ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬರೆದಿರುವ ಹೊಚ್ಚ ಹೊಸ ಮತ್ತು ಪರಿಷ್ಕರಿಸಿದ ಆವೃತ್ತಿಯ “ಪರೀಕ್ಷಾ ಯೋಧರು” ಕೃತಿ ಇಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಪ್ರಿಯ ಮಾಸಿಕ ರೇಡಿಯೊ ಕಾರ್ಯಕ್ರಮ ಮನ್ ಕೀ ಬಾತ್ (ಮನದ ಮಾತು) ನ ಇತ್ತೀಚಿನ ಆವೃತ್ತಿಯಲ್ಲಿ ಪರಿಷ್ಕೃತ ಆವೃತ್ತಿಯ “ಎಕ್ಸಾಂ ವಾರಿಯರ್ಸ್” ಕೃತಿಯನ್ನು ಅತಿ ಶೀಘ್ರವೇ ಪ್ರಕಟಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಆ ಕೃತಿ ಇದೀಗ ನಿಮ್ಮ ಮುಂದಿದೆ. ಇದು ಹಲವಾರು ಆನ್’ಲೈನ್ ಮಾರಾಟ ವೇದಿಕೆಗಳಲ್ಲಿ ಪೂರ್ವ-ಆದೇಶದಲ್ಲಿ(ಪ್ರೀ-ಆರ್ಡರ್) ಲಭ್ಯವಾಗಲಿದೆ. ನೀವು (https://amzn.to/3eaYOHH) or here (https://bit.ly/3eeUVl8). ಇಲ್ಲಿ ಪ್ರೀ-ಆರ್ಡರ್ ಮಾಡಬಹುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2018ರಲ್ಲಿ ಮೊದಲ ಆವೃತ್ತಿಯ ‘ಎಕ್ಸಾಂ ವಾರಿಯರ್ಸ್’ ಕೃತಿಯಲ್ಲಿ ವಿದ್ಯಾರ್ಥಿ ಜೀವನ, ಪರೀಕ್ಷೆ ಎದುರಿಸುವ ಆತ್ಮಸ್ಥೈರ್ಯ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಮಕ್ಕಳಿಗೆ ತಿಳಿ ಹೇಳುವ, ಮಾರ್ಗದರ್ಶನ ನೀಡುವ ಸ್ಥೂರ್ತಿದಾಯಕ ವಿಚಾರಧಾರೆಗಳು ಮತ್ತು ಆಲೋಚನೆಗಳನ್ನು ಬರೆದಿದ್ದಾರೆ. ಶಿಕ್ಷಣ ಎಂದರೆ ಮಕ್ಕಳು ಪರೀಕ್ಷೆಗಳಲ್ಲಿ ಕೇವಲ ಗರಿಷ್ಠ ಅಂಕಗಳನ್ನು ಗಳಿಸಲು ಮಾತ್ರ ಸೀಮಿತವಾಗಬಾರದು. ಕಲಿಕೆಯೇ ಶಿಕ್ಷಣದ ಆದ್ಯತೆಯ ಗಮನವಾಗಬೇಕು. ಮಕ್ಕಳು ತಮ್ಮಲ್ಲಿರುವ ಸುಪ್ತ ಮತ್ತು ಅಗಾಧ ಜ್ಞಾನವನ್ನು ಹೊರಹಾಕುವ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವ ಮುಕ್ತ ಪರಿಸರ ಸೃಷ್ಟಿ ಮಾಡುವುದೇ ನಿಜವಾದ ಶಿಕ್ಷಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ.
ಪ್ರಧಾನ ಮಂತ್ರಿ ಅವರ ‘ಎಕ್ಸಾಂ ವಾರಿಯರ್ಸ್’ ಕೃತಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಗಿದೆ. ಬ್ರೈಲ್ ಲಿಪಿಯಲ್ಲೂ ಹೊರಮೂಡಿರುವುದು ವಿಶೇಷ. ಈ ಕೃತಿಯನ್ನು ವಿದ್ಯಾರ್ಥಿ ಸಮುದಾಯ, ಪೋಷಕರು, ಬೋಧಕ ವರ್ಗ ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮೊದಲ ಆವೃತ್ತಿಯ ಈ ಕೃತಿಯು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ಕಂಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ 3 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದೊಂದಿಗೆ ಸಂಬಂಧ ಮತ್ತು ಸಂಪರ್ಕ ಹೊಂದಿರುವ ಹಲವು ಪರಿಣತರು, ತಜ್ಞರೊಂದಿಗೆ ಸಂವಾದ ನಡೆಸಿದ್ದಾರೆ. ಅವರು ಪ್ರಧಾನಿ ಅವರಿಗೆ ಹಲವಾರು ಸಲಹೆ, ಸೂಚನೆ, ದೃಷ್ಟಿಕೋನ ಮತ್ತು ಮಾರ್ಗದರ್ಶನ ನೀಡಿದ್ದಾರೆ.
