ವಿದ್ಯಾರ್ಥಿಗಳು ಉದ್ಯಮದ ವೃತ್ತಿಪರರನ್ನು ಸಂಪರ್ಕಿಸಬೇಕು ಮತ್ತು ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು: ಪ್ರಧಾನಮಂತ್ರಿ
ಅಧ್ಯಯನ ಮತ್ತು ಕಲೆಯನ್ನು ಬೇರೆ ಬೇರೆಯಾಗಿ ನೋಡಬೇಡಿ: ಪ್ರಧಾನಮಂತ್ರಿ
ಅಧ್ಯಯನದಿಂದ ಉಂಟಾಗುವ ಒತ್ತಡ ಮತ್ತು ಸುಸ್ತನ್ನು ಹೋಗಲಾಡಿಸಲು ನೀವು ಕಲೆಯನ್ನು ಬಳಸಬಹುದು: ಪ್ರಧಾನಮಂತ್ರಿ
ರಸ್ತೆಗಳಲ್ಲಿ ಕಸ ಎಸೆಯಬೇಡಿ ಅಥವಾ ಉಗುಳಬೇಡಿ, ಕೆಂಪು ದೀಪದ ಸಂಕೇತವಿದ್ದಾಗ ವಾಹನ ನಿಲ್ಲಿಸಿ ಮತ್ತು ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ಪ್ರಧಾನಮಂತ್ರಿ ನಾಗರಿಕರಿಗೆ ಮನವಿ ಮಾಡಿದರು.
ಪ್ರತಿಯೊಂದು ಸಣ್ಣ ಹೆಜ್ಜೆಯೂ 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುತ್ತದೆ: ಪ್ರಧಾನಮಂತ್ರಿ
ಶಿಸ್ತು ಯಶಸ್ಸಿಗೆ ಪ್ರಮುಖ ಆಧಾರ, ಸ್ಫೂರ್ತಿಯು ಅದಕ್ಕೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತದೆ: ಪ್ರಧಾನಮಂತ್ರಿ
ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ: ಪ್ರಧಾನಮಂತ್ರಿ
ತಂತ್ರಜ್ಞಾನವು ಒಬ್ಬ ಉತ್ತಮ ಶಿಕ್ಷಕ, ಅದನ್ನು ಮುಕ್ತವಾಗಿ ಸ್ವೀಕರಿಸಿ: ಪ್ರಧಾನಮಂತ್ರಿ
ಪ್ರವಾಸ ಎಂದರೆ ಕೇವಲ ಸ್ಥಳಗಳನ್ನು ನೋಡುವುದಲ್ಲ, ಬದಲಿಗೆ ಒಬ್ಬ ವಿದ್ಯಾರ್ಥಿಯಂತೆ ಅವುಗಳನ್ನು ಅರ್ಥಮಾಡಿಕೊಳ್ಳುವುದು: ಪ್ರಧಾನಮಂತ್ರಿ
ಭಾರತವು ಅದ್ಭುತವಾಗಿದೆ - ಪ್ರಯಾಣಿಸಿ ಮತ್ತು ಅನ್ವೇಷಿಸಿ: ಪ್ರಧಾನಮಂತ್ರಿ
ನೀವು ಏನನ್ನೇ ಅಧ್ಯಯನ ಮಾಡಿದರೂ ಅದು ಎಂದಿಗೂ ವ್ಯರ್ಥವಾಗುವುದಿಲ್ಲ, ಅದು ನಿಮ್ಮ ಮನಸ್ಸಿನಲ್ಲಿ ಸಂಗ್ರಹವಾಗಿರುತ್ತದೆ: ಪ್ರಧಾನಮಂತ್ರಿ
ಓದಿನಲ್ಲಿ ಹಿಂದುಳಿದವರೊಂದಿಗೆ ಸ್ನೇಹ ಬೆಳೆಸಿ ಮತ್ತು ಅವರಿಗೆ ಕಲಿಯಲು ಸಹಾಯ ಮಾಡಿ: ಪ್ರಧಾನಮಂತ್ರಿ
ಕ್ರೀಡೆಯನ್ನು ಜೀವನದ ಭಾಗವಾಗಿಸಿಕೊಳ್ಳುವುದು ಮುಖ್ಯ: ಪ್ರಧಾನಮಂತ್ರಿ
ಒಬ್ಬ ನಾಯಕನಾಗಲು, ಸ್ವತಃ ಮುಂದಾಳತ್ವ ವಹಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ: ಪ್ರಧಾನಮಂತ್ರಿ
ಒಬ್ಬ ಉತ್ತಮ ನಾಯಕನು ತನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಸಂವಹನ ಮಾಡಬೇಕು: ಪ್ರಧಾನಮಂತ್ರಿ
ಬಲವಾದ ಮೂಲಸೌಕರ್ಯವು ದೀರ್ಘಕಾಲೀನ ಅಭಿವೃದ್ಧಿಗೆ ಅಡಿಪಾಯವಾಗಿದೆ: ಪ್ರಧಾನಮಂತ್ರಿ
ಕೇವಲ ಓದುವುದಲ್ಲದೆ, ಬರೆಯುವ ಮೂಲಕವೂ ಅಭ್ಯಾಸ ಮಾಡಿ: ಪ್ರಧಾನಮಂತ್ರಿ
ಕೇವಲ ಯಶಸ್ಸನ್ನು ನೋಡಿ ಮರುಳಾಗಬೇಡಿ, ಮಹಾನ್ ವ್ಯಕ್ತಿಗಳ ಸಾಮಾನ್ಯ ಆರಂಭದಿಂದ ಕಲಿಯಿರಿ: ಪ್ರಧಾನಮಂತ್ರಿ
ಭಾರತದ ಪ್ರಗತಿಯು ಅದರ ಬುಡಕಟ್ಟು ಸಮುದಾಯಗಳಿಂದ ಸಮೃದ್ಧವಾಗಿದೆ: ಪ್ರಧಾನಮಂತ್ರಿ
ಜೀವನದಲ್ಲಿ ಎಂದಿಗೂ ಒಂದೇ ಕಡೆ ಸ್ಥಿರವಾಗಬೇಡಿ, ಯಾವಾಗಲೂ ಹೆಚ್ಚಿನ ಸಾಧನೆಗಾಗಿ ಶ್ರಮಿಸಿ: ಪ್ರಧಾನಮಂತ್ರಿ
ನಮ್ಮ ಬಗ್ಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ: ಪ್ರಧಾನಮಂತ್ರಿ
ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಉಸಿರಾಟದ ವ್ಯಾಯಾಮವನ್ನು ಮಾಡಬೇಕು: ಪ್ರಧಾನಮಂತ್ರಿ
ಹೋಲಿಕೆಯಿಂದ ಒತ್ತಡಕ್ಕೆ ಒಳಗಾಗುವ ಬದಲು, ಇತರರಿಂದ ಕಲಿಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿ: ಪ್ರಧಾನಮಂತ್ರಿ
ಪೋಷಕರು ಮನೆಯಲ್ಲಿ ಹೋಲಿಕೆ ಮಾಡುವ ವಾತಾವರಣವನ್ನು ಪ್ರೋತ್ಸಾಹಿಸಬಾರದು: ಪ್ರಧಾನಮಂತ್ರಿ
ನಿಮಗಿಂತ ಉತ್ತಮವಾಗಿರುವ ಜನರಿಂದ ಕಲಿಯಿರಿ: ಪ್ರಧಾನಮಂತ್ರಿ
ಯಾವಾಗಲೂ ನಿಮ್ಮ ಮೇಲೆ ನೀವು ನಂಬಿಕೆ ಇಡಿ: ಪ್ರಧಾನಮಂತ್ರಿ

ಪ್ರಧಾನಮಂತ್ರಿ: ನನ್ನ ಪ್ರೀತಿಯ ಸ್ನೇಹಿತರೆ, ಪರೀಕ್ಷಾ ಪೇ ಚರ್ಚಾದ ಈ ಮಹತ್ವದ ಆವೃತ್ತಿಗೆ ಸ್ವಾಗತ. ಈ ಬಾರಿ ಇದು ಸ್ವಲ್ಪ ವಿಭಿನ್ನವಾಗಿದೆ, ಸ್ವಲ್ಪ ವಿಶೇಷವೂ ಆಗಿದೆ. ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಪೇ ಚರ್ಚಾವನ್ನು ದೇಶದ ವಿವಿಧ ಭಾಗಗಳಲ್ಲಿಯೂ ನಡೆಸಬೇಕೆಂದು ಸೂಚಿಸಿದ್ದರು. ಆದ್ದರಿಂದ ಈ ಬಾರಿ, ನಾನು ಭಾರತದಾದ್ಯಂತ ವಿದ್ಯಾರ್ಥಿಗಳೊಂದಿಗೆ ಕುಳಿತು ಈ ಚರ್ಚೆಗಳನ್ನು ನಡೆಸಿದ್ದೇನೆ. ಈ ವಿಶೇಷ ಸಂಚಿಕೆಯಲ್ಲಿ, ನೀವು ಅದನ್ನು ನಿಖರವಾಗಿ ನೋಡುತ್ತೀರಿ. ತಮಿಳುನಾಡಿನ ಕೊಯಮತ್ತೂರಿನಿಂದ ಪ್ರಾರಂಭಿಸೋಣ. ತಮಿಳುನಾಡಿನ ವಿದ್ಯಾರ್ಥಿಗಳ ಶಕ್ತಿ ಮತ್ತು ಕುತೂಹಲ ನನಗೆ ತುಂಬಾ ಪ್ರಭಾವ ಬೀರಿದೆ, ನೋಡೋಣ.

ಪ್ರಧಾನಮಂತ್ರಿ: ವಣಕ್ಕಂ!

ವಿದ್ಯಾರ್ಥಿಗಳು: ವಣಕ್ಕಂ, ಸರ್!

ಪ್ರಧಾನಮಂತ್ರಿ: ನೀವೆಲ್ಲರೂ ಏನಾದರೂ ತಿಂದಿದ್ದೀರಾ ಅಥವಾ ಇಲ್ಲವೇ?

ವಿದ್ಯಾರ್ಥಿಗಳುಇಲ್ಲ, ಸರ್, ನಾವು ಈಗಾಗಲೇ ತಿಂದಿದ್ದೇವೆ.

ಪ್ರಧಾನಮಂತ್ರಿ: ನಿಮ್ಮ ಬಳಿ ಏನಿದೆ?

ವಿದ್ಯಾರ್ಥಿಗಳುನಾವು ಮನೆಯಿಂದಲೇ ಆಹಾರ ತಂದಿದ್ದೇವೆ.

ಪ್ರಧಾನಮಂತ್ರಿಮನೆಯಿಂದ, ಸರಿ, ತುಂಬಾ ಒಳ್ಳೆಯದು.

ವಿದ್ಯಾರ್ಥಿ: ನಾನು ನಿಮ್ಮನ್ನು ನೋಡಿದಾಗ ನನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ.

ವಿದ್ಯಾರ್ಥಿಮೊದಲಿಗೆ ನಾನು ನಿಮ್ಮ ಆಗಮನದ ಬಗ್ಗೆ ಒಂದು ರೀತಿಯ ಕ್ರಿಯಾಶೀಲ ಮತ್ತು  ಅನಿರೀಕ್ಷಿತ ಅಥವಾ ಕೌತುಕದ ಭಾವನೆ ನಿರೀಕ್ಷಿಸಿದ್ದೆ, ಏಕೆಂದರೆ ನೀವು ಪ್ರಧಾನ ಮಂತ್ರಿ, ಆದರೆ ನನ್ನ ನಿರೀಕ್ಷೆಗಳೆಲ್ಲಾ ಹುಸಿಯಾದವು, ವಾಸ್ತವವಾಗಿ  ನಾವು ತುಂಬಾ ವಿನಮ್ರ ಮತ್ತು ಸರಳ ವ್ಯಕ್ತಿ..

ವಿದ್ಯಾರ್ಥಿ: ಅವರು ಒಳಗೆ ಬಂದಾಗ, ನನಗೆ ಆಶ್ಚರ್ಯವಾಯಿತು. ಅವರು ನಿಜವಾಗಿಯೂ ಅದ್ಭುತ.

ಪ್ರಧಾನಮಂತ್ರಿಹಲವು ವರ್ಷಗಳಿಂದ, ನಾನು ಪರೀಕ್ಷಾ ಪೇ ಚರ್ಚಾ ಮೂಲಕ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿದ್ದೇನೆ. ನಾನು ಇದನ್ನು ಕಲಿಸಲು ಅಲ್ಲ, ಕಲಿಯಲು ಮಾಡುತ್ತೇನೆ. ನನಗೆ, ಇದು ಒಂದು ಉತ್ತಮ ಕಲಿಕೆಯ ಅನುಭವ. ಅದಕ್ಕಾಗಿಯೇ ನಾನು ಇಂದು ತಮಿಳುನಾಡಿನ ಯುವಕರನ್ನು ಭೇಟಿಯಾಗುತ್ತಿದ್ದೇನೆ - ನಿಮ್ಮಿಂದ ಕಲಿಯಲು. ಆದ್ದರಿಂದ ನಿಮ್ಮಲ್ಲಿ ಯಾರಾದರೂ ಏನನ್ನಾದರೂ ಹಂಚಿಕೊಳ್ಳಲು ಬಯಸಿದರೆ, ನಾನು ಕೇಳಲು ಇಲ್ಲಿದ್ದೇನೆ. ಯಾರು ಪ್ರಾರಂಭಿಸುತ್ತಾರೆ?

ವಿದ್ಯಾರ್ಥಿನನ್ನ ಹೆಸರು ಛವಿ ಜೈನ್. ನಾನು ಸ್ಟಾರ್ಟಪ್ ಆರಂಭಿಸಲು ಬಯಸುತ್ತೇನೆ. ನಾನು ಯಾವ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಶೈಕ್ಷಣಿಕ ಮಟ್ಟದಲ್ಲಿ, ನನ್ನ ಸ್ಟಾರ್ಟಪ್ ಆರಂಭಿಸಲು ನಾನು ಏನು ಮಾಡಬೇಕು?

ಪ್ರಧಾನಮಂತ್ರಿ: ನಿಮ್ಮ ಚಿಂತನೆ ಸರಿ ಇದೆ. ಇತ್ತೀಚಿನ ದಿನಗಳಲ್ಲಿ, ನಾನು ಯುವಕರನ್ನು ಭೇಟಿಯಾದಾಗಲೆಲ್ಲಾ, ಅವರು ತಕ್ಷಣ ಸ್ಟಾರ್ಟಪ್ ‌ಗಳ ಬಗ್ಗೆ ಮಾತನಾಡುತ್ತಾರೆ. ಮೊದಲನೆಯದಾಗಿ, ನೀವು ಏನು ಮಾಡಬೇಕೆಂದು ಬಯಸುತ್ತೀರಿ ಎಂಬುದರ ಮೇಲೆ ನೀವು ಗಮನ ಹರಿಸಬೇಕು. ಕೆಲವು ಸ್ಟಾರ್ಟಪ್ ‌ಗಳು ತಾಂತ್ರಿಕ ನಾವೀನ್ಯತೆಯ ಬಗ್ಗೆ - ಕೆಲವರು ಡ್ರೋನ್ ‌ಗಳನ್ನು ತಯಾರಿಸಲು ಬಯಸುತ್ತಾರೆ, ಇನ್ನು ಕೆಲವರು ಮನೆಯಲ್ಲಿ ವಿದ್ಯುತ್ ‌ಗಾಗಿ ಹೊಸ ವ್ಯವಸ್ಥೆಗಳನ್ನು ತಯಾರಿಸಲು ಬಯಸುತ್ತಾರೆ. ತಂತ್ರಜ್ಞಾನದಲ್ಲಿ ಪರಿಣಿತರಾಗಿರುವ ಕೆಲವು ಸ್ನೇಹಿತರನ್ನು ನೀವು ತಿಳಿದಿರಬಹುದು, ಇನ್ನೊಬ್ಬರು ಹಣಕಾಸಿನಲ್ಲಿ ಉತ್ತಮರು. 4 ಸ್ನೇಹಿತರ ಸಣ್ಣ ತಂಡ ರಚಿಸಿಕೊಂಡು  ಜತೆಗೂಡಿ ಏನನ್ನಾದರೂ ಪ್ರಾರಂಭಿಸಿ. ಸ್ಟಾರ್ಟಪ್ ನಡೆಸಲು 25 ವರ್ಷ ವಯಸ್ಸಿನ ಅವಶ್ಯಕತೆಯಿಲ್ಲ - ನೀವು ಯಾವಾಗ ಬೇಕಾದರೂ ಪ್ರಾರಂಭಿಸಬಹುದು. ಸಣ್ಣ ಸ್ಟಾರ್ಟಪ್ ‌ಗಳನ್ನು ಸಹ ಬೆಳೆಸಬಹುದು. ನಿಮಗೆ ಆಸಕ್ತಿ ಇದ್ದರೆ, ಅದು ಅದ್ಭುತವಾಗಿರುತ್ತದೆ. ಕೆಲವು ಸ್ಟಾರ್ಟಪ್ ‌ಗಳಿಗೆ ಭೇಟಿ ನೀಡಿ, ಯೋಜನಾ ವರದಿ ತಯಾರಿಸಿ, ಪ್ರಾಮಾಣಿಕವಾಗಿ ಹೇಳಿ, “ನಾನು ಶಾಲಾ ವಿದ್ಯಾರ್ಥಿ, ನಾನು ಶಾಲಾ ಯೋಜನೆ ಮಾಡುತ್ತಿದ್ದೇನೆ. ಅವರು ಏನನ್ನೂ ಮರೆಮಾಚುವುದಿಲ್ಲ; ಅವರು ನಿಮ್ಮೊಂದಿಗೆ ಐಡಿಯಾ ಹಂಚಿಕೊಳ್ಳುತ್ತಾರೆ. ಕ್ರಮೇಣ, ಅದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನೀವು ಜ್ಞಾನ ಪಡೆಯುತ್ತೀರಿ.

