The human face of 'Khaki' uniform has been engraved in the public memory due to the good work done by police especially during this COVID-19 pandemic: PM
Women officers can be more helpful in making the youth understand the outcome of joining the terror groups and stop them from doing so: PM
Never lose the respect for the 'Khaki' uniform: PM Modi to IPS Probationers

ನಮಸ್ಕಾರ..!

ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಅಮಿತ್ ಶಾ ಜಿ, ಡಾ. ಜಿತೇಂದ್ರ ಸಿಂಗ್ ಜಿ, ಜಿ.ಕಿಷನ್ ರೆಡ್ಡಿ ಜಿ ಅವರೇ, ದೀಕ್ಷಾಂತ (ಘಟಿಕೋತ್ಸವ) ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ  ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಅಧಿಕಾರಿಗಳೇ ಮತ್ತು ಭಾರತೀಯ ಪೊಲೀಸ್ ಸೇವೆಗಳನ್ನು ಮುನ್ನಡೆಸಲು ಅತ್ಯಂತ ಉತ್ಸಾಹದಿಂದ ಸಜ್ಜಾಗಿರುವ 71ನೇ ಆರ್ ಆರ್ ನ ನನ್ನ ಯುವ ಮಿತ್ರರೇ..

ಸಾಮಾನ್ಯವಾಗಿ ನಾನು ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ನಿರ್ಗಮಿಸುವ ಎಲ್ಲ ಮಿತ್ರರನ್ನು ದೆಹಲಿಯಲ್ಲಿ ಖುದ್ದಾಗಿ ಭೇಟಿ ಮಾಡುತ್ತೇನೆ. ನಾನು ಅವರನ್ನು ನಿವಾಸಕ್ಕೆ ಕರೆದು ಅವರೊಂದಿಗೆ ವಿಚಾರ ವಿನಿಮಯ ನಡೆಸುವುದು ನನ್ನ ಸುದೈವ ಎಂದುಕೊಂಡಿದ್ದೇನೆ. ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಸನ್ನಿವೇಶದಿಂದಾಗಿ ನನಗೆ ಆ ಅವಕಾಶ ತಪ್ಪಿ ಹೋಗಿದೆ. ಆದರೆ ನನ್ನ ಅವಧಿಯಲ್ಲಿ ನಾನು ನಿಮ್ಮನ್ನು ಒಮ್ಮೆ ಭೇಟಿ ಮಾಡುತ್ತೇನೆ ಎಂಬ ವಿಶ್ವಾಸ ನನಗಿದೆ.

ಮಿತ್ರರೇ..

ಒಂದಂತೂ ಸತ್ಯ ನೀವು ಎಲ್ಲಿಯವರೆಗೆ ತರಬೇತಿ(ಟ್ರೈನಿ)ಯಾಗಿ ಕೆಲಸ ಮಾಡುತ್ತಿರೋ ಅಲ್ಲಿಯವರೆಗೆ ನೀವು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುತ್ತೀರಿ. ಒಂದು ವೇಳೆ ನೀವು ತಪ್ಪು ಮಾಡಿದರೂ ನಿಮ್ಮ ಸಹೋದ್ಯೋಗಿಗಳು ಅಥವಾ ನಿಮಗೆ ತರಬೇತಿ ನೀಡುವವರು ಅವುಗಳನ್ನೆಲ್ಲಾ ಸರಿಪಡಿಸಿಕೊಳ್ಳುತ್ತಾರೆ. ಆದರೆ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುತ್ತದೆ. ಆದರೆ ನೀವು ಈ ಅಕಾಡೆಮಿಯಿಂದ ಹೊರಗೆ ಕಾಲಿಟ್ಟ ಕೂಡಲೇ, ನೀವು ಸುರಕ್ಷಿತ ವಾತಾವರಣದಲ್ಲಿರುವುದಿಲ್ಲ. ಸಾಮಾನ್ಯ ಜನ ನಿಮ್ಮನ್ನು ಹೊಸಬರು ಮತ್ತು ಅನುಭವದ ಕೊರತೆ ಇದೆ ಎಂದು ಪರಿಗಣಿಸುವುದಿಲ್ಲ. ಅವರು ನಿಮ್ಮನ್ನು ಸಮವಸ್ತ್ರದಲ್ಲಿರುವ ಸಾಹೇಬ ಎಂದು ಪರಿಗಣಿಸುತ್ತಾರೆ, ಅವರು ಏಕೆ ನನ್ನ ಕೆಲಸವನ್ನು ಮಾಡುತ್ತಿಲ್ಲ ? ಪ್ರಶ್ನಿಸುತ್ತಾರೆ. ನೀವು ಸಾಹೇಬರು, ನೀವು ಹೇಗೆ ಮಾಡಲು ಸಾಧ್ಯ? ಎಂದು ನಿಮ್ಮ ಬಗೆಗಿನ ಆತನ ವರ್ತನೆ ಸಂಪೂರ್ಣ ಬದಲಾಗಲಿದೆ.

ನೀವು ಹೇಗೆ ಕಾರ್ಯ ನಿರ್ವಹಿಸುತ್ತೀರಿ ಮತ್ತು ನಿಮ್ಮ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ.

ಮೊದಲ ಅಭಿಪ್ರಾಯವೇ ಕೊನೆಯವರೆಗೂ ಉಳಿಯುತ್ತದೆ ಎಂಬ ಮಾತಿನ ಹಿನ್ನೆಲೆಯಲ್ಲಿ ನೀವು ಆರಂಭಿಕ ಹಂತದಲ್ಲಿ ಅತ್ಯಂತ ಜಾಗೃತವಾಗಿರುವುದು ಒಳ್ಳೆಯದು ಎಂದು ನಾನು ನಿಮಗೆ ಹೇಳ ಬಯಸುತ್ತೇನೆ. ನೀವು ಒಮ್ಮೆ ಒಂದು ವರ್ಗದ (ಒಂದು ವಿಧದ) ಅಧಿಕಾರಿ ಎಂಬ ವರ್ಚಸ್ಸು ಮೂಡಿದರೆ ಅದು ನೀವು ಎಲ್ಲಿಗೆ ವರ್ಗಾವಣೆ ಆದರೂ ನಿಮ್ಮ ಜೊತೆಯೇ ಪಯಣಿಸುತ್ತದೆ. ನೀವು ಅಂತಹ ವರ್ಚಸ್ಸಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು ಅತ್ಯಂತ ಜಾಗರೂಕತೆಯಿಂದ ಪ್ರಯತ್ನಗಳನ್ನು ಕೈಗೊಳ್ಳಿ.

ಎರಡನೆಯದಾಗಿ ಸಮಾಜದಲ್ಲಿ ಒಂದು ನ್ಯೂನತೆ ಇದೆ. ನಾವು ಚುನಾಯಿತರಾಗಿ ದೆಹಲಿಗೆ ಬಂದ ನಂತರ ಇಬ್ಬರಿಂದ ನಾಲ್ಕು ಮಂದಿ ನಮ್ಮ ಸುತ್ತ ನಿಲ್ಲುತ್ತಾರೆ. ಅವರು ಯಾರು ಎಂಬುದೇ ನಮಗೆ ತಿಳಿದಿರುವುದಿಲ್ಲ ಮತ್ತು ತಕ್ಷಣವೇ ಅವರು ನಮಗೆ ತಮ್ಮ ಸೇವೆಗಳನ್ನು ನೀಡಲು ಬಯಸುತ್ತಾರೆ. ಸಾಹೇಬ್, ನಿಮಗೆ ಕಾರು ಬೇಕೆ ಅಥವಾ ನೀರು ಬೇಕೆ? ನಾನು ಅದರ ವ್ಯವಸ್ಥೆ ಮಾಡುತ್ತೇನೆ. ನೀವು ಈವರೆಗೆ ಊಟ ಮಾಡಿದಂತೆ ಕಾಣಿಸುತ್ತಿಲ್ಲ. ಈ ಭವನದ ಊಟ ಅಷ್ಟೊಂದು ಚೆನ್ನಾಗಿರುವುದಿಲ್ಲ ಎಂದು ಹೇಳುತ್ತಾರೆ. ನಮಗೆ ತಿಳಿದಿರುವುದಿಲ್ಲ ಇಂತಹ ಸೇವೆಗಳನ್ನು ಯಾರು ನೀಡುತ್ತಾರೆ ಎಂಬುದು. ನೀವು ಎಲ್ಲೇ ಹೋದರು ಆ ಜಾಗಕ್ಕೆ ನೀವು ಹೊಸಬರಾಗುತ್ತೀರಿ ಮತ್ತು ನಿಮಗೂ ಕೂಡ ಹಲವು ಅಗತ್ಯತೆಗಳು ಎದುರಾಗುತ್ತವೆ. ಆದರೆ ನೀವು ಒಮ್ಮೆ ಆ ವರ್ತುಲಕ್ಕೆ ಸಿಲುಕಿದರೆ ನೀವು ಅದರಿಂದ ಹೊರಬರುವುದು ಬಹಳ ಕಷ್ಟವಾಗುತ್ತದೆ. ಆರಂಭದಲ್ಲಿ ಪ್ರದೇಶ ಹೊಸದಾಗಿರುವ ಕಾರಣಕ್ಕೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ನೀವು ವಿಷಯಗಳನ್ನು ಸ್ವತಃ ನಿಮ್ಮ ಕಣ್ಣುಗಳಿಂದ ಮತ್ತು ಕಿವಿಗಳಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಾಧ್ಯವಾದಷ್ಟು ನಿಮ್ಮ ಆರಂಭಿಕ ದಿನಗಳಲ್ಲಿ ನಿಮ್ಮ ಕಿವಿಗಳನ್ನು ಶೋಧಿಸಿ, ಬೇಕಾದನ್ನು ಮಾತ್ರ ಕೇಳಿಸಿಕೊಳ್ಳಲು ಪ್ರಯತ್ನಿಸಿ.

