ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಇಮ್ಯಾನುಲ್ ಮ್ಯಾಕ್ರನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು.
ಫ್ರಾನ್ಸ್ ನಲ್ಲಿ ಕಾಣಿಸಿಕೊಂಡಿರುವ ಅಭಾವ ಪರಿಸ್ಥಿತಿ ಮತ್ತು ಕಾಳ್ಗಿಚ್ಚು ಸಮಸ್ಯೆ ನಿವಾರಣೆಗಾಗಿ ಪ್ರಧಾನಮಂತ್ರಿ ಅವರು ಆ ದೇಶಕ್ಕೆ ಬೆಂಬಲ ವ್ಯಕ್ತಪಡಿಸಿದರು.
ರಕ್ಷಣಾ ಸಹಕಾರ ಯೋಜನೆಗಳು ಹಾಗೂ ನಾಗರಿಕ ಅಣು ಇಂಧನ ಸಹಕಾರ ವಲಯ ಸೇರಿದಂತೆ ಹಾಲಿ ಪ್ರಗತಿಯಲ್ಲಿರುವ ದ್ವಿಪಕ್ಷೀಯ ಉಪಕ್ರಮಗಳನ್ನು ಪರಿಶೀಲಿಸಿದರು.
ಜಾಗತಿಕ ಆಹಾರ ಭದ್ರತೆ ಸೇರಿದಂತೆ ಪ್ರಮುಖ ಬೌಗೋಳಿಕ ರಾಜಕೀಯ ಸವಾಲುಗಳ ಕುರಿತು ಅವರು ಚರ್ಚಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತ – ಫ್ರಾನ್ಸ್ ನಡುವಿನ ಸಹಭಾಗಿತ್ವ ಪಡೆದುಕೊಂಡಿರುವ ಶಕ್ತಿ ಮತ್ತು ಆಳದ ಬಗ್ಗೆಯೂ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು ಹೊಸ ವಲಯಗಳಲ್ಲಿನ ಬಾಂಧವ್ಯ ವಿಸ್ತರಣೆಗಾಗಿ ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರೆಸಲು ಸಮ್ಮತಿಸಿದರು.


