ಕೇವಲ ಕಾಂಕ್ರೀಟ್ ರಚನೆಯಲ್ಲ, ತನ್ನದೇ ಆದ ಗುಣಲಕ್ಷಣ ಹೊಂದಿರುವ ಮೂಲಸೌಕರ್ಯ ನಮ್ಮ ಗುರಿ: ಪ್ರಧಾನಿ
ಭಾರತದ 21 ನೇ ಶತಮಾನದ ಅಗತ್ಯಗಳನ್ನು 20 ನೇ ಶತಮಾನದ ಕಾರ್ಯವೈಖರಿಯಿಂದ ಈಡೇರಿಸಲಾಗುವುದಿಲ್ಲ: ಪ್ರಧಾನಿ
ಮನರಂಜನಾ ಚಟುವಟಿಕೆಗಳನ್ನು ಹೊಂದಿರುವ ಸೈನ್ಸ್ ಸಿಟಿಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ: ಪ್ರಧಾನಿ
ನಾವು ರೈಲ್ವೆಗಳನ್ನು ಸೇವೆಯಾಗಿ ಮಾತ್ರವಲ್ಲದೆ ಆಸ್ತಿಯಾಗಿಯೂ ಅಭಿವೃದ್ಧಿಪಡಿಸಿದ್ದೇವೆ: ಪ್ರಧಾನಿ
2 ಮತ್ತು 3 ನೇ ಶ್ರೇಣಿ ನಗರಗಳ ರೈಲು ನಿಲ್ದಾಣಗಳು ಸಹ ಸುಧಾರಿತ ಸೌಲಭ್ಯಗಳನ್ನು ಹೊಂದಿವೆ: ಪ್ರಧಾನಿ

ನಮಸ್ಕಾರ,

ಸಚಿವರ ಪರಿಷತ್ತಿನ ನನ್ನ ಸಹೋದ್ಯೋಗಿ ಮತ್ತು ಗಾಂಧಿನಗರ ಸಂಸದ ಶ್ರೀ ಅಮಿತ್ ಶಾ ಜೀ, ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜೀ, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಜೀ, ಗುಜರಾತ್ ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯ್, ಕೇಂದ್ರ ರೈಲ್ವೆ ರಾಜ್ಯ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಜೀ, ಗುಜರಾತ್ ಸರ್ಕಾರದ ಇತರ ಮಂತ್ರಿಗಳು, ಸಂಸತ್ತಿನ ನನ್ನ ಸಹೋದ್ಯೋಗಿಗಳು ಮತ್ತು ಗುಜರಾತ್ ಪ್ರದೇಶ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಸಿ.ಆರ್. ಪಾಟೀಲ್ ಜೀ, ಇತರ ಸಂಸದರು, ಶಾಸಕರು ಮತ್ತು ನನ್ನ ಆತ್ಮೀಯ ಸಹೋದರ ಸಹೋದರಿಯರು, ನಿಮ್ಮೆಲ್ಲರಿಗೂ ಶುಭಾಶಯಗಳು.