ನೀವು ನಿಜಕ್ಕೂ ನಾಯಕತ್ವದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ನಿಮ್ಮ ಕಿವಿಗಳನ್ನು ಜಾಗೃತವಾಗಿಟ್ಟುಕೊಳ್ಳಬೇಕು. ಹಾಗೆಂದು ನಾನು ನಿಮಗೆ ಕಿವಿಗಳನ್ನು ಮುಚ್ಚಿಕೊಳ್ಳಿ ಎಂದು ಹೇಳುವುದಿಲ್ಲ. ನಾನು ನಿಮಗೆ ಕೇವಲ ಕಿವಿಗಳಿಂದ ಅಗತ್ಯವಾದುದನ್ನು ಮಾತ್ರ ಕೇಳಿಸಿಕೊಳ್ಳಿ ( ಫಿಲ್ಟರ್ ಮಾಡಿಕೊಳ್ಳಿ) ಎಂದು ಹೇಳುತ್ತಿದ್ದೇನೆ. ನಿಮ್ಮ ವೃತ್ತಿಯಲ್ಲಿ ಇವನ್ನೆಲ್ಲಾ ಪಾಲಿಸಿದರೆ ನಿಮಗೆ ಸಾಕಷ್ಟು ಪ್ರಯೋಜನವಾಗಲಿದೆ. ನೀವು ವೃತ್ತಿಯಲ್ಲಿ ಅಥವಾ ವ್ಯಕ್ತಿಯನ್ನು ಯಾವ ಮಾದರಿಯಲ್ಲಿ ಸ್ವೀಕರಿಸುತ್ತೀರಿ ಎಂಬುದು ಮುಖ್ಯ. ಯಾವುದೇ ಸಂದರ್ಭದಲ್ಲಿ ಒಂದು ಹುದ್ದೆಗೆ ನಿಯೋಜನೆಗೊಂಡರೆ ಜನರು ಆತನನ್ನು ಕಸದ ತೊಟ್ಟಿಯಂತೆ ಕಾಣುತ್ತಾರೆ. ಯಾವುದೇ ವ್ಯಕ್ತಿ ಅತ್ಯಂತ ಹೆಚ್ಚು ಬಲಶಾಲಿಯಾಗಿದ್ದಾನೆ ಎಂದರೆ ಆತನನ್ನು ದೊಡ್ಡ ಕಸದ ತೊಟ್ಟಿ ಎಂದು ಪರಿಗಣಿಸುತ್ತಾರೆ. ಜನರು ಕಸವನ್ನು ತಂದು ಸುರಿಯಲಾರಂಬಿಸುತ್ತಾರೆ. ನಾವೂ  ಕೂಡ ಆ ಕಸವನ್ನು  ಅದೃಷ್ಟ ಎಂದು ಭಾವಿಸುತ್ತೇವೆ. ನಾವು ನಮ್ಮ ಪ್ರಜ್ಞೆಯನ್ನು ಶುದ್ಧವಾಗಿಟ್ಟುಕೊಂಡರೆ ಅದು ನಮ್ಮೆಲ್ಲರಿಗೂ ಅತ್ಯಂತ ಅನುಕೂಲಕಾರಿಯಾಗಲಿದೆ.

ಎರಡನೇ ವಿಷಯವೇನೆಂದರೆ ನಾವು ಯಾವಾಗಲಾದರೂ ನಮ್ಮ ಪೊಲೀಸ್ ಠಾಣೆಗಳ ಸಂಸ್ಕೃತಿಯ ಬಗ್ಗೆ ಚಿಂತನೆ ನಡೆಸಿದ್ದೇವೆಯೇ ಎಂಬುದು? ಹೇಗೆ ನಮ್ಮ ಪೊಲೀಸ್ ಠಾಣೆಗಳನ್ನು ಸಾಮಾಜಿಕ ವಿಶ್ವಾಸಾರ್ಹತೆಯ ಕೇಂದ್ರಗಳನ್ನಾಗಿ ಮಾಡುವುದೆಂದು? ಇಂದು ನಾವು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರೆ ಅವುಗಳು ಸ್ವಚ್ಛವಾಗಿರುತ್ತವೆ ಮತ್ತು ಅದು ಒಳ್ಳೆಯದು. ಕೆಲವು ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರೆ ಅವು ಅತ್ಯಂತ ಹಳೆಯದಾಗಿರುತ್ತವೆ ಮತ್ತು ಅವು ಶಿಥಿಲಾವಸ್ಥೆಯಲ್ಲಿರುತ್ತವೆ. ನನಗೂ ಗೊತ್ತು ಅಂತಹ ಠಾಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು.

ನಾವು ಎಲ್ಲೇ ಹೋದರು ಒಂದನ್ನು ನಿರ್ಧರಿಸಿಕೊಳ್ಳಬೇಕು, ನಾವು ಮಾಡಬೇಕಾದ 12 ರಿಂದ 15 ವಿಷಯಗಳ ಪಟ್ಟಿಯನ್ನು ಕಾಗದದಲ್ಲಿ ಸಿದ್ಧಪಡಿಸಿ, ಅವುಗಳನ್ನು ಪೊಲೀಸ್ ಠಾಣೆಗಳಲ್ಲಿ ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು, ತಮ್ಮ ಕೆಳಗೆ 50, 100 ಅಥವಾ 200 ಎಷ್ಟೇ ಮಂದಿ ಇದ್ದರೂ ಆ ವಿಚಾರಗಳನ್ನು ಜಾರಿಗೊಳಿಸಬೇಕು. ವ್ಯಕ್ತಿಯನ್ನು ಬದಲಾಯಿಸುವುದು ಕಷ್ಟಕರ. ಆದರೆ ವ್ಯವಸ್ಥೆಯನ್ನು ಸುಲಭವಾಗಿ ಬದಲಾಯಿಸಬಹುದು ಮತ್ತು ಪರಿಸರವನ್ನೂ ಕೂಡ ಬದಲಾಯಿಸಬಹುದು. ಹೇಗೆ ಕಡತಗಳನ್ನು ಸೂಕ್ತ ರೀತಿಯಲ್ಲಿ ಇಡುವುದು, ನಮ್ಮನ್ನು ನೋಡಲು ಬರುವ ಜನರಿಗೆ ಖುರ್ಚಿಗಳನ್ನು ಒದಗಿಸುವುದು ಇವು ನಿಮ್ಮ ಆದ್ಯತೆಯ ಪಟ್ಟಿಯಲ್ಲಿದೆಯೇ? ಎಂಬುದನ್ನು ಗಮನಿಸಬೇಕು, ಇವೆಲ್ಲಾ ಚಿಕ್ಕ ಕೆಲಸಗಳು, ನೀವು ಮಾಡಬಹುದಾದವು.

