ಶೇರ್
 
Comments
"ಭಾರತೀಯ ಇತಿಹಾಸದಲ್ಲಿ, ಮೀರತ್ ಕೇವಲ ನಗರವಲ್ಲ ಆದರೆ ಸಂಸ್ಕೃತಿ ಮತ್ತು ಶಕ್ತಿಯ ಗಮನಾರ್ಹ ಕೇಂದ್ರವಾಗಿದೆ"
“ದೇಶದಲ್ಲಿ ಕ್ರೀಡೆಗಳು ಅಭಿವೃದ್ಧಿ ಹೊಂದಬೇಕಾದರೆ ಯುವಕರು ಕ್ರೀಡೆಯಲ್ಲಿ ನಂಬಿಕೆ ಇಟ್ಟು ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲು ಪ್ರೋತ್ಸಾಹಿಸಬೇಕು. ಇದು ನನ್ನ ಸಂಕಲ್ಪ ಮತ್ತು ನನ್ನ ಕನಸು"
"ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸಿದ ಕಾರಣ, ಈ ಸ್ಥಳಗಳಿಂದ ಕ್ರೀಡಾ ಪಟುಗಳ ಸಂಖ್ಯೆ ಹೆಚ್ಚುತ್ತಿದೆ"
"ಸಂಪನ್ಮೂಲಗಳು ಮತ್ತು ಹೊಸ ಸ್ಟ್ರೀಮ್‌ಗಳೊಂದಿಗೆ ಉದಯೋನ್ಮುಖ ಕ್ರೀಡಾ ಪರಿಸರ ವ್ಯವಸ್ಥೆಯು ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ಇದು ಕ್ರೀಡೆಯತ್ತ ಸಾಗುವುದೇ ಸರಿಯಾದ ನಿರ್ಧಾರ ಎಂಬ ನಂಬಿಕೆಯನ್ನು ಸಮಾಜದಲ್ಲಿ ಮೂಡಿಸುತ್ತದೆ.
"ಮೀರತ್ ಸ್ಥಳೀಯರಿಗೆ ಮಾತ್ರ ಧ್ವನಿ ನೀಡುತ್ತಿಲ್ಲ ಆದರೆ ಸ್ಥಳೀಯವನ್ನು ಜಾಗತಿಕವಾಗಿ ಪರಿವರ್ತಿಸುತ್ತಿದೆ"
“ನಮ್ಮ ಗುರಿ ಸ್ಪಷ್ಟವಾಗಿದೆ. ಯುವಕರು ಅವರನ್ನು ಕೇವಲ ರೋಲ್ ಮಾಡೆಲ್ ಮಾಡಿಕೊಂಡರೆ ಸಾಲದು ಅವರ ಆದರ್ಶಗಳನ್ನು ಗುರುತಿಸಬೇಕು”

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಮತ್ತು ಉತ್ಸಾಹೀ ಮುಖ್ಯಮಂತ್ರಿ ಶ್ರೀ ಯೋಗೀ ಆದಿತ್ಯನಾಥ ಜೀ, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಸಂಜೀವ ಬಾಲನ್ ಮತ್ತು ವಿ.ಕೆ.ಸಿಂಗ್ ಜೀ, ಉತ್ತರ ಪ್ರದೇಶದ ಸಚಿವರಾದ ಶ್ರೀ ದಿನೇಶ್ ಕಾರ್ತಿಕ್ ಜೀ, ಶ್ರೀ ಉಪೇಂದ್ರ ತಿವಾರಿ ಜೀ, ಮತ್ತು ಕಪಿಲ್ ದೇವ್ ಅಗರವಾಲ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಸತ್ಯಪಾಲ್ ಸಿಂಗ್ ಜೀ, ರಾಜೇಂದ್ರ ಅಗರ್ವಾಲ್ ಜೀ, ವಿಜಯಪಾಲ್ ಸಿಂಗ್ ತೋಮರ್ ಜೀ, ಮತ್ತು ಶ್ರೀಮತಿ ಕಾಂತಾ ಕರದಮ್ ಜೀ, ಶಾಸಕರಾದ ಸೋಮೇಂದ್ರ ತೋಮರ್ ಜೀ, ಸಂಗೀತ್ ಸೋಮ್ ಜೀ, ಜಿತೇಂದ್ರ ಸತ್ಪಾಲ್ ಜೀ, ಮತ್ತು ಸತ್ಯ ಪ್ರಕಾಶ್ ಅಗರ್ವಾಲ್ ಜೀ, ಮೀರತ್ ಜಿಲ್ಲಾ ಪರಿಷತ್ ಅಧ್ಯಕ್ಷ ಗೌರವ್ ಚೌಧುರಿ ಜೀ, ಮುಜಾಫರ್ ನಗರ ಜಿಲ್ಲಾ ಪರಿಷತ್ ಅಧ್ಯಕ್ಷ ವೀರಪಾಲ್ ಜೀ, ಎಲ್ಲಾ ಜನಪ್ರತಿನಿಧಿಗಳೇ ಹಾಗು ಮೀರತ್ ಮತ್ತು ಮುಜಾಫರ್ ನಗರದಿಂದ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ. ನಾನು ನಿಮಗೆಲ್ಲಾ 2022 ರ ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತೇನೆ.

ವರ್ಷದ ಆರಂಭದಲ್ಲಿ, ಮೀರತ್ತಿಗೆ ಭೇಟಿ ನೀಡುತ್ತಿರುವುದು ನನಗೆ ಬಹಳ ಮಹತ್ವದ ಸಂಗತಿ. ಭಾರತೀಯ ಚರಿತ್ರೆಯಲ್ಲಿ ಮೀರತ್ ಬರೇ ಒಂದು ನಗರ ಮಾತ್ರವಲ್ಲ, ಅದು ಸಂಸ್ಕೃತಿ ಮತ್ತು ಶಕ್ತಿಯ ಪ್ರಮುಖ ಕೇಂದ್ರ. ರಾಮಾಯಣ ಮತ್ತು ಮಹಾಭಾರತ ಕಾಲದಿಂದ ಹಿಡಿದು ಜೈನ ತೀರ್ಥಂಕರರವರೆಗೆ ಮತ್ತು ಐವರು “ಪಾಂಚ್ ಪ್ಯಾರೆ” ಯವರಲ್ಲಿ ಒಬ್ಬರಾದ ಭಾಯಿ ಧರಂ ಸಿಂಗ್ ಅವರವರೆಗೆ ನಂಬಿಕೆ, ಶ್ರದ್ಧೆಗೆ ಶಕ್ತಿ ಕೊಟ್ಟಂತಹ ಸ್ಥಳ.

ಹಿಂದೂ ಕಣಿವೆ ನಾಗರಿಕತೆಯಿಂದ ಹಿಡಿದು ದೇಶದ ಮೊದಲ ಸ್ವಾತಂತ್ರ್ಯ ಹೋರಾಟದವರೆಗೆ ಭಾರತದ ಶಕ್ತಿಯನ್ನು ಪ್ರದರ್ಶಿಸಿದ ವಲಯ ಇದು. 1957ರಲ್ಲಿ ಬಾಬಾ ಔಘರನಾಥ ದೇವಾಲಯದಿಂದ ಸ್ವಾತಂತ್ರ್ಯದ ಘರ್ಜನೆ ಕೇಳಿ ಬಂದಿತು ಮತ್ತು ಗುಲಾಮಗಿರಿಯ ಕತ್ತಲೆಯ ಕೂಪದಲ್ಲಿ ’ದಿಲ್ಲಿ ಚಲೋ” ಕರೆ ದೇಶದಲ್ಲಿ ಕಿಡಿಯನ್ನು ಹೊತ್ತಿಸಿತು. ಕ್ರಾಂತಿಯ ಈ ಪ್ರೇರಣೆಯಿಂದ ಮುಂದುವರಿದು, ನಾವು ಸ್ವತಂತ್ರರಾದೆವು ಮತ್ತು ಇಂದು ನಾವು ಹೆಮ್ಮೆಯಿಂದ ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಇಲ್ಲಿಗೆ ಬರುವುದಕ್ಕೆ ಮೊದಲು ಬಾಬಾ ಔಘರನಾಥ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ನನಗೆ ಲಭಿಸಿತ್ತು. ನಾನು ಅಮರ ಜವಾನ್ ಜ್ಯೋತಿ ಮತ್ತು ಸ್ವಾತಂತ್ರ್ಯ ಹೋರಾಟ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿದ್ದವರ ಹೃದಯಗಳಲ್ಲಿ ಹಾತೊರೆಯುತ್ತಿದ್ದಂತಹ ಭಾವನೆಗಳು ನನ್ನಲ್ಲಿಯೂ ಮೂಡಿದವು.

