ಇಂದು ಕಚ್ ವ್ಯಾಪಾರ ಮತ್ತು ಪ್ರವಾಸೋದ್ಯಮದ ದೊಡ್ಡ ಕೇಂದ್ರವಾಗಿದೆ, ಮುಂಬರುವ ದಿನಗಳಲ್ಲಿ, ಕಚ್‌ನ ಈ ಪಾತ್ರ ಇನ್ನಷ್ಟು ದೊಡ್ಡದಾಗಲಿದೆ: ಪ್ರಧಾನಮಂತ್ರಿ
ಸಮುದ್ರಾಹಾರದಿಂದ ಪ್ರವಾಸೋದ್ಯಮ ಮತ್ತು ವ್ಯಾಪಾರದವರೆಗೆ, ಭಾರತವು ಕರಾವಳಿ ಪ್ರದೇಶಗಳಲ್ಲಿ ಹೊಸ ಪರಿಸರ ವ್ಯವಸ್ಥೆ ನಿರ್ಮಿಸುತ್ತಿದೆ: ಪ್ರಧಾನಮಂತ್ರಿ
ನಮ್ಮ ನೀತಿಯು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯಾಗಿದೆ: ಪ್ರಧಾನಮಂತ್ರಿ
ಆಪರೇಷನ್ ಸಿಂದೂರ್ ಮಾನವತೆಯನ್ನು ರಕ್ಷಿಸುವ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಧ್ಯೇಯವಾಗಿದೆ: ಪ್ರಧಾನಮಂತ್ರಿ
ಭಯೋತ್ಪಾದನೆಯ ಪ್ರಧಾನ ಕಚೇರಿ ಭಾರತದ ರಾಡಾರ್‌ನಲ್ಲಿತ್ತು ಮತ್ತು ನಾವು ಅವುಗಳನ್ನು ನಿಖರವಾಗಿ ಹೊಡೆದಿದ್ದೇವೆ, ಇದು ನಮ್ಮ ಸಶಸ್ತ್ರ ಪಡೆಗಳ ಶಕ್ತಿ ಮತ್ತು ಶಿಸ್ತನ್ನು ಪ್ರದರ್ಶಿಸುತ್ತದೆ: ಪ್ರಧಾನ ಮಂತ್ರಿ
ಗಡಿಯಾಚೆಗಿನ ಭಯೋತ್ಪಾದನೆಯನ್ನು ಹತ್ತಿಕ್ಕುವುದೇ ಭಾರತದ ಹೋರಾಟವಾಗಿದದೆ: ಪ್ರಧಾನಮಂತ್ರಿ

ಗುಜರಾತ್‌ನ ಭುಜ್‌ನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 53,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ, ದೇಶಕ್ಕೆ ಸಮರ್ಪಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಚ್‌ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು, ಕ್ರಾಂತಿಕಾರಿಗಳು ಮತ್ತು ಹುತಾತ್ಮರಿಗೆ, ವಿಶೇಷವಾಗಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಶ್ಯಾಮ್‌ಜಿ ಕೃಷ್ಣ ವರ್ಮಾ ಅವರಿಗೆ ಗೌರವ ನಮನ ಸಲ್ಲಿಸಿದರು. ಕಚ್‌ನ ಪುತ್ರರು ಮತ್ತು ಪುತ್ರಿಯರಿಗೆ ಪ್ರಧಾನಿ ತಮ್ಮ ನಮನಗಳನ್ನು ಸಲ್ಲಿಸಿ, ಅವರ ಕೊಡುಗೆಗಳನ್ನು ಶ್ಲಾಘಿಸಿದರು.

ಕಚ್‌ನ ಪವಿತ್ರ ಭೂಮಿಯಲ್ಲಿ ಆಶಾಪುರ ಮಾತೆಗೆ ಶ್ರೀ ಮೋದಿ ನಮನ ಸಲ್ಲಿಸಿದರು. ಈ ಪ್ರದೇಶದ ಮೇಲೆ ಆಕೆ ಕರುಣಿಸುತ್ತಿರುವ ನಿರಂತರ ಆಶೀರ್ವಾದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿ, ಜನರಿಗೆ ಗೌರವ ಸಲ್ಲಿಸಿದರು.

ಕಚ್‌ನೊಂದಿಗಿನ ತಮ್ಮ ದೀರ್ಘ ಸಂಪರ್ಕ ಮತ್ತು ಸಂಬಂಧವನ್ನು ನೆನಪಿಸಿದ ಶ್ರೀ ಮೋದಿ ಅವರು, ಜಿಲ್ಲೆಯಾದ್ಯಂತ ಆಗಾಗ್ಗೆ ಭೇಟಿ ನೀಡಿದ್ದೇನೆ. ಈ ಭೂಮಿಯು ತನ್ನ ಜೀವನದ ದಿಕ್ಕನ್ನು ಹೇಗೆ ರೂಪಿಸಿತು ಎಂಬುದನ್ನು ಪ್ರಸ್ತಾಪಿಸಿದರು. ಇಲ್ಲಿ ಜೀವನ ಪರಿಸ್ಥಿತಿಗಳು ಗಮನಾರ್ಹವಾಗಿ ಸುಧಾರಿಸಿದ್ದರೂ, ಹಿಂದೆ ಗಣನೀಯ ಸವಾಲುಗಳನ್ನು ಎದುರಿಸಬೇಕಾಯಿತು. ನರ್ಮದಾ ನದಿಯ ನೀರು ಕಚ್ ಪ್ರದೇಶವನ್ನು ತಲುಪಿದಾಗ ಇಲ್ಲಿನ ಜನರು ಎಷ್ಟು ಅದೃಷ್ಟಶಾಗಳಾಯಾಗಿದ್ದರು ಎಂಬುದನ್ನು ಸಹ ಅವರು ನೆನಪಿಸಿಕೊಂಡರು. ಮುಖ್ಯಮಂತ್ರಿ ಹುದ್ದೆ ವಹಿಸಿಕೊಳ್ಳುವ ಮೊದಲೇ, ನಾನು ಆಗಾಗ್ಗೆ ಕಚ್‌ಗೆ ಭೇಟಿ ನೀಡುತ್ತಿದ್ದೆ, ಜಿಲ್ಲಾ ಕಚೇರಿಯ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೆ. ಕಚ್‌ ರೈತರ ಅಚಲ ದೃಢಸಂಕಲ್ಪವನ್ನು ಎತ್ತಿ ತೋರಿಸಿದ ಪ್ರಧಾನಿ, ಅವರ ಉತ್ಸಾಹ ಯಾವಾಗಲೂ ಅಚಲವಾಗಿದೆ. ಈ ಪ್ರದೇಶದಲ್ಲಿ ರೈತರ ಅನೇಕ  ವರ್ಷಗಳ ಹೋರಾಟ ಅನುಭವವೇ ಇಲ್ಲಿನ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದರು.