ಕೆಲವು ಪೊಲೀಸರು ಆರಂಭದಲ್ಲಿ ತಾವು ಕೆಲಸಕ್ಕೆ ಸೇರಿದಾಗ ತಮ್ಮ ಅಧಿಕಾರವನ್ನು ಪ್ರದರ್ಶಿಸಬೇಕು, ಜನರನ್ನು ಭಯಪಡಿಸಬೇಕು ಮತ್ತು ಅವರನ್ನು ಹೆದರಿಸಿಟ್ಟುಕೊಳ್ಳಬೇಕು ಎಂಬ ಭಾವನೆಯನ್ನು ಹೊಂದಿರುತ್ತಾರೆ. ನನ್ನ ಹೆಸರನ್ನು ಕೇಳಿದರೆ ಸಾಕು ಸಮಾಜಘಾತುಕ ಶಕ್ತಿಗಳು ಗಢಗಢ ನಡುಗುತ್ತಾರೆ ಎಂದುಕೊಳ್ಳುತ್ತಾರೆ. ಸಿಂಗಮ್ ನಂತಹ ಚಲನಚಿತ್ರಗಳನ್ನು ವೀಕ್ಷಿಸಿದವರಿಗೆ ಇಂತಹ ಚಿಂತನೆಗಳು ಬಂದಿರಬಹುದು. ಅದರ ಪರಿಣಾಮವೆಂದರೆ ಹಲವು ಪ್ರಮುಖ ಕೆಲಸ ಕಾರ್ಯಗಳು ಹಾಗೇ ಉಳಿದು ಬಿಡುತ್ತವೆ. ನಿಮ್ಮ ಕೈಕೆಳಗೆ ಕೆಲಸ ಮಾಡುವ 100-200-500 ಜನರಲ್ಲಿ ನೀವು ಗುಣಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು ಮತ್ತು ಉತ್ತಮ ತಂಡವನ್ನು ಸಜ್ಜುಗೊಳಿಸಬೇಕು. ಆಗ ನೋಡಿ ನಿಮ್ಮ ಬಗೆಗಿನ ಜನರ ವರ್ತನೆ ಬದಲಾಗುತ್ತದೆ.

ಸಾಮಾನ್ಯ ಜನರಿಗೆ ನೀವು ಸ್ಫೂರ್ತಿ ತುಂಬುವಂತಹವರು ಆಗುವಿರೇ ಅಥವಾ ನೀವು ಅವರೊಂದಿಗೆ ಆತ್ಮೀಯತೆಯ ಬಾಂಧವ್ಯವನ್ನು ನಿರ್ಮಾಣ ಮಾಡುವವರು ಆಗುವಿರೇ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ನೀವು ಪ್ರಭಾವವನ್ನು ಸೃಷ್ಟಿಸಲು ಬಯಸಿದರೆ ಅದು ಅತ್ಯಂತ ಅಲ್ಪ ಅವಧಿಗೆ ಮಾತ್ರ ಇರುತ್ತದೆ. ಆದರೆ ನೀವು ಜನರೊಂದಿಗೆ ಪ್ರೀತಿಯ ಬಾಂಧವ್ಯವನ್ನು ಬೆಸೆದರೆ ಅದು ನಿಮ್ಮ ನಿವೃತ್ತಿಯ ನಂತರವೂ ನೆನಪಾಗುತ್ತಲಿರುತ್ತದೆ. ನೀವು ಮೊದಲು ಕೆಲಸಕ್ಕೆ ಸೇರುವ ಜಾಗದ ಆ ಪ್ರದೇಶದ ಜನ 20 ವರ್ಷಗಳ ಹಿಂದೆ ಇಲ್ಲಿಗೆ ಇಂತಹ ವ್ಯಕ್ತಿ ಬಂದಿದ್ದರು, ಅವರು ಹೇಗಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳುತ್ತಾರೆ ಮತ್ತು ಆತನಿಗೆ ಸ್ಥಳೀಯ ಭಾಷೆ ತಿಳಿದಿರಲಿಲ್ಲ ಆದರೂ ತನ್ನ ನಡವಳಿಕೆ ಮೂಲಕ ಜನರ ಹೃದಯವನ್ನು ಗೆದ್ದಿದ್ದರು ಎಂದು ಹೇಳುತ್ತಾರೆ. ಒಮ್ಮೆ ನೀವು ಸಾಮಾನ್ಯ ಜನರ ಹೃದಯ ಗೆದ್ದರೆ ಸಾಕು. ನಂತರ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬರಲಿದೆ.

ಪೊಲೀಸ್ ವ್ಯವಸ್ಥೆಯಲ್ಲಿ ಒಂದು ನಂಬಿಕೆ ಇದೆ. ನಾನು ಮೊದಲ ಬಾರಿಗೆ ಗುಜರಾತ್ ನಲ್ಲಿ ಮುಖ್ಯಮಂತ್ರಿಯಾದಾಗ ದೀಪಾವಳಿ ನಂತರ ಗುಜರಾತ್ ನಲ್ಲಿ ಹೊಸ ವರ್ಷದ ಸಂದರ್ಭವಿತ್ತು, ಆಗ ಪೊಲೀಸ್ ಸಿಬ್ಬಂದಿ ದಿವಾಳಿ ಮಿಲನ ಕಾರ್ಯಕ್ರಮವನ್ನು ಚಿಕ್ಕದಾಗಿ ಆಯೋಜಿಸಿದ್ದರು. ಮುಖ್ಯಮಂತ್ರಿಗಳಾಗಿದ್ದವರು ಸಾಮಾನ್ಯವಾಗಿ ಆ ಕಾರ್ಯಕ್ರಮಕ್ಕೆ ಭೇಟಿ ನೀಡುತ್ತಿದ್ದರು. ನಾನು ಕೂಡ ಅಲ್ಲಿಗೆ ಹೋಗುತ್ತಿದ್ದೆ. ಹಿಂದಿನ ಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ವೇದಿಕೆಯ ಮೇಲೆ ಕುಳಿತು ಕೆಲವು ಶಬ್ದಗಳನ್ನು ಮಾತನಾಡಿ, ಎಲ್ಲರಿಗೂ ಶುಭ ಕೋರಿ ಅಲ್ಲಿಂದ ನಿರ್ಗಮಿಸಿದ್ದರು. ನಾನು ಅಲ್ಲಿಗೆ ಹೋದಾಗ ಮೊದಲ ಬಾರಿಗೆ ನಾನು ಎಲ್ಲ ಜನರನ್ನು ಭೇಟಿ ಮಾಡಿದೆ. ಆಗ ಓರ್ವ ಪೊಲೀಸ್ ಅಧಿಕಾರಿ ನನ್ನನ್ನು ತಡೆದು ನಿಲ್ಲಿಸಿ, ಏಕೆ ಪ್ರತಿಯೊಬ್ಬರಿಗೂ ಹಸ್ತಲಾಘವ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಹಾಗೆ ಮಾಡಬೇಡಿ, ಇಲ್ಲಿರುವವರಲ್ಲಿ ಕೆಲವರು ಪೊಲೀಸ್ ಪೇದೆಗಳಿದ್ದಾರೆ ಮತ್ತು ಸಮಾಜದ ನಾನಾ ವರ್ಗದ ಜನರಿದ್ದಾರೆ ಎಂದು ಹೇಳಿದರು. ಅಲ್ಲಿ ಸುಮಾರು 100 ರಿಂದ 150 ಮಂದಿ ಜನ ಸೇರಿದ್ದರು. ನಾನು ಅವರನ್ನು ಏಕೆ ಎಂದು ಪ್ರಶ್ನಿಸಿದೆ. ನೀವು ಹೀಗೆಯೇ ಪ್ರತಿಯೊಬ್ಬರಿಗೂ ಹಸ್ತಲಾಘವ ನೀಡುವುದನ್ನು ಮುಂದುವರಿಸಿದರೆ ನಿಮ್ಮ ಕೈಗಳು ಸಂಜೆಯ ವೇಳೆಗೆ ಊದಿಕೊಳ್ಳುತ್ತವೆ (ಬಾವು ಬರುತ್ತದೆ).  ಮತ್ತು ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕಾಗುತ್ತದೆ ಎಂದು ಹೇಳಿದ್ದರು. ನಾನು ಅವರನ್ನು ಕೇಳಿದೆ, ನಿಮಗೆ ಏಕೆ ಆ ರೀತಿ ಆಲೋಚನೆ ಬಂತು, ಆದರೆ ಪೊಲೀಸ್ ಇಲಾಖೆಯಲ್ಲಿ ಅಂತಹುದೊಂದು ಪ್ರವೃತ್ತಿ ಇದೆ. ಅವರುಗಳು ಸಾಮಾನ್ಯವಾಗಿ ಕೆಟ್ಟ ಶಬ್ದ ಬಳಸುತ್ತಾರೆ ಎಂಬ ಮಾತಿದೆ. ಅದು ಸರಿಯಲ್ಲ.