ಸಹೋದರರೇ ಮತ್ತು ಸಹೋದರಿಯರೇ,

ಮೀರತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸ್ವತಂತ್ರ ಭಾರತಕ್ಕೆ ಹೊಸ ದಿಕ್ಕು ದಿಶೆ ನೀಡುವಲ್ಲಿ ಗಮನಾರ್ಹ ಕಾಣಿಕೆಯನ್ನು ನೀಡಿವೆ. ರಾಷ್ಟ್ರೀಯ ಭದ್ರತೆಗಾಗಿ ಗಡಿಯಲ್ಲಿ ತ್ಯಾಗ ಮಾಡುವುದಿರಲಿ, ಕ್ರೀಡಾ ಕ್ಷೇತ್ರದಲ್ಲಿ ಆಡುವ ಮೂಲಕ ದೇಶಕ್ಕೆ ಗೌರವ ತರುವುದರಲ್ಲಾಗಲೀ, ಈ ವಲಯ ದೇಶಭಕ್ತಿಯ ಕಿಡಿಯನ್ನು ಸದಾ ಜೀವಂತವಾಗಿಟ್ಟಿದೆ. ನುರ್ಪುರವು ಚೌಧರಿ ಚರಣ್ ಸಿಂಗ್ ಜೀ ಅವರ ರೂಪದಲ್ಲಿ ದೇಶಕ್ಕೆ ದೂರದೃಷ್ಟಿಯುಳ್ಳ ನಾಯಕತ್ವವನ್ನು ನೀಡಿತು. ಪ್ರೇರಣೆ ನೀಡುವ ಈ ಸ್ಥಳಕ್ಕೆ ನಾನು ನಮಿಸುತ್ತೇನೆ ಮತ್ತು ಮೀರತ್ ಹಾಗು ಈ ವಲಯದ ಜನರಿಗೆ ನಮಸ್ಕಾರಗಳನ್ನು ಹೇಳುತ್ತೇನೆ.

 

મેરઠ દેશના વધુ એક મહાન સંતાન મેજર ધ્યાનચંદજીની કર્મભૂમિ પણ રહી છે. થોડાંક મહિના પહેલાં કેન્દ્ર સરકારે દેશનો સૌથી મોટો ખેલ પુરસ્કાર આ દાદાના નામે કર્યો છે. આજે મેરઠનું સ્પોર્ટ યુનિવર્સિટી મેજર ધ્યાનચંદજીને સમર્પિત કરવામા આવી રહી છે અને યુનિવર્સિટીનું નામ મેજર ધ્યાનચંદની સાથે જોડવામાં આવી રહ્યું છે ત્યારે તેમના પરાક્રમો પણ પ્રેરણા આપે છે, પરંતુ તેમના નામમાં પણ એક સંદેશ છે. તેમના નામમાં એક શબ્દ છે ધ્યાન. ધ્યાન કેન્દ્રિત કર્યા વગર ક્યારેય પણ સફળતા મળતી નથી. અને એટલા માટે જે યુનિવર્સિટીનું નામ ધ્યાનચંદજી સાથે જોડવામાં આવ્યું છે ત્યાં સંપૂર્ણ ધ્યાન સાથે કામ કરનારા નવયુવાનો દેશનું નામ રોશન કરશે તેવો મને પૂરો વિશ્વાસ છે.

હું ઉત્તરપ્રદેશના નવયુવાનોને, ઉત્તર પ્રદેશની પ્રથમ સ્પોર્ટસ યુનિવર્સિટી માટે ખૂબ ખૂબ અભિનંદન આપું છું. રૂ.700 કરોડના ખર્ચે બની રહેલી આ આધુનિક યુનિવર્સિટી દુનિયાની શ્રેષ્ઠ યુનિવર્સિટીઓમાંની એક બની રહેશે. અહીંયા યુવાનોને રમતો સાથે જોડાયેલી આંતરરાષ્ટ્રિય સુવિધાઓ તો મળશે જ, પણ સાથે સાથે એક કારકિર્દી તરીકે રમતને અપનાવવા માટે જરૂરી કૌશલ્યનું પણ નિર્માણ થશે. અહીંથી દર વર્ષે એક હજારથી વધુ દીકરા- દીકરીઓ ઉત્તમ ખેલાડી તૈયાર થઈને બહાર આવશે ત્યારે ક્રાંતિવીરોની આ નગરી, રમતવીરોની નગરી તરીકે પણ પોતાની ઓળખને વધુ સશક્ત બનાવશે.

ಸಹೋದರರೇ ಮತ್ತು ಸಹೋದರಿಯರೇ,

ದೇಶದ ಇನ್ನೋರ್ವ ಶ್ರೇಷ್ಠ ಪುತ್ರ ಮೇಜರ್ ಧ್ಯಾನ ಚಂದ ಜೀ ಅವರ ಕಾರ್ಯಸ್ಥಳ ಕೂಡಾ ಮೀರತ್. ಕೆಲವು ತಿಂಗಳುಗಳ ಹಿಂದೆ, ಕೇಂದ್ರ ಸರಕಾರ ದೇಶದ ಅತ್ಯಂತ ದೊಡ್ಡ ಕ್ರೀಡಾ ಪ್ರಶಸ್ತಿಗೆ ದಡ್ಡ ಅವರ ಹೆಸರನ್ನು ಇಟ್ಟಿತು. ಇಂದು ಮೀರತ್ ಕ್ರೀಡಾ ವಿಶ್ವವಿದ್ಯಾಲಯವನ್ನು ಮೇಜರ್ ಧ್ಯಾನ್ ಚಂದ್ ಜೀ ಅವರಿಗೆ ಸಮರ್ಪಿಸಲಾಗುತ್ತಿದೆ. ಮತ್ತು ಈ ವಿಶ್ವವಿದ್ಯಾಲಯದ ಹೆಸರು ಮೇಜರ್ ಧ್ಯಾನ್ ಚಂದ್ ಜೀ ಅವರೊಂದಿಗೆ ಎಕೀಭವಿಸಿದಾಗ, ಅವರ ಪರಾಕ್ರಮವು ಯಾವುದೇ ಸಂಶಯವಿಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ. ಅವರ ಹೆಸರಿನಲ್ಲಿರುವ ’ಧ್ಯಾನ್’ ಎಂಬ ಶಬ್ದವೇ ಯಶಸ್ಸನ್ನು ಗಳಿಸುವುದಕ್ಕೆ ಗಮನ ಕೇಂದ್ರಿತ ಚಟುವಟಿಕೆ ಅವಶ್ಯಕ ಎಂದು ಸಾರುತ್ತದೆ. ಧ್ಯಾನ್ ಚಂದ್ ಹೆಸರನ್ನು ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಪೂರ್ಣ ಗಮನದ ಜೊತೆ ಕೆಲಸ ಮಾಡುವ ಯುವ ಜನತೆ ದೇಶದ ಹೆಸರನ್ನು ಉಜ್ವಲಗೊಳಿಸುತ್ತಾರೆ ಎಂಬುದು ನನ್ನ ದೃಢ ನಂಬಿಕೆ.

ಉತ್ತರ ಪ್ರದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯಕ್ಕಾಗಿ ಉತ್ತರ ಪ್ರದೇಶದ ಯುವ ಜನತೆಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 700 ಕೋ.ರೂ.ಗಳಲ್ಲಿ ನಿರ್ಮಾಣವಾಗುವ ಈ ಆಧುನಿಕ ವಿಶ್ವವಿದ್ಯಾನಿಲಯ ಜಗತ್ತಿನ ಅತ್ಯುತ್ತಮ ಕ್ರೀಡಾ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರಲಿದೆ. ಇಲ್ಲಿ ಯುವ ಜನತೆಗೆ ಕ್ರೀಡೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ದೊರೆಯುವುದಲ್ಲದೆ ಕ್ರೀಡೆಯನ್ನು ಜೀವನದ ಉದ್ದೇಶವನ್ನಾಗಿ ಸ್ವೀಕರಿಸಲಿರುವವರಿಗೆ ಅವಶ್ಯ ಕೌಶಲ್ಯಗಳನ್ನು ರೂಪಿಸಿಕೊಳ್ಳಲು ಇದು ನೆರವಾಗಲಿದೆ. ಪ್ರತೀ ವರ್ಷ ಇಲ್ಲಿಂದ 1000ಕ್ಕೂ ಅಧಿಕ ಮಂದಿ ಪುರುಷರು ಮತ್ತು ಹೆಣ್ಣು ಮಕ್ಕಳು ಅತ್ಯುತ್ತಮ ಆಟಗಾರರಾಗಿ ಮೂಡಿ ಬರಲಿದ್ದಾರೆ. ಅಂದರೆ, ಕ್ರಾಂತಿಕಾರಿಗಳ ನಗರವು ಕ್ರೀಡಾಳುಗಳ ನಗರವಾಗಿಯೂ ತನ್ನ ಗುರುತಿಸುವಿಕೆಯನ್ನು ಬಲಪಡಿಸಿಕೊಳ್ಳಲಿದೆ.

