ಭಾರತವು ತನ್ನ ಆಡಳಿತದಲ್ಲಿ ಪ್ರಜಾಸತ್ತಾತ್ಮಕ ಮನೋಭಾವವನ್ನು ಬಲಿಷ್ಠ ಆಧಾರಸ್ತಂಭವನ್ನಾಗಿ ಮಾಡಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ, ಭಾರತವು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವನ್ನು ಸಾಧಿಸಿದೆ, ಇಂದಿನ ಭಾರತವು ವಿಶ್ವದ ಅತ್ಯಂತ ತಾಂತ್ರಿಕವಾಗಿ ಒಳಗೊಳ್ಳುವ ಸಮಾಜಗಳಲ್ಲಿ ಒಂದಾಗಿದೆ: ಪ್ರಧಾನಮಂತ್ರಿ
ನಾವು ಡಿಜಿಟಲ್ ತಂತ್ರಜ್ಞಾನವನ್ನು ಪ್ರಜಾಪ್ರಭುತ್ವೀಕರಣಗೊಳಿಸಿದ್ದೇವೆ, ಅದನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಪ್ರತಿಯೊಂದು ಪ್ರದೇಶಕ್ಕೂ ಲಭ್ಯವಾಗುವಂತೆ ಮಾಡಿದ್ದೇವೆ: ಪ್ರಧಾನಮಂತ್ರಿ
ತಂತ್ರಜ್ಞಾನವು ಕೇವಲ ಅನುಕೂಲತೆಯ ಸಾಧನವಲ್ಲ, ಸಮಾನತೆಯನ್ನು ಖಚಿತಪಡಿಸುವ ಒಂದು ಮಾಧ್ಯಮವೂ ಹೌದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ: ಪ್ರಧಾನಮಂತ್ರಿ
ಇಂಡಿಯಾ ಸ್ಟಾಕ್ ವಿಶ್ವಕ್ಕೆ, ವಿಶೇಷವಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಒಂದು ಆಶಾಕಿರಣವಾಗಿದೆ: ಪ್ರಧಾನಮಂತ್ರಿ
ನಾವು ಇತರ ದೇಶಗಳೊಂದಿಗೆ ತಂತ್ರಜ್ಞಾನವನ್ನು ಹಂಚಿಕೊಳ್ಳುವುದು ಮಾತ್ರವಲ್ಲ, ಅದನ್ನು ಅಭಿವೃದ್ಧಿಪಡಿಸಲು ಸಹ ಅವರಿಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಇದು ಡಿಜಿಟಲ್ ನೆರವು ಅಲ್ಲ, ಇದು ಡಿಜಿಟಲ್ ಸಬಲೀಕರಣವಾಗಿದೆ: ಪ್ರಧಾನಮಂತ್ರಿ
ಭಾರತದ ಫಿನ್ ಟೆಕ್ ಸಮುದಾಯದ ಪ್ರಯತ್ನಗಳಿಂದಾಗಿ, ನಮ್ಮ ಸ್ವದೇಶಿ ಪರಿಹಾರಗಳು ಜಾಗತಿಕ ಮನ್ನಣೆಯನ್ನು ಗಳಿಸುತ್ತಿವೆ: ಪ್ರಧಾನಮಂತ್ರಿ
ಎ.ಐ. ಕ್ಷೇತ್ರದಲ್ಲಿ, ಭಾರತದ ವಿಧಾನವು ಮೂರು ಪ್ರಮುಖ ತತ್ವಗಳನ್ನು ಆಧರಿಸಿದೆ - ಸಮಾನ ಪ್ರವೇಶ, ಜನಸಂಖ್ಯಾ ಪ್ರಮಾಣದ ಕೌಶಲ್ಯ ಮತ್ತು ಜವಾಬ್ದಾರಿಯುತ ನಿಯೋಜನೆ: ಪ್ರಧಾನಮಂತ್ರಿ
ನೈತಿಕ ಎಐಗಾಗಿ ಜಾಗತಿಕ ಚೌಕಟ್ಟನ್ನು ಭಾರತ ಯಾವಾಗಲೂ ಬೆಂಬಲಿಸಿದೆ: ಪ್ರಧಾನಮಂತ್ರಿ
ನಮಗೆ, ಎ.ಐ. ಎಂದರೆ 'ಆಲ್ ಇನ್ಕ್ಲೂಸಿವ್': ಪ್ರಧಾನಮಂತ್ರಿ
ತಂತ್ರಜ್ಞಾನವು ಜನರು ಮತ್ತು ಭೂಮಿ ಎರಡನ್ನೂ ಸಮೃದ್ಧಗೊಳಿಸುವಂತಹ ಫಿನ್ ಟೆಕ್ ಜಗತ್ತನ್ನು ರಚಿಸುವ ಗುರಿ ನಮ್ಮದು: ಪ್ರಧಾನಮಂತ್ರಿ

ಗೌರವಾನ್ವಿತ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್, ರಿಸರ್ಬ್ ಬ್ಯಾಂಕ್ ಇಂಡಿಯಾದ ಗವರ್ನರ್, ನಾವಿನ್ಯಕಾರರೇ, ನಾಯಕರೇ ಮತ್ತು ಜಗತ್ತಿನ ಎಲ್ಲಾ ಮೂಲೆಗಳಿಂದ ಆಗಮಿಸಿರುವ ಹೂಡಿಕೆದಾರರೆ, ಮಹಿಳೆಯರೆ ಮತ್ತು ಮಹನೀಯರೆ, ನಿಮ್ಮೆಲ್ಲರಿಗೂ ಮುಂಬೈಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ.

