ಎಲ್ಲರ ಸಲಹೆ ಆಲಿಸಿ, ಆದರೆ ನೀವು ಬಯಸಿದಾಗ ಮಾತ್ರ ನಿಮ್ಮ ಮಾದರಿ ಅಳವಡಿಸಿಕೊಳ್ಳಿ: ಪ್ರಧಾನಮಂತ್ರಿ
ಕುತೂಹಲ ಸೃಷ್ಟಿಸಿಕೊಳ್ಳಲು ಮತ್ತು ತಿಳಿವಳಿಕೆ ಸುಧಾರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿ ತಿಳಿಸಿ; ಶಿಕ್ಷಕರಿಗೆ ಪ್ರಧಾನಮಂತ್ರಿ ಸಲಹೆ
ಗುರಿಗಳು ತಲುಪಬಹುದಾದ ವ್ಯಾಪ್ತಿಯಲ್ಲಿರಬೇಕು, ಆದರೆ ಸುಲಭವಾಗಿ ಗುರಿ ಸಾಧಿಸುವಂತಾಗಬಾರದು - ಗುರಿಯಂತೆ ಕಾರ್ಯ ನಿರ್ವಹಿಸಬೇಕು: ಪ್ರಧಾನಮಂತ್ರಿ
ಮನಸ್ಸಿಗೆ ಕೆಲಸ ಕೊಡಿ, ನಂತರ ಮನಸ್ಸನ್ನು ಸಂಪರ್ಕಿಸಿ, ನಂತರ ಅಧ್ಯಯನ ವಿಷಯಗಳನ್ನು ಇರಿಸಿಕೊಳ್ಳಿ, ಇದು ನಿಮಗೆ ಯಶಸ್ವಿಯಾಗಲು ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಅಧ್ಯಯನ, ಕೌಶಲ್ಯ, ವಿಶ್ರಾಂತಿ ಮತ್ತು ಹವ್ಯಾಸಗಳನ್ನು ಸಮತೋಲನಗೊಳಿಸುವುದು ಬೆಳವಣಿಗೆಯ ಮೂಲಾಧಾರವಾಗಿದೆ: ಪ್ರಧಾನಮಂತ್ರಿ
ಪುಸ್ತಕಗಳು ಜ್ಞಾನ ನೀಡುತ್ತವೆ, ಆದರೆ ಅಭ್ಯಾಸ ಮಾತ್ರ ನಿಮ್ಮನ್ನು ವೃತ್ತಿಪರವಾಗಿ ಕೌಶಲ್ಯಪೂರ್ಣರನ್ನಾಗಿ ಮಾಡುತ್ತದೆ: ಪ್ರಧಾನಮಂತ್ರಿ
ಭೂತಕಾಲದ ಬಗ್ಗೆ ಯೋಚಿಸುತ್ತಾ ಸಮಯ ವ್ಯರ್ಥ ಮಾಡಬೇಡಿ, ಮುಂದಿನ ಬದುಕಿನ ಬಗ್ಗೆ ಯೋಚಿಸಿ: ಪ್ರಧಾನಮಂತ್ರಿ
ಶಿಕ್ಷಣವು ಪರೀಕ್ಷೆಗಳಿಗೆ ಮಾತ್ರ ಸೀಮಿತವಲ್ಲ, ಜೀವನಕ್ಕಾಗಿ. ಆದರೆ ಪರೀಕ್ಷೆಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಇವೆ: ಪ್ರಧಾನಮಂತ್ರಿ
ಆಶಯಗಳು ಮಾತ್ರ ಇರಬಾರದು, ಆದರೆ ಅವು ಸಾಧಿಸಲು ಇರಬೇಕು: ಪ್ರಧಾನಮಂತ್ರಿ
ವರ್ತಮಾನವು ದೇವರ ಶ್ರೇಷ್ಠ 'ವರ್ತಮಾನ' - ಇಲ್ಲಿ ಮತ್ತು ಈಗ ಬದುಕುವುದೇ ಆಗಿದೆ: ಪ್ರಧಾನಮಂತ್ರಿ
ನೀವು ಒಂದು ಕ್ಷಣ ಹೆಚ್ಚು ತೊಡಗಿಸಿಕೊಂಡಷ್ಟೂ, ನೀವು ಅದನ್ನು ಹೆಚ್ಚು ಸಮಯ ನೆನಪಿಸಿಕೊಳ್ಳುತ್ತೀರಿ: ಪ್ರಧಾನಮಂತ್ರಿ
ಸಹಕಾರಿ ಕಲಿಕೆಯು ಎಲ್ಲರ ಸುಧಾರಣೆಗೆ ಸಹಾಯ ಮಾಡುತ್ತದೆ: ಪ್ರಧಾನಮಂತ್ರಿ
ಪರಿಷ್ಕರಣೆಗೆ ಒಳಗಾಗುತ್ತಿರಿ ಮತ್ತು ಬುದ್ಧಿವಂತರಾಗುತ್ತಾ ಸಾಗಿ: ಪ್ರಧಾನಮಂತ್ರಿ
ಶಾಲೆಯಲ್ಲಿ ನಿಮ್ಮ ಅಡಿಪಾಯ ಬಲಪಡಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳು ಸಮಯಕ್ಕೆ ಅನುಗುಣವಾಗಿ ಇರುತ್ತವೆ: ಪ್ರಧಾನಮಂತ್ರಿ
ಮಕ್ಕಳು ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ಅರಳಲು ಅವಕಾಶ ಮಾಡಿಕೊಡಿ: ಪೋಷಕರಿಗೆ ಪ್ರಧಾನಮಂತ್ರಿ ಸಲಹೆ
ನಿಮ್ಮ ಹವ್ಯಾಸಗಳನ್ನು ಪ್ರಾಯೋಗಿಕ ಉತ್ಪನ್ನಗಳಾಗಿ ಪರಿವರ್ತಿಸಿ ಮತ್ತು ಅವುಗಳನ್ನು ಉಚಿತವಾಗಿ ಹಂಚಿಕೊಳ್ಳಿ, ಪ್ರತಿಕ್ರಿಯೆಗಳು ಹೊಸ ಆಲೋಚನೆಗಳು ಮತ್ತು ಯಶಸ್ಸನ್ನು ಉತ್ತೇಜಿಸುತ್ತದೆ: ಪ್ರಧಾನಮಂತ್ರಿ
ನಿಮ್ಮನ್ನು ನೀವೆ ಅನ್ವೇಷಿಸಿಕೊಳ್ಳಿ, ಜೀವನವು ನೀಡುವ ಎಲ್ಲವನ್ನೂ ಅನುಭವಿಸುತ್ತಾ ಸಾಗಿ: ಪ್ರಧಾನಮಂತ್ರಿ
ಪರೀಕ್ಷೆಗಳು ಹಬ್ಬಗಳಂತೆ, ಅವುಗಳನ್ನು ಆಚರಿಸಿ: ಪ್ರಧಾನಮಂತ್ರಿ
ನಿಜವಾದ ಆತ್ಮವಿಶ್ವಾಸವು ಆಂತರಿಕ ಸತ್ಯದಿಂದ ಬರುತ್ತದೆ, ನೀವು ಯಾರೆಂಬ ನಿಜ ತಿಳಿಯುತ್ತದೆ: ಪ್ರಧಾನಮಂತ್ರಿ
ಆರಾಮ ವಲಯಗಳು ಜೀವನವನ್ನು ರೂಪಿಸುವುದಿಲ್ಲ - ನಿಮ್ಮ ಜೀವನ ವಿಧಾನವೇ ರೂಪಿಸುತ್ತದೆ: ಪ್ರಧಾನಮಂತ್ರಿ
ಕನಸನ್ನೇ ಕಾಣದಿರುವುದು ಅಪರಾಧ - ಯಾವಾಗಲೂ ಕನಸು ಕಾಣಿರಿ: ಪ್ರಧಾನಮಂತ್ರಿ
ನಿಮ್ಮ ಸ್ವಂತ ಆಧಾರಸ್ತಂಭವಾಗಿರಿ, ನಿಮ್ಮ ಸಾಮರ್ಥ್ಯಗಳನ್ನು ಅನುಸರಿಸಿ: ಪ್ರಧಾನಮಂತ್ರಿ
ದೊಡ್ಡ ಕನಸು ಕಾಣಿರಿ, ಭಯ ಕಡಿಮೆ ಮಾಡಿ - ಜೀವನ ಚರಿತ್ರೆಗಳನ್ನು ಓದಿ: ಪ್ರಧಾನಮಂತ್ರಿ
ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರಮುಖ ಆದ್ಯತೆ ಮತ್ತು ನಮ್ಮ ಕರ್ತವ್ಯವೂ ಆಗಿದೆ: ಪ್ರಧಾನಮಂತ್ರಿ
ತಂತ್ರಜ್ಞಾನವು ಒಂದು ಉತ್ತಮ ಶಿಕ್ಷಕ, ಅದನ್ನು ಅಳವಡಿಸಿಕೊಳ್ಳಿ, ಎಐ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
ಎಐ ಅನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಿ, ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಿ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು 9ನೇ ಆವೃತ್ತಿಯ ಪರೀಕ್ಷಾ ಪೆ ಚರ್ಚಾ(ಪಿಪಿಸಿ) ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಪರೀಕ್ಷಾ ಯೋಧರೊಂದಿಗೆ ಅನೌಪಚಾರಿಕ ಸಂವಾದ ನಡೆಸಿದರು.

ನಿಮ್ಮ ಶೈಲಿ, ನಿಮ್ಮ ವೇಗ

ಪೋಷಕರು ವಿದ್ಯಾರ್ಥಿಗಳ ಬಗ್ಗೆ ಚಿಂತಿಸುತ್ತಾರೆ, ಶಿಕ್ಷಕರು ಅವರನ್ನು ಬೆಂಬಲಿಸುತ್ತಾರೆ, ಶಿಕ್ಷಕರು ಒಂದು ಅಧ್ಯಯನ ಮಾದರಿ ಸೂಚಿಸಿದಾಗ, ಪೋಷಕರು ಇನ್ನೊಂದನ್ನು ಒತ್ತಾಯಿಸುತ್ತಾರೆ. ಆಗ ವಿದ್ಯಾರ್ಥಿಗಳು ವಿಭಿನ್ನ ಪ್ರವೃತ್ತಿ ಅನುಸರಿಸಿದಾಗ ಸಮಸ್ಯೆ ಉದ್ಭವಿಸುತ್ತದೆ, ಇದು ಯಾವ ಮಾದರಿ ಸರಿಯಾಗಿದೆ ಎಂಬುದರ ಬಗ್ಗೆ ಅವರನ್ನು ಗೊಂದಲಗೊಳಿಸುತ್ತದೆ ಎಂದು ಗುಜರಾತ್ ವಿದ್ಯಾರ್ಥಿಯೊಬ್ಬರು ಕೇಳಿದಾಗ, ಇದು ಜೀವನದುದ್ದಕ್ಕೂ ಮುಂದುವರಿಯುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು, ಮನೆಯ ಒಡಹುಟ್ಟಿದವರು ವಿಭಿನ್ನ ಆಹಾರ ಪದ್ಧತಿ ಹೊಂದಿರುತ್ತಾರೆ. ಕೆಲವರು ತರಕಾರಿಗಳಿಂದ ಪ್ರಾರಂಭಿಸಿ, ಕೆಲವರು ಬೇಳೆಯೊಂದಿಗೆ, ಕೆಲವರು ಎಲ್ಲವನ್ನೂ ಒಟ್ಟಿಗೆ ಬೆರೆಸುತ್ತಾರೆ. ಅಂದರೆ ಪ್ರತಿಯೊಬ್ಬರೂ ತಮ್ಮದೇ ಆದ ರುಚಿಯಲ್ಲಿ ತಿನ್ನುತ್ತಾರೆ. ಹಾಗಾಗಿ, ಆನಂದವು ಒಬ್ಬರ ಸ್ವಂತ ಮಾದರಿ ಅನುಸರಿಸುವುದರಿಂದ ಬರುತ್ತದೆ. ಕೆಲವರು ರಾತ್ರಿಯಲ್ಲಿ ಅಧ್ಯಯನ ಮಾಡಲು ಬಯಸುತ್ತಾರೆ, ಇತರರು ಬೆಳಗ್ಗೆ ಬೇಗನೆ ಎದ್ದು ಅಧ್ಯಯನ ಮಾಡಲು ಬಯಸುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಲಯ ಹೊಂದಿರುತ್ತಾರೆ ಎಂದು ಮೋದಿ ವಿವರಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಬೆಳಗ್ಗೆ ಅಧ್ಯಯನ ಮಾಡುವುದಾಗಿ ಹೇಳುತ್ತಾರೆ, ಆದರೆ ನಂತರ ಅದನ್ನು ತಪ್ಪಿಸುತ್ತಾರೆ, ಈ ರಾತಿಯ ಅಪ್ರಾಮಾಣಿಕತೆ ಇರಬಾರದು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳು ತಮ್ಮದೇ ಆದ ಮಾದರಿ ನಂಬಬೇಕು, ಸಲಹೆಗಳನ್ನು ಎಚ್ಚರಿಕೆಯಿಂದ ಆಲಿಸಬೇಕು, ವೈಯಕ್ತಿಕ ಅನುಭವದ ಮೂಲಕ ಮಾತ್ರ ಸುಧಾರಣೆಗಳನ್ನು ಸೇರಿಸಬೇಕು, ಯಾರೋ ಹೇಳುತ್ತಾರೆ ಎಂಬ ಕಾರಣಕ್ಕಾಗಿ ಅಲ್ಲ. ಪರೀಕ್ಷಾ ಪೆ ಚರ್ಚಾ ಪ್ರಾರಂಭಿಸಿದಾಗ ಒಂದು ಮಾದರಿ ಇತ್ತು, ಆದರೆ ಕಾಲಾನಂತರದಲ್ಲಿ ಅದು ಸುಧಾರಣೆ ಕಂಡಿದೆ. ವಿವಿಧ ರಾಜ್ಯಗಳಲ್ಲಿ ಕಲಾಪಗಳನ್ನು ನಡೆಸಲಾಯಿತು. ಮೂಲವನ್ನು ಉಳಿಸಿಕೊಂಡು ಸ್ವರೂಪವನ್ನು ಬದಲಾಯಿಸಲಾಯಿತು ಎಂದು ಪ್ರಧಾನಿ ಹೇಳಿದರು. ಪ್ರಧಾನ ಮಂತ್ರಿ ಅವರ ಸ್ವಭಾವ ತುಂಬಾ ಸ್ನೇಹಪರವಾಗಿತ್ತು, ಅವರು ಮಕ್ಕಳೊಂದಿಗೆ ಸುಲಭವಾಗಿ ಬೆರೆತರು ಎಂದು ವಿದ್ಯಾರ್ಥಿಗಳು ಗಮನಿಸಿದರು, ಪ್ರತಿಯೊಬ್ಬರೂ ವಿಭಿನ್ನ ಮಾದರಿಗಳನ್ನು ಕೇಳಬೇಕು, ಪ್ರತಿಯೊಬ್ಬರಿಂದ ಉತ್ತಮ ಗುಣಗಳನ್ನು ಸ್ವೀಕರಿಸಬೇಕು, ತಮ್ಮದೇ ಆದ ನಿಲುವಿನ ಮೇಲೆ ಗಮನ ಹರಿಸಬೇಕು, ಕ್ರಮೇಣ ಅದನ್ನು ಬಲಪಡಿಸಿಕೊಳ್ಳಬೇಕು ಎಂದು ವಿವರಿಸಿದರು.

