"ಹವಾಮಾನ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ಇಎಸ್) ದೊಡ್ಡ ವೇದಿಕೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ "
"ಇಂದು ಎಣ್ಣೆ ಬಾವಿಗಳು ವಹಿಸುತ್ತಿರುವ ಪಾತ್ರವನ್ನು ಸೂರ್ಯನ ಕಿರಣಗಳಿಂದ ವಹಿಸಲಾಗುತ್ತಿದೆ : ಮೊದಲನೇ ಸಭೆಯಲ್ಲಿ ಪ್ರಧಾನಿ ಮೋದಿ "
"2030 ರ ಹೊತ್ತಿಗೆ ಪಳೆಯುಳಿಕೆಯೇತರ ಇಂಧನ ಮೂಲದ ಸಂಪನ್ಮೂಲಗಳನ್ನು ಬಳಸಿ ನಮ್ಮ ಶೇಕಡಾ 40 ರಷ್ಟು ವಿದ್ಯುತ್ ಉತ್ಪಾದಿಸಲು ನಾವು ನಿರ್ಧರಿಸಿದ್ದೇವೆ: ಪ್ರಧಾನಿ ಮೋದಿ "
"ಪ್ಯಾರೀಸ್ ಒಪ್ಪಂದದ ಗುರಿಗಳನ್ನು ಪೂರೈಸಲು, ನವೀಕರಿಸಬಹುದಾದ ಶಕ್ತಿಯ ನಿಯೋಜನೆಗೆ ನಾವು ಕಾರ್ಯ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ: ಪ್ರಧಾನಿ ಮೋದಿ "
ಸೌರ ಮತ್ತು ಗಾಳಿ ಶಕ್ತಿ ಜೊತೆಗೆ, ನಾವು ಬಿ3 ಅಂದರೆ , ಜೈವಿಕ ಅನಿಲ -ಜೈವಿಕ ಇಂಧನ-ಜೈವಿಕಶಕ್ತಿ ಮೇಲೆ ವೇಗವಾಗಿ ಕೆಲಸ ಮಾಡುತ್ತಿದ್ದೇವೆ: ಐಎಸ್ಎಯ ಮೊದಲ ಸಭೆಯಲ್ಲಿ ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೊದಲ ಸಭೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಎರಡನೇ ಐಓ ಆರ್ ಏ ನವೀಕರಿಸಬಹುದಾದ ಇಂಧನ ಸಚಿವರ ಸಭೆ ಮತ್ತು ಎರಡನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಶೃಂಗಸಭೆ ಮತ್ತು ಎಕ್ಸ್ ಪೋ ಉದ್ಘಾಟಿಸಿದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆರ್ಸ್ ಈ ಸಂದರ್ಭದಲ್ಲಿ ಹಾಜರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಳೆದ 150-200 ವರ್ಷಗಳಿಂದ ಮನುಕುಲ ಇಂಧನ ಅಗತ್ಯತೆಗಳಿಗಾಗಿ ಸಾಂಪ್ರದಾಯಿಕ ಇಂಧನ ಮೂಲಗಳನ್ನು ಅವಲಂಬಿಸಿತ್ತು ಎಂದರು.

ಆದರೆ ಇದೀಗ ಪ್ರಕೃತಿ ಅಥವಾ ನಿಸರ್ಗ ಸೌರ, ಪವನ ಮತ್ತು ಜಲ ಮತ್ತಿತರ ಅಧಿಕ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, 21ನೇ ಶತಮಾನದಲ್ಲಿ ಮನುಕುಲದ ಒಳಿತಿಗಾಗಿ ಸಂಸ್ಥೆಗಳನ್ನು ಕಟ್ಟಬೇಕಿದೆ ಎಂದು ಜನರು ಮಾತನಾಡುತ್ತಾರೆ. ಅಂತಹ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿ ಅಗ್ರಸ್ಥಾನದಲ್ಲಿದೆ ಎಂದರು. ಹವಾಮಾನ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಇದೊಂದು ಶ್ರೇಷ್ಠ ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಒಪೆಕ್ ಬದಲಿಗೆ ಅಂತಾರಾಷ್ಟ್ರೀಯ ಸೌರ ಮೈತ್ರಿ ಪ್ರಮುಖ ಜಾಗತಿಕ ಇಂಧನ ಪೂರೈಕೆ ಮಾಡುವ ಸಂಸ್ಥೆಯಾಗಲಿದೆ ಎಂದರು.

ಭಾರತದಲ್ಲಿ ಇದೀಗ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಾಗಿರುವುದರ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಕ್ರಿಯಾ ಯೋಜನೆ ಮೂಲಕ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ

ಎಂದು ಅವರು ಹೇಳಿದರು. 2030ರ ವೇಳೆಗೆ ಭಾರತದ ಒಟ್ಟಾರೆ ಇಂಧನ ಅಗತ್ಯತೆಯಲ್ಲಿ ಶೇಕಡ 40ರಷ್ಟನ್ನು ಅಸಂಪ್ರದಾಯಿಕ ಇಂಧನ ಮೂಲಗಳಿಂದ ಉತ್ಪಾದಿಸಬೇಕೆಂಬ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ‘ಬಡತನದಿಂದ ಶಕ್ತಿ’ ಎಂಬ ಹೊಸ ಸ್ವಯಂನಂಬಿಕೆಯಿಂದಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು.

ಇಂಧನ ಉತ್ಪಾದನೆ ಜೊತೆಗೆ ಇಂಧನ ಶೇಖರಣೆಯೂ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಅವರು ರಾಷ್ಟ್ರೀಯ ಸೌರ ಶೇಖರಣಾ ಯೋಜನೆಯನ್ನು ಉಲ್ಲೇಖಿಸಿದರು. ಈ ಯೋಜನೆಯಡಿ ಸರ್ಕಾರ ಬೇಡಿಕೆ ಸೃಷ್ಟಿ, ದೇಶೀಯ ಉತ್ಪಾದನೆ, ಆವಿಷ್ಕಾರ ಮತ್ತು ಇಂಧನ ಶೇಖರಣೆಗೆ ಗಮನಹರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಸೌರ ಮತ್ತು ಪವನ ವಿದ್ಯುತ್ ಅಲ್ಲದೆ ಭಾರತ ಬಯೋಮಾಸ್, ಜೈವಿಕ ಇಂಧನ ಮತ್ತು ಜೈವಿಕ ವಿದ್ಯುತ್ ಗಾಗಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಂಚಾರ ವ್ಯವಸ್ಥೆಯನ್ನು ಶುದ್ಧ ಇಂಧನ ಆಧಾರಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಜೈವಿಕ ತ್ಯಾಜ್ಯವನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸುವ ಸವಾಲು ಭಾರತದ ಮುಂದಿದ್ದು, ಅದನ್ನು ಅವಕಾಶವನ್ನಾಗಿ ಸೃಷ್ಟಿಸಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Assam Was Nearly Separated From India’: PM Modi Attacks Congress, Hails First CM Bordoloi's Role

Media Coverage

‘Assam Was Nearly Separated From India’: PM Modi Attacks Congress, Hails First CM Bordoloi's Role
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಡಿಸೆಂಬರ್ 2025
December 20, 2025

Empowering Roots, Elevating Horizons: PM Modi's Leadership in Diplomacy, Economy, and Ecology