ತಮ್ಮ 75ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ತಿಳಿಸಿದ್ದಾರೆ. "140 ಕೋಟಿ ಸಹ ನಾಗರಿಕರ ಪ್ರೀತಿ ಮತ್ತು ಸಹಕಾರದೊಂದಿಗೆ, ನಾವು ಯಾವಾಗಲೂ ಬಲಿಷ್ಠ, ಸಮರ್ಥ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಮರ್ಪಿತರಾಗಿರುತ್ತೇವೆ. ಈ ದಿಕ್ಕಿನಲ್ಲಿ, ನಿಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳು ನಮಗೆ ಬಹಳ ಸ್ಪೂರ್ತಿದಾಯಕವಾಗಿವೆ" ಎಂದು ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ,
"ಗೌರವಾನ್ವಿತ ರಾಷ್ಟ್ರಪತಿಗಳೇ, ನಿಮ್ಮ ಶುಭಾಶಯಗಳಿಗೆ ತುಂಬು ಧನ್ಯವಾದಗಳು ಮತ್ತು ಕೃತಜ್ಞತೆಗಳು. ಈ ದೇಶದ 140 ಕೋಟಿ ದೇಶವಾಸಿಗಳ ಪ್ರೀತಿ ಮತ್ತು ಬೆಂಬಲದೊಂದಿಗೆ, ನಾವು ಯಾವಾಗಲೂ ಬಲಿಷ್ಠ, ಸಮರ್ಥ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಮರ್ಪಿತರಾಗಿರುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳು ನಮಗೆ ತುಂಬಾ ಸ್ಪೂರ್ತಿದಾಯಕವಾಗಿವೆ." ಎಂದು ಬರೆದುಕೊಂಡಿದ್ದಾರೆ.
आपकी शुभकामनाओं के लिए बहुत-बहुत धन्यवाद और आभार माननीय @rashtrapatibhvn जी। 140 करोड़ देशवासियों के स्नेह और सहयोग से हम सशक्त, समर्थ और स्वावलंबी भारतवर्ष के निर्माण के लिए सदैव समर्पित रहेंगे। इस दिशा में आपके विजन और विचार हमारे लिए बहुत प्रेरणादायी हैं। https://t.co/xggt5teUg0
— Narendra Modi (@narendramodi) September 17, 2025


