ಉದ್ಯೋಗ ಸೃಷ್ಟಿ, ನಾವೀನ್ಯತೆ ಮತ್ತು ಆರ್ಥಿಕ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ಸಬಲೀಕರಣಗೊಳಿಸುವ ಸರ್ಕಾರದ ದೃಢ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪುನರುಚ್ಚರಿಸಿದ್ದಾರೆ. ಹಲವಾರು ವರ್ಷಗಳಲ್ಲಿ, MSME ಗಳಿಗೆ ಸಾಲ ಪಡೆಯುವ ಪ್ರಕ್ರಿಯೆಯನ್ನು ಸರಾಗಗೊಳಿಸಲು, ಮಾರುಕಟ್ಟೆ ಸಂಪರ್ಕಗಳನ್ನು ವಿಸ್ತರಿಸಲು ಮತ್ತು ಕಾರ್ಯಾಚರಣೆಯ ಹೊರೆಗಳನ್ನು ಕಡಿಮೆ ಮಾಡಲು ಸರ್ಕಾರವು ಹಲವಾರು ಸುಧಾರಣೆಗಳನ್ನು ಪರಿಚಯಿಸಿದೆ ಎಂದು ಅವರು ಹೇಳಿದರು. #NextGenGST ಉಪಕ್ರಮದ ಅಡಿಯಲ್ಲಿ ಇತ್ತೀಚಿನ GST ಸುಧಾರಣೆಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ.
ಎಕ್ಸ ನಲ್ಲಿ ಶ್ರೀ ಶ್ಯಾಮ್ ಶೇಖರ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು:
“MSMEಗಳು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಉದ್ಯೋಗಗಳನ್ನು ಸೃಷ್ಟಿಸಿ, ಬೆಳವಣಿಗೆಯನ್ನು ಹೆಚ್ಚಿಸುತ್ತವೆ.
ಸುಲಭ ಸಾಲದಿಂದ ಹಿಡಿದು ವಿಶಾಲ ಮಾರುಕಟ್ಟೆ ಪ್ರವೇಶದವರೆಗೆ, ಪ್ರತಿಯೊಂದು ಸುಧಾರಣೆಯು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಇತ್ತೀಚಿನ GST ಬದಲಾವಣೆಗಳು ದರಗಳನ್ನು ತರ್ಕಬದ್ಧಗೊಳಿಸಿ, ಅನುಸರಣೆಯನ್ನು ಸರಳೀಕರಿಸಿ, ಭಾರತದಾದ್ಯಂತ ಉದ್ಯಮಗಳನ್ನು ಉತ್ತೇಜಿಸುವ ಮೂಲಕ ಈ ಆವೇಗವನ್ನು ಹೆಚ್ಚಿಸುತ್ತವೆ" ಎಂದು ಹೇಳಿದ್ದಾರೆ.
#NextGenGST”
MSMEs are the backbone of our economy, creating jobs and driving growth.
— Narendra Modi (@narendramodi) September 4, 2025
From easier credit to wider market access, every reform has been aimed at strengthening small and medium businesses.
The latest GST changes build on this momentum by rationalising rates, simplifying… https://t.co/YKHiXWffUl