 

ಕಚ್ ಗಮನಾರ್ಹ ಯಶಸ್ಸು ಸಾಧಿಸುವಲ್ಲಿ ಭರವಸೆ ಮತ್ತು ಅವಿರತ ಪ್ರಯತ್ನದ ಶಕ್ತಿಯನ್ನು ಪ್ರದರ್ಶಿಸಿದೆ, ಒಂದು ಕಾಲದಲ್ಲಿ ಅನೇಕರು ಈ ಪ್ರದೇಶದ ಭವಿಷ್ಯವನ್ನು ಅನುಮಾನಿಸಲು ಕಾರಣವಾಗಿದ್ದು ವಿನಾಶಕಾರಿ ಭೂಕಂಪ. ಆದಾಗ್ಯೂ, ಕಚ್ ಬೂದಿಯಿಂದ ಮೇಲೇರುತ್ತದೆ ಎಂಬ ಅಚಲ ನಂಬಿಕೆ ಜನರಲ್ಲಿತ್ತು, ಅವರು ಅದನ್ನು ಸಾಧಿಸಿದರು. "ಇಂದು, ಕಚ್ ವ್ಯಾಪಾರ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಪ್ರಮುಖ ಕೇಂದ್ರವಾಗಿ ನಿಂತಿದೆ". ಮುಂಬರುವ ವರ್ಷಗಳಲ್ಲಿ, ಈ ಪ್ರದೇಶದ ಪಾತ್ರ ಮತ್ತಷ್ಟು ವಿಸ್ತರಿಸುತ್ತದೆ. ಕಚ್‌ನ ತ್ವರಿತ ಅಭಿವೃದ್ಧಿ ನೋಡಲು ಮತ್ತು ಅದರ ಪ್ರಗತಿಯನ್ನು ಬೆಂಬಲಿಸಲು ಸಂತಸ ತಂದಿದೆ. ಈ ಭೇಟಿಯ ಸಮಯದಲ್ಲಿ, ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸಿ 50,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಉಪಕ್ರಮಗಳು ಭಾರತವು ಪ್ರಮುಖ ನೀಲಿ ಆರ್ಥಿಕತೆ ಮತ್ತು ಹಸಿರು ಇಂಧನದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ಈ ಪರಿವರ್ತನಾಶೀಲ ಬೆಳವಣಿಗೆಗಳಿಗಾಗಿ ಅವರು ಕಚ್‌ನ ಜನರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

"ಕಚ್ ವಿಶ್ವದ ಅತಿದೊಡ್ಡ ಹಸಿರು ಇಂಧನ ಕೇಂದ್ರವಾಗಿ ಹೊರಹೊಮ್ಮುತ್ತಿದೆ", ಹಸಿರು ಹೈಡ್ರೋಜನ್‌ ಪರಿವರ್ತಕ ಸಾಮರ್ಥ್ಯ ಹೊಂದಿದೆ. ಇದು ಭವಿಷ್ಯದ ಇಂಧನವಾಗಿದೆ. ಕಾರುಗಳು, ಬಸ್ಸುಗಳು ಮತ್ತು ಬೀದಿ ದೀಪಗಳು ಶೀಘ್ರದಲ್ಲೇ ಹಸಿರು ಹೈಡ್ರೋಜನ್‌ನಿಂದ ಚಾಲಿತವಾಗುತ್ತವೆ, ಇದು ಭಾರತದ ಇಂಧನ ವಲಯದಲ್ಲಿ ಕ್ರಾಂತಿ ಉಂಟು ಮಾಡುತ್ತದೆ. ದೇಶದಲ್ಲಿ ಗೊತ್ತುಪಡಿಸಿದ 3 ಹಸಿರು ಹೈಡ್ರೋಜನ್ ಕೇಂದ್ರಗಳಲ್ಲಿ ಕಾಂಡ್ಲಾ ಒಂದಾಗಿದೆ. ಕಚ್‌ನಲ್ಲಿ ಹೊಸ ಹಸಿರು ಹೈಡ್ರೋಜನ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಅವರು ಘೋಷಿಸಿದರು, ಈ ಸೌಲಭ್ಯದಲ್ಲಿ ಬಳಸಲಾದ ತಂತ್ರಜ್ಞಾನವು ಸಂಪೂರ್ಣವಾಗಿ "ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ". ಇದಲ್ಲದೆ, ಭಾರತದ ಸೌರ ಕ್ರಾಂತಿಯಲ್ಲಿ ಕಚ್‌ ಪ್ರಮುಖ ಪಾತ್ರ ವಹಿಸಿದೆ, ವಿಶ್ವದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಗಳಲ್ಲಿ ಒಂದನ್ನು ಈ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಖಾವ್ಡಾ ಸಂಕೀರ್ಣದ ಸ್ಥಾಪನೆಯೊಂದಿಗೆ, ಕಚ್ ಜಾಗತಿಕ ಇಂಧನ ನಕ್ಷೆಯಲ್ಲಿ ಸದೃಢವಾಗಿ ನಂತಿದೆ ಎಂದು ಅವರು ಹೇಳಿದರು.

