ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಸ್ತುತ 2021-22 ರಿಂದ 2025 ರವರೆಗೆ ಅನುಷ್ಠಾನದಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ರೂ.69,515.71 ಕೋಟಿಗಳ ಒಟ್ಟಾರೆ ವೆಚ್ಚದೊಂದಿಗೆ 2025-26 ರವರೆಗೆ ಮುಂದುವರಿಸಲು ಅನುಮೋದಿಸಿದೆ. ಈ ನಿರ್ಧಾರವು 2025-26 ರವರೆಗೆ ದೇಶದಾದ್ಯಂತ ರೈತರಿಗೆ ಕೈಮಿಗಿಲಾಗಿ ಸಂಭವಿಸುವ ತಡೆಗಟ್ಟಲಾಗದ ನೈಸರ್ಗಿಕ ವಿಕೋಪಗಳಿಂದ ಬೆಳೆಗಳ ಅಪಾಯದ ಸಂದರ್ಭದಲ್ಲಿ ಪರಿಹಾರ ನೀಡಲು ಸಹಾಯ ಮಾಡುತ್ತದೆ.

ಇದರ ಜೊತೆಗೆ, ಯೋಜನೆಯ ಅನುಷ್ಠಾನದಲ್ಲಿ, ಪಾರದರ್ಶಕತೆ ಮತ್ತು ಕ್ಲೈಮ್ ಲೆಕ್ಕಾಚಾರ ಮತ್ತು ಇತ್ಯರ್ಥವನ್ನು ಹೆಚ್ಚಿಸುವ ದೊಡ್ಡ ಪ್ರಮಾಣದ ತಂತ್ರಜ್ಞಾನದ ಬಳಕೆಗಾಗಿ ಹಾಗು ಒಳಹರಿವಿಗಾಗಿ, ಕೇಂದ್ರ ಸಚಿವ ಸಂಪುಟವು ರೂ. 824.77 ಕೋಟಿಗಳ ಹೆಚ್ಚುವರಿ ಹಣಕಾಸು ವ್ಯವಸ್ಥೆ (ಕಾರ್ಪಸ್ ) ಯೊಂದಿಗೆ ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕಾಗಿ ನಿಧಿಯನ್ನು (ಎಫ್.ಐ.ಎ.ಟಿ.) ರಚಿಸಲು ಅನುಮೋದಿಸಿದೆ. 

ಯಸ್-ಟೆಕ್, ವಿಂಡ್ಸ್, ಇತ್ಯಾದಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳ ಅಡಿಯಲ್ಲಿ ತಾಂತ್ರಿಕ ಉಪಕ್ರಮಗಳಿಗೆ ಧನಸಹಾಯಕ್ಕಾಗಿ ಈ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ.

ತಂತ್ರಜ್ಞಾನವನ್ನು ಬಳಸುವ ಇಳುವರಿ ಅಂದಾಜು ವ್ಯವಸ್ಥೆ (ಯೆಸ್-ಟೆಕ್) ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜುಗಳಿಗೆ ಕನಿಷ್ಠ 30% ತೂಕದೊಂದಿಗೆ ಇಳುವರಿ ಅಂದಾಜುಗಾಗಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಪ್ರಸ್ತುತ 9 ಪ್ರಮುಖ ರಾಜ್ಯಗಳಾದ  ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಜಾರಿಯಲ್ಲಿದೆ. ಇತರ ರಾಜ್ಯಗಳನ್ನು ಕೂಡ ತ್ವರಿತವಾಗಿ ಈ ಉಪಕ್ರಮದಲ್ಲಿ ಸೇರ್ಪಡೆ ಮಾಡಲಾಗುವುದು. ತಂತ್ರಜ್ಞಾನವನ್ನು ಬಳಸುವ ಇಳುವರಿ ಅಂದಾಜು ವ್ಯವಸ್ಥೆಯ (ಯೆಸ್-ಟೆಕ್) ವ್ಯಾಪಕ ಅನುಷ್ಠಾನದೊಂದಿಗೆ, ಕ್ರಾಪ್ ಕಟಿಂಗ್ ಪ್ರಯೋಗಗಳು ಮತ್ತು ಸಂಬಂಧಿತ ಸಮಸ್ಯೆಗಳನ್ನು ಹಂತಹಂತವಾಗಿ ಸೇರಿಸಲಾಗುತ್ತದೆ. ಯೆಸ್-ಟೆಕ್ ಅಡಿಯಲ್ಲಿ 2023-24 ರ ಅವಧಿಗೆ ಕ್ಲೈಮ್ ಲೆಕ್ಕಾಚಾರ ಮತ್ತು ಪರಿಹಾರವನ್ನು ಲೆಕ್ಕಾಚಾರ ಮಾಡಲಾಗಿದೆ. ಮಧ್ಯಪ್ರದೇಶವು 100% ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜನ್ನು ಅಳವಡಿಸಿಕೊಂಡಿದೆ.

