ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಲಿಯ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವರಾದ ಶ್ರೀ ಆಂಟೋನಿಯೊ ತಜಾನಿ ಅವರನ್ನು ಭೇಟಿ ಮಾಡಿದರು.
ಉಭಯ ನಾಯಕರ ಸಭೆಯ ಸಂದರ್ಭದಲ್ಲಿ, ಇಟಲಿ-ಭಾರತ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029ರ ಅನುಷ್ಠಾನಕ್ಕೆ ಎರಡೂ ಕಡೆಯವರು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳಿಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಚರ್ಚೆಗಳು ವ್ಯಾಪಾರ, ಹೂಡಿಕೆ, ಸಂಶೋಧನೆ, ನಾವೀನ್ಯತೆ, ರಕ್ಷಣೆ, ಬಾಹ್ಯಾಕಾಶ, ಸಂಪರ್ಕ, ಭಯೋತ್ಪಾದನೆ ನಿಗ್ರಹ, ಶಿಕ್ಷಣ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡಿವೆ.
ಎಕ್ಸ್ ತಾಣದ ಸಂದೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
"ಇಟಲಿಯ ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವರಾದ ಶ್ರೀ ಆಂಟೋನಿಯೊ ತಜಾನಿ ಅವರನ್ನು ಇಂದು ಭೇಟಿಯಾಗಲು ಸಂತೋಷವಾಯಿತು. ವ್ಯಾಪಾರ, ಹೂಡಿಕೆ, ಸಂಶೋಧನೆ, ನಾವೀನ್ಯತೆ, ರಕ್ಷಣೆ, ಬಾಹ್ಯಾಕಾಶ, ಸಂಪರ್ಕ, ಭಯೋತ್ಪಾದನೆ ನಿಗ್ರಹ, ಶಿಕ್ಷಣ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಇಟಲಿ-ಭಾರತ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029 ಅನುಷ್ಠಾನಕ್ಕೆ ಎರಡೂ ಕಡೆಯವರು ತೆಗೆದುಕೊಂಡಿರುವ ಪೂರ್ವಭಾವಿ ಕ್ರಮಗಳಿಗೆ ಉಭಯ ನಾಯಕರೂ ಮೆಚ್ಚುಗೆ ವ್ಯಕ್ತಪಡಿಸಿದೆವು.
ಭಾರತ-ಇಟಲಿ ಸ್ನೇಹವು ಬಲಗೊಳ್ಳುತ್ತಲೇ ಇದೆ, ಇದು ನಮ್ಮ ಜನರಿಗೆ ಮತ್ತು ಜಾಗತಿಕ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.
@GiorgiaMeloni
@Antonio_Tajani ”
Lieto di aver incontrato oggi il Vice Primo Ministro e Ministro degli Affari Esteri e della Cooperazione Internazionale dell’Italia, Antonio Tajani. Ho espresso apprezzamento per le misure proattive adottate da entrambe le parti per l'attuazione del Piano d'Azione Strategico… pic.twitter.com/ZNozUwumv7
— Narendra Modi (@narendramodi) December 10, 2025