ಮಿತ್ರರೇ,

ನಾನು ಕಳೆದ ಬಾರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, 2024ರ ಚುನಾವಣೆಗಳು ಇನ್ನು ಬಾಕಿ ಉಳಿದಿದ್ದವು. ಆ ದಿನ ನಾನು ಮುಂದಿನ ಆವೃತ್ತಿಯ ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಹೇಳಿದ್ದೆ ಮತ್ತು ಆ ಕ್ಷಣದಲ್ಲಿ ನೀವೆಲ್ಲರೂ ನನಗೆ ಭಾರಿ ಕರತಾಡನವನ್ನು ನೀಡಿದ್ದಿರಿ. ಇಲ್ಲಿ ನೆರೆದಿರುವ ಕೆಲವು ರಾಜಕೀಯ ತಜ್ಞರು ‘ಮೋದಿ ಈಸ್ ಕಮಿಂಗ್ ಬ್ಯಾಕ್’ ಎಂದು ಆಗಲೇ ಹೇಳಿದ್ದರು.

ಮಿತ್ರರೇ,

ಮುಂಬೈ ಎಂದರೆ ಶಕ್ತಿಯ ನಗರ, ಮುಂಬೈ ಎಂದರೆ ಉದ್ಯಮಿಗಳ ನಗರ, ಮುಂಬೈ ಎಂದರೆ ಸಾಧ್ಯತೆಗಳ ಕೊನೆಯಿಲ್ಲದ ನಗರ. ನಾನು ಪ್ರಧಾನಿ ಸ್ಟಾರ್ಮರ್ ಅವರನ್ನು ಈ ಮುಂಬೈಗೆ ಅತ್ಯಂತ ವಿಶೇಷವಾಗಿ ಸ್ವಾಗತಿಸುತ್ತೇನೆ. ಅವರು ಜಾಗತಿಕ ಫಿನ್ ಟೆಕ್ ಉತ್ಸವದಲ್ಲಿ ಭಾಗವಹಿಸಲು ಸಮಯ ಮಾಡಿಕೊಂಡಿರುವುದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ.

 

ಮಿತ್ರರೇ,

ಐದು ವರ್ಷಗಳ ಹಿಂದೆ ಜಾಗತಿಕ ಫಿನ್ ಟೆಕ್ ಉತ್ಸವವು ಆರಂಭವಾದಾಗ ವಿಶ್ವವು ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿತ್ತು. ಇಂದು ಈ ವೇದಿಕೆ ಆರ್ಥಿಕ ನಾವಿನ್ಯತೆ ಮತ್ತು ಸಹಕಾರಕ್ಕೆ ಜಾಗತಿಕ ವೇದಿಕೆಯಾಗಿದೆ. ಈ ವರ್ಷ ಯುನೈಟೆಡ್ ಕಿಂಗ್ ಡಮ್ ನಮ್ಮ ಪಾಲುದಾರ ರಾಷ್ಟ್ರವಾಗಿ ಸೇರ್ಪಡೆಯಾಗಿದೆ. ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಪ್ರಜಾಪ್ರಭುತ್ವಗಳಿಂದ ಜಾಗತಿಕ ಆರ್ಥಿಕ ಆಯಾಮ ಸಾಕಷ್ಟು ಬಲವರ್ಧನೆಗೊಂಡಿದೆ. ನಾನು ಇಲ್ಲಿನ ವಾತಾವರಣ, ಶಕ್ತಿ ಮತ್ತು ಕ್ರಿಯಾಶೀಲತೆಯನ್ನು ನೋಡಿದರೆ ಇದು ನಿಜಕ್ಕೂ ಅದ್ಭುತವೆನಿಸುತ್ತದೆ. ಇದು ಭಾರತದ ಆರ್ಥಿಕತೆ ಮತ್ತು ಭಾರತದ ಪ್ರಗತಿಯ ಮೇಲೆ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ನಾನು ಕ್ರಿಸ್ ಗೋಪಾಲಕೃಷ್ಣನ್ ಜಿ, ಆರ್ ಬಿಐನ ಗವರ್ನರ್, ಸಂಜಯ್ ಮಲ್ಹೋತ್ರ ಜಿ ಮತ್ತು ಇತರೆ ಎಲ್ಲ ಸಂಘಟನಕಾರರು ಮತ್ತು ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸ ಬಯಸುತ್ತೇನೆ.