ಸ್ನೇಹಿತರೇ,

ಹಿಂದಿನ ಸರಕಾರಗಳಲ್ಲಿ ಕ್ರಿಮಿನಲ್ ಗಳು ಮತ್ತು ಮಾಫಿಯಾಗಳು ಉತ್ತರ ಪ್ರದೇಶದಲ್ಲಿ ತಮ್ಮ ಆಟವನ್ನು ಆಡುತ್ತಿದ್ದವು. ಈ ಮೊದಲು ಇಲ್ಲಿ ಅಕ್ರಮ ಭೂ ಕಬಳಿಕೆಗೆ ಸಂಬಂಧಿಸಿದ ಟೂರ್ನಮೆಂಟುಗಳು ನಡೆಯುತ್ತಿದ್ದವು ಮತ್ತು ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಟೀಕೆ ಮಾಡುತ್ತಿದ್ದವರು ಬಹಿರಂಗವಾಗಿ ತಿರುಗಾಡುತ್ತಿದ್ದರು. ಮೀರತ್ತಿನ ಮತ್ತು ಸುತ್ತ ಮುತ್ತಲಿನ ಜನರು ಅವರ ಮನೆಗಳು ಬೆಂಕಿಗೆ ಆಹುತಿಯಾಗಿದ್ದನ್ನು ಎಂದೂ ಮರೆಯಲಾರರು ಮತ್ತು ಹಿಂದಿನ ಸರಕಾರ ಈ “ಆಟ”ದಲ್ಲಿ ಶಾಮೀಲಾಗಿತ್ತು. ಹಿಂದಿನ ಸರಕಾರಗಳ “ಆಟ”ದ ಫಲವಾಗಿ ಜನರು ತಮ್ಮ ಪೂರ್ವಜರ ಮನೆಯನ್ನು ತೊರೆದು ಓಡಿ ಹೋಗುವಂತಹ ಸ್ಥಿತಿ ಬಂದಿತ್ತು. ಈ ಮೊದಲು ಇಲ್ಲಿ ಯಾವೆಲ್ಲ ರೀತಿಯ ಆಟಗಳನ್ನು ಆಡಲಾಗುತ್ತಿತ್ತು. ಆದರೆ ಈಗ ಯೋಗೀ ಜೀ ಅವರ ಸರಕಾರ ಇಂತಹ ಕ್ರಿಮಿನಲ್ ಗಳ ಜೊತೆ “ಜೈಲ್-ಜೈಲ್” ಆಟ ಆಡುತ್ತಿದೆ. ಐದು ವರ್ಷಗಳ ಹಿಂದೆ ಮೀರತ್ತಿನ ಹೆಣ್ಣು ಮಕ್ಕಳು ಸಂಜೆಯ ನಂತರ ತಮ್ಮ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಇಂದು ಮೀರತ್ತಿನ ಜನರು ಇಡೀ ದೇಶದ ಹೆಸರನ್ನು ಬೆಳಗುತ್ತಿದ್ದಾರೆ. ಮೀರತ್ತಿನ “ಸೋಟಿಗಂಜ್” ಬಜಾರಿನಲ್ಲಿ (ಕಳವು ಮಾಡಲಾದ ಕಾರುಗಳಿಗೆ ಕುಖ್ಯಾತವಾಗಿದ್ದ) ಆಡಲಾಗುತ್ತಿದ್ದ “ಆಟ” ಈಗ ಮುಕ್ತಾಯವಾಗಿದೆ. ಉತ್ತರ ಪ್ರದೇಶದಲ್ಲಿ ಈಗ “ನಿಜವಾದ ಆಟ”ವನ್ನು ಉತ್ತೇಜಿಸಲಾಗುತ್ತಿದೆ ಮತ್ತು ಉತ್ತರ ಪ್ರದೇಶದ ಯುವ ಜನತೆಗೆ ಕ್ರೀಡಾ ಜಗತ್ತಿನಲ್ಲಿ ಅವರ ಕೌಶಲ್ಯಗಳನ್ನು ತೋರಿಸಲು ಅವಕಾಶ ಲಭ್ಯವಾಗುತ್ತಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲೊಂದು ಹೇಳಿಕೆ ಇದೆ: महाजनो येन गताः स पंथाः

ಅಂದರೆ ಬಹಳ ಶ್ರೇಷ್ಠ ಜನರು ನಡೆದ ಹಾದಿ ನಮ್ಮ ಪಥ ಎಂಬುದಾಗಿ. ಆದರೆ ನಾವು ಈಗ 21 ನೇ ಶತಮಾನದಲ್ಲಿದ್ದೇವೆ ಮತ್ತು ಭಾರತ ಪರಿವರ್ತನೆಗೊಂಡಿದೆ, ಮತ್ತು ಈ ನವ ಭಾರತದಲ್ಲಿ 21 ನೇ ಶತಮಾನದ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮ ಯುವ ಜನತೆಯ ಮೇಲಿದೆ. ಆದುದರಿಂದ ಮಂತ್ರ ಈಗ ಬದಲಾಗಿದೆ. 21 ನೇ ಶತಮಾನದ ಮಂತ್ರ ಎಂದರೆ युवा जनो येन गताः स पंथाः।

ಯುವ ಜನರು ನಡೆಯುವ ಪಥವೇ ದೇಶದ ಪಥ. ಯುವ ಜನರು ಎಲ್ಲೆಲ್ಲಿ ಮುನ್ನಡೆ ಸಾಧಿಸುತ್ತಾರೋ, ಅದನ್ನು ಸ್ವಯಂಚಾಲಿತ ರೀತಿಯಲ್ಲಿ ಅನುಸರಿಸಲಾಗುತ್ತದೆ. ಯುವಕರು ನವ ಭಾರತದ ಚುಕ್ಕಾಣಿಗಳು ಮತ್ತು ಯುವ ಜನತೆ ಎಂದರೆ ನವ ಭಾರತದ ವಿಸ್ತರಣೆ. ಯುವ ಜನರು ನವ ಭಾರತದ ನಿಯಂತ್ರಕರು ಮತ್ತು ಯುವ ಜನರು ನವ ಭಾರತದ ನಾಯಕರು. ನಮ್ಮ ಯುವ ಜನತೆ ಹಳೆಯ ಪರಂಪರೆ ಮತ್ತು ಆಧುನಿಕತೆಯ ಸೂಕ್ಷ್ಮತ್ವವನ್ನು ಹೊಂದಿದ್ದಾರೆ. ಆದುದರಿಂದ ಯುವ ಜನತೆ ಹೋಗುವಲ್ಲಿಗೆ ಭಾರತವೂ ಹೋಗುತ್ತದೆ. ಮತ್ತು ಭಾರತ ಎಲ್ಲಿಗೆ ಹೋಗುತ್ತದೋ ಆ ಕಡೆ ವಿಶ್ವವೂ ಚಲಿಸುತ್ತದೆ. ಇಂದು ಭಾರತದ ಯುವ ಜನತೆ ವಿಜ್ಞಾನದಿಂದ ಹಿಡಿದು ಸಾಹಿತ್ಯದವರೆಗೆ, ನವೋದ್ಯಮಗಳಿಂದ ಹಿಡಿದು ಕ್ರೀಡೆಯವರೆಗೆ ಪ್ರತಿಯೊಂದರಲ್ಲಿಯೂ ಇದ್ದಾರೆ.

