ಶೇರ್
 
Comments

ಭಾಷಣದ ಮುಖ್ಯಾಂಶಗಳು:

1.      ನನ್ನ ಪ್ರೀತಿಯ ದೇಶವಾಸಿಗಳೇ, ಈ ಮಹೋನ್ನತ ಸಂದರ್ಭದಲ್ಲಿ, ನಿಮ್ಮಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು.

2.      ಕೊರೊನಾದ ಈ ಅಸಾಮಾನ್ಯವಾದ ಸಮಯದಲ್ಲಿ, ಕೊರೊನಾ ಯೋಧರು “ಸೇವಾ ಪರಮೋ ಧರ್ಮ’ ಎಂಬ ಮಂತ್ರದೊಂದಿಗೆ ಜೀವಿಸುತ್ತಿದ್ದಾರೆ. ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಪೊಲೀಸರು, ಸೇವಾ ಸಿಬ್ಬಂದಿ ಮತ್ತು ಹಲವು ಜನರು ದಿನವಿಡೀ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

3.      ಪ್ರಾಕೃತಿಕ ವಿಪತ್ತುಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಆಗಿರುವ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಅಗತ್ಯವಿರುವ ಈ ಸಮಯದಲ್ಲಿ ದೇಶವಾಸಿಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

4.      ಭಾರತದ ಸ್ವಾತಂತ್ರ್ಯ ಹೋರಾಟ ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದೆ. ವಿಸ್ತರಣಾವಾದದ ಕಲ್ಪನೆಯು ಕೆಲವು ದೇಶಗಳನ್ನು ಗುಲಾಮರನ್ನಾಗಿ ಮಾಡಿತು. ಭೀಕರ ಯುದ್ಧಗಳ ನಡುವೆಯೂ ಭಾರತ ತನ್ನ ಸ್ವಾತಂತ್ರ್ಯ ಚಳವಳಿಯನ್ನು ಕ್ಷೀಣಿಸಲು ಬಿಡಲಿಲ್ಲ.

5.      ಕೋವಿಡ್ ಸಾಂಕ್ರಾಮಿಕದ ನಡುವೆಯೂ, 130 ಕೋಟಿ ಭಾರತೀಯರು ಸ್ವಾವಲಂಬಿಗಳಾಗಬೇಕೆಂಬ ಸಂಕಲ್ಪವನ್ನು ಕೈಗೊಂಡರು, ಮತ್ತು 'ಆತ್ಮನಿರ್ಭರ ಭಾರತ್' ಎಂಬುದು ಭಾರತದ ಮನಸ್ಸಿನಲ್ಲಿ ಮೂಡಿದೆ. ಈ ಕನಸು ಸಂಕಲ್ಪವಾಗಿ ಬದಲಾಗುತ್ತಿದೆ. 130 ಕೋಟಿ ಭಾರತೀಯರಿಗೆ ಆತ್ಮನಿರ್ಭರ ಭಾರತ್ ಇಂದು 'ಮಂತ್ರ'ವಾಗಿ ಮಾರ್ಪಟ್ಟಿದೆ. ನನ್ನ ದೇಶವಾಸಿಗಳ ಸಾಮರ್ಥ್ಯ, ವಿಶ್ವಾಸ ಮತ್ತು ದಕ್ಷತೆಯ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ವಿರಮಿಸುವುದಿಲ್ಲ.

6.      ಇಂದು, ಇಡೀ ಜಗತ್ತು ಪರಸ್ಪರ ಸಂಪರ್ಕಿತವಾಗಿದೆ ಮತ್ತು ಪರಸ್ಪರ ಅವಲಂಬಿತವೂ ಆಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸುವ ಸಮಯ ಇದಾಗಿದೆ. ಇದಕ್ಕಾಗಿ ಭಾರತ ಸ್ವಾವಲಂಬಿಯಾಗಬೇಕು. ಕೃಷಿ, ಬಾಹ್ಯಾಕಾಶದಿಂದ ಆರೋಗ್ಯ ಆರೈಕೆಯವರೆಗೆ ಭಾರತವು ಸ್ವಾವಲಂಬಿ ಭಾರತ ನಿರ್ಮಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸುವಂತಹ ಕ್ರಮಗಳು ನಮ್ಮ ಯುವಕರಿಗೆ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಅವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ.

