ಗೀತೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಪ್ರಶ್ನಿಸಲು ಪ್ರೇರೇಪಿಸುತ್ತದೆ, ಸಂವಾದಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಮನಸ್ಸನ್ನು ಮುಕ್ತವಾಗಿರಿಸುತ್ತದೆ: ಪ್ರಧಾನಮಂತ್ರಿ

ವಿಶೇಷ ಅತಿಥಿಗಳೇ

ಸ್ನೇಹಿತರೆ

ನಮಸ್ಕಾರ

ಇದೊಂದು ವಿಶಿಷ್ಟ ಕಾರ್ಯಕ್ರಮ. ಸ್ವಾಮಿ ಚಿದ್ಭಾವನಂದ ಜಿ ಅವರ ವ್ಯಾಖ್ಯಾನ ಇರುವ ಭಗವದ್ಗೀತೆಯ ಇ- ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ವಲಯದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಈ ಪ್ರಯತ್ನಕ್ಕೆ ಅಭಿನಂದನೆಗಳು. ಸಂಪ್ರದಾಯ ಮತ್ತು ತಂತ್ರಜ್ಞಾನ ವಿಲೀನಗೊಂಡಿದೆ. ಇ-ಬುಕ್ ಅದರಲ್ಲೂ ಯುವ ಸಮೂಹದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಆದ್ದರಿಂದ ಈ ಪ್ರಯತ್ನವು ಹೆಚ್ಚು ಯುವ ಸಮೂಹವನ್ನು ಗೀತೆಯ ಉದಾತ್ತ ಆಲೋಚನೆಗಳೊಂದಿಗೆ ಬೆಸುಯುತ್ತವೆ.

ಸ್ನೇಹಿತರೆ

ಇ-ಬುಕ್ ಸನಾತನ ಗೀತೆ ಮತ್ತು ಅದ್ಭುತ ತಮಿಳು ಸಂಸ್ಕೃತಿ ನಡುವಿನ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ಇ-ಬುಕ್ ಜಗತ್ತಿನಾದ್ಯಂತ ವ್ಯಾಪಿಸಿರುವ ಅನಿವಾಸಿ ತಮಿಳು ಸಮೂಹಕ್ಕೆ ಸುಲಭವಾಗಿ ಓದಲು ಅನುವು ಮಾಡಿಕೊಡುತ್ತದೆ. ಅನಿವಾಸಿ ತಮಿಳರು ಅನೇಕ ಕ್ಷೇತ್ರಗಳಲ್ಲಿ ಹೊಸ ಎತ್ತರಕ್ಕೆ ತಲುಪಿದ್ದಾರೆ. ಆದರೂ ಅವರು ತಮ್ಮ ಸಂಸ್ಕೃತಿಯ ಬೇರುಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರು ಹೋದ ಕಡೆಗಳಲ್ಲಿ ತಮಿಳು ಸಂಸ್ಕೃತಿಯ ಶ್ರೇಷ್ಠತೆಯನ್ನು ಕೊಂಡೊಯ್ದಿದ್ದಾರೆ.

ಸ್ನೇಹಿತರೆ

ಸ್ವಾಮಿ ಚಿದ್ಭಾವನಂದ ಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಯಸುತ್ತೇನೆ. ಸ್ವಾಮಿ ಚಿದ್ಭಾವನಂದ ಜಿ ಅವರ ಮನಸ್ಸು, ದೇಹ, ಹೃದಯ ಮತ್ತು ಆತ್ಮ ಭಾರತದ ಪುನರುತ್ಥಾನಕ್ಕೆ ಮೀಸಲಾಗಿದೆ. ಅವರು ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸಿದ್ದರು. ಅವರಿಗೆ ನಿರ್ದಿಷ್ಟ ಯೋಜನೆಗಳು ಸಹ ಇದ್ದವು. ಆದರೆ ಅವರು ರಸ್ತೆ ಬದಿಯಲ್ಲಿ ಒಮ್ಮೆ ಪುಸ್ತಕ ಮಾರಾಟ ಮಾಡುತ್ತಿದ್ದವರ ಬಳಿ “ ಸ್ವಾಮಿ ವಿವೇಕಾನಂದರ ಮದ್ರಾಸ್ ಉಪನ್ಯಾಸ” ಕೃತಿಯನ್ನು ನೋಡಿದರು. ಇದು ಅವರ ಬದುಕನ್ನೇ ಬದಲಿಸಿತು. ಎಲ್ಲದಕ್ಕಿಂತಲೂ ದೇಶ ಮಿಗಿಲು ಮತ್ತು ಜನರಿಗಾಗಿ ಸೇವೆ ಸಲ್ಲಿಸುವ ಉದಾತ್ತತೆಯ ಸ್ಪೂರ್ತಿಯನ್ನು ಅವರು ಪಡೆದುಕೊಂಡರು. ಗೀತೆ ಕುರಿತು ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ.

