ಶೇರ್
 
Comments
ಹೂಡಿಕೆದಾರರು ಮತ್ತು ಠೇವಣಿದಾರರಿಬ್ಬರಿಗೂ ಪಾರದರ್ಶಕತೆ ಮತ್ತು ವಿಶ್ವಾಸದ ಖಾತ್ರಿ ಪಡಿಸುವುದು ನಮ್ಮ ಉನ್ನತ ಆದ್ಯತೆಯಾಗಿದೆ
ದೇಶವನ್ನು ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ
ಹಣ ಪೂರಣದ ತರುವಾಯ, ದೇಶ ತ್ವರಿತವಾಗಿ ಆರ್ಥಿಕ ಸಬಲೀಕರಣದತ್ತ ಸಾಗುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಣಕಾಸು ಸೇವೆಗಳಿಗೆ ಸಂಬಂಧಿಸಿದಂತಹ ಬಜೆಟ್ ಒದಗಣೆಗಳ ಸಮರ್ಥ ಅನುಷ್ಠಾನ ಕುರಿತ ವೆಬಿನಾರ್ ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು.

ಈ ಕಾರ್ಯಕ್ರಮ ಉದ್ದೇಶಿಸಿ, ಪ್ರಧಾನಮಂತ್ರಿಯವರು, ಕೇಂದ್ರ ಬಜೆಟ್ ನಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೇಗೆ ವಿಸ್ತರಿಸಬೇಕು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಸ್ಪಷ್ಟ ಮಾರ್ಗ ನಕ್ಷೆಯನ್ನು ಹಾಕಿರುವುದಾಗಿ ತಿಳಿಸಿದರು. ದೇಶದ ಆರ್ಥಿಕ ವಲಯದ ಬಗ್ಗೆ ಸರ್ಕಾರದ ದೃಷ್ಟಿಕೋನ ಸ್ಪಷ್ಟವಾಗಿದೆ ಎಂದೂ ಅವರು ತಿಳಿಸಿದರು. ನಮ್ಮ ಉನ್ನತ ಆದ್ಯತೆ ಹೂಡಿಕೆದಾರರು ಮತ್ತು ಠೇವಣಿದಾರರು ಇಬ್ಬರಿಗೂ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಖಾತ್ರಿಪಡಿಸುವುದಾಗಿದೆ ಎಂದರು. ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ವಲಯದ ಹಳೆಯ ಮಾರ್ಗಗಳು ಮತ್ತು ಹಳೆಯ ವ್ಯವಸ್ಥೆಗಳು ಬದಲಾಗಿವೆ ಎಂದರು.