 

ಪ್ರಧಾನಮಂತ್ರಿ ಅವರೊಂದಿಗೆ ಸಂವಾದ ನಡೆಸಿದ ಮತ್ತೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿಗಳು ಶಾಲೆ ಅಥವಾ ಶಿಕ್ಷಕರ ವೇಗಕ್ಕೆ ಹೊಂದಿಕೆಯಾಗುವುದಿಲ್ಲ,  ತಪ್ಪಿದ ಪಾಠಗಳನ್ನು ಸರಿದೂಗಿಸಲು ಪ್ರಯತ್ನಿಸುವಾಗ, ಅವರು ಮುಂದಿನ ಅಧ್ಯಾಯಗಳ ಹಾದಿ ತಪ್ಪಿಸುತ್ತಾ ಹಿಂದುಳಿಯುತ್ತಾರೆ ಎಂದು ಕೇಳಿದರು. ಶಿಕ್ಷಕರು ತಮ್ಮ ವೇಗವನ್ನು ವಿದ್ಯಾರ್ಥಿಗಳಿಗಿಂತ ಒಂದು ಹೆಜ್ಜೆ ಮುಂದೆ ಇಡಬೇಕು, ಹೆಚ್ಚು ಅಲ್ಲ, ಅದು ಗುರಿ ತಲುಪಬಹುದಾದಲ್ಲಿ ಇರಬೇಕು, ಆದರೆ ಸುಲಭವಾಗಿ ಗುರಿ ಸಾಧಿಸುವಂತಿರಬಾರದು ಎಂದು ಶ್ರೀ ಮೋದಿ ಹೇಳಿದರು. ವಿದ್ಯಾರ್ಥಿಯು ಪರೀಕ್ಷಾ ವಾರಿಯರ್ ಮಂತ್ರ 26 ಅನ್ನು ನೆನಪಿಸಿಕೊಂಡಾಗ, "ಗುರಿ ತಲುಪುವುದರ ಒಳಗೆ ಇರಬೇಕು, ಆದರೆ ಸುಲಭವಾಗಿ ಗುರಿ ಸಾಧಿಸಬಾರದು" ಎಂದು ಪ್ರಧಾನಿ ಅವರು ಆ ಸ್ಮರಣೆಯನ್ನು ಶ್ಲಾಘಿಸಿದರು. ಶಿಕ್ಷಕರು 50 ಹೆಜ್ಜೆ ಮುಂದೆ ಹೋದರೆ, ವಿದ್ಯಾರ್ಥಿಗಳು ಬಿಟ್ಟುಕೊಡುತ್ತಾರೆ, ಆದರೆ ರೈತ ಹೊಲ ಉಳುಮೆ ಮಾಡಿದಂತೆ, ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಉಳುಮೆ ಮಾಡಬೇಕು. ಪ್ರತಿ ವಾರ ಕಲಿಸಬೇಕಾದ ಅಧ್ಯಾಯಗಳನ್ನು ಶಿಕ್ಷಕರು ಮುಂಚಿತವಾಗಿ ಘೋಷಿಸಬೇಕು, ಇದರಿಂದ ವಿದ್ಯಾರ್ಥಿಗಳು ಪಾಠದ ಮೊದಲು ಆನ್ ‌ಲೈನ್ ‌ನಲ್ಲಿ ಓದಲು, ಕೇಳಲು ಅಥವಾ ಹುಡುಕಲು ಪ್ರಾರಂಭಿಸಬಹುದು. ನಿಜವಾದ ಬೋಧನೆ ನಡೆದಾಗ, ಕುತೂಹಲ ಉಂಟಾಗುತ್ತದೆ, ತಿಳಿವಳಿಕೆ ಆಳವಾಗುತ್ತದೆ ಮತ್ತು ಗಮನ ಸುಧಾರಿಸುತ್ತದೆ ಎಂದು ಅವರು ಹೇಳಿದರು. ಒಂದು ಅಧ್ಯಾಯ ತುಂಬಾ ಆಸಕ್ತಿದಾಯಕವಾಗಿದ್ದರೆ, ವಿದ್ಯಾರ್ಥಿಗಳು ಹೆಚ್ಚಿನದನ್ನು ಅನ್ವೇಷಿಸಲು ಬಯಸುತ್ತಾರೆ, ಪರಿಷ್ಕರಣೆಯನ್ನು ಬಲಪಡಿಸುತ್ತಾರೆ. ಇದು ಸರಳ ವಿಧಾನ ಎಂದು ಪ್ರಧಾನಿ ಹೇಳಿದರು. ಶಿಕ್ಷಕರ ವೇಗದ ಸಮಸ್ಯೆ ಎದುರಾಗುತ್ತಿದೆಯೇ ಎಂದು ಕೇಳಿದರು. ವಿದ್ಯಾರ್ಥಿನಿ ಹೌದು ಎಂದು ಉತ್ತರಿಸಿದಾಗ, ಶ್ರೀ ಮೋದಿ ಅದನ್ನು ಸರಿಪಡಿಸಿದರು, ಏಕೆಂದರೆ ವಿದ್ಯಾರ್ಥಿಗಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಸಾಗಿದಾಗ ಇನ್ನು ಹಿಂದುಳಿದಿದ್ದಾರೆ ಎಂದು ಭಾವಿಸುವುದಿಲ್ಲ. ಅವರು "ಮನಸ್ಸನ್ನು ಉಳುಮೆ ಮಾಡಿ, ನಂತರ ಮನಸ್ಸನ್ನು ಸಂಪರ್ಕಿಸಿ, ಮತ್ತು ನಂತರ ಅಧ್ಯಯನ ವಿಷಯಗಳನ್ನು ಇರಿಸಿಕೊಳ್ಳಬೇಕು. ನೀವು ಯಾವಾಗಲೂ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಕಾಣುವಿರಿ" ಎಂದರು. ಎಲ್ಲರಿಗೂ ಪ್ರಧಾನ ಮಂತ್ರಿಯೊಂದಿಗೆ ಮುಖಾಮುಖಿ ಕುಳಿತುಕೊಳ್ಳಲು, ಪ್ರಶ್ನೆಗಳನ್ನು ಕೇಳಲು ಮತ್ತು ಸಂಭಾಷಣೆಗಳನ್ನು ಹಂಚಿಕೊಳ್ಳಲು ಅವಕಾಶ ಸಿಗುವುದಿಲ್ಲ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು 2 ಹೆಜ್ಜೆ ಹಿಂದೆ ಬೀಳುವ ಬದಲು ಶಿಕ್ಷಕರಿಗಿಂತ 2 ಹೆಜ್ಜೆ ಮುಂದೆ ಇರುವಂತೆ ಸಲಹೆ ನೀಡಿದರು, ಆಗ ಅವರು ಎಂದಿಗೂ ಹಿಂದೆ ಬೀಳುವುದಿಲ್ಲ ಎಂದು ಖಚಿತಪಡಿಸಿಕೊಂಡರು.

ಒಂದು ಸಂಗೀತ ಕ್ಷಣ

ಸಿಕ್ಕಿಂನ ವಿದ್ಯಾರ್ಥಿನಿಯೊಬ್ಬರು ಹಿಂದಿ, ನೇಪಾಳಿ ಮತ್ತು ಬಂಗಾಳಿ 3 ಭಾಷೆಗಳಲ್ಲಿ 'ಹಮಾರ ಭಾರತ ಭೂಮಿ' ಎಂಬ ದೇಶಭಕ್ತಿ ಗೀತೆ ರಚಿಸಿದ್ದೇನೆ ಎಂದು ತಿಳಿಸಿದರು, ಇದು ಅವರಿಗೆ ಕವನ ರಚನೆಯನ್ನು ಆನಂದಿಸುತ್ತಿದೆಯೇ ಎಂದು ಕೇಳಿದರು. ಅವರ ಒಪ್ಪಿಗೆ ನಂತರ, ಹಾಡುವಂತೆ ಪ್ರೋತ್ಸಾಹಿಸಿದರು. ಆಕೆಯ ಹಾಡನ್ನು ಶ್ಲಾಘಿಸಿ, ಆಕೆ ರಾಷ್ಟ್ರದ ಏಕತೆಯ ಬಗ್ಗೆ ಹೇಗೆ ಮಾತನಾಡಿದರು ಎಂಬುದನ್ನು ಗಮನಿಸಿದರು - ಏಕ ಭಾರತ, ಶ್ರೇಷ್ಠ ಭಾರತ. ನಂತರ ಶ್ರೀ ಮೋದಿ ಅವರು ಮತ್ತೊಬ್ಬ ವಿದ್ಯಾರ್ಥಿನಿ ಮಾನ್ಸಿ ಅವರನ್ನು ಹಾಡಲು ಕೇಳಿಕೊಂಡರು. ಮಾನ್ಸಿ ಅವರ ತಾಯಿ ಬರೆದ ಹಾಡನ್ನು ವಿದ್ಯಾರ್ಥಿಗಳಿಗೆ ಅರ್ಪಿಸಿದರು. ಪ್ರಧಾನಿ ಅವರನ್ನು ಶ್ಲಾಘಿಸಿ, ನಿಮ್ಮ ತಾಯಿಗೆ ತಮ್ಮ ಅಭಿನಂದನೆಗಳನ್ನು ತಿಳಿಸುವಂತೆ ಕೇಳಿಕೊಂಡರು. ವಿದ್ಯಾರ್ಥಿನಿ ಫೇಸ್ ‌ಬುಕ್ ‌ನಲ್ಲಿ 1.5 ಲಕ್ಷ ಅನುಯಾಯಿಗಳೊಂದಿಗೆ ಯೂಟ್ಯೂಬ್ ಚಾನೆಲ್, ಫೇಸ್ ‌ಬುಕ್ ಪುಟ ಮತ್ತು ಇನ್ ಸ್ಟಾಗ್ರಾಂ ಖಾತೆ ನಡೆಸುತ್ತಿರುವುದಾಗಿ ಹಂಚಿಕೊಂಡರು. ಅದಕ್ಕೆ ಪ್ರಧಾನಿ ಅವರು  ಆಶ್ಚರ್ಯ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು, ಇಂತಹ ಪ್ರತಿಭಾವಂತ ಯುವಕರನ್ನು ಭೇಟಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

