ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ವಿಶೇಷ ಪಡೆಗಳು ಕಾರ್ಯಾಚರಣೆ ಪ್ರದರ್ಶನಗಳಿಗೆ ಸಾಕ್ಷಿಯಾಗಿವೆ
"ನಮ್ಮ ನೌಕಾಪಡೆ ಸಿಬ್ಬಂದಿಯ ಸಮರ್ಪಣೆಗೆ ಭಾರತ ವಂದನೆ ಸಲ್ಲಿಸುತ್ತದೆ"
"ಸಿಂಧುದುರ್ಗ ಕೋಟೆಯು ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ"
"ವೀರ್ ಛತ್ರಪತಿ ಮಹಾರಾಜರಿಗೆ ಬಲವಾದ ನೌಕಾಪಡೆಯ ಮಹತ್ವ ತಿಳಿದಿತ್ತು"
"ನೌಕಾಪಡೆಯ ಅಧಿಕಾರಿಗಳು ಸಮವಸ್ತ್ರದಲ್ಲಿ ಭುಜದ ಮೇಲೆ ಧರಿಸಿರುವ ಹೊಸ ಅಲಂಕಾರ ಪಟ್ಟಿ(ಎಪಾಲೆಟ್‌ಗಳು) ಶಿವಾಜಿ ಮಹಾರಾಜರ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ"
"ಸಶಸ್ತ್ರ ಪಡೆಗಳಲ್ಲಿ ನಮ್ಮ ನಾರಿಶಕ್ತಿಯ ಬಲ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ"
"ಭಾರತವು ವಿಜಯಗಳು, ಶೌರ್ಯ, ಜ್ಞಾನ, ವಿಜ್ಞಾನ, ಕೌಶಲ್ಯ ಮತ್ತು ನಮ್ಮ ನೌಕಾ ಶಕ್ತಿಯ ಅದ್ಭುತ ಇತಿಹಾಸ ಹೊಂದಿದೆ"
"ಕರಾವಳಿ ಪ್ರದೇಶದ ಜನರ ಜೀವನ ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ"
"ಕೊಂಕಣವು ಅಭೂತಪೂರ್ವ ಸಾಧ್ಯತೆಗಳ ಪ್ರದೇಶವಾಗಿದೆ"
"ಪರಂಪರೆ ಮತ್ತು ಅಭಿವೃದ್ಧಿ, ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಾರ್ಗವಾಗಿದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ‘ನೌಕಾಪಡೆಯ ದಿನಾಚರಣೆ 2023’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಿಂಧುದುರ್ಗದ ತರ್ಕರ್ಲಿ ಬೀಚ್‌ನಿಂದ ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿ ನೌಕೆಗಳು, ವಿಮಾನಗಳು ಮತ್ತು ವಿಶೇಷ ಪಡೆಗಳ 'ಕಾರ್ಯಾಚರಣೆ ಪ್ರದರ್ಶನಗಳನ್ನು' ಅವರು ವೀಕ್ಷಿಸಿ, ಗೌರವ ರಕ್ಷೆ ಸ್ವೀಕರಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾಲ್ವಾನ್, ತಾರ್ಕರ್ಲಿ ಕರಾವಳಿಯ ಸಿಂಧುದುರ್ಗದ ಭವ್ಯವಾದ ಕೋಟೆಯ ಉದ್ದಕ್ಕೂ ಡಿಸೆಂಬರ್ 4ರ ಐತಿಹಾಸಿಕ ದಿನ, ವೀರ ಶಿವಾಜಿ ಮಹಾರಾಜರ ವೈಭವ ಮತ್ತು ರಾಜ್ಕೋಟ್ ಕೋಟೆಯಲ್ಲಿ ಅವರ ಅದ್ಭುತ ಪ್ರತಿಮೆ ಉದ್ಘಾಟಿಸಲಾಗಿದೆ. ಭಾರತೀಯ ನೌಕಾಪಡೆಯು ಭಾರತದ ಪ್ರತಿಯೊಬ್ಬ ಪ್ರಜೆಯನ್ನು ಉತ್ಸಾಹದಿಂದ ತುಂಬಿದೆ. ನೌಕಾಪಡೆಯ ದಿನಾಚರಣೆ ಅಂಗವಾಗಿ ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿದ ಪ್ರಧಾನಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಹೃದಯಗಳಿಗೆ ತಲೆಬಾಗಿ ನಮಸ್ಕರಿಸಿದರು.