“ಯದಾ-ಯದಾ ಆಚರತಿ ಶ್ರೇಷ್ಠ, ತತ್ ತತ್ ಹೇವ್ ಇತರೆ ಜನಃ

ಸಯತು ಪ್ರಮಾಣಂ ಕುರುತೆ ಲೋಕಾಹ ತದ್ ಅನು ವರ್ತತೆ”

ಇದರ ಅರ್ಥ, ಉತ್ತಮ ವ್ಯಕ್ತಿ ಏನೇ ಮಾಡಿದರೂ ಅದನ್ನು ಪಾಲಿಸಲು ಹಲವರಿಗೆ ಸ್ಫೂರ್ತಿ ದೊರೆಯುತ್ತದೆ. ಒಂದೆಡೆ ಸ್ವಾಮಿ ಚಿದ್ಭಾವನಂದ ಜಿ ಅವರು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದಿದ್ದರು. ಮತ್ತೊಂದೆಡೆ ಅವರು ತಮ್ಮ ಉದಾತ್ತ ಕಾರ್ಯಗಳಿಂದ ಜಗತ್ತನ್ನು ಪ್ರೇರೇಪಿಸಿದರು. ಶ್ರೀ ರಾಮಕೃಷ್ಣ ತಪೋವನಂ ಆಶ್ರಮ, ಸ್ವಾಮಿ ಚಿದ್ಭಾವನಂದ ಜಿ ಅವರ ಉದಾತ್ತ ಕೆಲಸಗಳನ್ನು ಮುಂದುವರಿಸುತ್ತಿದೆ. ಸಮುದಾಯದಲ್ಲಿ ಶ್ಲಾಘನೀಯ ಸೇವೆಗಳನ್ನು ಸಲ್ಲಿಸುತ್ತಿದೆ. ಸಮುದಾಯ ಸೇವೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಅದಕ್ಕಾಗಿ ರಾಮಕೃಷ್ಣ ತಪೋವನಂ ಆಶ್ರಮವನ್ನು ಅಭಿನಂದಿಸುತ್ತೇನೆ ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರುತ್ತೇನೆ.

ಸ್ನೇಹಿತರೆ

ಗೀತೆಯ ಸೌಂದರ್ಯ ಅದರ ಆಳ, ವೈವಿಧ್ಯ ಮತ್ತು ಹೊಂದಿಕೊಳ್ಳುವ ಗುಣದಲ್ಲಿದೆ. ಆಚಾರ್ಯ ವಿನೋಭಾ ಭಾವೆ ಅವರು ಗೀತೆಯನ್ನು ತಾಯಿ ಎಂದು ವರ್ಣಿಸಿದ್ದರು. ಯಾರಾದರು ಮುಗ್ಗರಿಸಿದರೆ ಅಂತಹವರನ್ನು ಆಕೆ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ ಎಂದಿದ್ದರು. ಪರಮೋಚ್ಚ ನಾಯಕರಾದ ಮಹಾತ್ಮಾ ಗಾಂಧಿ, ಲೋಕಮಾನ್ಯ ತಿಲಕ್, ಮಹಾಕವಿ ಸುಬ್ರಮಣ್ಯ ಭಾರತಿ ಅವರು ಗೀತೆಯಿಂದ ಸ್ಫೂರ್ತಿ ಪಡೆದಿದ್ದರು. ಗೀತೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ, ಪ್ರಶ್ನಿಸಲು ಪ್ರೇರೇಪಿಸುತ್ತದೆ, ಸಂವಾದಕ್ಕೆ ಪ್ರೋತ್ಸಾಹಿಸುತ್ತದೆ ಮತ್ತು ನಮ್ಮ ಮನಸ್ಸನ್ನು ಮುಕ್ತವಾಗಿರಿಸುತ್ತದೆ. ಗೀತೆಯಿಂದ ಪ್ರೇರಿತರಾದ ಯಾರೇ ಆದರೂ ಸ್ವಭಾವತಃ ಸಹಾನುಭೂತಿ ಉಳ‍್ಳವರಾಗಿರುತ್ತಾರೆ ಮತ್ತು ಮನೋಧರ್ಮದಲ್ಲಿ ಅವರು ಪ್ರಜಾಪ್ರಭುತ್ವವನ್ನು ಮೈಗೂಸಿಡಿಕೊಂಡಿರುತ್ತಾರೆ.