7.      ಕೆಲವೇ ತಿಂಗಳುಗಳ ಹಿಂದೆ ನಾವು ಎನ್ -95 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವು ಸಾಂಕ್ರಾಮಿಕದ ಸಮಯದಲ್ಲಿ ಎನ್.05 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ತಯಾರಿಸುವುದಷ್ಟೇ ಅಲ್ಲ ಅದನ್ನು ವಿಶ್ವಾದ್ಯಂತ ರಫ್ತು ಸಹ ಮಾಡುತ್ತಿದ್ದೇವೆ.

8.      ‘ಮೇಕ್ ಇನ್ ಇಂಡಿಯಾ’ ಜೊತೆಗೆ, ನಾವು ‘ಮೇಕ್ ಫಾರ್ ವರ್ಲ್ಡ್’ ಎಂಬ ಮಂತ್ರವನ್ನೂ ಅಳವಡಿಸಿಕೊಳ್ಳಬೇಕು.

9.      110 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ ಲೈನ್ ಯೋಜನೆ ನಮ್ಮ ಒಟ್ಟಾರೆ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ನಾವು ಈಗ ಬಹು–ಮಾದರಿ ಸಂಪರ್ಕ ಮೂಲಸೌಕರ್ಯಗಳತ್ತ ಗಮನ ಹರಿಸುತ್ತಿದ್ದೇವೆ. ನಾವು ಇನ್ನು ಮುಂದೆ ಹಗೇವಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ; ನಾವು ಸಮಗ್ರ ಮತ್ತು ಅಂತರ್ಗತ ಮೂಲಸೌಕರ್ಯಗಳತ್ತ ಗಮನ ಹರಿಸಬೇಕಾಗಿದೆ. ವಿವಿಧ ವಲಯಗಳ ಸುಮಾರು 7,000 ಯೋಜನೆಗಳನ್ನು ಸಹ ಗುರುತಿಸಲಾಗಿದೆ. ಇದು ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಾದೆ.

10.  ಇನ್ನೂ ಇಷ್ಟು ಸುದೀರ್ಘ ಕಾಲ ನಮ್ಮ ದೇಶದಿಂದ ಕಚ್ಚಾ ವಸ್ತುಗಳು ಹೊರ ಹೋಗಿ ಸಿದ್ಧ ವಸ್ತುವಾಗಿ ಮಾರ್ಪಟ್ಟು ಭಾರತಕ್ಕೆ ಮರಳಬೇಕು. ನಮ್ಮ ಕೃಷಿ ಪದ್ಧತಿ ಬಹಳ ಹಿಂದುಳಿದಿದ್ದ ಕಾಲವೊಂದಿತ್ತು. ಆಗಿನ ದೊಡ್ಡ ಕಾಳಜಿ ದೇಶವಾಸಿಗಳಿಗೆ ಹೇಗೆ ಆಹಾರವನ್ನು ಪೂರೈಸುವುದು ಎಂಬುದಾಗಿತ್ತು. ಇಂದು, ನಾವು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಅನೇಕ ದೇಶಗಳಿಗೆ ಆಹಾರವನ್ನು ನೀಡಬಲ್ಲವರಾಗಿದ್ದೇವೆ. ಸ್ವಾವಲಂಬಿ ಭಾರತ ಎಂದರೆ ಆಮದನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ನಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವುದೂ ಆಗಿದೆ.

11.  ಭಾರತದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಇಡೀ ಜಗತ್ತು ಗಮನಿಸುತ್ತಿದೆ. ಇದರ ಪರಿಣಾಮವಾಗಿ, ಎಫ್‌.ಡಿಐ ಒಳಹರಿವು ಎಲ್ಲಾ ದಾಖಲೆಗಳನ್ನು ಮುರಿದಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲೂ ಭಾರತ ಎಫ್‌.ಡಿಐನಲ್ಲಿ ಶೇ.18ರಷ್ಟು ಹೆಚ್ಚಳ ದಾಖಲಿಸಿದೆ.

