ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆದಂಪುರದ ವಾಯುಪಡೆ ನಿಲ್ದಾಣದಲ್ಲಿಂದು ವೀರ ವಾಯುಪಡೆ ಯೋಧರು ಮತ್ತು ಸೈನಿಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಅವರ ಜತೆ ಮಾತನಾಡಿದ ಅವರು, 'ಭಾರತ್ ಮಾತಾ ಕಿ ಜೈ' ಘೋಷಣೆಯ ಶಕ್ತಿಯನ್ನು ಜಗತ್ತು ಇದೀಗಷ್ಟೇ ಕಂಡಿದೆ. ಇದು ಕೇವಲ ಮಂತ್ರವಲ್ಲ, ಭಾರತ ಮಾತೆಯ ಘನತೆ ಎತ್ತಿಹಿಡಿಯಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಪ್ರತಿಯೊಬ್ಬ ಸೈನಿಕನು ತೆಗೆದುಕೊಳ್ಳುವ ಗಂಭೀರ ಪ್ರಮಾಣವಚನ ಇದಾಗಿದೆ. ಈ ಘೋಷಣೆಯು ರಾಷ್ಟ್ರಕ್ಕಾಗಿ ಬದುಕಲು ಮತ್ತು ಅರ್ಥಪೂರ್ಣ ಕೊಡುಗೆ ನೀಡಲು ಬಯಸುವ ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. 'ಭಾರತ್ ಮಾತಾ ಕಿ ಜೈ' ಯುದ್ಧಭೂಮಿಯಲ್ಲಿ ಮತ್ತು ನಿರ್ಣಾಯಕ ಕಾರ್ಯಾಚರಣೆಗಳಲ್ಲಿ ಪ್ರತಿಧ್ವನಿಸುತ್ತದೆ. ಭಾರತೀಯ ಸೈನಿಕರು 'ಭಾರತ್ ಮಾತಾ ಕಿ ಜೈ' ಎಂದು ಜಪಿಸಿದಾಗ, ಅದು ಶತ್ರುಗಳ ಬೆನ್ನುಮೂಳೆಯಲ್ಲಿ ನಡುಕ ಉಂಟುಮಾಡುತ್ತದೆ. ಅವರು ಭಾರತದ ಸೇನಾ ಶಕ್ತಿಯನ್ನು ಶ್ಲಾಘಿಸಿದ ಅವರು, ಭಾರತೀಯ ಡ್ರೋನ್‌ಗಳು ಶತ್ರುಗಳ ಕೋಟೆಗಳನ್ನು ಕೆಡವಿದಾಗ ಮತ್ತು ಕ್ಷಿಪಣಿಗಳು ನಿಖರವಾಗಿ ದಾಳಿ ಮಾಡಿದಾಗ, ಶತ್ರುವು 'ಭಾರತ್ ಮಾತಾ ಕಿ ಜೈ' ಎಂಬ ಒಂದೇ ಒಂದು ಪದ ಕೇಳುತ್ತಾನೆ. ಅತ್ಯಂತ ಕತ್ತಲೆಯ ರಾತ್ರಿಗಳಲ್ಲೂ ಭಾರತವು ಆಕಾಶವನ್ನು ಬೆಳಗಿಸುವ ಸಾಮರ್ಥ್ಯ ಹೊಂದಿದೆ, ಶತ್ರುಗಳು ರಾಷ್ಟ್ರದ ಅದಮ್ಯ ಚೈತನ್ಯವನ್ನು ವೀಕ್ಷಿಸುವಂತೆ ಮಾಡಿದೆ. ಭಾರತದ ಪಡೆಗಳು ಪರಮಾಣು ಬೆದರಿಕೆಯನ್ನು ಕಳಚಿದಾಗ, 'ಭಾರತ್ ಮಾತಾ ಕಿ ಜೈ' ಎಂಬ ಸಂದೇಶವು ಆಕಾಶ ಮತ್ತು ಆಳದಲ್ಲಿ ಪ್ರತಿಧ್ವನಿಸಿದೆ ಎಂದು ಅವರು ಘೋಷಿಸಿದರು.
ಭಾರತದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ದೃಢಸಂಕಲ್ಪವನ್ನು ಶ್ಲಾಘಿಸಿದ ಶ್ರೀ ಮೋದಿ, ಲಕ್ಷಾಂತರ ಭಾರತೀಯರ ಹೃದಯಗಳಲ್ಲಿ ಅವರು ಹೆಮ್ಮೆಯನ್ನು ತುಂಬಿದ್ದಾರೆ. ಪ್ರತಿಯೊಬ್ಬ ಭಾರತೀಯರು ಇಂದು ಅವರ ಅಪ್ರತಿಮ ಶೌರ್ಯ ಮತ್ತು ಐತಿಹಾಸಿಕ ಸಾಧನೆಗಳಿಂದಾಗಿ ಉನ್ನತ ಸ್ಥಾನದಲ್ಲಿ ನಿಂತಿದ್ದಾರೆ. ಧೈರ್ಯಶಾಲಿ ವೀರರನ್ನು ಭೇಟಿ ಮಾಡುವುದು ನಿಜಕ್ಕೂ ಒಂದು ದೊಡ್ಡ ಅದೃಷ್ಟ. ದಶಕಗಳ ನಂತರ ರಾಷ್ಟ್ರದ ಶೌರ್ಯದ ಬಗ್ಗೆ ಚರ್ಚಿಸಿದಾಗ, ಈ ಕಾರ್ಯಾಚರಣೆ ಮುನ್ನಡೆಸುವ ನಮ್ಮ ಸೈನಿಕರು ಅತ್ಯಂತ ಪ್ರಸಿದ್ಧ ವ್ಯಕ್ತಿಗಳಾಗುತ್ತಾರೆ. ಅವರು ವರ್ತಮಾನಕ್ಕೆ ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಗೂ ಸ್ಫೂರ್ತಿಯಾಗಿದ್ದಾರೆ. ವೀರ ಯೋಧರ ಭೂಮಿಯಿಂದ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಾಯುಪಡೆ, ನೌಕಾಪಡೆ, ಸೇನೆ ಮತ್ತು ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಅಪ್ರತಿಮೆ ಸಿಬ್ಬಂದಿಗೆ ನಮನ ಸಲ್ಲಿಸಿದರು. ಆಪರೇಷನ್ ಸಿಂದೂರ್‌ನ ಪರಿಣಾಮವು ರಾಷ್ಟ್ರದಾದ್ಯಂತ ಪ್ರತಿಧ್ವನಿಸುತ್ತಿದೆ. ಯೋಧರ ವೀರೋಚಿತ ಪ್ರಯತ್ನಗಳು ಶ್ಲಾಘನೀಯ. ಕಾರ್ಯಾಚರಣೆ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯನು ಸೈನಿಕರೊಂದಿಗೆ ಸದೃಢವಾಗಿ ನಿಂತು, ಪ್ರಾರ್ಥನೆ ಮತ್ತು ಅಚಲ ಬೆಂಬಲ ನೀಡಿದ್ದಾರೆ. ಅವರ ತ್ಯಾಗಗಳನ್ನು ಗುರುತಿಸಿ, ಇಡೀ ರಾಷ್ಟ್ರದ ಸೈನಿಕರು ಮತ್ತು ಅವರ ಕುಟುಂಬಗಳಿಗೆ ತುಂಬು ಕೃತಜ್ಞತೆಗಳನ್ನು ಸಲ್ಲಿಸಿದರು.