ಸಮವಸ್ತ್ರದಲ್ಲಿರುವ ಪೊಲೀಸರ ಕೃತಕ ವರ್ಚಸ್ಸು, ವಾಸ್ತವವಾಗಿ ಇರುವುದಿಲ್ಲ. ನಾವು ಇದನ್ನು ಕೊರೊನಾ ಸಂಕಷ್ಟದ ಸಮಯದಲ್ಲಿ ಕಂಡಿದ್ದೇವೆ. ಪೊಲೀಸರು ಕೂಡ ನಮ್ಮಂತೆಯೇ ಮನುಷ್ಯರು. ಪೊಲೀಸರು ಕೂಡ ಮಾನವೀಯತೆಯ ಕಲ್ಯಾಣಕ್ಕಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾರೆ. ಇಂತಹ ವರ್ಚಸ್ಸನ್ನು ನಮ್ಮ ನಡವಳಿಕೆಯ ಮೂಲಕ ಸಮಾಜದಲ್ಲಿ ಬಲವರ್ಧನೆಗೊಳಿಸಬೇಕಾಗಿದೆ. ನಮ್ಮ ವರ್ತನೆಯಿಂದ ಹೇಗೆ ಇಡೀ ಸ್ವಭಾವವನ್ನು ಬದಲಾಯಿಸಬಹುದು ಅಲ್ಲವೇ ?

ಅಂತೆಯೇ ರಾಜಕೀಯ ನಾಯಕರು ಪೊಲೀಸರೊಂದಿಗೆ ನಡೆಸುವ ಮೊದಲ ಸಂವಾದಗಳನ್ನು ನಾನು ನೋಡಿದ್ದೇನೆ. ಸಮವಸ್ತ್ರದಲ್ಲಿರುವವರು ರಾಜಕೀಯ ನಾಯಕರನ್ನು ಒಲೈಸಲು (ಇಂಪ್ರೆಸ್) ಪ್ರಯತ್ನಿಸುತ್ತಾರೆ ಮತ್ತು ರಾಜಕೀಯ ನಾಯಕರನ್ನು ಓಲೈಸಲು ಪದೇ ಪದೇ ಚಪ್ಪಾಳೆ ಹೊಡೆಯುವ ಐದರಿಂದ ಐವತ್ತು ಜನರನ್ನು ನೀವು ಕಾಣಬಹುದು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ ಎಂಬುದನ್ನು ಎಂದಿಗೂ ಮರೆಯಬಾರದು. ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಚುನಾಯಿತ ಪ್ರತಿನಿಧಿಗಳ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಚುನಾಯಿತ ಪ್ರತಿನಿಧಿಗಳನ್ನು ಗೌರವಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಿದಂತೆ, ಇಬ್ಬರ ನಡುವೆ ವ್ಯತ್ಯಾಸಗಳಿರಬಹುದು, ಆದರೆ ಅದನ್ನು ನಿರ್ವಹಿಸುವುದಕ್ಕೆ ವಿಧಾನಗಳಿವೆ. ನಾವು ಆ ವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ. ನಾನು ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಇದೀಗ ನಿಮಗೆ ತರಬೇತಿ ನೀಡುತ್ತಿರುವ ಅತುಲ್ ನನಗೆ ತರಬೇತಿ ನೀಡುತ್ತಿದ್ದರು. ನಾನು ಆತನ ಕೈ ಕೆಳಗೆ ತರಬೇತಿ ಪಡೆದಿದ್ದೇನೆ, ಏಕೆಂದರೆ ನಾನು ಮುಖ್ಯಮಂತ್ರಿಯಾಗಿದ್ದ ಆವರು ನನ್ನ ಭದ್ರತಾ ಹೊಣೆಹೊತ್ತಿದ್ದರು.

ಅದೊಂದು ದಿನ ಹೀಗೆ ಆಯಿತು, ಪೊಲೀಸ್ ವ್ಯವಸ್ಥೆ ಮತ್ತು ಸಾಧನ ಸಾಮಗ್ರಿಗಳ ಬಗ್ಗೆ ನನ್ನ ಮನಸ್ಸಿಗೆ ಅಷ್ಟೊಂದು ಹಿಡಿಸಲಿಲ್ಲ. ನನಗೆ ಸ್ವಲ್ಪ ಕಷ್ಟಕರವಾಯಿತು, ಆದರೂ ನಾನು ಅವರೊಂದಿಗೆ ವಾಸ್ತವ್ಯ ಹೂಡಬೇಕಾಯಿತು. ಆದರೆ ಕೆಲವೊಮ್ಮೆ ನಾನು ನಿಯಮಗಳನ್ನು ಉಲ್ಲಂಘಿಸುತ್ತೇನೆ, ಕಾರಿನಿಂದ ಕೆಳಗಿಳಿಯುತ್ತೇನೆ ಮತ್ತು ಜನದಟ್ಟಣೆಯಲ್ಲಿ ಜನರಿಗೆ ಹಸ್ತಲಾಘವ ನೀಡುತ್ತೇನೆ. ಒಂದು ದಿನ ಅತುಲ್ ಕರ್ವಾಲ್, ನನ್ನನ್ನು ಭೇಟಿ ಮಾಡಲು ಸಮಯ ಕೋರಿದರು ಮತ್ತು ನನ್ನ ಕೊಠಡಿಗೆ ಬಂದರು. ನಾನು 20 ವರ್ಷಗಳ ಹಿಂದಿನ ಘಟನೆ ಬಗ್ಗೆ ಮಾತನಾಡುತ್ತೇನೆ, ಆಗ ಆತ ತುಂಬಾ ಕಿರಿಯವ.

ಆತ ತನ್ನ ಕಣ್ಣಿನಿಂದಲೇ ಮುಖ್ಯಮಂತ್ರಿ ಅವರನ್ನು ನೋಡಿ ತನ್ನ ನಿರಾಕರಣೆಯನ್ನು ಹೊರಹಾಕಿದರು. ಆತ ನನಗೆ ನೀವು ಇದನ್ನು ಮಾಡಬೇಡಿ, ಕಾರಿನಿಂದ ಕಳೆಗಿಳಿಯಬೇಡಿ ಅಥವಾ ಜನತೆ ಜೊತೆ ಸೇರಬೇಡಿ ಎಂದು ಆತ ನನಗೆ ಹೇಳಿದೆ, ಆಗ ನಾನು, ನೀನು ನನ್ನ ಜೀವನದ ಗುರುವೇ ಅಥವಾ ನೀನು ಹೇಳಿದಂತೆ ನಾನು ಮಾಡಬೇಕೆ ಎಂದು ಕೇಳಿದೆ. ಆತ ಅಳುಕಲಿಲ್ಲ, ನಾನು ಆತನ ಮುಂದೆ ಇದನ್ನು ಹೇಳುತ್ತಿದ್ದೇನೆ. ಆತನೂ ಕೂಡ ಅಂಜಲಿಲ್ಲ. ನಾನು ಹಲವು ಬಾರಿ ಇದನ್ನೇ ಹೇಳುತ್ತೇನೆ, ನೀವು ಕೇವಲ ರಾಜ್ಯಕ್ಕೆ ಸೇರಿದ ಓರ್ವ ವ್ಯಕ್ತಿಯಲ್ಲ ಮತ್ತು ನನ್ನ ಹೊಣೆ ನಿಮ್ಮನ್ನು ರಕ್ಷಿಸುವುದಾಗಿದೆ ಎಂದು. ಆತ ನನಗೆ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು, ಇಲ್ಲವಾದರೆ ಆತನೇ ನಿಯಮಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಬೇಕಿತ್ತು.