ಈ ದಿನವು ಯುವ ಭಾರತದ ಉತ್ಸಾಹ ಮತ್ತು ಸಾಮರ್ಥ್ಯ ಸೇರಿದಂತೆ 21 ನೇ ಶತಮಾನದ ಭಾರತದ ಆಕಾಂಕ್ಷೆಗಳ ದೊಡ್ಡ ಸಂಕೇತವಾಗಿದೆ,. ವಿಜ್ಞಾನ ಮತ್ತು ತಂತ್ರಜ್ಞಾನ, ಉತ್ತಮ ನಗರ ಭೂಪರಿಸರ ದೃಶ್ಯವಿರಲಿ ಅಥವಾ ಸಂಪರ್ಕದ ಆಧುನಿಕ ಮೂಲಸೌಕರ್ಯ ಇರಲಿ, ಇಂದು ಹೊಸ ಭಾರತದ ಹೊಸ ಗುರುತಿಗೆ ಮತ್ತೊಂದು ಕೊಂಡಿಯನ್ನು ಸೇರಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳನ್ನು ನಾನು ದೆಹಲಿಯಿಂದ ಉದ್ಘಾಟಿಸಿದ್ದೇನೆ, ಆದರೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನೋಡುವ ಉತ್ಸಾಹವನ್ನು ವ್ಯಕ್ತಪಡಿಸುತ್ತಿದ್ದೇನೆ. ಮುಂಬುರುವ ದಿನಗಳಲ್ಲಿ ನನಗೆ ಅವಕಾಶ ಸಿಕ್ಕ ಕೂಡಲೇ ಈ ಯೋಜನೆಗಳನ್ನು ನೋಡಲು ನಾನೇ ಬರುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ದೇಶದ ಗುರಿ ಕೇವಲ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುವುದು ಮಾತ್ರವಲ್ಲ, ಇಂದು ದೇಶದಲ್ಲಿ ತನ್ನದೇ ಆದ ಸ್ವರೂಪವನ್ನು ಹೊಂದಿರುವ ಮೂಲಸೌಕರ್ಯಗಳನ್ನು ಕೂಡಾ ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ಸಾರ್ವಜನಿಕ ಸ್ಥಳವು ತುರ್ತು ಅವಶ್ಯಕತೆಯಾಗಿದ್ದು, ಇದನ್ನು ಹಿಂದೆಂದೂ ಯೋಚಿಸಿರಲಿಲ್ಲ. ಹಿಂದಿನ ನಮ್ಮ ನಗರ ಯೋಜನೆ, ಅಧಿಕ ಐಷಾರಾಮಿಗಳಿಗೆ ಸಂಬಂಧಿಸಿದೆ. ರಿಯಲ್ ಎಸ್ಟೇಟ್ ಮತ್ತು ವಸತಿ ಕಂಪನಿಗಳ ಪ್ರಚಾರದ ಗಮನವು ನೀವು ಗಮನಿಸಿರಬೇಕು - ಅವುಗಳು ಬಹುತೇಕ ಉದ್ಯಾನವನದ ಎದುರಿನ ಮನೆ, ಕಟ್ಟಡ ಅಥವಾ ಸಮಾಜದ ನಿರ್ದಿಷ್ಟ ಸಾರ್ವಜನಿಕ ಸ್ಥಳದ ಸುತ್ತಲಿನ ಮನೆ ಹೀಗಿರುತ್ತಿದ್ದವು. ಏಕೆಂದರೆ, ನಮ್ಮ ನಗರಗಳ ಹೆಚ್ಚಿನ ಜನಸಂಖ್ಯೆಯು ಗುಣಮಟ್ಟದ ಸಾರ್ವಜನಿಕ ಸ್ಥಳ ಮತ್ತು ಸಾರ್ವಜನಿಕ ಜೀವನದಿಂದ ವಂಚಿತವಾಗಿರುವ ಕಾರಣ ಇದು ಸಹಜವಾಗಿ ಸಂಭವಿಸುತ್ತದೆ. ಈಗ ದೇಶದಲ್ಲಿ ನಗರ ಅಭಿವೃದ್ಧಿಯು ಹಳೆಯ ವಿಧಾನಗಳನ್ನು ಬಿಟ್ಟು ಆಧುನಿಕತೆಯತ್ತ ಸಾಗುತ್ತಿದೆ. 

ಸ್ನೇಹಿತರೇ,

ಅಹಮದಾಬಾದಿನ ಶಬರಮತಿಯ ಸ್ಥಿತಿಯನ್ನು ಯಾರು ಮರೆಯಬಹುದು? ಹರಿಯುವ ನದಿಯಲ್ಲದೆ, ನದಿಮುಖದ ತಟಗಳು, ಉದ್ಯಾನವನಗಳು, ತೆರೆದ ಮುಕ್ತ ವ್ಯಾಯಾಮಶಾಲೆಗಳು, ವಿಹಾರ ವಾಯುದೋಣಿಗಳು ಮುಂತಾದ ಸೇವೆಗಳು ಈಗ ಅಲ್ಲಿ ಲಭ್ಯವಿದೆ. ವಾಸ್ತವವಾಗಿ, ಇಡೀ ಪರಿಸರ ವ್ಯವಸ್ಥೆಯು ಬದಲಾಗಿದೆ. ಕಂಕರಿಯಾದಲ್ಲಿ ಇದೇ ಬದಲಾವಣೆಯನ್ನು ತರಲಾಗಿದೆ. ಹಳೆಯ ಅಹಮದಾಬಾದಿನ ಈ ಸರೋವರವು ಅಂತಹ ಸದ್ದು ಮತ್ತು ಗದ್ದಲದ ಕೇಂದ್ರವಾಗಲಿದೆ ಎಂದು ಬಹುಶಃ ಮೊದಲು ಯಾರೂ ಊಹಿಸಿರಲಿಕ್ಕಿಲ್ಲ. 