ವಿಜಯಶಾಲಿಯಾದ ಸಿಂಧುದುರ್ಗದಲ್ಲಿ ನೌಕಾಪಡೆ ದಿನಾಚರಣೆ ಆಚರಿಸುತ್ತಿರುವುದು ನಿಜಕ್ಕೂ ಅಭೂತಪೂರ್ವ ಹೆಮ್ಮೆಯ ಕ್ಷಣವಾಗಿದೆ. "ಸಿಂಧುದುರ್ಗ ಕೋಟೆಯು ಭಾರತದ ಪ್ರತಿಯೊಬ್ಬ ಪ್ರಜೆಯಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ", ಯಾವುದೇ ರಾಷ್ಟ್ರಕ್ಕೆ ನೌಕಾ ಸಾಮರ್ಥ್ಯದ ಪ್ರಾಮುಖ್ಯತೆ ಗುರುತಿಸುವಲ್ಲಿ ಶಿವಾಜಿ ಮಹಾರಾಜರು ಹೊಂದಿದ್ದ ದೂರದೃಷ್ಟಿಯನ್ನು ಪ್ರಧಾನಿ ಸ್ಮರಿಸಿದರು. ಸಮುದ್ರಗಳ ಮೇಲೆ ಹಿಡಿತ ಹೊಂದಿರುವವರು ಪರಮ ಅಧಿಕಾರವನ್ನು ಹೊಂದಿರುತ್ತಾರೆ ಎಂಬ ಶಿವಾಜಿ ಮಹಾರಾಜರ ಶ್ಲಾಘನೆಯನ್ನು ಪುನರುಚ್ಚರಿಸಿದ ಪ್ರಧಾನಿ, ಅವರು ಪ್ರಬಲ ನೌಕಾಪಡೆಯನ್ನು ಸ್ಥಾಪಿಸಿದ್ದರು. ಕನ್ಹೋಜಿ ಆಂಗ್ರೆ, ಮಾಯಾಜಿ ನಾಯ್ಕ್ ಭಟ್ಕರ್ ಮತ್ತು ಹಿರೋಜಿ ಇಂದುಲ್ಕರ್ ಅವರಂತಹ ಯೋಧರಿಗೆ ನಮನ ಸಲ್ಲಿಸಿದ ಅವರು, ಇಂದಿಗೂ ಅವರು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

 

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಪ್ರೇರಿತರಾದ ಪ್ರಧಾನ ಮಂತ್ರಿ,  ಇಂದಿನ ಭಾರತವು ಗುಲಾಮಗಿರಿಯ ಮನಸ್ಥಿತಿ ತೊರೆದು ಮುನ್ನಡೆಯುತ್ತಿದೆ. ನೌಕಾದಳದ ಅಧಿಕಾರಿಗಳು ಸಮವಸ್ತ್ರದಲ್ಲಿ ಭುಜದ ಮೇಲೆ ಧರಿಸಿರುವ ಹೊಸ ಅಲಂಕಾರ ಪಟ್ಟಿ(ಎಪಾಲೆಟ್‌ಗಳು) ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಳೆದ ವರ್ಷ ನೌಕಾ ದಳ ಅನಾವರಣಗೊಳಿಸಿದ್ದನ್ನೂ ಅವರು ಸ್ಮರಿಸಿದರು. ಒಬ್ಬರ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಭಾವನೆಯೊಂದಿಗೆ, ಭಾರತೀಯ ನೌಕಾಪಡೆಯು ಈಗ ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ತನ್ನ ಶ್ರೇಣಿಯನ್ನು ಹೆಸರಿಸಲು ಹೊರಟಿದೆ.  ಸಶಸ್ತ್ರ ಪಡೆಗಳಲ್ಲಿ ನಾರಿಶಕ್ತಿ ಬಲಪಡಿಸಲು ಒತ್ತು ನೀಡಲಾಗಿದೆ. ನೌಕಾಪಡೆಯ ಹಡಗಿನಲ್ಲಿ ಭಾರತದ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿ ನೇಮಿಸಿದ್ದಕ್ಕಾಗಿ ಶ್ರೀ ಮೋದಿ ಅವರು ಭಾರತೀಯ ನೌಕಾಪಡೆಯನ್ನು ಅಭಿನಂದಿಸಿದರು.

140 ಕೋಟಿ ಭಾರತೀಯರ ವಿಶ್ವಾಸವೇ ಬಹುದೊಡ್ಡ ಶಕ್ತಿಯಾಗಿದ್ದು, ಭಾರತವು ದೊಡ್ಡ ಗುರಿಗಳನ್ನು ಹೊಂದಿದೆ. ಅವುಗಳನ್ನು ಪೂರ್ಣ ಸಂಕಲ್ಪದೊಂದಿಗೆ ಸಾಧಿಸಲು ಶ್ರಮಿಸುತ್ತಿದೆ. ವಿವಿಧ ರಾಜ್ಯಗಳ ಜನರು ‘ರಾಷ್ಟ್ರವೇ ಮೊದಲು’ ಎಂಬ ಮನೋಭಾವದಿಂದ ಮುನ್ನಡೆಯುತ್ತಿರುವುದರಿಂದ ನಿರ್ಣಯಗಳು, ಭಾವನೆಗಳು ಮತ್ತು ಆಕಾಂಕ್ಷೆಗಳ ಏಕತೆಯ ಸಕಾರಾತ್ಮಕ ಫಲಿತಾಂಶಗಳ ಒಂದು ನೋಟವು ಗೋಚರಿಸುತ್ತಿದೆ. "ಇಂದು, ದೇಶವು ಇತಿಹಾಸದಿಂದ ಸ್ಫೂರ್ತಿ ಪಡೆದಿದೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಮಾರ್ಗಸೂಚಿ ಸಿದ್ಧಪಡಿಸಲು ನಿರತವಾಗಿದೆ. ನಕಾರಾತ್ಮಕ ರಾಜಕಾರಣವನ್ನು ಸೋಲಿಸಿ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯಲು ಜನರು ಪಣ ತೊಟ್ಟಿದ್ದಾರೆ. ಈ ಸಂಕಲ್ಪವು ನಮ್ಮನ್ನು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಕೊಂಡೊಯ್ಯುತ್ತದೆ” ಎಂದು ಪ್ರಧಾನಿ ಹೇಳಿದರು.