ನಾನು ಏನನ್ನು ಮಾತನಾಡಲಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರತಿನಿಧಿಗೆ ನೀಡುವ ಗೌರವ. ಆದರೆ ವಿನಮ್ರವಾಗಿ ಮನವಿ ಮಾಡುವುದು ಕೂಡ ಆತನ ಕರ್ತವ್ಯದ ಭಾಗವಾಗಿದೆ. ಅದು ನನ್ನ ಮುಖ್ಯಮಂತ್ರಿಯಾದ ಆರಂಭದ ದಿನಗಳು. ಅದೇಕೆ ಆ ಘಟನೆ ನನ್ನಲ್ಲಿ ಸ್ಥಿರವಾಗಿದೆ. ಏಕೆಂದರೆ ಪೊಲೀಸ್ ಅಧಿಕಾರಿ ಈ ಅಂಶವನ್ನು ತಿಳಿಸಿದ್ದರಿಂದ ಮತ್ತು ಚುನಾಯಿತ ಪ್ರತಿನಿಧಿಯ ಪ್ರಾಮುಖ್ಯತೆಯನ್ನು ಮನಸ್ಸಿಗೆ ಅರ್ಥ ಮಾಡಿಸಿದ್ದರಿಂದ. ನನ್ನ ಪ್ರಕಾರ ಪ್ರತಿಯೊಬ್ಬ ಪೊಲೀಸ್ ಯೋಧ ಈ ಕೆಲಸವನ್ನು ಮಾಡಬಲ್ಲರು, ಯಾರು ಬೇಕಾದರು ಮಾಡಬಲ್ಲರು. ನಾವು ಅದನ್ನು ಗಮನಿಸಬೇಕಿದೆ.

ಮತ್ತೊಂದು ವಿಷಯ ಇದೆ. ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಉಪಯುಕ್ತ ಎಂಬುದು ಸಾಬೀತಾಗಿದೆ. ಮೊದಲು ಪೊಲೀಸ್ ವ್ಯವಸ್ಥೆಯನ್ನು ಪೇದೆಗಳ ಮಟ್ಟದಲ್ಲಿ ಮಾಹಿತಿ ಮತ್ತು ಗುಪ್ತಚರ ಮೂಲಕ ನಿರ್ವಹಿಸಲಾಗುತ್ತಿತ್ತು ಮತ್ತು ಅದು ಚೆನ್ನಾಗಿ ನಡೆಯುತ್ತಿತ್ತು. ಆದರೆ ದುಃಖಕರ ಸಂಗತಿ ಎಂದರೆ ಅದು ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ನೀವು ಯಾವುದೇ ಸಂದರ್ಭದಲ್ಲೂ ಇದರ ಜೊತೆ ರಾಜಿ ಮಾಡಿಕೊಳ್ಳಬೇಡಿ. ಏಕೆಂದರೆ ಪೊಲೀಸ್ ವ್ಯವಸ್ಥೆಯಲ್ಲಿ ಪೇದೆಗಳ ಮಟ್ಟದಲ್ಲಿ ನಡೆಸುವ ಗುಪ್ತಚರ ಮಾಹಿತಿ ಸಂಗ್ರಹಣಾ ಕಾರ್ಯ ಅತ್ಯಂತ ಪ್ರಮುಖವಾದುದು. ನೀವು ನಿಮ್ಮ ಆಸ್ತಿ ಮತ್ತು ಮೂಲಗಳನ್ನು ಎಷ್ಟು ಬೇಕಾದರು ಅಭಿವೃದ್ಧಿಪಡಿಸಿಕೊಳ್ಳಿ. ಆದರೆ ನೀವು ಪೊಲೀಸ್ ಠಾಣೆಗಳಲ್ಲಿರುವ ಸಿಬ್ಬಂದಿಯ ಬಗ್ಗೆ ಯೋಚನೆ ಮಾಡಿ ಮತ್ತು ಅವರನ್ನು ಉತ್ತೇಜಿಸಿ. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿದೆ. ಸಿಸಿಟಿವಿ ಆಗಿರಬಹುದು ಅಥವಾ ಮೊಬೈಲ್ ಫೋನ್ ಟ್ರ್ಯಾಕಿಂಗ್ ಆಗಿರಬಹುದು, ಇನ್ನಿತರ ವಿಧಾನಗಳ ಮೂಲಕ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ತಂತ್ರಜ್ಞಾನ ಅತಿದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ, ಇದು ಒಳ್ಳೆಯದು. ಆದರೆ ಇದೇ ತಂತ್ರಜ್ಞಾನದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪೊಲೀಸರು ಅಮಾನತ್ತಿಗೆ ಒಳಗಾಗುತ್ತಿದ್ದಾರೆ. ಕೆಲವೊಮ್ಮೆ ಅವರು ದುರ್ವರ್ತನೆ ತೋರುತ್ತಾರೆ, ಕೋಪಗೊಳ್ಳುತ್ತಾರೆ ಮತ್ತು ತಮ್ಮ ಸಂಯಮ ಕಳೆದುಕೊಳ್ಳುತ್ತಾರೆ ಮತ್ತು ತನಗೆ ಅರಿವಿಲ್ಲದಂತೆಯೇ ವಿಡಿಯೋದಲ್ಲಿ ಅವರು ಕೂಗಾಡುವ ದೃಶ್ಯಗಳು ದಾಖಲಾಗುತ್ತವೆ. ನಂತರ ಆ ವಿಡಿಯೋ ದೃಶ್ಯಗಳು ವೈರಲ್ ಆಗುತ್ತವೆ. ಭಾರೀ ಮಾಧ್ಯಮ ಒತ್ತಡ ಕೂಡ ಇದೆ ಮತ್ತು ಪೊಲೀಸರ ವಿರುದ್ಧ ಮಾತನಾಡಲು ಸಿದ್ಧವಿರುವ ಹಲವು ಜನರನ್ನು ನಾವು ಕಾಣಬಹುದು. ಕೊನೆಯದಾಗಿ ವ್ಯವಸ್ಥೆಯಲ್ಲಿ ಕೆಲ  ಕಾಲ ಅಂತಹ ಪೊಲೀಸರನ್ನು ಅಮಾನತುಗೊಳಿಸಬೇಕಾಗುತ್ತದೆ. ಆದರೆ ಈ ಕಪ್ಪು ಚುಕ್ಕೆ ಆತನ ವೃತ್ತಿಯಲ್ಲಿ ಹಾಗೆಯೇ ಉಳಿದುಬಿಡುತ್ತದೆ.

ತಂತ್ರಜ್ಞಾನ ಒಂದೆಡೆ ವರದಾನ ಮತ್ತು ಮತ್ತೊಂದೆಡೆ ಶಾಪ ಎರಡೂ ಆಗಿರುವುದು ಸಾಬೀತಾಗಿದೆ. ಪೊಲೀಸರಿಗೆ ಇದು ದೊಡ್ಡ ಮಟ್ಟದಲ್ಲಿ ತೊಂದರೆಯಾಗುತ್ತಿದೆ. ನೀವು ಜನರನ್ನು ತರಬೇತುಗೊಳಿಸುವ ಅಗತ್ಯವಿದೆ. ನೀವು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಮತ್ತು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಒತ್ತು ನೀಡಬೇಕಾಗಿದೆ. ನಾನು ಗಮನಿಸಿದಂತೆ ಈ ಬ್ಯಾಚ್ ನಲ್ಲಿರುವ ಹಲವರು ತಾಂತ್ರಿಕ ಹಿನ್ನೆಲೆಯಿಂದ ಬಂದವರು. ಇತ್ತೀಚಿನ ದಿನಗಳಲ್ಲಿ ಮಾಹಿತಿಗೆ ಯಾವುದೇ ಕೊರತೆ ಇಲ್ಲ. ಬಿಗ್ ಡಾಟಾ, ಕೃತಕ ಬುದ್ಧಿಮತ್ತೆ, ಸಾಮಾಜಿಕ ಮಾಧ್ಯಮ ಇತ್ಯಾದಿ ಹಲವು ಹೊಸ ಸಾಧನಗಳಿವೆ. ಅವುಗಳ ಮೂಲಕ ಮಾಹಿತಿಯನ್ನು ವಿಶ್ಲೇಷಿಸಿ ಉತ್ತಮ ಫಲಿತಾಂಶವನ್ನೂ ಸಹ ಪಡೆಯಬಹುದಾಗಿದೆ. ನೀವು ತಂಡವನ್ನು ರಚಿಸಬೇಕು ಮತ್ತು ನಿಮ್ಮ ಜೊತೆ ಕೆಲಸ ಮಾಡುವವರನ್ನು ಅದಕ್ಕೆ ಸೇರಿಸಬೇಕು. ಮತ್ತೆ ಪ್ರತಿಯೊಬ್ಬರೂ ತಂತ್ರಜ್ಞಾನದಲ್ಲಿ ಪರಿಣಿತರಾಗುವ ಅವಶ್ಯಕತೆಯೇನು ಇಲ್ಲ.