ಸ್ನೇಹಿತರೇ,

ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ, ಮನರಂಜನೆಯ ಜೊತೆಗೆ, ಅವರ ಕಲಿಕೆ ಮತ್ತು ಸೃಜನಶೀಲತೆಗೆ ಸಹ ಸ್ಥಳಾವಕಾಶ ಸಿಗಬೇಕು. ವಿಜ್ಞಾನ ನಗರ (ಸೈನ್ಸ್ ಸಿಟಿ) ಮನರಂಜನೆ ಮತ್ತು ಸೃಜನಶೀಲತೆಯನ್ನು ಸಂಯೋಜಿಸುವ ಒಂದು ಯೋಜನೆಯಾಗಿದೆ. ಇದು ಮಕ್ಕಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವ ಇಂತಹ ಮನರಂಜನಾ ಚಟುವಟಿಕೆಗಳನ್ನು ಹೊಂದಿದೆ. ಇದು ಕ್ರೀಡೆ, ಮೋಜಿನ ಆಟಗಳನ್ನು ಹೊಂದಿದೆ ಮತ್ತು ಅದೇ ಸಮಯದಲ್ಲಿ ಮಕ್ಕಳಿಗೆ ಹೊಸದನ್ನು ಕಲಿಸುವ ವೇದಿಕೆಯಾಗಿದೆ. ಮಕ್ಕಳು ಹೆಚ್ಚಾಗಿ ಪೋಷಕರಿಂದ ರೋಬೋಟ್ ಮತ್ತು ದೊಡ್ಡ ದೊಡ್ಡ ಪ್ರಾಣಿ  ಹಾಗೂ ಬೃಹತ್ ಆಟಿಕೆ ಮುಂತಾದವುಗಳನ್ನು ಬೇಡಿಕೊಳ್ಳುವುದನ್ನು ನಾವು ನೋಡಿದ್ದೇವೆ. ಕೆಲವು ಮಕ್ಕಳು ಮನೆಯಲ್ಲಿ ಡೈನೋಸಾರ್ ಗಳಿಗಾಗಿ ವಿನಂತಿಸಿದರೆ, ಇನ್ನೂ ಕೆಲವರು ಸಿಂಹವನ್ನು ಇಟ್ಟುಕೊಳ್ಳುವಂತೆ ಒತ್ತಾಯಿಸುತ್ತಾರೆ. ಇದನ್ನೆಲ್ಲಾ ಪೋಷಕರು ಎಲ್ಲಿಂದ ಪಡೆಯುತ್ತಾರೆ? ವಿಜ್ಞಾನ ನಗರದಲ್ಲಿ ಮಕ್ಕಳು ಈ ಆಯ್ಕೆಯನ್ನು ಪಡೆಯುತ್ತಾರೆ. ಹೊಸ ಪ್ರಕೃತಿ ಉದ್ಯಾನವನವು ವಿಶೇಷವಾಗಿ ನನ್ನ ಚಿಕ್ಕ ಸ್ನೇಹಿತರಿಗೆ ತುಂಬಾ ಇಷ್ಟವಾಗಲಿದೆ. ವಿಜ್ಞಾನ ನಗರದಲ್ಲಿ ನಿರ್ಮಿಸಲಾದ ಅಕ್ವಾಟಿಕ್ಸ್ ಗ್ಯಾಲರಿ ಬಹಳ ಮನೋರಂಜನೆಯಾಗಲಿದೆ. ಇದು ದೇಶದಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲೂ ಅಗ್ರ ಅಕ್ವೇರಿಯಂಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಸಮುದ್ರ ಜೀವವೈವಿಧ್ಯವನ್ನು ಒಂದೇ ಸ್ಥಳದಲ್ಲಿ ನೋಡುವುದು ಸ್ವತಃ ಅದ್ಭುತ ಅನುಭವವಾಗಿರುತ್ತದೆ. 

