ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ, ರೈಲ್ವೆ ಸಚಿವಾಲಯದ ಒಟ್ಟು 24,815 ಕೋಟಿ ರೂಪಾಯಿ (ಅಂದಾಜು) ವೆಚ್ಚದ 02 (ಎರಡು) ಯೋಜನೆಗಳಿಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಗಳೆಂದರೆ :

ಯೋಜನೆಯ ಹೆಸರು

ಮಾರ್ಗದ ಉದ್ದ (ಕಿಲೋ ಮೀಟರ್ ಗಳಲ್ಲಿ)

ಟ್ರ್ಯಾಕ್ ನ ಉದ್ದ (ಕಿಲೋಮೀಟರ್ ಗಳಲ್ಲಿ)  

ಪೂರ್ಣಗೊಳಿಸುವಾಗ ವೆಚ್ಚ (ರೂ. ಕೋಟಿಗಳಲ್ಲಿ)

ಗಾಜಿಯಾಬಾದ್-ಸೀತಾಪುರ 3ನೇ ಮತ್ತು  4ನೇ ಮಾರ್ಗ

403

859

14,926

ರಾಜಮಂಡ್ರಿ (ನಿಡಡಾವೊಲು-ವಿಶಾಖಪಟ್ಟಣಂ(ದುವ್ವಾಡ) 3ನೇ ಮತ್ತು  4ನೇ ಮಾರ್ಗ

 

198

 

458

 

9,889

ಒಟ್ಟು

601

1,317

24,815

ವರ್ಧಿತ ಮಾರ್ಗದ ಸಾಮರ್ಥ್ಯವು ಚಲನಶೀಲತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ ಭಾರತೀಯ ರೈಲ್ವೆಯ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಸುಧಾರಿಸುತ್ತದೆ. ಈ ಬಹು-ಟ್ರ್ಯಾಕಿಂಗ್ ಪ್ರಸ್ತಾಪಗಳು ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ದಟ್ಟಣೆಯನ್ನು ನಿವಾರಿಸಲು ಸಜ್ಜಾಗಿವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಇದು ಈ ಪ್ರದೇಶದ ಜನರನ್ನು ಸಮಗ್ರ ಅಭಿವೃದ್ಧಿಯ ಮೂಲಕ "ಆತ್ಮನಿರ್ಭರ" ರನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ / ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.

ಸಮಗ್ರ ಯೋಜನೆ ಮತ್ತು ಮಧ್ಯಸ್ಥಗಾರರ/ಭಾಗೀದಾರರ ಸಮಾಲೋಚನೆಗಳ ಮೂಲಕ ಬಹು-ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ದಕ್ಷತೆಯನ್ನು ಹೆಚ್ಚಿಸುವತ್ತ ಗಮನ ಹರಿಸುವ ಮೂಲಕ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯಡಿಯಲ್ಲಿ ಯೋಜನೆಗಳನ್ನು ಯೋಜಿಸಲಾಗಿದೆ. ಈ ಯೋಜನೆಗಳು ಜನರು, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.

ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳ 15 ಜಿಲ್ಲೆಗಳನ್ನು ಒಳಗೊಂಡ 02 (ಎರಡು) ಯೋಜನೆಗಳು ಭಾರತೀಯ ರೈಲ್ವೆಯ ಹಾಲಿ ಜಾಲವನ್ನು ಸುಮಾರು 601 ಕಿ.ಮೀ.ಗಳಷ್ಟು ಹೆಚ್ಚಿಸುತ್ತವೆ.

ಉದ್ದೇಶಿತ ಸಾಮರ್ಥ್ಯ ವರ್ಧನೆಯು ದೂಧೇಶ್ವರನಾಥ ದೇವಾಲಯ, ಗರ್ಮುಕ್ತೇಶ್ವರ ಗಂಗಾ ಘಾಟ್, ದರ್ಗಾ ಶಾ ವಿಲಾಯತ್ ಜಾಮಾ ಮಸೀದಿ (ಅಮ್ರೋಹಾ), ನೈಮಿಶಾರಣ್ಯ (ಸೀತಾಪುರ), ಅನ್ನಾವರಂ, ಅಂತರವೇದಿ, ದ್ರಾಕ್ಷಾರಾಮಂ ಸೇರಿದಂತೆ ದೇಶದ ಹಲವಾರು ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.