10-12 ವರ್ಷಗಳ ಹಿಂದೆ ಆಕ್ರಮಣಕಾರಿ ಸಾಲ ನೀಡಿಕೆಯಿಂದ ದೇಶದ ಬ್ಯಾಂಕಿಂಗ್ ವಲಯ ಮತ್ತು ಹಣಕಾಸು ವಲಯ ತೀವ್ರವಾಗಿ ಪೆಟ್ಟು ತಿಂದಿದೆ. ದೇಶವನ್ನು ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ಮುಕ್ತಗೊಳಿಸಲು ಒಂದರ ನಂತರ ಒಂದರಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಎನ್.ಪಿ.ಎ.ಯನ್ನು ನೆಲಹಾಸಿನ ಕೆಳಗಿ ಮುಚ್ಚುವ ಬದಲಾಗಿ, ಒಂದೇ ಒಂದು ದಿನದ ಎನ್.ಪಿ.ಎ. ಆಗಿದ್ದರೂ ಅದನ್ನು ವರದಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಸರ್ಕಾರವು ವ್ಯವಹಾರದ ಅನಿಶ್ಚಿತತೆಗಳನ್ನು ಅರ್ಥಮಾಡಿಕೊಂಡಿದೆ ಮತ್ತು ಪ್ರತಿ ವ್ಯಾವಹಾರಿಕ ನಿರ್ಧಾರಕ್ಕೂ ಕೆಟ್ಟ ಉದ್ದೇಶದಿಂದ ಗುರುತಿಸಲಾಗುವುದಿಲ್ಲ ಎಂದು ಪ್ರಧಾನಮಂತ್ರಿ ಸಭಿಕರಿಗೆ ಭರವಸೆ ನೀಡಿದರು. ಅಂತಹ ಸನ್ನಿವೇಶದಲ್ಲಿ, ಸ್ಪಷ್ಟ ಮನಃಸಾಕ್ಷಿಯೊಂದಿಗೆ ತೆಗೆದುಕೊಳ್ಳುವ ವ್ಯವಹಾರಿಕ ನಿರ್ಧಾರಗಳೊಂದಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿಯಾಗಿದೆ, ನಾವು ಇದನ್ನು ಮಾಡುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ದಿವಾಳಿ ಮತ್ತು ದಿವಾಳಿತನ ಸಂಹಿತೆಯಂತಹ ಕಾರ್ಯವಿಧಾನಗಳು ಸಾಲದಾತರು ಮತ್ತು ಸಾಲಗಾರರಿಗೆ ಭರವಸೆ ನೀಡುತ್ತಿವೆ ಎಂದು ಅವರು ಹೇಳಿದರು.

