ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವನಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಇಂದು ಶ್ಲಾಘಿಸಿದ್ದಾರೆ. ಪರಿಸರದ ಬಗ್ಗೆ ನಾಗರಿಕರಲ್ಲಿ ಜವಾಬ್ದಾರಿ ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ವಿವರಿಸಿದ್ದಾರೆ.
ನ್ಯಾಯಾಧೀಶರ ಪಾಲ್ಗೊಳ್ಳುವಿಕೆಯು ತಾಯಂದಿರಿಗೆ ಗೌರವ ಸಲ್ಲಿಸಲು ಜನರು ಸಸಿ ನೆಡುವುದನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ರಾಷ್ಟ್ರವ್ಯಾಪಿ ಉಪಕ್ರಮವಾದ “ಏಕ್ ಪೆಡ್ ಮಾ ಕೆ ನಾಮ್” ಗೆ ಹೊಸ ವೇಗವನ್ನು ನೀಡಲಿದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ-ಎನ್.ಸಿ.ಟಿ ಸಚಿವರಾದ ಶ್ರೀ ಮಂಜಿಂದರ್ ಸಿಂಗ್ ಸಿರ್ಸಾ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ವನಮಹೋತ್ಸವ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರ ಭಾಗವಹಿಸುವಿಕೆ ಎಲ್ಲರಿಗೂ ಪ್ರೇರಣೆ ನೀಡಲಿದೆ. ಇದು 'ತಾಯಿಯ ಹೆಸರಿನಲ್ಲಿ ಒಂದು ಸಸಿ (ಏಕ್ ಪೇಡ್ ಮಾ ಕೆ ನಾಮ್)’ ಅಭಿಯಾನಕ್ಕೆ ಹೊಸ ಹುರುಪು ನೀಡಲಿದೆ ಎಂದು ನನಗೆ ವಿಶ್ವಾಸವಿದೆ.”
#EkPedMaaKeNaam”
सर्वोच्च न्यायालय के माननीय न्यायाधीशों की गरिमामयी उपस्थित में आज वन महोत्सव का कार्यक्रम संपन्न हुआ।
— Manjinder Singh Sirsa (@mssirsa) July 19, 2025
कार्यक्रम में चीफ जस्टिस ऑफ इंडिया, माननीय जस्टिस भूषण रामकृष्ण गंवई जी, जस्टिस सूर्यकांत शर्मा जी, जस्टिस विक्रमनाथ जी, जस्टिस एम.एम. सुंदरेश जी, जस्टिस पी. श्री. नरसिम्हा… pic.twitter.com/uRCXVoHxxR