 

ನಂತರ ಶ್ರೀ ಮೋದಿ ಅವರು ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು, ಅಸ್ಸಾಂನ ಗಮೋಸಾವನ್ನು ತಮ್ಮ ಅತ್ಯಂತ ಪ್ರೀತಿಯ ಆಸ್ತಿ ಎಂದು ಬಣ್ಣಿಸಿದರು. ಗಮೋಸಾ ಅಸ್ಸಾಂ ಮತ್ತು ಈಶಾನ್ಯದಲ್ಲಿ ಮಹಿಳಾ ಸಬಲೀಕರಣದ ಸಂಕೇತವಾಗಿದೆ, ಇದನ್ನು ಪ್ರದೇಶದ ಮಹಿಳೆಯರು ಮನೆಯಲ್ಲೇ ತಯಾರಿಸುತ್ತಾರೆ, ಇದು ಅವರ ಶಕ್ತಿ ಮತ್ತು ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಗೌರವದ ಸಂಕೇತವಾಗಿ ಮಕ್ಕಳಿಗೆ ಗಮೋಸಾವನ್ನು ಉಡುಗೊರೆಯಾಗಿ ನೀಡುವುದು ತಮ್ಮ ಹೃತ್ಪೂರ್ವಕ ಬಯಕೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಉದ್ದೇಶಪೂರ್ವಕ ತಯಾರಿ

ನಂತರ ವಿದ್ಯಾರ್ಥಿ ಸಬಾವತ್ ವೆಂಕಟೇಶ್ ಅವರು, ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ಮತ್ತು ಭಯವನ್ನು ಗಮನಿಸಿ, ಕೌಶಲ್ಯ ಅಥವಾ ಅಂಕಗಳು ಯಾವುದು ಹೆಚ್ಚು ಮುಖ್ಯ ಎಂದು ಪ್ರಧಾನಿ ಅವರನ್ನು ಕೇಳಿದರು. ತಿನ್ನುವುದು ಮತ್ತು ಮಲಗುವುದು, ಅಧ್ಯಯನ ಮತ್ತು ಆಟವಾಡುವುದು ಅಥವಾ ಕೌಶಲ್ಯ ಮತ್ತು ಅಂಕಗಳ ನಡುವೆ ಸಮತೋಲನ ಅತ್ಯಗತ್ಯ ಎಂದು ಪ್ರಧಾನಿ ಹೇಳಿದರು. ಒಂದು ದಿಕ್ಕಿನಲ್ಲಿ ತುಂಬಾ ದೂರ ವಾಲುವುದು ಅಸಮತೋಲನಕ್ಕೆ ಕಾರಣವಾಗುತ್ತದೆ, ಆದರೆ ಸರಿಯಾದ ಸಮತೋಲನವು ಸ್ಥಿರತೆಯನ್ನು ಖಚಿತಪಡಿಸುತ್ತದೆ. ಕೌಶಲ್ಯಗಳು 2 ವಿಧಗಳಾಗಿವೆ - ಜೀವನ ಕೌಶಲ್ಯಗಳು ಮತ್ತು ವೃತ್ತಿಪರ ಕೌಶಲ್ಯಗಳು - ಆದರೆ ಎರಡೂ ಸಮಾನವಾಗಿ ಮುಖ್ಯ ಎಂದು ಅವರು ವಿವರಿಸಿದರು. ಜ್ಞಾನ, ವೀಕ್ಷಣೆ ಮತ್ತು ಅಧ್ಯಯನವಿಲ್ಲದೆ ಯಾವುದೇ ಕೌಶಲ್ಯವು ಬೆಳೆಯುವುದಿಲ್ಲ, ಕೌಶಲ್ಯವು ಜ್ಞಾನದಿಂದ ಪ್ರಾರಂಭವಾಗುತ್ತದೆ ಎಂದು ಪ್ರಧಾನಿ ಹೇಳಿದರು.

 

ಶ್ರೀ ಮೋದಿ ಅವರು ಉದಾಹರಣೆಗಳೊಂದಿಗೆ ವಿವರಿಸಿದರು: ಜೀವನ ಕೌಶಲ್ಯಗಳಿಲ್ಲದೆ, ಅಡುಗೆ ಅಥವಾ ರೈಲು ನಿಲ್ದಾಣದಲ್ಲಿ ಟಿಕೆಟ್ ಖರೀದಿಸುವಂತಹ ದೈನಂದಿನ ಕೆಲಸಗಳಲ್ಲಿಯೂ ಸಹ ಒಬ್ಬರು ಕಷ್ಟಪಡಬಹುದು. ಶಿಸ್ತು, ಆತ್ಮವಿಶ್ವಾಸ ಮತ್ತು ಹೊಂದಿಕೊಳ್ಳುವಿಕೆ ಸೇರಿದಂತೆ ಜೀವನ ಕೌಶಲ್ಯಗಳನ್ನು ಸಂಪೂರ್ಣವಾಗಿ ಸಾಧಿಸಬೇಕು. ವೃತ್ತಿಪರ ಕೌಶಲ್ಯಗಳ ಕುರಿತು, ವೈದ್ಯರು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ನವೀಕರಿಸಬೇಕು. ಏಕೆಂದರೆ ಪುಸ್ತಕಗಳು ಮಾತ್ರ ಒಬ್ಬರನ್ನು ಹೃದಯ ತಜ್ಞರನ್ನಾಗಿ ಮಾಡಲು ಸಾಧ್ಯವಿಲ್ಲ - ನಿಜವಾದ ಕೌಶಲ್ಯವು ರೋಗಿಗಳೊಂದಿಗೆ ಕೆಲಸ ಮಾಡುವುದರಿಂದ ಬರುತ್ತದೆ. ಅದೇ ರೀತಿ, ಸಾಂವಿಧಾನಿಕ ನಿಬಂಧನೆಗಳನ್ನು ತಿಳಿದುಕೊಳ್ಳುವುದನ್ನು ಮೀರಿ ನ್ಯಾಯಾಲಯದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ವಕೀಲರು ಹಿರಿಯ ವಕೀಲರ ಜತೆ ಅಭ್ಯಾಸ ಮಾಡಬೇಕು. ವೈದ್ಯಕೀಯ ಮತ್ತು ಇತರೆ ಕ್ಷೇತ್ರಗಳಲ್ಲಿನ ಪ್ರಗತಿಯು ನಿರಂತರ ನವೀಕರಣ ಬಯಸುತ್ತದೆ, ಆದ್ದರಿಂದ 40ನೇ ವಯಸ್ಸಿನಲ್ಲಿಯೂ ವೃತ್ತಿಪರ ಕೌಶಲ್ಯಗಳಿಗೆ ನಿರಂತರ ಕಲಿಕೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳುವಿಕೆ ಅಗತ್ಯ. ಶಿಕ್ಷಣ ಮತ್ತು ಕೌಶಲ್ಯ ಅವಳಿ ಸಹೋದರರಿದ್ದಂತೆ, ಅವು ಬೇರ್ಪಡಿಸಲಾಗದವು, ಕೌಶಲ್ಯವು ಜೀವನದಲ್ಲಿ ಅನಿವಾರ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಅಂಕಗಳನ್ನು ಮೀರಿ ಮತ್ತು ಮಾಧ್ಯಮವಾಗಿ ಶಿಕ್ಷಣ

ಇದಲ್ಲದೆ, ಮಣಿಪುರದ ಇಂಫಾಲ್‌ನ ಸೈನಿಕ್ ಶಾಲೆಯ ವಿದ್ಯಾರ್ಥಿಯೊಬ್ಬರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಅವರ ಜನ್ಮದಿನವು ಪ್ರಧಾನ ಮಂತ್ರಿ ಅವರ ಜನ್ಮದಿನಕ್ಕೆ ಹೊಂದಿಕೆಯಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ, ಕಳೆದ ವರ್ಷಗಳನ್ನು ಲೆಕ್ಕಿಸುವುದಲ್ಲ, ಆದರೆ ಉಳಿದಿರುವ ವರ್ಷಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು, ವಿದ್ಯಾರ್ಥಿಗಳು ಭೂತಕಾಲದ ಬಗ್ಗೆ ಯೋಚಿಸಲು ಸಮಯ ವ್ಯರ್ಥ ಮಾಡಬಾರದು, ಆದರೆ ಮುಂದೆ ಏನಿದೆ ಎಂದು ಯೋಚಿಸಬೇಕು ಎಂದು ಸಲಹೆ ನೀಡಿದರು.

ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಆಧರಿಸಿದ ಪರೀಕ್ಷಾ ತಯಾರಿ ಕಾರ್ಯತಂತ್ರಗಳ ಬಗ್ಗೆ ಕೇಳಿದಾಗ, ಪತ್ರಿಕೆಗಳು ಪಠ್ಯಕ್ರಮದ ಹೊರಗೆ ಇರುವುದಿಲ್ಲ, ಆದರೆ ಗಮನವು ಪುನರಾವರ್ತಿತ ಮಾದರಿಗಳಿಗೆ ಸೀಮಿತವಾಗಿರುವುದರಿಂದ ವಿದ್ಯಾರ್ಥಿಗಳು ಕಠಿಣವೆಂದು ಭಾವಿಸಿದಾಗ ವಿದ್ಯಾರ್ಥಿಗಳು ಹೆಚ್ಚಾಗಿ ಕಷ್ಟಪಡುತ್ತಾರೆ. ಈ ವಿಷಯವು ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೂ ಇತ್ತು, ಕೆಲವೊಮ್ಮೆ ಅಂಕಗಳನ್ನು ಮಾತ್ರ ಗುರಿಯಾಗಿಸಿಕೊಂಡು ಶಿಕ್ಷಕರು ಇದನ್ನು ಶಾಶ್ವತಗೊಳಿಸುತ್ತಾರೆ. ಉತ್ತಮ ಶಿಕ್ಷಕರು ಪೂರ್ಣ ಪಠ್ಯಕ್ರಮ ಒಳಗೊಳ್ಳುವ ಮೂಲಕ ಮತ್ತು ಜೀವನಕ್ಕೆ ಅದರ ಪ್ರಸ್ತುತತೆ ವಿವರಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತಾರೆ ಎಂದು ಶ್ರೀ ಮೋದಿ ಹೇಳಿದರು. ಕ್ರಿಕೆಟ್ ‌ನಲ್ಲಿ ಬೌಲರ್ ‌ನ ಉದಾಹರಣೆ ಬಳಸಿಕೊಂಡು, ಅವರು ಭುಜದ ಸ್ನಾಯುಗಳನ್ನು ಮಾತ್ರ ಬಲಪಡಿಸುವುದು ಸಾಕಾಗುವುದಿಲ್ಲ, ಒಬ್ಬರು ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಇಡೀ ದೇಹ ಮತ್ತು ಮನಸ್ಸನ್ನು ಬಲಪಡಿಸಬೇಕು, ಆಹಾರ ಪದ್ಧತಿಯನ್ನು ಹೊಂದಿಸಿಕೊಳ್ಳಬೇಕು, ಸರಿಯಾಗಿ ನಿದ್ರೆ ಮಾಡಬೇಕು. ಅದೇ ರೀತಿ, ಶಿಕ್ಷಣವು ಪರೀಕ್ಷೆಗಳಿಗೆ ಮಾತ್ರ ಸೀಮಿತವಲ್ಲ, ಜೀವನಕ್ಕೂ ಸಹ ಅನ್ವಯವಾಗುತ್ತದೆ. ಪರೀಕ್ಷೆಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಇರುತ್ತವೆ. ಅಂಕಗಳೇ ಅಂತಿಮ ಗುರಿಯಲ್ಲ; ಜೀವನದ ಸಂಪೂರ್ಣ ಅಭಿವೃದ್ಧಿ ಇರಬೇಕು. 10 ಪ್ರಶ್ನೆಗಳು ಅಥವಾ ಮಾದರಿಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು ಸೀಮಿತವಾಗದೆ, ಅವುಗಳನ್ನು ಅಭ್ಯಾಸ ಮಾಡಬಹುದಾದರೂ, ಅವು ತಯಾರಿಕೆಯ ಒಂದು ಸಣ್ಣ ಭಾಗವನ್ನು ಮಾತ್ರ ರೂಪಿಸಬೇಕು, ಹೆಚ್ಚಿನ ಪ್ರಯತ್ನವು ಒಟ್ಟಾರೆ ಕಲಿಕೆಯ ಕಡೆಗೆ ನಿರ್ದೇಶಿಸಲ್ಪಡಬೇಕು ಎಂದು ಅವರು ಸಲಹೆ ನೀಡಿದರು.