ಸಹೋದರರೇ ಮತ್ತು ಸಹೋದರಿಯರೇ,

ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಯುವಜನತೆ ಈಗಾಗಲೇ ಸಮರ್ಥರಾಗಿದ್ದಾರೆ ಮತ್ತು ಅವರ ಕಠಿಣ ಪರಿಶ್ರಮದಲ್ಲಿ ಯಾವುದೇ ಕೊರತೆ ಇಲ್ಲ. ನಮ್ಮ ದೇಶದಲ್ಲಿ ಕ್ರೀಡಾ ಸಂಸ್ಕೃತಿ ಕೂಡಾ ಬಹಳ ಶ್ರೀಮಂತವಾಗಿದೆ. ನಮ್ಮ ಗ್ರಾಮಗಳ ಎಲ್ಲಾ ಹಬ್ಬಗಳಲ್ಲಿಯೂ ಕ್ರೀಡೆ ಬಹಳ ಪ್ರಮುಖ ಅಂಗವಾಗಿದೆ. ತುಪ್ಪದ ಕ್ಯಾನ್ ಗಳು ಮತ್ತು ಲಡ್ಡುಗಳನ್ನು ಗೆಲುವಿನ ಬಹುಮಾನವಾಗಿ ಪಡೆಯಲು ಮೀರತ್ತಿನಲ್ಲಿ ಕುಸ್ತಿ ಪಂದ್ಯಗಳನ್ನು ಆಡಲು ಯಾರು ತಾನೇ ಆಶಿಸುವುದಿಲ್ಲ?. ಆದರೆ ಹಿಂದಿನ ಸರಕಾರಗಳ ನೀತಿಗಳಿಂದಾಗಿ ಕ್ರೀಡೆ ಮತ್ತು ಆಟಗಾರರ ಬಗೆಗಿನ ಧೋರಣೆಗಳು ಬಹಳ ಭಿನ್ನವಾಗಿದ್ದವು. ಮೊದಲು ಯುವಕರೊಬ್ಬರು ತಮ್ಮನ್ನು ತಾವು ಕ್ರೀಡಾ ಪಟು ಎಂದು ಗುರುತಿಸಿಕೊಂಡು ತನ್ನ ಕ್ರೀಡಾ ಕ್ಷೇತ್ರದ ಬಗೆಗೆ ಮತ್ತು ಸಾಧನೆಗಳ ಬಗೆಗೆ ಮಾತನಾಡಿದರೆ, ಇತರರ ಪ್ರತಿಕ್ರಿಯೆ ಏನಿರುತ್ತಿತ್ತು?. ಅವರು ಹೇಳುತ್ತಿದ್ದರು: “ನೀನು ಆಡುವುದು ಒಳ್ಳೆಯದು, ಆದರೆ ನೀನು ಏನು ಮಾಡುತ್ತಿ?”. ಕ್ರೀಡೆಗೆ ಅಲ್ಲಿ ಗೌರವ ಇರಲಿಲ್ಲ.

ಗ್ರಾಮಗಳಲ್ಲಿ ಯಾರಾದರೊಬ್ಬರು ತಮ್ಮನ್ನು ತಾವು ಆಟಗಾರರು ಎಂದು ಹೇಳಿಕೊಂಡರೆ ಆಗ ಜನರು ಆತ ಸೇನೆ ಅಥವಾ ಪೊಲೀಸ್ ಕೆಲಸಕ್ಕಾಗಿ ಆಡುತ್ತಿರಬಹುದು ಎನ್ನುತ್ತಿದ್ದರು. ಕ್ರೀಡೆಯ ಬಗೆಗಿದ್ದ ಒಂದು ನೋಟಕ್ಕೆ ಇದು ಉದಾಹರಣೆ. ಈ ಮೊದಲಿದ್ದ ಸರಕಾರಗಳು ಯುವ ಜನತೆಯ ಈ ಸಾಮರ್ಥ್ಯಕ್ಕೆ ಮಹತ್ವ ನೀಡಲಿಲ್ಲ. ಕ್ರೀಡೆಗೆ ಸಂಬಂಧಿಸಿ ಸಮಾಜದಲ್ಲಿದ್ದ ಭಾವನೆಯನ್ನು ಬದಲಾವಣೆ ಮಾಡುವುದು ಸರಕಾರಗಳ ಜವಾಬ್ದಾರಿಯಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿ ಕ್ರೀಡೆಯ ಬಗ್ಗೆ ತಾರತಮ್ಯ ಬೆಳೆಯುತ್ತಲೇ ಹೋಯಿತು. ಇದರ ಫಲವಾಗಿ, ಗುಲಾಮಗಿರಿಯ ಕಾಲದಲ್ಲಿಯೂ ಮೇಜರ್ ಧ್ಯಾನ್ ಚಂದ್ ಜೀ ಅವರಂತಹ ಪ್ರತಿಭೆಗಳು ಹಾಕಿಯಲ್ಲಿ ದೇಶ ಹೆಮ್ಮೆಪಡುವಂತೆ ಮಾಡಿದರೂ, ಪದಕಗಳಿಗಾಗಿ ನಾವು ದಶಕಗಳ ಕಾಲ ಕಾಯಬೇಕಾಯಿತು.

ಹಾಕಿಯು ಜಗತ್ತಿನಲ್ಲಿ ಸಹಜ ವಾತಾವರಣದಿಂದ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಆಡುವ ಆಟವಾಗಿ ಬದಲಾದರೂ, ನಾವು ಅಲ್ಲಿಯೇ ಉಳಿದೆವು. ನಾವು ಎಚ್ಚೆತ್ತುಕೊಳ್ಳುವಾಗ ಬಹಳ ವಿಳಂಬವಾಗಿತ್ತು. ಮೇಲಾಗಿ ಮೇಲಿನಿಂದ ಕೆಳಗಿನವರೆಗೂ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ತರಬೇತಿಯಿಂದ ತಂಡ ಆಯ್ಕೆಯವರೆಗೆ ಪ್ರತಿಯೊಂದು ಹಂತದಲ್ಲಿಯೂ ತಾರತಮ್ಯ ಇರುತ್ತಿತ್ತು. ಮತ್ತು ಎಲ್ಲೂ ಪಾರದರ್ಶಕತೆ ಇರಲಿಲ್ಲ. ಸ್ನೇಹಿತರೇ, ಹಾಕಿ ಒಂದು ಉದಾಹರಣೆ ಮಾತ್ರ. ಇದು ಇತರ ಪ್ರತಿಯೊಂದು ಕ್ರೀಡಾ ವಲಯದ ಕಥೆ ಕೂಡಾ ಆಗಿತ್ತು. ದೇಶದಲ್ಲಿದ್ದ ಹಿಂದಿನ ಸರಕಾರಗಳು ಬದಲಾಗುತ್ತಿರುವ ತಂತ್ರಜ್ಞಾನ, ಬೇಡಿಕೆ ಮತ್ತು ಕೌಶಲ್ಯಗಳಿಗೆ ತಕ್ಕಂತೆ ಉತ್ತಮ ಪರಿಸರ ವ್ಯವಸ್ಥೆಯನ್ನು ರೂಪಿಸಲಿಲ್ಲ.

ಸ್ನೇಹಿತರೇ,

ದೇಶದ ಯುವ ಜನತೆಯ ಭಾರೀ ಪ್ರತಿಭೆ ಸರಕಾರದ ನಿರ್ಲಕ್ಷ್ಯದಿಂದ ಕಟ್ಟಿಹಾಕಲ್ಪಟ್ಟಿತ್ತು. 2014 ರ ಬಳಿಕ ಅದನ್ನು ಹೊರತರಲು ನಾವು ಪ್ರತೀ ಹಂತದಲ್ಲಿಯೂ ಸುಧಾರಣೆಗಳನ್ನು ಜಾರಿಗೆ ತಂದೆವು. ನಮ್ಮ ಸರಕಾರ ಆಟಗಾರರ ಸಾಮರ್ಥ್ಯ ವರ್ಧಿಸಲು ನಾಲ್ಕು ಸಲಕರಣೆಗಳನ್ನು ಒದಗಿಸಿತು. ಆಟಗಾರರಿಗೆ ಸಂಪನ್ಮೂಲಗಳು ಬೇಕು, ಆಧುನಿಕ ತರಬೇತಿ ಸೌಲಭ್ಯಗಳು, ಅಂತಾರಾಷ್ಟ್ರೀಯ ಅವಕಾಶಗಳು, ಮತ್ತು ಆಯ್ಕೆಯಲ್ಲಿ ಪಾರದರ್ಶಕತೆಯನ್ನು ತರಲು ಸರಕಾರ ಅವಶ್ಯ ಕ್ರಮಗಳನ್ನು ಕೈಗೊಂಡಿತು. ನಮ್ಮ ಸರಕಾರ ಕಳೆದ ಕೆಲವು ವರ್ಷಗಳಲ್ಲಿ ಆದ್ಯತೆ ಆಧಾರದಲ್ಲಿ ಈ ನಾಲ್ಕು ಸಲಕರಣೆಗಳನ್ನು ಭಾರತದ ಆಟಗಾರರಿಗೆ ಒದಗಿಸಿತು. ನಾವು ಕ್ರೀಡೆಯನ್ನು ದೈಹಿಕ ಕ್ಷಮತೆ ಮತ್ತು ಯುವಜನತೆಯ ನೇಮಕಾತಿ, ಸ್ವ ಉದ್ಯೋಗ, ಮತ್ತು ಅವರ ವೃತ್ತಿ ಜೀವನದ ಜೊತೆ ಜೋಡಿಸಿದೆವು. ಒಲಿಂಪಿಕ್ ಪೋಡಿಯಂ ಗುರಿ ಯೋಜನೆ ಅಂದರೆ ಟಿ.ಒ.ಪಿ.ಎಸ್ ಇಂತಹ ಪ್ರಯತ್ನಗಳಲ್ಲಿ ಒಂದು.