ಹವಾಮಾನ ಮಾಹಿತಿ ಮತ್ತು ನೆಟ್ವರ್ಕ್ ಡೇಟಾ ಸಿಸ್ಟಮ್ಸ್ (ವಿಂಡ್ಸ್ – ಡಬ್ಲ್ಯೂ.ಐ.ಎನ್.ಡಿ.ಎಸ್.) ಉಪಕ್ರಮದಡಿಯಲ್ಲಿ ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು (ಎ.ಡಬ್ಲ್ಯೂ.ಎಸ್.) ಮತ್ತು ಪಂಚಾಯತ್ ಮಟ್ಟದಲ್ಲಿ ಸ್ವಯಂಚಾಲಿತ ಮಳೆಮಾಪಕಗಳನ್ನು (ಎ.ಆರ್.ಜಿ.) ಸ್ಥಾಪಿಸಲು ಯೋಜಿಸಲಾಗಿದೆ. ವಿಂಡ್ಸ್ ಯೋಜನೆಯಡಿಯಲ್ಲಿ, ಹೈಪರ್ ಸ್ಥಳೀಯ ಹವಾಮಾನ ಡೇಟಾವನ್ನು ಅಭಿವೃದ್ಧಿಪಡಿಸಲು ಪ್ರಸ್ತುತ ನೆಟ್ವರ್ಕ್ ಸಾಂದ್ರತೆಯಲ್ಲಿ 5 ಪಟ್ಟು ಹೆಚ್ಚಳದ ಅಗತ್ಯತೆಯನ್ನು ಕಲ್ಪಿಸಲಾಗಿದೆ. ಉಪಕ್ರಮದ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೇಟಾ ಬಾಡಿಗೆ ವೆಚ್ಚಗಳನ್ನು ಮಾತ್ರ ಪಾವತಿಸಬೇಕಾಗುತ್ತದೆ. ಈಗಾಗಲೇ 9 ಪ್ರಮುಖ ರಾಜ್ಯಗಳು - ಕೇರಳ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಪುದುಚೇರಿ, ಅಸ್ಸಾಂ, ಒಡಿಶಾ, ಕರ್ನಾಟಕ, ಉತ್ತರಾಖಂಡ ಮತ್ತು ರಾಜಸ್ಥಾನಗಳಲ್ಲಿ ಈ ಉಪಕ್ರಮ ಅನುಷ್ಠಾನಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಾಗೂ, ಇತರ ರಾಜ್ಯಗಳು ಸಹ ಅನುಷ್ಠಾನಕ್ಕೆ ಇಚ್ಛೆ ವ್ಯಕ್ತಪಡಿಸಿವೆ.  