ಉದ್ದೇಶಿತ ಯೋಜನೆಗಳು ಕಲ್ಲಿದ್ದಲು, ಆಹಾರ ಧಾನ್ಯಗಳು, ಸಿಮೆಂಟ್, ಪಿಒಎಲ್, ಕಬ್ಬಿಣ ಮತ್ತು ಉಕ್ಕು, ಕಂಟೇನರ್, ರಸಗೊಬ್ಬರಗಳು, ಸಕ್ಕರೆ, ರಾಸಾಯನಿಕ ಲವಣಗಳು, ಸುಣ್ಣದ ಕಲ್ಲು ಮುಂತಾದ ಸರಕುಗಳ ಸಾಗಣೆಗೆ ಅವಶ್ಯವಾದ ಮಾರ್ಗಗಳಾಗಿವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿದ್ದು, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕಾರ್ಬನ್ ಡೈ ಆಕ್ಸೈಡ್ (180.31ಕೋಟಿ ಕಿ.ಗ್ರಾಂ) ಹೊರಸೂಸುವಿಕೆಯನ್ನುಕಡಿಮೆ ಮಾಡುತ್ತದೆ. ಇದು   7.33 ಕೋಟಿ ಗಿಡಗಳನ್ನು ನೆಡುವುದಕ್ಕೆ ಸಮನಾಗಿರುತ್ತದೆ.

ಗಾಜಿಯಾಬಾದ್ - ಸೀತಾಪುರ 3 ನೇ ಮತ್ತು 4 ನೇ ಮಾರ್ಗ (403 ಕಿ.ಮೀ)

