ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ವೈದ್ಯಕೀಯ ವ್ಯಾನ್ ಗಳನ್ನು ಬಳಸುವ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.
ಉತ್ತರ ಪ್ರದೇಶದ ಕೌಶಾಂಬಿಯ ಸಂಸತ್ ಸದಸ್ಯ ಶ್ರೀ ವಿನೋದ್ ಸೋಂಕರ್ ಅವರು ವೈದ್ಯಕೀಯ ವ್ಯಾನ್ ಸಹಾಯದಿಂದ 2,47,500 ಕ್ಕೂ ಹೆಚ್ಚು ನಾಗರಿಕರ ಆರೋಗ್ಯ ತಪಾಸಣೆಯ ಬಗ್ಗೆ ಮಾಡಿರುವ ಟ್ವೀಟ್ ಎಳೆಯನ್ನು ಪ್ರಧಾನ ಮಂತ್ರಿ ಅವರು ಹಂಚಿಕೊಂಡಿದ್ದಾರೆ, ಅಲ್ಲಿ 25000+ ಜನರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಇದಕ್ಕೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು:
“अद्भुत प्रयास! जन सेवा के ऐसे अभियान विकास को नई गति देने वाले हैं।” ಎಂದು ಹೇಳಿದ್ದಾರೆ.
अद्भुत प्रयास! जन सेवा के ऐसे अभियान विकास को नई गति देने वाले हैं। https://t.co/4iupUQQHk4
— Narendra Modi (@narendramodi) March 23, 2023