ಸ್ನೇಹಿತರೆ

ಶಾಂತಿಯುತ ಮತ್ತು ರಮಣೀಯ ಪರಿಸರದಲ್ಲಿ ಗೀತೆಯಂತಹದ್ದು ಹೊರಹೊಮ್ಮುತ್ತದೆ ಎಂದು ಕೆಲವರು ಯೋಚಿಸುತ್ತಾರೆ. ಆದರೆ ನಿಮಗೆಲ್ಲಾ ಗೊತ್ತಿರುವಂತೆ ಘರ್ಷಣೆಯ ನಡುವೆಯೇ ಭಗವದ್ಗೀತೆ ಹೊರ ಹೊಮ್ಮಿದ್ದು, ಇದು ಜಗತ್ತಿಗೆ ಅತ್ಯುತ್ತಮ ಜೀವನಪಾಠವಾಗಿದೆ.

ನಾವು ಆಪೇಕ್ಷಿಸಬಹುದಾದ ಎಲ್ಲದವರ ಬಗ್ಗೆಯೂ ಗೀತೆ ಜ್ಞಾನದ ದೊಡ್ಡ ಮೂಲವಾಗಿದೆ. ಶ್ರೀ ಕೃಷ್ಣನ ವಿಷಾದ ಅಥವಾ ದುಃಖದ ಮಾತುಗಳಿಂದ ಈ ಜ್ಞಾನ ಸುರಿಯಲು ಕಾರಣವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ಭಗವದ್ಗೀತೆಯೂ ವಿಷಾದದಿಂದ ವಿಜಯದ ಕಡೆಗೆ ಪ್ರಯಾಣವನ್ನು ಪ್ರತಿಬಿಂಬಿಸುವ ಆಲೋಚನೆಗಳ ನಿಧಿಯಾಗಿದೆ. ಭಗವದ್ಗೀತೆ ಹುಟ್ಟಿದ ಸಂದರ್ಭದಲ್ಲಿ ಸಂಘರ್ಷವಿತ್ತು. ಅಲ್ಲಿ ವಿಷಾದವೂ ಇತ್ತು. ಇದೇ ರೀತಿಯ ಸಂಘರ್ಷಗಳು ಮತ್ತು ಸವಾಲುಗಳನ್ನು ಮಾನವೀಯತೆ ಇದೀಗ ಎದುರಿಸುತ್ತಿದೆ ಎಂದು ಹಲವರು ಭಾವಿಸಿದ್ದಾರೆ. ಈ ಜೀವಮಾನದಲ್ಲಿ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಜಗತ್ತು ಕಠಿಣ ಹೋರಾಟ ಮಾಡುತ್ತಿದೆ. ದೂರ ದೃಷ್ಟಿಯ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಹೊರಬರಲು ಇನ್ನೂ ಸಾಕಷ್ಟು ಸಾಗಬೇಕಾಗಿದೆ. ಇಂತಹ ಸಮಯದಲ್ಲಿ ಶ್ರೀಮದ್ ಭಗವದ್ಗೀತೆ ಮಾರ್ಗ ತೋರಲು ಅತ್ಯಂತ ಪ್ರಸ್ತುತವಾಗಿದೆ. ಮಾನವೀಯತೆ ಎದುರಿಸುತ್ತಿರುವ ಸವಾಲುಗಳ ವಿರುದ್ಧ ವಿಜಯ ಸಾಧಿಸಲು ಶ್ರೀಮದ್ ಭಗವದ್ಗೀತೆ ಮತ್ತೊಮ್ಮೆ ಶಕ್ತಿ ನೀಡುತ್ತದೆ. ಭಾರತದಲ್ಲಿ ನಾವು ಇಂತಹ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಕೋವಿಡ್-19 ವಿರುದ್ಧ ನಮ್ಮ ಜನ ಕೇಂದ್ರೀತ ಹೋರಾಟ, ಜನತೆಯ ಮಹೋನ್ನತ ಸ್ಫೂರ್ತಿ, ನಮ್ಮ ನಾಗರಿಕರ ದೈರ್ಯ ಮತ್ತು ಇದರ ಹಿಂದೆ ಗೀತೆಯ ಎದ್ದುಕಾಣುವ ಮುಖ್ಯಾಂಶಗಳಿವೆ ಎಂದು ಒಬ್ಬರು ಹೇಳಬಹುದು. ಇಲ್ಲಿ ನಿಸ್ವಾರ್ಥತೆಯ ಸ್ಫೂರ್ತಿಯೂ ಇದೆ. ಇದನ್ನು ಈಗ ನಾವು ನೋಡಿದ್ದೇವೆ ಮತ್ತು ನಮ್ಮ ಜನತೆ ಪರಸ್ಪರ ಸಹಾಯ ಮಾಡಲು ಮತ್ತೆ ಮುಂದಾಗುತ್ತಾರೆ.