  • ಗಾಜಿಯಾಬಾದ್ - ಸೀತಾಪುರವು ಚಾಲ್ತಿಯಲ್ಲಿರುವ ಡಬಲ್ ಲೈನ್ ವಿಭಾಗವಾಗಿದ್ದು, ದೆಹಲಿ-ಗುವಾಹಟಿ ಅತಿ ದಟ್ಟಣೆಯ ಜಾಲ(ಹೈ ಡೆನ್ಸಿಟಿ ನೆಟ್ವರ್ಕ್-ಎಚ್ ಡಿ ಎನ್ 4) ದ ಪ್ರಮುಖ ಭಾಗವಾಗಿದೆ
  • ದೇಶದ ಉತ್ತರ ಮತ್ತು ಪೂರ್ವ ವಲಯಗಳ  ನಡುವಿನ ಸಂಪರ್ಕವನ್ನು ಸುಧಾರಿಸಲು ಈ ಯೋಜನೆ ನಿರ್ಣಾಯಕವಾಗಿದೆ.
  • ಈ ಮಾರ್ಗದ ಅಸ್ತಿತ್ವದಲ್ಲಿರುವ ಸಾಮರ್ಥ್ಯದ ಬಳಕೆಯು ಶೇ.168 ರಷ್ಟಿದೆ ಮತ್ತು ಯೋಜನೆಯನ್ನು ಕೈಗೆತ್ತಿಕೊಳ್ಳದಿದ್ದರೆ ಶೇ.207 ರವರೆಗೆ ತಲುಪುವ  ನಿರೀಕ್ಷೆಯಿದೆ.
  • ಉತ್ತರ ಪ್ರದೇಶದ ಗಾಜಿಯಾಬಾದ್, ಹಾಪುರ್, ಅಮ್ರೋಹಾ, ಮೊರಾದಾಬಾದ್, ರಾಂಪುರ್, ಬರೇಲಿ, ಶಹಜಹಾನ್ಪುರ, ಲಖಿಂಪುರ್ ಖೇರಿ ಮತ್ತು ಸೀತಾಪುರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
  • ಈ ಯೋಜನಾ ಮಾರ್ಗವು ಪ್ರಮುಖ ಕೈಗಾರಿಕಾ ಕೇಂದ್ರಗಳಾದ ಗಾಜಿಯಾಬಾದ್ (ಯಂತ್ರೋಪಕರಣಗಳು, ಎಲೆಕ್ಟ್ರಾನಿಕ್ಸ್, ಔಷಧಗಳು), ಮೊರಾದಾಬಾದ್ (ಹಿತ್ತಾಳೆ ಮತ್ತು ಕರಕುಶಲ ವಸ್ತುಗಳು), ಬರೇಲಿ (ಪೀಠೋಪಕರಣಗಳು, ಜವಳಿ, ಎಂಜಿನಿಯರಿಂಗ್), ಶಹಜಹಾನ್ಪುರ (ಕಾರ್ಪೆಟ್ ಗಳು ಮತ್ತು ಸಿಮೆಂಟ್ ಸಂಬಂಧಿತ ಕೈಗಾರಿಕೆಗಳು) ಮತ್ತು ರೋಜಾ (ಶಾಖೋತ್ಪನ್ನ ವಿದ್ಯುತ್ ಸ್ಥಾವರ) ಮೂಲಕ ಹಾದುಹೋಗುತ್ತದೆ.
  • ಅಡೆ-ತಡೆರಹಿತ ಸಾರಿಗೆಗಾಗಿ, ಹಾಪುರ್, ಸಿಂಭವೋಲಿ, ಮೊರಾದಾಬಾದ್, ರಾಂಪುರ್, ಬರೇಲಿ, ಶಹಜಹಾನ್ಪುರ ಮತ್ತು ಸೀತಾಪುರದ ಕಿಕ್ಕಿರಿದ ನಿಲ್ದಾಣಗಳನ್ನು ಬೈಪಾಸ್ ಮಾಡಲು ಯೋಜನಾ ಹೊಂದಾಣಿಕೆಯನ್ನು ಯೋಜಿಸಲಾಗಿದೆ ಮತ್ತು ಅದರಂತೆ, ಬೈಪಾಸಿಂಗ್ ವಿಭಾಗಗಳಲ್ಲಿ ಆರು ಹೊಸ ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ.
  • ದೂಧೇಶ್ವರನಾಥ ದೇವಾಲಯ, ಗಢಮುಕ್ತೇಶ್ವರ ಗಂಗಾ ಘಾಟ್, ದರ್ಗಾ ಶಾ ವಿಲಾಯತ್ ಜಾಮಾ ಮಸೀದಿ (ಅಮ್ರೋಹಾ) ಮತ್ತು ನೈಮಿಶಾರಣ್ಯ (ಸೀತಾಪುರ)ಗಳು  ಯೋಜನೆಯ ಹತ್ತಿರವಿರುವ / ಅದರ ಮಾರ್ಗದಲ್ಲಿರುವ  ಪ್ರಮುಖ ಪ್ರವಾಸಿ / ಧಾರ್ಮಿಕ ಸ್ಥಳಗಳಾಗಿವೆ.
  • ಕಲ್ಲಿದ್ದಲು, ಆಹಾರ ಧಾನ್ಯಗಳು, ರಾಸಾಯನಿಕ ಗೊಬ್ಬರಗಳು, ಪೂರ್ಣಗೊಳಿಸಿದ  ಉಕ್ಕಿನ ಸಾಮಗ್ರಿ  ಇತ್ಯಾದಿಗಳನ್ನು ಒಳಗೊಂಡು 35.72 ಎಂಟಿಪಿಎ ಹೆಚ್ಚುವರಿ ಸರಕು ಸಾಗಣೆಯನ್ನು ನಿರೀಕ್ಷಿಸಲಾಗಿದೆ.
  • ಅಂದಾಜು ವೆಚ್ಚ: ರೂ.14,926 ಕೋಟಿ (ಅಂದಾಜು)
  • ಉದ್ಯೋಗ ಸೃಷ್ಟಿ: 274 ಲಕ್ಷ ಮಾನವ ದಿನಗಳು.
  • ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯ  ಉಳಿಕೆ: ಸುಮಾರು 128.77 ಕೋಟಿ ಕೆಜಿ ಇಂಗಾಲದ ಡೈಆಕ್ಸೈಡ್ , ಇದು 5.15 ಕೋಟಿ ಮರಗಳಿಗೆ ಸಮನಾಗಿರುತ್ತದೆ.
  • ಲಾಜಿಸ್ಟಿಕ್ ವೆಚ್ಚ ಉಳಿತಾಯ: ರಸ್ತೆ ಸಾರಿಗೆಗೆ ಹೋಲಿಸಿದರೆ ಪ್ರತಿ ವರ್ಷ ರೂ. 2,877.46 ಕೋಟಿ

