ಚೀನಾದ ಹ್ಯಾಂಗ್‌ಝೌನಲ್ಲಿ 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪುರುಷರ ಶಾಟ್‌ಪುಟ್ ಎಫ್ 11 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮೋನು ಘಂಗಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,
ಪುರುಷರ ಶಾಟ್‌ಪುಟ್ ಎಫ್11 ಸ್ಪರ್ಧೆಯಲ್ಲಿ ಮೋನು ಘಂಗಾಸ್ ಅವರು ಅಮೋಘ ಕಂಚಿನ ಪದಕ ಗೆದ್ದಿದ್ದಾರೆ. ಅವರ ಸಾಧನೆ ನಿಜಕ್ಕೂ ಸ್ಪೂರ್ತಿದಾಯಕ. ಅವರ ಶ್ರಮ ಮತ್ತು ಸಮರ್ಪಣೆಗೆ ಫಲ ಸಿಕ್ಕಿದೆ. ಭಾರತ ನಿಜವಾಗಿಯೂ ಉತ್ಸುಕವಾಗಿದೆ'' ಎಂದು ಬರೆದುಕೊಂಡಿದ್ದಾರೆ.
Incredible Bronze by @GhangasMonu in Men's Shot put F11 event. His achievement is truly inspiring. All the hard work and dedication has paid off. India is truly elated. pic.twitter.com/VZN3L9mqZc
— Narendra Modi (@narendramodi) October 23, 2023