ಮಿತ್ರರೇ,

ಭಾರತ ಪ್ರಜಾಪ್ರಭುತ್ವದ ಮಾತೆ. ನಾವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ಅದು ಕೇವಲ ಚುನಾವಣೆಗಳು ಅಥವಾ ನೀತಿ ನಿರೂಪಣೆಗೆ ಸಂಬಂಧಿಸಿದ್ದಲ್ಲ. ಭಾರತ ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ತನ್ನ ಆಡಳಿತದ ಸದೃಢ ಸ್ಥಂಬವನ್ನಾಗಿ ಮಾಡಿಕೊಂಡಿದೆ ಮತ್ತು ಅದಕ್ಕೆ ಉತ್ತಮ ಉದಾಹರಣೆ ಎಂದರೆ ತಂತ್ರಜ್ಞಾನ. ದೀರ್ಘಕಾಲದ ವರೆಗೆ ಇಡೀ ಜಗತ್ತು ತಾಂತ್ರಿಕ ವಿಭಜನೆ ಬಗ್ಗೆ ಮಾತನಾಡುತ್ತಿತ್ತು ಮತ್ತು ಆ ಚರ್ಚೆಯಲ್ಲಿ ಸತ್ಯಾಂಶ ಇದೆ ಎಂಬುದನ್ನು ನಾವು ನಿರಾಕರಿಸುವಂತಿಲ್ಲ. ಭಾರತವೂ ಕೂಡ ಆ ಸಮಯದಲ್ಲಿ ದೂರವೇ ಉಳಿದಿತ್ತು. ಆದರೆ ಕಳೆದ ದಶಕದಲ್ಲಿ ಭಾರತದಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಇಂದಿನ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ತಾಂತ್ರಿಕತೆಯನ್ನೊಳಗೊಂಡ ಸಮಾಜದಲ್ಲಿ ಒಂದಾಗಿದೆ.  

ಮಿತ್ರರೇ,

ನಾವು ಡಿಜಿಟಲ್ ತಂತ್ರಜ್ಞಾನವನ್ನೂ ಸಹ ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದೇವೆ ಮತ್ತು ಅದನ್ನು ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಪ್ರತಿಯೊಂದು ಪ್ರಾಂತ್ಯಕ್ಕೂ ಲಭ್ಯವಾಗುವಂತೆ ಮಾಡಿದ್ದೇವೆ. ಇಂದು ಭಾರತದ ಉತ್ತಮ ಆಡಳಿತದ ಮಾದರಿ ಒಂದು ಹೆಗ್ಗುರುತಾಗಿದೆ. ಈ ಮಾದರಿಯಲ್ಲಿ ಸರ್ಕಾರ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕ ವಿಶ್ವಾಸಗಳಿಸಿದೆ. ಆ ವೇದಿಕೆಯನ್ನಾಧರಿಸಿ ಖಾಸಗಿ ವಲಯ ಹೊಸ ನವೀನ ಉತ್ಪನ್ನಗಳನ್ನು ಸೃಷ್ಟಿಸುತ್ತಿದೆ. ಭಾರತ, ತಂತ್ರಜ್ಞಾನ ಕೇವಲ ಒಂದು ಅನುಕೂಲಕರ ಸಾಧನವನ್ನಾಗಿ ನೋಡುತ್ತಿಲ್ಲ. ಅದು ಸಮಾನತೆಯ ವಿಧಾನವನ್ನಾಗಿ ಪರಿಗಣಿಸಿದೆ.

 

ಮಿತ್ರರೇ,

ಈ ಎಲ್ಲರನ್ನೊಳಗೊಳ್ಳುವ ವಿಧಾನದಿಂದಾಗಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಪರಿವರ್ತನೆಯಾಗಿದೆ. ಮೊದಲು ಬ್ಯಾಂಕಿಂಗ್ ವಲಯ ಕೆಲವರಿಗಷ್ಟೇ ಲಭ್ಯವಿತ್ತು. ಆದರೆ ಇಂದು ಡಿಜಿಟಲ್ ತಂತ್ರಜ್ಞಾನದಿಂದಾಗಿ ಅದು ಸಬಲೀಕರಣದ ಸಾಧನವಾಗಿ ಮಾರ್ಪಟ್ಟಿದೆ. ಇಂದು ಭಾರತದಲ್ಲಿ ಡಿಜಿಟಲ್ ಪಾವತಿ  ದೈನಂದಿನ ಜೀವನದ ಭಾಗವಾಗಿದೆ ಮತ್ತು ಬಹುತೇಕ ಸಾಲವನ್ನು ಜಾಮ್ ಟ್ರಿನಿಟಿ ಅಂದರೆ ಜನ್ ಧನ್, ಆಧಾರ್ ಮತ್ತು ಮೊಬೈಲ್ ಮೂಲಕ ನಿರ್ವಹಿಸಲಾಗುತ್ತಿದೆ. ಯುಪಿಐ ವಹಿವಾಟುಗಳ ಬಗ್ಗೆ ಗಮನಿಸಿ, ಪ್ರತಿ ತಿಂಗಳು ಸುಮಾರು 20 ಬಿಲಿಯನ್ ವಹಿವಾಟುಗಳು ಅಂದರೆ 25 ಟ್ರಿಲಿಯನ್ ರೂಪಾಯಿಗಳಿಗೂ ಅಧಿಕ ವಹಿವಾಟು ಯುಪಿಐ ಮೂಲಕ ನಡೆಯುತ್ತದೆ. ಅಂದರೆ 25 ಲಕ್ಷ ಕೋಟಿ ವಹಿವಾಟು ನಡೆಯುತ್ತದೆ. ಇಂದು ಜಗತ್ತಿನ 100 ರಿಯಲ್ ಟೈಮ್ ಡಿಜಿಟಲ್ ವಹಿವಾಟುಗಳ ಪೈಕಿ 50ರಷ್ಟು ಭಾರತದಲ್ಲೇ ನಡೆಯುತ್ತವೆ.