ವಿದ್ಯಾರ್ಥಿಸರ್, ನಾನು ಅಧ್ಯಯನದ ಮೇಲೆ ಹೆಚ್ಚು ಗಮನ ಹರಿಸಿದರೆ, ನನ್ನ ಉತ್ಸಾಹವನ್ನು ನಿರ್ಲಕ್ಷಿಸಬಹುದು ಎಂದು ನಾನು ಯಾವಾಗಲೂ ಹೆದರುತ್ತೇನೆ. ಆದರೆ ನಾನು ನನ್ನ ಉತ್ಸಾಹದ ಮೇಲೆ ಹೆಚ್ಚು ಗಮನ ಹರಿಸಿದರೆ, ನನ್ನ ಅಧ್ಯಯನಕ್ಕೆ ತೊಂದರೆ ಉಂಟಾಗುತ್ತದೆ. ಇವೆರಡನ್ನೂ ನಾನು ಹೇಗೆ ಸಮತೋಲನಗೊಳಿಸಬಹುದು?

ಪ್ರಧಾನಮಂತ್ರಿ: ನೋಡಿ, ಮೊದಲನೆಯದಾಗಿ, ಇವು 2 ಪ್ರತ್ಯೇಕ ವಿಷಯಗಳಲ್ಲ. ನೀವು ಏಕೆ ಹಾಗೆ ಯೋಚಿಸುತ್ತೀರಿ? ಎರಡೂ ಉಪಯುಕ್ತವಾಗಿವೆ. ಉದಾಹರಣೆಗೆ, ನೀವು ಕಲೆಯನ್ನು ಪ್ರೀತಿಸುತ್ತೀರಿ ಎಂದು ಭಾವಿಸೋಣ, ನೀವು ಪ್ರಯೋಗಾಲಯದ ಬಗ್ಗೆ ಮಾತನಾಡುವ ಮತ್ತು ರಾಸಾಯನಿಕಗಳನ್ನು ಮಿಶ್ರಣ ಮಾಡುವ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡುತ್ತಿದ್ದೀರಿ. ನೀವು ಕಾಗದದ ಹಾಳೆಯನ್ನು ತೆಗೆದುಕೊಳ್ಳಬಹುದು, ಪ್ರಯೋಗಾಲಯವನ್ನು ಚಿತ್ರಿಸಬಹುದು, ಅದನ್ನು ಚಿತ್ರಿಸಬಹುದು, ಬಾಟಲಿಗಳನ್ನು ರಾಸಾಯನಿಕಗಳ ಹೆಸರಿನೊಂದಿಗೆ ಲೇಬಲ್ ಮಾಡಬಹುದು. ನಂತರ, ಪಾಠವು 2 ರಾಸಾಯನಿಕಗಳನ್ನು ಮಿಶ್ರಣ ಮಾಡುವುದರಿಂದ ಒಂದು ನಿರ್ದಿಷ್ಟ ಬಣ್ಣ ಉತ್ಪತ್ತಿಯಾಗುತ್ತದೆ ಎಂದು ಹೇಳಿದರೆ, ನೀವು ಅದನ್ನು ಪಾತ್ರೆಯಲ್ಲಿ ಚಿತ್ರಿಸಬಹುದು. ಈ ರೀತಿಯಾಗಿ, ನಿಮ್ಮ ಕಲೆ ಪೂರ್ಣಗೊಳ್ಳುತ್ತದೆ ಮತ್ತು ನಿಮ್ಮ ಪಾಠವೂ ನೆನಪಿನಲ್ಲಿರುತ್ತದೆ. ಆದ್ದರಿಂದ ಎರಡನ್ನೂ ಸುಂದರವಾಗಿ ಸಂಯೋಜಿಸಬಹುದು. ಕಲೆ ಅಥವಾ ಕರಕುಶಲತೆಯ ಮೇಲಿನ ನಿಮ್ಮ ಉತ್ಸಾಹವು ಅಧ್ಯಯನದ ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ಅರ್ಧ ಗಂಟೆ ಅಥವಾ ವಾರಕ್ಕೆ2 ಬಾರಿ ಅದಕ್ಕಾಗಿ ಮೀಸಲಿಡಬಹುದು. ಸಮಾಜಕ್ಕೆ ಅಗತ್ಯವಾದ ಶಿಕ್ಷಣ ಮಾಡಬೇಕು, ಆದರೆ ವೈಯಕ್ತಿಕ ಜೀವನಕ್ಕೆ ಉಪಯುಕ್ತವಾದದ್ದನ್ನು ಸಹ ಅನುಸರಿಸಬಹುದು.

 

ವಿದ್ಯಾರ್ಥಿ: ನಮ್ಮ ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲಿದೆ. ನನ್ನ ಪ್ರಶ್ನೆ: ಇದನ್ನು ಸಾಧಿಸಲು ನಾವು, ಯುವಕರು ಏನು ಮಾಡಬಹುದು?

ಪ್ರಧಾನಮಂತ್ರಿ10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಸಹ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ಹೊಂದಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಇದು ನನಗೆ ತುಂಬಾ ಸಂತೋಷ ನೀಡುತ್ತದೆ. ಈಗ ನಾನು ಉತ್ಸುಕನಾಗಿದ್ದೇನೆ! 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಎಂದರೆ ಏನು? ನೀವು ಸಿಂಗಾಪುರದ ಬಗ್ಗೆ ಕೇಳಿದ್ದೀರಾ? ಒಂದು ಕಾಲದಲ್ಲಿ, ಅದು ಕೇವಲ ಒಂದು ಸಣ್ಣ ಮೀನುಗಾರಿಕೆ ನಡೆಸುವ ಹಳ್ಳಿಯಾಗಿತ್ತು. ಇಂದು, ಅದು ತುಂಬಾ ಮುಂದುವರೆದಿದೆ. ಲೀ ಕುವಾನ್ ಯೂ ಹೇಳುತ್ತಿದ್ದರು: "ನಾವು ಅಭಿವೃದ್ಧಿ ಹೊಂದಿದ ದೇಶವಾಗಲು ಬಯಸಿದರೆ, ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು." ನಾವು 3ನೇ ಜಗತ್ತಿನ ದೇಶದಂತೆ ವರ್ತಿಸಲು ಸಾಧ್ಯವಿಲ್ಲ - ಎಲ್ಲೆಂದರಲ್ಲಿ ಕಸ ಎಸೆಯುವುದು, ಎಲ್ಲೆಂದರಲ್ಲಿ ಉಗುಳುವುದು. ಸಣ್ಣ ವಿಷಯಗಳು ಸಹ ಮುಖ್ಯ. ಉದಾಹರಣೆಗೆ, ಕೆಂಪು ದೀಪ ಪ್ರದೇಶದಲ್ಲಿ, ನಿಮ್ಮ ಸ್ಕೂಟರ್ ಅನ್ನು ಸರಿಯಾಗಿ ನಿಲ್ಲಿಸಿ. ಅಥವಾ ಮನೆಯಲ್ಲಿ ಊಟದ ನಂತರ ಯಾವುದೇ ಆಹಾರ ವ್ಯರ್ಥವಾಗಬಾರದು ಎಂದು ನಿರ್ಧರಿಸಿ. ಎಲ್ಲರೂ ಹೀಗೆ ಮಾಡಿದರೆ - ಎಷ್ಟು ಆಹಾರ ಉಳಿತಾಯವಾಗುತ್ತದೆ, ಎಷ್ಟು ಪ್ರಯೋಜನವಾಗುತ್ತದೆ ಎಂದು ನೀವೇ ಊಹಿಸಿ! ನಾಗರಿಕರಾಗಿ, ನಾವು ಅಂತಹ ಅಭ್ಯಾಸಗಳನ್ನು ಅನುಸರಿಸಿದರೆ, ನಾವು ಅಭಿವೃದ್ಧಿ ಹೊಂದಿದ ಭಾರತಕ್ಕೆ ಕೊಡುಗೆ ನೀಡುತ್ತೇವೆ. ಈಗ, ಸ್ಥಳೀಯವಾಗಿ ಉತ್ಪನ್ನಗಳ ತಯಾರಿಕೆ ವಿಚಾರವನ್ನೇ ತೆಗೆದುಕೊಳ್ಳಿ. ನಾನು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುತ್ತೇನೆ. ನಾನು ಮೇಡ್ ಇನ್ ಇಂಡಿಯಾ ಬೆಂಬಲಿಸುತ್ತೇನೆ. ನಾನು ಭಾರತದಲ್ಲಿ ವಿವಾಹ ಎಂದು ಹೇಳುತ್ತಿದ್ದೆ. ಕೆಲವು ಶ್ರೀಮಂತರು ಮದುವೆಗಳಿಗೆ ದುಬೈಗೆ ಹೋಗುವ ಬಗ್ಗೆ ಯೋಚಿಸುತ್ತಾರೆ. ಏಕೆ? ಭಾರತದಲ್ಲಿ ಏನು ಕೊರತೆಯಿದೆ? ನಾಗರಿಕರಾಗಿ ನಾವು ಸಣ್ಣ ವಿಷಯಗಳಿಗೆ ಜವಾಬ್ದಾರಿ ತೆಗೆದುಕೊಂಡರೆ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ನಾವು ಖಂಡಿತವಾಗಿಯೂ ಕೊಡುಗೆ ನೀಡಬಹುದು.

ವಿದ್ಯಾರ್ಥಿನಮಗೆ ಆಶ್ಚರ್ಯವಾಯಿತು. ಓ ದೇವರೆ, ಪ್ರಧಾನ ಮಂತ್ರಿ ಅವರು ನಿಜವಾಗಿಯೂ ಈ ಎಲ್ಲಾ ವಿಷಯಗಳ ಬಗ್ಗೆ ಕಾಳಜಿ ವಹಿಸಿದರು ಮತ್ತು ದೊಡ್ಡ ಹೆಜ್ಜೆಗಳಲ್ಲ, ಸಣ್ಣ ಹೆಜ್ಜೆಗಳು ಮುಖ್ಯ ಎಂದು ನಮಗೆ ಹೇಳಿದರು.

ವಿದ್ಯಾರ್ಥಿ: ನನ್ನ ಪ್ರಶ್ನೆ: ಯಾವುದೇ ವಿದ್ಯಾರ್ಥಿ ಅಥವಾ ವ್ಯಕ್ತಿ ತಮ್ಮ ಜೀವನ ನಡೆಸುವಾಗ, ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ವಿಷಯಗಳು ಕಷ್ಟಕರವಾದಾಗ, ಮುಂದುವರಿಯಲು ನಮಗೆ ಪ್ರೇರಣೆ ಆಗಾಗ್ಗೆ ಕಡಿಮೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಯಶಸ್ಸನ್ನು ಸಾಧಿಸಲು, ನಮಗೆ ಪ್ರೇರಣೆ ಅಥವಾ ಶಿಸ್ತು ಬೇಕೇ?

ಪ್ರಧಾನಮಂತ್ರಿ: ಜೀವನದಲ್ಲಿ ಎರಡೂ ಮುಖ್ಯ. ಶಿಸ್ತು ಇಲ್ಲದಿದ್ದರೆ, ನಿಮಗೆ ಎಷ್ಟೇ ಸ್ಫೂರ್ತಿ ಇದ್ದರೂ, ಅದು ಉಪಯುಕ್ತವಾಗುವುದಿಲ್ಲ. ತನ್ನ ನೆರೆಹೊರೆಯವರು ಬಹಳಷ್ಟು ಬೆಳೆಗಳನ್ನು ಕೊಯ್ಲು ಮಾಡುವುದರಿಂದ ಸ್ಫೂರ್ತಿ ಪಡೆಯುವ ರೈತನನ್ನು ಕಲ್ಪಿಸಿಕೊಳ್ಳಿ. ಅವನು "ನನ್ನ ಭೂಮಿ ದೊಡ್ಡದಾಗಿದೆ, ನಾನು ಹೆಚ್ಚು ಗಳಿಸಬೇಕು" ಎಂದು ಭಾವಿಸುತ್ತಾನೆ. ಅವನು ಇದರಿಂದ ಸ್ಫೂರ್ತಿ ಪಡೆಯುತ್ತಾನೆ, ಆದರೆ ಮಳೆ ಬರುವ ಮೊದಲು ಹೊಲ ಉಳುಮೆ ಮಾಡಲು ಬಂದಾಗ, "ಮುಂದಿನ ವಾರ ನಾನು ಅದನ್ನು ಮಾಡುತ್ತೇನೆ" ಎಂದು ಹೇಳುತ್ತಾ ಅದನ್ನು ವಿಳಂಬಗೊಳಿಸುತ್ತಾನೆ. ಮಳೆ ಬರುವ ಮುನ್ನ ಅವನು ಉಳುಮೆ ಮಾಡದಿದ್ದರೆ, ನಂತರ ಏನೇ ಮಾಡಿದರೂ ಅವನ ಸ್ಥಿತಿ ಕಳಪೇಯಾಗಿರುತ್ತದೆ. ಅವನಿಗೆ ಸ್ಫೂರ್ತಿ ಇತ್ತು, ಆದರೆ ಶಿಸ್ತು ಇಲ್ಲ. ಜೀವನದಲ್ಲಿ ಶಿಸ್ತು ಅತ್ಯಗತ್ಯ; ಸ್ಫೂರ್ತಿ ಅದಕ್ಕೆ ಮೌಲ್ಯವನ್ನು ಸೇರಿಸುತ್ತದೆ. ಶಿಸ್ತು ಇಲ್ಲದಿದ್ದರೆ, ಅತ್ಯಂತ ದೊಡ್ಡ ಸ್ಫೂರ್ತಿ ಕೂಡ ಹೊರೆಯಾಗುತ್ತದೆ, ಅದು ನಿರಾಶೆಗೆ ಕಾರಣವಾಗುತ್ತದೆ.

ವಿದ್ಯಾರ್ಥಿ: ನಾನು ನನ್ನ ಪ್ರಶ್ನೆ ಕೇಳಿದಾಗ, ಅದು ಹಲವು ವರ್ಷಗಳಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಈಗ ಅಂತಿಮವಾಗಿ, ನಾನು ಕೂಡ  ಸ್ಪಷ್ಟೀಕರಣ ಪಡೆಯುತ್ತಿರುವುದು ನನಗೆ ಸಂತೋಷ ಮತ್ತು ಗೌರವ ತಂದಿದೆ..

ವಿದ್ಯಾರ್ಥಿ: ಸರ್, ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಹೆಚ್ಚು ಹೆಚ್ಚು ಪ್ರಭಾವಶಾಲಿಯಾಗುತ್ತಿದೆ. ಅನೇಕ ಕಂಪನಿಗಳಲ್ಲಿ, ಕೇವಲ ಮಾನವ ಉದ್ಯೋಗಿಗಳಲ್ಲ, ಎಐ ಉದ್ಯೋಗಿಗಳೂ ಇದ್ದಾರೆ ಎಂದು ನಾವು ನೋಡಬಹುದು. ಆದ್ದರಿಂದ ನನ್ನ ಪ್ರಶ್ನೆ: ನಾವು ಎಐ ಬಗ್ಗೆ ಭಯಪಡಬೇಕೇ ಮತ್ತು ನಮ್ಮ ಭವಿಷ್ಯದ ವೃತ್ತಿಯನ್ನು ಆಯ್ಕೆ ಮಾಡುವಾಗ ನಾವು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

ಪ್ರಧಾನಮಂತ್ರಿ: ನೋಡಿ, ಪ್ರತಿ ಯುಗದಲ್ಲೂ ಹೊಸ ತಂತ್ರಜ್ಞಾನ ಬಂದಾಗಲೆಲ್ಲಾ ಯಾವಾಗಲೂ ಚರ್ಚೆ ಇರುತ್ತದೆ. ಕಂಪ್ಯೂಟರ್ ‌ಗಳು ಬಂದಾಗ, ಜನರು ಏನಾಗುತ್ತದೆ ಎಂದು ಆಶ್ಚರ್ಯಪಟ್ಟರು. ಅದು ಹಾಗೆ ಇತ್ತು. ನಾವು ಯಾವುದಕ್ಕೂ ಹೆದರಬಾರದು. ನಾವು ಅದರ ಗುಲಾಮರಾಗಬಾರದು ಎಂಬುದು ನಮ್ಮ ಪ್ರಯತ್ನವಾಗಿರಬೇಕು. ನನ್ನ ಜೀವನದಲ್ಲಿ ನಾನು ನಿರ್ಧಾರ ತೆಗೆದುಕೊಳ್ಳುವವನಾಗಿಯೇ ಇರಬೇಕು. ತಂತ್ರಜ್ಞಾನ ನನ್ನ ಯಜಮಾನನಾಗಬಾರದು. ಉದಾಹರಣೆಗೆ, ಕೆಲವು ಮಕ್ಕಳು ತಮ್ಮ ಮೊಬೈಲ್ ಫೋನ್ ‌ಗಳಿಗೆ ಗುಲಾಮರಾಗಿದ್ದಾರೆ - ಫೋನ್ ಇಲ್ಲದೆ ಅವರು ತಿನ್ನಲು ಸಾಧ್ಯವಿಲ್ಲ, ಟಿವಿ ಇಲ್ಲದೆ ಅವರು ಬದುಕಲು ಸಾಧ್ಯವಿಲ್ಲ. ಅಂದರೆ ಅವರು ಗುಲಾಮರಾಗಿದ್ದಾರೆ. ನಾವು ದೃಢವಾಗಿ ನಿರ್ಧರಿಸಬೇಕು, ನಾನು ಗುಲಾಮನಾಗುವುದಿಲ್ಲ. ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು. ನಾನು ಎಐ ಅನ್ನು "ಈ ವಿಷಯದ ಬಗ್ಗೆ ಉತ್ತಮ ಪುಸ್ತಕ ಯಾವುದು?" ಎಂದು ಕೇಳಿದರೆ ಮತ್ತು ಅದು ನನಗೆ ಮಾರ್ಗದರ್ಶನ ನೀಡಿದರೆ, ಅದು ಉಪಯುಕ್ತವಾಗುತ್ತದೆ. ಆದರೆ "ನಾನು ಓದುವುದಿಲ್ಲ, ಒಳಗೆ ಏನಿದೆ ಎಂದು ಹೇಳಿ" ಎಂದರೆ ಅದು ತಪ್ಪು. ಉದ್ಯೋಗಗಳ ಸ್ವರೂಪ ಯಾವಾಗಲೂ ಬದಲಾಗುತ್ತದೆ. ಮೊದಲು, ಜನರು ಎತ್ತಿನ ಬಂಡಿಗಳಲ್ಲಿ ಪ್ರಯಾಣಿಸುತ್ತಿದ್ದರು; ಈಗ ಅವರು ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಉದ್ಯೋಗಗಳು ಬದಲಾಗಿವೆ, ಆದರೆ ಜೀವನವು ಮುಂದುವರಿಯಿತು. ನಾವು ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು, ನಮ್ಮನ್ನು ವಿಸ್ತರಿಸಿಕೊಳ್ಳಬೇಕು, ಅದರೊಂದಿಗೆ ನಮ್ಮ ಕೆಲಸಕ್ಕೆ ಮೌಲ್ಯ ಸೇರಿಸಬೇಕು. ನಾವು ಇದನ್ನು ಮಾಡಿದರೆ, ತಂತ್ರಜ್ಞಾನವು ಎಷ್ಟೇ ಮುಂದುವರಿದರೂ, ಅದು ನಮಗೆ ಯಾವಾಗಲೂ ಉಪಯುಕ್ತವಾಗಿರುತ್ತದೆ. ನಾವು ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ.

