ಗೀತೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಪ್ರಶ್ನಿಸಲು ಪ್ರೇರೇಪಿಸುತ್ತದೆ, ಸಂವಾದಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಮನಸ್ಸನ್ನು ಮುಕ್ತವಾಗಿರಿಸುತ್ತದೆ: ಪ್ರಧಾನಮಂತ್ರಿ

ಚಿದ್ಭಾವನಂದ ಸ್ವಾಮೀಜಿ ಅವರ ಕಿಂಡಲ್ ಆವೃತ್ತಿಯ ಭಗವದ್ಗೀತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಲೋಕಾರ್ಪಣೆ ನೆರವೇರಿಸಿದರು.

ಸ್ವಾಮಿ ಚಿದ್ಭಾವನಂದ ಅವರ ಭಗವದ್ಗೀತೆಯ ಇ-ಬುಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಅವರು, ಇ-ಬುಕ್ ಆವೃತ್ತಿಯು ಈ ಜಗತ್ತಿನ ಯುವ ಸಮೂಹಕ್ಕೆ ಗೀತೆಯ ಉದಾತ್ತ ಚಿಂತನೆಗಳನ್ನು ತಲುಪಿಸಲು ಸಹಕಾರಿಯಾಗಲಿದೆ. ಈಗ ತಂತ್ರಜ್ಞಾನ ಮತ್ತು ಸಂಪ್ರದಾಯ ವಿಲೀನಗೊಂಡಿದೆ. ಇ-ಬುಕ್ ಸನಾತನ ಗೀತೆ ಮತ್ತು ಅದ್ಭುತ ತಮಿಳು ಸಂಸ್ಕೃತಿ ನಡುವಿನ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಈ ಇ-ಬುಕ್ ಜಗತ್ತಿನಾದ್ಯಂತ ವ್ಯಾಪಿಸಿರುವ ಅನಿವಾಸಿ ತಮಿಳು ಸಮೂಹಕ್ಕೆ ಸುಲಭವಾಗಿ ಓದಲು ಅನುವು ಮಾಡಿಕೊಡುತ್ತದೆ. ಅನಿವಾಸಿ ತಮಿಳರು ಅನೇಕ ಕ್ಷೇತ್ರಗಳಲ್ಲಿ ಹೊಸ ಎತ್ತರಕ್ಕೆ ತಲುಪಿದ್ದಾರೆ. ಅವರು ಹೋದ ಕಡೆಗಳಲ್ಲಿ ತಮಿಳು ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡೊಯ್ದಿದ್ದಾರೆ ಎಂದು ಶ್ಲಾಘಿಸಿದರು.