ಅದೇ ಸಮಯದಲ್ಲಿ, ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್ ಗಳೊಂದಿಗೆ ಸಂವಹನ ನಡೆಸುವುದು ಆಕರ್ಷಣೆಯ ಕೇಂದ್ರ ಮಾತ್ರವಲ್ಲ, ಇದು ನಮ್ಮ ಯುವಕರಿಗೆ ರೊಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಮತ್ತು ಮಗುವಿನ ಮನಸ್ಸಿನಲ್ಲಿ ಕುತೂಹಲವನ್ನು ಉಂಟುಮಾಡುತ್ತದೆ. ನಮ್ಮ ಯುವ ಸ್ನೇಹಿತರಿಗೆ ಔಷಧೀಯ, ಕೃಷಿ, ಬಾಹ್ಯಾಕಾಶ, ರಕ್ಷಣಾ ಮುಂತಾದ ಅನೇಕ ಕ್ಷೇತ್ರಗಳಲ್ಲಿ ರೋಬೋಟ್ ಗಳು ಹೇಗೆ ಉಪಯುಕ್ತವಾಗುತ್ತವೆ ಎಂಬ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ಮತ್ತು ರೋಬೋ ಕೆಫೆಯಲ್ಲಿ ರೋಬಾಟ್ ಬಾಣಸಿಗನ ಅನುಭವವನ್ನು ವಿರೋಧಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಮತ್ತು ರೋಬೋಟ್ ಮಾಣಿಗಳು ನೀಡುವ ಆಹಾರವನ್ನು ತಿನ್ನುವ ಸಂತೋಷ ಅನನ್ಯವಾಗಲಿದೆ. ನಾನು ಅವರ ಚಿತ್ರಗಳನ್ನು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗ, ಅಂತಹ ಚಿತ್ರಗಳನ್ನು ವಿದೇಶಗಳಲ್ಲಿ ಮಾತ್ರ ನೋಡಲಾಗಿದೆ ಎಂಬ ಕುರಿತು ಕೆಲವರ ಸಂದೇಶಗಳನ್ನು ನಾನು ನೋಡಿದೆ. ಈ ಚಿತ್ರಗಳು ಭಾರತದಿಂದ, ಗುಜರಾತ್ ನಿಂದ ಬಂದವು ಎಂದು ಜನರು ನಂಬಲು ಸಾಧ್ಯವಿಲ್ಲ. ಈ ಕಾರ್ಯಕ್ರಮದ ಮೂಲಕ, ಹೆಚ್ಚು ಹೆಚ್ಚು ಮಕ್ಕಳು ಮತ್ತು ವಿದ್ಯಾರ್ಥಿಗಳು ವಿಜ್ಞಾನ ನಗರಕ್ಕೆ ಬರಬೇಕು, ಮತ್ತು ಶಾಲೆಗಳಿಂದ ನಿಯಮಿತವಾಗಿ ಪ್ರವಾಸಗಳು ನಡೆಯಬೇಕು ಎಂದು ನಾನು ಒತ್ತಾಯಿಸುತ್ತೇನೆ. ಮಕ್ಕಳೊಂದಿಗೆ ಮಿಂಚುತ್ತಲೇ ಇದ್ದರೆ ವಿಜ್ಞಾನ ನಗರದ ಮಹತ್ವ ಮತ್ತು ಭವ್ಯತೆ ಮತ್ತಷ್ಟು ಹೆಚ್ಚಾಗುತ್ತದೆ.  

ಸ್ನೇಹಿತರೇ,

ಗುಜರಾತ್ ಮತ್ತು ಅಲ್ಲಿನ ಜನರ ಹೆಮ್ಮೆಯನ್ನು ಹೆಚ್ಚಿಸುವ ಇಂತಹ ಅನೇಕ ಯೋಜನೆಗಳನ್ನು ಇಂದು ಉದ್ಘಾಟಿಸಿರುವುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಇಂದು, ಅಹಮದಾಬಾದ್ ನಗರದ ಜೊತೆಗೆ, ಗುಜರಾತ್ ನ ರೈಲು ಸಂಪರ್ಕವೂ ಹೆಚ್ಚು ಆಧುನಿಕ ಮತ್ತು ಹುರುಪಿನಿಂದ ಕೂಡಿದೆ. ಗಾಂಧಿನಗರ ಮತ್ತು ವಡ್ನಗರ್ ನಿಲ್ದಾಣಗಳ ನವೀಕರಣ, ಮಹೆಸಣ-ವಾರೆಥಾ ಮಾರ್ಗದ ಅಗಲೀಕರಣ ಮತ್ತು ವಿದ್ಯುದ್ದೀಕರಣ, ಸುರೇಂದ್ರನಗರ-ಪಿಪಾವವ್ ವಿಭಾಗದ ವಿದ್ಯುದ್ದೀಕರಣ, ಗಾಂಧಿನಗರ ರಾಜಧಾನಿ-ವಾರೆಥಾ ಮೆ.ಮು. ಸೇವೆಯ ಪ್ರಾರಂಭ, ಅಥವಾ ಇಂದು ಉದ್ಘಾಟನೆಯಾಗಿರುವ ನೂತನ ಗಾಂಧಿನಗರ ಕ್ಯಾಪಿಟಲ್-ವಾರಾಣಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು, ಸೋಮನಾಥ ಭೂಮಿಯನ್ನು ವಿಶ್ವನಾಥದೊಂದಿಗೆ ಸಂಪರ್ಕಿಸುವ ನೂತನ ಗಾಂಧಿನಗರ ಮತ್ತು ಬನಾರಸ್ ನಡುವಿನ ನೂತನ ರೈಲು ಮುಂತಾದ ಹೊಸ ಸೌಲಭ್ಯಗಳಿಗಾಗಿ ಗುಜರಾತ್ ಜನರಿಗೆ ನನ್ನ ಅನೇಕ ಅಭಿನಂದನೆಗಳು.