ಇಂದು ಸರಕಾರವು ಉನ್ನತ ಆಟಗಾರರ ಆಹಾರ, ದೈಹಿಕ ಕ್ಷಮತೆ ಮತ್ತು ತರಬೇತಿಗಾಗಿ ಮಿಲಿಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಖೇಲೋ ಇಂಡಿಯಾ ಆಂದೋಲನದ ಮೂಲಕ ಬಹಳ ಕಿರಿಯ ವಯಸ್ಸಿನಲ್ಲಿ ದೇಶದ ಪ್ರತೀ ಮೂಲೆಯಲ್ಲೂ ಪ್ರತಿಭೆಯನ್ನು ಗುರುತಿಸಲಾಗುತ್ತಿದೆ. ಇಂತಹ ಆಟಗಾರರಿಗೆ ಅವರನ್ನು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನಾಗಿ ರೂಪಿಸಲು ಸಾಧ್ಯ ಇರುವ ಎಲ್ಲಾ ಸಹಾಯವನ್ನೂ ಮಾಡಲಾಗುತ್ತಿದೆ. ಈ ಪ್ರಯತ್ನಗಳ ಫಲವಾಗಿ ಭಾರತೀಯ ಆಟಗಾರರು ಅಂತಾರಾಷ್ಟ್ರೀಯ ರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ ಮತ್ತು ಅವರ ಸಾಧನೆಯನ್ನು ಜಗತ್ತು ಮೆಚ್ಚುತ್ತಿದೆ. ನಾವು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನೋಡಿದ್ದೇವೆ. ಚರಿತ್ರೆಯಲ್ಲಿ ಈ ಹಿಂದೆಂದೂ ಆಗದೇ ಇದ್ದುದನ್ನು ನನ್ನ ದೇಶದ ಹೀರೋ ಪುತ್ರರು ಮತ್ತು ಹೆಣ್ಣು ಮಕ್ಕಳು ಕಳೆದ ಒಲಿಂಪಿಕ್ಸ್ ನಲ್ಲಿ ಸಾಧಿಸಿ ತೋರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಹೊಸ ಶಕೆಯನ್ನು ಆರಂಭ ಮಾಡಿದೆ ಎಂದು ಜನತೆ ಏಕಕಂಠದಿಂದ ಹೇಳುವಷ್ಟು ಪದಕಗಳ ಸುರಿ ಮಳೆಯಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ನಾವು ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳ ಪಟ್ಟಣಗಳು ಮತ್ತು ಸಣ್ಣ ಗ್ರಾಮೀಣ ಪ್ರದೇಶಗಳ ಸಾಮಾನ್ಯ ಕುಟುಂಬಗಳ ಪುತ್ರರು ಮತ್ತು ಪುತ್ರಿಯರು ಭಾರತವನ್ನು ಪ್ರತಿನಿಧಿಸುತ್ತಿರುವುದನ್ನು ಕಾಣಬಹುದಾಗಿದೆ. ಶ್ರೀಮಂತ ಕುಟುಂಬಗಳ ಮಕ್ಕಳು ಮಾತ್ರವೇ ಭಾಗವಹಿಸುತ್ತಿದ್ದ ಕ್ರೀಡೆಗಳಲ್ಲಿ ಭಾಗವಹಿಸಲು ನಮ್ಮ ಪುತ್ರರು ಮತ್ತು ಹೆಣ್ಣುಮಕ್ಕಳು ಮುಂದೆ ಬರುತ್ತಿದ್ದಾರೆ. ಈ ವಲಯದ ಅನೇಕ ಅಥ್ಲೀಟ್ ಗಳು ಒಲಿಂಪಿಕ್ಸ್ ನಲ್ಲಿ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಸರಕಾರ ಪ್ರತೀ ಗ್ರಾಮಗಳಲ್ಲಿ ಆಧುನಿಕ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿರುವುದರ ಫಲ ಇದು. ಈ ಮೊದಲು ಉತ್ತಮ ಸ್ಟೇಡಿಯಂಗಳು, ಕ್ರೀಡಾಂಗಣಗಳು ದೊಡ್ಡ ನಗರಗಳಲ್ಲಿ ಮಾತ್ರವೇ ಲಭ್ಯ ಇದ್ದವು. ಇಂದು ಈ ಸೌಲಭ್ಯಗಳು ಹಳ್ಳಿಗಳ ಆಟಗಾರರಿಗೂ ಲಭ್ಯವಾಗುತ್ತಿವೆ.

ಸ್ನೇಹಿತರೇ,

ನಾವು ಹೊಸ ಕೆಲಸದ ಸಂಸ್ಕೃತಿಯನ್ನು ಬೆಳೆಸಲು ಯತ್ನಿಸಿದಾಗೆಲ್ಲ, ಅದಕ್ಕೆ ಮೂರು ಸಂಗತಿಗಳು ಅವಶ್ಯ-ಸಂಯೋಜನೆ, ಧೋರಣೆ ಮತ್ತು ಸಂಪನ್ಮೂಲಗಳು!. ಕ್ರೀಡಾ ಕ್ಷೇತ್ರದ ಜೊತೆ ನಮ್ಮ ಸಾಹಚರ್ಯ ಶತಮಾನಗಳಷ್ಟು ಹಳೆಯದು. ಆದರೆ ಆ ಶತಮಾನಗಳಷ್ಟು ಹಳೆಯ ಸಂಬಂಧ ಕ್ರೀಡಾ ಸಂಸ್ಕೃತಿಯನ್ನು ನಿರ್ಮಾಣ ಮಾಡಲು ಸಾಕಾಗುವುದಿಲ್ಲ. ನಮಗೆ ಹೊಸ ಧೋರಣೆ ಅವಶ್ಯ. ನಮ್ಮ ಯುವ ಜನತೆಯಲ್ಲಿ ಆತ್ಮವಿಶ್ವಾಸ ತುಂಬಿ ಅವರು ಕ್ರೀಡೆಯನ್ನು ಅವರ ವೃತ್ತಿಯನ್ನಾಗಿಸಲು ಪ್ರೋತ್ಸಾಹ ನೀಡುವುದೂ ಅಗತ್ಯ. ಇದು ನನ್ನ ನಿರ್ಧಾರ ಮತ್ತು ಕನಸು. ನಮ್ಮ ಯುವ ಜನತೆ ಇತರ ವೃತ್ತಿಗಳಂತೆ ಕ್ರೀಡೆಯನ್ನು ಪರಿಗಣಿಸುವಂತಾಗಬೇಕು ಎಂಬುದು ನನ್ನ ಆಶಯ. ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬರೂ ವಿಶ್ವದ ನಂಬರ್ ಒನ್ ಆಗಲಾರರು ಎಂಬುದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ಕ್ರೀಡಾ ಪರಿಸರ ವ್ಯವಸ್ಥೆ ಸಿದ್ಧವಾದಾಗ ಅಲ್ಲಿ ಕ್ರೀಡಾ ನಿರ್ವಹಣೆಯಿಂದ ಹಿಡಿದು ಕ್ರೀಡಾ ಬರಹ ಮತ್ತು ಕ್ರೀಡಾ ಮನೋವಿಜ್ಞಾನದಂತಹ ಅನೇಕ ಸಾಧ್ಯತೆಗಳಿವೆ. ನಿಧಾನವಾಗಿ ಯುವ ಜನತೆ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವುದು ಸರಿಯಾದ ನಿರ್ಧಾರ ಎಂಬ ನಂಬಿಕೆ ಸಮಾಜದಲ್ಲಿ ಬೆಳೆಯುತ್ತದೆ. ಇಂತಹ ಪರಿಸರ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಂಪನ್ಮೂಲಗಳ ಅವಶ್ಯಕತೆ ಇರುತ್ತದೆ. ನಾವು ಅವಶ್ಯ ಸಂಪನ್ಮೂಲಗಳನ್ನು ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಿದಾಗ ಕ್ರೀಡಾ ಸಂಸ್ಕೃತಿ ಬಲಿಷ್ಟವಾಗಿ ಬೆಳೆಯಲು ಆರಂಭಿಸುತ್ತದೆ. ಕ್ರೀಡೆಗೆ ಅವಶ್ಯ ಸಂಪನ್ಮೂಲಗಳು ಇದ್ದಾಗ ಕ್ರೀಡಾ ಸಂಸ್ಕೃತಿ ಕೂಡಾ ರೂಪುಗೊಂಡು ದೇಶಾದ್ಯಂತ ಹರಡಲಾರಂಭಿಸುತ್ತದೆ.

