Quoteಸಿಕ್ಕಿಂನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿಯವರಿಂದ ಶಂಕುಸ್ಥಾಪನೆ ಮತ್ತು ಉದ್ಘಾಟನೆ
Quoteಸಿಕ್ಕಿಂ ದೇಶದ ಹೆಮ್ಮೆ: ಪ್ರಧಾನಮಂತ್ರಿ
Quoteಕಳೆದ ದಶಕದಲ್ಲಿ, ನಮ್ಮ ಸರ್ಕಾರವು ಈಶಾನ್ಯವನ್ನು ಭಾರತದ ಅಭಿವೃದ್ಧಿ ಪ್ರಯಾಣದ ಕೇಂದ್ರದಲ್ಲಿ ಇರಿಸಿದೆ: ಪ್ರಧಾನಮಂತ್ರಿ
Quoteನಾವು ‘ಆಕ್ಟ್ ಫಾಸ್ಟ್ʼ ಎಂಬ ಮನೋಭಾವದೊಂದಿಗೆ ‘ಆಕ್ಟ್ ಈಸ್ಟ್ʼನೀತಿಯನ್ನು ಅನುಸರಿಸುತ್ತಿದ್ದೇವೆ: ಪ್ರಧಾನಮಂತ್ರಿ
Quoteಸಿಕ್ಕಿಂ ಮತ್ತು ಇಡೀ ಈಶಾನ್ಯವು ಭಾರತದ ಪ್ರಗತಿಯಲ್ಲಿ ಉಜ್ವಲ ಅಧ್ಯಾಯವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ
Quoteಸಿಕ್ಕಿಂ ಅನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಮಾಡಲು ನಾವು ಶ್ರಮಿಸುತ್ತಿದ್ದೇವೆ: ಪ್ರಧಾನಮಂತ್ರಿ
Quoteಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕ ಕ್ರೀಡಾ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ, ಈ ಕನಸನ್ನು ನನಸಾಗಿಸುವಲ್ಲಿ ಈಶಾನ್ಯ ಮತ್ತು ಸಿಕ್ಕಿಂನ ಯುವ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ
Quoteಸಿಕ್ಕಿಂ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಹಸಿರು ಮಾದರಿ ರಾಜ್ಯವಾಗಬೇಕು ಎಂಬುದು ನಮ್ಮ ಕನಸು: ಪ್ರಧಾನಮಂತ್ರಿ

ಸಿಕ್ಕಿಂ ರಾಜ್ಯಪಾಲರಾದ ಶ್ರೀ ಒ.ಪಿ. ಪ್ರಕಾಶ್ ಮಾಥುರ್ ಜಿ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತ ಪ್ರೇಮ್ ಸಿಂಗ್ ತಮಾಂಗ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ದೋರ್ಜಿ ತ್ಸೆರಿಂಗ್ ಲೆಪ್ಚಾ ಜಿ ಮತ್ತು ಡಾ. ಇಂದ್ರಾ ಹ್ಯಾಂಗ್ ಸುಬ್ಬಾ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಜನಪ್ರತಿನಿಧಿಗಳೆ, ಮಹಿಳೆಯರೆ ಮತ್ತು ಮಹನೀಯರೆ!

(ಸ್ಥಳೀಯ ಭಾಷೆಯಲ್ಲಿ ಶುಭಾಶಯ ಕೋರಿದರು)

ಸಿಕ್ಕಿಂನ ಪ್ರಜಾಪ್ರಭುತ್ವ ಪ್ರಯಾಣದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭವು ಒಂದು ಸ್ಮರಣೀಯ ದಿನವಾಗಿದೆ. ಈ ಆಚರಣೆ, ಈ ಉತ್ಸಾಹ ಮತ್ತು ಈ 50 ವರ್ಷಗಳ ಅದ್ಭುತ ಪ್ರಯಾಣವನ್ನು ವೀಕ್ಷಿಸಲು ನಾನು ನಿಮ್ಮೆಲ್ಲರ ನಡುವೆ ಇರಬೇಕೆಂದು ಮನಪೂರ್ವಕವಾಗಿ ಬಯಸಿದ್ದೆ. ಈ ಆಚರಣೆಯಲ್ಲಿ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕೆಂದು ನಾನು ಬಯಸಿದ್ದೆ. ನಾನು ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಬಾಗ್ಡೋಗ್ರಾಗೆ ಬಂದೆ, ಹವಾಮಾನವು ನನ್ನನ್ನು ನಿಮ್ಮ ಮನೆ ಬಾಗಿಲಿಗೆ ಕರೆತಂದಿದೆ. ಪರಿಣಾಮವಾಗಿ, ನಾನು ನಿಮ್ಮೆಲ್ಲರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದಿದ್ದರೂ, ನಾನು ಈ ಭವ್ಯ ಸಂದರ್ಭವನ್ನು ವೀಕ್ಷಿಸುತ್ತಿದ್ದೇನೆ. ನನ್ನ ಮುಂದೆ ಎಂತಹ ಭವ್ಯವಾದ ದೃಶ್ಯವಿದೆ! ಜನರನ್ನು ಎಲ್ಲಾ ದಿಕ್ಕುಗಳಲ್ಲಿಯೂ ಕಾಣಬಹುದಾಗಿದೆ, ಇದು ನಿಜವಾಗಿಯೂ ಅದ್ಭುತ ದೃಶ್ಯ. ನಿಮ್ಮೆಲ್ಲರ ನಡುವೆ ಇದ್ದಿದ್ದರೆ ಇನ್ನೂ ಅದ್ಭುತವಾಗಿರುತ್ತಿತ್ತು. ದುರದೃಷ್ಟವಶಾತ್, ನಾನು ನಿಮ್ಮನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ನಾನು ನನ್ನ ಪ್ರಾಮಾಣಿಕ ಕ್ಷಮೆ ಯಾಚಿಸುತ್ತೇನೆ.

