ಪ್ರಮುಖ ಯುದ್ಧ ಟ್ಯಾಂಕರ್ ಅರ್ಜುನ್ [ಎಂಕೆ-1ಎ] ಸೇನೆಗೆ ಹಸ್ತಾಂತರ
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಕೆ
ರಕ್ಷಣಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವತ್ತ ಗಮನ
ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ
ಭಾರತದ ಕರಾವಳಿ ಭಾಗದ ಅಭಿವೃದ್ಧಿಗೆ ಆಯವ್ಯಯದಲ್ಲಿ ವಿಶೇಷ ಮಹತ್ವ ಕೊಡಲಾಗಿದೆ
ದೇವೇಂದ್ರಕುಲ ವೆಲಲಾರ್ ಸಮುದಾಯವನ್ನು ಅವರ ಪರಂಪರೆ ಹೆಸರಿನಿಂದ ಕರೆಯಲಾಗುತ್ತದೆ, ದೀರ್ಘಕಾಲೀನ ಬೇಡಿಕೆ ಈಡೇರಿದೆ
ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳು ಸಹೋದರರು ಮತ್ತು ಸಹೋದರರಿಯರ ಆಕಾಂಕ್ಷೆಗಳ ಬಗ್ಗೆ ಸರ್ಕಾರ ವಿಶೇಷ ನಿಗಾವಹಿಸಿದೆ: ಪ್ರಧಾನಮಂತ್ರಿ
ತಮಿಳುನಾಡಿನ ಸಂಸ್ಕೃತಿ ಆಚರಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮ ಗೌರವ. ತಮಿಳುನಾಡು ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೆನ್ನೈನಲ್ಲಿ ಇಂದು ಹಲವು ಪ್ರಮುಖ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಪ್ರಮುಖ ಅರ್ಜುನ್ ಯುದ್ಧ ಟ್ಯಾಂಕ್ [ಎಂಕೆ-1ಎ] ಅನ್ನು ಸೇನೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು. 

ಸಮರ್ಪಕವಾಗಿ ಜಲ ಸಂಪನ್ಮೂಲಗಳನ್ನು ಬಳಸಿಕೊಂಡು ತಮಿಳುನಾಡಿನ ರೈತರು ದಾಖಲೆ ಪ್ರಮಾಣದಲ್ಲಿ ಆಹಾರಗಳನ್ನು ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಗ್ರ್ಯಾಂಡ್ ಅಣಿಕಟ್ ಕಾಲುವೆ ನಮ್ಮ ಇತಿಹಾಸದ ಅದ್ಭುತಕ್ಕೆ ಜೀವಂತ ಸಾಕ್ಷಿಯಾಗಿದೆ. ಇದು ನಮ್ಮ ದೇಶದ ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

“ ತಮಿಳು ಕವಿ ತವ್ವೈಯರ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನೀರು ಸಂರಕ್ಷಣೆ ಕೇವಲ ರಾಷ್ಟ್ರೀಯ ವಿಚಾರವಲ್ಲ. ಆದರೆ ಇದು ಜಾಗತಿಕ ವಿಷಯ. ಒಂದು ಹನಿ ಹೆಚ್ಚು ಬೆಳೆ ಎಂಬ ಮಂತ್ರವನ್ನು ನೆನಪಿಡುವ ಅಗತ್ಯವನ್ನು ಒತ್ತಿ ಹೇಳಿದರು.

ಮೊದಲ ಹಂತದ 9 ಕಿಲೋಮೀಟರ್ ಚೆನ್ನೈ ಮೆಟ್ರೋ ರೈಲು ಯೋಜನೆಯ ಕುರಿತು ಮಾತನಾಡಿದ ಅವರು, ಈ ಪೈಕಿ ಒಂದು ಭಾಗವನ್ನು ಉದ್ಘಾಟಿಸಲಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ಇದರಲ್ಲಿ ಒಂದು ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದೆ ಎಂದು ಹೇಳಿದರು.

