ಶೇರ್
 
Comments
The UN needs to address the crisis of confidence it currently faces: PM Modi
For today’s interconnected world, we need a reformed multilateralism that reflects today’s realities: PM at UN
India is one of the largest contributors to the UN Peacekeeping Missions: PM Modi

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿವೀಡಿಯೊ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದರು.

75 ವರ್ಷಗಳ ಹಿಂದೆ ಈ ಸಂಸ್ಥೆಯನ್ನು ಮನುಕುಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಡೀ ವಿಶ್ವಕ್ಕಾಗಿಯೇ ಒಂದು ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಈ ಸಂಸ್ಥೆಯ ಸಂಸ್ಥಾಪನೆಯಿಂದ ಸಮರದ ಆತಂಕವನ್ನು ಮೀರಿ ಶಾಂತಿಗಾಗಿ ಹೊಸ ಆಶಾದಾಯಕ ಎಳೆಯು ಹುಟ್ಟಿಕೊಂಡಿತು. ಭಾರತವು ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಂದು ದೇಶವಾಗಿದ್ದು, ತನ್ನದೇ ಆದ ಪರಿಕಲ್ಪನೆಯೊಂದು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಭಾರತದ ‘ವಸುದೈವ ಕುಟುಂಬಕಂ’ ಎಂಬ ತತ್ವಾದರ್ಶವು ಇಡೀ ಜಗತ್ತನ್ನೇ ಕುಟುಂಬದಂತೆ ಕಾಣುತ್ತದೆ. ಇದೇ ತತ್ವದ ಮೂಲಾಧಾರವೆಂಬಂತೆ ವಿಶ್ವಸಂಸ್ಥೆಯೂ ಇದೆ.

ವಿಶ್ವಸಂಸ್ಥೆಯ ಶಾಂತಿ ಪರಿಪಾಲನಾ ಕಾರ್ಯಾಚರಣೆ ಹಾಗೂ ಅಭಿವೃದ್ಧಿಪರ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ತಮ್ಮ ನಮನಗಳನ್ನು ಸಲ್ಲಿಸಿ, ನಮ್ಮ ಜಗತ್ತು ಇಂದು ವಿಶ್ವಸಂಸ್ಥೆಯಿಂದಾಗಿಯೇ ಉತ್ತಮ ತಾಣವಾಗಿ ಉಳಿದುಕೊಂಡಿದೆ. ವಿಶ್ವಸಂಸ್ಥೆಯ ಉದಾತ್ತ ಧ್ಯೇಯಗಳಲ್ಲಿ ಕೆಲವಂತೂ ಈಡೇರಿವೆ. ಆದರೆ ಇನ್ನೂ ಕೆಲವು ಈಡೇರಬೇಕಾಗಿರುವುದೂ ಗಮನಾರ್ಹ ಎಂದರು. ನಮ್ಮ ಗುರಿ ಸಾಧನೆಯನ್ನು ಉದ್ಘೋಷಿಸುವ ಈ ಒಪ್ಪಂದವು ಇನ್ನೂ ಆಗಬೇಕಿರುವ ಕಾರ್ಯಗಳನ್ನೂ ತಿಳಿಸುತ್ತದೆ.  ಸಂಘರ್ಷಗಳನ್ನು ತಡೆಯುವಲ್ಲಿ, ಅಸಮಾನತೆಯನ್ನು ಹೋಗಲಾಡಿಸುವಲ್ಲಿ, ಡಿಜಿಟಲ್‌ ತಂತ್ರಜ್ಞಾನವನ್ನು ಉನ್ನತೀಕರಿಸುವಲ್ಲಿ, ಹಾಗೂ ವಿಶ್ವಸಂಸ್ಥೆಯನ್ನು ಪುನರ್‌ನಿರ್ಮಾಣ ಮಾಡುವ ಅಗತ್ಯವನ್ನೂ ಎತ್ತಿಹಿಡಿಯುತ್ತದೆ ಎಂದರು.

ಸದ್ಯಕ್ಕೆ ವಿಶ್ವಸಂಸ್ಥೆ ವಿಶ್ವಾಸದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಯ ಅಗತ್ಯವಿದೆ. ಈಗಿರುವ ನಿಯಮಗಳು ಸದ್ಯದ ಸವಾಲುಗಳನ್ನು ನಿರ್ವಹಿಸುವಲ್ಲಿ, ನಿಭಾಯಿಸುವಲ್ಲಿ ಅಪ್ರಸ್ತುತವೆನಿಸುತ್ತಿವೆ. ಇಂತಿನ ಅಂತರ್‌ ಸಂಪರ್ಕಿತ ವಿಶ್ವದಲ್ಲಿ ನಮಗೆ ಬಹುತ್ವದ ರೂಪವಿರುವ ಸುಧಾರಿತ ವ್ಯವಸ್ಥೆಯ ಅಗತ್ಯವಿದೆ. ಅದು ಇಂದಿನ ಪ್ರಚಲಿತ ವಾಸ್ತವ ಜಗತ್ತನ್ನು ಪ್ರತಿಬಿಂಬಿಸುವಂತಿರಬೇಕು.  ಎಲ್ಲರ ಧ್ವನಿಯಾಗುವಂತಿರಬೇಕು. ವರ್ತಮಾನದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರಬೇಕು. ಮಾನವ ಕಲ್ಯಾಣದ ಮೇಲೆಯೇ ಗಮನ ಕೇಂದ್ರೀಕೃತವಾಗಿರಬೇಕು. ಈ ನಿಟ್ಟಿನಲ್ಲಿ ವಿಶ್ವದ ಉಳಿದೆಲ್ಲ ದೇಶಗಳೊಡನೆ ಭಾರತವೂ ಕೈಜೋಡಿಸಿ ಶ್ರಮಿಸಲು ಎದುರು ನೋಡುತ್ತಿದೆ.

Click here to read full text speech

Pariksha Pe Charcha with PM Modi
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Oxygen Express: Nearly 3,400 MT of liquid medical oxygen delivered across India

Media Coverage

Oxygen Express: Nearly 3,400 MT of liquid medical oxygen delivered across India
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಮೇ 2021
May 09, 2021
ಶೇರ್
 
Comments

Modi Govt. taking forward the commitment to transform India-EU relationship for global good

Netizens highlighted the positive impact of Modi Govt’s policies on Ground Level