12.  ದೇಶದ ಬಡವರ ಜನ ಧನ್ ಖಾತೆಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೇರವಾಗಿ ವರ್ಗಾಯಿಸಲಾಗುವುದು ಎಂದು ಯಾರೂ ಊಹಿಸಿರಲಿಲ್ಲ? ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆಯಲ್ಲಿ ಇಷ್ಟು ದೊಡ್ಡ ಬದಲಾವಣೆ ಸಂಭವಿಸುತ್ತದೆ ಎಂದು ಯಾರು ಭಾವಿಸಿರಲಿಲ್ಲ? ಒಂದು ರಾಷ್ಟ್ರ–ಒಂದು ಪಡಿತರ ಚೀಟಿ, ಒಂದು ರಾಷ್ಟ್ರ – ಒಂದು ತೆರಿಗೆ, ದಿವಾಳಿ ಮತ್ತು ದಿವಾಳಿತನ ಸಂಹಿತೆ ಹಾಗೂ ಬ್ಯಾಂಕುಗಳ ವಿಲೀನ ಇಂದು ದೇಶದ ಸಾಕಾರಗೊಳ್ಳುತ್ತಿದೆ.

13.  ನಾವು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದೇವೆ– ನೌಕಾಪಡೆ ಮತ್ತು ವಾಯುಪಡೆಗಳು ಮಹಿಳೆಯರನ್ನು ಯುದ್ಧಕ್ಕೂ ಕರೆದೊಯ್ಯುತ್ತಿವೆ, ಮಹಿಳೆಯರು ಈಗ ನಾಯಕತ್ವ ವಹಿಸುತ್ತಿದ್ದಾರೆ, ಮತ್ತು ನಾವು ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿದ್ದೇವೆ, ಮಹಿಳೆಯರಿಗೆ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಲಭಿಸುವಂತೆ ಮಾಡಿದ್ದೇವೆ.

14.  ನನ್ನ ಪ್ರೀತಿಯ ದೇಶವಾಸಿಗಳೇ, – ಸಾಮರ್ಥ್ಯಮೂಲ ಸ್ವಾತಂತ್ರ್ಯಾಂ, ಶ್ರಮೂಲಂ ವೈಭವಂ. ಒಂದು ಸಮಾಜದ ಶಕ್ತಿ, ಯಾವುದೇ ರಾಷ್ಟ್ರದ ಸ್ವಾತಂತ್ರ್ಯವು ಅದರ ಶಕ್ತಿಯಾಗಿದೆ ಮತ್ತು ಅದರ ಸಮೃದ್ಧಿ ಮತ್ತು ಪ್ರಗತಿಯ ಮೂಲವೆಂದರೆ ಅದರ ಕಾರ್ಮಿಕ ಶಕ್ತಿ.

15.  ಏಳು ಕೋಟಿ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ, ಪಡಿತರ ಚೀಟಿ ಹೊಂದಿರುವ ಮತ್ತು ಹೊಂದದೇ ಇರುವ  80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ ಪೂರೈಸಲಾಗಿದೆ, ಸುಮಾರು 90 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಗರೀಬ್ ಕಲ್ಯಾಣ್ ರೋಜರ್ ಅಭಿಯಾನದಡಿ ಅವರ ಗ್ರಾಮಗಳಲ್ಲಿಯೇ ಬಡವರಿಗೆ ಉದ್ಯೋಗ ಒದಗಿಸಲಾಗುತ್ತಿದೆ.

16.  ವೋಕಲ್ ಫಾರ್ ಲೋಕಲ್ ಅಂದರೆ ಸ್ಥಳೀಯತೆಗೆ ಧ್ವನಿಯಾಗುವ, ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯಕ್ಕಾಗಿ ಅಭಿಯಾನವು ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆ ತರುತ್ತಿದೆ.

