಧನ್ಯವಾದ, ನಮಸ್ಕಾರ.
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. 'ಮನದ ಮಾತಿಗೆ' ನಿಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ. ಈ ಕಾರ್ಯಕ್ರಮವು 95 ನೇ ಸಂಚಿಕೆಯಾಗಿದೆ. ನಾವು 'ಮನದ ಮಾತಿನ’ ಶತಕದತ್ತ ಬಹು ವೇಗವಾಗಿ ಸಾಗುತ್ತಿದ್ದೇವೆ. ಈ ಕಾರ್ಯಕ್ರಮವು 130 ಕೋಟಿ ದೇಶವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಮತ್ತೊಂದು ಮಾಧ್ಯಮವಾಗಿದೆ. ಪ್ರತಿ ಸಂಚಿಕೆಗೂ ಮುನ್ನ ಗ್ರಾಮಗಳು-ನಗರಗಳಿಂದ ಬರುವ ಸಾಕಷ್ಟು ಪತ್ರಗಳನ್ನು ಓದುವುದು, ಮಕ್ಕಳಿಂದ ಹಿರಿಯರವರೆಗೆ ಆಡಿಯೋ ಸಂದೇಶಗಳನ್ನು ಕೇಳುವುದು ನನಗೆ ಒಂದು ಆಧ್ಯಾತ್ಮಿಕ ಅನುಭವದಂತಿದೆ.
ಸ್ನೇಹಿತರೇ, ನಾನು ಇಂದಿನ ಕಾರ್ಯಕ್ರಮವನ್ನು ಒಂದು ಅನನ್ಯವಾದ ಉಡುಗೊರೆಯ ಕುರಿತ ಚರ್ಚೆಯೊಂದಿಗೆ ಪ್ರಾರಂಭಿಸಲು ಬಯಸುತ್ತೇನೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಯೆಲ್ದಿ ಹರಿಪ್ರಸಾದ್ ಎಂಬ ಒಬ್ಬ ನೇಕಾರ ಸೋದರನಿದ್ದಾನೆ. ಅವರು ತಮ್ಮ ಕೈಯಿಂದಲೇ ನೇಯ್ದ G-20 ಲೋಗೋವನ್ನು ನನಗೆ ಕಳುಹಿಸಿದ್ದಾರೆ. ಈ ಅದ್ಭುತ ಉಡುಗೊರೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು. ಹರಿಪ್ರಸಾದ್ ಜಿ ತಮ್ಮ ಕಲೆಯಲ್ಲಿ ಎಷ್ಟು ನಿಪುಣರಾಗಿದ್ದಾರೆಂದರೆ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಹರಿಪ್ರಸಾದ್ ಜಿ ಅವರು ಕೈಯಿಂದ ನೇಯ್ದ ಜಿ-20 ಲೋಗೋದ ಜೊತೆಗೆ ನನಗೆ ಪತ್ರವೊಂದನ್ನೂ ಕಳುಹಿಸಿದ್ದಾರೆ. ಇದರಲ್ಲಿ ಅವರು ಮುಂದಿನ ವರ್ಷ ಜಿ-20 ಶೃಂಗಸಭೆಯನ್ನು ಆಯೋಜಿಸುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ವಿಷಯ ಎಂದು ಬರೆದಿದ್ದಾರೆ. ದೇಶ ಈ ಸಾಧನೆಗೈಯ್ದ ಖುಷಿಯಲ್ಲಿ ತಮ್ಮ ಕೈಯಿಂದಲೇ ಜಿ-20 ಲೋಗೋ ಸಿದ್ಧಪಡಿಸಿದ್ದಾರೆ. ನೇಯ್ಗೆಯ ಈ ಅದ್ಭುತ ಪ್ರತಿಭೆ ಅವರಿಗೆ ತಂದೆಯಿಂದ ಪರಂಪರಾಗತ ಕೊಡುಗೆಯ ರೂಪದಲ್ಲಿ ದೊರೆತಿದೆ. ಇಂದು ಅವರು ಸಂಪೂರ್ಣ ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ನೇಹಿತರೇ, ಕೆಲ ದಿನಗಳ ಹಿಂದೆಯಷ್ಟೇ ನನಗೆ G-20 ಲಾಂಛನ ಮತ್ತು ಭಾರತದ ಪ್ರೆಸಿಡೆನ್ಸಿಯ ವೆಬ್ಸೈಟ್ ಅನ್ನು ಬಿಡುಗಡೆ ಮಾಡುವ ಸದವಕಾಶ ಲಭಿಸಿತ್ತು. ಈ ಲೋಗೋವನ್ನು ಸಾರ್ವಜನಿಕ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ. ಹರಿಪ್ರಸಾದ್ ಅವರಿಂದ ನನಗೆ ಈ ಉಡುಗೊರೆ ಲಭಿಸಿದಾಗ ನನ್ನ ಮನಸ್ಸಿನಲ್ಲಿ ಮತ್ತೊಂದು ಆಲೋಚನೆ ಮೂಡಿತು. ತೆಲಂಗಾಣದ ಜಿಲ್ಲೆಯಲ್ಲಿ ಕುಳಿತ ಒಬ್ಬ ವ್ಯಕ್ತಿಯು ಜಿ-20 ಶೃಂಗಸಭೆಯೊಂದಿಗೆ ತನ್ನನ್ನು ತಾನು ಹೇಗೆ ಕನೆಕ್ಟ್ ಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಇಂದು ಹರಿಪ್ರಸಾದ್ ಅವರಂತಹ ಅನೇಕರು ನನಗೆ ಪತ್ರ ಬರೆದು ದೇಶ ಇಷ್ಟು ಬೃಹತ್ ಶೃಂಗಸಭೆಯನ್ನು ಆಯೋಜಿಸಿತ್ತಿರುವುದು ತಮಗೆ ಬಹಳ ಹೆಮ್ಮೆಯ ವಿಷಯವೆನಿಸಿದೆ ಎಂದು ಹೇಳಿದ್ದಾರೆ. ಪುಣೆಯ ಸುಬ್ಬರಾವ್ ಚಿಲ್ಲಾರಾ ಅವರು ಮತ್ತು ಕೋಲ್ಕತ್ತಾದಿಂದ ತುಷಾರ್ ಜಗಮೋಹನ್ ಅವರ ಸಂದೇಶಗಳ ಬಗ್ಗೆಯೂ ನಿಮ್ಮೊಂದಿಗೆ ಪ್ರಸ್ತಾಪಿಸಲಿದ್ದೇನೆ. G-20 ಗೆ ಸಂಬಂಧಿಸಿದಂತೆ ಭಾರತದ ಸಕ್ರಿಯ ಪ್ರಯತ್ನಗಳನ್ನು ಅವರು ಬಹಳ ಶ್ಲಾಘಿಸಿದ್ದಾರೆ.
ಸ್ನೇಹಿತರೇ, G-20 ವಿಶ್ವ ಜನಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ, ವಿಶ್ವ ವ್ಯಾಪಾರದಲ್ಲಿ ನಾಲ್ಕನೇ- ಮುಕ್ಕಾಲು ಪಾಲು ಮತ್ತು ವಿಶ್ವ ಜಿಡಿಪಿಯಲ್ಲಿ ಶೇ.85 ರಷ್ಟು ಪಾಲುದಾರಿಕೆಯನ್ನು ಹೊಂದಿದೆ. ಭಾರತವು ಇಂದಿನಿಂದ 3 ದಿನಗಳ ನಂತರ ಅಂದರೆ ಡಿಸೆಂಬರ್ 1 ರಿಂದ ಅಂತಹ ಬೃಹತ್ ಸಮೂಹದ, ಅಂತಹ ಸಮರ್ಥ ತಂಡದ ಅಧ್ಯಕ್ಷತೆ ವಹಿಸಲಿದೆ ಎಂದು ನೀವು ಊಹಿಸಬಹುದು. ಭಾರತಕ್ಕೆ, ಪ್ರತಿಯೊಬ್ಬ ಭಾರತೀಯನಿಗೆ ಇದು ಎಂತಹ ಅದ್ಭುತ ಅವಕಾಶವಲ್ಲವೇ. ಆಜಾದಿ ಕೆ ಅಮೃತ ಮಹೋತ್ಸವದಲ್ಲಿ ಭಾರತಕ್ಕೆ ಈ ಜವಾಬ್ದಾರಿ ದೊರೆತಿರುವುದು ಮತ್ತಷ್ಟು ವಿಶೇಷವೆನ್ನಿಸುತ್ತದೆ.
ಸ್ನೇಹಿತರೇ, ಜಿ-20 ಅಧ್ಯಕ್ಷತೆ ನಮಗೆ ಉತ್ತಮ ಅವಕಾಶವಾಗಿದೆ. ನಾವು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಮತ್ತು ಜಾಗತಿಕ ಒಳಿತಿಗಾಗಿ, ವಿಶ್ವ ಕಲ್ಯಾಣದತ್ತ ಗಮನ ಹರಿಸಬೇಕು. ಅದು ಶಾಂತಿಯಾಗಿರಲಿ ಅಥವಾ ಏಕತೆಯಾಗಿರಲಿ, ಪರಿಸರದ ಕುರಿತು ಸಂವೇದನಶೀಲತೆಯಾಗಿರಲಿ ಅಥವಾ ಸುಸ್ಥಿರ ಅಭಿವೃದ್ಧಿಯಾಗಿರಲಿ, ಇವುಗಳಿಗೆ ಸಂಬಂಧಿಸಿದ ಸವಾಲುಗಳಿಗೆ ಭಾರತ ಪರಿಹಾರಗಳನ್ನು ಹೊಂದಿದೆ. ನಾವು ನೀಡಿರುವ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ವಿಷಯ ವಸ್ತು ವಸುಧೈವ ಕುಟುಂಬಕಂ ಕುರಿತ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಾವು ಯಾವಾಗಲೂ ಹೇಳುತ್ತೇವೆ -
ಓಂ ಸರ್ವೇಶಾಂ ಸ್ವಸ್ಥಿರ್ ಭವತು
ಸರ್ವೇಶಾಂ ಶಾಂತಿರ್ ಭವತು
ಸರ್ವೇಶಾಂ ಪೂರ್ಣಮ್ ಭವತು
ಸರ್ವೇಶಾಂ ಮಂಗಳಂ ಭವತು
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಎಲ್ಲರ ಕಲ್ಯಾಣವಾಗಲಿ, ಎಲ್ಲರಿಗೂ ಶಾಂತಿ ದೊರೆಯಲಿ, ಎಲ್ಲರಿಗೂ ಪರಿಪೂರ್ಣತೆ ದೊರೆಯಲಿ ಮತ್ತು ಎಲ್ಲರಿಗೂ ಶುಭವಾಗಲಿ. ಮುಂದಿನ ದಿನಗಳಲ್ಲಿ ಜಿ-20 ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆ ಆಯೋಜಿಸಲಾಗುವುದು. ಈ ಸಮಯದಲ್ಲಿ, ಪ್ರಪಂಚದ ವಿವಿಧ ಭಾಗಗಳ ಜನರು ನಿಮ್ಮ ರಾಜ್ಯಗಳಿಗೆ ಭೇಟಿ ನೀಡುವ ಅವಕಾಶವಿದೆ. ನಿಮ್ಮ ಸಂಸ್ಕೃತಿಯ ವೈವಿಧ್ಯಮಯ ಮತ್ತು ವಿಶಿಷ್ಟ ರೂಪಗಳನ್ನು ನೀವು ಜಗತ್ತಿಗೆ ಪ್ರದರ್ಶಿಸುತ್ತೀರಿ ಎಂದು ನನಗೆ ಭರವಸೆಯಿದೆ ಮತ್ತು ಈಗ ಜಿ -20 ಗೆ ಬರುವ ಜನರು ಒಬ್ಬ ಪ್ರತಿನಿಧಿಯಂತೆ ಬರಬಹುದು, ಆದರೆ ಅವರು ಭವಿಷ್ಯದ ಪ್ರವಾಸಿಗಳು ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು. ನಿಮ್ಮೆಲ್ಲರಲ್ಲಿ ನನ್ನ ಒಂದು ವಿನಂತಿ. ಅದರಲ್ಲೂ ನನ್ನ ಯುವ ಸ್ನೇಹಿತರಲ್ಲಿ ವಿನಂತಿಸುವುದೇನೆಂದರೆ ಹರಿಪ್ರಸಾದ್ ಅವರಂತೆ ನೀವೂ ಒಂದಲ್ಲ ಒಂದು ರೀತಿಯಲ್ಲಿ ಜಿ-20 ಯೊಂದಿಗೆ ಜೋಡಿಸಿಕೊಳ್ಳಿ. G-20 ಭಾರತೀಯ ಲೋಗೋವನ್ನು ಬಟ್ಟೆಗಳ ಮೇಲೆ ತುಂಬಾ ಸುಂದರವಾಗಿ, ಸೊಗಸಾದ ರೀತಿಯಲ್ಲಿ ವಿನ್ಯಾಸಿಸಬಹುದು ಮತ್ತು ಮುದ್ರಿಸಬಹುದು. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲೂ ತಮ್ಮ ಆವರಣಗಳಲ್ಲಿ G-20 ಗೆ ಸಂಬಂಧಿಸಿದ ಚರ್ಚೆಗಳು ಮತ್ತು ಸ್ಪರ್ಧೆಗಳಿಗೆ ಅವಕಾಶಗಳನ್ನು ಸೃಷ್ಟಿಸುವಂತೆ ನಾನು ಆಗ್ರಹಿಸುತ್ತೇನೆ. ನೀವು G20.in ವೆಬ್ಸೈಟ್ಗೆ ಹೋದರೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಅನೇಕ ವಿಷಯಗಳು ಕಾಣಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ 18 ರಂದು ಇಡೀ ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಕ್ಕೆ ಸಾಕ್ಷಿಯಾಗಿದೆ. ಈ ದಿನ, ಭಾರತವು ತನ್ನ ಮೊದಲ ಭಾರತದ ಖಾಸಗಿ ವಲಯದಿಂದ ವಿನ್ಯಾಸಗೊಳಿಸಿ ಸಿದ್ಧಪಡಿಸಲಾದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. ಈ ರಾಕೆಟ್ನ ಹೆಸರು - 'ವಿಕ್ರಮ್-ಎಸ್'. ಸ್ವದೇಶಿ ಬಾಹ್ಯಾಕಾಶ ಸ್ಟಾರ್ಟ್ ಅಪ್ ನ ಈ ಮೊದಲ ರಾಕೆಟ್ ಶ್ರೀಹರಿಕೋಟಾದಿಂದ ಐತಿಹಾಸಿಕ ಹಾರಾಟವನ್ನು ಮಾಡಿದ ತಕ್ಷಣ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗಿದನು.
ಸ್ನೇಹಿತರೇ, 'ವಿಕ್ರಮ್-ಎಸ್' ರಾಕೆಟ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಇತರ ರಾಕೆಟ್ಗಳಿಗಿಂತ ಹಗುರವಾಗಿದೆ ಮತ್ತು ಅಗ್ಗವಾಗಿದೆ. ಇದರ ಅಭಿವೃದ್ಧಿ ವೆಚ್ಚವು ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ದೇಶಗಳ ವೆಚ್ಚಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಕಡಿಮೆ ವೆಚ್ಚದಲ್ಲಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವ ದರ್ಜೆಯ ಗುಣಮಟ್ಟ ಎಂಬುದು ಭಾರತದ ಹೆಗ್ಗುರುತಾಗಿದೆ. ಈ ರಾಕೆಟ್ ತಯಾರಿಕೆಯಲ್ಲಿ ಮತ್ತೊಂದು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ರಾಕೆಟ್ ನ ಕೆಲವು ಪ್ರಮುಖ ಭಾಗಗಳನ್ನು 3D ಪ್ರಿಂಟಿಂಗ್ ಮೂಲಕ ತಯಾರಿಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ವಾಸ್ತವವಾಗಿ, 'ವಿಕ್ರಮ್-ಎಸ್' ಉಡಾವಣಾ ಮಿಷನ್ ಗೆ ನೀಡಲಾದ 'ಪ್ರಾರಂಭ' ಎಂಬ ಹೆಸರು ಅತ್ಯಂತ ಸೂಕ್ತವೆನ್ನಿಸುತ್ತದೆ. ಇದು ಭಾರತದಲ್ಲಿ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಯುಗದ ಉದಯಕ್ಕೆ ಪ್ರತೀಕದಂತಿದೆ. ಇದು ದೇಶದಲ್ಲಿ ಆತ್ಮವಿಶ್ವಾಸದಿಂದ ತುಂಬಿದ ಹೊಸ ಯುಗಕ್ಕೆ ನಾಂದಿಯಾಗಿದೆ. ಒಂದು ಕಾಲದಲ್ಲಿ ಕಾಗದದ ವಿಮಾನವನ್ನು ಕೈಯಿಂದ ಹಾರಿಸುತ್ತಿದ್ದ ಮಕ್ಕಳು ಈಗ ಭಾರತದಲ್ಲಿಯೇ ವಿಮಾನಗಳನ್ನು ತಯಾರಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ನೀವು ಊಹಿಸಬಹುದೇ? ಒಂದು ಕಾಲದಲ್ಲಿ ಚಂದ್ರ, ನಕ್ಷತ್ರಗಳನ್ನು ನೋಡುತ್ತಾ ಆಕಾಶದಲ್ಲಿ ಆಕೃತಿಗಳನ್ನು ಬಿಡಿಸುತ್ತಿದ್ದ ಮಕ್ಕಳಿಗೆ ಈಗ ಭಾರತದಲ್ಲಿಯೇ ರಾಕೆಟ್ ತಯಾರಿಸುವ ಅವಕಾಶ ಲಭಿಸುತ್ತಿದೆ ಎಂದು ನೀವು ಕಲ್ಪಿಸಬಹುದು! ಬಾಹ್ಯಾಕಾಶವನ್ನು ಖಾಸಗಿಯವರಿಗೆ ಮುಕ್ತಗೊಳಿಸಿದ ನಂತರ ಯುವಕರ ಈ ಕನಸುಗಳೂ ನನಸಾಗುತ್ತಿವೆ. ರಾಕೆಟ್ ತಯಾರಿಸುವ ಈ ಯುವಕರು – ‘ಸ್ಕೈ ಈಸ್ ನಾಟ್ ದಿ ಲಿಮಿಟ್’ ಎಂದು ಹೇಳುತ್ತಿದ್ದಾರೆ.
ಸ್ನೇಹಿತರೇ, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಯಶಸ್ಸನ್ನು ತನ್ನ ನೆರೆಯ ರಾಷ್ಟ್ರಗಳೊಂದಿಗೂ ಹಂಚಿಕೊಳ್ಳುತ್ತಿದೆ. ನಿನ್ನೆಯಷ್ಟೇ ಭಾರತ ಒಂದು ಉಪಗ್ರಹವನ್ನು ಉಡಾವಣೆ ಮಾಡಿದ್ದು, ಇದನ್ನು ಭಾರತ ಮತ್ತು ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಉಪಗ್ರಹವು ಉತ್ತಮ ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸುತ್ತದೆ, ಇದು ಭೂತಾನ್ ಗೆ ತನ್ನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಈ ಉಪಗ್ರಹದ ಉಡಾವಣೆಯು ಬಲವಾದ ಭಾರತ-ಭೂತಾನ್ ನ ಬಲವಾದ ಸಂಬಂಧದ ಪ್ರತಿಬಿಂಬವಾಗಿದೆ.
ಸ್ನೇಹಿತರೇ, ಕಳೆದ ಕೆಲವು 'ಮನದ ಮಾತಿ' ನಲ್ಲಿ ನಾವು ಬಾಹ್ಯಾಕಾಶ, ತಂತ್ರಜ್ಞಾನ, ನಾವೀನ್ಯಗಳ ಬಗ್ಗೆ ಬಹಳಷ್ಟು ಮಾತನಾಡಿರುವುದನ್ನು ನೀವು ಗಮನಿಸಿರಬೇಕು. ಇದಕ್ಕೆ ಎರಡು ವಿಶೇಷ ಕಾರಣಗಳಿವೆ, ಒಂದು ನಮ್ಮ ಯುವಕರು ಈ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. They are thinking big and achieving big. ಈಗ ಅವರು ಸಣ್ಣ ಸಣ್ಣ ಸಾಧನೆಗಳಿಂದ ತೃಪ್ತರಾಗುವುದಿಲ್ಲ. ಎರಡನೆಯದಾಗಿ, ನಾವೀನ್ಯತೆ ಮತ್ತು ಮೌಲ್ಯ ಸೃಷ್ಟಿಯ ಈ ರೋಮಾಂಚಕಾರಿ ಪಯಣದಲ್ಲಿ, ಅವರು ತಮ್ಮ ಇತರ ಯುವ ಸಹೋದ್ಯೋಗಿಗಳು ಮತ್ತು ಸ್ಟಾರ್ಟ್-ಅಪ್ಗಳನ್ನು ಸಹ ಪ್ರೋತ್ಸಾಹಿಸುತ್ತಿದ್ದಾರೆ.
ಸ್ನೇಹಿತರೇ, ನಾವು ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವಿಷ್ಕಾರಗಳ ಬಗ್ಗೆ ಮಾತನಾಡುವಾಗ, ನಾವು ಡ್ರೋನ್ಗಳನ್ನು ಮರೆಯಲಾಗದು. ಡ್ರೋನ್ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುಂದುವರಿಯುತ್ತಿದೆ. ಕೆಲವು ದಿನಗಳ ಹಿಂದೆ ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಡ್ರೋನ್ಗಳ ಮೂಲಕ ಸೇಬುಗಳನ್ನು ಹೇಗೆ ಸಾಗಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಕಿನ್ನೌರ್ ಹಿಮಾಚಲದ ದೂರದ ಜಿಲ್ಲೆಯಾಗಿದೆ ಮತ್ತು ಅಲ್ಲಿ ಈ ಋತುವಿನಲ್ಲಿ ಭಾರೀ ಹಿಮಪಾತವಾಗುತ್ತಿರುತ್ತದೆ. ಈ ಅತಿಯಾದ ಹಿಮಪಾತದಿಂದ, ರಾಜ್ಯದ ಇತರ ಭಾಗಗಳೊಂದಿಗೆ ಕಿನ್ನೌರ್ನ ಸಂಪರ್ಕವು ವಾರಗಟ್ಟಲೆ ತುಂಬಾ ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿಂದ ಸೇಬುಗಳ ಸಾಗಣೆಯು ಅಷ್ಟೇ ಕಷ್ಟಕರವಾಗಿದೆ. ಈಗ ಡ್ರೋನ್ ತಂತ್ರಜ್ಞಾನದ ಸಹಾಯದಿಂದ, ಹಿಮಾಚಲದ ರುಚಿಕರವಾದ ಕಿನ್ನೌರಿ ಸೇಬುಗಳು ಮತ್ತಷ್ಟು ಬೇಗ ಜನರನ್ನು ತಲುಪಲಾರಂಭಿಸಿವೆ. ಇದು ನಮ್ಮ ರೈತ ಸಹೋದರ ಸಹೋದರಿಯರ ವೆಚ್ಚವನ್ನು ಕಡಿಮೆ ಮಾಡುತ್ತದೆ - ಸೇಬುಗಳು ಸರಿಯಾದ ಸಮಯಕ್ಕೆ ಮಾರುಕಟ್ಟೆಯನ್ನು ತಲುಪಲು ಸಾಧ್ಯವಾಗುತ್ತದೆ, ಸೇಬುಗಳು ಹಾಳಾಗುವುದೂ ಕಡಿಮೆಯಾಗುತ್ತದೆ.
ಸ್ನೇಹಿತರೇ, ಇಂದು ನಮ್ಮ ದೇಶವಾಸಿಗಳು ತಮ್ಮ ಆವಿಷ್ಕಾರಗಳಿಂದ ಈ ಹಿಂದೆ ಊಹಿಸಲೂ ಸಾಧ್ಯವಾಗದಂತಹ ವಿಷಯಗಳನ್ನು ಸಾಧ್ಯವಾಗಿಸುತ್ತಿದ್ದಾರೆ. ಇದನ್ನು ನೋಡಿ ಯಾರಿಗೆ ಸಂತೋಷವಾಗುವುದಿಲ್ಲ? ಇತ್ತೀಚಿನ ವರ್ಷಗಳಲ್ಲಿ, ನಮ್ಮ ದೇಶವು ಸಾಕಷ್ಟು ಸಾಧನೆಗಳನ್ನು ಮಾಡಿದೆ. ನಾವು ಭಾರತೀಯರು ಮತ್ತು ವಿಶೇಷವಾಗಿ ನಮ್ಮ ಯುವ ಪೀಳಿಗೆಯು ಇಷ್ಟಕ್ಕೇ ನಿಲ್ಲುವುದಿಲ್ಲ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.
ಆತ್ಮೀಯ ದೇಶವಾಸಿಗಳೇ, ನಾನು ನಿಮಗಾಗಿ ಒಂದು ಚಿಕ್ಕ ಕ್ಲಿಪ್ ಪ್ಲೇ ಮಾಡಲಿದ್ದೇನೆ..
##(Song)##
ನೀವೆಲ್ಲರೂ ಈ ಹಾಡನ್ನು ಎಂದಾದರೂ ಕೇಳಿರಬಹುದು. ಅಷ್ಟಕ್ಕೂ ಇದು ಬಾಪು ಅವರ ಅಚ್ಚುಮೆಚ್ಚಿನ ಹಾಡು ಆದರೆ ಇದನ್ನು ಹಾಡಿರುವ ಗಾಯಕರು ಗ್ರೀಸ್ ದೇಶದವರು ಎಂದು ಹೇಳಿದರೆ ಖಂಡಿತಾ ಆಶ್ಚರ್ಯಪಡುತ್ತೀರಿ! ಮತ್ತು ಈ ವಿಷಯವು ನಿಮಗೆ ಹೆಮ್ಮೆಯನ್ನು ತರುತ್ತದೆ. ಈ ಹಾಡನ್ನು ಗ್ರೀಸ್ ಗಾಯಕ - 'ಕಾನ್ ಸ್ಟಾಂಟಿನೋಸ್ ಕಲೈಟ್ಜಿಸ್' ಹಾಡಿದ್ದಾರೆ. ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರು ಇದನ್ನು ಹಾಡಿದ್ದರು. ಆದರೆ ಇಂದು ನಾನು ಬೇರೆ ಯಾವುದೋ ಕಾರಣಕ್ಕಾಗಿ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರು ಭಾರತ ಮತ್ತು ಭಾರತೀಯ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. ಭಾರತದ ಬಗ್ಗೆ ಅವರು ಅದೆಷ್ಟು ಪ್ರೀತಿಯನ್ನು ಹೊಂದಿದ್ದಾರೆಂದರೆ, ಕಳೆದ 42 ವರ್ಷಗಳಲ್ಲಿ ಅವರು ಬಹುತೇಕ ಪ್ರತಿ ವರ್ಷ ಭಾರತಕ್ಕೆ ಬಂದಿದ್ದಾರೆ. ಅವರು ಭಾರತೀಯ ಸಂಗೀತದ ಮೂಲ, ವಿವಿಧ ಭಾರತೀಯ ಸಂಗೀತ ವ್ಯವಸ್ಥೆಗಳು, ವಿವಿಧ ರೀತಿಯ ರಾಗಗಳು, ತಾಳಗಳು ಮತ್ತು ರಸಗಳು ಮತ್ತು ವಿವಿಧ ಘರಾನಾಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಭಾರತೀಯ ಸಂಗೀತದ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಧ್ಯಯನ ಮಾಡಿದ್ದಾರೆ, ಅವರು ಭಾರತದ ಶಾಸ್ತ್ರೀಯ ನೃತ್ಯಗಳ ವಿವಿಧ ಮಗ್ಗುಲುಗಳನ್ನು ಸಹ ಸೂಕ್ಷ್ಮವಾಗಿ ಅರ್ಥಮಾಡಿಕೊಂಡಿದ್ದಾರೆ. ಈಗ ಅವರು ಭಾರತಕ್ಕೆ ಸಂಬಂಧಿಸಿದ ಈ ಎಲ್ಲ ಅನುಭವಗಳನ್ನು ಪುಸ್ತಕದಲ್ಲಿ ಬಹಳ ಸುಂದರವಾಗಿ ಜೋಡಿಸಿದ್ದಾರೆ. ಭಾರತೀಯ ಸಂಗೀತ ಎಂಬ ಅವರ ಪುಸ್ತಕದಲ್ಲಿ ಸುಮಾರು 760 ಚಿತ್ರಗಳಿವೆ. ಈ ಹೆಚ್ಚಿನ ಛಾಯಾಚಿತ್ರಗಳನ್ನು ಅವರೇ ತೆಗೆದಿದ್ದಾರೆ. ಇತರ ದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಕುರಿತು ಇಂತಹ ಉತ್ಸಾಹ ಮತ್ತು ಆಕರ್ಷಣೆ ನಿಜವಾಗಿಯೂ ಹೃದಯ ತುಂಬುವಂತದ್ದಾಗಿದೆ.
ಸ್ನೇಹಿತರೇ, ಕೆಲವು ವಾರಗಳ ಹಿಂದೆ ಮತ್ತೊಂದು ಸುದ್ದಿ ಬಂದಿತ್ತು ಅದು ಕೂಡ ನಮಗೆ ಹೆಮ್ಮೆಯನ್ನು ತುಂಬುವಂಥದ್ದು. ಕಳೆದ 8 ವರ್ಷಗಳಲ್ಲಿ ಭಾರತದಿಂದ ಸಂಗೀತ ಉಪಕರಣಗಳ ರಫ್ತು ಮೂರೂವರೆ ಪಟ್ಟು ಹೆಚ್ಚಾಗಿದೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಎಲೆಕ್ಟ್ರಿಕಲ್ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ಗಳ ಬಗ್ಗೆ ಮಾತನಾಡುವುದಾದರೆ, ಅವುಗಳ ರಫ್ತು 60 ಪಟ್ಟು ಹೆಚ್ಚಾಗಿದೆ. ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ಸಂಗೀತದ ವ್ಯಾಮೋಹ ಹೆಚ್ಚುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಭಾರತೀಯ ಸಂಗೀತ ವಾದ್ಯಗಳ ದೊಡ್ಡ ಖರೀದಿದಾರರು ಅಮೇರಿಕ, ಜರ್ಮನಿ, ಫ್ರಾನ್ಸ್, ಜಪಾನ್ ಮತ್ತು ಬ್ರಿಟನ್ ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿವೆ . ನಮ್ಮ ದೇಶವು ಸಂಗೀತ, ನೃತ್ಯ ಮತ್ತು ಕಲೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವುದು ನಮ್ಮೆಲ್ಲರ ಸೌಭಾಗ್ಯ.
ಸ್ನೇಹಿತರೇ, ಮಹಾನ್ ಕವಿ ಭರ್ತೃಹರಿ ಅವರು ರಚಿಸಿರುವ ‘ನೀತಿ ಶತಕ’ದಿಂದಾಗಿ ನಮಗೆ ಚಿರಪರಿಚಿತರು. ಒಂದು ಶ್ಲೋಕದಲ್ಲಿ ಅವರು ಹೀಗೆನ್ನುತ್ತಾರೆ, ಕಲೆ, ಸಂಗೀತ ಮತ್ತು ಸಾಹಿತ್ಯದೊಂದಿಗೆ ನಮ್ಮ ಬಾಂಧವ್ಯವೇ ಮಾನವೀಯತೆಯ ನಿಜವಾದ ಗುರುತು ಎಂದು. ವಾಸ್ತವದಲ್ಲಿ, ನಮ್ಮ ಸಂಸ್ಕೃತಿ ಇದನ್ನು ಮಾನವೀಯತೆಗಿಂತ ಎತ್ತರಕ್ಕೆ ದೈವತ್ವಕ್ಕೆ ಕರೆದೊಯ್ಯುತ್ತದೆ. ವೇದಗಳಲ್ಲಿ ಸಾಮವೇದವನ್ನಂತೂ ನಮ್ಮ ವಿವಿಧ ಸಂಗೀತಗಳ ಮೂಲ ಎಂದೇ ಕರೆಯಲಾಗುತ್ತದೆ. ತಾಯಿ ಸರಸ್ವತಿಯ ವೀಣೆಯಾಗಿರಲಿ, ಭಗವಂತ ಶ್ರೀಕೃಷ್ಣನ ಕೊಳಲೇ ಆಗಿರಲಿ, ಅಥವಾ ಭೋಲೇನಾಥ ಶಿವನ ಢಮರುಗವೇ ಆಗಲಿ, ನಮ್ಮ ದೇವರು, ದೇವತೆಗಳು ಕೂಡಾ ಸಂಗೀತಕ್ಕಿಂತ ಭಿನ್ನವಾಗಿಲ್ಲ. ಭಾರತೀಯರಾದ ನಾವು, ಪ್ರತಿಯೊಂದರಲ್ಲೂ ಸಂಗೀತವನ್ನು ಕಾಣುತ್ತೇವೆ. ಅದು ನದಿಯ ಹರಿವಿನ ಕಲರವವಾಗಿರಲಿ, ಮಳೆ ನೀರಿನ ಹನಿ ಬೀಳುವ ಶಬ್ದವಾಗಿರಲಿ, ಪಕ್ಷಿಗಳ ಇಂಚರವಾಗಿರಲಿ, ಅಥವಾ ಬೀಸುವ ಗಾಳಿಯ ಧ್ವನಿಯೇ ಆಗಿರಲಿ, ನಮ್ಮ ನಾಗರಿಕತೆಯಲ್ಲಿ ಸಂಗೀತ ಎಲ್ಲೆಡೆ ಮಿಳಿತವಾಗಿದೆ. ಈ ಸಂಗೀತ ಕೇವಲ ನಮ್ಮ ಶರೀರಕ್ಕೆ ವಿಶ್ರಾಂತಿ ನೀಡುವುದು ಮಾತ್ರವಲ್ಲ, ಮನಸ್ಸಿಗೆ ಸಂತೋಷವನ್ನೂ ನೀಡುತ್ತದೆ. ಸಂಗೀತ ನಮ್ಮ ಸಮಾಜವನ್ನೂ ಬೆಸೆಯುತ್ತದೆ. ಭಾಂಗ್ಡಾ ಮತ್ತು ಲಾವಣಿ ಉತ್ಸಾಹ ಮತ್ತು ಸಂತೋಷ ನೀಡಿದರೆ ರವೀಂದ್ರ ಸಂಗೀತವು ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ದೇಶಾದ್ಯಂತ ಇರುವ ಬುಡಕಟ್ಟು ಜನಾಂಗದ ಆದಿವಾಸಿಗಳು ವಿಭಿನ್ನ ಸಂಗೀತ ಪರಂಪರೆಯನ್ನು ಹೊಂದಿದ್ದಾರೆ. ಪರಸ್ಪರ ಸಹಕಾರ ಮತ್ತು ಸಾಮರಸ್ಯದಿಂದ ಪ್ರಕೃತಿಯೊಂದಿಗೆ ಬಾಳುವ ಪ್ರೇರಣೆಯನ್ನು ಇವು ನಮಗೆ ನೀಡುತ್ತವೆ.
ಸ್ನೇಹಿತರೇ, ಸಂಗೀತದ ನಮ್ಮ ಪ್ರಕಾರಗಳು ಕೇವಲ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವುದು ಮಾತ್ರವಲ್ಲದೇ, ವಿಶ್ವಾದ್ಯಂತ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿವೆ. ಭಾರತೀಯ ಸಂಗೀತ ಖ್ಯಾತಿಯು ವಿಶ್ವದ ಮೂಲೆ ಮೂಲೆಗೂ ವ್ಯಾಪಿಸಿದೆ. ನಾನು ನಿಮಗೆ ಮತ್ತೊಂದು ಆಡಿಯೋ ಕ್ಲಿಪ್ ಕೇಳಿಸುತ್ತೇನೆ.
##(ಹಾಡು)##
ಮನೆಯ ಸಮೀಪ ಯಾವುದೋ ದೇವಾಲಯದಲ್ಲಿ ಭಜನೆ ಕೀರ್ತನೆ ನಡೆಯುತ್ತಿರಬಹುದೆಂದು ನೀವು ಯೋಚಿಸುತ್ತಿರಬಹುದು. ಆದರೆ ಈ ಸ್ವರ ಕೂಡಾ ಭಾರತದಿಂದ ಸಾವಿರಾರು ಕಿಲೋಮೀಟರ್ ದೂರವಿರುವ ದಕ್ಷಿಣ ಅಮೆರಿಕಾ ದೇಶದ ಗಯಾನದಿಂದ ಬಂದಿರುವುದಾಗಿದೆ. 19ನೇ ಮತ್ತು 20ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮದೇಶದವರು ಗಯಾನ ದೇಶಕ್ಕೆ ಹೋದರು. ಅವರು ತಮ್ಮೊಂದಿಗೆ ಭಾರತದ ಅನೇಕ ಸಂಪ್ರದಾಯಗಳನ್ನು ತೆಗೆದುಕೊಂಡು ಹೋದರು. ಉದಾಹರಣೆಗೆ ನಾವು ಭಾರತದಲ್ಲಿ ಯಾವರೀತಿ ಹೋಳಿ ಹಬ್ಬ ಆಚರಿಸುತ್ತೇವೆಯೋ, ಗಯಾನದಲ್ಲಿ ಕೂಡಾ ಹೋಳಿ ಹಬ್ಬದ ರಂಗಿನಾಚರಣೆ ನಡೆಯುತ್ತದೆ. ಎಲ್ಲಿ ಹೋಳಿ ಹಬ್ಬದ ಆಚರಣೆಯ ಸಂಭ್ರಮವಿರುತ್ತದೋ ಅಲ್ಲಿ ಫಗವಾ ಅಂದರೆ, ಫಗುವಾ ಸಂಗೀತವೂ ಇರುತ್ತದೆ. ಗಯಾನಾದ ಫಗುವಾದಲ್ಲಿ ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣನಿಗೆ ಸಂಬಂಧಿಸಿದ ವಿವಾಹದ ಹಾಡುಗಳನ್ನು ಹಾಡುವ ಒಂದು ವಿಶೇಷ ಸಂಪ್ರದಾಯವಿದೆ. ಈ ಹಾಡುಗಳನ್ನು ಚೌತಾಲ ಎಂದು ಕರೆಯುತ್ತಾರೆ. ನಮ್ಮಲ್ಲಿ ಹಾಡುವ ರಾಗ ಮತ್ತು ಎತ್ತರದ ಸ್ವರದಲ್ಲಿ ಅಲ್ಲಿ ಕೂಡಾ ಹಾಡಲಾಗುತ್ತದೆ. ಅಷ್ಟೇ ಅಲ್ಲದೆ, ಗಯಾನಾದಲ್ಲಿ ಚೌತಾಲ್ ಸ್ಪರ್ಧೆ ಕೂಡಾ ನಡೆಯುತ್ತದೆ. ಇದೇ ರೀತಿ ಅನೇಕ ಭಾರತೀಯರು, ವಿಶೇಷವಾಗಿ ಪೂರ್ವ ಉತ್ತರಪ್ರದೇಶದ ಮತ್ತು ಬಿಹಾರದ ಜನರು ಫಿಜಿ ದೇಶಕ್ಕೆ ಕೂಡಾ ಹೋಗಿದ್ದಾರೆ. ಅವರು ಸಾಂಪ್ರದಾಯಿಕ ಭಜನೆ-ಕೀರ್ತನೆಗಳನ್ನು ಹಾಡುತ್ತಿದ್ದರು, ಇವುಗಳಲ್ಲಿ ಮುಖ್ಯವಾಗಿ ರಾಮಚರಿತ ಮಾನಸದ ದ್ವಿಪದಿಗಳು ಇರುತ್ತಿದ್ದವು. ಅವರುಗಳ ಫಿಜಿ ದೇಶದಲ್ಲಿ ಕೂಡಾ ಭಜನೆ-ಕೀರ್ತನೆಗಳಿಗೆ ಸಂಬಂಧಿಸಿದ ಅನೇಕ ಮಂಡಳಿಗಳನ್ನು ಕೂಡಾ ಸ್ಥಾಪಿಸಿದರು. ಇಂದಿಗೂ ಫಿಜಿಯಲ್ಲಿ ರಾಮಾಯಣ ಮಂಡಳಿ ಹೆಸರಿನ ಎರಡು ಸಾವಿರಕ್ಕೂ ಅಧಿಕ ಭಜನೆ-ಕೀರ್ತನೆ ಮಂಡಳಿಗಳಿವೆ. ಇಂದು ಪ್ರತಿ ಗ್ರಾಮ-ಮೊಹಲ್ಲಾಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ. ನಾನು ಇಲ್ಲಿ ಕೇವಲ ಕೆಲವೇ ಉದಾಹರಣೆಗಳನ್ನು ಕೊಟ್ಟಿದ್ದೇನೆ. ನೀವು ಇಡೀ ವಿಶ್ವದಲ್ಲಿ ನೋಡಿದರೆ, ಈ ಭಾರತೀಯ ಸಂಗೀತವನ್ನು ಇಷ್ಟಪಡುವವರ ಪಟ್ಟಿ ಬಹಳಷ್ಟು ದೊಡ್ಡದಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವೆಲ್ಲರೂ ನಮ್ಮ ದೇಶ ಪ್ರಪಂಚದಲ್ಲಿ ಎಲ್ಲಕ್ಕಿಂತ ಪ್ರಾಚೀನ ಸಂಪ್ರದಾಯಗಳ ನಿಲಯವಾಗಿದೆ ಎಂದು ಯಾವಾಗಲೂ ಹೆಮ್ಮೆ ಪಡುತ್ತೇವೆ. ಆದ್ದರಿಂದಲೇ, ನಮ್ಮ ಸಂಪ್ರದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಸಂರಕ್ಷಿಸುವುದು ಮತ್ತು ಅವುಗಳನ್ನು ಉತ್ತೇಜಿಸುವುದು ಹಾಗೂ ಸಾಧ್ಯವಾದಷ್ಟೂ ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಒಂದು ಪ್ರಶಂಸನೀಯ ಪ್ರಯತ್ನವನ್ನು ನಮ್ಮ ಈಶಾನ್ಯ ರಾಜ್ಯ ನಾಗಾಲ್ಯಾಂಡಿನ ಕೆಲವು ಸ್ನೇಹಿತರು ಮಾಡುತ್ತಿದ್ದಾರೆ. ಈ ಪ್ರಯತ್ನ ನನಗೆ ಬಹಳ ಇಷ್ಟವಾಯಿತು, ಹೀಗಾಗಿ ಈ ವಿಷಯವನ್ನು ಮನದ ಮಾತಿನ ಶ್ರೋತೃಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೊಂಡೆ.
ಸ್ನೇಹಿತರೆ, ನಾಗಾಲ್ಯಾಂಡ್ ನಲ್ಲಿ ನಾಗಾ ಸಮಾಜದ ಜೀವನಶೈಲಿ, ಅವರ ಕಲೆ-ಸಂಸ್ಕೃತಿ ಮತ್ತು ಸಂಗೀತ, ಇವು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಇದು ನಮ್ಮ ದೇಶದ ಭವ್ಯ ಪರಂಪರೆಯ ಪ್ರಮುಖ ಭಾಗವಾಗಿದೆ. ನಾಗಾಲ್ಯಾಂಡ್ ನ ಜನರ ಜೀವನ ಮತ್ತು ಅವರ ನಿಪುಣತೆಗಳು, ಸುಸ್ಥಿರ ಜೀವನಶೈಲಿಗೆ ಕೂಡಾ ಬಹಳ ಮಹತ್ವವೆನಿಸಿವೆ. ಈ ಸಂಪ್ರದಾಯಗಳು ಮತ್ತು ನೈಪುಣ್ಯಗಳನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವುದಕ್ಕಾಗಿ ಅಲ್ಲಿನ ಜನರು ಒಂದು ಸಂಸ್ಥೆಯನ್ನು ಸ್ಥಾಪಿಸಿದ್ದು, ಅದರ ಹೆಸರು -‘ಲಿಡಿ-ಕ್ರೋ-ಯೂ’ ಎಂದಾಗಿದೆ. ಕ್ರಮೇಣ ಕಣ್ಮರೆಯಾಗುತ್ತಿರುವ ಸುಂದರ ನಾಗಾ ಸಂಸ್ಕೃತಿಯನ್ನು ‘ಲಿಡಿ-ಕ್ರೋ-ಯೂ’ ಸಂಸ್ಥೆ ಪುನಃಶ್ಚೇತನಗೊಳಿಸುವ ಕೆಲಸ ಮಾಡಿದೆ. ಉದಾಹರಣೆಗೆ, ನಾಗಾ ಜಾನಪದ ಸಂಗೀತವು ಅತ್ಯಂತ ಶ್ರೀಮಂತ ಪ್ರಕಾರವಾಗಿದೆ. ಈ ಸಂಸ್ಥೆಯು ನಾಗ ಸಂಗೀತದ Albums launch ಮಾಡುವ ಕೆಲಸ ಆರಂಭಿಸಿದೆ. ಈವರೆಗೂ ಇಂತಹ ಮೂರು albums launch ಮಾಡಲಾಗಿದೆ. ಇವರು ಜಾನಪದ-ಸಂಗೀತ, ಜಾನಪದ ನೃತ್ಯ ಸಂಬಂಧಿತ ಕಾರ್ಯಾಗಾರಗಳನ್ನು ಕೂಡಾ ಆಯೋಜಿಸುತ್ತಾರೆ. ಯುವಜನತೆಗೆ ಇವುಗಳೆಲ್ಲದರ ಕುರಿತ ತರಬೇತಿಯನ್ನು ಕೂಡಾ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಶೈಲಿಯ ಉಡುಪು ತಯಾರಿಕೆ, ಹೊಲಿಗೆ, ಕಸೂತಿಯಂತಹ ಕೆಲಸಗಳ ಬಗ್ಗೆ ಕೂಡಾ ಯುವಜನತೆಗೆ ತರಬೇತಿ ನೀಡಲಾಗುತ್ತದೆ. ಈಶಾನ್ಯದಲ್ಲಿ ಬಿದಿರಿನಿಂದ ಅದೆಷ್ಟೋ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೊಸ ಪೀಳಿಗೆಯ ಯುವಜನತೆಗೆ ಬಿದಿರಿನ ಉತ್ಪನ್ನಗಳ ತಯಾರಿಕೆ ಬಗ್ಗೆ ಕೂಡಾ ಕಲಿಸಲಾಗುತ್ತದೆ. ಇವುಗಳಿಂದಾಗಿ ಈ ಯುವಜನತೆಗೆ ತಮ್ಮ ಸಂಸ್ಕೃತಿಯ ಬಗ್ಗೆ ತಿಳಿದುಬರುವುದರೊಂದಿಗೆ, ಅವರುಗಳಿಗೆ ಉದ್ಯೋಗಕ್ಕಾಗಿ ಹೊಸ ಹೊಸ ಅವಕಾಶಗಳು ಕೂಡಾ ತೆರೆದುಕೊಳ್ಳುತ್ತವೆ. ನಾಗಾ ಜಾನಪದ ಸಂಸ್ಕೃತಿಯ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ತಿಳಿಯುವಂತೆ ಮಾಡಲು ಕೂಡಾ ‘ಲಿಡಿ-ಕ್ರೋ-ಯೂ’ ಸಂಸ್ಥೆಯ ಜನರು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ, ನೀವಿರುವ ಪ್ರದೇಶದಲ್ಲಿ ಕೂಡಾ ಇಂತಹ ಸಾಂಸ್ಕೃತಿಕ ಪ್ರಕಾರಗಳು ಮತ್ತು ಸಂಪ್ರದಾಯಗಳು ಇರಬಹುದು. ನೀವು ಕೂಡಾ ನಿಮ್ಮ ನಿಮ್ಮ ಪ್ರದೇಶಗಳಲ್ಲಿ ಇಂತಹ ಪ್ರಯತ್ನಗಳನ್ನು ಮಾಡಬಹುದು. ಇಂತಹ ವಿಶಿಷ್ಠ ಪ್ರಯತ್ನ ನಡೆದಿರುವ ಬಗ್ಗೆ ನಿಮಗೆ ತಿಳಿದಿದ್ದರೆ, ನೀವು ಅಂತಹ ಪ್ರಯತ್ನದ ಬಗ್ಗೆ ನನ್ನೊಂದಿಗೆ ಖಂಡಿತಾ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮಲ್ಲಿ ಹೀಗೆಂದು ಹೇಳಲಾಗುತ್ತದೆ -
ವಿದ್ಯಾದಾನಂ ಸರ್ವಧನಪ್ರಧಾನಂ
(विद्याधनं सर्वधनप्रधानम् )
ಅಂದರೆ, ಯಾರಾದರೂ ವಿದ್ಯಾದಾನ ಮಾಡುತ್ತಿದ್ದಾರೆಂದರೆ, ಅವರು ಸಮಾಜದ ಹಿತಾಸಕ್ತಿಯಲ್ಲಿ ಬಹುದೊಡ್ಡ ಕೆಲಸ ಮಾಡುತ್ತಿದ್ದಾರೆಂದರ್ಥ. ಶಿಕ್ಷಣ ಕ್ಷೇತ್ರದಲ್ಲಿ ಬೆಳಗಿಸಲಾದ ಒಂದು ಚಿಕ್ಕ ದೀಪ ಕೂಡಾ ಇಡೀ ಸಮಾಜವನ್ನು ಬೆಳಕಾಗಿಸಬಲ್ಲದು. ದೇಶಾದ್ಯಂತ ಇಂತಹ ಅನೇಕ ಪ್ರಯತ್ನಗಳು ನಡೆಯುತ್ತಿರುವುದನ್ನು ಕಂಡು ನನಗೆ ಬಹಳ ಸಂತೋಷವಾಗುತ್ತಿದೆ. ಉತ್ತರಪ್ರದೇಶ ರಾಜಧಾನಿ ಲಕ್ನೋದಿಂದ ಸುಮಾರು 70-80 ಕಿಲೋಮೀಟರ್ ದೂರದಲ್ಲಿ ಹರ್ದೋಯಿಯಲ್ಲಿರುವ ಒಂದು ಗ್ರಾಮ ಬಾಂಸಾ. ಶಿಕ್ಷಣದ ಬೆಳಕನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿರುವ ಈ ಗ್ರಾಮದ ಜತಿನ್ ಲಲಿತ್ ಸಿಂಗ್ ಅವರ ಬಗ್ಗೆ ನನಗೆ ತಿಳಿದುಬಂತು. ಜತಿನ್ ಅವರು ಎರಡು ವರ್ಷಗಳ ಹಿಂದೆ ಇಲ್ಲಿ ‘ಸಮುದಾಯ ಗ್ರಂಥಾಲಯ ಮತ್ತು ಸಂಪನ್ಮೂಲ ಕೇಂದ್ರ’ (‘Community Library and Resource Centre’) ಪ್ರಾರಂಭಿಸಿದರು. ಅವರ ಈ ಕೇಂದ್ರದಲ್ಲಿ ಹಿಂದಿ ಮತ್ತು ಆಂಗ್ಲ ಸಾಹಿತ್ಯ, ಕಂಪ್ಯೂಟರ್, ಕಾನೂನು ಮತ್ತು ಅನೇಕ ಸರ್ಕಾರಿ ಪರೀಕ್ಷೆಗಳ ಸಿದ್ಧತೆಗೆ ಸಂಬಂಧಿಸಿದ 3000 ಕ್ಕಿಂತಲೂ ಹೆಚ್ಚು ಪುಸ್ತಕಗಳಿವೆ. ಈ ಗ್ರಂಥಾಲಯಲ್ಲಿ ಮಕ್ಕಳ ಇಷ್ಟಗಳ ಬಗ್ಗೆ ಕೂಡಾ ಗಮನ ಹರಿಸಲಾಗಿದೆ. ಇಲ್ಲಿ ಲಭ್ಯವಿರುವ ಕಾಮಿಕ್ಸ್ ಪುಸ್ತಕಗಳೇ ಆಗಲಿ ಅಥವಾ ಶಿಕ್ಷಣ ಸಂಬಂಧಿತ ಆಟಿಕೆಗಳೇ ಆಗಲಿ, ಮಕ್ಕಳು ಬಹಳ ಇಷ್ಟಪಡುತ್ತಾರೆ. ಸಣ್ಣ ಮಕ್ಕಳು ಆಟವಾಡುತ್ತಲೇ ಹೊಸ ಹೊಸ ವಿಷಯಗಳನ್ನು ಕಲಿಯಲು ಇಲ್ಲಿಗೆ ಬರುತ್ತಾರೆ. ಶಿಕ್ಷಣ Offline ಆಗಿರಲಿ ಅಥವಾ Online ಆಗಿರಲಿ, ಸುಮಾರು 40 ಸ್ವಯಂಸೇವಕರು ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ತೊಡಗಿಕೊಂಡಿರುತ್ತಾರೆ. ಪ್ರತಿದಿನ ಗ್ರಾಮದ ಸುಮಾರು 80 ವಿದ್ಯಾರ್ಥಿಗಳು ಓದುವುದಕ್ಕಾಗಿ ಈ ಗ್ರಂಥಾಲಯಕ್ಕೆ ಬರುತ್ತಾರೆ.
ಸ್ನೇಹಿತರೇ, ಝಾರ್ಖಂಡ್ ನಿವಾಸಿ ಸಂಜಯ್ ಕಶ್ಯಪ್ ಅವರು ಕೂಡಾ ಬಡ ಮಕ್ಕಳ ಕನಸಿಗೆ ಹೊಸ ರೆಕ್ಕೆಗಳನ್ನು ನೀಡುತ್ತಿದ್ದಾರೆ. ಸಂಜಯ್ ಅವರು ತಮ್ಮ ವಿದ್ಯಾರ್ಥಿ ಜೀವನಕಾಲದಲ್ಲಿ ಉತ್ತಮ ಪುಸ್ತಕಗಳ ಕೊರತೆಯನ್ನು ಎದುರಿಸಿದ್ದರು. ಪುಸ್ತಕಗಳ ಕೊರತೆಯಿಂದಾಗಿ ತಮ್ಮ ಪ್ರದೇಶದ ಮಕ್ಕಳ ಭವಿಷ್ಯ ಅಂಧಕಾರಮಯವಾಗಲು ಬಿಡುವುದಿಲ್ಲವೆಂದು ನಿರ್ಧರಿಸಿದ ಅವರು, ಈಗ ಝಾರ್ಖಂಡ್ ನಲ್ಲಿ ‘Library Man’ ಆಗಿಬಿಟ್ಟಿದ್ದಾರೆ. ಸಂಜಯ್ ಅವರು ತಮ್ಮ ವೃತ್ತಿಜೀವನ ಆರಂಭಿಸಿದಾಗ, ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ತಮ್ಮ ಮೊದಲ ಗ್ರಂಥಾಲಯವನ್ನು ಸ್ಥಾಪಿಸಿದರು. ಉದ್ಯೋಗದ ನಿಮಿತ್ತ ಅವರಿಗೆ ಯಾವುದೇ ಸ್ಥಳಕ್ಕೆ ವರ್ಗಾವಣೆಯಾದರೂ, ಅಲ್ಲಿ ಅವರು ಬಡ ಮತ್ತು ಆದಿವಾಸಿ ಮಕ್ಕಳ ಓದಿಗಾಗಿ, ಗ್ರಂಥಾಲಯ ತೆರೆಯುವ ಅಭಿಯಾನದೊಂದಿಗೆ ಸೇರಿಕೊಳ್ಳುತ್ತಿದ್ದರು. ಈ ರೀತಿ ಮಾಡುತ್ತಾ ಅವರು ಝಾರ್ಖಂಡ್ ನ ಅನೇಕ ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಗ್ರಂಥಾಲಯ ತೆರೆದಿದ್ದಾರೆ. ಗ್ರಂಥಾಲಯ ಸ್ಥಾಪಿಸುವ ಅವರ ಈ ಅಭಿಯಾನ ಇಂದು ಒಂದು ಸಾಮಾಜಿಕ ಆಂದೋಲನದ ರೂಪ ತಾಳುತ್ತಿದೆ. ಸಂಜಯ್, ಜತಿನ್ ಅವರಂತಹ ಇಂತಹ ಪ್ರಯತ್ನಗಳಿಗಾಗಿ ಅವರನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ವೈದ್ಯಕೀಯ ವಿಜ್ಞಾನ (Medical science) ಪ್ರಪಂಚವು ಸಂಶೋಧನೆ ಮತ್ತು ಆವಿಷ್ಕಾರದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಸಾಕಷ್ಟು ಪ್ರಗತಿ ಸಾಧಿಸಿದೆ ಆದರೆ, ಕೆಲವು ರೋಗಗಳು ಇಂದಿಗೂ ನಮಗೆ ಬಹು ದೊಡ್ಡ ಸವಾಲಾಗಿ ಉಳಿದಿದೆ. ಇಂತಹ ಒಂದು ರೋಗವೇ Muscular Dystrophy! ಇದು ಮುಖ್ಯವಾಗಿ ಒಂದು ಅನುವಂಶೀಯ ರೋಗವಾಗಿದ್ದು, ಯಾವುದೇ ವಯಸ್ಸಿನಲ್ಲಾದರೂ ಉಂಟಾಗಬಹುದು, ಇದರಲ್ಲಿ ಶರೀರದ ಸ್ನಾಯುಗಳು ದುರ್ಬಲವಾಗತೊಡಗುತ್ತವೆ. ರೋಗಿಗೆ ದಿನನಿತ್ಯದ ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದು ಕೂಡಾ ಕಷ್ಟವಾಗಿಬಿಡುತ್ತದೆ, ಇಂತಹ ರೋಗಿಗಳ ಚಿಕಿತ್ಸೆ ಮತ್ತು ಅವರಿಗೆ ಆರೈಕೆ ಮಾಡಲು ಸೇವಾ ಭಾವನೆ ಮುಖ್ಯವಾಗಿ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಇಂತಹ ಒಂದು ಕೇಂದ್ರವಿದೆ, ಈ ಕೇಂದ್ರವು Muscular Dystrophy ರೋಗಿಗಳಿಗೆ ಒಂದು ಭರವಸೆಯ ಕಿರಣವಾಗಿ ಹೊರಹೊಮ್ಮಿದೆ. ಈ ಕೇಂದ್ರದ ಹೆಸರು – ಮಾನವ್ ಮಂದಿರ್ ಎಂದಾಗಿದೆ, ಇದನ್ನು Indian Association Of Muscular Dystrophy ನಡೆಸುತ್ತಿದೆ. ಮಾನವ್ ಮಂದಿರ್ ಎನ್ನುವುದು ಹೆಸರಿನಂತೆಯೇ ಮಾನವ ಸೇವೆಯ ಒಂದು ಅದ್ಭುತ ಉದಾಹರಣೆಯಾಗಿದೆ. ಇಲ್ಲಿ ರೋಗಿಗಳಿಗಾಗಿ ಹೊರರೋಗಿ ವಿಭಾಗ (OPD) ಮತ್ತು ದಾಖಲಾತಿ (admission) ಸೇವೆಗಳು ಮೂರ್ನಾಲ್ಕು ವರ್ಷಗಳ ಹಿಂದೆಯೇ ಆರಂಭವಾಗಿದೆ. ಮಾನವ್ ಮಂದಿರ್ ನಲ್ಲಿ ಸುಮಾರು 50 ರೋಗಿಗಳಿಗಾಗಿ ಹಾಸಿಗೆಗಳ ಸೌಲಭ್ಯವೂ ಇದೆ. Physiotherapy, Electrotherapy, ಮತ್ತು Hydrotherapy ಮಾತ್ರವಲ್ಲದೇ, ಯೋಗ-ಪ್ರಾಣಾಯಾಮದ ನೆರವಿನಿಂದ ಕೂಡಾ ಇಲ್ಲಿ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ.
ಸ್ನೇಹಿತರೆ, ಪ್ರತಿಯೊಂದು ರೀತಿಯ ಹೈ ಟೆಕ್ ಸೌಲಭ್ಯಗಳ ಮೂಲಕ ಈ ಕೇಂದ್ರದಲ್ಲಿ ರೋಗಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವೂ ನಡೆಯುತ್ತದೆ. Muscular Dystrophy ಯೊಂದಿಗೆ ಇರುವ ಒಂದು ಸವಾಲೆಂದರೆ ಅದರ ಕುರಿತಾಗಿನ ತಿಳುವಳಿಕೆಯ ಅಭಾವ. ಆದ್ದರಿಂದಲೇ ಈ ಕೇಂದ್ರವು ಕೇವಲ ಹಿಮಾಚಲ ಪ್ರದೇಶ ಮಾತ್ರವಲ್ಲದೇ, ದೇಶಾದ್ಯಂತ ರೋಗಿಗಳಿಗಾಗಿ ಜಾಗೃತಿ ಶಿಬಿರಗಳನ್ನು ಕೂಡಾ ಆಯೋಜಿಸುತ್ತದೆ. ಅತ್ಯಂತ ಪ್ರೋತ್ಸಾಹದಾಯಕ ವಿಷಯವೆಂದರೆ, ಈ ಸಂಸ್ಥೆಯನ್ನು ಮುಖ್ಯವಾಗಿ ರೋಗಪೀಡಿತ ವ್ಯಕ್ತಿಗಳೇ ನಿರ್ವಹಿಸುತ್ತಿದ್ದಾರೆ, ಸಾಮಾಜಿಕ ಕಾರ್ಯಕರ್ತೆ ಊರ್ಮಿಳಾ ಬಾಲ್ದೀ ಅವರು, Indian Association Of Muscular Dystrophy ಸಂಘಟನೆಯ ಅಧ್ಯಕ್ಷರಾದ ಸಂಜನಾ ಗೋಯಲ್ ಮತ್ತು ಈ Association ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಸಿರುವ ಶ್ರೀ ವಿಪುಲ್ ಗೋಯಲ್ ಅವರುಗಳು ಈ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಾನವ್ ಮಂದಿರವನ್ನು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಕೂಡಾ ನಡೆಯುತ್ತಿವೆ. ಇದರಿಂದಾಗಿ ಇಲ್ಲಿ ರೋಗಿಗಳಿಗೆ ಮತ್ತಷ್ಟು ಉತ್ತಮವಾದ ಚಿಕಿತ್ಸೆ ದೊರೆಯಬಹುದಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ. ಹಾಗೆಯೇ Muscular Dystrophy ಎದುರಿಸುತ್ತಿರುವ ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತಿನಲ್ಲಿ ನಾವು ದೇಶವಾಸಿಗಳ ಕುರಿತು ಯಾವ ಸೃಜನಾತ್ಮಕ ಮತ್ತು ಸಾಮಾಜಿಕ ಕೆಲಸಕಾರ್ಯಗಳ ಬಗ್ಗೆ ಮಾತನಾಡಿದೆವೋ, ಅವುಗಳೆಲ್ಲವೂ ದೇಶದ ಶಕ್ತಿ ಮತ್ತು ಉತ್ಸಾಹದ ಉದಾಹರಣೆಗಳಾಗಿವೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ, ಪ್ರತಿಯೊಂದು ಹಂತದಲ್ಲಿ, ದೇಶಕ್ಕಾಗಿ ಏನಾದರೊಂದು ವಿಭಿನ್ನರೀತಿಯ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂದಿನ ಮಾತುಕತೆಯಲ್ಲಿ, ಜಿ-20 ಶೃಂಗಸಭೆಯಂತಹ ಉದ್ದೇಶದಲ್ಲಿ ನಮ್ಮ ಓರ್ವ ನೇಕಾರ ಸೋದರರೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿತು, ಅದನ್ನು ನಿಭಾಯಿಸಲು ಮುಂದೆ ಬಂದಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ. ಇದೇ ರೀತಿ, ಪರಿಸರಕ್ಕಾಗಿ ಪ್ರಯತ್ನ ಪಡುತ್ತಿರುವುದು ಕೆಲವರಾದರೆ, ನೀರಿಗಾಗಿ ಮತ್ತೆ ಕೆಲವರು ಕೆಲಸ ನಿರ್ವಹಿಸುತ್ತಿದ್ದಾರೆ, ಎಷ್ಟೊಂದು ಜನರು ಶಿಕ್ಷಣ, ಚಿಕಿತ್ಸೆ, ಮತ್ತು ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು, ಸಂಸ್ಕೃತಿ-ಪರಂಪರೆಯವರೆಗೂ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಇಂದು ನಮ್ಮ ಪ್ರತಿಯೊಬ್ಬ ನಾಗರಿಕನೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುತ್ತಿರುವುದೇ ಇದಕ್ಕೆ ಕಾರಣ. ಇಂತಹ ಕರ್ತವ್ಯ ನಿರ್ವಹಣೆಯ ಭಾವನೆ ದೇಶದ ಯಾವುದೇ ನಾಗರಿಕನ ಮನಸ್ಸಿನಲ್ಲಿ ಮೂಡಿದಾಗ, ಆ ದೇಶದ ಸುವರ್ಣ ಭವಿಷ್ಯ ತಾನಾಗಿಯೇ ನಿರ್ಧಾರವಾಗಿಬಿಡುತ್ತದೆ ಮತ್ತು ದೇಶದ ಸುವರ್ಣ ಭವಿಷ್ಯದಲ್ಲಿಯೇ ನಮ್ಮೆಲ್ಲರ ಸುವರ್ಣ ಭವಿಷ್ಯವೂ ಅಡಗಿದೆ.
ನಾನು, ಮತ್ತೊಮ್ಮೆ ದೇಶವಾಸಿಗಳಿಗೆ ಅವರ ಪ್ರಯತ್ನಗಳಿಗಾಗಿ ನಮಿಸುತ್ತೇನೆ. ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾಗೋಣ ಮತ್ತು ಇಂತಹ ಅನೇಕ ಉತ್ಸಾಹ ಹೆಚ್ಚಿಸುವ ವಿಷಯಗಳ ಬಗ್ಗೆ ಖಂಡಿತವಾಗಿಯೂ ಮಾತನಾಡೋಣ. ನಿಮ್ಮ ಸಲಹೆ ಮತ್ತು ಚಿಂತನೆಗಳನ್ನು ನನಗೆ ಖಂಡಿತವಾಗಿಯೂ ಕಳುಹಿಸುತ್ತಿರಿ. ನಿಮಗೆಲ್ಲರಿಗೂ ಅನೇಕಾನೇಕ ಧನ್ಯವಾದಗಳು.
ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ಇಂದು ದೇಶದ ಹಲವೆಡೆ ಸೂರ್ಯನ ಆರಾಧನೆಯ ಮಹಾ ಹಬ್ಬವಾದ 'ಛಠ್' ಆಚರಿಸಲಾಗುತ್ತಿದೆ. 'ಛಠ್' ಹಬ್ಬದ ಪ್ರಯುಕ್ತ ಲಕ್ಷಾಂತರ ಭಕ್ತರು ತಮ್ಮ ಗ್ರಾಮಗಳು, ತಮ್ಮತಮ್ಮ ಮನೆಗಳು, ತಮ್ಮ ಕುಟುಂಬಗಳಿದ್ದಲ್ಲಿಗೆ ತಲುಪಿದ್ದಾರೆ. 'ಛಠ್' ಮಹಾತಾಯಿ ಎಲ್ಲರಿಗೂ ಸಮೃದ್ಧಿ ಮತ್ತು ಕಲ್ಯಾಣವಾಗಲಿ ಎಂದು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಸ್ನೇಹಿತರೇ, ನಮ್ಮ ಸಂಸ್ಕೃತಿ, ನಂಬಿಕೆ, ಪ್ರಕೃತಿಯೊಂದಿಗೆ ಎಷ್ಟು ಆಳವಾದ ಸಂಬಂಧವನ್ನು ಹೊಂದಿದೆ ಎಂಬುದಕ್ಕೆ ಸೂರ್ಯ ಆರಾಧನೆಯ ಸಂಪ್ರದಾಯ ಸಾಕ್ಷಿಯಾಗಿದೆ. ಈ ಪೂಜೆಯ ಮೂಲಕ ನಮ್ಮ ಜೀವನದಲ್ಲಿ ಸೂರ್ಯನ ಬೆಳಕಿನ ಮಹತ್ವವನ್ನು ವಿವರಿಸಲಾಗಿದೆ. ಇದರೊಂದಿಗೆ ಏರಿಳಿತಗಳು ಬದುಕಿನ ಅವಿಭಾಜ್ಯ ಅಂಗ ಎಂಬ ಸಂದೇಶವನ್ನೂ ನೀಡಲಾಗಿದೆ. ಆದ್ದರಿಂದಲೇ, ಎಲ್ಲ ಸಂದರ್ಭದಲ್ಲೂ ನಾವು ಒಂದೇ ಮನೋಭಾವವನ್ನು ಹೊಂದಿರಬೇಕು. 'ಛಠ್' ತಾಯಿಯ ಪೂಜೆಯಲ್ಲಿ ವಿವಿಧ ಹಣ್ಣುಗಳು ಮತ್ತು ಠೆಕುವಾವನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ಇದರ ಉಪವಾಸ ವ್ರತವೂ ಯಾವುದೇ ಕಠಿಣ ಸಾಧನೆಗಿಂತ ಕಡಿಮೆಯೇನಲ್ಲ. ಛಠ್ ಪೂಜೆಯ ಮತ್ತೊಂದು ವಿಶೇಷವೆಂದರೆ ಪೂಜೆಗೆ ಬಳಸುವ ವಸ್ತುಗಳನ್ನು ಸಮಾಜದ ವಿಭಿನ್ನ ಜನರು ಒಟ್ಟಾಗಿ ತಯಾರಿಸುತ್ತಾರೆ. ಇದರಲ್ಲಿ ಬಿದಿರಿನಿಂದ ಮಾಡಿದ ಬುಟ್ಟಿ ಅಥವಾ ಸುಪಲಿ ಎಂಬ ಬಳ್ಳಿಯನ್ನು ಬಳಸುತ್ತಾರೆ. ಮಣ್ಣಿನ ದೀಪಗಳಿಗೆ ತನ್ನದೇ ಆದ ಮಹತ್ವವೂ ಇದೆ. ಈ ಮೂಲಕ ಕಡಲೆ ಬೆಳೆಯುವ ರೈತರು ಹಾಗೂ ಬತ್ತಾಸು ತಯಾರಿಸುವ ಸಣ್ಣ ಉದ್ದಿಮೆದಾರರ ಮಹತ್ವ ಸಮಾಜದಲ್ಲಿ ನೆಲೆಯೂರಿದೆ. ಅವರ ಸಹಕಾರವಿಲ್ಲದೇ ಛಠ್ ಪೂಜೆ ಪೂರ್ಣಗೊಳ್ಳುವುದಿಲ್ಲ. ಛಠ್ ಹಬ್ಬವು ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈ ಹಬ್ಬದ ಆಗಮನದ ಸಂದರ್ಭದಲ್ಲಿ, ರಸ್ತೆಗಳು, ನದಿಗಳು, ಸ್ನಾನಘಟ್ಟಗಳು, ವಿವಿಧ ನೀರಿನ ಮೂಲಗಳು, ಎಲ್ಲವನ್ನೂ ಸಮುದಾಯ ಮಟ್ಟದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಛಠ್ ಹಬ್ಬವು 'ಏಕ್ ಭಾರತ್- ಶ್ರೇಷ್ಠ ಭಾರತ'ದ ಉದಾಹರಣೆಯಾಗಿದೆ. ಇಂದು ಬಿಹಾರ ಮತ್ತು ಪೂರ್ವಾಂಚಲದ ಜನರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಛಠ್ ಅನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಮತ್ತು ಗುಜರಾತ್ ನ ಹಲವು ಭಾಗಗಳಲ್ಲಿ ಛಠ್ ಪೂಜೆಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಹಿಂದೆ ಗುಜರಾತಿನಲ್ಲಿ ಛಠ್ ಪೂಜೆ ಅಷ್ಟೊಂದು ಪ್ರಚಲಿತವಾಗಿರಲಿಲ್ಲ ಎಂಬುದು ನನಗೆ ನೆನಪಿದೆ. ಆದರೆ ಕಾಲಾನಂತರದಲ್ಲಿ, ಛಠ್ ಪೂಜೆಯ ಚರಣೆಗಳು ಸಂಪೂರ್ಣ ಗುಜರಾತ್ ನಲ್ಲಿ ಕಾಣಲಾರಂಭಿಸಿವೆ. ನನಗೂ ಇದನ್ನು ನೋಡಿ ತುಂಬಾ ಖುಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಛಠ್ ಪೂಜೆಯ ಸುಂದರವಾದ ಚಿತ್ರಗಳು ವಿದೇಶದಿಂದ ಹರಿದು ಬರುತ್ತಿವೆ ಎಂಬುದನ್ನು ನಾವು ನೋಡುತ್ತೇವೆ. ಅಂದರೆ, ಭಾರತದ ಶ್ರೀಮಂತ ಪರಂಪರೆ, ನಮ್ಮ ನಂಬಿಕೆ, ಪ್ರಪಂಚದ ಮೂಲೆ ಮೂಲೆಯಲ್ಲಿ ತನ್ನ ಗುರುತನ್ನು ಸ್ಥಾಪಿಸುತ್ತಿದೆ. ಈ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ಶುಭಾಶಯಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ಪವಿತ್ರ ಛಠ್ ಪೂಜೆಯ ಬಗ್ಗೆ ಮಾತನಾಡಿದೆವು, ಭಗವಾನ್ ಸೂರ್ಯನ ಆರಾಧನೆ ಬಗ್ಗೆ ಮಾತನಾಡಿದೆವು. ಹಾಗಾದರೆ ಇಂದು ಸೂರ್ಯನನ್ನು ಪೂಜಿಸುವ ಜೊತೆಗೆ ಅವನು ನೀಡಿದ ವರದ ಬಗ್ಗೆಯೂ ಚರ್ಚಿಸೋಣ. 'ಸೌರಶಕ್ತಿ' ಸೂರ್ಯದೇವನ ವರದಾನ. ಸೌರಶಕ್ತಿ ಇಡೀ ಜಗತ್ತು ತನ್ನ ಭವಿಷ್ಯವನ್ನು ಅದರಲ್ಲಿ ಕಾಣುವಂತಹ ಒಂದು ವಿಷಯವಾಗಿದೆ ಮತ್ತು ಭಾರತಕ್ಕಾಗಿ, ಸೂರ್ಯ ದೇವ ಶತಮಾನಗಳಿಂದ ಕೇವಲ ಪೂಜಿತನಲ್ಲ, ಜೀವನ ವಿಧಾನದ ಕೇಂದ್ರವಾಗಿ ಮಿಳಿತವಾಗಿದ್ದಾನೆ. ಭಾರತವು ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿದ್ದೇವೆ. ಸೌರಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ.