 

ವಿಶೇಷವಾಗಿ ಪೂರ್ವ-ಮಂಡಳಿ ಪರೀಕ್ಷೆಗಳ ಸಮಯದಲ್ಲಿ ಅಧ್ಯಯನದ ಒತ್ತಡಗಳನ್ನು ಸಮತೋಲನಗೊಳಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿ, ಇದು ಸಾಮಾನ್ಯ ಕಾಳಜಿ, ಶಿಕ್ಷಣವನ್ನು ಬಲವಂತ ಅಥವಾ ಹೊರೆಯಾಗಿ ನೋಡಬಾರದು, ಆದರೆ ಸಂಪೂರ್ಣ ಒಳಗೊಳ್ಳುವಿಕೆಯ ಅಗತ್ಯವಿದೆ ಎಂದು ಪ್ರಧಾನಿ ತಿಳಿದರು. ಪೂರ್ಣ ತೊಡಗಿಸಿಕೊಳ್ಳುವಿಕೆ ಇಲ್ಲದೆ, ಅಪೂರ್ಣ ಶಿಕ್ಷಣವು ಯಶಸ್ಸಿಗೆ ಕಾರಣವಾಗುವುದಿಲ್ಲ. ಕಳೆದ ವರ್ಷ ಬೋರ್ಡ್ ‌ಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಯ ಹೆಸರನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆಯೇ ಎಂದು ಕೇಳುತ್ತಾ, ಅವರು ಅಂಕಗಳ ಗೀಳಿನ ವಿರುದ್ಧ ಎಚ್ಚರಿಕೆ ನೀಡಿದರು. ವಿದ್ಯಾರ್ಥಿ ಇಲ್ಲ ಎಂದು ಉತ್ತರಿಸಿದಾಗ, ಅಂತಹ ಸಾಧನೆಗಳನ್ನು ಸಂಕ್ಷಿಪ್ತವಾಗಿ ಹೊಗಳಿದರೂ, ಅವು ಬೇಗನೆ ಮರೆತುಹೋಗುತ್ತವೆ. ಅಂಕಗಳು ಎಷ್ಟು ಕಡಿಮೆ ಪ್ರಾಮುಖ್ಯತೆ  ಹೊಂದಿವೆ ಎಂಬುದನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಅಂಕಗಳಿಗೆ ಕಟ್ಟಿಕೊಳ್ಳದೆ, ತಮ್ಮ ಜೀವನ ಎಲ್ಲಿಗೆ ಹೋಗುತ್ತಿದೆ ಎಂಬುದರ ಮೇಲೆ ಗಮನ ಹರಿಸಬೇಕು, ತರಗತಿ ಕೊಠಡಿಗಳು ಅಥವಾ ಪರೀಕ್ಷಾ ಸಭಾಂಗಣಗಳಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ನಿರಂತರವಾಗಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಕಡಿಮೆ ಒತ್ತಡ, ಹೆಚ್ಚಿನ ಕಲಿಕೆ

ಸಂವಾದಾತ್ಮಕ ಕಲಾಪ ಮುಂದುವರೆಯುತ್ತಾ, ಒಬ್ಬ ವಿದ್ಯಾರ್ಥಿ ಪ್ರಧಾನಮಂತ್ರಿ ಮೋದಿ ಅವರನ್ನು ಅಧ್ಯಯನ ಮಾಡುವಾಗ ಶಾಂತವಾಗಿರುವುದು ಮತ್ತು ಗಮನ ಹರಿಸುವುದು ಹೇಗೆ ಎಂದು ಕೇಳಿದರು, ಏಕೆಂದರೆ ಅನೇಕ ಗೊಂದಲಮಯ ಆಲೋಚನೆಗಳು ಉದ್ಭವಿಸುತ್ತವೆ, ಪಾಠಗಳು ಬೇಗನೆ ಮರೆತುಹೋಗುತ್ತವೆ. ಪ್ರಧಾನ ಮಂತ್ರಿ ಅವರು ಒಂದು ಉದಾಹರಣೆ ಮೂಲಕ ಪ್ರತಿಕ್ರಿಯಿಸಿದರು: "ಇಂದು ನೀವು ಇಲ್ಲಿಗೆ ಬಂದಿರುವಂತೆಯೇ, 25 ವರ್ಷಗಳ ನಂತರವೂ ಯಾರಾದರೂ ಈ ಕಾರ್ಯಕ್ರಮದ ಬಗ್ಗೆ ನಿಮ್ಮನ್ನು ಕೇಳಿದರೆ, ನೀವು ಮರೆತುಬಿಡುತ್ತೀರಾ ಅಥವಾ ನೆನಪಿಸಿಕೊಳ್ಳುತ್ತೀರಾ?" ವಿದ್ಯಾರ್ಥಿಯು ಇದನ್ನು ಯಾವಾಗಲೂ ವಿಶೇಷ ಕ್ಷಣವಾಗಿ ನೆನಪಿಸಿಕೊಳ್ಳುತ್ತಾರೆ ಎಂದು ಉತ್ತರಿಸಿದರು. ವಿದ್ಯಾರ್ಥಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ, ವರ್ತಮಾನದ ಬಗ್ಗೆ ಯೋಚಿಸುವುದರಿಂದ ಇದು ಶಾಶ್ವತ ಸ್ಮರಣೆಯನ್ನು ಖಚಿತಪಡಿಸುತ್ತದೆ ಎಂದು ಶ್ರೀ ಮೋದಿ ವಿವರಿಸಿದರು.

 

ಒಬ್ಬರು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮತ್ತು ಅನುಭವಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ನೆನಪುಗಳು ಉಳಿಯುತ್ತವೆ. ಕಡಿಮೆ ಆತ್ಮವಿಶ್ವಾಸ ಹೊಂದಿರುವವರೊಂದಿಗೆ ಸ್ನೇಹ ಬೆಳೆಸಲು ಮತ್ತು ಅವರಿಗೆ ಕಲಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು, ಅದೇ ಸಮಯದಲ್ಲಿ ಅವರ ಸ್ವಂತ ತಿಳಿವಳಿಕೆಯನ್ನು ಮೌಲ್ಯೀಕರಿಸಲು ಕೆಲವು ನಿಮಿಷಗಳ ಕಾಲ ಬುದ್ಧಿವಂತ ಗೆಳೆಯರಿಂದ ಮಾರ್ಗದರ್ಶನ ಪಡೆಯಬೇಕು. ಈ ಡಬಲ್ ಪ್ರಯೋಜನವು ಹೊಸ ಆಲೋಚನೆಗಳನ್ನು ತರುತ್ತದೆ, ಮನಸ್ಸನ್ನು ತೆರೆಯುತ್ತದೆ ಮತ್ತು ಗಮನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಪಂಜಾಬ್ ‌ನ  ಮತ್ತೊಬ್ಬ ವಿದ್ಯಾರ್ಥಿಯು ಪ್ರಧಾನಮಂತ್ರಿ ಮೋದಿ ಅವರ ಸಂವಾದವನ್ನು ಸ್ವಾಗತಿಸಿದರು. ಬೋರ್ಡ್ ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಏಕಕಾಲದಲ್ಲಿ ತಯಾರಿ ನಡೆಸುವ 12ನೇ ತರಗತಿಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲಿನ ಬಗ್ಗೆ ಕೇಳಿದರು, ಅವರ ವಿಭಿನ್ನ ಮಾದರಿಗಳು ಮತ್ತು ಅತಿಕ್ರಮಿಸುವ ವೇಳಾಪಟ್ಟಿಗಳನ್ನು ನೀಡಲಾಗಿದೆ ಎಂದಾಗ, ಪ್ರಧಾನಿ ಅವರು ಈ ಕಳವಳವನ್ನು ಒಪ್ಪಿಕೊಂಡರು, ಅದನ್ನು ಕ್ರಿಕೆಟ್ ಮತ್ತು ಫುಟ್ಬಾಲ್ ಅನ್ನು ಏಕಕಾಲದಲ್ಲಿ ಆಡುವುದಕ್ಕೆ ಹೋಲಿಸಿದರು. 12ನೇ ತರಗತಿಯ ಮಂಡಳಿ ಪರೀಕ್ಷೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡರೆ, ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರತ್ಯೇಕ ಪ್ರಯತ್ನದ ಅಗತ್ಯವಿಲ್ಲದೆ ಉಪ-ಉತ್ಪನ್ನವಾಗುತ್ತವೆ. ಮಕ್ಕಳು ತಮ್ಮ ಶಕ್ತಿ ಸಾಮರ್ಥ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ಅರಳಲು ಅವಕಾಶ ನೀಡಬೇಕು ಎಂದು ಪ್ರಧಾನಮಂತ್ರಿ ಪೋಷಕರಿಗೆ ಸಲಹೆ ನೀಡಿದರು.

ಅಂಕಗಳು, ಆಟಗಳು ಮತ್ತು ನಗುವನ್ನು ಸಮತೋಲನಗೊಳಿಸುವುದು

ಒಬ್ಬ ವಿದ್ಯಾರ್ಥಿಯು ಅಧ್ಯಯನದ ಮೇಲೆ ಮಾತ್ರ ಗಮನ  ಹರಿಸಲು ಸಾಮಾಜಿಕ ಒತ್ತಡದ ಹೊರತಾಗಿಯೂ ಗೇಮಿಂಗ್ ‌ನಲ್ಲಿ ಭವಿಷ್ಯ ಕಾಣುವ ಬಗ್ಗೆ ಪ್ರಶ್ನೆ ಎತ್ತಿದರು. ಪೋಷಕರು ಆರಂಭದಲ್ಲಿ ಹೆಚ್ಚಾಗಿ ನಿರುತ್ಸಾಹಗೊಳಿಸುತ್ತಾರೆ, ಆದರೆ ಯಶಸ್ಸು ಸಾಧಿಸಿದ ನಂತರ, ಅವರು ಹೆಮ್ಮೆಪಡುತ್ತಾರೆ ಮತ್ತು ಅದನ್ನು ಆಚರಿಸುತ್ತಾರೆ ಎಂದು ಪ್ರಧಾನಿ ವಿವರಿಸಿದರು. ಪಂಚತಂತ್ರ ಅಥವಾ ಪೌರಾಣಿಕ ಘಟನೆಗಳಂತಹ ಭಾರತದ ಶ್ರೀಮಂತ ಕಥೆಗಳನ್ನು ಆಧರಿಸಿದ ಆಟಗಳನ್ನು ರಚಿಸುವ ಮೂಲಕ ಮತ್ತು ಮನ್ನಣೆ ಪಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವುಗಳನ್ನು ಹಂಚಿಕೊಳ್ಳುವ ಮೂಲಕ ಗೇಮಿಂಗ್ ‌ನಲ್ಲಿ ಆಸಕ್ತಿಯನ್ನು ಉತ್ಪಾದಕವಾಗಿಸುವಂತೆ ಅವರು ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿದರು. ಗೇಮಿಂಗ್ ವೇಗ ಮತ್ತು ಜಾಗರೂಕತೆಯ ಅಗತ್ಯವಿರುವ ಕೌಶಲ್ಯವಾಗಿದೆ, ಇದು ಸ್ವಯಂ-ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಮತ್ತು ಉತ್ತಮ ಗುಣಮಟ್ಟದ ಆಟಗಳಲ್ಲಿ ಪರಿಣತಿ ಬೆಳೆಸುವತ್ತ ಗಮನ ಹರಿಸಲು ಸಲಹೆ ನೀಡಿದರು. ಗೇಮಿಂಗ್ ‌ನಲ್ಲಿ ಇರುವ ಜೂಜಾಟದ ಬಗ್ಗೆ ಎಚ್ಚರಿಕೆ ನೀಡಿದರು, ಅಂತಹ ಅಭ್ಯಾಸಗಳನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತರಲಾಗಿದೆ, ಗೇಮಿಂಗ್ ಅನ್ನು ರಚನಾತ್ಮಕ ಕೌಶಲ್ಯವಾಗಿ ಅನುಸರಿಸಬೇಕು ಎಂದು ಒತ್ತಿ ಹೇಳಿದರು.

