ಗೌರವಾನ್ವಿತರೇ,

ನಾವು ನಿಮಗೆ ಮತ್ತು ನಿಮ್ಮ ನಿಯೋಗಕ್ಕೆ ಭಾರತಕ್ಕೆ ಆತ್ಮೀಯ ಸ್ವಾಗತವನ್ನು ನೀಡುತ್ತೇವೆ. ಪರಾಗ್ವೆ ದಕ್ಷಿಣ ಅಮೆರಿಕಾದಲ್ಲಿ ಪ್ರಮುಖ ಪಾಲುದಾರ. ನಮ್ಮ ಭೌಗೋಳಿಕತೆಗಳು ವಿಭಿನ್ನವಾಗಿರಬಹುದು, ಆದರೆ ನಾವು ಒಂದೇ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ ಮತ್ತು ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತೇವೆ.

ಗೌರವಾನ್ವಿತರೇ,

ನಿಮ್ಮ ಭೇಟಿ ನಿಜವಾಗಿಯೂ ಐತಿಹಾಸಿಕವಾಗಿದೆ; ಪರಾಗ್ವೆಯ ಅಧ್ಯಕ್ಷ ರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.

ಗೌರವಾನ್ವಿತರೇ,

ನಿಮ್ಮೊಂದಿಗೆ ಹಿರಿಯ ಸಚಿವರು ಮತ್ತು ಬಲವಾದ ನಿಯೋಗವಿದೆ ಎಂದು ನನಗೆ ಸಂತೋಷವಾಗಿದೆ. ನೀವು ದೆಹಲಿಗೆ ಮಾತ್ರವಲ್ಲ, ಮುಂಬೈಗೂ ಭೇಟಿ ನೀಡುತ್ತಿದ್ದೀರಿ, ಇದು ಉಭಯ ದೇಶಗಳ ನಡುವೆ ಬಲವಾದ ಸಂಬಂಧಗಳನ್ನು ನಿರ್ಮಿಸುವ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ, ನಾವು ಹಂಚಿಕೆಯ ಬೆಳವಣಿಗೆ ಮತ್ತು ಸಮೃದ್ಧಿಯ ಹಾದಿಯನ್ನು ರಚಿಸಬಹುದು ಎಂದು ನಾನು ನಂಬುತ್ತೇನೆ.

ಗೌರವಾನ್ವಿತರೇ,

ಡಿಜಿಟಲ್‌ ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಇಂಧನ, ಕೃಷಿ, ಆರೋಗ್ಯ, ರಕ್ಷಣೆ, ರೈಲ್ವೆ, ಬಾಹ್ಯಾಕಾಶ ಮತ್ತು ಒಟ್ಟಾರೆ ಆರ್ಥಿಕ ಪಾಲುದಾರಿಕೆಯಂತಹ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ನಾವು ಹೊಸ ಅವಕಾಶಗಳನ್ನು ನೋಡುತ್ತಿದ್ದೇವೆ. ನಾವು ಮೆರ್ಕೋಸುರ್‌ನೊಂದಿಗೆ ಆದ್ಯತಾ ವ್ಯಾಪಾರ ಒಪ್ಪಂದವನ್ನು ಹೊಂದಿದ್ದೇವೆ. ಅದನ್ನು ಮತ್ತಷ್ಟು ವಿಸ್ತರಿಸಲು ನಾವು ಒಟ್ಟಾಗಿ ಕೆಲಸ ಮಾಡಬಹುದು.

ಗೌರವಾನ್ವಿತರೇ,

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಪರಾಗ್ವೆ ಒಗ್ಗಟ್ಟಾಗಿ ನಿಂತಿವೆ. ಸೈಬರ್‌ ಅಪರಾಧ, ಸಂಘಟಿತ ಅಪರಾಧ ಮತ್ತು ಮಾದಕವಸ್ತು ಕಳ್ಳಸಾಗಣೆಯಂತಹ ಹಂಚಿಕೆಯ ಸವಾಲುಗಳ ವಿರುದ್ಧ ಹೋರಾಡಲು ಸಹಕಾರದ ಅಪಾರ ಸಾಧ್ಯತೆ ಇದೆ.


