ಇದು ಸೆಪ್ಟೆಂಬರ್ 2014 ಮಾತು, ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಭಾಷಣ ಮಾಡುವ ವಿಶೇಷ ಸಂದರ್ಭ , ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು , ಜಾಗತಿಕವಾಗಿ ನಾವೆಲ್ಲ ಒಟ್ಟಾಗಲು, ಸಧೃಡರಾಗಲು, ಆರೋಗ್ಯವಂತರಾಗಲು, - ವಿಶ್ವದ ದೇಶಗಳೆಲ್ಲ “ಯೋಗ”ವನ್ನು ಅಭ್ಯಾಸ ಮಾಡಬೇಕು, ವರ್ಷದಲ್ಲೊಂದು ದಿನವನ್ನು ಅಂತರ್ ರಾಷ್ಟ್ರೀಯ ಯೋಗ ದಿನವಾಗಿ ಗುರುತಿಸಿ ಯೋಗದ ಮಹತ್ವ ಪಸರಿಸಲು ಅವಕಾಶ ಮಾಡಬೇಕು ಎಂದು ಮನವಿಮಾಡಿದರು .
ಮಾತು ನಿಜವಾಯಿತು. ಡಿಸೆಂಬರ್ 2014ರಂದು ವಿಶ್ವದ ನಾನಾಭಾಗದ 177 ರಾಷ್ಟ್ರಗಳು ಒಟ್ಟಾಗಿ ಬೆಂಬಲಿಸಿದವು, ವಿಶ್ವದಾಧ್ಯಂತ 21ನೇ ಜೂನ್ – ಅಂತರ್ ರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲು ನಿರ್ಣಯ ಅನುಮೋದನೆ ಪಡೆಯಿತು.
ವಿಶ್ವದಾಧ್ಯಂತ 21ನೇ ಜೂನ್ – ಅಂತರ್ ರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತದೆ. ಇದು ಯೋಗವನ್ನು ಪ್ರಚಾರ ಮಾಡುತ್ತದೆ. ಜಗತ್ತೇ ಭಾರತದ ಕಡೆ ನೋಡುತ್ತದೆ, ಆದರೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಕಾರ...ಯೋಗವೆಂದರೆ “ ವಿಶ್ವದಾಧ್ಯಂತ ಯುವಜನತೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ, ಯೋಗ ಮಾನ್ಯತೆ ಪಡೆಯಲಿದೆ, ಜ್ಞಾನ, ಕರ್ಮ ಮತ್ತು ಭಕ್ತಿ ವರ್ಣೆಗಾಗಿ ಯೋಗ ಗುರುತಿಸಲಾಗುತ್ತದೆ, ಆದರೂ ಯೋಗ ಆರೋಗ್ಯದಾಯಕ, ರೋಗ ಮುಕ್ತಿಯಿಂದ ಭೋಗ ಮುಕ್ತಿ ಪ್ರದಾಯಕ.”