 

ಪ್ರಧಾನಮಂತ್ರಿ ಅವರ ನಿವಾಸಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸಿದರು, ಅವರ ಸ್ನೇಹಪರ ವರ್ತನೆ, ತಮ್ಮ ಪ್ರಶ್ನೆಗಳಲ್ಲಿ ನಿಜವಾದ ಆಸಕ್ತಿ ಮತ್ತು ಅವರು ನೀಡಿದ ಚಿಂತನಶೀಲ ಉತ್ತರಗಳನ್ನು ಗಮನಿಸಿದರು.

ಭಯವನ್ನು ಬಲವಾಗಿ ಪರಿವರ್ತಿಸುವುದು - ಒತ್ತಡ, ಸಮಯ ಮತ್ತು ಆತ್ಮವಿಶ್ವಾಸ ನಿರ್ವಹಿಸುವುದು

ವಿದ್ಯಾರ್ಥಿಗಳು ಪರೀಕ್ಷಾ ವಾರಿಯರ್ ಅನ್ನು ಓದುವುದರಿಂದ ಪರೀಕ್ಷೆಗಳ ಬಗೆಗಿನ ತಮ್ಮ ವಿಧಾನವು ಹೇಗೆ ರೂಪಾಂತರಗೊಂಡಿದೆ ಎಂಬ ವಿಷಯ ಹಂಚಿಕೊಂಡರು. ಒಬ್ಬ ವಿದ್ಯಾರ್ಥಿ ಹಿಂದಿನ ಪರೀಕ್ಷೆಗಳು ಒತ್ತಡ ಮತ್ತು ಭಯ ಉಂಟು ಮಾಡಿದ್ದವು, ಆದರೆ ಪುಸ್ತಕವನ್ನು ಓದಿದ ನಂತರ ಪರೀಕ್ಷೆಗಳು ಸ್ನೇಹಿತರಾದವು ಎಂದರು. ಹಿಂದೆ ಅವರು ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವಲ್ಲಿ ಆತಂಕ ಅನುಭವಿಸುತ್ತಿದ್ದರು, ಆದರೆ ತಮ್ಮದೇ ಆದ ತಂತ್ರವು ವಿಶಿಷ್ಟ ಮತ್ತು ಪರಿಣಾಮಕಾರಿ ಎಂದು ಅರಿತುಕೊಂಡೆವು ಎಂದು ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದರು. ಸಮಯ ನಿರ್ವಹಣೆ ಯಾವಾಗಲೂ ಹೋರಾಟವಾಗಿತ್ತು ಎಂದು ಒಬ್ಬ ವಿದ್ಯಾರ್ಥಿ ಹೇಳಿದ, ಆದರೆ ಪರೀಕ್ಷಾ ವಾರಿಯರ್ ‌ನಿಂದ ಕಲಿತ ನಂತರ, ಬೇಗನೆ ಎಚ್ಚರಗೊಂಡು ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಿದೆ ಎಂದ.

ಪ್ರಧಾನಿ ಮೋದಿ ಅವರು ಸಮಯ ನಿರ್ವಹಣೆಗೆ ಸರಳವಾದ ವಿಧಾನ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು: ಮಲಗುವ ಮೊದಲು ಡೈರಿಯಲ್ಲಿ ಮಾಡಬೇಕಾದ ಕೆಲಸಗಳನ್ನು ಬರೆಯುವುದು, ಮರುದಿನ ಅವುಗಳನ್ನು ಎಣಿಸುವುದು ಮತ್ತು ಕೆಲವು ಕಾರ್ಯಗಳು ಏಕೆ ಅಪೂರ್ಣವಾಗಿ ಉಳಿದಿವೆ ಎಂಬುದನ್ನು ವಿಶ್ಲೇಷಿಸುವುದು. ಸಮಯವನ್ನು ಉತ್ಪಾದಕವಾಗಿ ಬಳಸುವುದನ್ನು ಕಲಿಯುವುದರಿಂದ ಒತ್ತಡ ಮತ್ತು ಆಯಾಸವನ್ನು ತೆಗೆದುಹಾಕುತ್ತದೆ ಎಂದು ಅವರು ಹೇಳಿದರು, ಸರಿಯಾದ ಸಮಯ ಬಳಕೆಯ ಅವರ ಸ್ವಂತ ಅಭ್ಯಾಸವು ಹಲವಾರು ಜವಾಬ್ದಾರಿಗಳ ಹೊರತಾಗಿಯೂ ಅವರನ್ನು ಒತ್ತಡದಿಂದ ಮುಕ್ತವಾಗಿರಿಸುತ್ತದೆ ಎಂದು ಪ್ರಧಾನಿ ಹಂಚಿಕೊಂಡರು.

 

ಗಣಿತದಂತಹ ವಿಷಯಗಳ ಬಗ್ಗೆ ಅವರ ಭಯವು ಆಸಕ್ತಿಯಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ವಿದ್ಯಾರ್ಥಿಗಳು ವಿವರಿಸಿದರು, ಗಣಿತವು ಒಂದು ಕಾಲದಲ್ಲಿ ಭೂತವಾಗಿತ್ತು, ಆದರೆ ಈಗ ಅದು ಉತ್ಸಾಹವಾಗಿದೆ ಎಂದು ಒಬ್ಬರು ಗಮನಿಸಿದರು. ಪ್ರಧಾನಮಂತ್ರಿಗಳು ವೇದ ಗಣಿತವನ್ನು ಅನ್ವೇಷಿಸುವಂತೆ ಪ್ರೋತ್ಸಾಹಿಸಿದರು, ಅದನ್ನು ಆನಂದದಾಯಕ ಮತ್ತು ಮಾಂತ್ರಿಕ ಎಂದು ವಿವರಿಸಿದ ಅವರುರು, ಆಸಕ್ತಿಯನ್ನು ಹೆಚ್ಚಿಸಲು ಅಂತಹ ವಿಧಾನಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂದು ಸೂಚಿಸಿದರು.

ಪರೀಕ್ಷಾ ದಿನಾಂಕಗಳು ಒಂದು ಕಾಲದಲ್ಲಿ ಭಯ ಉಂಟು ಮಾಡುತ್ತಿದ್ದವು, ಆದರೆ ಪುಸ್ತಕದ ಪರೀಕ್ಷೆಗಳನ್ನು ಆಚರಣೆಯಾಗಿ ಪರಿಗಣಿಸುವ ಮಂತ್ರವು ಪ್ರೇರಣೆ ತಂದಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಹಂಚಿಕೊಂಡರು. ಪರೀಕ್ಷಾ ಪೇ ಚರ್ಚಾದ ಪಾಠಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು, ಏಕೆಂದರೆ ಅವರು ಸಮಾನವಾಗಿ ಪ್ರಯೋಜನ ಪಡೆಯಬಹುದು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು.

ವಿದ್ಯಾರ್ಥಿಗಳು ಕಡಿಮೆ ಅಂಕಗಳ ಭಯವನ್ನು ಹೇಗೆ ನಿವಾರಿಸಿದರು ಎಂಬುದರ ಕುರಿತು ಚಿಂತನೆ ನಡೆಸಿದರು, ಅಂಕಗಳು ಎಲ್ಲವೂ ಅಲ್ಲ ಎಂದು ಅರಿತುಕೊಂಡರು, ವೈಫಲ್ಯಗಳ ಹೊರತಾಗಿಯೂ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪರಿಶ್ರಮದ ಉದಾಹರಣೆಯನ್ನು ಉಲ್ಲೇಖಿಸಿದರು. ಕಡಿಮೆ ಒತ್ತಡವು ಹಾಡುಗಾರಿಕೆ, ಚಿತ್ರಕಲೆ ಅಥವಾ ಕವಿತೆಗಳನ್ನು ಬರೆಯುವಂತಹ ಹೊಸ ಕೌಶಲ್ಯಗಳನ್ನು ಕಲಿಯಲು ಮನಸ್ಸನ್ನು ತೆರೆಯುತ್ತದೆ ಎಂದು ಪ್ರಧಾನಿ ಹೇಳಿದರು, ಸೃಜನಶೀಲ ಅನ್ವೇಷಣೆಗಳನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

 

ಪುಸ್ತಕದಿಂದ ಪಡೆದ ಆತ್ಮವಿಶ್ವಾಸವು ವಿದ್ಯಾರ್ಥಿಗಳಿಗೆ ಪ್ರಸ್ತುತಿ ಭಯ ನಿವಾರಿಸಲು ಸಹಾಯ ಮಾಡಿತು. ಸಾಮಾನ್ಯ ಜನರು ತಾವು ಕಂಡ ಘಟನೆಗಳನ್ನು ನಿರೂಪಿಸುವಾಗ ಸ್ಪಷ್ಟವಾಗಿ ಮಾತನಾಡುವಂತೆಯೇ, ಸತ್ಯ ಮತ್ತು ಅನುಭವದಿಂದ ಆತ್ಮವಿಶ್ವಾಸ ಬರುತ್ತದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ವಿದ್ಯಾರ್ಥಿಗಳ ಆತ್ಮವಿಶ್ವಾಸವು ಅವರ ಸ್ವಂತ ಪ್ರಯತ್ನಗಳು ಮತ್ತು ಸಾಧನೆಗಳ ಸತ್ಯದಿಂದ ಉದ್ಭವಿಸುತ್ತದೆ ಎಂದು ಅವರು ಹೇಳಿದರು.

ಒಬ್ಬ ವಿದ್ಯಾರ್ಥಿಯು ದೀರ್ಘ ಸಾಹಿತ್ಯ ಪ್ರಬಂಧಗಳು ಒಂದು ಕಾಲದಲ್ಲಿ ಭಯ ಉಂಟು ಮಾಡುತ್ತಿದ್ದವು, ಆದರೆ ಈಗ ವೇಗವಾಗಿ ಬರೆಯುವುದನ್ನು ಮತ್ತು ಕೈಬರಹ ಸುಧಾರಿಸುವುದನ್ನು ಅಭ್ಯಾಸ ಮಾಡಿದ್ದೇನೆ ಎಂದು ಹಂಚಿಕೊಂಡರು. 30 ಸೆಕೆಂಡುಗಳ ಕಾಲ ವಿರಾಮವಾಗಿರುವುದು, ಆಳವಾದ ಉಸಿರು ಬಿಡುುವುದು ಮತ್ತು ಪತ್ರಿಕೆಗಳನ್ನು ಬರೆಯುವ ಮೊದಲು ಮನಸ್ಸನ್ನು ಮರುಸ್ಥಾಪಿಸುವುದು ಮುಂತಾದ ತಂತ್ರಗಳ ಬಗ್ಗೆ ಪ್ರಧಾನಿ ಸಲಹೆ ನೀಡಿದರು, ತಪ್ಪುಗಳು ಜ್ಞಾನದ ಕೊರತೆಯಿಂದಲ್ಲ, ಆತುರದಿಂದ ಸಂಭವಿಸುತ್ತವೆ ಎಂದು ಹೇಳಿದರು. ಸರಿಯಾದ ತಂತ್ರಗಳು ಮತ್ತು ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಪರೀಕ್ಷಾ ಭಯ ನಿವಾರಿಸಬಹುದು ಮತ್ತು ಯಶಸ್ವಿಯಾಗಬಹುದು ಎಂದು ಅವರು ತಿಳಿಸಿದರು.

ಗದ್ದಲದ ನಡುವೆಯೂ ಹಿಡಿದಿಟ್ಟುಕೊಳ್ಳುವುದು

ಮನೆಯ ಗದ್ದಲ ಮತ್ತು ಪೋಷಕರ ಬೆಂಬಲದ ಕೊರತೆಯ ನಡುವೆಯೂ ಹೇಗೆ ಅಧ್ಯಯನ ಮಾಡುವುದು ಎಂದು ವಿದ್ಯಾರ್ಥಿಯೊಬ್ಬರು ಕೇಳಿದರು. ಸರಕುಗಳನ್ನು ತುಂಬಿದ ಎತ್ತಿನ ಬಂಡಿಯ ಮೇಲೆ ಮಗುವೊಂದು ಓದುತ್ತಿರುವ ವೀಡಿಯೊವನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು, ಯಶಸ್ಸಿಗೆ ಸೌಕರ್ಯವು ಅನಿವಾರ್ಯವಲ್ಲ. ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ಅನೇಕರು ಐಷಾರಾಮಿಗಳಿಲ್ಲದ ಸಣ್ಣ ಹಳ್ಳಿಗಳಿಂದ ಬಂದಿದ್ದಾರೆ ಎಂದು ಅವರು ಎತ್ತಿನ ಗಾಡಿಯ ಮೇಲೆ ಓದುತ್ತಿರುವ ಮಗುವಿನ ವೀಡಿಯೊ ನೆನಪಿಸಿಕೊಂಡರು. ಕಷ್ಟಗಳ ನಡುವೆಯೂ ಕ್ರಿಕೆಟ್ ‌ನಲ್ಲಿ ಗೆದ್ದ ಅಂಧ ಹುಡುಗಿಯರ ಸ್ಫೂರ್ತಿದಾಯಕ ಕಥೆ ಹಂಚಿಕೊಂಡರು. ಜೀವನವನ್ನು ಆರಾಮದಾಯಕ ವಲಯಗಳಿಂದ ರೂಪಿತವಾಗುವುದಿಲ್ಲ, ಆದರೆ ಒಬ್ಬ ವ್ಯಕ್ತಿಯು ಬದುಕುವ ವಿಧಾನದಿಂದ ರೂಪಿತವಾಗುತ್ತದೆ ಎಂದು ಅವರು ತಿಳಿಸಿದರು.