ಈ ಯೋಜನೆ ಆತ್ಮನಿರ್ಭರ್ ಭಾರತ್ ನಡಿ ನಡೆದಿದ್ದು. ಪರಿಕರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಸಿವಿಲ್ ಕಾಮಗಾರಿ ಚಟುವಟಿಕೆಗಳನ್ನು ಭಾರತೀಯ ಗುತ್ತಿಗೆದಾರರೇ ನಿರ್ವಹಿಸಿದ್ದಾರೆ. ಎರಡನೇ ಹಂತದ 119 ಕಿಲೋಮೀಟರ್ ಮೆಟ್ರೋ ರೈಲು ಮಾರ್ಗದ ನಿರ್ಮಾಣಕ್ಕಾಗಿ ಆಯವ್ಯಯದಲ್ಲಿ 63,000 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಒಂದೇ ಬಾರಿಗೆ ಬೇರೆ ಯಾವುದೇ ನಗರಕ್ಕೂ ಇಷ್ಟೊಂದು ದೊಡ್ಡಮಟ್ಟದ ಯೋಜನೆಗೆ ಮಂಜೂರಾತಿ ನೀಡಿರಲಿಲ್ಲ. ನಗರ ಸಾರಿಗೆಗೆ ಪುಷ್ಠಿ ನೀಡುವುದರಿಂದ ನಗರದ ನಾಗರಿಕರ ಬದುಕು ಸುಗಮವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಸಂಪರ್ಕ ಸುಧಾರಣೆಯಿಂದ ಅನುಕೂಲಗಳು ಲಭಿಸುತ್ತವೆ, ಅಲ್ಲದೇ ವಾಣಿಜ್ಯ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ. ಚೆನ್ನೈ ಬೀಚ್, ಸುವರ್ಣ ಚತುಷ್ಪಥದ ಎನ್ನೋರೆಅಟ್ಟಿಪಟ್ಟು ಅತಿ ಹೆಚ್ಚು ಸಂಚಾರಿ ದಟ್ಟಣೆ ಇರುವ ಮಾರ್ಗವಾಗಿದೆ. ಚೆನ್ನೈ ಬಂದರು ಮತ್ತು ಕಾಮರಾಜ ಬಂದರು ನಡುವೆ ಅತಿ ಹೆಚ್ಚು ಸರಕು ಸಾಗಾಟದ ಒತ್ತಡವಿದೆ. ಇದನ್ನು ನಿವಾರಿಸಲು ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವೆ ನಾಲ್ಕನೇ ಪಥ ನಿರ್ಮಾಣದಿಂದ ಈ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸ ತಮ್ಮದಾಗಿದೆ ಎಂದ ಪ್ರಧಾನಮಂತ್ರಿಯವರು, ವಿಲ್ಲುಪುರಂ – ತಂಜಾವೂರ್ ತಂಜಾವೂರ್ ಯೋಜನೆಯ ವಿದ್ಯುದೀಕರಣದಿಂದ ಕೊನೆ ಹಂತದ ನಗರಗಳಿಗೆ ಅತಿ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ ಎಂದರು.

ಇಂದು ಪುಲ್ವಾಮ ದಾಳಿಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹುತಾತ್ಮರಾದವರಿಗೆ ಪ್ರಧಾನಮಂತ್ರಿಯವರು ಗೌರವ ಸಲ್ಲಿಸಿದರು. “ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಿಸುತ್ತಿದ್ದೇವೆ. ನಮ್ಮ ಭದ್ರತಾ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಶೌರ್ಯ ಮುಂದಿನ ಪೀಳಿಗೆಗಳಿಗೆ ನಿರಂತರ ಸ್ಫೂರ್ತಿಯಾಗಲಿದೆ” ಎಂದರು.