ಮಿತ್ರರೇ,

ಈ ವರ್ಷದ ಜಾಗತಿಕ ಫಿನ್ ಟೆಕ್ ಮೇಳದ ಘೋಷವಾಕ್ಯ ಭಾರತದ ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ಬಲವರ್ಧನೆಗೊಳಿಸಿ ಮತ್ತಷ್ಟು ಮುಂದೆ ಕೊಂಡೊಯ್ಯುವುದಾಗಿದೆ.

ಮಿತ್ರರೇ,

ಇಂದು ಇಡೀ ಜಗತ್ತು ಭಾರತದ ಡಿಜಿಟಲ್ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದೆ. ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ), ಆಧಾರ್ ಆಧರಿತ ಪಾವತಿ ವ್ಯವಸ್ಥೆ, ಬಿಲ್ ಪಾವತಿ ವ್ಯವಸ್ಥೆ, ಭಾರತ್ ಕ್ಯೂಆರ್, ಡಿಜಿ ಲಾಕರ್, ಡಿಜಿ ಯಾತ್ರಾ ಮತ್ತು ಸರ್ಕಾರಿ ಇ-ಮಾರುಕಟ್ಟೆ ತಾಣ(ಜೆಮ್) ಇವೆಲ್ಲಾ ಭಾರತದ ಡಿಜಿಟಲ್ ಆರ್ಥಿಕತೆಯ ಬೆನ್ನೆಲುಬುಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತದ ಸಾಮರ್ಥ್ಯ ಹೆಚ್ಚಾಗುತ್ತಿರುವುದಕ್ಕೆ ಸಂತೋಷವಿದೆ. ಹೊಸ ಮುಕ್ತ ವ್ಯವಸ್ಥೆಗೆ ತೆರೆದುಕೊಳ್ಳುತ್ತಿದ್ದೇವೆ. ಕೆಲವರು ಈ ಬಗ್ಗೆ ಹೆಚ್ಚು ತಿಳಿದವರಿಲ್ಲ. ಆದರೆ ಒಎನ್ ಡಿಸಿ ಅಂದರೆ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಇದು ಸಣ್ಣ ವ್ಯಾಪಾರಿಗಳು ಮತ್ತು ಎಂಎಸ್ಎಂಇಗಳಿಗೆ ಉತ್ತೇಜನ ನೀಡಲಿದೆ. ಇದು ಇಡೀ ದೇಶದ ಮಾರುಕಟ್ಟೆಯನ್ನು ತಲುಪಲು ಸಹಾಯ ಮಾಡುತ್ತದೆ. ಅಂತೆಯೇ ಒಸಿಇಎನ್(ಓಪನ್ ಕ್ರೆಡಿಟ್ ಎನೇಬಲ್ ಮೆಂಟ್ ನೆಟ್ ವರ್ಕ್) ಇದು ಎಲ್ಲಾ ಸಾಲಗಳನ್ನು ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಈ ವ್ಯವಸ್ಥೆ ಎಂಎಸ್ಎಂಇಗಳು ಎದುರಿಸುತ್ತಿರುವ ಸಾಲದ ಕೊರತೆ ಸಮಸ್ಯೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಆರ್ ಬಿಐ ಕೈಗೊಂಡಿರುವ ಡಿಜಿಟಲ್ ಕರೆನ್ಸಿ ಉಪಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಲಿವೆ ಎಂಬ ವಿಶ್ವಾಸ ನನಗಿದೆ. ಈ ಎಲ್ಲ ಪ್ರಯತ್ನಗಳು ಭಾರತದ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಂಡು ನಮ್ಮ ಪ್ರಗತಿಗಾಥೆಯ ಚಾಲನಾ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಲಾಗುವುದು.