ಆದುದರಿಂದ, ಇಂತಹ ಕ್ರೀಡಾ ವಿಶ್ವವಿದ್ಯಾನಿಲಯಗಳು ಇಂದು ಬಹಳ ಮುಖ್ಯ. ಈ ಕ್ರೀಡಾ ವಿಶ್ವವಿದ್ಯಾನಿಲಯಗಳು ಕ್ರೀಡಾ ಸಂಸ್ಕೃತಿ ಬೆಳೆಯಲು ಪೋಷಕ ವ್ಯವಸ್ಥೆಯಾಗುತ್ತವೆ. ಆದುದರಿಂದ ಸ್ವಾತಂತ್ರ್ಯ ಬಂದ ಏಳು ದಶಕಗಳ ಬಳಿಕ ನಮ್ಮ ಸರಕಾರ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಮಣಿಪುರದಲ್ಲಿ, 2018 ರಲ್ಲಿ ಸ್ಥಾಪಿಸಿತು. ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ ಕ್ರೀಡಾ ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳು ಮತ್ತು ಕೌಶಲ್ಯಗಳು ಆಧುನೀಕರಿಸಲ್ಪಟ್ಟಿವೆ. ಮತ್ತು ಇಂದು ದೇಶವು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯದ ರೂಪದಲ್ಲಿ ಇನ್ನೊಂದು ಅತ್ಯುತ್ತಮ ಸಂಸ್ಥೆಯನ್ನು ಹೊಂದಿದೆ.

ಸ್ನೇಹಿತರೇ,

ಕ್ರೀಡಾ ಜಗತ್ತಿನ ಬಗ್ಗೆ ನಾವು ಇನ್ನೊಂದು ಸಂಗತಿಯನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮತ್ತು ಮೀರತ್ತಿನ ಜನತೆಗೆ ಇದರ ಬಗ್ಗೆ ಬಹಳ ಚೆನ್ನಾಗಿ ಗೊತ್ತಿದೆ. ಕ್ರೀಡಾ ಸಂಬಂಧಿ ಸೇವೆಗಳ ಮತ್ತು ಸರಕುಗಳ ಜಾಗತಿಕ ಮಾರುಕಟ್ಟೆ ಬಿಲಿಯಾಂತರ ರೂಪಾಯಿ ವಹಿವಾಟನ್ನು ಒಳಗೊಂಡಿದೆ. ಮೀರತ್ತಿನಿಂದ ಕ್ರೀಡಾ ಸರಕುಗಳು 100 ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತವೆ. ಮೀರತ್ ವೋಕಲ್ ಫಾರ್ ಲೋಕಲ್ ಆಗಿರುವುದು ಮಾತ್ರವಲ್ಲ ಅದು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವನ್ನಾಗಿಸಿದೆ. ಇಂದು ಇಂತಹ ಹಲವಾರು ಕ್ರೀಡಾ ಗುಚ್ಛಗಳನ್ನು ದೇಶಾದ್ಯಂತ ಅಭಿವೃದ್ಧಿ ಮಾಡಲಾಗುತ್ತಿದೆ. ಕ್ರೀಡಾ ಸರಕುಗಳ ಮತ್ತು ಸಲಕರಣೆಗಳ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿ ಮಾಡುವುದು ಇದರ ಉದ್ದೇಶವಾಗಿದೆ.

ಈಗ ಅನುಷ್ಠಾನಕ್ಕೆ ತರಲಾಗುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಆದ್ಯತೆ ನೀಡಲಾಗಿದೆ. ವಿಜ್ಞಾನ, ವಾಣಿಜ್ಯ, ಗಣಿತ, ಭೂಗರ್ಭ ವಿಜ್ಞಾನ ಅಥವಾ ಇತರ ಅಧ್ಯಯನಗಳ ವರ್ಗದಲ್ಲಿಯೇ ಕ್ರೀಡೆಯನ್ನೂ ಅಳವಡಿಸಲಾಗಿದೆ. ಮೊದಲು ಕ್ರೀಡೆಯನ್ನು ಪಠ್ಯೇತರ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕ್ರೀಡೆಯು ಶಾಲೆಗಳಲ್ಲಿ ಒಂದು ಪಠ್ಯ ವಿಷಯವಾಗಲಿದೆ.ಅದು ಇತರ ವಿಷಯಗಳಷ್ಟೇ ಮುಖ್ಯ ವಿಷಯವಾಗಿರಲಿದೆ.

ಸ್ನೇಹಿತರೇ,

ಉತ್ತರ ಪ್ರದೇಶದ ಯುವ ಜನತೆಯಲ್ಲಿ ಬಹಳಷ್ಟು ಪ್ರತಿಭೆ ಇದೆ ಮತ್ತು ಅದು ಆಗಸ ಕೂಡಾ ಕಿರಿದು ಎನ್ನುವಷ್ಟು ಅಗಾಧ ಪ್ರಮಾಣದಲ್ಲಿದೆ. ಆದುದರಿಂದ ಎರಡು ಇಂಜಿನ್ ಗಳ ಸರಕಾರ ಉತ್ತರ ಪ್ರದೇಶದಲ್ಲಿ ಹಲವು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದೆ. ಗೋರಖಪುರದಲ್ಲಿ ಮಹಾಯೋಗಿ ಗುರು ಗೋರಖನಾಥ ಆಯುಷ್ ವಿಶ್ವವಿದ್ಯಾನಿಲಯ, ಪ್ರಯಾಗರಾಜದಲ್ಲಿ ಡಾ. ರಾಜೇಂದ್ರ ಪ್ರಸಾದ್ ಕಾನೂನು ವಿಶ್ವವಿದ್ಯಾನಿಲಯ, ಲಕ್ನೋದಲ್ಲಿ ಅಪರಾಧ ವಿಜ್ಞಾನಗಳ ಸಂಸ್ಥೆ, ಅಲಿಘರದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾನಿಲಯ, ಸಹರಾನ್ಪುರದಲ್ಲಿ ಮಾ ಶಾಕುಂಬರಿ ವಿಶ್ವವಿದ್ಯಾನಿಲಯ ಮತ್ತು ಈಗ ಮೀರತ್ತಿನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬರುತ್ತಿವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ, ನಮ್ಮ ಯುವ ಜನತೆ ರೋಲ್ ಮಾಡೇಲ್ ಗಳಾಗುವುದು ಮಾತ್ರವಲ್ಲ, ಅವರು ಅವರ ರೋಲ್ ಮಾಡೆಲ್ ಗಳನ್ನು ಗುರುತಿಸಲು ಸಮರ್ಥರಾಗಬೇಕು ಎಂಬುದು.

ಸ್ನೇಹಿತರೇ,

ಸರಕಾರದ ಪಾತ್ರ ಪೋಷಕತ್ವದ್ದು. ಮೆರಿಟ್ ಗೆ ಉತ್ತೇಜನ ನೀಡಬೇಕು, ಆದರೆ ಅದೇ ವೇಳೆ “ಹುಡುಗರು ತಪ್ಪುಗಳನ್ನು ಮಾಡುತ್ತಾರೆ” ಎಂದು ಹೇಳುವ ಮೂಲಕ ತಪ್ಪುಗಳನ್ನು ಅವಗಣಿಸಬಾರದು. ಇಂದು ಯೋಗೀ ಜೀ ಸರಕಾರ ಯುವಕರನ್ನು ದಾಖಲೆ ಪ್ರಮಾಣದಲ್ಲಿ ಸರಕಾರಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಐ.ಟಿ.ಐ.ಯಿಂದ ತರಬೇತಿ ಪಡೆದ ಸಾವಿರಾರು ಯುವಕರು ದೊಡ್ಡ ಕಂಪೆನಿಗಳಲ್ಲಿ ಉದ್ಯೋಗ ನೇಮಕಾತಿ ಪಡೆದಿದ್ದಾರೆ. ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಯೋಜನೆ ಅಥವಾ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನಾ ಅಡಿಯಲ್ಲಿ ಮಿಲಿಯಾಂತರ ಯುವಜನತೆಗೆ ಪ್ರಯೋಜನಗಳು ದೊರಕಿವೆ. ಉತ್ತರ ಪ್ರದೇಶ ಸರಕಾರ ಅಟಲ್ ಜೀ ಜನ್ಮ ವರ್ಷಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳನ್ನು ನೀಡುವ ಆಂದೋಲನ ಆರಂಭ ಮಾಡಿದೆ.