ಸಾಮಾನ್ಯ ನಾಗರಿಕರ ಆದಾಯ ಸಂರಕ್ಷಣೆ, ಬಡವರಿಗೆ ಸರ್ಕಾರದ ಸವಲತ್ತುಗಳನ್ನು ಪರಿಣಾಮಕಾರಿ ಮತ್ತು ಸೋರಿಕೆ ಮುಕ್ತವಾಗಿ ತಲುಪಿಸುವುದು, ದೇಶದ ಅಭಿವೃದ್ಧಿಗೆ ಮೂಲಸೌಕರ್ಯ ಸಂಬಂಧಿತ ಹೂಡಿಕೆಯ ಉತ್ತೇಜನವೇ ಮೊದಲಾದ ಸರ್ಕಾರದ ಆದ್ಯತೆಗಳನ್ನು ಪ್ರಧಾನಂತ್ರಿಯವರು ಪಟ್ಟಿ ಮಾಡಿದರು. ಕಳೆದ ಕೆಲವು ವರ್ಷಗಳಲ್ಲಿ ಪರಿಚಯಿಸಲಾದ ಎಲ್ಲಾ ಹಣಕಾಸು ಸುಧಾರಣೆಗಳು ಈ ಆದ್ಯತೆಗಳನ್ನು ಪ್ರತಿಬಿಂಬಿಸುತ್ತವೆ ಎಂದರು. ಕೇಂದ್ರ ಬಜೆಟ್ ಈ ದೃಷ್ಟಿಕೋನವನ್ನು ಮುಂದುವರಿಸಿದ್ದು, ಭಾರತದ ಆರ್ಥಿಕವಲಯವನ್ನು ಬಲಪಡಿಸಲಿದೆ. ಇತ್ತೀಚೆಗೆ ಪ್ರಕಟಿಸಲಾದ ಹೊಸ ಸಾರ್ವಜನಿಕ ವಲಯದ ನೀತಿಗಳು ಹಣಕಾಸು ವಲಯವನ್ನೂ ಒಳಗೊಂಡಿವೆ ಎಂದು ಅವರು ತಿಳಿಸಿದರು. ನಮ್ಮ ಆರ್ಥಿಕತೆಯಲ್ಲಿ ಬ್ಯಾಂಕಿಂಗ್ ಮತ್ತು ವಿಮೆಗೆ ಸಾಕಷ್ಟು ಸಾಮರ್ಥ್ಯವಿದೆ. ಈ ಸಾಧ್ಯತೆಗಳ ದೃಷ್ಟಿಯಿಂದ, ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ವಿಮೆಯಲ್ಲಿ ಶೇ.74 ಎಫ್‌.ಡಿ.ಐ.ಗೆ ಅನುಮತಿ ನೀಡುವುದು, ಎಲ್‌.ಐ.ಸಿ.ಗೆ ಆರಂಭಿಕ ಸಾರ್ವಜನಿಕ ಕೊಡುಗೆಗಳನ್ನು ಪಟ್ಟಿ ಮಾಡುವುದು ಸೇರಿದಂತೆ ಹಲವಾರು ಉಪಕ್ರಮಗಳನ್ನು ಈ ಬಜೆಟ್‌ ನಲ್ಲಿ ಘೋಷಿಸಲಾಗಿದೆ ಎಂದರು. ಖಾಸಗಿ ಉದ್ಯಮಗಳಿಗೆ ಸಾಧ್ಯವಾದಲ್ಲೆಲ್ಲಾ ಉತ್ತೇಜನ ನೀಡಲಾಗುತ್ತಿದೆ, ಇನ್ನೂ ಇದರೊಂದಿಗೆ, ಬ್ಯಾಂಕಿಂಗ್ ಮತ್ತು ವಿಮೆಯಲ್ಲಿ ಸಾರ್ವಜನಿಕ ವಲಯದ ಪರಿಣಾಮಕಾರಿ ಭಾಗವಹಿಸುವಿಕೆ ಇನ್ನೂ ದೇಶಕ್ಕೆ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಾರ್ವಜನಿಕ ವಲಯದ ಬಲವರ್ಧನೆಗಾಗಿ ಈಕ್ವಿಟಿ ಬಂಡವಾಳ ಪೂರಣಕ್ಕೆ ಒತ್ತು ನೀಡಲಾಗಿದೆ. ಅದೇ ರೀತಿ, ಹೊಸ ಎ.ಆರ್.ಸಿ. ವಿನ್ಯಾಸವು ಬ್ಯಾಂಕ್ ಗಳ ಎನ್.ಪಿ.ಎ.ಗಳ ಮೇಲೆ ನಿಗಾ ಇಡುತ್ತದೆ ಮತ್ತು ಸಾಲಗಳನ್ನು ಗಮನಾರ್ಹ ಮಾರ್ಗದಲ್ಲಿ ನಿರ್ವಹಿಸುತ್ತದೆ. ಇದು ಸಾರ್ವಜನಿಕ ವಲಯದ ಬ್ಯಾಂಕ್ ಗಳ ಬಲವರ್ಧನೆ ಮಾಡಲಿದೆ ಎಂದರು. ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳ ಅಭಿವೃದ್ಧಿಗಾಗಿ, ಅಂತಹ ಯೋಜನೆಗಳ ದೀರ್ಘಕಾಲೀನ ಹಣಕಾಸು ಅಗತ್ಯಗಳನ್ನು ಪೂರೈಸಲು ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಗಳ ಕುರಿತು ಅವರು ಮಾತನಾಡಿದರು. ಶ್ರೀ ಮೋದಿ ಅವರು ಸಾರ್ವಭೌಮ ಸಂಪತ್ತು ನಿಧಿಗಳು, ಪಿಂಚಣಿ ನಿಧಿಗಳು ಮತ್ತು ವಿಮಾ ಕಂಪನಿಗಳನ್ನು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುವ ಬಗ್ಗೆಯೂ ಮಾತನಾಡಿದರು.