17.  ದೇಶದ ಹಲವು ಪ್ರದೇಶಗಳು ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿವೆ. 110 ಕ್ಕೂ ಹೆಚ್ಚು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಆಯ್ಕೆ ಮಾಡುವ ಮೂಲಕ, ಜನರಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಉತ್ತಮ ಉದ್ಯೋಗಾವಕಾಶಗಳು ದೊರೆಯುವಂತೆ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

18.  ಸ್ವಾವಲಂಬಿ ಭಾರತಕ್ಕೆ – ಸ್ವಾವಲಂಬಿ ಕೃಷಿ ಮತ್ತು ಸ್ವಾವಲಂಬಿ ರೈತರು ಎಂಬ ಒಂದು ಪ್ರಮುಖ ಆದ್ಯತೆ ಇದೆ. ದೇಶದ ರೈತರಿಗೆ ಆಧುನಿಕ ಮೂಲಸೌಕರ್ಯ ಒದಗಿಸಲು, ಕೆಲವು ದಿನಗಳ ಹಿಂದೆ 1 ಲಕ್ಷ ಕೋಟಿ ರೂ.ಗಳ 'ಕೃಷಿ ಮೂಲಸೌಕರ್ಯ ನಿಧಿ' ಸ್ಥಾಪಿಸಲಾಗಿದೆ.

19.  ಇದೇ ಕೆಂಪು ಕೋಟೆಯಿಂದ, ಕಳೆದ ವರ್ಷ, ನಾನು ಜಲ್ ಜೀವನ್ ಅಭಿಯಾನವನ್ನು ಘೋಷಿಸಿದ್ದೆ. ಇಂದು, ಈ ಅಭಿಯಾನದಡಿಯಲ್ಲಿ, ಪ್ರತಿನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದೆ.

20.  ಮಧ್ಯಮ ವರ್ಗದಿಂದ ಹೊರಹೊಮ್ಮುವ ವೃತ್ತಿಪರರು ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಮಧ್ಯಮ ವರ್ಗಕ್ಕೆ ಅವಕಾಶಗಳು ಬೇಕು, ಮಧ್ಯಮ ವರ್ಗಕ್ಕೆ ಸರ್ಕಾರದ ಹಸ್ತಕ್ಷೇಪದಿಂದ ಸ್ವಾತಂತ್ರ್ಯ ಇರಬೇಕು.

21.  ಗೃಹ ಸಾಲದ ಇಎಂಐ ಪಾವತಿ ಅವಧಿಯಲ್ಲಿ 6 ಲಕ್ಷ ರೂಪಾಯಿಗಳವರೆಗೆ ರಿಯಾಯಿತಿ ಪಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಕಳೆದ ವರ್ಷವಷ್ಟೇ, ಸಾವಿರಾರು ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು 25 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಸ್ಥಾಪಿಸಲಾಗಿದೆ

22.  ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ, ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ, ನವ ಭಾರತ ನಿರ್ಮಾಣದಲ್ಲಿ, ಸಮೃದ್ಧ ಭಾರತದ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಈ ಚಿಂತನೆಯೊಂದಿಗೆ, ದೇಶವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಡೆದುಕೊಂಡಿದೆ.

23.  ಕರೋನಾ ಸಮಯದಲ್ಲಿ, ಡಿಜಿಟಲ್ ಇಂಡಿಯಾ ಅಭಿಯಾನದ ಪಾತ್ರ ಏನು ಎಂದು ನಾವು ನೋಡಿದ್ದೇವೆ. ಕಳೆದ ತಿಂಗಳು ಬಹುತೇಕ 3 ಲಕ್ಷ ಕೋಟಿ ರೂಪಾಯಿಗಳನ್ನು ಭೀಮ್, ಯುಪಿಐ ಒಂದರ ಮೂಲಕವೇ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

24.  2014ಕ್ಕೆ ಮೊದಲು ದೇಶದ ಕೇವಲ 5 ಪಂಚಾಯ್ತಿಗಳು ಮಾತ್ರವೇ ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿತವಾಗಿದ್ದವು. ಕಳೆದ ಐದು ವರ್ಷಗಳಲ್ಲಿ, 1.5 ಲಕ್ಷ ಗ್ರಾಮ ಪಂಚಾಯ್ತಿಗಳನ್ನು ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕಿಸಲಾಗಿದೆ. ದೇಶದ ಎಲ್ಲ 6 ಲಕ್ಷ ಹಳ್ಳಿಗಳನ್ನು ಮುಂದಿನ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಜೋಡಿಸಲಾಗುವುದು.