ಸ್ನೇಹಿತರೇ,

ಕೇಂದ್ರ ಸರಕಾರದ ಇನ್ನೊಂದು ಯೋಜನೆಯ ಬಗ್ಗೆ ಉತ್ತರ ಪ್ರದೇಶದ ಯುವ ಜನತೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅದು ಸ್ವಾಮಿತ್ವ ಯೋಜನಾ. ಈ ಯೋಜನೆ ಅಡಿಯಲ್ಲಿ, ಕೇಂದ್ರ ಸರಕಾರವು ’ಘರೌನಿ”ಗಳನ್ನು, ಆಸ್ತಿಗೆ ಸಂಬಂಧಿಸಿದ ಮಾಲಕತ್ವದ ಕಾನೂನು ಸಂಬಂಧಿ ಪತ್ರಗಳನ್ನು ಗ್ರಾಮಗಳಲ್ಲಿ ವಾಸಿಸುವ ಜನರಿಗೆ ನೀಡುತ್ತದೆ. “ಘರೌನಿ” ಯಿಂದಾಗಿ ಗ್ರಾಮಗಳಲ್ಲಿರುವ ಯುವ ಜನತೆ ತಮ್ಮದೇ ಆದ ವ್ಯಾಪಾರ ವಹಿವಾಟು ನಡೆಸಲು ಬ್ಯಾಂಕ್ ಸಾಲ ಪಡೆಯಲು ಅರ್ಹರಾಗುತ್ತಾರೆ. ಇದು ಗೃಹಿಣಿಯರನ್ನು, ಬಡವರನ್ನು, ಅವಕಾಶ ವಂಚಿತರನ್ನು, ತಳಮಟ್ಟದವರನ್ನು, ಹಿಂದುಳಿದವರನ್ನು, ಮತ್ತು ಸಮಾಜದ ಪ್ರತೀ ವರ್ಗದವರನ್ನು ಅವರ ಮನೆಗಳಲ್ಲಿ ಅಕ್ರಮ ವಾಸ್ತವ್ಯದ ಚಿಂತೆಯಿಂದ ಮುಕ್ತ ಮಾಡುತ್ತವೆ. ಯೋಗೀ ಜೀ ಸರಕಾರ ಈ ಮಾಲಕತ್ವ ಯೋಜನೆಯನ್ನು ಇನ್ನಷ್ಟು ತ್ವರಿತಗತಿಯಿಂದ ಮುಂದಕ್ಕೆ ಕೊಂಡೊಯ್ಯುತ್ತಿರುವುದು ನನಗೆ ಸಂತೋಷ ತಂದಿದೆ. ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ 23 ಲಕ್ಷಕ್ಕೂ ಅಧಿಕ ಮನೆಗಳಿಗೆ “ಘರೌನಿ” ಗಳನ್ನು ಒದಗಿಸಲಾಗಿದೆ. ಚುನಾವಣೆಯ ಬಳಿಕ ಯೋಗೀ ಜೀ ಸರಕಾರ ಈ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಈ ವಲಯದಲ್ಲಿ ವಾಸಿಸುತ್ತಿರುವ ಬಹುತೇಕ ಯುವ ಜನತೆ ಗ್ರಾಮೀಣ ಪ್ರದೇಶವಾಸಿಗಳು. ನಮ್ಮ ಸರಕಾರ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಸದಾ ಕಾರ್ಯನಿರತವಾಗಿದೆ. ನಿನ್ನೆಯಷ್ಟೇ, ಉತ್ತರ ಪ್ರದೇಶದ ಲಕ್ಷಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಪ್ರಧಾನ ಮಂತ್ರಿ ಅವರ ಕಿಸಾನ್ ಸಮ್ಮಾನ್ ನಿಧಿಯಡಿ ವರ್ಗಾಯಿಸಲಾಗಿದೆ. ಇದರಿಂದ ಈ ವಲಯದ ಸಣ್ಣ ರೈತರಿಗೆ ಪ್ರಯೋಜನವಾಗುತ್ತಿದೆ.

ಸ್ನೇಹಿತರೇ,

ಈ ಹಿಂದೆ ಅಧಿಕಾರದಲ್ಲಿದ್ದವರು ನಿಮ್ಮನ್ನು ದೀರ್ಘ ಕಾಲ ಕಾಯುವಂತೆ ಮಾಡಿದರು. ಮತ್ತು ಕಬ್ಬಿನ ಹಣವನ್ನು ಕಂತುಗಳಲ್ಲಿ ಪಾವತಿ ಮಾಡಿದರು. ಕಬ್ಬು ಬೆಳೆಗಾರರು ಹಿಂದಿನ ಎರಡು ಸರಕಾರಗಳ ಅವಧಿಯಲ್ಲಿ ಪಡೆಯದೇ ಇದ್ದ ಹಣವನ್ನು ಯೋಗೀ ಜೀ ಸರಕಾರದ ಅವಧಿಯಲ್ಲಿ ಪಡೆದರು. ಹಿಂದಿನ ಸರಕಾರಗಳ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಬಹಳ ಕಡಿಮೆ ದರದಲ್ಲಿ ಮಾರಾಟ ಮಾಡಿರುವುದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ? ಸಕ್ಕರೆ ಕಾರ್ಖಾನೆಗಳನ್ನು ಮಾರಾಟ ಮಾಡಲಾಯಿತೋ ಇಲ್ಲವೋ?. ಹಗರಣಗಳು ನಡೆದವೋ ಇಲ್ಲವೋ? ಕಾರ್ಖಾನೆಗಳು ಯೋಗೀ ಜೀ ಅವಧಿಯಲ್ಲಿ ಮುಚ್ಚಲಿಲ್ಲ. ಈಗ ಅವುಗಳನ್ನು ವಿಸ್ತರಿಸಲಾಗಿದೆ ಮತ್ತು ಕಾರ್ಖಾನೆಗಳನ್ನು ಆರಂಭಿಸಲಾಗಿದೆ. ಈಗ ಉತ್ತರ ಪ್ರದೇಶವು ಕಬ್ಬಿನಿಂದ ತಯಾರಿಸುವ ಎಥೆನಾಲ್ ಉತ್ಪಾದನೆಯಲ್ಲಿಯೂ ಬಹಳ ತ್ವರಿತಗತಿಯಿಂದ ಮುನ್ನಡೆ ಸಾಧಿಸುತ್ತಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಉತ್ತರ ಪ್ರದೇಶದಿಂದ 12,000 ಕೋ.ರೂ.ಗಳ ಮೌಲ್ಯದ ಎಥೆನಾಲನ್ನು ಖರೀದಿ ಮಾಡಲಾಗಿದೆ. ಸರಕಾರವು ಕೃಷಿ ಮೂಲ ಸೌಕರ್ಯಗಳನ್ನು ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ಬಹಳ ವೇಗದಲ್ಲಿ ವಿಸ್ತರಿಸುತ್ತಿದೆ. ಇಂದು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಗ್ರಾಮೀಣ ಮೂಲ ಸೌಕರ್ಯ, ದಾಸ್ತಾನುಗಾರಗಳ ಸೌಕರ್ಯ ಮತ್ತು ಶೀತಲೀಕೃತ ದಾಸ್ತಾನುಗಾರಗಳಿಗಾಗಿ ವ್ಯಯಿಸಲಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಎರಡು ಇಂಜಿನ್ ಗಳ ಸರಕಾರ ಯುವ ಜನತೆಯ ಶಕ್ತಿಯನ್ನು ಮತ್ತು ಈ ವಲಯದ ಶಕ್ತಿಯನ್ನು ವರ್ಧಿಸಲು ಕಾರ್ಯನಿರತವಾಗಿದೆ. ಮೀರತ್ತಿನ “ರೇವಡಿ-ಗಜಕ್” ಕೈಮಗ್ಗ, ಕಂಚಿನ ಬ್ಯಾಂಡ್ ಮತ್ತು ಆಭರಣಗಳು ಈ ಸ್ಥಳದ ಹೆಮ್ಮೆ. ಮೀರತ್ ಮತ್ತು ಮುಜಾಫರನಗರಗಳನ್ನು ಬೃಹತ್ ಕೈಗಾರಿಕೆಗಳ ಬಲಿಷ್ಟವಾದ ನೆಲೆಯನ್ನಾಗಿ ಮಾಡಲು ಮತ್ತು ಕೃಷಿ ಉತ್ಪನ್ನಗಳಿಗೆ ಹೊಸ್ ಮಾರುಕಟ್ಟೆಗಳು ಲಭ್ಯವಾಗುವಂತೆ ಮಾಡಲು ಅಲ್ಲಿ ಸಣ್ಣ ಮತ್ತು ಕಿರು ಕೈಗಾರಿಕೆಗಳನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಸರ್ವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಆದುದರಿಂದ ಈ ವಲಯವನ್ನು ದೇಶದ ಅತ್ಯಂತ ಆಧುನಿಕ ಮತ್ತು ಅತ್ಯಂತ ಸಂಪರ್ಕಿತ ವಲಯವನ್ನಾಗಿ ಮಾಡಲು ಪ್ರಯತ್ನಗಳು ಸಾಗಿವೆ. ದಿಲ್ಲಿ-ಮೀರತ್ ಎಕ್ಸ್ ಪ್ರೆಸ್ ವೇಯಿಂದಾಗಿ ದಿಲ್ಲಿ ಈಗ ಗಂಟೆಯ ದಾರಿಯಾಗಿದೆ. ಕೆಲವು ದಿನಗಳ ಹಿಂದೆ ಚಾಲನೆ ನೀಡಲಾಗಿರುವ ಗಂಗಾ ಎಕ್ಸ್ ಪ್ರೆಸ್ ವೇ ಕಾಮಗಾರಿ ಮೀರತ್ತಿನಿಂದ ಆರಂಭವಾಗಲಿದೆ. ಮೀರತ್ತಿನ ಸಂಪರ್ಕವು ಉತ್ತರ ಪ್ರದೇಶದ ಇತರ ನಗರಗಳ ಅಭಿವೃದ್ಧಿಗೆ ಸಹಾಯ ಮಾಡಲಿದೆ. ದೇಶದ ಮೊದಲ ತ್ವರಿತಗತಿಯ ರೈಲ್ವೇ ಟ್ರಾನ್ಸಿಟ್ ವ್ಯವಸ್ಥೆ ಮೀರತ್ತನ್ನು ರಾಷ್ಟ್ರದ ರಾಜಧಾನಿಯ ಜೊತೆ ಬೆಸೆಯಲಿದೆ. ಮೆಟ್ರೋ ಮತ್ತು ಅತಿ ವೇಗದ ತ್ವರಿತಗತಿಯ ರೈಲುಗಳು ಏಕ ಕಾಲಕ್ಕೆ ಓಡಾಡುವಂತಹ ದೇಶದ ಮೊದಲ ನಗರವಾಗಿ ಮೀರತ್ ರೂಪುಗೊಳ್ಳಲಿದೆ. ಹಿಂದಿನ ಸರಕಾರಗಳು ಬರೇ ಘೋಷಣೆಯಾಗಿ ಮಾತ್ರವೇ ಉಳಿಸಿದ್ದ ಮೀರತ್ತಿನ ಮಾಹಿತಿ ತಂತ್ರಜ್ಞಾನ ಪಾರ್ಕ್ ಕೂಡಾ ಉದ್ಘಾಟನೆಯಾಗಿದೆ.

