ಶೇರ್
 
Comments
ಭಾರತೀಯತೆಯನ್ನು ಸಂರಕ್ಷಿಸಲು ಕೊಡುಗೆ ನೀಡಿದ ಮಹಾರಾಜ ಸುಹೆಲ್‌ದೇವ್ ಅವರನ್ನು ನಿರ್ಲಕ್ಷಿಸಲಾಗಿತ್ತು
ಇತಿಹಾಸ ನಿರ್ಮಾಣಕಾರರಿಗೆ ಇತಿಹಾಸ ಬರಹಗಾರರಿಂದ ಆಗಿರುವ ಅನ್ಯಾಯವನ್ನು ಇದೀಗ ಸರಿಪಡಿಸಲಾಗುತ್ತಿದೆ
ಬಸಂತ ಪಂಚಮಿ, ಸಾಂಕ್ರಾಮಿಕ ರೋಗದ ನಿರಾಶೆಯನ್ನು ದೂರ ಮಾಡಿ, ಭಾರತಕ್ಕೆ ಹೊಸ ಭರವಸೆ ತಂದಿದೆ
ಕೃಷಿ ಕಾನೂನುಗಳ ಕುರಿತ ಸುಳ್ಳು ಮತ್ತು ಅಪಪ್ರಚಾರ ಅನಾವರಣ: ಪ್ರಧಾನಮಂತ್ರಿ

ನಮಸ್ಕಾರ!

ಉತ್ತರ ಪ್ರದೇಶದ ರಾಜ್ಯಪಾಲರಾದ, ಶ್ರೀಮತಿ ಆನಂದಿಬೆನ್ ಪಟೇಲ್ ಜಿ, ರಾಜ್ಯದ ಜನಪ್ರಿಯ ಮತ್ತು ಖ್ಯಾತ ಮುಖ್ಯಮಂತ್ರಿ ಯರಾದ ಯೋಗಿ ಆದಿತ್ಯನಾಥ್ ಜಿ, ಯುಪಿ ಸರ್ಕಾರದ ಇತರ ಮಂತ್ರಿಗಳೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಶಾಸಕರೇ ಮತ್ತು ನನ್ನ ಆತ್ಮೀಯ ಸಹೋದರ ಸಹೋದರಿಯರೇ!

ರಾಷ್ಟ್ರೀಯ ನಾಯಕ ಮಹಾರಾಜ ಸುಹೇಲ್‌ ದೇವ್ ಅವರು ತಮ್ಮ ಶೌರ್ಯದಿಂದ ತಾಯಿನಾಡಿನ ಮಹತ್ವವನ್ನು ಹೆಚ್ಚಿಸಿದರು ಅವರ ಜನ್ಮಸ್ಥಳವಾದ ಮತ್ತು ಸಂತರು ಧ್ಯಾನ ಮಾಡಿದ ಸ್ಥಳವಾಧ ಬಹ್ರೇಚ್ನ ಪವಿತ್ರ ಭೂಮಿಗೆ ನಾನು ಗೌರವಯುತವಾಗಿ ವಂದಿಸುತ್ತೇನೆ, ವಸಂತ್ ಪಂಚಮಿಯ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತು ಇಡೀ ದೇಶದ ಜನತೆಗೆ ಅನೇಕ ಶುಭಾಶಯಗಳು! ತಾಯಿ ಸರಸ್ವತಿ ಭಾರತದ ಜ್ಞಾನ ಮತ್ತು ವಿಜ್ಞಾನವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ! ಇಂದು ಜ್ಞಾನಕ್ಕೆ ಬಹಳ ಶುಭ ದಿನವೆಂದು ಪರಿಗಣಿಸಲಾಗಿದೆ ಎಂದು ಇಲ್ಲಿ ಹೇಳಲಾಗಿದೆ.

ಸರಸ್ವತೀ ಮಹಾಬಾಗೇ ವಿದ್ಯೆ ಕಮಲಲೋಚನೆ

ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾ ದೇಹೀ ನಮೋಸ್ತು ತೆ

ಅಂದರೆ, ಓ ’ ಧೈರ್ಯಶಾಲಿ, ತಪಸ್ವಿನಿ, ಕಮಲದಂತಹ ದೊಡ್ಡ ಕಣ್ಣುಳ್ಳ, ಜ್ಞಾನವನ್ನು ನೀಡುವ ತಾಯಿ ಸರಸ್ವತಿಯೇ, ನನಗೆ ಜ್ಞಾನವನ್ನು ನೀಡು, ನಾನು ನಿನಗೆ ವಂದಿಸುತ್ತೇನೆ.

ಮಾನವೀಯತೆಯ ಸೇವೆಗಾಗಿ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ತೊಡಗಿರುವ ಪ್ರತಿಯೊಬ್ಬ ದೇಶವಾಸಿ, ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತಾಯಿ ಸರಸ್ವತಿಯ ಆಶೀರ್ವಾದ ಪಡೆಯಲಿ ಮತ್ತು ಯಶಸ್ಸನ್ನು ಗಳಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ.

