ಬುದ್ಧ ಜಯಂತಿ ಅಂಗವಾಗಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.

ಅವರು ಸಾರೋನಾಥದ ಕೇಂದ್ರೀಯ ಉನ್ನತ ಟಿಬೆಟಿಯನ್ ಅಧ್ಯಯನ ಕೇಂದ್ರ ಮತ್ತು ಬೋಧ್ ಗಯಾದ ಅಖಿಲ ಭಾರತ ಬಿಕ್ಕು(ಭಿಕ್ಷು) ಸಂಘಕ್ಕೆ ವಿಶಾಖ ಸಮ್ಮಾನ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತ ವಿಶಿಷ್ಟ ಪರಂಪರೆಯ ನೆಲೆವೀಡು ಮತ್ತು ಇಲ್ಲಿನ ಶ್ರೇಷ್ಠ ಚಿಂತನೆಗಳಿಂದ ಸದಾ ಮನುಕುಲಕ್ಕೆ ಒಳಿತಾಗಿದೆ ಎಂದರು. ಬುದ್ಧನ ಬೋಧನೆಗಳು ಹಲವು ರಾಷ್ಟ್ರಗಳಿಗೆ ಸ್ಪಷ್ಟ ರೂಪ ನೀಡಿವೆ. ಭಾರತ ಎಂದೆಂದೂ ಆಕ್ರಮಣಶೀಲವಾಗಿರಲಿಲ್ಲ ಎಂದರು.

ಬುದ್ಧ ದೇವ ನೀಡಿದ ಅಷ್ಟ ಮಾರ್ಗದ ಕುರಿತು ಪ್ರಧಾನಮಂತ್ರಿಗಳು ಮಾತನಾಡಿದರು ಮತ್ತು ಈ ಮಾರ್ಗಗಳನ್ನು ಅನುಸರಿಸುವ ಮೂಲಕ ನಾವು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಂದ ಹೊರಬರಬಹುದಾಗಿದೆ ಎಂದರು.

ಬುದ್ಧನ ಪ್ರೀತಿ ಮತ್ತು ಅನುಕಂಪದ ಸಂದೇಶದಿಂದ ಇಂದಿನ ಜಗತ್ತು ಸಾಕಷ್ಟು ಪ್ರಯೋಜನ ಪಡೆದು ಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ ಯಾರು ಯಾರು ಬುದ್ಧನನ್ನು ನಂಬುತ್ತಾರೋ, ಅಂತಹವರು ಶ್ರೇಷ್ಠ ಉದ್ದೇಶಕ್ಕಾಗಿ ಎಲ್ಲರೂ ತಮ್ಮ ಸಾಮರ್ಥ್ಯವನ್ನು ಒಗ್ಗೂಡಿಸಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು.

 

ಬುದ್ಧದೇವ ಹಾಕಿಕೊಟ್ಟ ಸಹಾನುಭೂತಿ ಮಾರ್ಗದಲ್ಲಿ ತಮ್ಮ ಸರ್ಕಾರ ಜನರಿಗಾಗಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಕೇಂದ್ರ ಸರ್ಕಾರ ಬುದ್ಧನ ಪರಂಪರೆಯ ಭಾಗವೂ ಸೇರಿದಂತೆ ಭಾರತದ  ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ವಿಸ್ತೃತ ಮುನ್ನೋಟದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಬುದ್ಧನ ಸರ್ಕೀಟ್ ಅಭಿವೃದ್ಧಿಗೆ 360 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ 2022ರ ವೇಳೆಗೆ ನವಭಾರತ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನು ನೀಡುವಂತೆ ಪ್ರಧಾನಮಂತ್ರಿ ಸಭಿಕರನ್ನು ಕೋರಿದರು. ಆ ಗಡುವಿನೊಳಗೆ ಕನಸು ನನಸು ಮಾಡಿಕೊಳ್ಳಲು ಪ್ರತಿಯೊಬ್ಬರು ತಾವೇನು ಮಾಡಬೇಕು ಎಂಬುದನ್ನು ಗುರುತಿಸಿಕೊಳ್ಳುವಂತೆ ಅವರು ಕರೆ ನೀಡಿದರು.

 

Click here to read PM's speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Centre Earns Rs 800 Crore From Selling Scrap Last Month, More Than Chandrayaan-3 Cost

Media Coverage

Centre Earns Rs 800 Crore From Selling Scrap Last Month, More Than Chandrayaan-3 Cost
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ನವೆಂಬರ್ 2025
November 09, 2025

Citizens Appreciate Precision Governance: Welfare, Water, and Words in Local Tongues PM Modi’s Inclusive Revolution