ಗೌರವಾನ್ವಿತರೇ,

ಭಾರತ ಮತ್ತು ಪರಾಗ್ವೆ ಜಾಗತಿಕ ದಕ್ಷಿಣದ ಅವಿಭಾಜ್ಯ ಅಂಗಗಳಾಗಿವೆ. ನಮ್ಮ ಭರವಸೆಗಳು, ಆಕಾಂಕ್ಷೆಗಳು ಮತ್ತು ಸವಾಲುಗಳು ಒಂದೇ ಆಗಿವೆ. ಮತ್ತು ಅದಕ್ಕಾಗಿಯೇ ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಾವು ಪರಸ್ಪರರ ಅನುಭವಗಳಿಂದ ಕಲಿಯಬಹುದು.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಭಾರತವು ತನ್ನ ಲಸಿಕೆಗಳನ್ನು ಹಂಚಿಕೊಳ್ಳುವ ಮೂಲಕ ಪರಾಗ್ವೆಗೆ ಬೆಂಬಲವನ್ನು ವಿಸ್ತರಿಸಬಹುದು ಎಂದು ನಮಗೆ ಸಂತೋಷವಾಗಿದೆ. ನಮ್ಮ ಹೆಚ್ಚಿನ ಸಾಮರ್ಥ್ಯ‌ಗಳನ್ನು ಹಂಚಿಕೊಳ್ಳುವ ಮೂಲಕ ಈ ಸಹಕಾರದ ಮನೋಭಾವವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ.

ಗೌರವಾನ್ವಿತರೇ,

ನಿಮ್ಮ ಭೇಟಿಯು ನಮ್ಮ ಸಂಬಂಧಗಳಲ್ಲಿನಂಬಿಕೆ, ವ್ಯಾಪಾರ ಮತ್ತು ನಿಕಟ ಸಹಕಾರದ ಸ್ತಂಭಗಳಿಗೆ ಹೊಸ ಬಲವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಇದು ಭಾರತ-ಲ್ಯಾಟಿನ್‌ ಅಮೆರಿಕ ಸಂಬಂಧಗಳಿಗೆ ಹೊಸ ಆಯಾಮಗಳನ್ನು ಸೇರಿಸಲಿದೆ.

ಕಳೆದ ವರ್ಷ ನಾನು ಗಯಾನಾದಲ್ಲಿನಡೆದ ಕ್ಯಾರಿಕಾಮ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದೆ. ನಾವು ಅನೇಕ ವಿಷಯಗಳಲ್ಲಿಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿದ್ದೇವೆ. ಈ ಎಲ್ಲಕ್ಷೇತ್ರಗಳಲ್ಲಿ ನಾವು ಪರಾಗ್ವೆ ಮತ್ತು ಎಲ್ಲಾ ಲ್ಯಾಟಿನ್‌ ಅಮೆರಿಕಾದ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬಹುದು ಎಂದು ನಾನು ಭಾವಿಸುತ್ತೇನೆ.

ಮತ್ತೊಮ್ಮೆ, ಭಾರತಕ್ಕೆ ಬಹಳ ಆತ್ಮೀಯ ಸ್ವಾಗತ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
E-Samudra: India’s digital push to reshape maritime governance

Media Coverage

E-Samudra: India’s digital push to reshape maritime governance
NM on the go

Nm on the go

Always be the first to hear from the PM. Get the App Now!
...
PM to release the Autobiography of Former President Shri Ram Nath Kovind on 12 August
August 11, 2026
Title of the Autobiography: “Triumph of the Indian Republic: My Life, My Struggles”

Prime Minister Shri Narendra Modi will release the autobiography of former President of India, Shri Ram Nath Kovind, titled “Triumph of the Indian Republic: My Life, My Struggles”, on 12 August, 2026, at 9:30 AM at Vigyan Bhavan, New Delhi. Prime Minister will also address the gathering on the occasion.

The release of the autobiography by the Prime Minister will mark a significant occasion celebrating the life and contributions of one of India’s most distinguished public figures. The autobiography offers a deeply personal account of Shri Ram Nath Kovind’s remarkable life journey, tracing his experiences, struggles and achievements from his early years to his distinguished public life and eventual service as the 14th President of India. The book provides insights into the values, experiences and circumstances that shaped his journey and public service.