ಅದರಲ್ಲೂ ವಿಶೇಷವಾಗಿ, ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ, ಶಿಕ್ಷಣ ಸೇರಿದಂತೆ ಪ್ರತಿಯೊಂದು ವಲಯದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುವ ಅಥವಾ ಸುಧಾರಣೆ ತರುವ ಪರಿಸ್ಥಿತಿ ಸೃಷ್ಟಿಯಾಯಿತು. ಇದೇ ಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಎಕ್ಸಾಂ ವಾರಿಯರ್ಸ್’ ಕೃತಿ ರಚಿಸಿದರು. ಹೊಸ ಆವೃತ್ತಿಯಲ್ಲಿ ಅವರು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಗುರಿ ನಿಗದಿ, ತರಗತಿ ಹೊರಗಿನ ಮಕ್ಕಳ ಚಟುವಟಿಕೆಗಳು ಇತ್ಯಾದಿ ಹಲವು ವಿಚಾರಗಳಿಗೆ ಒತ್ತು ನೀಡಿದ್ದಾರೆ.
ಮಕ್ಕಳ ಕಲಿಕೆಗೆ ಪೋಷಕರು ಹೇಗೆ ನೆರವಾಗಬೇಕು, ಕುಟುಂಬದಲ್ಲಿ ತಂತ್ರಜ್ಞಾನ ಬಳಕೆಯ ಪಾತ್ರ, ಮಕ್ಕಳಿಗೆ ಪ್ರೋತ್ಸಾಹ ನೀಡುವ ವಿಧಾನ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡುವ ರೀತಿ ಇತ್ಯಾದಿ ವಿಚಾರಗಳ ಕುರಿತು ಪ್ರಧಾನಿ ಅವರು ಸಲಹೆ ನೀಡಿದ್ದಾರೆ.
ಮೊದಲ ಆವೃತ್ತಿಯ ‘ಎಕ್ಸಾಂ ವಾರಿಯರ್ಸ್’ ಕೃತಿಯ ಪ್ರತಿ ಪಠ್ಯದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿರುವ ಸಂವಾದ ಚಟುವಟಿಕೆಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಹೆಚ್ಚಿನ ಸಂವಾದ ಚಟುವಟಿಕೆಗಳಿಗೆ ಹೊಸ ಆವೃತ್ತಿಯಲ್ಲಿ ಒತ್ತು ನೀಡಲಾಗಿದೆ. ಅವುಗಳನ್ನು ನರೇಂದ್ರ ಮೋದಿ ಮೊಬೈಲ್ ಆ್ಯಪ್’ನಲ್ಲಿ ಸಹ ಸಂಯೋಜಿಸಲಾಗಿದೆ. ನರೇಂದ್ರ ಮೋದಿ ಮೊಬೈಲ್ ಆ್ಯಪ್’ನ ‘ಎಕ್ಸಾಂ ವಾರಿಯರ್ಸ್’ ಮಾದರಿಯ ಕೃತಿಗೆ ತಂತ್ರಜ್ಞಾನ-ಸಾಮಾಜಿಕ ಆಯಾಮ ನೀಡಲಾಗಿದೆ.
ಹೊಚ್ಚ ಹೊಸ ಮತ್ತು ಪರಿಷ್ಕರಿಸಿದ ಆವೃತ್ತಿಯ ‘ಎಕ್ಸಾಂ ವಾರಿಯರ್ಸ್’ ಕೃತಿ ಇದೀಗ ಆನ್’ಲೈನ್ ಹಲವಾರು ಮಾರಾಟ ವೇದಿಕೆಗಳಲ್ಲಿ ಲಭ್ಯವಿವೆ. ನೀವು (https://amzn.to/3eaYOHH) or here (https://bit.ly/3eeUVl8). ಇಲ್ಲಿ ಪ್ರೀ-ಆರ್ಡರ್ ಮಾಡಬಹುದು.


