ಭೌಗೋಳಿಕವಾಗಿ, ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಯತ್ತ ಸರ್ಕಾರವು ಸಮರೋಪಾದಿಯಲ್ಲಿ ಮುನ್ನಡೆ: ಪ್ರಧಾನಮಂತ್ರಿ
ತ್ವರಿತ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದ ಪ್ರಧಾನಮಂತ್ರಿ
ಸಾಧನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಪರಿವರ್ತನೆಗೆ ಕಾರಣವಾಗುತ್ತದೆ: ಪ್ರಧಾನಮಂತ್ರಿ
ಮುಂದಿನ 25 ವರ್ಷಗಳು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತ ಸಾಧಿಸಲು ಸಮರ್ಪಣೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಆವರಣದಲ್ಲಿ ಬಜೆಟ್ ಅಧಿವೇಶನ 2025 ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಗೆ ನಮಿಸಿದ ಪ್ರಧಾನಿ, ಬಜೆಟ್ ಅಧಿವೇಶನ ಆರಂಭದ ಈ ಸಂದರ್ಭದಲ್ಲಿ ಇಂದು, ವಿವೇಕ, ಸಮೃದ್ಧಿ ಮತ್ತು ಕಲ್ಯಾಣವನ್ನು ನೀಡುವ ಲಕ್ಷ್ಮಿ ದೇವಿಯನ್ನು ಸ್ಮರಿಸುವುದು ವಾಡಿಕೆಯಾಗಿದೆ ಎಂದು ಹೇಳಿದರು. ದೇಶದ ಪ್ರತಿಯೊಬ್ಬ ಬಡ ಮತ್ತು ಮಧ್ಯಮ ವರ್ಗದ ಸಮುದಾಯದ ಮೇಲೆ ಲಕ್ಷ್ಮಿದೇವಿಯ ವಿಶೇಷ ಕೃಪೆ ಇರಲಿ ಅವರು ಪ್ರಾರ್ಥಿಸಿದರು.

 

ಭಾರತವು ತನ್ನ 75ನೇ ಗಣರಾಜ್ಯೋತ್ಸವ ಪೂರ್ಣಗೊಳಿಸಿದೆ, ಇದು ಪ್ರತಿಯೊಬ್ಬ ಪ್ರಜೆಗೂ ಹೆಮ್ಮೆಯ ವಿಷಯ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅಲ್ಲದೆ, ಪ್ರಜಾಪ್ರಭುತ್ವ ಜಗತ್ತಿನಲ್ಲಿ ಈ ಸಾಧನೆಯು ವಿಶೇಷ ಸ್ಥಾನವನ್ನು ಹೊಂದಿದ್ದು, ಭಾರತದ ಶಕ್ತಿ ಮತ್ತು ಮಹತ್ವವನ್ನು ಪ್ರದರ್ಶಿಸುತ್ತದೆ ಎಂದರು.

ಮೂರನೇ ಬಾರಿಗೆ ಸರ್ಕಾರವನ್ನು ರಚಿಸುವ ಜವಾಬ್ದಾರಿಯನ್ನು ತನಗೆ ವಹಿಸಿರುವುದಕ್ಕೆ ದೇಶದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ, ಇದು ತಮ್ಮ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಅಧಿವೇಶನವಾಗಿದೆ ಎಂದು ಒತ್ತಿ ಹೇಳಿದರು ಮತ್ತು 2047ರ ವೇಳೆಗೆ ಭಾರತ ಸ್ವಾತಂತ್ರೋತ್ಸವದ ಶತಮಾನೋತ್ಸವ ಆಚರಿಸುವ ವೇಳೆಗೆ, ರಾಷ್ಟ್ರವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯನ್ನು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಜೆಟ್ ಅಧಿವೇಶನವು ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತದೆ ಮತ್ತು 140 ಕೋಟಿ ನಾಗರಿಕರು ಸಾಮೂಹಿಕವಾಗಿ ಈ ಸಂಕಲ್ಪವನ್ನು ಸಾಕಾರಗೊಳಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು.

 

ಮೂರನೇ ಅವಧಿಯಲ್ಲಿ ಸರ್ಕಾರ ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಮುನ್ನಡೆಯುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಆರ್ಥಿಕ ನೀಲನಕ್ಷೆಯ ಅಡಿಪಾಯವೇ ನಾವೀನ್ಯತೆ, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಹೂಡಿಕೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ಅಧಿವೇಶನದಲ್ಲಿ ಹಲವು ಐತಿಹಾಸಿಕ ಮಸೂದೆಗಳು ಮತ್ತು ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಲಾಗುವುದು, ಇದು ರಾಷ್ಟ್ರವನ್ನು ಬಲಪಡಿಸುವ ಕಾನೂನುಗಳ ಜಾರಿಗೆ ಕಾರಣವಾಗುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಮಹಿಳೆಯರ ಘನತೆಯನ್ನು ಪುನಃ ಸ್ಥಾಪಿಸುವ, ಪ್ರತಿಯೊಬ್ಬ ಮಹಿಳೆಗೆ ಸಮಾನ ಹಕ್ಕುಗಳನ್ನು ಖಾತ್ರಿಪಡಿಸುವ, ಧಾರ್ಮಿಕ ಮತ್ತು ಪಂಥೀಯ ಭಿನ್ನತೆಗಳಿಂದ ಮುಕ್ತವಾಗುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ಗುರಿಯನ್ನು ಸಾಧಿಸಲು ಈ ಅಧಿವೇಶನದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ತ್ವರಿತ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಮಹತ್ವವನ್ನು ಪ್ರಧಾನಿ ಬಲವಾಗಿ ಪ್ರತಿಪಾದಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯು ಪರಿವರ್ತನೆಗೆ ಕಾರಣವಾಗುತ್ತದೆ ಎಂದು ಅವರು ಉಲ್ಲೇಖಿಸಿದರು.