ಸಹೋದರರೇ ಮತ್ತು ಸಹೋದರಿಯರೇ,

21 ನೇ ಶತಮಾನದ ಭಾರತದ ಅಗತ್ಯಗಳನ್ನು 20 ನೇ ಶತಮಾನದ ಕಾರ್ಯಯೋಜನೆಗಳ ರೀತಿಯಲ್ಲಿ ಪೂರೈಸಲಾಗದು. ಆದ್ದರಿಂದ ರೈಲ್ವೆಯಲ್ಲಿ ಹೊಸತನ, ಸುಧಾರಣೆಗಳ ಅಗತ್ಯವಿತ್ತು. ನಾವು ರೈಲ್ವೆಗಳನ್ನು ಕೇವಲ ಸೇವೆಯಾಗಿ ಮಾತ್ರವಲ್ಲದೆ ಆಸ್ತಿಯಾಗಿಯೂ ಅಭಿವೃದ್ಧಿಪಡಿಸಲು ಪ್ರಾರಂಭಿಸಿದ್ದೇವೆ. ಇಂದು ಅದರ ಫಲಿತಾಂಶಗಳು ಗೋಚರಿಸುತ್ತವೆ. ಭಾರತೀಯ ರೈಲ್ವೆಯ ಗುರುತು ಮತ್ತು ವಿಶ್ವಾಸಾರ್ಹತೆ ಬದಲಾಗತೊಡಗಿದೆ. ಇಂದು, ಅನುಕೂಲತೆಯ ಜೊತೆಗೆ, ಭಾರತೀಯ ರೈಲ್ವೆ ಸ್ವಚ್ಛತೆ, ಸುರಕ್ಷತೆ ಮತ್ತು ವೇಗವನ್ನು ಹೊಂದಿದೆ. ಮೂಲಸೌಕರ್ಯಗಳ ಆಧುನೀಕರಣ ಅಥವಾ ಹೊಸ ಆಧುನಿಕ ರೈಲುಗಳ ಪರಿಚಯದ ಮೂಲಕ ರೈಲುಗಳ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಮೀಸಲಾದ ಸರಕು ಕಾರಿಡಾರ್ ಗಳು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬಂದ ಕೂಡಲೇ ರೈಲುಗಳ ವೇಗವು ಮತ್ತಷ್ಟು ಹೆಚ್ಚಾಗುತ್ತದೆ. ತೇಜಸ್ ಮತ್ತು ವಂದೇ ಭಾರತ್ ನಂತಹ ಆಧುನಿಕ ರೈಲುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಈ ರೈಲುಗಳು ಪ್ರಯಾಣಿಕರಿಗೆ ಹೊಸತನ ಮತ್ತು ಅದ್ಭುತ ಅನುಭವವನ್ನು ನೀಡುತ್ತಿವೆ. ಸಾಮಾಜಿಕ ಮಾಧ್ಯಮ ( ಸೋಷಿಯಲ್ ಮೀಡಿಯಾ)ಗಳಲ್ಲ ವಿಹಾರಿ (ವಿಸ್ಟಾಡೋಮ್) ಬೋಗಿಗಳ ಆಕರ್ಷಣೀಯ ವೀಡಿಯೊವನ್ನೂ ನೀವು ನೋಡಿರಬಹುದು.