ಆದಾಗ್ಯೂ, ಗೌರವಾನ್ವಿತ ಮುಖ್ಯಮಂತ್ರಿಗಳು ನನ್ನನ್ನು ಆಹ್ವಾನಿಸಿರುವುದರಿಂದ, ರಾಜ್ಯ ಸರ್ಕಾರವು ದಿನಾಂಕ ಅಂತಿಮಗೊಳಿಸಿದ ತಕ್ಷಣವೇ ನಾನು ಖಂಡಿತವಾಗಿಯೂ ಸಿಕ್ಕಿಂಗೆ ಭೇಟಿ ನೀಡುತ್ತೇನೆ ಎಂದಿದ್ದೆ. ನಿಮ್ಮೆಲ್ಲರನ್ನೂ ಭೇಟಿಯಾಗಲು ಮತ್ತು ಈ 50 ವರ್ಷಗಳ ಸುವರ್ಣ ಪ್ರಯಾಣಕ್ಕೆ ಸಾಕ್ಷಿಯಾಗಲು ನಾನು ಎದುರು ನೋಡುತ್ತಿದ್ದೆ.  ಇಂದು ಕಳೆದ 5 ದಶಕಗಳ ಸಾಧನೆಗಳನ್ನು ಆಚರಿಸುವ ದಿನ, ನೀವು ಈ ಸಂದರ್ಭವನ್ನು ಗುರುತಿಸಲು ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಮತ್ತು ಕೇಳುತ್ತಿದ್ದೇನೆ, ಈ ಕಾರ್ಯಕ್ರಮವನ್ನು ನಿಜವಾಗಿಯೂ ಸ್ಮರಣೀಯವಾಗಿಸುವಲ್ಲಿ ಮುಖ್ಯಮಂತ್ರಿಗಳೇ ಅಪಾರ ಸಮರ್ಪಣೆಯನ್ನು ತೋರಿಸಿದ್ದಾರೆ ಎಂದು ನಾನು ಹೇಳಲೇಬೇಕು. ಅವರು ವೈಯಕ್ತಿಕವಾಗಿ ತಮ್ಮ ಆಹ್ವಾನವನ್ನು ನೀಡಲು 2 ಬಾರಿ ದೆಹಲಿಗೆ ಬಂದಿದ್ದರು. ಸಿಕ್ಕಿಂ ರಾಜ್ಯ ಸಂಸ್ಥಾಪನೆಯ 50ನೇ ವಾರ್ಷಿಕೋತ್ಸವದಂದು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

 

|

ಸ್ನೇಹಿತರೆ,

50 ವರ್ಷಗಳ ಹಿಂದೆ, ಸಿಕ್ಕಿಂ ತನ್ನ ಭವಿಷ್ಯಕ್ಕಾಗಿ ಪ್ರಜಾಪ್ರಭುತ್ವದ ಮಾರ್ಗವನ್ನು ಆರಿಸಿಕೊಂಡಿತು. ಸಿಕ್ಕಿಂನ ಜನರು ಭಾರತದ ಭೌಗೋಳಿಕತೆಯೊಂದಿಗೆ ಮಾತ್ರವಲ್ಲದೆ, ಅದರ ಆತ್ಮದೊಂದಿಗೆ ಸಂಪರ್ಕ ಸಾಧಿಸಲು ಆಶಿಸಿದರು. ಪ್ರತಿಯೊಂದು ಧ್ವನಿಯನ್ನು ಕೇಳಿದಾಗ ಮತ್ತು ಪ್ರತಿಯೊಂದು ಹಕ್ಕನ್ನು ರಕ್ಷಿಸಿದಾಗ, ಅಭಿವೃದ್ಧಿಗೆ ಸಮಾನ ಅವಕಾಶಗಳು ಖಚಿತವಾಗುತ್ತವೆ ಎಂಬ ಆಳವಾದ ನಂಬಿಕೆ ಅವರಲ್ಲಿತ್ತು. ಇಂದು, ಪ್ರತಿಯೊಂದು ಸಿಕ್ಕಿಂ ಮನೆಯ ವಿಶ್ವಾಸವು ಹೆಚ್ಚು ಬಲಗೊಂಡಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಸಿಕ್ಕಿಂನ ಗಮನಾರ್ಹ ಪ್ರಗತಿಯ ಮೂಲಕ ದೇಶವು ಈ ನಂಬಿಕೆಯ ಫಲಿತಾಂಶಗಳನ್ನು ಕಂಡಿದೆ. ಇಂದು, ಸಿಕ್ಕಿಂ ಭಾರತದ ಹೆಮ್ಮೆಯಾಗಿದೆ. ಈ 50 ವರ್ಷಗಳಲ್ಲಿ, ಸಿಕ್ಕಿಂ ಪ್ರಕೃತಿಯೊಂದಿಗೆ ಸಾಮರಸ್ಯದ ಅಭಿವೃದ್ಧಿಯ ಮಾದರಿಯಾಗಿದೆ. ಇದು ಜೀವವೈವಿಧ್ಯದ ವಿಶಾಲ ಉದ್ಯಾನವಾಗಿ ಅರಳಿದೆ. ಇದು 100% ಸಾವಯವ ರಾಜ್ಯ ಎಂಬ ಹೆಗ್ಗಳಿಕೆ ಗಳಿಸಿದೆ. ಇದು ಸಾಂಸ್ಕೃತಿಕ ಮತ್ತು ಪರಂಪರೆ ಆಧಾರಿತ ಅಭಿವೃದ್ಧಿಯ ಹೊಳೆಯುವ ಸಂಕೇತವಾಗಿ ಹೊರಹೊಮ್ಮಿದೆ. ಇಂದು ಸಿಕ್ಕಿಂ ದೇಶದ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಈ ಎಲ್ಲಾ ಸಾಧನೆಗಳು ಸಿಕ್ಕಿಂ ಜನರ ಕಠಿಣ ಪರಿಶ್ರಮ ಮತ್ತು ಏಕತೆಯ ಫಲಿತಾಂಶವಾಗಿದೆ. ಈ 5 ದಶಕಗಳಲ್ಲಿ, ಸಿಕ್ಕಿಂನಿಂದ ಅನೇಕ ಪ್ರಕಾಶಮಾನವಾದ ನಕ್ಷತ್ರಗಳು ಹೊರಹೊಮ್ಮಿವೆ, ಇದು ಭಾರತೀಯ ಆಕಾಶವನ್ನು ಬೆಳಗಿಸುತ್ತಿದೆ. ಇಲ್ಲಿನ ಪ್ರತಿಯೊಂದು ಸಮುದಾಯವು ರಾಜ್ಯದ ಸಂಸ್ಕೃತಿ ಮತ್ತು ಬೆಳವಣಿಗೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸ್ನೇಹಿತರೆ,