ನಾಗರಿಕರಿಗೆ ವಿದ್ಯುತ್ ವೆಚ್ಚ ಕಡಿಮೆ ಮಾಡುವ ಮೂಲಕ ಸಾಕಷ್ಟು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಗುಜರಾತ್‌ನ ಲಕ್ಷಾಂತರ ಕುಟುಂಬಗಳಿಗೆ ಈಗಾಗಲೇ ಪ್ರಯೋಜನ ನೀಡಿರುವ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಉದ್ಘಾಟಿಸಲಿದೆ. ಕರಾವಳಿ ಪ್ರದೇಶಗಳ ಆರ್ಥಿಕ ಮಹತ್ವಕ್ಕೆ ಒತ್ತು ನೀಡಿದ ಪ್ರಧಾನಿ, ಸಮುದ್ರ ಸಮೃದ್ಧಿಯು ಅನೇಕ ರಾಷ್ಟ್ರಗಳ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಿದೆ. ಪ್ರಾಚೀನ ಬಂದರು ನಗರಗಳಾದ ಧೋಲಾ ವೀರಾ ಮತ್ತು ಲೋಥಾಲ್ ಅನ್ನು ಭಾರತದ ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ವ್ಯಾಪಾರ ಮತ್ತು ಅಭಿವೃದ್ಧಿಯಲ್ಲಿ ಅವುಗಳ ಪಾತ್ರಗಳು ಪ್ರಮುಖ ಉದಾಹರಣೆಗಳಾಗಿವೆ, "ಈ ಪರಂಪರೆಯಿಂದ ಪ್ರೇರಿತರಾಗಿ, ಬಂದರುಗಳ ಸುತ್ತಲಿನ ನಗರಗಳನ್ನು ವಿಸ್ತರಿಸುವ ಮೂಲಕ ಸರ್ಕಾರವು ಬಂದರು ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ". ಭಾರತವು ಸಮುದ್ರಾಹಾರ, ಪ್ರವಾಸೋದ್ಯಮ ಮತ್ತು ವ್ಯಾಪಾರ ಒಳಗೊಂಡ ಹೊಸ ಕರಾವಳಿ ಪರಿಸರ ವ್ಯವಸ್ಥೆಯನ್ನು ಸಕ್ರಿಯವಾಗಿ ಪೋಷಿಸುತ್ತಿದೆ. ಬಂದರುಗಳನ್ನು ಆಧುನೀಕರಿಸಲು ಮತ್ತು ವಿಸ್ತರಿಸಲು ಗಮನಾರ್ಹ ಹೂಡಿಕೆಗಳನ್ನು ಮಾಡಲಾಗುತ್ತಿದೆ, ಇದು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತದೆ. ಮೊದಲ ಬಾರಿಗೆ, ಪ್ರಮುಖ ಬಂದರುಗಳು ಒಂದು ವರ್ಷದಲ್ಲಿ ದಾಖಲೆಯ 15 ಕೋಟಿ ಟನ್ ಸರಕುಗಳ ಸಾಗಣೆಯನ್ನು ನಿರ್ವಹಿಸಿವೆ, ಕಾಂಡ್ಲಾ ಬಂದರು ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತದ ಕಡಲ ವ್ಯಾಪಾರದ ಸುಮಾರು 3ನೇ ಒಂದು ಭಾಗವನ್ನು ಕಚ್‌ನ ಬಂದರುಗಳು ನಿರ್ವಹಿಸುತ್ತವೆ. ಮೂಲಸೌಕರ್ಯದ ಮಹತ್ವವನ್ನು ಗುರುತಿಸಿದ ಪ್ರಧಾನಿ, ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಸಾಮರ್ಥ್ಯ ಮತ್ತು ಸಂಪರ್ಕವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಕಾರ್ಯಾಚರಣೆಯನ್ನು ಸುಗಮಗೊಳಿಸಲು ಹೊಸ ಜೆಟ್ಟಿ ಮತ್ತು ವಿಸ್ತೃತ ಸರಕು ಸಂಗ್ರಹಣಾ ಸೌಲಭ್ಯ ಸೇರಿದಂತೆ ಬಹು ಹಡಗುಗಳ ಸಾಗಣೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಉದ್ಘಾಟಿಸಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಅದರ ಅಭಿವೃದ್ಧಿಗಾಗಿ ವಿಶೇಷ ನಿಧಿಯನ್ನು ರಚಿಸುವುದಾಗಿ ಘೋಷಿಸುವ ಮೂಲಕ, ಸಮುದ್ರ ವಲಯದ ಮೇಲೆ ಸರ್ಕಾರವು ಹೆಚ್ಚಿನ ಗಮನ ಹರಿಸಿದೆ ಎಂದು ಪ್ರಧಾನಿ ಎತ್ತಿ ತೋರಿಸಿದರು. ಹಡಗು ನಿರ್ಮಾಣದ ಮಹತ್ವಕ್ಕೆ ಒತ್ತು ನೀಡಿದ ಅವರು, ಭಾರತವು ದೇಶೀಯ ಅಗತ್ಯಗಳಿಗಾಗಿ ಮಾತ್ರವಲ್ಲದೆ, ಜಾಗತಿಕ ಬೇಡಿಕೆಗಾಗಿಯೂ ದೊಡ್ಡ ಹಡಗುಗಳನ್ನು ತಯಾರಿಸುತ್ತದೆ. ಈ ಉಪಕ್ರಮಗಳು, ಕಡಲ ವಲಯದಲ್ಲಿ ದೇಶದ ಯುವಕರಿಗೆ ಗಮನಾರ್ಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.