ಆತ್ಮನಿರ್ಭರ ಭಾರತವನ್ನು ಕೇವಲ ದೊಡ್ಡ ಕೈಗಾರಿಕೆಗಳಲ್ಲಿ ಮತ್ತು ದೊಡ್ಡ ನಗರಗಳಲ್ಲಿ ಮಾತ್ರವೇ ಮಾಡುವುದಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದರು. ಆತ್ಮ ನಿರ್ಭರ ಭಾರತವನ್ನು ಗ್ರಾಮೀಣ ಪ್ರದೇಶದಲ್ಲೂ ಸಣ್ಣ ಉದ್ದಿಮೆಗಳ ಮತ್ತು ಶ್ರೀಸಾಮಾನ್ಯರ ಕಠಿಣ ಪರಿಶ್ರದಿಂದ ರೂಪಿಸಬೇಕು ಎಂದರು. ಆತ್ಮನಿರ್ಭರ ಭಾರತವನ್ನು ನಮ್ಮ ಎಂ.ಎಸ್.ಎಂ.ಇ.ಗಳು ಮತ್ತು ನವೋದ್ಯಮಗಳಿಂದ ಮಾಡಲಾಗುವುದು. ಇದಕ್ಕಾಗಿ ಎಂ.ಎಸ್.ಎಂ.ಇ.ಗಳಿಗೆ ಕರೊನಾ ಕಾಲದಲ್ಲಿ ವಿಶೇಷ ಯೋಜನೆಗಳನ್ನು ಮಾಡಲಾಗಿತ್ತು, ಸುಮಾರು 90 ಲಕ್ಷ ಉದ್ದಿಮೆಗಳು ಈ ಕ್ರಮಗಳ ಪ್ರಯೋಜನ ಪಡೆದವು ಮತ್ತು 2.4 ಟ್ರಿಲಿಯನ್ ಸಾಲ ಪಡೆದುಕೊಂಡವು ಎಂದು ಹೇಳಿದರು. ಸರ್ಕಾರ ಹಲವು ಸುಧಾರಣೆಗಳನ್ನು ಮಾಡಿದ್ದು, ಕೃಷಿ, ಕಲ್ಲಿದ್ದಲು, ಬಾಹ್ಯಾಕಾಶವನ್ನು ಎಂ.ಎಸ್.ಎಂ.ಇ.ಗಳಿಗೆ ಮುಕ್ತಗೊಳಿಸಿದೆ ಎಂದು ತಿಳಿಸಿದರು.

ನಮ್ಮ ಆರ್ಥಿಕತೆಯು ದೊಡ್ಡದಾಗುತ್ತಿದ್ದಂತೆ ಸಾಲದ ಹರಿವೂ ವೇಗವಾಗಿ ಬೆಳೆಯಲು ಪ್ರಾರಂಭಿಸುವುದು ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. ನವೋದ್ಯಮಗಳಿಗಾಗಿ ಹೊಸ ಮತ್ತು ಉತ್ತಮ ಹಣಕಾಸು ಉತ್ಪನ್ನಗಳನ್ನು ರಚಿಸುವ ಮತ್ತು ಈ ವಲಯದಲ್ಲಿನ ಪ್ರತಿಯೊಂದು ಸಾಧ್ಯತೆಯ ಬಗ್ಗೆ ಅವರ ಪರಿಶೋಧನೆಗೆ ನಮ್ಮ ಫಿನ್‌ ಟೆಕ್ ನವೋದ್ಯಮಗಳ ಅತ್ಯುತ್ತಮ ಕಾರ್ಯವನ್ನು ಅವರು ಶ್ಲಾಘಿಸಿದರು. ಕರೋನಾ ಕಾಲದಲ್ಲಿ ನಡೆದ ನವೋದ್ಯಮ ವಹಿವಾಟುಗಳಲ್ಲಿ ನಮ್ಮ ಫಿನ್‌ ಟೆಕ್‌ ಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಹೊಂದಿವೆ ಎಂದು ಅವರು ಹೇಳಿದರು. ಈ ವರ್ಷವೂ ಭಾರತದ ಹಣಕಾಸು ಕ್ಷೇತ್ರಕ್ಕೆ ಉತ್ತಮ ವೇಗವಿದೆ ಎಂಬ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿದರು.