ನಾನು ನಿಮಗೊಂದು ಉದಾಹರಣೆ ನೀಡುತ್ತೇನೆ, ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಭದ್ರತೆಗೆ ಓರ್ವ ಪೊಲೀಸ್ ಪೇದೆ ಇದ್ದ, ನನಗೆ ವಾಸ್ತವವಾಗಿ ಆತನ ಹುದ್ದೆಯ ನೆನಪಿಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ಇ-ಮೇಲ್ ನಲ್ಲಿ ಸ್ವಲ್ಪ ತಾಂತ್ರಿಕ ಅಡಚಣೆ ಇತ್ತು, ಅದು ಪರಿಹಾರವಾಗುತ್ತಿರಲಿಲ್ಲ ಮತ್ತು ಅದು ಸರ್ಕಾರಕ್ಕೆ ಒಂದು ಗಂಭೀರ ವಿಚಾರವಾಗಿತ್ತು. ಆ ಬಗ್ಗೆ ದಿನಪತ್ರಿಕೆಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿತ್ತು. ನನ್ನ ತಂಡದಲ್ಲಿದ್ದ 12ನೇ ತರಗತಿ ಓದಿದ್ದ ಓರ್ವ ಯುವಕ ಆ ವಿಚಾರದಲ್ಲಿ ಆಸಕ್ತಿ ಹೊಂದಿದ್ದನು, ನಿಮಗೆ ಆಶ್ಚರ್ಯವಾಗಬಹುದು ಆತ ಆ ಸಮಸ್ಯೆಯನ್ನು ಬಗೆಹರಿಸಿಬಿಟ್ಟ. ಆಗ ಚಿದಂಬರಂ ಅವರು ಗೃಹ ಸಚಿವರಾಗಿದ್ದರು ಎನಿಸುತ್ತದೆ. ಆಗ ಅವರು ಆತನನ್ನು ಕರೆದು ಪ್ರಮಾಣಪತ್ರವನ್ನು ನೀಡಿದ್ದರು. ಇಂತಹ ಪ್ರತಿಭೆಯನ್ನು ಹೊಂದಿರುವ ಕೆಲವೇ ಕೆಲವು ಜನರು ಇರುತ್ತಾರೆ.

ನಾವು ಅಂತಹವರನ್ನು ಗುರುತಿಸಬೇಕು ಮತ್ತು ಅವರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ನೀವು ಈ ಕೆಲಸವನ್ನು ಮಾಡಿದರೆ ನಿಮಗೆ ಹೊಸ ಅಸ್ತ್ರಗಳು ದೊರಕಿದಂತಾಗುತ್ತವೆ ಮತ್ತು ಅವೇ ನಿಮ್ಮ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ನೀವು ನೂರು ಪೊಲೀಸರ ಗುಂಪಿನಲ್ಲಿದ್ದರೆ, ಇಂತಹ ಅಸ್ತ್ರಗಳನ್ನು ನೀವು ಬಳಸಿದರೆ, ತಂತ್ರಜ್ಞಾನವನ್ನು ಬಳಸಿ ಮಾಹಿತಿಯನ್ನು ವಿಶ್ಲೇಷಿಸಿದರೆ ಈ ನೂರು ಸಂಖ್ಯೆ ಸಾವಿರಾರು ಆಗಿ ಬದಲಾವಣೆಯಾಗಲಿದೆ. ಅದು ನಿಮ್ಮ ಶಕ್ತಿಯಾಗಲಿದ್ದು, ನೀವು ಅದಕ್ಕೆ ಒತ್ತು ನೀಡಬೇಕಾಗಿದೆ.

ಎರಡನೆಯದಾಗಿ ನೀವು ಇದನ್ನು ನೋಡಿರಬಹುದು, ಹಿಂದೆ ಯಾವುದೇ  ನೈಸರ್ಗಿಕ ವಿಪತ್ತುಗಳು, ಪ್ರವಾಹ, ಭೂಕಂಪ ಅಥವಾ ಭಾರೀ ಅಪಘಾತ, ಚಂಡಮಾರುತ ಮತ್ತಿತರ ಸಂದರ್ಭಗಳು ಎದುರಾದಾಗ ಸೇನಾ ಸಿಬ್ಬಂದಿ ತಕ್ಷಣ ಧಾವಿಸುತ್ತಿದ್ದರು. ಸೇನೆಯನ್ನು ನೋಡಿದಾಕ್ಷಣ ಜನರಲ್ಲಿ ಒಂದು ನೆಮ್ಮದಿಯ ನಿರಾಳತೆಯ ಭಾವ ಮೂಡುವುದು ಸಹಜ. ಅವರು ಪರಿಸ್ಥಿತಿಯಿಂದ ಹೊರಬರಲು ದೊಡ್ಡ ಮಟ್ಟದಲ್ಲಿ ಪರಿಹಾರ ನೀಡುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಪಡೆದು, ರಚಿಸಿರುವ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನ ಸಿಬ್ಬಂದಿ ಅತ್ಯುತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ ಮತ್ತು ಅವರ ಕೆಲಸ ಕಾರ್ಯಗಳನ್ನು ಟಿವಿಗಳು ಕೂಡ ಶ್ಲಾಘಿಸುತ್ತಿವೆ. ಅವರು ನೀರಿನಲ್ಲಿ, ದೂಳಿನಲ್ಲಿ ಅಥವಾ ಭಾರೀ ಬಂಡೆಗಳ ವಿರುದ್ಧ ಸೆಣೆಸುತ್ತಿದ್ದಾರೆ. ಇದು ಪೊಲೀಸ್ ಇಲಾಖೆಯಲ್ಲಿ ಹೊಸ ವರ್ಚಸ್ಸು ಸೃಷ್ಟಿಗೆ ಕಾರಣವಾಗಿದೆ.

ನಾನು ನಿಮ್ಮಲ್ಲಿ ಮನವಿ ಮಾಡುವುದೆಂದರೆ ನಿಮ್ಮ ಪ್ರದೇಶಗಳಲ್ಲಿ ನೀವು ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನ ಹಲವು ತಂಡಗಳನ್ನು ಸಜ್ಜುಗೊಳಿಸಿ ಎಂದು ಹೇಳಲು ಬಯಸುತ್ತೇನೆ. ಇವುಗಳನ್ನು ಪೊಲೀಸ್ ಮತ್ತು ಸಾರ್ವಜನಿಕರು ಇಬ್ಬರಲ್ಲೂ ಸಹ ರಚಿಸಬೇಕಾಗಿದೆ.

ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ನಿಮ್ಮ ಕರ್ತವ್ಯದ ಭಾಗವಾಗಿ ಸಾರ್ವಜನಿಕರಿಗೆ ನೆರವು ನೀಡುವ ನೈಪುಣ್ಯತೆಯನ್ನು ನೀವು ಹೊಂದಿದ್ದರೆ ಆಗ ನೀವು ಅತ್ಯಂತ ಪರಿಣಾಮಕಾರಿಯಾಗುತ್ತೀರಿ ಮತ್ತು ಇತ್ತೀಚಿನ ದಿನಗಳಲ್ಲಿ ಅಂತಹ ಹಲವು ಅಗತ್ಯತೆಗಳು ಎದುರಾಗಲಿವೆ. ಇಂದು ಎನ್ ಡಿ ಆರ್ ಎಫ್  ಮತ್ತು ಎಸ್ ಡಿ ಆರ್ ಎಫ್ ನಿಂದಾಗಿ ದೇಶದಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಹೊಸ ರೀತಿಯ ವರ್ಚಸ್ಸು ಸೃಷ್ಟಿಯಾಗುತ್ತಿದೆ.

ಜನರು ಸದಾ ಇದನ್ನು ಹೆಮ್ಮೆಯಿಂದ ಹೇಳುತ್ತಾರೆ, ಅವರು ಕಟ್ಟಡಗಳ ಕುಸಿತ ಸಂದರ್ಭದಲ್ಲಿ ಸಂಕಷ್ಟದ ಸಮಯದಲ್ಲೂ ಆಗಮಿಸುತ್ತಾರೆ ಮತ್ತು ಅವಶೇಷಗಳ ಕೆಳಗೆ ಸಿಲುಕಿರುವ ಜನರನ್ನು ಹೊರಗೆಳೆದು ತರುತ್ತಾರೆ ಎಂದು.