ಏಕತೆಯ ಪ್ರತಿಮೆಗೆ ಭೇಟಿ ನೀಡಿದವರು ಈ ಹಿಂದೆ ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಈ ಬೋಗಿಗಳು ಪ್ರಯಾಣದ ಭಾವನೆಯನ್ನು ಹೊಸ ಆಯಾಮಕ್ಕೆ ಕೊಂಡೊಯ್ಯುತ್ತವೆ. ರೈಲುಗಳಲ್ಲಿ ಪ್ರಯಾಣಿಸುವವರು ಈಗ ನಮ್ಮ ರೈಲುಗಳಲ್ಲಿ, ಪ್ಲಾಟ್ ಫಾರ್ಮ್ ಗಳಲ್ಲಿ ಮತ್ತು ಹಳಿಗಳಲ್ಲಿ ಸ್ವಚ್ಛತೆಯನ್ನು ಕಾಣುತ್ತಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಬೋಗಿಗಳಲ್ಲಿ ಅಳವಡಿಸಲಾಗಿರುವ ಎರಡು ಲಕ್ಷಕ್ಕೂ ಹೆಚ್ಚು ಜೈವಿಕ ಶೌಚಾಲಯಗಳು ಇದಕ್ಕೆ ಕೊಡುಗೆ ನೀಡುತ್ತವೆ.

ಅಂತೆಯೇ, ದೇಶದಾದ್ಯಂತದ ಪ್ರಮುಖ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿನ ರೈಲ್ವೆ ನಿಲ್ದಾಣಗಳು ಈಗ ವೈ-ಫೈ ಸೌಲಭ್ಯಗಳನ್ನು ಹೊಂದಿವೆ. ಸುರಕ್ಷತಾ ದೃಷ್ಟಿಕೋನದಿಂದ, ಬ್ರಾಡ್ ಗೇಜ್ ನಲ್ಲಿರುವ ಮಾನವರಹಿತ ರೈಲ್ವೆ ಕ್ರಾಸಿಂಗ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಒಂದು ಕಾಲದಲ್ಲಿ ಭೀಕರ ಅಪಘಾತಗಳು ಮತ್ತು ಅಸ್ವಸ್ಥತೆಯ ದೂರುಗಳಿಗಾಗಿ ಮಾಧ್ಯಮಗಳಲ್ಲಿ ಪ್ರಾಬಲ್ಯ ಹೊಂದಿದ್ದ ಭಾರತೀಯ ರೈಲ್ವೆ ಇಂದು ಸದಾ ನಮಗೆ ಸಕಾರಾತ್ಮಕತೆಯನ್ನು ತರುತ್ತಿದೆ. ಇಂದು ಭಾರತೀಯ ರೈಲ್ವೆಯನ್ನು ಕುರಿತು ಯೋಚಿಸುವಾಗ ವಿಶ್ವದ ಇತ್ತೀಚಿನ ಅಧುನಿಕ ನೆಟ್ವರ್ಕ್ ಮತ್ತು ಮೆಗಾ ಯೋಜನೆಗಳ ಬಗ್ಗೆ ಮಾತು ಬರುತ್ತಿದೆ. ಇಂದು ಭಾರತೀಯ ರೈಲ್ವೆ ಬಗ್ಗೆ ಜನತೆ ನೋಡುವ ಅನುಭವ ಮತ್ತು ದೃಷ್ಟಿಕೋನ ಎರಡೂ ಬದಲಾಗುತ್ತಿದೆ. ಈ ಯೋಜನೆಗಳು ಭಾರತೀಯ ರೈಲ್ವೆಯ ಈ ಹೊಸ ಅವತಾರದ ಒಂದು ನೋಟವನ್ನು ಹೊಂದಿವೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.