ರಕ್ಷಣಾ ವಲಯದಲ್ಲಿ ಸ್ವಾವಲಂಬಿಯಾಗಲು ಬೃಹತ್ ಪ್ರಯತ್ನ ಕೈಗೊಳ್ಳಲಾಗಿದೆ. ಇದಕ್ಕೆ ಸ್ಫೂರ್ತಿ ಎಂದರೆ ಜಗತ್ತಿನ ಪ್ರಾಚೀನ ಭಾಷೆ ತಮಿಳಿನಲ್ಲಿ ಬರೆದ ಮಹಾಕವಿ ಸುಬ್ರಮನಿಯ ಭಾರತಿ ಅವರು. “ ತಮಿಳಿನಲ್ಲಿ ನಾವು ಶಸ್ತ್ರಾಗಳನ್ನು ಮಾಡೋಣ, ತಮಿಳಿನಲ್ಲಿ ನಾವು ಕಾಗದಗಳನ್ನು ತಯಾರಿಸೋಣ, ನಾವು ಕಾರ್ಖಾನೆಗಳನ್ನು ಸ್ಥಾಪಿಸೋಣ, ಚಲಿಸುವ, ಹಾರಬಲ್ಲ ವಾಹನಗಳನ್ನು ತಯಾರು ಮಾಡೋಣ, ಜಗತ್ತನ್ನೇ ನಿರ್ಮಿಸುವ ಹಡಗುಗಳನ್ನು ನಿರ್ಮಿಸೋಣ” ಎಂಬ ಸಾಲುಗಳನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ದೇಶದ ಎರಡು ರಕ್ಷಣಾ ಕಾರಿಡಾರ್ ಗಳ ಪೈಕಿ ಒಂದು ತಮಿಳುನಾಡಿನಲ್ಲಿದೆ. ಮತ್ತೊಂದು ಕಾರಿಡಾರ್ ನಲ್ಲಿ ಈಗಾಗಲೇ 8,100 ಕೋಟಿ ರೂ ಬಂಡವಾಳ ದೊರೆಯುವ ಬದ್ಧತೆಯನ್ನು ಸ್ವೀಕರಿಸಿದೆ. ತಮಿಳು ನಾಡು ಭಾರತದ ಆಟೋಮೊಬೈಲ್ ಕ್ಷೇತ್ರದ ಮುಂಚೂಣಿ ಉತ್ಪಾದನಾ ಕ್ಷೇತ್ರವಾಗಿದೆ. ಈಗ ತಮಿಳುನಾಡು ಯುದ್ಧ ಟ್ಯಾಂಕ್ ಗಳ ನಿರ್ಮಾಣದ ಕೇಂದ್ರವಾಗಲಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅರ್ಜುನ್ ಸರಣಿಯ ಮಾರ್ಕ್ 1ಎ ಅನ್ನು ಸೇನೆಗೆ ಸಪರ್ಪಿಸಿದರು. “ ದೇಶೀಯವಾಗಿ ವಿನ್ಯಾಸ ಮಾಡಿರುವ ಮತ್ತು ಉತ್ಪಾದಿಸಿರುವ ಪ್ರಮುಖ ಯುದ್ಧ ಟ್ಯಾಂಕರ್ ಅರ್ಜುನ್ ಮಾರ್ಕ್ 1ಎ ಅನ್ನು ದೇಶಕ್ಕೆ ಸಮರ್ಪಿಸಲು ಹೆಮ್ಮೆ ಪಡುತ್ತೇನೆ. ಈ ಟ್ಯಾಂಕರ್ ತಮಿಳುನಾಡಿನಲ್ಲಿ ಉತ್ಪಾದನೆಯಾಗುತ್ತಿದ್ದು, ಇದನ್ನು ಉತ್ತರ ಭಾಗದ ಗಡಿಗಳಲ್ಲಿ ದೇಶ ಕಾಯಲು ಬಳಸಿಕೊಳ್ಳಲಾಗುವುದು. ಇದು ದೇಶ ಒಂದೇ ಎಂಬ ಸ್ಪೂರ್ತಿಯನ್ನು ಬಿಂಬಿಸಲಿದ್ದು – ಭಾರತ ಏಕ್ತಾ ದೇಶಂ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ರಕ್ಷಣಾ ವಲಯದಲ್ಲಿ ಆತ್ಮನಿರ್ಭರ್ ಭಾರತ ನಿರ್ಮಿಸಲು ಉತ್ತಮ ವೇಗದಲ್ಲಿ ಸಾಗಲು ಇದು ಸಹಕಾರಿಯಾಗಿದೆ ಎಂದರು.

ನಮ್ಮ ಸಶಸ್ತ್ರ ಪಡೆಗಳು ದೇಶದ ಧೈರ್ಯದ ನೀತಿಯನ್ನು ಸೂಚಿಸುತ್ತವೆ. ನಮ್ಮ ತಾಯ್ನಾಡನ್ನು ರಕ್ಷಿಸಲು ಇವು ಪೂರ್ಣ ಪ್ರಮಾಣದಲ್ಲಿ ಸಮರ್ಥವಾಗಿರುವುದನ್ನು ಮತ್ತೆ ಮತ್ತೆ ನಿರೂಪಿಸುತ್ತಿವೆ. ಭಾರತ ಶಾಂತಿಯಲ್ಲಿ ನಂಬಿಕೆ ಹೊಂದಿದೆ ಎಂಬುದನ್ನು ಸಹ ಪದೇ ಪದೇ ಸಾಬೀತುಪಡಿಸುತ್ತಿವೆ. ಭಾರತ ತನ್ನ ಸಾರ್ವಭೌಮತ್ವವನ್ನು ಎಲ್ಲಾ ರೀತಿಯಿಂದಲೂ ರಕ್ಷಿಸಲಿದೆ ಎಂದರು.