 

ಕಚ್ ತನ್ನ ಪರಂಪರೆಯ ಬಗ್ಗೆ ಆಳವಾದ ಗೌರವ ಹೊಂದಿದೆ, ಈ ಪರಂಪರೆಯು ಈಗ ಈ ಪ್ರದೇಶದ ಅಭಿವೃದ್ಧಿಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಕಳೆದ 2 ದಶಕಗಳಲ್ಲಿ ಜವಳಿ, ಆಹಾರ ಸಂಸ್ಕರಣೆ, ಪಿಂಗಾಣಿ ಮತ್ತು ಉಪ್ಪು ಉತ್ಪಾದನೆ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಕಚ್ ಕಸೂತಿ, ಬ್ಲಾಕ್ ಮುದ್ರಣ, ಬಂಧನಿ ಬಟ್ಟೆ ಮತ್ತು ಚರ್ಮದ ಕೆಲಸಗಳಂತಹ ಕಚ್‌ನ ಸಾಂಪ್ರದಾಯಿಕ ಕರಕುಶಲ ವಸ್ತುಗಳ ವ್ಯಾಪಕ ಮನ್ನಣೆ ಹೊಂದಿದೆ. ಭುಜೋಡಿ ಗ್ರಾಮವನ್ನು ಕೈಮಗ್ಗ ಕಲಾತ್ಮಕತೆಯ ಜೀವಂತ ವಸ್ತುಸಂಗ್ರಹಾಲಯವಾಗಿದೆ, ಅಜ್ರಖ್ ಮುದ್ರಣದ ವಿಶಿಷ್ಟ ಸಂಪ್ರದಾಯ ಶ್ಲಾಘನೀಯವಾಗಿದೆ. ಇದು ಈಗ ಜಿಐ ಟ್ಯಾಗ್ ಪಡೆದುಕೊಂಡಿದೆ, ಇದು ಕಚ್‌ನಲ್ಲಿ ಅಧಿಕೃತವಾಗಿ ತನ್ನ ಮೂಲವನ್ನು ಸ್ಥಾಪಿಸಿದೆ. ವಿಶೇಷವಾಗಿ ಬುಡಕಟ್ಟು ಕುಟುಂಬಗಳು ಮತ್ತು ಕುಶಲಕರ್ಮಿಗಳಿಗೆ ಈ ಮನ್ನಣೆ ದೊರೆತಿದೆ. ಏಕೆಂದರೆ ಇದು ಅವರ ಸಾಂಸ್ಕೃತಿಕ ಗುರುತು ಮತ್ತು ಕರಕುಶಲತೆಯನ್ನು ಬಲಪಡಿಸುತ್ತದೆ. ಹೆಚ್ಚುವರಿಯಾಗಿ, ಚರ್ಮ ಮತ್ತು ಜವಳಿ ಕೈಗಾರಿಕೆಗಳನ್ನು ಬೆಂಬಲಿಸಲು ಕೇಂದ್ರ ಬಜೆಟ್ ನಲ್ಲಿ  ಪ್ರಮುಖ ಅನುದಾನ ಹಂಚಿಕೆ ಮಾಡಲಾಗಿದೆ. ಈ ವಲಯಗಳನ್ನು ಉತ್ತೇಜಿಸುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದರು.

ಕಚ್‌ನ ಶ್ರಮಶೀಲ ರೈತರಿಗೆ ಗೌರವ ಸಲ್ಲಿಸಿದ ಪ್ರಧಾನಿ, ಸವಾಲುಗಳನ್ನು ನಿವಾರಿಸುವಲ್ಲಿ ಅವರ ಪರಿಶ್ರಮ ದೊಡ್ಡದು. ಗುಜರಾತ್‌ನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದು ತೀವ್ರ ತೊಂದರೆಗಳನ್ನು ಉಂಟು ಮಾಡುತ್ತಿದ್ದ ಸಮಯವನ್ನು ನೆನಪಿಸಿಕೊಂಡರು. ಆದಾಗ್ಯೂ, ನರ್ಮದಾ ಮಾತೆಯ ಆಶೀರ್ವಾದ ಮತ್ತು ಸರ್ಕಾರದ ಸಮರ್ಪಿತ ಪ್ರಯತ್ನಗಳಿಂದ ಪರಿಸ್ಥಿತಿ ಬದಲಾಗಿದೆ. ಕಚ್‌ನ ಅದೃಷ್ಟವನ್ನು ಪುನರ್ನಿರ್ಮಿಸುವಲ್ಲಿ ಕೆವಾಡಿಯಾದಿಂದ ಮೊಡ್ಕುಬಾದವರೆಗೆ ವಿಸ್ತರಿಸಿರುವ ಕಾಲುವೆಯ ನಿರ್ಣಾಯಕ ಪಾತ್ರವನ್ನು ಪ್ರಧಾನಿ ಎತ್ತಿ ತೋರಿಸಿದರು. ಇಂದು ಕಚ್‌ನ ಮಾವು, ಖರ್ಜೂರ, ದಾಳಿಂಬೆ, ಜೀರಿಗೆ ಮತ್ತು ಡ್ರ್ಯಾಗನ್ ಹಣ್ಣಿನಂತಹ ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿ. ಈ ಪ್ರದೇಶದ ಹಿಂದಿನ ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ, ಕಚ್‌ ಒಂದು ಕಾಲದಲ್ಲಿ ಸೀಮಿತ ಅವಕಾಶಗಳಿಂದಾಗಿ ಬಲವಂತದ ವಲಸೆ ಎದುರಿಸುತ್ತಿತ್ತು. ಆದಾಗ್ಯೂ, ಸಾಧಿಸಿದ ಗಮನಾರ್ಹ ಪ್ರಗತಿಯೊಂದಿಗೆ, ಸ್ಥಳೀಯ ಯುವಕರು ಈಗ ಕಚ್‌ನಲ್ಲಿಯೇ ಉದ್ಯೋಗಗಳನ್ನು ಕಂಡುಕೊಳ್ಳುತ್ತಿದ್ದಾರೆ, ಇದು ಈ ಪ್ರದೇಶದ ಬೆಳೆಯುತ್ತಿರುವ ಸಮೃದ್ಧಿಯನ್ನು ಸೂಚಿಸುತ್ತದೆ.

ಭಾರತದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ತಮ್ಮ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿ ಉಳಿದಿದೆ. ಪ್ರವಾಸೋದ್ಯಮವು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ವಲಯವಾಗಿದೆ. ಕಚ್ ತನ್ನ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯ ಹೊಂದಿದ್ದು, ಈ ಕ್ಷೇತ್ರದಲ್ಲಿ ವಿಸ್ತರಣೆಗೆ ಉತ್ತಮ ಸ್ಥಾನದಲ್ಲಿದೆ. ಕಚ್‌ನ ರಣ್(ಮರಳುಗಾಡು ಅಥವಾ ಮರುಭೂಮಿ) ಉತ್ಸವದ ಜನಪ್ರಿಯತೆ ಹೆಚ್ಚುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಯುನೆಸ್ಕೋ ಇದನ್ನು ವಿಶ್ವದ ಅತ್ಯಂತ ಸುಂದರ ವಸ್ತುಸಂಗ್ರಹಾಲಯಗಳಲ್ಲಿ ಒಂದೆಂದು ಗುರುತಿಸಿದೆ ಎಂದು ಸ್ಮೃತಿ ವಾನ್ ಸ್ಮಾರಕದ ಬಗ್ಗೆ ಪ್ರಸ್ತಾಪಿಸಿದರು. ಕಚ್‌ನ ಪ್ರವಾಸೋದ್ಯಮ ಉದ್ಯಮವು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲಿದೆ, ಧೋರ್ಡೋ ಗ್ರಾಮವು ಜಾಗತಿಕವಾಗಿ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳಲ್ಲಿ ಒಂದಾಗಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ. ಹೆಚ್ಚುವರಿಯಾಗಿ, ಮಾಂಡ್ವಿಯ ಸಮುದ್ರ ತೀರವು ಪ್ರಸಾಸಿಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ, ಪ್ರವಾಸೋದ್ಯಮದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ರಣ್ ಉತ್ಸವ ಸಮಯದಲ್ಲಿ ಮಾಂಡ್ವಿಯಲ್ಲಿ ಬೀಚ್ ಉತ್ಸವವನ್ನು ಆಯೋಜಿಸುವಂತೆ ಶ್ರೀ ಮೋದಿ ಗುಜರಾತ್ ಮುಖ್ಯಮಂತ್ರಿ ಅವರನ್ನು ಪ್ರಧಾನಿ ಒತ್ತಾಯಿಸಿದರು. ಅಹಮದಾಬಾದ್ ಮತ್ತು ಭುಜ್ ನಡುವಿನ ನಮೋ ಭಾರತ್ ರಾಪಿಡ್ ರೈಲು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

 

2014ರಲ್ಲಿ ತಾವು ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವಾದ ಮೇ 26 ವಿಶೇಷ ಮಹತ್ವದ್ದಾಗಿದೆ. 2014ರಲ್ಲಿ ಭಾರತ 11ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು, ಆದರೆ ಇಂದು ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುವ ಒಂದು ಸಾಧನವಾಗಿ ಭಾರತದ ಬಲವಾದ ನಂಬಿಕೆ ಹೊಂದಿದೆ. ಪ್ರವಾಸೋದ್ಯಮದ ಬದಲು ಭಯೋತ್ಪಾದನೆ ಪೋಷಿಸುವ ಪಾಕಿಸ್ತಾನವನ್ನು ಪ್ರಸ್ತಾಪಿಸಿದ ಅವರು, "ಭಯೋತ್ಪಾದನೆಯು ಗಂಭೀರ ಜಾಗತಿಕ ಬೆದರಿಕೆಯಾಗಿದೆ, ಭಾರತವು ಅದರ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಹೊಂದಿದೆ". ಆಪರೇಷನ್ ಸಿಂದೂರ್ ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ನಿಲುವನ್ನು ಒತ್ತಿಹೇಳುತ್ತದೆ. ಭಾರತೀಯ ನಾಗರಿಕರಿಗೆ ಹಾನಿ ಮಾಡುವ ಯಾವುದೇ ಪ್ರಯತ್ನಕ್ಕೆ ಅದೇ ಭಾಷೆಯಲ್ಲಿ ಬಲವಾದ ಪ್ರತಿಕ್ರಿಯೆ ನೀಡಲಾಗುವುದು, ಭಾರತಕ್ಕೆ ಸವಾಲು ಹಾಕಲು ಧೈರ್ಯ ಮಾಡುವವರು ಯಾವುದೇ ಬೆಲೆ ತೆತ್ತಾದರೂ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

"ಆಪರೇಷನ್ ಸಿಂದೂರ್ ಮಾನವತೆಯನ್ನು ರಕ್ಷಿಸುವ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಧ್ಯೇಯ ಹೊಂದಿದೆ". ಏಪ್ರಿಲ್ 22ರ ನಂತರ ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಮತ್ತು ಮೂಲಸೌಕರ್ಯಗಳನ್ನು ನಾಶ ಮಾಡುವುದಾಗಿ ಸಂಕಲ್ಪ ಮಾಡಿದ್ದ ತಮ್ಮ ಮಾತುಗಳನ್ನು ಅವರು ನೆನಪಿಸಿಕೊಂಡರು. ಪಹಲ್ಗಾಮ್ ದಾಳಿ ನಡೆದು 15 ದಿನಗಳ ನಂತರವೂ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ನಮ್ಮ 3 ಭಾರತೀಯ ಸಶಸ್ತ್ರ ಪಡೆಗಳಿಗೆ ತಕ್ಕ ಉತ್ತರ ನೀಡಲು ಮುಕ್ತ ಅಧಿಕಾರ ನೀಡಲಾಗಿದೆ. ಭಾರತವು ಭಯೋತ್ಪಾದಕರ ಪ್ರಧಾನ ಕಚೇರಿಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ತನ್ನ ಸಶಸ್ತ್ರ ಪಡೆಗಳ ಸಾಮರ್ಥ್ಯ ಮತ್ತು ಶಿಸ್ತು ಪ್ರದರ್ಶಿಸಿದೆ. ಭಯೋತ್ಪಾದಕ ಅಡಗುತಾಣಗಳನ್ನು ನಿಖರವಾಗಿ ನಿರ್ಮೂಲನೆ ಮಾಡಬಹುದು ಎಂದು ಭಾರತ ಜಗತ್ತಿಗೆ ತೋರಿಸಿದೆ. ಭಾರತದ ನಿರ್ಣಾಯಕ ಕ್ರಮದ ನಂತರ ಪಾಕಿಸ್ತಾನ ಭಯಭೀತವಾಗಿದೆ. ಪಾಕಿಸ್ತಾನವು ಭಾರತೀಯ ನಾಗರಿಕರ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು, ಆದರೆ ಭಾರತವು 2 ಪಟ್ಟು ಬಲದಿಂದ ಪ್ರತೀಕಾರ ತೀರಿಸಿಕೊಂಡಿದೆ, ಅವರ ಮಿಲಿಟರಿ ನೆಲೆಗಳನ್ನು ನಿಖರತೆಯಿಂದ ಹೊಡೆದುರುಳಿಸಿತು. "ಪಾಕಿಸ್ತಾನದ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆ(ಸ್ಥಾಪನೆ)ಗಳನ್ನು ಭಾರತ ನಾಶಪಡಿಸಿದ್ದು ಇಡೀ ಜಗತ್ತನ್ನೇ ದಿಗ್ಭ್ರಮೆಗೊಳಿಸಿತು". ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ವೃತ್ತಿಪರತೆ, ಶೌರ್ಯ ಮತ್ತು ನಿಖರತೆಗಾಗಿ ಪ್ರಧಾನಿ ಸೇನಾಪಡೆಗಳನ್ನು ಶ್ಲಾಘಿಸಿದರು.