ಮಿತ್ರರೇ,

ಭಾರತದ ಸಾಮರ್ಥ್ಯ ಕೇವಲ ಭಾರತದ ಯಶಸ್ಸು ಮಾತ್ರವಲ್ಲ. ಕಳೆದ ನನ್ನ ಭೇಟಿಯ ವೇಳೆ ನಾನು, ಹೇಳಿದ್ದೆ ಇಂದು ಭಾರತ ಮಾಡುತ್ತಿರುವುದು ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಭರವಸೆಯ ದಾರಿ ದೀಪವಾಗಿದೆ ಎಂದು. ಭಾರತವು ತನ್ನ ಡಿಜಿಟಲ್ ಸಹಕಾರವನ್ನು ವೃದ್ಧಿಸಲು ಬಯಸುತ್ತಿದೆ ಮತ್ತು ತನ್ನ ಡಿಜಿಟಲ್ ನಾವಿನ್ಯತೆಗಳ ಮೂಲಕ ಜಗತ್ತಿನಾದ್ಯಂತ ಡಿಜಿಟಲ್ ಪಾಲುದಾರಿಕೆಗಳನ್ನು ಮಾಡಿಕೊಳ್ಳುತ್ತಿದೆ. ಅದರಿಂದಾಗಿಯೇ ನಾವು ನಮ್ಮ ಅನುಭವ ಮತ್ತು ಓಪನ್ ಸೋರ್ಸ್ ವೇದಿಕೆಗಳನ್ನು ಜಾಗತಿಕ ಸಾರ್ವಜನಿಕ ಒಳಿತಿಗಾಗಿ ಹಂಚಿಕೊಳ್ಳುತ್ತಿದ್ದೇವೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ ಭಾರತದಲ್ಲಿ ಅಭಿವೃದ್ಧಿಪಡಿಸಿಎರುವ ಎಂಒಎಸ್ಐಪಿ(ಮಾಡ್ಯುಲರ್ ಓಪನ್ ಸೋರ್ಸ್ ಐಡೆಂಟಿಟಿ ಫ್ಲಾಟ್  ಫಾರ್ಮ್) ಇಂದು 25ಕ್ಕೂ ಅಧಿಕ ರಾಷ್ಟ್ರಗಳು ತನ್ನದೇ ಆದ ಸಾವರಿನ್ ಡಿಜಿಟಲ್ ಐಡೆಂಟಿಟಿ ವ್ಯವಸ್ಥೆಗಳನ್ನು ನಿರ್ಮಿಸಿ, ಅಳವಡಿಸಿಕೊಳ್ಳಲು ಮುಂದಾಗಿದೆ. ನಾವು ತಂತ್ರಜ್ಞಾನವನ್ನಷ್ಟೇ ಹಂಚಿಕೊಳ್ಳುತ್ತಿಲ್ಲ. ರಾಷ್ಟ್ರಗಳ ಅಭಿವೃದ್ಧಿಗೂ ಸಹ ನೆರವಾಗುತ್ತಿದ್ದೇವೆ ಮತ್ತು ಇದು ಡಿಜಿಟಲ್ ನೆರವಲ್ಲ. ಜಗತ್ತಿಗೆ ಇಂದು ನೆರವು ನೀಡಲಾಗುತ್ತಿದೆ. ಯಾರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಅದು ಅರ್ಥವಾಗುತ್ತದೆ. ಇದು ನೆರವಲ್ಲ, ಡಿಜಿಟಲ್ ಸಬಲೀಕರಣ.

 

ಮಿತ್ರರೇ,

ಭಾರತದ ಫಿನ್ ಟೆಕ್ ಸಮುದಾಯದ ಪ್ರಯತ್ನಗಳಿಗೆ ಧನ್ಯವಾದಗಳು. ನಮ್ಮ ಸ್ವದೇಶಿ ಪರಿಹಾರಗಳು ಜಾಗತಿಕ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತಿವೆ. ಅದು ಇಂಟರ್ ಪೋರಬಲ್ ಕ್ಯೂಆರ್ ನೆಟ್ ವರ್ಕ್ ಆಗಿರಬಹುದು, ಓಪನ್ ಕಾಮರ್ಸ್ ಅಥವಾ ಓಪನ್ ಫೈನಾನ್ಸ್ ಫ್ರೇಮ್ ವರ್ಕ್ ಆಗಿರಬಹುದು. ಇಡೀ ವಿಶ್ವ ನಮ್ಮ ನವೋದ್ಯಮಗಳ ಪ್ರಗತಿಯನ್ನು ಗಮನಿಸುತ್ತಿವೆ. ವಾಸ್ತವದಲ್ಲಿ ಈ ವರ್ಷದ ಮೊದಲ ಆರು ತಿಂಗಳಲ್ಲಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಫಿನ್ ಟೆಕ್ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ರಾಷ್ಟ್ರವಾಗಿ ಮಾರ್ಪಟ್ಟಿದೆ. ನಾನು ಆ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೇನೆ. ಅದು ನಿಮ್ಮಲ್ಲೆರಿಗೂ ಸಂಬಂಧಿಸಿದ್ದು.