ಟೆಂಡರ್ ಮಾಡುವ ಮೊದಲು ಅಗತ್ಯವಿರುವ ವಿವಿಧ ಹಿನ್ನೆಲೆಯ ಪೂರ್ವಸಿದ್ಧತೆ ಮತ್ತು ಯೋಜನಾ ಕಾರ್ಯಗಳ ಕಾರಣದಿಂದಾಗಿ ವಿವಿಧ ರಾಜ್ಯಗಳಿಂದ 2023-24ರಲ್ಲಿ (ಇ.ಎಫ್ಸಿ ಪ್ರಕಾರ 1 ನೇ ವರ್ಷ) ವಿಂಡ್ಸ್ ಅನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಅದರಂತೆ, ಕೇಂದ್ರ ಸಚಿವ ಸಂಪುಟವು 90:10 ಅನುಪಾತದಲ್ಲಿ ಹೆಚ್ಚಿನ ಕೇಂದ್ರ ನಿಧಿ ಹಂಚಿಕೆಯೊಂದಿಗೆ ರಾಜ್ಯ ಸರ್ಕಾರಗಳಿಗೆ ಪ್ರಯೋಜನವನ್ನು ನೀಡಲು ಮುಂದಾಗಿದೆ. ಈ ಹಿಂದಿನ 2023-24 ಕ್ಕೆ ಹೋಲಿಸಿ, ಸಮಸ್ಯೆಗಳನ್ನು ಪರಿಹರಿಸಿ, 2024-25 ಅನ್ನು ವಿಂಡ್ಸ್ ಅನುಷ್ಠಾನದ ಮೊದಲ ವರ್ಷವಾಗಿ ಬಳಸಿಕೊಳ್ಳಲು ಅನುಮೋದಿಸಿದೆ.

ಈಶಾನ್ಯ ರಾಜ್ಯಗಳ ಎಲ್ಲಾ ರೈತರನ್ನು ಆದ್ಯತೆಯ ಮೇಲೆ ಹೆಚ್ಚುಹೆಚ್ಚು ಸಾಂದ್ರತೆಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ಪ್ರಯತ್ನ ಮುಂದುವರೆಯಲಿದೆ.  ಈಶಾನ್ಯ ರಾಜ್ಯಗಳೊಂದಿಗೆ ಸಹ 90% ಪ್ರೀಮಿಯಂ ಸಬ್ಸಿಡಿಯನ್ನು ಕೇಂದ್ರವು ಹಂಚಿಕೊಳ್ಳುತ್ತದೆ. ಹಾಗೂ, ಯೋಜನೆಯು ಸ್ವಯಂಪ್ರೇರಿತವಾಗಿದೆ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕಡಿಮೆ ಬೆಳೆ ಪ್ರದೇಶವಾಗಿರುವುದರಿಂದ, ನಿಧಿಯ ಉಳಿಕೆಯಲ್ಲಿನ ಹಣದ ಮರು ಬಳಕೆ ಮತ್ತು ನಿಧಿಯ ಅಗತ್ಯವಿರುವ ಇತರ ಅಭಿವೃದ್ಧಿ ಯೋಜನೆಗಳು ಮತ್ತು ಇತರೇ ಅಗತ್ಯ ಯೋಜನೆಗಳಲ್ಲಿ ಮರುಹಂಚಿಕೆ ಮಾಡಲು ಅಧಿಕಾರ ನೀಡಲಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government eases defence export SOP to help local manufacturers tap global market

Media Coverage

Government eases defence export SOP to help local manufacturers tap global market
NM on the go

Nm on the go

Always be the first to hear from the PM. Get the App Now!
...
Prime Minister extends greetings on National Sports Day
August 29, 2026

The Prime Minister, Shri Narendra Modi has extended his greetings to all sports lovers on National Sports Day. Shri Modi said that the dedication, passion and determination of sportspersons make the entire nation proud.

The Prime Minister also paid homage to the legendary Major Dhyan Chand Ji, whose brilliance and contribution to Indian hockey continue to inspire generations.

Shri Modi posted on X:

“To every sports lover…your dedication, passion and determination make everyone proud.

We also pay homage to the legendary Major Dhyan Chand Ji, whose brilliance inspires generations.

#NationalSportsDay”