 

ಪಾಕಿಸ್ತಾನದ ಸೇನೆಯು ಭುಜ್ ವಾಯುನೆಲೆಯ ಮೇಲೆ ದಾಳಿ ಮಾಡಿದ 1971ರ ಐತಿಹಾಸಿಕ ಯುದ್ಧವನ್ನು ನೆನಪಿಸಿಕೊಂಡ ಶ್ರೀ ಮೋದಿ, ಭುಜ್‌ನ ಮಹಿಳೆಯರ ಅಸಾಧಾರಣ ಧೈರ್ಯವನ್ನು ಶ್ಲಾಘಿಸಿದರು, ಅವರು ಭೀಕರ ಸಂದರ್ಭಗಳಲ್ಲಿ ವಾಯುನೆಲೆಯನ್ನು ಮರುಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪಾಕಿಸ್ತಾನದ ನಿರಂತರ ಬಾಂಬ್ ದಾಳಿಗಳ ನಡುವೆಯೂ, ಭುಜ್‌ನ ಮಹಿಳೆಯರು 72 ಗಂಟೆಗಳಲ್ಲಿ ವಾಯುನೆಲೆಯನ್ನು ಹೇಗೆ ಪುನರ್ನಿರ್ಮಿಸಿದರು, ಅದರ ತ್ವರಿತ ಕಾರ್ಯಾಚರಣೆಯ ಚೇತರಿಕೆಗೆ ಅವಕಾಶ ಮಾಡಿಕೊಟ್ಟರು. ಈ ಧೈರ್ಯಶಾಲಿ ಮಹಿಳೆಯರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು, ಅವರ ಕೊಡುಗೆ ಅಸಾಧಾರಣವಾಗಿತ್ತು ಎಂದು ಒಪ್ಪಿಕೊಂಡರು.

“ಭಾರತದ ಹೋರಾಟವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಅದನ್ನು ಪ್ರಾಯೋಜಿಸುವವರ ವಿರುದ್ಧ”ವಾಗಿದೆ. ಭಾರತವು ಯಾವುದೇ ರಾಷ್ಟ್ರದ ಜನರೊಂದಿಗೆ ಶತ್ರುತ್ವ ಹೊಂದಿಲ್ಲ, ಭಯೋತ್ಪಾದನೆ ಪೋಷಿಸುವ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಶತ್ರುತ್ವ ಹೊಂದಿದೆ. ಕಚ್‌ನಿಂದ ಪಾಕಿಸ್ತಾನದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಪರಿಸ್ಥಿತಿಯ ವಾಸ್ತವತೆ ಅರಿಯಬೇಕು ಮತ್ತು  ಗುರುತಿಸಬೇಕು ಒತ್ತಾಯಿಸಿದರು. ಪಾಕಿಸ್ತಾನ ಸರ್ಕಾರ ಮತ್ತು ಸೈನ್ಯವು ಭಯೋತ್ಪಾದನೆಯನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ, ಅದನ್ನು ಆದಾಯ ಗಳಿಸುವ ಸಾಧನವಾಗಿ ಬಳಸುತ್ತಿದೆ. ಈ ಮಾರ್ಗವು ನಿಜವಾಗಿಯೂ ತಮ್ಮ ಹಿತಾಸಕ್ತಿಗಳಲ್ಲಿದೆಯೇ ಎಂದು ಯೋಚಿಸಬೇಕು ಎಂದು ಅವರು ಪಾಕಿಸ್ತಾನದ ಜನರಿಗೆ ಕರೆ ನೀಡಿದರು. ಅಧಿಕಾರ ಚಾಲಿತ ಕಾರ್ಯಸೂಚಿಗಳು ಪಾಕಿಸ್ತಾನಿ ಜೀವಗಳನ್ನು ಅಪಾಯಕ್ಕೆ ಸಿಲುಕಿಸುತ್ತಿವೆ, ಅವರ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿವೆ. ಪಾಕಿಸ್ತಾನವು ಭಯೋತ್ಪಾದನೆಯ ಪಿಡುಗಿನಿಂದ ಮುಕ್ತವಾಗಬೇಕಾದರೆ, ಅಲ್ಲಿನ ಜನರು ಒಂದು ನಿಲುವು ತೆಗೆದುಕೊಂಡು ಅದರ ನಿರ್ಮೂಲನೆಗೆ ಕೊಡುಗೆ ನೀಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು.