ತಮಿಳುನಾಡಿನಲ್ಲಿ ಕಾಂಚೀಪುರಂನಲ್ಲಿ ಥಿರು ಕೆ. ಎಳಿಲನ್ ಎಂಬ ಕೃಷಿಕರೊಬ್ಬರಿದ್ದಾರೆ. ಇವರು ‘ಪ್ರಧಾನ ಮಂತ್ರಿ ಕುಸುಮ್ ಯೋಜನೆ’ ಯ ಲಾಭ ಪಡೆದು ತಮ್ಮ ಜಮೀನಿನಲ್ಲಿ ಹತ್ತು ಅಶ್ವಶಕ್ತಿಯ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ಜಮೀನಿಗೆ ವಿದ್ಯುತ್ತಿಗಾಗಿ ಏನನ್ನೂ ಖರ್ಚು ಮಾಡಬೇಕಾಗಿಲ್ಲ. ಈಗ ಅವರು ಹೊಲದಲ್ಲಿ ನೀರಾವರಿಗಾಗಿ ಸರ್ಕಾರದ ವಿದ್ಯುತ್ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ. ಅದೇ ರೀತಿ ರಾಜಸ್ಥಾನದ ಭರತ್ಪುರದಲ್ಲಿ 'ಪಿ.ಎಂ. ಕುಸುಮ್ ಯೋಜನೆ'ಯ ಇನ್ನೊಬ್ಬ ಫಲಾನುಭವಿ ರೈತರಿದ್ದಾರೆ - ಕಮಲ್ ಮೀನಾ. ಕಮಲ್ ಅವರು ತಮ್ಮ ಹೊಲದಲ್ಲಿ ಸೋಲಾರ್ ಪಂಪ್ ಅನ್ನು ಸ್ಥಾಪಿಸಿದರು, ಇದರಿಂದಾಗಿ ಅವರ ವೆಚ್ಚ ಕಡಿಮೆಯಾಗಿದೆ. ವೆಚ್ಚ ಕಡಿಮೆಯಾದುದರಿಂದ ಆದಾಯವೂ ಹೆಚ್ಚಿತು. ಕಮಲಜಿ ಸೋಲಾರ್ ವಿದ್ಯುತ್ ಅನ್ನು ಇತರ ಅನೇಕ ಸಣ್ಣ ಕೈಗಾರಿಕೆಗಳಿಗೆ ಅಳವಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಪ್ರದೇಶದಲ್ಲಿ ಮರದ ಕೆಲಸ ಇದೆ, ಹಸುವಿನ ಸಗಣಿಯಿಂದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ, ಇವೆಲ್ಲವುಗಳಿಗೆ ಸೋಲಾರ್ ವಿದ್ಯುತ್ ಬಳಸಲಾಗುತ್ತಿದೆ, ಅವರು 10-12 ಜನರಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ, ಅಂದರೆ ಕಮಲ್ ಕುಸುಮ್ ಯೋಜನೆಯಿಂದ ಆರಂಭಿಸಿದ ಉಪಕ್ರಮದ ಪರಿಮಳವು ಬಹಳ ಜನರಿಗೆ ತಲುಪಲಾರಂಭಿಸಿದೆ.
ಸ್ನೇಹಿತರೇ, ನೀವು ತಿಂಗಳಪೂರ್ತಿ ವಿದ್ಯುತ್ ಅನ್ನು ಬಳಸಬಹುದು ಮತ್ತು ನಿಮ್ಮ ವಿದ್ಯುತ್ ಬಿಲ್ ಪಡೆಯುವ ಬದಲು ನಿಮಗೆ ವಿದ್ಯುತ್ ಹಣ ಸಿಗುವುದು ಎಂದು ನೀವು ಊಹಿಸಬಹುದೇ? ಸೌರಶಕ್ತಿ ಇದನ್ನು ಕೂಡ ಮಾಡಿ ತೋರಿಸಿದೆ. ಕೆಲವು ದಿನಗಳ ಹಿಂದೆ, ನೀವು ದೇಶದ ಮೊದಲ ಸೂರ್ಯ ಗ್ರಾಮ - ಗುಜರಾತ್ನ ಮೊಢೆರಾ ಬಗ್ಗೆ ಸಾಕಷ್ಟು ಕೇಳಿರಬಹುದು. ಮೊಢೆರಾ ಸೂರ್ಯ ಗ್ರಾಮದ ಬಹುತೇಕ ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಈಗ ಅಲ್ಲಿನ ಹಲವು ಮನೆಗಳಲ್ಲಿ ತಿಂಗಳಾಂತ್ಯದಲ್ಲಿ ವಿದ್ಯುತ್ ಬಿಲ್ ಬರುತ್ತಿಲ್ಲ ಬದಲಾಗಿ ವಿದ್ಯುತ್ ನಿಂದ ಸಂಪಾದನೆಯ ಚೆಕ್ ಬರುತ್ತಿದೆ. ಹೀಗಾಗುತ್ತಿರುವುದನ್ನು ಕಂಡು ಈಗ ದೇಶದ ಹಲವು ಗ್ರಾಮಗಳ ಜನರು ತಮ್ಮ ಗ್ರಾಮವನ್ನೂ ಸೂರ್ಯಗ್ರಾಮವನ್ನಾಗಿ ಪರಿವರ್ತಿಸಬೇಕು ಎಂದು ಪತ್ರ ಬರೆಯುತ್ತಿದ್ದಾರೆ, ಅಂದರೆ ಭಾರತದಲ್ಲಿ ಸೂರ್ಯಗ್ರಾಮಗಳ ನಿರ್ಮಾಣ ದೊಡ್ಡ ಜನಾಂದೋಲನವಾಗುವ ದಿನ ದೂರವಿಲ್ಲ. ಮತ್ತು ಇದರ ಆರಂಭವನ್ನು ಮೊಢೆರಾ ಗ್ರಾಮದ ಜನತೆ ಈಗಾಗಲೇ ಮಾಡಿದ್ದಾರೆ.
ಬನ್ನಿ 'ಮನದ ಮಾತಿನ' ಕೇಳುಗರಿಗೆ ಮೊಢೆರಾದ ಜನತೆಯನ್ನು ಪರಿಚಯಿಸೋಣ. ಶ್ರೀ ವಿಪಿನ್ಭಾಯ್ ಪಟೇಲ್ ಅವರು ಪ್ರಸ್ತುತ ಫೋನ್ ಲೈನ್ನಲ್ಲಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ.
ಪ್ರಧಾನ ಮಂತ್ರಿ - ವಿಪಿನ್ ಭಾಯ್ ನಮಸ್ತೆ! ನೋಡಿ ಈಗ ಮೊಢೆರಾ ಇಡೀ ದೇಶಕ್ಕೆ ಮಾದರಿಯಾಗಿ ಚರ್ಚೆಯ ವಿಷಯವಾಗಿದೆ. ಆದರೆ ನಿಮ್ಮ ಸಂಬಂಧಿಕರು ಮತ್ತು ಪರಿಚಯಸ್ಥರು ನಿಮಗೆ ಈ ಬಗ್ಗೆ ಕೇಳಿದಾಗ ನೀವು ಏನೆಲ್ಲ ವಿವರಿಸುತ್ತೀರಿ, ಏನು ಪ್ರಯೋಜನವಾಗಿದೆ?
ವಿಪಿನ್ ಜೀ - ಸರ್, ಜನರು ನಮ್ಮನ್ನು ಕೇಳಿದಾಗ ನಾವು ಹೀಗೆ ಹೇಳುತ್ತೇವೆ, ನಮಗೆ ಈಗ ವಿದ್ಯುತ್ ಬಿಲ್ ಸೊನ್ನೆಯಾಗಿದೆ. ಕೆಲವೊಮ್ಮೆ 70 ರೂಪಾಯಿಯಷ್ಟು ಬಿಲ್ ಬರುತ್ತದೆ ಆದರೆ ಈ ನಮ್ಮ ಇಡೀ ಗ್ರಾಮದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಹೇಳುತ್ತೇವೆ.
ಪ್ರಧಾನಿ - ಅಂದರೆ ಒಂದು ರೀತಿಯಲ್ಲಿ ಹಿಂದೆ ವಿದ್ಯುತ್ ಬಿಲ್ ಬಗ್ಗೆ ಇದ್ದ ಚಿಂತೆ ದೂರವಾಗಿದೆ.
ವಿಪಿನ್ ಜಿ - ಹೌದು ಸಾರ್, ನಿಮ್ಮ ಮಾತು ಸರಿಯಾಗಿದೆ ಸರ್. ಇದೀಗ ಇಡೀ ಗ್ರಾಮದಲ್ಲಿ ಯಾವುದೇ ಚಿಂತೆಯಿಲ್ಲ. ತಾವು ಮಾಡಿದ ಕೆಲಸ ತುಂಬಾ ಚೆನ್ನಾಗಿದೆ ಎಂದು ಎಲ್ಲರಿಗೂ ಅನಿಸುತ್ತಿದೆ. ಅವರು ಖುಷಿಯಾಗಿದ್ದಾರೆ ಸರ್ ಎಲ್ಲರೂ ಸಂಭ್ರಮ ಪಡುತ್ತಿದ್ದಾರೆ
ಪ್ರಧಾನಿ - ಈಗ ಅವರೇ ತಮ್ಮ ಮನೆಯಲ್ಲಿ ವಿದ್ಯುತ್ ಕಾರ್ಖಾನೆಯ ಮಾಲೀಕರಾಗಿದ್ದಾರೆ. ತಮ್ಮ ಸ್ವಂತ ಮನೆಯ ಛಾವಣಿಯ ಮೇಲೆ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ವಿಪಿನ್ ಜಿ - ಹೌದು ಸರ್, ಸರಿಯಾಗಿದೆ ಸರ್.
ಪ್ರಧಾನ ಮಂತ್ರಿ - ಹಾಗಾದರೆ ಈ ಬದಲಾವಣೆಯು ಹಳ್ಳಿಯ ಜನರ ಮೇಲೆ ಏನು ಪರಿಣಾಮ ಬೀರಿದೆ?
ವಿಪಿನ್ ಜೀ - ಸರ್, ಇಡೀ ಗ್ರಾಮದ ಜನ, ಕೃಷಿ ಮಾಡುತ್ತಿದ್ದಾರೆ, ನಮಗೆ ಇದ್ದ ವಿದ್ಯುತ್ ಗೊಡವೆಯಿಂದ ಮುಕ್ತಿ ಲಭಿಸಿದೆ, ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಹಾಗಾಗಿ ನಿಶ್ಚಿಂತರಾಗಿದ್ದೇವೆ ಸರ್.
ಪ್ರಧಾನಿ - ಅಂದರೆ, ವಿದ್ಯುತ್ ಬಿಲ್ ಕೂಡ ಇಲ್ಲ ಮತ್ತು ಸೌಲಭ್ಯ ಹೆಚ್ಚಿದೆ.
ವಿಪಿನ್ ಜೀ - ಕಿರಿ ಕಿರಿಯೇ ತಪ್ಪಿದಂತಾಗಿದೆ ಸರ್ ನೀವು ಇಲ್ಲಿಗೆ ಬಂದು ಇಲ್ಲಿ 3D ಶೋ ಉದ್ಘಾಟನೆ ಮಾಡಿದ ಮೇಲಂತೂ ಮೊಢೆರಾ ಗ್ರಾಮದ ಕಿರೀಟಕ್ಕೆ ಮತ್ತಷ್ಟು ಗರಿ ಸೇರಿಸಿದಂತಾಗಿದೆ ಸರ್. ಮತ್ತು ಆ ಕಾರ್ಯದರ್ಶಿಗಳು ಬಂದಿದ್ದರಲ್ಲವೇ ಸರ್...
ಪ್ರಧಾನಿ - ಹೌದು ಹೌದು ...
ವಿಪಿನ್ ಜೀ - ಅದರಿಂದ ಗ್ರಾಮ ಪ್ರಸಿದ್ಧವಾಗಿ ಹೋಯಿತು ಸರ್.
ಪ್ರಧಾನಮಂತ್ರಿ - ಹೌದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅವರ ಸ್ವಆಶಯವಾಗಿತ್ತು. ತಾವು ಇಷ್ಟು ದೊಡ್ಡ ಕೆಲಸ ಮಾಡಿದ್ದೀರಿ ಎಂದ ಮೇಲೆ ನಾನು ಸ್ವತಃ ಅಲ್ಲಿಗೆ ಹೋಗಿ ನೋಡಬೇಕು ಎಂದು ತುಂಬಾ ಆಗ್ರಹಿಸಿದರು. ಸರಿ ವಿಪಿನ್ ಭಾಯಿ ತಮಗೆ ಮತ್ತು ತಮ್ಮ ಗ್ರಾಮದ ಎಲ್ಲಾ ಜನರಿಗೆ ನಾನು ಶುಭ ಹಾರೈಸುತ್ತೇನೆ ಮತ್ತು ಜಗತ್ತು ನಿಮ್ಮಿಂದ ಸ್ಫೂರ್ತಿ ಪಡೆಯಲಿ ಮತ್ತು ಈ ಸೌರಶಕ್ತಿ ಅಭಿಯಾನವು ಮನೆ ಮನೆಗೆ ತಲುಪಲಿ ಎಂದು ಆಶಿಸುತ್ತೇನೆ.
ವಿಪಿನ್ ಜಿ - ಸರಿ ಸರ್. ಸೋಲಾರ್ ಅಳವಡಿಸಿ, ನಿಮ್ಮ ಹಣದಲ್ಲಿಯೇ ಅಳವಡಿಸಿಕೊಳ್ಳಿ, ಇದರಿಂದ ಸಾಕಷ್ಟು ಲಾಭವಿದೆ ಎಂದು ನಾನು ಎಲ್ಲರಿಗೂ ಹೇಳುತ್ತೇನೆ ಸರ್.
ಪ್ರಧಾನಿ - ಹೌದು, ದಯವಿಟ್ಟು ಜನರಿಗೆ ವಿವರಿಸಿ. ತಮಗೆ ಅನಂತ ಶುಭಹಾರೈಕೆಗಳು. ಧನ್ಯವಾದಗಳು ಸಹೋದರ
ವಿಪಿನ್ ಜಿ - ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿ ನನ್ನ ಜೀವನ ಧನ್ಯವಾಯಿತು.
ವಿಪಿನ್ ಭಾಯ್ ಅವರಿಗೆ ಅನಂತ ಧನ್ಯವಾದಗಳು
ನಾವೀಗ ಮೊಢೆರಾ ಗ್ರಾಮದ ಸಹೋದರಿ ವರ್ಷಾ ಬೇನ್ ಅವರೊಂದಿಗೆ ಮಾತನಾಡೋಣ.
ವರ್ಷಾಬೆನ್ - ಹಲೋ, ನಮಸ್ಕಾರ ಸರ್!
ಪ್ರಧಾನ ಮಂತ್ರಿ - ನಮಸ್ತೆ-ನಮಸ್ತೇ ವರ್ಷಾಬೆನ್ | ನೀವು ಹೇಗಿದ್ದೀರಿ
ವರ್ಷಾಬೆನ್ - ನಾನು ಚೆನ್ನಾಗಿದ್ದೇನೆ ಸರ್. ನೀವು ಹೇಗಿದ್ದೀರಿ ?
ಪ್ರಧಾನಿ:- ನಾನು ತುಂಬಾ ಚೆನ್ನಾಗಿದ್ದೇನೆ.
ವರ್ಷಾಬೆನ್ - ನಿಮ್ಮೊಂದಿಗೆ ಮಾತನಾಡಿ ಧನ್ಯಳಾದೆ ಸರ್.
ಪ್ರಧಾನ ಮಂತ್ರಿ - ಸರಿ ವರ್ಷಾಬೆನ್.
ವರ್ಷಾಬೆನ್ - ಹಾಂ ಸರ್
ಪ್ರಧಾನ ಮಂತ್ರಿ- ನೀವು ಮೊಡೆರಾದಲ್ಲಿ, ಮಿಲಿಟರಿ ಕುಟುಂಬದವರು ಅಲ್ಲವೆ.
ವರ್ಷಾಬೆನ್ - ನಾನು ಮಿಲಿಟರಿ ಕುಟುಂಬದವಳು. ಮಾಜಿ ಸೈನಿಕನ ಪತ್ನಿ ಮಾತನಾಡುತ್ತಿದ್ದೇನೆ ಸರ್.
ಪ್ರಧಾನ ಮಂತ್ರಿ - ಹಾಗಾದರೆ ಭಾರತದಲ್ಲಿ ನಿಮಗೆ ಎಲ್ಲೆಲ್ಲಿ ಹೋಗಲು ಅವಕಾಶ ಲಭಿಸಿತ್ತು?
ವರ್ಷಾಬೆನ್ - ರಾಜಸ್ಥಾನದಲ್ಲಿ, ಗಾಂಧಿ ನಗರದಲ್ಲಿ, ಕಚರಾ ಕಾಂಝೋರ್ ಜಮ್ಮು, ಅಲ್ಲೆಲ್ಲಿ ಅವರೊಂದಿಗೆ ಇರುವ ಅವಕಾಶ ಸಿಕ್ಕಿತ್ತು. ಅಲ್ಲಿ ಸಾಕಷ್ಟು ಸೌಲಭ್ಯ ದೊರೆಯುತ್ತಿತ್ತು ಸರ್.
ಪ್ರಧಾನ ಮಂತ್ರಿ - ಹೌದು. ಸೇನೆಯಲ್ಲಿ ತಾವು ಇದ್ದುದರಿಂದ ಹಿಂದಿಯನ್ನೂ ಚೆನ್ನಾಗಿ ಮಾತನಾಡುತ್ತೀರಿ.
ವರ್ಷಾಬೆನ್ - ಹೌದು ಸರ್. ನಾನು ಕಲಿತಿದ್ದೇನೆ ಸರ್..
ಪ್ರಧಾನ ಮಂತ್ರಿ - ಮೊಢೆರಾದಲ್ಲಿ ದೊಡ್ಡ ಬದಲಾವಣೆಯನ್ನು ತಂದಂತಹ ಈ ಸೋಲಾರ್ ರೂಫ್ಟಾಪ್ ಪ್ಲಾಂಟ್ ಅನ್ನು ನೀವು ಅಳವಡಿಸಿಕೊಂಡಿದ್ದೀರಿ? ಜನರು ಆರಂಭದಲ್ಲಿ ಏನು ಹೇಳುತ್ತಿದ್ದರೋ ಅದನ್ನು ಕೇಳಿ ನಿಮಗೆ, ಇದರ ಅರ್ಥವೇನು? ಏನು ಮಾಡುತ್ತಿದ್ದಾರೆ ? ಏನಾಗುವುದು ? ಈ ರೀತಿ ಎಂದಾದರೂ ವಿದ್ಯುತ್ ಲಭಿಸುತ್ತದೆಯೇ? ಇವೆಲ್ಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿರಬಹುದು. ಈಗ ನಿಮ್ಮ ಅನುಭವವೇನು? ಇದರಿಂದ ಏನು ಪ್ರಯೋಜನವಾಗುತ್ತಿದೆ?
ವರ್ಷಾಬೆನ್ - ತುಂಬಾ ಲಾಭವಿದೆ, ಸಾಕಷ್ಟು ಲಾಭ ದೊರೆಯುತ್ತಿದೆ ಸರ್. ಸರ್, ನಿಮ್ಮಿಂದಾಗಿ ನಮ್ಮ ಗ್ರಾಮದಲ್ಲಿ ಪ್ರತಿದಿನ ದೀಪಾವಳಿ ಆಚರಿಸುತ್ತಿದ್ದೇವೆ. ನಮಗೆ 24 ಗಂಟೆ ವಿದ್ಯುತ್ ಸಿಗುತ್ತಿದೆ, ಬಿಲ್ ಬರುವುದೇ ಇಲ್ಲ. ನಮ್ಮ ಮನೆಯಲ್ಲಿ ಎಲ್ಲಾ ಎಲೆಕ್ಟ್ರಿಕ್ ಸಾಮಾನುಗಳನ್ನು ತಂದಿದ್ದೇವೆ ಸರ್, ನಾವು ಎಲ್ಲವನ್ನೂ ಬಳಸುತ್ತಿದ್ದೇವೆ –ನಮಗೆ ವಿದ್ಯುತ್ ಬಿಲ್ ಬರದಿದ್ದರೆ ಮುಕ್ತ ಮನಸ್ಸಿನಿಂದ ಎಲ್ಲವನ್ನೂ ಬಳಸಬಹುದು ಅಲ್ಲವೇ ಸರ್!
ಪ್ರಧಾನಮಂತ್ರಿ - ನೀವು ಹೇಳಿದ ಮಾತು ಸರಿಯಾಗಿದೆ, ನೀವೂ ಕೂಡ ವಿದ್ಯುಚ್ಛಕ್ತಿಯ ಗರಿಷ್ಠ ಬಳಕೆ ಮಾಡಲು ಕೂಡಾ ಮನಸ್ಸು ಮಾಡಿದ್ದೀರಿ.
ವರ್ಷಾಬೆನ್ - ಹೌದು ಸರ್, ಹೌದು| ಸದ್ಯ ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಮುಕ್ತ ಮನಸ್ಸಿನಿಂದ ವಾಷಿಂಗ್ ಮೆಷಿನ್, ಎಸಿ, ಎಲ್ಲ ಬಳಸಬಹುದು ಸರ್.
ಪ್ರಧಾನ ಮಂತ್ರಿ - ಮತ್ತು ಹಳ್ಳಿಯ ಉಳಿದ ಜನರು ಸಹ ಇದರಿಂದ ಸಂತೋಷವಾಗಿದ್ದಾರೆಯೇ?
ವರ್ಷಾಬೆನ್ - ತುಂಬಾ ಸಂತೋಷವಾಗಿದ್ದಾರೆ ಸರ್.
ಪ್ರಧಾನಿ - ಅಲ್ಲಿ ಸೂರ್ಯ ದೇವಾಲಯದಲ್ಲಿ ಕೆಲಸ ಮಾಡುವವರು ನಿಮ್ಮ ಪತಿಯೇ? ಅಲ್ಲಿ ನಡೆದ ಲೈಟ್ ಶೋ ಎಷ್ಟು ದೊಡ್ಡ ಕಾರ್ಯಕ್ರಮವಾಗಿತ್ತೆಂದರೆ, ಈಗ ಜಗತ್ತಿನೆಲ್ಲೆಡೆಯಿಂದ ಅತಿಥಿಗಳು ಅಲ್ಲಿಗೆ ಬರುತ್ತಿದ್ದಾರೆ.
ವರ್ಷಾ ಬೆನ್ - ಪ್ರಪಂಚದಾದ್ಯಂತದ ವಿದೇಶಿಯರು ಬರಬಹುದು ಆದರೆ ನೀವು ನಮ್ಮ ಗ್ರಾಮವನ್ನು ವಿಶ್ವದಲ್ಲೇ ಪ್ರಸಿದ್ಧಿಗೊಳಿಸಿದ್ದೀರಿ.
ಪ್ರಧಾನ ಮಂತ್ರಿ - ಹಾಗಾದರೆ ಅಷ್ಟೊಂದು ಅತಿಥಿಗಳು ದೇವಸ್ಥಾನಕ್ಕೆ ನೋಡಲು ಬರುತ್ತಿದ್ದಾರೆ ಅಂದ ಮೇಲೆ ನಿಮ್ಮ ಪತಿಗೆ ಈಗ ಕೆಲಸ ಹೆಚ್ಚಿರಬೇಕು
ವರ್ಷಾ ಬೆನ್ - ಓಹ್! ಎಷ್ಟೇ ಕೆಲಸ ಹೆಚ್ಚಾದರೂ ಪರವಾಗಿಲ್ಲ ಸರ್, ನನ್ನ ಪತಿಗೆ ಇದರಿಂದ ಯಾವುದೇ ತೊಂದರೆ ಇಲ್ಲ, ನೀವು ನಮ್ಮ ಹಳ್ಳಿಯನ್ನು ಅಭಿವೃದ್ಧಿಪಡಿಸುತ್ತಾ ಸಾಗಿರಿ, ಅಷ್ಟು ಸಾಕು.
ಪ್ರಧಾನಿ - ಈಗ ನಾವೆಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿಯನ್ನು ಮಾಡಬೇಕಿದೆ.
ವರ್ಷಾ ಬೆನ್ - ಹೌದು, ಹೌದು. ಸರ್ ನಿಮ್ಮ ಜೊತೆ ನಾವಿದ್ದೇವೆ
ಪ್ರಧಾನಮಂತ್ರಿ - ಗ್ರಾಮವು ಈ ಯೋಜನೆಯನ್ನು ಒಪ್ಪಿಕೊಂಡಿತು ಮತ್ತು ನಾವು ನಮ್ಮ ಮನೆಯಲ್ಲಿ ವಿದ್ಯುತ್ ತಯಾರಿಸಬಹುದು ಎಂದು ಗ್ರಾಮಸ್ಥರಿಗೆ ಮನವರಿಕೆಯಾಯಿತು ಹಾಗಾಗಿ ನಾನು ಮೊಢೆರಾದ ಜನರನ್ನು ಅಭಿನಂದಿಸಲು ಬಯಸುತ್ತೇನೆ.
ರೈನ್ ಬೆನ್ -24 ಗಂಟೆಗಳು ಸರ್! ನಮ್ಮ ಮನೆಗೆ ವಿದ್ಯುತ್ ಸರಬರಾಜಿದೆ, ನಾವು ತುಂಬಾ ಸಂತೋಷವಾಗಿದ್ದೇವೆ.
ಪ್ರಧಾನಮಂತ್ರಿ- ಒಳ್ಳೆಯದು! ನಿಮಗೆ ನನ್ನ ಅನಂತ ಶುಭ ಹಾರೈಕೆಗಳು. ಉಳಿದ ಹಣವನ್ನು ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಿ. ನಿಮ್ಮ ಜೀವನಕ್ಕೆ ಪ್ರಯೋಜನವಾಗುವಂತೆ ಆ ಹಣವನ್ನು ಸೂಕ್ತವಾಗಿ ಬಳಸಿ. ನಿಮ್ಮೆಲ್ಲರಿಗೆ ಶುಭ ಹಾರೈಸುತ್ತೇನೆ. ಮತ್ತು ಮೊಢೆರಾದ ಸಮಸ್ತ ಜನತೆಗೆ ನನ್ನ ನಮನಗಳು!
ಸ್ನೇಹಿತರೇ, ವರ್ಷಾಬೆನ್ ಮತ್ತು ಬಿಪಿನ್ ಭಾಯ್ ಹೇಳಿರುವುದು ಇಡೀ ದೇಶಕ್ಕೆ, ಗ್ರಾಮಗಳಿಗೆ ಮತ್ತು ನಗರಗಳಿಗೆ ಸ್ಫೂರ್ತಿಯಾಗಿದೆ. ಮೊಢೆರಾದ ಈ ಅನುಭವವನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬಹುದಾಗಿದೆ . ಸೂರ್ಯನ ಶಕ್ತಿಯು ಈಗ ಹಣವನ್ನು ಉಳಿಸುತ್ತದೆ ಮತ್ತು ಆದಾಯವನ್ನು ಹೆಚ್ಚಿಸುತ್ತದೆ. ಮಂಜೂರ್ ಅಹ್ಮದ್ ಲಾರ್ವಾಲ್ ಎಂಬ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಸ್ನೇಹಿತರೊಬ್ಬರಿದ್ದಾರೆ. ಕಾಶ್ಮೀರದಲ್ಲಿ ಚಳಿಗಾಲದ ಕಾರಣ, ವಿದ್ಯುತ್ ವೆಚ್ಚ ಹೆಚ್ಚು ಇದ್ದುದರಿಂದ ಮಂಜೂರ್ ಜಿ ಅವರ ವಿದ್ಯುತ್ ಬಿಲ್ ಕೂಡ 4 ಸಾವಿರ ರೂಪಾಯಿಗಿಂತ ಹೆಚ್ಚಿರುತ್ತಿತ್ತು, ಆದರೆ, ಮಂಜೂರ್ ಜಿ ಅವರ ಮನೆಗೆ ಸೋಲಾರ್ ರೂಫ್ಟಾಪ್ ಪ್ಲಾಂಟ್ ಅಳವಡಿಸಿದ್ದರಿಂದ, ಅವರ ವೆಚ್ಚ ಅರ್ಧಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಒಡಿಶಾದ ಕುನ್ನಿ ದೇವೋರಿ ಎಂಬ ಹೆಣ್ಣು ಮಗಳು ಸೌರಶಕ್ತಿಯನ್ನು ತನಗೆ ಹಾಗೂ ಇತರ ಮಹಿಳೆಯರಿಗೆ ಉದ್ಯೋಗದ ಮೂಲವನ್ನಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಕುನ್ನಿ ಒಡಿಶಾದ ಕೆಂದುರ್ ಜಿಲ್ಲೆಯ ಕರ್ದಾಪಾಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಸೌರಶಕ್ತಿ ಚಾಲಿತ ರೀಲಿಂಗ್ ಯಂತ್ರದಲ್ಲಿ ರೇಷ್ಮೆಯನ್ನು ನೂಲುವ ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಸೋಲಾರ್ ಮೆಷಿನ್ನಿಂದಾಗಿ ಈ ಬುಡಕಟ್ಟು ಮಹಿಳೆಯರು ವಿದ್ಯುತ್ ಬಿಲ್ನ ಹೊರೆಯನ್ನು ಹೊರಬೇಕಾಗಿಲ್ಲ ಮತ್ತು ಅವರಿಗೆ ಆದಾಯ ಲಭಿಸುತ್ತಿದೆ. ಇದು ಸೂರ್ಯದೇವನ ಸೌರಶಕ್ತಿಯ ಏಕೈಕ ವರವಾಗಿದೆ. ವರದಾನ ಮತ್ತು ಪ್ರಸಾದದ ಪರಿಧಿ ಹೆಚ್ಚಿದಷ್ಟೂ ಉತ್ತಮ. ಆದುದರಿಂದ, ನನ್ನ ಪ್ರಾರ್ಥನೆಯೇನೆಂದರೆ, ನೀವೂ ಸಹ ಇದರಲ್ಲಿ ಸೇರಿಕೊಳ್ಳಿ ಮತ್ತು ಇತರರನ್ನು ಸೇರಿಸಿ.
ನನ್ನ ಪ್ರಿಯ ದೇಶವಾಸಿಗಳೇ, ಈಗಷ್ಟೇ ನಾನು ನಿಮ್ಮೊಂದಿಗೆ ಸೂರ್ಯನ ಬಗ್ಗೆ ಮಾತನಾಡುತ್ತಿದ್ದೆ. ಈಗ ನನ್ನ ಗಮನವು ಬಾಹ್ಯಾಕಾಶದ ಕಡೆಗೆ ಹೋಗುತ್ತಿದೆ. ಏಕೆಂದರೆ ನಮ್ಮ ದೇಶ ಸೌರ ಕ್ಷೇತ್ರದ ಜೊತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಅದ್ಭುತಗಳನ್ನು ಸಾಧಿಸುತ್ತಿದೆ. ಇಡೀ ವಿಶ್ವವೇ ಇಂದು ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ. ಹಾಗಾಗಿ ‘ಮನದ ಮಾತಿನ’ ಕೇಳುಗರಿಗೆ ಇದನ್ನು ಹೇಳುವ ಮೂಲಕ ಅವರನ್ನೂ ಸಂತೋಷಪಡಿಸಬೇಕು ಎಂದುಕೊಂಡೆ.
ಸ್ನೇಹಿತರೇ, ಈಗ ಕೆಲವು ದಿನಗಳಿಗೆ ಮುನ್ನ, ಭಾರತ ಏಕ ಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನೆಲೆಗೊಳಿಸಿದನ್ನು ನೀವು ನೋಡಿರಬಹುದು. ದೀಪಾವಳಿ ಹಬ್ಬಕ್ಕೆ ಸರಿಯಾಗಿ ಒಂದು ದಿನ ಮೊದಲು, ದೊರೆತ ಈ ಯಶಸ್ಸು ಒಂದು ರೀತಿಯಲ್ಲಿ ನಮ್ಮ ಯುವಜನತೆಯಿಂದ ದೇಶಕ್ಕೆ ದೊರೆತ ದೀಪಾವಳಿ ಹಬ್ಬದ ವಿಶೇಷ ಉಡುಗೊರೆ ಎಂದೇ ಹೇಳಬಹುದು. ಈ ಲಾಂಚಿಂಗ್ ನಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಕಚ್ ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಇದರ ಸಹಾಯದಿಂದ ದೂರ ದೂರದ ಪ್ರದೇಶಗಳು ಕೂಡಾ ದೇಶದ ಉಳಿದ ಭಾಗಗಳೊಂದಿಗೆ ಮತ್ತಷ್ಟು ಸುಲಭವಾಗಿ ಸಂಪರ್ಕ ಹೊಂದುತ್ತವೆ. ದೇಶ ಸ್ವಾವಲಂಬಿಯಾದಾಗ ಯಾವ ರೀತಿ ಯಶಸ್ಸಿನ ಹೊಸ ಶಿಖರಗಳನ್ನು ಸಾಧಿಸಬಹುದು ಎನ್ನುವುದಕ್ಕೆ ಇದು ಕೂಡಾ ಒಂದು ಉದಾಹರಣೆಯಾಗಿದೆ. ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಭಾರತಕ್ಕೆ ಕ್ರಯೋಜನಿಕ್ ರಾಕೆಟ್ ತಂತ್ರಜ್ಞಾನ ನೀಡದಂತೆ ತಡೆಯಲಾಗಿದ್ದ ಆ ಹಳೆಯ ಸಮಯ ಕೂಡಾ ನನಗೆ ನೆನಪಿಗೆ ಬರುತ್ತಿದೆ. ಆದರೆ ಭಾರತದ ವಿಜ್ಞಾನಿಗಳು ಕೇವಲ ದೇಶೀಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದು ಮಾತ್ರವಲ್ಲದೇ, ಇಂದು ಇದರ ಸಹಾಯದೊಂದಿಗೆ ಹತ್ತಾರು ಉಪಗ್ರಹಗಳನ್ನು ಏಕಕಾಲಕ್ಕೆ ಒಟ್ಟಿಗೆ ಅಂತರಿಕ್ಷಕ್ಕೆ ಕಳುಹಿಸುತ್ತಿದ್ದಾರೆ. ಈ ಲಾಂಚಿಂಗ್ ನೊಂದಿಗೆ ಭಾರತ ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಒಂದು ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಿದೆ, ಇದರಿಂದ ಬಾಹ್ಯಾಕಾಶ ವಲಯದಲ್ಲಿ ಭಾರತಕ್ಕೆ ಅವಕಾಶಗಳ ಹೊಸ ಬಾಗಿಲು ಕೂಡಾ ತೆರೆದಿದೆ.
ಸ್ನೇಹಿತರೇ, ಅಭಿವೃದ್ಧಿಹೊಂದಿದ ಭಾರತವಾಗುವ ಸಂಕಲ್ಪದೊಂದಿಗೆ ಮುಂದೆ ಸಾಗುತ್ತಿರುವ ನಮ್ಮ ದೇಶ, ಎಲ್ಲರ ಪ್ರಯತ್ನದಿಂದಾಗಿಯೇ, ತನ್ನ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಮೊದಲು ಬಾಹ್ಯಾಕಾಶ ವಲಯ, ಸರ್ಕಾರಿ ವ್ಯವಸ್ಥೆಗಳ ವ್ಯಾಪ್ತಿಗೆ ಸೀಮಿತವಾಗಿತ್ತು. ಬಾಹ್ಯಾಕಾಶ ವಲಯವನ್ನು ಭಾರತದ ಯುವಜನತೆಗಾಗಿ, ಭಾರತದ ಖಾಸಗಿ ವಲಯಕ್ಕಾಗಿ ಮುಕ್ತವಾಗಿ ಯಾವಾಗ ತೆರೆಯಲಾಯಿತೋ ಆಗ ಇದರಲ್ಲಿ ಕ್ರಾಂತಿಕಾರಿ ಪರಿವರ್ತನೆಗಳು ಕಂಡುಬರತೊಡಗಿದವು. ಭಾರತೀಯ ಕೈಗಾರಿಕಾ ವಲಯ ಮತ್ತು ನವೋದ್ಯಮಗಳು ಈ ವಲಯದಲ್ಲಿ ಹೊಸ ಹೊಸ ಆವಿಷ್ಕಾರಗಳು ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ತರುವುದರಲ್ಲಿ ತೊಡಗಿವೆ. ವಿಶೇಷವಾಗಿ IN-SPACe ಸಹಯೋಗದೊಂದಿಗೆ ಈ ವಲಯದಲ್ಲಿ ಅತಿ ದೊಡ್ಡ ಬದಲಾವಣೆಯಾಗಲಿದೆ.
IN-SPACe ಮುಖಾಂತರ ಸರ್ಕಾರೇತರ ಕಂಪೆನಿಗಳಿಗೆ ಕೂಡಾ ತಮ್ಮ ಪೇಲೋಡ್ಸ್ ಮತ್ತು ಉಪಗ್ರಹ ಉಡಾವಣೆ ಮಾಡುವ ಸೌಲಭ್ಯ ದೊರೆಯುತ್ತಿದೆ. ಬಾಹ್ಯಾಕಾಶ ವಲಯದಲ್ಲಿ ಭಾರತದಲ್ಲಿ ದೊರೆಯುತ್ತಿರುವ ಈ ದೊಡ್ಡ ಅವಕಾಶಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ನಾನು ಹೆಚ್ಚು ಹೆಚ್ಚು ನವೋದ್ಯಮಗಳು ಹಾಗೂ ಆವಿಷ್ಕಾರಕರಲ್ಲಿ ಮನವಿ ಮಾಡುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗ, ಯುವಶಕ್ತಿಯ ವಿಷಯ ಬಂದಾಗ, ಮುಂದಾಳತ್ವ ಶಕ್ತಿಯ ವಿಷಯ ಬಂದಾಗ, ನಮ್ಮ ಮನಸ್ಸಿನಲ್ಲಿ ಕೆಲವು ಹಳೆಯ, ಮಾಸಿದ, ಅನೇಕ ಪರಿಕಲ್ಪನೆಗಳು ಮೂಡುತ್ತವೆ. ವಿದ್ಯಾರ್ಥಿ ಬಲದ ಮಾತು ಬಂದಾಗ, ಅದನ್ನು ವಿದ್ಯಾರ್ಥಿ ಸಂಘದ ಚುನಾವಣೆಯೊಂದಿಗೆ ಜೋಡಿಸಿ, ಅದರ ವ್ಯಾಪ್ತಿಯನ್ನು ಸೀಮಿತಗೊಳಿಸಲಾಗುವುದನ್ನು ನಾವು ಅನೇಕ ಬಾರಿ ನೋಡುತ್ತೇವೆ. ಆದರೆ ವಿದ್ಯಾರ್ಥಿ ಶಕ್ತಿಯ ವ್ಯಾಪ್ತಿ ಬಹಳ ವಿಶಾಲವಾದುದು, ಬಹಳ ದೊಡ್ಡದು. ವಿದ್ಯಾರ್ಥಿ ಶಕ್ತಿ ಎನ್ನುವುದು ಭಾರತವನ್ನು ಶಕ್ತಿಶಾಲಿ ಮಾಡುವುದಕ್ಕೆ ಆಧಾರವಾಗಿದೆ. ಭಾರತವನ್ನು 2047 ರವರೆಗೆ ಕರೆದೊಯ್ಯುವವರು ಇಂದಿನ ಯುವಜನತೆಯೇ ತಾನೇ. ಭಾರತ ಶತಮಾನೋತ್ಸವ ಆಚರಿಸುವಾಗ, ಯುವಜನತೆಯ ಈ ಶಕ್ತಿ, ಅವರ ಶ್ರಮ, ಅವರ ಬೆವರು, ಅವರ ಪ್ರತಿಭೆ, ಭಾರತವನ್ನು ಯಾವ ಎತ್ತರಕ್ಕೆ ಕೊಂಡೊಯ್ಯುತ್ತದೆಯೋ ಅದರ ಸಂಕಲ್ಪವನ್ನು ದೇಶ ಇಂದು ಕೈಗೊಳ್ಳುತ್ತಿದೆ. ನಮ್ಮ ಇಂದಿನ ಯುವಜನಾಂಗ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ರೀತಿ, ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ರೀತಿ ನೋಡಿ ನನ್ನ ಮನಸ್ಸಿನಲ್ಲಿ ಅತ್ಯಂತ ಭರವಸೆ ಮೂಡಿದೆ. ನಮ್ಮ ಯುವಜನತೆ Hakathon ಗಳಲ್ಲಿ ಸಮಸ್ಯೆ ಪರಿಷ್ಕರಿಸುವ ರೀತಿ, ರಾತ್ರಿಯಿಡೀ ಎಚ್ಚರವಾಗಿದ್ದು ಹಲವಾರು ಗಂಟೆಗಳ ಕಾಲ ಕೆಲಸಮಾಡುವ ರೀತಿ ಬಹಳ ಪ್ರೇರಣಾದಾಯಕವಾಗಿದೆ. ಕಳೆದ ವರ್ಷಗಳಲ್ಲಿ ನಡೆದ ಒಂದು ಹ್ಯಾಕಥಾನ್ಸ್ ದೇಶದ ಲಕ್ಷಾಂತರ ಯುವಕರು ಜೊತೆಗೂಡಿ ಅನೇಕ ಸವಾಲುಗಳನ್ನು ಪರಿಹರಿಸಿದ್ದಾರೆ. ದೇಶಕ್ಕೆ ಹೊಸ ಪರಿಹಾರಗಳನ್ನು ನೀಡಿದ್ದಾರೆ.
ಸ್ನೇಹಿತರೇ, ನಾನು ಕೆಂಪುಕೋಟೆಯಿಂದ ಜೈ ಅನುಸಂಧಾನ್ ಎಂದು ಕರೆ ನೀಡಿದ್ದು ನಿಮಗೆ ನೆನಪಿರಬಹುದು. ನಾನು ಈ ದಶಕವನ್ನು ಭಾರತದ Techade ಮಾಡುವ ಮಾತು ಕೂಡಾ ಆಡಿದ್ದೆ. ನಮ್ಮ ಐಐಟಿ ವಿದ್ಯಾರ್ಥಿಗಳು ಕೂಡಾ ಇದರ ಜವಾಬ್ದಾರಿ ವಹಿಸಿಕೊಂಡಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸಿತು. ಇದೇ ತಿಂಗಳು ಅಂದರೆ ಅಕ್ಟೋಬರ್ 14-15 ರಂದು ಎಲ್ಲಾ 23 ಐಐಟಿಗಳು ತಮ್ಮ ಆವಿಷ್ಕಾರಗಳು ಮತ್ತು ಸಂಶೋಧನಾ ಪ್ರಾಜೆಕ್ಟ್ ಪ್ರದರ್ಶಿಸಲು ಮೊದಲ ಬಾರಿಗೆ ಒಂದೇ ವೇದಿಕೆಗೆ ಬಂದವು. ಈ ವೇದಿಕೆಯಲ್ಲಿ ದೇಶಾದ್ಯಂತ ಆಯ್ಕೆಯಾದ ವಿದ್ಯಾರ್ಥಿಗಳು ಮತ್ತು ಸಂಶೋಧಕರು 75 ಕ್ಕಿಂತ ಹೆಚ್ಚು ಅತ್ಯುತ್ತಮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ಆರೋಗ್ಯ ಸಂರಕ್ಷಣೆ, ಕೃಷಿ, ರೋಬೋಟಿಕ್ಸ್, ಸೆಮಿ ಕಂಡಕ್ಟರ್ಸ್, 5ಜಿ ಕಮ್ಯೂನಿಕೇಷನ್ಸ್ ಹೀಗೆ ಹಲವಾರು ವಿಷಯಗಳನ್ನು ಆಧರಿಸಿ ಆ ಪ್ರಾಜೆಕ್ಟ್ ಗಳನ್ನು ರೂಪಿಸಲಾಗಿತ್ತು. ಈ ಪ್ರಾಜೆಕ್ಟ್ ಗಳೆಲ್ಲವೂ ಒಂದಕ್ಕಿಂತ ಮತ್ತೊಂದು ಉತ್ತಮವಾಗಿದ್ದವು, ಆದರೆ, ನಾನು ಕೆಲವು ಪ್ರಾಜೆಕ್ಟ್ ಗಳ ಕುರಿತಂತೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಐಐಟಿ ಭುವನೇಶ್ವರ್ ನ ಒಂದು ತಂಡವು ನವಜಾತ ಶಿಶುಗಳಿಗಾಗಿ Portable ventilator ಅಭಿವೃದ್ಧಿ ಪಡಿಸಿತ್ತು. ಇದು ಬ್ಯಾಟರಿ ಚಾಲಿತವಾಗಿದೆ ಮತ್ತು ಇದನ್ನು ದೂರ ದೂರದ ಪ್ರದೇಶಗಳಲ್ಲಿ ಸುಲಭವಾಗಿ ಉಪಯೋಗಿಸಬಹುದಾಗಿದೆ. ಅವಧಿ ಪೂರ್ವ ಜನಿಸಿದಂತಹ ಮಕ್ಕಳ ಜೀವ ಉಳಿಸುವುದರಲ್ಲಿ ಇದು ಬಹಳ ಸಹಾಯಕ ಎಂದು ಸಾಬೀತಾಗಬಹುದು. Electric mobility ಆಗಲಿ, ಡ್ರೋನ್ ತಂತ್ರಜ್ಞಾನವಾಗಲಿ, 5 ಜಿ ಆಗಲಿ, ನಮ್ಮ ಬಹುತೇಕ ವಿದ್ಯಾರ್ಥಿಗಳು, ಇದರೊಂದಿಗಿನ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ಐಐಟಿಗಳು ಒಂದಾಗಿ ಬಹುಭಾಷೀಯ ಪ್ರಾಜೆಕ್ಟ್ ಕುರಿತಂತೆ ಕೆಲಸ ಮಾಡುತ್ತಿದ್ದು, ಇದು ಸ್ಥಳೀಯ ಭಾಷೆಗಳನ್ನು ಕಲಿಯುವ ವಿಧಾನವನ್ನು ಸುಲಭಗೊಳಿಸುತ್ತದೆ. ಈ ಪ್ರಾಜೆಕ್ಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳ ಸಾಧನೆಗೆ ಕೂಡಾ ಬಹಳ ಸಹಾಯಕವಾಗುತ್ತದೆ. ಐಐಟಿ ಮದ್ರಾಸ್ ಮತ್ತು ಐಐಟಿ ಕಾನ್ಪುರ್ ಭಾರತದ ಸ್ವದೇಶೀ 5ಜಿ ಟೆಸ್ಟ್ ಬೆಡ್ ತಯಾರಿಕೆಯಲ್ಲಿ ಮುಂಚೂಣಿ ಪಾತ್ರ ವಹಿಸಿದೆಯೆಂದು ತಿಳಿದು ನಿಮಗೆ ಸಂತೋಷವೆನಿಸಬಹುದು. ಖಂಡಿತವಾಗಿಯೂ ಇದೊಂದು ಅದ್ಭುತ ಆರಂಭವೇ ಆಗಿದೆ. ಮುಂಬರುವ ದಿನಗಳಲ್ಲಿ ಇಂತಹ ಅನೇಕ ಪ್ರಯತ್ನಗಳು ನಮಗೆ ಕಾಣಸಿಗುತ್ತವೆ ಎಂಬ ಭರವಸೆ ನನಗಿದೆ. ಐಐಟಿಗಳಿಂದ ಸ್ಫೂರ್ತಿ ಪಡೆದು, ಇತರೆ ವಿದ್ಯಾ ಸಂಸ್ಥೆಗಳು ಕೂಡಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಬಂಧಿತ ತಮ್ಮ ಕಾರ್ಯ ಚಟುವಟಿಕೆಗೆ ವೇಗ ತುಂಬುತ್ತವೆ ಎಂದು ಕೂಡಾ ನನಗೆ ನಂಬಿಕೆ ಇದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪರಿಸರ ಕುರಿತ ಕಾಳಜಿ ನಮ್ಮ ಸಮಾಜದ ಕಣ ಕಣದಲ್ಲೂ ತುಂಬಿದೆ ಮತ್ತು ನಾವು ನಮ್ಮ ಸುತ್ತಮುತ್ತಲೂ ಇದರ ಇರುವಿಕೆಯ ಅನುಭವ ಹೊಂದುತ್ತೇವೆ. ಪರಿಸರದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಜನರ ಸಂಖ್ಯೆ ದೇಶದಲ್ಲಿ ಕಡಿಮೆಯೇನಿಲ್ಲ.
ಕರ್ನಾಟಕದ ಬೆಂಗಳೂರಿನ ನಿವಾಸಿ ಸುರೇಶ್ ಕುಮಾರ್ ಅವರಿಂದ ಕೂಡಾ ನಾವು ಬಹಳಷ್ಟು ಕಲಿಯಬಹುದಾಗಿದೆ. ಅವರಲ್ಲಿ ಪ್ರಕೃತಿ ಹಾಗೂ ಪರಿಸರದ ರಕ್ಷಣೆಯ ಬಗ್ಗೆ ಬಹಳ ಉತ್ಸಾಹ ತುಂಬಿದೆ. 20 ವರ್ಷಗಳ ಹಿಂದೆ ಅವರು ನಗರದ ಸಹಕಾರನಗರದ ಒಂದು ಅರಣ್ಯವನ್ನು ಪುನಃ ಹಸಿರಿನಿಂದ ನಳನಳಿಸುವಂತೆ ಮಾಡುವುದಕ್ಕೆ ಮುಂದಾಗಿದ್ದರು. ಈ ಕೆಲಸ ಕಷ್ಟದಿಂದ ಕೂಡಿತ್ತು, ಆದರೆ 20 ವರ್ಷಗಳ ಹಿಂದೆ ನೆಟ್ಟ ಆ ಗಿಡಗಳು ಇಂದು ಸುಮಾರು 40 ರಿಂದ 45 ಅಡಿ ಎತ್ತರಕ್ಕೆ ಬೆಳೆದು ಬೃಹತ್ ಮರಗಳಾಗಿವೆ. ಈಗ ಇದರ ಸೌಂದರ್ಯ ಪ್ರತಿಯೊಬ್ಬರ ಮನಸೂರೆಗೊಳ್ಳುತ್ತದೆ. ಇದರಿಂದಾಗಿ ಅಲ್ಲಿ ವಾಸಿಸುವ ಜನರಿಗೆ ಕೂಡಾ ಬಹಳ ಹೆಮ್ಮೆ ಎನಿಸುತ್ತದೆ. ಸುರೇಶ್ ಕುಮಾರ್ ಮತ್ತೊಂದು ಅದ್ಭುತ ಕೆಲಸವನ್ನು ಕೂಡಾ ಮಾಡುತ್ತಾರೆ. ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರನಗರದಲ್ಲಿ ಒಂದು ಬಸ್ ತಂಗುದಾಣವನ್ನು ಕೂಡಾ ನಿರ್ಮಿಸಿದ್ದಾರೆ. ಅವರು ನೂರಾರು ಜನರಿಗೆ ಕನ್ನಡ ಭಾಷೆಯಲ್ಲಿ ಬರೆಯಲಾಗಿರುವ Brass plate ಗಳನ್ನು ಕೂಡಾ ಉಡುಗೊರೆಯಾಗಿ ನೀಡಿದ್ದಾರೆ. ಪರಿಸರ ಮತ್ತು ಸಂಸ್ಕೃತಿ ಎರಡೂ ಒಟ್ಟಾಗಿ ಬೆಳೆದು, ಅರಳಿದರೆ ಯೋಚಿಸಿ ನೋಡಿ...ಇದು ಎಷ್ಟೊಂದು ದೊಡ್ಡ ಉತ್ತಮ ವಿಚಾರವಲ್ಲವೇ.
ಸ್ನೇಹಿತರೇ, ಇಂದು ಪರಿಸರ ಸ್ನೇಹಿ ಜೀವನ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಕುರಿತಂತೆ ಜನರಲ್ಲಿ ಮೊದಲಿಗಿಂತ ಅತ್ಯಂತ ಹೆಚ್ಚು ಜಾಗೃತಿ ಕಂಡುಬರುತ್ತಿದೆ. ತಮಿಳುನಾಡಿನ ಇಂತಹದ್ದೇ ಒಂದು ಕುತೂಹಲಕಾರಿ ಪ್ರಯತ್ನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯಿತು. ಕೊಯಂಬತ್ತೂರಿನ ಅನಾಯಿಕಟ್ಟೀಯಲ್ಲಿ ಬುಡಕಟ್ಟು ಮಹಿಳೆಯರ ಒಂದು ತಂಡದ ಉತ್ತಮ ಪ್ರಯತ್ನ ಇದಾಗಿದೆ. ಈ ಮಹಿಳೆಯರು ರಫ್ತು ಮಾಡುವುದಕ್ಕಾಗಿ ಹತ್ತು ಸಾವಿರ ಪರಿಸರ ಸ್ನೇಹಿ ಟೆರ್ರಕೋಟಾ ಟೀ ಕಪ್ ಗಳನ್ನು ತಯಾರಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ಟೆರ್ರಕೋಟಾ ಟೀ ಕಪ್ಸ್ ತಯಾರಿಸುವ ಸಂಪೂರ್ಣ ಜವಾಬ್ದಾರಿಯನ್ನು ಈ ಮಹಿಳೆಯರು ಸ್ವತಃ ಕೈಗೆತ್ತಿಕೊಂಡರು. Clay Mixing ನಿಂದ ಹಿಡಿದು Final Packaging ವರೆಗೂ ಎಲ್ಲಾ ಕೆಲಸವನ್ನೂ ಸ್ವತಃ ತಾವೇ ಮಾಡಿದರು. ಇದಕ್ಕಾಗಿ ಅವರು ತರಬೇತಿಯನ್ನೂ ಪಡೆದುಕೊಂಡಿದ್ದರು. ಈ ಅದ್ಭುತ ಪ್ರಯತ್ನವನ್ನು ಎಷ್ಟು ಪ್ರಶಂಸಿಸಿದರೂ ಕಡಿಮೆಯೇ.
ಸ್ನೇಹಿತರೇ, ತ್ರಿಪುರಾದ ಕೆಲವು ಗ್ರಾಮಗಳು ಕೂಡಾ ಬಹಳ ಉತ್ತಮ ಉದಾಹರಣೆಗಳನ್ನು ನೀಡಿವೆ. ನೀವು ಬಯೋ ವಿಲೇಜ್ ಎನ್ನುವ ಪದವನ್ನು ಖಂಡಿತವಾಗಿಯೂ ಕೇಳಿರಬಹುದು, ಆದರೆ ತ್ರಿಪುರಾದ ಕೆಲವು ಗ್ರಾಮಗಳು Bio-Village 2 ಮೆಟ್ಟಿಲನ್ನು ಏರಿವೆ. Bio-Village 2 ನಲ್ಲಿ ಪ್ರಾಕೃತಿಕ ವಿಕೋಪಗಳಿಂದ ಸಂಭವಿಸುವ ನಷ್ಟವನ್ನು ಯಾವರೀತಿ ಕಡಿಮೆ ಮಾಡಬಹುದು ಎಂಬ ಅಂಶಕ್ಕೆ ಒತ್ತು ನೀಡಲಾಗುತ್ತದೆ. ಇದರಲ್ಲಿ ವಿಭಿನ್ನ ಕ್ರಮಗಳ ಮೂಲಕ ಜನರ ಜೀವನ ಮಟ್ಟವನ್ನು ಮತ್ತಷ್ಟು ಉತ್ತಮವಾಗಿ ಹೇಗೆ ಮಾಡಬಹುದು ಎಂಬ ಕುರಿತು ಸಂಪೂರ್ಣ ಗಮನ ಹರಿಸಲಾಗುತ್ತದೆ. Solar Energy, Biogas, Bee Keeping ಮತ್ತು Bio Fertilizers, ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಗಮನ ಕೇಂದ್ರೀಕರಿಸಲಾಗುತ್ತದೆ. ಒಟ್ಟಾರೆ ನೋಡಿದಲ್ಲಿ, ಹವಾಮಾನ ಬದಲಾವಣೆ ವಿರುದ್ಧ ಅಭಿಯಾನಕ್ಕೆ Bio-Village 2 ಸಾಕಷ್ಟು ಬಲ ತುಂಬಲಿದೆ. ಪರಿಸರ ಸಂರಕ್ಷಣೆ ಕುರಿತಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಾಗುತ್ತಿರುವ ಉತ್ಸಾಹ ನೋಡಿ ನಾನು ಬಹಳ ಸಂತಸಗೊಂಡಿದ್ದೇನೆ. ಕೆಲವು ದಿನಗಳ ಹಿಂದಷ್ಟೇ, ಭಾರತದಲ್ಲಿ ಪರಿಸರ ಸಂರಕ್ಷಣೆಗಾಗಿ ಸಮರ್ಪಿತ Mission Life ಗೆ ಕೂಡಾ ಚಾಲನೆ ನೀಡಲಾಗಿದೆ. ಮಿಷನ್ ಲೈಫ್ ನ ಸರಳ ಸಿದ್ಧಾಂತವೆಂದರೆ – ಪರಿಸರಕ್ಕೆ ನಷ್ಟ ಉಂಟುಮಾಡದಂತಹ ಜೀವನ ಶೈಲಿಯನ್ನು ಉತ್ತೇಜಿಸುವುದು. ನೀವು ಕೂಡಾ ಮಿಷನ್ ಲೈಫ್ ಕುರಿತು ತಿಳಿದುಕೊಳ್ಳಿ, ಅದನ್ನು ನಿಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ಸ್ನೇಹಿತರೇ, ನಾಳೆ, ಅಕ್ಟೋಬರ್ 31 ರಾಷ್ಟ್ರೀಯ ಏಕತಾ ದಿನವಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲರ ಜಯಂತಿಯ ಶುಭ ಸಂದರ್ಭವಾಗಿದೆ. ಈ ದಿನದಂದು ದೇಶದ ಮೂಲೆ ಮೂಲೆಯಲ್ಲಿ ಏಕತೆಗಾಗಿ ಓಟ ಆಯೋಜಿಸಲಾಗುತ್ತದೆ. ಈ ಓಟ, ದೇಶದಲ್ಲಿ ಏಕತೆಯ ಸೂತ್ರವನ್ನು ಬಲಿಷ್ಠಗೊಳಿಸುತ್ತದೆ, ನಮ್ಮ ಯುವಜನತೆಗೆ ಪ್ರೇರಣೆ ನೀಡುತ್ತದೆ. ಈಗ ಕೆಲವು ದಿನಗಳ ಹಿಂದೆ, ಇಂತಹದ್ದೇ ಭಾವನೆ ನಮ್ಮ ರಾಷ್ಟ್ರೀಯ ಕ್ರೀಡೆಗಳಲ್ಲಿ ನಮಗೆ ಕಂಡುಬಂದಿತ್ತು. ‘ಜುಡೇಗಾ ಇಂಡಿಯಾ ತೋ ಜೀತೇಗಾ ಇಂಡಿಯಾ’ ಈ Theme ನೊಂದಿಗೆ ರಾಷ್ಟ್ರೀಯ ಕ್ರೀಡೆಗಳು ಏಕತೆಯ ಸಂದೇಶವನ್ನು ನೀಡಿದವೋ ಅಂತೆಯೇ ಭಾರತದ ಕ್ರೀಡಾ ಸಂಸ್ಕೃತಿಗೆ ಉತ್ತೇಜನ ನೀಡುವ ಕೆಲಸವನ್ನೂ ಮಾಡಿದೆ. ಭಾರತದಲ್ಲಿ ಇದುವರೆಗಿನ ರಾಷ್ಟ್ರೀಯ ಕ್ರೀಡೆಗಳ ಬಹು ದೊಡ್ಡ ಆಯೋಜನೆ ಇದಾಗಿತ್ತು ತಿಳಿದು ನಿಮಗೆ ಸಂತೋಷನೆನಿಸುತ್ತದೆ. ಇವುಗಳಲ್ಲಿ 36 ಕ್ರೀಡೆಗಳನ್ನು ಸೇರಿಸಲಾಗಿತ್ತು, ಇವುಗಳ ಪೈಕಿ 7 ಹೊಸಾ ಮತ್ತು ಎರಡು ದೇಶೀಯ ಸ್ಪರ್ಧೆ ಯೋಗಾಸನ ಮತ್ತು ಮಲ್ಲಕಂಭ ಕೂಡಾ ಸೇರಿದ್ದವು. ಚಿನ್ನದ ಪದಕ ಗಳಿಸುವಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಮೂರು ತಂಡಗಳೆಂದರೆ ಸರ್ವೀಸಸ್ ತಂಡ, ಮಹಾರಾಷ್ಟ್ರ ಮತ್ತು ಹರಿಯಾಣದ ತಂಡ. ಈ ಕ್ರೀಡೆಗಳಲ್ಲಿ ಆರು ರಾಷ್ಟ್ರೀಯ ದಾಖಲೆಗಳು ಮತ್ತು ಸುಮಾರು 60 ರಾಷ್ಟ್ರೀಯ ಕ್ರೀಡಾ ದಾಖಲೆಗಳನ್ನು ಕೂಡಾ ಮಾಡಲಾಗಿದೆ. ಪದಕ ವಿಜೇತರಿಗೆ, ದಾಖಲೆಗಳನ್ನು ಸೃಷ್ಟಿಸಿದವರಿಗೆ, ಈ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡವರನ್ನು, ಎಲ್ಲಾ ಕ್ರೀಡಾಕಾರರಿಗೆ, ಅನೇಕಾನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಈ ಆಟಗಾರರ ಭವ್ಯ ಭವಿಷ್ಯಕ್ಕಾಗಿ ಶುಭ ಕೋರುತ್ತೇನೆ.
ಸ್ನೇಹಿತರೇ, ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಯಶಸ್ವಿ ಆಯೋಜನೆಯಲ್ಲಿ ತಮ್ಮ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಮನಃಪೂರ್ವಕವಾಗಿ ಶ್ಲಾಘಿಸುತ್ತೇನೆ. ಗುಜರಾತ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನವರಾತ್ರಿಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತೆಂದು ನೀವೆಲ್ಲಾ ನೋಡಿದ್ದೀರಿ. ಈ ಸಮಯದಲ್ಲಿ ಗುಜರಾತ್ ಜನತೆ ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ ಮತ್ತು ಈ ಕ್ರೀಡೆಗಳ ಆನಂದದ ಅನುಭವವನ್ನು ಜನರು ಹೇಗೆ ಆಸ್ವಾದಿಸುತ್ತಾರೆ? ಇಷ್ಟೊಂದು ಭಾರೀ ಸಿದ್ಧತೆ ಹಾಗೂ ಮತ್ತೊಂದೆಡೆ ನವರಾತ್ರಿಯ ಗರ್ಭಾ ಇತ್ಯಾದಿಗಳ ಸಿದ್ಧತೆ. ಈ ಎಲ್ಲಾ ಕೆಲಸವನ್ನೂ ಗುಜರಾತ್ ಒಂದೇ ಬಾರಿಗೆ ಹೇಗೆ ಮಾಡುತ್ತದೆ? ಎನ್ನುವುದು ಈ ಪಂದ್ಯಾವಳಿ ಆಯೋಜನೆಗೆ ಮೊದಲು ನನ್ನ ಮನದಲ್ಲಿ ಮೂಡಿದ್ದ ಪ್ರಶ್ನೆಯಾಗಿತ್ತು ಆದರೆ ಗುಜರಾತ್ ರಾಜ್ಯದ ಜನತೆ ತಮ್ಮ ಅತಿಥಿ ಸತ್ಕಾರದಿಂದ ಎಲ್ಲಾ ಅತಿಥಿಗಳನ್ನೂ ಸಂತೋಷಭರಿತರನ್ನಾಗಿ ಮಾಡಿತು. ಆಹಮದಾಬಾದ್ ನಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸಂದರ್ಭದಲ್ಲಿ ನಡೆದ ಕಲೆ, ಕ್ರೀಡೆ ಮತ್ತು ಸಂಸ್ಕೃತಿಯ ಸಂಗಮ ಎಲ್ಲರಲ್ಲೂ ಉತ್ಸಾಹ ತುಂಬುವಂತಹದ್ದಾಗಿತ್ತು. ಆಟಗಾರರು ಕೂಡಾ ದಿನದಲ್ಲಿ ಯಾವ ಜಾಗದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೋ ಅಲ್ಲೇ ಸಂಜೆಯ ವೇಳೆ ಗರ್ಭಾ ಮತ್ತು ದಾಂಡಿಯಾದ ವರ್ಣಗಳಲ್ಲಿ ಮುಳುಗೇಳುತ್ತಿದ್ದರು. ಅವರು ಗುಜರಾತಿ ತಿನಿಸುಗಳು ಮತ್ತು ನವರಾತ್ರಿಯ ಚಿತ್ರಗಳನ್ನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಹಂಚಿಕೊಂಡರು. ಇದನ್ನು ನೋಡುವುದು ನಮಗೆಲ್ಲರಿಗೂ ಬಹಳ ಸಂತೋಷದಾಯಕ ವಿಷಯವಾಗಿದೆ. ಇಂತಹ ಕ್ರೀಡೆಗಳಿಂದ, ಭಾರತದ ವಿವಿಧ ಸಂಸ್ಕೃತಿಯ ಬಗ್ಗೆ ಕೂಡಾ ತಿಳಿದುಬರುತ್ತದೆ ಅಲ್ಲವೇ. ಇದು ಏಕ್ ಭಾರತ್ ಶ್ರೇಷ್ಠ್ ಭಾರತ್ ಭಾವನೆಯನ್ನು ಕೂಡಾ ಅಷ್ಟೇ ಬಲಿಷ್ಠಗೊಳಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನವೆಂಬರ್ ತಿಂಗಳಿನಲ್ಲಿ 15 ತಾರೀಖಿನಂದು ನಮ್ಮ ದೇಶ ಬುಡಕಟ್ಟು ಜನರ ಗೌರವ ದಿನವನ್ನು ಆಚರಿಸುತ್ತದೆ. ನಿಮಗೆ ನೆನಪಿರಬಹುದು. ದೇಶವು ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಬುಡಕಟ್ಟು ಪರಂಪರೆ ಮತ್ತು ಗೌರವದ ಆಚರಣೆಯನ್ನು ಆರಂಭಿಸಿತು. ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಲಕ್ಷಾಂತರ ಜನರನ್ನು ಒಗ್ಗೂಡಿಸಿದ್ದರು. ಅವರು ಭಾರತದ ಸ್ವಾತಂತ್ರ್ಯ ಹಾಗೂ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ್ದರು. ನಾವು ಧರತೀ ಆಬಾ ಬಿರ್ಸಾ ಮುಂಡಾ ಅವರಿಂದ ಕಲಿಯುವಂತಹದ್ದು ಬಹಳಷ್ಟಿದೆ. ಸ್ನೇಹಿತರೇ, ಧರತೀ ಆಬಾ ಬಿರ್ಸಾ ಮುಂಡಾ ಅವರ ವಿಷಯ ಬಂದಾಗ, ಅವರ ಅಲ್ಪ ಜೀವನಕಾಲದತ್ತ ದೃಷ್ಟಿ ಹರಿಸಿ ನೋಡಿದಾಗ, ನಾವು ಇಂದು ಕೂಡಾ ಅದರಿಂದ ಬಹಳಷ್ಟು ಕಲಿಯಬಹುದಾಗಿದೆ. ಧರತೀ ಆಬಾ ಅವರು ಹೀಗೆಂದು ಹೇಳಿದ್ದರು – ಈ ಭೂಮಿ ನಮ್ಮದು, ನಾವು ಇದರ ರಕ್ಷಕರು. ಅವರ ಈ ವಾಕ್ಯದಲ್ಲಿ ತಾಯ್ನೆಲಕ್ಕಾಗಿ ಕರ್ತವ್ಯದ ಭಾವನೆ ತುಂಬಿದೆ ಮತ್ತು ಪರಿಸರಕ್ಕಾಗಿ ನಮ್ಮ ಕರ್ತವ್ಯದ ಭಾವನೆಯೂ ಅಡಗಿದೆ. ನಾವು ನಮ್ಮ ಬುಡಕಟ್ಟು ಸಂಸ್ಕೃತಿಯನ್ನು ಮರೆಯಬಾರದು, ಅದರಿಂದ ಎಂದಿಗೂ ಸ್ವಲ್ಪವೂ ಕೂಡಾ ದೂರ ಸರಿಯಬಾರದೆಂದು ಅವರು ಯಾವಾಗಲೂ ಒತ್ತಿ ಹೇಳುತ್ತಿದ್ದರು. ಇಂದು ಕೂಡಾ ನಮ್ಮ ದೇಶದ ಬುಡಕಟ್ಟು ಸಮಾಜದಿಂದ ಪ್ರಕೃತಿ ಮತ್ತು ಪರಿಸರ ಕುರಿತಂತೆ ನಾವು ಬಹಳಷ್ಟು ಕಲಿಯಬಹುದಾಗಿದೆ.
ಸ್ನೇಹಿತರೇ, ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಸಂದರ್ಭದಲ್ಲಿ, ರಾಂಚಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ವಸ್ತು ಸಂಗ್ರಹಾಲಯ ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿತ್ತು. ಸಮಯ ದೊರೆತಾಗ ಇದನ್ನು ನೋಡಲು ಖಂಡಿತವಾಗಿಯೂ ಹೋಗಬೇಕೆಂದು ನಾನು ಯುವಜನತೆಯಲ್ಲಿ ಮನವಿ ಮಾಡುತ್ತೇನೆ. ನವೆಂಬರ್ 1 ರಂದು ಅಂದರೆ ನಾಡಿದ್ದು, ನಾನು ಗುಜರಾತ್-ರಾಜಸ್ತಾನ್ ನ ಗಡಿಯಲ್ಲಿರುವ ಮಾನ್ ಗಢ್ ನಲ್ಲಿರುತ್ತೇನೆ ಎಂದು ನಿಮಗೆ ಹೇಳಲು ಬಯಸುತ್ತೇನೆ. ಭಾರತದ ಸ್ವತಂತ್ರ ಸಂಗ್ರಾಮ ಮತ್ತು ನಮ್ಮ ಸಮೃದ್ಧ ಬುಡಕಟ್ಟು ಪರಂಪರೆಯಲ್ಲಿ ಮಾನಗಢ್ ಗೆ ಬಹಳ ವಿಶಿಷ್ಟ ಸ್ಥಾನವಿದೆ. ಇಲ್ಲಿ ನವೆಂಬರ್ 1913 ರಲ್ಲಿ ಒಂದು ಭೀಕರ ಹತ್ಯಾಕಾಂಡ ನಡೆಯಿತು. ಇದರಲ್ಲಿ ಬ್ರಿಟಿಷರು ಸ್ಥಳೀಯ ಬುಡಕಟ್ಟು ಜನರನ್ನು ನಿರ್ದಯೆಯಿಂದ ಕೊಂದು ಹಾಕಿದರು. ಈ ಹತ್ಯಾಕಾಂಡದಲ್ಲಿ ಒಂದು ಸಾವಿರಕ್ಕೂ ಅಧಿಕ ಬುಡಕಟ್ಟು ಜನಾಂಗದವರು ತಮ್ಮ ಪ್ರಾಣ ಕಳೆದುಕೊಂಡರೆಂದು ಹೇಳಲಾಗುತ್ತದೆ. ಈ ಬುಡಕಟ್ಟು ಚಳುವಳಿಯ ನೇತೃತ್ವವನ್ನು ಗೋವಿಂದ್ ಗುರು ವಹಿಸಿದ್ದರು, ಇವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುವಂತಹದ್ದಾಗಿದೆ. ನಾನು ಇಂದು ಎಲ್ಲಾ ಬುಡಕಟ್ಟು ಹುತಾತ್ಮರಿಗೆ ಮತ್ತು ಗೋವಿಂದ್ ಗುರು ಅವರ ಅದಮ್ಯ ಸಾಹಸ ಮತ್ತು ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ. ನಾವು ಈ ಅಮೃತ ಕಾಲದಲ್ಲಿ ಭಗವಾನ್ ಬಿರ್ಸಾ ಮುಂಡಾ, ಗೋವಿಂದ್ ಗುರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಎಷ್ಟು ನಿಷ್ಠೆಯಿಂದ ಅನುಸರಿಸುತ್ತೇವೆಯೋ, ನಮ್ಮ ದೇಶ ಅಷ್ಟೇ ಎತ್ತರವನ್ನು ಮುಟ್ಟುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಬರುವ ನವೆಂಬರ್ 8 ರಂದು ಗುರುಪೂರಬ್ ಆಚರಿಸಲಾಗುತ್ತದೆ. ಗುರು ನಾನಕ್ ಅವರ ಪ್ರಕಾಶ್ ಪರ್ವ್ ನಮ್ಮ ನಂಬಿಕೆಗೆ ಎಷ್ಟು ಮಹತ್ವದ್ದೋ ನಮಗೆ ಕಲಿಯಲು ಕೂಡಾ ಅಷ್ಟೇ ದೊರೆಯುತ್ತದೆ. ಗುರು ನಾನಕ್ ದೇವ್ ಅವರು ತಮ್ಮ ಇಡೀ ಜೀವನದಲ್ಲಿ ಮಾನವೀಯತೆಯ ಬೆಳಕನ್ನು ಪಸರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ದೇಶವು, ಗುರುಗಳು ಪಸರಿಸಿದ ಬೆಳಕನ್ನು ಜನತೆಗೆ ತಲುಪಿಸುವುದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. ಗುರು ನಾನಕ್ ದೇವ್ ಅವರ 550 ನೇ ಪ್ರಕಾಶ ಪರ್ವವನ್ನು ದೇಶ ಮತ್ತು ವಿದೇಶಗಳಲ್ಲಿ ವ್ಯಾಪಕವಾಗಿ ಆಚರಿಸುವ ಸೌಭಾಗ್ಯ ದೊರೆತಿತ್ತು. ದಶಕಗಳ ಕಾಯುವಿಕೆಯ ನಂತರ, ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣ ನೋಡುವುದು ಕೂಡಾ ಅಷ್ಟೇ ಆಹ್ಲಾದಕರ. ಕೆಲವು ದಿನಗಳ ಹಿಂದಷ್ಟೇ, ನನಗೆ ಹೇಮಕುಂಡ್ ಸಾಹಿಬ್ ಗಾಗಿ ರೋಪ್ ವೇ ಗಾಗಿ ಅಡಿಗಲ್ಲು ಇಡುವ ಸೌಭಾಗ್ಯ ಕೂಡಾ ದೊರೆತಿತ್ತು. ನಾವು ನಮ್ಮ ಗುರುಗಳ ಚಿಂತನೆಗಳಿಂದ ನಿರಂತರವಾಗಿ ಕಲಿಯುತ್ತಿರಬೇಕು, ಅದಕ್ಕಾಗಿ ಸಮರ್ಪಣಾ ಭಾವ ಹೊಂದಬೇಕು. ಇದೇ ದಿನ ಕಾರ್ತೀಕ ಮಾಸದ ಹುಣ್ಣಿಮೆ ಕೂಡಾ ಆಗಿದೆ. ಈ ದಿನದಂದು ನಾವು ತೀರ್ಥಕ್ಷೇತ್ರಗಳಲ್ಲಿ, ನದಿಗಳಲ್ಲಿ ಸ್ನಾನ ಮಾಡುತ್ತೇವೆ, ಸೇವೆ ಸಲ್ಲಿಸುತ್ತೇವೆ ಮತ್ತು ದಾನ ಮಾಡುತ್ತೇವೆ. ನಾನು ನಿಮ್ಮೆಲ್ಲರಿಗೂ ಈ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ಅನೇಕ ರಾಜ್ಯಗಳು, ತಮ್ಮ ರಾಜ್ಯೋತ್ಸವವನ್ನು ಕೂಡಾ ಆಚರಿಸಲಿವೆ. ಆಂಧ್ರಪ್ರದೇಶ ತಮ್ಮ ಸಂಸ್ಥಾಪನಾ ದಿನ ಆಚರಿಸಲಿದೆ, ಕೇರಳ ಪಿರವಿ ಆಚರಿಸುತ್ತದೆ. ಕರ್ನಾಟಕ ರಾಜ್ಯೋತ್ಸವ ಆಚರಿಸಲಿವೆ. ಇದೇ ರೀತಿ ಮಧ್ಯಪ್ರದೇಶ, ಛತ್ತೀಸ್ ಗಢ್ ಮತ್ತು ಹರಿಯಾಣಾ ಕೂಡಾ ತಮ್ಮ ತಮ್ಮ ರಾಜ್ಯೋತ್ಸವ ಆಚರಿಸಲಿವೆ. ನಾನು ಈ ಎಲ್ಲ ರಾಜ್ಯಗಳ ಜನತೆಗೂ ಶುಭಾಶಯಗಳನ್ನು ಹಾರೈಸುತ್ತೇನೆ. ನಮ್ಮ ಎಲ್ಲಾ ರಾಜ್ಯಗಳಲ್ಲಿ, ಪರಸ್ಪರರಿಂದ ಕಲಿಯುವ, ಸಹಯೋಗ ನೀಡುವ ಮತ್ತು ಒಟ್ಟಾಗಿ ಕೆಲಸ ಮಾಡುವ ಸ್ಫೂರ್ತಿ ಎಷ್ಟು ಬಲಿಷ್ಠವಾಗಿರುತ್ತದೆಯೋ ನಮ್ಮ ದೇಶ ಅಷ್ಟೇ ಪ್ರಗತಿಯಾಗುತ್ತದೆ. ನಾವು ಇದೇ ಭಾವನೆಯೊಂದಿಗೆ ಮುಂದೆ ಸಾಗುತ್ತೇವೆಂಬ ಭರವಸೆ ನನಗಿದೆ. ನೀವೆಲ್ಲರೂ ನಿಮ್ಮ ಬಗ್ಗೆ ಕಾಳಜಿ ವಹಿಸಿ, ಆರೋಗ್ಯದಿಂದಿರಿ. ಮನ್ ಕಿ ಬಾತ್ ನಲ್ಲಿ ಮುಂದಿನ ಭೇಟಿಯವರೆಗೆ ನನಗೆ ಅನುಮತಿ ನೀಡಿ. ನಮಸ್ಕಾರ. ಧನ್ಯವಾದ.