"ಆಪರೇಷನ್ ಸಿಂದೂರ್ ಸಾಮಾನ್ಯ ಸೇನಾ ಕಾರ್ಯಾಚರಣೆಯಲ್ಲ, ಬದಲಾಗಿ ಅದು ಭಾರತದ ನೀತಿ, ಉದ್ದೇಶ ಮತ್ತು ನಿರ್ಣಾಯಕ ಸಾಮರ್ಥ್ಯದ ತ್ರಿಮೂರ್ತಿಯಾಗಿದೆ". ಭಾರತವು ಬುದ್ಧ ಮತ್ತು ಗುರು ಗೋವಿಂದ ಸಿಂಗ್ ಜಿ ಇಬ್ಬರ ನಾಡಾಗಿದೆ. "1,25,000 ಜನರ ವಿರುದ್ಧ ಹೋರಾಡುವಂತೆ ನಾನು ಒಬ್ಬ ಯೋಧನನ್ನು ತಯಾರು ಮಾಡುತ್ತೇನೆ... ಗುಬ್ಬಚ್ಚಿಗಳನ್ನು ಗಿಡುಗಗಳನ್ನು ಸೋಲಿಸುವಂತೆ ಶತ್ರುಗಳನ್ನು ಸೋಲಿಸಲು ಯೋಧನನ್ನು ತಯಾರು ಮಾಡುತ್ತೇನೆ... ಆಗ ಮಾತ್ರ ನನ್ನನ್ನು ಗುರು ಗೋವಿಂದ ಸಿಂಗ್ ಎಂದು ಕರೆಯಿರಿ" ಎಂದು ಘೋಷಿಸಿದ್ದರು. ಧರ್ಮ ಸ್ಥಾಪನೆಗಾಗಿ ಅನ್ಯಾಯದ ವಿರುದ್ಧ ಶಸ್ತ್ರಾಸ್ತ್ರ ಎತ್ತುವುದು ಯಾವಾಗಲೂ ಭಾರತದ ಸಂಪ್ರದಾಯವಾಗಿದೆ. ಭಯೋತ್ಪಾದಕರು ಭಾರತದ ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡಲು ಮತ್ತು ಹಾನಿ ಮಾಡಲು ಧೈರ್ಯ ಮಾಡಿದಾಗ, ಭಾರತೀಯ ಸೇನಾಪಡೆಗಳು ಅವರನ್ನು ತಮ್ಮದೇ ಆದ ಅಡಗುತಾಣಗಳಲ್ಲಿ ಪುಡಿಪುಡಿ ಮಾಡಿದವು. ಈ ದಾಳಿಕೋರರು ಹೇಡಿತನದ ಮುಖವಾಡ ಹಾಕಿ ಬಂದರು, ಅವರು ಯಾರಿಗೆ ಸವಾಲು ಹಾಕುತ್ತಿದ್ದೇವೆ ಎಂಬುದನ್ನು ಮರೆತುಬಿಟ್ಟರು – ಅವರು ಭಾರತೀಯ ಪ್ರಬಲ ಸಶಸ್ತ್ರ ಪಡೆಗಳು. ಅವರು ನೇರವಾಗಿ ದಾಳಿ ಮಾಡಿ ಪ್ರಮುಖ ಭಯೋತ್ಪಾದಕ ಕೇಂದ್ರಗಳನ್ನು ನಾಶಪಡಿಸಿದರು ಎಂದು ಭಾರತದ ಸೈನಿಕರ ಧೈರ್ಯವನ್ನು ಪ್ರಧಾನಿ ಶ್ಲಾಘಿಸಿದರು. 9 ಭಯೋತ್ಪಾದಕ ಅಡಗುತಾಣಗಳು ನಾಶವಾದವು, 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಾಶ ಮಾಡಲಾಯಿತು. ಭಯೋತ್ಪಾದನೆಯ ಸೂತ್ರಧಾರಿಗಳು ಈಗ ಭಾರತವನ್ನು ಪ್ರಚೋದಿಸುವ ಒಂದು ನಿರಾಕರಿಸಲಾಗದ ಪರಿಣಾಮ - ಸಂಪೂರ್ಣ ವಿನಾಶವನ್ನು ಅರ್ಥ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮುಗ್ಧರ ರಕ್ತ ಹರಿಸುವ ಯಾವುದೇ ಪ್ರಯತ್ನವು ವಿನಾಶಕ್ಕೆ ಮಾತ್ರ ಕಾರಣವಾಗುತ್ತದೆ. ಈ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಪಾಕಿಸ್ತಾನಿ ಸೇನೆಯನ್ನು ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆ ನಿರ್ಣಾಯಕವಾಗಿ ಸೋಲಿಸಿವೆ. "ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ಕಳುಹಿಸಿವೆ – ಇನ್ನೂ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಉಳಿದಿಲ್ಲ", ಭಾರತವು ಅವರ ಸ್ವಂತ ಪ್ರದೇಶದೊಳಗೆ ಅವರ ಮೇಲೆ ದಾಳಿ ಮಾಡುತ್ತದೆ, ಅವರು ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ಬಿಡುವುದಿಲ್ಲ. ಭಾರತದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಅಂತಹ ಭಯವನ್ನು ಹುಟ್ಟುಹಾಕಿವೆ. ಪಾಕಿಸ್ತಾನವು ಅವುಗಳ ಬಗ್ಗೆ ಯೋಚಿಸುತ್ತಾ ಹಲವು ದಿನಗಳವರೆಗೆ ನಿದ್ರೆ ಕಳೆದುಕೊಳ್ಳುತ್ತದೆ. ಮಹಾರಾಣಾ ಪ್ರತಾಪ್‌ನ ಪ್ರಸಿದ್ಧ ಕುದುರೆ ಚೇತಕ್ ಬಗ್ಗೆ ಬರೆದ ಸಾಲುಗಳನ್ನು ಉಲ್ಲೇಖಿಸಿದ ಅವರು, ಈ ಮಾತುಗಳು ಈಗ ಭಾರತದ ಮುಂದುವರಿದ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸಂಪೂರ್ಣವಾಗಿ ಪ್ರತಿಧ್ವನಿಸುತ್ತವೆ ಎಂದು ಹೇಳಿದರು.