ಹಲವು ಕ್ಷೇತ್ರಗಳಲ್ಲಿ ನಾನು ನಿಮಗೆ ನಾಯಕತ್ವದ ಬಗ್ಗೆ ಹೇಳಲು ಬಯಸುತ್ತೇನೆ. ನಿಮಗೆ ತರಬೇತಿಯ ಪ್ರಾಮುಖ್ಯತೆ ಅರ್ಥವಾಗಿರಬಹುದು. ನಾವು ಎಂದಿಗೂ ತರಬೇತಿಯನ್ನು  ನಿರ್ಲಕ್ಷಿಸಬಾರದು. ಬಹುತೇಕ ಸರ್ಕಾರಿ ಅಧಿಕಾರಿಗಳು ತರಬೇತಿಯನ್ನು ಒಂದು ಶಿಕ್ಷೆ ಎಂದು ಭಾವಿಸುತ್ತಾರೆ. ಯಾವುದೇ ಓರ್ವ ವ್ಯಕ್ತಿ ತರಬೇತಿ ಪಡೆಯಬೇಕಾಗುತ್ತದೆ ಎಂದು ಹೇಳಿದರೆ ಸಹಜವಾಗಿಯೇ ಆತ ಉತ್ತಮವಾಗಿ ಕಾರ್ಯನಿರ್ವಹಿಸಲಾಗದ ಅಧಿಕಾರಿ ಎಂದು ಭಾವಿಸಲಾಗುತ್ತದೆ. ನಾವು ತರಬೇತಿಯನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದ್ದೇವೆ ಮತ್ತು ಉತ್ತಮ ಆಡಳಿತದ ಸಮಸ್ಯೆಗಳಲ್ಲಿ ಇದು ಅತ್ಯಂತ ಮೂಲ ಕಾರಣವಾಗಿದೆ ಮತ್ತು ನಾವು ಅದರಿಂದ ಹೊರಬರುವ ಅಗತ್ಯವಿದೆ.

ನಾನು ಅತುಲ್ ಕರ್ವಾಲ್ ಅವರ ಕಾರ್ಯವನ್ನು ಮತ್ತೆ ಶ್ಲಾಘಿಸಲು ಬಯಸುತ್ತೇನೆ. ಅತುಲ್ ಅವರು ತಾಂತ್ರಿಕ ಹಿನ್ನೆಲೆಯಿಂದ ಬಂದವರು ಮತ್ತು ಎವರೆಸ್ಟ್ ಶಿಖರವನ್ನು ಏರಿದವರು ಮತ್ತು ಅತ್ಯಂತ ಧೈರ್ಯಶಾಲಿಗಳು. ಪೊಲೀಸ್ ಇಲಾಖೆಯಲ್ಲಿ ಯಾವುದೇ ಹುದ್ದೆಯನ್ನು ಪಡೆಯಲು ಅವರಿಗೆ ಯಾವುದೇ ಕಷ್ಟವಾಗುವುದಿಲ್ಲ. ಕೆಲವು ವರ್ಷಗಳ ಹಿಂದೆ ಅವರೇ ಸ್ವತಃ ಹೈದ್ರಾಬಾದ್ ನಲ್ಲಿ ಪ್ರೊಬೆಷನರಿಗಳಿಗೆ ತರಬೇತು ನೀಡುವ ಕಾರ್ಯಕ್ಕೆ ತೆರಳಿದ್ದರು. ಈ ಬಾರಿಯೂ ಕೂಡ ತರಬೇತಿ ಕೆಲಸಕ್ಕೆ ಅವರನ್ನು ಬಳಸಿಕೊಳ್ಳಲಾಗಿದೆ. ಇದಕ್ಕಿಂತ ಮುಖ್ಯವಾದುದು ಇನ್ನೇನಿದೆ. ನಾನು ನಿಮಗೆ ಹೇಳಬೇಕಾಗಿದ್ದೆಂದರೆ ಅಂತಹವರನ್ನು ಗುರುತಿಸಬೇಕಾಗಿದೆ ಎಂಬುದು.

ಮತ್ತು ಅದಕ್ಕಾಗಿ ಸರ್ಕಾರ ಹೊಸ ಕಾರ್ಯಕ್ರಮ ಮಿಷನ್ ಕರ್ಮಯೋಗಿಯನ್ನು ಆರಂಭಿಸುತ್ತಿದೆ. ಎರಡು ದಿನಗಳ ಹಿಂದೆ ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡಿದೆ. ಮಿಷನ್ ಕರ್ಮಯೋಗಿ ರೂಪದಲ್ಲಿ ತರಬೇತಿ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ನಾವು ಮುಂದಾಗಿದ್ದೇವೆ.

ನನ್ನ ಪ್ರಕಾರ ಇದನ್ನು ಮಾಡಬೇಕಿದೆ ಮತ್ತು ಮುಂದುವರಿಸಿಕೊಂಡು ಹೋಗಬೇಕಿದೆ. ನನ್ನದೇ ಮತ್ತೊಂದು ಅನುಭವವನ್ನು ನಾವು ನಿಮ್ಮೆಲ್ಲರಿಗೂ ಹೇಳ ಬಯಸುತ್ತೇನೆ. ಗುಜರಾತ್ ನಲ್ಲಿ ನಾನು 72 ಗಂಟೆಗಳ ಸುದೀರ್ಘ ತರಬೇತಿ ಕೋಶ (ಕ್ಯಾಪ್ಸುಲ್ ) ಅನ್ನು ರಚಿಸಿದ್ದೆ ಮತ್ತು ಎಲ್ಲ ಸರ್ಕಾರಿ ಅಧಿಕಾರಿಗಳು ಮೂರು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಯನ್ನು ಪಡೆಯಲೇಬೇಕಿತ್ತು ಮತ್ತು ಅವರ ಅನುಭವದ ಕುರಿತು ನಾನು ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದೆ.

ಆರಂಭದಲ್ಲಿ ಮೊದಲ ಹಂತದಲ್ಲಿ ತರಬೇತಿ ಪಡೆದ ಸುಮಾರು 250 ಮಂದಿಯನ್ನು ನಾನು ಭೇಟಿ ಮಾಡಿದ್ದೆ ಮತ್ತು ಆ 72 ಗಂಟೆಗಳ ಕುರಿತು ನಾನು ಅಭಿಪ್ರಾಯವನ್ನು ಸಂಗ್ರಹಿಸಿದ್ದೆ. ಬಹುತೇಕ ಮಂದಿ ತರಬೇತಿ ಅತ್ಯಂತ ಉಪಕಾರಿಯಾಗಿರುವುದರಿಂದ ಅದನ್ನು 72 ಗಂಟೆಗೂ ಅಧಿಕ ಕಾಲಕ್ಕೆ ವಿಸ್ತರಿಸಬೇಕೆಂದು ಕೋರಿದ್ದರು. ಓರ್ವ ಪೊಲೀಸ್ ಪೇದೆ ಎದ್ದು ನಿಂತಾಗ, ನಾನು ಆತನ ಅನುಭವವನ್ನು ಕೇಳಿದೆ. ಆತ, ಮೊದಲು ನಾನು ಕೇವಲ ಪೊಲೀಸ್ ಪೇದೆಯಾಗಿದ್ದೆ, 72 ಗಂಟೆಗಳ ತರಬೇತಿಯ ನಂತರ ನಾನು ಉತ್ತಮ ಮನುಷ್ಯ ಜೀವಿಯೂ ಆದೆ ಎಂದು ಹೇಳಿದ್ದರು. ಈ ಮಾತುಗಳು ಅತ್ಯಂತ ಶಕ್ತಿಶಾಲಿಯಾಗಿದ್ದವು. ಆತ ಜನರು ನನ್ನನ್ನು ಎಂದಿಗೂ ಮನುಷ್ಯಜೀವಿ ಎಂದು ಪರಿಗಣಿಸುತ್ತಿರಲಿಲ್ಲ. ಜನರ ಕಣ್ಣಲ್ಲಿ ನಾನು ಓರ್ವ ಪೊಲೀಸ್ ಪೇದೆಯಾಗಿದ್ದೆ ಎಂದು ಹೇಳಿದ್ದರು. ಆ 72 ಗಂಟೆಗಳ ತರಬೇತಿ ನನಗೆ ನಾನೊಬ್ಬ ಪೊಲೀಸ್ ಮಾತ್ರವಲ್ಲದೆ, ಓರ್ವ ಮನುಷ್ಯ ಜೀವಿ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಯಿತು ಎಂದರು.

