ಕ್ರಮ ಸಂಖ್ಯೆ 

ತಿಳುವಳಿಕಾ ಒಡಂಬಡಿಕೆ/ಒಪ್ಪಂದಗಳ ಹೆಸರು.

ತಿಳುವಳಿಕಾ ಒಡಂಬಡಿಕೆಒಪ್ಪಂದದ ವಿವರಣೆ

ಭಾರತದ ಪರ ತಂಡದಲ್ಲಿ

ಇರಾನಿಯನ ಪರ ತಂಡದಲ್ಲಿ

1.

ದ್ವಿತೆರಿಗೆ ತಡೆ ಮತ್ತು ಆದಾಯದ ಮೇಲಣ ತೆರಿಗೆ ಗೆ ಸಂಬಂಧಿಸಿ ಹಣಕಾಸು ವಂಚನೆ ತಡೆ ಒಪ್ಪಂದ

ಹೂಡಿಕೆ ಮತ್ತು ಸೇವೆಗಳನ್ನು ಉತ್ತೇಜಿಸಲು ಎರಡು ರಾಷ್ಟ್ರಗಳ ನಡುವೆ ದ್ವಿತೆರಿಗೆಯ ಹೊರೆಯನ್ನು ನಿವಾರಿಸುವುದಕ್ಕಾಗಿ.

ಶ್ರೀಮತಿ ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವರು.

ಡಾ. ಮಸೂದ್ ಕರ್ಬಾಸಿಯನ್, ಆರ್ಥಿಕ ವ್ಯವಹಾರಗಳು ಮತ್ತು ಹಣಕಾಸು ಸಚಿವರು.

2.

ರಾಜತಾಂತ್ರಿಕ ಪಾಸ್ ಪೋರ್ಟ ಹೊಂದಿದವರಿಗೆ ವೀಸಾ ಅಗತ್ಯದಿಂದ ವಿನಾಯತಿ ನೀಡುವ  ತಿಳುವಳಿಕಾ ಒಪ್ಪಂದ.

ಪರಸ್ಪರ ರಾಜತಾಂತ್ರಿಕ ಪಾಸ್ ಪೋರ್ಟ್ಹೊಂದಿರುವವರಿಗೆ ಪ್ರಯಾಣಿಸಲು ವೀಸಾ ಅಗತ್ಯದಿಂದ ವಿನಾಯತಿ.

ಶ್ರೀಮತಿ ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವರು.

ಡಾ. ಮಹಮೂದ್ ಜಾವೇದ್ ಝರೀಫ್ , ವಿದೇಶಾಂಗ ವ್ಯವಹಾರಗಳ ಸಚಿವರು.

3.

ಗಡೀಪಾರು ಒಪ್ಪಂದದ ದೃಢೀಕೃತ ದಾಖಲೆಗಳ ವಿನಿಮಯ.

ಇದರಿಂದ 2008 ರಲ್ಲಿ ಭಾರತ ಮತ್ತು ಇರಾನ್ ನಡುವೆ ಅಂಕಿತ ಹಾಕಲಾದ ಗಡೀಪಾರು ಒಪ್ಪಂದ ಜಾರಿಗೆ ಬರುತ್ತದೆ.

ಶ್ರೀಮತಿ ಸುಷ್ಮಾ ಸ್ವರಾಜ್,ವಿದೇಶಾಂಗ ವ್ಯವಹಾರಗಳ ಸಚಿವರು.

ಡಾ. ಮಹಮ್ಮದ್ ಜಾವೇದ್ ಝರೀಫ್, ವಿದೇಶಾಂಗ ವ್ಯವಹಾರಗಳ ಸಚಿವರು.

4.

ಚಬಹಾರ್ ನ ಶಹೀದ್ ಬೆಹೆಸ್ತಿ ಬಂದರಿನ ಹಂತ 1 ರ ಮಧ್ಯಂತರ ಅವಧಿಯ ಲೀಸ್ ಗುತ್ತಿಗೆಗೆ ಸಂಬಂಧಿಸಿ ಇರಾನಿನ ಬಂದರು ಮತ್ತು ಸಾಗರೋತ್ತರ ಸಂಘಟನೆ(ಪಿ.ಎಂ.ಒ.) , ಮತ್ತು ಭಾರತದ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್(ಐ.ಪಿ.ಗಿ.ಎಲ್.) ನಡುವೆ ಒಡಂಬಡಿಕೆ. 