ಸ್ನೇಹಿತರೆ

ಕಳೆದ ವರ್ಷ ಯೂರೋಪಿನ ಹೃದ್ರೋಗಶಾಸ್ತ್ರ ಕುರಿತಾದ ಪತ್ರಿಕೆಯೊಂದರಲ್ಲಿನ ಲೇಖನ ಆಸಕ್ತಿದಾಯಕವಾಗಿತ್ತು. ಇತರೆ ವಿಷಯಗಳ ಜತೆಗೆ ಲೇಖನದಲ್ಲಿ ಕೋವಿಡ್ ಕಾಲದಲ್ಲಿ ಗೀತೆಯ ಮಹತ್ವದ ಬಗ್ಗೆ ವ್ಯಾಖ್ಯಾನವಿತ್ತು. ಜೀವನವನ್ನು ಪೂರೈಸಲು ಭಗವದ್ಗೀತೆ ನಿಖರವಾದ ಮಾರ್ಗದರ್ಶನವಾಗಿದೆ ಎಂದು ಆ ಪತ್ರಿಕೆಯಲ್ಲಿ ವಿವರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳನ್ನು ಅರ್ಜುನನಿಗೆ ಮತ್ತು ವೈರಾಣುವನ್ನು ಯುದ್ಧ ಭೂಮಿಗೆ ಹೋಲಿಕೆ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು ತಮ್ಮ ಕರ್ತವ್ಯ ನಿರ್ವಹಣೆ ಮಾಡಲು, ಭಯ ಮತ್ತು ಸವಾಲುಗಳಿಂದ ಹೊರ ಬರಲು ಇದು ಸ್ಫೂರ್ತಿಯಾಗಿದೆ.

ಸ್ನೇಹಿತರೇ

ಭಗವದ್ಗೀತೆಯ ಪ್ರಮುಖ ಸಂದೇಶವೆಂದರೆ ಕ್ರಿಯೆ. ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ.