ಸಹೋದರ ಮತ್ತು ಸಹೋದರಿಯರೇ,

ಗೋಸ್ವಾಮಿ ತುಳಸಿದಾಸ್ ಜಿ ರಾಮಚ ರಿತ ಮಾನಾಸ ದಲ್ಲಿ ಹೀಗೆ ಹೇಳುತ್ತಾರೆ: ಋತು ಬಸಂತ್‌ ತ್ರಿಬಿದ ಬಯಾರಿ ಅಂದರೆ, ಮೂರು ಬಗೆಯ ಗಾಳಿ - ತಾಜಾ, ಸೌಮ್ಯ ಮತ್ತು ಸುಗಂಧ ವು ವಸಂತ ಋತುವಿನಲ್ಲಿ ಬೀಸುತ್ತದೆ ಮತ್ತು ಹೊಲಗಳಿಂದ ತೋಟಗಳವರೆಗಿನ ಪ್ರತಿಯೊಂದು ಜೀವಿಯೂ ಸಂತೋಷವಾಗಿರುತ್ತದೆ. ವಾಸ್ತವವಾಗಿ, ನಾವು ಎಲ್ಲಿ ನೋಡಿದರೂ, ಹೂವುಗಳು ಅರಳುತ್ತಿವೆ ಮತ್ತು ಪ್ರತಿಯೊಬ್ಬರೂ ವಸಂತವನ್ನು ಸ್ವಾಗತಿಸಲು ಕಾಯುತ್ತಿರುತ್ತಾರೆ. ಈ ವಸಂತಕಾಲವು ಸಾಂಕ್ರಾಮಿಕ ರೋಗದ ಹತಾಶೆಯನ್ನು ಬಿಟ್ಟು ಹೊಸ ಭರವಸೆಯನ್ನು, ಭಾರತಕ್ಕೆ ಹೊಸ ಉತ್ಸಾಹವನ್ನು ತಂದಿದೆ. ಈ ಸಂತೋಷದಲ್ಲಿ, ಭಾರತೀಯತೆ, ನಮ್ಮ ಸಂಸ್ಕೃತಿ ಮತ್ತು ನಮ್ಮ ನೀತಿಗೆ ಕಾವಲಾಗಿ ನಿಲ್ಲುವ ಮಹಾನ್ ವೀರ ಮಹಾರಾಜ ಸುಹೆಲ್‌ ದೇವ್ ಜಿ ಅವರ ಜನ್ಮದಿನವು ನಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಸ್ನೇಹಿತರೇ,

ಸುಮಾರು ಎರಡು ವರ್ಷಗಳ ಹಿಂದೆ ಗಾಜಿಪುರದ ಮಹಾರಾಜ ಸುಹೇಲ್‌ ದೇವ್ ಅವರ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿತು. ಇಂದು, ಬಹ್ರೇಚ್‌ನಲ್ಲಿರುವ ಅವರ ಭವ್ಯ ಸ್ಮಾರಕದ ಅಡಿಪಾಯವನ್ನು ಹಾಕುವ ಭಾಗ್ಯ ನನಗೆ ಇದೆ. ಈ ಆಧುನಿಕ ಮತ್ತು ಭವ್ಯವಾದ ಸ್ಮಾರಕ ಮತ್ತು ಐತಿಹಾಸಿಕ ಚಿತ್ತೌರಾ ಸರೋವರದ ಅಭಿವೃದ್ಧಿಯು ಬಹ್ರೇಚ್‌ನಲ್ಲಿ ಮಹಾರಾಜ ಸುಹೆಲ್‌ ದೇವ್ ಅವರ ಆಶೀರ್ವಾದವನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.

ಸ್ನೇಹಿತರೇ,

ಇಂದು, ಮಹಾರಾಜ ಸುಹೆಲ್‌ ದೇವ್ ಹೆಸರಿನಲ್ಲಿ ನಿರ್ಮಿಸಲಾದ ವೈದ್ಯಕೀಯ ಕಾಲೇಜಿಗೆ ಹೊಸ ಮತ್ತು ಭವ್ಯವಾದ ಕಟ್ಟಡ ಸಿಕ್ಕಿದೆ. ಅಭಿವೃದ್ಧಿಗಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಯ ಆರೋಗ್ಯ ಸೌಲಭ್ಯಗಳ ಸುಧಾರಣೆ ಇಲ್ಲಿನ ಜನರ ಜೀವನವನ್ನು ಸುಗಮಗೊಳಿಸುತ್ತದೆ. ಇದು ಹತ್ತಿರದ ಶ್ರಾವಸ್ತಿ, ಬಲರಾಂಪುರ, ಸಿದ್ಧಾರ್ಥನಗರಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ನೇಪಾಳದಿಂದ ಬರುವ ರೋಗಿಗಳಿಗೆ ಸಹ ಅನುಕೂಲವಾಗುತ್ತದೆ.

