ಶೇರ್
 
Comments

“ಯುವಜನರು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯನ್ನು ಬಳೆಸಿಕೊಳ್ಳುವಂತೆ ಮಾಡಲು ಇದು ಸಕಾಲ. ಅದಕ್ಕಾಗಿ ನಾವು ವಿಜ್ಞಾನದ ಇತಿಹಾಸದ ಬಗ್ಗೆ ಮತ್ತು ಐತಿಹ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ’’ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ಸಾಗರೋತ್ತರ ಮತ್ತು ಭಾರತೀಯ ವಿಜ್ಞಾನಿಗಳು ಹಾಗೂ ಶೈಕ್ಷಣಿಕ ತಜ್ಞರ ಜಾಗತಿಕ ವರ್ಚ್ಯವಲ್ ಶೃಂಗಸಭೆ- ವೈಶ್ವಿಕ್ ಭಾರತೀಯ ವೈಜ್ಞಾನಿಕ (ವೈಭವ) ಉದ್ಘಾಟಿಸಿ ಮಾತನಾಡಿದರು.

 “ವೈಭವ್ ಶೃಂಗಸಭೆ-2020 ಭಾರತ ಮತ್ತು ಜಗತ್ತಿನ ವಿಜ್ಞಾನ ಮತ್ತು ಆವಿಷ್ಕಾರದ ಆಚರಣೆಯಾಗಿದೆ. ಇದನ್ನು ನಾವು ಶ್ರೇಷ್ಠ ಬುದ್ದಿಜೀವಿಗಳ ನೈಜ ಸಮಾಗಮ ಎಂದು ಹೇಳ ಬಯಸುತ್ತೇನೆ, ಇದರ ಮೂಲಕ ನಮ್ಮ ಭೂಮಿ ಮತ್ತು ಭಾರತದ ಸಬಲೀಕರಣಕ್ಕೆ ನಾವೆಲ್ಲಾ ಕುಳಿತು ಚಿಂತನೆ ನಡೆಸಲು ಇಲ್ಲಿ ಸೇರಿದ್ದೇವೆ’’ಎಂದು ಹೇಳಿದರು. 

 “ಸಾಮಾಜಿಕ-ಆರ್ಥಿಕ ಬದಲಾವಣೆಗೆ ವಿಜ್ಞಾನ ಅತ್ಯಂತ ಪ್ರಮುಖವಾಗಿ ಬೇಕಾಗಿದೆ, ಹಾಗಾಗಿ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಹಲವು ಮಹತ್ವದ ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡಿದೆ’’ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು.

ಭಾರತ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ ಮತ್ತು ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲೂ ಸಹ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಅವರು, ಲಸಿಕೆ ಅಭಿವೃದ್ಧಿಯಲ್ಲಿ ದೀರ್ಘಾವಧಿ ಸಮಯ ಮುರಿದುಬಿದ್ದಿದೆ, 2014ರಲ್ಲಿಯೇ ನಮ್ಮ ಲಸಿಕೆ ಕಾರ್ಯಕ್ರಮಕ್ಕಾಗಿ ನಾವು ಹೊಸ ನಾಲ್ಕು ಲಸಿಕೆಗಳನ್ನು ಪರಿಚಯಿಸಿದ್ದೆವು. ಇದರಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿಸಿದ ರೋಟಾ ಲಸಿಕೆಯೂ ಸೇರಿದೆ ಎಂದರು.

ಜಾಗತಿಕವಾಗಿ 2030ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಲಾಗಿದೆ, ಆದರೆ ಭಾರತ ಅದಕ್ಕಿಂತ ಐದು ವರ್ಷ ಮುಂಚಿತವಾಗಿಯೇ, 2025ರವೇಳೆಗೆ ಕ್ಷಯರೋಗ ನಿರ್ಮೂಲನೆ ಮಾಡುವ ಮಹತ್ವದ ಗುರಿಯನ್ನು ಹೊಂದಿದೆ ಎಂದವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೂರು ದಶಕಗಳ ನಂತರ ದೇಶವ್ಯಾಪಿ ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಗಳ ನಂತರ ನೀತಿಯನ್ನು ರೂಪಿಸಲಾಗಿದೆ. ಈ ನೀತಿ ವಿಜ್ಞಾನದ ಬಗೆಗೆ ಕುತೂಹಲವನ್ನು ಹುಟ್ಟಿಸಲಿದೆ ಮತ್ತು ವೈಜ್ಞಾನಿಕ ಸಂಶೋಧನೆಗೆ ಅಗತ್ಯವಾದ ಉತ್ತೇಜನವನ್ನು ನೀಡಲಿದೆ. ನೀತಿ ಯುವ ಪ್ರತಿಭೆಗಳನ್ನು ಪೋಷಿಸಲು ಮುಕ್ತ ಹಾಗೂ ವಿಸ್ತಾರವಾದ ವಾತಾವರಣವನ್ನು ಸೃಷ್ಟಿಸಲಿದೆ ಎಂದರು.

