ಹ್ಯಾಂಗ್ ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ 2022ರ ಪುರುಷರ 1500 ಮೀ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಜಿನ್ಸನ್ ಜಾನ್ಸನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ಕಂಚಿನೊಂದಿಗೆ ಶ್ರೇಷ್ಠತೆ ಮೆರೆದಿದ್ದಾರೆ! ಪುರುಷರ 1500 ಮೀ ಫೈನಲ್ ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಜಿನ್ಸನ್ ಜಾನ್ಸನ್ ಅವರಿಗೆ ಅಭಿನಂದನೆಗಳು. ಅವರು ಯಾವಾಗಲೂ ಕ್ರೀಡಾವೈಭವದ ಹೊಸ ಎತ್ತರಗಳನ್ನು ಏರಲಿ. ”
Excelling on the grand stage with a Bronze! Huge applause to @JinsonJohnson5 for an outstanding performance in Men's 1500m Finals. May he always scale new heights of glory. pic.twitter.com/EFbxRnJmsO
— Narendra Modi (@narendramodi) October 1, 2023





