ಪ್ರಧಾನಮಂತ್ರಿ ಅವರಿಗೆ ಸೆರಾವೀಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ಪ್ರದಾನ
ಭಾರತೀಯ ಸಂಪ್ರದಾಯ ಮತ್ತು ಜನತೆಗೆ ಪ್ರಶಸ್ತಿ ಸಮರ್ಪಣೆ
ಇದುವರೆಗಿನ ಶ್ರೇಷ್ಠ ಪರಿಸರ ಚಾಂಪಿಯನ್ ಗಳಲ್ಲಿ ಮಹಾತ್ಮಾಗಾಂಧಿ ಒಬ್ಬರು - ಪ್ರಧಾನಮಂತ್ರಿ
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಅತ್ಯಂತ ಶಕ್ತಿಯುತ ಮಾರ್ಗವೆಂದರೆ ಅದು ವರ್ತನೆಗಳ ಬದಲಾವಣೆ – ಪ್ರಧಾನಮಂತ್ರಿ
ಈಗ ಪರಿಸರ ದೃಷ್ಟಿಯಿಂದ ಮತ್ತು ತಾರ್ಕಿಕವಾಗಿ ಯೋಚಿಸುವ ಸಮಯ: ಇದೆಲ್ಲದರ ನಂತರವೂ ನನ್ನ ಅಥವಾ ನಿಮ್ಮ ಬಗ್ಗೆ ಅಲ್ಲ. ಇದು ನಮ್ಮ ಗ್ರಹದ ಭವಿಷ್ಯದ ಬಗ್ಗೆ : ಪ್ರಧಾನಮಂತ್ರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೇರಾವೀಕ್ 2021 ರ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಮುಖ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರಿಗೆ ಸೇರಾವೀಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ ನಾನು ಬಹಳ ವಿನಮ್ರತೆಯಿಂದ ಸೇರಾವಿಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. “ ಈ ಪ್ರಶಸ್ತಿಯನ್ನು ಭಾರತದ ನಮ್ಮ ಮಹಾನ್ ಮಾತೃ ಭೂಮಿಯ ಜನರಿಗೆ ಅರ್ಪಿಸುತ್ತೇನೆ. ಪರಿಸರವನ್ನು ಆರೈಕೆ ಮಾಡಲು ದಾರಿ ತೋರಿಸಿದ ನಮ್ಮ ಭೂಮಿಯ ಅಧ್ಭುತ ಸಂಪ್ರದಾಯಕ್ಕೆ ನಾನು ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ.” ಶತಮಾನಗಳಿಂದಲೂ ಪರಿಸರವನ್ನು ನೋಡಿಕೊಳ್ಳುವಲ್ಲಿ ಭಾರತೀಯರು ನಾಯಕರಾಗಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ದೈವತ್ವವು ನಿಕಟ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.

ಇದುವರೆಗೆ ಬದುಕಿದ್ದ ಶ್ರೇಷ್ಠ ಪರಿಸರ ಚಾಂಪಿಯನ್ ಗಳಲ್ಲಿ ಮಹಾತ್ಮಾಗಾಂಧಿ ಒಬ್ಬರಾಗಿದ್ದಾರೆ. ಅವರು ತೋರಿಸಿದ ಮಾರ್ಗವನ್ನು ಮಾನವೀಯತೆಯಿಂದ ಅನುಸರಿಸಿದ್ದರೆ ಇಂದು ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಇರುತ್ತಿಲ್ಲ. ಮಹಾತ್ಮಾಗಾಂಧೀಜಿ ಅವರ ತಾಯ್ನಾಡು ಗುಜರಾತ್ ನ ಪೋರ್ ಬಂದರ್ ಗೆ ಭೇಟಿ ನೀಡಿದರೆ ಅಲ್ಲಿ ವರ್ಷಗಳ ಹಿಂದೆಯೇ ಮಳೆ ನೀರು ಸಂಗ್ರಹಿಸಲು ಭೂಗತ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