ಘಾಜಿಯಾಬಾದ್ - ಸೀತಾಪುರ್ 3ನೇ ಮತ್ತು 4ನೇ ಮಾರ್ಗಗಳು (403 ಕಿಮೀ)

ರಾಜಮಂಡ್ರಿ (ನಿಡದವೋಲು) - ವಿಶಾಖಪಟ್ಟಣಂ (ದುವ್ವಾಡ) 3ನೇ ಮತ್ತು 4ನೇ ಮಾರ್ಗಗಳು (198 ಕಿಮೀ)

  • ರಾಜಮಂಡ್ರಿ (ನಿಡದವಲು) - ವಿಶಾಖಪಟ್ಟಣಂ (ದುವ್ವಾಡ) ವಿಭಾಗವು ಹೌರಾ - ಚೆನ್ನೈ  ಅತಿ ದಟ್ಟಣೆಯ ಜಾಲದ (ಹೈ ಡೆನ್ಸಿಟಿ ನೆಟ್ ವರ್ಕ್ -ಎಚ್ ಡಿ ಎನ್) ಭಾಗವಾಗಿದೆ.
  • ಉದ್ದೇಶಿತ ಯೋಜನೆಯು ಹೌರಾ – ಚೆನ್ನೈ ಹೈ ಡೆನ್ಸಿಟಿ ನೆಟ್ವರ್ಕ್ (ಎಚ್.ಡಿ.ಎನ್.) ಮಾರ್ಗದ ಚತುಷ್ಪಥ ಉಪಕ್ರಮದ ಭಾಗವಾಗಿದೆ.
  • ಈ ಯೋಜನೆಯು ಆಂಧ್ರಪ್ರದೇಶದ ಪೂರ್ವ ಗೋದಾವರಿ, ಕೋನಸೀಮಾ, ಕಾಕಿನಾಡ, ಅನಕಾಪಲ್ಲಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.
  • ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದಲ್ಲಿ ವಿಶಾಖಪಟ್ಟಣಂ ನ್ನು ಮಹತ್ವಾಕಾಂಕ್ಷೆಯ ಜಿಲ್ಲೆಯಾಗಿ ಗುರುತಿಸಲಾಗಿದೆ.
  • ಇದು ಪೂರ್ವ ಕರಾವಳಿಯ ಪ್ರಮುಖ ಬಂದರುಗಳಾದ ವಿಶಾಖಪಟ್ಟಣಂ, ಗಂಗಾವರಂ, ಮಚಲಿಪಟ್ಟಣಂ ಮತ್ತು ಕಾಕಿನಾಡಕ್ಕೆ ಸಂಪರ್ಕವನ್ನು ಒದಗಿಸುತ್ತದೆ.
  • ಯೋಜನಾ ಮಾರ್ಗವು ಪೂರ್ವ ಕರಾವಳಿಯುದ್ದಕ್ಕೂ ಸಾಗುತ್ತದೆ ಮತ್ತು ಪೂರ್ವ ಕರಾವಳಿ ರೈಲು ಕಾರಿಡಾರ್ ನ ಅತ್ಯಂತ ಜನನಿಬಿಡ, ಪ್ರಧಾನವಾಗಿ ಸರಕು-ಆಧಾರಿತ ವಿಭಾಗಗಳಲ್ಲಿ ಒಂದಾಗಿದೆ.
  • ಈ ವಿಭಾಗದ ಮಾರ್ಗದ ಸಾಮರ್ಥ್ಯದ ಬಳಕೆಯು ಈಗಾಗಲೇ ಶೇ.130 ರವರೆಗೆ ತಲುಪಿದೆ, ಇದು ಆಗಾಗ್ಗೆ ದಟ್ಟಣೆ ಮತ್ತು ಕಾರ್ಯಾಚರಣೆಯ ವಿಳಂಬಕ್ಕೆ ಕಾರಣವಾಗುತ್ತದೆ. ಈ ಪ್ರದೇಶದಲ್ಲಿ ಬಂದರುಗಳು ಮತ್ತು ಕೈಗಾರಿಕೆಗಳ ಉದ್ದೇಶಿತ ವಿಸ್ತರಣೆಯಿಂದಾಗಿ ಮಾರ್ಗದ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