ನನ್ನ ಪ್ರೀತಿಯ ದೇಶವಾಸಿಗಳೇ,
ನಮಸ್ಕಾರ!
ಕಳೆದ ಕೆಲವು ದಿನಗಳಲ್ಲಿ ನಮ್ಮ ಗಮನ ಸೆಳೆದ ವಿಷಯವೆಂದರೆ ಚೀತಾ. ಚೀತಾಗಳ ಬಗ್ಗೆ ಮಾತನಾಡುವಂತೆ ಸಾಕಷ್ಟು ಸಂದೇಶಗಳು ಬಂದಿವೆ. ಉತ್ತರ ಪ್ರದೇಶದ ಅರುಣ್ ಕುಮಾರ್ ಗುಪ್ತಾ ಅಥವಾ ತೆಲಂಗಾಣದ ಎನ್. ರಾಮಚಂದ್ರನ್ ರಘುರಾಮ್, ಗುಜರಾತ್ನ ರಾಜನ್ ಅಥವಾ ದೆಹಲಿಯ ಸುಬ್ರತಾ ಹೀಗೆ ದೇಶದ ಮೂಲೆ ಮೂಲೆಗಳಿಂದ ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದ, ಹೆಮ್ಮೆಯಿಂದ ಬೀಗಿದ್ದಾರೆ; ಇದು ಪ್ರಕೃತಿಯ ಬಗೆಗಿನ ಭಾರತದ ಪ್ರೀತಿ. ಈ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ "ಮೋದಿ ಜೀ, ಚೀತಾಗಳನ್ನು ನೋಡಲು ನಮಗೆ ಯಾವಾಗ ಅವಕಾಶ ಸಿಗುತ್ತದೆ?"
ಸ್ನೇಹಿತರೇ, ಒಂದು ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ವಹಿಸುತ್ತದೆ ಮತ್ತು ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಎಷ್ಟು ಸಮರ್ಥವಾಗಿವೆ ಎಂಬುದನ್ನು ನೋಡಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕೆಲವು ತಿಂಗಳ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು, ನಂತರ ನೀವು ಚೀತಾಗಳನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಅಲ್ಲಿಯವರೆಗೆ ನಿಮ್ಮೆಲ್ಲರಿಗೂ ಒಂದಿಷ್ಟು ಕೆಲಸವನ್ನು ನಿಯೋಜಿಸುತ್ತಿದ್ದೇನೆ. ಇದಕ್ಕಾಗಿ, MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು, ಅದರಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವಂತೆ ನಾನು ಜನರನ್ನು ಕೇಳಿಕೊಳ್ಳುತ್ತೇನೆ. ನಾವು ಚೀತಾಗಳ ಬಗ್ಗೆ ನಡೆಸುತ್ತಿರುವ ಅಭಿಯಾನಕ್ಕೆ ಯಾವ ಹೆಸರಿಡಬಹುದು? ಈ ಎಲ್ಲಾ ಚೀತಾಗಳಿಗೆ ನಾವು ಹೆಸರಿಡುವ ಬಗ್ಗೆ ಯೋಚಿಸಬಹುದೇ ... ಪ್ರತಿಯೊಂದನ್ನೂ ಯಾವ ಹೆಸರಿನಿಂದ ಕರೆಯಬೇಕು? ಅಂದಹಾಗೆ, ಈ ನಾಮಕರಣವು ಸಾಂಪ್ರದಾಯಿಕ ಸ್ವರೂಪದ್ದಾಗಿದ್ದರೆ, ಅದು ತುಂಬಾ ಚೆನ್ನಾಗಿರುತ್ತದೆ, ಏಕೆಂದರೆ ನಮ್ಮ ಸಮಾಜ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಗೆ ಸಂಬಂಧಿಸಿದ ಯಾವುದಾದರೂ ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ. ಅಷ್ಟೇ ಅಲ್ಲ, ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಸಹ ನೀವು ಹಂಚಿಕೊಳ್ಳಬೇಕು! ನಮ್ಮ ಮೂಲಭೂತ ಕರ್ತವ್ಯಗಳಲ್ಲಿಯೂ ಸಹ ಪ್ರಾಣಿಗಳಿಗೆ ಗೌರವ ನೀಡುವ ಬಗ್ಗೆ ಒತ್ತು ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ನೀವೆಲ್ಲರೂ ಭಾಗವಹಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಯಾರಿಗೆ ಗೊತ್ತು… ಚಿರತೆಯನ್ನು ನೋಡುವ ಅವಕಾಶವನ್ನು ಬಹುಮಾನವಾಗಿ ಪಡೆಯುವ ಮೊದಲಿಗರು ನೀವಾಗಬಹುದು!
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸೆಪ್ಟೆಂಬರ್ 25 ರಂದು ದೇಶದ ಅದ್ಭುತ ಮಾನವತಾವಾದಿ, ಚಿಂತಕ ಮತ್ತು ಮಹಾನ್ ಪುತ್ರ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಯುವಕರು ತಮ್ಮ ಗುರುತು ಮತ್ತು ಗೌರವದ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಾರೆ, ಅವರ ಮೂಲ ಕಲ್ಪನೆಗಳು ಮತ್ತು ತತ್ವಗಳು ಅವರನ್ನು ಹೆಚ್ಚು ಆಕರ್ಷಿಸುತ್ತವೆ. ದೀನದಯಾಳ್ ಅವರ ಆಲೋಚನೆಗಳ ದೊಡ್ಡ ವೈಶಿಷ್ಟ್ಯವೆಂದರೆ ಅವರ ತಮ್ಮ ಜೀವಿತಾವಧಿಯಲ್ಲಿ ಪ್ರಪಂಚದ ದೊಡ್ಡ ಕ್ರಾಂತಿಗಳನ್ನು ಕಂಡಿದ್ದಾರೆ. ಅವರು ಸಿದ್ಧಾಂತಗಳ ಹೋರಾಟಗಳಿಗೆ ಸಾಕ್ಷಿಯಾಗಿದ್ದರು. ಆದುದರಿಂದಲೇ ಅವರು ದೇಶದ ಮುಂದೆ ಸಂಪೂರ್ಣ ಭಾರತೀಯವಾಗಿದ್ದ ‘ಏಕಾತ್ಮ ಮಾನವದರ್ಶನ’ ಮತ್ತು ‘ಅಂತ್ಯೋದಯ’ದ ಕಲ್ಪನೆಯನ್ನು ಮುಂದಿಟ್ಟರು. ದೀನದಯಾಳ್ ಅವರ 'ಏಕಾತ್ಮ ಮಾನವದರ್ಶನ'ವು ಸಿದ್ಧಾಂತದ ಕ್ಷೇತ್ರದಲ್ಲಿ ಸಂಘರ್ಷ ಮತ್ತು ಪೂರ್ವಾಗ್ರಹದಿಂದ ಮುಕಿಯನ್ನು ನೀಡುವ ಒಂದು ಕಲ್ಪನೆಯಾಗಿದೆ. ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುವ ಭಾರತೀಯ ತತ್ವವನ್ನು ಅವರು ಮತ್ತೊಮ್ಮೆ ಜಗತ್ತಿಗೆ ಸಾರಿದರು. ನಮ್ಮ ಧರ್ಮಗ್ರಂಥಗಳಲ್ಲಿ 'ಆತ್ಮವತ್ ಸರ್ವಭೂತೇಷು' ಎಂದು ಹೇಳಲಾಗಿದೆ. ಅಂದರೆ, ನಾವು ಜೀವಿಗಳನ್ನು ನಮ್ಮಂತೆಯೇ ಪರಿಗಣಿಸಬೇಕು ಮತ್ತು ಅದೇ ರೀತಿ ನಡೆಸಿಕೊಳ್ಳಬೇಕು. ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿಯೂ ಸಹ ಭಾರತೀಯ ತತ್ವಶಾಸ್ತ್ರವು ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜಿ ನಮಗೆ ಕಲಿಸಿದರು. ಒಂದು ರೀತಿಯಲ್ಲಿ ಸ್ವಾತಂತ್ರ್ಯಾನಂತರ ದೇಶದಲ್ಲಿ ತಲೆದೋರಿದ್ದ ಕೀಳರಿಮೆಯಿಂದ ನಮ್ಮನ್ನು ಮುಕ್ತಗೊಳಿಸಿ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. 'ನಮ್ಮ ಸ್ವಾತಂತ್ರ್ಯವು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ವ್ಯಕ್ತಪಡಿಸಿದಾಗ ಮಾತ್ರ ಅರ್ಥಪೂರ್ಣವಾಗಿರುತ್ತದೆ' ಎಂದು ಅವರು ಹೇಳುತ್ತಿದ್ದರು. ಈ ಚಿಂತನೆಯ ಆಧಾರದ ಮೇಲೆ, ಅವರು ದೇಶದ ಅಭಿವೃದ್ಧಿಗೆ ದೃಷ್ಟಿಕೋನವನ್ನು ನೀಡಿದರು. ದೇಶದ ಪ್ರಗತಿಯ ಅಳತೆಗೋಲು ಅತ್ಯಂತ ಕೆಳಸ್ತರದಲ್ಲಿರುವ ವ್ಯಕ್ತಿಯಾಗಿರುತ್ತಾನೆ ಎಂದು ದೀನದಯಾಳ್ ಉಪಾಧ್ಯಾಯ ಅವರು ಹೇಳುತ್ತಿದ್ದರು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ, ದೀನದಯಾಳ್ ಅವರನ್ನು ನಾವು ಹೆಚ್ಚು ತಿಳಿಯುತ್ತೇವೆ, ಅವರಿಂದ ನಾವು ಹೆಚ್ಚು ಕಲಿಯುತ್ತೇವೆ, ದೇಶವನ್ನು ಮುನ್ನಡೆಸಲು ನಾವು ಹೆಚ್ಚು ಸ್ಫೂರ್ತಿ ಪಡೆಯುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸುತ್ತೇವೆ. ಭಗತ್ ಸಿಂಗ್ ಅವರ ಜನ್ಮದಿನದ ಮುನ್ನವೇ ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ. ಇದು ಬಹಳ ಸಮಯದಿಂದ ಬಾಕಿಯಿತ್ತು. ಈ ನಿರ್ಧಾರಕ್ಕಾಗಿ ನಾನು ಚಂಡೀಗಢ, ಪಂಜಾಬ್ ಮತ್ತು ಹರಿಯಾಣ ಮತ್ತು ಇಡೀ ದೇಶದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆದು, ಅವರ ಆದರ್ಶಗಳನ್ನು ಅನುಸರಿಸೋಣ ಮತ್ತು ಅವರ ಕನಸಿನ ಭಾರತವನ್ನು ನಿರ್ಮಿಸೋಣ… ಇದು ಅವರಿಗೆ ನಾವು ನೀಡುವ ಗೌರವವಾಗಿದೆ. ಹುತಾತ್ಮರ ಹೆಸರಿನ ಸ್ಮಾರಕಗಳು, ಸ್ಥಳಗಳು ಮತ್ತು ಸಂಸ್ಥೆಗಳು ನಮ್ಮಲ್ಲಿ ಕರ್ತವ್ಯ ಪ್ರಜ್ಞೆಯನ್ನು ಪ್ರೇರೇಪಿಸುತ್ತವೆ. ಕೆಲವೇ ದಿನಗಳ ಹಿಂದೆ, ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಇದೇ ರೀತಿಯ ಪ್ರಯತ್ನವನ್ನು ಮಾಡಿದೆ ಮತ್ತು ಈಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡುತ್ತಿರುವುದು ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳನ್ನು ಹೇಗೆ ಆಚರಿಸುತ್ತೇವೆಯೋ ಅದೇ ರೀತಿ ಸೆಪ್ಟೆಂಬರ್ 28 ರಂದು ಪ್ರತಿಯೊಬ್ಬ ಯುವಕರು ಏನಾದೂ ಹೊಸದನ್ನು ಪ್ರಯತ್ನಿಸಬೇಕು ಎಂದು ನಾನು ಬಯಸುತ್ತೇನೆ.
ಅಂದಹಾಗೆ, ನನ್ನ ಪ್ರೀತಿಯ ದೇಶವಾಸಿಗಳೇ, ನೀವೆಲ್ಲರೂ ಸೆಪ್ಟೆಂಬರ್ 28 ಅನ್ನು ಸಂಭ್ರಮಿಸಲು ಇನ್ನೊಂದು ಕಾರಣವಿದೆ. ಅದು ಏನು ಗೊತ್ತಾ? ನಾನು ಕೇವಲ ಎರಡು ಪದಗಳನ್ನು ಹೇಳುತ್ತೇನೆ ಮತ್ತು ನಿಮ್ಮ ಉತ್ಸಾಹವು ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ನನಗೆ ಗೊತ್ತು. ಈ ಎರಡು ಪದಗಳೆಂದರೆ - ಸರ್ಜಿಕಲ್ ಸ್ಟ್ರೈಕ್!
ಜೋಶ್ ಹೆಚ್ಚಾಯಿತು ಅಲ್ಲವೇ!! ನಮ್ಮ ದೇಶದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಪ್ರಚಾರವನ್ನು ತುಂಬ ಉತ್ಸಾಹದಿಂದ ಆಚರಿಸೋಣ, ನಮ್ಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ.
ನನ್ನ ಪ್ರೀತಿಯ ದೇಶವಾಸಿಗಳೇ,ಜೀವನದಲ್ಲಿ ಹೋರಾಟದಿಂದ ಬಂದ ವ್ಯಕ್ತಿಯ ದಾರಿಯಲ್ಲಿ ಯಾವುದೇ ಅಡೆತಡೆಗಳು ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ, ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಕೆಲವು ಸ್ನೇಹಿತರನ್ನು ಸಹ ನಾವು ನೋಡುತ್ತೇವೆ. ಕೇಳಲು ಸಾಧ್ಯವಾಗದ ಅಥವಾ ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅಂತಹ ಸ್ನೇಹಿತರಿಗೆ ದೊಡ್ಡ ಬೆಂಬಲವೆಂದರೆ ಸಂಜ್ಞೆ ಭಾಷೆ. ಆದರೆ ಭಾರತದಲ್ಲಿ ಹಲವು ವರ್ಷಗಳಿಂದ ಒಂದು ದೊಡ್ಡ ಸಮಸ್ಯೆಯೆಂದರೆ, ಯಾವುದೇ ಸ್ಪಷ್ಟ ಸನ್ನೆಗಳಿಲ್ಲ, ಸಂಜ್ಞೆ ಭಾಷೆಗೆ ಯಾವುದೇ ಮಾನದಂಡಗಳಿಲ್ಲ. ಈ ತೊಂದರೆಗಳನ್ನು ನಿವಾರಿಸಲು, 2015 ರಲ್ಲಿ ಭಾರತೀಯ ಸಂಜ್ಞೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಇದುವರೆಗೆ ಹತ್ತು ಸಾವಿರ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ನಿಘಂಟನ್ನು ಸಿದ್ಧಪಡಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಎರಡು ದಿನಗಳ ಹಿಂದೆ ಅಂದರೆ ಸೆಪ್ಟಂಬರ್ 23 ರಂದು, ಸಂಜ್ಞೆ ಭಾಷೆಯ ದಿನದಂದು, ಅನೇಕ ಶಾಲಾ ಕೋರ್ಸ್ಗಳನ್ನು ಸಹ ಸಂಜ್ಞೆ ಭಾಷೆಯಲ್ಲಿ ಪ್ರಾರಂಭಿಸಲಾಗಿದೆ. ಸಂಜ್ಞೆ ಭಾಷೆಗೆ ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಸಂಜ್ಞೆ ಭಾಷೆಯ ನಿಘಂಟಿನ ವೀಡಿಯೋಗಳನ್ನು ಮಾಡುವ ಮೂಲಕವೂ ಅದನ್ನು ಮತ್ತಷ್ಟು ಪ್ರಸಾರ ಮಾಡಲಾಗುತ್ತಿದೆ. ಯೂಟ್ಯೂಬ್ನಲ್ಲಿ, ಅನೇಕ ಜನರು, ಅನೇಕ ಸಂಸ್ಥೆಗಳು, ಭಾರತೀಯ ಸಂಜ್ಞೆ ಭಾಷೆಯಲ್ಲಿ ತಮ್ಮ ಚಾನೆಲ್ಗಳನ್ನು ಪ್ರಾರಂಭಿಸಿದ್ದಾರೆ, ಅಂದರೆ, 7-8 ವರ್ಷಗಳ ಹಿಂದೆ ಸಂಜ್ಞೆ ಭಾಷೆಯ ಕುರಿತು ದೇಶದಲ್ಲಿ ಪ್ರಾರಂಭವಾದ ಅಭಿಯಾನವು ಈಗ ನನ್ನ ಲಕ್ಷಾಂತರ ವಿಶೇಷ ಸಾಮರ್ಥ್ಯದ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತಿದೆ. ಹರಿಯಾಣದ ಪೂಜಾ ಅವರು ಭಾರತೀಯ ಸಂಜ್ಞೆ ಭಾಷೆಯಿಂದ ತುಂಬಾ ಸಂತೋಷವಾಗಿದ್ದಾರೆ. ಈ ಮೊದಲು ಅವರಿಗೆ ತನ್ನ ಮಗನೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ 2018 ರಲ್ಲಿ ಸಂಜ್ಞೆ ಭಾಷೆ ತರಬೇತಿಯನ್ನು ಪಡೆದ ನಂತರ, ತಾಯಿ ಮತ್ತು ಮಗನ ಜೀವನವು ಸುಲಭವಾಗಿದೆ. ಪೂಜಾ ಅವರ ಮಗನೂ ಸಹ ಸಂಜ್ಞೆ ಭಾಷೆಯನ್ನು ಕಲಿತಿದ್ದಾನೆ ಮತ್ತು ಅವನು ಶಾಲೆಯಲ್ಲಿ ಕಥೆ ಹೇಳುವುದರಲ್ಲಿಯೂ ಬಹುಮಾನವನ್ನು ಗೆದ್ದಿದ್ದಾನೆ. ಅದೇ ರೀತಿ ಟಿಂಕಾಜಿಗೆ ಆರು ವರ್ಷದ ಮಗಳಿದ್ದು ಅವಳಿಗೆ ಕಿವಿ ಕೇಳುವುದಿಲ್ಲ. ಟಿಂಕಾಜಿ ತನ್ನ ಮಗಳನ್ನು ಸಂಜ್ಞೆ ಭಾಷೆಯ ಕೋರ್ಸ್ಗೆ ಸೇರಿಸಿದರು. ಆದರೆ ಅವರಿಗೂ ಸಂಜ್ಞೆ ಭಾಷೆ ತಿಳಿದಿರಲಿಲ್ಲ, ಆದ್ದರಿಂದ ಅವರು ತನ್ನ ಮಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಈಗ ಟಿಂಕಾಜಿ ಸಹ ಸಂಜ್ಞೆ ಭಾಷೆಯ ತರಬೇತಿಯನ್ನು ಪಡೆದಿದ್ದಾರೆ. ಈಗ ತಾಯಿ ಮತ್ತು ಮಗಳು ಇಬ್ಬರೂ ಪರಸ್ಪರ ಬಹಳಷ್ಟು ಮಾತನಾಡುತ್ತಾರೆ. ಈ ಪ್ರಯತ್ನಗಳಿಂದ ಕೇರಳದ ಮಂಜು ಅವರು ಕೂಡ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಮಂಜುಗೆ ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ. ಅಷ್ಟೇ ಅಲ್ಲ ಆಕೆಯ ತಂದೆ ತಾಯಿಯರ ಜೀವನದಲ್ಲೂ ಇದೇ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಸಂಜ್ಞೆ ಭಾಷೆ ಇಡೀ ಕುಟುಂಬಕ್ಕೆ ಸಂವಹನ ಸಾಧನವಾಗಿದೆ. ಈಗ ಸ್ವತಃ ಮಂಜು ಅವರು ಸಂಜ್ಞೆ ಭಾಷಾ ಶಿಕ್ಷಕರಾಗಲು ನಿರ್ಧರಿಸಿದ್ದಾರೆ.
ಸ್ನೇಹಿತರೇ, ಭಾರತೀಯ ಸಂಜ್ಞೆ ಭಾಷೆಯ ಬಗ್ಗೆ ಅರಿವು ಹೆಚ್ಚಾಗಲಿ ಎಂದೂ ಸಹ ನಾನು 'ಮನ್ ಕಿ ಬಾತ್' ನಲ್ಲೂ ಈ ಬಗ್ಗೆ ಚರ್ಚಿಸುತ್ತಿದ್ದೇನೆ. ಇದರೊಂದಿಗೆ, ನಮ್ಮ ವಿಶೇಷ ಚೇತನ ಸ್ನೇಹಿತರಿಗೆ ನಾವು ಹೆಚ್ಚು ಹೆಚ್ಚು ಸಹಾಯ ಮಾಡಲು ಸಾಧ್ಯವಾಗುತ್ತದೆ. ಸಹೋದರ ಸಹೋದರಿಯರೇ, ಕೆಲವು ದಿನಗಳ ಹಿಂದೆ, ಬ್ರೈಲ್ ಲಿಪಿಯಲ್ಲಿ ಬರೆದ ಹೇಮಕೋಶ್ನ ಪ್ರತಿ ನನಗೆ ಸಿಕ್ಕಿತು. ಹೇಮಕೋಶ್ ಅಸ್ಸಾಮಿ ಭಾಷೆಯ ಅತ್ಯಂತ ಹಳೆಯ ನಿಘಂಟುಗಳಲ್ಲಿ ಒಂದಾಗಿದೆ. ಇದನ್ನು 19 ನೇ ಶತಮಾನದಲ್ಲಿ ಸಿದ್ಧಪಡಿಸಲಾಯಿತು. ಇದನ್ನು ಖ್ಯಾತ ಭಾಷಾಶಾಸ್ತ್ರಜ್ಞ ಹೇಮಚಂದ್ರ ಬರುವಾ ಅವರು ಸಂಪಾದಿಸಿದ್ದಾರೆ. ಹೇಮಕೋಶ್ನ ಬ್ರೈಲ್ ಆವೃತ್ತಿಯು ಸುಮಾರು 10,000 ಪುಟಗಳನ್ನು ಹೊಂದಿದೆ ಮತ್ತು 15 ಕ್ಕೂ ಹೆಚ್ಚು ಸಂಪುಟಗಳಲ್ಲಿ ಪ್ರಕಟವಾಗಲಿದೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಪದಗಳನ್ನು ಅನುವಾದಿಸಲಾಗಿದೆ. ಈ ಕಠಿಣ ಪ್ರಯತ್ನವನ್ನು ನಾನು ತುಂಬಾ ಪ್ರಶಂಸಿಸುತ್ತೇನೆ. ಅಂತಹ ಪ್ರತಿಯೊಂದು ಪ್ರಯತ್ನವು ನಮ್ಮ ವಿಶೇಷ ಚೇತನ ಸ್ನೇಹಿತರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನವಾಗುತ್ತದೆ. ಇಂದು ಭಾರತವೂ ಪ್ಯಾರಾ ಸ್ಪೋರ್ಟ್ಸ್ನಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಿದೆ. ಅನೇಕ ಕ್ರೀಡಾಕೂಟಗಳಲ್ಲಿ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ತಳಮಟ್ಟದಲ್ಲಿರುವ ವಿಶೇಷ ಸಾಮರ್ಥ್ಯವುಳ್ಳವರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಉತ್ತೇಜಿಸಲು ತೊಡಗಿರುವ ಅನೇಕ ಜನರಿದ್ದಾರೆ. ಇದು ವಿಶೇಷ ಚೇತನರ ಆತ್ಮಸ್ಥೈರ್ಯಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ನಾನು ಸೂರತ್ನ ಅನ್ವಿ ಎಂಬ ಬಾಲಕಿಯನ್ನು ಭೇಟಿಯಾಗಿದ್ದೆ. ಅನ್ವಿ ಮತ್ತು ಅನ್ವಿಯ ಯೋಗದೊಂದಿಗಿನ ನನ್ನ ಭೇಟಿಯು ಎಷ್ಟು ಸ್ಮರಣೀಯವಾಗಿದೆ ಎಂದರೆ 'ಮನ್ ಕಿ ಬಾತ್' ನ ಎಲ್ಲಾ ಕೇಳುಗರಿಗೆ ನಾನು ಅದರ ಬಗ್ಗೆ ಹೇಳಲು ಬಯಸುತ್ತೇನೆ. ಸ್ನೇಹಿತರೇ, ಅನ್ವಿ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದ್ದಾಳೆ ಮತ್ತು ಅವಳು ಬಾಲ್ಯದಿಂದಲೂ ಗಂಭೀರ ಹೃದಯ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾಳೆ. ಅವಳು ಕೇವಲ ಮೂರು ತಿಂಗಳ ಮಗುವಾಗಿದ್ದಾಗ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಅನ್ವಿಯಾಗಲಿ, ಆಕೆಯ ತಂದೆ ತಾಯಿಯಾಗಲಿ ಹತಾಶರಾಗಲಿಲ್ಲ. ಅನ್ವಿಯ ಪೋಷಕರು ಡೌನ್ ಸಿಂಡ್ರೋಮ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ನಂತರ ಅನ್ವಿ ಇತರರ ಮೇಲೆ ಅವಲಂಬಿತಳಾಗುವುದನ್ನು ಕಡಿಮೆ ಮಾಡುವ ಮಾರ್ಗವನ್ನು ಹುಡುಕಿದರು. ಅವರು ಅನ್ವಿಗೆ ನೀರಿನ ಲೋಟ ಎತ್ತುವುದು ಹೇಗೆ, ಶೂ ಲೇಸ್ ಕಟ್ಟುವುದು ಹೇಗೆ, ಬಟ್ಟೆಗಳ ಗುಂಡಿ ಹಾಕುವುದು ಹೇಗೆ ಎಂಬಂತಹ ಸಣ್ಣ ವಿಷಯಗಳ ಬಗ್ಗೆ ಕಲಿಸಲು ಪ್ರಾರಂಭಿಸಿದರು. ಯಾವ ವಸ್ತುವಿಗೆ ಯಾವುದು ಸೂಕ್ತವಾದ ಸ್ಥಳ, ಒಳ್ಳೆಯ ಅಭ್ಯಾಸಗಳು ಯಾವುವು, ಇವೆಲ್ಲವನ್ನೂ ಅನ್ವಿಗೆ ಬಹಳ ತಾಳ್ಮೆಯಿಂದ ಕಲಿಸಲು ಪ್ರಯತ್ನಿಸಿದರು. ಮಗಳು ಅನ್ವಿ ಕಲಿಯುವ ಇಚ್ಛಾಶಕ್ತಿ ತೋರಿದ ರೀತಿ, ಪ್ರತಿಭೆ ಪ್ರದರ್ಶಿಸಿದ ರೀತಿಗೆ ಪೋಷಕರ ಪ್ರೋತ್ಸಾಹವೂ ಸಿಕ್ಕಿತು. ಅವರು ಅನ್ವಿಗೆ ಯೋಗ ಕಲಿಯಲು ಪ್ರೇರೇಪಿಸಿದರು. ಸಮಸ್ಯೆ ತುಂಬಾ ಗಂಭೀರವಾಗಿತ್ತು, ಅನ್ವಿಗೆ ತನ್ನ ಕಾಲಿನ ಮೇಲೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ... ಅಂತಹ ಪರಿಸ್ಥಿತಿಯಲ್ಲಿ, ಆಕೆಯ ಪೋಷಕರು ಅನ್ವಿಗೆ ಯೋಗವನ್ನು ಕಲಿಯಲು ಪ್ರೇರೇಪಿಸಿದರು. ಮೊಟ್ಟಮೊದಲ ಬಾರಿಗೆ ಯೋಗ ತರಬೇತುದಾರನ ಬಳಿಗೆ ಹೋದಾಗ, ಈ ಮುಗ್ಧ ಹುಡುಗಿ ಯೋಗ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ತರಬೇತುದಾರರಿಗೂ ಇತ್ತು! ಆದರೆ ಆ ತರಬೇತುದಾರರಿಗೂ ಬಹುಶಃ ಅನ್ವಿಯ ದೃಢತೆ ಬಗ್ಗೆ ತಿಳಿದಿರಲಿಲ್ಲ. ತನ್ನ ತಾಯಿಯೊಂದಿಗೆ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ ಆಕೆ ಈಗ ಯೋಗದಲ್ಲಿ ಪರಿಣತಳಾಗಿದ್ದಾಳೆ. ಇಂದು ಅನ್ವಿ ದೇಶಾದ್ಯಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾಳೆ. ಅನ್ವಿಗೆ ಯೋಗ ಹೊಸ ಜೀವನ ನೀಡಿದೆ. ಅನ್ವಿ ಯೋಗವನ್ನು ಮೈಗೂಡಿಸಿಕೊಂಡರು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರು. ಯೋಗವು ಅನ್ವಿಯ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿದೆ ಎಂದು ಅನ್ವಿಯ ಪೋಷಕರು ನನಗೆ ಹೇಳಿದರು. ಈಗ ಅವರ ಆತ್ಮವಿಶ್ವಾಸವು ಹೆಚ್ಚಾಗಿದೆ. ಯೋಗವು ಅನ್ವಿಯ ದೈಹಿಕ ಆರೋಗ್ಯವನ್ನು ಸುಧಾರಿಸಿದೆ ಮತ್ತು ಔಷಧಿಗಳ ಅಗತ್ಯವನ್ನೂ ಕಡಿಮೆ ಮಾಡಿದೆ. ದೇಶ-ವಿದೇಶಗಳಲ್ಲಿ 'ಮನ್ ಕಿ ಬಾತ್' ಕೇಳುಗರು ಯೋಗದಿಂದ ಅನ್ವಿಗೆ ಆಗಿರುವ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಯೋಗದ ಶಕ್ತಿಯನ್ನು ಪರೀಕ್ಷಿಸಲು ಬಯಸುವವರಿಗೆ ಅನ್ವಿ ಉತ್ತಮ ಕೇಸ್ ಸ್ಟಡಿ ಎಂದು ನಾನು ಭಾವಿಸುತ್ತೇನೆ. ಅಂತಹ ವಿಜ್ಞಾನಿಗಳು ಅನ್ವಿಯ ಯಶಸ್ಸಿನ ಆಧಾರದ ಮೇಲೆ ಅಧ್ಯಯನಗಳಿಗೆ ಮುಂದಾಗಬೇಕು ಮತ್ತು ಯೋಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಬೇಕು. ಅಂತಹ ಯಾವುದೇ ಸಂಶೋಧನೆಯು ಪ್ರಪಂಚದಾದ್ಯಂತ ಡೌನ್ ಸಿಂಡ್ರೋಮ್ನಿಂದ ಪೀಡಿತ ಮಕ್ಕಳಿಗೆ ಉತ್ತಮ ಪ್ರಯೋಜನ ನೀಡಬಹುದು. ಈಗ, ಯೋಗವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಬಹಳ ಪರಿಣಾಮಕಾರಿ ಎಂದು ಜಗತ್ತು ಒಪ್ಪಿಕೊಂಡಿದೆ. ವಿಶೇಷವಾಗಿ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಯೋಗವು ಬಹಳಷ್ಟು ಸಹಾಯ ಮಾಡುತ್ತದೆ. ಯೋಗದ ಅಂತಹ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಿರ್ಧರಿಸಿತು. ಇದೀಗ ವಿಶ್ವಸಂಸ್ಥೆಯು ಭಾರತದ ಮತ್ತೊಂದು ಪ್ರಯತ್ನವನ್ನು ಗುರುತಿಸಿ ಗೌರವಿಸಿದೆ. ಇದು 2017 ರಲ್ಲಿ ಪ್ರಾರಂಭವಾದ ಪ್ರಯತ್ನವಾಗಿದೆ, ಅದುವೇ "ಭಾರತದ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮ". ಇದರ ಅಡಿಯಲ್ಲಿ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷಾಂತರ ಜನರು ಸರ್ಕಾರಿ ಕ್ಷೇಮ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಉಪಕ್ರಮವು ಅಂತರರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆದ ರೀತಿ ಅಭೂತಪೂರ್ವವಾಗಿದೆ. ಚಿಕಿತ್ಸೆ ಪಡೆದ ಅರ್ಧದಷ್ಟು ಮಂದಿಯಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರುವುದು ನಮಗೆಲ್ಲರಿಗೂ ಉತ್ತೇಜನದ ಸಂಗತಿಯಾಗಿದೆ. ಈ ಉಪಕ್ರಮಕ್ಕಾಗಿ ಶ್ರಮಿಸುತ್ತಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ, ಅವರು ತಮ್ಮ ಅವಿರತ ಪರಿಶ್ರಮದಿಂದ ಇದನ್ನು ಯಶಸ್ವಿಗೊಳಿಸಿದ್ದಾರೆ.
ಸ್ನೇಹಿತರೇ, ಮಾನವ ಜೀವನದ ವಿಕಾಸದ ಪ್ರಯಾಣವು ನಿರಂತರವಾಗಿ ನೀರಿನೊಂದಿಗೆ ಸಂಪರ್ಕ ಹೊಂದಿದೆ - ಅದು ಸಮುದ್ರಗಳಾಗಿರಬಹುದು, ನದಿ ಅಥವಾ ಕೆರೆಕಟ್ಟೆಗಳಾಗಿರಬಹುದು. ಏಳೂವರೆ ಸಾವಿರ ಕಿಲೋಮೀಟರ್ (7500 ಕಿ.ಮೀ) ಗಿಂತ ಹೆಚ್ಚು ಉದ್ದದ ಕಡಲತೀರದ ಕಾರಣದಿಂದಾಗಿ ಸಮುದ್ರದೊಂದಿಗಿನ ನಮ್ಮ ಬಾಂಧವ್ಯವು ಅವಿನಾಭಾವವಾಗಿ ಉಳಿದುಕೊಂಡಿರುವುದು ಭಾರತದ ಅದೃಷ್ಟವಾಗಿದೆ. ಈ ಕರಾವಳಿಯು ಅನೇಕ ರಾಜ್ಯಗಳು ಮತ್ತು ದ್ವೀಪಗಳ ಮೂಲಕ ಹಾದುಹೋಗುತ್ತದೆ. ವಿವಿಧ ಸಮುದಾಯಗಳು ಮತ್ತು ವೈವಿಧ್ಯತೆಯಿಂದ ಕೂಡಿರುವ ಇಲ್ಲಿ ಭಾರತದ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ ಈ ಕರಾವಳಿ ಪ್ರದೇಶಗಳ ತಿನಿಸುಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಈ ಆಸಕ್ತಿದಾಯಕ ಸಂಗತಿಗಳ ಜೊತೆಗೆ, ಬೇಸರದ ವಿಷಯವೂ ಇದೆ. ನಮ್ಮ ಈ ಕರಾವಳಿ ಪ್ರದೇಶಗಳು ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಹವಾಮಾನ ಬದಲಾವಣೆಯು ಸಾಗರ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಬೆದರಿಕೆಯಾಗಿದೆ. ಮತ್ತೊಂದೆಡೆ, ನಮ್ಮ ಕಡಲತೀರಗಳಲ್ಲಿ ಹರಡಿರುವ ಕಸವು ಆತಂಕವನ್ನುಂಟುಮಾಡುತ್ತದೆ. ಈ ಸವಾಲುಗಳಿಗೆ ಗಂಭೀರ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇಲ್ಲಿ ನಾನು ದೇಶದ ಕರಾವಳಿ ಪ್ರದೇಶಗಳಲ್ಲಿ ಕಡಲತೀರದ ಸ್ವಚ್ಛತೆಯ ಬಗ್ಗೆ ಮಾತನಾಡಲು ಬಯಸುತ್ತೇನೆ 'ಸ್ವಚ್ಛ ಸಾಗರ-ಸುರಕ್ಷಿತ ಸಾಗರ'. ಜುಲೈ 5 ರಂದು ಪ್ರಾರಂಭವಾದ ಈ ಅಭಿಯಾನವು ವಿಶ್ವಕರ್ಮ ಜಯಂತಿಯ ದಿನವಾದ ಸೆಪ್ಟೆಂಬರ್ 17 ರಂದು ಮುಕ್ತಾಯಗೊಂಡಿತು. ಅಂದು ಕರಾವಳಿ ಸ್ವಚ್ಛತಾ ದಿನವೂ ಆಗಿತ್ತು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಆರಂಭವಾದ ಈ ಅಭಿಯಾನ 75 ದಿನಗಳ ಕಾಲ ನಡೆಯಿತು. ಇದರಲ್ಲಿ ಸಾರ್ವಜನಿಕರು ಭಾಗವಹಿಸಿದ್ದು ಕಣ್ಮನ ಸೆಳೆಯುವಂತಿತ್ತು. ಈ ಪ್ರಯತ್ನದ ಸಮಯದಲ್ಲಿ, ಇಡೀ ಎರಡೂವರೆ ತಿಂಗಳ ಕಾಲ ಅನೇಕ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಂಡುಬಂದವು. ಗೋವಾದಲ್ಲಿ ಸುದೀರ್ಘ ಮಾನವ ಸರಪಳಿ ನಿರ್ಮಿಸಲಾಯಿತು. ಕಾಕಿನಾಡದಲ್ಲಿ ಗಣಪತಿ ವಿಸರ್ಜನೆಯ ವೇಳೆ ಪ್ಲಾಸ್ಟಿಕ್ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲಾಯಿತು. ಎನ್ಎಸ್ಎಸ್ನ ಸುಮಾರು 5000 ಯುವ ಸ್ನೇಹಿತರು 30 ಟನ್ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿದರು. ಒಡಿಶಾದಲ್ಲಿ ಮೂರು ದಿನಗಳಲ್ಲಿ, 20 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಸಾಗರ-ಸುರಕ್ಷಿತ ಸಾಗರ ಉಪಕ್ರಮಕ್ಕಾಗಿ ತಮ್ಮ ಕುಟುಂಬ ಮತ್ತು ಇತರರನ್ನು ಪ್ರೇರೇಪಿಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ.
ನಾನು ಚುನಾಯಿತ ಪ್ರತಿನಿಧಿಗಳೊಂದಿಗೆ, ವಿಶೇಷವಾಗಿ ನಗರಗಳ ಮೇಯರ್ಗಳು ಮತ್ತು ಗ್ರಾಮಗಳ ಸರಪಂಚರೊಂದಿಗೆ ಸಂವಾದ ನಡೆಸಿದಾಗ, ಸ್ಥಳೀಯ ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛತೆಯಂತಹ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳುವಂತೆ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸುತ್ತೇನೆ.
ಬೆಂಗಳೂರಿನಲ್ಲಿ ಯೂತ್ ಫಾರ್ ಪರಿವರ್ತನ್ ಎಂಬ ಒಂದು ತಂಡವಿದೆ. ಕಳೆದ ಎಂಟು ವರ್ಷಗಳಿಂದ ಈ ತಂಡವು ಸ್ವಚ್ಛತೆ ಮತ್ತು ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ. ಅವರ ಧ್ಯೇಯವಾಕ್ಯವು ತುಂಬಾ ಸ್ಪಷ್ಟವಾಗಿದೆ - 'ದೂರುವುದನ್ನು ನಿಲ್ಲಿಸಿ, ಕೆಲಸ ಆರಂಭಿಸಿ'. ಈ ತಂಡ ಇದುವರೆಗೆ ನಗರದಾದ್ಯಂತ 370ಕ್ಕೂ ಹೆಚ್ಚು ಸ್ಥಳಗಳನ್ನು ಸುಂದರಗೊಳಿಸಿದೆ. ಯೂತ್ ಫಾರ್ ಪರಿವರ್ತನ್ ಅಭಿಯಾನವು ಪ್ರತಿ ಸ್ಥಳದಲ್ಲಿ 100 ರಿಂದ 150 ನಾಗರಿಕರನ್ನು ಸಂಪರ್ಕಿಸಿದೆ. ಪ್ರತಿ ಭಾನುವಾರ ಈ ಕಾರ್ಯಕ್ರಮವು ಬೆಳಿಗ್ಗೆ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ಮುಂದುವರಿಯುತ್ತದೆ. ಈ ಕಾರ್ಯದಲ್ಲಿ ಕಸ ಎತ್ತುವುದಷ್ಟೇ ಅಲ್ಲ, ಗೋಡೆಗಳಿಗೆ ಬಣ್ಣ ಬಳಿಯುವ, ಕಲಾತ್ಮಕ ರೇಖಾಚಿತ್ರಗಳನ್ನು ಬಿಡಿಸುವ ಕೆಲಸವೂ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ, ನೀವು ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಮತ್ತು ಅವರ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಸಹ ನೋಡಬಹುದು. ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಪ್ರಯತ್ನದ ನಂತರ, ಮೀರತ್ನ 'ಕಬಾದ್ ಸೆ ಜುಗಾದ್' ಅಭಿಯಾನದ ಬಗ್ಗೆಯೂ ಹೇಳಬೇಕು. ಈ ಅಭಿಯಾನವು ಪರಿಸರ ಸಂರಕ್ಷಣೆ ಹಾಗೂ ನಗರದ ಸುಂದರೀಕರಣಕ್ಕೆ ಸಂಬಂಧಿಸಿದ್ದು. ಈ ಅಭಿಯಾನದ ವಿಶೇಷವೆಂದರೆ, ಇದರಲ್ಲಿ ಕಬ್ಬಿಣದ ಗುಜರಿ ವಸ್ತು, ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಟೈರ್ ಮತ್ತು ಡ್ರಮ್ಗಳಂತಹ ತ್ಯಾಜ್ಯವನ್ನು ಬಳಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೇಗೆ ಸುಂದರಗೊಳಿಸಬಹುದು ಎಂಬುದಕ್ಕೆ ಈ ಅಭಿಯಾನವೂ ಒಂದು ಉದಾಹರಣೆಯಾಗಿದೆ. ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ದೇಶದಾದ್ಯಂತ ಹಬ್ಬದ ಉತ್ಸಾಹವಿದೆ. ನಾಳೆ ನವರಾತ್ರಿಯ ಮೊದಲ ದಿನ. ಇದರಲ್ಲಿ ದೇವಿಯ ಮೊದಲ ಅವತಾರ 'ಮಾತೆ ಶೈಲಪುತ್ರಿ'ಯನ್ನು ಪೂಜಿಸುತ್ತೇವೆ. ಇಲ್ಲಿಂದ ಒಂಬತ್ತು ದಿನ ಸ್ವಯಂ ಶಿಸ್ತು, ಸಂಯಮ, ಉಪವಾಸವಿರುತ್ತದೆ, ನಂತರ ವಿಜಯದಶಮಿ ಹಬ್ಬವೂ ಇರುತ್ತದೆ. ಒಂದು ರೀತಿಯಲ್ಲಿ ನೋಡಿದರೆ ನಮ್ಮ ಹಬ್ಬಗಳಲ್ಲಿ ನಂಬಿಕೆ ಮತ್ತು ಅಧ್ಯಾತ್ಮದ ಜೊತೆಗೆ ಗಹನವಾದ ಸಂದೇಶ ಅಡಗಿರುವುದೂ ತಿಳಿಯುತ್ತದೆ. ಶಿಸ್ತು ಮತ್ತು ಸಂಯಮದ ಮೂಲಕ ‘ಸಿದ್ಧಿ’ಯನ್ನು ಸಾಧಿಸಿ, ನಂತರ ವಿಜಯೋತ್ಸವದ ಹಬ್ಬ, ಅದು ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸುವ ಮಾರ್ಗವಾಗಿದೆ. ದಸರಾ ನಂತರ, ಧನ್ತೆರೇಸ್ ಮತ್ತು ದೀಪಾವಳಿ ಹಬ್ಬಗಳು ಬರುತ್ತವೆ.
ಸ್ನೇಹಿತರೇ, ಕಳೆದ ಕೆಲವು ವರ್ಷಗಳಲ್ಲಿ, ದೇಶದ ಹೊಸ ಸಂಕಲ್ಪವೂ ನಮ್ಮ ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ನಿಮಗೆಲ್ಲ ಗೊತ್ತೇ ಇದೆ, ಇದು 'ವೋಕಲ್ ಫಾರ್ ಲೋಕಲ್'ನ ಸಂಕಲ್ಪ. ನಾವು ಈಗ ನಮ್ಮ ದೇಶೀಯ ಕುಶಲಕರ್ಮಿಗಳು, ಕಸುಬುದಾರರು ಮತ್ತು ವ್ಯಾಪಾರಿಗಳನ್ನು ಹಬ್ಬದ ಸಂತೋಷದಲ್ಲಿ ಸೇರಿಸಿಕೊಳ್ಳುತ್ತೇವೆ. ಅಕ್ಟೋಬರ್ 2 ರಂದು ಬಾಪು ಅವರ ಜನ್ಮದಿನದ ಸಂದರ್ಭದಲ್ಲಿ ನಾವು ಈ ಅಭಿಯಾನವನ್ನು ತೀವ್ರಗೊಳಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಖಾದಿ, ಕೈಮಗ್ಗ, ಕರಕುಶಲ ವಸ್ತುಗಳು...ಈ ಎಲ್ಲಾ ಉತ್ಪನ್ನಗಳ ಜೊತೆಗೆ, ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಬೇಕು. ಅಷ್ಟಕ್ಕೂ, ಈ ಹಬ್ಬದ ನಿಜವಾದ ಸಂತೋಷವಿರುವುದು ಎಲ್ಲರೂ ಅದರ ಭಾಗವಾದಾಗ ಮಾತ್ರ. ಆದ್ದರಿಂದ, ಸ್ಥಳೀಯ ಉತ್ಪನ್ನಗಳ ಕೆಲಸಕ್ಕೆ ಸಂಬಂಧಿಸಿದ ಜನರನ್ನು ನಾವು ಬೆಂಬಲಿಸಬೇಕು. ಹಬ್ಬದ ಸಮಯದಲ್ಲಿ ನಾವು ನೀಡುವ ಯಾವುದೇ ಉಡುಗೊರೆಗಳಲ್ಲಿ ಈ ರೀತಿಯ ಉತ್ಪನ್ನಗಳು ಇರುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಈಗ, ಈ ಅಭಿಯಾನವು ವಿಶೇಷವಾಗಿದೆ ಏಕೆಂದರೆ ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ, ನಾವು ಸಹ ಸ್ವಾವಲಂಬಿ ಭಾರತದ ಗುರಿಯೊಂದಿಗೆ ಮುಂದುವರಿಯುತ್ತೇವೆ. ಇದು ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವವಾಗಿದೆ. ಅದಕ್ಕಾಗಿಯೇ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಯಲ್ಲಿ ಈ ಬಾರಿ ಎಲ್ಲಾ ದಾಖಲೆಗಳನ್ನು ಮುರಿಯಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ. ಹಬ್ಬ ಹರಿದಿನಗಳಲ್ಲಿ ಪ್ಯಾಕಿಂಗ್ ಮತ್ತು ಪ್ಯಾಕೇಜಿಂಗ್ಗೆ ಪಾಲಿಥಿನ್ ಚೀಲಗಳನ್ನು ಹೆಚ್ಚಾಗಿ ಬಳಸುವುದನ್ನು ನಾವು ನೋಡಿದ್ದೇವೆ. ಶುಚಿತ್ವ ಕಾಪಾಡಬೇಕಾದ ಹಬ್ಬ ಹರಿದಿನಗಳಲ್ಲಿ ಪಾಲಿಥಿನ್ನಂತಹ ಹಾನಿಕಾರಕ ಕಸ ನಮ್ಮ ಹಬ್ಬಗಳ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ, ನಾವು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ಯೇತರ ಚೀಲಗಳನ್ನು ಮಾತ್ರ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರಿನಿಂದ ಮಾಡಿದ ಹಲವು ಸಾಂಪ್ರದಾಯಿಕ ಚೀಲಗಳ ಟ್ರೆಂಡ್ ಮತ್ತೊಮ್ಮೆ ಹೆಚ್ಚುತ್ತಿದೆ. ಹಬ್ಬ ಹರಿದಿನಗಳಲ್ಲಿ ಅವುಗಳನ್ನು ಪ್ರೋತ್ಸಾಹಿಸುವುದು, ಸ್ವಚ್ಛತೆಯ ಜೊತೆಗೆ ನಮ್ಮ ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಪರಹಿತ್ ಸರಿಸ್ ಧರಮ್ ನಹೀ ಭಾಯಿ' ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಅಂದರೆ ಇತರರಿಗೆ ಉಪಕಾರ ಮಾಡುವುದು, ಪರರ ಸೇವೆ ಮಾಡುವುದು, ದಾನ ಮಾಡುವುದಕ್ಕಿಂತ ಬೇರೆ ಧರ್ಮ ಇನ್ನೊಂದಿಲ್ಲ. ಇತ್ತೀಚಿಗೆ ದೇಶದಲ್ಲಿ ಈ ಸಮಾಜ ಸೇವಾ ಮನೋಭಾವದ ಮತ್ತೊಂದು ಝಲಕ್ ಕಾಣಿಸಿದೆ. ಜನರು ಮುಂದೆ ಬಂದು ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳುತ್ತಿರುವುದನ್ನು ಮತ್ತು ಪೌಷ್ಟಿಕಾಂಶದ ಆಹಾರವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಿರುವುದನ್ನು ನೀವು ನೋಡಿರಬೇಕು ವಾಸ್ತವವಾಗಿ, ಇದು ಕ್ಷಯ ಮುಕ್ತ ಭಾರತ ಅಭಿಯಾನದ ಒಂದು ಭಾಗವಾಗಿದೆ, ಇದರ ಆಧಾರವೇ ಸಾರ್ವಜನಿಕ ಭಾಗವಹಿಸುವಿಕೆಯಾಗಿದೆ; ಕರ್ತವ್ಯ ಪ್ರಜ್ಞೆ. ಸರಿಯಾದ ಪೋಷಣೆಯೊಂದಿಗೆ, ಸರಿಯಾದ ಸಮಯದಲ್ಲಿ ಸರಿಯಾದ ಔಷಧಿಗಳೊಂದಿಗೆ ಕ್ಷಯಯನ್ನು ಗುಣಪಡಿಸಲು ಸಾಧ್ಯವಿದೆ. ಸಾರ್ವಜನಿಕ ಸಹಭಾಗಿತ್ವದ ಈ ಶಕ್ತಿಯಿಂದ ಭಾರತವು 2025 ರ ವೇಳೆಗೆ ಖಂಡಿತವಾಗಿಯೂ ಕ್ಷಯ ರೋಗದಿಂದ ಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿದೆ.
ಸ್ನೇಹಿತರೇ, ದಾದ್ರಾ-ನಗರ ಹವೇಲಿ ಮತ್ತು ದಮನ್-ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲೂ ಇಂತಹ ಹೃದಯಸ್ಪರ್ಶಿ ಉದಾಹರಣೆಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಜಿನು ರಾವತಿಯಾ ಅವರು, ಗ್ರಾಮ ದತ್ತು ಕಾರ್ಯಕ್ರಮದ ಅಡಿಯಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು 50 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರೆ. ಇದು ಜಿನು ಅವರ ಗ್ರಾಮವನ್ನು ಸಹ ಒಳಗೊಂಡಿದೆ. ಈ ವೈದ್ಯಕೀಯ ವಿದ್ಯಾರ್ಥಿಗಳು ಅನಾರೋಗ್ಯದಿಂದ ದೂರವಿರುವ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸುತ್ತಾರೆ, ಚೇತರಿಸಿಕೊಳ್ಳಲು ಸಹಾಯ ಮಾಡುತ್ತಾರೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಪರೋಪಕಾರದ ಮನೋಭಾವವು ಹಳ್ಳಿಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತಂದಿದೆ. ಈ ಪ್ರಯತ್ನಕ್ಕಾಗಿ ನಾನು ವೈದ್ಯಕೀಯ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ವಿವಿಧ ಹೊಸ ವಿಷಯಗಳು ಚರ್ಚೆಯಾಗುತ್ತಿವೆ. ಅನೇಕ ಬಾರಿ, ಈ ಕಾರ್ಯಕ್ರಮದ ಮೂಲಕ, ಕೆಲವು ಹಳೆಯ ವಿಷಯಗಳ ಆಳವನ್ನು ತಿಳಿಯುವ ಅವಕಾಶವೂ ನಮಗೆ ಸಿಗುತ್ತದೆ. ಕಳೆದ ತಿಂಗಳು 'ಮನ್ ಕಿ ಬಾತ್' ನಲ್ಲಿ, ನಾನು ಸಿರಿಧಾನ್ಯಗಳ ಬಗ್ಗೆ ಮತ್ತು 2023 ರ ವರ್ಷವನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ' ಎಂದು ಆಚರಿಸುವ ಬಗ್ಗೆ ಚರ್ಚಿಸಿದ್ದೆ. ಜನರು ಈ ವಿಷಯದ ಬಗ್ಗೆ ಬಹಳ ಕುತೂಹಲಿಗಳಾಗಿದ್ದಾರೆ. ಅಂತಹ ಹಲವಾರು ಪತ್ರಗಳು ನನಗೆ ಬಂದಿವೆ, ಅದರಲ್ಲಿ ಜನರು ಸಿರಿಧಾನ್ಯವನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಂಡಿರುವ ಬಗ್ಗೆ ಬರೆದಿದ್ದಾರೆ. ಕೆಲವರು ಸಿರಿಧಾನ್ಯದಿಂದ ಮಾಡಿದ ಸಾಂಪ್ರದಾಯಿಕ ತಿನಿಸುಗಳ ಬಗ್ಗೆಯೂ ಹೇಳಿದ್ದಾರೆ. ಇವು ದೊಡ್ಡ ಬದಲಾವಣೆಯ ಲಕ್ಷಣಗಳಾಗಿವೆ. ಜನರ ಈ ಉತ್ಸಾಹವನ್ನು ನೋಡಿ, ನಾವು ಒಟ್ಟಾಗಿ ಇ-ಪುಸ್ತಕವೊಂದನ್ನು ಸಿದ್ಧಪಡಿಸಬೇಕು ಎಂದು ನಾನು ಭಾವಿಸುತ್ತೇನೆ, ಅದರಲ್ಲಿ ಜನರು ತಮ್ಮ ಅನುಭವಗಳನ್ನು ಮತ್ತು ಸಿರಿಧಾನ್ಯಗಳಿಂದ ಮಾಡಿದ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು, ಆದ್ದರಿಂದ, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಪ್ರಾರಂಭವಾಗುವ ಮೊದಲು, ನಾವು ಸಾರ್ವಜನಿಕ ವಿಶ್ವಕೋಶವನ್ನು ಹೊಂದಿರುತ್ತೇವೆ. ಅದನ್ನು MyGov ಪೋರ್ಟಲ್ನಲ್ಲಿ ಪ್ರಕಟಿಸಬಹುದಾಗಿದೆ.
ಸ್ನೇಹಿತರೇ, ಈ ಬಾರಿಯ 'ಮನ್ ಕಿ ಬಾತ್' ಇಲ್ಲಿಗೆ ಮಗಿಯಿತು. ಆದರೆ ನಾನು ಹೊರಡುವ ಮೊದಲು, ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆಯೂ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್ 29 ರಿಂದ ಗುಜರಾತ್ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇದು ಬಹಳ ವಿಶೇಷವಾದ ಸಂದರ್ಭ, ಏಕೆಂದರೆ ಹಲವು ವರ್ಷಗಳ ನಂತರ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ಕ್ರೀಡಾಕೂಟಗಳನ್ನು ರದ್ದುಗೊಳಿಸಬೇಕಾಯಿತು. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ನನ್ನ ಶುಭಾಶಯಗಳು. ಆಟಗಾರರ ಉತ್ಸಾಹವನ್ನು ಹೆಚ್ಚಿಸಲು, ಅಂದು ನಾನು ಅವರ ಮಧ್ಯೆ ಇರುತ್ತೇನೆ. ನೀವೆಲ್ಲರೂ ರಾಷ್ಟ್ರೀಯ ಕ್ರೀಡಾಕೂಟವನ್ನು ನೋಡಬೇಕು ಮತ್ತು ನಮ್ಮ ಆಟಗಾರರನ್ನು ಪ್ರೋತ್ಸಾಹಿಸಬೇಕು. ನಾನೀಗ ತೆರಳುತ್ತಿದ್ದೇನೆ. ಮುಂದಿನ ತಿಂಗಳು 'ಮನ್ ಕಿ ಬಾತ್' ನಲ್ಲಿ ಹೊಸ ವಿಷಯಗಳೊಂದಿಗೆ ನಾವು ಮತ್ತೆ ಭೇಟಿಯಾಗೋಣ.
ಧನ್ಯವಾದಗಳು,
ನಮಸ್ಕಾರ!
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ!
ಈ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಎಲ್ಲಾ ಪತ್ರಗಳು, ಸಂದೇಶಗಳು ಮತ್ತು ಕಾರ್ಡ್ ಗಳು ನನ್ನ ಕಛೇರಿಯನ್ನು ತ್ರಿವರ್ಣ ಧ್ವಜದ ಬಣ್ಣದಲ್ಲಿ ತೋಯಿಸಿವೆ. ತ್ರಿವರ್ಣ ಧ್ವಜ ಚಿತ್ರವನ್ನು ಹೊಂದಿರದ ಅಥವಾ ತ್ರಿವರ್ಣ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡದ ಯಾವುದೇ ಪತ್ರವನ್ನು ನಾನು ನೋಡಿಲ್ಲ. ಮಕ್ಕಳು ಮತ್ತು ಯುವ ಸ್ನೇಹಿತರು ಅಮೃತ ಮಹೋತ್ಸವದಲ್ಲಿ ಸುಂದರವಾದ ಚಿತ್ರಗಳು ಮತ್ತು ಕಲಾಕೃತಿಗಳನ್ನು ಕಳುಹಿಸಿದ್ದಾರೆ. ಸ್ವಾತಂತ್ರ್ಯದ ಸಂಭ್ರಮದ ಈ ತಿಂಗಳಲ್ಲಿ ನಮ್ಮ ಇಡೀ ದೇಶದಲ್ಲಿ, ಪ್ರತಿ ನಗರದಲ್ಲಿ, ಪ್ರತಿ ಹಳ್ಳಿಯಲ್ಲಿ ಅಮೃತ ಮಹೋತ್ಸವದ ಅಮೃತಧಾರೆ ಹರಿಯುತ್ತಿದೆ. ಅಮೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ, ನಾವು ದೇಶದ ಸಾಮೂಹಿಕ ಶಕ್ತಿಯನ್ನು ನೋಡಿದ್ದೇವೆ. ಸಾಕ್ಷಾತ್ಕಾರದ ಪ್ರಜ್ಞೆ ಬಂದಿದೆ. ಇಷ್ಟು ದೊಡ್ಡ ದೇಶ, ಹಲವು ವೈವಿಧ್ಯಗಳು, ಆದರೆ ತ್ರಿವರ್ಣ ಧ್ವಜವನ್ನು ಹಾರಿಸುವ ವಿಷಯ ಬಂದಾಗ, ಎಲ್ಲರಲ್ಲೂ ಒಂದೇ ಉತ್ಸಾಹ ಹರಿಯುತ್ತಿತ್ತು. ಜನರು ಸ್ವತಃ ಮುಂದೆ ಬಂದರು, ತ್ರಿವರ್ಣದ ಹೆಮ್ಮೆಯ ಜೊತೆ ಮುಂಚೂಣಿಯಲ್ಲಿದ್ದರು. ಸ್ವಚ್ಛತಾ ಅಭಿಯಾನ ಮತ್ತು ಲಸಿಕೆ ಅಭಿಯಾನದಲ್ಲಿ ದೇಶದ ಚೈತನ್ಯವನ್ನು ನಾವು ನೋಡಿದ್ದೇವೆ. ಅಮೃತ ಮಹೋತ್ಸವದಲ್ಲಿ ನಾವು ಮತ್ತೆ ಅದೇ ದೇಶಭಕ್ತಿಯ ಮನೋಭಾವವನ್ನು ನೋಡುತ್ತಿದ್ದೇವೆ. ನಮ್ಮ ಸೈನಿಕರು ಎತ್ತರದ ಪರ್ವತಗಳ ಶಿಖರಗಳಲ್ಲಿ, ದೇಶದ ಗಡಿಗಳಲ್ಲಿ ಮತ್ತು ಸಮುದ್ರದ ಮಧ್ಯದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ತ್ರಿವರ್ಣ ಧ್ವಜ ಪ್ರಚಾರಕ್ಕಾಗಿ ಜನರು ವಿಭಿನ್ನ ವಿನೂತನ ಐಡಿಯಾಗಳೊಂದಿಗೆ ಬಂದರು. ಉದಾಹರಣೆಗೆ ಯುವ ಸ್ನೇಹಿತ ಕೃಷ್ಣ್ ಅನಿಲ್ ಜೀ ಅವರು. ಅನಿಲ್ ಜೀ ಅವರು ಒಗಟು ಕಲಾವಿದರಾಗಿದ್ದು, ದಾಖಲೆ ಸಮಯದಲ್ಲಿ ಸುಂದರವಾದ ತ್ರಿವರ್ಣ ಮೊಸಾಯಿಕ್ ಕಲೆಯನ್ನು ರಚಿಸಿದ್ದಾರೆ. ಕರ್ನಾಟಕದ ಕೋಲಾರದಲ್ಲಿ ಜನರು 630 ಅಡಿ ಉದ್ದ ಮತ್ತು 205 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಹಿಡಿದು ವಿಶಿಷ್ಟ ದೃಶ್ಯವನ್ನು ಪ್ರಸ್ತುತಪಡಿಸಿದರು.
ಅಸ್ಸಾಂನಲ್ಲಿ, ದಿಘಾಲಿಪುಖುರಿ ಯುದ್ಧ ಸ್ಮಾರಕದಲ್ಲಿ ಹಾರಿಸಲು ಸರ್ಕಾರಿ ನೌಕರರು ತಮ್ಮ ಕೈಗಳಿಂದ 20 ಅಡಿ ತ್ರಿವರ್ಣ ಧ್ವಜವನ್ನು ರಚಿಸಿದರು. ಅದೇ ರೀತಿ ಇಂದೋರ್ನ ಜನರು ಮಾನವ ಸರಪಳಿಯ ಮೂಲಕ ಭಾರತದ ನಕ್ಷೆಯನ್ನು ರಚಿಸಿದರು. ಚಂಡೀಗಢದಲ್ಲಿ ಯುವಕರು ಬೃಹತ್ ಮಾನವ ತ್ರಿವರ್ಣ ಧ್ವಜವನ್ನು ತಯಾರಿಸಿದ್ದಾರೆ. ಈ ಎರಡೂ ಪ್ರಯತ್ನಗಳು ಗಿನ್ನೆಸ್ ದಾಖಲೆಗಳಲ್ಲಿ ದಾಖಲಾಗಿವೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದ ಗಂಗೋಟ್ ಪಂಚಾಯತ್ನಲ್ಲಿ ಒಂದು ದೊಡ್ಡ ಸ್ಫೂರ್ತಿದಾಯಕ ಉದಾಹರಣೆಯೂ ಕಂಡುಬಂದಿದೆ. ಇಲ್ಲಿ ಪಂಚಾಯತ್ನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಮುಖ್ಯ ಅತಿಥಿಗಳಾಗಿ ಕರೆಸಿ ಗೌರವಿಸಲಾಯಿತು.
ಸ್ನೇಹಿತರೇ, ಅಮೃತ ಮಹೋತ್ಸವದ ಈ ಬಣ್ಣಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬರುತ್ತವೆ. ಬೋಟ್ಸ್ ವಾನಾದಲ್ಲಿ ವಾಸಿಸುವ ಸ್ಥಳೀಯ ಗಾಯಕರು 75 ದೇಶಭಕ್ತಿಯ ಗೀತೆಗಳ ಮೂಲಕ ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಿದರು. ಇದರಲ್ಲಿ ಇನ್ನೂ ವಿಶೇಷವೆಂದರೆ ಈ 75 ಹಾಡುಗಳನ್ನು ಹಿಂದಿ, ಪಂಜಾಬಿ, ಗುಜರಾತಿ, ಬಾಂಗ್ಲಾ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ ಮತ್ತು ಸಂಸ್ಕೃತ ಮುಂತಾದ ಭಾಷೆಗಳಲ್ಲಿ ಹಾಡಲಾಗಿದೆ. ಅದೇ ರೀತಿ ನಮೀಬಿಯಾದಲ್ಲಿ ಇಂಡೋ-ನಮೀಬಿಯಾ ಸಾಂಸ್ಕೃತಿಕ-ಸಾಂಪ್ರದಾಯಿಕ ಸಂಬಂಧಗಳ ಕುರಿತು ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ.
ಸ್ನೇಹಿತರೇ, ನಾನು ನಿಮ್ಮೊಂದಿಗೆ ಇನ್ನೊಂದು ಸಂತೋಷದ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಅಲ್ಲಿ ದೂರದರ್ಶನ ಧಾರಾವಾಹಿ ‘ಸ್ವರಾಜ್’ ಪ್ರದರ್ಶನ ಏರ್ಪಡಿಸಿದ್ದರು. ಅದರ ಪ್ರಥಮ ಪ್ರದರ್ಶನ ವೀಕ್ಷಿಸುವ ಅವಕಾಶ ನನಗೆ ಸಿಕ್ಕಿತು. ದೇಶದ ಯುವ ಪೀಳಿಗೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅಪ್ರತಿಮ ವೀರ ಮತ್ತು ನಾಯಕಿಯರ ಶ್ರಮವನ್ನು ಪರಿಚಯಿಸಲು ಇದು ಉತ್ತಮ ಉಪಕ್ರಮವಾಗಿದೆ. ದೂರದರ್ಶನದಲ್ಲಿ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ. ಮತ್ತು ಅದು 75 ವಾರಗಳವರೆಗೆ ಮುಂದುವರಿಯುತ್ತದೆ ಎಂದು ನನಗೆ ತಿಳಿಸಲಾಯಿತು. ಅದನ್ನು ನೀವೂ ಕೂಡಾ ವೀಕ್ಷಿಸಲು ಮತ್ತು ಮನೆಯ ಮಕ್ಕಳಿಗೆ ತೋರಿಸಲು ಸಮಯವನ್ನು ಮೀಸಲಿಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಮತ್ತು ಅದನ್ನು ರೆಕಾರ್ಡ್ ಮಾಡಬಹುದು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಶಾಲಾ-ಕಾಲೇಜು ಪ್ರಾರಂಭವಾದಾಗ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲರೂ ವೀಕ್ಷಿಸಬಹುದು, ಇದರಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಜನ್ಮದ ಮಹಾನ್ ವೀರರ ಬಗ್ಗೆ ಹೊಸ ಜಾಗೃತಿ ಮೂಡುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವವು ಮುಂದಿನ ವರ್ಷ ಅಂದರೆ ಆಗಸ್ಟ್ 2023 ರವರೆಗೆ ಮುಂದುವರಿಯುತ್ತದೆ. ದೇಶಕ್ಕಾಗಿ, ಸ್ವಾತಂತ್ರ್ಯ ಹೋರಾಟಗಾರರಿಗಾಗಿ, ನಾವು ಆಯೋಜಿಸುತ್ತಿರುವ ಬರಹಗಳು ಮತ್ತು ಕಾರ್ಯಕ್ರಮಗಳನ್ನು ನಾವು ಮುಂದುವರಿಸಬೇಕಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪೂರ್ವಜರ ಜ್ಞಾನ, ನಮ್ಮ ಪೂರ್ವಜರ ದೂರದೃಷ್ಟಿ ಮತ್ತು ಏಕಾತ್ಮಚಿಂತನ, ಸಮಗ್ರ ಸ್ವಯಂ ಸಾಕ್ಷಾತ್ಕಾರವು ಇಂದಿಗೂ ಬಹಳ ಮಹತ್ವದ್ದಾಗಿದೆ; ನಾವು ಅದರ ಆಳಕ್ಕೆ ಹೋದಾಗ, ನಾವು ಆಶ್ಚರ್ಯದಿಂದ ತುಂಬಿರುತ್ತೇವೆ. ನಮ್ಮ ಸಾವಿರಾರು ವರ್ಷಗಳ ಋಗ್ವೇದ! ಋಗ್ವೇದದಲ್ಲಿ ಹೀಗೆ ಹೇಳಲಾಗಿದೆ:-
ಓಮನ್-ಮಾಪೋ ಮಾನುಷಿ: ಅಮೃತಕಂ ಧಾತ್ ತೋಕಾಯ್ ತನಯಾಯ ಶ್ಯಾಮ್ಯೋ: |
ಯೂಯಂ ಹಿಸಥ ಭಿಷಜೋ ಮಾತೃತಮಾ ವಿಶ್ವಸ್ಯ ಸ್ಥಾತು: ಜಗತೋ ಜನಿತ್ರಿ: ||
ಅರ್ಥ - ಓ ನೀರು, ನೀನು ಮಾನವೀಯತೆಯ ಅತ್ಯುತ್ತಮ ಸ್ನೇಹಿತ. ನೀನು ಜೀವದಾತ, ನಿನ್ನಿಂದ ಆಹಾರ ಉತ್ಪತ್ತಿಯಾಗುತ್ತದೆ ಮತ್ತು ನಿನ್ನಿಂದಲೇ ನಮ್ಮ ಮಕ್ಕಳ ಯೋಗಕ್ಷೇಮ. ನೀನು ನಮಗೆ ರಕ್ಷಕ ಮತ್ತು ಎಲ್ಲ ದುಷ್ಟರಿಂದ ನಮ್ಮನ್ನು ದೂರವಿಡುವವ,. ನೀನೇ ಅತ್ಯುತ್ತಮ ಔಷಧ, ಮತ್ತು ನೀನು ಈ ಬ್ರಹ್ಮಾಂಡದ ಪೋಷಕ.
ಈ ಕುರಿತು ಯೋಚಿಸಿ... ನೀರು ಮತ್ತು ನೀರಿನ ಸಂರಕ್ಷಣೆಯ ಮಹತ್ವವನ್ನು ನಮ್ಮ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ನಮ್ಮ ಹಿಂದಿನವರ ಜ್ಞಾನವನ್ನು ನೋಡಿದಾಗ, ನಾವು ರೋಮಾಂಚನಗೊಳ್ಳುತ್ತೇವೆ, ಆದರೆ ರಾಷ್ಟ್ರವು ಈ ಜ್ಞಾನವನ್ನು ತನ್ನ ಶಕ್ತಿಯಾಗಿ ಸ್ವೀಕರಿಸಿದಾಗ, ಅವರ ಶಕ್ತಿಯು ಹಲವಾರು ಪಟ್ಟು ಹೆಚ್ಚಾಗುತ್ತದೆ. ನಾಲ್ಕು ತಿಂಗಳ ಹಿಂದೆ ‘ಮನ್ ಕಿ ಬಾತ್’ನಲ್ಲಿ ಅಮೃತ ಸರೋವರದ ಬಗ್ಗೆ ಹೇಳಿದ್ದೆ ನಿಮಗೆ ನೆನಪಿರಬಹುದು. ಅದರ ನಂತರ, ಸ್ಥಳೀಯ ಆಡಳಿತವು ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಯಿತು, ಸ್ವಯಂಸೇವಾ ಸಂಸ್ಥೆಗಳು ಒಗ್ಗೂಡಿದವು ಮತ್ತು ಸ್ಥಳೀಯ ಜನರು ಪರಸ್ಪರ ಸಂಪರ್ಕ ಸಾಧಿಸಿದರು ಮತ್ತು ಅಮೃತ್ ಸರೋವರಗಳ ನಿರ್ಮಾಣ ಒಂದು ಜನಾಂದೋಲನವಾಯಿತು. ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಆಳವಾದ ಭಾವನೆ, ತನ್ನ ಕರ್ತವ್ಯಗಳನ್ನು ಅರಿತುಕೊಳ್ಳುವುದು, ಮುಂಬರುವ ಪೀಳಿಗೆಯ ಬಗ್ಗೆ ಕಾಳಜಿ ಇದ್ದಾಗ, ಸಾಮರ್ಥ್ಯಗಳು ಕೂಡ ಸೇರಿಕೊಂಡು, ಸಂಕಲ್ಪವು ಉದಾತ್ತವಾಗುತ್ತದೆ.
