ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 2021ನೇ ಸಾಲಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಆಯೋಜಿಸಲಾದ 'ಸೃಜನಶೀಲತೆಯಲ್ಲಿ ಏಕತೆ' ಸ್ಪರ್ಧೆಯ ವಿಜೇತರನ್ನು ಮತ್ತು ಅದರಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದ್ದಾರೆ.
ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ಜನರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು, ಅದರಲ್ಲಿ 272 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಅವರ ಸೃಜನಶೀಲತೆಗಾಗಿ ಸಂಸ್ಕೃತಿ ಸಚಿವಾಲಯ ಅವರಿಗೆ ಪ್ರಶಸ್ತಿಯನ್ನು ನೀಡಿದೆ. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯನ್ನು ದೆಹಲಿಯ ನೆಹರೂ ಪಾರ್ಕ್ ನಲ್ಲಿ ಆಯೋಜಿಸಲಾಗಿತ್ತು.
ಅಮೃತ ಮಹೋತ್ಸವದ ಸರಣಿ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು,
"ಅದ್ಭುತ ಸೃಜನಶೀಲತೆಯಿಂದ ತುಂಬಿದ ಈ ದೇಶಭಕ್ತಿಯ ಮನೋಭಾವವು #UnityInCreativity ಗೆ ಹೊಸ ಹುರುಪನ್ನು ನೀಡಿದೆ. ಲಕ್ಷಾಂತರ ದೇಶವಾಸಿಗಳು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ ರೀತಿ ಎಲ್ಲರಿಗೂ ಸ್ಫೂರ್ತಿ ನೀಡಿದೆ. ವಿಜೇತರಿಗೆ ಮತ್ತು ಎಲ್ಲಾ ಸ್ಪರ್ಧಿಗಳಿಗೆ ಅನೇಕ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.
अद्भुत रचनात्मकता से भरी देशभक्ति की इस भावना ने #UnityInCreativity की एक नई मिसाल पेश की है। जिस प्रकार लाखों देशवासियों ने इसमें बढ़-चढ़कर भागीदारी की, वो हर किसी को प्रेरित करने वाला है। विजेताओं के साथ ही सभी प्रतिभागियों को बहुत-बहुत शुभकामनाएं। https://t.co/b25XwOsXJy
— Narendra Modi (@narendramodi) February 8, 2023


