ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಎಲ್ಲಾ ಭಕ್ತರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು,
"ಇಂದು, ನವರಾತ್ರಿಯ ಶುಭ ಸಮಯದಲ್ಲಿ, ದೇವಿಯು ತನ್ನ ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ." ಎಂದು ಆಶಯ ವ್ಯಕ್ತಪಡಿಸಿ ಕನ್ನಡದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿಯವರು ಹಾಡಿರುವ ಕಮಲದ ಮೊಗದೊಳೆ ಭಕ್ತಿ ಗೀತೆಯನ್ನು ಹಂಚಿಕೊಂಡಿದ್ದಾರೆ.
https://youtu.be/bVYmbY3p_7c?si=xMGZp3ilctrILkrz”
नवरात्रि में आज देवी मां से करबद्ध प्रार्थना है कि वे अपने सभी भक्तों को सुख-समृद्धि और सौभाग्य का आशीर्वाद दें। उनके ममतामयी स्नेह से हर किसी के जीवन में नई ऊर्जा और उमंग का संचार हो।https://t.co/BQKCXNN9rg
— Narendra Modi (@narendramodi) September 26, 2025