25.  ಪ್ರೀತಿಯ ದೇಶವಾಸಿಗಳೆ, ನಮ್ಮ ಅನುಭವ ಹೇಳುವಂತೆ ಭಾರತದ ಮಹಿಳಾ ಶಕ್ತಿಗೆ ಯಾವಾಗಲೆಲ್ಲಾ ಅವಕಾಶ ದೊರೆತಿದೆಯೋ ಆಗೆಲ್ಲಾ ಅವರು ದೇಶಕ್ಕೆ ಪ್ರಶಸ್ತಿ ತಂದಿದ್ದಾರೆ, ದೇಶವನ್ನು ಬಲಪಡಿಸಿದ್ದಾರೆ. ಇಂದು ಮಹಿಳೆಯರು ಕೇವಲ ಕಲ್ಲಿದ್ದಲು ಗಣಿಗಳ ಒಳಗಷ್ಟೇ ಕೆಲಸ ಮಾಡುತ್ತಿಲ್ಲ, ಜೊತೆಗೆ ಅವರು ಯುದ್ಧ ವಿಮಾನಗಳನ್ನೂ ಹಾರಿಸುತ್ತಿದ್ದಾರೆ, ಆಗಸದಷ್ಟು ಔನ್ನತ್ಯ ಮುಟ್ಟುತ್ತಿದ್ದಾರೆ.

26.  40 ಕೋಟಿ ಜನ್ ಧನ್ ಖಾತೆಗಳನ್ನು ದೇಶದಲ್ಲಿ ತೆರೆಯಲಾಗಿದೆ, ಇದರಲ್ಲಿ 22 ಕೋಟಿ ಖಾತೆಗಳು ಮಹಿಳೆಯರದಾಗಿವೆ. ಕೊರೊನಾ ಸಮಯದಲ್ಲಿ ಏಪ್ರಿಲ್ –ಮೇ–ಜೂನ್ ನಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ  ಮೂರು ತಿಂಗಳುಗಳ ಕಾಲ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ.

27.  ಕರೋನಾ ಕಾಣಿಸಿಕೊಂಡಾಗ, ನಮ್ಮ ದೇಶದಲ್ಲಿ ಕರೋನಾ ಪರೀಕ್ಷೆಗೆ ಒಂದೇ ಪ್ರಯೋಗಾಲಯ ಇತ್ತು. ಇಂದು ದೇಶದಲ್ಲಿ 1,400 ಕ್ಕೂ ಹೆಚ್ಚು ಪ್ರಯೋಗಾಲಯಗಳಿವೆ.

28.  ಇಂದಿನಿಂದ ದೇಶದಲ್ಲಿ ಮತ್ತೊಂದು ದೊಡ್ಡ ಅಭಿಯಾನ ಪ್ರಾರಂಭವಾಗಲಿದೆ. ಅದುವೇ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್. ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯದ ಗುರುತಿನ ಚೀಟಿ ನೀಡಲಾಗುವುದು. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ನಿಮ್ಮ ಎಲ್ಲಾ ಪರೀಕ್ಷೆಗಳು, ಪ್ರತಿ ಕಾಯಿಲೆ, ಯಾವ ವೈದ್ಯರು ನಿಮಗೆ ಯಾವ ಔಷಧವನ್ನು ನೀಡಿದರು, ಯಾವಾಗ ನೀಡಿದರು, ನಿಮ್ಮ ವರದಿಗಳು ಯಾವುವು, ಈ ಎಲ್ಲಾ ಮಾಹಿತಿಗಳು ಈ ಒಂದು ಆರೋಗ್ಯ ಗುರುತಿನ ಚೀಟಿಯಲ್ಲಿರುತ್ತವೆ.

29.  ಇಂದು, ಕೊರಾನಾದ ಒಂದು, ಎರಡು ಅಲ್ಲ, ಮೂರು ಲಸಿಕೆಗಳು ಪ್ರಸ್ತುತ ಭಾರತದಲ್ಲಿ ಪರೀಕ್ಷೆಯ ವಿವಿಧ ಹಂತದಲ್ಲಿದೆ. ವಿಜ್ಞಾನಿಗಳಿಂದ ಹಸಿರು ನಿಶಾನೆ ಬಂದ ತಕ್ಷಣ, ಆ ಲಸಿಕೆಗಳ ಸಾಮೂಹಿಕ ಉತ್ಪಾದನೆಗೆ ದೇಶ ಸಿದ್ಧತೆ ಮಾಡಿಕೊಂಡಿದೆ.