ಮಿತ್ರರೇ,

ಭಾರತದ ಸಾಮರ್ಥ್ಯ ಅದು ಕೇವಲ ತನ್ನ ವ್ಯಾಪ್ತಿಯಲ್ಲಿಲ್ಲ. ನಾವು ನಮ್ಮ ವ್ಯಾಪ್ತಿಯನ್ನು ಒಳಗೊಳ್ಳುವಿಕೆ, ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆಯೊಂದಿಗೆ ಸಂಯೋಜಿಸಿದ್ದೇವೆ ಮತ್ತು ಇದರಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರವೂ ಆರಂಭವಾಗಿದೆ. ಕೃತಕ ಬುದ್ಧಿಮತ್ತೆ ನೈಜ ಸಮಯದಲ್ಲಿ ವಂಚನೆಗಳನ್ನು ಪತ್ತೆಹಚ್ಚುತ್ತದೆ ಮತ್ತು ಎಲ್ಲಾ ಬಗೆಯ ಸೇವೆಗಳ ಗುಣಮಟ್ಟವನ್ನು ವೃದ್ಧಿಸುತ್ತವೆ. ಈ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಾವು ಸಾಮೂಹಿಕವಾಗಿ ದತ್ತಾಂಶ, ಕೌಶಲ್ಯ ಮತ್ತು ಆಡಳಿತದಲ್ಲಿ ಹೂಡಿಕೆ ಮಾಡಬೇಕಿದೆ.

ಮಿತ್ರರೇ,

ಭಾರತ ಕೃತಕ ಬುದ್ಧಿಮತ್ತೆ ಕುರಿತಂತೆ ಮೂರು ಪ್ರಮುಖ ಅಂಶಗಳನ್ನು ಆಧರಿಸಿ ಮುನ್ನಡೆಯುತ್ತಿದೆ – ಸಮಾನ ಲಭ್ಯತೆ, ಜನಸಂಖ್ಯೆಗನುಗುಣವಾಗಿ ಕೌಶಲ್ಯ ಮತ್ತು ಜವಾಬ್ದಾರಿಯುತ ನಿಯೋಜನೆ. ಭಾರತದ ಎಐ ಮಿಷನ್ ಅಡಿಯಲ್ಲಿ ನಾವು ಅಧಿಕ ಸಾಮರ್ಥ್ಯದ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ಇದರಿಂದ ಪ್ರತಿಯೊಬ್ಬ ನಾವಿನ್ಯಕಾರರು ಮತ್ತು ನವೋದ್ಯಮಿಗಳಿಗೆ ಅತ್ಯಂತ ಸುಲಭವಾಗಿ ಕೈಗೆಟಕುವ ದರಗಳಲ್ಲಿ ಎಐ ಸಂಪನ್ಮೂಲಗಳು ಲಭ್ಯವಾಗಲಿವೆ. ನಮ್ಮ ಗುರಿ ಎಂದರೆ ಎಐನ ಪ್ರಯೋಜನಗಳು ದೇಶದ ಎಲ್ಲಾ ಜಿಲ್ಲೆ ಮತ್ತು ಭಾಷೆಗಳಿಗೂ ಲಭ್ಯವಾಗಬೇಕು ಎಂಬುದು. ನಮ್ಮ ಶ್ರೇಷ್ಠತಾ ಕೇಂದ್ರಗಳು, ಕೌಶಲ್ಯ ತಾಣಗಳು ಮತ್ತು ಸ್ವದೇಶಿ ಎಐ ಮಾದರಿಗಳು ಇದನ್ನು ಸಾಧ್ಯವಾಗಿಸಿವೆ.

ಮಿತ್ರರೇ,

ಭಾರತ ಸದಾ ಕೃತಕಬುದ್ಧಿಮತ್ತೆಯನ್ನು ನೈತಿಕ ರೀತಿಯಲ್ಲಿ ಬಳಸಿಕೊಳ್ಳಲು ಜಾಗತಿಕ ಚೌಕಟ್ಟಿಗಾಗಿ ಪ್ರತಿಪಾದಿಸುತ್ತಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದೊಂದಿಗಿನ ನಮ್ಮ ಕಲಿಕೆ  ಇಡೀ ಜಗತ್ತಿಗೆ ಉಪಯುಕ್ತವಾಗಿದೆ. ನಾವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ(ಡಿಪಿಐ)ಅನ್ನು ಜಾರಿಗೊಳಿಸುತ್ತಿರುವ ಪ್ರಮಾಣ ಎಐನಲ್ಲೂ ನಾವು ಸಾಧಿಸುವ ಗುರಿ ಹೊಂದಿದ್ದೇವೆ. ನಮಗೆ ಎಐ ಅಂದರೆ ಸಂಪೂರ್ಣ ಭಿನ್ನವಾದುದು. ನಮಗೆ ಎಐ ಎಂದರೆ ಎಲ್ಲವನ್ನೊಳಗೊಂಡಿರುವುದು.