ತೆಲಂಗಾಣದ ವಾರಂಗಲ್ ನಿಂದ ಅದ್ಭುತ ಪ್ರಯತ್ನದ ಬಗ್ಗೆ ನನಗೆ ತಿಳಿದು ಬಂದಿದೆ. ಅಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆಯಾಗಿದ್ದು, ಅದಕ್ಕೆ ‘ಮಾಂಗ್ತ್ಯಾ-ವಾಲ್ಯ ತಾಂಡಾ’ ಎಂದು ಹೆಸರಿಡಲಾಗಿದೆ. ಈ ಗ್ರಾಮವು ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದೆ. ಗ್ರಾಮದ ಸಮೀಪದಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಗ್ರಾಮಸ್ಥರ ಪ್ರೇರಣೆಯಿಂದ ಈ ಸ್ಥಳವನ್ನು ಈಗ ಅಮೃತ ಸರೋವರ ಅಭಿಯಾನದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಸಂಪೂರ್ಣ ಭರ್ತಿಯಾಗಿದೆ.
ಮಧ್ಯಪ್ರದೇಶದ ಮಾಂಡ್ಲಾದ ಮೋಚಾ ಗ್ರಾಮ ಪಂಚಾಯತ್ ನಲ್ಲಿ ನಿರ್ಮಿಸಲಾದ ಅಮೃತ ಸರೋವರದ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ಅಮೃತ ಸರೋವರವನ್ನು ಕನ್ಹಾ ರಾಷ್ಟ್ರೀಯ ಉದ್ಯಾನವನದ ಬಳಿ ನಿರ್ಮಿಸಲಾಗಿದೆ ಮತ್ತು ಇದರಿಂದಾಗಿ ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶಹೀದ್ ಭಗತ್ ಸಿಂಗ್ ಅಮೃತ ಸರೋವರ ಕೂಡ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ನಿವಾರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಈ ಕೆರೆ 4 ಎಕರೆ ವಿಸ್ತೀರ್ಣ ಹೊಂದಿದೆ. ಸರೋವರದ ದಡದಲ್ಲಿ ಮರಗಳ ನೆಡುವಿಕೆ ತನ್ನ ಸೌಂದರ್ಯವನ್ನು ಹೆಚ್ಚಿಸುತ್ತಿದೆ. ಕೆರೆಯ ಬಳಿ ಇರುವ 35 ಅಡಿ ಎತ್ತರದ ತ್ರಿವರ್ಣ ಧ್ವಜವನ್ನು ನೋಡಲು ದೂರದೂರುಗಳಿಂದ ಕೂಡ ಜನರು ಬರುತ್ತಿದ್ದಾರೆ. ಅಮೃತ ಸರೋವರಗಳ ಈ ಅಭಿಯಾನ ಕರ್ನಾಟಕದಲ್ಲಿಯೂ ಜೋರಾಗಿ ನಡೆಯುತ್ತಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ 'ಬಿಲ್ಕೆರೂರು' ಗ್ರಾಮದಲ್ಲಿ ಜನರು ಅತ್ಯಂತ ಸುಂದರವಾದ ಅಮೃತ ಸರೋವರವನ್ನು ನಿರ್ಮಿಸಿದ್ದಾರೆ. ವಾಸ್ತವವಾಗಿ, ಈ ಪ್ರದೇಶದಲ್ಲಿ, ಪರ್ವತದಿಂದ ನೀರು ಹರಿಯುವುದರಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಹೊಂದಿದ್ದರು; ರೈತರು ಮತ್ತು ಅವರ ಬೆಳೆಗಳು ಸಹ ನಷ್ಟವನ್ನು ಅನುಭವಿಸಿದವು. ಅಮೃತ ಸರೋವರವನ್ನು ಮಾಡಲು, ಗ್ರಾಮದ ಜನರು ಎಲ್ಲ ನೀರನ್ನು ಚಾನಲ್ ಮಾಡಿ ಪಕ್ಕಕ್ಕೆ ತಂದರು. ಇದರಿಂದ ಆ ಪ್ರದೇಶದಲ್ಲಿನ ಪ್ರವಾಹ ಸಮಸ್ಯೆಯೂ ಬಗೆಹರಿದಿದೆ. ಅಮೃತ್ ಸರೋವರ ಅಭಿಯಾನವು ಇಂದಿನ ನಮ್ಮ ಅನೇಕ ಸಮಸ್ಯೆಗಳನ್ನು ಮಾತ್ರ ಪರಿಹರಿಸುವುದಿಲ್ಲ; ಇದು ನಮ್ಮ ಮುಂದಿನ ಪೀಳಿಗೆಗೆ ಕೂಡಾ ಅಷ್ಟೇ ಅವಶ್ಯಕ. ಈ ಅಭಿಯಾನದ ಅಡಿಯಲ್ಲಿ, ಅನೇಕ ಸ್ಥಳಗಳಲ್ಲಿ, ಹಳೆಯ ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಅಮೃತ ಸರೋವರಗಳನ್ನು ಪ್ರಾಣಿಗಳ ದಾಹ ನೀಗಿಸಲು ಹಾಗೂ ಬೇಸಾಯಕ್ಕೆ ಬಳಸಲಾಗುತ್ತಿದೆ. ಈ ಕೆರೆಗಳಿಂದಾಗಿ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಅವರ ಸುತ್ತಲೂ ಹಸಿರು ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅಮೃತ್ ಸರೋವರದಲ್ಲಿ ಮೀನು ಸಾಕಣೆಗೆ ಹಲವೆಡೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಅಮೃತ್ ಸರೋವರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ನೀರಿನ ಸಂರಕ್ಷಣೆ ಮತ್ತು ನೀರಿನ ಸಂಗ್ರಹಣೆಯ ಈ ಪ್ರಯತ್ನಗಳಿಗೆ ಸಂಪೂರ್ಣ ಶಕ್ತಿಯನ್ನು ನೀಡುವಂತೆ ಮತ್ತು ಅವುಗಳನ್ನು ಮುಂದಕ್ಕೆ ಕೊಂಡೊಯ್ಯಲು ನಿಮ್ಮೆಲ್ಲರನ್ನೂ, ವಿಶೇಷವಾಗಿ ನನ್ನ ಯುವ ಸ್ನೇಹಿತರನ್ನು ನಾನು ಕೋರುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಅಸ್ಸಾಂನ ಬೊಂಗೈ ಗ್ರಾಮದಲ್ಲಿ ಆಸಕ್ತಿದಾಯಕ ಯೋಜನೆಯನ್ನು ನಡೆಸಲಾಗುತ್ತಿದೆ - ಸಂಪೂರ್ಣ ಯೋಜನೆ. ಈ ಯೋಜನೆಯ ಉದ್ದೇಶವು ಅಪೌಷ್ಟಿಕತೆಯ ವಿರುದ್ಧ ಹೋರಾಡುವುದಾಗಿದೆ ಮತ್ತು ವಿಧಾನವು ತುಂಬಾ ವಿಶಿಷ್ಟವಾಗಿದೆ. ಇದರ ಅಡಿಯಲ್ಲಿ, ಅಂಗನವಾಡಿ ಕೇಂದ್ರದಿಂದ ಆರೋಗ್ಯವಂತ ಮಗುವಿನ ತಾಯಿ ಪ್ರತಿ ವಾರ ಅಪೌಷ್ಟಿಕತೆಯ ಮಗುವಿನ ತಾಯಿಯನ್ನು ಭೇಟಿಯಾಗುತ್ತಾರೆ ಮತ್ತು ಎಲ್ಲಾ ಪೌಷ್ಟಿಕಾಂಶ ಸಂಬಂಧಿತ ಮಾಹಿತಿಯನ್ನು ಚರ್ಚಿಸುತ್ತಾರೆ. ಅಂದರೆ, ಒಬ್ಬ ತಾಯಿ ಇನ್ನೊಬ್ಬ ತಾಯಿಗೆ ಸ್ನೇಹಿತೆಯಾಗುತ್ತಾಳೆ, ಅವಳಿಗೆ ಸಹಾಯ ಮಾಡುತ್ತಾಳೆ ಮತ್ತು ಕಲಿಸುತ್ತಾಳೆ. ಈ ಯೋಜನೆಯ ನೆರವಿನಿಂದ ಈ ಪ್ರದೇಶದಲ್ಲಿ ಒಂದು ವರ್ಷದಲ್ಲಿ ಶೇ.90ಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಿದೆ.
ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಡು ಮತ್ತು ಸಂಗೀತ ಮತ್ತು ಭಜನೆಗಳನ್ನು ಕೂಡಾ ಬಳಸಬಹುದೇ ಎಂಬುದನ್ನು ನೀವು ಊಹಿಸಬಲ್ಲಿರಾ? ಇದನ್ನು "ಮೇರಾ ಬಚ್ಚಾ ಅಭಿಯಾನ"ದಲ್ಲಿ ಯಶಸ್ವಿಯಾಗಿ ಬಳಸಲಾಯಿತು; ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ "ಮೇರಾ ಬಚ್ಚಾ ಅಭಿಯಾನ". ಇದರ ಅಡಿಯಲ್ಲಿ, ಜಿಲ್ಲೆಯಲ್ಲಿ ಭಜನೆ-ಕೀರ್ತನೆಗಳನ್ನು ಆಯೋಜಿಸಲಾಯಿತು, ಇದರಲ್ಲಿ ಶಿಕ್ಷಕರನ್ನು ಪೌಷ್ಟಿಕಾಂಶದ ಗುರುಗಳಾಗಿ ಕರೆಯಲಾಯಿತು. ಮಟ್ಕಾ ಕಾರ್ಯಕ್ರಮವೂ ನಡೆದಿದ್ದು, ಅಂಗನವಾಡಿ ಕೇಂದ್ರಕ್ಕೆ ಮಹಿಳೆಯರು ಹಿಡಿ ಧಾನ್ಯಗಳನ್ನು ತಂದು, ಈ ಧಾನ್ಯದೊಂದಿಗೆ ಶನಿವಾರಗಳಂದು ಬಾಲಭೋಜನ ಏರ್ಪಡಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಳದ ಜೊತೆಗೆ ಅಪೌಷ್ಟಿಕತೆಯೂ ಇಳಿಮುಖವಾಗಿದೆ. ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಜಾರ್ಖಂಡ್ನಲ್ಲಿ ವಿಶಿಷ್ಟ ಅಭಿಯಾನವೂ ನಡೆಯುತ್ತಿದೆ. ಜಾರ್ಖಂಡ್ನ ಗಿರಿದಿಹ್ ನಲ್ಲಿ ಹಾವು-ಏಣಿ ಆಟವನ್ನು ಸಿದ್ಧಪಡಿಸಲಾಗಿದೆ. ಆಟದ ಮೂಲಕ ಮಕ್ಕಳು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಿದ್ದಾರೆ.
ಸ್ನೇಹಿತರೇ, ಅಪೌಷ್ಟಿಕತೆಗೆ ಸಂಬಂಧಿಸಿದ ಹಲವಾರು ವಿನೂತನ ಪ್ರಯೋಗಗಳ ಬಗ್ಗೆ ನಾನು ನಿಮಗೆ ಹೇಳುತ್ತಿದ್ದೇನೆ, ಏಕೆಂದರೆ ಮುಂಬರುವ ತಿಂಗಳಲ್ಲಿ ನಾವೆಲ್ಲರೂ ಈ ಅಭಿಯಾನಕ್ಕೆ ಸೇರಬೇಕಾಗಿದೆ. ಸೆಪ್ಟೆಂಬರ್ ತಿಂಗಳನ್ನು ಹಬ್ಬಗಳಿಗೆ ಮೀಸಲಿಡಲಾಗಿದೆ ಮತ್ತು ಪೋಷಣೆಗೆ ಸಂಬಂಧಿಸಿದ ದೊಡ್ಡ ಅಭಿಯಾನವನ್ನು ಹೊಂದಿದೆ. ನಾವು ಪ್ರತಿ ವರ್ಷ ಸೆಪ್ಟೆಂಬರ್ 1 ರಿಂದ 30 ರವರೆಗೆ ಪೋಷಣ ಮಾಹೆಯನ್ನು ಆಚರಿಸುತ್ತೇವೆ. ಅಪೌಷ್ಟಿಕತೆಯ ವಿರುದ್ಧ ದೇಶದಾದ್ಯಂತ ಅನೇಕ ಸೃಜನಶೀಲ ಮತ್ತು ವೈವಿಧ್ಯಮಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಸಾರ್ವಜನಿಕ ಸಹಭಾಗಿತ್ವವು ಪೌಷ್ಟಿಕಾಂಶ ಅಭಿಯಾನದ ಪ್ರಮುಖ ಭಾಗವಾಗಿದೆ. ದೇಶದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಸಾಧನಗಳನ್ನು ಒದಗಿಸುವುದರಿಂದ, ಅಂಗನವಾಡಿ ಸೇವೆಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು ಪೋಶನ್ ಟ್ರ್ಯಾಕರ್ ಅನ್ನು ಸಹ ಪ್ರಾರಂಭಿಸಲಾಗಿದೆ. ಎಲ್ಲ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ, 14 ರಿಂದ 18 ವರ್ಷ ವಯಸ್ಸಿನ ಹೆಣ್ಣುಮಕ್ಕಳನ್ನು ಸಹ ಪೋಶನ್ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ. ಅಪೌಷ್ಟಿಕತೆಯ ಕಾಯಿಲೆಗೆ ಪರಿಹಾರವು ಕೇವಲ ಈ ಹಂತಗಳಿಗೆ ಸೀಮಿತವಾಗಿಲ್ಲ - ಈ ಹೋರಾಟದಲ್ಲಿ, ಇತರ ಅನೇಕ ಉಪಕ್ರಮಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ, ಜಲ ಜೀವನ್ ಮಿಷನ್ ಅನ್ನು ತೆಗೆದುಕೊಳ್ಳಿ... ಭಾರತವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವಲ್ಲಿ ಈ ಮಿಷನ್ ಕೂಡ ದೊಡ್ಡ ಪರಿಣಾಮವನ್ನು ಬೀರಲಿದೆ.
ಅಪೌಷ್ಟಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸಾಮಾಜಿಕ ಜಾಗೃತಿಯ ಪ್ರಯತ್ನಗಳು ಪ್ರಮುಖ ಪಾತ್ರವಹಿಸುತ್ತವೆ. ಮುಂಬರುವ ಪೌಷ್ಟಿಕಾಂಶದ ಅಭಿಯಾನದ ತಿಂಗಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಿಗೂ ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಚೆನ್ನೈನ ಶ್ರೀದೇವಿ ವರದರಾಜನ್ ಜೀ ಅವರು ನನಗೆ ವಿಜ್ಞಾಪನೆಯನ್ನು ಕಳುಹಿಸಿದ್ದಾರೆ. ಅವರು ಮೈಗೌನಲ್ಲಿ ಈ ರೀತಿ ಬರೆದಿದ್ದಾರೆ - ಹೊಸ ವರ್ಷವು ಬರಲು 5 ತಿಂಗಳುಗಳಿಗಿಂತ ಕಡಿಮೆಯಿದೆ, ಮತ್ತು ಮುಂದಿನ ಹೊಸ ವರ್ಷವನ್ನು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷವಾಗಿ ಆಚರಿಸಲಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ನನಗೆ ದೇಶದ ಸಿರಿಧಾನ್ಯಗಳ ನಕ್ಷೆಯನ್ನೂ ಕಳುಹಿಸಿದ್ದಾರೆ. 'ಮನ್ ಕಿ ಬಾತ್' ನ ಮುಂಬರುವ ಸಂಚಿಕೆಯಲ್ಲಿ ನೀವು ಇದನ್ನು ಚರ್ಚಿಸಬಹುದೇ ಎಂದು ಆಕೆ ಕೇಳಿದ್ದಾರೆ. ನನ್ನ ದೇಶವಾಸಿಗಳಲ್ಲಿ ಈ ರೀತಿಯ ಮನೋಭಾವವನ್ನು ನೋಡುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿದ್ದು ನಿಮಗೆ ನೆನಪಿರಬಹುದು. ಭಾರತದ ಈ ಪ್ರಸ್ತಾಪವನ್ನು 70 ಕ್ಕೂ ಹೆಚ್ಚು ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿದರೆ ನಿಮಗೆ ತುಂಬಾ ಸಂತೋಷವಾಗ ಬಹುದು.
ಇಂದು, ಪ್ರಪಂಚದಾದ್ಯಂತ, ಈ ಸಿರಿ ಧಾನ್ಯಗಳ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಸ್ನೇಹಿತರೇ, ನಾನು ಸಿರಿ ಧಾನ್ಯಗಳ ಬಗ್ಗೆ ಇಂದು ಮಾತನಾಡುವಾಗ, ನನ್ನ ಒಂದು ಪುಟ್ಟ ಪ್ರಯತ್ನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ಕೆಲವು ಸಮಯದಿಂದ, ಯಾವುದೇ ವಿದೇಶಿ ಅತಿಥಿಗಳು ಭಾರತಕ್ಕೆ ಬಂದಾಗ, ರಾಷ್ಟ್ರಗಳ ಮುಖ್ಯಸ್ಥರು ಭಾರತಕ್ಕೆ ಬಂದಾಗ, ಔತಣಕೂಟಗಳಲ್ಲಿ ಭಾರತದ ರಾಗಿಯಿಂದ ಮಾಡಿದ ಭಕ್ಷ್ಯಗಳನ್ನು, ಅಂದರೆ ನಮ್ಮ ಸಿರಿ ಧಾನ್ಯಗಳ ಪದಾರ್ಥಗಳನ್ನು ನೀಡುವುದು ನನ್ನ ಪ್ರಯತ್ನವಾಗಿದೆ. ಈ ಮಹನೀಯರು ಅವುಗಳ ಆಹಾರವನ್ನು ತುಂಬಾ ಆನಂದಿಸಿದ್ದಾರೆ ಮತ್ತು ಅವರು ನಮ್ಮ ಸಿರಿ ಧಾನ್ಯಗಳ ಬಗ್ಗೆ, ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ರಾಗಿ, ಸಿರಿ ಧಾನ್ಯಗಳು ಪ್ರಾಚೀನ ಕಾಲದಿಂದಲೂ ನಮ್ಮ ಕೃಷಿ, ಸಂಸ್ಕೃತಿ ಮತ್ತು ನಾಗರಿಕತೆಯ ಭಾಗವಾಗಿದೆ.
ಸಿರಿಧಾನ್ಯಗಳನ್ನು ನಮ್ಮ ವೇದಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅದೇ ರೀತಿ ಪುರಾಣನೂರು ಮತ್ತು ತೊಲ್ಕಾಪ್ಪಿಯಂನಲ್ಲಿಯೂ ಉಲ್ಲೇಖಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಹೋದರೆ ಅಲ್ಲಿನ ಜನರ ಆಹಾರದಲ್ಲಿ ವಿವಿಧ ಬಗೆಯ ಸಿರಿಧಾನ್ಯಗಳು ಖಂಡಿತ ಸಿಗುತ್ತವೆ. ನಮ್ಮ ಸಂಸ್ಕೃತಿಯಂತೆಯೇ ಸಿರಿಧಾನ್ಯಗಳಲ್ಲಿಯೂ ಸಾಕಷ್ಟು ವೈವಿಧ್ಯ ಕಂಡುಬರುತ್ತದೆ. ಜೋಳ, ಸಜ್ಜೆ, ರಾಗಿ, ಊದಲು(ಸಾವನ್), ಕಂಗ್ನಿ, ಚೀಣ, ಕೊಡೋ, ಕುಟ್ಕಿ, ಕುಟ್ಟು, ಇವೆಲ್ಲ ಸಿರಿಧಾನ್ಯಗಳೇ ಆಗಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳ ಉತ್ಪಾದಕ ದೇಶವಾಗಿದೆ; ಆದ್ದರಿಂದ ಈ ಉಪಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯು ನಮ್ಮ ಭಾರತೀಯರ ಹೆಗಲ ಮೇಲಿದೆ. ನಾವೆಲ್ಲರೂ ಒಟ್ಟಾಗಿ ಇದನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು ಮತ್ತು ದೇಶದ ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಬೇಕು. ಮತ್ತು ಸ್ನೇಹಿತರೇ, ನಿಮಗೆ ಚೆನ್ನಾಗಿ ತಿಳಿದಿದೆ, ಸಿರಿಧಾನ್ಯಗಳು ರೈತರಿಗೆ ಮತ್ತು ವಿಶೇಷವಾಗಿ ಸಣ್ಣ ರೈತರಿಗೆ ಸಹ ಪ್ರಯೋಜನಕಾರಿ. ವಾಸ್ತವವಾಗಿ, ಬೆಳೆ ಬಹಳ ಕಡಿಮೆ ಸಮಯದಲ್ಲಿ ಫಸಲು ನೀಡುತ್ತದೆ ಮತ್ತು ಹೆಚ್ಚು ನೀರಿನ ಅಗತ್ಯವಿರುವುದಿಲ್ಲ.
ನಮ್ಮ ಸಣ್ಣ ರೈತರಿಗೆ, ಸಿರಿಧಾನ್ಯ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಸಿರಿಧಾನ್ಯಗಳ ಹುಲ್ಲು ಕೂಡ ಅತ್ಯುತ್ತಮ ಮೇವು ಎಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಆರೋಗ್ಯಕರ ಜೀವನ ಮತ್ತು ಆಹಾರ ಸೇವನೆಯತ್ತ ಹೆಚ್ಚು ಗಮನಹರಿಸುತ್ತಿದೆ. ನೀವು ಈ ರೀತಿ ನೋಡಿದರೆ, ಸಿರಿಧಾನ್ಯಗಳಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಖನಿಜಗಳಿವೆ. ಅನೇಕ ಜನರು ಇದನ್ನು ಸೂಪರ್ಫುಡ್ ಎಂದೂ ಕರೆಯುತ್ತಾರೆ. ಸಿರಿಧಾನ್ಯಗಳು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಬೊಜ್ಜು ಕಡಿಮೆ ಮಾಡುವುದರ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ, ಹೊಟ್ಟೆ ಮತ್ತು ಯಕೃತ್ತಿನ ಕಾಯಿಲೆಗಳನ್ನು ತಡೆಯಲು ಸಹ ಅವು ಸಹಾಯಕವಾಗಿವೆ. ನಾವು ಸ್ವಲ್ಪ ಸಮಯದ ಹಿಂದೆ ಅಪೌಷ್ಟಿಕತೆಯ ಬಗ್ಗೆ ಉಲ್ಲೇಖಿಸಿದ್ದೇವೆ. ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಸಿರಿಧಾನ್ಯಗಳು ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಅವುಗಳು ಶಕ್ತಿ ಮತ್ತು ಪ್ರೋಟೀನ್ ನಿಂದ ತುಂಬಿರುತ್ತವೆ. ಇಂದು ದೇಶದಲ್ಲಿ ಸಿರಿಧಾನ್ಯಗಳನ್ನು ಉತ್ತೇಜಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸುವುದರ ಜೊತೆಗೆ, ಎಫ್.ಪಿ.ಒ.ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ, ಇದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು. ನನ್ನ ರೈತ ಬಂಧುಗಳು ರಾಗಿ, ಅಂದರೆ ಸಿರಿಧಾನ್ಯಗಳನ್ನು ಹೆಚ್ಚು ಹೆಚ್ಚು ಬಳಸಿ ಅದರ ಪ್ರಯೋಜನ ಪಡೆಯಬೇಕೆಂಬುದು ನನ್ನ ವಿನಂತಿ. ಸಿರಿಧಾನ್ಯಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂತಹ ಅನೇಕ ಸ್ಟಾರ್ಟ್ಅಪ್ಗಳು ಇಂದು ಹೊರಹೊಮ್ಮುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇವುಗಳಲ್ಲಿ ಕೆಲವರು ರಾಗಿ ಕುಕೀಸ್ ತಯಾರಿಸುತ್ತಿದ್ದರೆ, ಕೆಲವರು ರಾಗಿ ಪ್ಯಾನ್ ಕೇಕ್ ಗಳು ಮತ್ತು ದೋಸೆಯನ್ನು ಸಹ ಮಾಡುತ್ತಿದ್ದಾರೆ. ಕೆಲವರು ರಾಗಿ ಎನರ್ಜಿ ಬಾರ್ ಗಳು ಮತ್ತು ರಾಗಿ ಬ್ರೇಕ್ಫಾಸ್ಟ್ಗಳನ್ನು ತಯಾರಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಶುಭ ಹಾರೈಸುತ್ತೇನೆ. ಈ ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಖಾದ್ಯಗಳಲ್ಲಿ ನಾವು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಸುತ್ತೇವೆ. ನಿಮ್ಮ ಮನೆಗಳಲ್ಲಿ ಮಾಡಿದ ಇಂತಹ ಖಾದ್ಯಗಳ ಚಿತ್ರಗಳನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬೇಕು, ಇದರಿಂದ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೇ ದಿನಗಳ ಹಿಂದೆ, ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯ ಜೋರ್ಸಿಂಗ್ ಗ್ರಾಮದ ಸುದ್ದಿ ನಾನು ನೋಡಿದೆ. ಈ ಸುದ್ದಿಯು ಈ ಗ್ರಾಮದ ಜನರು ಹಲವು ವರ್ಷಗಳಿಂದ ಕಾಯುತ್ತಿದ್ದ ಬದಲಾವಣೆಯ ಕುರಿತಾಗಿತ್ತು. ವಾಸ್ತವವಾಗಿ, ಈ ತಿಂಗಳು ಜೋರ್ಸಿಂಗ್ ಗ್ರಾಮದಲ್ಲಿ, 4ಜಿ ಇಂಟರ್ನೆಟ್ ಸೇವೆಗಳು ಸ್ವಾತಂತ್ರ್ಯ ದಿನಾಚರಣೆಯಿಂದ ಪ್ರಾರಂಭವಾಗಿವೆ. ಹಾಗೆ, ಹಿಂದಿನ ಜನರು ಹಳ್ಳಿಗೆ ವಿದ್ಯುತ್ ಬಂದಾಗ ಸಂತೋಷಪಡುತ್ತಿದ್ದರು; ಈಗ, ನವ ಭಾರತದಲ್ಲಿ, 4ಜಿ ಅಲ್ಲಿಗೆ ತಲುಪಿದಾಗ ಅದೇ ಸಂತೋಷವನ್ನು ಅನುಭವಿಸಲಾಗುತ್ತದೆ. ಅರುಣಾಚಲ ಮತ್ತು ಈಶಾನ್ಯದ ದೂರದ ಪ್ರದೇಶಗಳಲ್ಲಿ 4ಜಿ ರೂಪದಲ್ಲಿ ಹೊಸ ಸೂರ್ಯೋದಯ ಕಂಡುಬಂದಿದೆ; ಇಂಟರ್ನೆಟ್ ಸಂಪರ್ಕವು ಹೊಸ ಉದಯವನ್ನು ತಂದಿದೆ. ಒಂದು ಕಾಲದಲ್ಲಿ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿದ್ದ ಸೌಲಭ್ಯಗಳನ್ನು ಡಿಜಿಟಲ್ ಇಂಡಿಯಾದ ಮೂಲಕ ಪ್ರತಿ ಹಳ್ಳಿಗೂ ತರಲಾಗಿದೆ. ಈ ಕಾರಣದಿಂದ ದೇಶದಲ್ಲಿ ಹೊಸ ಡಿಜಿಟಲ್ ಉದ್ಯಮಿಗಳು ಹೆಚ್ಚುತ್ತಿದ್ದಾರೆ. ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಸೇಥಾ ಸಿಂಗ್ ರಾವತ್ ಜೀ ಅವರು 'ದರ್ಜಿ ಆನ್ಲೈನ್', 'ಇ-ಸ್ಟೋರ್' ನಡೆಸುತ್ತಿದ್ದಾರೆ. ಆನ್ಲೈನ್ನಲ್ಲಿ ದರ್ಜಿ ಎಂದರೇನು ಎಂದು ನೀವು ಆಶ್ಚರ್ಯ ಪಡುತ್ತೀರಿ! ವಾಸ್ತವವಾಗಿ ಸೇಥಾ ಸಿಂಗ್ ರಾವತ್ ಅವರು ಹೊಲಿಗೆ (ಟೈಲರಿಂಗ್) ಕೆಲಸ ಮಾಡುತ್ತಿದ್ದಾರೆ .
ಕೋವಿಡ್ ಬಂದಾಗ, ರಾವತ್ ಜೀ ಈ ಸವಾಲನ್ನು ಕಷ್ಟವಾಗಿ ತೆಗೆದುಕೊಳ್ಳಲಿಲ್ಲ; ಬದಲಿಗೆ ಅವಕಾಶವಾಗಿ ಬದಲಾಯಿಸಿದರು. ಅವರು 'ಸಾಮಾನ್ಯ ಸೇವಾ ಕೇಂದ್ರ' ಅಂದರೆ ಸಿ.ಎಸ್.ಸಿ ಇ-ಸ್ಟೋರ್ಗೆ ಸೇರಿಕೊಂಡರು ಮತ್ತು ಆನ್ಲೈನ್ ನಲ್ಲಿ ದರ್ಜಿ ಕೆಲಸ ಮಾಡಲು ಪ್ರಾರಂಭಿಸಿದರು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ಗಳಿಗಾಗಿ ಆರ್ಡರ್ ಮಾಡುವುದನ್ನು ಅವರು ಗುರುತಿಸಿದರು. ಅವರು ಕೆಲವು ಮಹಿಳೆಯರನ್ನು ನೇಮಿಸಿಕೊಂಡರು ಮತ್ತು ಮುಖಗವಸುಗಳನ್ನು ತಯಾರಿಸಲು ಪ್ರಾರಂಭಿಸಿದರು. ಇದರ ನಂತರ ಅವರು ತಮ್ಮ 'ದರ್ಜಿ ಆನ್ಲೈನ್' ಆನ್ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿದರು, ಅದರಲ್ಲಿ ಅವರು ಅನೇಕ ರೀತಿಯ ಹೊಲಿದ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಇಂದು, ಡಿಜಿಟಲ್ ಇಂಡಿಯಾದ ಶಕ್ತಿಯೊಂದಿಗೆ, ಸೇಠ ಸಿಂಗ್ ಜೀ ಅವರ ಕೆಲಸವು ತುಂಬಾ ಬೆಳೆದಿದೆ, ಈಗ ಅವರಿಗೆ ದೇಶಾದ್ಯಂತ ಆರ್ಡರ್ ಗಳು ಬರುತ್ತಿವೆ. ಇಲ್ಲಿನ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.
ಉತ್ತರಪ್ರದೇಶದ ಉನ್ನಾವೊದ ಶ್ರೀ ಓಂ ಪ್ರಕಾಶ್ ಸಿಂಗ್ ಜೀ ಅವರನ್ನು ಡಿಜಿಟಲ್ ಇಂಡಿಯಾ ಉಪಕ್ರಮವು ಡಿಜಿಟಲ್ ಉದ್ಯಮಿಯನ್ನಾಗಿ ಮಾಡಿದೆ. ಅವರು ತಮ್ಮ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ರಾಡ್ಬ್ಯಾಂಡ್ ಸಂಪರ್ಕಗಳನ್ನು ಸ್ಥಾಪಿಸಿದ್ದಾರೆ. ಓಂ ಪ್ರಕಾಶ್ ಜೀ ಅವರು ತಮ್ಮ ಸಾಮಾನ್ಯ ಸೇವಾ ಕೇಂದ್ರದ ಸುತ್ತಲೂ ಉಚಿತ ವೈಫೈ ವಲಯವನ್ನು ನಿರ್ಮಿಸಿದ್ದಾರೆ, ಇದು ಅಗತ್ಯವಿರುವ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ. ಓಂ ಪ್ರಕಾಶ್ ಜೀ ಅವರ ಕೆಲಸ ಎಷ್ಟು ವೃದ್ಧಿಸಿದೆ ಎಂದರೆ ಅವರು 20 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದ್ದಾರೆ. ಈ ಜನರು ಗ್ರಾಮಗಳ ಶಾಲೆ, ಆಸ್ಪತ್ರೆ, ತಹಸಿಲ್ ಕಚೇರಿ, ಅಂಗನವಾಡಿ ಕೇಂದ್ರಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡುತ್ತಿದ್ದು, ಅದರಿಂದ ಉದ್ಯೋಗವನ್ನೂ ಪಡೆಯುತ್ತಿದ್ದಾರೆ. ಸಾಮಾನ್ಯ ಸೇವಾ ಕೇಂದ್ರದಂತೆ, ಸರ್ಕಾರಿ ಇ-ಮಾರುಕಟ್ಟೆ ಸ್ಥಳದಲ್ಲಿ ಅಂದರೆ ಜಿ.ಇ.ಎಂ. ಪೋರ್ಟಲ್ನಲ್ಲಿ ಇಂತಹ ಅನೇಕ ಯಶಸ್ಸಿನ ಕಥೆಗಳು ಕಂಡುಬರುತ್ತವೆ.
ಸ್ನೇಹಿತರೇ, ನಾನು ಹಳ್ಳಿಗಳಿಂದ ಇಂತಹ ಹಲವಾರು ಸಂದೇಶಗಳನ್ನು ಪಡೆಯುತ್ತೇನೆ, ಅದು ಅಂತರ್ಜಾಲದಿಂದ ತಂದ ಬದಲಾವಣೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತದೆ. ಇಂಟರ್ನೆಟ್ ನಮ್ಮ ಯುವ ಸ್ನೇಹಿತರು ಕಲಿಯುವ ಮತ್ತು ಕಲಿಯುವ ವಿಧಾನವನ್ನು ಬದಲಾಯಿಸಿದೆ. ಉದಾಹರಣೆಗೆ, ಉತ್ತರಪ್ರದೇಶದ ಶ್ರೀಮತಿ ಗುಡಿಯಾ ಸಿಂಗ್ ಅವರು ಉನ್ನಾವೊದ ಅಮೋಯ ಹಳ್ಳಿಯಲ್ಲಿರುವ ಅತ್ತೆಯ ಮನೆಗೆ ಬಂದಾಗ, ಅವರು ತಮ್ಮ ಅಧ್ಯಯನದ ಬಗ್ಗೆ ಚಿಂತಿತರಾಗಿದ್ದರು. ಆದರೆ, ಭಾರತ್ ನೆಟ್ ಅವರ ಕಳವಳವನ್ನು ಪರಿಹರಿಸಿತು. ಗುಡಿಯಾ ಅಂತರ್ಜಾಲದ ಮೂಲಕ ತನ್ನ ಅಧ್ಯಯನವನ್ನು ಮುಂದುವರಿಸಿದರು. ಮತ್ತು ತನ್ನ ಪದವಿಯನ್ನು ಸಹ ಪೂರ್ಣಗೊಳಿಸಿದರು. ಡಿಜಿಟಲ್ ಇಂಡಿಯಾ ಅಭಿಯಾನದಿಂದ ಹಳ್ಳಿಗಳಲ್ಲಿ ಇಂತಹ ಎಷ್ಟು ಜೀವಗಳು ಹೊಸ ಶಕ್ತಿ ಪಡೆಯುತ್ತಿವೆ. ಹಳ್ಳಿಗಳ ಡಿಜಿಟಲ್ ಉದ್ಯಮಿಗಳ ಬಗ್ಗೆ ನಿಮಗೆ ಸಾಧ್ಯವಾದಷ್ಟು ನನಗೆ ಬರೆಯಿರಿ ಮತ್ತು ಅವರ ಯಶಸ್ಸಿನ ಕಥೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಲ್ಪ ದಿನಗಳ ಹಿಂದೆ, ಹಿಮಾಚಲ ಪ್ರದೇಶದಿಂದ 'ಮನ್ ಕಿ ಬಾತ್' ಕೇಳುಗ ಶ್ರೀ ರಮೇಶ್ ಜೀ ಅವರಿಂದ ನನಗೆ ಪತ್ರ ಬಂದಿತ್ತು. ರಮೇಶ್ ಜೀ ಅವರು ತಮ್ಮ ಪತ್ರದಲ್ಲಿ ಗುಡ್ಡಬೆಟ್ಟಗಳ ಹಲವು ವಿಶೇಷತೆಗಳನ್ನು ವಿವರಿಸಿದ್ದಾರೆ. ಪರ್ವತಗಳ ಮೇಲಿನ ನಿವಾಸ-ವಸಾಹತುಗಳು ದೂರ-ದೂರದಲ್ಲಿರಬಹುದು, ಆದರೆ ಜನರ ಹೃದಯಗಳು ಪರಸ್ಪರ ಹತ್ತಿರದಲ್ಲಿವೆ ಎಂದು ಅವರು ಬರೆದಿದ್ದಾರೆ. ನಿಜಕ್ಕೂ, ಬೆಟ್ಟಗಳಲ್ಲಿ ವಾಸಿಸುವ ಜನರ ಜೀವನದಿಂದ ನಾವು ಬಹಳಷ್ಟು ಕಲಿಯಬಹುದು. ಮಲೆನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯಿಂದ ನಾವು ಪಡೆಯುವ ಮೊದಲ ಪಾಠವೆಂದರೆ ನಾವು ಪರಿಸ್ಥಿತಿಗಳ ಒತ್ತಡಕ್ಕೆ ಒಳಗಾಗದಿದ್ದರೆ, ನಾವು ಅವುಗಳನ್ನು ಸುಲಭವಾಗಿ ಜಯಿಸಬಹುದು ಮತ್ತು ಎರಡನೆಯದಾಗಿ, ಸ್ಥಳೀಯ ಸಂಪನ್ಮೂಲಗಳೊಂದಿಗೆ ನಾವು ಹೇಗೆ ಸ್ವಾವಲಂಬಿಯಾಗಬಹುದು ಎಂಬುದನ್ನು ಅವರು ತಮ್ಮ ಜೀವನ ಮೂಲಕ ನಮಗೆ ಹೇಳಿಕೊಡುತ್ತಾರೆ.
ಅವರು ಹೇಳಿದ ಮೊದಲ ಸುಂದರ ಪಾಠ, ಇತ್ತೀಚಿನ ದಿನಗಳಲ್ಲಿ ಸ್ಪಿತಿ ಪ್ರದೇಶದಲ್ಲಿ ಕಂಡುಬರುತ್ತದೆ. ಸ್ಪಿತಿ ಬುಡಕಟ್ಟು ಪ್ರದೇಶವಾಗಿದೆ. ಇಲ್ಲಿ, ಇತ್ತೀಚಿನ ದಿನಗಳಲ್ಲಿ, ಅವರೆಕಾಳು ಕೀಳುವುದು ನಡೆಯುತ್ತಿದೆ. ಬೆಟ್ಟದ ಜಮೀನುಗಳಲ್ಲಿ ಇದು ಶ್ರಮದಾಯಕ ಮತ್ತು ಕಷ್ಟಕರವಾದ ಕೆಲಸವಾಗಿದೆ. ಆದರೆ ಇಲ್ಲಿ ಹಳ್ಳಿಯ ಹೆಂಗಸರು ಒಂದೆಡೆ ಸೇರಿ ಪರಸ್ಪರರ ಹೊಲಗಳಿಂದ ಅವರೆಕಾಳು ಕೀಳುತ್ತಾರೆ. ಈ ಕಾರ್ಯದ ಜೊತೆಗೆ, ಮಹಿಳೆಯರು ಸ್ಥಳೀಯ ಹಾಡು 'ಛಪ್ರಾ ಮಾಝಿ ಛಾಪ್ರಾ' ಅನ್ನು ಸಹ ಹಾಡುತ್ತಾರೆ. ಅಂದರೆ ಇಲ್ಲಿ ಪರಸ್ಪರ ಸಹಕಾರವೂ ಜನಪದ ಸಂಪ್ರದಾಯದ ಭಾಗವಾಗಿದೆ. ಸ್ಥಳೀಯ ಸಂಪನ್ಮೂಲಗಳ ಬಳಕೆಯ ಅತ್ಯುತ್ತಮ ಉದಾಹರಣೆ ಸ್ಪಿತಿಯಲ್ಲಿಯೂ ಕಂಡುಬರುತ್ತದೆ. ಸ್ಪಿತಿಯಲ್ಲಿ ಹಸುಗಳನ್ನು ಸಾಕುವ ರೈತರು ಸಗಣಿ ಒಣಗಿಸಿ ಗೋಣಿಚೀಲಗಳಲ್ಲಿ ತುಂಬುತ್ತಾರೆ. ಚಳಿಗಾಲ ಬಂತೆಂದರೆ ಹಸುಗಳು ವಾಸಿಸುವ ಶೆಡ್ಗಳಲ್ಲಿ ಈ ಗೋಣಿಚೀಲಗಳನ್ನು ಹಾಕಲಾಗುತ್ತದೆ, ಇದನ್ನು ಇಲ್ಲಿ “ಖುದ್” ಎಂದು ಕರೆಯಲಾಗುತ್ತದೆ. ಹಿಮಪಾತದ ಸಮಯದಲ್ಲಿ, ಈ ಚೀಲಗಳು ಚಳಿಯಿಂದ ಹಸುಗಳಿಗೆ ರಕ್ಷಣೆ ನೀಡುತ್ತದೆ. ಚಳಿಗಾಲದ ನಂತರ, ಈ ಹಸುವಿನ ಸಗಣಿ, ಹೊಲಗಳಲ್ಲಿ ಗೊಬ್ಬರವಾಗಿ ಬಳಸಲ್ಪಡುತ್ತದೆ. ಅಂದರೆ, ನಮ್ಮ ಸಾಕುಪ್ರಾಣಿಗಳ ತ್ಯಾಜ್ಯವನ್ನು ಬಳಸಿಕೊಂಡು ಪ್ರಾಣಿಗಳ ರಕ್ಷಣೆ ಮತ್ತು ಹೊಲಗಳಿಗೆ ಗೊಬ್ಬರವನ್ನು ಸಹ ಬಳಸಲಾಗುತ್ತದೆ. ಸಾಗುವಳಿ ವೆಚ್ಚವೂ ಕಡಿಮೆ, ಹೊಲಗಳಲ್ಲಿ ಇಳುವರಿಯೂ ಹೆಚ್ಚು. ಅದಕ್ಕಾಗಿಯೇ ಈ ಪ್ರದೇಶವು ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಕೃಷಿಗೆ ಸ್ಫೂರ್ತಿಯಾಗಿದೆ.
ಸ್ನೇಹಿತರೇ, ನಮ್ಮ ಇತರ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲೂ ಇಂತಹ ಶ್ಲಾಘನೀಯ ಪ್ರಯತ್ನಗಳು ಕಂಡುಬರುತ್ತಿವೆ. ಉತ್ತರಾಖಂಡದಲ್ಲಿ ಅನೇಕ ರೀತಿಯ ಔಷಧಿಗಳು ಮತ್ತು ಸಸ್ಯಗಳು ಕಂಡುಬರುತ್ತವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಒಂದು ಹಣ್ಣು – “ಬೇಡು”. ಇದನ್ನು “ಹಿಮಾಲಯನ್ ಫಿಗ್ “ಎಂದೂ ಕರೆಯುತ್ತಾರೆ. ಈ ಹಣ್ಣಿನಲ್ಲಿ ಖನಿಜಗಳು ಮತ್ತು ವಿಟಮಿನ್ ಗಳು ಹೇರಳವಾಗಿ ಕಂಡುಬರುತ್ತವೆ. ಜನರು ಇದನ್ನು ಹಣ್ಣಿನ ರೂಪದಲ್ಲಿ ಮಾತ್ರವಲ್ಲ, ಅನೇಕ ರೋಗಗಳ ಚಿಕಿತ್ಸೆಯಲ್ಲಿಯೂ ಬಳಸುತ್ತಾರೆ. ಈ ಹಣ್ಣಿನಲ್ಲಿರುವ ಈ ಗುಣಗಳನ್ನು ಗಮನದಲ್ಲಿಟ್ಟುಕೊಂಡು ಈಗ ಬೀಡು ಜ್ಯೂಸ್, ಜಾಮ್, ಚಟ್ನಿ, ಉಪ್ಪಿನಕಾಯಿ, ಒಣಗಿಸಿ ತಯಾರಿಸಿದ ಒಣ ಹಣ್ಣುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಪಿಥೋರಗಢ ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಸ್ಥಳೀಯ ಜನರ ಸಹಕಾರದಿಂದ ಬೀಡುವನ್ನು ವಿವಿಧ ರೂಪಗಳಲ್ಲಿ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ. “ಪಹಾರಿ ಅಂಜೂರ” ಎಂದು ಬ್ರಾಂಡ್ ಮಾಡುವ ಮೂಲಕ ಆನ್ಲೈನ್ ಮಾರುಕಟ್ಟೆಯಲ್ಲೂ ಬೀಡು ಬಿಡುಗಡೆಯಾಗಿದೆ. ಇದರಿಂದಾಗಿ, ರೈತರು ಹೊಸ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ ಮಾತ್ರವಲ್ಲದೆ, ”ಬೀಡು” ಹಣ್ಣಿನ ಔಷಧೀಯ ಗುಣಗಳ ಪ್ರಯೋಜನಗಳು ದೂರದವರೆಗೆ ತಲುಪಲು ಪ್ರಾರಂಭಿಸಿವೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ಆರಂಭದಲ್ಲಿ, ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಉಲ್ಲೇಖಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಯ ಮಹಾರಥೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಹಬ್ಬಗಳು ಅಣಿಯಾಗುತ್ತಿವೆ.
ಇನ್ನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ, ಭಗವಾನ್ ಗಣೇಶನನ್ನು ಪೂಜಿಸುವ ಹಬ್ಬ ಬರುತ್ತದೆ. ಗಣೇಶ ಚತುರ್ಥಿ, ಅಂದರೆ ಗಣಪತಿ ಬಪ್ಪನ ಆಶೀರ್ವಾದದ ಹಬ್ಬ. ಗಣೇಶ ಚತುರ್ಥಿಯ ಜೊತೆಗೆ ಓಣಂ ಹಬ್ಬವೂ ಆರಂಭವಾಗುತ್ತದೆ. ಓಣಂ ಅನ್ನು ವಿಶೇಷವಾಗಿ ಕೇರಳದಲ್ಲಿ ಶಾಂತಿ ಮತ್ತು ಸಮೃದ್ಧಿಯ ಭಾವನೆಯೊಂದಿಗೆ ಆಚರಿಸಲಾಗುತ್ತದೆ. ಹರ್ತಾಲಿಕಾ ತೀಜ್ ಕೂಡ ಆಗಸ್ಟ್ 30 ರಂದು. ಒಡಿಶಾದಲ್ಲಿ ಸೆಪ್ಟೆಂಬರ್ 1 ರಂದು ನುವಾಖಾಯ್ ಹಬ್ಬವನ್ನು ಆಚರಿಸಲಾಗುತ್ತದೆ. ನುವಾಖೈ ಎಂದರೆ ಹೊಸ ಆಹಾರ, ಅಂದರೆ ಇದು ಕೂಡ ಇತರ ಅನೇಕ ಹಬ್ಬಗಳಂತೆ ನಮ್ಮ ಕೃಷಿ ಸಂಪ್ರದಾಯಗಳಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದೇ ವೇಳೆ ಜೈನ ಸಮುದಾಯದ ಸಂವತ್ಸರಿ ಉತ್ಸವವೂ ನಡೆಯಲಿದೆ. ನಮ್ಮ ಈ ಎಲ್ಲ ಹಬ್ಬಗಳು ನಮ್ಮ ಸಾಂಸ್ಕೃತಿಕ ಏಳಿಗೆ ಮತ್ತು ಜೀವಂತಿಕೆಗೆ ಸಮಾನಾರ್ಥಕವಾಗಿವೆ. ಈ ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ.
ಈ ಹಬ್ಬಗಳ ಜೊತೆಗೆ ನಾಳೆ ಆಗಸ್ಟ್ 29 ರಂದು ಮೇಜರ್ ಧ್ಯಾನಚಂದ್ ಜಿ ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಸಹ ಆಚರಿಸಲಾಗುತ್ತದೆ. ನಮ್ಮ ಯುವ ಕ್ರೀಡಾ ಪಟುಗಳು ಜಾಗತಿಕ ವೇದಿಕೆಗಳಲ್ಲಿ ನಮ್ಮ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸುವುದನ್ನು ಮುಂದುವರಿಸಲಿ, ಇದು ಧ್ಯಾನ್ ಚಂದ್ ಜಿ ಅವರಿಗೆ ನಮ್ಮ ಗೌರವವಾಗಿದೆ. ನಾವೆಲ್ಲರೂ ಸೇರಿ ದೇಶಕ್ಕಾಗಿ ಹೀಗೆ ಕೆಲಸ ಮಾಡೋಣ; ದೇಶದ ಗೌರವವನ್ನು ಹೆಚ್ಚಿಸುತ್ತಾ ಇರೋಣ...ಈ ಹಾರೈಕೆಯೊಂದಿಗೆ ನಾನು ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ. ಮುಂದಿನ ತಿಂಗಳು ಮತ್ತೊಮ್ಮೆ ‘ಮನ್ ಕಿ ಬಾತ್’ ನಡೆಯಲಿದೆ.
ಧನ್ಯವಾದಗಳು!
ನನ್ನ ಆತ್ಮೀಯ ದೇಶವಾಸಿಗಳೇ, ನಮಸ್ಕಾರ..!
ಇದು 'ಮನ್ ಕಿ ಬಾತ್' ನ 91ನೇ ಸಂಚಿಕೆಯಾಗಿದೆ. ಈ ಹಿಂದೆ ನಾವು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದೇವೆ, ನಾನಾ ವಿಷಯಗಳ ಬಗ್ಗೆ ನಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದೇವೆ, ಆದರೆ, ಈ ಬಾರಿಯ 'ಮನ್ ಕಿ ಬಾತ್' ಕಾರ್ಯಕ್ರಮ ತುಂಬಾ ವಿಶೇಷವಾಗಿದೆ. ಅದಕ್ಕೆ ಕಾರಣ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವುದು. ನಾವೆಲ್ಲರೂ ಈ ಒಂದು ಮಹತ್ವದ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ. ದೇವರು ನಮಗೆ ಈ ಸೌಭಾಗ್ಯ ಕರುಣಿಸಿದ್ದಾನೆ.
ನೀವು ಸಹ ಯೋಚಿಸಿ, ಒಂದು ವೇಳೆ, ನಾವು ಗುಲಾಮಗಿರಿಯ ಯುಗದಲ್ಲಿ ಜನಿಸಿದ್ದರೆ, ಈ ದಿನವನ್ನು ನಾವು ಹೇಗೆ ಊಹಿಸಿಕೊಳ್ಳ ಬಹುದಾಗಿತ್ತು? ಗುಲಾಮಗಿರಿಯಿಂದ ಮುಕ್ತವಾಗುವ ಆ ಹಂಬಲ, ಪರಾಧೀನತೆಯ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾತಂತ್ರ್ಯ ಪಡೆಯುವ ಕಾತುರ- ಎಷ್ಟು ದೊಡ್ಡದಾಗಿರಬಹುದು. ಆ ದಿನಗಳು, ಯಾವಾಗ ನಾವು ಪ್ರತಿದಿನ, ಲಕ್ಷಾಂತರ ದೇಶವಾಸಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ, ಸಂಘರ್ಷ ಮಾಡುವುದನ್ನು, ಬಲಿದಾನ ಮಾಡುವುದನ್ನು ನಾವು ನೋಡುತ್ತಿದ್ದುದಾರೆ, ನಾವು ಪ್ರತಿದಿನ ಬೆಳಗ್ಗೆ 'ನನ್ನ ಭಾರತ ಯಾವಾಗ ಸ್ವತಂತ್ರವಾಗುತ್ತದೆ ಮತ್ತು ಆಗಬಹುದು’ ಎಂಬ ಕನಸಿನೊಂದಿಗೆ ಏಳಬೇಕಾಗಿತ್ತು. ಅಲ್ಲದೆ ನಮ್ಮ ಜೀವನದಲ್ಲಿ ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾ, ಮುಂದಿನ ಪೀಳಿಗೆಗೆ ನಾವು ನಮ್ಮ ಜೀವ ಸಮರ್ಪಿಸಿಕೊಳ್ಳುವ ಆ ದಿನ ಎಂದು ಬರುತ್ತದೆ ಎಂದು ಮತ್ತು ನಮ್ಮ ಯೌವನವು ಹಾಗೆಯೇ ಕಳೆದುಹೋಗುತ್ತಿತ್ತು.
ಮಿತ್ರರೇ, ಜುಲೈ 31 ರಂದು, ಅಂದರೆ ಈ ಇಂದು ನಾವೆಲ್ಲ ದೇಶವಾಸಿಗಳು, ಹುತಾತ್ಮ ಯೋಧ ಶಹೀದ್ ಉಧಂ ಸಿಂಗ್ ಅವರಿಗೆ ನಮಿಸುತ್ತೇವೆ. ದೇಶಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಇತರ ಎಲ್ಲ ಮಹಾನ್ ಕ್ರಾಂತಿಕಾರಿಗಳಿಗೆ ನಾನು ವಿನಮ್ರ ಗೌರವ ನಮನವನ್ನು ಸಲ್ಲಿಸುತ್ತೇನೆ.
ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವವು ಜನಾಂದೋಲನದ ರೂಪ ಪಡೆಯುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲಾ ಕ್ಷೇತ್ರದ ಮತ್ತು ಸಮಾಜದ ಎಲ್ಲಾ ವರ್ಗದ ಜನರು ಇದಕ್ಕೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೇಘಾಲಯದಲ್ಲಿ ಅಂತಹುದೇ ಒಂದು ಕಾರ್ಯಕ್ರಮ ನಡೆದಿದೆ. ಮೇಘಾಲಯದ ವೀರ ಯೋಧ, ಯು. ತಿರೋತ್ ಸಿಂಗ್ ಅವರ ಪುಣ್ಯತಿಥಿಯಂದು ಜನರು ಅವರನ್ನು ನೆನಪಿಸಿಕೊಂಡರು. ತಿರೋತ್ ಸಿಂಗ್ ಅವರು ಖಾಸಿ ಬೆಟ್ಟಗಳನ್ನು ನಿಯಂತ್ರಿಸಲು ಮತ್ತು ಅಲ್ಲಿನ ಸಂಸ್ಕೃತಿಯನ್ನು ನಾಶಗೊಳಿಸಲು ಬ್ರಿಟಿಷರು ನಡೆಸಿದ ಸಂಚನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು ಸುಂದರ ಪ್ರದರ್ಶನ ನೀಡಿದರು. ಅವರು ಇತಿಹಾಸವನ್ನು ಜೀವಂತವಾಗಿರಿಸಿದರು. ಮೇಘಾಲಯದ ಶ್ರೇಷ್ಠ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ ಬಿಂಬಿಸುವ ಅತ್ಯಂತ ಸಂಭ್ರಮದ ಸಮಾರಂಭವನ್ನು ಕೂಡ ಆಯೋಜನೆಗೊಂಡಿತ್ತು. ಕೆಲವು ವಾರಗಳ ಹಿಂದೆ, ಕರ್ನಾಟಕದಲ್ಲಿ 'ಅಮೃತ ಭಾರತಿಗೆ ಕನ್ನಡದಾರತಿ' ಎಂಬ ವಿಶಿಷ್ಟ ಅಭಿಯಾನವನ್ನು ಆರಂಭಿಸಲಾಗಿದೆ. ಅದರಲ್ಲಿ ರಾಜ್ಯದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ವೈಭವ್ಯದಿಂದ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಜೊತೆಗೆ ಸ್ಥಳೀಯ ಸಾಹಿತ್ಯ ಸಾಧನೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಯಿತು.
ಮಿತ್ರರೇ, ಇದೇ ಜುಲೈ ತಿಂಗಳಲ್ಲಿ 'ಸ್ವಾತಂತ್ರ್ಯದ ರೈಲುಗಾಡಿ ಮತ್ತು ರೈಲು ನಿಲ್ದಾಣ' ಎಂದು ಹೆಸರಿಡಲಾದ ಬಹಳ ಆಸಕ್ತಿದಾಯಕ ಪ್ರಯತ್ನವನ್ನು ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೇಯ ಪಾತ್ರವನ್ನು ಜನರಿಗೆ ತಿಳಿಸಿಕೊಡುವುದು ಈ ಪ್ರಯತ್ನದ ಉದ್ದೇಶವಾಗಿದೆ. ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿರುವ ಇಂತಹ ಅನೇಕ ರೈಲು ನಿಲ್ದಾಣಗಳು ದೇಶದಲ್ಲಿ ಕಾಣಬಹುದು. ಈ ರೈಲು ನಿಲ್ದಾಣಗಳ ಬಗ್ಗೆ ತಿಳಿದರೆ ನಿಮಗೂ ಸಹ ಆಶ್ಚರ್ಯವಾಗಬಹುದು, ಜಾರ್ಖಂಡ್ನ ಗೋಮೋ ಜಂಕ್ಷನ್ ಅನ್ನು ಈಗ ಅಧಿಕೃತವಾಗಿ 'ನೇತಾಜಿ ಸುಭಾಸ್ ಚಂದ್ರ ಬೋಸ್ ಜಂಕ್ಷನ್ ಗೋಮೋ' ಎಂದು ಕರೆಯಲಾಗುತ್ತದೆ. ಅದು ಏಕೆ ಗೊತ್ತೇ? ವಾಸ್ತವವಾಗಿ ಈ ನಿಲ್ದಾಣದಲ್ಲಿ ನೇತಾಜಿ ಸುಭಾಷ್ ಅವರು ಕಾಲ್ಕಾ ಮೇಲ್ ರೈಲು ಹತ್ತಿ ಬ್ರಿಟಿಷ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಲಕ್ನೋ ಬಳಿಯ ಕಾಕೋರಿ ರೈಲು ನಿಲ್ದಾಣದ ಹೆಸರನ್ನು ನೀವೆಲ್ಲರೂ ಕೇಳಿರಬೇಕು. ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಅವರಂತಹ ವೀರರ ಹೆಸರುಗಳು ಈ ನಿಲ್ದಾಣದೊಂದಿಗೆ ಸಂಬಂಧ ಹೊಂದಿವೆ. ಇಲ್ಲಿಂದ ರೈಲಿನಲ್ಲಿ ಹೋಗುವ ಬ್ರಿಟಿಷರ ಖಜಾನೆಯನ್ನು ಲೂಟಿ ಮಾಡುವ ಮೂಲಕ ವೀರ ಕ್ರಾಂತಿಕಾರಿಗಳು ಬ್ರಿಟಿಷರಿಗೆ ತಮ್ಮ ಶಕ್ತಿಯನ್ನು ತೋರಿಸಿದ್ದರು. ನೀವು ತಮಿಳುನಾಡಿನ ಜನರೊಂದಿಗೆ ಮಾತನಾಡುವಾಗ, ತೂತುಕುಡಿ ಜಿಲ್ಲೆಯ ವಾಂಚಿ ಮಣಿಯಾಚ್ಚಿ ಜಂಕ್ಷನ್ ಬಗ್ಗೆ ತಿಳಿದುಕೊಳ್ಳಬಹುದು. ಈ ನಿಲ್ದಾಣಕ್ಕೆ ತಮಿಳು ಸ್ವಾತಂತ್ರ್ಯ ಹೋರಾಟಗಾರ ವಾಂಚಿನಾಥನ್ ಜಿ ಅವರ ಹೆಸರನ್ನು ಇಡಲಾಗಿದೆ. 25ರ ಹರೆಯದ ಯುವಕ ವಾಂಚಿ ಬ್ರಿಟಿಷ್ ಕಲೆಕ್ಟರ್ಗೆ ಆತನ ಕೃತ್ಯಗಳಿಗಾಗಿ ಶಿಕ್ಷೆ ನೀಡಿದ ಸ್ಥಳ ಇದಾಗಿದೆ.
ಮಿತ್ರರೇ, ಈ ಪಟ್ಟಿ ತುಂಬಾ ಉದ್ದವಾಗಿದೆ. ದೇಶದಾದ್ಯಂತ 24 ರಾಜ್ಯಗಳಲ್ಲಿ ಹರಡಿರುವ ಇಂತಹ 75 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ 75 ನಿಲ್ದಾಣಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತಿದ್ದು, ಅಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ನೀವು ನಿಮ್ಮ ಸಮೀಪದ ಅಂತಹ ಐತಿಹಾಸಿಕ ನಿಲ್ದಾಣಕ್ಕೆ ಭೇಟಿ ನೀಡಲು ಸಮಯವನ್ನು ತೆಗೆದಿರಿಸಿ. ನಿಮಗೆ ತಿಳಿದಿಲ್ಲದ ಸ್ವಾತಂತ್ರ್ಯ ಚಳವಳಿಯ ಇತಿಹಾಸದ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬಹುದು. ನಾನು ಅಂತಹ ನಿಲ್ದಾಣಗಳ ಹತ್ತಿರದ ಶಾಲೆಯ ವಿದ್ಯಾರ್ಥಿಗಳನ್ನು, ಶಿಕ್ಷಕರು ತಮ್ಮ ಶಾಲೆಯ ಸಣ್ಣ ಮಕ್ಕಳನ್ನು ಅಂತಹ ರೇಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಇಡೀ ಘಟನೆಯನ್ನು ಆ ಮಕ್ಕಳಿಗೆ ವಿವರಿಸಬೇಕು ಎಂದು ಒತ್ತಾಯಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ- ಹರ್ ಘರ್ ತಿರಂಗಾ, ಮನೆ ಮನೆಯಲ್ಲೂ ತ್ರಿವರ್ಣ ಧ್ವಜ' ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ, ಆಗಸ್ಟ್ 13 ರಿಂದ 15 ರವರೆಗೆ, ಒಂದು ವಿಶೇಷ ಅಭಿಯಾನದಲ್ಲಿ ನೀವು ನಿಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು. ತ್ರಿವರ್ಣ ಧ್ವಜ ನಮ್ಮನ್ನು ಬೆಸೆಯುತ್ತದೆ. ದೇಶಕ್ಕಾಗಿ ಏನನ್ನಾದರೂ ಮಾಡಲು ಉತ್ತೇಜಿಸುತ್ತದೆ. ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಮಾಧ್ಯಮ ಜಾಲತಾಣಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಬೇಕು ಎಂಬುದು ನನ್ನ ಸಲಹೆ. ಅಂದಹಾಗೆ, ನಿಮಗೆ ಗೊತ್ತೇ? ಆಗಸ್ಟ್ 2ಕ್ಕೂ ನಮ್ಮ ತ್ರಿವರ್ಣ ಧ್ವಜಕ್ಕೂ ವಿಶೇಷ ಸಂಬಂಧವಿದೆ. ಈ ದಿನ ನಮ್ಮ ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಜಿ ಅವರ ಜನ್ಮದಿನ. ಅವರಿಗೆ ನನ್ನ ಗೌರವಪೂರ್ವಕ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವಾಗ, ನಾನು ಶ್ರೇಷ್ಠ ಕ್ರಾಂತಿಕಾರಿ ಮೇಡಂ ಕಾಮಾ ಅವರನ್ನೂ ನೆನಪಿಸಿಕೊಳ್ಳುತ್ತೇನೆ. ತ್ರಿವರ್ಣ ಧ್ವಜವನ್ನು ರೂಪಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಮಿತ್ರರೇ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಆಯೋಜಿಸಲಾಗುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳ ದೊಡ್ಡ ಸಂದೇಶವೆಂದರೆ ದೇಶವಾಸಿಗಳಾದ ನಾವೆಲ್ಲರೂ ನಮ್ಮ ಕರ್ತವ್ಯವನ್ನು ಪೂರ್ಣ ನಿಷ್ಠೆಯಿಂದ ಪಾಲಿಸಬೇಕು. ಆಗ ಮಾತ್ರ ನಾವು ಆ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಲು ಸಾಧ್ಯ ಮತ್ತು ಅವರ ಕನಸಿನ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದಲೇ ನಮ್ಮ ಮುಂದಿನ 25 ವರ್ಷಗಳ ಈ ಅಮೃತ ಕಾಲವು ಪ್ರತಿಯೊಬ್ಬ ದೇಶವಾಸಿಯೂ ತಮ್ಮ ಕರ್ತವ್ಯ ನಿರ್ವಹಿಸಬೇಕಾದ ಅವಧಿಯಾಗಿದೆ.
ದೇಶವನ್ನು ವಿಮೋಚನೆಗೊಳಿಸಲು ನಮ್ಮ ವೀರ ಹೋರಾಟಗಾರರು ನಮಗೆ ಈ ಜವಾಬ್ದಾರಿ ನೀಡಿದ್ದಾರೆ ಮತ್ತು ಅದನ್ನು ನಾವು ಸಂಪೂರ್ಣ ಸಾಕಾರಗೊಳಿಸಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ವಿರುದ್ಧ ನಮ್ಮ ದೇಶವಾಸಿಗಳ ಹೋರಾಟ ಇನ್ನೂ ನಡೆಯುತ್ತಿದೆ. ಇಡೀ ಜಗತ್ತು ಇನ್ನೂ ಸೆಣೆಸುತ್ತಿದೆ. ಜನರಲ್ಲಿ ಸಮಗ್ರ ಆರೋಗ್ಯರಕ್ಷಣೆ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು, ಪ್ರತಿಯೊಬ್ಬರಿಗೂ ಸಾಕಷ್ಟು ಸಹಾಯ ಮಾಡಿದೆ. ಇದರಲ್ಲಿ ಭಾರತೀಯ ಸಾಂಪ್ರದಾಯಿಕ ಪದ್ಧತಿಗಳು ಎಷ್ಟು ಉಪಯುಕ್ತ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ, 'ಆಯುಷ್' ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಿದೆ. ಜಗತ್ತಿನಾದ್ಯಂತ ಆಯುರ್ವೇದ ಮತ್ತು ಭಾರತೀಯ ಔಷಧಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಇದು ಆಯುಷ್ ರಫ್ತು ದಾಖಲೆಯ ಪ್ರಮಾಣ ಏರಿಕೆಯಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಈ ವಲಯದಲ್ಲಿ ಅನೇಕ ಹೊಸ ನವೋದ್ಯಮಗಳು ಸಹ ಉದಯವಾಗುತ್ತಿರುವುದು ತುಂಬಾ ಸಂತೋಷಕರವಾಗಿದೆ. ಇತ್ತೀಚೆಗೆ, ಒಂದು ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ ನಡೆಯಿತು. ಅದರಲ್ಲಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವ ಬಂದಿವೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಕೊರೋನಾ ಅವಧಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ ಎಂಬುದು ಮತ್ತೊಂದು ಪ್ರಮುಖ ಸಂಗತಿಯಾಗಿದೆ. ಈ ಕುರಿತು ಹಲವು ಸಂಶೋಧನಾ ಅಧ್ಯಯನಗಳು ಪ್ರಕಟವಾಗುತ್ತಿವೆ. ಇದು ಖಂಡಿತವಾಗಿಯೂ ಉತ್ತಮ ಆರಂಭವಾಗಿದೆ.
ಮಿತ್ರರೇ, ನಾನಾ ರೀತಿಯ ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ದೇಶದಲ್ಲಿ ಮತ್ತೊಂದು ದೊಡ್ಡ ಪ್ರಯತ್ನ ನಡೆದಿದೆ. ‘ಭಾರತೀಯ ವರ್ಚುವಲ್ ಹರ್ಬೇರಿಯಂ’ ಅನ್ನು ಜುಲೈ ತಿಂಗಳಲ್ಲಿ ಆರಂಭಿಸಲಾಗಿದೆ. ನಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸಲು ನಾವು ಡಿಜಿಟಲ್ ಜಗತ್ತನ್ನು ಹೇಗೆ ಬಳಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ. ಭಾರತೀಯ ವರ್ಚುವಲ್ ಹರ್ಬೇರಿಯಂ, ಸಂರಕ್ಷಿತ ಸಸ್ಯಗಳು ಅಥವಾ ಸಸ್ಯದ ಭಾಗಗಳ ಡಿಜಿಟಲ್ ಚಿತ್ರಗಳ ಆಸಕ್ತಿದಾಯಕ ಸಂಗ್ರಹವಾಗಿದೆ, ಇದು ಜಾಲತಾಣದಲ್ಲಿ ಉಚಿತವಾಗಿ ಲಭ್ಯವಿದೆ. ಈ ವರ್ಚುವಲ್ ಹರ್ಬೇರಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಾದರಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿ ಇದೆ. ವರ್ಚುವಲ್ ಹರ್ಬೇರಿಯಂನಲ್ಲಿ, ಭಾರತದ ಸಸ್ಯಶಾಸ್ತ್ರೀಯ ವೈವಿಧ್ಯದ ಶ್ರೀಮಂತ ಚಿತ್ರಣವೂ ಗೋಚರಿಸುತ್ತದೆ. ಭಾರತೀಯ ಸಸ್ಯವರ್ಗದ ಸಂಶೋಧನೆಗೆ ಭಾರತೀಯ ವರ್ಚುವಲ್ ಹರ್ಬೇರಿಯಂ ಪ್ರಮುಖ ಸಂಪನ್ಮೂಲವಾಗಲಿದೆ ಎಂಬ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ಬಾರಿಯೂ 'ಮನ್ ಕಿ ಬಾತ್' ನಲ್ಲಿ ನಮ್ಮ ಮುಖದಲ್ಲಿ ಮುಗುಳ್ನಗು ಮೂಡಿಸುವಂತಹ ದೇಶವಾಸಿಗಳ ಅಂತಹ ಯಶಸ್ಸಿನ ಬಗ್ಗೆ ನಾವು ಚರ್ಚಿಸುತ್ತೇವೆ. ಯಶಸ್ಸಿನ ಕಥೆಯು ಮುಗುಳ್ನಗೆ ಹರಡಿದರೆ ಮತ್ತು ಸಿಹಿಯಾಗಿ ರಚಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಕೇಕ್ ಮೇಲೆ ಐಸ್ ಇಟ್ಟ ಹಾಗೆ ಎಂದು ಕರೆಯುತ್ತೀರಿ. ಇತ್ತೀಚಿನ ದಿನಗಳಲ್ಲಿ ನಮ್ಮ ರೈತರು ಜೇನು ಉತ್ಪಾದನೆಯಲ್ಲಿ ಇದೇ ರೀತಿಯ ಪವಾಡದಂತಹ ಸಾಧನೆ ಮಾಡುತ್ತಿದ್ದಾರೆ. ಜೇನಿನ ಸಿಹಿ ನಮ್ಮ ರೈತರ ಬದುಕನ್ನೂ ಸಹ ಬದಲಾಯಿಸುತ್ತಿದೆ, ಆದಾಯವೂ ಹೆಚ್ಚುತ್ತಿದೆ. ಹರಿಯಾಣದ ಯಮುನಾನಗರದಲ್ಲಿ, ಜೇನುಸಾಕಣೆ ಮಾಡುವ ಒರ್ವ ಮಿತ್ರ ಸುಭಾಷ್ ಕಂಬೋಜ್ ಜಿ ವಾಸಿಸುತ್ತಿದ್ದಾರೆ. ಸುಭಾಷ್ ಜಿ ಅವರು ಜೇನುಸಾಕಣೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ತರಬೇತಿ ಪಡೆದವರು. ಅವರು ಕೇವಲ ಆರು ಜೇನು ಪೆಟ್ಟಿಗೆಗಳೊಂದಿಗೆ ತಮ್ಮ ಕೃಷಿ ಆರಂಭಿಸಿದರು. ಇಂದು ಸುಮಾರು ಎರಡು ಸಾವಿರ ಪೆಟ್ಟಿಗೆಗಳಲ್ಲಿ ಜೇನು ಕೃಷಿ ಮಾಡುತ್ತಿದ್ದಾರೆ. ಅವರ ಜೇನುತುಪ್ಪ ಅನೇಕ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಜಮ್ಮುವಿನ ಪಲ್ಲಿ ಗ್ರಾಮದ ವಿನೋದ್ ಕುಮಾರ್ ಅವರು ಒಂದೂವರೆ ಸಾವಿರಕ್ಕೂ ಹೆಚ್ಚು ಕಾಲೋನಿಗಳಲ್ಲಿ ಜೇನುಸಾಕಣೆ ಮಾಡುತ್ತಿದ್ದಾರೆ. ಅವರು ಕಳೆದ ವರ್ಷ ರಾಣಿ ಜೇನುನೊಣ ಸಾಕಣೆ ತರಬೇತಿ ಪಡೆದಿದ್ದಾರೆ. ಅವರು ಇದರಿಂದ ವಾರ್ಷಿಕ 15 ರಿಂದ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಮತ್ತೊಬ್ಬ ರೈತ ಕರ್ನಾಟಕದ ಮಧುಕೇಶ್ವರ ಹೆಗಡೆ ಜಿ ಅವರು. ಮಧುಕೇಶ್ವರ್ 50 ಜೇನುನೊಣಗಳ ಕಾಲೋನಿಗಳಿಗೆ ಭಾರತ ಸರ್ಕಾರದಿಂದ ಸಬ್ಸಿಡಿ ತೆಗೆದುಕೊಂಡಿದ್ದಾರೆಂದು ತಿಳಿಸಿದ್ದಾರೆ. ಅವರು ಇಂದು 800 ಕ್ಕೂ ಹೆಚ್ಚು ಜೇನು ಕಾಲೋನಿಗಳನ್ನು ಹೊಂದಿದ್ದಾರೆ ಮತ್ತು ಅವರು ಹಲವು ಟನ್ ಗಳಷ್ಟು ಜೇನುತುಪ್ಪ ಮಾರಾಟ ಮಾಡುತ್ತಾರೆ. ಅವರು ತಮ್ಮ ಕೃಷಿಯಲ್ಲಿ ಹೊಸತನ ಪರಿಚಯಿಸಿದರು ಮತ್ತು ಅವರು ನೇರಳೆ ಜೇನು, ತುಳಸಿ ಜೇನು, ನೆಲ್ಲಿ ಜೇನು ಮುಂತಾದ ವನಸ್ಪತಿಯುಕ್ತ ಜೇನುತುಪ್ಪಗಳನ್ನು ಸಹ ಮಾಡುತ್ತಿದ್ದಾರೆ. ಮಧುಕೇಶ್ವರ್ ಜಿ ಜೇನು ಕೃಷಿಯಲ್ಲಿ ನಿಮ್ಮ ನಾವೀನ್ಯ ಮತ್ತು ಯಶಸ್ಸು ಕೂಡ ನಿಮ್ಮ ಹೆಸರನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದೆ.