ಭಾರತದ ವ್ಯಾಪಕ ಇತಿಹಾಸ ಪ್ರಸ್ತಾಪಿಸಿದ ಅವರು, ಇದು ಕೇವಲ ಗುಲಾಮಗಿರಿ, ಸೋಲು ಮತ್ತು ನಿರಾಶೆಗಳ ಬಗ್ಗೆ ಅಲ್ಲ, ಆದರೆ ಭಾರತದ ವಿಜಯಗಳು, ಧೈರ್ಯ, ಜ್ಞಾನ ಮತ್ತು ವಿಜ್ಞಾನ, ಕಲೆ ಮತ್ತು ಸೃಜನಶೀಲ ಕೌಶಲ್ಯಗಳು ಮತ್ತು ಭಾರತದ ಸಮುದ್ರ ಸಾಮರ್ಥ್ಯಗಳ ಅದ್ಭುತ ಅಧ್ಯಾಯಗಳನ್ನು ಒಳಗೊಂಡಿದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಯಾವುದೂ ಇಲ್ಲದಿದ್ದಾಗ ನಿರ್ಮಿಸಲಾದ ಸಿಂಧುದುರ್ಗದಂತಹ ಕೋಟೆಗಳ ಉದಾಹರಣೆ ನೀಡುವ ಮೂಲಕ ಅವರು ಭಾರತದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದರು. ಗುಜರಾತಿನ ಲೋಥಾಲ್‌ನಲ್ಲಿ ಕಂಡುಬಂದ ಸಿಂಧೂ ಕಣಿವೆ ನಾಗರಿಕತೆಯ ಬಂದರಿನ ಪರಂಪರೆ ಮತ್ತು ಸೂರತ್ ಬಂದರಿನಲ್ಲಿ 80ಕ್ಕೂ ಹೆಚ್ಚು ಹಡಗುಗಳನ್ನು ನಿಲ್ಲಿಸುತ್ತಿದ್ದ ಹಡಗು ಕಟ್ಟೆಯನ್ನು ಅವರು ಪ್ರಸ್ತಾಪಿಸಿದರು. ಚೋಳ ಸಾಮ್ರಾಜ್ಯದ ಮೂಲಕ ಆಗ್ನೇಯ ಏಷ್ಯಾದ ದೇಶಗಳಿಗೆ ವ್ಯಾಪಾರ ವಿಸ್ತರಿಸಲು ಭಾರತ ಹೊಂದಿದ್ದ ಕಡಲ ಬಲವನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ವಿದೇಶಿ ಶಕ್ತಿಗಳ ದಾಳಿಗೆ ಮೊದಲು ಸಿಲುಕಿದ್ದು ಭಾರತದ ಕಡಲ ಶಕ್ತಿ ಎಂದು ವಿಷಾದಿಸಿದ ಪ್ರಧಾನಿ, ದೋಣಿ ಮತ್ತು ಹಡಗುಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದ ಭಾರತವು ಸಮುದ್ರದ ನಿಯಂತ್ರಣವನ್ನು ಕಳೆದುಕೊಂಡಿತು, ಆ ಮೂಲಕ ಆಯಕಟ್ಟಿನ-ಆರ್ಥಿಕ ಶಕ್ತಿಯನ್ನು ಕಳೆದುಕೊಂಡಿತು. ಭಾರತವು ಅಭಿವೃದ್ಧಿಯತ್ತ ಸಾಗುತ್ತಿರುವಾಗ, ಕಳೆದುಹೋದ ವೈಭವವನ್ನು ಮರಳಿ ಪಡೆಯಬೇಕು. ನೀಲಿ ಆರ್ಥಿಕತೆಗೆ ಸರ್ಕಾರದ ಅಭೂತಪೂರ್ವ ಉತ್ತೇಜನ ನೀಡುತ್ತಿದೆ. 'ಸಾಗರಮಾಲಾ' ಅಡಿ ಬಂದರುಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಭಾರತವು 'ಸಾಗರದ ದೃಷ್ಟಿ' ಅಡಿ ತನ್ನ ಸಾಗರಗಳ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳುವತ್ತ ಸಾಗುತ್ತಿದೆ. ಮರ್ಚೆಂಟ್ ಶಿಪ್ಪಿಂಗ್ ಉತ್ತೇಜಿಸಲು ಸರ್ಕಾರವು ಹೊಸ ನಿಯಮಗಳನ್ನು ಮಾಡಿದೆ. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ನೌಕಾಯಾನ ಮಾಡುವವರ ಸಂಖ್ಯೆ 140%ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ತಿಳಿಸಿದರು.