ಸಹೋದರರ ಮತ್ತು ಸಹೋದರಿಯರೇ,

ಭಾರತದ ಇತಿಹಾಸವು ಗುಲಾಮಗಿರಿಯ ಮನಸ್ಥಿತಿಯಿಂದ ದೇಶವನ್ನು ಗುಲಾಮರನ್ನಾಗಿ ಮಾಡಿದವರು ಬರೆದದ್ದಲ್ಲ. ಭಾರತದ ಇತಿಹಾಸವು ಭಾರತದ ಸಾಮಾನ್ಯ ಜನರಿಂದ ರಚಿಸಲ್ಪಟ್ಟಿದೆ ಮತ್ತು ಇದು ಭಾರತದ ಜಾನಪದ ಕಥೆಗಳಲ್ಲಿ ಪ್ರತಿಪಾದಿಸಲ್ಪಟ್ಟಿದೆ ಮತ್ತು ಇದನ್ನು ತಲೆಮಾರುಗಳಿಂದ ಮುಂದಕ್ಕೆ ಸಾಗಿಸಲಾಗಿದೆ. ಇಂದು, ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ, ಅಂತಹ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದು ಮತ್ತು ಗೌರವಯುತವಾಗಿ ನಮಸ್ಕರಿಸುವುದು ಮತ್ತು ಅವರ ಕೊಡುಗೆಗಳು, ತ್ಯಾಗಗಳು, ಹೋರಾಟಗಳು, ಶೌರ್ಯ ಮತ್ತು ಹುತಾತ್ಮತೆಗಾಗಿ ಅವರಿಂದ ಸ್ಫೂರ್ತಿ ಪಡೆಯುವುದಕ್ಕಿಂತ ದೊಡ್ಡ ಅವಕಾಶ ಇನ್ನೊಂದಿಲ್ಲ. ದುರದೃಷ್ಟವಶಾತ್, ಭಾರತ ಮತ್ತು ಭಾರತೀಯತೆಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ವೀರರಿಗೆ ಸರಿಯಾದ ಮಾನ್ಯತೆ ನೀಡಲಾಗಿಲ್ಲ. ಹೊಸ ಭಾರತವು ಇತಿಹಾಸವನ್ನು ಬರೆಯುವ ಹೆಸರಿನಲ್ಲಿ ಇತಿಹಾಸವನ್ನು ತಿರುಚಿದವರಿಂದಾದ ಅನ್ಯಾಯವನ್ನು ಸರಿಪಡಿಸುತ್ತಿದೆ, ಸರಿಯಾದ ಕೆಲಸವನ್ನು ಮಾಡುತ್ತಿದೆ ಮತ್ತು ದೇಶವನ್ನು ತಪ್ಪು ವ್ಯಾಖ್ಯಾನಗಳಿಂದ ಮುಕ್ತಗೊಳಿಸುತ್ತಿದೆ . ನೀವು ನೋಡಿ, ಆಜಾದ್ ಹಿಂದ್ ಸರ್ಕಾರದ ಮೊದಲ ಪ್ರಧಾನಿಯಾಗಿದ್ದ ನೇತಾಜಿ ಸುಭಾಸ್ ಚಂದ್ರ ಬೋಸ್ ಮತ್ತು ಆಜಾದ್ ಹಿಂದ್ ಫೌಜ್ನ ಕೊಡುಗೆಗೆ ಸರಿಯಾದ ಪ್ರಾಮುಖ್ಯತೆ ನೀಡಲಾಗಿದೆಯೇ?

ಇಂದು, ನಾವು ಈ ಗುರುತನ್ನು ಕೆಂಪು ಕೋಟೆಯಿಂದ ಅಂಡಮಾನ್ ಮತ್ತು ನಿಕೋಬಾರ್‌ಗಳಿಗೆ ದೇಶ ಮತ್ತು ಪ್ರಪಂಚದ ಮುಂದೆ ಬಲಪಡಿಸಿದ್ದೇವೆ. ದೇಶದ 500 ಕ್ಕೂ ಹೆಚ್ಚು ಸಂಸ್ಥಾನಗಳನ್ನು ಏಕೀಕರಿಸುವ ಕಠಿಣ ಕೆಲಸವನ್ನು ಮಾಡಿದ ಸರ್ದಾರ್ ಪಟೇಲ್ ಜಿ ಅವರೊಂದಿಗೆ ಏನು ಮಾಡಲಾಯಿತು? ದೇಶದ ಪ್ರತಿ ಮಗುವಿಗೆ ಇದು ಚೆನ್ನಾಗಿ ತಿಳಿದಿದೆ. ಇಂದು, ವಿಶ್ವದ ಅತಿದೊಡ್ಡ ಪ್ರತಿಮೆ – ಸ್ಟಾಚ್ಯೂ ಆಫ್‌ ಯೂನಿಟಿ ಸರ್ದಾರ್ ಪಟೇಲ್ ಅವರದು - ನಮಗೆ ಸ್ಫೂರ್ತಿ ನೀಡುತ್ತಿದೆ. ದೇಶಕ್ಕೆ ಸಂವಿಧಾನವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ದೀನದಲಿತರ, ಅನ್ಯಾಯಕ್ಕೊಳಗಾದ ಮತ್ತು ಶೋಷಿತರ ಧ್ವನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜಕೀಯ ದೃಷ್ಟಿಕೋನದಲ್ಲಿ ಮಾತ್ರ ಕಾಣಿಸಿಕೊಂಡರು. ಇಂದು, ಭಾರತದಿಂದ ಹಿಡಿದು ಇಂಗ್ಲೆಂಡಿನವರೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳನ್ನು ತೀರ್ಥಯಾತ್ರೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಸ್ನೇಹಿತರೇ,

ಭಾರತದಿಂದ ಅನೇಕ ಹೋರಾಟಗಾರರು ಇದ್ದಾರೆ, ಅವರ ಕೊಡುಗೆಗಳಿಗೆ ಸರಿಯಾದ ಗೌರವ ಮತ್ತು ಮಾನ್ಯತೆ ನೀಡಲಾಗಿಲ್ಲ. ಚೌರಿ ಚೌರಾದ ವೀರರಿಗೆ ಏನಾಯಿತು ಎನ್ನುವುದನ್ನು ನಾವು ಮರೆಯಬಹುದೇ? ಮಹಾರಾಜ ಸುಹೆಲ್‌ ದೇವ್ ಮತ್ತು ಭಾರತೀಯತೆಯನ್ನು ರಕ್ಷಿಸುವ ಅವರ ಪ್ರಯತ್ನಗಳಿಗೆ ಇದೇ ರೀತಿ ಮಾಡಲಾಯಿತು.

