ಮಹಾರಾಜರೆ,
ರಾಜಮನೆತನದ ಗೌರವಾನ್ವಿರೆ,
ಮಹನೀಯರೆ,

ರಾಜಮನೆತನದ ಗೌರವಾನ್ವಿತ ಸದಸ್ಯರೆ,

ಮಹಿಳೆಯರೆ ಮತ್ತು ಪುರುಷರೆ,

ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ನಾನು ಮಹಾರಾಜರು ಮತ್ತು ಇಡೀ ರಾಜಮನೆತನಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಬ್ರೂನೈಗೆ ಭಾರತದ ಪ್ರಧಾನಮಂತ್ರಿಯೊಬ್ಬರ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಆದಾಗ್ಯೂ, ಇಲ್ಲಿ ನಾನು ಪಡೆದಿರುವ ಆತ್ಮೀಯತೆ ಮತ್ತು ಗೌರವ ನಮ್ಮ ದೇಶಗಳ ನಡುವಿನ ಶತಮಾನಗಳ ಹಳೆಯ ಬಾಂಧವ್ಯದ ಪ್ರತಿ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ.

 

ಮಹಾರಾಜರೆ,

ರಾಜಮನೆತನದವರೆ, ಈ ವರ್ಷ ಬ್ರೂನೈ ಸ್ವಾತಂತ್ರ್ಯ ಪಡೆದ 40ನೇ ವಾರ್ಷಿಕೋತ್ಸವ ಆಚರಣೆಯಲ್ಲಿದೆ. ನಿಮ್ಮ ನಾಯಕತ್ವದಡಿ ಬ್ರೂನೈ ನಿರಂತರತೆ ಮತ್ತು ಸಾಂಪ್ರದಾಯಿಕ ವಿಶ್ವಾಸದೊಂದಿಗೆ ಪ್ರಗತಿ ಸಾಧಿಸುತ್ತಿದೆ. ಬ್ರೂನೈಗಾಗಿ ನಿಮ್ಮ ದೃಷ್ಟಿ - "ವಾವಾಸನ್ 2035"ಗೆ ಕ್ಷಣಗಣನೆ ಆರಂಭವಾಗಿದ್ದು, ಇದು ಶ್ಲಾಘನೀಯವಾಗಿದೆ. 1.4 ಶತಕೋಟಿ ಭಾರತೀಯರ ಪರವಾಗಿ, ನಾನು ನಿಮಗೆ ಮತ್ತು ಬ್ರೂನೈ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.“ 

ಸ್ನೇಹಿತರೆ,

ಭಾರತ ಮತ್ತು ಬ್ರೂನೈ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ಹೊಂದಿದೆ. ಈ ವರ್ಷ ರಾಜತಾಂತ್ರಿಕ ಬಾಂಧವ್ಯದ 40ನೇ ವರ್ಷಾಚರಣೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ವೃದ್ಧಿಯಾದ ಪಾಲುದಾರಿಕೆಯನ್ನು ಸ್ಮರಿಸಲು ನಿರ್ಧರಿಸಿದ್ದೇವೆ.  

ನಮ್ಮ ಪಾಲುದಾರಿಕೆಗೆ ಕಾರ್ಯತಂತ್ರದ ನಿರ್ದೇಶನವನ್ನು ನೀಡಲು ನಾವು ನಮ್ಮ ಸಂಬಂಧಗಳ ವಿವಿಧ ಅಂಶಗಳ ಕುರಿತು ಸಮಗ್ರ ಮಾತುಕತೆ ನಡೆಸಿದ್ದೇವೆ. ಆರ್ಥಿಕ, ವೈಜ್ಞಾನಿಕ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಕೃಷಿ-ಕೈಗಾರಿಕೆ, ಔಷಧ ಮತ್ತು ಆರೋಗ್ಯ ಕ್ಷೇತ್ರಗಳೊಂದಿಗೆ ಹಣಕಾಸು ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯಲ್ಲಿ ನಮ್ಮ ಸಹಕಾರವನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.

ಇಂಧನ ವಲಯದ ಎಲ್.ಎನ್.ಜಿಯಲ್ಲಿ ದೀರ್ಘಕಾಲೀನ ಸಹಕಾರವನ್ನು ಬಯಸುತ್ತಿದ್ದೇವೆ. ನಮ್ಮ ರಕ್ಷಣಾ ಸಹಕಾರ ಕ್ಷೇತ್ರವನ್ನು ಬಲಪಡಿಸಲು ನಾವು ರಕ್ಷಣಾ ಕೈಗಾರಿಕೆ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ರಚನಾತ್ಮಕ ಮಾತುಕತೆ ನಡೆಸಿದ್ದೇವೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಿದ್ದು, ಉಪಗ್ರಹ ಅಭಿವೃದ್ಧಿ, ದೂರ ಸಂವೇದಿ ಮತ್ತು ತರಬೇತಿ ವಲಯದಲ್ಲಿ ಸಹಕಾರಕ್ಕೆ ಸಮ್ಮತಿಸಿದ್ದೇವೆ. ಎರಡೂ ದೇಶಗಳ ನಡುವೆ ನೇರ ವಿಮಾನಗಳು ಇಷ್ಟರಲ್ಲೇ ಶುಭಾರಂಭ ಮಾಡಲಿದ್ದು, ಉಭಯ ದೇಶಗಳ ಸಂಪರ್ಕವನ್ನು ವೃದ್ಧಿಸಲು ನಿರ್ಧರಿದ್ದೇವೆ. 