 

ವರ್ತಮಾನದ ಮಹತ್ವಕ್ಕೆ ಒತ್ತು ನೀಡಿದ ಪ್ರಧಾನ ಮಂತ್ರಿ, "ಇದು ಭಾರತದ ಇತಿಹಾಸದ ಆ ಕಾಲಘಟ್ಟವಾಗಿದೆ, ಇದು ಕೇವಲ 5-10 ವರ್ಷಗಳಲ್ಲದ, ಮುಂಬರುವ ಶತಮಾನಗಳ ಭವಿಷ್ಯವನ್ನು ಬರೆಯಲಿದೆ". ಕಳೆದ 10 ವರ್ಷಗಳಲ್ಲಿ ಭಾರತವು 10ನೇ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ವೇಗವಾಗಿ 3ನೇ ಸ್ಥಾನದತ್ತ ಸಾಗುತ್ತಿದೆ. "ಭಾರತದಲ್ಲಿ ವಿಶ್ವಮಿತ್ರ(ಜಗತ್ತಿನ ಸ್ನೇಹಿತ)ನ ಉದಯವನ್ನು ಇಡೀ ಜಗತ್ತು ನೋಡುತ್ತಿದೆ". ಮೇಡ್ ಇನ್ ಇಂಡಿಯಾ, ತೇಜಸ್, ಕಿಸಾನ್ ಡ್ರೋನ್, ಯುಪಿಐ ಸಿಸ್ಟಮ್ ಮತ್ತು ಚಂದ್ರಯಾನ-3 ಕಾರ್ಯಕ್ರಮಗಳ ಜತೆಗೆ, ಸಾರಿಗೆ, ವಿಮಾನ, ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಉತ್ಪಾದನೆಯ ಆರಂಭದಿಂದಲೂ ರಕ್ಷಣೆಯಲ್ಲಿ ಸ್ವಾವಲಂಬನೆ ಗೋಚರಿಸುತ್ತಿದೆ ಎಂದರು.

ಕರಾವಳಿ ಮತ್ತು ಗಡಿ ಗ್ರಾಮಗಳನ್ನು ಕೊನೆಯ ಗ್ರಾಮಗಳ ಬದಲಿಗೆ ಮೊದಲ ಗ್ರಾಮ ಎಂದು ಪರಿಗಣಿಸುವ ಸರ್ಕಾರದ ಕಾರ್ಯ ವಿಧಾನವನ್ನು ಪುನರುಚ್ಚರಿಸಿದ ಶ್ರೀ ಮೋದಿ, "ಇಂದು, ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬದ ಜೀವನ ಸುಧಾರಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ". 2019ರಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ ಮತ್ತು ಈ ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆಯನ್ನು ಪ್ರಸ್ತಾಪಿಸಿದರು. 2014ರ ನಂತರ ಮೀನುಗಾರಿಕೆ ಉತ್ಪಾದನೆ ಶೇ.8ರಷ್ಟು ಹೆಚ್ಚಿದ್ದು, ರಫ್ತು ಶೇ.110ರಷ್ಟು ಹೆಚ್ಚಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ರೈತರಿಗೆ ವಿಮಾ ರಕ್ಷಣೆಯನ್ನು 2 ರಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ, ಅವರು ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಮೀನುಗಾರಿಕೆ ವಲಯದಲ್ಲಿ ಮೌಲ್ಯ ಸರಪಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ, ಸಾಗರಮಾಲಾ ಯೋಜನೆಯು ಕರಾವಳಿ ಪ್ರದೇಶಗಳಲ್ಲಿ ಆಧುನಿಕ ಸಂಪರ್ಕವನ್ನು ಬಲಪಡಿಸುತ್ತಿದೆ. ಇದಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದ್ದು, ಕರಾವಳಿ ಭಾಗಕ್ಕೆ ಹೊಸ ವ್ಯಾಪಾರ, ಕೈಗಾರಿಕೆ ಬರಲಿದೆ. ಸಮುದ್ರಾಹಾರ ಸಂಸ್ಕರಣೆ ಸಂಬಂಧಿತ ಉದ್ಯಮ ಮತ್ತು ಮೀನುಗಾರಿಕೆ ದೋಣಿಗಳ ಆಧುನೀಕರಣವನ್ನು ಸಹ ಕೈಗೊಳ್ಳಲಾಗುತ್ತಿದೆ.

"ಕೊಂಕಣವು ಅಭೂತಪೂರ್ವ ಸಾಧ್ಯತೆಗಳ ಪ್ರದೇಶವಾಗಿದೆ". ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದ ಪ್ರಧಾನಿ, ಸಿಂಧುದುರ್ಗ, ರತ್ನಗಿರಿ, ಅಲಿಬಾಗ್, ಪರ್ಭಾನಿ ಮತ್ತು ಧರಾಶಿವ್‌ನಲ್ಲಿ ವೈದ್ಯಕೀಯ ಕಾಲೇಜುಗಳ ಉದ್ಘಾಟನೆ, ಚಿಪಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಮತ್ತು ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅನ್ನು ಮಂಗಾವ್ ತನಕ ಸಂಪರ್ಕಿಸಲಾಗುತ್ತಿದೆ. ಗೋಡಂಬಿ ರೈತರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಮುದ್ರ ತೀರದಲ್ಲಿರುವ ವಸತಿ ಪ್ರದೇಶಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಪ್ರಯತ್ನದಲ್ಲಿ, ಉಷ್ಣ ವಲಯದ ಪೊದೆಗಳ(ಮ್ಯಾಂಗ್ರೋವ್‌ಗಳು) ವ್ಯಾಪ್ತಿ ವಿಸ್ತರಿಸಲು ಒತ್ತು ನೀಡುತ್ತಿರುವುದನ್ನು ಅವರು ಉಲ್ಲೇಖಿಸಿದರು. ಮಾಲ್ವಾನ್, ಆಚಾರ-ರತ್ನಗಿರಿ, ಮತ್ತು ದೇವಗಢ-ವಿಜಯದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವು ಸ್ಥಳಗಳನ್ನು ಕರಾವಳಿಯಲ್ಲಿ ಕಂಡುಬರುವ ಪೊದೆಗಳ(ಮ್ಯಾಂಗ್ರೋವ್) ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