ಮಿತ್ರರೇ, ನಮ್ಮ ಸಾಂಪ್ರದಾಯಿಕ ಆರೋಗ್ಯ ವಿಜ್ಞಾನದಲ್ಲಿ ಜೇನುತುಪ್ಪಕ್ಕೆ ಎಷ್ಟು ಪ್ರಾಮುಖ್ಯ ನೀಡಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆಯುರ್ವೇದ ಗ್ರಂಥಗಳಲ್ಲಿ ಜೇನುತುಪ್ಪವನ್ನು ಮಕರಂದ ಅಥವಾ ಸಂಜೀವಿನಿ (ಪರಮೌಷಧ) ಎಂದು ವಿವರಿಸಲಾಗಿದೆ. ಜೇನುತುಪ್ಪವು ರುಚಿ ಮಾತ್ರವಲ್ಲ, ಆರೋಗ್ಯವನ್ನೂ ನೀಡುತ್ತದೆ. ಜೇನು ಉತ್ಪಾದನೆಯಲ್ಲಿ ಇಂದು ಹಲವು ಸಾಧ್ಯತೆಗಳಿದ್ದು, ವೃತ್ತಿಪರ ಶಿಕ್ಷಣ ಪಡೆಯುವ ಯುವಕರೂ ಅದನ್ನೇ ಸ್ವಯಂ ಉದ್ಯೋಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಂತಹ ಯುವಕರಲ್ಲಿ ಉತ್ತರಪ್ರದೇಶದ ಗೋರಖ್ಪುರ ನಿವಾಸಿ ನಿಮಿತ್ ಸಿಂಗ್ ಒಬ್ಬರು. ನಿಮಿತ್ ಜಿ ಬಿ.ಟೆಕ್ ಮಾಡಿದ್ದಾರೆ.ಅವರ ತಂದೆ ಕೂಡ ವೈದ್ಯರಾಗಿದ್ದಾರೆ, ಆದರೆ ಅವರ ಅಧ್ಯಯನದ ನಂತರ, ನಿಮಿತ್ ಅವರು ಉದ್ಯೋಗದ ಬದಲು ಸ್ವಯಂ ಉದ್ಯೋಗ ಮಾಡಲು ನಿರ್ಧರಿಸಿದರು. ಅವರು ಜೇನು ಉತ್ಪಾದನೆ ಆರಂಭಿಸಿದರು. ಅದರ ಗುಣಮಟ್ಟದ ಪರಿಶೀಲನೆಗಾಗಿ ಲಕ್ನೋದಲ್ಲಿ ಅವರು ಸ್ವಂತ ಪ್ರಯೋಗಾಲಯ ಸ್ಥಾಪಿಸಿದರು. ನಿಮಿತ್ ಜಿ ಇದೀಗ ಜೇನು ಮತ್ತು ಜೇನಿನ ಮೇಣದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ ಮತ್ತು ವಿವಿಧ ರಾಜ್ಯಗಳಿಗೆ ಹೋಗಿ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಅಂತಹ ಯುವಕರ ಕಠಿಣ ಪರಿಶ್ರಮದಿಂದ ದೇಶ ಇಂದು ಭಾರಿ ದೊಡ್ಡ ಜೇನು ಉತ್ಪಾದಕ ರಾಷ್ಟ್ರವಾಗುತ್ತಿದೆ. ದೇಶದಿಂದ ಜೇನುತುಪ್ಪದ ರಫ್ತು ಕೂಡ ಹೆಚ್ಚಾಗಿದೆ ಎಂಬುದನ್ನು ತಿಳಿದರೆ ನಿಮಗೂ ಸಂತೋಷವಾಗುತ್ತದೆ. ದೇಶವು 'ರಾಷ್ಟ್ರೀಯ ಜೇನು ಸಾಕಣೆ ಮತ್ತು ಜೇನು ಮಿಷನ್' ನಂತಹ ಅಭಿಯಾನಗಳನ್ನು ಆರಂಭಿಸಿದೆ, ಅದಕ್ಕಾಗಿ ರೈತರು ಕಷ್ಟಪಟ್ಟು ದುಡಿದು ನಮ್ಮ ಜೇನುತುಪ್ಪದ ಸಿಹಿಯವನ್ನು ಜಗತ್ತಿನಾದ್ಯಂತ ಪಸರಿಸಲು ಆರಂಭಿಸಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ದೊಡ್ಡ ಸಾಧ್ಯತೆಗಳಿವೆ. ನಮ್ಮ ಯುವಕರು ಈ ಅವಕಾಶ ಜೊತೆ ಸೇರಬೇಕು ಮತ್ತು ಅವುಗಳನ್ನು ಬಳಸಿಕೊಂಡು ಲಾಭ ಪಡೆದುಕೊಳ್ಳಬೇಕು ಮತ್ತು ಹೊಸ ಸಾಧ್ಯತೆಗಳನ್ನು ಅರಿತು ಸಾಕಾರಗೊಳಿಸಿಕೊಳ್ಳ ಬೇಕೆಂದು ನಾನು ಬಯಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ, ನಾನು ಹಿಮಾಚಲ ಪ್ರದೇಶದ ನಿವಾಸಿ, ‘ಮನ್ ಕಿ ಬಾತ್‘ ಕೇಳುಗರಾದ ಶ್ರೀ ಆಶಿಷ್ ಬಲ್ ಜಿ ಅವರಿಂದ ಒಂದು ಸ್ವೀಕರಿಸಿದ್ದೇನೆ. ಅವರು ತಮ್ಮ ಪತ್ರದಲ್ಲಿ ಚಂಬಾದ “ಮಿಂಜರ್ ಮೇಳ’ ಕುರಿತು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಮಿಂಜರ್ ಎಂದು ಜೋಳದ ಹೂವನ್ನು ಕರೆಯುತ್ತಾರೆ. ಜೋಳದ ತೆನೆಯಲ್ಲಿ ಹೂವು ಮೂಡಿದಾಗ ಮಿಂಜರ್ ಮೇಳ ಆಯೋಜಿಸಲಾಗುತ್ತದೆ ಹಾಗೂ ಈ ಮೇಳದಲ್ಲಿ ದೇಶಾದ್ಯಂತ ಪ್ರವಾಸಿಗರು ದೂರದ ದೂರದ ಪ್ರದೇಶಗಳಿಂದ ಪಾಲ್ಗೊಳ್ಳಲು ಬರುತ್ತಾರೆ. ಕಾಕತಾಳೀಯವೆಂದರೆ, ಈಗ ಮಿಂಜರ್ ಜಾತ್ರೆ ನಡೆಯುತ್ತಿದೆ. ಒಂದು ವೇಳೆ ನೀವು ಹಿಮಾಚಲ ಪ್ರದೇಶಕ್ಕೆ ಈಗ ಪ್ರವಾಸಕ್ಕೆಂದು ಹೋಗಿದ್ದರೆ, ಈ ಮೇಳವನ್ನು ನೋಡಲು ಚಂಬಾಗೆ ಹೋಗಬಹುದು. ಚಂಬಾ ನಿಜಕ್ಕೂ ಎಷ್ಟೊಂದು ಸುಂದರ ಪ್ರದೇಶವೆಂದರೆ, ಇಲ್ಲಿನ ಜಾನಪದ ಗೀತೆಗಳಲ್ಲಿ ಹೀಗೆಂದು ಮತ್ತೆ ಮತ್ತೆ ಹೇಳಲಾಗುತ್ತದೆ –
“ಚಂಬೇ ಏಕ್ ದಿನ್ ಓನಾ ಕಾನೇ ಮಹೀನಾ ರೈನಾ”
ಅಂದರೆ, ಯಾರು ಕೇವಲ ಒಂದು ದಿನಕ್ಕೆಂದು ಚಂಬಾಗೆ ಬರುತ್ತಾರೋ, ಅವರು ಅದರ ಸೌಂದರ್ಯ ನೋಡಿ ತಿಂಗಳು ಪೂರ್ತಿ ಇಲ್ಲಿಯೇ ಉಳಿಯುತ್ತಾರೆಂಬುದು ಅದರ ಅರ್ಥ.
ಮಿತ್ರರೇ, ನಮ್ಮ ದೇಶದಲ್ಲಿ ಮೇಳ, ಜಾತ್ರೆಗಳಿಗೆ ಬಹು ದೊಡ್ಡ ಸಾಂಸ್ಕೃತಿಕ ಪ್ರಾಮುಖ್ಯ ಇದೆ. ಮೇಳ-ಜಾತ್ರೆ ಎನ್ನುವುದು ಜನ-ಮನ ಎರಡನ್ನೂ ಒಂದುಗೂಡಿಸುತ್ತದೆ. ಹಿಮಾಚಲ ಪ್ರದೇಶದಲ್ಲಿ ಮಳೆಗಾಲದ ನಂತರ ಮುಂಗಾರು ಬೆಳೆ ಕೊಯ್ಲಿಗೆ ಬಂದಾಗ, ಸೆಪ್ಟೆಂಬರ್ ತಿಂಗಳಿನಲ್ಲಿ ಶಿಮ್ಲಾ, ಮಂಡಿ, ಕುಲು, ಮತ್ತು ಸೋಲನ್ ನಲ್ಲಿ ಸೈರಿ ಅಥವಾ ಸೈರ್ ಆಚರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಲ್ಲಿಯೇ ಜಾಗರಾ ಜಾತ್ರೆ ಕೂಡಾ ಬರಲಿದೆ. ಜಾಗರಾ ಜಾತ್ರೆಯಲ್ಲಿ ಮಹಸು ದೇವತೆಯ ಆವಾಹನೆ ಮಾಡಿ, ಬೀಸೂ ಹಾಡುಗಳನ್ನು ಹಾಡಲಾಗುತ್ತದೆ. ಮಹಾಸು ದೇವತೆಯ ಜಾತ್ರೆ ಹಿಮಾಚಲ ಪ್ರದೇಶದಲ್ಲಿ ಶಿಮ್ಲಾ, ಕಿನ್ನೌರ್ ಮತ್ತು ಸಿರಮೌರ್ ನಲ್ಲಿ ಹಾಗೂ ಉತ್ತರಾಖಂಡ್ ನಲ್ಲಿ ಏಕಕಾಲದಲ್ಲಿ ನಡೆಯುತ್ತದೆ.
ಮಿತ್ರರೇ, ನಮ್ಮ ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಆದಿವಾಸಿ ಸಮುದಾಯದ ಅನೇಕ ಪಾರಂಪರಿಕ ಜಾತ್ರೆ ನಡೆಯುತ್ತವೆ. ಅವುಗಳಲ್ಲಿ ಕೆಲವು ಜಾತ್ರೆಗಳು ಬುಡಕಟ್ಟು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದರೆ ಕೆಲವು ಜಾತ್ರೆಗಳು ಬುಡಕಟ್ಟು ಇತಿಹಾಸ ಹಾಗೂ ಪರಂಪರೆಗೆ ಸಂಬಂಧಿಸಿದ್ದಾಗಿವೆ. ಹಾಗೆಯೇ ನಿಮಗೆ ಅವಕಾಶ ಸಿಕ್ಕರೆ ತೆಲಂಗಾಣದ ಮೇದಾರಂನ ನಾಲ್ಕು ದಿವಸಗಳ ಸಮಕ್ಕಾ-ಸರಳಮ್ಮಾ ಜಾತ್ರೆ ನೋಡಲು ಖಂಡಿತಾ ಹೋಗಿ. ಈ ಜಾತ್ರೆಯನ್ನು ತೆಲಂಗಾಣದ ಮಹಾಕುಂಭವೆಂದು ಕರೆಯಲಾಗುವುದು. ಸರಳಮ್ಮ ಜಾತ್ರೆಯನ್ನು ಇಬ್ಬರು ಬುಡಕಟ್ಟು ಮಹಿಳಾ ನಾಯಕಿಯರಾದ ಸಮಕ್ಕಾ ಮತ್ತು ಸರಳಮ್ಮ ಅವರುಗಳ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಕೇವಲ ತೆಲಂಗಾಣ ಮಾತ್ರವಲ್ಲ ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಕೋಯಾ ಅದಿವಾಸಿ ಸಮುದಾಯದ ನಂಬಿಕೆಯ ದೊಡ್ಡ ಆಚರಣೆಯಾಗಿದೆ. ಆಂಧ್ರಪ್ರದೇಶದಲ್ಲಿ ಮಾರಿದಮ್ಮ ಜಾತ್ರೆ ಕೂಡಾ ಬುಡಕಟ್ಟು ಸಮಾಜದ ನಂಬಿಕೆಗಳಿಗೆ ಸಂಬಂಧಿಸಿದ ದೊಡ್ಡ ಜಾತ್ರೆಯಾಗಿದೆ. ಮಾರಿದಮ್ಮ ಜಾತ್ರೆಯು ಜ್ಯೇಷ್ಠ ಮಾಸದ ಅಮಾವಾಸ್ಯೆಯಿಂದ ಆಷಾಢ ಮಾಸದ ಅಮಾವಾಸ್ಯೆಯವರೆಗೂ ನಡೆಯುತ್ತದೆ ಮತ್ತು ಅದನ್ನು ಅಲ್ಲಿನ ಆದಿವಾಸಿ ಸಮಾಜವು ಶಕ್ತಿ ಉಪಾಸನೆಯ ಕಾಲವೆಂದು ಕೂಡಾ ನಂಬಿ ಆಚರಿಸುತ್ತಾರೆ. ಇಲ್ಲಿಯೇ, ಪೂರ್ವ ಗೋದಾವರಿಯ ಪೆದ್ದಾಪುರಂದಲ್ಲಿ, ಮಾರಿದಮ್ಮಾ ದೇವಾಲಯ ಕೂಡಾ ಇದೆ. ಇದೇ ರೀತಿ ರಾಜಸ್ಥಾನದಲ್ಲಿ ಗರಾಸಿಯಾ ಜನಾಂಗದ ಜನರು ವೈಶಾಖ ಶುಕ್ಲ ಚತುರ್ದಶಿಯಂದು ‘ಸಿಯಾವಾ ಜಾತ್ರೆ’ ಅಥವಾ ‘ಮನಖಾಂ ರೋ ಮೇಳ’ ಆಯೋಜಿಸುತ್ತಾರೆ.
ಛತ್ತೀಸ್ ಗಢದ ಬಸ್ತಾರ್ ನಲ್ಲಿನ ನಾರಾಯಣಪುರದ ‘ಮಾವಲಿ ಜಾತ್ರೆ’ ತುಂಬಾ ವಿಶೇಷವಾಗಿರುತ್ತದೆ. ಸಮೀಪದಲ್ಲೇ, ಮಧ್ಯಪ್ರದೇಶದ ಭಗೋರಿಯಾ ಮೇಳ ಕೂಡಾ ಹೆಸರುವಾಸಿಯಾಗಿದೆ. ಭಗೋರಿಯಾಜಾತ್ರೆಯ ಆರಂಭ ಭೋಜ ಮಹಾರಾಜನ ಕಾಲದಲ್ಲಿ ಆಗಿದೆ ಎಂದು ಹೇಳಲಾಗುತ್ತದೆ. ಆಗ ಭೀಲ್ಲರ ದೊರೆ, ಕಸುಮರಾ ಮತ್ತು ಬಲುನ್ ಮೊದಲ ಬಾರಿಗೆ ತಮ್ಮ ತಮ್ಮ ರಾಜಧಾನಿಗಳಲ್ಲಿ ಇದನ್ನು ಆಯೋಜಿಸಿದ್ದರು. ಅಂದಿನಿಂದ ಇಂದಿನವರೆಗೂ, ಈ ಜಾತ್ರೆಯನ್ನು ಅಷ್ಟೇ ಉತ್ಸಾಹದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ, ಗುಜರಾತ್ ನಲ್ಲಿ ತರಣೇತರ್ ಮತ್ತು ಮಾಧೋಪುರ್ ನಂತಹ ಅನೇಕ ಜಾತ್ರೆಗಳು ಬಹಳ ಪ್ರಸಿದ್ಧವಾಗಿದೆ.
ಜಾತ್ರೆಗಳು ನಮ್ಮ ಸಮಾಜಕ್ಕೆ,ನಮ್ಮ ಜೀವನಕ್ಕೆ ಶಕ್ತಿಯ ಬಹು ದೊಡ್ಡ ಮೂಲವಾಗಿದೆ. ನೀವು ವಾಸ ಮಾಡುವ ಪ್ರದೇಶದ ಸುತ್ತ ಮುತ್ತ ಕೂಡಾ ಇಂತಹ ಹಲವು ಜಾತ್ರೆಗಳಿರಬಹುದು. ಆಧುನಿಕ ಕಾಲದಲ್ಲಿ ಸಮಾಜದಲ್ಲಿನ ಈ ಹಳೆಯ ಕೊಂಡಿಗಳು, ಏಕ್ ಭಾರತ-ಶ್ರೇಷ್ಠ್ ಭಾರತ ಭಾವನೆ ಮತ್ತಷ್ಟು ಬಲಿಷ್ಠವಾಗಿ ಅತ್ಯಂತ ಪ್ರಮುಖವಾದವುಗಳಾಗಿವೆ. ನಮ್ಮ ಯುವಜನತೆ ಅವುಗೊಳೊಂದಿಗೆ ಬೆಎರೆಯಬೇಕು ಮತ್ತು ಅಲ್ಲಿನ ಭೇಟಿ ನೀಡಿದಾಗ ಅಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು. ಅಗತ್ಯಬಿದ್ದರೆ ನೀವು ಯಾವುದಾದರೊಂದು ವಿಶೇಷ ಹ್ಯಾಶ್ ಟ್ಯಾಗ್ ಕೂಡಾ ಉಪಯೋಗಿಸಬಹುದು. ಇದರಿಂದಾಗಿ ಈ ಜಾತ್ರೆಗಳ ಬಗ್ಗೆ ಇತರರಿಗೆ ಕೂಡಾ ತಿಳಿಯುತ್ತದೆ. ನೀವು ಸಂಸ್ಕೃತಿ ಸಚಿವಾಲಯದ ಜಾಲತಾಣದಲ್ಲಿ ಕೂಡಾ ಚಿತ್ರಗಳನ್ನು ಅಪ್ಲೋಡ್ ಮಾಡಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಸ್ಕೃತಿ ಸಚಿವಾಲಯ ಒಂದು ಸ್ಪರ್ಧೆಯನ್ನು ಕೂಡಾ ಆರಂಭಿಸಲಿದೆ. ಆಗ ಜಾತ್ರೆಗಳಿಗೆ ಸಂಬಂಧಿಸಿದ ಅತ್ಯುತ್ತಮ ಚಿತ್ರ ಕಳುಹಿಸಿಕೊಟ್ಟವರಿಗೆ ಬಹುಮಾನ ಕೂಡಾ ನೀಡಲಾಗುವುದು. ಹಾಗಿದ್ದರೆ ಇನ್ನು ತಡ ಮಾಡಬೇಡಿ, ಜಾತ್ರೆಗಳಲ್ಲಿ ಸುತ್ತಾಡಿ, ಅವುಗಳ ಚಿತ್ರಗಳನ್ನು ಹಂಚಿಕೊಳ್ಳಿ ಮತ್ತು ಇದಕ್ಕಾಗಿ ನಿಮಗೆ ಬಹುಮಾನ ಲಭಿಸಲೂ ಬಹುದು.
ನನ್ನ ಪ್ರಿಯ ದೇಶವಾಸಿಗಳೇ, ನಿಮಗೆ ನೆನಪಿರಬಹುದು, ಮನ್ ಕಿ ಬಾತ್ ನ ಒಂದು ಸಂಚಿಕೆಯಲ್ಲಿ ನಾನು ಹೇಳಿದ್ದೆ ಆಟಿಕೆಗಳ ರಫ್ತಿನಲ್ಲಿ ಶಕ್ತಿ ಕೇಂದ್ರ ಎನಿಸುವ ಎಲ್ಲ ಸಾಮರ್ಥ್ಯ ಭಾರತಕ್ಕಿದೆ ಎಂದು. ನಾನು ವಿಶೇಷವಾಗಿ ಕ್ರೀಡಾ ಮತ್ತು ಆಟಗಳಲ್ಲಿ ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಚರ್ಚೆ ಮಾಡಿದ್ದೆ. ಭಾರತದ ಸ್ಥಳೀಯ ಆಟಿಕೆಗಳು ಪರಂಪರೆ ಹಾಗೂ ಪರಿಸರ ಸ್ನೇಹಿ ಎರಡಕ್ಕೂ ಹೊಂದಿಕೆಯಾಗುತ್ತದೆ. ಇಂದು ನಾನು ನಿಮ್ಮೊಂದಿಗೆ ಭಾರತೀಯ ಆಟಿಕೆಗಳ ಯಶಸ್ಸನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಯುವಜನತೆ, ನವೋದ್ಯಮಗಳು, ಮತ್ತು ಉದ್ಯಮಿಗಳಿಂದಾಗಿ ನಮ್ಮ ಆಟಿಕೆ ಉದ್ಯಮ ಮಾಡಿರು ಸಾಧನೆಯನ್ನು, ಗಳಿಸಿರುವ ಯಶಸ್ಸನ್ನು ಯಾರೂ ಊಹಿಸಿರಲು ಸಾಧ್ಯವಿಲ್ಲ. ಭಾರತೀಯ ಆಟಿಕೆಗಳ ಮಾತು ಬಂದಾಗ ಇಂದು ಎಲ್ಲೆಲ್ಲೂ ಸ್ಥಳೀಯ ಉತ್ಪನ್ನಗಳಿಗೆ ಧ್ವನಿ (ವೋಕಲ್ ಫಾರ್ ಲೋಕಲ್ ನ) ಕೇಳಿ ಬರುತ್ತದೆ. ಭಾರತದಲ್ಲಿ ಈಗ ವಿದೇಶಗಳಿಂದ ಬರುವ ಆಟಿಕೆಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗುತ್ತಿದೆ ಎಂಬುದನ್ನು ತಿಳಿದು ನಿಮಗೆ ಸಂತೋಷವೆನಿಸುತ್ತದೆ. ಮೊದಲಿಗೆ 3 ಸಾವಿರ ಕೋಟಿ ರೂಪಾಯಿ ಮೌಲ್ಯಕ್ಕೂ ಅಧಿಕ ಆಟಿಕೆಗಳು ಹೊರದೇಶಗಳಿಂದ ಬರುತ್ತಿದ್ದವು, ಈಗ ಇವುಗಳ ಆಮದು ಶೇಕಡಾ 70 ರಷ್ಟು ಕಡಿತಗೊಂಡಿದೆ ಮತ್ತು ಇದೇ ಅವಧಿಯಲ್ಲಿ ಭಾರತವು ಎರಡು ಸಾವಿರದ ಆರುನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಟಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ ಎಂಬುದನ್ನು ತಿಳಿಯಲು ಸಂತೋಷವಾಗುತ್ತಿದೆ. ಮೊದಲು ಕೇವಲ 300-400 ಕೋಟಿ ರೂಪಾಯಿ ಆಟಿಕೆಗಳು ಮಾತ್ರಾ ಭಾರತದಿಂದ ಹೊರದೇಶಗಳಿಗೆ ಹೋಗುತ್ತಿದ್ದವು ಮತ್ತು ಇದೆಲ್ಲವೂ ಕೊರೋನಾ ಅವಧಿಯಲ್ಲಿ ನಡೆಯಿತೆಂದು ನಿಮಗೆ ತಿಳಿದಿದೆ. ಭಾರತ ಆಟಿಕೆ ವಲಯವು ತನ್ನನ್ನು ತಾನು ಪರಿವರ್ತಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಭಾರತೀಯ ಆಟಿಕೆ ತಯಾರಕರು ಇದೀಗ ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಆಧಾರಿತ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ದೇಶದಲ್ಲಿ ಅಲ್ಲಲ್ಲಿ ಇರುವ ಆಟಿಕೆಗಳ ಕ್ಲಸ್ಟರ್ ಗಳು, ಆಟಿಕೆ ತಯಾರಿಸುವ ಸಣ್ಣ ಪುಟ್ಟ ಉದ್ಯಮಿಗಳಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಈ ಸಣ್ಣ ಪುಟ್ಟ ಉದ್ಯಮಿಗಳು ತಯಾರಿಸಿರುವ ಆಟಿಕೆಗಳು ಈಗ ಜಗತ್ತಿನೆಲ್ಲೆಡೆಗೆ ಹೋಗುತ್ತಿವೆ. ಭಾರತದ ಆಟಿಕೆ ತಯಾರಕರು, ಇದೀಗ ವಿಶ್ವದ ಪ್ರಮುಖ ಜಾಗತಿಕ ಆಟಿಕೆ ಬ್ರಾಂಡ್ ಗಳ ಜೊತೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನವೋದ್ಯಮ ವಲಯ ಕೂಡಾ ಆಟಿಕೆಗಳ ಪ್ರಪಂಚದತ್ತ ಸಾಕಷ್ಟು ಗಮನ ಹರಿಸುತ್ತಿದೆ ಎನ್ನುವುದು ನನಗೆ ಇಷ್ಟದ ಸಂಗತಿಯಾಗಿದೆ, ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ತಮಾಷೆಯ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶೂಮಿ ಆಟಿಕೆಗಳ ಹೆಸರಿನ ನವೋದ್ಯಮ, ಪರಿಸರ ಸ್ನೇಹಿ ಆಟಿಕೆಗಳತ್ತ ಗಮನ ಹರಿಸುತ್ತಿದೆ. ಗುಜರಾತ್ ನಲ್ಲಿ ಆರ್ಕಿಡ್ಜೂ ಕಂಪೆನಿಯು ಎಆರ್ ಆಧಾರಿತ ಫ್ಲ್ಯಾಶ್ ಕಾರ್ಡ್ ಗಳು ಮತ್ತು ಎಆರ್ ಆಧಾರಿತ ಕತೆ ಪುಸಕ್ತಗಳನ್ನು ತಯಾರಿಸುತ್ತಿದೆ. ಪೂನಾದ ಫನ್ವೆನ್ಷನ್ ಕಂಪನಿಯು ಕಲಿಕೆ, ಆಟಿಕೆ ಮತ್ತು ಪದಬಂಧ (ಪಜಲ್ಸ್) ನ ಮೂಲಕ ವಿಜ್ಞಾನ, ತಂತ್ರಜ್ಞಾನ, ಮತ್ತು ಗಣಿತದಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸುವ ಕೆಲಸದಲ್ಲಿ ತೊಡಗಿದೆ. ಆಟಿಕೆಗಳ ಜಗತ್ತಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಇಂತಹ ಎಲ್ಲಾ ತಯಾರಕರಿಗೆ, ನವೋದ್ಯಮಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಬನ್ನಿ, ನಾವೆಲ್ಲರೂ ಸೇರಿ, ಭಾರತೀಯ ಆಟಿಕೆಗಳನ್ನು, ಜಗತ್ತಿನೆಲ್ಲೆಡೆ, ಮತ್ತಷ್ಟು ಜನಪ್ರಿಯಗೊಳಿಸೋಣ. ಇದರೊಂದಿಗೆ, ನಾನು ಹೆಚ್ಚು ಹೆಚ್ಚು ಭಾರತೀಯ ಆಟಿಕೆಗಳನ್ನು, ಪಧಬಂಧಗಳನ್ನು ಮತ್ತು ಕೀಡಾ ಆಟಿಕೆಗಳನ್ನು ಖರೀದಿಸಬೇಕೆಂದು ಪೋಷಕರನ್ನು ಒತ್ತಾಯಪಡಿಸುತ್ತೇನೆ.
ಮಿತ್ರರೇ, ಇಂದು ನಮ್ಮ ಯುವಜನತೆ, ತರಗತಿಯೇ ಆಗಲಿ ಅಥವಾ ಆಟದ ಮೈದಾನವೇ ಆಗಲಿ, ಪ್ರತಿಯೊಂದು ಕ್ಷೇತ್ರದಲ್ಲೂ, ದೇಶವೇ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಇದೇ ತಿಂಗಳು ಪಿವಿ ಸಿಂಧು ಅವರು ಸಿಂಗಾಪೂರ್ ಓಪನ್ ನಲ್ಲಿ ಚೊಚ್ಚಲ ಪ್ರಶಸ್ತಿಗಳಿಸಿದ್ದಾರೆ. ನೀರಜ್ ಛೋಪ್ರಾ ಅವರು ಕೂಡಾ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ದೇಶಕ್ಕಾಗಿ ರಜತ ಪದಕ ಗೆದ್ದುರು.ಐರ್ ಲ್ಯಾಂಡ್ ಪ್ಯಾರಾ ಬ್ಯಾಂಡ್ಮಿಟನ್ ಇಂಟರ್ ನ್ಯಾಷನಲ್ ನಲ್ಲಿ ಕೂಡಾ ನಮ್ಮ ಆಟಗಾರರು 11 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರೋಮ್ ನಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಅಥ್ಲೀಟ್ ಸೂರಜ್ ಅವರಂತೂ ಗ್ರೀಕೋ-ರೋಮನ್ ಸ್ಪರ್ಧೆಯಲ್ಲಿ ಪವಾಡವನ್ನು ಮಾಡಿ ತೋರಿಸಿದ್ದಾರೆ. ಅವರು 32 ವರ್ಷಗಳ ದೀರ್ಘ ಅಂತರದ ನಂತರ ಈ ಸ್ಪರ್ಧೆಯಲ್ಲಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಆಟಗಾರರಿಗಂತೂ ಈ ತಿಂಗಳೀಡಿ ಸಂಪೂರ್ಣ ಚಟುವಟಿಕೆಗಳಿಂದ ಕೂಡಿರುತ್ತದೆ. ಚೆನ್ನೈನಲ್ಲಿ 44 ನೇ ಚೆಸ್ ಒಲಿಂಪಿಯಾಡ್ ನ ಆತಿಥ್ಯ ವಹಿಸುವುದು ಕೂಡಾ ಭಾರತಕ್ಕೆ ದೊರೆತ ಅತಿದೊಡ್ಡ ಗೌರವವಾಗಿದೆ. ಜುಲೈ 28 ರಂದು ಈ ಪಂದ್ಯಾವಳಿಯ ಶುಭಾರಂಭವಾಯಿತು ಮತ್ತು ನನಗೆ ಅದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸೌಭಾಗ್ಯ ದೊರಕಿತ್ತು. ಅದೇ ದಿನ ಯುನೈಟೆಡ್ ಕಿಂಗ್ ಡಂನಲ್ಲಿ ಕಾಮನ್ ವೆಲ್ತ್ ಕ್ರೀಡೆ ಕೂಡಾ ಆರಂಭವಾಯಿತು. ಯುವ ಉತ್ಸಾಹಿ ಭಾರತೀಯ ಆಟಗಾರರು ಅಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲಾ ಆಟಗಾರರಿಗೆ ಮತ್ತು ಅಥ್ಲೀಟ್ ಗಳಿಗೆ ದೇಶವಾಸಿಗಳ ಪರವಾಗಿ ನಾನು ಶುಭ ಕೋರುತ್ತೇನೆ. ಭಾರತ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ನ ಆತಿಥ್ಯ ವಹಿಸುತ್ತಿದೆ ಎಂಬ ವಿಷಯ ನನಗೆ ಆನಂದವನ್ನುಂಟು ಮಾಡಿದೆ. ಈ ಟೂರ್ನಿ ಬರುವ ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತದೆ, ಇದು ದೇಶದ ಹೆಣ್ಣುಮಕ್ಕಳ ಉತ್ಸಾಹವನ್ನುನೂರ್ಮಡಿಗೊಳಿಸುತ್ತದೆ.
ಮಿತ್ರರೇ, ಕೆಲ ದಿನಗಳ ಹಿಂದಷ್ಟೇ ದೇಶದೆಲ್ಲೆಡೆ 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ತಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದ ಯಶಸ್ಸು ಗಳಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನಾನು ಅಭಿನಂದಿಸುತ್ತೇನೆ. ಸಾಂಕ್ರಾಮಿಕದ ಕಾರಣದಿಂದ ಕಳೆದೆರಡು ವರ್ಷ ನಿಜಕ್ಕೂ ಸವಾಲಿನಿಂದ ಕೂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೂಡಾ ನಮ್ಮ ಯುವಜನತೆ ತೋರಿದ ಶೌರ್ಯ ಮತ್ತು ಸಂಯಮ ನಿಜಕ್ಕೂ ಶ್ಲಾಘನೀಯ. ನಾನು ಅವರೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
ನನ್ನ ಪ್ರೀಯ ದೇಶವಾಸಿಗಳೇ, ಇಂದು ನಾವು 75ನೇ ಸ್ವಾತಂತ್ರೋತ್ಸವದೊಂದಿಗೆ ನಮ್ಮ ಮಾತುಕತೆ ಆರಂಭಿಸಿ ದೇಶದ ಪಯಣ ಮಾಡಿದೆವು. ನಾವು ಮುಂದಿನ ಬಾರಿ ಭೇಟಿಯಾಗುವಷ್ಟರಲ್ಲಿ ನಮ್ಮ ಮುಂದಿನ 25 ವರ್ಷಗಳ ಪಯಣ ಆರಂಭವಾಗಿರುತ್ತದೆ. ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಮನೆಗಳಲ್ಲಿ ನಮ್ಮ ಪ್ರೀತಿಯ ತ್ರಿವರ್ಣ ಧ್ವಜ ಹಾರಲಿ, ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು. ನೀವು ಈ ಬಾರಿ ಸ್ವಾತಂತ್ರ್ಯ ದಿನವನ್ನು ಯಾವ ರೀತಿ ಆಚರಿಸಿದಿರಿ, ವಿಶೇಷವಾದುದು ಏನಾದರೂ ಮಾಡಿದಿರಾ, ಎಲ್ಲ ವಿಷಯವನ್ನು ನನ್ನೊಂದಿಗೆ ಹಂಚಿಕೊಳ್ಳಿ. ಮುಂದಿನ ಬಾರಿ, ನಾವು ನಮ್ಮ ಈ ಅಮೃತ ಪರ್ವದ ನಾನಾ ಬಣ್ಣಗಳ ಬಗ್ಗೆ ಮತ್ತೆ ಮಾತನಾಡೋಣ. ಅಲ್ಲಿಯವರೆಗೆ ನಿಮ್ಮಿಂದ ತೆರಳುತ್ತಿದ್ದೀನೆ. ತುಂಬಾ ತುಂಬಾ ಧನ್ಯವಾದಗಳು.
ನಮಸ್ಕಾರ ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ! ‘ಮನ್ ಕಿ ಬಾತ್’ಗಾಗಿ ನಿಮ್ಮೆಲ್ಲರಿಂದ ನನಗೆ ಅನೇಕ ಪತ್ರಗಳು ಬಂದಿವೆ; ನಾನು ಸಾಮಾಜಿಕ ಮಾಧ್ಯಮ ಮತ್ತು ನಮೋಆಪ್ (NaMoApp) ನಲ್ಲಿ ಹಲವಾರು ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಅದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಈ ಕಾರ್ಯಕ್ರಮದಲ್ಲಿ, ಪರಸ್ಪರ ಸ್ಫೂರ್ತಿದಾಯಕ ಪ್ರಯತ್ನಗಳನ್ನು ಚರ್ಚಿಸುವುದು ಮತ್ತು ಇಡೀ ದೇಶಕ್ಕೆ ಜನಾಂದೋಲನದ ಮೂಲಕ ಬದಲಾವಣೆಯ, ಪರಿವರ್ತನೆಯ ಕಥೆಯನ್ನು ಹೇಳುವುದು ನಮ್ಮ ಪ್ರಯತ್ನವಾಗಿದೆ. ಈ ಸಂಚಿಕೆಯಲ್ಲಿ, ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲಿ ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿರುವ ದೇಶದ ಅಂತಹ ಒಂದು ಜನಾಂದೋಲನದ ಬಗ್ಗೆ ನಾನು ಇಂದು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ. ಆದರೆ, ಅದಕ್ಕೂ ಮುನ್ನ ನಾನು ಇಂದಿನ ಪೀಳಿಗೆಯ ಯುವಕರಿಗೆ, 24-25 ವರ್ಷ ವಯಸ್ಸಿನ ಯುವಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಮತ್ತು ಪ್ರಶ್ನೆ ತುಂಬಾ ಗಂಭೀರವಾಗಿದೆ ... ನನ್ನ ಪ್ರಶ್ನೆಯ ಬಗ್ಗೆ ವಿಚಾರ ಮಾಡಿ. ನಿಮ್ಮ ಹೆತ್ತವರು ನಿಮ್ಮ ವಯಸ್ಸಿನವರಾಗಿದ್ದಾಗ, ಒಮ್ಮೆ ಅವರ ಬದುಕುವ ಹಕ್ಕನ್ನು ಸಹ ಅವರಿಂದ ಕಸಿದುಕೊಳ್ಳಲಾಯಿತು ಎಂದು ನಿಮಗೆ ತಿಳಿದಿದೆಯೇ? ಇದು ಹೇಗೆ ಸಂಭವಿಸಿತು ಎಂದು ನೀವು ಯೋಚಿಸುತ್ತಿರಬಹುದು? ಇದು ಅಸಾಧ್ಯ! ಆದರೆ ನನ್ನ ಯುವ ಸ್ನೇಹಿತರೇ, ಇದು ನಮ್ಮ ದೇಶದಲ್ಲಿ ಒಮ್ಮೆ ಸಂಭವಿಸಿದೆ. ಇದು ಹಲವು ವರ್ಷಗಳ ಹಿಂದೆ 1975 ರಲ್ಲಿ ಸಂಭವಿಸಿತು. ತುರ್ತು ಪರಿಸ್ಥಿತಿ ಹೇರಿದಾಗ ಅದು ಜೂನ್ ತಿಂಗಳು. ಅದರಲ್ಲಿ ದೇಶದ ನಾಗರಿಕರ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಹೀಗೆ ಕಸಿದುಕೊಂಡ ಹಕ್ಕುಗಳಲ್ಲಿ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಎಲ್ಲಾ ಭಾರತೀಯರಿಗೆ ಒದಗಿಸಲಾದ 'ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ' ದ ಹಕ್ಕು ಕೂಡಾ ಒಂದಾಗಿತ್ತು. ಆ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಪ್ರಯತ್ನ ನಡೆಯಿತು. ದೇಶದ ನ್ಯಾಯಾಲಯಗಳು, ಸಾಂವಿಧಾನಿಕ ಸಂಸ್ಥೆಗಳು, ಪತ್ರಿಕಾ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲಾಯಿತು ಸೆನ್ಸಾರ್ಶಿಪ್ನ ಸ್ಥಿತಿಯು ಹೇಗಿತ್ತು ಎಂದರೆ ಅನುಮೋದನೆಯಿಲ್ಲದೆ, ಅನುಮತಿ ಇಲ್ಲದೆ ಯಾವುದನ್ನೂ ಮುದ್ರಿಸುವುದು ಅಸಾಧ್ಯವಾಗಿತ್ತು. ನನಗೆ ನೆನಪಿದೆ, ಖ್ಯಾತ ಗಾಯಕ ಕಿಶೋರ್ ಕುಮಾರ್ ಸರ್ಕಾರವನ್ನು ಶ್ಲಾಘಿಸಲು ನಿರಾಕರಿಸಿದಾಗ, ಅವರನ್ನು ನಿಷೇಧಿಸಲಾಯಿತು. ರೇಡಿಯೊದಲ್ಲಿ ಅವರ ಅವಕಾಶವನ್ನು ತಡೆಹಿಡಿಯಲಾಯಿತು. ಆದರೆ ಹಲವು ಪ್ರಯತ್ನಗಳು, ಸಾವಿರಾರು ಬಂಧನಗಳು ಮತ್ತು ಲಕ್ಷಾಂತರ ಜನರ ಮೇಲಿನ ದೌರ್ಜನ್ಯಗಳು ನಡೆದರೂ ಪ್ರಜಾಪ್ರಭುತ್ವದ ಮೇಲಿನ ಭಾರತದ ಜನರ ನಂಬಿಕೆ ಅಲುಗಾಡಲಿಲ್ಲ ... ಎಂದಿಗೂ ಇಲ್ಲ! ನಮಗೆ, ಭಾರತದ ಜನರಿಗೆ, ನಾವು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಪ್ರಜಾಪ್ರಭುತ್ವದ ಸಂಸ್ಕಾರಗಳು; ನಮ್ಮ ರಕ್ತನಾಳಗಳಲ್ಲಿರುವ ಪ್ರಜಾಪ್ರಭುತ್ವದ ಮನೋಭಾವ ಅಂತಿಮವಾಗಿ ಗೆಲುವು ಸಾಧಿಸಿದವು. ಭಾರತದ ಜನರು ತುರ್ತು ಪರಿಸ್ಥಿತಿಯನ್ನು ತೊಡೆದು ಹಾಕಿದರು ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದರು. ಪ್ರಜಾಸತ್ತಾತ್ಮಕ ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿ, ಸರ್ವಾಧಿಕಾರಿ ಧೋರಣೆಗಳನ್ನು ಸೋಲಿಸಿದ ಇಂತಹ ಉದಾಹರಣೆ ಇಡೀ ಜಗತ್ತಿನಲ್ಲಿ ಸಿಗುವುದು ಕಷ್ಟ. ತುರ್ತುಪರಿಸ್ಥಿತಿಯ ಸಮಯದಲ್ಲಿ, ದೇಶವಾಸಿಗಳ ಹೋರಾಟದಲ್ಲಿ ಭಾಗಿಯಾಗುವ-ಪ್ರಜಾಪ್ರಭುತ್ವದ ಸೈನಿಕನಾಗಿ ಸಾಕ್ಷಿಯಾಗುವ ಸೌಭಾಗ್ಯ ನನಗೆ ಲಭಿಸಿತ್ತು. ಇಂದು, ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಆ ಭಯಾನಕ ತುರ್ತು ಪರಿಸ್ಥಿತಿಯನ್ನು ನಾವು ಎಂದಿಗೂ ಮರೆಯಬಾರದು. ಮುಂದಿನ ಪೀಳಿಗೆಯೂ ಮರೆಯಬಾರದು. ಅಮೃತ ಮಹೋತ್ಸವವು ನೂರಾರು ವರ್ಷಗಳ ಗುಲಾಮಗಿರಿಯಿಂದ ಸ್ವಾತಂತ್ರ್ಯದ ವಿಜಯದ ಸಾಹಸದ ಕಥನವನ್ನು ಒಳಗೊಂಡಿರುವುದು ಮಾತ್ರವಲ್ಲದೆ, ಸ್ವಾತಂತ್ರ್ಯದ ನಂತರದ 75 ವರ್ಷಗಳ ಪ್ರಯಾಣವನ್ನೂ ಒಳಗೊಂಡಿದೆ. ನಾವು ಇತಿಹಾಸದ ಪ್ರತಿಯೊಂದು ಪ್ರಮುಖ ಹಂತದಿಂದ ಕಲಿಯುತ್ತಾ ಮುನ್ನಡೆಯಬೇಕಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಜೀವನದಲ್ಲಿ ಆಕಾಶಕ್ಕೆ ಸಂಬಂಧಿಸಿದ ರಮ್ಯ ಕಥಾನಕಗಳಿಲ್ಲದವರು ಯಾರೂ ಇರಲಿಕ್ಕಿಲ್ಲ. ಬಾಲ್ಯದಲ್ಲಿ, ಆಗಸದ ಚಂದ್ರ ಮತ್ತು ನಕ್ಷತ್ರಗಳ ಕಥೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಯುವಜನರಿಗೆ, ಆಕಾಶವನ್ನು ಮುಟ್ಟುವುದು ಎಂದರೆ ಕನಸುಗಳನ್ನು ನನಸಾಗಿಸುವುದು ಎಂದರ್ಥ. ಇಂದು, ನಮ್ಮ ಭಾರತವು ಹಲವಾರು ಕ್ಷೇತ್ರಗಳಲ್ಲಿ ಯಶಸ್ಸಿನ ಆಕಾಶವನ್ನು ಮುಟ್ಟುತ್ತಿರುವಾಗ, ಆಕಾಶ ಅಥವಾ ಬಾಹ್ಯಾಕಾಶವು ಸ್ಪರ್ಶ ಲಭ್ಯವಾಗದೇ ಉಳಿಯುವುದು ಹೇಗೆ ಸಾಧ್ಯ!. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದೊಡ್ಡ ಸಾಧನೆಗಳನ್ನು ಸಾಧಿಸಲಾಗಿದೆ. ದೇಶದ ಈ ಸಾಧನೆಗಳಲ್ಲಿ ಇನ್-ಸ್ಪೇಸ್ ಹೆಸರಿನ ಏಜೆನ್ಸಿಯ ರಚನೆಯೂ ಒಂದು … ಭಾರತದ ಖಾಸಗಿ ವಲಯಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಉತ್ತೇಜಿಸುವ ಏಜೆನ್ಸಿ ಇದು. ಈ ಆರಂಭವು ವಿಶೇಷವಾಗಿ ನಮ್ಮ ದೇಶದ ಯುವಜನರನ್ನು ಆಕರ್ಷಿಸಿದೆ. ಅನೇಕ ಯುವಕರಿಂದ ನನಗೆ ಈ ಸಂಬಂಧ ಸಂದೇಶಗಳು ಬಂದಿವೆ.
ಕೆಲವು ದಿನಗಳ ಹಿಂದೆ ನಾನು ಇನ್-ಸ್ಪೇಸ್ನ ಪ್ರಧಾನ ಕಛೇರಿಯನ್ನು ಲೋಕಾರ್ಪಣೆ ಮಾಡಲು ಹೋದಾಗ, ಅನೇಕ ಯುವ ಸ್ಟಾರ್ಟ್ಅಪ್ಗಳ ಆಲೋಚನೆಗಳು ಮತ್ತು ಉತ್ಸಾಹವನ್ನು ನೋಡಿದೆ. ನಾನು ಕೂಡ ಅವರ ಜೊತೆ ತುಂಬಾ ಹೊತ್ತು ಮಾತನಾಡಿದೆ. ಅವರ ಬಗ್ಗೆ ತಿಳಿದಾಗ ನಿಮಗೆ ಆಶ್ಚರ್ಯಪಡದೆ ಇರಲು ಸಾಧ್ಯವಾಗದು. ಉದಾಹರಣೆಗೆ, ಸ್ಪೇಸ್ ಸ್ಟಾರ್ಟ್-ಅಪ್ಗಳ (ಬಾಹ್ಯಾಕಾಶ ನವೋದ್ಯಮಗಳ) ಸಂಖ್ಯೆ ಮತ್ತು ವೇಗವನ್ನು ಗಮನಿಸಿ. ಕೆಲವು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ನವೋದ್ಯಮಗಳ ಬಗ್ಗೆ ಯೋಚಿಸಿರಲಿಲ್ಲ. ಇಂದು ಅವುಗಳ ಸಂಖ್ಯೆ ನೂರಕ್ಕೂ ಹೆಚ್ಚು. ಈ ಎಲ್ಲಾ ನವೋದ್ಯಮಗಳು ಈ ಹಿಂದೆ ಯೋಚಿಸಿರದ ಅಥವಾ ಖಾಸಗಿ ವಲಯಕ್ಕೆ ಅಸಾಧ್ಯವೆಂದು ಪರಿಗಣಿಸಲಾದ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ, ಚೆನ್ನೈ ಮತ್ತು ಹೈದರಾಬಾದ್ಗಳು ಎರಡು ನವೋದ್ಯಮಗಳನ್ನು ಹೊಂದಿವೆ, ಅವುಗಳೆಂದರೆ - ಅಗ್ನಿಕುಲ್ ಮತ್ತು ಸ್ಕೈರೂಟ್! ಈ ಸ್ಟಾರ್ಟ್-ಅಪ್ಗಳು ಉಡಾವಣಾ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿವೆ, ಅದು ಸಣ್ಣ ಪೇಲೋಡ್ಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುತ್ತದೆ. ಈ ಮೂಲಕ ಬಾಹ್ಯಾಕಾಶಕ್ಕೆ ಉಡಾವಣೆಯ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅದೇ ರೀತಿ, ಹೈದರಾಬಾದ್ನ ಮತ್ತೊಂದು ನವೋದ್ಯಮ ಧ್ರುವ ಸ್ಪೇಸ್, ಉಪಗ್ರಹ ಡಿಪ್ಲೋಯರ್ ಮತ್ತು ಉಪಗ್ರಹಗಳಿಗಾಗಿ ಉನ್ನತ ತಂತ್ರಜ್ಞಾನದ ಸೌರ ಪ್ಯಾನಲ್ಗಳ ತಯಾರಿಕೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಾಹ್ಯಾಕಾಶದಲ್ಲಿ ತ್ಯಾಜ್ಯವನ್ನು ಗುರುತು ಮಾಡಲು ಪ್ರಯತ್ನಿಸುತ್ತಿರುವ ಮತ್ತೊಂದು ಬಾಹ್ಯಾಕಾಶ ನವೋದ್ಯಮ ದಿಗಂತರದ ತನ್ವೀರ್ ಅಹ್ಮದ್ ಅವರನ್ನು ನಾನು ಭೇಟಿ ಮಾಡಿದ್ದೇನೆ. ಬಾಹ್ಯಾಕಾಶದಲ್ಲಿಯ ತ್ಯಾಜ್ಯದ ಸಮಸ್ಯೆಯನ್ನು ನಿವಾರಿಸುವ ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ಅವರಿಗೆ ಹೇಳಿದ್ದೇನೆ. ದಿಗಂತರಾ ಮತ್ತು ಧ್ರುವ ಸ್ಪೇಸ್ ಎರಡೂ ಜೂನ್ 30 ರಂದು ಇಸ್ರೋದ ಉಡಾವಣಾ ವಾಹನದಿಂದ ತಮ್ಮ ಮೊದಲ ಉಡಾವಣೆ ಮಾಡಲಿವೆ. ಅದೇ ರೀತಿ ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ನವೋದ್ಯಮ ಆಸ್ಟ್ರೋಮ್ ನ ಸಂಸ್ಥಾಪಕಿ ನೇಹಾ ಕೂಡ ಅದ್ಭುತ ಐಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನವೋದ್ಯಮ ಚಪ್ಪಟೆ ಆಂಟೆನಾಗಳನ್ನು ತಯಾರಿಸುತ್ತಿದೆ ಅವು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ, ಮಾತ್ರವಲ್ಲ ಅವುಗಳ ವೆಚ್ಚವೂ ತುಂಬಾ ಕಡಿಮೆ. ಈ ತಂತ್ರಜ್ಞಾನಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಇರುವ ಸಾಧ್ಯತೆ ಇದೆ.
ಸ್ನೇಹಿತರೇ, ಇನ್-ಸ್ಪೇಸ್ ಕಾರ್ಯಕ್ರಮದಲ್ಲಿ ನಾನು ಮೆಹ್ಸಾನಾ ಶಾಲೆಯ ವಿದ್ಯಾರ್ಥಿನಿ ಬೇಟಿ ತನ್ವಿ ಪಟೇಲ್ ಅವರನ್ನು ಭೇಟಿಯಾಗಿದ್ದೆ. ಅವಳು ಅತ್ಯಂತ ಚಿಕ್ಕ ಉಪಗ್ರಹದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾಳೆ, ಅದು ಮುಂದಿನ ಕೆಲವು ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ. ತನ್ವಿ ತನ್ನ ಕೆಲಸದ ಬಗ್ಗೆ ನನಗೆ ಗುಜರಾತಿಯಲ್ಲಿ ತುಂಬಾ ಸರಳವಾಗಿ ತಿಳಿಸಿದ್ದಾಳೆ. ಅಮೃತ್ ಮಹೋತ್ಸವದಲ್ಲಿ ತನ್ವಿಯಂತೆ, ದೇಶದ ಸುಮಾರು ಏಳುನೂರೈವತ್ತು ಶಾಲಾ ವಿದ್ಯಾರ್ಥಿಗಳು ಇಂತಹ 75 ಉಪಗ್ರಹಗಳ ಬಗ್ಗೆ ಕಾರ್ಯನಿರತರಾಗಿದ್ದಾರೆ ಮತ್ತು ಈ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದೇಶದ ಸಣ್ಣ ಪಟ್ಟಣಗಳಿಂದ ಬಂದವರು ಎಂಬುದು ಬಹಳ ಸಂತೋಷದ ಸಂಗತಿ.
ಸ್ನೇಹಿತರೇ, ಕೆಲವು ವರ್ಷಗಳ ಹಿಂದೆ ಯಾರ ಮನಸ್ಸಿನಲ್ಲಿ ಬಾಹ್ಯಾಕಾಶದ ಚಿತ್ರವು ರಹಸ್ಯದಂತೆ ಕಾಡುತ್ತಿತ್ತೋ -ಅದೇ ಯುವಕರು ಇವರು. ದೇಶವು ಬಾಹ್ಯಾಕಾಶ ಸುಧಾರಣೆಗಳನ್ನು ಕೈಗೊಂಡಿತು ಮತ್ತು ಅದೇ ಯುವಕರು ಈಗ ತಮ್ಮದೇ ಆದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದ್ದಾರೆ. ದೇಶದ ಯುವಜನತೆ ಆಕಾಶ ಮುಟ್ಟಲು ಸಿದ್ಧವಾಗಿರುವಾಗ ನಮ್ಮ ದೇಶ ಹಿಂದೆ ಬೀಳುವುದಾದರೂ ಹೇಗೆ?
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ, ನಿಮ್ಮ ಮನಸ್ಸನ್ನು ಸಂತೋಷಪಡಿಸುವ ಮತ್ತು ನಿಮಗೆ ಸ್ಫೂರ್ತಿ ನೀಡುವ ವಿಷಯದ ಕುರಿತು ಈಗ ಮಾತನಾಡೋಣ. ಇತ್ತೀಚೆಗೆ, ನಮ್ಮ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೆ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡರು. ಒಲಿಂಪಿಕ್ಸ್ ನಂತರವೂ ಒಂದರ ಹಿಂದೆ ಒಂದರಂತೆ ಹೊಸ ದಾಖಲೆಗಳನ್ನು ಅವರು ಮಾಡುತ್ತಿದ್ದಾರೆ. ಫಿನ್ಲ್ಯಾಂಡ್ನಲ್ಲಿ ನಡೆದ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ನೀರಜ್ ಬೆಳ್ಳಿ ಗೆದ್ದರು. ಅಷ್ಟೇ ಅಲ್ಲ, ತಮ್ಮದೇ ಜಾವೆಲಿನ್ ಥ್ರೋ ದಾಖಲೆಯನ್ನೂ ಅವರು ಮುರಿದಿದ್ದಾರೆ. ಕುರ್ಟಾನೆ ಕ್ರೀಡಾಕೂಟದಲ್ಲಿ ನೀರಜ್ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಲ್ಲಿನ ಹವಾಮಾನ ಪ್ರತಿಕೂಲವಾಗಿದ್ದಾಗಲೂ ಅವರು ಈ ಚಿನ್ನವನ್ನು ಗೆದ್ದರು. ಈ ಉತ್ಸಾಹ ಇಂದಿನ ಯುವಕರ ಲಕ್ಷಣವಾಗಿದೆ. ನವೋದ್ಯಮಗಳಿಂದ ಕ್ರೀಡಾ ಪ್ರಪಂಚದವರೆಗೆ, ಭಾರತದ ಯುವಜನತೆ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲೂ ನಮ್ಮ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಆಟಗಳಲ್ಲಿ ಒಟ್ಟು 12 ದಾಖಲೆಗಳನ್ನು ಮುರಿಯಲಾಗಿದೆ ಎಂದು ತಿಳಿದರೆ ನೀವು ಹರ್ಷಪಡುತ್ತೀರಿ - ಅಷ್ಟೇ ಅಲ್ಲ, 11 ಹೊಸ ದಾಖಲೆಗಳು ಮಹಿಳಾ ಆಟಗಾರರ ಹೆಸರಿನಲ್ಲಿ ನೋಂದಾವಣೆಯಾಗಿವೆ. ಮಣಿಪುರದ ಎಂ.ಮಾರ್ಟಿನಾ ದೇವಿ ವೇಟ್ ಲಿಫ್ಟಿಂಗ್ (ಭಾರ ಎತ್ತುಗೆಯಲ್ಲಿ) ನಲ್ಲಿ ಎಂಟು ದಾಖಲೆಗಳನ್ನು ಮಾಡಿದ್ದಾರೆ.
ಅದೇ ರೀತಿ ಸಂಜನಾ, ಸೋನಾಕ್ಷಿ ಮತ್ತು ಭಾವನಾ ಕೂಡ ವಿವಿಧ ದಾಖಲೆಗಳನ್ನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಘನತೆ ಎಷ್ಟರಮಟ್ಟಿಗೆ ಏರಲಿದೆ ಎಂಬುದನ್ನು ಈ ಆಟಗಾರರು ತಮ್ಮ ಕಠಿಣ ಪರಿಶ್ರಮದಿಂದ ಸಾಬೀತು ಮಾಡಿದ್ದಾರೆ. ನಾನು ಈ ಎಲ್ಲ ಆಟಗಾರರನ್ನು ಅಭಿನಂದಿಸುತ್ತೇನೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ.
ಸ್ನೇಹಿತರೇ, ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಬಾರಿಯೂ ಇಂತಹ ಹಲವು ಪ್ರತಿಭೆಗಳು ಹೊರಹೊಮ್ಮಿವೆ. ಈ ಪ್ರತಿಭಾವಂತರು ತೀರಾ ಸಾಮಾನ್ಯ ಕುಟುಂಬದಿಂದ ಬಂದವರು. ಯಶಸ್ಸಿನ ಈ ಹಂತವನ್ನು ತಲುಪಲು ಈ ಆಟಗಾರರು ತಮ್ಮ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರ ಯಶಸ್ಸಿನಲ್ಲಿ, ಅವರ ಕುಟುಂಬ ಮತ್ತು ಪೋಷಕರು ಸಹ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
70 ಕಿಮೀ ಸೈಕ್ಲಿಂಗ್ನಲ್ಲಿ ಚಿನ್ನ ಗೆದ್ದ ಶ್ರೀನಗರದ ಆದಿಲ್ ಅಲ್ತಾಫ್ ಅವರ ತಂದೆ ಟೈಲರಿಂಗ್ ಕೆಲಸ ಮಾಡುತ್ತಾರೆ. ಆದರೆ, ಮಗನ ಕನಸುಗಳನ್ನು ನನಸಾಗಿಸಲು ಅವರು ಎಲ್ಲವನ್ನೂ ಮಾಡಿದ್ದಾರೆ. ಇಂದು ಆದಿಲ್ ತನ್ನ ತಂದೆ ಮತ್ತು ಇಡೀ ಜಮ್ಮು-ಕಾಶ್ಮೀರಕ್ಕೆ ಹೆಮ್ಮೆ ತಂದಿದ್ದಾರೆ. ಚಿನ್ನ ಗೆದ್ದ ಎಲ್.ಧನುಷ್ ಅವರ ತಂದೆ ಚೆನ್ನೈಯಲ್ಲಿ ಬಡಗಿ. ಸಾಂಗ್ಲಿಯ ಮಗಳು ಕಾಜೋಲ್ ಸರ್ಗರ್ ಅವರ ತಂದೆ ಚಹಾ ಮಾರಾಟಗಾರರಾಗಿ ಕೆಲಸ ಮಾಡುತ್ತಾರೆ. ಕಾಜೋಲ್ ತನ್ನ ತಂದೆಗೆ ಸಹಾಯ ಮಾಡುತ್ತಾ ಅದರ ಜೊತೆಗೆ ಭಾರ ಎತ್ತುಗೆಯನ್ನು ಅಭ್ಯಾಸ ಮಾಡುತ್ತಿದ್ದರು. ಅವರ ಮತ್ತು ಅವರ ಕುಟುಂಬದವರ ಈ ಕಠಿಣ ಪರಿಶ್ರಮವು ಫಲ ನೀಡಿತು ಮತ್ತು ಕಾಜೋಲ್ ಭಾರ ಎತ್ತುಗೆಯಲ್ಲಿ ಸಾಕಷ್ಟು ಪ್ರಶಂಸೆಯನ್ನು ಗಳಿಸಿದ್ದಾರೆ. ರೋಹ್ಟಕ್ನ ತನು ಇದೇ ರೀತಿಯ ಪವಾಡವನ್ನು ಮೆರೆದಿದ್ದಾರೆ. ತನು ಅವರ ತಂದೆ ರಾಜ್ಬೀರ್ ಸಿಂಗ್ ರೋಹ್ಟಕ್ನಲ್ಲಿ ಶಾಲಾ ಬಸ್ ಚಾಲಕ. ಕುಸ್ತಿಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತನು ತನ್ನ ಮತ್ತು ತನ್ನ ಕುಟುಂಬದ ಹಾಗೂ ತಂದೆಯ ಕನಸನ್ನು ನನಸಾಗಿಸಿದ್ದಾರೆ.
ಸ್ನೇಹಿತರೇ, ಕ್ರೀಡಾ ಜಗತ್ತಿನಲ್ಲಿ ಈಗ ಭಾರತೀಯ ಆಟಗಾರರ ಪ್ರಾಬಲ್ಯ ಹೆಚ್ಚುತ್ತಿದೆ; ಇದೇ ವೇಳೆ, ಭಾರತೀಯ ಕ್ರೀಡೆಗಳ ಹೊಸ ಪ್ರತಿಷ್ಟೆಯೂ ಅನಾವರಣಗೊಳ್ಳುತ್ತಿದೆ. ಉದಾಹರಣೆಗೆ, ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ, ಒಲಿಂಪಿಕ್ಸ್ನಲ್ಲಿರುವ ವಿಭಾಗಗಳ ಜೊತೆ, ಐದು ದೇಶೀಯ ಕ್ರೀಡೆಗಳನ್ನು ಈ ಬಾರಿ ಸೇರಿಸಲಾಗಿದೆ. ಈ ಐದು ಕ್ರೀಡೆಗಳು - ಗಟ್ಕಾ, ಥಾಂಗ್ ಥಾ, ಯೋಗಾಸನ, ಕಲರಿಪಯಟ್ಟು ಮತ್ತು ಮಲ್ಲಕಂಭ.
ಸ್ನೇಹಿತರೇ, ನಮ್ಮದೇ ದೇಶದಲ್ಲಿ ಶತಮಾನಗಳ ಹಿಂದೆ ಜನ್ಮತಾಳಿದ ಆಟವೊಂದರ ಅಂತಾರಾಷ್ಟ್ರೀಯ ಪಂದ್ಯಾವಳಿ...ಭಾರತದಲ್ಲಿ ನಡೆಯಲಿದೆ. ಇದುವೇ ಜುಲೈ 28 ರಿಂದ ಪ್ರಾರಂಭವಾಗುವ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ. ಈ ಬಾರಿ 180ಕ್ಕೂ ಹೆಚ್ಚು ದೇಶಗಳು ಚೆಸ್ ಒಲಿಂಪಿಯಾಡ್ ನಲ್ಲಿ ಭಾಗವಹಿಸುತ್ತಿವೆ. ಇಂದು ಕ್ರೀಡೆ ಮತ್ತು ದೈಹಿಕ ಕ್ಷಮತೆಯ ಚರ್ಚೆಯು ಇನ್ನೊಂದು ಹೆಸರಿಲ್ಲದೆ ಸಮಾಪನಗೊಳ್ಳದು - ಇದು ತೆಲಂಗಾಣದ ಪರ್ವತಾರೋಹಿ ಪೂರ್ಣಾ ಮಾಲಾವತ್ ಅವರ ಹೆಸರು. 7 ಸವಾಲುಗಳನ್ನು ಪೂರ್ಣಗೊಳಿಸುವ ಮೂಲಕ ಪೂರ್ಣಾ ತಮ್ಮ ಯಶಸ್ಸಿನ ಮುಡಿಗೆ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡಿದ್ದಾರೆ. ಅದು ಏಳು ಶಿಖರಗಳ ಸವಾಲು...ಅದು ಏಳು ಅತ್ಯಂತ ಕಷ್ಟಕರವಾದ ಮತ್ತು ಅತಿ ಎತ್ತರದ ಕಡಿದಾದ ಪರ್ವತ ಶಿಖರಗಳನ್ನು ಏರುವ ಸವಾಲು. ತನ್ನ ಅದಮ್ಯ ಉತ್ಸಾಹದಿಂದ, ಪೂರ್ವಾ ಅವರು ಉತ್ತರ ಅಮೆರಿಕಾದ ಮೌಂಟ್ ಡೆನಾಲಿಯ ಅತ್ಯುನ್ನತ ಕಡಿದಾದ ಶಿಖರವನ್ನು ಆರೋಹಣ ಮಾಡಿದ್ದಾರೆ ಮತ್ತು ದೇಶಕ್ಕೆ ಗೌರವವನ್ನು ತಂದಿದ್ದಾರೆ. ಈ ಪೂರ್ಣಾ ಕೇವಲ 13 ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರುವ ಅದ್ಭುತ ಸಾಧನೆಯನ್ನು ಮಾಡಿದ ಭಾರತದ ಮಗಳು.
ಸ್ನೇಹಿತರೇ, ಕ್ರೀಡೆಯ ವಿಷಯಕ್ಕೆ ಬಂದರೆ, ಇಂದು ನಾನು ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾದ ಮಿಥಾಲಿ ರಾಜ್ ಬಗ್ಗೆ ಚರ್ಚಿಸಲು ಬಯಸುತ್ತೇನೆ.
ಈ ತಿಂಗಳಷ್ಟೇ, ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ, ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಭಾವನಾತ್ಮಕವಾಗಿ ಕಂಗೆಡಿಸಿದೆ. ಮಿಥಾಲಿ ಅಸಾಧಾರಣ ಆಟಗಾರ್ತಿ ಮಾತ್ರವಲ್ಲ, ಹಲವು ಆಟಗಾರರಿಗೆ ಅವರು ಪ್ರೇರಣೆ ಒದಗಿಸಿದ್ದಾರೆ, ಸ್ಫೂರ್ತಿಯಾಗಿದ್ದಾರೆ. ಮಿಥಾಲಿ ಅವರಿಗೆ ಭವ್ಯ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಮನ್ ಕಿ ಬಾತ್' ನಲ್ಲಿ ನಾವು “ತ್ಯಾಜ್ಯದಿಂದ ಸಂಪತ್ತು” ಕುರಿತಂತೆ ಯಶಸ್ವಿ ಪ್ರಯತ್ನಗಳನ್ನು ಚರ್ಚಿಸುತ್ತಿರುತ್ತೇವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಮಿಜೋರಾಂನ ರಾಜಧಾನಿ ಐಜ್ವಾಲ್. ಐಜ್ವಾಲ್ನಲ್ಲಿ ಸುಂದರವಾದ 'ಚಿಟ್ಟೆ ಲುಯಿ' ನದಿ ಇದೆ, ಇದು ವರ್ಷಗಳ ನಿರ್ಲಕ್ಷ್ಯದಿಂದಾಗಿ ಕೊಳಕಿನ ಮತ್ತು ಕಸದ ರಾಶಿಯಾಗಿ ಮಾರ್ಪಟ್ಟಿತ್ತು. ಕಳೆದ ಕೆಲವು ವರ್ಷಗಳಿಂದ ಈ ನದಿಯನ್ನು ಉಳಿಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಜನರು ಒಟ್ಟಾಗಿ ಚಿಟ್ಟೆ ಲುಯಿ ರಕ್ಷಿಸಿ ಎಂಬ ಕ್ರಿಯಾ ಯೋಜನೆಯನ್ನು ಅನುಷ್ಟಾನಿಸುತ್ತಿದ್ದಾರೆ. ನದಿ ಸ್ವಚ್ಛತೆಯ ಈ ಅಭಿಯಾನ ತ್ಯಾಜ್ಯದಿಂದ ಸಂಪತ್ತು ಸೃಷ್ಟಿಗೂ ಅವಕಾಶ ಕಲ್ಪಿಸಿದೆ. ವಾಸ್ತವದಲ್ಲಿ ಈ ನದಿ ಮತ್ತು ಅದರ ದಂಡೆಗಳು ಪ್ಲಾಸ್ಟಿಕ್ ಮತ್ತು ಪಾಲಿಥಿನ್ ತ್ಯಾಜ್ಯದಿಂದ ತುಂಬಿ ಹೋಗಿದ್ದವು. ನದಿ ಉಳಿಸಲು ಶ್ರಮಿಸುತ್ತಿರುವ ಸಂಸ್ಥೆ, ಈ ಪಾಲಿಥಿನ್ ಅಂದರೆ ನದಿಯಿಂದ ಹೊರ ತೆಗೆಯುವ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಿಸಲು ನಿರ್ಧರಿಸಿತು. ಅದರಿಂದ, ಮಿಜೋರಾಂನ ಹಳ್ಳಿಯೊಂದರಲ್ಲಿ, ರಾಜ್ಯದ ಮೊದಲ ಪ್ಲಾಸ್ಟಿಕ್ ರಸ್ತೆಯನ್ನು ನಿರ್ಮಿಸಲಾಯಿತು ... ಅದು ಸ್ವಚ್ಛತೆ ಮತ್ತು ಅದು ಅಭಿವೃದ್ಧಿಯೂ ಆಗಿದೆ.
ಸ್ನೇಹಿತರೇ, ಪುದುಚೇರಿಯ ಯುವಕರು ತಮ್ಮ ಸ್ವಯಂಸೇವಾ ಸಂಸ್ಥೆಗಳ ಮೂಲಕ ಅಂತಹ ಒಂದು ಪ್ರಯತ್ನವನ್ನು ಕೈಗೊಂಡಿದ್ದಾರೆ. ಪುದುಚೇರಿ ಸಮುದ್ರ ತೀರದಲ್ಲಿದೆ. ಅಲ್ಲಿನ ಕಡಲ ತೀರಗಳು ಮತ್ತು ಸಮುದ್ರ ಸೌಂದರ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಪುದುಚೇರಿಯ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ನಿಂದ ಉಂಟಾಗುವ ಮಾಲಿನ್ಯ ಕೂಡಾ ಹೆಚ್ಚುತ್ತಿದೆ. ಇದರಿಂದ ಅದರ ಸಮುದ್ರ, ಮತ್ತು ಕಡಲ ದಂಡೆಗಳು ಮತ್ತು ಪರಿಸರವನ್ನು ಉಳಿಸಲು, ಇಲ್ಲಿನ ಜನರು 'ಜೀವನಕ್ಕಾಗಿ ಮರುಬಳಕೆ' ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇಂದು, ಪುದುಚೇರಿಯ ಕಾರೈಕಲ್ನಲ್ಲಿ ಪ್ರತಿದಿನ ಸಾವಿರಾರು ಕಿಲೋಗ್ರಾಂಗಳಷ್ಟು ಕಸವನ್ನು ಸಂಗ್ರಹಿಸಿ ವಿಂಗಡಿಸಲಾಗುತ್ತದೆ. ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಮಾಡಲಾಗುತ್ತದೆ. ಉಳಿದ ತ್ಯಾಜ್ಯವನ್ನು ಪ್ರತ್ಯೇಕಿಸಿ ಮರುಬಳಕೆ ಮಾಡಲಾಗುತ್ತದೆ. ಇಂತಹ ಪ್ರಯತ್ನಗಳು ಕೇವಲ ಸ್ಪೂರ್ತಿದಾಯಕವಾಗಿ ಮಾತ್ರವಲ್ಲ, ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಭಾರತದ ಅಭಿಯಾನಕ್ಕೆ ವೇಗವನ್ನು ನೀಡುತ್ತವೆ.