ಸ್ನೇಹಿತರೇ

ಈ ದುಪ್ಪಟ್ಟು ಲಾಭ, ದುಪ್ಪಟ್ಟು ವೇಗವು ಎರಡು ಇಂಜಿನ್ ಸರಕಾರದ ಗುರುತಿಸುವಿಕೆ. ಈ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಪಶ್ಚಿಮ ಉತ್ತರ ಪ್ರದೇಶದ ಜನರಿಗೆ ಯೋಗೀ ಜೀ ಅವರು ಲಕ್ನೋದಲ್ಲಿರುವುದು ಮತ್ತು ನಾನು ದಿಲ್ಲಿಯಲ್ಲಿರುವುದು ತಿಳಿದಿದೆ. ನಾವು ಪರಸ್ಪರ ಹತ್ತಿರದಲ್ಲಿದ್ದೇವೆ. ಅಭಿವೃದ್ಧಿಯ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಹೊಸ ವರ್ಷದಲ್ಲಿ ನಾವು ಹೊಸ ಹುರುಪಿನೊಂದಿಗೆ ಮುಂದುವರಿಯಲಿದ್ದೇವೆ. ನನ್ನ ಯುವ ಸಂಗಾತಿಗಳೇ, ಇಂದು ಇಡೀ ಭಾರತ ಮೀರತ್ತಿನ ಶಕ್ತಿಯನ್ನು ನೋಡುತ್ತಿದೆ. ಪಶ್ಚಿಮ ಉತ್ತರ ಪ್ರದೇಶದ ಮತ್ತು ಯುವಜನತೆಯ ಶಕ್ತಿಯನ್ನು ನೋಡುತ್ತಿದೆ. ಈ ಶಕ್ತಿಯು ದೇಶದ ಶಕ್ತಿ. ಮತ್ತು ನಾವು ಈ ಶಕ್ತಿಯನ್ನು ಹೊಸ ನಂಬಿಕೆಯೊಂದಿಗೆ ಇನ್ನಷ್ಟು ಉತ್ತೇಜಿಸಬೇಕಾಗಿದೆ. ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕಾಗಿ ನಿಮಗೆ ಮತ್ತೊಮ್ಮೆ ಅಭಿನಂದನೆಗಳು.

ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ!

ವಂದೇ ಮಾತರಂ! ವಂದೇ ಮಾತರಂ!

ಮೋದಿ ಮಾಸ್ಟರ್‌ಕ್ಲಾಸ್: ಪ್ರಧಾನಿ ಮೋದಿಯವರೊಂದಿಗೆ ‘ಪರೀಕ್ಷಾ ಪೇ ಚರ್ಚಾ’
Share your ideas and suggestions for 'Mann Ki Baat' now!
Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
PM calls for rapid rollout of 5G, says will contribute $450 bn to economy

Media Coverage

PM calls for rapid rollout of 5G, says will contribute $450 bn to economy
...

Nm on the go

Always be the first to hear from the PM. Get the App Now!
...
Virtual meeting between PM Modi and PM of Cambodia
May 18, 2022
ಶೇರ್
 
Comments

Virtual Meeting between Prime Minister Shri Narendra Modi and H.E. Samdech Akka Moha Sena Padei Techo Hun Sen, Prime Minister of Cambodia

Prime Minister Shri Narendra Modi held a virtual meeting today with H.E. Samdech Akka Moha Sena Padei Techo Hun Sen, Prime Minister of Cambodia.

The two leaders held discussions on the entire range of bilateral issues, including cooperation in the fields of trade and investment, human resource development, defence and security, development cooperation, connectivity, post-pandemic economic recovery and people-to-people ties. They expressed satisfaction at the pace of bilateral cooperation.

PM Hun Sen emphasised the importance that Cambodia attaches to its relations with India. Prime Minister Modi reciprocated the sentiment and stressed Cambodia’s valued role in India’s Act East policy. The leaders reviewed the robust development partnership between both countries, including capacity building programmes and Quick Impact Projects under the Mekong-Ganga Cooperation framework. Prime Minister Modi also highlighted the historical and civilizational links between the two countries and expressed his happiness at India’s involvement in restoration of Angkor Wat and Preah Vihear temples in Cambodia, which depict the cultural and linguistic connect between the two countries.

Prime Minister Hun Sen thanked India for providing 3.25 lakh doses of Indian-manufactured Covishield vaccines to Cambodia under Quad Vaccine Initiative.

The two leaders complimented each other on the 70th anniversary of the establishment of diplomatic relations between India and Cambodia being celebrated this year. As part of these celebrations, Prime Minister Modi invited His Majesty the King of Cambodia and Her Majesty Queen Mother to visit India at a mutually convenient time.

The two leaders also exchanged views on regional and global issues of shared interest. Prime Minister Modi congratulated Cambodia on assuming the Chairmanship of ASEAN and assured India’s full support and assistance to Cambodia for the success of its Chairmanship.