  • ಯೋಜನಾ ವಿಭಾಗವು ಗೋದಾವರಿ ನದಿಯ ಮೇಲಿನ 4.3 ಕಿಮೀ ರೈಲು ಸೇತುವೆ, 2.67 ಕಿಮೀ ವಯಾಡಕ್ಟ್, 3 ಬೈಪಾಸ್ಗಳನ್ನು ಒಳಗೊಂಡಿದೆ ಮತ್ತು ಹೊಸ ಸರಿಹೊಂದಿಸುವಿಕೆಯು  ಅಸ್ತಿತ್ವದಲ್ಲಿರುವ ಮಾರ್ಗಕ್ಕಿಂತ ಸುಮಾರು 8 ಕಿಮೀ ಕಡಿಮೆಯಾಗಿದೆ, ಇದು ಸಂಪರ್ಕ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತದೆ.
  • ಪ್ರಸ್ತಾವಿತ ವಿಭಾಗವು ಅನ್ನಾವರಂ, ಅಂತರವೇದಿ ಮತ್ತು ದ್ರಾಕ್ಷಾರಾಮಂ ಮುಂತಾದ ಪ್ರಮುಖ ಸ್ಥಳಗಳಿಗೆ ಪ್ರವೇಶ ಲಭ್ಯತೆಯನ್ನು  ಸುಧಾರಿಸುವ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.
  • ಕಲ್ಲಿದ್ದಲು, ಸಿಮೆಂಟ್, ರಾಸಾಯನಿಕ ಗೊಬ್ಬರಗಳು, ಕಬ್ಬಿಣ ಮತ್ತು ಉಕ್ಕು, ಆಹಾರ ಧಾನ್ಯಗಳು, ಕಂಟೇನರ್ ಗಳು, ಬಾಕ್ಸೈಟ್, ಜಿಪ್ಸಮ್, ಸುಣ್ಣದ ಕಲ್ಲು ಇತ್ಯಾದಿಗಳನ್ನು ಒಳಗೊಂಡಿರುವ 29.04 ಎಂಟಿಪಿಎ ಹೆಚ್ಚುವರಿ ಸರಕು ಸಾಗಣೆಯನ್ನು ನಿರೀಕ್ಷಿಸಲಾಗಿದೆ.
  • ಅಂದಾಜು ವೆಚ್ಚ: ರೂ.9,889 ಕೋಟಿ (ಅಂದಾಜು)
  • ಉದ್ಯೋಗ ಸೃಷ್ಟಿ: 135 ಲಕ್ಷ ಮಾನವ ದಿನಗಳು.
  • ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಉಳಿತಾಯ: ಸುಮಾರು 51.49 ಕೋಟಿ ಕೆಜಿ ಇಂಗಾಲದ ಡೈಆಕ್ಸೈಡ್ . ಇದು 2.06 ಕೋಟಿ ಮರಗಳಿಗೆ ಸಮಾನವಾಗಿದೆ.
  • ಲಾಜಿಸ್ಟಿಕ್ ವೆಚ್ಚ ಉಳಿತಾಯ: ರಸ್ತೆ ಸಾರಿಗೆಗೆ ಹೋಲಿಸಿದರೆ ಪ್ರತಿ ವರ್ಷ 1,150.56 ಕೋಟಿ ರೂ.