2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ನಾನು ಘೋಷಿಸಿದೆ - ಸಬ್ ಕಾ ಸಾಥ್, ಸಬ್ ಕಾ ವಿಕಾಸ್. ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ದೇಶಾದ್ಯಂತ ಸಮತೋಲಿತ ಅಭಿವೃದ್ಧಿ ನಿರ್ಣಾಯಕವಾಗಿದೆ. ಅಭಿವೃದ್ಧಿಯನ್ನು ಒಂದು ಪ್ರದೇಶಕ್ಕೆ ಸೀಮಿತಗೊಳಿಸದೆ ಇನ್ನೊಂದು ಪ್ರದೇಶವನ್ನು ಹಿಂದೆ ಬಿಡಬಾರದು. ಭಾರತದ ಪ್ರತಿಯೊಂದು ರಾಜ್ಯ ಮತ್ತು ಪ್ರದೇಶವು ತನ್ನದೇ ಆದ ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿದೆ. ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ನಮ್ಮ ಸರ್ಕಾರವು ಕಳೆದ ದಶಕದಲ್ಲಿ ಈಶಾನ್ಯವನ್ನು ಅಭಿವೃದ್ಧಿಯ ಮುಂಚೂಣಿಗೆ ತಂದಿದೆ. 'ಆಕ್ಟ್ ಫಾಸ್ಟ್' ಎಂಬ ಮನೋಭಾವದಿಂದ ನಡೆಸಲ್ಪಡುವ 'ಆಕ್ಟ್ ಈಸ್ಟ್' ನ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ಇತ್ತೀಚೆಗೆ, ಈಶಾನ್ಯ ಹೂಡಿಕೆ ಶೃಂಗಸಭೆಯನ್ನು ದೆಹಲಿಯಲ್ಲಿ ನಡೆಸಲಾಯಿತು. ದೇಶಾದ್ಯಂತದ ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರು ಭಾಗವಹಿಸಿದ್ದರು. ಸಿಕ್ಕಿಂ ಸೇರಿದಂತೆ ಈಶಾನ್ಯದಾದ್ಯಂತ ಅವರು ಗಮನಾರ್ಹ ಹೂಡಿಕೆಗಳನ್ನು ಘೋಷಿಸಿದರು. ಇದು ಮುಂಬರುವ ವರ್ಷಗಳಲ್ಲಿ ಸಿಕ್ಕಿಂ ಮತ್ತು ವಿಶಾಲವಾದ ಈಶಾನ್ಯದ ಯುವಕರಿಗೆ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ ನೀಡುತ್ತದೆ.

ಸ್ನೇಹಿತರೆ,

ಇಂದಿನ ಕಾರ್ಯಕ್ರಮವು ಸಿಕ್ಕಿಂನ ಭವಿಷ್ಯದ ಪ್ರಯಾಣದ ಒಂದು ನೋಟವನ್ನು ಸಹ ಒದಗಿಸುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳು ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುತ್ತವೆ. ಈ ಮಹತ್ವದ ಉಪಕ್ರಮಗಳ ಆರಂಭಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಸಿಕ್ಕಿಂ ಸೇರಿದಂತೆ ಇಡೀ ಈಶಾನ್ಯವು ಹೊಸ ಭಾರತದ ಅಭಿವೃದ್ಧಿಯ ನಿರೂಪಣೆಯಲ್ಲಿ ವೇಗವಾಗಿ ಒಂದು ಪ್ರಕಾಶಮಾನವಾದ ಅಧ್ಯಾಯವಾಗುತ್ತಿದೆ. ಒಂದು ಕಾಲದಲ್ಲಿ ದೆಹಲಿಯಿಂದ ಭೌಗೋಳಿಕ ಅಂತರವು ಪ್ರಗತಿಗೆ ಅಡ್ಡಿಯಾಗಿತ್ತಾದರೂ, ಈಗ ಅವಕಾಶಗಳ ಹೊಸ ಮಾರ್ಗಗಳು ತೆರೆಯುತ್ತಿವೆ. ಈ ಪರಿವರ್ತನೆಗೆ ಅತ್ಯಂತ ಮಹತ್ವದ ವೇಗವರ್ಧಕವೆಂದರೆ ಸಂಪರ್ಕ ಸುಧಾರಣೆ – ಇದು ನೀವೆಲ್ಲರೂ ವೈಯಕ್ತಿಕವಾಗಿ ಕಂಡ ಬದಲಾವಣೆಯಾಗಿದೆ.

 

|

ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಅಥವಾ ಉದ್ಯೋಗಕ್ಕಾಗಿ ಪ್ರಯಾಣಿಸುವುದು ಒಂದು ಪ್ರಮುಖ ಸವಾಲಾಗಿದ್ದ ಕಾಲವಿತ್ತು. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಈ ಅವಧಿಯಲ್ಲಿ, ಸಿಕ್ಕಿಂನಲ್ಲಿ ಸುಮಾರು 400 ಕಿಲೋಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ನೂರಾರು ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಟಲ್ ಸೇತು ಸಿಕ್ಕಿಂ ಮತ್ತು ಡಾರ್ಜಿಲಿಂಗ್ ನಡುವಿನ ಸಂಪರ್ಕವನ್ನು ಸುಧಾರಿಸಿದೆ. ಸಿಕ್ಕಿಂನಿಂದ ಕಾಲಿಂಪಾಂಗ್‌ಗೆ ಸಂಪರ್ಕಿಸುವ ರಸ್ತೆಯಲ್ಲಿಯೂ ತ್ವರಿತ ಪ್ರಗತಿ ಸಾಧಿಸಲಾಗುತ್ತಿದೆ. ಇದಲ್ಲದೆ, ಬಾಗ್ಡೋಗ್ರಾ-ಗ್ಯಾಂಗ್‌ಟಾಕ್ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಯೊಂದಿಗೆ ಸಿಕ್ಕಿಂಗೆ ಪ್ರಯಾಣವು ಹೆಚ್ಚು ಅನುಕೂಲಕರವಾಗುತ್ತದೆ. ಮುಂದಿನ ದಿನಗಳಲ್ಲಿ, ಈ ಮಾರ್ಗವನ್ನು ಗೋರಖ್‌ಪುರ-ಸಿಲಿಗುರಿ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸಲಾಗುವುದು.