ಸ್ವಾಮಿ ಚಿದ್ಭಾವನಂದಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಮಂತ್ರಿ ಅವರು, ಸ್ವಾಮಿ ಚಿದ್ಭಾವನಂದಜಿ ಅವರ ಮನಸ್ಸು, ದೇಹ, ಹೃದಯ ಮತ್ತು ಆತ್ಮ ಭಾರತದ ಪುನರುತ್ಥಾನಕ್ಕೆ ಮೀಸಲಾಗಿದೆ. ಸ್ವಾಮಿ ವಿವೇಕಾನಂದರು ಮದ್ರಾಸ್ ನಲ್ಲಿ ನೀಡಿದ ಉಪನ್ಯಾಸದಿಂದ ಸ್ವಾಮಿ ಚಿದ್ಭಾವನಾನಂದಜಿ ಅವರು ಸ್ಪೂರ್ತಿ ಪಡೆದಿದ್ದರು. ಅಲ್ಲದೇ ಅವರು ಎಲ್ಲದಕ್ಕಿಂತಲೂ ದೇಶ ಮಿಗಿಲು ಮತ್ತು ಜನರಿಗಾಗಿ ಸೇವೆ ಸಲ್ಲಿಸುವ ಉದಾತ್ತತ್ತೆಯನ್ನು ಹೊದಿದ್ದರು. ಒಂದು ಕಡೆ ಸ್ವಾಮಿ ಚಿದ್ಭಾವನಂದಜಿ ಅವರು ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆದರು ಹಾಗೂ ಮತ್ತೊಂದೆಡೆ ಅವರು ತಮ್ಮ ಉದಾತ್ತ ಕಾರ್ಯಗಳಿಂದ ಜಗತ್ತನ್ನು ಪ್ರೇರೇಪಿಸಿದರು. ಈ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಮಿಷನ್, ಸಮುದಾಯ ಸೇವೆ, ಆರೋಗ್ಯ, ಶಿಕ್ಷಣ ಮತ್ತು ಸ್ವಾಮಿ ಚಿದ್ಭಾವನಂದಜಿ ಅವರ ಉದಾತ್ತ ಕೆಲಸಗಳನ್ನು ಮುಂದುವರಿಸುತ್ತಿದೆ ಎಂದು ಶ್ಲಾಘಿಸಿದರು. ಗೀತೆಯ ಸೌಂದರ್ಯ ಅದರ ಆಳ, ವೈವಿಧ್ಯ ಮತ್ತು ಹೊಂದಿಕೊಳ್ಳುವ ಗುಣದಲ್ಲಿದೆ. ಆಚಾರ್ಯ ವಿನೋಭಾ ಭಾವೆ ಅವರು ಗೀತೆಯನ್ನು ತಾಯಿ ಎಂದು ವರ್ಣಿಸಿದ್ದರು. ಯಾರಾದರು ಮುಗ್ಗರಿಸಿದರೆ ಅಂತಹವರನ್ನು ಆಕೆ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ ಎಂದಿದ್ದರು. ಪರಮೋಚ್ಚ ನಾಯಕರಾದ ಮಹಾತ್ಮಾ ಗಾಂಧಿ, ಲೋಕಮಾನ್ಯ ತಿಲಕ್, ಮಹಾಕವಿ ಸುಬ್ರಮಣಿಯ ಭಾರತಿ ಅವರು ಗೀತೆಯಿಂದ ಸ್ಪೂರ್ತಿ ಪಡೆದಿದ್ದರು. ಗೀತೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಪ್ರಶ್ನಿಸಲು ಪ್ರೇರೇಪಿಸುತ್ತದೆ, ಸಂವಾದಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಮನಸ್ಸನ್ನು ಮುಕ್ತವಾಗಿರಿಸುತ್ತದೆ. ಗೀತೆಯಿಂದ ಪ್ರೇರಿತರಾದ ಯಾರೇ ಆದರೂ ಸ್ವಭಾವತಃ ಸಹಾನುಭೂತಿ ಉಳ‍್ಳವರಾಗಿರುತ್ತಾರೆ ಮತ್ತು ಮನೋಧರ್ಮದಲ್ಲಿ ಪ್ರಜಾಪ್ರಭುತ್ವವಾದಿಗಳಾಗಿರುತ್ತಾರೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಶ್ರೀಮದ್ ಭಗವದ್ಗೀತೆ ಸಂಘರ್ಷ ಮತ್ತು ವಿಷಾದದಸಂದರ್ಭದಲ್ಲಿ ಜನಿಸಿದೆ ಮತ್ತು ಇದೇ ರೀತಿಯ ಸಂಘರ್ಷಗಳು ಮತ್ತು ಸವಾಲುಗಳನ್ನು ಮಾನವೀಯತೆ ಇದೀಗ ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಭಗವದ್ಗೀತೆ ವಿಷಾದದಿಂದ ವಿಜಯದತ್ತ ಕೊಂಡೊಯ್ಯುವ ಆಲೋಚನೆಗಳ ನಿಧಿಯಾಗಿದೆ ಎಂದು ವಿಶ್ಲೇಷಿಸಿದರು.

ಜಾಗತಿಕ ಸಾಂಕ್ರಾಮಿಕದ ವಿರುದ್ಧ ಜಗತ್ತು ಹೋರಾಟ ನಡೆಸುತ್ತಿರುವ ಮತ್ತು ದೂರ ದೃಷ್ಟಿಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಹೊರಬರಲು ಶ್ರೀಮದ್ ಭಗವದ್ಗೀತೆ ತೋರಿರುವ ಮಾರ್ಗ ಎಂದೆಂದೆಂದಿಗೂ ಪ್ರಸ್ತುತ. ಮಾನವೀಯತೆ ಎದುರಿಸುತ್ತಿರುವ ಸವಾಲುಗಳ ವಿರುದ್ಧ ವಿಜಯ ಸಾಧಿಸಲು ಶ್ರೀಮದ್ ಭಗವದ್ಗೀತೆ ಮತ್ತೊಮ್ಮೆ ಶಕ್ತಿ ನೀಡುತ್ತದೆ ಮತ್ತು ಮಾರ್ಗದರ್ಶನ ಮಾಡುತ್ತದೆ ಎಂದರು. ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಪ್ರಕಟಿಸಿರುವ ಪೀರ್ ರಿವ್ಯೂಡ್ ಕಾರ್ಡಿಯಾಲಜಿ ಜರ್ನಲ್ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಗೀತೆಯ ಪ್ರಸ್ತುತತೆ ಬಗ್ಗೆ ಸುದೀರ್ಘ ಮಾಹಿತಿಯನ್ನು ಇದು ಒಳಗೊಂಡಿದೆ ಎಂದರು.