“ ನಿಯತ್ ಕುರು ಕರ್ಮ ತ್ವಂ

ಕರ್ಮ್ ಜ್ಯಾಯೋ ಹೈಕರ್ಮಣಃ

ಶರೀರ ಯಾತ್ರಾತಿ ಚ ತೆ

ನ ಪ್ರಸಿದ್ಧಿ ದ ಕರ್ಮಣಃ “

ನಿಷ್ಕ್ರಿಯತೆಗಿಂತ ಉತ್ತಮವಾದದ್ದು ಕ್ರಿಯೆ, ಇದರಲ್ಲಿ ತೊಡಗಿಕೊಳ್ಳುವಂತೆ ಅವರು ನಮ್ಮನ್ನು ಕೇಳುತ್ತಿದ್ದಾರೆ. ವಾಸ್ತವವಾಗಿ ಕ್ರಿಯೆ ಇಲ್ಲದಿದ್ದರೆ ನಮ್ಮ ದೇಹದ ಬಗ್ಗೆಯೂ ನಾವು ಕಾಳಜಿ ವಹಿಸಲು ಸಾಧ್ಯವಿಲ್ಲ. ಇಂದು 1.3 ಶತಕೋಟಿ ಭಾರತೀಯರು ತಮ್ಮ ಕ್ರಿಯೆಯನ್ನು ನಿರ್ಧರಿಸಿದ್ದಾರೆ. ಇವರು ಭಾರತವನ್ನು ಆತ್ಮನಿರ್ಭರ್ ಅಥವಾ ಸ್ವಾವಲಂಬಿ ಭಾರತ ಮಾಡಲು ಹೊರಟಿದ್ದಾರೆ. ದೀರ್ಘಾವಧಿಯಲ್ಲಿ ಸ್ವಾವಲಂಬಿ ಭಾರತ ಮಾತ್ರ ಎಲ್ಲರ ಹಿತಾಸಕ್ತಿಯಾಗಲಿದೆ. ಆತ್ಮ ನಿರ್ಭರ್ ಭಾರತ್ ನ ಮೂಲ ಉದ್ದೇಶ ಸಂಪತ್ತು ಮತ್ತು ಮೌಲ್ಯವನ್ನು ಸೃಷ್ಟಿಸುವುದಾಗಿದೆ. ಇದು ನಮಗಾಗಿ ಅಷ್ಟೇ ಅಲ್ಲದೇ ದೊಡ್ಡದಾದ ಮಾನವೀಯತೆಗೂ ಸಹಕಾರಿಯಾಗಿದೆ. ಆತ್ಮನಿರ್ಭರ್ ಭಾರತ್ ನಿಂದ ಜಗತ್ತಿಗೆ ಒಳ‍್ಳೆಯದಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿಗೆ ಔಷಧಿಗಳ ಅಗತ್ಯವಿದ್ದಾಗ ಭಾರತ ಅವುಗಳನ್ನು ಒದಗಿಸಲು ಎಲ್ಲವನ್ನೂ ಮಾಡಿದೆ. ಲಸಿಕೆ ಹೊರಬರಲು ನಮ್ಮ ವಿಜ್ಞಾನಿಗಳು ತ್ವರಿತವಾಗಿ ಕೆಲಸ ಮಾಡಿದ್ದಾರೆ. ಈಗ ಭಾರತದಲ್ಲಿ ತಯಾರಾದ ಲಸಿಕೆಗಳು ಪ್ರಪಂಚದಾದ್ಯಂತ ವಿನಮ್ರತೆಯಿಂದ ವಿತರಣೆಯಾಗುತ್ತಿವೆ. ನಾವು ರೋಗ ಗುಣಪಡಿಸಲು ಮತ್ತು ಮಾನವೀಯತೆಗೆ ಸಹಾಯ ಮಾಡಲು ಬಯಸುತ್ತೇವೆ. ಗೀತೆ ನಮಗೆ ಕಲಿಸಿರುವುದು ಸಹ ಇದನ್ನೇ.

ಸ್ನೇಹಿತರೆ

ನಮ್ಮ ಯುವ ಸ್ನೇಹಿತರು ಭಗವದ್ಗೀತೆಯತ್ತ ಗಮನಹರಿಸಬೇಕೆಂದು ನಾನು ವಿಶೇಷವಾಗಿ ಒತ್ತಾಯಿಸುತ್ತೇನೆ. ಗೀತೆಯಲ್ಲಿನ ಬೋಧನೆಗಳು ಬದುಕಿಗೆ ಸೂಕ್ತವಾಗುವಂತೆ ಅತ್ಯಂತ ಪ್ರಾಯೋಗಿಕವೂ ಆಗಿವೆ. ವೇಗದ ಜೀವನದಲ್ಲಿ ಗೀತೆ ಓಯಸಿಸ್ ನಂತೆ ಪ್ರಶಾಂತ ಮತ್ತು ಶಾಂತತೆಯನ್ನು ಒದಗಿಸುತ್ತದೆ. ಜೀವನದ ಹಲವು ಆಯಾಮಗಳಲ್ಲಿ ಇದು ವಾಸ್ತವಿಕ ಮಾರ್ಗದರ್ಶನವಾಗಿದೆ. ಈ ಪದ್ಯದ ಖ್ಯಾತ ಸಾಲನ್ನು ಎಂದಿಗೂ ಮರೆಯಲಾಗದು - “ ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಶು ಕದಾಚನ ”

ಇದು ನಮ್ಮ ಮನಸ್ಸನ್ನು ವೈಫಲ್ಯದ ಭಯದಿಂದ ಮುಕ್ತಗೊಳಿಸುತ್ತದೆ ಮತ್ತು ಕ್ರಿಯೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ. ಜ್ಞಾನ ಯೋಗ ಅಧ್ಯಾಯ ಜ್ಞಾನದ ಮಹತ್ವವನ್ನು ಸಾರುತ್ತದೆ. ಭಕ್ತಿ ಯೋಗವು ಭಕ್ತಿಯ ಮಹತ್ವವನ್ನು ನಮಗೆ ಕಲಿಸಲಿದ್ದು, ಇದನ್ನು ಒಂದು ಅಧ್ಯಾಯದಲ್ಲಿ ವಿವರಿಸಲಾಗಿದೆ. ಮನಸ್ಸಿನ ಸಕಾರಾತ್ಮಕ ಚೌಕಟ್ಟನ್ನು ರೂಪಿಸಲು ಪ್ರತಿಯೊಂದು ಅಧ್ಯಾಯದಲ್ಲೂ ಏನನ್ನಾದರೂ ಕೊಡುಗೆ ನೀಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಗೀತೆ ನಮ್ಮಲ್ಲಿ ಪ್ರತಿಯೊಬ್ಬರೂ ಸರ್ವೋಚ್ಚ, ಸರ್ವಶಕ್ತ ದೈವದ ಕಿಡಿಯಾಗಿದ್ದಾರೆ ಎಂಬ ಭಾವನೆಯನ್ನು ಪುನಃ ಜಾರಿಗೊಳಿಸುತ್ತದೆ.