 

ಭಾರತದ ಸ್ಪಷ್ಟ ನಿರ್ದೇಶನವನ್ನು ಪುನರುಚ್ಚರಿಸಿದ ಪ್ರಧಾನಿ, ರಾಷ್ಟ್ರವು ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಹಾದಿ ಆರಿಸಿಕೊಂಡಿದೆ. ಕಚ್‌ನ ಚೈತನ್ಯವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ಸ್ಫೂರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಚ್ಚಿ ಹೊಸ ವರ್ಷವನ್ನು ಗುರುತಿಸುವ ಮುಂಬರುವ ಆಶಾಧಿ ಬೀಜ್‌ಗೆ ಶ್ರೀ ಮೋದಿ ಅವರು ಮುಂಚಿತವಾಗಿ ಶುಭಾಶಯಗಳನ್ನು ಕೋರಿದರು. ಕಚ್‌ನ ಜನರ ಗಮನಾರ್ಹ ಪ್ರಗತಿ ಮತ್ತು ನಡೆಯುತ್ತಿರುವ ಅಭಿವೃದ್ಧಿ ಸಾಧನೆಗಳಿಗಾಗಿ ಮತ್ತೊಮ್ಮೆ ಅವರನ್ನು ಅಭಿನಂದಿಸಿದ ಪ್ರಧಾನಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ವಿದ್ಯುತ್, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಗುಜರಾತ್‌ನ ಭುಜ್‌ನಲ್ಲಿ ಪ್ರಧಾನಮಂತ್ರಿ ಅವರು 53,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಖಾವ್ಡಾ ನವೀಕರಿಸಬಹುದಾದ ಇಂಧನ ಉದ್ಯಾನವನದಲ್ಲಿ ಉತ್ಪಾದಿಸಲಾದ ನವೀಕರಿಸಬಹುದಾದ ಇಂದನವನ್ನು ಸ್ಥಳಾಂತರಿಸುವ ಪ್ರಸರಣ ಯೋಜನೆಗಳು, ಪ್ರಸರಣ ಜಾಲ ವಿಸ್ತರಣೆ, ತಾಪಿಯಲ್ಲಿ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ ಸೇರಿದಂತೆ ವಿದ್ಯುತ್ ಕ್ಷೇತ್ರದ ಯೋಜನೆಗಳು ಸೇರಿವೆ. ಕಾಂಡ್ಲಾ ಬಂದರಿನ ಯೋಜನೆಗಳು ಮತ್ತು ಗುಜರಾತ್ ಸರ್ಕಾರದ ಬಹು ರಸ್ತೆ, ನೀರು ಮತ್ತು ಸೌರ ಯೋಜನೆಗಳು ಇದರಲ್ಲಿ ಸೇರಿವೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Most NE districts now ‘front runners’ in development goals: Niti report

Media Coverage

Most NE districts now ‘front runners’ in development goals: Niti report
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಗೌರವಗಳು
July 09, 2025

ಪ್ರಧಾನಿ ನರೇಂದ್ರ ಮೋದಿಯವರಿಗೆ ಹಲವಾರು ರಾಷ್ಟ್ರಗಳು ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿ ಗೌರವಿಸಿವೆ. ಈ ಮನ್ನಣೆಗಳು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೃಷ್ಟಿಯ ಪ್ರತಿಬಿಂಬವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಹೊರಹೊಮ್ಮುವಿಕೆಯನ್ನು ಬಲಪಡಿಸಿದೆ. ಇದು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ.

ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರಿಗೆ ನೀಡಿದ ಪ್ರಶಸ್ತಿಗಳನ್ನು ನೋಡೋಣ.

ದೇಶಗಳು ನೀಡುವ ಪ್ರಶಸ್ತಿಗಳು:

1. ಏಪ್ರಿಲ್ 2016 ರಲ್ಲಿ, ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೌದಿ ಅರೇಬಿಯಾದ ಅತ್ಯುನ್ನತ ನಾಗರಿಕ ಗೌರವ- ಕಿಂಗ್ ಅಬ್ದುಲ್ ಅಜೀಜ್ ಸಾಶ್ ಅನ್ನು ನೀಡಲಾಯಿತು. ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅವರು ಪ್ರಧಾನಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2. ಅದೇ ವರ್ಷ, ಪ್ರಧಾನಿ  ಮೋದಿಯವರಿಗೆ ಅಫ್ಘಾನಿಸ್ತಾನದ ಅತ್ಯುನ್ನತ ನಾಗರಿಕ ಗೌರವವಾದ ಘಾಜಿ ಅಮೀರ್ ಅಮಾನುಲ್ಲಾ ಖಾನ್ ಅವರ ರಾಜ್ಯ ಆದೇಶವನ್ನು ನೀಡಲಾಯಿತು.

3. 2018 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್‌ಗೆ ಐತಿಹಾಸಿಕ ಭೇಟಿ ನೀಡಿದಾಗ, ಅವರಿಗೆ ಗ್ರ್ಯಾಂಡ್ ಕಾಲರ್ ಆಫ್ ಸ್ಟೇಟ್ ಆಫ್ ಪ್ಯಾಲೆಸ್ಟೈನ್ ಪ್ರಶಸ್ತಿಯನ್ನು ನೀಡಲಾಯಿತು. ಇದು ವಿದೇಶಿ ಗಣ್ಯರಿಗೆ ನೀಡುವ ಪ್ಯಾಲೆಸ್ತೀನ್‌ನ ಅತ್ಯುನ್ನತ ಗೌರವವಾಗಿದೆ.

4. 2019 ರಲ್ಲಿ, ಪ್ರಧಾನ ಮಂತ್ರಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿಯನ್ನು ನೀಡಲಾಯಿತು. ಇದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯುನ್ನತ ನಾಗರಿಕ ಗೌರವವಾಗಿದೆ.

5. ರಷ್ಯಾವು ಪ್ರಧಾನಿ ಮೋದಿಯವರಿಗೆ ತಮ್ಮ ಅತ್ಯುನ್ನತ ನಾಗರಿಕ ಗೌರವ - 2019 ರಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಪ್ರಶಸ್ತಿಯನ್ನು ನೀಡಿತು.