ವಿದ್ಯಾರ್ಥಿ: ನಮ್ಮ ಪ್ರಧಾನ ಮಂತ್ರಿ ಅವರೊಂದಿಗೆ ಇಂತಹ ಉತ್ತಮ ಸಂದರ್ಭ ಹೊಂದಲು ನಾನು ಆಯ್ಕೆಯಾಗುತ್ತೇನೆ ಎಂದು ನಾನು ಎಂದಿಗೂ ನಂಬಿರಲಿಲ್ಲ.

 

ವಿದ್ಯಾರ್ಥಿ: ಇದು ನಿಜಕ್ಕೂ ಅದ್ಭುತ ಅನುಭವ. ನನಗೆ ತುಂಬಾ ಸಂತೋಷವಾಯಿತು, ಮತ್ತು ಅದು ತುಂಬಾ ನಿಜವೆನಿಸಿತು.

ವಿದ್ಯಾರ್ಥಿ: ಅವರು ಪ್ರಧಾನ ಮಂತ್ರಿ ಎನ್ನುವುದಕ್ಕಿಂತ ಹೆಚ್ಚಾಗಿ ಕುಟುಂಬ ಸದಸ್ಯರಂತೆ ಭಾಸವಾದರು.

ಪ್ರಧಾನಮಂತ್ರಿಸ್ನೇಹಿತರೆ, ಕೊಯಮತ್ತೂರಿನಲ್ಲಿರುವ ನಮ್ಮ ಯುವ ಜನರು ತಮ್ಮ ಅಧ್ಯಯನದ ಜೊತೆಗೆ ಎಐ, ಸ್ಟಾರ್ಟಪ್ ‌ಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಬಹಳ ತಿಳಿದಿದ್ದಾರೆ. ಇದು ಯುವ ಭಾರತದ ಯುವ ಚಿಂತನೆ ಎಂದು ನಾನು ಹೇಳಬಲ್ಲೆ, ಇದು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವ ಸಂಕಲ್ಪಕ್ಕೆ ಹೊಸ ಶಕ್ತಿ ನೀಡುತ್ತಿದೆ.

ಪ್ರಧಾನಮಂತ್ರಿ: ಸ್ನೇಹಿತರೆ, ಪರೀಕ್ಷಾ ಪೇ ಚರ್ಚಾದ ಅರ್ಥವೆಂದರೆ ಒಟ್ಟಿಗೆ ಕುಳಿತುಕೊಳ್ಳುವುದು, ಮಾತನಾಡುವುದು ಮತ್ತು ಪರಸ್ಪರ ಕಲಿಯುವುದು. ಈ ಸರಣಿಯನ್ನು ಮುಂದುವರಿಸುತ್ತಾ, ಕೊಯಮತ್ತೂರಿನ ನಂತರ, ನಮ್ಮ ಚರ್ಚೆಯು ಕೆಲವು ವಾರಗಳ ನಂತರ ಛತ್ತೀಸ್ ‌ಗಢದ ರಾಜಧಾನಿ ರಾಯ್ ‌ಪುರ ತಲುಪಿತು. ಅಲ್ಲಿಯೂ ಸಹ, ನಾನು ಮಕ್ಕಳೊಂದಿಗೆ ಬಹಳ ಆಸಕ್ತಿದಾಯಕ ಸಂಭಾಷಣೆಗಳನ್ನು ನಡೆಸಿದೆ. ನಾನು ಹೇಳಲೇಬೇಕಾದ ವಿಚಾರವೆಂದರೆ, ಇದು ಕೇವಲ ಚರ್ಚೆಯಲ್ಲ - ನಾನು ಕೆಲವು ರುಚಿಕರವಾದ ಸ್ಥಳೀಯ ಆಹಾರವನ್ನು ಸವಿಯಲು ಸಹ ಇದರಿಂದ ಸಾಧ್ಯವಾಗುತ್ತಿದೆ. ನೀವು ಸಹ ಇದನ್ನು ಆನಂದಿಸಬಹುದು.

ವಿದ್ಯಾರ್ಥಿಜೈ ಜೋಹರ್, ಸರ್.

ಪ್ರಧಾನಮಂತ್ರಿ: ಜೈ ಜೋಹರ್.

ಪ್ರಧಾನಮಂತ್ರಿಅವರು ನಿಮಗೆ ತಿನ್ನಲು ಏನಾದರೂ ಕೊಟ್ಟಿದ್ದಾರೆಯೇ?

ವಿದ್ಯಾರ್ಥಿಹೌದು, ಸರ್.

ವಿದ್ಯಾರ್ಥಿಸರ್, ನೀವು ತುಂಬಾ ಸಭೆಗಳಿಗೆ ಹೋಗುತ್ತೀರಿ. ನೀವು ನಮ್ಮೊಂದಿಗೆ ಇಲ್ಲಿ ಏನಾದರೂ ತಿನ್ನಲು ಬಯಸುತ್ತೀರಾ?

ಪ್ರಧಾನಮಂತ್ರಿಇದನ್ನು ಹೇಗೆ ತಯಾರಿಸಲಾಗುತ್ತದೆ?

ವಿದ್ಯಾರ್ಥಿ: ಸರ್, ನಾವು ಕಡಲೆ ಹಿಟ್ಟನ್ನು ಸಣ್ಣ ವೃತ್ತಗಳಾಗಿ ರೂಪಿಸಿ ಹುರಿಯುತ್ತೇವೆ.

ಪ್ರಧಾನಮಂತ್ರಿಓಹ್?

ವಿದ್ಯಾರ್ಥಿಇದು ರುಚಿಯಾಗಿದೆ.

ಪ್ರಧಾನಮಂತ್ರಿಜನರು ಸಾಮಾನ್ಯವಾಗಿ ಇದನ್ನು ಯಾವಾಗ ತಿನ್ನುತ್ತಾರೆ?

ವಿದ್ಯಾರ್ಥಿಸರ್, ಹೆಚ್ಚಾಗಿ ದೀಪಾವಳಿ ಸಮಯದಲ್ಲಿ.

ಪ್ರಧಾನಮಂತ್ರಿ: ದೀಪಾವಳಿಯ ಸಮಯದಲ್ಲಿ, ನನಗೆ ಅರ್ಥವಾಯಿತು.

ವಿದ್ಯಾರ್ಥಿ: ಹೌದು, ಹೆಚ್ಚಾಗಿ ದೀಪಾವಳಿಯ ಸಮಯದಲ್ಲಿ.

ಪ್ರಧಾನಮಂತ್ರಿಮಹಾರಾಷ್ಟ್ರದಲ್ಲಿ ಇದನ್ನು ಏನೆಂದು ಕರೆಯಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?, ಇದನ್ನು ಚಕ್ಲಿ ಎಂದು ಕರೆಯಲಾಗುತ್ತದೆ.

ವಿದ್ಯಾರ್ಥಿಗಳು: ಇಲ್ಲ ಸರ್.

ಪ್ರಧಾನಮಂತ್ರಿಮಹಾರಾಷ್ಟ್ರದಲ್ಲಿ ಇದನ್ನು ಚಕ್ಲಿ ಎಂದು ಕರೆಯುತ್ತಾರೆ.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿಇದು ಏನು?

ವಿದ್ಯಾರ್ಥಿ: ಸರ್, ಇದು ಖುರ್ಮಿ.

ಪ್ರಧಾನಮಂತ್ರಿಆಹ್.

ವಿದ್ಯಾರ್ಥಿಇದನ್ನು ಬೆಲ್ಲ, ಹಿಟ್ಟು ಮತ್ತು ರವೆಯಿಂದ ತಯಾರಿಸಲಾಗುತ್ತದೆ.

ಪ್ರಧಾನಮಂತ್ರಿ: ಧನ್ಯವಾದಗಳು ಮಗು, ಅದ್ಭುತ ತಿನಿಸು ನೀಡಿದ್ದಕ್ಕಾಗಿ.

ವಿದ್ಯಾರ್ಥಿ: ಪ್ರಧಾನ ಮಂತ್ರಿ ಅವರಿಗೆ ಖುರ್ಮಿ ನೀಡೆದೆವು, ನಂತರ ಅವರು ವೈಯಕ್ತಿಕವಾಗಿ ನಮಗೆಲ್ಲರಿಗೂ ಒಂದೊಂದು ತುಂಡು ತಿನ್ನಿಸಿದರು. ಅದು ತುಂಬಾ ಅದ್ಭುತವಾಗಿತ್ತು.

ಪ್ರಧಾನಮಂತ್ರಿನೀವು ಕೆಲವು ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಂದು ನೀವು ನನಗೆ ಕೇಳಲು ಅವಕಾಶವಿದೆ.

ವಿದ್ಯಾರ್ಥಿಗಳು: ಹೌದು ಸರ್.

 

ಪ್ರಧಾನಮಂತ್ರಿಮುಂದುವರಿಯಿರಿ.

ವಿದ್ಯಾರ್ಥಿನಾವೆಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ನಂತರ ರಜೆ ಪ್ರವಾಸಕ್ಕೆ ಹೋಗಬೇಕೆಂದು ಭಾವಿಸುತ್ತೇವೆ. ಭಾರತದಲ್ಲಿ ನಾವು ಹೋಗಬಹುದಾದ 5 ಸ್ಥಳಗಳನ್ನು ನೀವು ಸೂಚಿಸಬಹುದೇ?

ಪ್ರಧಾನಮಂತ್ರಿನೀವು ಯಾವ ಊರಿನವರು?

ವಿದ್ಯಾರ್ಥಿ: ಸರ್, ನಾನು ರಾಯ್‌ಪುರದವನು.

ಪ್ರಧಾನಮಂತ್ರಿರಾಯ್‌ಪುರ. ನಂತರ ನಿಮ್ಮ ಊರಿ‌ನ ಸುತ್ತಮುತ್ತ ಯಾವ ಸ್ಥಳಗಳಿವೆ ಎಂಬುದರ ಪಟ್ಟಿ ಮಾಡಿ. ಇದು ಒಂದು ಅಥವಾ 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಂತರ ನೀವು ನೋಡದ ನಿಮ್ಮ ಜಿಲ್ಲೆಯಲ್ಲಿ ಏನಿದೆ ಎಂಬುದರ ಪಟ್ಟಿ ಮಾಡಿ. ನಂತರ ನಿಮ್ಮ ರಾಜ್ಯದಲ್ಲಿ, ಛತ್ತೀಸ್ ‌ಗಢದಲ್ಲಿ, ನೀವು ಭೇಟಿ ನೀಡದ ಯಾವುದೇ ತಾಣವನ್ನು ನಿರ್ಧರಿಸಿ. ನೀವು ಎಲ್ಲಿಗೆ ಹೋದರೂ, ವಿದ್ಯಾರ್ಥಿಯಾಗಿ ಹೋಗಿ - ಆಗ ಪ್ರವಾಸೋದ್ಯಮ ಆನಂದದಾಯಕವಾಗುತ್ತದೆ. ರೈಲಿನಲ್ಲಿ ಪ್ರಯಾಣಿಸಿ, ನಿಮ್ಮೊಂದಿಗೆ ಆಹಾರ ಒಯ್ಯಿರಿ, ಅನುಭವ ಹೇಗಿದೆ, ಜನಸಮೂಹ ಹೇಗೆ ವರ್ತಿಸುತ್ತದೆ, ಜನರು ಹೇಗೆ ಮಾತನಾಡುತ್ತಾರೆ ಎಂಬುದನ್ನು ಗಮನಿಸಿ. ಅದು ಜೀವನದಲ್ಲಿ ಸಂತೋಷ ಮತ್ತು ಕಲಿಕೆಯ ಅನುಭವ. ಭಾರತವು ವೈವಿಧ್ಯತೆಯಿಂದ ತುಂಬಿದೆ, ಎಲ್ಲವನ್ನೂ ನೋಡಲು ಇಡೀ ಜೀವಿತಾವಧಿ ಸಾಕಾಗುವುದಿಲ್ಲ.

ವಿದ್ಯಾರ್ಥಿ: ಸರ್, ನನ್ನ ಪ್ರಶ್ನೆ: ಕೆಲವೊಮ್ಮೆ ಪರೀಕ್ಷೆ ಸಮಯದಲ್ಲಿ ನಾವು ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ, ಅದು ನಮ್ಮ ಮನಸ್ಸನ್ನು ಚಂಚಲಗೊಳಿಸುತ್ತದೆ. ಪರೀಕ್ಷೆ ಸಮಯದಲ್ಲಿ ಮತ್ತು ಪರೀಕ್ಷಾ ಕೊಠಡಿ‌ಗೆ ಪ್ರವೇಶಿಸುವ ಮೊದಲು ನಾವು ನಮ್ಮ ಮನಸ್ಸನ್ನು ಹೇಗೆ ಶಾಂತವಾಗಿರಿಸಿಕೊಳ್ಳಬಹುದು?

ಪ್ರಧಾನಮಂತ್ರಿ: ಪರೀಕ್ಷೆಯ ಹಿಂದಿನ ವಾರ ನೋಡಿ. ನೀವು ಈಗಾಗಲೇ ಎಲ್ಲವನ್ನೂ ತಿರುವು ಹಾಕಿರುತ್ತೀರಿ. ನೀವು ಕೇಳಿದ್ದು, ನೀವು ಏನು ಅಧ್ಯಯನ ಮಾಡಿದ್ದರೂ, ಅದು ವ್ಯರ್ಥವಾಗಿಲ್ಲ ಎಂದು ನಂಬಿರಿ. ಅದು ಎಲ್ಲೋ ಸಂಗ್ರಹವಾಗಿದೆ. ಶಾಂತವಾಗಿ ಕುಳಿತುಕೊಳ್ಳಿ, ಚಿಂತಿಸಬೇಡಿ, ಪ್ರಶ್ನೆಪತ್ರಿಕೆ ಬರುತ್ತಿದ್ದಂತೆ ನೋಡಿ. ಇನ್ನೊಂದು ವಿಷಯ: ನೀವು ಉತ್ತಮ ವಿದ್ಯಾರ್ಥಿಯಾಗಲು ಬಯಸಿದರೆ, ನೀವು ವಿಷಯದ ಮೇಲೆ ಹಿಡಿತ ಹೊಂದಿರಬೇಕು. ಆಗ ಮಾತ್ರ ನೀವು ಉತ್ತಮ ವಿದ್ಯಾರ್ಥಿಯಾಗುತ್ತೀರಿ. ಒಂದು ವಿಷಯದ ಮೇಲೆ ಹಿಡಿತ ಸಾಧಿಸುವುದು ಹೇಗೆ? ಒಳ್ಳೆಯ ಆಟಗಾರ ಹೇಗೆ ಉತ್ತಮ ಆಟಗಾರನಾಗುತ್ತಾನೆ?

ವಿದ್ಯಾರ್ಥಿ: ಅಭ್ಯಾಸ, ಸ್ಥಿರತೆ, ಶಿಸ್ತು ಮತ್ತು ದಿನಚರಿಯ ಮೂಲಕ.