"ಆಪರೇಷನ್ ಸಿಂದೂರ್‌ನ ಯಶಸ್ಸು ದೇಶದ ದೃಢಸಂಕಲ್ಪವನ್ನು ಬಲಪಡಿಸಿದೆ, ದೇಶವನ್ನು ಒಗ್ಗೂಡಿಸಿದೆ, ಭಾರತದ ಗಡಿಗಳನ್ನು ರಕ್ಷಿಸಿದೆ ಮತ್ತು ಭಾರತದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಏರಿಸಿದೆ". ಸಶಸ್ತ್ರ ಪಡೆಗಳ ಅಸಾಧಾರಣ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಿ, ಅವರ ಕ್ರಮಗಳನ್ನು ಅಭೂತಪೂರ್ವ, ಎಂದೆಂದೂ ಊಹಿಸಲಾಗದ ಮತ್ತು ಗಮನಾರ್ಹ ಎಂದು ಬಣ್ಣಿಸಿದರು. ಭಾರತೀಯ ವಾಯುಪಡೆಯ ದಾಳಿಗಳ ಆಳವಾದ ನಿಖರತೆ ಪ್ರಸ್ತಾಪಿಸಿ, ಪಾಕಿಸ್ತಾನದೊಳಗಿನ ಭಯೋತ್ಪಾದಕ ಅಡಗುತಾಣಗಳನ್ನು ಯಶಸ್ವಿಯಾಗಿ ಗುರಿಯಾಗಿಸಿ, ಧ್ವಂಸ ಮಾಡಿದ್ದಾರೆ. ಕೇವಲ 20-25 ನಿಮಿಷಗಳಲ್ಲಿ, ಭಾರತೀಯ ಪಡೆಗಳು ಸಂಪೂರ್ಣ ನಿಖರತೆಯೊಂದಿಗೆ ಗಡಿಯಾಚೆಗಿನ ದಾಳಿಗಳನ್ನು ನಡೆಸಿದವು, ನಿಖರವಾದ ಗುರಿಗಳೊಂದಿಗೆ ಉಗ್ರರ ಅಡಗುತಾಣಗಳನ್ನು ಛಿದ್ರಗೊಳಿಸಿದವು. ಅಂತಹ ಬೃಹತ್ ಕಾರ್ಯಾಚರಣೆಗಳನ್ನು ಆಧುನಿಕ, ತಾಂತ್ರಿಕವಾಗಿ ಸುಸಜ್ಜಿತ ಮತ್ತು ಹೆಚ್ಚು ವೃತ್ತಿಪರ ಪಡೆಗಳು ಮಾತ್ರ ನಡೆಸುತ್ತವೆ. ಭಾರತದ ಸೇನೆಯ ವೇಗ ಮತ್ತು ನಿಖರತೆಯನ್ನು ಶ್ಲಾಘಿಸಿದ ಅವರು, ಅವರ ತ್ವರಿತ ಮತ್ತು ನಿರ್ಣಾಯಕ ಕ್ರಮಗಳು ಶತ್ರುಗಳನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿವೆ. ತಮ್ಮ ಭದ್ರಕೋಟೆಗಳನ್ನು ಯಾವಾಗ ನಾಶಮಾಡಲಾಯಿತು ಎಂಬುದು ಶತ್ರುಗಳಿಗೇ ತಿಳಿದಿರಲಿಲ್ಲ ಎಂದರು.