ಬಹು ಉದ್ದೇಶಿತ ಮತ್ತು ಕಂಟೈನರ್ ಟರ್ಮಿನಲ್ ನ ಒಂದು ಬಾಗದಲ್ಲಿ  ಈಗಿರುವ ಬಂದರು ಸೌಲಭ್ಯಗಳೊಂದಿಗೆ  ಒಂದೂವರೆ ವರ್ಷ (18 ತಿಂಗಳು) ಕಾರ್ಯ ನಿರ್ವಹಣೆ ಮಾಡಲು ಗುತ್ತಿಗೆ ನೀಡಿಕೆ..

ಶ್ರೀ ನಿತಿನ್ ಗಡ್ಕರಿ,ನೌಕಾಯಾನ ಸಚಿವರು.

ಡಾ. ಅಬ್ಬಾಸ್ ಅಖುಂಡಿ, ರಸ್ತೆ ಮತ್ತು ನಗರಾಭಿವೃದ್ಧಿ ಸಚಿವರು.

5.

ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದ.

ಸಾಂಪ್ರದಾಯಿಕ ವೈದ್ಯಪದ್ದತಿಯ ಶಿಕ್ಷಣ ಕ್ರಮದ ಬೋಧನೆ ನಿಯಮಾವಳಿ,ಕಾರ್ಯಾನುಷ್ಟಾನ, ಔಷಧಿ ಮತ್ತು ಔಷಧಿರಹಿತ ಚಿಕಿತ್ಸೆಗಳು; ಎಲ್ಲ ರೀತಿಯ ಔಷಧೀಯ ಸಾಮಗ್ರಿ ಮತ್ತು ದಾಖಲೆಗಳ ಪುರೈಕೆ ಅನುಕೂಲತೆ, ವೈದ್ಯ ವೃತ್ತಿ ಯಲ್ಲಿ ತರಬೇತಿಗಾಗಿ ತಜ್ಞರ ವಿನಿಮಯ, ಪ್ಯಾರಾ ಮೆಡಿಕೋಗಳು, ವಿಜ್ಞಾನಿಗಳು, ಬೋಧಕರು,ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನೆ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಅವಕಾಶ ಒದಗಿಸುವಿಕೆ, ಪ್ರಯೋಗ ಕ್ರಮ ಸಹಿತವಾದ ಔಷಧ ವಸ್ತು ಮತ್ತು ಅವುಗಳ ತಯಾರಿಕಾ ಸೂತ್ರಗಳ ಪರಸ್ಪರ ಮಾನ್ಯತೆ ಹಾಗು ಅಕಾಡೆಮಿಕ್ ಪೀಠಗಳ ಸ್ಥಾಪನೆ, ಶಿಷ್ಯ ವೇತನಗಳ ಅವಕಾಶ, ಪರಸ್ಪರ ಸಾಂಪ್ರ್ದಾಯಿಕ ತಯಾರಿಕೆಗಳಿಗೆ ಮಾನ್ಯತೆ,ಪರಸ್ಪರ ವಿನಿಮಯ ಆಧಾರದ ಮೇಲೆ ವೈದ್ಯ ಪದ್ಧತಿಯ ಪ್ರಾಕ್ಟೀಸಿಗೆ ಅನುಮತಿ.

ಶ್ರೀ ವಿಜಯ ಗೋಖಲೆ,ವಿದೇಶಾಂಗ ಕಾರ್ಯದರ್ಶಿ

ಗೌರವಾನ್ವಿತ ಘೋಲಮರೇಜಾ ಅನ್ಸಾರಿ,ಇರಾನ್ ರಾಯಭಾರಿ

6.

ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರ ವರ್ಧನೆಗೆತಜ್ಞರನ್ನು ಒಳಗೊಂಡ  ವ್ಯಾಪಾರ ಪರಿಹಾರ  ತಂಡ ರಚನೆಗೆ ತಿಳುವಳಿಕಾ ಒಡಂಬಡಿಕೆ.

ವ್ಯಾಪಾರ ಪರಿಹಾರ ಕ್ರಮಗಳಾದ  ತಂದು ಬಿಸಾಕುವ ನೀತಿ ವಿರುದ್ಧ ಮತ್ತು ಸುಂಕ ತಪ್ಪಿಸುವಿಕೆಯಂತಹ ಕ್ಷೇತ್ರಗಳಲ್ಲಿ ಸಹಕಾರದ ಚೌಕಟ್ಟನ್ನು ಸ್ಥಾಪಿಸುವ ಇರಾದೆಯನ್ನು ಇದು ಹೊಂದಿದೆ.

ಶ್ರೀಮತಿ ರೀಟಾ  , ಕಾರ್ಯದರ್ಶಿ(ವಾಣಿಜ್ಯ.)

ಡಾ. ಮಹಮ್ಮದ್ ಖಝಾಯಿ,ಆರ್ಥಿಕ ವ್ಯ್ವಹಾರಗಳು ಮತ್ತು ಹಣಕಾಸು ಉಪಸಚಿವರು.