ಸ್ನೇಹಿತರೆ,

ಇಂದು ಪ್ರತಿ ಈಶಾನ್ಯ ರಾಜ್ಯದ ರಾಜಧಾನಿಯನ್ನು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕಿಸುವ ಅಭಿಯಾನವು ತ್ವರಿತ ಗತಿಯಲ್ಲಿ ಪ್ರಗತಿಯಲ್ಲಿದೆ. ಸೆವೋಕ್-ರಾಂಗ್ಪೋ ರೈಲ್ವೆ ಮಾರ್ಗವು ಶೀಘ್ರದಲ್ಲೇ ಸಿಕ್ಕಿಂ ಅನ್ನು ಈ ಜಾಲಕ್ಕೆ ಸಂಪರ್ಕಿಸುತ್ತದೆ. ರಸ್ತೆಗಳನ್ನು ನಿರ್ಮಿಸುವುದು ಸಾಧ್ಯವಾಗದ ಪ್ರದೇಶಗಳಲ್ಲಿ, ನಾವು ರೋಪ್‌ವೇಗಳನ್ನು ಸ್ಥಾಪಿಸಲು ಸಹ ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಸಮಯದ ಹಿಂದೆ, ಅಂತಹ ಒಂದು ರೋಪ್‌ವೇ ಯೋಜನೆಯನ್ನು ಉದ್ಘಾಟಿಸಲಾಯಿತು, ಇದು ಸಿಕ್ಕಿಂನ ಜನರಿಗೆ ಅನುಕೂಲವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಸ್ನೇಹಿತರೆ,

ಕಳೆದ ದಶಕದಲ್ಲಿ, ಭಾರತವು ಹೊಸದಾದ ದೃಢನಿಶ್ಚಯ ಮತ್ತು ಹೊಸ ಆಕಾಂಕ್ಷೆಗಳೊಂದಿಗೆ ಮುನ್ನಡೆಯುತ್ತಿದೆ. ಆರೋಗ್ಯ ಸೇವೆ ಸುಧಾರಿಸುವುದು ನಮ್ಮ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ. ಕಳೆದ 10ರಿಂದ 11 ವರ್ಷಗಳಲ್ಲಿ, ದೇಶಾದ್ಯಂತ ಪ್ರತಿ ರಾಜ್ಯದಲ್ಲೂ ಪ್ರಮುಖ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಏಮ್ಸ್ ಸಂಸ್ಥೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಗಮನಾರ್ಹ ವಿಸ್ತರಣೆಯನ್ನು ಕಂಡಿವೆ. ಇಂದು, ನಿಮ್ಮ ಅನುಕೂಲಕ್ಕಾಗಿ ಇಲ್ಲಿ 500 ಹಾಸಿಗೆಗಳ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದೆ. ಈ ಆಸ್ಪತ್ರೆ ಬಡ ಕುಟುಂಬಗಳಿಗೂ ಸಹ ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ.

ಸ್ನೇಹಿತರೆ,

ಒಂದೆಡೆ, ನಮ್ಮ ಸರ್ಕಾರ ಆಸ್ಪತ್ರೆಗಳನ್ನು ನಿರ್ಮಿಸುವತ್ತ ಗಮನ ಹರಿಸಿದರೆ, ಮತ್ತೊಂದೆಡೆ, ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ಸಿಕ್ಕಿಂನ 25,000ಕ್ಕೂ ಹೆಚ್ಚು ಜನರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈಗ, ದೇಶಾದ್ಯಂತ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಇನ್ನು ಮುಂದೆ, ಸಿಕ್ಕಿಂನಲ್ಲಿರುವ ಯಾವುದೇ ಕುಟುಂಬವು ತಮ್ಮ ವೃದ್ಧ ಪ್ರೀತಿಪಾತ್ರರ ಆರೋಗ್ಯ ಸೇವೆಯ ಬಗ್ಗೆ ಚಿಂತಿಸಬೇಕಾಗಿಲ್ಲ, ನಮ್ಮ ಸರ್ಕಾರ ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತದೆ.

ಸ್ನೇಹಿತರೆ,

‘ವಿಕಸಿತ ಭಾರತ’ ಅಥವಾ ಅಭಿವೃದ್ಧಿ ಹೊಂದಿದ ಭಾರತವನ್ನು 4 ಬಲವಾದ ಆಧಾರಸ್ತಂಭಗಳ ಮೇಲೆ ನಿರ್ಮಿಸಲಾಗುವುದು. ಬಡವರು, ರೈತರು, ಮಹಿಳೆಯರು ಮತ್ತು ಯುವಕರನ್ನು ಇಂದು, ರಾಷ್ಟ್ರವು ಈ ಆಧಾರಸ್ತಂಭಗಳಾಗಿ ನಿರಂತರವಾಗಿ ಬಲಪಡಿಸುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ನಾನು ಸಿಕ್ಕಿಂನ ರೈತರನ್ನು ಪೂರ್ಣ ಹೃದಯದಿಂದ ಶ್ಲಾಘಿಸುತ್ತೇನೆ. ಭಾರತವು ಕೃಷಿಯಲ್ಲಿ ಹೊಸ ಪ್ರವೃತ್ತಿಯನ್ನು ಕಾಣುತ್ತಿದೆ ಮತ್ತು ಸಿಕ್ಕಿಂ ಮುಂಚೂಣಿಯಲ್ಲಿದೆ. ಸಿಕ್ಕಿಂನಿಂದ ಸಾವಯವ ಉತ್ಪನ್ನಗಳ ರಫ್ತು ಕೂಡ ಹೆಚ್ಚುತ್ತಿದೆ. ಇತ್ತೀಚೆಗೆ, ಪ್ರಸಿದ್ಧ 'ಡಲ್ಲೆ ಖುರ್ಸಾನಿ' ಮೆಣಸಿನಕಾಯಿಗಳನ್ನು ಮೊದಲ ಬಾರಿಗೆ ರಫ್ತು ಮಾಡಲು ಆರಂಭಿಸಲಾಗಿದೆ. ಮಾರ್ಚ್‌ನಲ್ಲಿ, ಮೊದಲ ಸರಕು ವಿದೇಶಗಳಿಗೆ ರವಾನೆಯಾಯಿತು. ಭವಿಷ್ಯದಲ್ಲಿ, ಸಿಕ್ಕಿಂನಿಂದ ಅಂತಹ ಅನೇಕ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಇದನ್ನು ಸಾಧ್ಯವಾಗಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಪ್ರಯತ್ನಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