ತರಬೇತಿಯ ಶಕ್ತಿಯೇ ಅಂತಹುದು. ನಮಗೆ ನಿರಂತರ ತರಬೇತಿಯ ಅಗತ್ಯವಿದೆ. ಈ ಪರೇಡ್ ನಂತರ ನೀವು ನಿಮ್ಮ ಅಧಿಕಾರದ ಗುಂಗಿನಿಂದ ಕೆಲಕ್ಷಣ ಕೆಳಗಿಳಿದು, ನೀವು ಅದನ್ನು  ಪಾಲನೆ ಮಾಡಬೇಕಿದೆ. ನೀವು ನಿಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡಬೇಕು ಮತ್ತು ನಿಮ್ಮ ಸಹೋದ್ಯೋಗಿಗಳ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಬೇಕು. ಅವರು ದೈಹಿಕ ಕಸರತ್ತು ಮಾಡುತ್ತಿದ್ದಾರೆಯೇ, ತೂಕವನ್ನು ನಿಯಂತ್ರಿಸುತ್ತಿದ್ದಾರೆಯೇ, ನಿರಂತರವಾಗಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆಯೇ ಎಂಬುದರತ್ತ ಗಮನಹರಿಸಬೇಕಾಗಿದೆ. ಏಕೆಂದರೆ ದೈಹಿಕ ಕ್ಷಮತೆ ಕೇವಲ ನೀವು ಸಮವಸ್ತ್ರದಲ್ಲಿ ಕಾಣಿಸಿಕೊಂಡಾಗ ತೋರಿಸುವುದಕ್ಕಲ್ಲ, ಅದು ನಿಮ್ಮ ಕೆಲಸಕ್ಕೂ ಅತ್ಯಗತ್ಯವಾಗಿದೆ. ಹಾಗಾಗಿ ಅದು ನಿಮ್ಮ ಕರ್ತವ್ಯ ಮತ್ತು ನೀವು ಆ ವಿಚಾರದಲ್ಲಿ ನಾಯಕತ್ವವನ್ನು ಒದಗಿಸಲೇಬೇಕಿದೆ ಮತ್ತು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವಂತೆ

यत्यत् आचरतिश्रेष्ठः,

तत्तत्एवइतरःजनः,

सःयत्प्रमाणम्कुरुतेलोकः,

तत्अनुवर्तते।।

ಅಂದರೆ ಅತ್ಯುತ್ತಮ ಜನರು ತೋರುವ ವರ್ತನೆಯಿಂದ ಇತರೆ ಜನರೂ ಸಹ ಅದೇ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದು.

ನನಗೆ ವಿಶ್ವಾಸವಿದೆ ನೀವು ಖಂಡಿತ ಆ ವರ್ಗಕ್ಕೆ ಸೇರುತ್ತೀರಿ ಎಂಬುದು ಮತ್ತು ನೀವು ಅತ್ಯುತ್ತಮವಾದುದನ್ನೇ ಸಾಬೀತುಪಡಿಸುವ ವರ್ಗಕ್ಕೆ ಸೇರುತ್ತೀರಿ ಎಂಬುದು. ನಿಮಗೆ ಅವಕಾಶ ದೊರೆತಿರಬಹುದು, ನಿಮ್ಮ ಮೇಲೆ ಹೊಣೆಗಾರಿಕೆಯೂ ಇದೆ. ಪ್ರತಿಯೊಂದು ಕಾನೂನಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ನೀವು ನಿಮ್ಮ ಕರ್ತವ್ಯಗಳನ್ನು ಕಠಿಣ ರೀತಿಯಲ್ಲಿ ನಿರ್ವಹಿಸಬೇಕಾದ ಪ್ರಮುಖ ಪಾತ್ರವೂ ಇದ್ದು, ಇಂದಿನ ದಿನಮಾನಗಳಲ್ಲಿ ಹಲವು ಬಗೆಯ ಸವಾಲುಗಳನ್ನು ಎದುರಿಸುತ್ತಿರುವ ಮನುಕುಲವನ್ನು ರಕ್ಷಿಸುವುದು ಕೂಡ ಅವರ ಕರ್ತವ್ಯವಾಗಿದೆ. ನಮ್ಮ ದೇಶದ ತ್ರಿವರ್ಣಧ್ವಜದ ಗೌರವವನ್ನು ಎತ್ತಿಹಿಡಿಯಲು ಮತ್ತು ಭಾರತೀಯ ಸಂವಿಧಾನಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ಈ ಕರ್ತವ್ಯ ಮಾಡಬೇಕಿದೆ.

ನಾನು ನಿಯಮ ಆಧಾರಿತ ಅಥವಾ ಪಾತ್ರ ಆಧಾರಿತವಾಗಿರಬೇಕೆ ಎಂಬುದನ್ನು ನೀವೇ ತೀರ್ಮಾನಿಸಿಕೊಳ್ಳಿ, ನಾವು ನಮ್ಮ ಪಾತ್ರಗಳಿಗೆ ಪ್ರಾಮುಖ್ಯತೆ ನೀಡಿದರೆ ನಂತರ ಸಹಜವಾಗಿಯೇ ನಿಯಮಗಳೂ ಸಹ ಪಾಲನೆಯಾಗಲಿವೆ ಮತ್ತು ನಾವು ನಮ್ಮ ಪಾತ್ರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ ಜನರಲ್ಲಿ ನಮ್ಮ ಬಗೆಗಿನ ವಿಶ್ವಾಸವೂ ಸಹಜವಾಗಿಯೇ ಹೆಚ್ಚಾಗಲಿದೆ.

ಮತ್ತೊಮ್ಮೆ ನಿಮ್ಮೆಲ್ಲರಿಗೂ ನಾನು ಶುಭಾಶಯಗಳನ್ನು ಕೋರುತ್ತೇನೆ ಮತ್ತು ನೀವು ಖಾಕಿಯ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ನನಗಿದೆ. ನನ್ನ ಕಡೆಯಿಂದ ನಾನು ನಿಮ್ಮ, ನಿಮ್ಮ ಕುಟುಂಬ ಮತ್ತು ನಿಮ್ಮ ಗೌರವದ ಬಗೆಗೆ ಯಾವುದೇ ಹೊಣೆಗಾರಿಕೆಗಳಿಂದ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಈ ಭರವಸೆಯೊಂದಿಗೆ ಈ ಶುಭ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ.

ಧನ್ಯವಾದಗಳು !

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Silicon Sprint: Why Google, Microsoft, Intel And Cognizant Are Betting Big On India

Media Coverage

Silicon Sprint: Why Google, Microsoft, Intel And Cognizant Are Betting Big On India
NM on the go

Nm on the go

Always be the first to hear from the PM. Get the App Now!
...
Prime Minister Meets Italy’s Deputy Prime Minister and Minister of Foreign Affairs and International Cooperation, Mr. Antonio Tajani
December 10, 2025

Prime Minister Shri Narendra Modi today met Italy’s Deputy Prime Minister and Minister of Foreign Affairs and International Cooperation, Mr. Antonio Tajani.

During the meeting, the Prime Minister conveyed appreciation for the proactive steps being taken by both sides towards the implementation of the Italy-India Joint Strategic Action Plan 2025-2029. The discussions covered a wide range of priority sectors including trade, investment, research, innovation, defence, space, connectivity, counter-terrorism, education, and people-to-people ties.

In a post on X, Shri Modi wrote:

“Delighted to meet Italy’s Deputy Prime Minister & Minister of Foreign Affairs and International Cooperation, Antonio Tajani, today. Conveyed appreciation for the proactive steps being taken by both sides towards implementation of the Italy-India Joint Strategic Action Plan 2025-2029 across key sectors such as trade, investment, research, innovation, defence, space, connectivity, counter-terrorism, education and people-to-people ties.

India-Italy friendship continues to get stronger, greatly benefiting our people and the global community.

@GiorgiaMeloni

@Antonio_Tajani”

Lieto di aver incontrato oggi il Vice Primo Ministro e Ministro degli Affari Esteri e della Cooperazione Internazionale dell’Italia, Antonio Tajani. Ho espresso apprezzamento per le misure proattive adottate da entrambe le parti per l'attuazione del Piano d'Azione Strategico Congiunto Italia-India 2025-2029 in settori chiave come commercio, investimenti, ricerca, innovazione, difesa, spazio, connettività, antiterrorismo, istruzione e relazioni interpersonali. L'amicizia tra India e Italia continua a rafforzarsi, con grandi benefici per i nostri popoli e per la comunità globale.

@GiorgiaMeloni

@Antonio_Tajani