ಪ್ರಧಾನಮಂತ್ರಿ: ಅತ್ಯಂತ ಮುಖ್ಯವಾದ ವಿಷಯವೆಂದರೆ, ಅವನು ನಿರಂತರವಾಗಿ ಸ್ಪರ್ಧಿಸುತ್ತಲೇ ಇರುತ್ತಾನೆ - ಅವನು ಬೀಳುತ್ತಾನೆ, ಏಳುತ್ತಾನೆ, ಸೋಲುತ್ತಾನೆ, ಗೆಲ್ಲುತ್ತಾನೆ, ಮುಂದುವರಿಯುತ್ತಾನೆ. ಹೀಗೆಯೇ ಅವನು ಪರಿಪೂರ್ಣ ಆಟಗಾರನಾಗುತ್ತಾನೆ. ನಾನು ನಿಮಗೆ ಒಂದು ಸಲಹೆ ನೀಡುತ್ತೇನೆ. ನಿಮ್ಮ ತರಗತಿಯಲ್ಲಿ, ಅಧ್ಯಯನದಲ್ಲಿ ಸ್ವಲ್ಪ ದುರ್ಬಲರಾಗಿರುವ ಕೆಲವು ವಿದ್ಯಾರ್ಥಿಗಳು ಇರಬೇಕು. ಅವರಲ್ಲಿ ಒಬ್ಬರನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಿ. ಈ ತಂತ್ರವು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಅವನಿಗೆ ಹೇಳಿ, "ಇಂದು ನಾನು ನಿನಗೆ ಗಣಿತ ಕಲಿಸಲು ಬಯಸುತ್ತೇನೆ." ಅವನಿಗೆ ಗಣಿತ ಕಲಿಸಲು, ನೀವು ಹಾಕುವ ಪ್ರಯತ್ನ ಮತ್ತು ಗಮನವು ನಿಮ್ಮ ಸ್ವಂತ ಗಣಿತವನ್ನು ಬಲಪಡಿಸುತ್ತದೆ, ಅಲ್ಲವೆ?

ವಿದ್ಯಾರ್ಥಿಹೌದು, ಸರ್, ಅದು ಖಂಡಿತವಾಗಿಯೂ ಆಗುತ್ತದೆ.

ವಿದ್ಯಾರ್ಥಿ: ನಾನು ಟೇಕ್ವಾಂಡೋ ಆಡುತ್ತೇನೆ, ಭವಿಷ್ಯದಲ್ಲಿ ನಾನು ಕ್ರೀಡಾಪಟುವಾಗಲು ಬಯಸುತ್ತೇನೆ. ನನ್ನ ಅಧ್ಯಯನ ಮತ್ತು ಕ್ರೀಡೆಗಳನ್ನು ನಾನು ಹೇಗೆ ಸಮತೋಲನಗೊಳಿಸಬಹುದು?

ಪ್ರಧಾನಮಂತ್ರಿ: ಶಿಕ್ಷಣವು ಜೀವನಕ್ಕೆ ಅಗತ್ಯವಿದೆ, ಅದು ಸಮಾಜಕ್ಕೂ ಅಗತ್ಯವಿದೆ. ಅದನ್ನು ಎಂದಿಗೂ ಕಡಿಮೆ ಅಂದಾಜು ಮಾಡಬಾರದು. "ನಾನು ಕ್ರೀಡೆಯಲ್ಲಿ ಉತ್ತಮ, ಆದ್ದರಿಂದ ನಾನು ಅಧ್ಯಯನ ಮಾಡುವ ಅಗತ್ಯವಿಲ್ಲ" ಎಂದು ಯೋಚಿಸುವ ತಪ್ಪು ಮಾಡಬೇಡಿ. ಆದರೆ ಶಿಕ್ಷಣ ಮಾತ್ರ ಎಲ್ಲವನ್ನೂ ಮಾಡುತ್ತದೆ ಎಂದು ಭಾವಿಸಬೇಡಿ. ನಿಮ್ಮಲ್ಲಿ ಪ್ರತಿಭೆ ಇದೆ,  ಅದು ಏನೇ ಇರಲಿ, ಅದನ್ನು ಅಭಿವೃದ್ಧಿಪಡಿಸಬೇಕು. ಕ್ರೀಡಾಪಟುವಾಗಲು ಆಟವಾಡುವುದು ಒಂದು ವಿಷಯ, ಆದರೆ ಜೀವನದಲ್ಲಿ ಆಟವಾಡುವುದು ಸಹ ಬಹಳ ಮುಖ್ಯ. ಜೀವನ ಉಳಿಸುವ ಆಟವಿರಬೇಕು; ಜೀವನದಲ್ಲಿ ಆಟವಾಡಬೇಕು. ನೀವು ಆಡಬೇಕು - ನೀವು ಆಡಿದರೆ, ನೀವು ಬೆಳೆಯುತ್ತೀರಿ. ನೀವು ಸಹ ಅಧ್ಯಯನ ಮಾಡಬೇಕು, ಆದ್ದರಿಂದ ಜನರು "ಅವನಿಗೆ ಏನೂ ತಿಳಿದಿಲ್ಲ, ಅದಕ್ಕಾಗಿಯೇ ಅವನು ಮೈದಾನದಲ್ಲಿಯೇ ಇರುತ್ತಾನೆ" ಎಂದು ಹೇಳುವುದಿಲ್ಲ. ಇಲ್ಲ, ನೀವು ಕ್ರೀಡೆಯಲ್ಲಿ ಮಾತ್ರವಲ್ಲದೆ ಅಧ್ಯಯನದಲ್ಲಿಯೂ ಶಕ್ತಿಶಾಲಿಯಾಗಿರಬೇಕು.

ವಿದ್ಯಾರ್ಥಿ: ಪ್ರಧಾನಮಂತ್ರಿ ಅವರು ಏನು ಹೇಳಿದರೂ, ಅದನ್ನು ನಾನು ನನ್ನ ಜೀವನದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ಇಂದು ಏನಾಯಿತು ಎಂಬುದನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ.

ವಿದ್ಯಾರ್ಥಿ: ಸರ್ ನನ್ನ ಪ್ರಶ್ನೆ: ಕೆಲವು ವರ್ಷಗಳ ಹಿಂದೆ ನೀವು ಸ್ವಚ್ಛ ಭಾರತ ಪ್ರಾರಂಭಿಸಿದ್ದೀರಿ. ನಮ್ಮ ಹೊಸ ರಾಯ್‌ಪುರ ಕೂಡ ಅಭಿವೃದ್ಧಿಯತ್ತ ಸಾಗುತ್ತಿದೆ. ವಿದ್ಯಾರ್ಥಿಗಳಾಗಿ, ನಾವು ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಬಹುದು ಅಥವಾ ನಮ್ಮ ಪರಿಸರವನ್ನು ಹೇಗೆ ರಕ್ಷಿಸಬಹುದು?

ಪ್ರಧಾನಮಂತ್ರಿ: ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ನಮ್ಮ ಜೀವನದ ಭಾಗವಾಗಿರಬೇಕು. ಕ್ರಮೇಣ, ನಾವು ಜನರನ್ನು ಸೇರಿಸಿಕೊಳ್ಳಬೇಕು, ಆಗ ಬದಲಾವಣೆ ಬರುತ್ತದೆ. ನಾವು ನಮ್ಮ ಸ್ವಂತ ಜೀವನದಲ್ಲಿ ಕೆಲವು ನಿಯಮಗಳನ್ನು ಅನುಸರಿಸಿದರೆ - ಉದಾಹರಣೆಗೆ, ನೀರು. ಹೇಳಿ, ನಾನು ಹಲ್ಲುಜ್ಜುತ್ತಿರುವಾಗ ನಲ್ಲಿಯಿಂದ ನೀರು ಹರಿಯುತ್ತಿದ್ದರೆ, ನಾನು ಅದನ್ನು ನಿಲ್ಲಿಸಬೇಕು. ನಾನು ಬಾಯಿ ತೊಳೆದಾಗ ಮಾತ್ರ ನಾನು ನೀರನ್ನು ಬಳಸಬೇಕು. ಇವು ಸಣ್ಣ ವಿಷಯಗಳೇ ಆಗಿವೆ. ಒಮ್ಮೆ, ನಾನು ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ದೂರದಿಂದ, ಕಾಡಿನಂತೆ ಕಾಣುವ, ತುಂಬಾ ಹಸಿರು ಬಣ್ಣ ಹೊಂದಿರುವ ಆ ಸ್ಥಳವನ್ನು ನೋಡಿದೆ. ನಾನು ಕೇಳಿದೆ, "ಇದು ಏನು?" ಅವರು ಹೇಳಿದರು, "ಇದು ಶಾಲೆ." ಅವರು  ಆ ಜಾಗವು ಒಣಗಿ ಹೋಗಿದೆ ಎಂದು ಹೇಳಿದರು, ಆದರೆ ಈ ಶಾಲೆ ಹಸಿರಾಗಿತ್ತು. ಅಲ್ಲಿ ಒಬ್ಬ ಶಿಕ್ಷಕ ಇದ್ದರು. ಅವರು ಪೇಟ್ರೋಲ್ ಪಂಪ್ ‌ಗಳಿಂದ ಎಣ್ಣೆ ಡಬ್ಬಿಗಳನ್ನು ಸಂಗ್ರಹಿಸಿ ಮಕ್ಕಳಿಗೆ ಹೇಳಿದರು, "ಈ ಬಾಟಲಿಗಳಲ್ಲಿ ನಿಮ್ಮ ಮನೆಯಿಂದ ಆಹಾರ ತುಣುಕುಗಳಿರುವ ನೀರನ್ನು ಪ್ರತಿದಿನ ತನ್ನಿ." ಮಕ್ಕಳು ಆ ನೀರಿನಿಂದ ತುಂಬಿದ ಬಾಟಲಿಗಳನ್ನು ತಂದರು. ಅವರು ಪ್ರತಿ ಮಗುವಿಗೆ ನೀರು ಹಾಕಲು ಒಂದು ಮರ ಒಪ್ಪಿಸಿದರು. ಆಹಾರ ಕಣಗಳು ಗೊಬ್ಬರವಾಗಿ ಕಾರ್ಯ ನಿರ್ವಹಿಸಿದವು. ಇದರಿಂದಾಗಿ, ಇಡೀ ಶಾಲೆ ಹಸಿರಾಯಿತು. ಒಬ್ಬ ಶಿಕ್ಷಕ ದೊಡ್ಡ ಬದಲಾವಣೆ ತಂದರು. ನಾವು ಮಾನವೀಯವಾಗಿ ವರ್ತಿಸಿದಾಗ, ಬದಲಾವಣೆ ಪ್ರಾರಂಭವಾಗುತ್ತದೆ. ಇವು ನಾವು ಸುಲಭವಾಗಿ ಮಾಡಬಹುದಾದ ಸಣ್ಣ ಕೆಲಸಗಳು. ಪರಿಸರ ನಮ್ಮ ಸ್ವಭಾವದ ಭಾಗವಾಗಬೇಕು.

ವಿದ್ಯಾರ್ಥಿನೀವು ಹಲವು ವರ್ಷಗಳಿಂದ ದೇಶವನ್ನು ಮುನ್ನಡೆಸುತ್ತಿದ್ದೀರಿ. ರಾಷ್ಟ್ರದ ನಾಯಕರಾಗಿ, ಭವಿಷ್ಯದ ಪೀಳಿಗೆಯಾದ ನಮ್ಮಿಂದ ನೀವು ಯಾವ ಗುಣಗಳನ್ನು ನಿರೀಕ್ಷಿಸುತ್ತೀರಿ?

ಪ್ರಧಾನಮಂತ್ರಿ: ನೀವು ನಾಯಕರಾಗಲು ಬಯಸುತ್ತೀರಾ ಅಥವಾ ನಿರ್ಭೀತರಾಗಲು ಬಯಸುತ್ತೀರಾ?

ವಿದ್ಯಾರ್ಥಿಎರಡೂ.

ಪ್ರಧಾನಮಂತ್ರಿಮೊದಲು, ನಿರ್ಭೀತರಾಗಿ.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿನಿಮ್ಮ ಮನಸ್ಸಿನಲ್ಲೇ ನಿರ್ಧರಿಸಿ: ಇತರರು ಅದನ್ನು ಮಾಡುತ್ತಾರೋ ಇಲ್ಲವೋ, ನಾನು ಅದನ್ನು ಮಾಡುತ್ತೇನೆ. ಇದು ಬಂದಾಗ, ನೀವು ನಿಮ್ಮಿಂದಲೇ ಕೆಲಸ ಪ್ರಾರಂಭಿಸಿದಾಗ, ನಾಯಕತ್ವ ಹೊರಹೊಮ್ಮಲು ಪ್ರಾರಂಭವಾಗುತ್ತದೆ. ಉದಾಹರಣೆಗೆ, ಸುತ್ತಲೂ ಕಸ ಬಿದ್ದಿದ್ದರೆ, ನೀವು ಅದನ್ನು ಎತ್ತಿಕೊಂಡರೆ, ನಿಮ್ಮೊಂದಿಗೆ ನಡೆಯುವ 4 ಜನರು ಸಹ ಅದನ್ನು ಎತ್ತುತ್ತಾರೆ. ಅಂದರೆ ನೀವು ನಾಯಕರಾಗಿದ್ದೀರಿ, ಅಲ್ಲವೇ? ಅದು ಒಳ್ಳೆಯದು. ನಾವು ಯಾವಾಗಲೂ ನಾಯಕನ ಪಾತ್ರಕ್ಕಾಗಿ ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. ಇದು ಒಳ್ಳೆಯ ನಂಬಿಕೆ, ಒಳ್ಳೆಯ ಆಲೋಚನೆ. ಆದರೆ ನಾಯಕತ್ವ ಎಂದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು, ರಾಜಕೀಯ ಪಕ್ಷವನ್ನು ರಚಿಸುವುದು, ಅಲಂಕಾರಿಕ ಭಾಷಣಗಳನ್ನು ನೀಡುವುದು ಎಂದಲ್ಲ. ನಾಯಕತ್ವ ಎಂದರೆ 10 ಜನರಿಗೆ ನಿಮ್ಮ ವಿಷಯವನ್ನು ವಿವರಿಸುವ ಗುಣ ಹೊಂದಿರುವುದು - ಅದನ್ನು ಹೇರುವುದಲ್ಲ, ಆದರೆ ಅದನ್ನು ವಿವರಿಸುವುದು. ವಿವರಿಸುವುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಇತರರನ್ನು ಅರ್ಥ ಮಾಡಿಕೊಳ್ಳುವವರು ಅವರಿಗೆ ವಿವರಿಸಬಹುದು. ಇತರರನ್ನು ಅರ್ಥ ಮಾಡಿಕೊಳ್ಳದವರು ಏನನ್ನೂ ವಿವರಿಸಲು ಸಾಧ್ಯವಿಲ್ಲ. ಆದ್ದರಿಂದ, ನಮ್ಮ ಪ್ರಯತ್ನವು ಇತರರನ್ನು ಅರ್ಥ ಮಾಡಿಕೊಳ್ಳುವುದಾಗಿರಬೇಕು.

ವಿದ್ಯಾರ್ಥಿ: ಯಾರಾದರೂ ಏನಾದರೂ ಜವಾಬ್ದಾರಿ ತೆಗೆದುಕೊಂಡರೆ ನಾಯಕತ್ವದ ಗುಣಗಳು ಇರುತ್ತವೆ ಎಂದು ಅವರು ಚೆನ್ನಾಗಿ ವಿವರಿಸಿದರು. ನಾನು ಇದನ್ನೆಲ್ಲಾ ವಿವರಿಸಿದರೆ, ಅದು ಒಂದು ಕನಸು ಎಂದು ನಾನು ಹೇಳುತ್ತೇನೆ.

ವಿದ್ಯಾರ್ಥಿ: ನಾನು ಪ್ರಧಾನಮಂತ್ರಿ ಅವರನ್ನು ಭೇಟಿಯಾದೆ.

ವಿದ್ಯಾರ್ಥಿ: ನಾನು ತುಂಬಾ ಅದೃಷ್ಟಶಾಲಿ.

ವಿದ್ಯಾರ್ಥಿ: ಇದು ಅದ್ಭುತವಾಗಿತ್ತು, ಕೆಲವೇ ಜನರು ತಮ್ಮ ಜೀವಿತಾವಧಿಯಲ್ಲಿ ಪಡೆಯುವ ಅನುಭವ ಇದಾಗಿದೆ.

ಪ್ರಧಾನಮಂತ್ರಿಪರೀಕ್ಷೆ ತಯಾರಿಯ ಅನುಭವಗಳು, ಪರೀಕ್ಷೆ ಸಮಯದಲ್ಲಿ ಬರುವ ಆಲೋಚನೆಗಳು, ಒತ್ತಡ ಮತ್ತು ಜನರ ನಿರೀಕ್ಷೆಗಳು - ಈ ಎಲ್ಲಾ ಪ್ರಶ್ನೆಗಳು ನಿರಂತರವಾಗಿ ನಮ್ಮ ಚರ್ಚೆಗಳ ಭಾಗವಾಗುತ್ತವೆ. ಪರೀಕ್ಷಾ ಪೇ ಚರ್ಚಾದ ಉದ್ದೇಶವೆಂದರೆ, ನಮ್ಮ ಯುವ ಸ್ನೇಹಿತರು ಈ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವುದಾಗಿದೆ. ಪರೀಕ್ಷಾ ಪೇ ಚರ್ಚಾ ಕೇವಲ ಬೋರ್ಡ್ ಪರೀಕ್ಷೆಯ ಸಿದ್ಧತೆಗಳ ಬಗ್ಗೆ ಅಲ್ಲ. ನಿಮ್ಮ ಪ್ರಶ್ನೆಗಳನ್ನು ಕೇಳಿದಾಗ, ಅವು ಸ್ವಾಭಾವಿಕವಾಗಿಯೇ ನನ್ನ ಹೃದಯ ಮುಟ್ಟುತ್ತವೆ. ಜೀವನದ ಹಲವು ಅಂಶಗಳು ನಮ್ಮ ಯುವ ಸ್ನೇಹಿತರ ಮನಸ್ಸಿನಲ್ಲಿ ನಿರಂತರವಾಗಿ ಓಡುತ್ತಿವೆ ಎಂದು ನನಗೆ ಅರಿವಾಗುತ್ತದೆ. ಈಗ ನಾನು ನಿಮ್ಮನ್ನು ಗುಜರಾತ್ ‌ಗೆ ಕರೆದೊಯ್ಯುತ್ತೇನೆ, ಅಲ್ಲಿ ಮಕ್ಕಳು ವಿಶೇಷವಾಗಿ ಬುಡಕಟ್ಟು ಪ್ರದೇಶದ ನನ್ನ ಬುಡಕಟ್ಟು ಮಕ್ಕಳು, ನನ್ನನ್ನು ನಿಜವಾಗಿಯೂ ಬೆರಗುಗೊಳಿಸುವ ಪ್ರಶ್ನೆಗಳನ್ನು ಕೇಳಿದರು.

