ಹ್ಯಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ 1500 ಮೀ-ಟಿ 11 ರಲ್ಲಿ ಬೆಳ್ಳಿ ಪದಕವನ್ನು ಗಳಿಸಿದ ಲಲಿತಾ ಕಿಲ್ಲಾಕ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಅವರ ಅಸಾಧಾರಣ ಸಾಧನೆ ಮತ್ತು ದೃಢತೆಯನ್ನು ಅವರು ಆಕೆಯ ಅಸಾಧಾರಣ ಸಾಧನೆ ಮತ್ತು ದೃಢತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
"ಮಹಿಳೆಯರ 1500ಮೀಟರ್-ಟಿ11 ಸ್ಪರ್ಧೆಯಲ್ಲಿ ಲಲಿತಾ ಕಿಲ್ಲಾಕ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿರುವುದರಿಂದ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅವರ ಅಸಾಧಾರಣ ಪ್ರದರ್ಶನ ಮತ್ತು ದೃಢ ನಿರ್ಧಾರವು ನಿಜವಾಗಿಯೂ ಶ್ಲಾಘನೀಯವಾಗಿದೆ. ಅವರು ಹೊಸ ಎತ್ತರಗಳನ್ನು ಸಾಧಿಸುತ್ತಿರಲಿ ಮತ್ತು ಇನ್ನಷ್ಟು ಸಾಧಿಸಲಿ!"
A moment of pride for India as Lalitha Killaka secures the Silver Medal in the Women's 1500m-T11. Her exceptional performance and steadfast determination are truly commendable. May she keep scaling new heights and achieving more! pic.twitter.com/4YVNH20mRI
— Narendra Modi (@narendramodi) October 25, 2023