ಮಹಾರಾಜ ಸುಹೆಲ್ ದೇವ್ ಅವರ ಸಾಹಸ ಮತ್ತು ಅವರ ಶೌರ್ಯವನ್ನು ಇತಿಹಾಸ ಪುಸ್ತಕಗಳಲ್ಲಿ ಸರಿಯಾಗಿ ಗುರುತಿಸಲಾಗದಿರಬಹುದು, ಆದರೆ ಅವರು ಯಾವಾಗಲೂ ಜನರ ಹೃದಯದಲ್ಲಿ ಉಳಿಯುತ್ತಾರೆ ಹಾಗೂ ಅವಧ್ ಮತ್ತು ತೆರೈನಿಂದ ಪೂರ್ವಾಂಚಲ್ ವರೆಗಿನ ಜಾನಪದ ಕಥೆಗಳಲ್ಲಿ ಉಳಿದಿರುತ್ತಾರೆ. ಕೇವಲ ಅವರ ವೀರತ್ವವಲ್ಲ, ಸೂಕ್ಷ್ಮ ಮತ್ತು ಅಭಿವೃದ್ಧಿ ಆಧಾರಿತ ಆಡಳಿತಗಾರನಾಗಿ ಮಾಡಿರುವ ಅವರ ಗುರುತನ್ನು ಅಳಿಸಲಾಗದು. ಅವರ ಆಳ್ವಿಕೆಯಲ್ಲಿ, ಅವರು ಕೆಲಸ ಮಾಡಿದ ರೀತಿ, ಉತ್ತಮ ರಸ್ತೆಗಳು, ಕೊಳಗಳು ಮತ್ತು ತೋಟಗಳಿಗಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವವಾಗಿತ್ತು. ಅವರ ಈ ಯೋಜನೆಯು ಈ ಸ್ಮಾರಕದಲ್ಲಿಯೂ ಗೋಚರಿಸುತ್ತದೆ.

ಸ್ನೇಹಿತರೇ,

ಮಹಾರಾಜ ಸುಹೇಲ್ ದೇವ್ ಜಿ ಅವರ ಜೀವನದಿಂದ ಪ್ರವಾಸಿಗರು ಸ್ಫೂರ್ತಿ ಪಡೆಯಲು 40 ಅಡಿಗಳಷ್ಟು ಉದ್ದದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಮುಂಬರುವ ವಸ್ತುಸಂಗ್ರಹಾಲಯದಲ್ಲಿ ಮಹಾರಾಜ ಸುಹೆಲ್‌ ದೇವ್‌ಗೆ ಸಂಬಂಧಿಸಿದ ಎಲ್ಲಾ ಐತಿಹಾಸಿಕ ಮಾಹಿತಿಗಳು ಇರಲಿವೆ. ಅದರ ಒಳಗಿರುವ ಮತ್ತು ಸುತ್ತಮುತ್ತಲಿನ ರಸ್ತೆಗಳನ್ನು ಅಗಲಗೊಳಿಸಲಾಗುತ್ತದೆ. ಮಕ್ಕಳಿಗಾಗಿ ಉದ್ಯಾನ, ಸಭಾಂಗಣ, ಪ್ರವಾಸಿ ಮನೆಗಳು, ಪಾರ್ಕಿಂಗ್, ಕೆಫೆಟೇರಿಯಾ ಮುಂತಾದ ಅನೇಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಅದೇ ಸಮಯದಲ್ಲಿ, ಸ್ಥಳೀಯ ಕುಶಲಕರ್ಮಿಗಳು ಮತ್ತು ಕಲಾವಿದರು ತಮ್ಮ ಸರಕನ್ನು ಇಲ್ಲಿ ಸುಲಭವಾಗಿ ಮಾರಾಟ ಮಾಡಲು ಸಾಧ್ಯವಾಗುವಂತೆ ಅಂಗಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅಂತೆಯೇ, ಈ ಐತಿಹಾಸಿಕ ಚಿತ್ತೌರಾ ಸರೋವರದ ಮಹತ್ವವು ಘಟ್ಟಗಳು ಮತ್ತು ಮೆಟ್ಟಿಲುಗಳ ನಿರ್ಮಾಣ ಮತ್ತು ಸುಂದರೀಕರಣದೊಂದಿಗೆ ಮತ್ತಷ್ಟು ಹೆಚ್ಚಿಸುತ್ತದೆ. ಈ ಎಲ್ಲಾ ಪ್ರಯತ್ನಗಳು ಬಹ್ರೇಚ್‌ನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ‘ಮರಿ ಮಯ್ಯ’ದೇವಿಯ ಕೃಪೆಯಿಂದ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

ಸಹೋದರರು ಮತ್ತು ಸಹೋದರಿಯರೇ,

ಕಳೆದ ಕೆಲವು ವರ್ಷಗಳಲ್ಲಿ ಇತಿಹಾಸ, ನಂಬಿಕೆ, ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳನ್ನು ನಿರ್ಮಿಸುವ ಪ್ರಮುಖ ಗುರಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು. ಉತ್ತರ ಪ್ರದೇಶವು ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆ ಎರಡರಲ್ಲೂ ಸಮೃದ್ಧವಾಗಿದೆ ಮತ್ತು ರಾಜ್ಯದ ಸಾಮರ್ಥ್ಯಗಳು ಅಪಾರ. ಭಗವಾನ್ ರಾಮನ ಜನ್ಮಸ್ಥಳವಾಗಲಿ ಅಥವಾ ಕೃಷ್ಣನ ಬೃಂದಾವನಾಗಲಿ, ಭಗವಾನ್ ಬುದ್ಧನ ಸಾರನಾಥ ಅಥವಾ ಕಾಶಿ ವಿಶ್ವನಾಥ, ಸಂತ ಕಬೀರ್ ಅವರ ಮಾಘರ್ ಧಾಮ್ ಅಥವಾ ವಾರಣಾಸಿಯಲ್ಲಿ ಸಂತ ರವಿದಾಸ್ ಅವರ ಜನ್ಮಸ್ಥಳವಾಗಲಿ ಇಡೀ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆಯುತ್ತಿದೆ. ಅವುಗಳನ್ನು ಉತ್ತೇಜಿಸುವ ಸಲುವಾಗಿ, ಅಯೋಧ್ಯೆ, ಚಿತ್ರಕೂಟ್, ಮಥುರಾ, ಬೃಂದಾವನ, ಗೋವರ್ಧನ, ಕುಶಿನಗರ, ಶ್ರಾವಸ್ತಿ ಮುಂತಾದ ಯಾತ್ರಾ ಸ್ಥಳಗಳಲ್ಲಿ ರಾಮಾಯಣ ಸರ್ಕ್ಯೂಟ್‌ಗಳು, ಆಧ್ಯಾತ್ಮಿಕ ಸರ್ಕ್ಯೂಟ್‌ಗಳು ಮತ್ತು ಬೌದ್ಧ ಸರ್ಕ್ಯೂಟ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಹೋದರರು ಮತ್ತು ಸಹೋದರಿಯರೇ,