ಕೆಲವು ವರ್ಷಗಳಲ್ಲಿ, ತಂತ್ರಜ್ಞಾನದ ಉತ್ತಮ ಬಳಕೆ ಮತ್ತು ಹೊಸ ವ್ಯವಸ್ಥೆಯ ರಚನೆ ದೇಶದಲ್ಲಿನ ಹಣಕಾಸು ಪೂರಣದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿವೆ ದು ಪ್ರಧಾನಮಂತ್ರಿ ಹೇಳಿದರು. ಇಂದು ದೇಶದಲ್ಲಿ 130 ಕೋಟಿ ಜನರು ಆಧಾರ್ ಕಾರ್ಡ್ ಮತ್ತು 41 ಕೋಟಿ ದೇಶವಾಸಿಗಳು ಜನ್ ಧನ್ ಖಾತೆಯನ್ನು ಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಜನ್ ಧನ್ ಖಾತೆಯ ಸುಮಾರು, ಶೇ.55ರಷ್ಟು ಖಾತೆಗಳು ಮಹಿಳೆಯರದ್ದಾಗಿವೆ, ಇದರಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಠೇವಣಿ ಇಡಲಾಗಿದೆ ಎಂದರು. ಮುದ್ರಾ ಯೋಜನೆಯೊಂದರಲ್ಲೇ, 15 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ನೀಡಲಾಗಿದ್ದು, ಅವು ಸಣ್ಣ ಉದ್ದಿಮೆಗಳನ್ನು ತಲುಪಿವೆ ಎಂದರು. ಇದರಲ್ಲಿ ಕೂಡ ಶೇ.70ರಷ್ಟು ಮಹಿಳೆಯರು ಪಡೆದಿದ್ದು, ಪ್ರತಿಶತ 50ರಷ್ಟು ದಲಿತರು, ವಂಚಿತರು, ಬುಡಕಟ್ಟು ಜನರು ಮತ್ತು ಹಿಂದುಳಿದ ಉದ್ದಿಮೆದಾರರಾಗಿದ್ದಾರೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸ್ವನಿಧಿ ಯೋಜನೆ ಅಡಿಯಲ್ಲಿ 11 ಕೋಟಿ ರೈತ ಕುಟುಂಬಗಳು 1 ಲಕ್ಷ 15 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಧಾನಮಂತ್ರಿ ಸ್ವಾನಿಧಿಯ ಪ್ರಸ್ತಾಪ ಮಾಡಿದ ಅವರು, ಇದು ವಲಯದಲ್ಲಿ ಪ್ರಥಮ ಹಣಪೂರಣ ಉಪಕ್ರಮವಾಗಿದೆ. 15 ಲಕ್ಷ ವ್ಯಾಪಾರಿಗಳಿಗೆ 10 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಟಿಆರ್.ಇ.ಡಿ.ಎಸ್., ಪಿಎಸ್.ಬಿ. ಡಿಜಿಟಲ್ ಸಾಲ ವೇದಿಕೆಗಳು ಎಂ.ಎಸ್.ಎಂ.ಇ.ಗಳಿಗೆ ಸಾಲ ಲಭ್ಯತೆಯನ್ನು ಸುಗಮಗೊಳಿಸುತ್ತಿವೆ ಎಂದರು. ಕಿಸಾನ್ ಕ್ರೆಡಿಟ್ ಕಾರ್ಡ್ ಗಳು ಸಣ್ಣ ರೈತರು, ಪಶು ಸಂಗೋಪನೆ ಮತ್ತು ಮೀನುಗಾರರನ್ನು ಅನೌಪಚಾರಿಕ ಸಾಲದ ಸುಳಿಯಿಂದ ಮುಕ್ತಗೊಳಿಸುತ್ತಿವೆ ಎಂದರು. ಈ ವರ್ಗಕ್ಕೆ ನಾವಿನ್ಯಪೂರ್ಣ ಹಣಕಾಸು ಆರ್ಥಿಕ ಉತ್ಪನ್ನವನ್ನು ರೂಪಿಸುವಂತೆ ಪ್ರಧಾನಮಂತ್ರಿ ತಿಳಿಸಿದರು. ಸ್ವಸಹಾಯ ಗುಂಪುಗಳ ಸಾಮರ್ಥ್ಯವನ್ನು ಸೇವೆಗಳಿಂದ ಉತ್ಪಾದನೆಯವರೆಗೆ ಮತ್ತು ಅವರ ಹಣಕಾಸು ಶಿಸ್ತನ್ನು ಗ್ರಾಮೀಣ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಸೂಕ್ತಮಾರ್ಗವಾಗಿಸಿದೆ ಎಂದು ಅವರು ಸಲಹೆ ನೀಡಿದರು. ಇದು ಕೇವಲ ಕಲ್ಯಾಣ ವಿಷಯವಲ್ಲ ಜೊತೆಗೆ ಇದೊಂದು ಉತ್ತಮ ವ್ಯವಹಾರ ಮಾದರಿ ಎಂದು ಪ್ರಧಾನಮಂತ್ರಿ ಹೇಳಿದರು.

