ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಲಾವಿ, ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಲ್ಲಿ ಫ್ರೆಡ್ಡಿ ಚಂಡಮಾರುತದಿಂದ ಉಂಟಾದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಮಲಾವಿ, ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಲ್ಲಿ ಫ್ರೆಡ್ಡಿ ಚಂಡಮಾರುತದಿಂದ ಉಂಟಾದ ವಿನಾಶದಿಂದ ದುಃಖಿತನಾಗಿದ್ದೇನೆ. ಅಧ್ಯಕ್ಷ @LAZARUSCHAKWERA, ಅಧ್ಯಕ್ಷ ಫಿಲಿಪ್ ನ್ಯೂಸಿ ಮತ್ತು ಅಧ್ಯಕ್ಷ @SE_Rajoelina ಅವರಿಗೆ, ದುಃಖಿತ ಕುಟುಂಬಗಳು ಮತ್ತು ಚಂಡಮಾರುತದಿಂದ ಬಾಧಿತರಾದವರಿಗೆ ಸಂತಾಪಗಳು. ಈ ಕಠಿಣ ಸಮಯದಲ್ಲಿ ಭಾರತ ನಿಮ್ಮೊಂದಿಗೆ ನಿಲ್ಲುತ್ತದೆ” ಎಂದು ಹೇಳಿದ್ದಾರೆ.
Distressed by the devastation due to Cyclone Freddy in Malawi, Mozambique and Madagascar. Condolences to President @LAZARUSCHAKWERA, President Filipe Nyusi and President @SE_Rajoelina, bereaved families and those affected by the cyclone. India stands with you in this tough time.
— Narendra Modi (@narendramodi) March 15, 2023