ಕಳೆದ ಕೆಲವು ವರ್ಷಗಳಲ್ಲಿ ಮಾಡಿದ ಪ್ರಯತ್ನಗಳ ಪರಿಣಾಮವು ಈಗ ಕಾಣತೊಡಗುತ್ತಿದೆ. ಉತ್ತರಪ್ರದೇಶವು ಇತರ ರಾಜ್ಯಗಳಿಂದ ಗರಿಷ್ಠ ದೇಶೀಯ ಪ್ರವಾಸಿಗರನ್ನು ಸೆಳೆಯುವ ಒಂದು ರಾಜ್ಯವಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯುಪಿ ದೇಶದ ಮೊದಲ ಮೂರು ರಾಜ್ಯಗಳಲ್ಲಿ ಒಂದಾಗಿದೆ. ಪ್ರವಾಸಿಗರಿಗೆ ಅಗತ್ಯವಾದ ಸೌಲಭ್ಯಗಳು ಮತ್ತು ಆಧುನಿಕ ಸಂಪರ್ಕಕ್ಕಾಗಿ ಸಾಧನಗಳನ್ನು ಸಹ ಉತ್ತರಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಯೋಧ್ಯೆ ಮತ್ತು ಕುಶಿನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭವಿಷ್ಯದಲ್ಲಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ತುಂಬಾ ಸೂಕ್ತವಾಗಿದೆ. ಉತ್ತರ ಪ್ರದೇಶದ ಡಜನ್ಗಟ್ಟಲೆ ಸಣ್ಣ-ಪ್ರಮಾಣದ ವಿಮಾನ ನಿಲ್ದಾಣಗಳಲ್ಲಿ ಕಾಮಗಾರಿ ನಡೆಯುತ್ತಿದೆ ಮತ್ತು ಅವುಗಳಲ್ಲಿ ಹಲವು ಪೂರ್ವಾಂಚಲ್‌ನಲ್ಲಿವೆ. ಉಡಾನ್ ಯೋಜನೆಯಡಿ, ಯುಪಿ ಯ ಹಲವಾರು ನಗರಗಳನ್ನು ಕಡಿಮೆ ವೆಚ್ಚದ ವಾಯು ಸೇವೆಗಳೊಂದಿಗೆ ಸಂಪರ್ಕಿಸಲು ಚಾಲನೆ ನಡೆಯುತ್ತಿದೆ.

ಅಲ್ಲದೆ, ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ, ಗಂಗಾ ಎಕ್ಸ್‌ಪ್ರೆಸ್ ವೇ, ಗೋರಖ್‌ಪುರ್ ಲಿಂಕ್ ಎಕ್ಸ್‌ಪ್ರೆಸ್ ವೇ, ಬಲಿಯಾ ಲಿಂಕ್ ಎಕ್ಸ್‌ಪ್ರೆಸ್ ವೇ ಮುಂತಾದ ಅನೇಕ ಆಧುನಿಕ ಮತ್ತು ಅಗಲ ರಸ್ತೆಗಳನ್ನು ಯುಪಿ ರಾಜ್ಯದ ಉದ್ದಕ್ಕೂ ನಿರ್ಮಿಸಲಾಗುತ್ತಿದೆ. ಮತ್ತು ಇದು ಆಧುನಿಕ ಯುಪಿಯ ಆಧುನಿಕ ಮೂಲಸೌಕರ್ಯದ ಪ್ರಾರಂಭವಾಗಿದೆ. ವಾಯು ಮತ್ತು ರಸ್ತೆ ಸಂಪರ್ಕದ ಹೊರತಾಗಿ ಯುಪಿಯ ರೈಲು ಸಂಪರ್ಕವನ್ನೂ ಆಧುನೀಕರಿಸಲಾಗುತ್ತಿದೆ. ಯುಪಿ ಎರಡು ದೊಡ್ಡ ಮೀಸಲಾದ ಸರಕು ಕಾರಿಡಾರ್‌ಗಳ ಜಂಕ್ಷನ್ ಆಗಿದೆ. ಇತ್ತೀಚೆಗೆ, ಡೆಡಿಕೇಟೆಡ್ ಈಸ್ಟರ್ನ್ ಫ್ರೈಟ್ ಕಾರಿಡಾರ್‌ನ ಹೆಚ್ಚಿನ ಭಾಗವನ್ನು ಯುಪಿಯಲ್ಲಿ ಪ್ರಾರಂಭಿಸಲಾಯಿತು. ಆಧುನಿಕ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕೆಲಸಗಳಿಂದಾಗಿ ದೇಶ ಮತ್ತು ವಿದೇಶದ ಹೂಡಿಕೆದಾರರು ಉತ್ತರ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಇದು ಇಲ್ಲಿ ಹೊಸ ಕೈಗಾರಿಕೆಗಳಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ.