 

ವಿದ್ಯಾರ್ಥಿ: ನಮಸ್ತೆ ಸರ್. ದೇವ್ ಮೊಗಾರ ಗ್ರಾಮಕ್ಕೆ ಸ್ವಾಗತ.

ಪ್ರಧಾನಮಂತ್ರಿ: ಅದ್ಭುತ. ಇಂದು ಎಲ್ಲರೂ ಹಿಂದಿಯಲ್ಲಿ ಮಾತನಾಡಬೇಕು ಎಂದು ನನಗೆ ಹೇಳಲಾಗಿದೆ...

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿಸರಿ.

ವಿದ್ಯಾರ್ಥಿ: ಸರ್ ಬಂದಾಗ, ಅವರು ವಾರ್ಲಿ ಕಲೆ ಇರುವ ಕೋಟಿ ಧರಿಸಿರುವುದನ್ನು ನಾವು ನೋಡಿದ್ದೇವೆ. ನಮ್ಮ ಬುಡಕಟ್ಟು ಸಮಾಜದಲ್ಲಿ, ವಾರ್ಲಿ ಕಲೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಆದ್ದರಿಂದ ಅದನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು.

ವಿದ್ಯಾರ್ಥಿಪ್ರಧಾನಮಂತ್ರಿ ಅವರನ್ನು ಭೇಟಿಯಾಗಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಬೇರೆ ಯಾವುದೇ ಮಗುವಿಗೆ ಅವರನ್ನು ಕೇಳಲು ಹಲವು ಪ್ರಶ್ನೆಗಳಿರುತ್ತವೆ. ಆದರೆ ಅವರೊಂದಿಗೆ ಮಾತನಾಡುವ ಅದೃಷ್ಟ ನಮಗಿದೆ.

ಪ್ರಧಾನಮಂತ್ರಿ: ನೀವು ಎಷ್ಟು ದೂರದಿಂದ ಬಂದಿದ್ದೀರಿ?

ವಿದ್ಯಾರ್ಥಿನಾವು ದೇದಿಯಾಪಾದದಿಂದ ಇಲ್ಲಿಗೆ ಬಂದಿದ್ದೇವೆ.

ಪ್ರಧಾನಮಂತ್ರಿದೇದಿಯಾಪಾದದಿಂದಲೇ. ಒಳ್ಳೆಯದು.

ವಿದ್ಯಾರ್ಥಿ: ನಾನು ಮಾಂಡ್ವಿಯವನು, ಸರ್.

ಪ್ರಧಾನಮಂತ್ರಿ: ಮಾಂಡ್ವಿ, ಒಳ್ಳೆಯದು. ನಿಮ್ಮ ಹೆಸರೇನು?

ವಿದ್ಯಾರ್ಥಿ: ಜೈ.

ಪ್ರಧಾನಮಂತ್ರಿ: ಜೈ, ಮತ್ತು ಅಭಿ. ನೀವು ತುಂಬಾ ಬೆಳೆದಿದ್ದೀರಿ! ನಿಮ್ಮೊಂದಿಗಿನ ನನ್ನ ಪರಿಚಯ ಏನು ಎಂದು ನೀವು ಅವರಿಗೆ ಹೇಳಿದ್ದೀರಾ?

ವಿದ್ಯಾರ್ಥಿ: ಹೌದು.

ಪ್ರಧಾನಮಂತ್ರಿಎಲ್ಲರೂ ಅವರಿಂದ ಧೈರ್ಯ ಗಳಿಸಿದ್ದಾರೋ ಇಲ್ಲವೋ?

ವಿದ್ಯಾರ್ಥಿಹೌದು, ಸರ್, ನಾವು ಮಾಡಿದೆವು.

ಪ್ರಧಾನಮಂತ್ರಿಅವರು ಮೊದಲು ಒಮ್ಮೆ ನನ್ನನ್ನು ಭೇಟಿ ಮಾಡಲು ಬಂದಿದ್ದರು.

ಪ್ರಧಾನಮಂತ್ರಿಸರಿ, ಹೇಳಿ, ನೀವು ಏನನ್ನಾದರೂ ಕೇಳಲು ಬಯಸುತ್ತೀರಾ, ನೀವು ಏನನ್ನಾದರೂ ತಿಳಿದುಕೊಳ್ಳಲು ಬಯಸುತ್ತೀರಾ?

ವಿದ್ಯಾರ್ಥಿ: ಸರ್, ನಮ್ಮ ಪೋಷಕರು ನಮಗೆ ಮೊದಲು ಕೆಲವು ಬುಡಕಟ್ಟು ಪ್ರದೇಶಗಳು ತುಂಬಾ ಹಿಂದುಳಿದಿವೆ ಎಂದು ಹೇಳಿದರು. ಗುಜರಾತ್ ‌ನ ಬುಡಕಟ್ಟು ಪ್ರದೇಶಗಳ ಬಗ್ಗೆ ನಿಮಗೆ ತುಂಬಾ ಪ್ರೀತಿ ಇದೆ, ನೀವು ಅಲ್ಲಿ ಬದಲಾವಣೆ ತಂದಿದ್ದೀರಿ ಎಂದು ಅವರು ನಮಗೆ ಹೇಳಿದರು. ಹಾಗಾದರೆ ನಾನು ತಿಳಿದುಕೊಳ್ಳಲು ಬಯಸುತ್ತೇನೆ, ಇದಕ್ಕೆ ನೀವು ಎಲ್ಲಿಂದ ಸ್ಫೂರ್ತಿ ಪಡೆದಿದ್ದೀರಿ?

ಪ್ರಧಾನಮಂತ್ರಿಪಾಲ್-ಚಿತ್ರಾರಿಯಾ ಘಟನೆಯ ಬಗ್ಗೆ ನಿಮಗೆ ತಿಳಿದಿದೆಯೇ?

ವಿದ್ಯಾರ್ಥಿ: ಹೌದು.

ಪ್ರಧಾನಮಂತ್ರಿಅಲ್ಲಿ ಬುಡಕಟ್ಟು ಸಮಾಜವು ಸ್ವಾತಂತ್ರ್ಯಕ್ಕಾಗಿ ದೊಡ್ಡ ಹೋರಾಟ ನಡೆಸಿತು. ಒಮ್ಮೆ ಭೀಕರ ಬರಗಾಲವಿತ್ತು. ಆ ಸಮಯದಲ್ಲಿ ನಾನು ಆ ಪ್ರದೇಶದಲ್ಲಿ ಹಲವು ದಿನಗಳ ಕಾಲ ಇದ್ದು ಅಲ್ಲಿ ಕೆಲಸ ಮಾಡಿದೆ. ನಂತರ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ನನಗೆ ಅನಿಸಿತು. ನಂತರ, ನಾನು ಅವಕಾಶ ಸಿಕ್ಕಾಗ ನಾನು ಮುಖ್ಯಮಂತ್ರಿಯಾಗಿದ್ದಾಗ, ನಾನು ಅದರ ಮೇಲೆ ಗಮನ ಹರಿಸಲು ಪ್ರಾರಂಭಿಸಿದೆ. ನೀವು ಆಶ್ಚರ್ಯಚಕಿತರಾಗುವಿರಿ - ಒಂದು ಕಾಲದಲ್ಲಿ ಉಮರ್ಗಮ್ ‌ನಿಂದ ಅಂಬಾಜಿಯವರೆಗೆ ಒಂದೇ ಒಂದು ವಿಜ್ಞಾನ ಶಾಲೆ ಇರಲಿಲ್ಲ. ನಂತರ ನೀವು ನೋಡಿದ್ದೀರಿ - ಈಗ 2 ವಿಶ್ವವಿದ್ಯಾಲಯಗಳು, ವಿಜ್ಞಾನ ಶಾಲೆಗಳು, ಎಂಜಿನಿಯರಿಂಗ್, ಐಟಿಐಗಳಿವೆ, ಬಹಳಷ್ಟು ಬದಲಾವಣೆ ಆಗಿದೆ. ಅದು ಅಲ್ಲಿನ ಜನರಿಗೆ ಹೆಚ್ಚಿನ ಪ್ರಯೋಜನ ತಂದಿದೆ.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿಇಂದಿಗೂ ನಾನು ಪ್ರಧಾನ ಮಂತ್ರಿ ಜನ್ಮನ್ ಯೋಜನೆ ಆರಂಭಿಸಿದ್ದೇನೆ ಎಂಬುದು ನಿಮಗೆ ತಿಳಿದಿರಬೇಕು. ಬುಡಕಟ್ಟು ಜನಾಂಗದವರಲ್ಲೂ, ಕೆಲವು ಪ್ರದೇಶಗಳು ಮತ್ತು ಕೆಲವು ಜನರು ಇನ್ನೂ ಹಿಂದುಳಿದಿದ್ದಾರೆ. ಆದ್ದರಿಂದ ನಾನು ಅವರಿಗಾಗಿ ಪ್ರತ್ಯೇಕ ಯೋಜನೆ, ಪ್ರತ್ಯೇಕ ಬಜೆಟ್ ಮಾಡಬೇಕಾಯಿತು. ಅಂದಿನಿಂದ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರೆ, ಅಭಿವೃದ್ಧಿ ವೇಗವಾಗಿ ಸಂಭವಿಸುತ್ತದೆ ಎಂದು ನಾನು ಭಾವಿಸಿದೆ. ನನ್ನ ಮನಸ್ಸಿನಲ್ಲಿ ಇನ್ನೊಂದು ವಿಷಯವೆಂದರೆ, ನಾನು ಉಮರ್ಗಮ್ ‌ನಿಂದ ಅಂಬಾಜಿಗೆ ಹೆದ್ದಾರಿ ನಿರ್ಮಿಸಿದೆ. ಅಭಿವೃದ್ಧಿ ಆಗಬೇಕೆಂದರೆ, ಮೂಲಸೌಕರ್ಯವು ಬಹಳ ಅವಶ್ಯಕವಾಗಿದೆ. ಜನರು ಪ್ರಯಾಣಿಸಲು ಪ್ರಾರಂಭಿಸುತ್ತಾರೆ, ಆದ್ದರಿಂದ ನಾನು ಆ ದಿಕ್ಕಿನಲ್ಲಿ ಗಮನ ಹರಿಸಿದೆ.

ವಿದ್ಯಾರ್ಥಿ: ನನ್ನ ಪ್ರಶ್ನೆ: ಪಹಲ್ಗಾಮ್ ದಾಳಿಯ ನಂತರ ನಮ್ಮ ಕುಟುಂಬವು ಮುಂದೆ ಏನಾಗುತ್ತದೆ ಎಂದು ಚರ್ಚಿಸುತ್ತಿತ್ತು. ಇಡೀ ದೇಶವು ನಿಮ್ಮ ಕಡೆಗೆ ನೋಡುತ್ತಿತ್ತು. ನಂತರ ಆಪರೇಷನ್ ಸಿಂದೂರ್ ನಡೆಯಿತು, ನಮ್ಮ ಸೈನ್ಯ ಗೆದ್ದಿತು. ಅಂತಹ ಸಂದರ್ಭಗಳಲ್ಲಿ, ನೀವು ನಿಮ್ಮ ಒತ್ತಡವನ್ನು ಹೇಗೆ ನಿಭಾಯಿಸಿದ್ದೀರಿ? ನಾವು ಪರೀಕ್ಷೆಯ ಒತ್ತಡವನ್ನು ಮಾತ್ರ ಎದುರಿಸುತ್ತೇವೆ.

ಪ್ರಧಾನಮಂತ್ರಿನೀವು ಪರೀಕ್ಷಾ ಒತ್ತಡವನ್ನು ಅನುಭವಿಸುತ್ತೀರಿ.

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿನೀವು ನಿಮ್ಮ ಹಳೆಯ ಪರೀಕ್ಷೆಯ ದಿನಗಳನ್ನು ನೆನಪಿಸಿಕೊಂಡಾಗ, ನೀವು ಹಳೆಯ ಪರೀಕ್ಷೆಗಳನ್ನು ನೆನಪಿಸಿಕೊಂಡರೆ, ನಿಮಗೆ ಅನಿಸುತ್ತದೆ - ಹೌದು, ಆ ಸಮಯದಲ್ಲಿ ಆತಂಕ, ಉದ್ವಿಗ್ನತೆ ಇತ್ತು, ಆದರೆ ಅದು ಮುಗಿದ ನಂತರ, ಏನೂ ಇರಲಿಲ್ಲ.

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿ: ಅಲ್ಲವೇ?

ವಿದ್ಯಾರ್ಥಿ: ಹೌದು, ಸರ್, ಹೌದು.

ಪ್ರಧಾನಮಂತ್ರಿ: ಪರೀಕ್ಷೆಗಳಿಗೆ ಉತ್ತಮವಾದ ವಿಷಯವೆಂದರೆ ಪತ್ರಿಕೆಗಳನ್ನು ಬಿಡಿಸುವ, ಬರೆಯುವ ಅಭ್ಯಾಸ ಬೆಳೆಸಿಕೊಳ್ಳುವುದು. ಹೆಚ್ಚಿನ ಜನರು ಓದುತ್ತಾರೆ.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿನೀವು ಈ ರೀತಿ ಅಭ್ಯಾಸ ಮಾಡಿದರೆ, ನೀವು ಎಂದಿಗೂ ಒತ್ತಡ ಅನುಭವಿಸುವುದಿಲ್ಲ ಎಂಬುದು ನನಗೆ ಖಚಿತವಾಗಿದೆ.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿನಾವು ದಿನವಿಡೀ ಪುಸ್ತಕಗಳನ್ನು ಓದುತ್ತೇವೆ. ಓಹ್, ಕೆಲವೊಮ್ಮೆ ನಗುತ್ತೇವೆ. ಇಂದು ಜನರಿಗೆ ಅರಿವಿಲ್ಲದ ಇನ್ನೊಂದು ಪ್ರಮುಖ ವಿಷಯವೆಂದರೆ, ಅದು ನಿದ್ರೆ. ನೀವು ಚೆನ್ನಾಗಿ ನಿದ್ರೆ ಮಾಡಬೇಕು. ನೀವು ಯೋಚಿಸಬಹುದು, "ಇವರು ಯಾವ ರೀತಿಯ ಪ್ರಧಾನಮಂತ್ರಿ, ನಿದ್ರೆಯ ಬಗ್ಗೆ ಮಾತನಾಡುತ್ತಿದ್ದಾರೆ? ನಾವು ಪರೀಕ್ಷೆಗಳ ಬಗ್ಗೆ ಕೇಳಿದರೆ ಇವರು ಏನೋ ಹೋಳುತ್ತಿದ್ದಾರೆ ಎಂದನಿಸಬಹುದು" ಆದರೆ ನೀವು ಸರಿಯಾಗಿ ನಿದ್ರೆ ಮಾಡಿದರೆ, ಉಳಿದ ಸಮಯದಲ್ಲಿ ನಿಮಗೆ ಹೊಸ ಆಲೋಚನೆಗಳು ಬರುತ್ತವೆ, ಹೊಸ ಆಲೋಚನೆಗಳೊಂದಿಗೆ ತಾಜಾವಾಗಿರುತ್ತೀರಿ, ನಿಮ್ಮ ಮನಸ್ಸು ಉಲ್ಲಾಸಭರಿತವಾಗಿರುತ್ತದೆ.

ವಿದ್ಯಾರ್ಥಿ: ಹೌದು ಸರ್. ನಾವು ವೈದ್ಯರು, ಎಂಜಿನಿಯರ್ ‌ಗಳು ಅಥವಾ ಅಧಿಕಾರಿಗಳಾಗಲು ಬಯಸುತ್ತೇವೆ. ನಾವು ನಮ್ಮ ವೃತ್ತಿಯನ್ನು ಹೇಗೆ ಆರಿಸಿಕೊಳ್ಳಬೇಕು?