आर्थिक सशक्तिकरण:

  • ಮಹತ್ವಾಕಾಂಕ್ಷೆಯ ಜಿಲ್ಲೆಗಳು - ವಿಶಾಖಪಟ್ಟಣಂ ಜಿಲ್ಲೆಯು ಸುಧಾರಿತ ಸಂಪರ್ಕವನ್ನು ಪಡೆಯಲಿದೆ
  • ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ಮೂಲಕ ಈ ಪ್ರದೇಶದಲ್ಲಿ ಹೆಚ್ಚುವರಿ ಆರ್ಥಿಕ ಅವಕಾಶಗಳು.
  • ಹೆಚ್ಚಿನ ರೈಲು ಸಂಪರ್ಕದಿಂದಾಗಿ ನಾಗರಿಕರಿಗೆ ಉತ್ತಮ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ.

ರಾಜಮಂಡ್ರಿ (ನಿಡದವೋಲು) - ವಿಶಾಖಪಟ್ಟಣಂ (ದುವ್ವಾಡ) 3ನೇ ಮತ್ತು 4ನೇ ಮಾರ್ಗಗಳು (198 ಕಿಮೀ)

ರೈಲ್ವೆಯ ಮೇಲೆ ಪ್ರಧಾನಮಂತ್ರಿಯವರ ಗಮನ:

  • 26-27ನೇ ಹಣಕಾಸು ವರ್ಷಕ್ಕೆ ದಾಖಲೆಯ ಬಜೆಟ್ ಹಂಚಿಕೆ 2,65,000 ಕೋಟಿ ರೂ.
  • 1600 ಕ್ಕೂ ಹೆಚ್ಚು ಲೋಕೋಮೋಟಿವ್ಗಳ ಉತ್ಪಾದನೆ - ಲೋಕೋಮೋಟಿವ್ ಉತ್ಪಾದನೆಯಲ್ಲಿ ಯುಎಸ್ ಮತ್ತು ಯುರೋಪ್ ಅನ್ನು ಹಿಂದಿಕ್ಕಿದೆ
  • 2026 ರ ಹಣಕಾಸು ವರ್ಷದಲ್ಲಿ, ಭಾರತೀಯ ರೈಲ್ವೆಯು 1.6 ಶತಕೋಟಿ ಟನ್ ಸರಕುಗಳನ್ನು ಸಾಗಿಸುವ ಮೂಲಕ ಜಾಗತಿಕವಾಗಿ ಅಗ್ರ ಮೂರು ಸರಕು ಸಾಗಣೆ ವಾಹಕಗಳಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
  • ಭಾರತವು ಆಸ್ಟ್ರೇಲಿಯಾಕ್ಕೆ ಮೆಟ್ರೋ ಬೋಗಿಗಳನ್ನು ಮತ್ತು ಯುನೈಟೆಡ್ ಕಿಂಗ್ಡಮ್, ಸೌದಿ ಅರೇಬಿಯಾ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾಕ್ಕೆ ಬೋಗಿಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
RBI Revises FY27 GDP Growth Forecast Up To 6.7%; Sees Indian Economy Staying Resilient

Media Coverage

RBI Revises FY27 GDP Growth Forecast Up To 6.7%; Sees Indian Economy Staying Resilient
NM on the go

Nm on the go

Always be the first to hear from the PM. Get the App Now!
...
Prime Minister Narendra Modi shares Sanskrit Subhashitam recognizing Earth as the nurturing mother of all life
August 06, 2026

The Prime Minister, Shri Narendra Modi today shared Sanskrit Subhashitam emphasising that humanity may live in harmony with the Earth, as earth is the nurturing mother of all life and the moral order that sustains her should be respected.

The Prime Minister shared a Sanskrit verse-

विश्वस्वं मातरमोषधीनां ध्रुवां भूमिं पृथिवीं धर्मणा धृताम्।

शिवां स्योनामनु चरेम विश्वहा॥

The Prime Minister posted on X:

विश्वस्वं मातरमोषधीनां ध्रुवां भूमिं पृथिवीं धर्मणा धृताम्।

शिवां स्योनामनु चरेम विश्वहा॥