 ಭಾರತದಲ್ಲಿ ಬಾಹ್ಯಾಕಾಶ ವಲಯುದಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, ಇವು ಉದ್ಯಮ ಮತ್ತು ಶೈಕ್ಷಣಿಕ ವಲಯದಲ್ಲಿ ಭಾರಿ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಲೇಸರ್ ಇನ್ ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ ವೇಟರಿ – ಸಿಇಆರ್ ಎನ್ ಮತ್ತು ಅಂತಾರಾಷ್ಟ್ರೀಯ ಥರ್ಮೋ ನ್ಯೂಕ್ಲಿಯರ್ ಪ್ರಯೋಗಾತ್ಮಕ ರಿಯಾಕ್ಟರ್(ಐಟಿಇಆರ್) ಜೊತೆ ಭಾರತ ಪಾಲುದಾರಿಕೆ ಮಾಡಿಕೊಂಡು, ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಪ್ರಧಾನಿ ಉಲ್ಲೇಖಿಸಿದರು.

ಭಾರತದಲ್ಲಿ 25ಕ್ಕೂ ಅಧಿಕ ತಾಂತ್ರಿಕ ಅನ್ವೇಷಣಾ ತಾಣಗಳು ಆರಂಭವಾಗಿವೆ ಮತ್ತು ಇದರಿಂದ ನವೋದ್ಯಮ ವ್ಯವಸ್ಥೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.

ರೈತರಿಗೆ ಸಹಾಯ ಮಾಡಲು ಭಾರತದಲ್ಲಿ ಉನ್ನತ ಗುಣಮಟ್ಟದ ಸಂಶೋಧನೆ ಆಗಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಅವರು ಹೇಳಿದರು. ಆಹಾರಧಾನ್ಯಗಳು ಮತ್ತು ಬೇಳೆಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಭಾರತೀಯ ವಿಜ್ಞಾನಿಗಳು ಸಂಶೋಧನೆಗಳನ್ನು ಕೈಗೊಂಡಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ಪ್ರಗತಿಯಾದರೆ, ವಿಶ್ವದ ಏಳಿಗೆಯಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಈ ವೈಭವ್ ಶೃಂಗಸಭೆ ಸಂಪರ್ಕ ಮತ್ತು ಕೊಡುಗೆ ನೀಡುವ ಶ್ರೇಷ್ಠ ಅವಕಾಶವನ್ನು ಒದಗಿಸಲಿದೆ. ಭಾರತ ಏಳಿಗೆಯಾದರೆ ವಿಶ್ವವೂ ಕೂಡ ಅದರಿಂದ ಮುಂದೆ ಸಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವೈಭವ್ ಶ್ರೇಷ್ಠ ಬುದ್ಧಿಜೀವಿಗಳ ಸಮ್ಮಿಲನ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಈ ಪ್ರಯತ್ನಗಳಿಂದಾಗಿ ಆದರ್ಶ ಸಂಶೋಧನಾ ಪೂರಕ ವ್ಯವಸ್ಥೆ ಸೃಷ್ಟಿಗೆ ನೆರವಾಗಲಿದೆ, ಅಭ್ಯುದಯಕ್ಕಾಗಿ ಸಂಪ್ರದಾಯವನ್ನು ಆಧುನಿಕತೆ ಜೊತೆ ಬೆಸೆಯಲು ಸಹಕಾರಿಯಾಗಲಿದೆ. ಈ ವಿನಿಮಯಗಳು ಖಂಡಿತವಾಗಿಯೂ ಉಪಕಾರಿಯಾಗಲಿವೆ ಮತ್ತು ಸಂಶೋಧನೆ ಮತ್ತು ಬೋಧನೆಯಲ್ಲಿ ಉಪಯುಕ್ತ ಸಹಭಾಗಿತ್ವವನ್ನು ಹೊಂದಲು ನೆರವಾಗಲಿದೆ. ವಿಜ್ಞಾನಿಗಳು ಮತ್ತು ಸಂಶೋಧಕರ ಈ ಪ್ರಯತ್ನಗಳು ಆದರ್ಶ ಸಂಶೋಧನಾ ಪೂರಕ ವ್ಯವಸ್ಥೆ ಸೃಷ್ಟಿಗೆ ಸಹಕಾರಿಯಾಗಲಿದೆ.