 

"ಪರಂಪರೆ ಮತ್ತು ಅಭಿವೃದ್ಧಿ, ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಾರ್ಗವಾಗಿದೆ". ಛತ್ರಪತಿ ವೀರ ಶಿವಾಜಿ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಕೋಟೆ, ಕೊಂಕಣ ಸೇರಿದಂತೆ ಇಡೀ ಮಹಾರಾಷ್ಟ್ರದಲ್ಲಿ ನೂರಾರು ಕೋಟಿ ರೂ.ಗಳನ್ನು ಈ ಪರಂಪರೆಗಳ ಸಂರಕ್ಷಣೆಗೆ ವ್ಯಯಿಸಲು ಸಂಕಲ್ಪ ಮಾಡಲಾಗಿದೆ ಎಂದರು. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.

ದೆಹಲಿಯ ಹೊರಗೆ ಸೇನಾ ದಿನ, ನೌಕಾಪಡೆಯ ದಿನ ಮುಂತಾದ ಸಶಸ್ತ್ರ ಪಡೆಗಳ ದಿನವನ್ನು ನಡೆಸುವ ಹೊಸ ಸಂಪ್ರದಾಯ ಹುಟ್ಟುಹಾಕಲಾಗಿದೆ. ಇದು ಭಾರತದಾದ್ಯಂತ ಈ ಸಂದರ್ಭವನ್ನು ವಿಸ್ತರಿಸುತ್ತದೆ ಮತ್ತು ಹೊಸ ಸ್ಥಳಗಳು ಹೊಸ ಗಮನವನ್ನು ಸೆಳೆಯುತ್ತವೆ ಎಂದು ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ, ಶ್ರೀ ಏಕನಾಥ್ ಶಿಂಧೆ, ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಕೇಂದ್ರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಚಿವ ಶ್ರೀ ನಾರಾಯಣ ರಾಣೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರತಿ ವರ್ಷ ಡಿಸೆಂಬರ್ 4ರಂದು ನೌಕಾಪಡೆಯ ದಿನ ಆಚರಿಸಲಾಗುತ್ತದೆ. ಸಿಂಧುದುರ್ಗದಲ್ಲಿ ಆಯೋಜಿಸಿದ್ದ 'ನೌಕಾಪಡೆಯ ದಿನ 2023' ಆಚರಣೆಯು ಛತ್ರಪತಿ ಶಿವಾಜಿ ಮಹಾರಾಜರ ಶ್ರೀಮಂತ ಕಡಲ ಪರಂಪರೆಗೆ ಗೌರವ ಸಲ್ಲಿಸಿದೆ.. ಪ್ರಧಾನಿ ಅವರು ಕಳೆದ ವರ್ಷ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ನೌಕಾಪಡೆಗೆ ನಿಯುಕ್ತಿಗೊಳಿಸಿದಾಗ ಶಿವಾಜಿ ಮಹಾರಾಜರ ಮುದ್ರೆ ಇರುವ ಹೊಸ ನೌಕಾ ಧ್ವಜವನ್ನು ಭಾರತೀಯ ನೌಕಾಪಡೆಗೆ ಅಳವಡಿಸಿಕೊಳ್ಳಲಾಯಿತು.

ಪ್ರತಿ ವರ್ಷ, ನೌಕಾಪಡೆಯ ದಿನದ ಸಂದರ್ಭದಲ್ಲಿ, ಭಾರತೀಯ ನೌಕಾಪಡೆಯ ಹಡಗುಗಳು, ಜಲಾಂತರ್ಗಾಮಿಗಳು, ವಿಮಾನಗಳು ಮತ್ತು ವಿಶೇಷ ಪಡೆಗಳಿಂದ ‘ಕಾರ್ಯಾಚರಣೆ ಪ್ರದರ್ಶನಗಳನ್ನು’ ಆಯೋಜಿಸುವ ಸಂಪ್ರದಾಯವಿದೆ. ಈ 'ಕಾರ್ಯಾಚರಣೆಯ ಪ್ರದರ್ಶನಗಳು' ಭಾರತೀಯ ನೌಕಾಪಡೆಯು ಕೈಗೊಂಡ ಬಹು-ವಲಯ ಕಾರ್ಯಾಚರಣೆಗಳ ವಿವಿಧ ಅಂಶಗಳನ್ನು ವೀಕ್ಷಿಸಲು ಜನರಿಗೆ ಅವಕಾಶ ನೀಡುತ್ತದೆ. ಇದು ರಾಷ್ಟ್ರೀಯ ಭದ್ರತೆಗೆ ನೌಕಾಪಡೆಯ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ನಾಗರಿಕರಲ್ಲಿ ಸಮುದ್ರ ಪ್ರಜ್ಞೆಯನ್ನು ಸಾರುತ್ತದೆ.