 

ತಮಿಳುನಾಡಿನ ಮತ್ತೊಬ್ಬ ವಿದ್ಯಾರ್ಥಿ, ಅತಿಥಿಗಳು ಪರೀಕ್ಷಾ ತಯಾರಿಗೆ ಅಡ್ಡಿಪಡಿಸುವ ವಿಷಯ ಎತ್ತಿದರು. ಅತಿಥಿಗಳಿಗೆ ತಮ್ಮ ಬಾಲ್ಯದ ಅನುಭವಗಳನ್ನು ಕೇಳಿ, ಆ ಮೂಲಕ ಪರಿಸ್ಥಿತಿ ಬದಲಾಯಿಸಲು, ಆ ಮೂಲಕ ಗಮನ ಬದಲಾಯಿಸಲು ಮತ್ತು ಒತ್ತಡ ಕಡಿಮೆ ಮಾಡುವಂತೆ ಪ್ರಧಾನಮಂತ್ರಿ ಸಲಹೆ ನೀಡಿದರು.

ದೊಡ್ಡ ಕನಸುಗಳು, ದೊಡ್ಡ ಕ್ರಿಯೆಗಳು

ಮಕ್ಕಳು ದೊಡ್ಡ ಕನಸುಗಳನ್ನು ಕಾಣಬೇಕೇ ಮತ್ತು ಆ ಕನಸುಗಳನ್ನು ನನಸಾಗಿಸಲು ಹೇಗೆ ಪ್ರಾರಂಭಿಸಬೇಕು ಎಂದು ಲಡಾಖ್ ‌ನ ವಿದ್ಯಾರ್ಥಿಯೊಬ್ಬರು ಕೇಳಿದರು. ಕನಸು ಕಾಣದಿರುವುದು ಅಪರಾಧ, ಆದರೆ ಕನಸುಗಳನ್ನು ಕ್ರಿಯೆಯಿಂದ ಬೆಂಬಲಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಗಗನಯಾತ್ರಿಯಾಗುವಂತಹ ಆಕಾಂಕ್ಷೆಗಳಿಗೆ ಅಧ್ಯಯನ, ಜೀವನಚರಿತ್ರೆ ಮತ್ತು ಕೇಂದ್ರೀಕೃತ ಆಸಕ್ತಿಯ ಅಗತ್ಯವಿರುತ್ತದೆ. ಆದರೆ ಅಪಹಾಸ್ಯ ತಪ್ಪಿಸಲು ಕನಸುಗಳನ್ನು ಸಾರ್ವಜನಿಕಗೊಳಿಸಬಾರದು ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಬರೆದು ಖಾಸಗಿಯಾಗಿ ಪೋಷಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು.

ದೊಡ್ಡ ಕನಸುಗಳನ್ನು ನನಸಾಗಿಸಲು ದೈನಂದಿನ ಅಭ್ಯಾಸಗಳ ಕುರಿತಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಶ್ರೀ ಮೋದಿ, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವಂತೆ ಸಲಹೆ ನೀಡಿದರು. ಅವರ ಹೋರಾಟಗಳು ಮತ್ತು ಆರಂಭಿಕ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳುವುದು ವಿದ್ಯಾರ್ಥಿಗಳಿಗೆ ಸಂಬಂಧ ಹೊಂದಲು ಮತ್ತು ಆತ್ಮವಿಶ್ವಾಸ ಪಡೆಯಲು ಸಹಾಯ ಮಾಡುತ್ತದೆ, ಹಂತ ಹಂತವಾಗಿ ಹೇಗೆ ಪ್ರಗತಿ ಸಾಧಿಸಬೇಕು ಎಂಬುದನ್ನು ತೋರಿಸುತ್ತದೆ ಎಂದು ಅವರು ವಿವರಿಸಿದರು.

 

ನಂತರ ಒಬ್ಬ ವಿದ್ಯಾರ್ಥಿಯು ಪ್ರಧಾನಮಂತ್ರಿಗೆ ಅರ್ಪಿಸಲಾದ ಹೃತ್ಪೂರ್ವಕ ಕವಿತೆ ಪಠಿಸಿದ, ಅವರನ್ನು ಭಾರತದ ಹೆಮ್ಮೆ, ಮಾನವತೆಯ ಸೇವಕ ಮತ್ತು ರಾಷ್ಟ್ರದ ಕನಸುಗಳನ್ನು ಮುಂದಕ್ಕೆ ಸಾಗಿಸುವ ನಾಯಕ ಎಂದು ಬಣ್ಣಿಸಿದ. ಪ್ರಧಾನಿ ಕವಿತೆಯನ್ನು ಹೃತ್ಪೂರ್ವಕವಾಗಿ ಹೊಗಳಿ, ವಿದ್ಯಾರ್ಥಿಯನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ಶಿಕ್ಷಕರಾದಾಗ

ಸ್ವಾತಂತ್ರ್ಯ ಶತಮಾನೋತ್ಸವದೊಂದಿಗೆ ಹೊಂದಿಕೆಯಾಗುವ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವುದನ್ನು ತಾವು ಕಲ್ಪಿಸಿಕೊಳ್ಳುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು. 35ರಿಂದ 45 ವರ್ಷ ವಯಸ್ಸಿನ ಯುವಕರು ಈ ದೃಷ್ಟಿಕೋನದ ಪ್ರಯೋಜನಗಳನ್ನು ಪಡೆಯಲು ತಮ್ಮ ಜೀವನದ ಅತ್ಯಂತ ನಿರ್ಣಾಯಕ ಹಂತದಲ್ಲಿರುತ್ತಾರೆ. ಮಹಾತ್ಮಾ ಗಾಂಧಿ 1915ರಲ್ಲಿ ಆಫ್ರಿಕಾದಿಂದ ಹಿಂದಿರುಗಿ 1947ರ ವರೆಗೆ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ಭಗತ್ ಸಿಂಗ್ ಅವರಂತಹ ನಾಯಕರ ತ್ಯಾಗಗಳು ಅನೇಕ ಪೀಳಿಗೆಗಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸ್ಫೂರ್ತಿ ನೀಡಿವೆ. ಅಂತಹ ಮಹತ್ವದ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಾದರೆ, ಸಾಮೂಹಿಕ ಪ್ರಯತ್ನದ ಮೂಲಕ ಅಭಿವೃದ್ಧಿ ಹೊಂದಿದ ಭಾರತವನ್ನು ಖಂಡಿತವಾಗಿಯೂ ಸಾಕಾರಗೊಳಿಸಬಹುದು ಎಂದು ಪ್ರಧಾನಿ ಹೇಳಿದರು.

ಪ್ರಧಾನಮಂತ್ರಿಗಳು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ತಮ್ಮ ವೈಯಕ್ತಿಕ ಬದ್ಧತೆಗಳನ್ನು ಬರೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು. ಕೌಶಲ್ಯ ಅಭಿವೃದ್ಧಿ, ಆತ್ಮವಿಶ್ವಾಸ ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆಯ ಬಗ್ಗೆ ಅವರ ಪ್ರತಿಕ್ರಿಯೆಗಳನ್ನು ಗಮನಿಸಿ, ಅವರು ತೆಗೆದುಕೊಳ್ಳಬಹುದಾದ ಪಂಚ ಕ್ರಮಗಳನ್ನು ಗುರುತಿಸುವಂತೆ ಕೇಳಿದರು. ಸ್ವದೇಶಿ ಭಾಷೆಯನ್ನು ಅಳವಡಿಸಿಕೊಳ್ಳಲು ಮನಸ್ಸನ್ನು ಸಿದ್ಧಪಡಿಸುವುದು ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುವುದರೊಂದಿಗೆ ಪ್ರಾರಂಭವಾಗುತ್ತದೆ.  ಶಾಲೆಗಳಲ್ಲೂ ಸಹ ವಿದೇಶಿ ವಸ್ತುಗಳ ಮೇಲಿನ ಆಕರ್ಷಣೆ ಹೇಗೆ ಮುಂದುವರಿಯುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು. ವಿದ್ಯಾರ್ಥಿಗಳು ದಿನನಿತ್ಯ ಬಳಸುವ ಎಲ್ಲಾ ವಸ್ತುಗಳನ್ನು ಪಟ್ಟಿ ಮಾಡಲು, ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಗುರುತಿಸಲು ಮತ್ತು ಕ್ರಮೇಣ ಅವುಗಳನ್ನು ಭಾರತೀಯ ಪರ್ಯಾಯಗಳೊಂದಿಗೆ ಬದಲಾಯಿಸಲು ಅವರು ನಿರ್ದೇಶನ ನೀಡಿದರು, ಒಂದು ವರ್ಷದೊಳಗೆ ಅವರ ಮನೆಗಳು ಭಾರತೀಯ ವಸ್ತುಗಳಿಂದ ತುಂಬುವಂತೆ ನೋಡಿಕೊಳ್ಳಲು. ಭಾರತೀಯರು ತಮ್ಮದೇ ಆದ ಉತ್ಪನ್ನಗಳ ಬಗ್ಗೆ ಹೆಮ್ಮೆ ಪಡದಿದ್ದರೆ, ಜಗತ್ತು ಹೆಮ್ಮೆ ಪಡುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ವಿಳಂಬಕ್ಕೆ "ಭಾರತೀಯ ಸಮಯ"ವನ್ನು ದೂಷಿಸುವ ಪ್ರವೃತ್ತಿ ತರವಲ್ಲ, ಅಂತಹ ವರ್ತನೆಗಳು ರಾಷ್ಟ್ರವನ್ನು ಅವಮಾನಿಸುತ್ತವೆ, ಸ್ವಚ್ಛತೆಯಿಂದ ಪ್ರಾರಂಭಿಸಿ ಕರ್ತವ್ಯವನ್ನು ಪಾಲಿಸಬೇಕೆಂದು ಕರೆ ನೀಡಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸ್ವಚ್ಛವಾಗಿ ಕಾಣುವುದು ಸ್ವಚ್ಛತಾ ಕಾರ್ಯಗಳಿಂದಲ್ಲ, ಬದಲಾಗಿ ನಾಗರಿಕರು ಕಸ ಹಾಕದ ಕಾರಣ, ಭಾರತೀಯರು ಸ್ವಚ್ಛತೆಯ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳದಿರಲು, ಕಸವನ್ನು ಸ್ವತಃ ಎತ್ತಿ ಹಾಕುವಂತೆ ಜನರ್ಮೂಲಲಿ ಅರಿವು ಡಿಸಲು ದೃಢಸಂಕಲ್ಪ ಮಾಡಬೇಕು ಎಂದು ಒತ್ತಾಯಿಸಿದರು. ಆರೋಗ್ಯ ಕಾಪಾಡಿಕೊಳ್ಳುವುದು ಸಹ ಒಂದು ಕರ್ತವ್ಯ ಎಂದು ಅವರು ಒತ್ತಿ ಹೇಳಿದರು. ನಾಗರಿಕರು ಅಂತಹ ಜವಾಬ್ದಾರಿಗಳನ್ನು ಪೂರೈಸಿದರೆ, ಭಾರತವು ಅಭಿವೃದ್ಧಿ ಹೊಂದುವುದನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ, ಯುವಕರು ಪ್ರಬುದ್ಧತೆಯನ್ನು ತಲುಪಿದಾಗ ಹೆಚ್ಚಿನ ಪ್ರಯೋಜನಗಳನ್ನು ಅನುಭವಿಸುತ್ತಾರೆ. ಅವರಿಗೆ ಫಲ ನೀಡುವ ಕೆಲಸವನ್ನು ಮಾಡಬೇಕು ತಾನೇ ಎಂದು ಅವರು ಕೇಳಿದಾಗ, ವಿದ್ಯಾರ್ಥಿಗಳು ದೃಢಪಡಿಸಿದರು. ನಂತರ ಅವರು ಪ್ರಸ್ತುತ ಪೀಳಿಗೆಗೆ, ವಿಶೇಷವಾಗಿ ತಂತ್ರಜ್ಞಾನದಲ್ಲಿ ಲಭ್ಯವಿರುವ ವಿಶಾಲ ಅವಕಾಶಗಳನ್ನು ಉಲ್ಲೇಖಿಸಿದರು, ಇಂದಿನ ಯುವಕರು ಕೃತಕ ಬುದ್ಧಿಮತ್ತೆಯನ್ನು ಬುದ್ಧಿವಂತಿಕೆಯಿಂದ ಬಳಸಬೇಕು. ಜೀವನ ಚರಿತ್ರೆಗಳನ್ನು ಸಂಕ್ಷಿಪ್ತಗೊಳಿಸಲು ಮಾತ್ರ ಎಐ ಬಳಸುವುದು ಕಡಿಮೆ ಮೌಲ್ಯವನ್ನು ನೀಡುತ್ತದೆ, ಆದರೆ ವಯಸ್ಸು ಮತ್ತು ಆಸಕ್ತಿಗಳ ಆಧಾರದ ಮೇಲೆ ಜೀವನ ಚರಿತ್ರೆಗಳನ್ನು ಶಿಫಾರಸು ಮಾಡಲು ಎಐ ಅನ್ನು ಕೇಳುವುದು, ನಂತರ ಆ ಪುಸ್ತಕಗಳನ್ನು ಓದುವುದು ನಿಜವಾದ ಬೆಳವಣಿಗೆಗೆ ಕಾರಣವಾಗುತ್ತದೆ. ಎಐ ಕೇವಲ ಮನರಂಜನೆಯಲ್ಲ, ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಿಸಲು ಒಂದು ಸಾಧನವಾಗಿರಬೇಕು. ವಿದ್ಯಾರ್ಥಿಗಳ ಎಐ ಬಳಕೆಯ ಮಾರ್ಗದರ್ಶನ ಆಲಿಸಿದ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು, ತಮ್ಮದೇ ಆದ ತಾಂತ್ರಿಕ ಅನ್ವೇಷಣೆಗಳಿಗೆ ಅದರ ಪ್ರಸ್ತುತತೆ ಏನೆಂಬುದನ್ನುಪ್ರಧಾನಮಂತ್ರಿ ವಿವರಿಸಿದರು.