ಜಾಗತಿಕ ವೇದಿಕೆಗಳಲ್ಲಿ ಅನಿವಾಸಿ ಭಾರತೀಯರು ಭಾರತದ ಅತ್ಯುತ್ತಮ ರಾಯಭಾರಿಗಳಾಗಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಮುಂದಿನ ತಲೆಮಾರಿಗೆ ಸುರಕ್ಷಿತ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣದ ಕನಸು ನನಸಾಗುವ ನಿಟ್ಟಿನಲ್ಲಿ ಮುನ್ನಡೆಯಲು ಈ ಶೃಂಗಸಭೆ ಸಹಕಾರಿಯಾಗಲಿದೆ. ನಮ್ಮ ರೈತರಿಗೆ ಸಹಾಯ ಮಾಡಲು ಅಗ್ರ ದರ್ಜೆಯ ವೈಜ್ಞಾನಿಕ ಸಂಶೋಧನೆ ನಡೆಯಬೇಕು ಎಂದು ಭಾರತ ಬಯಸುತ್ತದೆ. ಈ ಶೃಂಗಸಭೆ ಬೋಧನೆ ಮತ್ತು ಸಂಶೋಧನೆಯಲ್ಲಿ ಉಪಯುಕ್ತ ಸಹಭಾಗಿತ್ವಕ್ಕೆ ಕಾರಣವಾಗಲಿದೆ. ಅನಿವಾಸಿ ಭಾರತೀಯರು ಆದರ್ಶ ಸಂಶೋಧನಾ ವ್ಯವಸ್ಥೆ ಸೃಷ್ಟಿಸಲು ನೆರವಾಗಲಿದೆ ಎಂದರು.

ಈ ವೈಭವ್ ಶೃಂಗಸಭೆಯಲ್ಲಿ 3000 ಸಾಗರೋತ್ತರ ಭಾರತೀಯ ಮೂಲದ ಶಿಕ್ಷಣ ತಜ್ಞರು ಮತ್ತು 55 ರಾಷ್ಟ್ರಗಳ ವಿಜ್ಞಾನಿಗಳು ಹಾಗೂ ಭಾರತದ 10,000 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದು, 200 ಭಾರತೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಇದನ್ನು ಆಯೋಜಿಸಲಾಗಿದೆ. ಸುಮಾರು 40 ರಾಷ್ಟ್ರಗಳ 700 ವಿದೇಶಿ ಸಂಪನ್ಮೂಲ ವ್ಯಕ್ತಿಗಳು ಮತ್ತು ಭಾರತೀಯ ಶೈಕ್ಷಣಿಕ ವಲಯದ ಗಣ್ಯರು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ 629 ಸ್ಥಳೀಯ ತಜ್ಞರು ಸುಮಾರು 18 ವಿಭಿನ್ನ ವೇದಿಕೆಗಳಲ್ಲಿ 80ಕ್ಕೂ ಅಧಿಕ ವಿಷಯಗಳ ಕುರಿತ 213 ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್ 3 ರಿಂದ ಅಕ್ಟೋಬರ್ 25ರ ವರೆಗೆ ನಡೆಯಲಿರುವ ಈ ಸಮಾಲೋಚನೆಗಳು ಅಕ್ಟೋಬರ್ 28ಕ್ಕೆ ಮುಕ್ತಾಯಗೊಳ್ಳಲಿವೆ. ಈ ಶೃಂಗಸಭೆ 2020ರ ಅಕ್ಟೋಬರ್ 31ರಂದು ಅಂದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿಯಂದು ಸಮಾಪನಗೊಳ್ಳಲಿದೆ. ಈ ಉಪಕ್ರಮದಡಿ ಸಾಗರೋತ್ತರ ತಜ್ಞರು ಮತ್ತು ಭಾರತೀಯ ಸಹವರ್ತಿಗಳ ನಡುವೆ ತಿಂಗಳೀಡಿ ಸರಣಿ ವೆಬಿನಾರ್ ಗಳು, ವಿಡಿಯೋ ಕಾನ್ಫರೆನ್ಸ್ ಗಳು ಹಾಗೂ ಬಹುಹಂತದ ಸಮಾಲೋಚನೆಗಳು ಒಳಗೊಂಡಿವೆ.

ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು. ಇಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ಕಂಪ್ಯುಟೇಶನಲ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಕ್ವಾಂಟಮ್ ತಂತ್ರಜ್ಞಾನ, ಫೋಟೋನಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕೃಷಿ, ವಸ್ತು ಮತ್ತು ಸಂಸ್ಕರಣಾ ತಂತ್ರಜ್ಞಾನ, ಆಧುನಿಕ ಉತ್ಪಾದನಾ ತಂತ್ರಜ್ಞಾನ, ಭೂವಿಜ್ಞಾನ, ಇಂಧನ, ಪರಿಸರ ವಿಜ್ಞಾನ ಮತ್ತು ನಿರ್ವಹಣಾ ವಿಷಯಗಳು ಸೇರಿವೆ. ಈ ಶೃಂಗಸಭೆಯ ಉದ್ದೇಶ ಜಾಗತಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ಜಾಗತಿಕ ಭಾರತೀಯ ಸಂಶೋಧಕರ ಜ್ಞಾನ ಮತ್ತು ಅನುಭವವನ್ನು ಪಡೆದು, ಸಮಗ್ರ ನೀಲನಕ್ಷೆಯನ್ನು ರೂಪಿಸುವುದಾಗಿದೆ. ಈ ಶೃಂಗಸಭೆ ಭಾರತ ಮತ್ತು ವಿದೇಶದಲ್ಲಿನ ವಿಜ್ಞಾನಿಗಳು ಹಾಗೂ ಶೈಕ್ಷಣಿಕ ವಲಯದೊಂದಿಗೆ ಸಹಭಾಗಿತ್ವ ಮತ್ತು ಸಹಕಾರವನ್ನು ಪ್ರತಿಬಿಂಬಿಸಲಿದೆ. ಇದರ ಗುರಿ ಜಾಗತಿಕ ಜನಸಂಪರ್ಕದ ಮೂಲಕ ದೇಶದಲ್ಲಿ ಜ್ಞಾನ ಮತ್ತು ಆವಿಷ್ಕಾರಕ್ಕೆ ಪೂರಕ ವ್ಯವಸ್ಥೆ ಸೃಷ್ಟಿಸುವುದು.

ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ|| ಕೆ. ವಿಜಯರಾಘವನ್ ಮತ್ತು ನಾನಾ ದೇಶಗಳ 16 ವಿದೇಶಿ ಸಂಪನ್ಮೂಲ ತಜ್ಞರು ಅಂದರೆ ಅಮೆರಿಕ, ಜಪಾನ್, ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಸಿಂಗಾಪುರ, ಕೊರಿಯಾ ಗಣರಾಜ್ಯ, ಬ್ರೆಜಿಲ್ ಮತ್ತು ಸ್ವಿಜ್ಜರ್ ಲ್ಯಾಂಡ್ ಗಳ ತಜ್ಞರು ಭಾಗವಹಿಸಿದ್ದರು. ಹಾಗೂ ಕಂಪ್ಯೂಟಿಂಗ್ ಮತ್ತು ಕಮ್ಯುನಿಕೇಶನ್, ಸೊನೊ ಕೆಮಿಸ್ಟ್ರಿ, ಹೈ ಎನರ್ಜಿ ಫಿಜಿಕ್ಸ್, ಉತ್ಪಾದನಾ ತಂತ್ರಜ್ಞಾನ, ನಿರ್ವಹಣೆ, ಭೂವಿಜ್ಞಾನ, ಹವಾಮಾನ ವೈಪರೀತ್ಯ, ಸೂಕ್ಷ್ಮ ಜೀವಶಾಸ್ತ್ರ, ಐಟಿ ಭದ್ರತೆ, ನ್ಯಾನೋ ಸಾಮಗ್ರಿ, ಸ್ಮಾರ್ಟ್ ವಿಲೇಜ್ ಮತ್ತು ಮ್ಯಾಥಮೆಟಿಕಲ್ ವಿಜ್ಞಾನ ಮತ್ತಿತರ ವಿಷಯಗಳ ಬಗ್ಗೆ ಉದ್ಘಾಟನಾ ಗೋಷ್ಠಿಯಲ್ಲಿ ಪ್ರಧಾನಮಂತ್ರಿಗಳೊಂದಿಗೆ ಚರ್ಚಿಸಲಾಯಿತು.

Pariksha Pe Charcha with PM Modi
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Riding on direct payment, Punjab wheat procurement hits new high

Media Coverage

Riding on direct payment, Punjab wheat procurement hits new high
...

Nm on the go

Always be the first to hear from the PM. Get the App Now!
...
PM condoles demise of Shri Sunil Jain
May 15, 2021
ಶೇರ್
 
Comments

The Prime Minister, Shri Narendra Modi has expressed deep grief over the demise of Noted Journalist Shri Sunil Jain. 

In a tweet, the Prime Minister said : 

"You left us too soon, Sunil Jain. I will miss reading your columns and hearing your frank as well as insightful views on diverse matters. You leave behind an inspiring range of work. Journalism is poorer today, with your sad demise. Condolences to family and friends. Om Shanti."