ವಿಪತ್ತುಗಳು ಮತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಕೇವಲ ಎರಡು ಮಾರ್ಗಗಳಿವೆ. ಅದರಲ್ಲಿ ಒಂದು ನೀತಿಗಳು, ಕಾನೂನುಗಳು, ನಿಯಮಗಳು ಮತ್ತು ಆದೇಶಗಳು. ಇದಕ್ಕೆ ಪ್ರಧಾನಮಂತ್ರಿ ಅವರು ಉದಾಹರಣೆಗಳನ್ನು ನೀಡಿದರು. ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆ ರಹಿತ ಮೂಲಗಳ ಪಾಲು ಶೇ 38 ಕ್ಕೆ ಏರಿಕೆಯಾಗಿದೆ. 2020 ರ ಏಪ್ರಿಲ್ ನಿಂದ ಭಾರತ್ -6 ಹೊರಸೂಸುವಿಕೆಯ ಮಾನದಂಡಗಳನ್ನು ಅಳವಡಿಸಿಕೊಂಡಿರುವುದು ಯುರೋ -6 ಇಂಧನಕ್ಕೆ ಸಮಾನವಾಗಿದೆ. ಬರುವ 2030 ರ ವೇಳೆಗೆ ನೈಸರ್ಗಿಕ ಅನಿಲದ ಪಾಲನ್ನು ಶೇ 6 ರಿಂದ ಶೇ 15 ಕ್ಕೆ ಏರಿಕೆ ಮಾಡಲು ಭಾರತ ಕಾರ್ಯೋನ್ಮುಖವಾಗಿದೆ. ಎಲ್.ಎನ್.ಜಿಯನ್ನು ಇದೀಗ ಇಂಧನವಾಗಿ ಬಳಕೆ ಮಾಡಲು ಬಡ್ತಿ ನೀಡಲಾಗಿದೆ. ಇತ್ತೀಚೆಗೆ ಪ್ರಾರಂಭಿಸಿದ ರಾಷ್ಟ್ರೀಯ ಜಲ ಜನಕ ಅಭಿಯಾನ ಮತ್ತು ಪಿಎಂ ಕುಸುಮ್ ಕಾರ್ಯಕ್ರಮಗಳು ಸೌರ ಶಕ್ತಿ ಉತ್ಪಾದನೆಯ ಸಮಾನ ಮತ್ತು ವಿಕೇಂದ್ರೀಕೃತ ಮಾದರಿಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.

ಆದರೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಅತ್ಯಂತ ಶಕ್ತಿಯುತ ಮಾರ್ಗವೆಂದರೆ ಅದು ವರ್ತನೆಗಳ ಬದಲಾವಣೆಯಾಗಿದೆ. ಜಗತ್ತನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಲು ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕು. ನಡವಳಿಕೆಯಲ್ಲಿನ ಬದಲಾವಣೆಯ ಈ ಮನೋಭಾವವು ನಮ್ಮ ಸಾಂಪ್ರದಾಯಿಕ ಅಭ್ಯಾಸದ ಪ್ರಮುಖ ಭಾಗವಾಗಿದೆ. ಇದು ನಮಗೆ ಸಹಾನುಭೂತಿಯಿಂದ ಬಳಕೆ ಮಾಡುವುದನ್ನು ಕಲಿಸುತ್ತದೆ. ಬುದ್ದಿಹೀನತೆಯನ್ನು ತೋರ್ಪಡಿಸುವ ಸಂಸ್ಕೃತಿ ನಮ್ಮ ನೀತಿಯ ಭಾಗವಲ್ಲ. ಆಧುನಿಕ ತಂತ್ರಗಳನ್ನು ನೀರಾವರಿಯಲ್ಲಿ ಬಳಸುತ್ತಿರುವ ಭಾರತೀಯ ರೈತರ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ಭೂಮಿಯ ಆರೋಗ್ಯ ಸುಧಾರಣಾ ವಲಯದಲ್ಲಿ ಅರಿವು ಹೆಚ್ಚಾಗುತ್ತಿದೆ ಮತ್ತು ಕೀಟ ನಾಶಕಗಳ ಬಳಕೆ ತಗ್ಗುತ್ತಿದೆ ಎಂದು ಹೇಳಿದರು.