7.

ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

ಕೃಷಿ ಮತ್ತು ಆ ಸಂಬಂಧಿ ವಲಯಗಳಲ್ಲಿ ಜಂಟಿ ಕಾರ್ಯಚಟುವಟಿಕೆಗಳು, ಕಾರ್ಯಕ್ರಮ ಕುರಿತ ಮಾಹಿತಿ, ಸಿಬಂದಿ ವಿನಿಮಯವೂ ಸೇರಿದಂತೆ,ಕೃಷಿ ಬೆಳೆಗಳು, ಕೃಷಿ ವಿಸ್ತರಣೆ,ತೋಟಗಾರಿಕೆ, ಯಾಂತ್ರೀಕರಣ,ಕೊಯಿಲೋತ್ತರ ತಂತ್ರಜ್ಞಾನ , ಬೆಳೆ ಕಾಪಿಡುವ ಕ್ರಮಗಳು , ಸಾಲ ಮತ್ತು ಸಹಕಾರ,ಮಣ್ಣು ಸಂರಕ್ಷಣೆ , ಬೀಜ ತಂತ್ರಜ್ಞಾನ, ಪಶುಪಾಲನಾ ಕ್ಷೇತ್ರದಲ್ಲಿ ಸುಧಾರಣೆ, ಡೈರಿ ಅಭಿವೃದ್ಧಿಯಲ್ಲಿ ದ್ವಿಪಕ್ಷೀಯ ಸಹಕಾರ,

ಶ್ರೀ ಎಸ್.ಕೆ.ಪಟ್ಟನಾಯಕ್,ಕಾರ್ಯದರ್ಶಿ (ಕೃಷಿ)

ಡಾ. ಮಹಮ್ಮದ್ ಖಝಾಯಿ,ಆರ್ಥಿಕ ವ್ಯ್ವಹಾರಗಳು ಮತ್ತು ಹಣಕಾಸು ಉಪಸಚಿವರು.

8.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ತಾಂತ್ರಿಕ, ವೈಜ್ಞಾನಿಕ, ಹಣಕಾಸು, ಮತ್ತು ಮಾನವ ಸಂಪನ್ಮೂಲ , ಗುಣಮಟ್ಟ ಉನ್ನತೀಕರಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾನವ ,ಸಲಕರಣೆ ಮತ್ತು ಹಣಕಾಸು ಸಂಪನ್ಮೂಲ ಸಾಧಿಸಿಕೊಳ್ಳಲು, ವೈದ್ಯಕೀಯ ಶಿಕ್ಷಣ, ಸಂಶೋಧನೆ, ಮತ್ತು ತರಬೇತಿ,ವೈದ್ಯಕೀಯ ಕ್ಷೇತ್ರದ  ವೈದ್ಯರ ತರಬೇತಿಯಲ್ಲಿ ಮತ್ತು ಆ ಸಂಬಂಧಿ ಕ್ಷೇತ್ರದಲ್ಲಿ  ವೃತ್ತಿಪರರ ತರಬೇತಿಗೆ ಸಂಬಂಧಿಸಿ ಅನುಭವ ವಿನಿಮಯ,ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಆರೋಗ್ಯ ರಕ್ಷಣಾ ಸೌಲಭ್ಯಗಳ ಸ್ಥಾಪನೆಗೆ ನೆರವು, ಔಷಧಿಗಳ , ವೈದ್ಯಕೀಯ ಸಲಕರಣೆಗಳ, ಸೌಂದರ್ಯ ವರ್ಧಕಗಳ ನಿಯಂತ್ರಣ,ಮತ್ತು ಆ ಸಂಬಂಧಿ ಮಾಹಿತಿ ವಿನಿಮಯ, ವೈದ್ಯಕೀಯ ಕ್ಷೇತ್ರದ ಸಂಶೋಧನೆಯಲ್ಲಿ ಸಹಕಾರ, ಸಾರ್ವಜನಿಕ ಆರೋಗ್ಯ, ಸಹ್ಯ ಅಭಿವೃದ್ಧಿಯ ಗುರಿಗಳ (ಎಸ್.ಡಿ.ಜಿ.) ಸಾಧನೆ ಮತ್ತು ಅಂತಾರಾಷ್ಟ್ರೀಯ ಆರೋಗ್ಯದಲ್ಲಿ ಸಹಕಾರ.

ಶ್ರೀ ವಿಜಯ ಗೋಖಲೆ,ವಿದೇಶಾಂಗ ಕಾರ್ಯದರ್ಶಿ

ಗೌರವಾನ್ವಿತ ಘೋಲಮರೇಜಾ ಅನ್ಸಾರಿ,ಇರಾನ್ ರಾಯಭಾರಿ

9.

ಅಂಚೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.

ಎರಡೂ ದೇಶಗಳ ಅಂಚೆ ಇಲಾಖೆಯ ಅನುಭವ, ಪರಿಣಿತಿಯ ವಿನಿಮಯ ,ಮಾಹಿತಿ,ಜ್ಞಾನ,ಮತ್ತು ಇ-ಕಾಮರ್ಸ್, ಸರಕು ಸಾಗಾಣಿಕೆ ಸೇವೆಯಲ್ಲಿ ತಂತ್ರಜ್ಞಾನ ವಿನಿಮಯ, ಅಂಚೆ ಚೀಟಿಗಳಲ್ಲಿ ಸಹಕಾರ,ತಜ್ಞರ ಕಾರ್ಯಪಡೆಯ ರಚನೆ; ಉಭಯ ದೇಶಗಳ ನಡುವೆ ವಾಯು ಮತ್ತು ಭೂಸಾರಿಗೆ ಮೂಲಕ ಸರಕು ವರ್ಗಾವಣೆ ಸಾಧ್ಯತೆ ಬಗ್ಗೆ ಕಾರ್ಯ ಸಾಧ್ಯತಾ ಅಧ್ಯಯನ ಇದರಲ್ಲಿ ಸೇರಿದೆ.

ಶ್ರೀ ಅಂತನಾರಾಯಣ ನಂದಾ,ಕಾರ್ಯದರ್ಶಿ (ಅಂಚೆ))

ಗೌರವಾನ್ವಿತ ಘೋಲಮರೇಜಾ ಅನ್ಸಾರಿ,ಇರಾನ್ ರಾಯಭಾರಿ

ಈ ಕೆಳಗಿನ ತಿಳುವಳಿಕಾ ಒಡಂಬಡಿಕೆಗಳನ್ನು ವ್ಯಾಪಾರೋದ್ಯಮ  ಸಂಘಟನೆಗಳ ಜತೆ ಮಾಡಿಕೊಳ್ಳಲಾಗಿದ್ದು ಈ ಭೇಟಿಯ ಸಂಧರ್ಭದಲ್ಲಿ ಸಹಿಹಾಕಲಾಗಿದೆ.

(1)    ಭಾರತದ ಇ.ಇ.ಪಿ.ಸಿ. ಮತ್ತು ಇರಾನಿನ ವ್ಯಾಪಾರ ಉತ್ತೇಜನ ಸಂಘಟನೆ ನಡುವೆ ತಿಳುವಳಿಕಾ ಒಡಂಬಡಿಕೆ.

(2)  ಭಾರತೀಯ ವಾಣಿಜ್ಯೋದ್ಯಮ ಮಂಡಳಿಗಳ ಒಕ್ಕೂಟ (ಎಫ್.ಐ.ಸಿ.ಸಿ.ಐ.) ಮತ್ತು ಇರಾನಿನ ವಾಣಿಜ್ಯೋದ್ಯಮ, ಕೈಗಾರಿಕೆ, ಗಣಿ ಮತ್ತು ಕೃಷಿ ಮಂಡಳಿ(ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ.

(3)  (3) ಭಾರತೀಯ ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಎ.ಎಸ್.ಎಸ್.ಒ.ಸಿ.ಎಚ್.ಎ.ಎಂ.) ಮತ್ತು ಇರಾನಿನ ವಾಣಿಜ್ಯೋದ್ಯಮ,ಕೈಗಾರಿಕೆ, ಗಣಿ ಮತ್ತು ಕೃಷಿ ಮಂಡಳಿ (ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ.

(4)   ಪಿ.ಎಚ್.ಡಿ ವಾಣಿಜ್ಯೋದ್ಯಮ ಮಂಡಳಿ (ಪಿ.ಎಚ್.ಡಿ.ಸಿ.ಸಿ.ಐ.) ಮತ್ತು ಇರಾನಿನ ವಾಣಿಜ್ಯೋದ್ಯಮ, , ಗಣಿ ಮತ್ತು ಕೃಷಿ ಮಂಡಳಿ (ಐ.ಸಿ.ಸಿ.ಐ.ಎಂ.ಎ.) ಜತೆ ತಿಳುವಳಿಕಾ ಒಡಂಬಡಿಕೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSME exports touch Rs 9.52 lakh crore in April–September FY26: Govt tells Parliament

Media Coverage

MSME exports touch Rs 9.52 lakh crore in April–September FY26: Govt tells Parliament
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2025
December 21, 2025

Assam Rising, Bharat Shining: PM Modi’s Vision Unlocks North East’s Golden Era