ಮದ್ರಾಸ್ ನ ಐಐಟಿಯ ಡಿಸ್ಕವರಿ ಕ್ಯಾಂಪನ್ ನ ಎರಡು ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ವಿಶ‍್ವ ದರ್ಜೆಯ ಮೂಲ ಸೌಕರ್ಯಗಳಿಂದ ಅತ್ಯುತ್ತಮ ಸಂಶೋಧನಾ ಕೇಂದ್ರ ದೊರೆಯಲಿದೆ ಮತ್ತು ಭಾರತದಾದ್ಯಂತ ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯುತ್ತದೆ ಎಂದರು.

ಈ ಬಾರಿಯ ಬಜೆಟ್ ನಲ್ಲಿ ಸುಧಾರಣೆಯ ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಿದೆ. ದೇಶದ ಕರಾವಳಿ ಭಾಗದ ಅಭಿವೃದ‍್ದಿಗೆ ವಿಶೇಷ ಮಹತ್ವ ನೀಡಿದೆ. ಮೀನುಗಾರಿಕಾ ವಲಯಕ್ಕೆ ಸಾಲ ಸೌಲಭ್ಯದ ವ್ಯವಸ್ಥೆ, ಚೆನ್ನೈ ಸೇರಿದಂತೆ ಐದು ಮೀನುಗಾರಿಕಾ ಬಂದರುಗಳಲ್ಲಿ ಮೀನುಗಾರರು ಮತ್ತು ಕಡಲಕಲೆ ಕೃಷಿಗೆ ಅನುಕೂಲ ಕಲ್ಪಿಸಲು ಮೂಲ ಸೌಕರ್ಯ ಮೇಲ್ದರ್ಜೇಗೇರಿಸಲಾಗುತ್ತಿದೆ. ಇದರಿಂದ ಕರಾವಳಿ ಸಮುದಾಯಗಳ ಜೀವನ ಮಟ್ಟ ಸುಧಾರಣೆಗೆ ಪೂರಕವಾಗಲಿದೆ. ಕಡಲಕಳೆ ಕೃಷಿ, ಬಹು ಉದ್ದೇಶದ ಕಡಲ ಕಳೆ ಪಾರ್ಕ್ ಸಹ ತಮಿಳುನಾಡಿನಲ್ಲಿ ತಲೆ ಎತ್ತಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ದೇವೇಂಧ್ರಕುಲ ವೆಲಾಲರ್ ಸಮುದಾಯದ ಬೇಡಿಕೆಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ. ದೇವೇಂದ್ರಕುಲ ವೆಲಲಾರ್ ಸಮುದಾಯವನ್ನು ಅವರ ಪರಂಪರೆ ಹೆಸರಿನಿಂದ ಕರೆಯಲಾಗುತ್ತದೆ ಮತ್ತು ಸಂವಿಧಾನದ ಪರಿಚ್ಚೇದದಲ್ಲಿ ಈ ಸಂಬಂಧ ಆರರಿಂದ ಏಳು ಹೆಸರುಗಳನ್ನು ನಮೂದಿಸಲಾಗಿದೆ. ದೀರ್ಘಕಾಲೀನ ಬೇಡಿಕೆ ಈಡೇರಿದೆ. ಇವರ ಹೆಸರನ್ನು ದೇವೇಂದ್ರಕುಲ ವೆಲಲಾರ್ ಎಂದು ಸಂವಿಧಾನದ ಪರಿಚ್ಚೇದಕ್ಕೆ ತಿದ್ದುಪಡಿ ತಂದು ಕರಡು ಗಜೆಟ್ ನಲ್ಲಿ ಪ್ರಕಟಿಸಲಾಗುವುದು. ಮುಂದಿನ ಸಂಸತ್ ಅಧಿವೇಶನದಲ್ಲಿ ಈ ತಿದ್ದುಪಡಿ ಮಂಡಿಸಲಾಗುವುದು ಎಂದು ಹೇಳಿದರು.