|

ಸ್ನೇಹಿತರೆ,

ಸಿಕ್ಕಿಂನ ಸಾವಯವ ಉತ್ಪನ್ನಗಳನ್ನು ಉತ್ಕೃಷ್ಟಗೊಳಿಸಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದ ಮೊದಲ ಸಾವಯವ ಮೀನುಗಾರಿಕೆ ಕ್ಲಸ್ಟರ್ ಅನ್ನು ಸೊರೆಂಗ್ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಸಿಕ್ಕಿಂಗೆ ರಾಷ್ಟ್ರೀಯ ಮತ್ತು ಜಾಗತಿಕವಾಗಿ ಹೊಸ ಗುರುತು ನೀಡುತ್ತದೆ. ಸಾವಯವ ಕೃಷಿಯ ಜತೆಗೆ, ಸಿಕ್ಕಿಂ ಈಗ ಸಾವಯವ ಜಲಚರಗಳ ಸಾಕಣೆಗಾಗಿ ಗುರುತಿಸಲ್ಪಡುತ್ತದೆ. ವಿಶ್ವಾದ್ಯಂತ ಸಾವಯವ ಮೀನು ಮತ್ತು ಮೀನು ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿದೆ. ಈ ಅಭಿವೃದ್ಧಿಯು ಸಿಕ್ಕಿಂನ ಯುವಕರಿಗೆ ಮೀನು ಸಾಕಣೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಸ್ನೇಹಿತರೆ,

ಕೆಲವೇ ದಿನಗಳ ಹಿಂದೆ, ನೀತಿ ಆಯೋಗವು ದೆಹಲಿಯಲ್ಲಿ ಸಭೆ ಸೇರಿತ್ತು. ಸಭೆಯಲ್ಲಿ, ಪ್ರತಿ ರಾಜ್ಯವು ಅಂತಾರಾಷ್ಟ್ರೀಯ ಖ್ಯಾತಿಯ ಕನಿಷ್ಠ ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಬೇಕು ಎಂದು ನಾನು ಒತ್ತಿ ಹೇಳಿದೆ. ಸಿಕ್ಕಿಂ ರೂಪಾಂತರಗೊಳ್ಳುವ ಸಮಯ ಈಗ ಬಂದಿದೆ, ಕೇವಲ ಗಿರಿಧಾಮವಾಗಿ ಮಾತ್ರವಲ್ಲದೆ ಜಾಗತಿಕ ಪ್ರವಾಸೋದ್ಯಮ ತಾಣವಾಗಿ. ಸಿಕ್ಕಿಂನ ಸಾಮರ್ಥ್ಯಕ್ಕೆ ಸರಿಸಾಟಿಯಿಲ್ಲ. ಇದು ಸಂಪೂರ್ಣ ಪ್ರವಾಸೋದ್ಯಮ ಪ್ಯಾಕೇಜ್ ಆಗಿದೆ. ಇದು ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ. ತನ್ನ ಸರೋವರಗಳು, ಜಲಪಾತಗಳು, ಪರ್ವತಗಳು ಮತ್ತು ಶಾಂತಿಯುತ ಬೌದ್ಧ ಮಠಗಳೊಂದಿಗೆ, ಸಿಕ್ಕಿಂ ನಿಜವಾಗಿಯೂ ಸಮಗ್ರ ಅನುಭವ ನೀಡುತ್ತದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನವು ಭಾರತದ ನಿಧಿ ಮಾತ್ರವಲ್ಲದೆ, ಇಡೀ ಪ್ರಪಂಚದ ಹೆಮ್ಮೆಯಾಗಿದೆ.

ಇಂದು, ಹೊಸ ಸ್ಕೈವಾಕ್ ನಿರ್ಮಾಣವಾಗುತ್ತಿರುವಾಗ, ಸುವರ್ಣ ಮಹೋತ್ಸವ ಯೋಜನೆ ಉದ್ಘಾಟಿಸಲಾಗುತ್ತಿದೆ, ಅಟಲ್ ಜಿ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ. ಈ ಪ್ರತಿಯೊಂದು ಬೆಳವಣಿಗೆಗಳು ಸಿಕ್ಕಿಂನ ಹೊಸ ದಿಗಂತದ ಆಕಾಂಕ್ಷೆಗಳನ್ನು ಸಂಕೇತಿಸುತ್ತವೆ.

ಸ್ನೇಹಿತರೆ,

ಸಿಕ್ಕಿಂ ಸಾಹಸ ಮತ್ತು ಕ್ರೀಡಾ ಪ್ರವಾಸೋದ್ಯಮಕ್ಕೆ ಅಪಾರ ಸಾಮರ್ಥ್ಯ ಹೊಂದಿದೆ. ಚಾರಣ, ಪರ್ವತ ಬೈಕಿಂಗ್ ಮತ್ತು ಎತ್ತರ ಪ್ರದೇಶಗಳಲ್ಲಿ ತರಬೇತಿ ಚಟುವಟಿಕೆಗಳನ್ನು ಇಲ್ಲಿ ಸುಲಭವಾಗಿ ಸುಗಮಗೊಳಿಸಬಹುದು. ಸಿಕ್ಕಿಂ ಸಮ್ಮೇಳನ ಪ್ರವಾಸೋದ್ಯಮ, ಕ್ಷೇಮ ಪ್ರವಾಸೋದ್ಯಮ ಮತ್ತು ಸಂಗೀತ ಪ್ರವಾಸೋದ್ಯದ ಕೇಂದ್ರವಾಗಿ ವಿಕಸನಗೊಳ್ಳುವುದನ್ನು ನಾವು ಊಹಿಸುತ್ತೇವೆ. ಗೋಲ್ಡನ್ ಜುಬಿಲಿ ಕನ್ವೆನ್ಷನ್ ಸೆಂಟರ್ ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ, ಇದು ಭವಿಷ್ಯದ ನಮ್ಮ ಸಿದ್ಧತೆಗಳ ಭಾಗವಾಗಿದೆ.