ಸ್ನೇಹಿತರೇ, ನಾನು ನಿಮ್ಮೊಂದಿಗೆ ಮಾತನಾಡುತ್ತಿರುವ ಈ ಸಮಯದಲ್ಲಿ, ಹಿಮಾಚಲ ಪ್ರದೇಶದಲ್ಲಿ ವಿಶಿಷ್ಟವಾದ ಸೈಕ್ಲಿಂಗ್ ಯಾತ್ರೆ ನಡೆಯುತ್ತಿದೆ. ಇದರ ಬಗ್ಗೆಯೂ ನಾನು ನಿಮಗೆ ಹೇಳಲು ಬಯಸುತ್ತೇನೆ. ಸ್ವಚ್ಛತೆಯ ಸಂದೇಶ ಸಾರುವ ಸೈಕ್ಲಿಸ್ಟ್ಗಳ (ಸೈಕಲ್ ಸವಾರರ) ಗುಂಪು ಶಿಮ್ಲಾದಿಂದ ಮಂಡಿಗೆ ಹೊರಟಿದೆ. ಈ ಜನರು ಪರ್ವತದ ರಸ್ತೆಗಳಲ್ಲಿ ಸುಮಾರು ನೂರ ಎಪ್ಪತ್ತೈದು ಕಿಲೋಮೀಟರ್ ದೂರವನ್ನು ಸೈಕ್ಲಿಂಗ್ ಮೂಲಕ ಕ್ರಮಿಸುತ್ತಾರೆ. ಈ ಗುಂಪಿನಲ್ಲಿ ಮಕ್ಕಳು ಹಾಗೂ ಹಿರಿಯರು ಇದ್ದಾರೆ. ನಮ್ಮ ಪರಿಸರ ಸ್ವಚ್ಛವಾಗಿದ್ದರೆ, ನಮ್ಮ ಪರ್ವತಗಳು ಮತ್ತು ನದಿಗಳು, ನಮ್ಮ ಸಮುದ್ರಗಳು ಸ್ವಚ್ಛವಾಗಿ ಉಳಿಯುತ್ತವೆ; ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಅಂತಹ ಪ್ರಯತ್ನಗಳ ಬಗ್ಗೆ ನೀವು ನನಗೆ ಬರೆಯುತ್ತಲೇ ಇರಿ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಿ ಈಗ ಮುಂಗಾರು ಆವರಿಸುತ್ತಿದೆ. ಹಲವು ರಾಜ್ಯಗಳಲ್ಲಿ ಮಳೆ ಹೆಚ್ಚುತ್ತಿದೆ. ‘ಜಲ’ ಮತ್ತು ‘ಜಲ ಸಂರಕ್ಷಣೆ’ಯ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುವ ಸಮಯವೂ ಇದಾಗಿದೆ. ನಮ್ಮ ದೇಶದಲ್ಲಿ, ಶತಮಾನಗಳಿಂದ, ಈ ಜವಾಬ್ದಾರಿಯನ್ನು ಸಮಾಜವು ಒಗ್ಗೂಡಿ ನಿಭಾಯಿಸುತ್ತಿದೆ. ನಿಮಗೆ ನೆನಪಿರಬಹುದು, 'ಮನ್ ಕಿ ಬಾತ್' ನಲ್ಲಿ ನಾವು ಒಮ್ಮೆ ಮೆಟ್ಟಿಲು ಬಾವಿಗಳ ಪರಂಪರೆಯನ್ನು ಚರ್ಚಿಸಿದ್ದೇವೆ. ಬಾವೊಲಿಗಳು ಎಂದರೆ ಬೃಹತ್ ಬಾವಿಗಳು, ಅವುಗಳು ಮೆಟ್ಟಿಲುಗಳನ್ನು ಹೊಂದಿರುತ್ತವೆ. ರಾಜಸ್ಥಾನದ ಉದಯಪುರದಲ್ಲಿ ನೂರಾರು ವರ್ಷಗಳಷ್ಟು ಹಳೆಯದಾದ ಅಂತಹ ಒಂದು ಮೆಟ್ಟಿಲು ಬಾವಿ ಇದೆ - ಅದುವೇ 'ಸುಲ್ತಾನ್ ಕಿ ಬಾವೊಲಿ'. ಇದನ್ನು ರಾವ್ ಸುಲ್ತಾನ್ ಸಿಂಗ್ ನಿರ್ಮಿಸಿದ್ದರು, ಆದರೆ ನಿರ್ಲಕ್ಷ್ಯದಿಂದಾಗಿ ಈ ಸ್ಥಳವು ಕ್ರಮೇಣ ಕಸದ ರಾಶಿಯಾಗಿ ಮಾರ್ಪಟ್ಟಿತು. ಒಂದು ದಿನ ಕೆಲವು ಯುವಕರು ತಿರುಗಾಡುತ್ತಾ ಈ ಮೆಟ್ಟಿಲುಬಾವಿಯನ್ನು ತಲುಪಿದರು ಮತ್ತು ಅದರ ಸ್ಥಿತಿಯನ್ನು ಕಂಡು ತುಂಬಾ ದುಃಖಿತರಾದರು. ಆ ಕ್ಷಣದಲ್ಲಿಯೇ ಈ ಯುವಕರು ಸುಲ್ತಾನ್ ಕಿ ಬಾವೋಲಿಯ ಚಿತ್ರ ಮತ್ತು ಅದೃಷ್ಟವನ್ನು ಬದಲಾಯಿಸಲು ನಿರ್ಧರಿಸಿದರು. ಅವರು ತಮ್ಮ ಈ ಕಾರ್ಯಾಚರಣೆಗೆ 'ಸುಲ್ತಾನ್ ಸೆ ಸುರ್-ತಾನ್' ಎಂದು ಹೆಸರಿಸಿದರು. ಇದೇನು ‘ಸುರ್ ತಾನ್! ನಿಮಗೆ ಆಶ್ಚರ್ಯವಾಗಿರಬಹುದು.ವಾಸ್ತವದಲ್ಲಿ ಅವರು ತಮ್ಮ ಪ್ರಯತ್ನಗಳ ಮೂಲಕ ಈ ಮೆಟ್ಟಿಲು ಬಾವಿಯನ್ನು ಪುನರುಜ್ಜೀವಗೊಳಿಸಿರುವುದು ಮಾತ್ರವಲ್ಲ ಅದನ್ನು ಸಂಗೀತದ ಸ್ವರಗಳು ಮತ್ತು ಮಾಧುರ್ಯಕ್ಕೆ ಜೋಡಿಸಿದ್ದಾರೆ. ಸುಲ್ತಾನನ ಮೆಟ್ಟಿಲು ಬಾವಿಯನ್ನು ಸ್ವಚ್ಛಗೊಳಿಸಿದ ನಂತರ, ಅದನ್ನು ಅಲಂಕರಿಸಿದ ಬಳಿಕ, ಸಾಮರಸ್ಯ ಮತ್ತು ಸಂಗೀತದ ಕಾರ್ಯಕ್ರಮವು ನಡೆಯುತ್ತದೆ. ಈ ಬದಲಾವಣೆಯ, ಪರಿವರ್ತನೆಯ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ, ಇದನ್ನು ನೋಡಲು ವಿದೇಶದಿಂದ ಸಾಕಷ್ಟು ಜನರು ಬರಲು ಪ್ರಾರಂಭಿಸಿದ್ದಾರೆ. ಈ ಯಶಸ್ವಿ ಪ್ರಯತ್ನದ ಪ್ರಮುಖ ಅಂಶವೆಂದರೆ ಅಭಿಯಾನವನ್ನು ಪ್ರಾರಂಭಿಸಿದ ಯುವಕರು ಚಾರ್ಟರ್ಡ್ ಅಕೌಂಟೆಂಟ್ ಗಳು. ಕಾಕತಾಳೀಯವೆಂಬಂತೆ, ಇನ್ನು ಕೆಲವೇ ದಿನಗಳಲ್ಲಿ, ಜುಲೈ 1ನ್ನು ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ನಾನು ದೇಶದ ಎಲ್ಲಾ ಸಿಎಗಳನ್ನು ಮುಂಚಿತವಾಗಿ ಅಭಿನಂದಿಸುತ್ತೇನೆ. ನಮ್ಮ ಜಲಮೂಲಗಳನ್ನು ಸಂಗೀತ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜೋಡಿಸುವ ಮೂಲಕ ನಾವು ಇಂತಹದೇ ರೀತಿಯ ಜಾಗೃತಿಯ ಭಾವನೆಯನ್ನು ಮೂಡಿಸಬಹುದು. ಜಲ ಸಂರಕ್ಷಣೆ ಎಂದರೆ ಅದು ಜೀವ ಸಂರಕ್ಷಣೆ. ಇಂದಿನ ದಿನಗಳಲ್ಲಿ ಎಷ್ಟು 'ನದಿ ಉತ್ಸವ'ಗಳು ನಡೆಯುತ್ತಿವೆ ಎಂಬುದನ್ನು ನೀವು ನೋಡಿರಬಹುದು! ನಿಮ್ಮ ನಗರಗಳಲ್ಲಿ ಯಾವುದೇ ನೀರಿನ ಮೂಲಗಳಿದ್ದರೂ, ನೀವು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸುವಂತಾಗಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಉಪನಿಷತ್ತುಗಳು ಜೀವನ ಮಂತ್ರದ ಬಗ್ಗೆ ಉಲ್ಲೇಖಿಸುತ್ತವೆ- ‘ಚರೈವೇತಿ-ಚರೈವೇತಿ-ಚರೈವೇತಿ’- ಈ ಮಂತ್ರವನ್ನು ನೀವೂ ಕೇಳಿರಬಹುದು. ಇದರರ್ಥ – ಮುನ್ನಡೆಯುತ್ತಿರಿ, ಮುನ್ನಡೆಯುತ್ತಿರಿ ಎಂದು. ಈ ಮಂತ್ರವು ನಮ್ಮ ದೇಶದಲ್ಲಿ ತುಂಬಾ ಜನಪ್ರಿಯವಾಗಿದೆ ಏಕೆಂದರೆ ಅದು ಸದಾ ಚಲಿಸುತ್ತಲೇ ಇರುವ ಪ್ರಕೃತಿಯ ಭಾಗವಾಗಿದೆ. ಅದು ಚಲನಶೀಲವಾಗಿರುವಂತಹದು ಮತ್ತು ಸದಾ ಚಲಿಸುತ್ತಿರುವಂತಹದ್ದು. ಒಂದು ರಾಷ್ಟ್ರವಾಗಿ, ನಾವು ಸಾವಿರಾರು ವರ್ಷಗಳ ಅಭಿವೃದ್ಧಿಯ ಪ್ರಯಾಣದ ಮೂಲಕ ಇಲ್ಲಿಯವರೆಗೆ ಬಂದಿದ್ದೇವೆ. ಸಮಾಜವಾಗಿ, ನಾವು ಯಾವಾಗಲೂ ಹೊಸ ಆಲೋಚನೆಗಳನ್ನು, ಹೊಸ ಬದಲಾವಣೆಗಳನ್ನು ಸ್ವೀಕರಿಸುವ ಮೂಲಕ ಮುಂದೆ ಸಾಗಿದ್ದೇವೆ. ನಮ್ಮ ಸಾಂಸ್ಕೃತಿಕ ಚಲನಶೀಲತೆ ಮತ್ತು ಪ್ರವಾಸಗಳು ಇದಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಅದಕ್ಕಾಗಿಯೇ ನಮ್ಮ ಋಷಿಮುನಿಗಳು ಮತ್ತು ಸಂತರು ತೀರ್ಥಯಾತ್ರೆಯಂತಹ ಆಧ್ಯಾತ್ಮಿಕ ಜವಾಬ್ದಾರಿಗಳನ್ನು ನಮಗೆ ನೀಡಿದ್ದರು. ನಾವೆಲ್ಲರೂ ವಿವಿಧ ತೀರ್ಥಯಾತ್ರೆಗಳಿಗೆ ಹೋಗುತ್ತೇವೆ. ಈ ಬಾರಿ ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದನ್ನು ನೀವು ನೋಡಿರಬೇಕು. ನಮ್ಮ ದೇಶದಲ್ಲಿ ಕಾಲಕಾಲಕ್ಕೆ ವಿವಿಧ ದೇವಯಾತ್ರೆಗಳೂ ನಡೆಯುತ್ತವೆ. ದೇವ ಯಾತ್ರೆಗಳು... ಅಂದರೆ, ಇದರಲ್ಲಿ ಭಕ್ತರು ಮಾತ್ರವಲ್ಲದೆ ನಮ್ಮ ದೇವರುಗಳೂ ಪ್ರಯಾಣಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಜುಲೈ 1 ರಂದು ಜಗನ್ನಾಥ ದೇವರ ಪ್ರಸಿದ್ಧ ಯಾತ್ರೆ ಆರಂಭವಾಗಲಿದೆ. ಒಡಿಶಾದ ಪುರಿ ಯಾತ್ರೆ ನಮಗೆಲ್ಲ ಚಿರಪರಿಚಿತ. ಈ ಸಂದರ್ಭದಲ್ಲಿ ಪುರಿಗೆ ಹೋಗುವ ಸೌಭಾಗ್ಯ, ಅದೃಷ್ಟ ಲಭಿಸುವಂತೆ ಮಾಡಲು ಜನರು ಬಹಳ ಪ್ರಯತ್ನಗಳನ್ನು ಮಾಡುತ್ತಾರೆ. ಇತರ ರಾಜ್ಯಗಳಲ್ಲಿಯೂ ಸಹ, ಜಗನ್ನಾಥ ಯಾತ್ರೆಗಳನ್ನು ಬಹಳ ಉತ್ಸಾಹದಿಂದ ಮತ್ತು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಭಗವಾನ್ ಜಗನ್ನಾಥ ಯಾತ್ರೆಯು ಆಷಾಢ ಮಾಸದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ನಮ್ಮ ಗ್ರಂಥಗಳಲ್ಲಿ 'ಆಷಾಢಸ್ಯ ದ್ವಿತೀಯ ದಿವಸೇ... ರಥಯಾತ್ರೆ' ಎಂದಿರುತ್ತದೆ. ಸಂಸ್ಕೃತ ಶ್ಲೋಕಗಳು ಈ ವಿವರಣೆಯನ್ನು ನೀಡುತ್ತವೆ. ಗುಜರಾತ್ನ ಅಹಮದಾಬಾದ್ನಲ್ಲಿಯೂ ಪ್ರತಿ ವರ್ಷ ರಥಯಾತ್ರೆಯು ಆಷಾಢ ದ್ವಿತೀಯದಿಂದ ಪ್ರಾರಂಭವಾಗುತ್ತದೆ. ನಾನು ಗುಜರಾತಿನಲ್ಲಿದ್ದೆ, ಹಾಗಾಗಿ ಪ್ರತಿ ವರ್ಷ ಈ ಯಾತ್ರೆಯಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೂ ಸಿಗುತ್ತಿತ್ತು. ಆಷಾಢ ದ್ವಿತೀಯ, ಆಶಾಧಿ ಬಿಜ್ ಎಂದೂ ಕರೆಯಲ್ಪಡುವ ಈ ದಿನ ಕಚ್ನ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ನನ್ನ ಎಲ್ಲಾ ಕಚ್ಚಿ ಸಹೋದರ ಸಹೋದರಿಯರಿಗೆ ನಾನು ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ನನಗೆ ಈ ದಿನ ಬಹಳ ವಿಶೇಷ ದಿನವಾಗಿದೆ. ನನಗೆ ನೆನಪಿದೆ, ಆಷಾಢ ದ್ವಿತೀಯದ ಒಂದು ದಿನ ಮೊದಲು, ಅಂದರೆ, ಆಷಾಢದ ಮೊದಲ ತಿಥಿಯಂದು, ನಾವು ಗುಜರಾತ್ನಲ್ಲಿ ಸಂಸ್ಕೃತ ಉತ್ಸವವನ್ನು ಪ್ರಾರಂಭಿಸಿದೆವು. ಸಂಸ್ಕೃತ ಭಾಷೆಯಲ್ಲಿ ಹಾಡುಗಳು, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದು ಒಳಗೊಂಡಿದೆ. ಈ ಕಾರ್ಯಕ್ರಮದ ಹೆಸರು - 'ಆಷಾಢಸ್ಯ ಪ್ರಥಮ ದಿನ'. ಹಬ್ಬಕ್ಕೆ ಈ ವಿಶೇಷ ಹೆಸರು ಇಡುವುದರ ಹಿಂದೆಯೂ ಒಂದು ಕಾರಣವಿದೆ. ವಾಸ್ತವವಾಗಿ, ಮಹಾನ್ ಸಂಸ್ಕೃತ ಕವಿ ಕಾಳಿದಾಸನು ಆಷಾಢ ಮಾಸದ ಮಳೆಯ ಆಗಮನದ ಮೇಲೆ ಮೇಘದೂತವನ್ನು ಬರೆದನು. ಮೇಘದೂತಂನಲ್ಲಿ ಒಂದು ಶ್ಲೋಕವಿದೆ – ಆಷಾಢಸ್ಯ ಪ್ರಥಮ ದಿವಸೆ, ಮೇಘಂ ಆಶ್ಲಿಷ್ಟ ಸನುಮ್, ಅಂದರೆ ಆಷಾಢದ ಮೊದಲ ದಿನ ಮೋಡಗಳಿಂದ ಆವೃತವಾದ ಪರ್ವತ ಶಿಖರಗಳು ಎಂದು. ಈ ಶ್ಲೋಕವೇ ಈ ಕಾರ್ಯಕ್ರಮಕ್ಕೆ ಮೂಲಾಧಾರ.
ಸ್ನೇಹಿತರೇ, ಅದು ಅಹಮದಾಬಾದ್ ಇರಲಿ ಅಥವಾ ಪುರಿಯಿರಲಿ, ಜಗನ್ನಾಥ ದೇವರು ಈ ಪ್ರಯಾಣದ ಮೂಲಕ ನಮಗೆ ಅನೇಕ ಆಳವಾದ ಮಾನವ ಸಂದೇಶಗಳನ್ನು ನೀಡುತ್ತಾರೆ. ಭಗವಾನ್ ಜಗನ್ನಾಥ ಪ್ರಪಂಚದ ಅಧಿಪತಿ, ಆದರೆ ಬಡವರು ಮತ್ತು ದೀನ ದಲಿತರು ಅವರ ಪ್ರಯಾಣದಲ್ಲಿ ವಿಶೇಷ ಭಾಗವಹಿಸುವಿಕೆಯನ್ನು ಹೊಂದಿದ್ದಾರೆ. ಸಮಾಜದ ಪ್ರತಿಯೊಂದು ವರ್ಗ ಮತ್ತು ವ್ಯಕ್ತಿಗಳೊಂದಿಗೆ ದೇವರು ನಡೆಯುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ನಡೆಯುವ ಎಲ್ಲಾ ಪ್ರಯಾಣಗಳಲ್ಲಿಯೂ ಬಡವ-ಬಲ್ಲಿದ ಎಂಬ ಭೇದ-ಭಾವವಿರುವುದಿಲ್ಲ. ಮೇಲಿನವರು-ಕೆಳಗಿನವರು ಎಂಬ ತಾರತಮ್ಯ ಇರುವುದಿಲ್ಲ. ಎಲ್ಲಾ ತಾರತಮ್ಯವನ್ನು ಮೀರಿ ಯಾತ್ರೆಯೇ ಇಲ್ಲಿ ಅತಿಮುಖ್ಯ. ಮಹಾರಾಷ್ಟ್ರದ ಪಂಢರಪುರದ ಯಾತ್ರೆಯ ಬಗ್ಗೆ ನೀವು ಕೇಳಿರಬಹುದು. ಪಂಢರಪುರ ಯಾತ್ರೆಯಲ್ಲಿ ಯಾರೊಬ್ಬರೂ ದೊಡ್ಡವರಲ್ಲ, ಹಾಗೂ ಚಿಕ್ಕವರಲ್ಲ. ಎಲ್ಲರೂ ವಾರಕರಿಗಳು, ಭಗವಾನ್ ವಿಠ್ಠಲನ ಸೇವಕರು. ಕೇವಲ 4 ದಿನಗಳ ನಂತರ, ಜೂನ್ 30 ರಿಂದ ಅಮರನಾಥ ಯಾತ್ರೆಯು ಕೂಡಾ ಪ್ರಾರಂಭಗೊಳ್ಳಲಿದೆ. ಅಮರನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಜಮ್ಮು ಕಾಶ್ಮೀರವನ್ನು ತಲುಪುತ್ತಾರೆ. ಜಮ್ಮು ಕಾಶ್ಮೀರದ ಸ್ಥಳೀಯ ಜನರು ಈ ಯಾತ್ರೆಯ ಜವಾಬ್ದಾರಿಯನ್ನು ಸಮಾನ ಪೂಜ್ಯತೆಯಿಂದ ವಹಿಸಿ ಕೊಳ್ಳುತ್ತಾರೆ ಮತ್ತು ಯಾತ್ರಾರ್ಥಿಗಳೊಂದಿಗೆ ಸಹಕರಿಸುತ್ತಾರೆ.
ಸ್ನೇಹಿತರೇ, ದಕ್ಷಿಣದಲ್ಲಿ ಶಬರಿಮಲೆ ಯಾತ್ರೆಗೆ ಅಷ್ಟೇ ಮಹತ್ವವಿದೆ. ಶಬರಿಮಲೆಯ ಬೆಟ್ಟಗಳ ಮೇಲಿರುವ ಭಗವಾನ್ ಅಯ್ಯಪ್ಪನ ದರ್ಶನಕ್ಕಾಗಿ ಈ ಯಾತ್ರೆಯು ನಡೆಯುತ್ತದೆ. ಈ ಮಾರ್ಗವು ಸಂಪೂರ್ಣವಾಗಿ ಅರಣ್ಯದಿಂದ ಆವೃತವಾಗಿದ್ದ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಇಂದಿಗೂ, ಜನರು ಈ ಯಾತ್ರೆಗಳಿಗೆ ಹೋದಾಗ, ಬಡವರಿಗೆ ಎಷ್ಟೊಂದು ಅವಕಾಶಗಳು ನಿರ್ಮಾಣವಾಗುತ್ತವೆ. ... ಧಾರ್ಮಿಕ ಆಚರಣೆಗಳಿಂದ ಹಿಡಿದು ವಸತಿ ವ್ಯವಸ್ಥೆಗಳವರೆಗೆ ... ಅಂದರೆ, ಈ ಯಾತ್ರೆಗಳು ನೇರವಾಗಿ ನಮಗೆ ಬಡವರ ಸೇವೆ ಮಾಡಲು ಅವಕಾಶವನ್ನು ನೀಡುತ್ತವೆ ಮತ್ತು ಅವರಿಗೂ ಅವು ಅಷ್ಟೇ ಪ್ರಯೋಜನಕಾರಿಯಾಗಿವೆ. ಅದಕ್ಕಾಗಿಯೇ ದೇಶವು ಈಗ ತೀರ್ಥಯಾತ್ರೆಯಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ನೀವೂ ಕೂಡ ಇಂತಹ ಯಾತ್ರೆ ಕೈಗೊಂಡರೆ ಆಧ್ಯಾತ್ಮದ, ಭಕ್ತಿಯ ಜೊತೆಗೆ ಏಕ್ ಭಾರತ್-ಶ್ರೇಷ್ಠ ಭಾರತಗಳ ದರ್ಶನವೂ ಆಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಎಂದಿನಂತೆ, ಈ ಬಾರಿಯೂ 'ಮನ್ ಕಿ ಬಾತ್' ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸಿರುವುದು ಬಹಳ ಆಹ್ಲಾದಕರ ಅನುಭವ. ನಾವು ದೇಶವಾಸಿಗಳ ಯಶಸ್ಸು ಮತ್ತು ಸಾಧನೆಗಳನ್ನು ಚರ್ಚಿಸಿದ್ದೇವೆ. ಇದೆಲ್ಲದರ ನಡುವೆ ನಾವು ಕೊರೊನಾ ವಿರುದ್ಧ ಮುಂಜಾಗ್ರತೆ ವಹಿಸಬೇಕಿದೆ. ಆದಾಗ್ಯೂ, ಇಂದು ದೇಶವು ಲಸಿಕೆಯ ಸಮಗ್ರ ರಕ್ಷಣಾತ್ಮಕ ಕವಚವನ್ನು ಹೊಂದಿದೆ ಎಂಬುದು ತೃಪ್ತಿಯ ವಿಷಯವಾಗಿದೆ. ನಾವು ಸುಮಾರು 200 ಕೋಟಿ ಲಸಿಕೆ ಡೋಸ್ ಗಳ ಸನಿಹದಲ್ಲಿದ್ದೇವೆ. ದೇಶದಲ್ಲಿ ಮುನ್ನೆಚ್ಚರಿಕೆ ಡೋಸ್ ಕೂಡಾ ತ್ವರಿತವಾಗಿ ನೀಡಲಾಗುತ್ತಿದೆ. ನಿಮ್ಮ ಎರಡನೇ ಡೋಸ್ ನಂತರ ಮುನ್ನೆಚ್ಚರಿಕೆಯ ಡೋಸ್ಗೆ ಸಮಯವಾಗಿದ್ದರೆ, ನೀವು ಈ ಮೂರನೇ ಡೋಸ್ ಹಾಕಿಸಿಕೊಳ್ಳಬೇಕು. ನಿಮ್ಮ ಕುಟುಂಬದ ಸದಸ್ಯರು, ವಿಶೇಷವಾಗಿ ವಯಸ್ಸಾದವರು, ಮುನ್ನೆಚ್ಚರಿಕೆಯ ಡೋಸ್ ತೆಗೆದುಕೊಳ್ಳುವಂತೆ ಮಾಡಿ. ಕೈ ಸ್ವಚ್ಛತೆ ಮತ್ತು ಮುಖಗವಸುಗಳಂತಹ ಅಗತ್ಯ ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ಸುತ್ತಮುತ್ತಲಿನ ಕೊಳಚೆಯಿಂದ ಉಂಟಾಗುವ ರೋಗಗಳ ಬಗ್ಗೆಯೂ ಎಚ್ಚರ ವಹಿಸಬೇಕು. ನೀವೆಲ್ಲರೂ ಜಾಗರೂಕರಾಗಿರಿ, ಆರೋಗ್ಯದಿಂದಿರಿ ಮತ್ತು ಇದೇ ರೀತಿಯ ಸಕಾರಾತ್ಮಕ ಶಕ್ತಿಯೊಂದಿಗೆ ಮುನ್ನಡೆಯಿರಿ. ನಾವು ಮುಂದಿನ ತಿಂಗಳು ಮತ್ತೆ ಭೇಟಿಯಾಗೋಣ, ಅಲ್ಲಿಯವರೆಗೆ, ಅನೇಕ ಧನ್ಯವಾದಗಳು. ನಮಸ್ಕಾರ!.
ನನ್ನ ಪ್ರಿಯ ದೇಶವಾಸಿಗಳೆ, ನಮಸ್ಕಾರ. ಇಂದು ಮತ್ತೊಮ್ಮೆ ಮನದ ಮಾತಿನ ಮೂಲಕ ಕೋಟ್ಯಂತರ ನನ್ನ ಕುಟುಂಬ ಸದಸ್ಯರೊಂದಿಗೆ ಭೇಟಿಯಾಗುವ ಸುಸಂದರ್ಭ ಒದಗಿ ಬಂದಿದೆ. ಮನದ ಮಾತಿಗೆ ನಿಮಗೆಲ್ಲ ಸುಸ್ವಾಗತ. ಕೆಲ ದಿನಗಳ ಹಿಂದೆ ದೇಶ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತ ಮಹತ್ವಪೂರ್ಣ ಸಾಧನೆಯೊಂದನ್ನು ಮಾಡಿದೆ. ಇದು ಭಾರತದ ಸಾಮರ್ಥ್ಯದ ಬಗ್ಗೆ ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ನೀವು ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಒಬ್ಬರ ಶತಕದ ಬಗ್ಗೆ ಕೇಳಿ ಸಂಭ್ರಮಿಸುತ್ತಿರಬಹುದು ಆದರೆ ಭಾರತ ಮತ್ತೊಂದು ಮೈದಾನದಲ್ಲೂ ಶತಕ ಬಾರಿಸಿದೆ ಮತ್ತು ಅದು ಬಹಳ ವಿಶೇಷವಾಗಿದೆ. ಈ ತಿಂಗಳ 5 ನೇ ತಾರೀಖಿನಂದು ದೇಶದಲ್ಲಿ ಯುನಿಕಾರ್ನ್ ಸಂಖ್ಯೆ ನೂರಕ್ಕೆ ತಲುಪಿದೆ ಮತ್ತು ಒಂದು ಯುನಿಕಾರ್ನ್ ಅಂದರೆ ಸುಮಾರು ಕಡಿಮೆ ಎಂದರೂ ಏಳೂವರೆ ಸಾವಿರ ಕೋಟಿ ರೂಪಾಯಿಗಳ ಸ್ಟಾರ್ಟ್ ಅಪ್ ಎಂಬುದು ನಿಮಗೆ ತಿಳಿದಿದೆ. ಈ ಯುನಿಕಾರ್ನ್ ಗಳ ಒಟ್ಟು ಮೌಲ್ಯ 330 ಶತಕೋಟಿ ಡಾಲರ್, ಅಂದರೆ 25 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು. ಖಂಡಿತ ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯ. ನಮ್ಮ ಒಟ್ಟು ಯುನಿಕಾರ್ನ್ ಗಳಲ್ಲಿ ಇಡೀ ವರ್ಷದಲ್ಲಿ ಕೇವಲ 44 ಸ್ಥಾಪಿತವಾಗಿದ್ದವು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು. ಇಷ್ಟೇ ಅಲ್ಲ ಈ ವರ್ಷದ 3-4 ತಿಂಗಳುಗಳಲ್ಲೇ 14 ಹೊಸ ಯುನಿಕಾರ್ನ್ ಗಳು ನಿರ್ಮಿತವಾಗಿವೆ ಎಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲೂ ನಮ್ಮ ಸ್ಟಾರ್ಟ್ ಅಪ್ ಗಳು ಸಂಪತ್ತು ಮತ್ತು ಮೌಲ್ಯ ಸೃಷ್ಟಿಯಲ್ಲಿ ತೊಡಗಿದ್ದವು ಎಂಬುದು ಇದರರ್ಥ. ಭಾರತೀಯ ಯುನಿಕಾರ್ನ್ ಗಳ ಸರಾಸರಿ ವಾರ್ಷಿಕ ಬೆಳವಣಿಗೆ ದರ ಅಮೇರಿಕ, ಬ್ರಿಟನ್ ಮುಂತಾದ ದೇಶಗಳಿಗಿಂತ ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ತ್ವರಿತ ವೃದ್ಧಿ ಕಂಡುಬರಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ನಮ್ಮ ಯುನಿಕಾರ್ನ್ ಗಳು ವಿಭಿನ್ನವಾದವು ಎಂಬುದು ಮತ್ತೊಂದು ಉತ್ತಮ ವಿಷಯವಾಗಿದೆ. ಇವು e-commerce, Fin-Tech, Ed-Tech, Bio-Tech ನಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. Start-Ups ವಿಶ್ವವು ನವಭಾರತದ ಚೈತನ್ಯವನ್ನು ಪ್ರತಿಬಿಂಬಿಸುವಂಥದ್ದಾಗಿದೆ ಎಂಬುದು ಮತ್ತೊಂದು ಪ್ರಮುಖವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಇಂದು ಭಾರತದ Start-Up ecosystem ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಣ್ಣ ಪುಟ್ಟ ನಗರಗಳು ಮತ್ತು ಗ್ರಾಮಗಳಿಂದಲೂ ಉದ್ಯಮಿಗಳು ಹೊರ ಹೊಮ್ಮುತ್ತಿದ್ದಾರೆ. ಇದರಿಂದ ಭಾರತದಲ್ಲಿ ಯಾರ ಬಳಿ ಹೊಸ ಶೋಧದ ಕಲ್ಪನೆಗಳಿವೆಯೋ ಅವರು ಸಂಪತ್ತನ್ನು ಸೃಷ್ಟಿಸಬಲ್ಲರು ಎಂಬುದು ಸಾಬೀತಾಗುತ್ತದೆ.
ಸ್ನೇಹಿತರೆ, ದೇಶದ ಈ ಸಫಲತೆಯ ಹಿಂದೆ, ದೇಶದ ಯುವಶಕ್ತಿ, ದೇಶದ ಪ್ರತಿಭೆ ಮತ್ತು ಸರ್ಕಾರ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಕೊಡುಗೆಯೂ ಇದರಲ್ಲಿದೆ. ಆದರೆ ಇನ್ನೊಂದು ವಿಷಯ ಇಲ್ಲಿ ಮಹತ್ವಪೂರ್ಣವಾಗಿದೆ. Start-Up ವಿಶ್ವದಲ್ಲಿ ಸೂಕ್ತ ಮಾರ್ಗದರ್ಶನ. ಒಬ್ಬ ಉತ್ತಮ ಮಾರ್ಗದರ್ಶಕ Start-Up ಅನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡಯ್ಯಬಲ್ಲ. ಅವನು ಸಂಸ್ಥಾಪಕರು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ವ ರೀತಿಯಲ್ಲೂ ಮಾರ್ಗದರ್ಶನ ನೀಡಬಲ್ಲ. Start-Up ಗಳನ್ನು ಯಶಸ್ಸಿನತ್ತ ಕೊಂಡೊಯ್ಯಲು ತಮ್ಮನ್ನೇ ಮುಡಿಪಾಗಿಟ್ಟ ಮಾರ್ಗದರ್ಶಕರು ಭಾರತದಲ್ಲಿ ಬಹಳಷ್ಟು ಜನರಿದ್ದಾರೆ ಎಂಬುದು ನನಗೆ ಹೆಮ್ಮೆ ಎನಿಸುತ್ತದೆ.
ಶ್ರೀಧರ್ ವೆಂಬೂ ಅವರಿಗೆ ಇತ್ತೀಚೆಗೆ ಪದ್ಮ ಪ್ರಶಸ್ತಿ ಲಭಿಸಿದೆ. ಅವರು ಸ್ವತಃ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಆದರೆ ಅವರೀಗ ಬೇರೆ ಉದ್ಯಮಿಗಳನ್ನು ರೂಪಿಸುವ ಪಣ ತೊಟ್ಟಿದ್ದಾರೆ. ಶ್ರೀಧರ್ ಅವರು ಗ್ರಾಮೀಣ ಭಾಗದಿಂದ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಅವರು ಗ್ರಾಮೀಣ ಯುವಜನತೆಯನ್ನು ಗ್ರಾಮದಲ್ಲಿದ್ದುಕೊಂಡೇ ಈ ಕ್ಷೇತ್ರದಲ್ಲಿ ಸಾಧನೆಗೈಯ್ಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಗ್ರಾಮೀಣ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲೆಂದೇ 2014 ರಲ್ಲಿ One-Bridge ಎಂಬ ವೇದಿಕೆಯನ್ನು ಸಿದ್ಧಗೊಳಿಸಿದ ಮದನ್ ಪದಕಿಯಂಥವರೂ ನಮ್ಮೊಂದಿಗಿದ್ದಾರೆ. ಇಂದು One-Bridge ದಕ್ಷಿಣ ಮತ್ತು ಪೂರ್ವ ಭಾರತದ 75 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಕೈಜೋಡಿಸಿದ 9000 ಕ್ಕೂ ಅಧಿಕ ಗ್ರಾಮೀಣ ಉದ್ಯಮಿಗಳು ಗ್ರಾಮೀಣ ಗ್ರಾಹಕರಿಗೆ ತಮ್ಮ ಸೇವೆಗಳನ್ನು ಒದಗಿಸುತ್ತಿದ್ದಾರೆ. ಮೀರಾ ಶೆಣೈ ಕೂಡಾ ಇದೇ ಸಾಲಿಗೆ ಸೇರಿದವರಾಗಿದ್ದಾರೆ. ಗ್ರಾಮೀಣ, ಬುಡಕಟ್ಟು ಮತ್ತು ವಿಕಲಚೇತನ ಯುವಜನತೆಗೆ Market Linked Skills Training ಕ್ಷೇತ್ರದಲ್ಲಿ ಗಣನೀಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಾನು ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ ಆದರೆ, ಇಂದು ನಮ್ಮ ಬಳಿ ಮಾರ್ಗದರ್ಶಕರ ಕೊರತೆಯಿಲ್ಲ. ಇಂದು ದೇಶದಲ್ಲಿ Start-Up ಗಳಿಗಾಗಿ ಸಂಪೂರ್ಣ support system ಒಂದು ಸಿದ್ಧಗೊಳ್ಳುತ್ತಿದೆ ಬಹಳ ಸಮಾಧಾನಕರ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಭಾರತದ Start-Up ಪ್ರಪಂಚದಲ್ಲಿ ಪ್ರಗತಿಯ ಹೊಸ ಆಯಾಮಗಳು ನೋಡಲು ಸಿಗುತ್ತವೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೆ, ಕೆಲ ದಿನಗಳ ಹಿಂದೆ ನನಗೆ ಇಂಥದೇ ಒಂದು ಆಸಕ್ತಿಕರ ಮತ್ತು ಆಕರ್ಷಕ ವಸ್ತು ಲಭಿಸಿದೆ, ಅದರಲ್ಲಿ ದೇಶವಾಸಿಗಳ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆಯ ರಂಗು ತುಂಬಿದೆ. ತಮಿಳು ನಾಡಿನ ತಂಜಾವೂರಿನ ಒಂದು ಸ್ವಸಹಾಯ ಗುಂಪು ನನಗೆ ಕಳುಹಿಸಿದ ಉಡುಗೊರೆಯದು. ಈ ಉಡುಗೊರೆಯಲ್ಲಿ ಭಾರತೀಯತೆಯ ಸುಗಂಧವಿದೆ ಮತ್ತು ಮಾತೃ ಶಕ್ತಿಯ ಆಶೀರ್ವಾದವಿದೆ. ಇದರಲ್ಲಿ ನನ್ನ ಬಗ್ಗೆ ಅವರಿಗಿರುವ ಸ್ನೇಹದ ಕುರುಹೂ ಇದೆ. ಇದು ತಂಜಾವೂರಿನ ವಿಶೇಷ ಬೊಂಬೆ. ಇದಕ್ಕೆ GI Tag ಕೂಡಾ ಲಭಿಸಿದೆ. ಸ್ಥಳೀಯ ಸಂಸ್ಕೃತಿಯಿಂದ ಮೈಗೂಡಿಸಿದ ಇಂತಹ ಕಾಣಿಕೆಯನ್ನು ಕಳುಹಿಸಿದ್ದಕ್ಕಾಗಿ ನಾನು ತಂಜಾವೂರಿನ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೇನೇ ಸ್ನೇಹಿತರೇ, ಈ ತಂಜಾವೂರಿನ ಬೊಂಬೆ ಎಷ್ಟು ಸುಂದರವಾಗಿದೆಯೋ, ಅಷ್ಟೇ ಸುಂದರವಾಗಿ ಇದು ಮಹಿಳಾ ಸಬಲೀಕರಣದ ಹೊಸ ಕಥೆಯನ್ನೂ ಬರೆಯುತ್ತಿದೆ.
ತಂಜಾವೂರಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಮಳಿಗೆ ಮತ್ತು ಕಿಯೋಸ್ಕ್ ಸಹ ಪ್ರಾರಂಭವಾಗಲಿದೆ. ಇದು ಹಲವಾರು ಬಡ ಕುಟುಂಬಗಳ ಜೀವನಶೈಲಿಯನ್ನು ಬದಲಿಸಿದೆ. ಇಂತಹ ಕಿಯೋಸ್ಕ್ ಮತ್ತು ಮಳಿಗೆಗಳ ಸಹಾಯದಿಂದ ಮಹಿಳೆಯರು ಈಗ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಈ ಉಪಕ್ರಮಕ್ಕೆ ‘ಥಾರಗಯಿಗಲ್ ಕಯಿವಿನಯೀ ಪೊರುತ್ತಕ್ಕಳ್ ವಿರಪ್ಪನಯೀ ಅಂಗಾಡಿ’ ಎಂದು ಹೆಸರಿಸಲಾಗಿದೆ. ಈ ಉಪಕ್ರಮದೊಂದಿಗೆ 22 ಸ್ವಸಹಾಯ ಗುಂಪುಗಳು ಸೇರಿರುವುದು ವಿಶೇಷವಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳ ಈ ಅಂಗಡಿ ತಂಜಾವೂರಿನ ಪ್ರಮುಖ ಸ್ಥಳದಲ್ಲಿ ಇದೆ ಎಂಬುದನ್ನು ಕೇಳಿ ನಿಮಗೆ ಸಂತೋಷವೆನ್ನಿಸಬಹುದು. ಈ ಅಂಗಡಿಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಮಹಿಳೆಯರೇ ವಹಿಸಿಕೊಂಡಿದ್ದಾರೆ. ಈ ಮಹಿಳಾ ಸ್ವಸಹಾಯ ಗುಂಪುಗಳು ತಂಜಾವೂರು ಬೊಂಬೆ ಮತ್ತು ಕಂಚಿನ ದೀಪದಂತಹ GI ಉತ್ಪನ್ನಗಳ ಜೊತೆಗೆ ಆಟಿಕೆಗಳು, ಮ್ಯಾಟ್ ಮತ್ತು ಕೃತಕ ಆಭರಣಗಳನ್ನು ತಯಾರಿಸುತ್ತವೆ. ಇಂಥ ಅಂಗಡಿಗಳಿಂದಾಗಿ GI ಉತ್ಪನ್ನಗಳ ಜೊತೆಗೆ ಕರಕುಶಲ ಉತ್ಪನ್ನಗಳ ಮಾರಾಟದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಈ ಉಪಕ್ರಮದಿಂದಾಗಿ ಕೇವಲ ಕರಕುಶಲಕರ್ಮಿಗಳಿಗೆ ಮಾತ್ರವಲ್ಲ ಮಹಿಳೆಯರ ಆದಾಯ ಹೆಚ್ಚಳದಿಂದ ಅವರ ಸಶಕ್ತೀಕರಣವೂ ಆಗುತ್ತಿದೆ. ಮನದ ಮಾತಿನ ಶ್ರೋತೃಗಳಲ್ಲಿ ಒಂದು ವಿನಂತಿಯಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಯಾವ ಮಹಿಳಾ ಸ್ವಸಹಾಯ ಗುಂಪು ಕೆಲಸ ಮಾಡುತ್ತಿದೆ ಎಂದು ಪತ್ತೆ ಹಚ್ಚಿ. ಅವರ ಉತ್ಪನ್ನಗಳ ಬಗ್ಗೆಯೂ ಮಾಹಿತಿ ಕಲೆಹಾಕಿ ಮತ್ತು ಈ ಉತ್ಪನ್ನಗಳ ಹೆಚ್ಚೆಚ್ಚು ಬಳಕೆಯನ್ನು ಆರಂಭಿಸಿ. ಹೀಗೆ ಮಾಡುವ ಮೂಲಕ ನೀವು ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಳದ ಜೊತೆಗೆ ಸ್ವಾವಲಂಬಿ ಭಾರತ ಅಭಿಯಾನದ ವೇಗವನ್ನೂ ಹೆಚ್ಚಿಸಲಿದ್ದೀರಿ.
ಸ್ನೇಹಿತರೆ, ನಮ್ಮ ದೇಶದಲ್ಲಿ ಬಹಳಷ್ಟು ಭಾಷೆಗಳ ಲಿಪಿಗಳು ಮತ್ತು ಆಡುಭಾಷೆಯ ಸಮೃದ್ಧವಾದ ಖಜಾನೆಯಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಭಿನ್ನವಾದ ಉಡುಗೆ, ಆಹಾರ ಮತ್ತು ಸಂಸ್ಕೃತಿ ನಮ್ಮ ಹೆಗ್ಗುರುತಾಗಿದೆ. ಈ ವೈವಿಧ್ಯ ಒಂದು ರಾಷ್ಟ್ರದ ರೂಪದಲ್ಲಿ ನಮ್ಮನ್ನು ಸಶಕ್ತಗೊಳಿಸುತ್ತದೆ ಮತ್ತು ಒಗ್ಗಟ್ಟು ಮೂಡಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಹೆಣ್ಣು ಮಗಳು ಕಲ್ಪನಾಳ ಕಥೆ ಬಹಳ ಪ್ರೇರಣಾದಾಯಕ ಉದಾಹರಣೆಯಿದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅವಳ ಹೆಸರು ಕಲ್ಪನಾ ಆದರೆ ಅವಳ ಪ್ರಯತ್ನ ‘ಏಕ್ ಭಾರತ್ ಶ್ರೇಷ್ಠ ಭಾರತ್’ ದ ನಿಜವಾದ ಭಾವನೆಗಳೊಂದಿಗೆ ತುಂಬಿದೆ. ಕಲ್ಪನಾ ಇತ್ತೀಚೆಗೆ ಕರ್ನಾಟಕದಲ್ಲಿ ತನ್ನ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಆದರೆ ಅವಳ ಸಫಲತೆಯ ವಿಶೇಷತೆಯೇನೆಂದರೆ ಕಲ್ಪನಾಗೆ ಕೆಲ ದಿನಗಳ ಹಿಂದಿನವರೆಗೂ ಕನ್ನಡ ಭಾಷೆಯೇ ಬರುತ್ತಿರಲಿಲ್ಲ. ಅವಳು ಕೇವಲ 3 ತಿಂಗಳಲ್ಲಿ ಕನ್ನಡ ಭಾಷೆಯನ್ನು ಕಲಿಯುವುದು ಮಾತ್ರವಲ್ಲ 92 ರಷ್ಟು ಅಂಕಗಳನ್ನೂ ಗಳಿಸಿದ್ದಾಳೆ. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗುತ್ತಿರಬಹುದು ಆದರೆ ಇದು ನಿಜ. ಅವಳ ಕುರಿತು ಆಶ್ಚರ್ಯ ಮೂಡಿಸುವ ಮತ್ತು ಪ್ರೇರಣೆಯನ್ನು ನೀಡುವಂತಹ ಇನ್ನೂ ಇಂಥ ಹಲವಾರು ವಿಷಯಗಳಿವೆ. ಕಲ್ಪನಾ ಮೂಲತಃ ಉತ್ತರಾಖಂಡದ ಜೋಷಿ ಮಠದ ನಿವಾಸಿಯಾಗಿದ್ದಾರೆ. ಅವಳು ಈ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು. ಅವಳು 3 ನೇ ತರಗತಿಯಲ್ಲಿ ಓದುತ್ತಿರುವಾಗಲೇ ದೃಷ್ಟಿ ಕಳೆದುಕೊಂಡಿದ್ದಳು. ಆದರೆ ‘ಮನಸ್ಸಿದ್ದಲ್ಲಿ ಮಾರ್ಗ’ ಎಂದು ಹೇಳುತ್ತಾರಲ್ಲವೇ ಹಾಗೆ ಕಲ್ಪನಾ ನಂತರ ಮೈಸೂರು ನಿವಾಸಿಯಾದ ತಾರಾ ಮೂರ್ತಿಯವರನ್ನು ಭೇಟಿಯಾದಳು. ಅವರು ಕಲ್ಪನಾಳಿಗೆ ಪ್ರೋತ್ಸಾಹಿಸುವುದಲ್ಲದೇ ಸಾಕಷ್ಟು ಸಹಾಯವನ್ನೂ ಮಾಡಿದರು. ಇಂದು ಅವಳು ನಮಗೆಲ್ಲರಿಗೂ ನಿದರ್ಶನವಾಗಿದ್ದಾಳೆ. ಕಲ್ಪನಾಳಿಗೆ ಅವಳ ಛಲಕ್ಕಾಗಿ ಅಭಿನಂದಿಸುತ್ತೇನೆ. ಇದೇ ರೀತಿ ಭಾಷೆಯ ವೈವಿಧ್ಯವನ್ನು ಪುಷ್ಟಿಗೊಳಿಸುವಲ್ಲಿ ತೊಡಗಿಸಿಕೊಂಡವರು ನಮ್ಮ ದೇಶದಲ್ಲಿ ಅನೇಕ ಜನರಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾದ ಶ್ರೀಪತಿ ಟುಡು ಅವರು ಇಂಥವರಲ್ಲಿ ಒಬ್ಬರು. ಟುಡು ಅವರು ಪುರುಲಿಯಾದ ಸಿದ್ದೋ ಕಾನೊ ಬಿರ್ಸಾ ವಿಶ್ವವಿದ್ಯಾಲಯದಲ್ಲಿ ಸಂಥಾಲಿ ಭಾಷೆಯ ಪ್ರೊಫೆಸರ್ ಆಗಿದ್ದಾರೆ. ಅವರು ಸಂಥಾಲಿ ಸಮಾಜಕ್ಕಾಗಿ ಅವರ ‘ಓಲ್ ಚಿಕೀ’ ಲಿಪಿಯಲ್ಲಿ ನಮ್ಮ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಶ್ರೀಪತಿ ಟುಡು ಅವರು ನಮ್ಮ ಸಂವಿಧಾನ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಲಿಸಿಕೊಡುತ್ತದೆ ಎನ್ನುತ್ತಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಇದನ್ನು ಅರಿತಿರಬೇಕು. ಹೀಗಾಗಿ ಅವರು ಸಂಥಾಲಿ ಸಮಾಜಕ್ಕಾಗಿ ಅವರ ಲಿಪಿಯಲ್ಲೇ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿ ಕೊಡುಗೆಯಾಗಿ ನೀಡಿದ್ದಾರೆ. ಶ್ರೀಪತಿಯವರ ಈ ವಿಚಾರ ಮತ್ತು ಪ್ರಯತ್ನಗಳ ಪ್ರಶಂಸೆ ಮಾಡುತ್ತೇನೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಭಾವನೆಯ ಜ್ವಲಂತ ಉದಾಹರಣೆ ಇದಾಗಿದೆ. ಈ ಭಾವನೆಯನ್ನು ಮುಂದಕ್ಕೆ ಕೊಂಡೊಯ್ಯುವ ಹಲವಾರು ಪ್ರಯತ್ನಗಳ ಬಗ್ಗೆ ನೀವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಜಾಲತಾಣದಲ್ಲೂ ಮಾಹಿತಿ ಪಡೆಯಬಹುದು. ಇಲ್ಲಿ ನಿಮಗೆ ಆಹಾರ, ಕಲೆ, ಸಂಸ್ಕೃತಿ, ಪ್ರವಾಸ ಮುಂತಾದ ವಿಷಯಗಳ ಕುರಿತು ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ನೀವು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂಬಹುದು. ಇದರಿಂದ ನಿಮಗೆ ನಿಮ್ಮ ದೇಶದ ಮಾಹಿತಿಯೂ ಲಭಿಸುತ್ತದೆ ಮತ್ತು ದೇಶದ ವಿವಿಧತೆಯನ್ನೂ ಅನುಭವಿಸಬಹುದು.
ನನ್ನ ಪ್ರೀತಿಯ ದೇಶಬಾಂಧವರೇ, ಈಗ ನಮ್ಮ ದೇಶದಲ್ಲಿ ಉತ್ತರಾಖಂಡದ ಚಾರ್ -ಧಾಮ್ ನ ಪವಿತ್ರ ಯಾತ್ರೆ ನಡೆಯುತ್ತಿದೆ. ಚಾರ್-ಧಾಮ್ ಮತ್ತು ಅದರಲ್ಲೂ ವಿಶೇಷವಾಗಿ ಕೇದಾರನಾಥ್ ನಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅಲ್ಲಿಗೆ ತಲುಪುತ್ತಿದ್ದಾರೆ. ಜನರು ತಮ್ಮ ಚಾರ್-ಧಾಮ್ ಯಾತ್ರೆಯ ಸಂತೋಷದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ, ಕೇದಾರನಾಥದಲ್ಲಿ ಕೆಲವು ಯಾತ್ರಿಕರು ಹರಡುತ್ತಿರುವ ತ್ಯಾಜ್ಯದಿಂದಾಗಿ ಭಕ್ತರು ಬಹಳ ದುಃಖಿತರಾಗಿದ್ದಾರೆಂದು ಕೂಡಾ ನನಗೆ ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವು ಪವಿತ್ರ ಯಾತ್ರೆಗೆಂದು ಹೋದಾಗ ಅಲ್ಲಿ ಕೊಳಚೆ ರಾಶಿ ತುಂಬಿದರೆ ಹೇಗೆ, ಇದು ಸರಿಯಲ್ಲ. ಆದರೆ ಸ್ನೇಹಿತರೇ, ಇಂತಹ ದೂರುಗಳ ನಡುವೆಯೇ ಉತ್ತಮ ಚಿತ್ರಣ ಕೂಡಾ ನೋಡಲುನಮಗೆ ಸಿಗುತ್ತಿದೆ. ಎಲ್ಲಿ ಶ್ರದ್ಧೆ ಇರುತ್ತದೆಯೋ ಅಲ್ಲಿ ಸೃಷ್ಟಿ ಮತ್ತು ಸಕಾರಾತ್ಮಕತೆಯೂ ಇರುತ್ತದೆ. ಕೇದಾರನಾಥ್ ಕ್ಷೇತ್ರದಲ್ಲಿ ದರ್ಶನ ಹಾಗೂ ಪೂಜೆಯ ಜೊತೆ ಜೊತೆಯಲ್ಲೇ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತಿರುವ ಅನೇಕ ಭಕ್ತರೂ ಕೂಡಾ ಇದ್ದಾರೆ. ಕೆಲವರು ತಾವು ವಸತಿ ಹೂಡಿರುವ ಸ್ಥಳದ ಸುತ್ತಮುತ್ತ ಸ್ವಚ್ಛಗೊಳಿಸುತ್ತಿದ್ದರೆ, ಕೆಲವರು ಯಾತ್ರೆಯ ಮಾರ್ಗದಲ್ಲಿ ಬಿದ್ದಿರಬಹುದಾದ ಕಸ-ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನ ತಂಡದೊಂದಿಗೆ ಕೈಜೋಡಿಸಿ ಹಲವು ಸಂಘಸಂಸ್ಥೆಗಳು ಹಾಗೂ ಸ್ವಯಂಸೇವಕ ಸಂಘಗಳು ಕೂಡಾ ಅಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ. ಸ್ನೇಹಿತರೇ, ನಮ್ಮಲ್ಲಿ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳುವ ಯಾತ್ರೆ ಹೇಗೆ ಮಹತ್ವವೆನಿಸುತ್ತದೋ ಅಂತೆಯೇ ಪುಣ್ಯಕ್ಷೇತ್ರದಲ್ಲಿ ಸೇವೆ ಕೂಡಾ ಅಷ್ಟೇ ಮುಖ್ಯವೆಂದು ಹೇಳಲಾಗುತ್ತದೆ. ತೀರ್ಥ ಕ್ಷೇತ್ರದ ಸೇವೆ ಮಾಡದೇ ತೀರ್ಥಯಾತ್ರೆ ಪೂರ್ಣವಾಗುವುದಿಲ್ಲವೆಂದು ನಾನು ಹೇಳುತ್ತೇನೆ. ದೇವಭೂಮಿ ಉತ್ತರಾಖಂಡದಲ್ಲಿ ಎಷ್ಟೊಂದು ಜನರು ಸ್ವಚ್ಛತೆ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರುದ್ರ ಪ್ರಯಾಗ ನಿವಾಸಿ ಶ್ರೀ ಮನೋಜ್ ಬೈಂಜ್ ವಾಲ್ ಅವರಿಂದ ಕೂಡಾ ನಿಮಗೆ ಬಹಳ ಸ್ಫೂರ್ತಿ ದೊರೆಯುತ್ತದೆ. ಮನೋಜ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಅವರು ಸ್ವಚ್ಛತಾ ಕಾರ್ಯದ ಮುಂದಾಳತ್ವ ವಹಿಸುವುದರ ಜೊತೆಗೇ ಪವಿತ್ರ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸದಲ್ಲಿ ಕೂಡಾ ತೊಡಗಿಕೊಂಡಿದ್ದಾರೆ. ಹಾಗೆಯೇ ಗುಪ್ತಕಾಶಿಯಲ್ಲಿ ವಾಸವಾಗಿರುವ ಸುರೇಂದ್ರ ಬಗವಾಡಿ ಅವರು ಕೂಡಾ ಸ್ವಚ್ಛತೆಯನ್ನು ತಮ್ಮ ಜೀವನದ ಮಂತ್ರವಾಗಿಸಿಕೊಂಡಿದ್ದಾರೆ. ಅವರು ಗುಪ್ತಕಾಶಿಯಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಅವರು ಈ ಅಭಿಯಾನಕ್ಕೆ ‘ಮನ್ ಕಿ ಬಾತ್’ ಎಂಬ ಹೆಸರು ನೀಡಿದ್ದಾರೆಂದು ನನಗೆ ತಿಳಿದುಬಂದಿದೆ. ಅಂತೆಯೇ ದೇವರ್ ಗ್ರಾಮದ ನಿವಾಸಿ ಚಂಪಾದೇವಿಯವರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಮಹಿಳೆಯರಿಗೆ ತ್ಯಾಜ್ಯ ನಿರ್ವಹಣೆ ಅಂದರೆ waste management ಬಗ್ಗೆ ಕಲಿಸುತ್ತಿದ್ದಾರೆ. ಚಂಪಾದೇವಿಯವರು ನೂರಾರು ಮರಗಳನ್ನು ಕೂಡಾ ನೆಟ್ಟಿದ್ದಾರೆ ಮತ್ತು ತಮ್ಮ ಪರಿಶ್ರಮದಿಂದ ಹಸಿರಿನಿಂದ ತುಂಬಿದ ಒಂದುವನವನ್ನು ನಿರ್ಮಿಸಿದ್ದಾರೆ. ಸ್ನೇಹಿತರೆ, ಇಂತಹ ಜನರ ಪ್ರಯತ್ನಗಳಿಂದ ದೇವಭೂಮಿ ಮತ್ತು ಪುಣ್ಯಕ್ಷೇತ್ರಗಳ ದೈವಿಕ ಅನುಭೂತಿ ಜನರಿಗೆ ದೊರೆಯುತ್ತಿದೆ, ಇಂತಹ ದೈವಿಕ ಅನುಭವ ಪಡೆಯಲು ನಾವು ಅಲ್ಲಿಗೆ ಹೋಗುತ್ತೇವೆ, ಈ ದೈವಿಕ ಹಾಗೂ ಆಧ್ಯಾತ್ಮಿಕತೆಯ ಅನುಭೂತಿ ಹಾಗೆಯೇ ಉಳಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಈಗ, ನಮ್ಮ ದೇಶದಲ್ಲಿ ‘ಚಾರ್ – ಧಾಮ್’ ಯಾತ್ರೆಯೊಂದಿಗೆ ಮುಂಬರುವ ದಿನಗಳಲ್ಲಿ ‘ಅಮರನಾಥ್ ಯಾತ್ರೆ’, ‘ಪಂಡರಾಪುರ ಯಾತ್ರೆ’ ಮತ್ತು ‘ಜಗನ್ನಾಥ ಯಾತ್ರೆ’ ಹೀಗೆ ಅನೇಕ ಯಾತ್ರೆಗಳು ಇರಲಿವೆ. ಶ್ರಾವಣ ಮಾಸದಲ್ಲಂತೂ ಪ್ರತಿಯೊಂದು ಹಳ್ಳಿಯಲ್ಲೂ ಬಹುಶಃ ಒಂದಲ್ಲಾ ಒಂದು ಜಾತ್ರೆ ನಡೆಯುತ್ತಲೇ ಇರುತ್ತದೆ.
ಸ್ನೇಹಿತರೇ, ನಾವು ಎಲ್ಲಿಗೇ ಹೋಗಲಿ, ಈ ಪುಣ್ಯಕ್ಷೇತ್ರಗಳ ಘನತೆಯನ್ನು ಕಾಪಾಡಿಕೊಳ್ಳಬೇಕು. ಶುಚಿತ್ವ, ಸ್ವಚ್ಛತೆ ತುಂಬಿದ ಪವಿತ್ರ ಪರಿಸರವನ್ನು ನಾವು ಎಂದಿಗೂ ಮರೆಯಬಾರದು, ಅವುಗಳನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು ಮತ್ತು ಆದ್ದರಿಂದಲೇ ನಾವು ಸ್ವಚ್ಛತೆಯ ಸಂಕಲ್ಪವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವೇ ದಿನಗಳ ನಂತರ, ಜೂನ್ 5 ಅನ್ನು ವಿಶ್ವ ‘ಪರಿಸರ ದಿನದ’ ಹೆಸರಿನಲ್ಲಿ ಆಚರಿಸಲಾಗುತ್ತದೆ. ಪರಿಸರ ಕುರಿತಂತೆ ನಾವು ನಮ್ಮ ಸುತ್ತ ಮುತ್ತ ಸಕಾರಾತ್ಮಕ ಅಭಿಯಾನ ನಡೆಸಬೇಕು ಇದು ಸತತವಾಗಿ ನಡೆಯಬೇಕಾಗಿರುವ ಕೆಲಸವಾಗಿದೆ. ನೀವೆಲ್ಲರೂ ಈ ಬಾರಿ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಚ್ಛತೆ ಹಾಗೂ ಗಿಡ ನೆಡುವುದಕ್ಕಾಗಿ ಸ್ವಲ್ಪ ಪ್ರಯತ್ನ ಖಂಡಿತವಾಗಿಯೂ ಮಾಡಿ. ನೀವು ಸ್ವಂತವಾಗಿ ಗಿಡ ನೆಡಿ ಮತ್ತು ಗಿಡ ನೆಡುವುದಕ್ಕಾಗಿ ಇತರರಿಗೆ ಸ್ಫೂರ್ತಿ ತುಂಬಿ.
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ತಿಂಗಳು ಜೂನ್ 21 ರಂದು, ನಾವು ಎಂಟನೇ ‘ಅಂತಾರಾಷ್ಟ್ರೀಯ ಯೋಗ’ ದಿನ ಆಚರಿಸಲಿದ್ದೇವೆ. ಈ ಬಾರಿಯ ಯೋಗ ದಿನದ ಧ್ಯೇಯ ವಾಕ್ಯ –‘ಮಾನವೀಯತೆಗಾಗಿ ಯೋಗ’ ಎಂಬುದಾಗಿದೆ. ನೀವೆಲ್ಲರೂ ಬಹಳ ಉತ್ಸಾಹದಿಂದ ಯೋಗ ದಿನ ಆಚರಣೆ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹಾಂ, ಕೊರೋನಾ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಮರೆಯದೇ ಕೈಗೊಳ್ಳಿ, ಈಗ ವಿಶ್ವಾದ್ಯಾಂತ ಕೊರೋನಾ ವಿಷಯದಲ್ಲಿ ಪರಿಸ್ಥಿತಿ ಮುಂಚಿಗಿಂತ ಸುಧಾರಣೆಯಾಗಿರುವಂತೆ ಕಂಡುಬರುತ್ತಿದೆ, ಅತಿ ಹೆಚ್ಚು ವ್ಯಾಕ್ಸಿನೇಷನ್ ಕವರೇಜ್ ಕಾರಣದಿಂದಾಗಿ ಜನರು ಮೊದಲಿಗಿಂತ ಹೆಚ್ಚು ಮನೆಯಿಂದ ಹೊರಗೆ ಬರುತ್ತಿದ್ದಾರೆ, ಆದ್ದರಿಂದ, ವಿಶ್ವಾದ್ಯಂತ ಯೋಗ ದಿನಾಚರಣೆಗಾಗಿ ಸಾಕಷ್ಟು ಸಿದ್ಧತೆಗಳು ಕಂಡುಬರುತ್ತಿವೆ. ನಮ್ಮ ಜೀವನದಲ್ಲಿ, ಆರೋಗ್ಯಕ್ಕೆ ಎಷ್ಟೊಂದು ಮಹತ್ವವಿದೆ, ಮತ್ತು ಯೋಗ ಎಷ್ಟು ದೊಡ್ಡ ಮಾಧ್ಯಮವಾಗಿದೆ ಎಂಬ ಅರಿವನ್ನು ಕೊರೋನಾ ಸಾಂಕ್ರಾಮಿಕ ನಮ್ಮೆಲ್ಲರಿಗೂ ಮೂಡಿಸಿದೆ. ಯೋಗದಿಂದ ದೈಹಿಕ, ಆಧ್ಯಾತ್ಮಿಕ ಮತ್ತು ಭೌದ್ಧಿಕ ಯೋಗಕ್ಷೇಮಕ್ಕೆ ಕೂಡಾ ಎಷ್ಟೊಂದು ಪ್ರಯೋಜನ ಎಂಬುದನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ. ವಿಶ್ವದ ಪ್ರಮುಖ ವ್ಯಾಪಾರವೇತ್ತರಿಂದ ಹಿಡಿದು ಚಲನಚಿತ್ರ ಕ್ಷೇತ್ರದ ಪ್ರಮುಖರು ಮತ್ತು ಕ್ರೀಡಾ ಪಟುಗಳವರೆಗೂ, ವಿದ್ಯಾರ್ಥಿಗಳಿಂದ ಹಿಡಿದು, ಸಾಮಾನ್ಯ ನಾಗರಿಕನವರೆಗೂ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಯೋಗಕ್ಕೆ ದೊರೆಯುತ್ತಿರುವ ಜನಪ್ರಿಯತೆಯನ್ನು ನೋಡಿ ನಿಮಗೆಲ್ಲರಿಗೂ ಬಹಳ ಸಂತೋಷವಾಗುತ್ತದೆಂದು ನನಗೆ ಸಂಪೂರ್ಣ ಭರವಸೆಯಿದೆ. ಸ್ನೇಹಿತರೆ, ಈ ಬಾರಿ ದೇಶ-ವಿದೇಶಗಳಲ್ಲಿ ಯೋಗ ದಿನದಂದು ನಡೆಯಲಿರುವ ಕೆಲವು ಅತ್ಯಂತ ವಿನೂತನ ಉದಾಹರಣೆಗಳ ಬಗ್ಗೆ ನನಗೆ ಸಮಾಚಾರ ಬಂದಿದೆ. ಇವುಗಳಲ್ಲಿ ಒಂದು - guardian Ring –ಇದೊಂದು ಬಹುದೊಡ್ಡ ವಿಶಿಷ್ಟ ಕಾರ್ಯಕ್ರಮವಾಗಲಿದೆ. ಇದರಲ್ಲಿ Movement of Sun ಅನ್ನು celebrate ಮಾಡಲಾಗುತ್ತದೆ, ಅಂದರೆ ಸೂರ್ಯ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಸಾಗುತ್ತಿರುವಂತೆಯ ನಾವು ಯೋಗದ ಮೂಲಕ ಆತನನ್ನು ಸ್ವಾಗತಿಸೋಣ. ಬೇರೆ-ಬೇರೆ ದೇಶಗಳಲ್ಲಿ ಭಾರತೀಯ ಭಾರತೀಯ ಆಯೋಗಗಳು ಅಲ್ಲಿನ ಸ್ಥಳೀಯ ಸಮಯಕ್ಕೆ ಅನುಗುಣವಾಗಿ ಸೂರ್ಯೋದಯದ ಸಮಯದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸುತ್ತವೆ. ಒಂದು ದೇಶದ ನಂತರ ಮತ್ತೊಂದು ದೇಶದಿಂದ ಕಾರ್ಯಕ್ರಮ ಆರಂಭವಾಗುತ್ತದೆ. ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ನಿರಂತರ ಪಯಣ ಸಾಗುತ್ತಲೇ ಇರುತ್ತದೆ, ಅಂತೆಯೇ ಇದು ಮುಂದುವರಿಯುತ್ತದೆ. ಈ ಕಾರ್ಯಕ್ರಮಗಳ ಸ್ಟ್ರೀಮಿಂಗ್ ಕೂಡಾ ಒಂದರ ನಂತರ ಮತ್ತೊಂದು ಜೋಡಣೆಯಾಗುತ್ತಾ ಹೋಗುತ್ತದೆ ಅಂದರೆ, ಒಂದು ರೀತಿಯಲ್ಲಿ Relay Yoga Streaming Event ಆಗಿರುತ್ತದೆ. ನೀವು ಕೂಡಾ ಖಂಡಿತವಾಗಿಯೂ ಇದನ್ನು ನೋಡಿ.
ಸ್ನೇಹಿತರೆ, ನಮ್ಮ ದೇಶದಲ್ಲಿ ಈ ಬಾರಿ ಅಮೃತ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು, ದೇಶದ 75 ಪ್ರಮುಖ ಸ್ಥಳಗಳಲ್ಲಿ ಕೂಡಾ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು ಮತ್ತು ದೇಶವಾಸಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ತಮ್ಮ ತಮ್ಮ ಮಟ್ಟದಲ್ಲಿ ಏನಾದರೂ ವಿನೂತನವಾಗಿರುವುದನ್ನು ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಬಾರಿ ಯೋಗ ದಿನಾಚರಣೆಗಾಗಿ ನೀವು ನಿಮ್ಮ ನಗರ, ತಾಲ್ಲೂಕು ಅಥವಾ ಗ್ರಾಮದಲ್ಲಿ ಎಲ್ಲಕ್ಕಿಂತ ವಿಶೇಷವಾಗಿರುವ ಸ್ಥಳವೊಂದನ್ನು ಆಯ್ಕೆ ಮಾಡಿಕೊಳ್ಳಿರೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಸ್ಥಳ ಯಾವುದಾದರೊಂದು ಪ್ರಾಚೀನ ದೇವಾಲಯವಾಗಿರಬಹುದು, ಅಥವಾ ಪ್ರವಾಸೀ ಕೇಂದ್ರವಾಗಿರಬಹುದು ಅಥವಾ ಯಾವುದೇ ಪ್ರಸಿದ್ಧ ನದಿ, ಸರೋವರ ಅಥವಾ ಕೆರೆಯ ದಡವಾಗಿರಬಹುದು. ಇದರಿಂದಾಗಿ ಯೋಗದೊಂದಿಗೆ ನಿಮ್ಮ ಪ್ರದೇಶದ ಖ್ಯಾತಿಯೂ ಹೆಚ್ಚಾಗುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನವೂ ದೊರೆಯುತ್ತದೆ. ಈಗ ‘ಯೋಗ ದಿನ’ ಕುರಿತಂತೆ 100 ದಿನಗಳ ಗಣನೆ ಕೂಡಾ ಪ್ರಾರಂಭವಾಗಿದೆ. ಅಂದರೆ ವೈಯಕ್ತಿಕ ಮತ್ತು ಸಾಮಾಜಿಕ ಪ್ರಯತ್ನಗಳಿಂದ ಕೂಡಿದ ಕಾರ್ಯಕ್ರಮಗಳು ಮೂರು ತಿಂಗಳಿಗೆ ಮೊದಲೇ ಪ್ರಾರಂಭವಾಗಿದೆ ಎಂದು ಹೇಳಬಹುದು. ದೆಹಲಿಯಲ್ಲಿ 100 ನೇ ದಿನ ಮತ್ತು 75 ನೇ ದಿನದ countdown ಕಾರ್ಯಕ್ರಮಗಳು ಕೂಡಾ ನಡೆದಿವೆ. ಅಂತೆಯೇ ಅಸ್ಸಾಂನ ಶಿವಸಾಗರದಲ್ಲಿ 50 ನೇ ಮತ್ತು ಹೈದರಾಬಾದ್ ನಲ್ಲಿ 25ನೇ Countdown Event ಆಯೋಜಿಸಲಾಗಿತ್ತು. ನೀವು ಕೂಡಾ ನೀವಿರುವ ಪ್ರದೇಶದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ ಆರಂಭಿಸಬೇಕೆಂದು ನಾನು ಬಯಸುತ್ತೇನೆ. ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಿ, ಪ್ರತಿಯೊಬ್ಬರನ್ನೂ ಯೋಗ ದಿನದ ಕಾರ್ಯಕ್ರಮದಲ್ಲಿ ಸೇರಬೇಕೆಂದು ಮನವಿ ಮಾಡಿ, ಪ್ರೇರೇಪಿಸಿ, ಸ್ಫೂರ್ತಿ ತುಂಬಿ. ನೀವೆಲ್ಲರೂ ಯೋಗ ದಿನಾಚರಣೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು, ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುತ್ತೀರೆಂಬ ವಿಶ್ವಾಸ ನನಗಿದೆ.
ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ಜಪಾನ್ ದೇಶಕ್ಕೆ ಹೋಗಿದ್ದೆ. ನನ್ನ ಅನೇಕ ಕಾರ್ಯಕ್ರಮಗಳ ನಡುವೆಯೇ ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನನಗೆ ದೊರೆಯಿತು. ನಾನು ‘ಮನ್ ಕಿ ಬಾತ್ ’ ನಲ್ಲಿ, ನಿಮ್ಮೊಂದಿಗೆ ಅವರ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವರು ಜಪಾನ್ ದೇಶವಾಸಿಗಳು, ಆದರೆ ಅವರ ಮನದಲ್ಲಿ ಭಾರತ ದೇಶದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ತುಂಬಿದೆ. ಅವರಲ್ಲೊಬ್ಬರು ಹಿರೋಶಿ ಕೋಯಿಕೆ ಅವರು. ಇವರು ಹೆಸರಾಂತ ಕಲಾ ನಿರ್ದೇಶಕರಾಗಿದ್ದಾರೆ. ಇವರು ಮಹಾಭಾರತ್ ಪ್ರಾಜೆಕ್ಟ್ ನಿರ್ದೇಶನ ಮಾಡಿದ್ದಾರೆಂದು ತಿಳಿದರೆ ನಿಮಗೆ ಬಹಳ ಸಂತೋಷವೆನಿಸುತ್ತದೆ. ಈ ಯೋಜನೆಯ ಆರಂಭ ಕಾಂಬೋಡಿಯಾ ದೇಶದಲ್ಲಾಯಿತು ಮತ್ತು ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ! ಹಿರೋಶಿ ಕೋಯಿಕೆ ಅವರು ಪ್ರತಿಯೊಂದು ಕೆಲಸವನ್ನೂ ಬಹಳ ವಿಭಿನ್ನ ರೀತಿಯಲ್ಲಿ ಮಾಡುತ್ತಾರೆ. ಅವರು ಪ್ರತಿ ವರ್ಷ, ಏಷ್ಯಾ ದೇಶದ ಯಾವುದಾದರೊಂದು ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ ಮತ್ತು ಅಲ್ಲಿನ ಸ್ಥಳೀಯ ಕಲಾವಿದರು ಹಾಗೂ ಸಂಗೀತಗಾರರೊಂದಿಗೆ ಮಹಾಭಾರತದ ಕೆಲವು ಭಾಗಗಳನ್ನು ತಯಾರಿಸುತ್ತಾರೆ. ಈ ಯೋಜನೆಯ ಮುಖಾಂತರ ಅವರು ಭಾರತ, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾ ಸೇರಿದಂತೆ 9 ದೇಶಗಳಲ್ಲಿ Production ಮಾಡಿದ್ದಾರೆ ಮತ್ತು ರಂಗ ಪ್ರದರ್ಶನಗಳನ್ನು ಕೂಡಾ ನೀಡಿದ್ದಾರೆ. ಹಿರೋಶಿ ಕೊಯಿಕೆ ಅವರು ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಏಷ್ಯನ್ ಪ್ರದರ್ಶನ ಕಲೆಯಲ್ಲಿ ವಿಭಿನ್ನ ಹಿನ್ನೆಲೆ ಇರುವಂತಹ ಕಲಾವಿದರನ್ನು ಒಟ್ಟುಗೂಡಿಸುತ್ತಾರೆ. ಹೀಗಾಗಿ ಅವರ ಕೆಲಸ ಕಾರ್ಯಗಳಲ್ಲಿ ವಿವಿಧ ಬಣ್ಣಗಳು ನೋಡಲು ಕಾಣಸಿಗುತ್ತವೆ. ಇಂಡೋನೇಷ್ಯಾ, ಥೈಲ್ಯಾಂಡ್ ಮಲೇಷಿಯಾ ಮತ್ತು ಜಪಾನ್ ದೇಶಗಳ ಪ್ರದರ್ಶನಕಾರರ ಜಾವಾ ನೃತ್ಯ, ಬಾಲೀ ನೃತ್ಯ, ಥಾಯ್ ನೃತ್ಯದ ಮುಖಾಂತರ ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತಾರೆ. ಇದರಲ್ಲಿನ ವಿಶೇಷವೆಂದರೆ ಇದರಲ್ಲಿ ಪ್ರತಿಯೊಬ್ಬ ಪ್ರದರ್ಶನಕಾರ ತನ್ನದೇ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಕೋರಿಯೋಗ್ರಾಫಿ ಈ ವೈವಿಧ್ಯತೆಯನ್ನು ಬಹಳ ಸುಂದರ ರೀತಿಯಿಂದ ಪ್ರದರ್ಶಿಸುತ್ತದೆ ಮತ್ತು ಸಂಗೀತದ ವೈವಿಧ್ಯತೆ ಈ ಕಾರ್ಯಕ್ರಮವನ್ನು ಇನ್ನಷ್ಟು ಜೀವಂತವಾಗಿಸುತ್ತದೆ. ನಮ್ಮ ಸಮಾಜದಲ್ಲಿ ವೈವಿಧ್ಯ ಮತ್ತು ಸಹ ಬಾಳ್ವೆಯ ಪ್ರಾಮುಖ್ಯವನ್ನು ಮತ್ತು ವಾಸ್ತವದಲ್ಲಿ ಶಾಂತಿಯ ಸ್ವರೂಪ ಹೇಗಿರಬೇಕೆಂದು ತಿಳಿಯಪಡಿಸುವುದು ಇದರ ಉದ್ದೇಶವಾಗಿರುತ್ತದೆ. ಇವರಲ್ಲದೇ ಜಪಾನ್ ದೇಶದಲ್ಲಿ ನಾನು ಭೇಟಿ ಮಾಡಿದ ಇತರ ಇಬ್ಬರು ವ್ಯಕ್ತಿಗಳೆಂದರೆ ಆತ್ಸುಶಿ ಮಾತ್ಸುವೋ ಹಾಗೂ ಕೆಂಜೀ ಯೋಶೀ ಅವರುಗಳು. ಇವರಿಬ್ಬರೂ TEM Production Company ಗೆ ಸೇರಿದವರಾಗಿದ್ದಾರೆ. ಈ ಕಂಪೆನಿಯ ಸಂಬಂಧ 1993 ರಲ್ಲಿ ಬಿಡುಗಡೆಯಾದ ರಾಮಾಯಣದ Japanese Animation Film ನೊಂದಿಗೆ ಸೇರಿದ್ದಾಗಿದೆ. ಈ Project ಜಪಾನಿನ ಅತ್ಯಂತ ಪ್ರಸಿದ್ಧ ಚಿತ್ರ ನಿರ್ದೇಶಕ ಯಗೋ ಸಾಕೋ ಅವರದ್ದಾಗಿತ್ತು. ಸುಮಾರು 40 ವರ್ಷಗಳ ಹಿಂದೆ 1983 ರಲ್ಲಿ ಅವರಿಗೆ ರಾಮಾಯಣ ಕುರಿತು ತಿಳಿದುಬಂದಿತು. ‘ರಾಮಾಯಣ’ ಅವರ ಮನ ಮುಟ್ಟಿತು, ಆ ನಂತರ ಅವರು ಇದರ ಬಗ್ಗೆ ಆಳವಾದ ಸಂಶೋಧನೆ ಆರಂಭಿಸಿದರು. ಇಷ್ಟೇ ಅಲ್ಲ, ಅವರು ಜಪಾನೀ ಭಾಷೆಯಲ್ಲಿ ರಾಮಾಯಣದ 10 ಆವೃತ್ತಿಗಳನ್ನು ಓದಿ ಮುಗಿಸಿದರು, ನಂತರ ಅಷ್ಟಕ್ಕೇ ನಿಲ್ಲಿಸದೇ, ಅದನ್ನು ಅನಿಮೇಷನ್ ರೂಪದಲ್ಲಿ ತರಲು ಬಯಸಿದರು. ಇದರಲ್ಲಿ ಭಾರತೀಯ Animators ಕೂಡಾ ಅವರಿಗೆ ಸಾಕಷ್ಟು ಸಹಾಯ ಮಾಡಿದರು, ಆ ಚಿತ್ರದಲ್ಲಿ ತೋರಿಸಲಾಗಿರುವ ಭಾರತೀಯ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲಾಯಿತು. ಭಾರತೀಯರು ಯಾವ ರೀತಿ ಧೋತಿ ಧರಿಸುತ್ತಾರೆ, ಯಾವ ರೀತಿ ಸೀರೆ ಉಡುತ್ತಾರೆ, ಯಾವ ರೀತಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಯಿತು. ಮಕ್ಕಳು ಕುಟುಂಬದಲ್ಲಿ ಪರಸ್ಪರರನ್ನು ಹೇಗೆ ಗೌರವಿಸುತ್ತಾರೆ, ಆಶೀರ್ವಾದ ನೀಡುವ ಸಂಪ್ರದಾಯವೆಂದರೇನು ಎಲ್ಲವನ್ನೂ ತಿಳಿಸಲಾಯಿತು. ಮುಂಜಾನೆ ನಿದ್ರೆಯಿಂದ ಎದ್ದ ನಂತರ ಮನೆಯ ಹಿರಿಯರಿಗೆ ನಮಸ್ಕರಿಸುವುದು, ಅವರ ಆಶೀರ್ವಾದ ಪಡೆಯುವುದು – ಈ ಎಲ್ಲಾ ವಿಷಯವನ್ನೂ ಈಗ 30 ವರ್ಷಗಳ ನಂತರ ಈ ಅನಿಮೇಷನ್ ಚಲನಚಿತ್ರದಲ್ಲಿ ಪುನಃ 4K ನಲ್ಲಿ re-master ಮಾಡಲಾಗುತ್ತಿದೆ. ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದ ಜಪಾನ್ ದೇಶದಲ್ಲಿ ಕುಳಿತಿರುವ ಜನರಿಗೆ ನಮ್ಮ ಭಾಷೆಯ ಬಗ್ಗೆ ತಿಳಿದಿಲ್ಲ ಅಥವಾ ನಮ್ಮ ಸಂಪ್ರದಾಯದ ಬಗ್ಗೆ ಅಷ್ಟೇನೂ ತಿಳಿದಿಲ್ಲ, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ಶ್ರದ್ಧೆ, ಸಮರ್ಪಣಾ ಭಾವ, ಈ ಗೌರವ, ಬಹಳ ಶ್ಲಾಘನೀಯವಲ್ಲವೇ – ಇದನ್ನು ಅರಿತು ಹೆಮ್ಮೆ ಪಡದ ಭಾರತೀಯ ಇರುತ್ತಾನೆಯೇ?
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾರ್ಥ ತೊರೆದು ಸಮಾಜ ಸೇವೆಯ ಮಂತ್ರ, self for society ಯ ಮಂತ್ರ ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ನಮ್ಮ ದೇಶದಲ್ಲಿ ಅಸಂಖ್ಯಾತ ಮಂದಿ ಈ ಮಂತ್ರವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮರ್ಕಾಪುರಂನಲ್ಲಿ ವಾಸವಾಗಿರುವ ರಾಮ್ ಭೂಪಾಲ್ ರೆಡ್ಡಿ ಅವರ ಬಗ್ಗೆ ತಿಳಿಯಿತು. ರಾಮ್ ಭೂಪಾಲ್ ರೆಡ್ಡಿ ಅವರು ತಮ್ಮ ನಿವೃತ್ತಿಯ ನಂತರ ದೊರೆಯುವ ತಮ್ಮ ಸಂಪೂರ್ಣ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಅವರು ಸುಮಾರು 100 ಹೆಣ್ಣು ಮಕ್ಕಳಿಗಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯ ಮುಖಾಂತರ ಖಾತೆ ತೆರೆದರು ಮತ್ತು ಅದರಲ್ಲಿ ತಮ್ಮ 25 ಲಕ್ಷಕ್ಕೂ ಅಧಿಕಮೊತ್ತವನ್ನುಜಮಾ ಮಾಡಿದರು. ಅದೇ ರೀತಿ ಸೇವಾಮನೋಭಾವದ ಮತ್ತೊಂದು ಉದಾಹರಣೆಯೆಂದರೆ ಉತ್ತರ ಪ್ರದೇಶದ ಆಗ್ರಾದ ಕಚೌರಾ ಗ್ರಾಮದ್ದಾಗಿದೆ. ಈ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಕೊರತೆಯಿತ್ತು. ಈ ಮಧ್ಯೆ ಗ್ರಾಮದ ಓರ್ವ ರೈತ ಕುವರ್ ಸಿಂಗ್ ಅವರಿಗೆ ಗ್ರಾಮದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ತಮ್ಮ ಹೊಲದಲ್ಲಿ ಕುಡಿಯುವ ನೀರು ಸಿಕ್ಕಿತು. ಅವರಿಗೆ ಇದು ಬಹಳ ಸಂತೋಷದಾಯಕ ವಿಷಯವಾಗಿತ್ತು. ಈ ನೀರಿನಿಂದ ಉಳಿದ ಗ್ರಾಮವಾಸಿಗಳಿಗೂ ಕೂಡಾ ಏಕೆ ನೀಡಬಾರದೆಂದು ಅವರು ಯೋಚಿಸಿದರು. ಆದರೆ ಹೊಲದಿಂದ ಗ್ರಾಮಕ್ಕೆ ನೀರು ತರುವುದಕ್ಕೆ 30 ರಿಂದ 32 ಲಕ್ಷ ರೂಪಾಯಿ ಬೇಕಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಕುವರ್ ಸಿಂಗ್ ಅವರ ಚಿಕ್ಕ ಸೋದರ ಶ್ಯಾಂ ಸಿಂಗ್ ಅವರು ಸೇನೆಯಿಂದ ನಿವೃತ್ತರಾಗಿ ಗ್ರಾಮಕ್ಕೆ ಬಂದರು, ಅವರಿಗೆ ಈ ವಿಷಯ ತಿಳಿಯಿತು. ಅವರು ನಿವೃತ್ತಿ ಸಮಯದಲ್ಲಿ ದೊರೆತ ತಮ್ಮ ಸಂಪೂರ್ಣ ಹಣವನ್ನು ಈ ಕೆಲಸಕ್ಕಾಗಿ ಸಮರ್ಪಿಸಿದರು ಮತ್ತು ಹೊಲದಿಂದ ಗ್ರಾಮದವರೆಗೂ ಕೊಳವೆ ಮಾರ್ಗ ಹಾಕಿಸಿ ಗ್ರಾಮಸ್ಥರಿಗೆ ಕುಡಿಯುವ ಸಿಹಿನೀರು ತಲುಪಿಸಿದರು. ಮಾಡುವ ಕೆಲಸದಲ್ಲಿ ನಿಷ್ಠೆ, ಸಮರ್ಪಣಾ ಭಾವವಿದ್ದರೆ ಕೇವಲ ಒಬ್ಬ ವ್ಯಕ್ತಿ ಸಮಾಜದ ಭವಿಷ್ಯವನ್ನೇ ಬದಲಾಯಿಸಿಬಿಡಬಹುದು, ಇವರ ಈ ಪ್ರಯತ್ನ ನಿಜಕ್ಕೂ ಬಹಳ ಪ್ರೇರಣಾದಾಯಕವಾಗಿದೆ. ನಾವು ಕರ್ತವ್ಯದ ಹಾದಿಯಲ್ಲಿ ನಡೆಯುತ್ತಲೇ ಸಮಾಜವನ್ನು ಸಶಕ್ತವನ್ನಾಗಿಸಬಹುದು, ದೇಶವನ್ನು ಸಶಕ್ತವಾಗಿಸಬಹುದು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ಇದೇ ನಮ್ಮ ಸಂಕಲ್ಪವಾಗಬೇಕು ಮತ್ತು ಇದೇ ನಮ್ಮ ಸಾಧನೆಯೂ ಆಗಬೇಕು ಮತ್ತು ಇದಕ್ಕಾಗಿ ಒಂದೇ ಮಾರ್ಗವೆಂದರೆ – ಕರ್ತವ್ಯ, ಕರ್ತವ್ಯ ಮತ್ತು ಕರ್ತವ್ಯ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವಿಂದು ಮನ್ ಕಿ ಬಾತ್ ನಲ್ಲಿ ಸಮಾಜದೊಂದಿಗೆ ಸೇರಿಕೊಂಡಿರುವ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದೆವು. ನೀವೆಲ್ಲರೂ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಮಹತ್ವಪೂರ್ಣ ಸಲಹೆ ಸೂಚನೆಗಳನ್ನು ನನಗೆ ಕಳುಹಿಸಿಕೊಡುತ್ತೀರಿ, ಮತ್ತು ಅದನ್ನು ಆಧರಿಸಿ ನಮ್ಮ ಮಾತುಕತೆ ಮುಂದುವರಿಯುತ್ತದೆ. ‘ಮನ್ ಕಿ ಬಾತ್’ ನ ಮುಂದಿನ ಸಂಚಿಕೆಗಾಗಿ ನಿಮ್ಮ ಚಿಂತನೆಗಳನ್ನು ಕಳುಹಿಸಿಕೊಡಲು ಮರೆಯಬೇಡಿ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ನಡೆಯುತ್ತಿರುವ ಕಾರ್ಯಕ್ರಮಗಳು, ನೀವು ತೊಡಗಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕೂಡಾ ನನಗೆ ಖಂಡಿತವಾಗಿಯೂ ಬರೆದು ಕಳುಹಿಸಿ. Namo app ಮತ್ತು MyGov ನಲ್ಲಿ ನಿಮ್ಮ ಸಲಹೆ ಸೂಚನೆಗಳಿಗಾಗಿ ನಾನು ಎದುರು ನೋಡುತ್ತೇನೆ. ಮುಂದಿನ ಬಾರಿ ನಾವು ಪುನಃ ಭೇಟಿಯಾಗೋಣ, ದೇಶವಾಸಿಗಳಿಗೆ ಸಂಬಂಧಿಸಿದ ಇಂತಹದ್ದೇ ವಿಷಯಗಳ ಬಗ್ಗೆ ಮಾತನಾಡೋಣ. ನೀವು ನಿಮ್ಮ ಬಗ್ಗೆ, ನಿಮ್ಮ ಸುತ್ತಮುತ್ತಲಿನ ಸಕಲ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸಿ. ಬೇಸಿಗೆಯ ಈ ಋತುವಿನಲ್ಲಿ ಪಶು-ಪಕ್ಷಿಗಳಿಗಾಗಿ ಆಹಾರ ನೀರು ನೀಡುವಂತಹ ನಿಮ್ಮ ಮಾನವೀಯ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರಿ. ಇವುಗಳನ್ನು ಸದಾ ನೆನಪಿನಲ್ಲಿ ಇಡಿ. ಅಲ್ಲಿಯವರೆಗೆ ಅನಂತಾನಂತ ಧನ್ಯವಾದಗಳು.
ನನ್ನ ಪ್ರೀತಿಯ ದೇಶಬಾಂಧವರೇ, ನಮಸ್ಕಾರಗಳು.
ಹೊಸ ವಿಷಯಗಳೊಂದಿಗೆ, ಹೊಸದಾದ ಪ್ರೇರಣಾದಾಯಕ ಉದಾಹರಣೆಗಳೊಂದಿಗೆ, ಹೊಸ ಹೊಸ ಸಂದೇಶಗಳನ್ನು ಹೊತ್ತು ಮತ್ತೊಮ್ಮೆ ನಾನು ತಮ್ಮೊಂದಿಗೆ 'ಮನದ ಮಾತು' ಆಡಲು ಬಂದಿರುವೆ. ನಿಮಗೆ ಗೊತ್ತಾ ಈ ಸಲ ನನಗೆ ಅತಿ ಹೆಚ್ಚು ಪತ್ರಗಳು ಸಂದೇಶಗಳು ಯಾವ ವಿಷಯದ ಬಗ್ಗೆ ಬಂದಿವೆ? ಅಂತ ಆ ವಿಷಯ ಹೇಗಿದೆಯೆಂದರೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಮೂರಕ್ಕೂ ಅನ್ವಯವಾಗುತ್ತದೆ. ನಾನಿಂದು ಮಾತನಾಡುತ್ತಿರುವುದು ರಾಷ್ಟ್ರಕ್ಕೆ ದೊರಕಿದ ದೇಶದ ಪ್ರಧಾನ ಮಂತ್ರಿಗಳ ಸಂಗ್ರಹಾಲಯದ ಬಗ್ಗೆ. ಇದೇ ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಇದನ್ನು ದೇಶದ ನಾಗರಿಕರಿಗಾಗಿ ತೆರೆದಿಡಲಾಗಿದೆ. ನಮ್ಮ ಕೇಳುಗರೊಬ್ಬರು ಅವರ ಹೆಸರು ಸಾರ್ಥಕ್, ಸಾರ್ಥಕ್ ಅವರು ಗುರು ಗ್ರಾಮದಲ್ಲಿ ವಾಸಿಸುತ್ತಾರೆ. ಮೊದಲ ಅವಕಾಶ ಸಿಗುತ್ತಲೇ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರು. ಸಾರ್ಥಕ್ ಅವರು ನಮೋ ಆಪ್ ನಲ್ಲಿ ಏನು ಬರೆದುಕೊಂಡಿದ್ದಾರೆ, ಅದನ್ನು ನೋಡಿ, ನನಗೆ ಬಹಳ ಕುತೂಹಲ ಮೂಡಿಸಿತು.
ಅವರು ಏನು ಬರೆದಿದ್ದಾರೆ ಅಂದ್ರೆ ವರ್ಷಗಳಿಂದ ನ್ಯೂಸ್ ಚಾನೆಲ್ ನೋಡುತ್ತಾರೆ, ದಿನಪತ್ರಿಕೆಗಳನ್ನು ಓದುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಯೂ ಕೂಡ ತೊಡಗಿಸಿಕೊಂಡಿದ್ದಾರೆ, ಇದರಿಂದ ಅವರಿಗೆ ತಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದು ತಿಳಿದಿದ್ದರು. ಆದರೆ, ಯಾವಾಗ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರೋ, ಅವರಿಗೆ ಆಶ್ಚರ್ಯವೆನಿಸಿತು. ಇಲ್ಲಿವರೆಗೂ ನಮ್ಮ ದೇಶ ಮತ್ತು ದೇಶದ ನೇತೃತ್ವವನ್ನು ವಹಿಸಿದ ನಾಯಕರ ಬಗ್ಗೆ ಹಲವಾರು ವಿಷಯಗಳು ತಿಳಿದಿರಲಿಲ್ಲ. ಅವರು ಪ್ರಧಾನಮಂತ್ರಿ ಸಂಗ್ರಹಾಲಯದ ಕೆಲವು ವಸ್ತುಗಳ ಬಗ್ಗೆ ಹೀಗೆ ಬರೆಯುತ್ತಾರೆ- ಲಾಲ್ ಬಹದ್ದೂರ್ ಶಾಸ್ತ್ರಿಯವರ ಚರಕವನ್ನು ನೋಡಿ ಅವರು ಚಕಿತಗೊಂಡರು, ಏಕೆಂದರೆ ಅದು ಅವರಿಗೆ ಅವರ ಮಾವನ ಮನೆಯಿಂದ ಕೊಡುಗೆಯಾಗಿ ಬಂದಿತ್ತು. ಅವರು ಶಾಸ್ತ್ರೀಜಿಯವರ ಪಾಸ್ ಬುಕ್ ಕೂಡ ನೋಡಿದರು. ಅಲ್ಲಿ ಅವರು ಅವರ ಹತ್ತಿರ ಎಷ್ಟು ಕಡಿಮೆ ಉಳಿತಾಯವಿತ್ತು ಎನ್ನುವುದನ್ನು ಕೂಡ ನೋಡಿದರು.
ಸಾರ್ಥಕ್ ಅವರು ಬರೆಯುತ್ತಾರೆ, ಅವರಿಗೆ ಮುರಾರ್ಜಿ ದೇಸಾಯಿ ಅವರು ಸ್ವತಂತ್ರ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೊದಲು ಗುಜರಾತ್ನಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು ಎನ್ನುವುದು ಕೂಡ ಗೊತ್ತಿರಲಿಲ್ಲ. ಭಾರತದ ಆಡಳಿತ ಸೇವೆಯಲ್ಲಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು.
ಸಾರ್ಥಕ್ ಅವರು, ಚೌಧರಿ ಚರಣ್ ಸಿಂಗ್ ಅವರ ಬಗ್ಗೆ ಹೀಗೆ ಬರೆದಿದ್ದಾರೆ- ಜಮೀನುದಾರಿ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದ್ದು ಗೊತ್ತಿರ್ಲಿಲ್ಲ. ಅಷ್ಟೇ ಅಲ್ಲಾ, ಅವರು ಮುಂದೆ ಹೀಗೆ ಹೇಳಿದ್ದಾರೆ- ಭೂ ಸುಧಾರಣೆಯ ಬಗ್ಗೆ ನೋಡುತ್ತಾ ಹೋದಂತೆ ಅವರು, ಪಿ ವಿ ನರಸಿಂಹರಾವ್ ಅವರೂ ಭೂ ಸುಧಾರಣೆಯ ಬಗ್ಗೆ ಆಸಕ್ತಿ ಹೊಂದಿದ್ದರೆಂಬುದನ್ನು ತಿಳಿದುಕೊಳ್ಳುತ್ತಾರೆ. ಸಾರ್ಥಕ್ ಅವರಿಗೆ ಈ ಮ್ಯೂಸಿಯಂನಲ್ಲಿ ಬಂದ ನಂತರವೇ ಗೊತ್ತಾಗಿದ್ದು ಏನೆಂದರೆ, ಶ್ರೀ ಚಂದ್ರಶೇಖರ್ ಅವರು 4,000 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ಮಾಡಿದ್ದರು ಅನ್ನುವುದು. ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ನೋಡಿದರು, ಅವರ ಭಾಷಣಗಳನ್ನು ಕೇಳಿ ಹೆಮ್ಮೆಪಟ್ಟರು. ಸಾರ್ಥಕ್ ಅವರು ಈ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಡಾಕ್ಟರ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಮತ್ತು ನಮ್ಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಬಗ್ಗೆ ಬಹಳ ರೋಚಕ ಸಂಗತಿಗಳು ತಿಳಿದವು ಎಂದು ಹೇಳಿದ್ದಾರೆ.
ಮಿತ್ರರೇ, ದೇಶದ ಪ್ರಧಾನ ಮಂತ್ರಿಗಳ ಕೊಡುಗೆಯೇನು ಎಂಬುದನ್ನು ನೆನಪಿಸಿಕೊಳ್ಳಲು 'ಆಜಾದೀ ಕಾ ಅಮೃತಮಹೋತ್ಸವ' ಕ್ಕಿಂತಲೂ ಹೆಚ್ಚಿನ ಯಾವ ಅವಕಾಶವಿದೆ. 'ಆಜಾದೀ ಕಾ ಅಮೃತಮಹೋತ್ಸವ' ಒಂದು ಜನಾಂದೋಲನ ರೂಪ ತಾಳುತ್ತಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇತಿಹಾಸ ವಿಷಯದ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಮ್ಯೂಸಿಯಂ ಯುವಕರಿಗೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ಇದು ರಾಷ್ಟ್ರದ ಅಮೂಲ್ಯ ಪರಂಪರೆಗೆ ಸೇರ್ಪಡೆಯಾಗುತ್ತಿದೆ.
ಹಾಗೆಯೇ ಮಿತ್ರರೇ, ಮ್ಯೂಜಿಯಮ್ ಬಗ್ಗೆ ಇಷ್ಟೊಂದು ವಿಷಯ ಹಂಚಿಕೊಳ್ಳುತ್ತಾ ನನಗೆ ಅನಿಸುತ್ತಿದೆ, ನಾನು ತಮ್ಮನ್ನು ಯಾಕೆ ಕೆಲವು ಪ್ರಶ್ನೆ ಕೇಳಬಾರದು. ನೋಡೋಣ, ನಿಮ್ಮ ಸಾಮಾನ್ಯ ಜ್ಞಾನ ಏನು ಹೇಳುತ್ತದೆ. ನಿಮಗೆ ಎಷ್ಟು ತಿಳಿದಿದೆ. ನನ್ನ ಪ್ರಿಯ ಯುವ ಮಿತ್ರರೇ, ತಯಾರಾಗಿದ್ದೀರಾ, ಪೆನ್ನು ಮತ್ತು ಪೇಪರು ಎತ್ತಿಕೊಂಡಿರಾ? ನಿಮಗೆ ಪ್ರಶ್ನೆಗಳನ್ನು ಕೇಳುತ್ತೇನೆ, ನೀವು ಅವುಗಳಿಗೆ ಉತ್ತರವನ್ನು ನಮೋ ಆಪ್ ಅಥವಾ ಸೋಶಿಯಲ್ ಮೀಡಿಯಾ ದಲ್ಲಿ # Tag Museum quiz (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಕ್ವಿಜ್) ನೊಂದಿಗೆ ಶೇರ್ ಮಾಡಿಕೊಳ್ಳಿ. ಅವಶ್ಯವಾಗಿ ಮಾಡಿರಿ. ನಾನು ತಮಗೆ ಆಗ್ರಹ ಮಾಡುವುದೇನೆಂದರೆ- ನೀವು ಅವಶ್ಯವಾಗಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ರಾಷ್ಟ್ರದಾದ್ಯಂತ ಎಲ್ಲರಿಗೂ ಕೂಡ ಈ ಮ್ಯೂಸಿಯಂ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತದೆ. ದೇಶದ ಯಾವ ನಗರದಲ್ಲಿ ಪ್ರಸಿದ್ಧ ರೇಲ್ವೆ ಮ್ಯೂಸಿಯಂ ಇದೆ, ಅಲ್ಲಿ ಕಳೆದ 45 ವರ್ಷಗಳಿಂದ ಭಾರತೀಯ ರೈಲಿನ ಪರಂಪರೆಯನ್ನು ನೋಡುವ ಅವಕಾಶ ದೊರೆಯುತ್ತಿದೆ. ನಾನು ನಿಮಗೆ ಒಂದು ಕ್ಲೂ ಕೊಡುತ್ತೇನೆ. ನೀವು ಇಲ್ಲಿ ಫೇರಿ ಕ್ವೀನ್, ಸಲೂನ್ ಆಫ್ ಪ್ರಿನ್ಸ್ ಆಫ್ ವೇಲ್ಸ್ ರಿಂದ ಹಿಡಿದು Fireless(ಫಾಯರ್ಲೆಸ್) ಸ್ಟೀಮ್ ಲೋಕೊಮೋಟಿವ್ ಗಳನ್ನು ಕೂಡ ನೋಡಬಹುದಾಗಿದೆ.
ಮುಂಬೈನಲ್ಲಿ ಕರೆನ್ಸಿಯ ವಿಕಾಸದ ಬಗ್ಗೆ ಬಹಳ ರೋಚಕ ವಿಷಯವನ್ನು ನೀಡುವ ಒಂದು ಮ್ಯೂಸಿಯಂ ಇದೆ. ಅದು ಯಾವುದು ಎಂದು ಗೊತ್ತಾ...? ಅಲ್ಲಿ ಕ್ರಿಸ್ತ ಪೂರ್ವ 6ನೇ ಶತಮಾನದಷ್ಟು ಹಳೆಯ ನಾಣ್ಯಗಳು ಇವೆ. ಇನ್ನೊಂದೆಡೆ E-Money ('ಈ-ಮನಿ') ಕೂಡ ಇದೆ.
ಮೂರನೇ ಪ್ರಶ್ನೆ, ವಿರಾಸತ್-ಎ-ಖಲ್ಸಾ ಮ್ಯೂಸಿಯಂ ಬಗ್ಗೆ ಇದೆ, ಇದು ಪಂಜಾಬಿನ ಯಾವ ನಗರದಲ್ಲಿದೆ ಎಂದು ಗೊತ್ತಾ...?೬
ಗಾಳಿಪಟ ಹಾರಿಸುವುದು ನಿಮ್ಮೆಲ್ಲರಿಗೂ ಕೂಡ ಬಹಳ ಆನಂದದಾಯಕ ವಿಷಯವಲ್ಲವೇ, ಮುಂದಿನ ಪ್ರಶ್ನೆ ಇದಕ್ಕೆ ಸಂಬಂಧಿಸಿದ್ದಾಗಿದೆ. ದೇಶದಲ್ಲಿ ಒಂದೇ ಒಂದು ಗಾಳಿಪಟ ಮ್ಯೂಸಿಯಮ್ ಇದೆ ಅದು ಎಲ್ಲಿದೆ... ಬನ್ನಿ ನಾನು ನಿಮಗೆ ಒಂದು ಕ್ಲೂ ಕೊಡುತ್ತೇನೆ. ಅಲ್ಲೊಂದು ಬಹುದೊಡ್ಡ ಗಾಳಿಪಟ ಇಟ್ಟಿದ್ದಾರೆ ಅದರ ಗಾತ್ರ 22 ಅಡಿ ಉದ್ದ 16 ಅಡಿ ಅಗಲ ಇದೆ. ಏನಾದ್ರೂ ಗೊತ್ತಾಯ್ತ... ಇಲ್ಲಾಂದ್ರೆ ಇನ್ನೊಂದು ವಿಷಯ ಹೇಳುತ್ತೇನೆ. ಇದು ಯಾವ ನಗರದಲ್ಲಿದೆಯೋ ಆ ನಗರದೊಂದಿಗೆ ಬಾಪೂ ಅವರ ವಿಶೇಷ ಸಂಬಂಧವಿತ್ತು.
ಚಿಕ್ಕವರಿದ್ದಾಗ ಅಂಚೆಚೀಟಿಗಳನ್ನು ಸಂಗ್ರಹಿಸುವ ಆಸಕ್ತಿ ಯಾರಿಗೆ ಇರಲಿಕ್ಕಿಲ್ಲ. ಆದರೆ, ನಿಮಗೆ ಗೊತ್ತಾ ಭಾರತದಲ್ಲಿ ಅಂಚೆಚೀಟಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮ್ಯೂಸಿಯಂ ಎಲ್ಲಿದೆ?
ನಾನು ನಿಮಗೆ ಇನ್ನೊಂದು ಪ್ರಶ್ನೆ ಕೇಳುತ್ತೇನೆ, ಗುಲ್ಶನ್ ಮಹಲ್ ಎಂಬ ಕಟ್ಟಡದಲ್ಲಿ ಯಾವ ಮ್ಯೂಸಿಯಂ ಇದೆ? ಇದಕ್ಕೆ ಕ್ಲೂ ಅಂದರೆ, ಈ ಮ್ಯೂಸಿಯಂನಲ್ಲಿ ನೀವು ಫಿಲಂ ಡೈರೆಕ್ಟರ್ ಕೂಡ ಆಗಬಹುದು. ಕ್ಯಾಮರಾ, ಎಡಿಟಿಂಗ್ ಮಾಡುವ ಸೂಕ್ಷ್ಮ ವಿಷಯಗಳನ್ನು ಕೂಡ ನೋಡಬಹುದಾಗಿದೆ.
ಸರಿ, ನೀವು ಅಂತಹ ಯಾವುದಾದರೂ ಮ್ಯೂಸಿಯಂ ನೋಡಿದ್ದೀರಾ, ಅಲ್ಲಿ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಅದರ ಪರಂಪರೆಯನ್ನು ಆಚರಿಸುತ್ತಾರೆ. ಈ ಮ್ಯೂಸಿಯಂನಲ್ಲಿ ಮಿನಿಯೇಚರ್ ಪೇಂಟಿಂಗ್ಸ್, ಜೈನ್ ಮ್ಯಾನುಸ್ಕ್ರಿಪ್ಟ್ಸ್, ಸ್ಕಲ್ಪ್ ಚರ್ (Sculpture) ಇನ್ನೂ ಹಲವು ವಿಷಯಗಳಿವೆ. ಅವುಗಳ ವಿಶಿಷ್ಟ ಪ್ರದರ್ಶನಕ್ಕಾಗಿಯೇ ಈ ಮ್ಯೂಜಿಯಮ್ ಹೆಸರುವಾಸಿಯಾಗಿದೆ.
ಮಿತ್ರರೇ, ತಂತ್ರಜ್ಞಾನದ ಈ ಸಮಯದಲ್ಲಿ ಇವುಗಳ ಉತ್ತರ ಹುಡುಕಲು ನಿಮಗೆ ಬಹಳ ಸುಲಭವಾಗಿದೆ. ಈ ಪ್ರಶ್ನೆಗಳನ್ನು ನಿಮಗೆ ಯಾಕೆ ಕೇಳಿದೆ ಅಂದರೆ ನಮ್ಮ ಯುವ ಪೀಳಿಗೆಯಲ್ಲಿ ಜಿಜ್ಞಾಸೆ ಹೆಚ್ಚಲಿ, ಅವರು ಇವುಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲಿ, ಅವುಗಳನ್ನು ನೋಡಲು ಹೋಗಲಿ ಎಂದು... ಈಗಂತೂ ಮ್ಯೂಸಿಯಂನ ಮಹತ್ವ ತಿಳಿದ ಮೇಲೆ ಹಲವಾರು ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಮ್ಯೂಸಿಯಂಗಾಗಿ ದಾನ ನೀಡುತ್ತಿದ್ದಾರೆ. ಹಲವರು, ತಾವು ಸಂಗ್ರಹಿಸಿದ್ದ ಐತಿಹಾಸಿಕ ವಸ್ತುಗಳನ್ನು ಮ್ಯೂಸಿಯಂಗೆ ದಾನ ನೀಡುತ್ತಿದ್ದಾರೆ. ನೀವೇನಾದರೂ ಹಾಗೆ ಮಾಡುತ್ತಿದ್ದರೆ ಅದು ಒಂದು ರೀತಿಯಿಂದ ಒಂದು ಸಾಂಸ್ಕೃತಿಕ ಸಂಪತ್ತನ್ನು ಇಡೀ ಸಮಾಜಕ್ಕೆ ನೀಡಿದಂತಾಗುತ್ತದೆ. ಭಾರತದಲ್ಲಿಯೂ ಜನರು ಈಗ ಇದಕ್ಕಾಗಿ ಮುಂದೆ ಬರುತ್ತಿದ್ದಾರೆ. ನಾನು ಇಂತಹ ಹಲವು ಖಾಸಗಿ ಪ್ರಯತ್ನಗಳನ್ನು ಕೂಡ ಶ್ಲಾಘಿಸುತ್ತೇನೆ. ಬದಲಾಗುತ್ತಿರುವ ಇಂದಿನ ಸಮಯದಲ್ಲಿ ಹಾಗೂ ಕೋವಿಡ್ ಪ್ರೋಟೋಕಾಲ್ ನಿಂದಾಗಿ ಸಂಗ್ರಹಾಲಯಗಳಲ್ಲಿ ಹೊಸ ರೀತಿಯ ವಿಧಾನಗಳನ್ನು ಅನುಸರಿಸುವಲ್ಲಿ ತೊಡಗಿಕೊಂಡಿದ್ದಾರೆ. ಮ್ಯೂಸಿಯಂಗಳಲ್ಲಿ, ಡಿಜಿಟೈಸೇಷನ್ ಕಡೆಗೂ ಒತ್ತು ನೀಡಲಾಗುತ್ತಿದೆ. ಮೇ 18ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿವಸ ಆಚರಿಸುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇದನ್ನು ನೋಡಿದಾಗ ಯುವ ಮಿತ್ರರಿಗಾಗಿ ನನ್ನ ಹತ್ತಿರ ಒಂದು ವಿಚಾರ ಇದೆ. ಯಾಕೆ ನೀವು ಮುಂಬರುವ ರಜಾ ದಿನಗಳಲ್ಲಿ ನಿಮ್ಮ ಮಿತ್ರರೊಂದಿಗೆ ಸೇರಿ ಯಾವುದಾದರೂ ಒಂದು ಸ್ಥಳೀಯ ಮ್ಯೂಸಿಯಂಗೆ ಹೋಗಬಾರದು. ನೀವು ನಿಮ್ಮ ಅನುಭವವನ್ನು # Tag Museum Memories (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಮೆಮೊರಿಸ್) ನೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಹಾಗೆ ಮಾಡುವುದರಿಂದ ಇನ್ನೊಬ್ಬರ ಮನಸ್ಸಿನಲ್ಲಿಯೂ ಸಂಗ್ರಹಾಲಯಗಳ ಬಗ್ಗೆ ಜಿಜ್ಞಾಸೆ ಮೂಡುವುದು.
ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮ ನಿಮ್ಮ ಜೀವನದಲ್ಲಿ ಬಹಳ ಸಂಕಲ್ಪಗಳನ್ನು ಮಾಡಿರಬಹುದು, ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಿರಬಹುದು. ಬಂಧುಗಳೇ, ಆದರೆ ಇತ್ತೀಚೆಗೆ ನನಗೆ ಒಂದು ಸಂಕಲ್ಪದ ಬಗ್ಗೆ ಮಾಹಿತಿ ಬಂತು, ಅದು ನಿಜವಾಗಿಯೂ ಬಹಳ ಒಳ್ಳೆಯದಾಗಿತ್ತು, ಬಹಳ ವಿಶಿಷ್ಟ ಕೂಡ ಆಗಿತ್ತು. ಆಗ, ಇದನ್ನು ಮನದಾಳದ ಮಾತಿನಲ್ಲಿ ಅವಶ್ಯವಾಗಿ ನಮ್ಮ ಶ್ರೋತೃಗಳೊಂದಿಗೆ ಹಂಚಿಕೊಳ್ಳೋಣ ಎಂದೆನಿಸಿತು.
ಬಂಧುಗಳೇ, ಯಾರಾದರೂ ಬೆಳಗ್ಗೆ ತಮ್ಮ ಮನೆಯಿಂದ ಹೊರಬಿದ್ದು ಇಂದು ಇಡೀ ನಗರವನ್ನು ಸುತ್ತುವೆನು ಹಾಗೂ ನನ್ನ ಇಡೀ ದಿನದ ಎಲ್ಲ ವ್ಯವಹಾರಗಳಲ್ಲಿ ಯಾವುದೇ ನಗದು ವ್ಯವಹಾರ ಮಾಡುವುದಿಲ್ಲ ಎಂದು ಸಂಕಲ್ಪ ಮಾಡುವುದು ಒಂದು ವಿಶಿಷ್ಟ ಸಂಕಲ್ಪವಲ್ಲವೇ... ದೆಹಲಿಯ ಇಬ್ಬರು ಪುತ್ರಿಯರು ಸಾಗರಿಕಾ ಮತ್ತು ಪ್ರೇಕ್ಷಾ ಇಂತಹ Cashless Day out (ಕ್ಯಾಶ್ಲೆಸ್ ಡೇ ಔಟ್) ನ ಪ್ರಯೋಗಕ್ಕೆ ಸಂಕಲ್ಪ ಮಾಡಿದವರು. ಸಾಗರಿಕಾ ಮತ್ತು ಪ್ರೇಕ್ಷಾ ದಿಲ್ಲಿಯಲ್ಲಿ ಎಲ್ಲೇ ಹೋದರು ಅವರಿಗೆ ಕ್ಯಾಶ್ಲೆಸ್ ಪೇಮೆಂಟ್ ಮಾಡುವ ಅವಕಾಶ ದೊರಕಿತು. UPI QR Code (ಯುಪಿಐ ಕ್ಯೂಆರ್ ಕೋಡ್) ನಿಂದಾಗಿ ಅವರಿಗೆ ನಗದು ಹಣ ತೆಗೆಯುವ ಅವಶ್ಯಕತೆಯೇ ಬರಲಿಲ್ಲ. ಎಲ್ಲಿಯವರೆಗೆ ಅಂದರೆ, ರಸ್ತೆ ಬದಿಯಲ್ಲಿ ತಯಾರಿಸುವ ತಿಂಡಿ-ತಿನಿಸುಗಳು, ಸಂದು-ಗೊಂದಿಯ ಅಂಗಡಿಗಳಲ್ಲಿಯೂ ಕೂಡ ಬಹುತೇಕ ಸ್ಥಳಗಳಲ್ಲಿ Online transaction (ಆನ್ಲೈನ್ ಟ್ರಾಂಜೆಕ್ಷನ್) ವ್ಯವಸ್ಥೆ ಇತ್ತು.
ಮಿತ್ರರೇ, ನಿಮಗನಿಸಬಹುದು ಇದು ದಿಲ್ಲಿ. ಮೆಟ್ರೋ ಸಿಟಿ, ಅಲ್ಲಿ ಇವೆಲ್ಲ ಇರುವುದು ಸರ್ವೇಸಾಮಾನ್ಯ… ಆದರೆ ಈಗ ಹಾಗಿಲ್ಲ. ಯುಪಿಐ ನ ಈ ಬಳಕೆಯು ದಿಲ್ಲಿಯಂತಹ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ನನಗೆ ಗಾಜಿಯಾಬಾದ್ ನ ಆನಂದಿತಾ ತ್ರಿಪಾಠಿಯವರ ಒಂದು ಸಂದೇಶ ಬಂದಿದೆ. ಆನಂದಿತಾ ತನ್ನ ಪತಿಯೊಂದಿಗೆ ಕಳೆದ ವಾರ ಈಶಾನ್ಯ ರಾಜ್ಯಗಳ (ನಾರ್ಥ್ ಈಸ್ಟ್) ಪ್ರವಾಸಕ್ಕೆ ಹೋಗಿದ್ದರು. ಅವರು ಅಸ್ಸಾಮ್ ನಿಂದ ಹಿಡಿದು ಮೇಘಾಲಯ ಮತ್ತು ಅರುಣಾಚಲಪ್ರದೇಶದ ತವಾಂಗ್ ವರೆಗಿನ ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಈ ಯಾತ್ರೆಯಲ್ಲಿ ಅವರಿಗೆ ದೂರದೂರದ ಊರುಗಳಲ್ಲಿಯೂ ಕೂಡ ನಗದು ಉಪಯೋಗಿಸುವ ಪ್ರಮೇಯವೇ ಬರಲಿಲ್ಲ ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು. ಯಾವ ಸ್ಥಳಗಳಲ್ಲಿ ಕೆಲವರ್ಷಗಳ ಹಿಂದೆ ಇಂಟರ್ನೆಟ್ ನ ಒಳ್ಳೆಯ ವ್ಯವಸ್ಥೆಯೂ ಇರಲಿಲ್ಲವೋ, ಅಲ್ಲಿಯೂ ಕೂಡ ಈಗ ಯುಪಿಐ ನಿಂದ ನಿಮ್ಮ ಹಣ ಪಾವತಿಸಬಹುದಾಗಿದೆ. ಸಾಗರಿಕಾ, ಪ್ರೇಕ್ಷಾ ಮುತ್ತು ಆನಂದಿತಾ ಅವರ ಅನುಭವಗಳನ್ನು ನೋಡಿ ನಾನು ತಮ್ಮಲ್ಲಿಯೂ ಕೂಡ ಕೇಳಿಕೊಳ್ಳುವುದೇನೆಂದರೆ Cashless Day Out (ಕ್ಯಾಶ್ಲೆಸ್ ಡೇ ಔಟ್) ನ ಪ್ರಯೋಗ ಮಾಡಿ ನೋಡಿ… ಅವಶ್ಯವಾಗಿ ಮಾಡಿರಿ.
ಮಿತ್ರರೇ, ಕಳೆದ ಕೆಲವು ವರ್ಷಗಳಲ್ಲಿ BHIM UPI(ಭೀಮ್ ಯುಪಿಐ) ಬಹಳ ವೇಗವಾಗಿ ನಮ್ಮ ಅರ್ಥವ್ಯವಸ್ಥೆ ಮತ್ತು ನಮ್ಮ ದಿನಚರಿಯ ಭಾಗವಾಗಿದೆ. ಈಗಂತೂ, ಸಣ್ಣ ಸಣ್ಣ ನಗರಗಳಲ್ಲಿ ಅಲ್ಲದೆ ಹೆಚ್ಚಿನ ಹಳ್ಳಿಗಳಲ್ಲಿಯೂ ಕೂಡ ಜನರು ಯುಪಿಐ ನಿಂದಲೇ ಕೊಡು ಕೊಳ್ಳುವಿಕೆಯನ್ನು ಮಾಡುತ್ತಿದ್ದಾರೆ. ಡಿಜಿಟಲ್ ಎಕಾನಮಿ ಇಂದ ದೇಶದಲ್ಲಿ ಒಂದು ಸಂಸ್ಕೃತಿಯು ಹುಟ್ಟಿಕೊಳ್ಳುತ್ತಿದೆ. ಓಣಿಯಲ್ಲಿನ ಚಿಕ್ಕ ಚಿಕ್ಕ ಅಂಗಡಿಗಳಲ್ಲಿಯೂ ಕೂಡ ಡಿಜಿಟಲ್ ಪೇಮೆಂಟ್ ಮಾಡುವುದರಿಂದಾಗಿ ಅವರಿಗೆ ತಮ್ಮ ಗ್ರಾಹಕರಿಗೆ ಸುಲಭವಾಗಿ ಸೇವೆ ಒದಗಿಸುವಂತೆ ಆಗಿದೆ. ಅವರಿಗೆ ಈಗ ಚಿಲ್ಲರೆ ಹಣದ ಸಮಸ್ಯೆ ಆಗುವುದಿಲ್ಲ. ನೀವು ಕೂಡ ದೈನಂದಿನ ಕಾರ್ಯಕಲಾಪಗಳಲ್ಲಿ ಯುಪಿಐ ಉಪಯೋಗ ಮಾಡುತ್ತಿರಬಹುದು. ಎಲ್ಲಿಗೆ ಹೋಗಲಿ ನಗದು ತೆಗೆದುಕೊಂಡು ಹೋಗುವುದು, ಬ್ಯಾಂಕಿಗೆ ಹೋಗುವುದು, ಎಟಿಎಂನಿಂದ ಹಣ ಪಡೆಯುವ ಕಷ್ಟವೇ ಇಲ್ಲ. ಮೊಬೈಲ್ ನಿಂದಲೇ ಎಲ್ಲಾ ಪೇಮೆಂಟ್ ಮಾಡಬಹುದಾಗಿದೆ. ಆದರೆ, ನಿಮಗೆ ಗೊತ್ತಾ, ನಿಮ್ಮ ಈ ಸಣ್ಣ ಸಣ್ಣ ಆನ್ಲೈನ್ ಪೇಮೆಂಟ್ ನಿಂದ ರಾಷ್ಟ್ರದಲ್ಲಿ ಎಷ್ಟು ದೊಡ್ಡ ಡಿಜಿಟಲ್ ಎಕಾನಮಿ ತಯಾರಾಗಿದೆ ಎಂದು. ಈಗ ನಮ್ಮ ದೇಶದಲ್ಲಿ ಪ್ರತಿದಿನ ಸರಿಸುಮಾರು 20 ಸಾವಿರ ಕೋಟಿ ರೂಪಾಯಿಗಳ ಆನ್ಲೈನ್ ಟ್ರಾನ್ಸಾಕ್ಷನ್ ಆಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅಂತೂ ಯುಪಿಐ ಟ್ರಾನ್ಸಾಕ್ಷನ್ ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು. ಇದರಿಂದ ದೇಶದಲ್ಲಿ ಅನುಕೂಲಗಳು ಹೆಚ್ಚಾಗುತ್ತಿವೆ ಅಲ್ಲದೆ ಪ್ರಾಮಾಣಿಕತೆಯ ವಾತಾವರಣ ನಿರ್ಮಾಣವಾಗುತ್ತಿದೆ. ಈಗಂತೂ ದೇಶದಲ್ಲಿ ಫಿನ್-ಟೆಕ್ ನೊಂದಿಗೆ ಸೇರಿಕೊಂಡು ಹೊಸ ಸ್ಟಾರ್ಟ್ ಅಪ್ ಗಳು ಮುಂದುವರಿಯುತ್ತಿವೆ. ಒಂದು ವೇಳೆ ನಿಮ್ಮ ಹತ್ತಿರ ಇಂತಹ ಡಿಜಿಟಲ್ ಪೇಮೆಂಟ್ ಮತ್ತು ಸ್ಟಾರ್ಟಪ್ ಎಕೊಸಿಸ್ಟಮ್ ನ ಶಕ್ತಿಯೊಂದಿಗೆ ಸಂಬಂಧಿಸಿದ ಅನುಭವಗಳಿದ್ದರೆ ಅವುಗಳನ್ನು ಹಂಚಿಕೊಳ್ಳಿ. ನಿಮ್ಮ ಅನುಭವಗಳು ಇನ್ನುಳಿದ ಹಲವಾರು ದೇಶವಾಸಿಗಳಿಗೆ ಪ್ರೇರಣೆಯಾಗಬಹುದಾಗಿದೆ.
ನನ್ನ ಪ್ರಿತಿಯ ದೇಶವಾಸಿಗಳೇ, ತಂತ್ರಜ್ಞಾನದ ಶಕ್ತಿಯು ಇಂದು ಹೀಗೆ ಸಾಮಾನ್ಯ ಜನರ ಜೀವನವನ್ನು ಬದಲಾಯಿಸುತ್ತದೆ, ಇದು ನಮಗೆ ನಮ್ಮ ಸುತ್ತಮುತ್ತಲೂ ಯಾವಾಗಲೂ ಕಾಣಸಿಗುತ್ತಿದೆ. ತಂತ್ರಜ್ಞಾನವು ಇನ್ನೊಂದು ದೊಡ್ಡ ಕೆಲಸ ಮಾಡಿದೆ. ಅದೆಂದರೆ ನಮ್ಮ ದಿವ್ಯಾಂಗ ಅಸಾಧಾರಣ ಕ್ಷಮತೆಯ ಲಾಭವನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ನೀಡುವುದು. ನಮ್ಮ ದಿವ್ಯಾಂಗ ಸಹೋದರ-ಸಹೋದರಿಯರು ಏನು ಮಾಡುತ್ತಾರೆ ಎಂಬುದನ್ನು ನಾವು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನೋಡಿದ್ದೇವೆ. ಕ್ರೀಡೆಗಳ ಹಾಗೆಯೇ, ಕಲೆ, ಶಿಕ್ಷಣ ಮುತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ದಿವ್ಯಾಂಗ ಮಿತ್ರರು ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ಯಾವಾಗ ಇವರಿಗೆ ತಂತ್ರಜ್ಞಾನದ ಶಕ್ತಿ ಒದಗುವುದೋ, ಆಗ ಇವರು ಇನ್ನೂ ಹೆಚ್ಚಿನದನ್ನು ಸಾಧಿಸಿ ತೋರಿಸಬಹುದಾಗಿದೆ. ಆದ್ದರಿಂದ, ರಾಷ್ಟ್ರವು ದಿವ್ಯಾಂಗ ಬಂಧುಗಳಿಗಾಗಿ ಸಂಪನ್ಮೂಲಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಾಧನೆಯ ಹಾದಿ ಇನ್ನಷ್ಟು ಸುಲಭಗೊಳಿಸಲು ನಿರಂತರ ಪ್ರಯತ್ನಶೀಲವಾಗಿದೆ. ದೇಶದಲ್ಲಿ ಹಲವು ಸ್ಟಾರ್ಟಪ್ ಗಳು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರೇರಣಾದಾಯಕ ಕಾರ್ಯನಿರ್ವಹಿಸುತ್ತಿವೆ. ಅಂತಹ ಒಂದು ಸಂಸ್ಥೆಯೆಂದರೆ ವಾಯ್ಸ್ ಆಫ್ specially-abled ಪೀಪಲ್, ಈ ಸಂಸ್ಥೆಗಳು Assistive ಟೆಕ್ನೋಲಜಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಹುಟ್ಟುಹಾಕುತ್ತಿದೆ. ದಿವ್ಯಾಂಗ ಕಲಾಕಾರರ ಕಾರ್ಯಗಳನ್ನು, ಜಗತ್ತಿನಾದ್ಯಂತ ಪಸರಿಸಲು ಒಂದು ಹೊಸ ಇನ್ನೋವೇಟಿವ್ ಕಾರ್ಯ ಆರಂಭಿಸಿತು. ವಾಯ್ಸ್ ಆಫ್ specially-abled ಪೀಪಲ್ ನ ಎಲ್ಲಾ ಕಲಾಕಾರರ ಪೇಂಟಿಂಗ್ ಗಳ ಒಂದು ಡಿಜಿಟಲ್ ಆರ್ಟ್ ಗ್ಯಾಲರಿ ಮಾಡಲಾಗಿದೆ. ದಿವ್ಯಾಂಗ ಮಿತ್ರರು ಹೇಗೆ ಅಸಾಧಾರಣ ಪ್ರತಿಭೆಗಳ ಆಗರವಾಗಿದ್ದಾರೆ ಮತ್ತು ಅವರಲ್ಲಿ ಅದೆಷ್ಟು ಅಸಾಧಾರಣ ಶಕ್ತಿ ಇರುತ್ತದೆ ಎಂಬುದನ್ನು ಅರಿಯಲು ಈ ಆರ್ಟ್ ಗ್ಯಾಲರಿಯು ಒಂದು ಉದಾಹರಣೆಯಾಗಿದೆ. ದಿವ್ಯಾಂಗ ಮಿತ್ರರ ಜೀವನದಲ್ಲಿ ಎಂತಹ ಸವಾಲುಗಳು ಎದುರಾಗುತ್ತವೆ, ಅವುಗಳಿಂದ ಹೊರಬಂದು ಅವರು ಎಲ್ಲಿಯವರೆಗೆ ಮುಟ್ಟಬಹುದು, ಇಂತಹ ಅನೇಕ ವಿಷಯಗಳನ್ನು ಪೇಂಟಿಂಗ್ಸ್ ಗಳಲ್ಲಿ ನಾವು ಕಾಣಬಹುದಾಗಿದೆ. ನಿಮಗೂ ಕೂಡ ಯಾರಾದರೂ ದಿವ್ಯಾಂಗ ಮಿತ್ರರು ಪರಿಚಯವಿದ್ದರೆ, ಅವರ ಜಾಣ್ಮೆಯನ್ನು ತಿಳಿದಿದ್ದರೆ, ಡಿಜಿಟಲ್ ತಂತ್ರಜ್ಞಾನದಿಂದ ಅದನ್ನು ವಿಶ್ವದ ಮುಂದೆ ತರಬಹುದಾಗಿದೆ. ದಿವ್ಯಾಂಗ ಮಿತ್ರರೆಲ್ಲರೂ ಇಂತಹ ಪ್ರಯತ್ನಗಳೊಂದಿಗೆ ಅವಶ್ಯವಾಗಿ ಸೇರಿರಿ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹುತೇಕ ಭಾಗಗಳಲ್ಲಿ ಬೇಸಿಗೆಯು ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಏರುತ್ತಿರುವ ಈ ಶಾಖವು, ನೀರಿನ ಸಂರಕ್ಷಣೆಯ ನಮ್ಮ ಜವಾಬ್ದಾರಿಯನ್ನೂ ಕೂಡ ಅಷ್ಟೇ ಹೆಚ್ಚಿಸುತ್ತದೆ. ಈಗ ನೀವು ಇರುವ ಸ್ಥಳದಲ್ಲಿ ಸಾಕಷ್ಟು ನೀರು ಲಭ್ಯವಿರಬಹುದು. ಆದರೆ, ನೀರಿನ ಪ್ರತಿ ಹನಿಯೂ ಅಮೃತಕ್ಕೆ ಸಮನಾದಂತಹ, ಜಲಕ್ಷಾಮ ಪ್ರದೇಶಗಳಲ್ಲಿ ವಾಸಿಸುವ ಕೋಟ್ಯಂತರ ಜನರನ್ನು ನೀವು ಸದಾ ಸ್ಮರಿಸುತ್ತಿರಬೇಕು.
ಸ್ನೇಹಿತರೇ, ಸ್ವಾತಂತ್ರ್ಯದ 75 ನೇ ವರ್ಷದ ಈ ಸಂದರ್ಭದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ, ಯಾವ ಸಂಕಲ್ಪಗಳೊಂದಿಗೆ ದೇಶವು ಮುನ್ನಡೆಯುತ್ತಿದೆಯೋ ಅದರಲ್ಲಿ ಜಲ ಸಂರಕ್ಷಣೆಯೂ ಕೂಡ ಒಂದಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುವುದು. ಈ ಚಳವಳಿಯು ಎಷ್ಟು ದೊಡ್ಡದೆಂದು ನೀವು ಊಹಿಸಬಹುದು. ನಿಮ್ಮದೇ ನಗರದಲ್ಲಿ 75 ಅಮೃತ ಸರೋವರಗಳು ಇರುವ ದಿನವು ದೂರವಿಲ್ಲ. ನೀವೆಲ್ಲರೂ ಮತ್ತು ವಿಶೇಷವಾಗಿ ಯುವಕರು ಈ ಚಳವಳಿಯ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಅದರ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಯಾವುದೇ ಇತಿಹಾಸವಿದ್ದರೆ, ಹೋರಾಟಗಾರರ ಸ್ಮೃತಿ ಇದ್ದರೆ, ನೀವು ಅದನ್ನೂ ಅಮೃತ ಸರೋವರದೊಂದಿಗೆ ಕೂಡಿಸಬಹುದು. ಅಂದಹಾಗೆ, ಅಮೃತ ಸರೋವರದ ಸಂಕಲ್ಪವನ್ನು ತೆಗೆದುಕೊಂಡ ನಂತರ, ಅನೇಕ ಸ್ಥಳಗಳಲ್ಲಿ ಇದರ ಕೆಲಸವು ವೇಗವಾಗಿ ಪ್ರಾರಂಭವಾಗಿವೆ ಎಂದು ತಿಳಿದು ನನಗೆ ಸಂತೋಷವಾಯಿತು.
ಉತ್ತರಪ್ರದೇಶದ ರಾಂಪುರದ ಗ್ರಾಮ ಪಂಚಾಯತ್ ಪಟ್ವಾಯಿ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅಲ್ಲಿ ಗ್ರಾಮ ಸಭೆಯ ಜಾಗದಲ್ಲಿ ಒಂದು ಕೆರೆ ಇತ್ತು. ಆದರೆ ಅದು ಕಸದಿಂದ ತುಂಬಿ ಕೊಳಕಾಗಿತ್ತು. ಕಳೆದ ಕೆಲವು ವಾರಗಳಿಂದ ಸಾಕಷ್ಟು ಶ್ರಮವಹಿಸಿ, ಸ್ಥಳೀಯರ ನೆರವಿನಿಂದ, ಸ್ಥಳೀಯ ಶಾಲಾ ಮಕ್ಕಳ ನೆರವಿನಿಂದ, ಕೊಳೆ ತುಂಬಿದ್ದ ಆ ಕೆರೆಯ ರೂಪವೇ ಬದಲಾಯಿತು. ಈಗ ಆ ಕೆರೆಯ ದಡದಲ್ಲಿ ತಡೆಗೋಡೆ, ಗಡಿಗೋಡೆ, ಫುಡ್ ಕೋರ್ಟ್, ಕಾರಂಜಿ ಅಲ್ಲದೆ ಲೈಟಿಂಗ್… ಹೀಗೆ ಏನೆಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯತ್ನಕ್ಕಾಗಿ ನಾನು ರಾಂಪುರದ ಪಟ್ವಾಯಿ ಗ್ರಾಮ ಪಂಚಾಯತ್, ಆ ಗ್ರಾಮದ ಜನತೆ, ಅಲ್ಲಿನ ಮಕ್ಕಳನ್ನು ಬಹಳ ಅಭಿನಂದಿಸುತ್ತೇನೆ.
ಸ್ನೇಹಿತರೇ, ನೀರಿನ ಲಭ್ಯತೆ ಮತ್ತು ನೀರಿನ ಕೊರತೆ, ಇವು ಯಾವುದೇ ದೇಶದ ಪ್ರಗತಿ ಮತ್ತು ವೇಗದ ಮೇಲೆ ಪ್ರಭಾವ ಬೀರುತ್ತವೆ. 'ಮನ್ ಕಿ ಬಾತ್' ನಲ್ಲಿ ನಾನು ಸ್ವಚ್ಛತೆಯಂತಹ ವಿಷಯಗಳ ಜೊತೆ-ಜೊತೆಗೆ ನೀರಿನ ಸಂರಕ್ಷಣೆಯ ಬಗ್ಗೆಯೂ ಮತ್ತೆ ಮತ್ತೆ ಮಾತನಾಡುವುದನ್ನು ನೀವು ಗಮನಿಸಿರಬೇಕು. ಇದನ್ನೇ ನಮ್ಮ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ -
“ಪಾನಿಯಂ ಪರಮಂ ಲೋಕೇ, ಜೀವಾನಾಂ ಜೀವನಂ ಸ್ಮೃತಮ್||”
ಅಂದರೆ, ಪ್ರಪಂಚದಲ್ಲಿ ನೀರು, ಪ್ರತಿಯೊಂದು ಜೀವಿಯ, ಜೀವನದ ಆಧಾರವಾಗಿದೆ ಮತ್ತು ನೀರು ಬಹಳ ದೊಡ್ಡ ಸಂಪನ್ಮೂಲವೂ ಆಗಿದೆ, ಆದ್ದರಿಂದಲೇ ನಮ್ಮ ಪೂರ್ವಜರು ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದರು. ವೇದಗಳಿಂದ ಪುರಾಣಗಳವರೆಗೆ ಎಲ್ಲೆಡೆ ನೀರನ್ನು ಸಂರಕ್ಷಿಸುವುದು, ಕೊಳಗಳು, ಸರೋವರಗಳನ್ನು ನಿರ್ಮಿಸುವುದು ಮನುಷ್ಯನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯವೆಂದು ಹೇಳಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಜಲಮೂಲಗಳನ್ನು ಜೋಡಿಸುವುದಕ್ಕೆ ಹಾಗೂ ಜಲ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಅದೇ ರೀತಿ, ಸಿಂಧೂ-ಸರಸ್ವತಿ ಮತ್ತು ಹರಪ್ಪನ್ ನಾಗರಿಕತೆಗಳ ಕಾಲದಲ್ಲೂ ಭಾರತದಲ್ಲಿ ನೀರಿಗೆ ಸಂಬಂಧಿಸಿದ ಇಂಜಿನಿಯರಿಂಗ್ ಅನ್ನು ಎಷ್ಟು ಅಭಿವೃದ್ಧಿಪಡಿಸಲಾಗಿತ್ತು ಎಂಬುದು ಇತಿಹಾಸದ ವಿದ್ಯಾರ್ಥಿಗಳಿಗೆ ತಿಳಿದಿರುತ್ತದೆ. ಪ್ರಾಚೀನ ಕಾಲದಲ್ಲಿ, ಅನೇಕ ನಗರಗಳಲ್ಲಿ ನೀರಿನ ಮೂಲಗಳ ಪರಸ್ಪರ ಸಂಪರ್ಕಿತ ವ್ಯವಸ್ಥೆ ಇರುತ್ತಿತ್ತು ಮತ್ತು ಆ ಸಮಯದಲ್ಲಿ, ಜನಸಂಖ್ಯೆಯು ಹೆಚ್ಚಿರಲಿಲ್ಲ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿರಲಿಲ್ಲ, ಒಂದು ರೀತಿಯ ಸಮೃದ್ಧಿ ಇತ್ತು, ಆದರೂ, ನೀರಿನ ಸಂರಕ್ಷಣೆಯ ಬಗ್ಗೆ ಆಗಿನ ಕಾಲದಲ್ಲಿಯೇ ಅತ್ಯಂತ ಹೆಚ್ಚಿನ ಅರಿವಿತ್ತು. ಆದರೆ, ಇಂದು ಪರಿಸ್ಥಿತಿ ತದ್ವಿರುದ್ಧವಾಗಿದೆ. ನಿಮ್ಮ ಪ್ರದೇಶದಲ್ಲಿರುವ ಇಂತಹ ಹಳೆಯ ಕೊಳಗಳು, ಬಾವಿಗಳು ಮತ್ತು ಕೆರೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಅಮೃತ್ ಸರೋವರ ಅಭಿಯಾನದಿಂದಾಗಿ, ಜಲ ಸಂರಕ್ಷಣೆಯ ಜೊತೆ-ಜೊತೆಗೆ, ನಿಮ್ಮ ಕ್ಷೇತ್ರವೂ ಸಹ ಗುರುತಿಸಲ್ಪಡುತ್ತದೆ.
ಇದರಿಂದಾಗಿ, ನಗರಗಳಲ್ಲಿ, ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಸಿ ಸ್ಥಳಗಳು ಅಭಿವೃದ್ಧಿಯಾಗುತ್ತವೆ, ಜನರ ತಿರುಗಾಟಕ್ಕೆ ಸ್ಥಳವೂ ಸಹ ಸಿದ್ಧವಾಗುತ್ತದೆ.
ಸ್ನೇಹಿತರೇ, ನೀರಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಯತ್ನವೂ ನಮ್ಮ ನಾಳೆಗೆ ಸಂಬಂಧಿಸಿದೆ. ಇದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶತಮಾನಗಳಿಂದ ವಿವಿಧ ಸಮಾಜಗಳಿಂದ, ವಿಭಿನ್ನ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಉದಾಹರಣೆಗೆ, 'ಮಾಲ್ ಧಾರಿ' ಎಂಬ "Ran of kutch " ನಲ್ಲಿನ ಬುಡಕಟ್ಟು ಪ್ರದೇಶದ ಜನಾಂಗವು ಜಲ ಸಂರಕ್ಷಣೆಗಾಗಿ "ವೃದಾಸ್" ಎಂಬ ವಿಧಾನವನ್ನು ಬಳಸುತ್ತದೆ. ಇದರ ಭಾಗವಾಗಿ, ಸಣ್ಣ ಬಾವಿಗಳನ್ನು ನಿರ್ಮಿಸಲಾಗುತ್ತದೆ ಮತ್ತು ಅವುಗಳನ್ನು ಸಂರಕ್ಷಿಸಲು ಸುತ್ತಲೂ ಮರ-ಗಿಡಗಳನ್ನು ನೆಡಲಾಗುತ್ತದೆ. ಇದೇ ರೀತಿ, ಮಧ್ಯಪ್ರದೇಶದ ’ಭಿಲ್’ ಬುಡಕಟ್ಟು ಜನಾಂಗದವರು ತಮ್ಮ ಐತಿಹಾಸಿಕ "ಹಲ್ಮಾ" ಸಂಪ್ರದಾಯವನ್ನು ನೀರಿನ ಸಂರಕ್ಷಣೆಗಾಗಿ ಬಳಸಿದರು. ಈ ಸಂಪ್ರದಾಯದಲ್ಲಿ, ಇಲ್ಲಿನ ಬುಡಕಟ್ಟು ಜನರು ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಒಂದು ಸ್ಥಳದಲ್ಲಿ ಸೇರಿ ಚರ್ಚಿಸುತ್ತಾರೆ. ಹಲ್ಮಾ ಸಂಪ್ರದಾಯದಿಂದ ಬಂದ ಸಲಹೆಗಳಿಂದಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ ಮತ್ತು ಅಂತರ್ಜಲ ಮಟ್ಟವೂ ಹೆಚ್ಚುತ್ತಿದೆ.
ಸ್ನೇಹಿತರೇ, ಇಂತಹುದೇ ಕರ್ತವ್ಯ ಭಾವನೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಬಂದರೆ, ನೀರಿನ ಸಮಸ್ಯೆಗೆ ಸಂಬಂಧಿಸಿದ ದೊಡ್ಡ ಸವಾಲುಗಳನ್ನು ಕೂಡ ಪರಿಹರಿಸಬಹುದು. ಬನ್ನಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಜಲ ಸಂರಕ್ಷಣೆ ಮತ್ತು ಜೀವನ ಸಂರಕ್ಷಣೆಯ ಪ್ರತಿಜ್ಞೆ ಮಾಡೋಣ. ನಾವು ಹನಿ-ಹನಿ ನೀರನ್ನು ಉಳಿಸಿ ಪ್ರತಿಯೊಂದು ಜೀವವನ್ನೂ ಉಳಿಸೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಗಮನಿಸಿರಬೇಕು, ಕೆಲವು ದಿನಗಳ ಹಿಂದೆ ನಾನು ನನ್ನ ಯುವ ಸ್ನೇಹಿತರು, ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ನಡೆಸಿದ್ದೆ. ಈ ಚರ್ಚೆಯಲ್ಲಿ ಕೆಲವು ವಿದ್ಯಾರ್ಥಿಗಳು ಹೇಳಿದ್ದು, ಅವರಿಗೆ ಪರೀಕ್ಷೆಯಲ್ಲಿ ಗಣಿತದ ಬಗ್ಗೆ ಭಯವಿದೆ. ಇದೇ ವಿಷಯವನ್ನು ಅನೇಕ ವಿದ್ಯಾರ್ಥಿಗಳು ತಮ್ಮ ಸಂದೇಶದಲ್ಲಿ ನನಗೆ ಕಳುಹಿಸಿದ್ದರು. ಈ ಬಾರಿಯ ‘ಮನ್ ಕಿ ಬಾತ್’ನಲ್ಲಿ ಗಣಿತ-mathematics ಬಗ್ಗೆ ಖಂಡಿತ ಚರ್ಚೆ ಮಾಡುವೆನೆಂದು ನಾನು ನಿರ್ಧರಿಸಿದ್ದೆ. ಸ್ನೇಹಿತರೇ, ಗಣಿತಶಾಸ್ತ್ರವು ಎಂತಹ ವಿಷಯವೆಂದರೆ, ಅದರ ಬಗ್ಗೆ ಭಾರತೀಯರಾದ ನಮಗೆ ಅದು ಹೆಚ್ಚು ಸಹಜವಾಗಬೇಕು. ಏಕೆಂದರೆ, ಗಣಿತಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತಿಗೆ ಹೆಚ್ಚಿನ ಸಂಶೋಧನೆ ಮತ್ತು ಕೊಡುಗೆಯನ್ನು ಭಾರತೀಯರೇ ನೀಡಿದ್ದಾರೆ. ಸೊನ್ನೆ ಅಂದರೆ ಝೀರೊ, ಇದರ ಆವಿಷ್ಕಾರ ಮತ್ತು ಪ್ರಾಮುಖ್ಯದ ಬಗ್ಗೆ ನೀವು ಸಾಕಷ್ಟು ಕೇಳಿರಲೂಬಹುದು. ಇದನ್ನೂ ನೀವು ಕೇಳಿರಬಹುದು, ಸೊನ್ನೆಯನ್ನು ಕಂಡುಹಿಡಿಯಲಾಗದಿದ್ದರೆ, ಬಹುಶಃ ನಾವು, ಪ್ರಪಂಚದ ಇಷ್ಟೊಂದು ವೈಜ್ಞಾನಿಕ ಉನ್ನತಿಯನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕಲನಶಾಸ್ತ್ರದಿಂದ ಕಂಪ್ಯೂಟರ್ಗಳವರೆಗೆ - ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಶೂನ್ಯದ ಅನ್ವೇಷಣೆಯನ್ನೇ ಆಧರಿಸಿವೆ. ಭಾರತದ ಗಣಿತಶಾಸ್ತ್ರಜ್ಞರು ಮತ್ತು ವಿದ್ವಾಂಸರು ಎಲ್ಲಿಯವರೆಗೆ ಬರೆದಿದ್ದಾರೆಂದರೆ -
“ಯತ್ ಕಿಂಚಿತ್ ವಸ್ತು ತತ್ ಸರ್ವಂ, ಗಣಿತೇನ ಬಿನಾ ನಹಿಂ!”
ಅಂದರೆ, ಈ ಇಡೀ ವಿಶ್ವದಲ್ಲಿ ಏನಿದೆಯೋ, ಅದೆಲ್ಲವೂ ಗಣಿತವನ್ನೇ ಅವಲಂಬಿಸಿದೆ. ನೀವು ವಿಜ್ಞಾನದ ಅಧ್ಯಯನವನ್ನು ನೆನಪಿಸಿಕೊಂಡರೆ, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ. ವಿಜ್ಞಾನದ ಪ್ರತಿಯೊಂದು ನಿಯಮವನ್ನು ಗಣಿತದ ಸೂತ್ರದಲ್ಲಿಯೇ ವಿವರಿಸಲಾಗುತ್ತದೆ. ನ್ಯೂಟನ್ ನ ನಿಯಮಗಳಾಗಿರಲಿ, ಐನ್ಸ್ಟೈನ್ನ ಪ್ರಸಿದ್ಧ ಸಮೀಕರಣವಾಗಲಿ, ಬ್ರಹ್ಮಾಂಡಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನವೂ ಗಣಿತವೇ ಆಗಿದೆ. ಈಗಂತೂ ವಿಜ್ಞಾನಿಗಳು ಥಿಯರಿ ಆಫ್ ಎವೆರಿಥಿಂಗ್ ಬಗ್ಗೆಯೂ ಮಾತನಾಡುತ್ತಾರೆ, ಅಂದರೆ, ಬ್ರಹ್ಮಾಂಡದಲ್ಲಿ ಎಲ್ಲವನ್ನೂ ವಿವರಿಸುವಂತಹ ಏಕೈಕ ಸೂತ್ರ. ಗಣಿತದ ಸಹಾಯದಿಂದ ವೈಜ್ಞಾನಿಕ ತಿಳಿವಳಿಕೆಯ ಇಂತಹ ಹರಿವಿನ ಕಲ್ಪನೆಯನ್ನು ನಮ್ಮ ಋಷಿಮುನಿಗಳು ಆಗಲೇ ಮಾಡಿದ್ದರು. ಸೊನ್ನೆಯನ್ನು ಕಂಡುಹಿಡಿಯುವುದರ ಜೊತೆಗೆ, ನಾವು ಅನಂತತೆ ಅಂದರೆ infinite ಅನ್ನೂ ಕೂಡ ವಿವರಿಸಿದ್ದೇವೆ. ಸಾಮಾನ್ಯ ಭಾಷೆಯಲ್ಲಿ, ನಾವು ಸಂಖ್ಯೆಗಳ ಬಗ್ಗೆ ಮಾತನಾಡುವಾಗ, ನಾವು ಮಿಲಿಯನ್, ಬಿಲಿಯನ್ ಮತ್ತು ಟ್ರಿಲಿಯನ್ ಗಳವರೆಗೆ ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ. ಆದರೆ, ವೇದಗಳು ಮತ್ತು ಭಾರತೀಯ ಗಣಿತಶಾಸ್ತ್ರದಲ್ಲಿ, ಈ ಲೆಕ್ಕಾಚಾರವು ಮತ್ತಷ್ಟು ಹೆಚ್ಚು ಮುಂದಕ್ಕೆ ಹೋಗುತ್ತದೆ. ನಮ್ಮಲ್ಲಿ ಬಹಳ ಹಳೆಯ ಶ್ಲೋಕವೊಂದು ಪ್ರಚಲಿತದಲ್ಲಿದೆ -
ಎಕಂ ದಶಂ ಶತಂ ಚೈವ, ಸಹಸ್ರಮ್ ಅಯುತಂ ತಥಾ |
ಲಕ್ಷಂ ಚ ನಿಯುತಂ ಚೈವ, ಕೋಟಿ: ಅರ್ಬುದಮ್ ಎವ ಚ ||
ವೃಂದಂ ಖರ್ವೋ ನಿಖರ್ವ್: ಚ, ಶಂಖ: ಪದ್ಮ: ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ಧ: ಚ, ದಶ ವೃಧ್ಯಾ ಯಥಾ ಕ್ರಮಮ್ ||
ಈ ಶ್ಲೋಕದಲ್ಲಿ ಸಂಖ್ಯೆಗಳ ಕ್ರಮವನ್ನು ವಿವರಿಸಲಾಗಿದೆ. ಹೇಗೆಂದರೆ -
ಒಂದು, ಹತ್ತು, ನೂರು, ಸಾವಿರ ಮತ್ತು ಅಯುತ!