ಕಾಂಬ್ಯಾಟ್ ಫ್ರೀ ಫಾಲ್, ಅತಿ ವೇಗದ ಓಟಗಳು, ಜೆಮಿನಿ ಮತ್ತು ಬೀಚ್ ಅಸಾಲ್ಟ್‌ನಲ್ಲಿ ಸ್ಲಿಥರಿಂಗ್ ಕಾರ್ಯಾಚರಣೆಗಳು, ಎಸ್ಎಆರ್ ಪ್ರದರ್ಶನ, VERTREP ಮತ್ತು SSM ಲಾಂಚ್ ಡಿಲ್, ಸೀಕಿಂಗ್ ಕಾರ್ಯಾಚರಣೆ, ಡಂಕ್ ಡೆಮೊ ಮತ್ತು ಸಬ್‌ಮೆರಿನ್ ಟ್ರಾನ್ಸಿಟ್, ಕಾಮೊವ್ ಕಾರ್ಯಾಚರಣೆ, ಶತ್ರು ಠಾಣಾಗಳ ತಟಸ್ಥಗೊಳಿಸುವಿಕೆ, ಶತ್ರು ಪೋಸ್ಟ್, ಸಣ್ಣ ತಂಡದ ಅಳವಡಿಕೆ - ಹೊರತೆಗೆಯುವಿಕೆ (STIE ಕಾರ್ಯಾಚರಣೆ), ಫ್ಲೈ ಪಾಸ್ಟ್, ನೇವಲ್ ಸೆಂಟ್ರಲ್ ಬ್ಯಾಂಡ್ ಡಿಸ್ ಪ್ಲೇ, ಕಂಟಿನ್ಯೂಟಿ ಡ್ರಿಲ್, ಹೊಂಪೈಪ್ ಡ್ಯಾನ್ಸ್, ಲೈಟ್ ಟ್ಯಾಟೂ ಡ್ರಮ್ಮರ್ಸ್ ಕಾಲ್ ಮತ್ತಿತರ ಸಾಹಸಮಯ ಪ್ರದರ್ಶನಗಳನ್ನು ಪ್ರಧಾನ ಮಂತ್ರಿ ವೀಕ್ಷಿಸಿದರು. ರಾಷ್ಟ್ರಗೀತೆಯ ನಂತರ ಕಾರ್ಯಕ್ರಮ ವಿಧ್ಯುಕ್ತವಾಗಿ ಮುಕ್ತಾಯ ಕಂಡಿತು.

 

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
How India's digital public infrastructure can push inclusive global growth

Media Coverage

How India's digital public infrastructure can push inclusive global growth
NM on the go

Nm on the go

Always be the first to hear from the PM. Get the App Now!
...
Our government is dedicated to tribal welfare in Chhattisgarh: PM Modi in Surguja
April 24, 2024
Our government is dedicated to tribal welfare in Chhattisgarh: PM Modi
Congress, in its greed for power, has destroyed India through consistent misgovernance and negligence: PM Modi
Congress' anti-Constitutional tendencies aim to provide religious reservations for vote-bank politics: PM Modi
Congress simply aims to loot the 'hard-earned money' of the 'common people' to fill their coffers: PM Modi
Congress will set a dangerous precedent by implementing an 'Inheritance Tax': PM Modi

मां महामाया माई की जय!

मां महामाया माई की जय!

हमर बहिनी, भाई, दद्दा अउ जम्मो संगवारी मन ला, मोर जय जोहार। 

भाजपा ने जब मुझे पीएम पद का उम्मीदवार बनाया था, तब अंबिकापुर में ही आपने लाल किला बनाया था। और जो कांग्रेस का इकोसिस्टम है आए दिन मोदी पर हमला करने के लिए जगह ढ़ूंढते रहते हैं। उस पूरी टोली ने उस समय मुझपर बहुत हमला बोल दिया था। ये लाल किला कैसे बनाया जा सकता है, अभी तो प्रधानमंत्री का चुनाव बाकि है, अभी ये लाल किले का दृश्य बना के वहां से सभा कर रहे हैं, कैसे कर रहे हैं। यानि तूफान मचा दिया था और बात का बवंडर बना दिया था। लेकिन आप की सोच थी वही  मोदी लाल किले में पहुंचा और राष्ट्र के नाम संदेश दिया। आज अंबिकापुर, ये क्षेत्र फिर वही आशीर्वाद दे रहा है- फिर एक बार...मोदी सरकार ! फिर एक बार...मोदी सरकार ! फिर एक बार...मोदी सरकार !

साथियों, 

कुछ महीने पहले मैंने आपसे छत्तीसगढ़ से कांग्रेस का भ्रष्टाचारी पंजा हटाने के लिए आशीर्वाद मांगा था। आपने मेरी बात का मान रखा। और इस भ्रष्टाचारी पंजे को साफ कर दिया। आज देखिए, आप सबके आशीर्वाद से सरगुजा की संतान, आदिवासी समाज की संतान, आज छत्तीसगढ़ के मुख्यमंत्री के रूप में छत्तीसगढ़ के सपनों को साकार कर रहा है। और मेरा अनन्य साथी भाई विष्णु जी, विकास के लिए बहुत तेजी से काम कर रहे हैं। आप देखिए, अभी समय ही कितना हुआ है। लेकिन इन्होंने इतने कम समय में रॉकेट की गति से सरकार चलाई है। इन्होंने धान किसानों को दी गारंटी पूरी कर दी। अब तेंदु पत्ता संग्राहकों को भी ज्यादा पैसा मिल रहा है, तेंदू पत्ता की खरीद भी तेज़ी से हो रही है। यहां की माताओं-बहनों को महतारी वंदन योजना से भी लाभ हुआ है। छत्तीसगढ़ में जिस तरह कांग्रेस के घोटालेबाज़ों पर एक्शन हो रहा है, वो पूरा देश देख रहा है।