 

ಮಿತ್ರರೇ,

ಇಂದು ಜಗತ್ತಿನಾದ್ಯಂತ ಎಐ ಬಳಕೆ ವಿಶ್ವಾಸ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಭಾರತ ಈಗಾಗಲೇ ಅದಕ್ಕೆ ‘ವಿಶ್ವಾಸದ ಪದರವನ್ನು ಅಭಿವೃದ್ಧಿಪಡಿಸಿದೆ. ಭಾರತದ ಎಐ ಮಿಷನ್ , ದತ್ತಾಂಶ ಮತ್ತು ಖಾಸಗಿತನ ಎರಡನ್ನೂ ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ನಾವು ನಾವಿನ್ಯಕಾರರು ಇನ್ ಕ್ಲೂಸಿವ್ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳುವಂತೆ ಎಐ ವೇದಿಕೆಗಳನ್ನು ಸೃಷ್ಟಿಸುತ್ತಿದ್ದೇವೆ. ಪಾವತಿಗಳಲ್ಲಿ ನಮ್ಮ ಆದ್ಯತೆ ವೇಗ ಮತ್ತು ಭರವಸೆಯಾಗಿದೆ. ಸಾಲದಲ್ಲಿ ನಮ್ಮ ಗುರಿಯು ಅನುಮೋದನೆ ಮತ್ತು ಕೈಗೆಟಕುವಂತೆ ಮಾಡುವುದಾಗಿದೆ. ವಿಮೆಯಲ್ಲಿ ನಮ್ಮ ಗುರಿ ಉತ್ತಮ ನೀತಿಗಳು ಮತ್ತು ಸಕಾಲದಲ್ಲಿ ಪರಿಹಾರಗಳನ್ನು ಒದಗಿಸುವುದು. ಹೂಡಿಕೆಗಳಲ್ಲಿ ಲಭ್ಯತೆ ಮತ್ತು ಪಾರದರ್ಶಕತೆ ಒದಗಿಸುವುದಾಗಿದೆ. ಈ ಪರಿವರ್ತನೆಗೆ ಎಐ ಚಾಲಕಶಕ್ತಿಯಾಗಲಿದೆ. ಅದಕ್ಕಾಗಿ ಎಐ ಅಪ್ಲಿಕೇಶನ್ ಜನಕೇಂದ್ರಿತವಾಗಿರಬೇಕು. ಮೊದಲ ಬಾರಿಗೆ ಡಿಜಿಟಲ್ ಹಣಕಾಸು ಬಳಸುತ್ತಿರುವ ವ್ಯಕ್ತಿಯೂ ಕೂಡ ಯಾವುದೇ ತಪ್ಪುಗಳಾದರೆ ತ್ವರಿತವಾಗಿ ಅವುಗಳನ್ನು ಸರಿಪಡಿಸಬಹುದೆಂಬ ವಿಶ್ವಾಸವನ್ನು ಹೊಂದಿರಬೇಕು. ಈ ವಿಶ್ವಾಸವೇ ಡಿಜಿಟಲ್ ಒಳಗೊಳ್ಳುವಿಕೆಯನ್ನು ಬಲವರ್ಧನೆಗೊಳಿಸಲಿದೆ ಮತ್ತು ಹಣಕಾಸು ಸೇವೆಗಳಲ್ಲಿ ವಿಶ್ವಾಸ ಮೂಡಿಸಲಿದೆ.