ಸ್ನೇಹಿತರೇ,

ಕೊರೊನಾ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ರೀತಿ ಬಹಳ ಮುಖ್ಯ. ಕಲ್ಪಿಸಿಕೊಳ್ಳಿ, ಯುಪಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದರೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತಿತ್ತು. ಆದರೆ ಯೋಗಿ ಜಿ ಅವರ ಸರ್ಕಾರ ಮತ್ತು ಅವರ ಇಡೀ ತಂಡವು ಪರಿಸ್ಥಿತಿಯನ್ನು ಅತ್ಯಂತ ಗಮನಾರ್ಹ ರೀತಿಯಲ್ಲಿ ನಿರ್ವಹಿಸಿದೆ. ಯುಪಿ ಗರಿಷ್ಠ ಜೀವಗಳನ್ನು ಉಳಿಸಿಕೊಂಡಿದ್ದಲ್ಲದೇ, ಹೊರಗಿನಿಂದ ಹಿಂದಿರುಗಿದ ಕಾರ್ಮಿಕರಿಗೆ ಉದ್ಯೋಗವನ್ನು ನೀಡುವಲ್ಲಿ ಶ್ಲಾಘನೀಯ ಕೆಲಸವನ್ನು ಮಾಡಿದೆ.

ಸಹೋದರರು ಮತ್ತು ಸಹೋದರಿಯರೇ,

ಕಳೆದ 3-4 ವರ್ಷಗಳಲ್ಲಿ ಮಾಡಿದ ಕೆಲಸವು ಯುಪಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಅಪಾರ ಕೊಡುಗೆ ನೀಡಿದೆ. ದಶಕಗಳಿಂದ ಪೂರ್ವಾಂಚಲ್ ಅವರನ್ನು ತೊಂದರೆಗೊಳಗಾದ ಮೆನಿಂಜೈಟಿಸ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಯುಪಿ ರಾಜ್ಯವು ಯಶಸ್ವಿಯಾಗಿದೆ. 2014 ರವರೆಗೆ ಯುಪಿಯಲ್ಲಿ 14 ವೈದ್ಯಕೀಯ ಕಾಲೇಜುಗಳು ಇದ್ದವು, ಅದು ಇಂದು 24 ಕ್ಕೆ ಏರಿದೆ. ಗೋರಖ್‌ಪುರ ಮತ್ತು ಬರೇಲಿಯಲ್ಲಿಯೂ ಏಮ್ಸ್ ಕೆಲಸ ನಡೆಯುತ್ತಿದೆ. ಅಲ್ಲದೆ, 22 ಹೊಸ ವೈದ್ಯಕೀಯ ಕಾಲೇಜುಗಳನ್ನು ಸಹ ನಿರ್ಮಿಸಲಾಗುತ್ತಿದೆ. ವಾರಣಾಸಿಯಲ್ಲಿ ಆಧುನಿಕ ಕ್ಯಾನ್ಸರ್ ಆಸ್ಪತ್ರೆಯ ಸೌಲಭ್ಯವೂ ಈಗ ಪೂರ್ವಾಂಚಲಕ್ಕೆ ಲಭ್ಯವಾಗುತ್ತಿದೆ. ಪ್ರತಿ ಮನೆಗೂ ನೀರು ಒದಗಿಸುವ ಜಲ್ ಜೀವನ್ ಮಿಷನ್‌ನಲ್ಲಿ ಯುಪಿ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಿದೆ. ಶುದ್ಧ ಕುಡಿಯುವ ನೀರು ಮನೆಗೆ ತಲುಪಿದಾಗ, ಅದು ಸಾಮಾನ್ಯವಾಗಿ ಅನೇಕ ರೋಗಗಳನ್ನು ಕಡಿಮೆ ಮಾಡುತ್ತದೆ.

ಸಹೋದರರು ಮತ್ತು ಸಹೋದರಿಯರೇ,

ಉತ್ತಮ ವಿದ್ಯುತ್, ನೀರು, ರಸ್ತೆ ಮತ್ತು ಆರೋಗ್ಯ ಸೌಲಭ್ಯಗಳು ನೇರವಾಗಿ ಗ್ರಾಮ, ಬಡವರಿಗೆ ಮತ್ತು ಉತ್ತರ ಪ್ರದೇಶದ ರೈತರಿಗೆ ಅನುಕೂಲವಾಗುತ್ತಿವೆ. ವಿಶೇಷವಾಗಿ ಕಡಿಮೆ ಜಮೀನುಗಳನ್ನು ಹೊಂದಿರುವ ಸಣ್ಣ ರೈತರು ಈ ಯೋಜನೆಗಳ ಪ್ರಮುಖ ಫಲಾನುಭವಿಗಳು. ಉತ್ತರ ಪ್ರದೇಶದಲ್ಲಿ, ಪಿಎಂ ಕಿಸಾನ್ ಸಮ್ಮಾನ್ ಫಂಡ್ ಮೂಲಕ ನೇರವಾಗಿ ಸುಮಾರು 2.5 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಜಮಾ ಮಾಡಲಾಗಿದೆ. ವಿದ್ಯುತ್ ಬಿಲ್ ಪಾವತಿಸಲು ಅಥವಾ ರಸಗೊಬ್ಬರವನ್ನು ಖರೀದಿಸಲು ಇತರರಿಂದ ಎರವಲು ಪಡೆಯಬೇಕಾದ ರೈತ ಕುಟುಂಬಗಳು ಇವು. ಆದರೆ ನಮ್ಮ ಸರ್ಕಾರವು ಅಂತಹ ಸಣ್ಣ ರೈತರ ಬ್ಯಾಂಕ್ ಖಾತೆಗಳಲ್ಲಿ 27,000 ಕೋಟಿಗಿಂತ ಹೆಚ್ಚು ಹಣವನ್ನು ಜಮಾ ಮಾಡಿತು. ವಿದ್ಯುತ್ ಸರಬರಾಜಿನಲ್ಲಿನ ಸುಧಾರಣೆಯೊಂದಿಗೆ, ವಿದ್ಯುತ್ ಕೊರತೆಯಿಂದಾಗಿ ರೈತರ ಎದುರಿಸುತ್ತಿದ್ದ ಹಲವಾರು ಸಮಸ್ಯೆಗಳು ಅಥವಾ ಕೊಳವೆಬಾವಿ ನೀರಿಗಾಗಿ ರಾತ್ರಿಯಿಡೀ ಎಚ್ಚರವಾಗಿರುವಂತಹ ಸಮಸ್ಯೆಗಳನ್ನು ಬಗೆಹರಿಸಲಾಯಿತು.