ಸ್ನೇಹಿತರೆ,

ಜನರಿಂದ ಜನರ ನಡುವಿನ ಸಂಪರ್ಕವೇ ನಮ್ಮ ಬಾಂಧವ್ಯದ ಆಧಾರ ಸ್ತಂಭವಾಗಿದೆ. ಬ್ರೂನೈ ಆರ್ಥಿಕತೆ ಮತ್ತು ಸಮಾಜಕ್ಕೆ ಭಾರತೀಯ ಸಮುದಾಯ ಸಕಾರಾತ್ಮಕ ಕೊಡುಗೆ ನೀಡುತ್ತಿರುವ ಬಗ್ಗೆ ತಮಗೆ ಸಂತಸವಿದೆ. ನಿನ್ನೆ ಭಾರತದ ಹೈಕಮಿಷನ್‌ನ ಹೊಸ ಕಚೇರಿ ಉದ್ಘಾಟನೆಯೊಂದಿಗೆ, ಭಾರತೀಯ ಸಮುದಾಯವು ಬ್ರೂನೈಯಲ್ಲಿ ಶಾಶ್ವತ ಸ್ಥಳವನ್ನು ಕಂಡುಕೊಂಡಿದೆ. ಬ್ರೂನೈಯಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ನಾವು ಮಹಾರಾಜರಿಗೆ ಮತ್ತು ಅವರ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ.

 

ಸ್ನೇಹಿತರೆ, 

ಭಾರತದ ಪೂರ್ವದತ್ತ ನೋಡು ನೀತಿಯು ಬ್ರೂನೈ ಮತ್ತು ಭಾರತ ಫೆಸಿಫಿಕ್ ವಲಯದ ದೃಷ್ಟಿಕೋನಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರೀಯ ಏಷಿಯನ್ ಭಾಗಕ್ಕೆ ನಾವು ಸದಾ ಕಾಲ ಆದ್ಯತೆ ನೀಡಿದ್ದೇವೆ ಮತ್ತು ಅದನ್ನು ಮುಂದುವರೆಸುತ್ತೇವೆ.

 

ನಾವು UNCLOS ನಂತಹ ಪರಸ್ಪರ ಕಾನೂನುಗಳ ಅಡಿಯಲ್ಲಿ ಸಾಗಲು ಮತ್ತು ಸ್ವಾಯತ್ತತೆಯನ್ನು ಬೆಂಬಲಿಸುತ್ತೇವೆ. 

ಈ ವಲಯದಲ್ಲಿ ನೀತಿ ಸಂಹಿತೆಯನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ.  ನಾವು ಅಭಿವೃದ್ಧಿ ನೀತಿಯನ್ನು ಬೆಂಬಲಿಸುತ್ತೇವೆಯೇ ಹೊರತು ವಿಸ್ತರಣಾ ವಾದವನ್ನಲ್ಲ. 

ಮಹಾರಾಜರೆ,

ಭಾರತದೊಂದಿಗಿನ ಬಾಂಧವ್ಯ ಬಲಗೊಳಿಸುವ ನಿಟ್ಟಿನಲ್ಲಿ ಹೊಂದಿರುವ ಬದ್ಧತೆಗೆ ನಾವು ಕೃತಜ್ಞರಾಗಿದ್ದೇವೆ. ತಮಗೆ ತೋರಿದ ಗೌರವಕ್ಕಾಗಿ ಅತ್ಯಂತ ವ್ಯಾಪಕವಾದ ಕೃತಜ್ಞತೆ ವ್ಯಕ್ತಪಡಿಸುತ್ತೇವೆ. ಮಹಾರಾಜರಿಗೆ, ರಾಜಮನೆತನಕ್ಕೆ ಮತ್ತು ಬ್ರೂನೈ ಜನತೆಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧತೆಗಾಗಿ ನಾವು ಪ್ರಾರ್ಥಿಸುತ್ತೇವೆ. 

ತುಂಬಾ ಧನ್ಯವಾದಗಳು 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
IMF retains India's economic growth outlook for FY26 and FY27 at 6.5%

Media Coverage

IMF retains India's economic growth outlook for FY26 and FY27 at 6.5%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಜನವರಿ 2025
January 18, 2025

Appreciation for PM Modi’s Efforts to Ensure Sustainable Growth through the use of Technology and Progressive Reforms