30.  ಈ ವರ್ಷ ಜಮ್ಮು ಮತ್ತು ಕಾಶ್ಮೀರದ ಹೊಸ ಅಭಿವೃದ್ಧಿ ಪ್ರಯಾಣದ ವರ್ಷ. ಈ ವರ್ಷ ಜಮ್ಮು ಮತ್ತು ಕಾಶ್ಮೀರದ ಮಹಿಳೆಯರು ಮತ್ತು ದಲಿತರ ಹಕ್ಕುಗಳ ವರ್ಷ! ಇದು ಜಮ್ಮು ಮತ್ತು ಕಾಶ್ಮೀರದ ನಿರಾಶ್ರಿತರ ಘನತೆಯ ಜೀವನದ ವರ್ಷವಾಗಿದೆ. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಕ್ರಿಯಾಶೀಲತೆ ಮತ್ತು ಸಂವೇದನೆಯೊಂದಿಗೆ ಅಭಿವೃದ್ಧಿಯ ಹೊಸ ಯುಗದಲ್ಲಿ ಮುಂದಡಿಯಿಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

31.  ಕಳೆದ ವರ್ಷ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಮೂಲಕ, ಅದರ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಯಿತು. ಹಿಮಾಲಯದ ಉತ್ತುಂಗದಲ್ಲಿರುವ ಲಡಾಖ್, ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಲು ಇಂದು ಮುಂದೆ ಸಾಗುತ್ತಿದೆ. ಸಿಕ್ಕಿಂ ಸಾವಯವ ರಾಜ್ಯವಾಗಿ ತನ್ನ ಛಾಪು ಮೂಡಿಸಿದಂತೆಯೇ, ಮುಂದಿನ ದಿನಗಳಲ್ಲಿ ಲಡಾಖ್ ಇಂಗಾಲದ ತಟಸ್ಥ (ಕಾರ್ಬನ್ ನ್ಯೂಟ್ರಲ್) ಪ್ರದೇಶವಾಗಿ ತನ್ನ ಗುರುತನ್ನು ಮೂಡಿಸುತ್ತಿದೆ, ಈ ದಿಕ್ಕಿನಲ್ಲಿಯೂ ಕೆಲಸ ನಡೆಯುತ್ತಿದೆ.

32.  ದೇಶದ 100 ಆಯ್ದ ನಗರಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಮಗ್ರ ವಿಧಾನವನ್ನು ಹೊಂದಿರುವ ವಿಶೇಷ ಅಭಿಯಾನವನ್ನು ಸಹ ನಡೆಸಲಾಗುತ್ತಿದೆ.

33.  ಭಾರತವು ತನ್ನ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಸಂಪೂರ್ಣ ಸಂವೇದನೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಹುಲಿಗಳ ಸಂಖ್ಯೆಯು ಶೀಘ್ರವಾಗಿ ಹೆಚ್ಚಾಗಿದೆ! ಈಗ  ಏಷ್ಯಾಟಿಕ್ ಸಿಂಹಗಳ ಪ್ರಾಜೆಕ್ಟ್ ನಲ್ಲಿ ಈಗ ಸಿಂಹಗಳಿಗಾಗಿ ಯೋಜನೆಯನ್ನು ದೇಶದಲ್ಲಿ ಪ್ರಾರಂಭಿಸಲಿದೆ. ಅಂತೆಯೇ, ಪ್ರಾಜೆಕ್ಟ್ ಡಾಲ್ಫಿನ್ ಸಹ ಪ್ರಾರಂಭಿಸಲಾಗುವುದು.