ಜಗತ್ತು ಇಂದು ಸದೃಢತೆ ಮತ್ತು ಯೋಗಕ್ಷೇಮದತ್ತ ಕೇಂದ್ರೀಕೃತಗೊಂಡಿದೆ. ಆರೋಗ್ಯಪೂರ್ಣ ಮತ್ತು ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಜಾಗತಿಕ ಬದಲಾವಣೆಯನ್ನು ನಮ್ಮ ಮಸಾಲೆ ಮತ್ತು ಆಯುರ್ವೇದ ಉತ್ಪನ್ನಗಳ ಮೂಲಕ ಚಾಲನೆಗೊಳಿಸಬಹುದು. ಭಾರತದ 27 ಪಟ್ಟಣಗಳಲ್ಲಿ ಮೆಟ್ರೋ ಸಂಪರ್ಕಜಾಲವನ್ನು ವಿಸ್ತರಿಸಲಾಗುತ್ತಿದೆ ಮತ್ತು ನಗರಗಳಲ್ಲಿ ಪರಿಸರ ಸ್ನೇಹಿ ಸಂಚಾರಿ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ದೊಡ್ಡಮಟ್ಟದ ವರ್ತನೆಗಳ ಬದಲಾವಣೆಯಿಂದ ಸಾರ್ವಜನಿಕ ಸಹಭಾಗಿತ್ವದ ಮೂಲಕ ಕೈಗೆಟುಕುವ, ನಾವೀನ್ಯತೆಯ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದರು. ಜನತೆ ಎಲ್.ಇ.ಡಿ ಬಲ್ಪ್ ಗಳನ್ನು ಒಪ್ಪಿಕೊಂಡಿರುವ ಉದಾಹರಣೆಯನ್ನು ನೀಡಿದ ಅವರು, ಸಬ್ಸಿಡಿ ಬಿಟ್ಟುಕೊಡುವ ಆಂದೋಲನ, ಎಲ್.ಪಿ.ಜಿ ಬಳಕೆ ಪ್ರಮಾಣ ಹೆಚ್ಚಳ, ಕೈಗೆಟಕುವಂತೆ ಅಭಿವೃದ್ಧಿಯಾಗುತ್ತಿರುವ ಸಾರಿಗೆ ಚಟುವಟಿಕೆಗಳನ್ನು ಪ್ರಧಾನಮಂತ್ರಿಯವರು ಪಟ್ಟಿಮಾಡಿದರು. ಭಾರತದಾದ್ಯಂತ ಎಥನಾಲ್ ಅನ್ನು ಸ್ವೀಕರಿಸುತ್ತಿರುವ ಬೆಳವಣಿಗೆಯ ಬಗ್ಗೆಯೂ ಅವರು ಸಂತಸ ವ್ಯಕ್ತಪಡಿಸಿದರು.

ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಅರಣ್ಯ ಪ್ರದೇಶ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ನೀರಿನ ಕೋಳಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇವು ಸಕಾರಾತ್ಮಕ ವರ್ತನೆಯ ಬದಲಾವಣೆಗಳ ಉತ್ತಮ ಸೂಚಕಗಳು ಎಂದು ಉಲ್ಲೇಖಿಸಿದರು.

ನಂಬಿಕೆ ಕುರಿತ ಮಹಾತ್ಮಾ ಗಾಂಧೀಜಿ ಅವರ ತತ್ವಗಳ ಬಗ್ಗೆ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ನಂಬಿಕೆಯ ತಿರುಳಿನಲ್ಲಿ ಸಾಮೂಹಿಕತೆ, ಸಹಾನುಭೂತಿ ಮತ್ತು ಜವಾಬ್ದಾರಿತನವಿದೆ. ನಂಬಿಕೆ ಎಂದರೆ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವುದಾಗಿದೆ ಎಂದು ಪ್ರತಿಪಾದಿಸಿದರು.

ಅಂತಿಮವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ ಈಗ ತಾರ್ಕಿಕ ಮತ್ತು ಪರಿಸರ ದೃಷ್ಟಿಯಿಂದ ಯೋಚಿಸುವ ಸಮಯ ಬಂದಿದೆ. ಇದೆಲ್ಲದರ ನಂತರವೂ ಇದು ತಮ್ಮ ಹಾಗೂ ನಿಮ್ಮ ಬಗ್ಗೆ ಅಲ್ಲ. ಇದು ನಮ್ಮ ಗ್ರಹದ ಭವಿಷ್ಯದ ಬಗ್ಗೆ. ನಮ್ಮ ಮುಂಬರುವ ಪೀಳಿಗೆಗೆ ನಾವು ಋಣಿಯಾಗಿದ್ದೇವೆ.“ ಎಂದು ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
How India's digital public infrastructure can push inclusive global growth

Media Coverage

How India's digital public infrastructure can push inclusive global growth
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಎಪ್ರಿಲ್ 2024
April 24, 2024

India’s Growing Economy Under the Leadership of PM Modi