साथियों, 

मैं आज आपसे विकसित भारत-विकसित छत्तीसगढ़ के लिए आशीर्वाद मांगने के लिए आया हूं। जब मैं विकसित भारत कहता हूं, तो कांग्रेस वालों का और दुनिया में बैठी कुछ ताकतों का माथा गरम हो जाता है। अगर भारत शक्तिशाली हो गया, तो कुछ ताकतों का खेल बिगड़ जाएगा। आज अगर भारत आत्मनिर्भर बन गया, तो कुछ ताकतों की दुकान बंद हो जाएगी। इसलिए वो भारत में कांग्रेस और इंडी-गठबंधन की कमज़ोर सरकार चाहते हैं। ऐसी कांग्रेस सरकार जो आपस में लड़ती रहे, जो घोटाले करती रहे। 

साथियों,

कांग्रेस का इतिहास सत्ता के लालच में देश को तबाह करने का रहा है। देश में आतंकवाद फैला किसके कारण फैला? किसके कारण फैला? किसके कारण फैला? कांग्रेस की नीतियों के कारण फैला। देश में नक्सलवाद कैसे बढ़ा? किसके कारण बढ़ा? किसके कारण बढ़ा? कांग्रेस का कुशासन और लापरवाही यही कारण है कि देश बर्बाद होता गया। आज भाजपा सरकार, आतंकवाद और नक्सलवाद के विरुद्ध कड़ी कार्रवाई कर रही है। लेकिन कांग्रेस क्या कर रही है? कांग्रेस, हिंसा फैलाने वालों का समर्थन कर रही है, जो निर्दोषों को मारते हैं, जीना हराम कर देते हैं, पुलिस पर हमला करते हैं, सुरक्षा बलों पर हमला करते हैं। अगर वे मारे जाएं, तो कांग्रेस वाले उन्हें शहीद कहते हैं। अगर आप उन्हें शहीद कहते हो तो शहीदों का अपमान करते हो। इसी कांग्रेस की सबसे बड़ी नेता, आतंकवादियों के मारे जाने पर आंसू बहाती हैं। ऐसी ही करतूतों के कारण कांग्रेस देश का भरोसा खो चुकी है।

भाइयों और बहनों, 

आज जब मैं सरगुजा आया हूं, तो कांग्रेस की मुस्लिम लीगी सोच को देश के सामने रखना चाहता हूं। जब उनका मेनिफेस्टो आया उसी दिन मैंने कह दिया था। उसी दिन मैंने कहा था कि कांग्रेस के मोनिफेस्टो पर मुस्लिम लीग की छाप है। 

साथियों, 

जब संविधान बन रहा था, काफी चर्चा विचार के बाद, देश के बुद्धिमान लोगों के चिंतन मनन के बाद, बाबासाहेब अम्बेडकर के नेतृत्व में तय किया गया था कि भारत में धर्म के आधार पर आरक्षण नहीं होगा। आरक्षण होगा तो मेरे दलित और आदिवासी भाई-बहनों के नाम पर होगा। लेकिन धर्म के नाम पर आरक्षण नहीं होगा। लेकिन वोट बैंक की भूखी कांग्रेस ने कभी इन महापुरुषों की परवाह नहीं की। संविधान की पवित्रता की परवाह नहीं की, बाबासाहेब अम्बेडकर के शब्दों की परवाह नहीं की। कांग्रेस ने बरसों पहले आंध्र प्रदेश में धर्म के आधार पर आरक्षण देने का प्रयास किया था। फिर कांग्रेस ने इसको पूरे देश में लागू करने की योजना बनाई। इन लोग ने धर्म के आधार पर 15 प्रतिशत आरक्षण की बात कही। ये भी कहा कि SC/ST/OBC का जो कोटा है उसी में से कम करके, उसी में से चोरी करके, धर्म के आधार पर कुछ लोगों को आरक्षण दिया जाए। 2009 के अपने घोषणापत्र में कांग्रेस ने यही इरादा जताया। 2014 के घोषणापत्र में भी इन्होंने साफ-साफ कहा था कि वो इस मामले को कभी भी छोड़ेंगे नहीं। मतलब धर्म के आधार पर आरक्षण देंगे, दलितों का, आदिवासियों का आरक्षण कट करना पड़े तो करेंगे। कई साल पहले कांग्रेस ने कर्नाटका में धर्म के आधार पर आरक्षण लागू भी कर दिया था। जब वहां बीजेपी सरकार आई तो हमने संविधान के विरुद्ध, बाबासाहेब अम्बेडर की भावना के विरुद्ध कांग्रेस ने जो निर्णय किया था, उसको उखाड़ करके फेंक दिया और दलितों, आदिवासियों और पिछड़ों को उनका अधिकार वापस दिया। लेकिन कर्नाटक की कांग्रेस सरकार उसने एक और पाप किया मुस्लिम समुदाय की सभी जातियों को ओबीसी कोटा में शामिल कर दिया है। और ओबीसी बना दिया। यानि हमारे ओबीसी समाज को जो लाभ मिलता था, उसका बड़ा हिस्सा कट गया और वो भी वहां चला गया, यानि कांग्रेस ने समाजिक न्याय का अपमान किया, समाजिक न्याय की हत्या की। कांग्रेस ने भारत के सेक्युलरिज्म की हत्या की। कर्नाटक अपना यही मॉडल पूरे देश में लागू करना चाहती है। कांग्रेस संविधान बदलकर, SC/ST/OBC का हक अपने वोट बैंक को देना चाहती है।