ಹಣಪೂರಣದ ತರುವಾಯ, ದೇಶ ತ್ವರಿತವಾಗಿ ಹಣಕಾಸು ಸಬಲೀಕರಣದತ್ತ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಐ.ಎಫ್.ಎಸ್.ಸಿ, ಗಿಫ್ಟ್ ಸಿಟಿಯಲ್ಲಿ ವಿಶ್ವದರ್ಜೆಯ ಹಣಕಾಸು ತಾಣವನ್ನು ನಿರ್ಮಿಸಲಾಗಿದೆ, ಫಿನ್ ಟೆಕ್ ಮಾರುಕಟ್ಟೆ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 6 ಟ್ರಿಲಿಯನ್ ಗೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತದಲ್ಲಿ ಆಧುನಿಕ ಮೂಲಸೌಕರ್ಯ ನಿರ್ಮಾಣ ಕೇವಲ ನಮ್ಮ ಆಶಯವಷ್ಟೇ ಅಲ್ಲ, ಆತ್ಮನಿರ್ಭರ ಭಾರತದ ಅಗತ್ಯವೂ ಆಗಿದೆ ಎಂದರು. ಹೀಗಾಗಿ ಈ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ದೃಢವಾದ ಗುರಿಗಳನ್ನು ನಿಗದಿ ಮಾಡಲಾಗಿದೆ ಎಂದರು. ಈ ಗುರಿಗಳನ್ನು ಪೂರೈಸಲು ಹೂಡಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಈ ಹೂಡಿಕೆಯನ್ನು ತರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದರು. ಇಡೀ ಹಣಕಾಸು ಕ್ಷೇತ್ರದ ಸಕ್ರಿಯ ಬೆಂಬಲದಿಂದ ಮಾತ್ರ ಈ ಗುರಿಗಳನ್ನು ಸಾಧಿಸಬಹುದು ಎಂದರು. ನಮ್ಮ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು, ಸರ್ಕಾರವು ತನ್ನ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸಲು ಬದ್ಧವಾಗಿದೆ ಎಂದು ಹೇಳಿದರು. ಇಲ್ಲಿಯವರೆಗೆ ಬ್ಯಾಂಕಿಂಗ್ ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, ಅವು ಇನ್ನೂ ಮುಂದುವರಿಯಲಿವೆ ಎಂದು ತಿಳಿಸಿದರು.

 

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Over 44 crore vaccine doses administered in India so far: Health ministry

Media Coverage

Over 44 crore vaccine doses administered in India so far: Health ministry
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 27 ಜುಲೈ 2021
July 27, 2021
ಶೇರ್
 
Comments

PM Narendra Modi lauded India's first-ever fencer in the Olympics CA Bhavani Devi for her commendable performance in Tokyo

PM Modi leads the country with efficient government and effective governance