ಈ ಬೇಡಿಕೆ ಕುರಿತು ವಿಸ್ತಾರವಾದ ಅಧ್ಯಯನ ನಡೆಸಿದ ತಮಿಳುನಾಡು ಸರ್ಕಾರಕ್ಕೆ ಪ್ರಧಾನಮಂತ್ರಿಯವರು ಧನ್ಯವಾದ ಹೇಳಿದರು. ಈ ನಿರ್ಧಾರ ಹೆಸರು ಬದಲಾವಣೆಗಿಂತ ಹೆಚ್ಚಾಗಿದೆ. ಇದು ನ್ಯಾಯ, ಘನತೆ ಮತ್ತು ಅವಕಾಶವಾಗಿದೆ. ತಮಿಳುನಾಡಿನ ಸಂಸ್ಕೃತಿ ಆಚರಿಸುವ ಮತ್ತು ರಕ್ಷಿಸುವ ನಿಟ್ಟಿನ;ಲ್ಲಿ ಕೆಲಸ ಮಾಡುವುದು ನಮ್ಮ ಗೌರವ. ತಮಿಳುನಾಡಿನ ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯವಾಗಿದೆ ಎಂದು ಹೇಳಿದರು.

ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳು ಸಹೋದರರು ಮತ್ತು ಸಹೋದರರಿಯರ ಆಕಾಂಕ್ಷೆಗಳ ಬಗ್ಗೆ ಸರ್ಕಾರ ವಿಶೇಷ ನಿಗಾವಹಿಸಿದೆ. ಜಾಫ್ನಾಗೆ ಭೇಟಿ ನೀಡಿದ ಏಕೈಕ ಪ್ರಧಾನಮಂತ್ರಿ ಎಂದರೆ ಅದು ಮೋದಿ ಮಾತ್ರ. ತಮಿಳರಿಗೆ ಹಿಂದೆಂದೂ ಇಲ್ಲದಷ್ಟು ಸಂಪನ್ಮೂಲಗಳನ್ನು ಈ ಸರ್ಕಾರ ಒದಗಿಸಿದೆ. ಈಶಾನ್ಯ ಶ್ರೀಲಂಕಾದಲ್ಲಿ ಸ್ಥಳಾಂತರಗೊಂಡ ತಮಿಳರಿಗೆ 50 ಸಾವಿರ ಮನೆಗಳನ್ನು ಮತ್ತು ತೋಟಗಾರಿಕೆ ಪ್ರದೇಶದಲ್ಲಿ ನಾಲ್ಕು ಸಾವಿರ ಮನೆಗಳನ್ನು ನಿರ್ಮಿಸಿದೆ. ಆರೋಗ್ಯ ವಲಯದಲ್ಲಿ ನಾವು ತಮಿಳು ಸಮುದಾಯಕ್ಕೆ ಉಚಿತ ಆಂಬುಲೆನ್ಸ್ ಸೌಲಭ್ಯ ದೊರಕಿಸಿಕೊಡಲು ಆರ್ಥಿಕ ನೆರವು ಕಲ್ಪಿಸಿದ್ದೇವೆ. ಡಿಕೋಯಾದಲ್ಲಿ ಒಂದು ಆಸ್ಪತ್ರೆ ನಿರ್ಮಿಸಲಾಗಿದೆ. ಜಾಫ್ನಾ – ಮನ್ನಾರ್ ನಡುವೆ ರೈಲು ಸಂಪರ್ಕ ನಿರ್ಮಿಸಿದ್ದು, ಇದರಿಂದ ಸಂಪರ್ಕ ಸುಧಾರಣೆಗೆ ಸಹಕಾರಿಯಾಗಿದೆ. ಚೆನ್ನೈ – ಜಾಫ್ನಾ ನಡುವೆ ವಿಮಾನ ಸೇವೆ ಒದಗಿಸಲಾಗಿದೆ. ಜಾಫ್ನಾ ಸಾಂಸ್ಕೃತಿಕ ಕೇಂದ್ರವನ್ನು ಭಾರತ ನಿರ್ಮಿಸಿದ್ದು, ಇದು ಶೀಘ್ರ ಉದ್ಘಾಟನೆಯಾಗಲಿದೆ. ಶ‍್ರೀಲಂಕಾದ ನಾಯಕರ ಸ್ಥಿರವಾದ ಬೆಂಬಲದೊಂದಿಗೆ ತಮಿಳರ ಹಕ್ಕುಗಳ ವಿಚಾರವನ್ನು ತೆಗೆದುಕೊಳ್ಳಲಾಗಿದೆ. ತಮಿಳರು ಸಮಾನತೆ, ನ್ಯಾಯ, ಶಾಂತಿ ಮತ್ತು ಘನತೆಯಿಂದ ಬದುಕಲು ಬೇಕಾದುದನ್ನು ಕಲ್ಪಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