ಪಾಕಿಸ್ತಾನದೊಳಗಿನ ಭಯೋತ್ಪಾದಕರ ಪ್ರಧಾನ ಕಚೇರಿಗಳ ಮೇಲೆ ದಾಳಿ ಮಾಡಿ ಪ್ರಮುಖ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವುದು ಭಾರತದ ಉದ್ದೇಶವಾಗಿದೆ. ಪಾಕಿಸ್ತಾನವು ನಾಗರಿಕ ವಿಮಾನಗಳನ್ನು ರಕ್ಷಣೆಯಾಗಿ ಬಳಸುವ ಮೂಲಕ ತನ್ನ ಚಟುವಟಿಕೆಗಳನ್ನು ರಕ್ಷಿಸಲು ಪ್ರಯತ್ನಿಸಿದರೂ, ಭಾರತೀಯ ಪಡೆಗಳು ಅತ್ಯಂತ ಎಚ್ಚರಿಕೆಯಿಂದ ಮತ್ತು ನಿಖರವಾಗಿ ಪ್ರತಿಕ್ರಿಯಿಸಿದವು. ಜಾಗರೂಕತೆ ಮತ್ತು ಜವಾಬ್ದಾರಿಯನ್ನು ಉಳಿಸಿಕೊಂಡು ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ಅವರು ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಭಾರತೀಯ ಸೈನಿಕರು ತಮ್ಮ ಉದ್ದೇಶಗಳನ್ನು ಸಂಪೂರ್ಣ ನಿಖರತೆ ಮತ್ತು ದೃಢನಿಶ್ಚಯದಿಂದ ಪೂರೈಸಿದ್ದಾರೆ. ಈ ಕಾರ್ಯಾಚರಣೆಯು ಪಾಕಿಸ್ತಾನದೊಳಗಿನ ಭಯೋತ್ಪಾದಕರ ಅಡಗುತಾಣಗಳು ಮತ್ತು ವಾಯುನೆಲೆಗಳನ್ನು ನಾಶ ಮಾಡಿದ್ದಲ್ಲದೆ, ಅವರ ದುರುದ್ದೇಶಪೂರಿತ ಉದ್ದೇಶಗಳು ಮತ್ತು ಅಜಾಗರೂಕ ಧೈರ್ಯವನ್ನು ಸಹ ಹತ್ತಿಕ್ಕಿವೆ ಎಂದು ಹೇಳಿದರು.
ಆಪರೇಷನ್ ಸಿಂದೂರ್ ನಂತರ, ಶತ್ರುಗಳು ಹತಾಶೆಯಿಂದ ಹಲವಾರು ಭಾರತೀಯ ವಾಯುನೆಲೆಗಳನ್ನು ಗುರಿಯಾಗಿಸಲು ಪದೇಪದೆ ಪ್ರಯತ್ನಿಸಿದರು. ಆದಾಗ್ಯೂ, ಪಾಕಿಸ್ತಾನದ ಪ್ರತಿಯೊಂದು ದಾಳಿಯ ಪ್ರಯತ್ನಗಳನ್ನು ನಿರ್ಣಾಯಕವಾಗಿ ವಿಫಲಗೊಳಿಸಲಾಯಿತು. ಪಾಕಿಸ್ತಾನದ ಡ್ರೋನ್‌ಗಳು, ಯುಎವಿಗಳು, ವಿಮಾನಗಳು ಮತ್ತು ಕ್ಷಿಪಣಿಗಳು ಭಾರತದ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ವಿಫಲವಾದವು. ಭಾರತದ ಸನ್ನದ್ಧತೆ ಮತ್ತು ತಾಂತ್ರಿಕ ಬಲವು ಶತ್ರು ಬೆದರಿಕೆಗಳನ್ನು ಸಂಪೂರ್ಣವಾಗಿ ತಟಸ್ಥಗೊಳಿಸುವುದನ್ನು ಖಚಿತಪಡಿಸಿದೆ. ರಾಷ್ಟ್ರದ ವಾಯುನೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತಿರುವ ನಾಯಕತ್ವಕ್ಕೆ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತೀಯ ವಾಯುಪಡೆಯ ಪ್ರತಿಯೊಬ್ಬ ಯೋಧನಿಗೂ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶ ರಕ್ಷಿಸುವಲ್ಲಿ ಅವರ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅಚಲ ಸಮರ್ಪಣೆಯನ್ನು ಅವರು ಶ್ಲಾಘಿಸಿದರು.
ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವು ಈಗ ಸ್ಪಷ್ಟವಾಗಿದೆ, ಭಾರತದ ಮೇಲೆ ಮತ್ತೊಂದು ಭಯೋತ್ಪಾದಕ ದಾಳಿ ನಡೆದರೆ, ರಾಷ್ಟ್ರವು ನಿರ್ಣಾಯಕವಾಗಿ ಮತ್ತು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಘೋಷಿಸಿದರು. ಹಿಂದಿನ ಸರ್ಜಿಕಲ್ ದಾಳಿಗಳು ಮತ್ತು ವಾಯು ದಾಳಿಗಳ ಸಮಯದಲ್ಲಿ ಭಾರತ ತೆಗೆದುಕೊಂಡ ಸದೃಢ ಕ್ರಮಗಳನ್ನು ಮೆಲುಕು ಹಾಕಿದ ಅವರು, ಆಪರೇಷನ್ ಸಿಂದೂರ್ ಈಗ ಬೆದರಿಕೆಗಳನ್ನು ನಿಭಾಯಿಸುವಲ್ಲಿ ದೇಶದ ಹೊಸ ಸಾಮಾನ್ಯ ಕಾರ್ಯಾಚರಣೆಯಾಗಿದೆ. ರಾಷ್ಟ್ರವನ್ನು ಉದ್ದೇಶಿಸಿ ನಿನ್ನೆ ರಾತ್ರಿ ಮಾಡಿದ ಭಾಷಣದಲ್ಲಿ ವ್ಯಕ್ತಪಡಿಸಿದ 3 ಪ್ರಮುಖ ತತ್ವಗಳನ್ನು ಪುನರುಚ್ಚರಿಸಿದರು. ಮೊದಲನೆಯದಾಗಿ, ಭಾರತವು ಭಯೋತ್ಪಾದಕ ದಾಳಿಗೆ ಗುರಿಯಾಗಿದ್ದರೆ, ಅದಕ್ಕೆ ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳ ಮೇಲೆ ಪ್ರತಿಕ್ರಿಯೆ ನೀಡುತ್ತದೆ. ಎರಡನೆಯದಾಗಿ, ಭಾರತವು ಯಾವುದೇ ರೀತಿಯ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ. ಮೂರನೆಯದಾಗಿ, ಭಾರತವು ಇನ್ನು ಮುಂದೆ ಭಯೋತ್ಪಾದಕ ಸೂತ್ರಧಾರ ಮತ್ತು ಅವರಿಗೆ ಆಶ್ರಯ ನೀಡುವ ಸರ್ಕಾರಗಳ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ. "ಜಗತ್ತು ಈಗ ಈ ಹೊಸ ಮತ್ತು ದೃಢನಿಶ್ಚಯದ ಭಾರತವನ್ನು ಗುರುತಿಸುತ್ತಿದೆ, ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದ ಕಡೆಗೆ ತನ್ನ ದೃಢವಾದ ಕಾರ್ಯವಿಧಾನಕ್ಕೆ ಹೊಂದಿಕೊಳ್ಳುತ್ತಿದೆ" ಎಂದು ಪ್ರಧಾನಿ ಹೇಳಿದರು.
"ಆಪರೇಷನ್ ಸಿಂದೂರ್‌ನ ಪ್ರತಿ ಕ್ಷಣವೂ ಭಾರತದ ಸಶಸ್ತ್ರ ಪಡೆಗಳ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ". ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನಡುವಿನ ಅಸಾಧಾರಣ ಸಮನ್ವಯವನ್ನು ಶ್ಲಾಘಿಸಿದರು, ಅವರ ಹೊಂದಾಣಿಕೆ ಮತ್ತು ಸಮನ್ವಯ ಗಮನಾರ್ಹವಾಗಿದೆ. ಸಮುದ್ರಗಳ ಮೇಲೆ ನೌಕಾಪಡೆಯ ಪ್ರಾಬಲ್ಯ, ಗಡಿಗಳಲ್ಲಿ ಸೇನೆಯ ಬಲ, ದಾಳಿ ಮತ್ತು ರಕ್ಷಣೆಯಲ್ಲಿ ಭಾರತೀಯ ವಾಯುಪಡೆಯ ದ್ವಿಪಾತ್ರವನ್ನು ಅವರು ಎತ್ತಿ ತೋರಿಸಿ, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮತ್ತು ಇತರ ಭದ್ರತಾ ಪಡೆಗಳ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಭಾರತದ ಸಮಗ್ರ ವಾಯುಪಡೆ ಮತ್ತು ಭೂಸೇನೆಯ ಯುದ್ಧ ವ್ಯವಸ್ಥೆಗಳ ಪರಿಣಾಮಕಾರಿತ್ವ ಶ್ಲಾಘನೀಯ. ಈ ಮಟ್ಟದ ಜಂಟಿ ಪ್ರಯತ್ನವು ಈಗ ಭಾರತದ ಸೇನಾ ಪರಾಕ್ರಮದ ನಿರ್ಣಾಯಕ ಲಕ್ಷಣವಾಗಿದೆ ಎಂದು ಘೋಷಿಸಿದರು.
