ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹರಿಯಾಣದ ನೂಹ್‌ನಲ್ಲಿ ಆದ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. "ಪರಿಹಾರ ಮತ್ತು ರಕ್ಷಣೆಗಾಗಿ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಶ್ರೀ ಮೋದಿಯವರು ಹೇಳಿದ್ದಾರೆ.
ಪ್ರಧಾನ ಮಂತ್ರಿಯವರ ಕಛೇರಿಯು Xನಲ್ಲಿ ಪೋಸ್ಟ್ ಮಾಡಿ:
"ಹರಿಯಾಣದ ನೂಹ್‌ನಲ್ಲಿ ಸಂಭವಿಸಿದ ದುರಂತವು ಅತ್ಯಂತ ದುಃಖಕರವಾದ ವಿಷಯವಾಗಿದೆ. ಶೋಕದಲ್ಲಿರುವ ಕುಟುಂಬದ ಜನರಿಗೆ ನನ್ನ ಸಂತಾಪಗಳು. ದೇವರು ಅವರಿಗೆ ಈ ಕಠಿಣ ಸಮಯದಲ್ಲಿ ಅವರ ಕುಟುಂಬದ ಸದಸ್ಯರ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ, ದುರಂತದಲ್ಲಿ ಗಾಯಗೊಂಡವರು ಬೇಗ ಗುಣವಾಗಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಶ್ರಮಿಸುತ್ತಿದೆ: PM @narendramodi" ಎಂದು ಟ್ವೀಟ್ ಮಾಡಿದ್ದಾರೆ.
हरियाणा के नूंह में हुआ हादसा अत्यंत हृदयविदारक है। मेरी संवेदनाएं शोक-संतप्त परिजनों के साथ हैं। ईश्वर उन्हें इस कठिन समय में संबल प्रदान करे। इसके साथ ही मैं हादसे में घायल लोगों के शीघ्र स्वस्थ होने की कामना करता हूं। राज्य सरकार राहत और बचाव के हरसंभव प्रयास में जुटी है: PM…
— PMO India (@PMOIndia) April 26, 2025