6. ಆರ್ಡರ್ ಆಫ್ ದಿ ಡಿಸ್ಟಿಂಗ್ವಿಶ್ಡ್ ರೂಲ್ ಆಫ್ ನಿಶಾನ್ ಇಝುದ್ದೀನ್- ವಿದೇಶಿ ಗಣ್ಯರಿಗೆ ನೀಡಲಾಗುವ ಮಾಲ್ಡೀವ್ಸ್‌ನ ಅತ್ಯುನ್ನತ ಗೌರವವನ್ನು 2019 ರಲ್ಲಿ ಪ್ರಧಾನಿ ಮೋದಿಯವರಿಗೆ ನೀಡಲಾಯಿತು.

7. ಪ್ರಧಾನಿ ಮೋದಿ ಅವರು 2019 ರಲ್ಲಿ ಪ್ರತಿಷ್ಠಿತ ಕಿಂಗ್ ಹಮದ್ ಆರ್ಡರ್ ಆಫ್ ರಿನೈಸಾನ್ಸ್ ಅನ್ನು ಪಡೆದರು. ಈ ಗೌರವವನ್ನು ಬಹ್ರೇನ್ ನೀಡಿತು.

8. ಯುಎಸ್ ಸರ್ಕಾರದಿಂದ ಲೀಜನ್ ಆಫ್ ಮೆರಿಟ್, ಅತ್ಯುತ್ತಮ ಸೇವೆಗಳು ಮತ್ತು ಸಾಧನೆಗಳ ಕಾರ್ಯಕ್ಷಮತೆಯಲ್ಲಿ ಅಸಾಧಾರಣವಾದ ಅರ್ಹತೆಯ ನಡವಳಿಕೆಗಾಗಿ ನೀಡಲಾಗುವ ಯುನೈಟೆಡ್ ಸ್ಟೇಟ್ಸ್ ಸಶಸ್ತ್ರ ಪಡೆಗಳ ಪ್ರಶಸ್ತಿಯನ್ನು 2020 ರಲ್ಲಿ ಪಿಎಂ ಮೋದಿಯವರಿಗೆ ನೀಡಲಾಯಿತು.

9. ಡಿಸೆಂಬರ್ 2021 ರಲ್ಲಿ ಭೂತಾನ್ ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಅಲಂಕಾರ, ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ನೀಡಿ ಗೌರವಿಸಿದೆ
 
ಅತ್ಯುನ್ನತ ನಾಗರಿಕ ಗೌರವಗಳ ಹೊರತಾಗಿ,  ಪ್ರಧಾನಿ   ಮೋದಿಯವರಿಗೆ ಪ್ರಪಂಚದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ನೀಡಲಾಗಿದೆ.

1. ಸಿಯೋಲ್ ಶಾಂತಿ ಪ್ರಶಸ್ತಿ: ಮನುಕುಲದ ಸಾಮರಸ್ಯ, ರಾಷ್ಟ್ರಗಳ ನಡುವಿನ ಸಮನ್ವಯ ಮತ್ತು ವಿಶ್ವ ಶಾಂತಿಗೆ ಕೊಡುಗೆಗಳ ಮೂಲಕ ತಮ್ಮ ಛಾಪು ಮೂಡಿಸಿದ ವ್ಯಕ್ತಿಗಳಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಧಾನಿ ಮೋದಿ ಅವರಿಗೆ 2018 ರಲ್ಲಿ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.

2. ಯುಎನ್ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ: ಇದು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾಗಿದೆ. 2018 ರಲ್ಲಿ, ಜಾಗತಿಕ ವೇದಿಕೆಯಲ್ಲಿ ಅವರ ದಿಟ್ಟ ಪರಿಸರ ನಾಯಕತ್ವಕ್ಕಾಗಿ ಯುಎನ್ ಪ್ರಧಾನಿ ಮೋದಿಯನ್ನು ಗುರುತಿಸಿತು.

3. ಮೊದಲ ಬಾರಿಗೆ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿಯನ್ನು 2019 ರಲ್ಲಿ ಪ್ರಧಾನಿ ಮೋದಿ ಅವರಿಗೆ ನೀಡಲಾಯಿತು. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ರಾಷ್ಟ್ರದ ನಾಯಕನಿಗೆ ನೀಡಲಾಗುತ್ತದೆ. ಪ್ರಧಾನಿ ಮೋದಿಯವರು "ರಾಷ್ಟ್ರಕ್ಕೆ ಅತ್ಯುತ್ತಮ ನಾಯಕತ್ವ" ಕ್ಕಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಶಸ್ತಿಯ ಉಲ್ಲೇಖವು ಹೇಳಿದೆ.

4. 2019 ರಲ್ಲಿ, ಪ್ರಧಾನಿ ಮೋದಿಯವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ 'ಗ್ಲೋಬಲ್ ಗೋಲ್‌ಕೀಪರ್' ಪ್ರಶಸ್ತಿಯನ್ನು ನೀಡಲಾಯಿತು. ಸ್ವಚ್ಛ ಭಾರತ ಅಭಿಯಾನವನ್ನು "ಜನರ ಆಂದೋಲನ" ಆಗಿ ಪರಿವರ್ತಿಸಿದ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಭಾರತೀಯರಿಗೆ ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಅರ್ಪಿಸಿದರು.

5. 2021 ರಲ್ಲಿ, ಪ್ರಧಾನಿ ಮೋದಿಯವರಿಗೆ ಸ್ವಚ್ಛ ಭಾರತ ಅಭಿಯಾನಕ್ಕಾಗಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ 'ಗ್ಲೋಬಲ್ ಗೋಲ್‌ಕೀಪರ್' ಪ್ರಶಸ್ತಿಯನ್ನು ನೀಡಲಾಯಿತು. ಸ್ವಚ್ಛ ಭಾರತ ಅಭಿಯಾನವನ್ನು "ಜನರ ಆಂದೋಲನ" ಆಗಿ ಪರಿವರ್ತಿಸಿದ ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಭಾರತೀಯರಿಗೆ ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಅರ್ಪಿಸಿದರು.