ಇದು ಸ್ವಾಮಿ ವಿವೇಕಾನಂದರ ಪ್ರಮುಖ ಅಂಶಗಳಾಗಿವೆ. ನಮ್ಮ ಯುವ ಸ್ನೇಹಿತರು ಅನೇಕ ಕಠಿಣ ನಿರ್ಧಾರಗಳನ್ನು ನಿಭಾಯಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಈ ಸಂದಿಗ್ಧತೆಯನ್ನು ಎದುರಿಸುತ್ತಿರುವ ನಾನು ಅರ್ಜುನನ ಸ್ಥಾನದಲ್ಲಿದ್ದೇನೆ ಎಂದು ನಿಮ್ಮನ್ನು ನೀವೇ ಕೇಳಿಕೊಳ‍್ಳಿ ಆಗ ಕೃಷ್ಣ ತಮಗೆ ಇಂತಹದ್ದನ್ನು ಮಾಡು ಎಂದು ಕೇಳಿದರೆ ಅದು ಅದ್ಭುತವಾಗಿ ಕಾರ್ಯಗತವಾಗುತ್ತದೆ. ಏಕೆಂದರೆ ನೀವು ಇದ್ದಕ್ಕಿದ್ದಂತೆ ನಿಮ್ಮ ಸ್ವಂತ ಇಷ್ಟಗಳು, ಇಷ್ಟವಿಲ್ಲದ್ದನ್ನು ಬೇರ್ಪಡಿಸಲು ಆರಂಭಿಸುತ್ತೀರಿ. ಗೀತೆಯ ಶಾಶ್ವತ ತತ್ವಗಳಿಂದ ನೀವು ಅದನ್ನು ನೋಡಲು ಪ್ರಾರಂಭಿಸುತ್ತೀರಿ.

ಮತ್ತು ಇದು ನಿಮ್ಮನ್ನು ಯಾವಾಗಲೂ ಸೂಕ್ತ ಸ್ಥಳಕ್ಕೆ ಕರೆದೊಯುತ್ತದೆ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡುತ್ತದೆ. ಸ್ವಾಮಿ ಚಿದ್ಭಾವನಂದ ಜಿ ಅವರ ವ್ಯಾಖ್ಯಾನವಿರುವ ಇ-ಬುಕ್ ಹೊರತಂದಿದ್ದಕ್ಕೆ ಮತ್ತೊಮ್ಮೆ ನಿಮಗೆ ಅಭಿನಂದನೆಗಳು.

ಧನ್ಯವಾದಗಳು

ವಣಕ್ಕಂ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
E-Samudra: India’s digital push to reshape maritime governance

Media Coverage

E-Samudra: India’s digital push to reshape maritime governance
NM on the go

Nm on the go

Always be the first to hear from the PM. Get the App Now!
...
PM to release the Autobiography of Former President Shri Ram Nath Kovind on 12 August
August 11, 2026
Title of the Autobiography: “Triumph of the Indian Republic: My Life, My Struggles”

Prime Minister Shri Narendra Modi will release the autobiography of former President of India, Shri Ram Nath Kovind, titled “Triumph of the Indian Republic: My Life, My Struggles”, on 12 August, 2026, at 9:30 AM at Vigyan Bhavan, New Delhi. Prime Minister will also address the gathering on the occasion.

The release of the autobiography by the Prime Minister will mark a significant occasion celebrating the life and contributions of one of India’s most distinguished public figures. The autobiography offers a deeply personal account of Shri Ram Nath Kovind’s remarkable life journey, tracing his experiences, struggles and achievements from his early years to his distinguished public life and eventual service as the 14th President of India. The book provides insights into the values, experiences and circumstances that shaped his journey and public service.