ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಂತ್ರಜ್ಞಾನವನ್ನು ಮುಂದುವರಿಸುವಲ್ಲಿ ಮತ್ತು ದೇಶದ ಸ್ವಾವಲಂಬನೆಯನ್ನು ಮುನ್ನಡೆಸುವಲ್ಲಿ ಭಾರತದ ಯುವ ನಾವಿನ್ಯಕಾರರ ಪ್ರಮುಖ ಪಾತ್ರವನ್ನು ಶ್ಲಾಘಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, ಡಿಜಿಟಲ್ ಇಂಡಿಯಾ ಉಪಕ್ರಮವು ನಾವಿನ್ಯತೆಯ ಸಮರ್ಪಕ ಬಳಕೆಯ ಮೂಲಕ ಯುವಜನರನ್ನು ಸಬಲಗೊಳಿಸುತ್ತಾ ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ.
ಕಳೆದ 11 ವರ್ಷಗಳಲ್ಲಿ ತಂತ್ರಜ್ಞಾನದ ಶಕ್ತಿಯ ಸಮರ್ಪಕ ಬಳಕೆಯಿಂದಾಗಿ ಭಾರತದ ಜನರಿಗೆ ಅಸಂಖ್ಯಾತ ಅನುಕೂಲಗಳುಂಟಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಸೇವಾ ವಿಲೇವಾರಿ ಮತ್ತು ಪಾರದರ್ಶಕತೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
MyGovIndia ದ ಎಕ್ಸ್ ಪೋಸ್ಟ್‌ಗಳಿಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
“ಭಾರತದ ಯುವಜನರ ಶಕ್ತಿಯೊಂದಿಗೆ, ನಾವಿನ್ಯತೆ ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಇದು ಸ್ವಾವಲಂಬನೆ ಮತ್ತು ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿಸುವ ನಮ್ಮ ಪ್ರಯತ್ನಗಳಿಗೆ ಬಲ ತುಂಬಿದೆ.
#11YearsOfDigitalIndia”
“ತಂತ್ರಜ್ಞಾನದ ಶಕ್ತಿಯ ಸಮರ್ಥ ಬಳಕೆಯಿಂದಾಗಿ ಜನರಿಗೆ ಅಸಂಖ್ಯಾತ ಪ್ರಯೋಜನಗಳಾಗಿವೆ. ಸೇವಾ ವಿತರಣೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಉತ್ತೇಜನ ದೊರೆತಿದೆ. ಇದಲ್ಲದೇ, ತಂತ್ರಜ್ಞಾನವು ಕಡುಬಡವರ ಜೀವನವನ್ನು ಸಬಲಗೊಳಿಸುವ ಸಾಧನವಾಗಿದೆ.
#11YearsOfDigitalIndia”
Powered by the youth of India, we are making remarkable progress in innovation and application of technology. It is also strengthening our efforts to become self-reliant and a global tech powerhouse. #11YearsOfDigitalIndia https://t.co/fIHHMPVknX
— Narendra Modi (@narendramodi) June 12, 2025
Leveraging the power of technology has brought innumerable benefits for people. Service delivery and transparency have been greatly boosted. Furthermore, technology has become a means of empowering the lives of the poorest of poor. #11YearsOfDigitalIndia https://t.co/E9PkUo0vCZ
— Narendra Modi (@narendramodi) June 12, 2025