ಪ್ರಧಾನಮಂತ್ರಿಒಂದು ತಿಂಗಳಲ್ಲಿ ನೀವು 10 ವಿಭಿನ್ನ ವಿಷಯಗಳನ್ನು ಹೇಳಿದರೆ, ನಿಮ್ಮ ಕುಟುಂಬ ಏನು ಹೇಳುತ್ತದೆ? "ಇವನಿಗೆ ಯಾವುದೇ ಸ್ಪಷ್ಟ ದಾರಿ ಇಲ್ಲ." ನೀವು ಯಾರನ್ನಾದರೂ ಪ್ರೇರೇಪಿಸಿ, "ನಾನು ಹಾಗೆ ಆದಲ್ಲಿ ಏನಾಗುತ್ತದೆ?" ಎಂದು ಯೋಚಿಸುವುದು ಒಳ್ಳೆಯದು. ಆದರೆ ಈಗಾಗಲೇ ಶ್ರೇಷ್ಠರಾದ ಯಾರೊಂದಿಗಾದರೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವರು ಎಲ್ಲಿಂದ ಪ್ರಾರಂಭಿಸಿದರು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿ. ನಿಮ್ಮ ಗಮನ ಅಲ್ಲಿದ್ದರೆ, ನೀವು, "ಹೌದು, ನಾನು ಇಲ್ಲಿಂದ ಪ್ರಾರಂಭಿಸುತ್ತೇನೆ" ಎಂದು ಹೇಳುತ್ತೀರಿ. ಯಾರಾದರೂ "ನಾನು ಕ್ರಿಕೆಟಿಗನಾದೆ" ಎಂದು ಹೇಳಬಹುದು. ಆದರೆ ಅವರು 8ನೇ ತರಗತಿಯಲ್ಲಿದ್ದಾಗ, ಅವರು ಬೆಳಗ್ಗೆ 4:00 ಗಂಟೆಗೆ ಎಚ್ಚರಗೊಂಡು, ಕ್ರೀಡಾಂಗಣಕ್ಕೆ ಸೈಕಲ್ ಸವಾರಿ ಮಾಡಿ, 2 ಗಂಟೆಗಳ ಕಾಲ ಅಭ್ಯಾಸ ಮಾಡಿರುತ್ತಾಕೆ. ನಂತರ ನೀವು ಅರಿತುಕೊಳ್ಳುತ್ತೀರಿ, "ಓಹ್, ಇದು ತುಂಬಾ ಶ್ರಮ ತೆಗೆದುಕೊಳ್ಳುತ್ತದೆ." ನಂತರ ನೀವು ಪ್ರಾರಂಭಿಸಿ. ಈಗ ನೀವು ನೋಡುತ್ತೀರಿ, "ಅವರು ಶತಕ ಗಳಿಸಿದರು, ಅವರ ಫೋಟೊ ಪತ್ರಿಕೆಯಲ್ಲಿ ಬಂದಿದೆ." ಕನಸುಗಳಿಗಾಗಿ ಬದುಕಲು ಕಲಿಯಿರಿ, ಕನಸುಗಳ ಪ್ರಕಾರ ಜೀವನ  ನಿರ್ಮಿಸಿ. ಆದರೆ ನೀವು ಶಬ್ದ ಮಾಡಿದರೆ, ಯಶಸ್ಸು ಶಬ್ದ ಮಾಡುತ್ತದೆ.

ವಿದ್ಯಾರ್ಥಿಹೌದು.

ಪ್ರಧಾನ ಮಂತ್ರಿ: ನೀವು ನಂಬರ್ 1 ಆದ ತಕ್ಷಣ, ಯಶಸ್ಸು ಶಬ್ದ ಮಾಡುತ್ತದೆ, ಅಲ್ಲವೇ?

ವಿದ್ಯಾರ್ಥಿಹೌದು, ಸರ್, ಅದು ಆಗುತ್ತದೆ.

ಪ್ರಧಾನಮಂತ್ರಿಇಡೀ ಶಾಲೆಗೆ ತಿಳಿಯುತ್ತದೆ, ಅಲ್ಲವೇ?

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿಇಡೀ ಹಳ್ಳಿಗೆ ತಿಳಿಯುತ್ತದೆ, ಅಲ್ಲವೇ?

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿಹಾಗಾಗಿ ಅದು ನಮ್ಮ ಪ್ರಯತ್ನವಾಗಿರಬೇಕು.

ವಿದ್ಯಾರ್ಥಿ: ಸರ್ ಏನು ಹೇಳಿದರೂ, ನಾನು ಏನು ಕೇಳಿದರೂ, ನಾನು ನನ್ನ ಜೀವನಕ್ಕಾಗಿ ಮುಂದುವರಿಯಲು ಮತ್ತು ಏನಾದರೂ ಆಗಲು ಅದರ ಬಗ್ಗೆ ಯೋಚಿಸಿದೆ.

ಪ್ರಧಾನಮಂತ್ರಿ: ಬನ್ನಿ.

ವಿದ್ಯಾರ್ಥಿ: ಸರ್ ಈಗ ನಾವು ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಮಗೆ ತೋರಿಸುತ್ತೇವೆ. ಸರ್, ಇವು ಕಾರ್ಡ್ ‌ಬೋರ್ಡ್ ‌ನಲ್ಲಿ ಮಾಡಿದ ವಾರ್ಲಿ ವರ್ಣಚಿತ್ರಗಳು. ಇವೆಲ್ಲವೂ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳು. ಸರ್, ನಾವು ನಮ್ಮ ಬುಡಕಟ್ಟು ಪ್ರದೇಶಗಳಿಂದ ಬುಡಕಟ್ಟು ಕಲಾಕೃತಿಗಳನ್ನು ಸಹ ಪ್ರಸ್ತುತಪಡಿಸಿದ್ದೇವೆ - ವರ್ಣಚಿತ್ರಗಳಂತೆ, ಇದು ಲಿಪ್ಪನ್ ಕಲೆ, ಇದು ನಾನು ಮಾಡಿದ ಪಿಥೋರಾ ಕಲೆ.

ಪ್ರಧಾನಮಂತ್ರಿನೀವೇ ಅದನ್ನು ತಯಾರಿಸಿದ್ದೀರಾ?

ವಿದ್ಯಾರ್ಥಿ: ಹೌದು, ಸರ್. ನಾನು ಅದನ್ನು ನಿಮಗಾಗಿ ಮಾಡಿದ್ದೇನೆ.

ಪ್ರಧಾನಮಂತ್ರಿನಿಮ್ಮ ಹೆಸರೇನು?

ವಿದ್ಯಾರ್ಥಿ: ಕಿಶನ್.

ಪ್ರಧಾನಮಂತ್ರಿಇದು ನಿಮ್ಮ ಕೈಬರಹವೇ?

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿ: ಓಹ್, ಅದ್ಭುತ.

ವಿದ್ಯಾರ್ಥಿ: ಧನ್ಯವಾದಗಳು, ಸರ್.

ಪ್ರಧಾನಮಂತ್ರಿ: ಎಷ್ಟು ಚೆನ್ನಾಗಿದೆ,

ವಿದ್ಯಾರ್ಥಿ: ನಾವು ಇವುಗಳನ್ನು ನಮ್ಮ ಮನೆಯ ಗೋಡೆಗಳ ಮೇಲೆ ಹಾಕಿದ್ದೇವೆ, ನಾವು ಅವುಗಳನ್ನು ನಿತ್ಯವೂ ಪೂಜಿಸುತ್ತೇವೆ.

ಪ್ರಧಾನಮಂತ್ರಿವಾಹ್, ನೀವು ಒಬ್ಬ ಮಹಾನ್ ಕಲಾವಿದರಾಗಿದ್ದೀರಿ!

ವಿದ್ಯಾರ್ಥಿ: ಹೌದು, ಸರ್. ನಮ್ಮ ದೇಶದ ಪ್ರಧಾನಮಂತ್ರಿ ನನ್ನ ವರ್ಣಚಿತ್ರಗಳನ್ನು ತೆಗೆದುಕೊಂಡಿದ್ದಾರೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ,  ಸರ್ ನಮ್ಮೊಂದಿಗೆ ಸ್ನೇಹಪರ ರೀತಿಯಲ್ಲಿ ಮಾತನಾಡಿದರು, ನಾವು ನಮ್ಮ ಸ್ವಂತ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಅನಿಸಿತು.

ವಿದ್ಯಾರ್ಥಿ: ನಿಮಗೆ ನನ್ನ ಪ್ರಶ್ನೆ: ನಿಮ್ಮ ಶಿಕ್ಷಕರು ನಿಮ್ಮ ಜೀವನದಲ್ಲಿ ಯಾವ ಪಾತ್ರ ವಹಿಸಿದ್ದಾರೆ?

ಪ್ರಧಾನಮಂತ್ರಿ: ಬಹಳ ದೊಡ್ಡ ಪಾತ್ರ, ಬಹಳ ದೊಡ್ಡ ಪಾತ್ರ. ನಾನು ಹೇಳಿದಂತೆ, ನನ್ನ ಶಿಕ್ಷಕರು ಪ್ರತಿದಿನ ಗ್ರಂಥಾಲಯಕ್ಕೆ ಹೋಗಿ, ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯದಿಂದ ಒಂದು ವಾಕ್ಯ ಆರಿಸಿ, ಅದನ್ನು ಬರೆದುಕೊಳ್ಳಿ ಮತ್ತು ಮರುದಿನ ಅದರ ಬಗ್ಗೆ ಚರ್ಚಿಸಲು ಹೇಳುತ್ತಿದ್ದರು. ಅಂತಹ ಹಲವು ವಿಷಯಗಳು ಇದ್ದವು. ಉದಾಹರಣೆಗೆ, ಫಿಟ್ ‌ನೆಸ್ ‌ನಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಪರ್ಮಾರ್ ಎಂಬ ಶಿಕ್ಷಕ ಇದ್ದರು. ಅವರು ದೈಹಿಕ ಸದೃಢತೆ ಕಾಪಾಡುವಂತೆ ನನಗೆ ಬಗ್ಗೆ ತುಂಬಾ ಒತ್ತಾಯ ಮಾಡುದ್ದರು. ಅವರು ನಮಗೆ ಯೋಗ ಕಲಿಸಿದರು, ಅವರು ನಮಗೆ ಮಲ್ಲಕಂಬ ಕಲಿಸಿದರು. ನಾವು ಆಟಗಾರರಾಗಲಿಲ್ಲ, ಆದರೆ ದೇಹಕ್ಕೆ ಫಿಟ್‌ನೆಸ್ ಅತ್ಯಗತ್ಯ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಜೀವನದಲ್ಲಿ ಒಂದು ಪಾತ್ರ ವಹಿಸುತ್ತಾರೆ. ನೀವು ಜಗತ್ತಿನಲ್ಲಿ ಎಷ್ಟೇ ಮಹಾನ್ ವ್ಯಕ್ತಿಯನ್ನು ಭೇಟಿಯಾಗಿದ್ದರೂ, ಅವರ ಜೀವನದಲ್ಲಿ ನೀವು ಯಾವಾಗಲೂ 2 ವಿಷಯಗಳನ್ನು ಕಂಡುಕೊಳ್ಳುತ್ತೀರಿ: ಒಂದು, ಅವರ ತಾಯಿ ತಮ್ಮ ಜೀವನದಲ್ಲಿ ಬಹಳ ದೊಡ್ಡ ಪಾತ್ರ ವಹಿಸಿರುತ್ತಾರೆ ಎಂದು ಅವರು ಹೇಳುತ್ತಾರೆ.

ವಿದ್ಯಾರ್ಥಿ: ಹೌದು.

ಪ್ರಧಾನಮಂತ್ರಿಎರಡನೆಯದಾಗಿ, ಅವರ ಶಿಕ್ಷಕರು ತಮ್ಮ ಜೀವನದಲ್ಲಿ ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳುತ್ತಾರೆ.

ವಿದ್ಯಾರ್ಥಿ: ನಮ್ಮ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಹಾಗಾದರೆ ನಮ್ಮ ದೇಶವು ಮತ್ತಷ್ಟು ಪ್ರಗತಿ ಸಾಧಿಸಲು ಬುಡಕಟ್ಟು ಸಮುದಾಯವು ಯಾವ ಕೊಡುಗೆ ನೀಡಬಹುದು ಎಂದು ನೀವು ನಮಗೆ ಹೇಳುತ್ತೀರಿ?

ಪ್ರಧಾನಮಂತ್ರಿ: ಬಹಳಷ್ಟು! ನೋಡಿ, ಬುಡಕಟ್ಟು ಸಮಾಜದಿಂದಾಗಿ ಇಂದು ದೇಶವು ಪ್ರಗತಿ ಸಾಧಿಸಿದೆ. ಇಂದು ಬುಡಕಟ್ಟು ಸಮಾಜದಿಂದಾಗಿ ದೇಶದ ಪರಿಸರ ಸಂರಕ್ಷಿಸಲಾಗಿದೆ. ಅವರು ಪ್ರಕೃತಿಯನ್ನು ಪೂಜಿಸುತ್ತಾರೆ, ಅವರು ಪ್ರಕೃತಿಯನ್ನು ರಕ್ಷಿಸುತ್ತಾರೆ. ಇಂದಿಗೂ ನಮ್ಮ ದೇಶದ ಸೈನ್ಯದಲ್ಲಿ, ಹೆಚ್ಚಿನ ಪುತ್ರರು ಮತ್ತು ಪುತ್ರಿಯರು ಬುಡಕಟ್ಟು ಸಮಾಜದಿಂದ ಬಂದವರು. ಇಂದು ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ, ಯಾವುದೇ ವ್ಯತ್ಯಾಸ ಇರಬಾರದು. ನಮಗೆ ಯಾವುದೇ ವ್ಯತ್ಯಾಸವಿಲ್ಲ. ನಮ್ಮಲ್ಲಿ ಕ್ರೀಡಾಪಟುಗಳಿದ್ದಾರೆ, ನಮ್ಮ ಬುಡಕಟ್ಟು ಮಕ್ಕಳು ಬಹಳಷ್ಟು ಸಾಧಿಸಬಹುದು. ಅವರ ಅಭಿವೃದ್ಧಿಯು ರಾಷ್ಟ್ರಕ್ಕೆ ಕೀರ್ತಿ ತಂದಿದೆ. ನಿಮಗೆ ಗೊತ್ತಾ, ಇತ್ತೀಚೆಗೆ ಮಹಿಳಾ ಕ್ರಿಕೆಟ್ ತಂಡ ಗೆದ್ದಿದೆ, ಸರಿಯೇ?

ವಿದ್ಯಾರ್ಥಿನಿಹೌದು, ಸರ್.

ಪ್ರಧಾನಮಂತ್ರಿಮಧ್ಯಪ್ರದೇಶದ ಕ್ರಾಂತಿ ಗೌಡ್ ಎಂಬ ಹುಡುಗಿ ಇದ್ದಾಳೆ. ಅವಳು ಬುಡಕಟ್ಟು ಜನಾಂಗದ ಮಗಳು.

ವಿದ್ಯಾರ್ಥಿನಿ: ಹೌದು, ಸರ್.

ಪ್ರಧಾನಮಂತ್ರಿಅವಳು ಕ್ರೀಡೆಯಲ್ಲಿ ಹೆಸರು ಗಳಿಸಿದ್ದಾಳೆ.

ವಿದ್ಯಾರ್ಥಿನಿ: ಹೌದು, ಸರ್.

ಪ್ರಧಾನಮಂತ್ರಿವಾಸ್ತವವಾಗಿ, ನಮ್ಮ ದೇಶದ ಅನೇಕ ಆಟಗಾರರು ಬುಡಕಟ್ಟು ಸಮಾಜದಿಂದ ಬಂದವರು, ಅವರು ಬಹುದೊಡ್ಡ ಕೀರ್ತಿ ತಂದಿದ್ದಾರೆ. ಅದೇ ರೀತಿ, ಪ್ರತಿಭೆ! ನಿಮ್ಮಲ್ಲಿ ಅದ್ಭುತ ಕಲೆ ಇದೆ. ನೀವು ತಂತ್ರಜ್ಞಾನ ಕಲಿತರೆ, ಈ ಸಾಮರ್ಥ್ಯವು ಇನ್ನಷ್ಟು ಮುಂದುವರಿಯುತ್ತದೆ.

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿಹಾಗಾದರೆ ಜೀವನವು ಕೇವಲ ಉದ್ಯೋಗಕ್ಕಾಗಿ ಇರಬಾರದು.

ವಿದ್ಯಾರ್ಥಿ: ಇಲ್ಲ.

ಪ್ರಧಾನಮಂತ್ರಿ: ನಾನು ಒಂದು ನಿರ್ದಿಷ್ಟ ರೀತಿಯ ಜೀವನ ನಡೆಸಲು ಬಯಸುತ್ತೇನೆ ಎಂಬುದು ಕನಸಾಗಿರಬೇಕು, ಅದಕ್ಕಾಗಿ ನಾನು ನನ್ನ ಜೀವನ ರೂಪಿಸಿಕೊಳ್ಳುತ್ತೇನೆ. ನಾವು ಇದನ್ನು ಮಾಡಿದರೆ, ನಮಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಹಾಡನ್ನು ಹಾಡಿ, ಬನ್ನಿ, ಹಾಡಿ.

ವಿದ್ಯಾರ್ಥಿ: ಜಂಗಳು ರೆನಾರಿ ತು ಪಹಾಡು ರೆನಾರಿ, ಜಂಗಳು ರೆನಾರಿ ತು ಪಹಾಡು ರೆನಾರಿ… (ಹಾಡು ಸಂಪೂರ್ಣ ಸ್ಪಷ್ಟವಾಗಿಲ್ಲ)

ವಿದ್ಯಾರ್ಥಿ: ನಾವೆಲ್ಲರೂ ಅವರಿಗಾಗಿ ಒಂದು ಹಾಡು ಹಾಡಿದೆವು, ಅದು ಮೋಗಿ ಮಾತಾ ಬಗ್ಗೆ - ಅವಳು ಎಲ್ಲಿ ವಾಸಿಸುತ್ತಾಳೆ, ಅವಳು ಹೇಗೆ ವಾಸಿಸುತ್ತಾಳೆ ಎಂಬುದರ ಬಗ್ಗೆ. ಅದೆಲ್ಲವೂ ಹಾಡಿನಲ್ಲಿತ್ತು.

ವಿದ್ಯಾರ್ಥಿನಾವು ಸರ್ ಅವರೊಂದಿಗೆ ಬಹಳಷ್ಟು ಸಂಭಾಷಣೆಗಳನ್ನು ನಡೆಸಿದ್ದೇವೆ - ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುವುದು ಹೇಗೆ, ಒತ್ತಡವನ್ನು ಹೇಗೆ ತೆಗೆದುಹಾಕುವುದು, ನಮ್ಮ ಸಮಯವನ್ನು ಹೇಗೆ ನಿರ್ವಹಿಸುವುದು ಮತ್ತು ಪರೀಕ್ಷೆಗಳಿಗೆ ಭಯಪಡದೆ ಅಧ್ಯಯನ ಮಾಡುವುದು ಹೇಗೆ ಎಂಬುದರ ಕುರಿತು.