ಸ್ನೇಹಿತರೇ,

ರೈಲ್ವೆ ದೇಶದ ಮೂಲೆ ಮತ್ತು ಮೂಲೆಗಳನ್ನು ತಲುಪಲು ರೈಲ್ವೆಯ ಸಮತಲ ವಿಸ್ತರಣೆ ಅಗತ್ಯ ಎಂದು ನನ್ನ ಅಭಿಪ್ರಾಯ. ಇದರೊಂದಿಗೆ, ಸಾಮರ್ಥ್ಯ ಮತ್ತು ಸಂಪನ್ಮೂಲ ನಿರ್ಮಾಣ, ಹೊಸ ತಂತ್ರಜ್ಞಾನ ಮತ್ತು ರೈಲ್ವೆಯಲ್ಲಿ ಉತ್ತಮ ಸೇವೆಗಳಿಗೆ ಲಂಬವಾಗಿ ಎತ್ತರಕ್ಕೆ ವಿಸ್ತರಣೆ ಅಷ್ಟೇ ಮುಖ್ಯವಾಗಿದೆ. ಅತ್ಯುತ್ತಮ ಟ್ರ್ಯಾಕ್ ಗಳು, ಆಧುನಿಕ ರೈಲ್ವೆ ನಿಲ್ದಾಣಗಳು ಮತ್ತು ಗಾಂಧಿನಗರ ರೈಲ್ವೆ ನಿಲ್ದಾಣದ ರೈಲು ಹಳಿಯ ಮೇಲಿರುವ ಐಷಾರಾಮಿ ಹೋಟೆಲ್ ಗಳ ಪ್ರಯೋಗವು ಭಾರತೀಯ ರೈಲ್ವೆಯಲ್ಲಿ ಅರ್ಥಪೂರ್ಣ ಬದಲಾವಣೆಯ ಆರಂಭವನ್ನು ಸೂಚಿಸುತ್ತದೆ. ಆಧುನಿಕ ಮತ್ತು ಅನುಕೂಲಕರ ರೈಲ್ವೆ ನಿಲ್ದಾಣಗಳನ್ನು ಗಾಂಧಿನಗರ ಮತ್ತು ದೇಶದಲ್ಲಿ ಇತರ ಕಡೆಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಇದರಿಂದ ರೈಲಿನಲ್ಲಿ ಪ್ರಯಾಣಿಸುವ ಸಾಮಾನ್ಯ ಜನರು ವಿಮಾನ ನಿಲ್ದಾಣದಂತಹ ಸೌಲಭ್ಯಗಳನ್ನು ಸಹ ಆನಂದಿಸಬಹುದು ಮತ್ತು ಮಹಿಳೆಯರು ಮತ್ತು ಸಣ್ಣ ಮಕ್ಕಳಿಗೆ ಉತ್ತಮ ವ್ಯವಸ್ಥೆಗಳಿವೆ

ಸ್ನೇಹಿತರೇ,

ಗಾಂಧಿನಗರದ ಹೊಸ ರೈಲ್ವೆ ನಿಲ್ದಾಣವು ದೇಶದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಮನಸ್ಥಿತಿಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ದೀರ್ಘಕಾಲದವರೆಗೆ, ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ವರ್ಗ ವ್ಯತ್ಯಾಸವನ್ನು ಪ್ರೋತ್ಸಾಹಿಸಲಾಯಿತು. ನಾನು ನಿಮಗೆ ಹೇಳಲು ಬಯಸುತ್ತೇನೆ, ಗುಜರಾತ್ ಜನರಿಗೆ ಚೆನ್ನಾಗಿ ತಿಳಿದಿದೆ, ಈ ಹಿಂದೆ ನನಗೆ ಗುಜರಾತ್ ಸೇವೆ ಸಲ್ಲಿಸಲು ಅವಕಾಶ ಸಿಕ್ಕಾಗ ನಾವು ಒಂದು ಪ್ರಯೋಗವನ್ನು ಮಾಡಿದ್ದೇವೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಸ್ ನಿಲ್ದಾಣಗಳನ್ನು ಆಧುನೀಕರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಿದ್ದೇವೆ. ಹಿಂದಿನ ಬಸ್ ನಿಲ್ದಾಣಗಳ ಶಿಥಿಲಾವಸ್ಥೆಯನ್ನು ಗಮನಿಸಿದರೆ, ಇಂದು ನಮ್ಮ ಗುಜರಾತ್ ನ ಅನೇಕ ಬಸ್ ನಿಲ್ದಾಣಗಳು ಆಧುನಿಕವಾಗಿವೆ. ವಿಮಾನ ನಿಲ್ದಾಣಗಳಂತಹ ಸೌಲಭ್ಯಗಳು ಬಸ್ ನಿಲ್ದಾಣಗಳಲ್ಲಿ ಗೋಚರಿಸುತ್ತವೆ.