ಸ್ನೇಹಿತರೇ,

ದೇಶದ ಜನಸಂಖ್ಯೆಯ ಹೆಚ್ಚಳದಿಂದಾಗಿ, ಸಾಗುವಳಿ ಮಾಡಿದ ಭೂಮಿ ಚಿಕ್ಕದಾಗುತ್ತಿದೆ. ಆದ್ದರಿಂದ, ದೇಶದಲ್ಲಿ ರೈತ ಉತ್ಪಾದಕರ ಸಂಘಟನೆಗಳು (ಎಫ್‌ಪಿಒ) ಇರುವುದು ಬಹಳ ಮುಖ್ಯ. ಇಂದು, ಸರ್ಕಾರವು ಸಣ್ಣ ರೈತರ ಸಾವಿರಾರು ಎಫ್‌ಪಿಒಗಳನ್ನು ರಚಿಸುತ್ತಿದೆ. 1-2 ಬಿಘಾ ಭೂಮಿಯನ್ನು ಹೊಂದಿರುವ 500 ರೈತ ಕುಟುಂಬಗಳು ಸಂಘಟಿತವಾದಾಗ, ಮಾರುಕಟ್ಟೆಯಲ್ಲಿ 500-1000 ಬಿಘಾ ಭೂಮಿಯನ್ನು ಹೊಂದಿರುವ ರೈತರಿಗಿಂತ ಅವರು ಬಲಶಾಲಿಯಾಗುತ್ತಾರೆ. ಅಂತೆಯೇ, ತರಕಾರಿಗಳು, ಹಣ್ಣುಗಳು, ಹಾಲು, ಮೀನು ಮತ್ತು ಅಂತಹ ಅನೇಕ ಉದ್ಯೋಗಗಳಲ್ಲಿ ತೊಡಗಿರುವ ಸಣ್ಣ ರೈತರು ಈಗ ಕಿಸಾನ್ ರೈಲು ಮೂಲಕ ದೊಡ್ಡ ಮಾರುಕಟ್ಟೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೊಸ ಕೃಷಿ ಸುಧಾರಣೆಗಳು ಸಣ್ಣ ಮತ್ತು ಅತಿಸಣ್ಣ ರೈತರಿಗೂ ಅನುಕೂಲವಾಗಲಿವೆ. ಉತ್ತರಪ್ರದೇಶದಲ್ಲಿ ಈ ಹೊಸ ಕಾನೂನುಗಳು ಜಾರಿಗೆ ಬಂದ ನಂತರ, ವಿವಿಧ ಸ್ಥಳಗಳಿಂದ ಬಂದ ರೈತರಿಗೆ ಅನುಕೂಲವಾಗಿದೆ. ಈ ಕೃಷಿ ಕಾನೂನುಗಳ ಬಗ್ಗೆ ತಪ್ಪು ಮಾಹಿತಿ ಹರಡಲು ಪ್ರಯತ್ನಿಸಲಾಯಿತು. ದೇಶದ ಕೃಷಿ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳನ್ನು ಆಹ್ವಾನಿಸಲು ಕಾನೂನು ಜಾರಿಗೆ ತಂದವರು ಇಂದು ಸ್ವದೇಶಿ ಕಂಪನಿಗಳ ಹೆಸರಿನಲ್ಲಿ ರೈತರನ್ನು ಬೆದರಿಸುತ್ತಿದ್ದಾರೆ ಎಂದು ಇಡೀ ದೇಶ ಗಮನಿಸಿದೆ.

ಸ್ನೇಹಿತರೇ,

ರಾಜಕೀಯಕ್ಕಾಗಿ ಸುಳ್ಳು ಮತ್ತು ಅಪ್ರಚಾರವನ್ನು ಈಗ ಬಹಿರಂಗಪಡಿಸಲಾಗುತ್ತಿದೆ. ಹೊಸ ಕಾನೂನುಗಳನ್ನು ಜಾರಿಗೊಳಿಸಿದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಯುಪಿ ಯಲ್ಲಿ ಎರಡು ಪಟ್ಟು ರೈತರ ಭತ್ತವನ್ನು ಸಂಗ್ರಹಿಸಲಾಗಿದೆ.

ಈ ವರ್ಷ ಯುಪಿಯಲ್ಲಿ ಸುಮಾರು 65 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗಿದೆ, ಇದು ಕಳೆದ ವರ್ಷಕ್ಕಿಂತ ದ್ವಿಗುಣವಾಗಿದೆ. ಅಷ್ಟೇ ಅಲ್ಲ, ಯೋಗಿ ಜಿ ಸರ್ಕಾರವು ಕಬ್ಬು ಬೆಳೆಗಾರರಿಗೆಕಳೆದ ವರ್ಷಗಳಲ್ಲಿ 1 ಲಕ್ಷ ಕೋಟಿ ರೂ.ಗಳನ್ನು ನೀಡಿದೆ. ಕೊರೊನಾ ಅವಧಿಯಲ್ಲಿಯೂ ಸಹ, ಕಬ್ಬಿನ ರೈತರಿಗೆ ತೊಂದರೆಯಾಗದಂತೆ ಎಲ್ಲಾ ಸಹಾಯವನ್ನು ನೀಡಲಾಯಿತು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಮಾಡಲು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ನೀಡಿದೆ. ಕಬ್ಬು ರೈತರಿಗೆ ಸಕಾಲದಲ್ಲಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಯೋಗಿ ಜಿ ಸರ್ಕಾರ ಬದ್ಧವಾಗಿದೆ.