ವಿದ್ಯಾರ್ಥಿ: ಮೊದಲಿಗೆ, ಪ್ರಧಾನಮಂತ್ರಿ ನಮ್ಮ ಮುಂದೆ ಇದ್ದಾರೆ ಎಂಬುದನ್ನು ನೋಡಿ ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. ಸಮಯ ಎಷ್ಟು ಬೇಗ ಕಳೆದುಹೋಯಿತು ಎಂಬುದು ನಮಗೆ ತಿಳಿಯಲೇ ಇಲ್ಲ.

ಪ್ರಧಾನಮಂತ್ರಿ: ಪರೀಕ್ಷಾ ಪೇ ಚರ್ಚಾದ ನಮ್ಮ ಪ್ರಯಾಣವು ಅಷ್ಟಲಕ್ಷ್ಮಿಯನ್ನು, ಅಂದರೆ ಈಶಾನ್ಯವನ್ನು ತಲುಪಿತು. ಗುವಾಹತಿಯಲ್ಲಿ, ಪರೀಕ್ಷಾ ಪೇ ಚರ್ಚಾ ಹರಿಯುವ ಬ್ರಹ್ಮಪುತ್ರದಲ್ಲಿ ಸಂತೋಷದಿಂದ ನೌಕಾಯಾನ ಮಾಡುತ್ತಾ ಮುಂದುವರೆಯಿತು.

ವಿದ್ಯಾರ್ಥಿನಮಸ್ಕಾರ, ಸರ್.

ಪ್ರಧಾನಮಂತ್ರಿದಯವಿಟ್ಟು ಕುಳಿತುಕೊಳ್ಳಿ.

ವಿದ್ಯಾರ್ಥಿ: ಪ್ರಣಾಮ್, ಮಾನ್ಯ ಪ್ರಧಾನ ಮಂತ್ರಿಗಳೆ. ನಾವೆಲ್ಲರೂ ನಿಮಗೆ ಒಂದು ಗಮೋಚಾ ನೀಡಲು ಬಯಸುತ್ತೇವೆ.

ಪ್ರಧಾನಮಂತ್ರಿ: ಖಂಡಿತ. ಅಸ್ಸಾಂನಲ್ಲಿ, ಗಮೋಚಾ ಇಲ್ಲದಿರಲು ಸಾಧ್ಯವೇ ಇಲ್ಲ! ಅದ್ಭುತ.

ವಿದ್ಯಾರ್ಥಿಅವರ ಉಪಸ್ಥಿತಿಯು ತುಂಬಾ ಶಾಂತವಾಗಿತ್ತು, ವಿಶ್ರಾಂತಿಯಂತೆ. ಎಲ್ಲಾ ಆತಂಕಗಳು ಮಾಯವಾದವು. ನಾವು ಅವರೊಂದಿಗೆ ಒಟ್ಟಿಗೆ ಬಹಳಷ್ಟು ಮಾತನಾಡಿದ್ದೇವೆ.

ಪ್ರಧಾನಮಂತ್ರಿ: ನೀವು ಮೊದಲು ಟಿವಿಯಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನೋಡಿದ್ದೀರಾ?

ವಿದ್ಯಾರ್ಥಿಗಳುಹೌದು ಸರ್, ನಾವು ನೋಡಿದ್ದೇವೆ.

ಪ್ರಧಾನಮಂತ್ರಿ: ಒಳ್ಳೆಯದು. ನೀವು ಎಂದಾದರೂ ಆ ಪುಸ್ತಕ ನೋಡಿದ್ದೀರಾ?

ವಿದ್ಯಾರ್ಥಿಗಳು: ಹೌದು, ಸರ್. ಪರೀಕ್ಷಾ ವಾರಿಯರ್.

ಪ್ರಧಾನಮಂತ್ರಿಹಾಗಾದರೆ ಅದನ್ನು ಓದಿದ ನಂತರ ಅಥವಾ ಕಾರ್ಯಕ್ರಮ ನೋಡಿದ ನಂತರ, ಪರೀಕ್ಷೆಗಳ ಮೊದಲು ನೀವು ಯೋಚಿಸಿದ್ದಕ್ಕಿಂತ ಹೋಲಿಸಿದರೆ, ಅದು ಯಾವ ವ್ಯತ್ಯಾಸ ಉಂಟುಮಾಡಿತು? ನಿಮಗೆ ಏನು ಪ್ರಯೋಜನವಾಯಿತು?

ವಿದ್ಯಾರ್ಥಿನಮಗೆ ಈಗ ಪರೀಕ್ಷೆಗಳ ಬಗ್ಗೆ ಅಷ್ಟೊಂದು ಭಯವಿಲ್ಲ. ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸುವ ನಿಮ್ಮ ಮಂತ್ರಗಳು ನಮ್ಮ ಪರೀಕ್ಷೆಗಳ ಭಯವನ್ನು ಕಡಿಮೆ ಮಾಡಿವೆ.

ಪ್ರಧಾನಮಂತ್ರಿ: ಆದರೆ ನಿಮ್ಮನ್ನು ಹೆದರಿಸುವುದು ಕುಟುಂಬ ಸದಸ್ಯರು ಅಲ್ಲವೇ?

ವಿದ್ಯಾರ್ಥಿಹೌದು, ಸರ್.

ಪ್ರಧಾನಮಂತ್ರಿ: ಹೌದು.

ವಿದ್ಯಾರ್ಥಿ: ಅವರು ಕೇಳುತ್ತಾರೆ, “ನೀನು ಒಂದು ಅಂಕ ಕಳೆದುಕೊಂಡಿದ್ದು ಏಕೆ? ಆ ಒಂದು ಅಂಕ ಎಲ್ಲಿಗೆ ಹೋಯಿತು?”

ಪ್ರಧಾನಮಂತ್ರಿ: ಹೌದು. ನಾವು ನಮ್ಮೊಂದಿಗೆ ನಿರಂತರವಾಗಿ ಸ್ಪರ್ಧಿಸಬೇಕು ಎಂದು ನಾನು ಹೇಳಿದೆ. ಯಾರಾದರೂ, "ನಿಮಗೆ 99 ಸಿಕ್ಕಿತು, 100 ಏಕೆ ಬೇಡ?" ಎಂದು ಕೇಳಬಹುದು, ಅದು ಅವರ ದೃಷ್ಟಿಕೋನ. ಆದರೆ ನೀವು ನಿಮ್ಮನ್ನು ಕೇಳಿಕೊಳ್ಳಬೇಕು, "ನನ್ನ ಜೀವನದಲ್ಲಿ ಈ ಬದಲಾವಣೆ ಏಕೆ ಸಂಭವಿಸಿತು? ಇದು ಎಲ್ಲಿ ಕೊರತೆಯಾಗಿತ್ತು? ಕಾರಣವೇನು?" ಒಳ್ಳೆಯದು. ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಗಳಿದ್ದರೆ, ದಯವಿಟ್ಟು ಕೇಳಿ.

ವಿದ್ಯಾರ್ಥಿ: ನನ್ನ ಪ್ರಶ್ನೆ: ನಿಮ್ಮ ದೈನಂದಿನ ಜೀವನದಲ್ಲಿ ನೀವು ಆರೋಗ್ಯವಾಗಿರಲು ನಿರ್ದಿಷ್ಟ ಆಹಾರವನ್ನು ಅನುಸರಿಸುತ್ತೀರಿ ಎಂದು ನಾನು ಕೇಳಿದ್ದೇನೆ. ಹಾಗಾದರೆ ನಾವು ವಿದ್ಯಾರ್ಥಿಗಳು ಶಕ್ತಿಯುತವಾಗಿರಲು ಮತ್ತು ಗಮನ ಹರಿಸಲು ಮತ್ತು ಪರೀಕ್ಷೆಗಳಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಯಾವ ಮಾಂತ್ರಿಕ ಆಹಾರ ಅನುಸರಿಸಬೇಕು?

ಪ್ರಧಾನಮಂತ್ರಿ: ಸತ್ಯವೆಂದರೆ ನನಗೆ ಯಾವುದೇ ಸ್ಥಿರ ಆಹಾರ ಪದ್ಧತಿ ಇಲ್ಲ, ಏಕೆಂದರೆ ಮೊದಲು ನಾನು ಬೇರೆ ಬೇರೆ ಕುಟುಂಬಗಳ ಮನೆಗಳಲ್ಲಿ ತಿನ್ನುತ್ತಿದ್ದೆ. ಒಂದೇ ವಿಷಯವೆಂದರೆ, ನಾನು ಸಸ್ಯಾಹಾರಿ ಆಗಿರುವುದರಿಂದ, ನಾನು ಸಸ್ಯಾಹಾರಿ ಆಹಾರ ತಿನ್ನುತ್ತಿದ್ದೆ. ಆ ಮನೆಯಲ್ಲಿ ಏನೇ ಲಭ್ಯವಿದ್ದರೂ, ನಾನು ತಿನ್ನುತ್ತಿದ್ದೆ. ಕೆಲವೊಮ್ಮೆ ನಾನು ನನಗಾಗಿ ಅಡುಗೆ ಮಾಡಬೇಕಾಗಿತ್ತು. ಕೆಲವೊಮ್ಮೆ ನಾನು ಖಿಚಡಿ ಬೇಯಿಸಿದೆ. ನೀವು ಖಿಚಡಿ ತಿನ್ನುತ್ತೀರಾ?

ವಿದ್ಯಾರ್ಥಿ: ಹೌದು ಸರ್.

ಪ್ರಧಾನಮಂತ್ರಿ: ನಿಮ್ಮ ಆಹಾರವು ನಿಮ್ಮ ಆದ್ಯತೆಗೆ ಅನುಗುಣವಾಗಿರಬೇಕು. ನೀವು ಬಲವಂತವಾಗಿ ತಿನ್ನುವುದು ಔಷಧಿಯಂತೆ ಇರಬಾರದು. ನಿಮ್ಮ ಹೊಟ್ಟೆ ತುಂಬಿಸಲು ತಿನ್ನಬೇಕೆ ಅಥವಾ ನಿಮ್ಮ ಹೃದಯವನ್ನು ತೃಪ್ತಿಪಡಿಸಲು ತಿನ್ನಬೇಕೆ ಎಂದು ನಿರ್ಧರಿಸಿ.

ವಿದ್ಯಾರ್ಥಿಹೃದಯವನ್ನು ತೃಪ್ತಿಪಡಿಸಲು.

ಪ್ರಧಾನಮಂತ್ರಿ: ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ಯಾರಾದರೂ ತಿನ್ನುವುದನ್ನು ನಿಲ್ಲಿಸು ಎಂದು ಹೇಳುವ ತನಕ ಜನರು ತಿನ್ನುತ್ತಲೇ ಇರುತ್ತಾರೆ. ಅವರು ತಮ್ಮ ಹೊಟ್ಟೆ ತುಂಬುವವರೆಗೆ ಆಹಾರ ತಿನ್ನುತ್ತಾರೆ. ಆದರೆ ಅವರು ತಮ್ಮ ಎದೆ ತುಂಬುವವರೆಗೆ ಉಸಿರಾಡುವುದಿಲ್ಲ. ಇಲ್ಲಿ ಅದು ವಿರುದ್ಧವಾಗಿರಬೇಕು. ಹಗಲಿನಲ್ಲಿ ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ನಿಮ್ಮ ದೇಹವು ಸಂಪೂರ್ಣ ತುಂಬುವವರೆಗೆ ಆಳವಾದ ಉಸಿರು ತೆಗೆದುಕೊಳ್ಳಿ. ಸಾಧ್ಯವಾದರೆ, ಅದನ್ನು ಕೆಲವು ಕ್ಷಣಗಳ ಕಾಲ ಹಿಡಿದುಕೊಳ್ಳಿ, ನಂತರ ನಿಧಾನವಾಗಿ ಉಸಿರು ಬಿಡಿ. ಆದರೆ ನಾವು ಮಾಡುವುದು ಏನೆಂದರೆ, ಆಹಾರ ತಿನ್ನುತ್ತೇವೆ, ಆದರೆ ಇತರೆ 50 ಕೆಲಸಗಳಲ್ಲಿ, ನಾವು ನಮ್ಮ ದೇಹಕ್ಕೆ ಕೊನೆಯ ಆದ್ಯತೆ ನೀಡುತ್ತೇವೆ. ಕೊನೆಯ ಆದ್ಯತೆ. ಈಗ ಹೇಳಿ, ನಿಮ್ಮಲ್ಲಿ ಎಷ್ಟು ಮಂದಿ ಸೂರ್ಯೋದಯ ನೋಡಬೇಕೆಂದು ನಿಯಮ ಪಾಲಿಸುತ್ತಿದ್ದೀರಿ? ಎಷ್ಟು ಮಂದಿ?

ಪ್ರಧಾನಮಂತ್ರಿ: ಸೂರ್ಯೋದಯ.

ವಿದ್ಯಾರ್ಥಿಗಳುನಾವು ನೋಡುತ್ತೇವೆ ಸರ್!

ಪ್ರಧಾನಮಂತ್ರಿಇದು ದೇಹಕ್ಕೆ ತಾಜಾತನ ಮತ್ತು ಶಕ್ತಿ ನೀಡುತ್ತದೆ. ನಾವು ಅದನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ದೇಹಕ್ಕೆ ಮೊದಲ ಆದ್ಯತೆ ನೀಡಬೇಕು.

ವಿದ್ಯಾರ್ಥಿಸರ್, ಆಗಾಗ್ಗೆ ನಮ್ಮ ಪೋಷಕರು ನಮ್ಮನ್ನು ನಮ್ಮ ಸ್ನೇಹಿತರೊಂದಿಗೆ ಹೋಲಿಸುತ್ತಾರೆ. ಆದರೆ ಅವರು ನಮ್ಮನ್ನು ನಮ್ಮ ಸ್ವಂತ ಒಡಹುಟ್ಟಿದವರೊಂದಿಗೆ ಹೋಲಿಸಿದಾಗ ಒತ್ತಡ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ, ನಾವು ಏನು ಮಾಡಬೇಕು?

ಪ್ರಧಾನಮಂತ್ರಿ: ನಿಮ್ಮ ತಂದೆ, “ನಿಮ್ಮ ಸಹೋದರಿಯ ಕೈಬರಹ ನೋಡಿ, ಅದು ಎಷ್ಟು ಸುಂದರವಾಗಿದೆ” ಎಂದು ಹೇಳುತ್ತಾರೆ ಎಂದು ಭಾವಿಸೋಣ. ಒಬ್ಬ ಒಳ್ಳೆಯ ವ್ಯಕ್ತಿ ಏನು ಹೇಳುತ್ತಾನೆ? ಅವನು ತನ್ನ ಸಹೋದರಿಗೆ, “ದಯವಿಟ್ಟು ನನ್ನ ಕೈಬರಹವನ್ನು ಹೇಗೆ ಸುಧಾರಿಸಬೇಕೆಂದು ನನಗೆ ಕಲಿಸಿ” ಎಂದು ಹೇಳುತ್ತಾನೆ. ಇನ್ನೊಬ್ಬ ವ್ಯಕ್ತಿ, “ನನ್ನ ಹೆತ್ತವರಿಗೆ ನನ್ನ ಸಹೋದರಿ ಮಾತ್ರ ಇಷ್ಟ. ಅವರು ಅವಳ ಕೈಬರಹ ಹೊಗಳುತ್ತಾರೆ. ನಾನು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆಂದು ಅವರಿಗೆ ಕಾಣುವುದಿಲ್ಲ” ಎಂದು ಯೋಚಿಸುತ್ತಾನೆ. ಕುಟುಂಬದಲ್ಲಿ ಯಾರದ್ದಾದರೂ ಒಳ್ಳೆಯ ಗುಣವನ್ನು ಉಲ್ಲೇಖಿಸಿದರೆ, ನಾವು ನಮ್ಮ ಸಹೋದರ ಅಥವಾ ಸಹೋದರಿಯಿಂದ ಆ ಗುಣವನ್ನು ಕಲಿಯಲು ಪ್ರಯತ್ನಿಸಬೇಕು. ನಾವು ನಮ್ಮ ಪೋಷಕರಿಗೆ, “ನೀವು ಏನಾದರೂ ಒಳ್ಳೆಯದನ್ನು ಎತ್ತಿ ತೋರಿಸಿದ್ದೀರಿ. ನನಗೆ ಈ ಗುಣವಿಲ್ಲ. ದಯವಿಟ್ಟು ನಾನು ಅದನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂದು ಹೇಳಿ” ಎಂದು ಹೇಳಬೇಕು. ಆಗ ಪೋಷಕರು ನೀವು ಮನ ನೊಂದಿಲ್ಲ ಎಂದು ನೋಡುತ್ತಾರೆ, ಬದಲಿಗೆ ನೀವು ಕಲಿಯಲು ಪ್ರಯತ್ನಿಸುತ್ತಿದ್ದೀರಿ. ಪೋಷಕರು ಹೋಲಿಕೆಗಳನ್ನು ತಪ್ಪಿಸಬೇಕು. ನಾನು ಯಾವಾಗಲೂ ಪೋಷಕರಿಗೆ ಹೇಳುತ್ತೇನೆ: ದಯವಿಟ್ಟು ಒಂದು ಮಗುವನ್ನು ಇತರರ ಮುಂದೆ ತುಂಬಾ ಹೊಗಳಬೇಡಿ, ಇನ್ನೊಂದು ಮಗು ನಿರ್ಲಕ್ಷ್ಯಕ್ಕೊಳಗಾದೆ ಎಂದು ಭಾವಿಸುತ್ತದೆ. ನಮಗೆ ಹತ್ತಿರವಿರುವ ಯಾರಾದರೂ ಏನಾದರೂ ಉತ್ತಮವಾಗಿದ್ದರೆ, ನಾವು ಅವರನ್ನು ಮೌನವಾಗಿ ನಮ್ಮ ಗುರುಗಳೆಂದು ಪರಿಗಣಿಸಬೇಕು. ನೀವು ಅವರನ್ನು ನಿಮ್ಮ ಗುರು ಎಂದು ಪರಿಗಣಿಸುತ್ತೀರಿ ಎಂದು ಅವರಿಗೆ ತಿಳಿದಿರಬಾರದು. ಉದಾಹರಣೆಗೆ, "ನೀವು ಬ್ಯಾಡ್ಮಿಂಟನ್ ಚೆನ್ನಾಗಿ ಆಡುತ್ತೀರಿ. ನಾನು ಏನು ತಪ್ಪು ಮಾಡುತ್ತಿದ್ದೇನೆ? ದಯವಿಟ್ಟು ನನಗೆ ಕಲಿಸಿ" ಎಂದು ಹೇಳಿ. ಆಗ ಅವರು ಶ್ರೇಷ್ಠರೆಂದು ಭಾವಿಸುವುದಿಲ್ಲ. "ಅವರು ನನ್ನಿಂದ ಕಲಿಯಲು ಬಯಸುತ್ತಾರೆ" ಎಂದು ಭಾವಿಸುತ್ತಾರೆ. ಅವರು ನಿಮ್ಮನ್ನು ಸಮಾನವಾಗಿ ನೋಡುತ್ತಾರೆ.