ಪ್ರಪಂಚದಾದ್ಯಂತದ ಪ್ರಸಿದ್ಧ ಕಲಾವಿದರು ಗ್ಯಾಂಗ್ಟಕ್‌ನ ರಮಣೀಯ ಕಣಿವೆಗಳಲ್ಲಿ ಪ್ರದರ್ಶನ ನೀಡಲು ಬರುವ ದಿನವನ್ನು ನಾನು ಕಲ್ಪಿಸಿಕೊಳ್ಳುತ್ತೇನೆ, ಜಗತ್ತು ಹೀಗೆ ಘೋಷಿಸುತ್ತದೆ: “ಪ್ರಕೃತಿ ಮತ್ತು ಸಂಸ್ಕೃತಿ ಎಲ್ಲಾದರೂ ಪರಿಪೂರ್ಣ ಸಾಮರಸ್ಯದಿಂದ ಅಸ್ತಿತ್ವದಲ್ಲಿ ಇದೆ ಎಂದಾದರೆ, ಅದು ನಮ್ಮ ಸಿಕ್ಕಿಂನಲ್ಲಿದೆ!”

ಸ್ನೇಹಿತರೆ,

ಜಗತ್ತು ಅದರ ಸಾಮರ್ಥ್ಯಗಳನ್ನು ವೀಕ್ಷಿಸಲು ಮತ್ತು ಅದರ ಅಗಾಧ ಸಾಮರ್ಥ್ಯವನ್ನು ಮೆಚ್ಚಲು ನಾವು ಜಿ-20 ಶೃಂಗಸಭೆಯ ಸಭೆಗಳನ್ನು ಈಶಾನ್ಯಕ್ಕೆ ತಂದಿದ್ದೇವೆ. ಎನ್‌ಡಿಎ ಸರ್ಕಾರವು ಸಿಕ್ಕಿಂನಲ್ಲಿರುವ ಈ ದೃಷ್ಟಿಕೋನವನ್ನು ತ್ವರಿತವಾಗಿ ವಾಸ್ತವಕ್ಕೆ ತರುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.

 

|

ಸ್ನೇಹಿತರೆ,

ಇಂದು ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದೆ. ಮುಂದಿನ ವರ್ಷಗಳಲ್ಲಿ, ಭಾರತವು ಕ್ರೀಡಾ ಮಹಾಶಕ್ತಿಯಾಗಲು ಉದ್ದೇಶಿಸಲಾಗಿದೆ. ಈ ಆಕಾಂಕ್ಷೆಯನ್ನು ಅರಿತುಕೊಳ್ಳುವಲ್ಲಿ, ಈಶಾನ್ಯದ ಯುವಕರು ವಿಶೇಷವಾಗಿ ಸಿಕ್ಕಿಂನ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಭೈಚುಂಗ್ ಭುಟಿಯಾ ಅವರಂತಹ ಫುಟ್‌ಬಾಲ್ ದಂತಕಥೆಗಳನ್ನು ಸೃಷ್ಟಿಸಿದ ಭೂಮಿ ಇದು. ತರುಣದೀಪ್ ರೈ ಅವರಂತಹ ಒಲಿಂಪಿಯನ್‌ಗಳು ಹೊರಹೊಮ್ಮಿದ್ದು ಸಿಕ್ಕಿಂನಿಂದಲೇ. ಜಸ್ಲಾಲ್ ಪ್ರಧಾನ್ ಅವರಂತಹ ಕ್ರೀಡಾಪಟುಗಳು ಭಾರತಕ್ಕೆ ಅಪಾರ ಕೀರ್ತಿ ತಂದಿದ್ದಾರೆ. ಈಗ ಸಿಕ್ಕಿಂನ ಪ್ರತಿಯೊಂದು ಹಳ್ಳಿ ಮತ್ತು ಪ್ರತಿಯೊಂದು ಪಟ್ಟಣದಿಂದ ಚಾಂಪಿಯನ್‌ಗಳು ಉದಯಿಸುವುದನ್ನು ನೋಡುವುದು ನಮ್ಮ ಗುರಿಯಾಗಿದೆ. ನಾವು ಕ್ರೀಡೆಯಲ್ಲಿ ಭಾಗವಹಿಸುವುದನ್ನು ಮೀರಿ ಗೆಲುವಿನ ದೃಢನಿಶ್ಚಯದ ಬದ್ಧತೆಯತ್ತ ಸಾಗಬೇಕು. ಗ್ಯಾಂಗ್ಟಕ್‌ನಲ್ಲಿ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಹೊಸ ಕ್ರೀಡಾ ಸಂಕೀರ್ಣವು ಮುಂಬರುವ ವರ್ಷಗಳಲ್ಲಿ ಭವಿಷ್ಯದ ಚಾಂಪಿಯನ್‌ಗಳಿಗೆ ತೊಟ್ಟಿಲು ಆಗಲಿದೆ. 'ಖೇಲೋ ಇಂಡಿಯಾ' ಉಪಕ್ರಮದಡಿ ಸಿಕ್ಕಿಂಗೆ ವಿಶೇಷ ಆದ್ಯತೆ ನೀಡಲಾಗಿದೆ. ಪ್ರತಿಭೆಯನ್ನು ಗುರುತಿಸುವುದರಿಂದ ಹಿಡಿದು ತರಬೇತಿ, ತಂತ್ರಜ್ಞಾನ ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಒದಗಿಸುವವರೆಗೆ ಪ್ರತಿಯೊಂದು ಹಂತದಲ್ಲೂ ಬೆಂಬಲವನ್ನು ವಿಸ್ತರಿಸಲಾಗುತ್ತಿದೆ. ಸಿಕ್ಕಿಂನ ಯುವಕರಲ್ಲಿ ಈ ರೋಮಾಂಚಕ ಶಕ್ತಿ ಮತ್ತು ಉತ್ಸಾಹವು ಭಾರತವು ಒಲಿಂಪಿಕ್ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ.

ಸ್ನೇಹಿತರೆ,

ಸಿಕ್ಕಿಂನಲ್ಲಿರುವ ನೀವೆಲ್ಲರೂ ಪ್ರವಾಸೋದ್ಯಮದ ಶಕ್ತಿಯನ್ನು ಸಂಪೂರ್ಣವಾಗಿ ತಿಳಿದಿದ್ದೀರಿ. ಪ್ರವಾಸೋದ್ಯಮವು ಕೇವಲ ಮನರಂಜನೆಯ ಒಂದು ರೂಪವಲ್ಲ, ಅದು ನಮ್ಮ ವೈವಿಧ್ಯತೆಯ ಆಚರಣೆಯಾಗಿದೆ. ಆದಾಗ್ಯೂ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಮಾಡಿದ ಘೋರ ಕೃತ್ಯವು ಕೇವಲ ಭಾರತೀಯ ನಾಗರಿಕರ ಮೇಲಿನ ದಾಳಿಯಾಗಿರಲಿಲ್ಲ, ಇದು ಮಾನವತೆಯ ಆತ್ಮದ ಮೇಲಿನ ದಾಳಿ, ಏಕತೆ ಮತ್ತು ಸಹೋದರತ್ವದ ಮನೋಭಾವಕ್ಕೆ ಒಂದು ಹೊಡೆತ.