ಸಹೋದರರು ಮತ್ತು ಸಹೋದರಿಯರೇ,

ಗ್ರಾಮಸ್ಥರು ಮತ್ತು ರೈತರ ಜೀವನವನ್ನು ಸುಧಾರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಹಳ್ಳಿಗಳಲ್ಲಿನ ರೈತರು ಮತ್ತು ಬಡ ಕುಟುಂಬಗಳು ತಮ್ಮ ಮನೆಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಬಗ್ಗೆ ಯಾವುದೇ ಆತಂಕವನ್ನು ಹೊಂದಿರದಂತೆ ಸ್ವಾಮಿತ್ವಾ ಯೋಜನೆ ಉತ್ತರಪ್ರದೇಶದಾದ್ಯಂತ ನಡೆಯುತ್ತಿದೆ. ಯೋಜನೆಯಡಿ ಯುಪಿಯ ಸುಮಾರು 50 ಜಿಲ್ಲೆಗಳಲ್ಲಿ ಡ್ರೋನ್‌ಗಳ ಮೂಲಕ ಸಮೀಕ್ಷೆಗಳು ನಡೆಯುತ್ತಿವೆ. ಸುಮಾರು 12,000 ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ ಪೂರ್ಣಗೊಂಡಿದೆ ಮತ್ತು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಸ್ತಿ ಕಾರ್ಡ್ ಅಂದರೆ ಘರೌನಿಯನ್ನು ಪಡೆದಿದ್ದಾರೆ,. ಅಂದರೆ ಈ ಕುಟುಂಬಗಳು ಈಗ ಎಲ್ಲಾ ರೀತಿಯ ಆತಂಕಗಳಿಂದ ಮುಕ್ತವಾಗಿವೆ.

ಸ್ನೇಹಿತರೇ,

ಇಂದು, ಗ್ರಾಮದ ಬಡ ರೈತ ತನ್ನ ಸಣ್ಣ ಮನೆ ಮತ್ತು ಭೂಮಿಯನ್ನು ರಕ್ಷಿಸಲು ಸರ್ಕಾರ ಇಷ್ಟು ದೊಡ್ಡ ಯೋಜನೆಯನ್ನು ನಡೆಸುತ್ತಿರುವುದನ್ನು ಗಮನಿಸುತ್ತಿದೆ. ಪ್ರತಿಯೊಬ್ಬ ಬಡವರು, ರೈತರು ಮತ್ತು ಗ್ರಾಮಸ್ಥರಿಗೆ ಇಂತಹ ದೊಡ್ಡ ರಕ್ಷಣೆಯನ್ನು ಒದಗಿಸಲಾಗುತ್ತಿದೆ. ಆದ್ದರಿಂದ, ಕೃಷಿ ಸುಧಾರಣೆಗಳ ಮೂಲಕ ರೈತರ ಭೂಮಿಯನ್ನು ಕಸಿದುಕೊಳ್ಳುವ ವದಂತಿಗಳನ್ನು ಹರಡುವವರನ್ನು ಯಾರಾದರೂ ಹೇಗೆ ನಂಬಬಹುದು? ದೇಶದ ಪ್ರತಿಯೊಬ್ಬ ಪ್ರಜೆಯನ್ನು ಸಕ್ರಿಯಗೊಳಿಸುವುದು ನಮ್ಮ ಗುರಿ. ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಸಂಕಲ್ಪ. ಈ ನಿರ್ಣಯದ ಸಾಧನೆಗಾಗಿ ನಾವು ಸಮರ್ಪಿತ ಮನೋಭಾವದಲ್ಲಿ ತೊಡಗುತ್ತೇವೆ. ನಾನು ರಾಮ ಚರಿತದ ಸಾಲುಗಳೊಂದಿಗೆ ಮುಕ್ತಾಯಗೊಳಿಸುತ್ತೇನೆ:

ಪ್ರಬೀಸಿ ನಗರ್‌ ಕೀಜೆ ಸಬ್‌ ಕಾಜಾ

ಹೃದಯ್‌ ರಾಖಿ ಕೋಸಲ್‌ ಪುರ್‌ ರಾಜಾ

ಭಗವಾನ್ ರಾಮರ ಹೆಸರನ್ನು ಹೃದಯದಲ್ಲಿ ನೆನಯುವುದರ ಮೂಲಕ, ನಾವು ಏನೇ ಮಾಡಿದರೂ ಅದರಲ್ಲಿ ನಮಗೆ ಖಚಿತವಾದ ಯಶಸ್ಸು ಸಿಗುತ್ತದೆ ಎಂದರ್ಥ.

ಮತ್ತೊಮ್ಮೆ ಮಹಾರಾಜ ಸುಹೆಲ್ ದೇವ್ ಜಿ ಅವರಿಗೆ ನಮಿಸಿ, ಈ ಹೊಸ ವೈಶಿಷ್ಟ್ಯಗಳಿಗಾಗಿ ನಿಮ್ಮೆಲ್ಲರಿಗೂ, ಯೋಗಿ ಜಿ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's core sector output in June grows 8.9% year-on-year: Govt

Media Coverage

India's core sector output in June grows 8.9% year-on-year: Govt
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜುಲೈ 2021
July 31, 2021
ಶೇರ್
 
Comments

PM Modi inspires IPS probationers at Sardar Vallabhbhai Patel National Police Academy today

Citizens praise Modi Govt’s resolve to deliver Maximum Governance