 

ಪ್ರಧಾನಮಂತ್ರಿ ಅವರು ಕರ್ನಾಟಕ ಶಾಸ್ತ್ರೀಯ ಶೈಲಿಯ ವಿದ್ಯಾರ್ಥಿಯ ಕೊಳಲು ವಾದನ ಆಲಿಸಿ, ಅದನ್ನು ಶ್ಲಾಘಿಸಿದರು. ವಸಂತ ಪಂಚಮಿ ಸಮಯದಲ್ಲಿ ಅದರ ಸಾಂಪ್ರದಾಯಿಕ ಉತ್ತರಾಖಂಡ ಮಹತ್ವವನ್ನು ಗಮನಿಸಿ ವಿದ್ಯಾರ್ಥಿಯೊಬ್ಬರು, ಕೈಯಿಂದ ಮಾಡಿದ ಪುಷ್ಪಗುಚ್ಛವನ್ನು ಅವರು ಶ್ಲಾಘಿಸಿದರು, ತ್ರಿಪುರ ಸಂಪ್ರದಾಯಗಳ ಉಲ್ಲೇಖಗಳನ್ನು ಒಪ್ಪಿಕೊಂಡರು. ವಿದ್ಯಾರ್ಥಿಗಳು ಉಡುಗೊರೆಯಾಗಿ ನೀಡಿದ ಸಾವಯವ ಚಹಾ ಮತ್ತು ಅಸ್ಸಾಮಿ ಗಮೋಚಾವನ್ನು ಶ್ಲಾಘಿಸಿದರು, ಕಾವ್ಯ ರಚನೆ ಮುಂದುವರಿಸುವಂತೆ  ಅವರನ್ನು ಪ್ರೋತ್ಸಾಹಿಸಿದರು. ಪ್ರಧಾನಮಂತ್ರಿ ಅವರು ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಪರೀಕ್ಷಾ ಪೇ ಚರ್ಚಾದ ಮುಂಬರುವ ಸಂಚಿಕೆಯ ಝಲಕ್ ‌ಗಳನ್ನು ಹಂಚಿಕೊಂಡ ಪ್ರಧಾನ ಮಂತ್ರಿ, ದೇಶದ ವಿವಿಧ ಭಾಗಗಳಲ್ಲಿ "ಪರೀಕ್ಷಾ ಪೇ ಚರ್ಚಾ" ನಡೆಸಲು ಅನೇಕ ವಿದ್ಯಾರ್ಥಿಗಳು ಸೂಚಿಸಿದ್ದಾರೆ. ಇದು ಈ ವಿಶೇಷ ಸಂಚಿಕೆಯಲ್ಲಿ ಪ್ರತಿಫಲಿಸುತ್ತಿದೆ. ಸಹೋದರರು ಉತ್ತಮ ಗುಣಗಳಿಂದ ಕಲಿಯಬೇಕು, ಶ್ರೇಷ್ಠತೆಯ ಆಕಾಂಕ್ಷೆ ತಪ್ಪಲ್ಲ, ಆದರೆ ಹೋಲಿಕೆ ಮಾಡಬಾರದು. ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಶಿಕ್ಷಣದ ಮಹತ್ವ ಅತ್ಯಂತ ಮುಖ್ಯ, ಜೊತೆಗೆ ಕ್ರೀಡೆಗಳು ಜೀವನದ ಅತ್ಯಗತ್ಯ ಭಾಗವಾಗಿರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಆಹ್ವಾನ ನೀಡಿದರು.

ಮುಂದಿನ ಸಂಚಿಕೆಯು 2026 ಫೆಬ್ರವರಿ 9ರಂದು ಬೆಳಗ್ಗೆ 10 ಗಂಟೆಗೆ ಪ್ರಸಾರವಾಗಲಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Govt directs faster processing of city gas projects, hikes commercial LPG allocation to ease supply stress

Media Coverage

Govt directs faster processing of city gas projects, hikes commercial LPG allocation to ease supply stress
NM on the go

Nm on the go

Always be the first to hear from the PM. Get the App Now!
...
This is the New India that leaves no stone unturned for development: PM Modi
March 23, 2026
Today, India is moving forward with a new confidence; Now India faces challenges head-on: PM
From the Gulf to the Global West and from the Global South to neighbouring countries, India is a trusted partner for all: PM
What gets measured gets improved and ultimately gets transformed: PM
This is the new India, It is leaving no stone unturned for development: PM

नमस्कार!

पिछले कुछ समय में मुझे एक-दो बार टीवी9 भारतवर्ष देखने का मौका मिला है। नॉर्मली भी युद्धों और मिसाइलों पर आपका बहुत फोकस होता है और आजकल तो आपको कंटेंट की ओवरफीडिंग हो रही है। बड़े-बड़े देश टीवी9 को इतना सारा कंटेंट देने पर तुले हुए हैं, लेकिन On a Serious Note, आज विश्व जिन गंभीर परिस्थितियों से गुजर रहा है, वो अभूतपूर्व है और बेहद गंभीर है। और इन स्थितियों के बीच, आज टीवी-9 नेटवर्क ने विचारों का एक बेहद महत्वपूर्ण मंच बनाया है। आज इस समिट में आप सभी India and the world, इस विषय पर चर्चा कर रहे हैं। मैं आप सबको बधाई देता हूं। इस समिट के लिए अपनी शुभकामनाएं देता हूं। सभी अतिथियों का अभिनंदन करता हूं।

साथियों,

आज जब दुनिया, conflicts के कारण उलझी हुई है, जब इन conflicts के दुष्प्रभाव पूरी दुनिया पर दिख रहे हैं, तब India and the world की बात करना बहुत ही प्रासंगिक है। भारत आज वो देश है, जिसकी अर्थव्यवस्था तेजी से आगे बढ़ रही है। 2014 के पहले की स्थितियों को पीछे छोड़कर के आज भारत एक नए आत्मविश्वास के साथ आगे बढ़ रहा है। अब भारत चुनौतियों को टालता नहीं है बल्कि चुनौतियों से टकराता है। आप बीते 5-6 साल में देखिए, कोरोना की महामारी के बाद चुनौतियां एक के बाद एक बढ़ती ही गई हैं। ऐसा कोई साल नहीं है, जिसने भारत की, भारतीयों की परीक्षा न ली हो। लेकिन 140 करोड़ देशवासियों के एकजुट प्रयास से भारत हर आपदा का सामना करते हुए आगे बढ़ रहा है। इस समय युद्ध की परिस्थितियों में भी भारत की नीति और रणनीति देखकर, भारत का सामर्थ्य देखकर दुनिया के अनेकों देश हैरान हैं। हमारे यहां कहावत है, सांच को आंच नहीं। 28 फरवरी से दुनिया में जो उथल-पुथल मची है, इन कठोर विपरीत परिस्थितियों में भी भारत प्रगति के, विकास के, विश्वास के संकल्प के साथ आगे बढ़ रहा है। इन 23 दिनों में भारत ने अपनी Relationship Building Capacity दिखाई है, Decision Making Capacity दिखाई है और Crisis Management Capacity दिखाई है।

साथियों,

आज जब दुनिया इतने सारे खेमों में बंटी हुई है, भारत ने अभूतपूर्व और अकल्पनीय bridges बनाए हैं। Gulf से लेकर Global West तक, Global South से लेकर पड़ोसी देशों तक भारत सभी का trusted partner है। कुछ लोग पूछते हैं, हम किसके साथ हैं? तो उनको मेरा जवाब यही है कि हम भारत के साथ हैं, हम भारत के हितों के साथ हैं, शांति के साथ हैं, संवाद के साथ हैं।

साथियों,

संकट के इसी समय में जब global supply chains डगमगा रही हैं, भारत ने diversification और resilience का मॉडल पेश किया है। Energy हो, fertilizers हों या essential goods अपने नागरिकों को कम से कम परेशानी हो, इसके लिए भारत ने निरंतर प्रयास किया है और आज भी कर रहे है।

साथियों,

जब राष्ट्रनीति ही राजनीति का मुख्य आधार हो, तब देश का भविष्य सर्वोपरि होता है। लेकिन जब राजनीति में व्यक्तिगत स्वार्थ हावी हो जाता है, तब लोग देश के फ्यूचर के बजाय अपने फ्यूचर के बारे में सोचते हैं। आप ज़रा याद कीजिए 2004 से 2010 के बीच क्या हुआ था? तब कांग्रेस सरकार के समय पेट्रोल-डीजल और गैस की कीमतों का संकट आया था और तब कांग्रेस ने देश की नहीं बल्कि अपनी सत्ता की चिंता की। उस वक्त कांग्रेस ने एक लाख अड़तालीस हज़ार करोड़ रुपए के ऑयल बॉन्ड जारी किए थे और प्रधानमंत्री मनमोहन सिंह जी ने खुद कहा था कि वो आने वाली पीढ़ी पर कर्ज का बोझ डाल रहे हैं। यह जानते हुए भी कि ऑयल बॉन्ड का फैसला गलत है, जो रिमोट कंट्रोल से सरकार चला रहे थे, उन लोगों ने अपनी सत्ता बचाने के लिए यह गलत निर्णय किया क्योंकि जवाबदेही उस समय नहीं होनी थी, उस बॉन्ड पर री-पेमेंट 2020 के बाद होनी थी।

साथियों,

बीते 5-6 वर्षों में हमारी सरकार ने कांग्रेस सरकार के उस पाप को धोने का काम किया है, और इस धुलाई का खर्चा कम नहीं आया है, ऐसी लाँड्री आपने देखी नहीं होगी। 1 लाख 48 हज़ार करोड़ रुपए की जगह, देश को 3 लाख करोड़ रुपए से अधिक की पेमेंट करनी पड़ी क्योंकि इसमें ब्याज भी जुड़ गया था। यानी हमने करीब-करीब दोगुनी राशि चुकाने के लिए मजबूर हुए। आजकल कांग्रेस के जो नेता बयानों की मिसाइलें दाग रहे हैं, मिसाइल आई तो टीवी9 को मजा आएगा, उनकी इस विषय का जिक्र आते ही बोलती बंद हो जाती है।