ಲಕ್ಷ, ನಿಯುತ್ ಮತ್ತು ಕೋಟಿ.
ಇದೇರೀತಿ ಈ ಸಂಖ್ಯೆಗಳು ಮುಂದುವರಿಯುತ್ತವೆ - ಶಂಖ, ಪದ್ಮ ಮತ್ತು ಸಾಗರದವರೆಗೆ. ಒಂದು ಸಾಗರದ ಅರ್ಥವೆಂದರೆ 10 (57). ಇಷ್ಟೇ ಅಲ್ಲ, ಇದರ ನಂತರವೂ ಓಘ್ ಮತ್ತು ಮಹೋಘ್ ನಂತಹ ಸಂಖ್ಯೆಗಳಿರುತ್ತವೆ. ಒಂದು ಮಹೋಘ ಎಂದರೆ - 10 (62) ಕ್ಕೆ ಸಮನಾಗಿರುತ್ತದೆ, ಅಂದರೆ, ಒಂದರ ಮುಂದೆ 62 ಸೊನ್ನೆಗಳು, ಅರವತ್ತೆರಡು ಸೊನ್ನೆಗಳು. ನಾವು ಮನಸ್ಸಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ, ಆದರೆ, ಭಾರತೀಯ ಗಣಿತಶಾಸ್ತ್ರದಲ್ಲಿ, ಇವುಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ನಾನು ಇಂಟೆಲ್ ಕಂಪನಿಯ ಸಿಇಒ ಅವರನ್ನು ಭೇಟಿಯಾಗಿದ್ದೆ. ಅವರು ನನಗೆ ಒಂದು ವರ್ಣಚಿತ್ರವನ್ನು ನೀಡಿದ್ದರು, ಅದರಲ್ಲಿ ವಾಮನ ಅವತಾರದ ಮೂಲಕ ಅಂತಹ ಒಂದು ಭಾರತೀಯ ಲೆಕ್ಕಾಚಾರ ಅಥವಾ ಅಳತೆಯ ವಿಧಾನವನ್ನು ಚಿತ್ರಿಸಲಾಗಿದೆ. ಇಂಟೆಲ್ ಹೆಸರು ಕೇಳಿದ ತಕ್ಷಣ ನಿಮಗೆ ತಾನಾಗಿಯೇ ಕಂಪ್ಯೂಟರ್ ನೆನಪಾಗಿರಬಹುದು. ಕಂಪ್ಯೂಟರಿನ ಭಾಷೆಯಲ್ಲಿ Binary ಪದ್ಧತಿಯ ಬಗ್ಗೆಯೂ ನೀವು ಕೇಳಿರಬಹುದು, ಆದರೆ ಆಚಾರ್ಯ ಪಿಂಗಳಾರಂತಹ ಋಷಿಗಳು ನಮ್ಮ ದೇಶದಲ್ಲಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಇವರು Binary ಪದ್ಧತಿಯನ್ನು ಕಂಡುಹಿಡಿದಿದ್ದರು. ಇದೇ ರೀತಿ ಆರ್ಯಭಟ್ಟರಿಂದ ಹಿಡಿದು ರಾಮಾನುಜನ್ ರಂತಹ ಗಣಿತಶಾಸ್ತ್ರಜ್ಞರವರೆಗೂ, ನಮ್ಮಲ್ಲಿ ಗಣಿತದ ಹಲವಾರು ಸಿದ್ಧಾಂತಗಳ ಮೇಲೆ, ಕೆಲಸಗಳು ನಡೆದಿವೆ.
ಸ್ನೇಹಿತರೇ, ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟದ ವಿಷಯವಾಗಿರಲಿಲ್ಲ, ಇದಕ್ಕೆ ನಮ್ಮ ವೈದಿಕ ಗಣಿತವೇ ದೊಡ್ಡ ಕಾರಣ. ಆಧುನಿಕ ಕಾಲದಲ್ಲಿ ವೈದಿಕ ಗಣಿತದ ಶ್ರೇಯಸ್ಸು ಶ್ರೀ ಭಾರತೀ ಕೃಷ್ಣ ತೀರ್ಥ ಜಿ ಮಹಾರಾಜರಿಗೆ ಸಲ್ಲುತ್ತದೆ. ಇವರು ಲೆಕ್ಕಾಚಾರದ ಪ್ರಾಚೀನ ವಿಧಾನಗಳನ್ನು ಪುನರುಜ್ಜೀವಗೊಳಿಸಿ, ಅದಕ್ಕೆ ವೈದಿಕ ಗಣಿತ ಎಂದು ಹೆಸರಿಸಿದರು. ವೈದಿಕ ಗಣಿತದ ಪ್ರಾಮುಖ್ಯ ಎಂದರೆ ಇದರ ಮೂಲಕ ನೀವು ಅತ್ಯಂತ ಕಿಷ್ಟಕರವಾದ ಲೆಕ್ಕಾಚಾರಗಳನ್ನು ಸಹ ಕಣ್ಣು ಮಿಟುಕಿಸುವುದರಲ್ಲಿ ಮನಸ್ಸಿನಲ್ಲಿಯೇ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನೇಕ ಯುವಕರು ವೈದಿಕ ಗಣಿತವನ್ನು ಕಲಿಯುವ ಮತ್ತು ಕಲಿಸುವ ವೀಡಿಯೊಗಳನ್ನು ನೀವು ನೋಡಿರಬೇಕು.
ಸ್ನೇಹಿತರೇ, ಇಂದು 'ಮನ್ ಕಿ ಬಾತ್' ನಲ್ಲಿ ವೈದಿಕ ಗಣಿತವನ್ನು ಕಲಿಸುವ ಇಂತಹ ಒಬ್ಬ ಸ್ನೇಹಿತರು ನಮ್ಮೊಂದಿಗೆ ಇದ್ದಾರೆ. ಇವರು ಕೋಲ್ಕತ್ತಾದ ಗೌರವ್ ಟೆಕರೀವಾಲ್ ರವರು. ಕಳೆದ ಎರಡು-ಎರಡೂವರೆ ದಶಕಗಳಿಂದ, ವೈದಿಕ ಗಣಿತದ ಆಂದೋಲನವನ್ನು ಬಹಳ ಸಮರ್ಪಣೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಬನ್ನಿ, ಅವರೊಂದಿಗೆ ಮಾತನಾಡೋಣ…
ಮೋದಿ ಜಿ - ಗೌರವ್ ಜಿ ನಮಸ್ತೆ!
ಗೌರವ್ - ನಮಸ್ತೆ ಸರ್!
ಮೋದಿ ಜೀ - ನಿಮಗೆ ವೈದಿಕ ಗಣಿತದಲ್ಲಿ ಬಹಳ ಆಸಕ್ತಿ ಇರುವುದಾಗಿಯೂ, ಈ ಬಗ್ಗೆ ಬಹಳಷ್ಟು ಕೆಲಸ ಮಾಡಿರುವುದಾಗಿಯೂ ನಾನು ಕೇಳಿದ್ದೇನೆ. ಆದ್ದರಿಂದ ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳ ಬಯಸುತ್ತೇನೆ ಹಾಗೂ ನೀವು ಈ ವಿಷಯದಲ್ಲಿ ಹೇಗೆ ಆಸಕ್ತಿ ತಾಳಿದ್ದೀರಿ, ನನಗೆ ಹೇಳಿ?
ಗೌರವ್ - ಸರ್, ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಸಿನೆಸ್ ಸ್ಕೂಲ್ಗೆ ಅರ್ಜಿ ಸಲ್ಲಿಸುವಾಗ, ಅದರಲ್ಲಿ CAT ಎಂಬ ಸ್ಪರ್ಧಾತ್ಮಕ ಪರೀಕ್ಷೆ ಇತ್ತು. ಅದರಲ್ಲಿ ಗಣಿತದ ಹಲವಾರು ಪ್ರಶ್ನೆಗಳಿರುತ್ತಿದ್ದವು. ಅವುಗಳನ್ನು ಕಡಿಮೆ ಸಮಯದಲ್ಲಿ ಮಾಡಬೇಕಿತ್ತು. ಆಗ ನನ್ನ ತಾಯಿ ನನಗೆ ವೈದಿಕ ಗಣಿತ ಎಂಬ ಪುಸ್ತಕವನ್ನು ತಂದು ಕೊಟ್ಟರು. ಸ್ವಾಮಿ ಶ್ರೀ ಭಾರತೀಕೃಷ್ಣ ತೀರ್ಥ ಜಿ ಮಹಾರಾಜರು ಆ ಪುಸ್ತಕವನ್ನು ಬರೆದಿದ್ದರು. ಮತ್ತು ಅದರಲ್ಲಿ ಅವರು 16 ಸೂತ್ರಗಳನ್ನು ನೀಡಿದ್ದರು. ಇದರಲ್ಲಿ ಗಣಿತವು ತುಂಬಾ ಸರಳ ಮತ್ತು ವೇಗವಾಗಿರುತ್ತದೆ. ಅದನ್ನು ಓದಿದಾಗ ನನಗೆ ಬಹಳ ಪ್ರೇರಣೆ ದೊರೆಯಿತು ಮತ್ತು ನಂತರ ಗಣಿತದಲ್ಲಿ ನನ್ನ ಆಸಕ್ತಿಯು ಜಾಗೃತವಾಯಿತು. ಭಾರತದ ಕೊಡುಗೆಯಾದ, ನಮ್ಮ ಪರಂಪರೆಯಾಗಿರುವ ಈ ವಿಷಯವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಅಂದಿನಿಂದ ನಾನು ವೈದಿಕ ಗಣಿತವನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದೇನೆ. ಏಕೆಂದರೆ ಗಣಿತದ ಭಯ ಎಲ್ಲರನ್ನೂ ಕಾಡುತ್ತದೆ. ಮತ್ತು ವೈದಿಕ ಗಣಿತಕ್ಕಿಂತ ಸರಳವಾದದ್ದು ಮತ್ತಿನ್ನೇನಿದೆ?
ಮೋದಿ ಜೀ - ಗೌರವ್ ಜೀ ನೀವು ಎಷ್ಟು ವರ್ಷಗಳಿಂದ ಇದರಲ್ಲಿ ಕೆಲಸ ಮಾಡುತ್ತಿದ್ದೀರಿ?
ಗೌರವ್ - ನನಗೆ ಇಂದಿಗೆ ಸುಮಾರು 20 ವರ್ಷಗಳಾದವು ಸರ್! ನಾನು ಇದರಲ್ಲಿಯೇ ತೊಡಗಿಸಿಕೊಂಡಿದ್ದೇನೆ.
ಮೋದಿ ಜೀ - ಈ ಬಗ್ಗೆ ಜಾಗೃತಿಗಾಗಿ ಏನು ಮಾಡುತ್ತಿರಿ, ಯಾವ ಪ್ರಯೋಗಗಳನ್ನು ಮಾಡುತ್ತೀರಿ, ಜನರ ಬಳಿ ಹೇಗೆ ಹೋಗುತ್ತೀರಿ?
ಗೌರವ್ - ನಾವು ಶಾಲೆಗಳಿಗೆ ಹೋಗುತ್ತೇವೆ, ನಾವು ಆನ್ಲೈನ್ ಶಿಕ್ಷಣವನ್ನು ನೀಡುತ್ತೇವೆ. ನಮ್ಮ ಸಂಸ್ಥೆಯ ಹೆಸರು ವೇದಿಕ್ ಮ್ಯಾಥ್ಸ್ ಫೋರಮ್ ಇಂಡಿಯಾ. ಈ ಸಂಸ್ಥೆಯ ಅಡಿಯಲ್ಲಿ ಇಂಟರ್ನೆಟ್ ಮೂಲಕ ದಿನದ 24 ಗಂಟೆಯೂ ವೈದಿಕ ಗಣಿತವನ್ನು ಕಲಿಸುತ್ತೇವೆ ಸರ್!
ಮೋದಿ ಜೀ - ಗೌರವ್ ಜೀ, ನಿಮಗೆ ತಿಳಿದಿರಬಹುದು, ನಾನು ಯಾವಾಗಲೂ ಮಕ್ಕಳೊಂದಿಗೆ ಮಾತನಾಡಲು ಇಷ್ಟಪಡುತ್ತೇನೆ ಮತ್ತು ನಾನು ಅವಕಾಶಗಳಿಗಾಗಿ ಕಾಯುತ್ತಿರುತ್ತೇನೆ. ಮತ್ತು ಎಕ್ಸಾಂ ವಾರಿಯರ್ ಮೂಲಕ, ನಾನು ಅದನ್ನು ಒಂದು ರೀತಿಯಲ್ಲಿ ಸಾಂಸ್ಥಿಕಗೊಳಿಸಿದ್ದೇನೆ ಮತ್ತು ನಾನು ಮಕ್ಕಳೊಂದಿಗೆ ಮಾತನಾಡುವಾಗ ನನಗೆ ತಿಳಿದದ್ದು, ಅವರು ಗಣಿತದ ಹೆಸರು ಕೇಳಿದರೆ ಸಾಕು ಓಡಿಹೋಗುತ್ತಾರೆ ಮತ್ತು ಎಲ್ಲೆಡೆ ಹರಡಿರುವ ಈ ಭಯವನ್ನು ಹೋಗಲಾಡಿಸಬೇಕು ಎನ್ನುವುದೇ ನನ್ನ ಪ್ರಯತ್ನವಾಗಿದೆ. ಈ ಭಯವನ್ನು ಹೋಗಲಾಡಿಸಬೇಕು. ಸಂಪ್ರದಾಯದಿಂದ ಬಂದ ಸಣ್ಣ ತಂತ್ರಗಳಿಂದ. ಇದು ಗಣಿತದ ವಿಷಯದಲ್ಲಿ ಭಾರತಕ್ಕೆ ಹೊಸದೇನಲ್ಲ.. ಬಹುಶಃ ಪ್ರಪಂಚದ ವಿವಿಧ ಪ್ರಾಚೀನ ಸಂಪ್ರದಾಯಗಳಲ್ಲಿ ಭಾರತ ಗಣಿತದ ಸಂಪ್ರದಾಯವನ್ನು ಹೊಂದಿದೆ, ಆದ್ದರಿಂದ ಪರೀಕ್ಷಾ ಯೋಧರು ಭಯವನ್ನು ದೂಡಬೇಕೆಂದರೆ ನೀವು ಅವರಿಗೆ ಏನು ಹೇಳಬಯಸುತ್ತೀರಿ?
ಗೌರವ್ - ಸರ್, ಇದು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿದೆ, ಏಕೆಂದರೆ, ಪರೀಕ್ಷೆಯ ಕಾಲ್ಪನಿಕ ಭಯವು ಪ್ರತಿ ಮನೆಯಲ್ಲೂ ಬಂದು ಬಿಟ್ಟಿದೆ. ಪರೀಕ್ಷೆಗಾಗಿ ಮಕ್ಕಳು ಟ್ಯೂಷನ್ ತೆಗೆದುಕೊಳ್ಳುತ್ತಾರೆ, ಪೋಷಕರು ಆತಂಕಗೊಂಡಿರುತ್ತಾರೆ. ಶಿಕ್ಷಕರೂ ಕೂಡ ಆತಂಕಗೊಂಡಿರುತ್ತಾರೆ. ಆದರೆ ವೈದಿಕ ಗಣಿತದಿಂದ ಇದೆಲ್ಲವೂ ಛೂಮಂತ್ರವಾಗುತ್ತದೆ. ಈ ಸಾಮಾನ್ಯ ಗಣಿತಕ್ಕಿಂತ ವೈದಿಕ ಗಣಿತವು ಶೇಕಡ ಸಾವಿರದೈದುನೂರು ಪಟ್ಟು ವೇಗವಾಗಿದೆ ಮತ್ತು ಇದು ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ ಹಾಗೂ ಬುದ್ಧಿಯೂ ವೇಗವಾಗಿ ಓಡುತ್ತದೆ. ನಾವು ವೈದಿಕ ಗಣಿತದೊಂದಿಗೆ ಯೋಗವನ್ನೂ ಪರಿಚಯಿಸಿದ್ದೇವೆ. ಇದರಿಂದ ಮಕ್ಕಳು ಕಣ್ಣು ಮುಚ್ಚಿಕೊಂಡು ಕೂಡ ವೈದಿಕ ಗಣಿತದ ವಿಧಾನದಿಂದ ಲೆಕ್ಕಗಳನ್ನು ಮಾಡಬಹುದು.
ಮೋದಿ ಜಿ - ಧ್ಯಾನದ ಸಂಪ್ರದಾಯದಲ್ಲಿಯೂ ಸಹ, ಈ ರೀತಿಯಲ್ಲಿ ಗಣಿತವನ್ನು ಮಾಡುವುದು, ಇದು ಕೂಡ ಧ್ಯಾನದ ಒಂದು ಪ್ರಾಥಮಿಕ ಕೋರ್ಸ್ ಆಗಿರುತ್ತದೆ.
ಗೌರವ್ - ಹೌದು ಸರ್!
ಮೋದಿ ಜೀ - ಗೌರವ್ ಜೀ, ನನಗೆ ಬಹಳ ಸಂತೋಷವಾಯಿತು. ನೀವು ಮಿಷನ್ ಮೋಡ್ನಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೀರಿ. ಮತ್ತು ವಿಶೇಷವಾಗಿ ನಿಮ್ಮ ತಾಯಿಯವರು ಒಬ್ಬ ಉತ್ತಮ ಶಿಕ್ಷಕಿಯಂತೆ ನಿಮ್ಮನ್ನು ಈ ಮಾರ್ಗದಲ್ಲಿ ಕರೆದೊಯ್ದಿದ್ದಾರೆ. ಇಂದು ನೀವು ಲಕ್ಷಾಂತರ ಮಕ್ಕಳನ್ನು ಆ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದೀರಿ. ನಿಮಗೆ ನನ್ನ ಶುಭ ಹಾರೈಕೆಗಳು.
ಗೌರವ್ - ಧನ್ಯವಾದಗಳು ಸರ್! ನಾನು ನಿಮಗೆ ಆಭಾರಿಯಾಗಿದ್ದೇನೆ ಸರ್! ವೈದಿಕ ಗಣಿತಕ್ಕೆ ಪ್ರಾಮುಖ್ಯವನ್ನು ನೀಡಿ, ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ ಸರ್! ಆದ್ದರಿಂದ ನಾವು ತುಂಬಾ ಕೃತಜ್ಞರಾಗಿರುತ್ತೇವೆ.
ಮೋದಿಜಿ - ತುಂಬಾ ಧನ್ಯವಾದಗಳು. ನಮಸ್ಕಾರ |
ಗೌರವ್ - ನಮಸ್ತೆ ಸರ್.
ಸ್ನೇಹಿತರೇ, ಗೌರವ್ ರವರು ಬಹಳ ಚೆನ್ನಾಗಿ ವಿವರಿಸಿದರು. ವೈದಿಕ ಗಣಿತವು, ಗಣಿತವನ್ನು ಹೇಗೆ ಕ್ಲಿಷ್ಟದಿಂದ ಇಷ್ಟ ಪಡುವಂತೆ ಮಾಡುತ್ತದೆ ಎಂಬುದನ್ನು. ಇಷ್ಟೇ ಅಲ್ಲ, ನೀವು ವೈದಿಕ ಗಣಿತದ ಮೂಲಕ ದೊಡ್ಡ ವೈಜ್ಞಾನಿಕ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ವೈದಿಕ ಗಣಿತವನ್ನು ಕಲಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ, ಅವರ ಮೆದುಳಿನ ವಿಶ್ಲೇಷಣಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೆ ಗಣಿತದ ಬಗ್ಗೆ ಕೆಲವು ಮಕ್ಕಳಲ್ಲಿ ಏನೇ ಚಿಕ್ಕ ಭಯವಿದ್ದರೂ, ಆ ಭಯವೂ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನ್ ಕಿ ಬಾತ್' ನಲ್ಲಿ, ಮ್ಯೂಸಿಯಂನಿಂದ ಹಿಡಿದು ಗಣಿತದವರೆಗೆ ಅನೇಕ ಮಾಹಿತಿಯುಕ್ತ ವಿಷಯಗಳನ್ನು ಚರ್ಚಿಸಲಾಗಿದೆ. ನಿಮ್ಮ ಸಲಹೆಗಳಿಂದಾಗಿ ಈ ಎಲ್ಲಾ ವಿಷಯಗಳು 'ಮನ್ ಕಿ ಬಾತ್' ನ ಭಾಗವಾಗುತ್ತವೆ. ಇದೇ ರೀತಿ, ನಿಮ್ಮ ಸಲಹೆಗಳನ್ನು ಮುಂದೆಯೂ ನನಗೆ ನಮೋ ಆಪ್ ಮತ್ತು MyGov ಮೂಲಕ ಕಳುಹಿಸುತ್ತಿರಿ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಈದ್ ಹಬ್ಬ ಬರಲಿದೆ. ಮೇ 3 ರಂದು ಅಕ್ಷಯ ತೃತೀಯ ಮತ್ತು ಭಗವಾನ್ ಪರಶುರಾಮರ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ. ಕೆಲವು ದಿನಗಳ ನಂತರದಲ್ಲೇ ವೈಶಾಖ ಬುದ್ಧ ಪೂರ್ಣಿಮೆಯ ಹಬ್ಬವೂ ಬರುತ್ತದೆ.
ಈ ಎಲ್ಲಾ ಹಬ್ಬಗಳು ಸಂಯಮ, ಪವಿತ್ರತೆ, ದಾನ ಮತ್ತು ಸಾಮರಸ್ಯದ ಹಬ್ಬಗಳಾಗಿವೆ. ನಿಮ್ಮೆಲ್ಲರಿಗೂ ಮುಂಚಿತವಾಗಿ ಈ ಎಲ್ಲ ಹಬ್ಬಗಳಿಗೆ ಶುಭಾಶಯಗಳು. ಈ ಹಬ್ಬಗಳನ್ನು ಬಹಳ ಸಂತೋಷದಿಂದ ಮತ್ತು ಸಾಮರಸ್ಯದಿಂದ ಆಚರಿಸಿ. ಇದೆಲ್ಲದರ ನಡುವೆಯೂ ನೀವು ಕೊರೊನಾ ಬಗ್ಗೆ ಎಚ್ಚರದಿಂದಿರಬೇಕು. ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ತಡೆಗಟ್ಟುವಿಕೆಗೆ ಅಗತ್ಯವಾದ ಕ್ರಮಗಳೆಲ್ಲವನ್ನೂ ನೀವು ಪಾಲಿಸುತ್ತಿರಿ. ಮುಂದಿನ ಬಾರಿ 'ಮನ್ ಕಿ ಬಾತ್' ನಲ್ಲಿ ನಾವು ಮತ್ತೊಮ್ಮೆ ಭೇಟಿಯಾಗೋಣ ಹಾಗೂ ನೀವು ಕಳುಹಿಸಿದ ಇನ್ನಷ್ಟು ಹೊಸ ವಿಷಯಗಳ ಬಗ್ಗೆ ಚರ್ಚಿಸೋಣ - ಅಲ್ಲಿಯವರೆಗೆ ವಿದಾಯ ಹೇಳೋಣ. ಬಹಳ ಬಹಳ ಧನ್ಯವಾದಗಳು.
ನನ್ನ ಪ್ರಿಯ ದೇಶಬಾಂಧವರೆ, ಕಳೆದ ವಾರ ನಾವು ಮಾಡಿದ ಸಾಧನೆ ನಮ್ಮನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಭಾರತ ಕಳೆದ ವಾರ 400 ಶತಕೋಟಿ ಡಾಲರ್ ಅಂದರೆ 30 ಲಕ್ಷಕೋಟಿ ರೂಪಾಯಿಗಳ ರಫ್ತಿನ ಗುರಿಯನ್ನು ಸಾಧಿಸಿದೆ ಎಂದು ನೀವು ಕೇಳಿರಬಹುದು. ಮೊದಲ ಬಾರಿಗೆ ಕೇಳಿದಾಗ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಷಯ ಅನ್ನಿಸಬಹುದು. ಆದರೆ ಇದು ಅರ್ಥವ್ಯವಸ್ಥೆಗೂ ಮೀರಿ ಭಾರತದ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಒಂದು ಕಾಲದಲ್ಲಿ ಭಾರತದ ರಫ್ತಿನ ಅಂಕಿ ಸಂಖ್ಯೆ ಕೆಲವೊಮ್ಮೆ 100 ಶತಕೋಟಿ ಇನ್ನು ಕೆಲವೊಮ್ಮೆ 150 ಶತಕೋಟಿ 200 ಶತಕೋಟಿವರೆಗೂ ತಲುಪುತ್ತಿತ್ತು. ಈಗ ಭಾರತ 400 ಶತಕೋಟಿ ಡಾಲರ್ ತಲುಪಿದೆ. ಇದರರ್ಥ ವಿಶ್ವಾದ್ಯಂತ ಭಾರತದಲ್ಲಿ ತಯಾರಿಸಲಾದ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತೊಂದು ಅರ್ಥ ಸರಬರಾಜು ಸರಪಳಿ ದಿನೇ ದಿನೇ ಸಶಕ್ತಗೊಳ್ಳುತ್ತಿದೆ. ಇದರ ಹಿಂದೆ ಒಂದು ಪ್ರಮುಖ ಸಂದೇಶವೂ ನೀಡುತ್ತಿದೆ. ಕನಸುಗಳಿಗಿಂತ ಹಿರಿದಾದ ಸಂಕಲ್ಪವಿದ್ದಾಗ ದೇಶ ಬೃಹತ್ ಹೆಜ್ಜೆಯನ್ನು ಇಡುತ್ತದೆ. ಸಂಕಲ್ಪಗಳ ಪೂರೈಕೆಗೆ ಹಗಲಿರುಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಆ ಸಂಕಲ್ಪಗಳನ್ನು ಸಾಧಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲೂ ಹೀಗೆಯೇ ಆಗುವುದನ್ನು ನೀವು ಕಾಣಬಹುದು. ಯಾರದೇ ಸಂಕಲ್ಪ, ಪ್ರಯತ್ನಗಳು ಅವರ ಕನಸುಗಳನ್ನು ಮೀರಿ ಬೆಳೆಯುತ್ತವೆಯೋ ಆಗ ಸಫಲತೆ ಆತನ ಬಳಿ ತಾನಾಗೇ ಅರಸಿ ಬರುತ್ತದೆ.
ಸ್ನೇಹಿತರೆ, ದೇಶದ ಮೂಲೆಮೂಲೆಗಳಿಂದ ಹೊಸ ಹೊಸ ಉತ್ಪನ್ನಗಳು ವಿದೇಶಕ್ಕೆ ತೆರಳುವಾಗ ಅಸ್ಸಾಂನ ಹೈಲಾಕಾಂಡಿಯ ಚರ್ಮದ ಉತ್ಪನ್ನಗಳಾಗಿರಲಿ, ಉಸ್ಮಾನಾಬಾದ್ ನ ಕೈಮಗ್ಗ ಉತ್ಪನ್ನಗಳೇ ಆಗಿರಲಿ, ಬೀಜಾಪುರದ ಹಣ್ಣು ತರಕಾರಿಗಳಾಗಲಿ ಅಥವಾ ಚಂದೌಲಿಯ ಕಪ್ಪು ಅಕ್ಕಿಯಾಗಲಿ ಎಲ್ಲದರ ರಫ್ತು ಹೆಚ್ಚುತ್ತಿದೆ. ಈಗ ನಿಮಗೆ ಲದ್ದಾಖ್ ನ ವಿಶ್ವ ಪ್ರಸಿದ್ಧ ಎಪ್ರಿಕಾಟ್ (ಅಕ್ರೋಟ್) ದುಬೈನಲ್ಲೂ ಲಭ್ಯ. ಸೌದಿ ಅರೇಬಿಯಾದಲ್ಲಿ ತಮಿಳುನಾಡಿನಿಂದ ರಫ್ತಾದ ಬಾಳೆಹಣ್ಣು ಸಿಗುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಹೊಸ ಹೊಸ ಉತ್ಪನ್ನಗಳನ್ನು ಹೊಸ ಹೊಸ ದೇಶಗಳಿಗೆ ರಫ್ತು ಮಾಡುತ್ತಿರುವುದೇ ಮಹತ್ವದ ಸಂಗತಿ. ಹಿಮಾಚಲ್, ಉತ್ತರಾಖಂಡ್ ನಲ್ಲಿ ಬೆಳೆದ ಸಿರಿಧಾನ್ಯದ ಗುಜರಾತ್ ನಿಂದ ಮೊದಲ ಕಂತಿನ ಸರಕನ್ನು ಡೆನ್ಮಾರ್ಕ್ ಗೆ ರವಾನಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣಾ ಮತ್ತು ಚಿತ್ತೂರ ಜಿಲ್ಲೆಯ ಬೈಗನಪಲ್ಲಿ ಮತ್ತು ಸುವರ್ಣ ರೇಖಾ ಮಾವನ್ನು ದಕ್ಷಿಣ ಕೋರಿಯಾಗೆ ರಫ್ತು ಮಾಡಲಾಗಿದೆ. ತ್ರಿಪುರಾದಿಂದ ತಾಜಾ ಹಲಸನ್ನು ಲಂಡನ್ ಗೆ ವಾಯು ಮಾರ್ಗವಾಗಿ ರಫ್ತು ಮಾಡಲಾಗಿದೆ. ಅಲ್ಲದೆ ಪ್ರಥಮ ಬಾರಿಗೆ ನಾಗಾಲ್ಯಾಂಡ್ ನ ರಾಜಾ ಮೆಣಸಿನಕಾಯಿಯನ್ನು ಲಂಡನ್ ಗೆ ಕಳುಹಿಸಲಾಗಿದೆ. ಇದೇ ರೀತಿ ಭಾಲಿಯಾ ಗೋಧಿಯ ಪ್ರಥಮ ಕಂತನ್ನು ಗುಜರಾತ್ ನಿಂದ ಕೀನ್ಯಾ ಮತ್ತು ಶ್ರೀಲಂಕಾಗೆ ರಫ್ತು ಮಾಡಲಾಗಿದೆ. ಅಂದರೆ ನೀವೀಗ ಬೇರೆ ದೇಶಗಳಿಗೆ ಹೋದಾಗ ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಹಿಂದಿಗಿಂತ ಅತಿ ಹೆಚ್ಚು ಕಾಣಸಿಗುತ್ತವೆ.
ಸ್ನೇಹಿತರೆ, ಈ ಪಟ್ಟಿ ಬಹಳ ದೊಡ್ಡದಾಗಿದೆ. ಇದು ಎಷ್ಟು ದೊಡ್ಡದಾಗಿದೆಯೋ ಮೇಕ್ ಇನ್ ಇಂಡಿಯಾ ಶಕ್ತಿಯೂ ಅಷ್ಟೇ ಪ್ರಬಲವಾಗಿದೆ. ಬೃಹತ್ ಭಾರತದ ಸಾಮರ್ಥ್ಯವೂ ಅಷ್ಟೇ ಬಲವಾಗಿದೆ. ಅಲ್ಲದೆ ಸಾಮರ್ಥ್ಯದ ಆಧಾರ – ನಮ್ಮ ಕೃಷಿಕರು, ನಮ್ಮ ಕುಶಲಕರ್ಮಿಗಳು, ನಮ್ಮ ನೇಕಾರರು, ನಮ್ಮ ಇಂಜಿನಿಯರುಗಳು, ನಮ್ಮ ಉದ್ಯಮಿಗಳು, ನಮ್ಮ ಎಂ ಎಸ್ ಎಂ ಇ ಕ್ಷೇತ್ರ ಮತ್ತು ಅನೇಕ ಭಿನ್ನ ಭಿನ್ನ ವೃತ್ತಿಗಳಲ್ಲಿ ತೊಡಗಿರುವ ಸಾವಿರಾರು ಜನರು. ಇವರೆಲ್ಲರೂ ನಿಜವಾದ ಶಕ್ತಿಯಾಗಿದ್ದಾರೆ. ಇವರ ಪರಿಶ್ರಮದಿಂದಲೇ 400 ಶತಕೋಟಿ ಡಾಲರ್ ರಫ್ತಿನ ಗುರಿಯನ್ನು ಸಾಧಿಸಲು ಸಾಧ್ಯವಾಯಿತು. ಅಲ್ಲದೆ ಭಾರತದ ಜನತೆಯ ಈ ಸಾಮರ್ಥ್ಯ ವಿಶ್ವದ ಮೂಲೆ ಮೂಲೆಗಳಿಗೆ ಮತ್ತು ಹೊಸ ಮಾರುಕಟ್ಟೆಗಳಿಗೆ ತಲುಪುತ್ತಿದೆ ಎಂಬುದು ನನಗೆ ಸಂತೋಷವನ್ನು ನೀಡುತ್ತದೆ. ಭಾರತದ ಪ್ರತಿಯೊಬ್ಬ ನಿವಾಸಿ ಸ್ಥಳೀಯ ವಸ್ತುಗಳಿಗಾಗಿ ಧ್ವನಿಯಾಗುತ್ತಾನೆಯೋ ಆಗ ಸ್ಥಳೀಯ ವಸ್ತುಗಳು ಜಾಗತಿಕ ಮಟ್ಟ ತಲುಪುವುದು ತಡವಾಗುವುದಿಲ್ಲ. ಬನ್ನಿ ಲೋಕಲ್ ಅನ್ನು ಗ್ಲೋಬಲ್ ಗೊಳಿಸೋಣ ಮತ್ತು ನಮ್ಮ ಉತ್ಪನ್ನಗಳ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸೋಣ.
ಸ್ನೇಹಿತರೆ, ‘ನಮ್ಮ ಮನದ ಮಾತಿನ ಶ್ರೋತೃಗಳಿಗೆ ಸ್ಥಳೀಯ ಮಟ್ಟದಲ್ಲಿ ನಮ್ಮ ಲಘು ಉದ್ಯಮಿಗಳ ಸಫಲತೆ ನಮಗೆ ಹೆಮ್ಮೆ ತರಲಿದೆ ಎಂದು ಕೇಳಿ ಸಂತೋಷ ಎನಿಸುತ್ತದೆ’ ಏಕೆಂದರೆ ಇಂದು ನಮ್ಮ ಲಘು ಉದ್ಯಮಿಗಳು ಸರ್ಕಾರದ ಇ-ಮಾರುಕಟ್ಟೆ ಅಂದರೆ ಜಿ ಇ ಎಂ ಮೂಲಕ ದೊಡ್ಡ ಮಟ್ಟದ ಪಾಲುದಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಮೂಲಕ ಬಹಳ ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಜೆಮ್ ಪೋರ್ಟಲ್ ಮೂಲಕ ಸರ್ಕಾರ 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸರಕನ್ನು ಖರೀದಿಸಿದೆ. ದೇಶದ ಮೂಲೆಮೂಲೆಗಳಿಂದ ಸುಮಾರು 1 ಲಕ್ಷ 25 ಸಾವಿರ ಕಿರು ಉದ್ಯಮಿಗಳು ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಿದ್ದಾರೆ. ದೊಡ್ಡ ಕಂಪನಿಗಳು ಮಾತ್ರ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದಾದಂತಹ ಒಂದು ಕಾಲವಿತ್ತು. ಆದರೆ ಈಗ ದೇಶ ಬದಲಾಗುತ್ತಿದೆ. ಹಳೆಯ ವ್ಯವಸ್ಥೆಯೂ ಬದಲಾಗಿದೆ. ಈಗ ಸಣ್ಣ ಪುಟ್ಟ ವ್ಯಾಪಾರಿಗಳು ಜೆಮ್ ಪೋರ್ಟಲ್ ಮೂಲಕ ಸರ್ಕಾರಕ್ಕೆ ತಮ್ಮ ಸರಕನ್ನು ಮಾರಾಟ ಮಾಡಬಹುದು – ಇದೇ ನವಭಾರತ. ಇದು ಕೇವಲ ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಮಾಡುವುದಿಲ್ಲ ಹೊರತಾಗಿ ಹಿಂದೆ ಯಾರೂ ತಲುಪದಂತಹ ಗುರಿ ತಲುಪುವಂತೆ ಪ್ರೋತ್ಸಾಹಿಸುತ್ತದೆ. ಇದೇ ಸಾಹಸದ ಹಿನ್ನಲೆಯಲ್ಲಿ ನಾವೆಲ್ಲ ಭಾರತೀಯರೂ ಒಗ್ಗೂಡಿ ಸ್ವಾವಲಂಬಿ ಭಾರತದ ಕನಸನ್ನು ಖಂಡಿತ ಪೂರ್ತಿಗೊಳಿಸುತ್ತೇವೆ.
ನನ್ನ ಪ್ರಿಯ ದೇಶಬಾಂಧವರೆ, ಇತ್ತೀಚೆಗೆ ಜರುಗಿದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀವು ಬಾಬಾ ಶಿವಾನಂದ ಅವರನ್ನು ಖಂಡಿತ ನೋಡಿರಬಹುದು. 126 ವರ್ಷ ವಯೋಮಾನದ ಹಿರಿಯರ ಹುಮ್ಮಸ್ಸನ್ನು ಕಂಡು ನನ್ನಂತೆ ಎಲ್ಲರೂ ಆಶ್ಚರ್ಯಚಕಿತರಾಗಿರಬಹುದು. ಕಣ್ಣು ಮಿಟುಕಿಸುವಷ್ಟರಲ್ಲಿ ಅವರು ನಂದಿ ಮುದ್ರೆಯಲ್ಲಿ ನಮಸ್ಕರಿಸಿದ್ದನ್ನು ನಾನು ನೋಡಿದೆ. ನಾನು ಕೂಡಾ ತಲೆ ಬಾಗಿ ಬಾಬಾ ಶಿವಾನಂದರಿಗೆ ನಮಸ್ಕರಿಸಿದೆ. 126 ರ ವಯಸ್ಸು ಮತ್ತು ಬಾಬಾ ಶಿವಾನಂದರ ದೇಹದಾರ್ಢ್ಯತೆ ಇಂದು ದೇಶದೆಲ್ಲೆಡೆ ಚರ್ಚೆಯ ವಿಷಯವಾಗಿವೆ. ನಾನು ಸಾಮಾಜಿಕ ಜಾಲತಾಣದಲ್ಲಿ ಹಲವರ ವಿಡಿಯೋಗಳನ್ನು ನೋಡಿದೆ ಬಾಬಾ ಶಿವಾನಂದರು ತಮ್ಮ ಕಾಲು ಭಾಗದ ವಯೋಮಾನದವರಿಗಿಂತ ಸುದೃಢರಾಗಿದ್ದಾರೆ. ಬಾಬಾ ಶಿವಾನಂದರ ಜೀವನ ನಮಗೆಲ್ಲರಿಗೂ ಖಂಡಿತ ಪ್ರೇರಣಾದಾಯಕವಾಗಿದೆ. ಅವರ ದೀರ್ಘಾಯುಷ್ಯಕ್ಕೆ ನಾನು ಪ್ರಾರ್ಥಿಸುತ್ತೇನೆ. ಅವರಿಗೆ ಯೋಗದ ಬಗ್ಗೆ ವಿಶೇಷ ಒಲವಿದೆ ಮತ್ತು ಅವರು ಬಹಳ ಆರೋಗ್ಯವಂತ ಜೀವನ ನಡೆಸುತ್ತಾರೆ. ಜೀವೇಮ ಶರದಃ ಶತಂ
ನಮ್ಮ ಸಂಸ್ಕೃತಿಯಲ್ಲಿ ಎಲ್ಲರಿಗೆ ನೂರು ವರುಷಗಳ ಆರೋಗ್ಯಯುತ ಜೀವನದ ಹಾರೈಕೆಯನ್ನು ಮಾಡಲಾಗುತ್ತದೆ. ನಾವು ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುತ್ತೇವೆ. ಇಂದು ಸಂಪೂರ್ಣ ವಿಶ್ವದಲ್ಲಿ ಆರೋಗ್ಯದ ಕುರಿತು – ಅದು ಯೋಗವಾಗಿರಲಿ ಅಥವಾ ಆಯುರ್ವೇದವಾಗಿರಲಿ ಇವುಗಳೆಡೆ ಒಲವು ಹೆಚ್ಚುತ್ತಿದೆ. ಕಳೆದ ವಾರ ಕತಾರ್ ನಲ್ಲಿ ಒಂದು ಯೋಗಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂಬುದನ್ನು ನೀವು ನೋಡಿರಬಹುದು. ಇದರಲ್ಲಿ 114 ದೇಶದ ನಾಗರಿಕರು ಪಾಲ್ಗೊಂಡು ಹೊಸ ವಿಶ್ವದಾಖಲೆಯನ್ನು ಬರೆದರು. ಇದೇ ರೀತಿ ಆಯುಷ್ ಉದ್ಯಮದ ಮಾರುಕಟ್ಟೆಯೂ ನಿರಂತರವಾಗಿ ವಿಸ್ತಾರಗೊಳ್ಳುತ್ತಿದೆ. 6 ವರ್ಷಗಳ ಹಿಂದೆ ಆಯುರ್ವೇದೀಯ ಔಷಧಿಗಳ ಮಾರುಕಟ್ಟೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ಇಂದು ಆಯುಷ್ ಉತ್ಪಾದನಾ ಉದ್ಯಮ ಸುಮಾರು 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳಷ್ಟಾಗಿದೆ. ಅಂದರೆ ಈ ಕ್ಷೇತ್ರದಲ್ಲಿ ಅವಕಾಶಗಳು ನಿರಂತರವಾಗಿ ಹೆಚ್ಚುತ್ತಿವೆ. ಸ್ಟಾರ್ಟ್ ಅಪ್ ಲೋಕದಲ್ಲೂ ಆಯುಷ್ ಆಕರ್ಷಣೆಯ ಕೇಂದ್ರವಾಗುತ್ತಿದೆ.
ಸ್ನೇಹಿತರೆ, ಆರೋಗ್ಯ ಕ್ಷೇತ್ರದ ಇನ್ನುಳಿದ ಸ್ಟಾರ್ಟ್ ಅಪ್ ಗಳ ಬಗ್ಗೆ ನಾನು ಹಿಂದೆಯೇ ಮಾತನಾಡಿದ್ದೇನೆ. ಆದರೆ ಈ ಬಾರಿ ಆಯುಷ್ ಸ್ಟಾರ್ಟ್ ಅಪ್ ಬಗ್ಗೆ ವಿಶೇಷವಾಗಿ ಮಾತನಾಡಲಿದ್ದೇನೆ. ಕಪಿವಾ ಎಂಬ ಒಂದು ಸ್ಟಾರ್ಟ್ ಅಪ್ ಇದೆ. ಇದರ ಹೆಸರಲ್ಲೇ ಇದರರ್ಥ ಅಡಗಿದೆ. ಇದರಲ್ಲಿ ಕ ಅಂದರೆ – ಕಫ, ಪಿ ಅಂದರೆ – ಪಿತ್ತ ಮತ್ತು ವಾ ಅಂದರೆ –ವಾತಾ. ಈ ಸ್ಟಾರ್ಟ್ ಅಪ್ ನಮ್ಮ ಮೂಲ ಪರಂಪರೆ ಅನುಸಾರ ಆರೋಗ್ಯಯುತ ಆಹಾರ ಸೇವನೆಯನ್ನು ಆಧರಿಸಿದೆ. ಮತ್ತೊಂದು ಸ್ಟಾರ್ಟ್ ಅಪ್ – ನಿರೋಗ್ ಸ್ಟ್ರೀಟ್ ಕೂಡ ಇದೆ. ಆಯುರ್ವೇದ ಹೆಲ್ತ್ ಕೇರ್ ಇಕೊಸಿಸ್ಟಂನಲ್ಲಿ ಇದೊಂದು ವಿಶಿಷ್ಟ ಉಪಕ್ರಮವಾಗಿದೆ. ಇದರ ತಂತ್ರಜ್ಞಾನ ಆಧಾರಿತ ವೇದಿಕೆ ವಿಶ್ವಾದ್ಯಂತದ ಆಯುರ್ವೇದ ತಜ್ಞರ ಸಂಪರ್ಕವನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. 50 ಸಾವಿರಕ್ಕೂ ಹೆಚ್ಚು ತಜ್ಞರು ಇದರೊಂದಿಗೆ ಕೈಜೋಡಿಸಿದ್ದಾರೆ. ಇದೇ ರೀತಿ ಆತ್ರೇಯ ಇನ್ನೊವೇಶನ್ಸ್ ಒಂದು ಆರೋಗ್ಯ ರಕ್ಷಣಾ ತಂತ್ರಜ್ಞಾನವಾಗಿದೆ. ಇದು ಸಮಗ್ರ ಸ್ವಾಸ್ಥ್ಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಕ್ಸೊರಿಯಲ್ ಕೇವಲ ಅಶ್ವಗಂಧದ ಉಪಯೋಗದ ಬಗ್ಗೆ ಅರಿವು ಮೂಡಿಸುವುದಲ್ಲದೆ ಅತ್ಯುತ್ತಮ ಗುಣಮಟ್ಟದ ಉತ್ಪಾದನಾ ಪ್ರಕ್ರಿಯೆಯಲ್ಲೂ ಬೃಹತ್ ಪ್ರಮಾಣದ ಹೂಡಿಕೆ ಮಾಡಿದೆ. ಕ್ಯೂರ್ ವೇದಾ ಎಂಬುದು ಗಿಡ ಮೂಲಿಕೆಗಳ ಆಧುನಿಕ ಸಂಶೋಧನೆ ಮತ್ತು ಪಾರಂಪರಿಕ ಜ್ಞಾನವನ್ನು ಮೇಳೈಸಿ ಸಮಗ್ರ ಜೀವನಕ್ಕಾಗಿ ಪೂರಕ ಆಹಾರವನ್ನು ಸಿದ್ಧಗೊಳಿಸಿದೆ.
ಸ್ನೇಹಿತರೆ, ಈಗ ನಾನು ಕೆಲವು ಹೆಸರುಗಳನ್ನು ಮಾತ್ರ ಹೆಸರಿಸಿದ್ದೇನೆ, ಈ ಪಟ್ಟಿ ತುಂಬಾ ದೊಡ್ಡದಾಗಿದೆ. ಇದು ಭಾರತದ ಯುವ ಉದ್ಯಮಿಗಳು ಮತ್ತು ಭಾರತದಲ್ಲಿಯ ಸಂಭಾವ್ಯಗಳ ಪ್ರತೀಕವಾಗಿದೆ. ಆರೋಗ್ಯ ಕ್ಷೇತ್ರದ ಸ್ಟಾರ್ಟ್ ಅಪ್ ಗಳು ಅದಲ್ಲೂ ವಿಶೇಷವಾಗಿ ಆಯುಷ್ ಸ್ಟಾರ್ಟ್ ಅಪ್ ಗಳನ್ನು ಒಂದು ವಿಷಯದ ಕುರಿತು ನಾನು ಆಗ್ರಹಿಸುತ್ತೇನೆ. ನೀವು ಆನ್ ಲೈನ್ ನಲ್ಲಿ ಯಾವುದೇ ಪೋರ್ಟಲ್ ಆರಂಭಿಸಿದರೂ ಯಾವುದೇ ವಿಷಯವಸ್ತುವನ್ನು ಸೃಷ್ಟಿಸಿದರೂ ಅದು ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದ ಎಲ್ಲ ಭಾಷೆಗಳಲ್ಲು ಒದಗಿಸುವಂತೆ ಪ್ರಯತ್ನಿಸಿ. ವಿಶ್ವದಲ್ಲಿ ಇಂಗ್ಲೀಷ್ ನ್ನು ಅಷ್ಟಾಗಿ ಮಾತನಾಡದ ಅಥವಾ ಅರ್ಥಮಾಡಿಕೊಳ್ಳದ ಬಹಳಷ್ಟು ಇಂಥ ದೇಶಗಳಿವೆ. ಆ ರಾಷ್ಟ್ರಗಳನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಉತ್ಪನ್ನಗಳ ಕುರಿತಾದ ಪ್ರಚಾರ ಮತ್ತು ಪ್ರಸಾರ ಮಾಡಿ. ಭಾರತದ ಆಯುಷ್ ಸ್ಟಾರ್ಟ್ ಅಪ್ ಗಳು ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಬಹುಬೇಗ ವಿಶ್ವಾದ್ಯಂತ ಜನಪ್ರಿಯಗೊಳ್ಳಲಿವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ, ಆರೋಗ್ಯದ ನೇರ ಸಂಬಂಧ ಸ್ವಚ್ಛತೆಯೊಂದಿಗಿದೆ. ಮನದ ಮಾತಿನಲ್ಲಿ ನಾವು ಎಂದಿಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡವರು ಮಾಡಿದ ಪ್ರಯತ್ನಗಳ ಬಗ್ಗೆ ಖಂಡಿತ ಪ್ರಸ್ತಾಪಿಸುತ್ತೇವೆ. ಚಂದ್ರ ಕಿಶೋರ್ ಪಾಟೀಲ್ ಅವರು ಇಂಥ ಸ್ವಚ್ಛತಾ ಆಂದೋಲನಕಾರರಾಗಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್ ನಲ್ಲಿ ವಾಸವಾಗಿದ್ದಾರೆ. ಚಂದ್ರ ಕಿಶೋರ್ ಅವರು ಸ್ವಚ್ಛತೆ ಬಗ್ಗೆ ಬಹಳ ದೃಡವಾದ ಸಂಕಲ್ಪ ಹೊಂದಿದ್ದಾರೆ. ಅವರು ಗೋದಾವರಿ ನದಿಯ ದಡದಲ್ಲಿ ನಿಂತು ನಿರಂತರವಾಗಿ ಜನರು ನದಿಯಲ್ಲಿ ಕಸ ಕಡ್ಡಿ ಎಸೆಯದಂತೆ ಮನವರಿಕೆ ಮಾಡಿಕೊಡುತ್ತಾರೆ. ಯಾರೇ ಇಂಥ ಕೆಲಸ ಮಾಡುತ್ತಿದ್ದರೂ ತಡೆಯುತ್ತಾರೆ. ಈ ಕೆಲಸದಲ್ಲಿ ಚಂದ್ರ ಕಿಶೋರ್ ತಮ್ಮ ಸಾಕಷ್ಟು ಸಮಯವನ್ನು ವಿನಿಯೋಗಿಸುತ್ತಾರೆ. ಸಂಜೆವರೆಗೆ ಅವರ ಬಳಿ ಜನರು ನದಿಯಲ್ಲಿ ಎಸೆಯಲು ತಂದಿರುವಂತಹ ವಸ್ತುಗಳ ರಾಶಿಯೇ ಸಿದ್ಧವಾಗುತ್ತದೆ. ಚಂದ್ರ ಕಿಶೋರ್ ಅವರ ಈ ಪ್ರಯತ್ನ ಅರಿವು ಮೂಡಿಸುತ್ತದೆ ಮತ್ತು ಪ್ರೇರಣಾದಾಯಕವೂ ಆಗಿದೆ. ಇದೇ ರೀತಿ ಮತ್ತೊಬ್ಬ ಸ್ವಚ್ಛಾಗ್ರಹಿ ಇದ್ದಾರೆ. ಒಡಿಶಾದ ಪುರಿಯ ರಾಹುಲ್ ಮಹಾರಾಣಾ. ರಾಹುಲ್ ಪ್ರತಿ ಭಾನುವಾರ ಬೆಳಿಗ್ಗೆಯೇ ಪವಿತ್ರ ತೀರ್ಥ ಸ್ಥಳಕ್ಕೆ ತೆರಳುತ್ತಾರೆ ಮತ್ತು ಅಲ್ಲಿಯ ಪ್ಲಾಸ್ಟಿಕ್ ಕಸವನ್ನು ಆಯುತ್ತಾರೆ. ಈಗಾಗಲೇ ಅವರು ನೂರಾರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸವನ್ನು ಸ್ವಚ್ಛಗೊಳಿಸಿದ್ದಾರೆ. ಪುರಿಯ ರಾಹುಲ್ ಗಿರಲಿ ಅಥವಾ ನಾಸಿಕ್ ನ ಚಂದ್ರ ಕಿಶೋರ್ ಆಗಿರಲಿ ಇವರೆಲ್ಲ ನಮಗೆ ಸಾಕಷ್ಟು ಕಲಿಸುತ್ತಾರೆ. ನಾಗರಿಕರಾಗಿ ನಾವು ನಮ್ಮ ಕರ್ತವ್ಯಗಳನ್ನು ನಿಭಾಯಿಸೋಣ. ಅದು ಸ್ವಚ್ಛತೆಯಾಗಿರಲಿ, ಪೋಷಣೆಯಾಗಿರಲಿ, ಲಸಿಕೆ ಹಾಕುವುದಾಗಿರಲಿ, ಈ ಎಲ್ಲ ಪ್ರಯತ್ನಗಳಿಂದ ಆರೋಗ್ಯವಾಗಿರಲು ಅನುಕೂಲವಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೆ, ಬನ್ನಿ ಕೇರಳದ ಮುಪಟ್ಟಮ್ ಶ್ರೀ ನಾರಾಯಣನ್ ಅವರ ಬಗ್ಗೆ ಮಾತನಾಡೋಣ. ಅವರು ‘ಪಾಟ್ಸ್ ಫಾರ್ ಲೈಫ್’ ಎಂಬ ಯೋಜನೆಯೊಂದನ್ನು ಆರಂಭಿಸಿದ್ದಾರೆ. ನೀವು ಈ ಯೋಜನೆ ಬಗ್ಗೆ ತಿಳಿದರೆ ಎಂಥ ಅದ್ಭುತ ಕೆಲಸ ಎಂದುಕೊಳ್ಳುತ್ತೀರಿ
ಸಂಗಾತಿಗಳೇ, ಮುಪಟ್ಟಮ್ ಶ್ರೀ ನಾರಾಯಣನ್ ಅವರು, ಬೇಸಿಗೆಯ ಕಾರಣದಿಂದ ಪಶು-ಪಕ್ಷಿಗಳಿಗೆ ನೀರಿನ ಅಭಾವ ಉಂಟಾಗದಿರಲಿ ಎಂದು ಮಣ್ಣಿನ ಮಡಕೆ ವಿತರಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಪಶು-ಪಕ್ಷಿಗಳು ನೀರಿಗಾಗಿ ಎದುರಿಸುವ ತೊಂದರೆಯನ್ನು ನೋಡಿ ಅವರು ಸ್ವಯಂ ಸಮಸ್ಯೆಗೆ ಸಿಲುಕಿದಂತೆ ಚಿಂತಿತರಾಗುತ್ತಿದ್ದರು. ಬಳಿಕ, ಅವರು ತಾವೇ ಏಕೆ ಮಣ್ಣಿನಿಂದ ಮಾಡಿದ ಪಾತ್ರೆಯನ್ನು ವಿತರಿಸುವ ಕಾರ್ಯ ಶುರು ಮಾಡಬಾರದು ಎಂದು ಯೋಚಿಸಿದರು, ಆ ಮಡಕೆಗಳಲ್ಲಿ ಮತ್ತೊಬ್ಬರು ಕೇವಲ ನೀರು ತುಂಬಿಸುವ ಕೆಲಸ ಮಾಡಿದರೆ ಸಾಕು ಎಂದು ಯೋಚನೆ ಮಾಡಿದರು. ನಾರಾಯಣನ್ ಅವರಿಂದ ವಿತರಣೆಯಾದ ಮಣ್ಣಿನ ಮಡಕೆಗಳ ಸಂಖ್ಯೆ ಒಂದು ಲಕ್ಷದ ಗಡಿಯನ್ನು ದಾಟುತ್ತಿದೆ ಎಂದು ತಿಳಿದರೆ ನೀವು ಚಕಿತರಾಗುತ್ತೀರಿ. ಅಲ್ಲದೆ, ಅವರು ತಮ್ಮ ಅಭಿಯಾನದ ಅಂಗವಾಗಿ ಒಂದು ಲಕ್ಷದನೇ ಮಡಕೆಯನ್ನು ಗಾಂಧೀಜಿ ಅವರಿಂದ ಸ್ಥಾಪಿತವಾಗಿರುವ ಸಾಬರಮತಿ ಆಶ್ರಮಕ್ಕೆ ದಾನ ಮಾಡುತ್ತಿದ್ದಾರೆ. ಇಂದು ಬೇಸಿಗೆ ಕಾಲವು ಹೆಜ್ಜೆಯಿಟ್ಟಿದೆ, ಈ ಸಮಯದಲ್ಲಿ ನಾರಾಯಣನ್ ಅವರ ಈ ಕಾರ್ಯ ನಮಗೆಲ್ಲರಿಗೂ ಪ್ರೇರಣೆ ನೀಡುತ್ತದೆ ಹಾಗೂ ನಾವೂ ಈ ಬೇಸಿಗೆಯಲ್ಲಿ ನಮ್ಮ ಪಶು-ಪಕ್ಷಿ ಮಿತ್ರರಿಗಾಗಿ ನೀರಿನ ವ್ಯವಸ್ಥೆಯನ್ನು ಮಾಡೋಣ.
ಸ್ನೇಹಿತರೇ, ನಾವು ನಮ್ಮ ಸಂಕಲ್ಪಗಳನ್ನು ಪುನರ್ ಸ್ವೀಕರಿಸೋಣ ಎಂದು ನಾನು ನಮ್ಮ ``ಮನದ ಮಾತು' ಕೇಳುಗರಿಗೂ ಆಗ್ರಹಿಸುತ್ತೇನೆ. ನೀರಿನ ಒಂದೊಂದು ಹನಿಯನ್ನೂ ರಕ್ಷಿಸಲು ಏನೆಲ್ಲ ಮಾಡಲು ಸಾಧ್ಯವೋ ಅವುಗಳೆಲ್ಲವನ್ನೂ ನಾವು ಅಗತ್ಯವಾಗಿ ಮಾಡಬೇಕು. ಇದರ ಹೊರತಾಗಿ, ನೀರಿನ ಮರುಬಳಕೆಯ ಕಡೆಗೂ ನಾವು ಅಷ್ಟೇ ಆದ್ಯತೆ ನೀಡಬೇಕಾಗಿದೆ. ಮನೆಯಲ್ಲಿ ಬಳಕೆ ಮಾಡಿದ ನೀರನ್ನು ಹೂಕುಂಡಗಳಿಗೆ ಬಳಸಲು ಬರುತ್ತದೆ, ಕೈತೋಟಗಳಿಗೂ ಬಳಸಬಹುದು. ಒಟ್ಟಿನಲ್ಲಿ ನೀರನ್ನು ಅಗತ್ಯವಾಗಿ ಮತ್ತೊಂದು ಬಾರಿ ಬಳಕೆ ಮಾಡಬೇಕಾಗಿದೆ. ಚಿಕ್ಕದಾದ ಇಂಥ ಪ್ರಯತ್ನದಿಂದ ತಾವು ತಮ್ಮ ಮನೆಗಳಲ್ಲಿ ಒಂದು ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಬಲ್ಲಿರಿ. ರಹೀಂ ದಾಸ್ ಅವರು ಶತಮಾನಗಳ ಹಿಂದೆಯೇ ಕೆಲವು ಉದ್ದೇಶಗಳನ್ನು ಹೇಳಿ ನಡೆದಿದ್ದಾರೆ, ಅದೇನೆಂದರೆ, ``ರಹೀಮನ ನೀರನ್ನು ಉಳಿಸಿಕೊಳ್ಳಿ. ನೀರಿಲ್ಲದಿದ್ದರೆ ಎಲ್ಲವೂ ಶೂನ್ಯ' ಎಂದು ಹೇಳಿದ್ದಾರೆ. ಮತ್ತು ನೀರನ್ನು ಉಳಿತಾಯ ಮಾಡುವ ಈ ಕೆಲಸದಲ್ಲಿ ನನಗೆ ಮಕ್ಕಳಿಂದಲೂ ಬಹಳ ನಿರೀಕ್ಷೆಯಿದೆ. ಸ್ವಚ್ಛತೆಯನ್ನು ಹೇಗೆ ನಮ್ಮ ಮಕ್ಕಳು ಆಂದೋಲನವನ್ನಾಗಿ ರೂಪಿಸಿದರೋ, ಅದೇ ರೀತಿ ``ಜಲ ಯೋಧ'ರಾಗಿ ನೀರನ್ನು ಉಳಿಸುವ ಕಾರ್ಯದಲ್ಲಿ ಅವರು ಸಹಾಯ ಮಾಡಬಲ್ಲರು.
ಸಂಗಾತಿಗಳೇ, ನಮ್ಮ ದೇಶದಲ್ಲಿ ಜಲ ಸಂರಕ್ಷಣೆ, ಜಲಮೂಲಗಳ ಸುರಕ್ಷತೆಗಳೆಲ್ಲವೂ ಶತಮಾನಗಳಿಂದ ಸಮಾಜದ ಸ್ವಭಾವದ ಭಾಗವಾಗಿದೆ. ನನಗೆ ಸಂತಸವಿದೆ, ಏನೆಂದರೆ, ದೇಶದಲ್ಲಿ ಬಹಳಷ್ಟು ಜನರು ``ಜಲ ಸಂರಕ್ಷಣೆ'ಯನ್ನು ಜೀವನದ ಕಾರ್ಯಯೋಜನೆಯನ್ನಾಗಿ ಮಾಡಿದ್ದಾರೆ. ಚೆನ್ನೈನ ಒಬ್ಬರು ಸ್ನೇಹಿತರಿದ್ದಾರೆ ಅರುಣ್ ಕೃಷ್ಣಮೂರ್ತಿ ಎಂದು. ಅರುಣ್ ಅವರು ತಮ್ಮ ಪ್ರದೇಶಗಳಲ್ಲಿರುವ ಕೆರೆ-ಕೊಳಗಳನ್ನು ಸ್ವಚ್ಛಗೊಳಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಅವರು 150ಕ್ಕೂ ಹೆಚ್ಚು ಹೊಂಡ ಮತ್ತು ಕೆರೆಗಳ ಸ್ವಚ್ಛತೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು ಹಾಗೂ ಅವರು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇದೇ ರೀತಿ ಮಹಾರಾಷ್ಟ್ರದ ಒಬ್ಬ ಸ್ನೇಹಿತ ರೋಹನ್ ಕಾಳೆ ಇದ್ದಾರೆ. ರೋಹನ್ ಅವರು ಒಬ್ಬ ಮಾನವ ಸಂಪನ್ಮೂಲ ವೃತ್ತಿಯಲ್ಲಿದ್ದಾರೆ. ಅವರು ಮಹಾರಾಷ್ಟ್ರದ ನೂರಾರು ಸ್ಟೆಪ್ ವೆಲ್ ಅರ್ಥಾತ್ ಮೆಟ್ಟಿಲುಗಳುಳ್ಳ ಹಳೆಯ ಬಾವಿಗಳ ಸಂರಕ್ಷಣೆಯ ಆಂದೋಲನ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವು ಬಾವಿಗಳಂತೂ ನೂರಾರು ವರ್ಷಗಳಷ್ಟು ಹಿಂದಿನವು. ಅಲ್ಲದೆ ಅವು ನಮ್ಮ ಪರಂಪರೆಯ ಭಾಗವಾಗಿವೆ. ಸಿಕಂದರಾಬಾದ್ ನಲ್ಲಿ ಬನ್ಸಿಲಾಲ್ ಪೇಟೆಯಲ್ಲಿ ಒಂದು ಇದೇ ರೀತಿಯ ಮೆಟ್ಟಿಲುಗಳ ಬಾವಿಯಿದೆ. ವರ್ಷಗಳ ಕಾಲ ಉಪೇಕ್ಷೆ ಮಾಡಿದ್ದರಿಂದ ಈ ಬಾವಿ ಮಣ್ಣು ಮತ್ತು ಕಸದಿಂದ ತುಂಬಿ ಹೋಗಿತ್ತು. ಆದರೆ, ಅಲ್ಲಿ ಈಗ ಈ ಬಾವಿಯ ಪುನರುಜ್ಜೀವಗೊಳಿಸುವ ಅಭಿಯಾನ ಜನರ ಸಹಯೋಗದೊಂದಿಗೆ ಆರಂಭವಾಗಿದೆ.
ಸ್ನೇಹಿತರೇ, ನಾನು ಸದಾ ನೀರಿನ ಅಭಾವ ಇರುವ ರಾಜ್ಯದಿಂದ ಬಂದಿದ್ದೇನೆ. ಗುಜರಾತಿನಲ್ಲಿ ಈ ರೀತಿಯ ಮೆಟ್ಟಿಲುಗಳ ಬಾವಿಗೆ ವಾವ್ ಎಂದು ಕರೆಯುತ್ತಾರೆ. ಗುಜರಾತ್ ನಂತಹ ರಾಜ್ಯದಲ್ಲಿ ವಾವ್ ಗಳು ಮಹತ್ವದ ಪಾತ್ರ ವಹಿಸಿವೆ. ಈ ಬಾವಿಗಳು ಅಥವಾ ಮೆಟ್ಟಿಲುಗಳನ್ನು ಹೊಂದಿರುವ ಕೊಳಗಳ ರಕ್ಷಣೆಯಲ್ಲಿ ಜಲ ಮಂದಿರ ಯೋಜನೆಯು ದೊಡ್ಡ ಪಾತ್ರ ನಿಭಾಯಿಸಿದೆ. ಇಡೀ ಗುಜರಾತಿನಲ್ಲಿ ಅನೇಕ ಮೆಟ್ಟಿಲು ಕೊಳಗಳನ್ನು ಪುನರುಜ್ಜೀವಗೊಳಿಸಲಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ಅಂತರ್ಜಲ ಸುಧಾರಿಸಲು ಸಹ ಸಾಕಷ್ಟು ಸಹಾಯವಾಗಿದೆ. ಇಂಥದ್ದೇ ಅಭಿಯಾನವನ್ನು ತಾವೂ ಸಹ ಸ್ಥಳೀಯ ಮಟ್ಟದಲ್ಲಿ ನಡೆಸಬಹುದಾಗಿದೆ. ಚೆಕ್ ಡ್ಯಾಂ ಗಳನ್ನು ನಿರ್ಮಿಸುವುದಾಗಲೀ ಮಳೆ ನೀರು ಸಂಗ್ರಹ ವ್ಯವಸ್ಥೆಯಾಗಲೀ ಇವುಗಳಲ್ಲಿ ವ್ಯಕ್ತಿಗತ ಪ್ರಯತ್ನ ಕೂಡ ಮುಖ್ಯವಾಗಿದೆ. ಮತ್ತು ಸಾಮೂಹಿಕ ಪ್ರಯತ್ನದ ಅಗತ್ಯವೂ ಇದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಮಯದಲ್ಲಿ ನಮ್ಮ ದೇಶದ ಪ್ರತಿ ಜಿಲ್ಲೆಯಲ್ಲಿ ಕಡಿಮೆ ಎಂದರೂ 75 ಅಮೃತ ಸರೋವರಗಳನ್ನು ನಿರ್ಮಿಸಬಹುದಾಗಿದೆ. ಕೆಲವು ಪುರಾತನ ಕೆರೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಕೆಲವು ಹೊಸ ಕೆರೆಗಳನ್ನು ನಿರ್ಮಿಸಬಹುದಾಗಿದೆ. ತಾವು ಈ ನಿಟ್ಟಿನಲ್ಲಿ ಅಗತ್ಯವಾಗಿ ಏನಾದರೊಂದು ಪ್ರಯತ್ನ ಮಾಡುತ್ತೀರಿ ಎನ್ನುವ ವಿಶ್ವಾಸ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹು ಭಾಷೆಗಳು, ಉಪಭಾಷೆಗಳ ಸಂದೇಶ ನನಗೆ ಲಭ್ಯವಾಗುತ್ತದೆ, ಇದು ``ಮನದ ಮಾತು' ಕಾರ್ಯಕ್ರಮದ ಸೌಂದರ್ಯವೂ ಆಗಿದೆ. ಹಲವು ಜನರು ಆಡಿಯೋ ಸಂದೇಶವನ್ನು ಸಹ ಕಳುಹಿಸುತ್ತಾರೆ. ಭಾರತದ ಸಂಸ್ಕೃತಿ, ನಮ್ಮ ಭಾಷೆಗಳು, ನಮ್ಮ ಉಪಭಾಷೆಗಳು, ನಮ್ಮ ಜೀವನ ರೀತಿ, ವಿಭಿನ್ನ ರೀತಿಯ ಆಹಾರ ಸೇವನೆ ಈ ಎಲ್ಲ ವೈವಿಧ್ಯಗಳು ನಮ್ಮ ಬಹುದೊಡ್ಡ ಶಕ್ತಿಯಾಗಿವೆ. ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗಿನ ಈ ವೈವಿಧ್ಯ ಭಾರತವನ್ನು ಏಕತೆಯಿಂದ ರೂಪಿಸುತ್ತದೆ. ಏಕ ಭಾರತ-ಶ್ರೇಷ್ಠ ಭಾರತವನ್ನಾಗಿ ಮಾಡುತ್ತದೆ. ಇದರಲ್ಲಿಯೂ ನಮ್ಮ ಐತಿಹಾಸಿಕ ಸ್ಥಳಗಳು ಮತ್ತು ಪೌರಾಣಿಕ ಕಥೆಗಳು ಎರಡರದ್ದೂ ಬಹಳ ಮುಖ್ಯವಾದ ಕೊಡುಗೆಯಿದೆ. ನಾನು ಈಗ ತಮ್ಮ ಬಳಿ ಈ ಮಾತನ್ನು ಏಕೆ ಹೇಳುತ್ತಿರುವೆ ಎಂದು ತಾವು ಯೋಚಿಸುತ್ತಿರಬಹುದು. ಇದರ ಕಾರಣವೆಂದರೆ, ಮಾಧವಪುರ ಮೇಳ. ಮಾಧವಪುರ ಮೇಳ ಎಲ್ಲಿ ನಡೆಯುತ್ತದೆ, ಯಾಕಾಗಿ ನಡೆಯುತ್ತದೆ, ಇದು ಹೇಗೆ ಭಾರತದ ವಿವಿಧತೆಯೊಂದಿಗೆ ಸಂಬಂಧ ಹೊಂದಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮನದ ಮಾತು ಶ್ರೋತೃಗಳಿಗೆ ತುಂಬ ಆಸಕ್ತಿದಾಯಕ ಎನಿಸಬಹುದು.
ಸ್ನೇಹಿತರೇ, ಮಾಧವಪುರ ಮೇಳ ಗುಜರಾತಿನ ಪೋರ್ ಬಂದರ್ ನ ಸಮುದ್ರದ ಬಳಿ ಇರುವ ಮಾಧವಪುರ ಗ್ರಾಮದಲ್ಲಿ ಜರುಗುತ್ತದೆ. ಆದರೆ, ಇದಕ್ಕೆ ಹಿಂದುಸ್ತಾನದ ಪೂರ್ವ ಭಾಗದಿಂದಲೂ ಸಂಬಂಧವಿದೆ. ಇದು ಹೇಗೆ ಸಾಧ್ಯ ಎಂದು ತಾವು ಯೋಚಿಸುತ್ತಿರಬಹುದು. ಇದಕ್ಕೆ ಉತ್ತರ ಕೂಡ ಒಂದು ಪೌರಾಣಿಕ ಕಥೆಯಿಂದಲೇ ದೊರೆಯುತ್ತದೆ. ಸಾವಿರಾರು ವರ್ಷಗಳ ಮೊದಲು ಭಗವಾನ್ ಶ್ರೀ ಕೃಷ್ಣನ ಮದುವೆ ಈಶಾನ್ಯ ಭಾಗದ ರಾಜಕುಮಾರಿ ರುಕ್ಮಿಣಿಯೊಂದಿಗೆ ನಡೆದಿತ್ತು ಎಂದು ಹೇಳಲಾಗುತ್ತದೆ. ಈ ಮದುವೆ ಪೋರಬಂದರಿನ ಮಾಧವಪುರದಲ್ಲಿ ಸಂಪನ್ನಗೊಂಡಿತ್ತು ಹಾಗೂ ಅದೇ ವಿವಾಹದ ಪ್ರತೀಕದ ರೂಪದಲ್ಲಿ ಇಂದಿಗೂ ಅಲ್ಲಿ ಮಾಧವಪುರ ಮೇಳವನ್ನು ಆಯೋಜಿಸಲಾಗುತ್ತದೆ. ಪೂರ್ವ ಮತ್ತು ಪಶ್ಚಿಮದ ಈ ಆಳವಾದ ಸಂಬಂಧ ನಮ್ಮ ಪರಂಪರೆಯಾಗಿದೆ. ಸಮಯದ ಜತೆಜತೆಗೇ ಈಗ ಜನರ ಪ್ರಯತ್ನದಿಂದ ಮಾಧವಪುರ ಮೇಳದಲ್ಲಿ ಹೊಸ ಹೊಸ ಚಟುವಟಿಕೆಗಳೂ ಜೋಡಿಸಲ್ಪಟ್ಟಿವೆ. ನಮ್ಮ ಈ ಭಾಗದಲ್ಲಿ ಕನ್ಯೆಯ ಕಡೆಯವರನ್ನು ಘರಾತಿ ಎಂದು ಕರೆಯಲಾಗುತ್ತದೆ. ಹಾಗೂ ಈ ಮೇಳಕ್ಕೆ ಈಗ ಈಶಾನ್ಯ ಪ್ರದೇಶದ ಬಹಳಷ್ಟು ಘರಾತಿಗಳೂ ಬರಲು ಆರಂಭಿಸಿದ್ದಾರೆ. ಒಂದು ವಾರ ಕಾಲ ನಡೆಯುವ ಮಾಧವಪುರ ಮೇಳಕ್ಕೆ ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಕಲಾವಿದರು ಬಂದು ತಲುಪುತ್ತಾರೆ. ಕರಕುಶಲ ಕಲೆಗೆ ಸಂಬಂಧಿಸಿದ ಕಲಾವಿದರು ಆಗಮಿಸುತ್ತಾರೆ. ಮತ್ತು ಈ ಮೇಳದ ಹೊಳಪು ನಾಲ್ಕು ಪಟ್ಟು ವೃದ್ಧಿಸುತ್ತದೆ. ಒಂದು ವಾರ ನಡೆಯುವ, ಭಾರತದ ಪೂರ್ವ ಮತ್ತು ಪಶ್ಚಿಮದ ಸಂಸ್ಕೃತಿಗಳ ಸಂಗಮವಾಗಿರುವ