 

ಮೀನುಗಾರರ ಹಿತಾಸಕ್ತಿಯ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಸದಾ ಕಾರ್ಯನಿರ್ವಹಿಸುತ್ತಿದೆ ಮತ್ತು ಶ್ರೀಲಂಕಾದಿಂದ ಬಂಧಿಸಲ್ಪಡುವ ಮೀನುಗಾರರ ತ್ವರಿತ ಬಿಡುಗಡೆಗೆ ಕ್ರಮ ಕೈಗೊಳ‍್ಳುತ್ತಿದ್ದೇವೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿ 600 ಕ್ಕೂ ಹೆಚ್ಚು ಮೀನುಗಾರರನ್ನು ಬಂಧಮುಕ್ತಗೊಳಿಸಿದ್ದೇವೆ ಮತ್ತು ಯಾವುದೇ ಭಾರತೀಯ ಮೀನುಗಾರರು ಶ್ರೀಲಂಕಾದ ವಶದಲ್ಲಿಲ್ಲ. ಇದೇ ಸಂದರ್ಭದಲ್ಲಿ 313 ಮೀನುಗಾರರ ದೋಣಿಗಳನ್ನು ಸಹ ಬಿಡುಗಡೆಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಪ್ರಧಾನಮಂತ್ರಿಯವರು ಚೆನ್ನೈ ಮೆಟ್ರೋ ರೈಲಿನ ಮೊದಲ ಹಂತದ ವಿಸ್ತರಣಾ ಯೋಜನೆಯ ನಾಲ್ಕನೇ ರೈಲ್ವೆ ಮಾರ್ಗ ಚೆನ್ನೈ ಬೀಚ್ ಮತ್ತು ಅಟ್ಟಿಪಟ್ಟು ನಡುವಿನ ಮಾರ್ಗವನ್ನು ಉದ್ಘಾಟಿಸಿದರು. ವಿಲ್ಲುಪುರಂ -ಕಡಲೂರು – ಮಯಿಲದುತುರೈ – ತಂಜಾವೂರು ಮತ್ತು ಮಯಿಲದುತುರೈ - ತಿರುವೂರು ನಡುವಿನ ಏಕಪಥದ ವಿದ್ಯುದೀಕರಣ ಮಾರ್ಗವನ್ನು ಉದ್ಘಾಟಿಸಿದರು. ಮದ್ರಾಸ್ ಐಐಟಿಯ ಡಿಸ್ಕವರಿ ಕ್ಯಾಂಪಸ್ ನಲ್ಲಿ ಪ್ರಧಾನಮಂತ್ರಿಯವರು ಅನಿಕಟ್ ಕಾಲುವೆ ಆಧುನೀಕರಣ ಮತ್ತು ನವೀಕರಣ, ವಿಸ್ತರಣಾ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ತಮಿಳುನಾಢು ರಾಜ್ಯಪಾಲರು. ಮುಖ್ಯಮಂತ್ರಿಯವರು, ವಿಧಾನಸಭೆಯ ಸಭಾಧ‍್ಯಕ್ಷರು. ತಮಿಳುನಾಸಿನ ಕೈಗಾರಿಕಾ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Oman, India’s Gulf 'n' West Asia Gateway

Media Coverage

Oman, India’s Gulf 'n' West Asia Gateway
NM on the go

Nm on the go

Always be the first to hear from the PM. Get the App Now!
...
Prime Minister condoles passing of renowned writer Vinod Kumar Shukla ji
December 23, 2025

The Prime Minister, Shri Narendra Modi has condoled passing of renowned writer and Jnanpith Awardee Vinod Kumar Shukla ji. Shri Modi stated that he will always be remembered for his invaluable contribution to the world of Hindi literature.

The Prime Minister posted on X:

"ज्ञानपीठ पुरस्कार से सम्मानित प्रख्यात लेखक विनोद कुमार शुक्ल जी के निधन से अत्यंत दुख हुआ है। हिन्दी साहित्य जगत में अपने अमूल्य योगदान के लिए वे हमेशा स्मरणीय रहेंगे। शोक की इस घड़ी में मेरी संवेदनाएं उनके परिजनों और प्रशंसकों के साथ हैं। ओम शांति।"