ಆಪರೇಷನ್ ಸಿಂದೂರ್ ಸಮಯದಲ್ಲಿ ಮಾನವಶಕ್ತಿ ಮತ್ತು ಮುಂದುವರಿದ ಸೇನಾ ತಂತ್ರಜ್ಞಾನದ ನಡುವೆ ಗಮನಾರ್ಹ ಸಮನ್ವಯ ಸಾಧಿಸಲಾಗಿದೆ. ಬಹು ಯುದ್ಧಗಳಿಗೆ ಸಾಕ್ಷಿಯಾದ ಭಾರತದ ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಆಕಾಶ್‌ನಂತಹ ಸ್ಥಳೀಯ ವೇದಿಕೆಗಳು ಮತ್ತು ಎಸ್-400ರಂತಹ ಆಧುನಿಕ, ಶಕ್ತಿಶಾಲಿ ವ್ಯವಸ್ಥೆಗಳಿಂದ ಬಲಪಡಿಸಲಾಗಿದೆ. ಭಾರತದ ಸದೃಢವಾದ ಭದ್ರತಾ ಗುರಾಣಿ ನಿರ್ಣಾಯಕ ಶಕ್ತಿಯಾಗಿದೆ. ಪಾಕಿಸ್ತಾನದ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ, ಭಾರತೀಯ ವಾಯುನೆಲೆಗಳು ಮತ್ತು ಪ್ರಮುಖ ರಕ್ಷಣಾ ಮೂಲಸೌಕರ್ಯಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಈ ಯಶಸ್ಸಿಗೆ ಗಡಿಗಳಲ್ಲಿ ನಿಯೋಜಿಸಲಾದ ಪ್ರತಿಯೊಬ್ಬ ಸೈನಿಕನ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಸಿಬ್ಬಂದಿಯ ಸಮರ್ಪಣೆ ಮತ್ತು ಶೌರ್ಯ ಕಾರಣ ಎಂದು ಪ್ರಧಾನಿ ಹೇಳಿದರು. ಭಾರತದ ಅಚಲ ರಾಷ್ಟ್ರೀಯ ರಕ್ಷಣೆಯ ಅಡಿಪಾಯವಾಗಿ ಅವರು ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.
ಪಾಕಿಸ್ತಾನಕ್ಕೆ ಸರಿಸಾಟಿಯಾಗದ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತ ಈಗ ಹೊಂದಿದೆ. ಕಳೆದ ದಶಕದಲ್ಲಿ ಭಾರತೀಯ ವಾಯುಪಡೆ ಸೇರಿದಂತೆ ನಮ್ಮ ಸೇನಾಪಡೆಗಳು ವಿಶ್ವದ ಕೆಲವು ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಪಡೆದುಕೊಂಡಿವೆ. ಹೊಸ ತಂತ್ರಜ್ಞಾನದೊಂದಿಗೆ ಗಮನಾರ್ಹ ಸವಾಲುಗಳು ಬರುತ್ತವೆ, ಸಂಕೀರ್ಣ ಮತ್ತು ಅತ್ಯಾಧುನಿಕ ವ್ಯವಸ್ಥೆಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಅಪಾರ ಕೌಶಲ್ಯ ಮತ್ತು ನಿಖರತೆಯ ಅಗತ್ಯವಿದೆ. ಆಧುನಿಕ ಯುದ್ಧದಲ್ಲಿ ತಮ್ಮ ಶ್ರೇಷ್ಠತೆ ಪ್ರದರ್ಶಿಸುವ ಮೂಲಕ, ಯುದ್ಧತಂತ್ರದ ಪರಿಣತಿಯೊಂದಿಗೆ ತಂತ್ರಜ್ಞಾನವನ್ನು ಸರಾಗವಾಗಿ ಸಂಯೋಜಿಸಿದ್ದಕ್ಕಾಗಿ ಭಾರತದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಶ್ರೀ ಮೋದಿ, ಭಾರತೀಯ ವಾಯುಪಡೆಯು ಈಗ ಶಸ್ತ್ರಾಸ್ತ್ರಗಳಿಂದ ಮಾತ್ರವಲ್ಲದೆ, ಡೇಟಾ ಮತ್ತು ಡ್ರೋನ್‌ಗಳಿಂದಲೂ ಎದುರಾಳಿಗಳನ್ನು ಎದುರಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ ಎಂದು ಘೋಷಿಸಿದರು.