ಮಿತ್ರರೇ,

ಕೆಲವೇ ವರ್ಷಗಳ ಹಿಂದೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಎಐ ಸುರಕ್ಷತಾ ಶೃಂಗಸಭೆ ಆರಂಭವಾಗಿತ್ತು. ಮುಂದಿನ ವರ್ಷ ಭಾರತದಲ್ಲಿ ಎಐ ಪರಿಣಾಮದ ಶೃಂಗಸಭೆ ನಡೆಯಲಿದೆ. ಅದರ ಅರ್ಥ ಸುರಕ್ಷತೆಯ ಬಗ್ಗೆ ಮಾತುಕತೆ ಯುಕೆಯಲ್ಲಿ ಆರಂಭವಾಯಿತು ಮತ್ತು ಅದರ ಪರಿಣಾಮದ ಮಾತುಕತೆ ಭಾರತದಲ್ಲಿ ನಡೆಯಿತು ಎಂದು. ಭಾರತ ಮತ್ತು ಯುಕೆ ಈಗಾಗಲೇ ಜಾಗತಿಕ ವ್ಯಾಪಾರ ಮತ್ತು ಪಾಲುದಾರಿಕೆಯಲ್ಲಿ ಇಬ್ಬರೂ ಪರಸ್ಪರ ಗೆಲ್ಲುವ ಮಾರ್ಗದಲ್ಲಿದ್ದಾರೆ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿವೆ. ಎಐ ಮತ್ತು ಫಿನ್ ಟೆಕ್ ನಲ್ಲಿ ನಮ್ಮ ಸಹಭಾಗಿತ್ವ ಈ ಭಾವನೆಯನ್ನು ಮತ್ತಷ್ಟು ದೃಢಪಡಿಸಿವೆ. ಯುನೈಟೆಡ್ ಕಿಂಗ್ ಡಮ್ ನ ಸಂಶೋಧನಾ ಸಾಮರ್ಥ್ಯ ಮತ್ತು ಜಾಗತಿಕ ಹಣಕಾಸು ಪರಿಣಿತಿಯನ್ನು ಬಳಸಿ ಭಾರತದ ವ್ಯಾಪ್ತಿ ಮತ್ತು ಪ್ರತಿಭೆಯನ್ನು ಒಗ್ಗೂಡಿಸಿ ಇಡೀ ಜಗತ್ತಿಗೇ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯಲಾಗುವುದು. ಇಂದು ನಾವು ಸ್ಟಾರ್ಟ್ ಅಪ್, ಸಂಸ್ಥೆಗಳು ಮತ್ತು ನಾವಿನ್ಯ ಕೇಂದ್ರಗಳ ನಡುವೆ ಸಂಪರ್ಕವನ್ನು ಬಲವರ್ಧನೆಗೊಳಿಸಲು ಸಂಕಲ್ಪ ಮಾಡಿದ್ದೇವೆ. ಯುಕೆ-ಇಂಡಿಯಾ ಫಿನ್ ಟೆಕ್ ಕಾರಿಡಾರ್ ಹೊಸ ನವೋದ್ಯಮಗಳಿಗೆ ಅವಕಾಶಗಳನ್ನು ಸೃಷ್ಟಿಸಲಿವೆ ಮತ್ತು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಹಾಗೂ ಗಿಫ್ಟ್ ಸಿಟಿ ನಡುವೆ ಸಹಕಾರದ ಹೊಸ ಮಾರ್ಗಗಳನ್ನು ತೆರೆಯಲಿದೆ. ಎರಡು ರಾಷ್ಟ್ರಗಳ ನಡುವಿನ ಈ ಆರ್ಥಿಕ ಸಂಯೋಜನೆ ನಮ್ಮ ಕಂಪನಿಗಳಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅನುಕೂಲ ಮಾಡಿಕೊಡಲಿದೆ.

 

ಮಿತ್ರರೇ,

ನಮಗೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಇದೆ. ಈ ವೇದಿಕೆಯಿಂದ ಯುಕೆ ಮತ್ತು ಜಗತ್ತಿನ  ಪ್ರತಿಯೊಬ್ಬ ಪಾಲುದಾರರನ್ನು ಭಾರತದೊಂದಿಗೆ ಕೈ ಜೋಡಿಸಲು ಆಹ್ವಾನಿಸುತ್ತೇನೆ. ಪ್ರತಿಯೊಬ್ಬ ಹೂಡಿಕೆದಾರರು ಭಾರತದ ಪ್ರಗತಿಯೊಂದಿಗೆ ಅಭಿವೃದ್ಧಿ ಹೊಂದುವಂತೆ ನಾನು ಸ್ವಾಗತಿಸುತ್ತೇನೆ. ನಾವು ಜನರು ಮತ್ತು ಭೂಗ್ರಹವನ್ನು ಸಮೃದ್ಧಗೊಳಿಸುವ ಫಿನ್ ಟೆಕ್ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಅಲ್ಲಿ ನಾವಿನ್ಯತೆ ಕೇವಲ ಪ್ರಗತಿಗಲ್ಲ ಎಲ್ಲ ಬಗೆಯ ಒಳ್ಳೆಯತನಕ್ಕೆ ಬೇಕಾಗಿದೆ ಮತ್ತು ಅಲ್ಲಿ ಹಣಕಾಸು ಕೇವಲ ಅಂಕಿ-ಸಂಖ್ಯೆಗಳಲ್ಲ ಅದು ಮಾನವನ ಪ್ರಗತಿಗೂ ಮುಖ್ಯ ಎಂಬುದನ್ನು ತೋರಿಸಿಕೊಡಲಿದೆ. ಈ ಕರೆಯೊಂದಿಗೆ ನಾನು ಎಲ್ಲರಿಗೂ ಶುಭ  ಹಾರೈಸುತ್ತೇನೆ ಮತ್ತು ಆರ್ ಬಿಐಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು.  ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
PM receives H.H. Sheikh Mohamed bin Zayed Al Nahyan, President of the UAE
January 19, 2026

Prime Minister Shri Narendra Modi received His Highness Sheikh Mohamed bin Zayed Al Nahyan, President of the UAE at the airport today in New Delhi.

In a post on X, Shri Modi wrote:

“Went to the airport to welcome my brother, His Highness Sheikh Mohamed bin Zayed Al Nahyan, President of the UAE. His visit illustrates the importance he attaches to a strong India-UAE friendship. Looking forward to our discussions.

@MohamedBinZayed”

“‏توجهتُ إلى المطار لاستقبال أخي، صاحب السمو الشيخ محمد بن زايد آل نهيان، رئيس دولة الإمارات العربية المتحدة. تُجسّد زيارته الأهمية التي يوليها لعلاقات الصداقة المتينة بين الهند والإمارات. أتطلع إلى مباحثاتنا.

‏⁦‪@MohamedBinZayed