ಭಯೋತ್ಪಾದಕರು ಹಲವಾರು ಕುಟುಂಬಗಳ ಜೀವನವನ್ನು ಧ್ವಂಸಗೊಳಿಸಿದ್ದಲ್ಲದೆ, ಅವರು ಭಾರತೀಯ ಜನರನ್ನು ವಿಭಜಿಸಲು ಸಂಚು ರೂಪಿಸಿದರು. ಆದರೆ ಇಂದು, ಭಾರತವು ಹಿಂದೆಂದಿಗಿಂತಲೂ ಹೆಚ್ಚು ಒಗ್ಗಟ್ಟಾಗಿದೆ ಎಂದು ಜಗತ್ತು ಸ್ಪಷ್ಟವಾಗಿ ನೋಡಿದೆ. ನಮ್ಮ ಏಕತೆಯ ಮೂಲಕ, ನಾವು ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ ದೃಢ ಮತ್ತು ನಿಸ್ಸಂದಿಗ್ಧ ಸಂದೇಶವನ್ನು ಕಳುಹಿಸಿದ್ದೇವೆ.

ಅವರು ನಮ್ಮ ಹೆಣ್ಣು ಮಕ್ಕಳ ಹಣೆಯ ಮೇಲಿನ ಸಿಂದೂರವನ್ನು ಅಳಿಸುವ ಮೂಲಕ ಜೀವನವನ್ನು ಛಿದ್ರಗೊಳಿಸಿದರು, ಆದರೆ ನಾವು ಆಪರೇಷನ್ ಸಿಂದೂರ್ ಮೂಲಕ ತಕ್ಕ ಉತ್ತರ ನೀಡಿದ್ದೇವೆ - ಅವರ ಕ್ರೌರ್ಯಕ್ಕೆ ನಿರ್ಣಾಯಕ ಮತ್ತು ಪ್ರಬಲ ಉತ್ತರ ನೀಡಿದ್ದೇವೆ.

ಸ್ನೇಹಿತರೆ,

ತನ್ನ ಭಯೋತ್ಪಾದಕ ನೆಲೆಗಳ ನಾಶದಿಂದ ಕೋಪಗೊಂಡ ಪಾಕಿಸ್ತಾನವು ನಮ್ಮ ನಾಗರಿಕರು ಮತ್ತು ಸೈನಿಕರನ್ನು ಗುರಿಯಾಗಿಸಿಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸಿತು. ಆದರೂ ಅದರಲ್ಲೂ ಪಾಕಿಸ್ತಾನದ ದ್ವಂದ್ವತೆ ಬಹಿರಂಗವಾಯಿತು. ಪ್ರತಿಕ್ರಿಯೆಯಾಗಿ, ನಾವು ಅವರ ಹಲವಾರು ವಾಯುನೆಲೆಗಳನ್ನು ನಾಶಪಡಿಸಿದ್ದೇವೆ, ಭಾರತವು ಹೇಗೆ ಸಮರ್ಥವಾಗಿದೆ ಎಂಬುದನ್ನು ಇಡೀ ಜಗತ್ತಿಗೆ ಪ್ರದರ್ಶಿಸಿದ್ದೇವೆ. ನಾವು ಎಷ್ಟು ವೇಗವಾಗಿ, ಎಷ್ಟು ನಿಖರವಾಗಿ ಮತ್ತು ಎಷ್ಟು ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ತೋರಿದ್ದೇವೆ.

ಸ್ನೇಹಿತರೆ,

ಸಿಕ್ಕಿಂನ ರಾಜ್ಯ ಸ್ಥಾಪನೆಯಾಗಿ 50 ವರ್ಷಗಳನ್ನು ಗುರುತಿಸುವ ಈ ಸಂದರ್ಭವು ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ. ಅಭಿವೃದ್ಧಿಯ ಪ್ರಯಾಣವು ಈಗ ವೇಗಗೊಳ್ಳುತ್ತದೆ. ನಮ್ಮ ರಾಷ್ಟ್ರವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ 2047 ವರ್ಷ ನಮ್ಮ ಮುಂದಿದೆ.

ಅದೇ ಸಮಯದಲ್ಲಿ, ಸಿಕ್ಕಿಂ ಭಾರತೀಯ ಒಕ್ಕೂಟದ ರಾಜ್ಯವಾಗಿ 75 ವರ್ಷಗಳನ್ನು ಆಚರಿಸುತ್ತದೆ. ಆದ್ದರಿಂದ, ಇಂದು ನಮ್ಮ ಸಾಮೂಹಿಕ ಗುರಿಗಳನ್ನು ಹೊಂದಿಸುವ ಕ್ಷಣವಾಗಿದೆ: ಆ 75 ವರ್ಷಗಳ ಮೈಲಿಗಲ್ಲಿನಲ್ಲಿ ಸಿಕ್ಕಿಂಗಾಗಿ ನಾವು ಯಾವ ದೃಷ್ಟಿಕೋನವನ್ನು ಹೊಂದಿದ್ದೇವೆ? ನಾವು ಯಾವ ರೀತಿಯ ಸಿಕ್ಕಿಂ ಅನ್ನು ನೋಡಲು ಬಯಸುತ್ತೇವೆ? ಮುಂದಿನ 25 ವರ್ಷಗಳವರೆಗೆ ನಾವು ಹಂತ ಹಂತವಾಗಿ ಒಂದು ಮಾರ್ಗಸೂಚಿ ರೂಪಿಸಬೇಕು. ನಾವು ನಿಯತಕಾಲಿಕವಾಗಿ ನಮ್ಮ ಪ್ರಗತಿಯನ್ನು ನಿರ್ಣಯಿಸಬೇಕು, ಇನ್ನೂ ಕ್ರಮಿಸಬೇಕಾದ ದೂರವನ್ನು ಅಳೆಯಬೇಕು, ನಾವು ಮುನ್ನಡೆಯಬೇಕಾದ ವೇಗವನ್ನು ನಿರ್ಧರಿಸಬೇಕು. ನಾವು ನವೀಕೃತ ಧೈರ್ಯ, ತಾಜಾ ಉತ್ಸಾಹ ಮತ್ತು ಅಪರಿಮಿತ ಶಕ್ತಿಯೊಂದಿಗೆ ಮುಂದುವರಿಯಬೇಕು. ಸಿಕ್ಕಿಂನ ಆರ್ಥಿಕತೆಯ ಬೆಳವಣಿಗೆಯನ್ನು ನಾವು ಹೆಚ್ಚಿಸಬೇಕು. ಸಿಕ್ಕಿಂ ಅನ್ನು ಕ್ಷೇಮದ ರಾಜ್ಯವಾಗಿ ಪರಿವರ್ತಿಸಲು ನಾವು ಶ್ರಮಿಸಬೇಕು. ಈ ಅನ್ವೇಷಣೆಯಲ್ಲಿ, ನಮ್ಮ ಯುವಕರು ಕೇಂದ್ರಬಿಂದುವಾಗಿರಬೇಕು, ಅವರಿಗೆ ವಿಸ್ತೃತ ಅವಕಾಶಗಳನ್ನು ನೀಡಬೇಕು. ಸ್ಥಳೀಯ ಅವಶ್ಯಕತೆಗಳು ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ನಾವು ಸಿಕ್ಕಿಂನ ಯುವಕರನ್ನು ಸಿದ್ಧಪಡಿಸಬೇಕು. ಆ ನಿಟ್ಟಿನಲ್ಲಿ, ಯುವಕರಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ನಾವು ಹೊಸ ಅವಕಾಶಗಳನ್ನು ಸ್ಥಾಪಿಸಬೇಕಿದೆ.