साथियों,

पश्चिम एशिया में बनी परिस्थितियों पर मैंने आज लोकसभा में अपना वक्तव्य दिया है। दुनिया में जहां भी युद्ध हो रहे हैं, वो भारत की सीमा से दूर हैं। लेकिन आज की व्यवस्थाओं में कोई भी देश युद्धों से दुष्प्रभाव से दूर रहे, ऐसा संभव नहीं होता। अनेक देशों में तो स्थिति बहुत गंभीर हो चुकी है। और इन हालातों में हम देख रहे हैं कि राजनीतिक स्वार्थ से भरे कुछ लोग, कुछ दल, संकट के इस समय में भी अपने लिए राजनीतिक अवसर खोज रहे हैं। इसलिए मैं टीवी9 के मंच से फिर कहूंगा, यह समय संयम का है, संवेदनशीलता का है। हमने कोरोना महासंकट के दौरान भी देखा है, जब देशवासी एकजुट होकर संकट का सामना करते हैं, तो कितने सार्थक परिणाम आते हैं। इसी भाव के साथ हमें इस युद्ध से बनी परिस्थितियों का सामना करना है।

साथियों,

दुनिया की हर उथल-पुथल के बीच, भारत ने अपनी प्रगति की गति को भी बनाए रखा है। अगर मैं 28 फरवरी को युद्ध शुरू होने के बाद, बीते 23 दिनों का ही ब्यौरा दूं, तो पूरब से पश्चिम तक, उत्तर से दक्षिण तक देश में हजारों करोड़ के डेवलपमेंट प्रोजेक्ट्स का काम हुआ है। दिल्ली मेट्रो रेल के महत्वपूर्ण कॉरिडोर्स का लोकार्पण, सिलचर का हाई स्पीड कॉरिडोर का शिलान्यास, कोटा में नए एयरपोर्ट का शिलान्यास, मदुरै एयरपोर्ट को इंटरनेशनल एयरपोर्ट का दर्जा देना, ऐसे अनेक काम बीते 23 दिनों में ही हुए हैं। बीते एक महीने के दौरान ही औद्योगिक विकास को गति देने के लिए भव्य स्कीम को मंजूरी दी गई है। इसके तहत देशभर में 100 plug-and-play industrial parks विकसित किए जाएंगे। देश में Small Hydro Power Development Scheme को भी हरी झंडी दी गई है। इससे आने वाले वर्षों में 1,500 मेगावाट नई hydro power capacity जोड़ी जाएगी। इसी दौरान जल जीवन मिशन को साल 2028 तक बढ़ाने का निर्णय लिया गया है। किसानों के हित में भी अनेक बड़े निर्णय लिए गए हैं। बीते एक महीने में ही पीएम किसान सम्मान निधि के तहत 18 हजार करोड़ रुपए से अधिक सीधे किसानों के खातों में ट्रांसफर किए गए हैं। और जो हमारे MSMEs हैं, जो हमारे निर्यातक हैं, उनके लिए भी करीब 500 करोड़ रुपए के राहत पैकेज की भी घोषणा की गई है। यह सारे कदम इस बात का प्रमाण हैं कि विकसित भारत बनाने के लिए देश कितनी तेज गति से काम कर रहा है।

साथियों,

Management की दुनिया में एक सिद्धांत कहा जाता है - What gets measured, gets managed. लेकिन मैं इसमें एक बात और जोड़ना चाहता हूं, What gets measured, gets improved और ultimately, gets transformed. क्योंकि आकलन जागरूकता पैदा करता है। आकलन जवाबदेही तय करता है और सबसे महत्वपूर्ण आकलन संभावनाओं को जन्म देता है।

साथियों,

अगर आप 2014 से पहले के 10-11 साल और 2014 के बाद के 10-11 साल का आप आकलन करेंगे, तो यही पाएंगे कि कैसे इसी सिद्धांत पर चलते हुए, भारत ने हर सेक्टर को Transform किया है। जैसे पहले हाईवे बनते थे, करीब 11-12 किलोमीटर प्रति दिन की रफ्तार से, आज भारत करीब 30 किलोमीटर प्रतिदिन की स्पीड से हाईवे बना रहा है। पहले पोर्ट्स पर शिप का Turnaround Time, 5-6 दिन का होता था। आज वही काम, करीब-करीब 2 दिन से भी कम समय में पूरा हो रहा है। पहले Startup Culture के बारे में चर्चा ही नहीं होती थी। 2014 से पहले, हमारे देश में 400-500 स्टार्ट अप्स ही थे। आज भारत में 2 लाख से ज्यादा रजिस्ट्रर्ड स्टार्ट अप्स हैं। पहले मेडिकल education में सीटें भी सीमित थीं, करीब 50-55 हजार MBBS seats थीं, आज यह बढ़कर सवा लाख से ज्यादा हो चुकी हैं। पहले देश के Banking system से भी करोड़ों लोग बाहर थे। देश में सिर्फ 25 करोड़ के आसपास ही बैंक account थे। वहीं जनधन योजना के माध्यम से 55 करोड़ से ज्यादा बैंक अकाउंट खुले हैं। पहले हमारे देश में airports की संख्या भी 70 से कम थी। आज एयरपोर्ट्स की संख्या भी बढ़कर 160 से ज्यादा हो चुकी है।

साथियों,

पहले भी योजनाएं तो बनती थीं, लेकिन आज फर्क है, आज परिणाम दिखते हैं। पहले गति धीमी थी, आज भारत fastrack पर है। पहले संभावनाएं भी अंधकार में थीं, आज संकल्प सिद्धियों में बदल रहे हैं। इसलिए दुनिया को भी यह संदेश मिल रहा है कि यह नया भारत है। यह अपने विकास के लिए कोई कोर-कसर बाकी नहीं छोड़ रहा है।

साथियों,

आज हमारा प्रयास है कि अतीत में विकास का जो असंतुलन पैदा हो गया था, उसको अवसरों में बदला जाए। अब जैसे हमारा पूर्वी भारत है। हमारा पूर्वी भारत संसाधनों से समृद्ध है, दशकों तक वहां जिन्होंने सरकारें चलाई हैं, उनकी उपेक्षा ने पूर्वी भारत के विकास पर ब्रेक लगा दी थी। अब हालात बदल रहे हैं। जिस असम में कभी गोलियों की आवाज सुनाई देती थी, आज वहां सेमीकंडक्टर यूनिट बन रही है। ओडिशा में सेमीकंडक्टर से लेकर पेट्रोकेमिकल्स तक अनेक नए-नए सेक्टर का विकास हो रहा है। जिस बिहार में 6-7 दशक में गंगा जी पर एक बड़ा पुल बन पाया था एक, उस बिहार में पिछले एक दशक में 5 से ज्यादा नए पुल बनाए गए हैं। यूपी में कभी कट्टा मैन्युफैक्चरिंग की कहानियां कही जाती थीं, आज यूपी, मोबाइल फोन मैन्युफैक्चरिंग में दुनिया में अपनी पहचान बना रहा है।

साथियों,

पूर्वी भारत का एक और बड़ा राज्य पश्चिम बंगाल है। पश्चिम बंगाल, एक समय में भारत के कल्चर, एजुकेशन, इंडस्ट्री और ट्रेड का हब होता था। बीते 11 वर्षों में केंद्र सरकार ने पश्चिम बंगाल के विकास के लिए बड़ी मात्रा में निवेश किया है। लेकिन दुर्भाग्य से, आज वहां एक ऐसी निर्मम सरकार है, जो विकास पर ब्रेक लगाकर बैठी है। TV9 बांग्ला के जो दर्शक हैं, वो जानते हैं कि बंगाल में आयुष्मान योजना पर निर्मम सरकार ने ब्रेक लगाया हुआ है। पीएम सूर्यघर मुफ्त बिजली योजना पर ब्रेक लगाया हुआ है। पीएम आवास योजना पर ब्रेक लगाया हुआ है। चाय बागान श्रमिकों के लिए शुरू हुई योजना के लिए ब्रेक लगाया हुआ है। यानी विकास और जनकल्याण से ज्यादा प्राथमिकता निर्मम सरकार अपने राजनीतिक स्वार्थ को दे रही है।

साथियों,

देश में इस तरह की राजनीति की शुरुआत जिस दल ने की है, वो अपने गुनाहों से बच नहीं सकती और वो पार्टी है - कांग्रेस। कांग्रेस पार्टी की राजनीति का एक ही लक्ष्य रहा है, किसी भी तरह विकास का विरोध और कांग्रेस यह तब से कर रही है, जब मैं गुजरात में था। गुजरात में वर्षों तक जनता ने हमें आशीर्वाद दिया, तो कांग्रेस ने उस जनादेश को स्वीकार नहीं किया। उन्होंने गुजरात की छवि पर सवाल उठाए, उसकी प्रगति को कटघरे में खड़ा किया और जब यही विश्वास पूरे देश में दिखाई दिया, तो कांग्रेस का विरोध भी रीजनल से नेशनल हो गया।

साथियों,

जब राजनीति में विरोध, विकास के विरोध में बदल जाए, जब आलोचना देश की उपलब्धियों पर सवाल उठाने लगे, तब यह सिर्फ सरकार का विरोध नहीं रह जाता, यह देश की प्रगति से असहज होने की मानसिकता बन जाती है। आज कांग्रेस इसी मानसिकता की गुलाम बन चुकी है। आज स्थिति यह है कि देश की हर सफलता पर प्रश्न उठाया जाता है, हर उपलब्धि में कमी खोजी जाती है और हर प्रयास के असफल होने की कामना की जाती है। कोविड के समय, देश ने अपनी वैक्सीन बनाई, तो कांग्रेस ने उस पर भी संदेह जताया। Make in India की बात हुई, तो कहा गया कि यह सफल नहीं होगा, बब्बर शेर कहकर इसका मजाक उड़ाया गया। जब देश में डिजिटल इंडिया अभियान शुरू हुआ, तो उसका मजाक उड़ाया गया। लेकिन हर बार यह कांग्रेस का दुर्भाग्य और देश का सौभाग्य रहा कि भारत ने हर चुनौती को सफलता में बदला। आज भारत दुनिया की सबसे बड़ी वैक्सीनेशन ड्राइव का उदाहरण है। भारत डिजिटल पेमेंट्स में दुनिया का अग्रणी देश है। भारत मैन्युफैक्चरिंग और स्टार्टअप्स में नई ऊंचाइयों को छू रहा है।

साथियों,

लोकतंत्र में विरोध जरूरी होता है। लेकिन विरोध और विद्वेष के बीच एक रेखा होती है। सरकार का विरोध करना लोकतांत्रिक अधिकार है। लेकिन देश को बदनाम करना, यह कांग्रेस की नीयत पर सवाल खड़ा करता है। जब विरोध इस स्तर तक पहुंच जाए कि देश की उपलब्धियां भी असहज करने लगें, तो यह राजनीति नहीं, यह दृष्टिकोण की समस्या है। अभी हमने ग्लोबल AI समिट में भी देखा है। जब पूरी दुनिया भारत में जुटी हुई थी, तो कांग्रेस के लोग कपड़े फाड़ने वहां पहुंच गए थे। इन लोगों को देश की इज्जत की कितनी परवाह है, यह इसी से पता चलता है। इसलिए आज आवश्यकता है कि देशहित को, दलहित से ऊपर रखा जाए क्योंकि अंत में राजनीति से ऊपर, राष्ट्र होता है, राष्ट्र का विकास होता है।

साथियों,

आज का यह दिन भी हमें यही प्रेरणा देता है। आज के ही दिन शहीद भगत सिंह, शहीद राजगुरु और शहीद सुखदेव ने देश के लिए सर्वोच्च बलिदान दिया था। आज ही, समाजवादी आंदोलन के प्रखर आदर्श डॉ. राम मनोहर लोहिया जी की जयंती भी है। यह वो प्रेरणाएं हैं, जिन्होंने देश को हमेशा स्व से ऊपर रखा है। देशहित को सबसे ऊपर रखने की यही प्रेरणा, भारत को विकसित भारत बनाएगी। यही प्रेरणा भारत को आत्मनिर्भर बनाएगी। मुझे पूरा विश्वास है कि टीवी9 की यह समिट भी भारत के आत्मविश्वास और दुनिया के भरोसे पर, भारतीयों पर जो भरोसा है, उस भरोसे को और सशक्त करेगी। आप सभी को मेरी तरफ से बहुत-बहुत शुभकामनाएं हैं और आपके बीच आने का अवसर दिया, आप सबसे मिलने का मौका लिया, इसलिए बहुत-बहुत धन्यवाद!

नमस्‍कार!