ಶ್ರೀಮದ್ ಭಗವದ್ಗೀತೆಯ ಪ್ರಮುಖ ಸಂದೇಶವು ಕ್ರಿಯೆಯಾಗಿದೆ, ಏಕೆಂದರೆ ನಿಷ್ಕ್ರಿಯತೆಗಿಂತ ಕ್ರಿಯೆ ಉತ್ತಮವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಆತ್ಮ ನಿರ್ಭರ್ ಭಾರತ್ ನ ಮೂಲ ಉದ್ದೇಶ ಸಂಪತ್ತು ಮತ್ತು ಮೌಲ್ಯವನ್ನು ಸೃಷ್ಟಿಸುವುದಾಗಿದೆ. ಇದು ನಮಗಾಗಿ ಅಷ್ಟೇ ಅಲ್ಲದೇ ಉನ್ನತ ಮೌಲ್ಯವಾದ ಮಾನವೀಯತೆಗೂ ಸಹಕಾರಿಯಾಗಿದೆ. ಆತ್ಮನಿರ್ಭರ್ ಭಾರತ್ ನಿಂದ ಜಗತ್ತಿಗೆ ಒಳ‍್ಳೆಯದಾಗುತ್ತದೆ ಎಂದು ನಾವು ನಂಬಿದ್ದೇವೆ. ಕೋವಿಡ್ ನಿಂದ ಮುಕ್ತಿಹೊಂದಲು ಮತ್ತು ಮಾನವೀಯತೆಗೆ ನೆರವು ನೀಡಲು ನಮ್ಮ ವಿಜ್ಞಾನಿಗಳು ತ್ವರಿತವಾಗಿ ಲಸಿಕೆ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಗೀತೆಯ ಸ್ಪೂರ್ತಿ ಕಾರಣ ಎಂದು ಪ್ರಧಾನಮಂತ್ರಿ ಅವರು ವಿಶ್ಲೇಷಿಸಿದರು.

ಜನತೆ, ಅದರಲ್ಲೂ ವಿಶೇಷವಾಗಿ ಯುವ ಸಮೂಹ ಶ್ರೀಮದ್ ಭಗವದ್ಗೀತೆಯ ಬೋಧನೆಗಳನ್ನು ಬದುಕಿಗೆ ಸೂಕ್ತವಾಗುವಂತೆ ಅತ್ಯಂತ ಪ್ರಾಯೋಗಿಕವಾಗಿ ನೋಡಬೇಕು. ವೇಗದ ಜೀವನದಲ್ಲಿ ಗೀತೆ ಓಯಸಿಸ್ ನಂತೆ ಪ್ರಶಾಂತ ಮತ್ತು ಶಾಂತತೆಯನ್ನು ಒದಗಿಸುತ್ತದೆ. ಇದು ವೈಫಲ್ಯದ ಭೀತಿಯಿಂದ ನಮ್ಮ ನಮಸ್ಸನ್ನು ಮುಕ್ತಗೊಳಿಸುತ್ತದೆ ಮತ್ತು ನಮ್ಮನ್ನು ಕ್ರಿಯೆಯತ್ತ ಕೇಂದ್ರೀಕರಿಸುವಂತೆ ಮಾಡುತ್ತದೆ. ಮನಸ್ಸಿನ ಸಕಾರಾತ್ಮಕ ಚೌಕಟ್ಟನ್ನು ರೂಪಿಸಲು ಪ್ರತಿಯೊಂದು ಅಧ್ಯಾಯದಲ್ಲೂ ಏನನ್ನಾದರೂ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
New e-comm rules in offing to spotlight ‘Made in India’ goods, aid local firms

Media Coverage

New e-comm rules in offing to spotlight ‘Made in India’ goods, aid local firms
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ನವೆಂಬರ್ 2025
November 11, 2025

Appreciation by Citizens on Prosperous Pathways: Infrastructure, Innovation, and Inclusive Growth Under PM Modi