ಶೇರ್
 
Comments
2022 ರ ಹೊತ್ತಿಗೆ ವಸತಿ ಇಲ್ಲದವರಿಗೆ ಮನೆ ನಿರ್ಮಿಸಲು ಸರಕಾರ ಬದ್ಧವಾಗಿದೆ: ಪ್ರಧಾನಿ ಮೋದಿ
ಪುಲ್ವಾಮಾ ದಾಳಿಯ ಅಪರಾಧಿಗಳು ಭಾರಿ ಬೆಲೆ ಪಾವತಿಸಲಿದ್ದಾರೆ : ಪ್ರಧಾನಿ ಮೋದಿ
ಯವತ್ಮಾಳ್ ನಲ್ಲಿ ಆರಂಭವಾದ ಯೋಜನೆಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಬಡವರ ಸಬಲೀಕರಣಗೊಳಿಸುತ್ತದೆ: ಪ್ರಧಾನಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು  ಇಂದು ಮಹಾರಾಷ್ಟ್ರದ ಯವತ್ಮಾಳ್ ಗೆ  ಭೇಟಿ ನೀಡಿದರು.  ಅವರು ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಅನಾವರಣಗೊಳಿಸಿದರು. ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಅವರೂ ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿಯವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY) ಆಯ್ದ ಫಲಾನುಭವಿಗಳಿಗೆ  ಮನೆಯ ಕೀಲಿಗಳನ್ನು ಹಸ್ತಾಂತರಿಸಿದರು.  “PMAY ಯೋಜನೆಯಡಿಯಲ್ಲಿ ಯವತ್ಮಾಳ್ ನಲ್ಲಿ  ಸುಮಾರು 14500 ಮನೆಗಳನ್ನು ನಿರ್ಮಿಸಲಾಗಿದೆ” ಎಂದು ಹೇಳಿದರು. “2022ರಷ್ಟರಲ್ಲಿ ಸರ್ವರಿಗೂ ವಸತಿ ಎನ್ನುವ ಗುರಿಯನ್ನು ನಾವು ಸಾಧಿಸುತ್ತೇವೆ. ಈ ಕಾಂಕ್ರೀಟ್ ಮನೆಗಳು  ಇಲ್ಲಿ ವಾಸಿಸುವ ಜನರಿಗೆ ಧೃಡವಾದ ಕನಸುಗಳಿಗೆ ಕಾರಣವಾಗುತ್ತವೆ”
 
ಅವರು   ಮಹಾರಾಷ್ಟ್ರ ರಾಜ್ಯದ ಗ್ರಾಮೀಣ  ಜೀವನಾಧಾರ ಅಭಿಯಾನದಡಿಯಲ್ಲಿ ಮಹಿಳಾ ಎಸ್.ಜಿ.ಜಿ.ಗಳಿಗೆ ಪ್ರಮಾಣಪತ್ರಗಳು / ಚೆಕ್ ಗಳನ್ನು ವಿತರಿಸಿದರು.
 
ಯವತ್ಮಾಳದ ಕಾರ್ಯಕ್ರಮವು  ಅಭಿವೃದ್ಧಿಯ ಪಂಚಧರಗಳಾದ ಮಕ್ಕಳಿಗೆ ಶಿಕ್ಷಣ, ಯುವಜನರಿಗೆ ಜೀವನೋಪಾಯ, ಹಿರಿಯ ನಾಗರಿಕರಿಗೆ ಔಷಧ, ರೈತರಿಗೆ ನೀರಾವರಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಇವುಗಳು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವ ಪ್ರಯತ್ನದ ಮುಂದುವರಿದ ಭಾಗ ಎಂದು ಪ್ರಧಾನ ಮಂತ್ರಿಗಳು ಹೇಳಿದರು.
ಪ್ರಧಾನಮಂತ್ರಿಯವರು  ಒಂದು ಗುಂಡಿಯನ್ನು ಒತ್ತುವ ಮೂಲಕ  500 ಕೋಟಿ ರೂಪಾಯಿ ಮೌಲ್ಯದ ರಸ್ತೆಗಳ ಯೋಜನೆಯ ಶಂಕುಸ್ಥಾಪನೆಯನ್ನು ಮಾಡಿದರು. ಹಮ್ಸಫರ್ ಅಜ್ನಿ (ನಾಗ್ ಪುರ್) – ಪುಣೆ ರೈಲ್ವೆಯ   ವಿಡಿಯೋ ಲಿಂಕ್ ಮೂಲಕ ಉದ್ಘಾಟಿಸಿದರು. ಅವರು ಸಂಪರ್ಕವು ಅಭಿವೃದ್ಧಿಯ ಸಫಲತೆಗೆ ಮತ್ತು ರಸ್ತೆ ಮತ್ತು ರೈಲ್ವೆ ಯೋಜನೆಗಳು ಯವತ್ಮಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.
 
ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು,   “ನಾವು ಪುಲ್ವಾಮಾ ದಾಳಿಯಿಂದಾಗಿ ತೀವ್ರ ದುಃಖದಲ್ಲಿರುವೆವು ಮತ್ತು ಸಂಕಟಕ್ಕೆ ಒಳಗಾಗಿರುವೆವು. ಮಹಾರಾಷ್ಟ್ರದ ಇಬ್ಬರು ಕೆಚ್ಚೆದೆಯ ಪುತ್ರರು ತಮ್ಮ ಜೀವವನ್ನು  ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ.   ಅವರ ತ್ಯಾಗವು ವ್ಯರ್ಥವಾಗಿ ಹೋಗುವುದಿಲ್ಲ. ಮುಂದಿನ ಕಾರ್ಯವನ್ನು  ನಿರ್ಧರಿಸಲು ಸಮಯ, ಸ್ಥಳ ಮತ್ತು ವಿಧಾನವನ್ನು ಆಯ್ಕೆ ಮಾಡಲು ನಾವು ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವೆವು. ನಮ್ಮ ಕನಸು ಸಾಕಾರಗೊಂಡಿದ್ದರೆ ಅಥವಾ ದೇಶವನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತಿರುವುದಾದರೆ  ಅದಕ್ಕೆ ನಮ್ಮ ಧೀರ ಯೋಧರ ತ್ಯಾಗವೇ ಕಾರಣ”
 
ಸಿಕ್ಕಲ್ ಜೀವಕೋಶದ ರೋಗದ ಬಗ್ಗೆ ಸಂಶೋಧನೆ ನಡೆಸಲು,  ಚಂದ್ರಪುರದಲ್ಲಿ  ಸಂಶೋಧನಾ ಕೇಂದ್ರವನ್ನು  ನಿರ್ಮಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು.

 

ಈ ಸಂದರ್ಭದಲ್ಲಿ ಸಹಸ್ರಕುಂಡ್ ವಸತಿ ಶಾಲೆಯು ಪ್ರಧಾನ  ಮಂತ್ರಿಯವರಿಂದ ಉದ್ಘಾಟಿಸಲ್ಪಟ್ಟಿತು.   ಈ ಶಾಲೆಯ ಕ್ಯಾಂಪಸ್ 15 ಎಕರೆ ಪ್ರದೇಶವಾಗಿದ್ದು ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.  ಬುಡಕಟ್ಟು ಮಕ್ಕಳ ಆಶಯವನ್ನು ಈ ಶಾಲೆಯು ಪೂರ್ಣಗೊಳಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಇದು ಬುಡಕಟ್ಟು ಪ್ರದೇಶಗಳಾದ್ಯಂತ 1000   ಏಕಲವ್ಯ ಮಾದರಿ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸುವ ಅವರ ಉದ್ದೇಶದ ಒಂದು ಭಾಗವಾಗಿದೆ.

 

ಪ್ರಧಾನ ಮಂತ್ರಿಯವರು ಹೇಳಿದರು   “ನಾವು ವಿಶೇಷವಾಗಿ ಜನಧನದಿಂದ ವನಧನ ವರೆಗೆ ಬುಡಕಟ್ಟಿನವರ ಪ್ರಗತಿಗಾಗಿ ವಿಶೇಷವಾಗಿ ಬದ್ಧರಾಗಿರುತ್ತೇವೆ.  ಜನಧನವು  ಬಡವರ ಆರ್ಥಿಕತೆಗೆ ಸಹಾಯ ಮಾಡಿದರೆ  ವನಧನವು ಸಣ್ಣ ಅರಣ್ಯ ಉತ್ಪನ್ನಗಳ ಮೂಲಕ  ಬಡವರಿಗೆ ಹೆಚ್ಚುವರಿ ಆದಾಯ ತರುವಲ್ಲಿ ಸಹಾಯ ಮಾಡುತ್ತವೆ. ಸಣ್ಣ ಅರಣ್ಯ ಉತ್ಪನ್ನಗಳಿಗೆ  ಬುಡಕಟ್ಟು ಜನರಿಗೆ  ಉತ್ತಮ ಆದಾಯ ತರುವಲ್ಲಿ ನೆರವು ನೀಡಲು ನಾವು  ವನ್ ಧನ್ ಕೇಂದ್ರಗಳನ್ನು  ಸ್ಥಾಪಿಸುತ್ತಿದ್ದೇವೆ    ನಾವು  ಬಿದಿರನ್ನೂ ಸಹ ಮರ ಎಂದು ಡಿನೋಟಿಫೈ ಮಾಡಿರುವೆವು ಇದರಿಂದ ಬುಡಕಟ್ಟು ಜನರು   ಬಿದಿರು  ಮತ್ತು ಅದರ ಉತ್ಪನ್ನಗಳಿಂದ ಆದಾಯ ಪಡೆಯಬಹುದು .  

 

ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಜನಾಂಗದ ನಾಯಕರು ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ ಪ್ರಧಾನ ಮಂತ್ರಿಗಳು ನಾವು ಅವರ ನೆನಪುಗಳನ್ನು ದೇಶದಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿ ಮತ್ತು ಸ್ಮಾರಕಗಳಲ್ಲಿ ಸಂರಕ್ಷಿಸುತ್ತಿದ್ದೇವೆ ಎಂದು ಹೇಳಿದರು. 

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi announces contest to select students who will get to attend 'Pariksha pe Charcha 2020'

Media Coverage

PM Modi announces contest to select students who will get to attend 'Pariksha pe Charcha 2020'
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಡಿಸೆಂಬರ್ 2019
December 06, 2019
ಶೇರ್
 
Comments

PM Narendra Modi addresses the Hindustan Times Leadership Summit; Highlights How India Is Preparing for Challenges of the Future

PM Narendra Modi’s efforts towards making students stress free through “Pariksha Pe Charcha” receive praise all over

The Growth Story of New India under Modi Govt.