ನಾನು ದೆಹಲಿಗೆ ಬಂದಾಗ, ನಾನು ರೈಲ್ವೆ ಅಧಿಕಾರಿಗಳನ್ನು ಗುಜರಾತ್ ನ ಬಸ್ ನಿಲ್ದಾಣಗಳನ್ನು ನೋಡಲು ಕಳುಹಿಸಿದೆ ಮತ್ತು ನಮ್ಮ ರೈಲ್ವೆ ನಿಲ್ದಾಣಗಳು ಏಕೆ ಈ ರೀತಿ ಇರಬಾರದು ಎಂದು ಹೇಳಿದೆ. ರೈಲ್ವೆ ನಿಲ್ದಾಣಗಳಲ್ಲಿ ಭೂ ಬಳಕೆಯ ಅತ್ಯುತ್ತಮ ಬಳಕೆ ಮತ್ತು ಸಾಕಷ್ಟು ಆರ್ಥಿಕ ಚಟುವಟಿಕೆ ಇದ್ದರೆ ರೈಲ್ವೆ ಆರ್ಥಿಕತೆಯ ಕೇಂದ್ರವಾಗಬಹುದು ಮತ್ತು ರೈಲು ಸಂಚಾರದ ಮಾಧ್ಯಮವಾಗಬಹುದು. ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿದ ರೀತಿಯಲ್ಲಿಯೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ನಾವು ಸಾಗುತ್ತಿದ್ದೇವೆ ಮತ್ತು ಗುಜರಾತ್ ನಲ್ಲಿ ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈನಿಟ್ಟಿನಲ್ಲಿ ಇಂದು, ಗಾಂಧಿನಗರ ಕೇವಲ ಪ್ರಾರಂಭವಷ್ಟೇ ಆಗಿದೆ. ಸಾರ್ವಜನಿಕ ಸೌಲಭ್ಯಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವಾ ಶ್ರೀಮಂತರಿಗೆ ಮೀಸಲಾಗಿರುವ ವರ್ಗೀಕೃತ ವಿಶೇಷ ಸೌಕರ್ಯಗಳಾಗಿವೆ ಎಂಬ ಮಾತುಗಳಿಂದು ಸುಳ್ಳಾಗುತ್ತಿವೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಸೌಲಭ್ಯಗಳನ್ನು ನಾವು ಒದಗಿಸಬೇಕು.

ಸ್ನೇಹಿತರೇ,

ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ರೈಲ್ವೆಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಬಹುದು ಎಂಬುದಕ್ಕೆ ಗಾಂಧಿನಗರದ ಈ ಆಧುನಿಕ ರೈಲ್ವೆ ನಿಲ್ದಾಣವೂ ಒಂದು ಪುರಾವೆಯಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಟ್ರ್ಯಾಕ್ ಗಳ ಮೇಲೆ ಹೋಟೆಲ್ ನಿರ್ಮಿಸಲಾಗಿದೆ, ಅಲ್ಲಿಂದ ರೈಲುಗಳನ್ನು ನೋಡಬಹುದು ಆದರೆ ಪ್ರಯಾಣಸುಖ ಅನುಭವಿಸುವುದು ಸಾಧ್ಯವಿಲ್ಲ. ರೈಲ್ವೇ ಆವರಿಸಿದ ಭೂ ಗಾತ್ರ  - ಪ್ರಮಾಣವು ಒಂದೇ ಆಗಿರುತ್ತದೆ, ಆದರೆ ಅದರ ಬಳಕೆ ದ್ವಿಗುಣಗೊಂಡಿದೆ. ಸೌಲಭ್ಯ ಕೂಡ ಅತ್ಯುತ್ತಮವಾಗಿದೆ ಮತ್ತು ಇದು ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೂ ಒಳ್ಳೆಯದು. ದೇಶದಾದ್ಯಂತ ರೈಲು ಹಾದುಹೋಗುವ ಸ್ಥಳಗಳಿಂದ ಉತ್ತಮವಾದ ಅವಿಭಾಜ್ಯ ಪ್ರಾಮುಖ್ಯ ಸ್ಥಳ ಬೇರೆ ಯಾವುದಿದೆ!

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Mobile exports find stronger signal, hit record $2.4 billion in October

Media Coverage

Mobile exports find stronger signal, hit record $2.4 billion in October
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi received an audience today with His Majesty, Jigme Singye Wangchuck, The Fourth King of Bhutan, in Thimphu.

Prime Minister conveyed felicitations on the occasion of the 70th birth anniversay of His Majesty, The Fourth King and the best wishes and prayers of the Government and people of India for His Majesty’s continued good health and well-being. Prime Minister thanked His Majesty The Fourth King for his leadership, counsel and guidance in further strengthening India-Bhutan friendship. Both leaders held discussions on bilateral ties and issues of mutual interest. In this context, they underlined the shared spiritual and cultural bonds that bring the people of the two countries closer.

Prime Minister joined His Majesty, the King of Bhutan, His Majesty, the Fourth King of Bhutan, and Prime Minister of Bhutan at the Kalachakra initiation ceremony at Changlimithang Stadium, as part of the ongoing Global Peace Prayer Festival in Thimphu. The prayers were presided over by His Holiness the Je Khenpo, the Chief Abbot of Bhutan.