ದ್ವಿಪಕ್ಷೀಯ ಸಂಬಂಧಗಳಿಗೆ ಅಧ್ಯಕ್ಷ ಬಿಡೆನ್ ಅವರ ದೃಷ್ಟಿ ಮತ್ತು ಬದ್ಧತೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು
ಪ್ರಧಾನಮಂತ್ರಿಯವರ ಐತಿಹಾಸಿಕ ಅಮೆರಿಕದ ಭೇಟಿಯ ಒಪ್ಪಂದಗಳನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಗತಿಯ ಬಗ್ಗೆ ಉಭಯ ನಾಯಕರಿಂದ ಶ್ಲಾಘನೆ
ಇಬ್ಬರು ನಾಯಕರು ಐಸಿಇಟಿ, ರಕ್ಷಣೆ, ಬಾಹ್ಯಾಕಾಶ ಮತ್ತು ಇತರ ಕ್ಷೇತ್ರಗಳಲ್ಲಿ ನಿರಂತರ ಪ್ರಗತಿಯ ಬಗ್ಗೆ ಶ್ಲಾಘಿಸಿದರು
ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ರ ಐತಿಹಾಸಿಕ ಲ್ಯಾಂಡಿಂಗ್ಗಾಗಿ ಅಧ್ಯಕ್ಷ ಬಿಡೆನ್ ಭಾರತವನ್ನು ಅಭಿನಂದಿಸಿದ್ದಾರೆ
ಅವರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ
ಭಾರತದ ಜಿ20 ಅಧ್ಯಕ್ಷತೆಗೆ ಅಮೆರಿಕದ ನಿರಂತರ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಬಿಡೆನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷರಾದ ಶ್ರೀ ಜೋಸೆಫ್ ಆರ್. ಬಿಡೆನ್ ಇಂದು ನವದೆಹಲಿಯಲ್ಲಿ. ಅಧ್ಯಕ್ಷರಾದ ನಂತರ   ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಅಧ್ಯಕ್ಷ ಬಿಡೆನ್, 2023 ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
 
ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾರ್ಯತಂತ್ರದ ಮೈತ್ರಿಗಳು ಮತ್ತು ಜನರಿಂದ ಜನರ ಬಲವಾದ ಸಂಬಂಧಗಳ ಆಧಾರದ ಮೇಲೆ ಭಾರತ-ಅಮೆರಿಕ  ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಅಧ್ಯಕ್ಷ ಬಿಡೆನ್ ಅವರ ದೂರದೃಷ್ಟಿ ಮತ್ತು ಬದ್ಧತೆಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜೂನ್ 2023 ರಲ್ಲಿ ಪ್ರಧಾನ ಮಂತ್ರಿಯವರ ಐತಿಹಾಸಿಕ ಅಮೆರಿಕದ ಭೇಟಿಯಲ್ಲಿ ಮಾಡಿದ್ದ ಒಪ್ಪಂದಗಳನ್ನು ಅನುಷ್ಠಾನಗೊಳಿಸುವಲ್ಲಿನ ಪ್ರಗತಿಯನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. ಇದು ಭಾರತ-ಯುಎಸ್ ಇನಿಶಿಯೇಟಿವ್ ಫಾರ್ ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (iCET) ಅನ್ನು ಸಹ ಒಳಗೊಂಡಿರುತ್ತದೆ.

ರಕ್ಷಣೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಆರೋಗ್ಯ, ಸಂಶೋಧನೆ, ನಾವೀನ್ಯತೆ, ಸಂಸ್ಕೃತಿ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದಲ್ಲಿನ ನಿರಂತರ ಪ್ರಗತಿಯನ್ನು  ಇಬ್ಬರು ನಾಯಕರು ಸ್ವಾಗತಿಸಿದರು.

ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ರ ಐತಿಹಾಸಿಕ ಲ್ಯಾಂಡಿಂಗ್ಗಾಗಿ ಅಧ್ಯಕ್ಷ ಬಿಡೆನ್ ಪ್ರಧಾನಮಂತ್ರಿ ಮತ್ತು ಭಾರತದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು ಮತ್ತು ಬಾಹ್ಯಾಕಾಶದಲ್ಲಿ ಉಭಯ ದೇಶಗಳ ನಡುವಿನ ಘಹನವಾದ ಸಹಕಾರವನ್ನು ಎತ್ತಿ ತೋರಿಸಿದರು.

ಉಭಯ ನಾಯಕರು ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ-ಅಮೆರಿಕ ಪಾಲುದಾರಿಕೆ ಉಭಯ ದೇಶಗಳ ಜನರಿಗೆ ಮಾತ್ರವಲ್ಲದೆ ಜಾಗತಿಕ ಒಳಿತಿಗಾಗಿಯೂ ಪ್ರಯೋಜನಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಜಿ20 ಅಧ್ಯಕ್ಷತೆಯ ಯಶಸ್ಸನ್ನು ಖಾತ್ರಿಪಡಿಸುವಲ್ಲಿ ಅಮೆರಿಕದಿಂದ ಪಡೆದ ನಿರಂತರ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಬಿಡೆನ್ ಅವರಿಗೆ ಧನ್ಯವಾದ ಹೇಳಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Why ‘G RAM G’ Is Essential For A Viksit Bharat

Media Coverage

Why ‘G RAM G’ Is Essential For A Viksit Bharat
NM on the go

Nm on the go

Always be the first to hear from the PM. Get the App Now!
...
PM Modi shares a Sanskrit Subhashitam urging citizens to to “Arise, Awake” for Higher Purpose
January 13, 2026

The Prime Minister Shri Narendra Modi today shared a Sanskrit Subhashitam urging citizens to embrace the spirit of awakening. Success is achieved when one perseveres along life’s challenging path with courage and clarity.

In a post on X, Shri Modi wrote:

“उत्तिष्ठत जाग्रत प्राप्य वरान्निबोधत।

क्षुरस्य धारा निशिता दुरत्यया दुर्गं पथस्तत्कवयो वदन्ति॥”