 

ಭಾರತವು ಅಪಾರ ಯುವ ಶಕ್ತಿಯನ್ನು ಹೊಂದಿರುವ ಯುವ ರಾಷ್ಟ್ರ ಎಂದು ಬಲವಾಗಿ ಪ್ರತಿಪಾದಿಸಿದ  ಪ್ರಧಾನಮಂತ್ರಿ, ಇಂದಿನ 20-25 ವರ್ಷ ವಯಸ್ಸಿನ ಯುವಕರು 45-50 ವರ್ಷಗಳನ್ನು ತಲುಪಿದಾಗ ಅಭಿವೃದ್ಧಿ ಹೊಂದಿದ ಭಾರತದ ಅತಿದೊಡ್ಡ ಫಲಾನುಭವಿಗಳಾಗುತ್ತಾರೆ ಎಂದರು. ಅವರು ನೀತಿ ನಿರೂಪಣೆಯಲ್ಲಿ ಪ್ರಮುಖ ಸ್ಥಾನಗಳಲ್ಲಿರುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಮುಂದಿನ ಶತಮಾನಕ್ಕೆ ಹೆಮ್ಮೆಯಿಂದ ಕೊಂಡೊಯ್ಯಲಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ಪ್ರಯತ್ನಗಳು ಹದಿಹರೆಯದವರು ಮತ್ತು ಯುವ ಪೀಳಿಗೆಗೆ ಮಹತ್ವದ ಕೊಡುಗೆಯಾಗಿರುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಿ ಅವರು ಇದನ್ನು 1930 ಮತ್ತು 1940ರ ದಶಕಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯುವಕರೊಂದಿಗೆ ಹೋಲಿಸಿದರು ಮತ್ತು ಅವರ ಪ್ರಯತ್ನಗಳು 25 ವರ್ಷಗಳ ನಂತರ ಸ್ವಾತಂತ್ರೋತ್ಸವ ಆಚರಣೆಗೆ  ಕಾರಣವಾಯಿತು ಎಂದರು. ಅಂತೆಯೇ, ಮುಂದಿನ 25 ವರ್ಷಗಳು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಸಾಧಿಸಲು ಮೀಸಲಾಗಿರುತ್ತವೆ ಎಂದು ಅವರು ಹೇಳಿದರು. ಈ ಬಜೆಟ್ ಅಧಿವೇಶನದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಯನ್ನು ಬಲಪಡಿಸಲು ಎಲ್ಲಾ ಸಂಸದರು ಕೊಡುಗೆ ನೀಡಬೇಕೆಂದು ಪ್ರಧಾನಿ ಕರೆ ನೀಡಿದರು. ಯುವ ಸಂಸದರಿಗೆ ಇದು ಒಂದು ಸುವರ್ಣಾವಕಾಶ, ಏಕೆಂದರೆ ಸದನದಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಜಾಗೃತಿಯು ಅಭಿವೃದ್ಧಿ ಹೊಂದಿದ ಭಾರತದ ಫಲಗಳನ್ನು ಪಡೆಯಲು ಅವರಿಗೆ ಅವಕಾಶ ನೀಡುತ್ತದೆ ಎಂದು ಎಂದು ಅವರು ಒತ್ತಿ ಹೇಳಿದರು.

ಈ ಬಜೆಟ್ ಅಧಿವೇಶನ ರಾಷ್ಟ್ರದ ಆಶೋತ್ತರಗಳನ್ನು ಈಡೇರಿಸಲಿದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಬಾರಿ ಅಧಿವೇಶನಕ್ಕೂ ಮುನ್ನ ವಿದೇಶಿ ಮೂಲಗಳಿಂದ ಗೊಂದಲ ಸೃಷ್ಟಿಯಾಗುತ್ತಿತ್ತು, ಆದರೆ 2014ರ ನಂತರ ಇದೇ ಮೊದಲ ಬಾರಿಗೆ ಯಾವುದೇ ಗೊಂದಲ ಇಲ್ಲ ಅವರು ಹೇಳಿದರು. ಕಳೆದ 10 ವರ್ಷಗಳಿಂದ, ಪ್ರತಿ ಅಧಿವೇಶನಕ್ಕೂ ಮುನ್ನ ತೊಂದರೆ ಸೃಷ್ಟಿಸುವ ಪ್ರಯತ್ನಗಳು ಸದಾ ನಡೆಯುತ್ತಿವೆ ಮತ್ತು ಬೆಂಕಿಯನ್ನು ಹೆಚ್ಚಿಸಲು ಸಿದ್ಧರಿರುವ ಜನರಿಗೇನೂ ಕೊರತೆಯಿಲ್ಲ ಎಂದು ಪ್ರಧಾನಿ ಹೇಳಿದರು. ಆದರೂ ಕಳೆದ ದಶಕದಲ್ಲಿ ಯಾವುದೇ ವಿದೇಶಿ ಮೂಲೆಗಳಿಂದ ಅಂತಹ ಗೊಂದಲಗಳು ಸಂಭವಿಸದ ಮೊದಲ ಅಧಿವೇಶನ ಇದಾಗಿದೆ ಎಂದು ಅವರು ಹೇಳಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Portraits of PVC recipients replace British officers at Rashtrapati Bhavan

Media Coverage

Portraits of PVC recipients replace British officers at Rashtrapati Bhavan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 18 ಡಿಸೆಂಬರ್ 2025
December 18, 2025

Citizens Agree With Dream Big, Innovate Boldly: PM Modi's Inspiring Diplomacy and National Pride