ಪಾಕಿಸ್ತಾನದ ಮನವಿಗೆ ಪ್ರತಿಕ್ರಿಯೆಯಾಗಿ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪಾಕಿಸ್ತಾನವು ಯಾವುದೇ ಭಯೋತ್ಪಾದಕ ಚಟುವಟಿಕೆಗಳು ಅಥವಾ ಮಿಲಿಟರಿ ಪ್ರಚೋದನೆಗಳಲ್ಲಿ ತೊಡಗಿಸಿಕೊಂಡರೆ, ಭಾರತವು ಪೂರ್ಣ ಬಲದಿಂದ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಭಾರತದ ಪ್ರತಿಕ್ರಿಯೆಯನ್ನು ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ. ಈ ನಿರ್ಣಾಯಕ ನಿಲುವು ರಾಷ್ಟ್ರದ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಜಾಗರೂಕತೆಗೆ ಸಲ್ಲುತ್ತದೆ. ಸೈನಿಕರು ತಮ್ಮ ಅಚಲ ದೃಢನಿಶ್ಚಯ, ಉತ್ಸಾಹ ಮತ್ತು ಸನ್ನದ್ಧತೆ ಕಾಪಾಡಿಕೊಳ್ಳಬೇಕು, ಭಾರತವು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು ಮತ್ತು ಸಿದ್ಧರಾಗಿರಬೇಕು. ನವ ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ ಮಾನವತೆಗೆ ಬೆದರಿಕೆಯೊಡ್ಡಿದರೆ ವಿರೋಧಿಗಳನ್ನು ಹತ್ತಿಕ್ಕಲು ಹಿಂಜರಿಯದ ಭಾರತ ಇದಾಗಿದೆ ಎಂದು ಘೋಷಿಸುವ ಮೂಲಕ ಪ್ರಧಾನ ಮಂತ್ರಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
भारत माता की जय! pic.twitter.com/T39ApxBbVc
— PMO India (@PMOIndia) May 13, 2025
Operation Sindoor is a trinity of India's policy, intent and decisive capability. pic.twitter.com/UcG2soTyza
— PMO India (@PMOIndia) May 13, 2025
When the Sindoor of our sisters and daughters was wiped away, we crushed the terrorists in their hideouts. pic.twitter.com/1fsN508Hfj
— PMO India (@PMOIndia) May 13, 2025
The masterminds of terror now know that raising an eye against India will lead to nothing but destruction. pic.twitter.com/4LG4opZ5Py
— PMO India (@PMOIndia) May 13, 2025
Not only were terrorist bases and airbases in Pakistan destroyed, but their malicious intentions and audacity were also defeated. pic.twitter.com/zLzwhIfEJG
— PMO India (@PMOIndia) May 13, 2025
India's Lakshman Rekha against terrorism is now crystal clear.
— PMO India (@PMOIndia) May 13, 2025
If there is another terror attack, India will respond and it will be a decisive response. pic.twitter.com/6Aq6yifonP
Every moment of Operation Sindoor stands as a testament to the strength of India's armed forces. pic.twitter.com/kMBH4fF9gD
— PMO India (@PMOIndia) May 13, 2025
If Pakistan shows any further terrorist activity or military aggression, we will respond decisively. This response will be on our terms, in our way. pic.twitter.com/rJmvdRktRv
— PMO India (@PMOIndia) May 13, 2025
This is the new India! This India seeks peace... But if humanity is attacked, India also knows how to crush the enemy on the battlefield. pic.twitter.com/9rC7qmui3n
— PMO India (@PMOIndia) May 13, 2025


