ಶೇರ್
 
Comments

ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳ 100ಕ್ಕೂ ಹೆಚ್ಚು ನಿರ್ದೇಶಕರೊಂದಿಗೆ ಸಂವಾದ ನಡೆಸಿದ ತರುವಾಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳೊಂದಿಗೆ ನಡೆಸಿದ ಸಂವಾದ ಹಾಗು ಆ ಸಭೆಯಲ್ಲಿ ಪ್ರಸ್ತುತ ಪಡಿಸಿದ ಪ್ರಾತ್ಯಕ್ಷಿಕೆಯ ವಿವರಗಳನ್ನು ಹಂಚಿಕೊಂಡಿದ್ದು, ಪ್ರಧಾನಮಂತ್ರಿಯವರು  ಬೆಂಗಳೂರಿನ ಐ.ಐ.ಎಸ್.ಸಿ., ಮುಂಬೈ ಐಐಟಿ, ಚೆನ್ನೈ ಐಐಟಿ,  ಕಾನ್ಪುರ ಐಐಟಿ, ಕುರಿತೂ ಟ್ವೀಟ್ ಮಾಡಿದ್ದಾರೆ.

ತಮ್ಮ ಸರಣಿ ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು:-

ಪ್ರಮುಖ ಐಐಟಿಗಳ ಮತ್ತು ಐ.ಐ.ಎಸ್.ಸಿ.ಯ ಬೆಂಗಳೂರಿನ ನಿರ್ದೇಶಕರುಗಳೊಂದಿಗೆ ಸಮೃದ್ಧ ಸಂವಾದ ನಡೆಸಿದ್ದಾಗಿ ತಿಳಿಸಿದ್ದಾರೆ.  ಈ ವೇಳೆ ನಾವು ಭಾರತವನ್ನು ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಮತ್ತು ಯುವಜನರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದೂ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.

@ಐಐಎಸ್.ಸಿ. ಬೆಂಗಳೂರು ತಂಡವು ತನ್ನ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಉಪಕ್ರಮ ಅಂದರೆ, ರೊಬೊಟಿಕ್ಸ್, ಗಣಿತ/ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುವಂತಹ ಶಿಕ್ಷಣದಲ್ಲಿನ ಪ್ರಯತ್ನಗಳು, ಕೋವಿಡ್ -19 ಕಾರ್ಯದ ಬಗ್ಗೆ ಆಸಕ್ತಿದಾಯಕ ವಿಚಾರವನ್ನು ಹಂಚಿಕೊಂಡಿದೆ ಎಂದರು. ಆತ್ಮನಿರ್ಭರ ಭಾರತ ಮುನ್ನೋಟದಲ್ಲಿ ಆರೋಗ್ಯಕ್ಕೆ ಮಹತ್ವ ನೀಡುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

@ ಐಐಟಿ ಬಾಂಬೆ ಮಾಡಿರುವ, ಸಾರಜನಕ ಉತ್ಪಾದಕವನ್ನು ಆಮ್ಲಜನಕ ಉತ್ಪಾದಕವಾಗಿ ಪರಿವರ್ತಿಸುವ, ಕ್ಯಾನ್ಸರ್ ಗುಣಪಡಿಸುವಿಕೆಗಾಗಿ ಕೋಶ ಚಿಕಿತ್ಸೆ ಮತ್ತು ಎಲ್.ಎ.ಎಸ್.ಇ. ಕಾರ್ಯಕ್ರಮ, ಡಿಜಿಟಲ್ ಆರೋಗ್ಯದಲ್ಲಿ ಸ್ನಾತಕೋತ್ತರ, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನದಂತಹ ಶೈಕ್ಷಣಿಕ ಆವಿಷ್ಕಾರಗಳ ಪರಿವರ್ತನೆಗಾಗಿ ತಂತ್ರಜ್ಞಾನದ ವ್ಯಾಪಕ ಕಾರ್ಯಗಳ ವಿವರಗಳನ್ನು ತಿಳಿದುಕೊಳ್ಳಲು ನನಗೆ ಸಂತೋಷವಾಯಿತು.

@ಐಐಟಿ ಮದ್ರಾಸ್ ತಂಡ ಕೋವಿಡ್ ನಿಗ್ರಹ ಪ್ರಯತ್ನಗಳು ಅಂದರೆ ಮಾಡ್ಯುಲರ್ ಆಸ್ಪತ್ರೆಗಳ ಸ್ಥಾಪನೆ, ಹಾಟ್ ಸ್ಪಾಟ್ ಗಳ ಮುನ್ನೆಚ್ಚರಿಕೆ, ತಮ್ಮ ಬಹು  ಶಿಸ್ತೀಯ ಸಂಶೋಧನೆ ಮತ್ತು ಪ್ರೋಗ್ರಾಮಿಂಗ್ ಮತ್ತು ದತ್ತಾಂಶ ವಿಜ್ಞಾನದಲ್ಲಿ ತಮ್ಮ ಆನ್ ಲೈನ್ ಬಿಎಸ್ಸಿ ಬಗ್ಗೆ ಮಾತನಾಡಿತು. ಅವರು ಭಾರತದಾದ್ಯಂತ ಡಿಜಿಟಲ್ ವ್ಯಾಪ್ತಿಯ ಹೆಚ್ಚಳಕ್ಕೂ ಶ್ರಮಿಸುತ್ತಿದ್ದಾರೆ. 

@ಐಐಟಿ ಕಾನ್ಪುರ ಬ್ಲಾಕ್ ಚೈನ್ ತಂತ್ರಜ್ಞಾನ, ವಾಯು ಗುಣಮಟ್ಟ ನಿಗಾ, ಎಲೆಕ್ಟ್ರಾನಿಕ್ ಇಂಧನ ಪೂರಣ ಮತ್ತು ಮೊದಲಾದವುಗಳಲ್ಲಿ ಭವಿಷ್ಯದ ಸಂಶೋಧನೆ ಮತ್ತು ನಾವಿನ್ಯತೆಯ ತಾಣವಾಗಿ ಬದಲಾಗಿದೆ. ನವೋದ್ಯಮಗಳಿಗೆ ನಿಡಲಾಗುತ್ತಿರುವ ಬೆಂಬಲ, ವೃತ್ತಿಪರರ ಕೌಶಲ್ಯವರ್ಧನೆ ಭಾರತದ ಯುವ ಶಕ್ತಿಗೆ ತುಂಬಾ ಪ್ರಯೋಜನಕಾರಿ.

ಸಭೆಯ ವಿವರಗಳನ್ನು ಈ ಲಿಂಕ್ ನಲ್ಲಿ - https://pib.gov.in/PressReleseDetail.aspx?PRID=1733638 ನೋಡಬಹುದು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
TB Harega India Jeetega: Dr Lucica Ditiu, Director of Stop TB Partnership says, ‘World needs a leader like Modi'

Media Coverage

TB Harega India Jeetega: Dr Lucica Ditiu, Director of Stop TB Partnership says, ‘World needs a leader like Modi'
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಮಾರ್ಚ್ 2023
March 24, 2023
ಶೇರ್
 
Comments

Citizens Shower Their Love and Blessings on PM Modi During his Visit to Varanasi

Modi Government's Result-oriented Approach Fuelling India’s Growth Across Diverse Sectors