ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಪಂಚದ ಪ್ರಮುಖ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಿದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸಿಇಒ ದುಂಡುಮೇಜಿನ ಸಭೆಯ ಫಲಿತಾಂಶಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು.

ಚರ್ಚೆಗಳು ಒಳನೋಟವುಳ್ಳ ಮತ್ತು ದೂರದೃಷ್ಟಿಯಿಂದ ಇದ್ದವು. ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಹೆಚ್ಚಿಸುವತ್ತ ಗಮನ ಹರಿಸಿವೆ, ಜಾಗತಿಕ ಸಹಯೋಗವನ್ನು ಬಲಪಡಿಸುವುದು ಮತ್ತು ಬೆಳವಣಿಗೆಯ ಅವಕಾಶಗಳನ್ನು ತೆರೆಯುವತ್ತ ಗಮನ ಹರಿಸಿವೆ.
ಮಾನವ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಹಂಚಿಕೆಯ ಬದ್ಧತೆಗೆ ಸಾಕ್ಷಿಯಾಗಿರುವುದು ಹೃದಯಸ್ಪರ್ಶಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
"ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸಿಇಒ ದುಂಡುಮೇಜಿನ ಸಭೆಯು ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರಪಂಚದ ವಿವಿಧ ಮಧ್ಯಸ್ಥಗಾರರನ್ನು ಒಟ್ಟುಗೂಡಿಸಿತು. ಚರ್ಚೆಗಳು ಒಳನೋಟವುಳ್ಳ ಮತ್ತು ದೂರದೃಷ್ಟಿಯಿಂದ ಇದ್ದವು. ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಹೆಚ್ಚಿಸುವ, ಜಾಗತಿಕ ಸಹಯೋಗವನ್ನು ಬಲಪಡಿಸುವುದು ಮತ್ತು ಬೆಳವಣಿಗೆಗೆ ಅವಕಾಶಗಳನ್ನು ತೆರೆಯುವತ್ತ ಗಮನ ಹರಿಸಿವೆ.

ಮಾನವ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಹಂಚಿಕೆಯ ಬದ್ಧತೆಯನ್ನು ನೋಡುವುದು ಹೃದಯಸ್ಪರ್ಶಿಯಾಗಿದೆ."
The CEO Roundtable at the AI Impact Summit brought together various stakeholders from the world of AI, technology and innovation. The discussions were insightful and forward-looking, focused on scaling AI responsibly, strengthening global collaboration and unlocking opportunities… pic.twitter.com/ZFbrfksL86
— Narendra Modi (@narendramodi) February 19, 2026