ಸ್ನೇಹಿತರೆ,

ಮುಂದಿನ 25 ವರ್ಷಗಳಲ್ಲಿ ಸಿಕ್ಕಿಂ ಅನ್ನು ಅಭಿವೃದ್ಧಿ, ಪರಂಪರೆ ಮತ್ತು ಜಾಗತಿಕ ಮನ್ನಣೆಯ ಶಿಖರಕ್ಕೆ ಏರಿಸುವುದಾಗಿ ನಾವೆಲ್ಲರೂ ಸಂಕಲ್ಪ ತೊಡೋಣ. ಸಿಕ್ಕಿಂ ಭಾರತಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ಹಸಿರು ಮಾದರಿ ರಾಜ್ಯವಾಗಬೇಕೆಂಬುದು ನಮ್ಮ ಆಶಯ. ಪ್ರತಿಯೊಬ್ಬ ನಾಗರಿಕನು ಗಟ್ಟಿಯಾದ ಛಾವಣಿಯಡಿ ವಾಸಿಸುವ ರಾಜ್ಯ, ಪ್ರತಿ ಮನೆಯೂ ಸೌರಶಕ್ತಿಯಿಂದ ಚಾಲಿತವಾಗುವ ರಾಜ್ಯ, ಕೃಷಿ-ಸ್ಟಾರ್ಟಪ್‌ಗಳು ಮತ್ತು ಪ್ರವಾಸೋದ್ಯಮ ಸ್ಟಾರ್ಟಪ್‌ಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮತ್ತು ಸಾವಯವ ಉತ್ಪನ್ನಗಳ ರಫ್ತಿಗೆ ಜಾಗತಿಕ ಮೆಚ್ಚುಗೆ ಗಳಿಸುವ ರಾಜ್ಯ. ಪ್ರತಿಯೊಬ್ಬ ನಾಗರಿಕನು ಡಿಜಿಟಲ್ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ರಾಜ್ಯ, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮೂಲಕ ನಮ್ಮ ಗುರುತನ್ನು ಹೊಸ ಎತ್ತರಕ್ಕೆ ಏರಿಸುವ ರಾಜ್ಯವಾಗಬೇಕು. ಈ ನಿಟ್ಟಿನಲ್ಲಿ, ಮುಂದಿನ 25 ವರ್ಷಗಳು ಇವುಗಳನ್ನು ಮತ್ತು ಇನ್ನೂ ಅನೇಕ ಮಹತ್ವಾಕಾಂಕ್ಷೆಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ. ಸಿಕ್ಕಿಂ ಅನ್ನು ಜಾಗತಿಕ ವೇದಿಕೆಯಲ್ಲಿ ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಈ ಸಂಕಲ್ಪದೊಂದಿಗೆ ನಾವು ಮುಂದುವರಿಯೋಣ ಮತ್ತು ಈ ಉತ್ಸಾಹದಲ್ಲಿ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸೋಣ.

ಮತ್ತೊಮ್ಮೆ, ಭಾರತದ ಜನರ ಪರವಾಗಿ, ಈ ಮಹತ್ವದ ಸಂದರ್ಭದಲ್ಲಿ, 50 ವರ್ಷಗಳ ಈ ಮಹತ್ವದ ಮೈಲಿಗಲ್ಲಿನಂದು ಸಿಕ್ಕಿಂನ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು!

 

  • Manashi Suklabaidya July 05, 2025

    🙏🙏🙏
  • Jitendra Kumar July 04, 2025

    🪷🇮🇳
  • Anup Dutta June 27, 2025

    🙏🙏
  • Anup Dutta June 27, 2025

    🙏
  • Jagmal Singh June 25, 2025

    BJP
  • ram Sagar pandey June 18, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय माँ विन्ध्यवासिनी👏🌹💐ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹🌹🙏🏻🌹जय श्रीराम🙏💐🌹
  • DAVENDER SHEKHAWAT June 12, 2025

    जय हिन्द 🔱 जय भारत 🙏
  • Gaurav munday June 09, 2025

    💚💙💙
  • Polamola Anji June 09, 2025

    bjp🔥🔥
  • Polamola Anji June 09, 2025

    bjp🔥
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
When Narendra Modi woke up at 5 am to make tea for everyone: A heartwarming Trinidad tale of 25 years ago

Media Coverage

When Narendra Modi woke up at 5 am to make tea for everyone: A heartwarming Trinidad tale of 25 years ago
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in the devastating floods in Texas, USA
July 06, 2025

The Prime Minister, Shri Narendra Modi has expressed deep grief over loss of lives, especially children in the devastating floods in Texas, USA.

The Prime Minister posted on X

"Deeply saddened to learn about loss of lives, especially children in the devastating floods in Texas. Our condolences to the US Government and the bereaved families."