ವಿದ್ಯಾರ್ಥಿಆತಂಕ ಸ್ಪಷ್ಟವಾಗಿತ್ತು, ಆದರೆ ಅದೇ ಸಮಯದಲ್ಲಿ ನಾನು ತುಂಬಾ ಉತ್ಸುಕನಾಗಿದ್ದೆ. ನಾನು ಮೋದಿ ಜಿ ಅವರನ್ನು ಭೇಟಿಯಾಗಲಿದ್ದೇನೆ ಎಂಬುದರಿಂದ ನನಗೆ ತುಂಬಾ ಸಂತೋಷವಾಯಿತು. ನನಗೆ ಈ ರೀತಿಯ ಏನಾದರೂ ಸಂಭವಿಸುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ ಅದು ಸಂಭವಿಸಿದಾಗ, ನಾನು ತುಂಬಾ ಸಂತೋಷಪಟ್ಟೆ.

ವಿದ್ಯಾರ್ಥಿ: ಸರ್, ಆಗಾಗ್ಗೆ ವಿದ್ಯಾರ್ಥಿಗಳು ವೇದಿಕೆಯಲ್ಲಿ ಅಥವಾ ಜನರ ಮುಂದೆ ಮಾತನಾಡಲು ಕಷ್ಟಪಡುತ್ತಾರೆ. ನಮ್ಮ ಆತ್ಮವಿಶ್ವಾಸ ಹೆಚ್ಚಿಸಲು ನೀವು ನಮಗೆ ಏನು ಸಲಹೆ ನೀಡುತ್ತೀರಿ?

ಪ್ರಧಾನಮಂತ್ರಿಹಾಗಾದರೆ ನೀವು ಅವರಿಗೆ ಸಲಹೆ ನೀಡಬೇಕಾದರೆ, ನೀವು ಏನು ಹೇಳುತ್ತೀರಿ? ಬನ್ನಿ, ಮುಂದೆ ಬನ್ನಿ, ಎಲ್ಲರೂ ಮುಂದೆ ಬನ್ನಿ. ಯಾರಾದರೂ ಒಂದು, ಎರಡು, ಮೂರು ಎಂದು ಹೇಳಬೇಕಾದರೆ, ಅದು ಹೇಗಿರುತ್ತದೆ?

ವಿದ್ಯಾರ್ಥಿಸರ್, ನಮಗೆ ಆತ್ಮವಿಶ್ವಾಸ ಇರಬೇಕು, ಹೌದು.

ಪ್ರಧಾನಮಂತ್ರಿಆತ್ಮವಿಶ್ವಾಸವು 2 ಪದಗಳನ್ನು ಹೊಂದಿದೆ. ಯಾವ 2 ಪದಗಳು?

ವಿದ್ಯಾರ್ಥಿಆತ್ಮ (ಆತ್ಮ) ಮತ್ತು ವಿಶ್ವಾಸ (ನಂಬಿಕೆ).

ಪ್ರಧಾನಮಂತ್ರಿ: ತನ್ನ ಮೇಲೆ ನಂಬಿಕೆ ಇರುವವನು ಎಂದಿಗೂ ಭಯಪಡುವುದಿಲ್ಲ. ನಿನಗೆ ನಿನ್ನ ಮೇಲೆ ನಂಬಿಕೆ ಇದೆಯೇ?

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿ: ನಿನ್ನ ಮೇಲೆ ನಂಬಿಕೆ ಇದ್ದರೆ, ನೀನು ಯಾವುದನ್ನಾದರೂ ಜಯಿಸಬಹುದು. ಆತ್ಮವಿಶ್ವಾಸವಿರುವ ವ್ಯಕ್ತಿ ಏನು ಮಾಡುತ್ತಾನೆ? ಅವನು ಇಡೀ ಪರಿಸ್ಥಿತಿಯನ್ನು ತನ್ನ ಮನಸ್ಸಿನಲ್ಲಿ ಅಧ್ಯಯನ ಮಾಡುತ್ತಾನೆ. ಸ್ವಾಮಿ ವಿವೇಕಾನಂದರು ಒಮ್ಮೆ ಚಿಕಾಗೊದಲ್ಲಿ ತಮ್ಮ ಪ್ರಸಿದ್ಧ ಭಾಷಣದ ನಂತರ ಪತ್ರ ಬರೆದರು.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿ: ವಿವೇಕಾನಂದರನ್ನು ಬಹಳವಾಗಿ ಹೊಗಳಲಾಯಿತು.

ವಿದ್ಯಾರ್ಥಿ: ಹೌದು, ಸರ್.

ಪ್ರಧಾನಮಂತ್ರಿ: ಆದರೆ ಅವರು ಚಿಕಾಗೊದಲ್ಲಿ ಮಾತನಾಡಬೇಕಾದಾಗ, ಅವರು ತುಂಬಾ ಆತಂಕಗೊಂಡಿದ್ದೆ ಎಂದು ತಮ್ಮ ಶಿಷ್ಯನಿಗೆ ಬರೆದರು. ಅವರು ಯೋಚಿಸಿದರು, "ಎಷ್ಟು ಮಹಾನ್ ವಿದ್ವಾಂಸರು, ಎಷ್ಟೊಂದು ಹಿರಿಯರು, ಎಷ್ಟೊಂದು ತಪಸ್ವಿಗಳು ಮಾತನಾಡಿದರು - ನಾನು ಏನು ಹೇಳಲಿ?" ಎಂದು ಅವರು ತುಂಬಾ ಆತಂಕಗೊಂಡಿದ್ದರು ಎಂದು ಬರೆದರು. ನಂತರ ಅವರು ತಾಯಿ ಸರಸ್ವತಿ ನೆನಪಿಸಿಕೊಂಡು ಪ್ರಾರ್ಥಿಸಿದರು: "ತಾಯಿ, ನನ್ನೊಳಗಿನ ಎಲ್ಲಾ ಶಕ್ತಿಯನ್ನು ಜಾಗೃತಗೊಳಿಸಿ. ನಾನು ಕಲಿತದ್ದೆಲ್ಲವೂ ಒಮ್ಮೆಗೇ ನನ್ನ ನಾಲಿಗೆಗೆ ಬರುವಂತೆ ಮಾಡು." ಅವರು ಹೀಗೆ ಪ್ರಾರ್ಥಿಸಿ ವೇದಿಕೆಗೆ ಹೋದರು. ಅವರು "ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ" ಎಂದು ಹೇಳಿದಾಗ ಪ್ರೇಕ್ಷಕರು 2 ನಿಮಿಷಗಳ ಕಾಲ ನಿರಂತರ ಚಪ್ಪಾಳೆ ತಟ್ಟಿದರು. ಅದು ಒಂದು ಮಹತ್ವದ ತಿರುವು ಆಯಿತು. "ಇಲ್ಲ, ನಾನು ಅಂದುಕೊಂಡಂತೆ ಅಲ್ಲ. ನನ್ನೊಳಗೆ ಏನೋ ಇದೆ" ಎಂದು ಅವರು ಅರಿತುಕೊಂಡರು. ಆತ್ಮವಿಶ್ವಾಸ ಬಂದಿತು. ಪ್ರತಿಯೊಬ್ಬರ ಜೀವನದಲ್ಲೂ, ಶ್ರೇಷ್ಠ ಭಾಷಣಕಾರರು, ಶ್ರೇಷ್ಠ ಆಟಗಾರರು ಸಹ - ಸಚಿನ್ ತೆಂಡೂಲ್ಕರ್ ಎಂದಿಗೂ ಶೂನ್ಯಕ್ಕೆ ಧಾವಿಸುವುದನ್ನು ನೀವು ನೋಡಿದ್ದೀರಾ?

ವಿದ್ಯಾರ್ಥಿಅವರು ನೋಡಿದ್ದಾರೆ.

ಪ್ರಧಾನಮಂತ್ರಿಅವರು ಹತಾಶೆಯಿಂದ ತಲೆ ಹಿಡಿದು ಕುಳಿತಿದ್ದಾರೆಯೇ?

ವಿದ್ಯಾರ್ಥಿಇಲ್ಲ ಸರ್.

ಪ್ರಧಾನಮಂತ್ರಿಅಂದರೆ ನಾವು ಪರಿಸ್ಥಿತಿ ಗಮನಿಸಬೇಕು, ಅದನ್ನು ನಿರ್ಣಯಿಸಬೇಕು,  ನಂತರ "ಸರಿ, ನಾನು ಅದನ್ನು ಮಾಡಬಹುದು" ಎಂದು ಯೋಚಿಸಬೇಕು. ಆತ್ಮವಿಶ್ವಾಸ್(ಆತ್ಮವಿಶ್ವಾಸ) ಎಂಬ ಪದವು ನಿಜವಾಗಿಯೂ ನಮ್ಮ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ಬೇರೆ ಯಾರೂ ಅದನ್ನು ನಮಗಾಗಿ ಮಾಡುವುದಿಲ್ಲ. ನಾವೇ ಅದನ್ನು ಮಾಡಬೇಕು.

ವಿದ್ಯಾರ್ಥಿ: ನಾನು ನಿಮ್ಮ ಮುಂದೆ ಒಂದು ಹಾಡು ಪ್ರಸ್ತುತಪಡಿಸಲು ಬಯಸುತ್ತೇನೆ.

ಪ್ರಧಾನಮಂತ್ರಿ: ಹೌದು, ಒಂದು ಹಾಡು ಹಾಡಿ.

ವಿದ್ಯಾರ್ಥಿ: ಹೌದು, ಡಾ. ಭೂಪೇನ್ ಹಜಾರಿಕಾ ಅವರ ಹಾಡು

ಪ್ರಧಾನಮಂತ್ರಿ: ಓ ಅದ್ಭುತ, ದಯವಿಟ್ಟು ಹಾಡಿ.

ವಿದ್ಯಾರ್ಥಿ(ಅಸ್ಸಾಮಿ ಭಾಷೆಯಲ್ಲಿ ಹಾಡು)

ಪ್ರಧಾನ ಮಂತ್ರಿಅದ್ಭುತ

ವಿದ್ಯಾರ್ಥಿನಮ್ಮ ಹಳ್ಳಿಯಲ್ಲಿ, ನಮ್ಮ ಮನೆಯ ಹತ್ತಿರ, ಒಂದು….. ಚಹಾ ತೋಟವಿದೆ. ನನ್ನ ತಾಯಿ 8 ವರ್ಷಗಳಿಂದ ಅಲ್ಲಿ ಎಲೆ ಕೀಳುವುದನ್ನು ನೋಡಿಕೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿಓಹ್, ನೀವು ಚಹಾ ತೋಟ ಕೃಷಿಕರು.

ವಿದ್ಯಾರ್ಥಿ: ಹೌದು.

ಪ್ರಧಾನಮಂತ್ರಿನೀವು ಚೆನ್ನಾಗಿ ಓದುತ್ತೀರಿ, ನಿಮ್ಮ ತಾಯಿ ನಿಮಗೆ ಕಲಿಸುತ್ತಾರೆ, ಅವರು ಚಹಾ ತೋಟದಲ್ಲಿಯೂ ಕೆಲಸ ಮಾಡುತ್ತಾರೆ. ಹಾಗಾದರೆ ನೀವು ಏನು ತಂದಿದ್ದೀರಿ?

ವಿದ್ಯಾರ್ಥಿ: ನಾನು ನಿಮಗಾಗಿ ಚಹಾ ಎಲೆಗಳನ್ನು ತಂದಿದ್ದೇನೆ.

ಪ್ರಧಾನಮಂತ್ರಿ: ಹಾಗಾದರೆ ನಾನು ಚಹಾ ಕುಡಿಯಬೇಕು. ತುಂಬಾ ಧನ್ಯವಾದಗಳು. ದಯವಿಟ್ಟು ನಿಮ್ಮ ತಾಯಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.

ವಿದ್ಯಾರ್ಥಿ: ಚಹಾ ತೋಟದ ಹುಡುಗನಾಗಿ, ನಾನು ಪ್ರಧಾನಮಂತ್ರಿಯನ್ನು ಭೇಟಿಯಾಗುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ನಿಜವಾಗಿಯೂ ಪ್ರಧಾನಮಂತ್ರಿ ಭೇಟಿಯಾದೆ ಎಂದು ನನಗೆ ನಂಬಲು ಸಾಧ್ಯವಿಲ್ಲ.

ವಿದ್ಯಾರ್ಥಿಇಷ್ಟು ವಯಸ್ಸಿನ ಅಂತರವಿದ್ದರೂ, ಅವರು ನಮ್ಮ ಮಾತುಗಳನ್ನು ಅರ್ಥ ಮಾಡಿಕೊಂಡಾಗ, ಅದು ತುಂಬಾ ಚೆನ್ನಾಗಿ ಅನಿಸುತ್ತದೆ.

ಪ್ರಧಾನಮಂತ್ರಿನಾವು ಪರೀಕ್ಷೆಗಳ ಬಗ್ಗೆ, ಸ್ಥಳೀಯ ಸಂಗೀತ, ಅಸ್ಸಾಂ ಚಹಾದ ಬಗ್ಗೆ ಹೇಗೆ ಮಾತನಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ - ಇವುಗಳು ಪರೀಕ್ಷಾ ಪೇ ಚರ್ಚಾದ ಸ್ಮರಣೀಯ ಭಾಗಗಳಾಗಿವೆ. ಪರೀಕ್ಷೆಗಳು ಒಂದು ಅವಕಾಶ, ಆರೋಗ್ಯಕರ ಸ್ಪರ್ಧೆಯ ಮನೋಭಾವವು ನಮ್ಮ ತಯಾರಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಈ ಎಲ್ಲಾ ಚರ್ಚೆಗಳಲ್ಲಿ ಸ್ಥಳಗಳು ವಿಭಿನ್ನವಾಗಿದ್ದವು, ವಿದ್ಯಾರ್ಥಿಗಳು ವಿಭಿನ್ನರಾಗಿದ್ದರು, ಅನುಭವಗಳು ವಿಭಿನ್ನವಾಗಿದ್ದವು. ಆದರೆ ಪ್ರತಿಯೊಂದು ಚರ್ಚೆಯ ಉದ್ದೇಶ ಒಂದೇ ಆಗಿತ್ತು: ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಆಲಿಸುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಒಟ್ಟಿಗೆ ಏನನ್ನಾದರೂ ಕಲಿಯುವುದು. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
A Milestone in Financial Inclusion: The Success Story of PMSBY

Media Coverage

A Milestone in Financial Inclusion: The Success Story of PMSBY
NM on the go

Nm on the go

Always be the first to hear from the PM. Get the App Now!
...
PM highlights impact of Jan Suraksha Schemes on completion of 11 years
May 09, 2026
PM says PM Jeevan Jyoti Bima Yojana, PM Suraksha Bima Yojana and Atal Pension Yojana have strengthened social security and financial inclusion

The Prime Minister, Shri Narendra Modi today highlighted the impact of key social security and pension schemes launched by the NDA Government 11 years ago, stating that these initiatives reflect the Government’s commitment to ensuring dignity, assurance and financial security for the people of India.

The Prime Minister noted that the PM Jeevan Jyoti Bima Yojana and PM Suraksha Bima Yojana have positively impacted lives at the grassroots level and strengthened the social security framework in the country.

Highlighting the benefits of the Atal Pension Yojana, Shri Modi said that the scheme has enabled several people to lead a more secure life in their old age and reflects the Government’s commitment to making social security accessible and inclusive.

The Prime Minister also expressed happiness over the growing participation and benefits received by women under the Atal Pension Yojana, underlining the contribution of Nari Shakti in the success of the scheme.

Shri Modi used the hashtag #11YearsofJanSurakshaSchemes while sharing his remarks on X.

The Prime Minister wrote on X;

“On this day, 11 years ago, key social security and pension schemes were launched by the NDA Government. They reflect our commitment to bring dignity, assurance and financial security into the lives of the people of India. This thread highlights that the PM Jeevan Jyoti Bima Yojana and PM Suraksha Bima Yojana have had a positive impact at the grassroots.

#11YearsofJanSurakshaSchemes”

“Atal Pension Yojana has been very beneficial to several people, enabling them to lead a more secure life in their old age. The scheme reflects our commitment to making social security accessible and inclusive. It is gladdening to see our Nari Shakti in particular benefit from this scheme.

#11YearsofJanSurakshaSchemes” 

Atal Pension Yojana has been very beneficial to several people, enabling them to lead a more secure life in their old age. The scheme reflects our commitment to making social security accessible and inclusive. It is gladdening to see our Nari Shakti in particular benefit from… https://t.co/gDNHL7C8Hl