34.  ಎಲ್‌.ಒಸಿಯಿಂದ ಎಲ್‌.ಎಸಿವರೆಗೆ, ದೇಶದ ಸಾರ್ವಭೌಮತ್ವದ ಬಗ್ಗೆ ಯಾರು ಕಣ್ಣು ಹಾಕಿದರೂ, ದೇಶದ ಸೈನ್ಯವು ಅದೇ ಭಾಷೆಯಲ್ಲಿ ಉತ್ತರಿಸುತ್ತದೆ. ಭಾರತದ ಸಾರ್ವಭೌಮತ್ವವನ್ನು ಗೌರವಿಸುವುದು ನಮಗೆ ಪರಮೋಚ್ಚವಾಗಿದೆ. ಈ ನಿರ್ಣಯಕ್ಕಾಗಿ ನಮ್ಮ ಕೆಚ್ಚೆದೆಯ ಸೈನಿಕರು ಏನು ಮಾಡಬಹುದು, ದೇಶವು ಏನು ಮಾಡಬಹುದು, ಜಗತ್ತು ಇದನ್ನು ಲಡಾಕ್‌ ನಲ್ಲಿ ನೋಡಿದೆ.

35.  ವಿಶ್ವದ ಜನಸಂಖ್ಯೆಯ ಕಾಲು ಭಾಗ ದಕ್ಷಿಣ ಏಷ್ಯಾದಲ್ಲಿ ಜೀವಿಸುತ್ತಿದೆ. ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ ಇಷ್ಟು ದೊಡ್ಡ ಜನಸಂಖ್ಯೆಯ ಅಭಿವೃದ್ಧಿ ಮತ್ತು ಸಮೃದ್ಧಿಯ ಸಾಧ್ಯತೆಗಳನ್ನು ನಾವು ರೂಪಿಸಬಹುದು.

36.  ನಮ್ಮ ಗಡಿ ಮತ್ತು ಕರಾವಳಿ ಮೂಲಸೌಕರ್ಯಗಳು ದೇಶದ ಭದ್ರತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಅದು ಹಿಮಾಲಯದ ಶಿಖರಗಳೇ ಇರಲಿ ಅಥವಾ ಹಿಂದೂ ಮಹಾಸಾಗರದ ದ್ವೀಪಗಳೇ ಆಗಿರಲಿ, ಇಂದು ದೇಶದಲ್ಲಿ ರಸ್ತೆ ಮತ್ತು ಇಂಟರ್ನೆಟ್ ಸಂಪರ್ಕದ ಅಭೂತಪೂರ್ವ ವಿಸ್ತರಣೆ ಆಗುತ್ತಿದೆ.

 
20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Reading the letter from PM Modi para-swimmer and author of “Swimming Against the Tide” Madhavi Latha Prathigudupu, gets emotional

Media Coverage

Reading the letter from PM Modi para-swimmer and author of “Swimming Against the Tide” Madhavi Latha Prathigudupu, gets emotional
...

Nm on the go

Always be the first to hear from the PM. Get the App Now!
...
Prime Minister participates in 16th East Asia Summit on October 27, 2021
October 27, 2021
ಶೇರ್
 
Comments

Prime Minister Shri Narendra Modi participated in the 16th East Asia Summit earlier today via videoconference. The 16th East Asia Summit was hosted by Brunei as EAS and ASEAN Chair. It saw the participation of leaders from ASEAN countries and other EAS Participating Countries including Australia, China, Japan, South Korea, Russia, USA and India. India has been an active participant of EAS. This was Prime Minister’s 7th East Asia Summit.

In his remarks at the Summit, Prime Minister reaffirmed the importance of EAS as the premier leaders-led forum in Indo-Pacific, bringing together nations to discuss important strategic issues. Prime Minister highlighted India’s efforts to fight the Covid-19 pandemic through vaccines and medical supplies. Prime Minister also spoke about "Atmanirbhar Bharat” Campaign for post-pandemic recovery and in ensuring resilient global value chains. He emphasized on the establishment of a better balance between economy and ecology and climate sustainable lifestyle.

The 16th EAS also discussed important regional and international issues including Indo-Pacifc, South China Sea, UNCLOS, terrorism, and situation in Korean Peninsula and Myanmar. PM reaffirmed "ASEAN centrality” in the Indo-Pacific and highlighted the synergies between ASEAN Outlook on Indo-Pacific (AOIP) and India’s Indo-Pacific Oceans Initiative (IPOI).

The EAS leaders adopted three Statements on Mental Health, Economic recovery through Tourism and Sustainable Recovery, which have been co-sponsored by India. Overall, the Summit saw a fruitful exchange of views between Prime Minister and other EAS leaders.