भाइयों और बहनों,

ये सिर्फ आपके आरक्षण को ही लूटना नहीं चाहते, उनके तो और बहुत कारनामे हैं इसलिए हमारे दलित, आदिवासी और ओबीसी भाई-बहनों  को कहना चाहता हूं कि कांग्रेस के इरादे नेक नहीं है, संविधान और सामाजिक न्याय के अनुरूप नहीं है , भारत की बिन सांप्रदायिकता के अनुरूप नहीं है। अगर आपके आरक्षण की कोई रक्षा कर सकता है, तो सिर्फ और सिर्फ भारतीय जनता पार्टी कर सकती है। इसलिए आप भारतीय जनता पार्टी को भारी समर्थन दीजिए। ताकि कांग्रेस की एक न चले, किसी राज्य में भी वह कोई हरकत ना कर सके। इतनी ताकत आप मुझे दीजिए। ताकि मैं आपकी रक्षा कर सकूं। 

साथियों!

कांग्रेस की नजर! सिर्फ आपके आरक्षण पर ही है ऐसा नहीं है। बल्कि कांग्रेस की नज़र आपकी कमाई पर, आपके मकान-दुकान, खेत-खलिहान पर भी है। कांग्रेस के शहज़ादे का कहना है कि ये देश के हर घर, हर अलमारी, हर परिवार की संपत्ति का एक्स-रे करेंगे। हमारी माताओं-बहनों के पास जो थोड़े बहुत गहने-ज़ेवर होते हैं, कांग्रेस उनकी भी जांच कराएगी। यहां सरगुजा में तो हमारी आदिवासी बहनें, चंदवा पहनती हैं, हंसुली पहनती हैं, हमारी बहनें मंगलसूत्र पहनती हैं। कांग्रेस ये सब आपसे छीनकर, वे कहते हैं कि बराबर-बराबर डिस्ट्रिब्यूट कर देंगे। वो आपको मालूम हैं ना कि वे किसको देंगे। आपसे लूटकर के किसको देंगे मालूम है ना, मुझे कहने की जरूरत है क्या। क्या ये पाप करने देंगे आप और कहती है कांग्रेस सत्ता में आने के बाद वे ऐसे क्रांतिकारी कदम उठाएगी। अरे ये सपने मन देखो देश की जनता आपको ये मौका नहीं देगी। 

साथियों, 

कांग्रेस पार्टी के खतरनाक इरादे एक के बाद एक खुलकर सामने आ रहे हैं। शाही परिवार के शहजादे के सलाहकार, शाही परिवार के शहजादे के पिताजी के भी सलाहकार, उन्होंने  ने कुछ समय पहले कहा था और ये परिवार उन्हीं की बात मानता है कि उन्होंने कहा था कि हमारे देश का मिडिल क्लास यानि मध्यम वर्गीय लोग जो हैं, जो मेहनत करके कमाते हैं। उन्होंने कहा कि उनपर ज्यादा टैक्स लगाना चाहिए। इन्होंने पब्लिकली कहा है। अब ये लोग इससे भी एक कदम और आगे बढ़ गए हैं। अब कांग्रेस का कहना है कि वो Inheritance Tax लगाएगी, माता-पिता से मिलने वाली विरासत पर भी टैक्स लगाएगी। आप जो अपनी मेहनत से संपत्ति जुटाते हैं, वो आपके बच्चों को नहीं मिलेगी, बल्कि कांग्रेस सरकार का पंजा उसे भी आपसे छीन लेगा। यानि कांग्रेस का मंत्र है- कांग्रेस की लूट जिंदगी के साथ भी और जिंदगी के बाद भी। जब तक आप जीवित रहेंगे, कांग्रेस आपको ज्यादा टैक्स से मारेगी। और जब आप जीवित नहीं रहेंगे, तो वो आप पर Inheritance Tax का बोझ लाद देगी। जिन लोगों ने पूरी कांग्रेस पार्टी को पैतृक संपत्ति मानकर अपने बच्चों को दे दी, वो लोग नहीं चाहते कि एक सामान्य भारतीय अपने बच्चों को अपनी संपत्ति दे। 

भाईयों-बहनों, 

हमारा देश संस्कारों से संस्कृति से उपभोक्तावादी देश नहीं है। हम संचय करने में विश्वास करते हैं। संवर्धन करने में विश्वास करते हैं। संरक्षित करने में विश्वास करते हैं। आज अगर हमारी प्रकृति बची है, पर्यावरण बचा है। तो हमारे इन संस्कारों के कारण बचा है। हमारे घर में बूढ़े मां बाप होंगे, दादा-दादी होंगे। उनके पास से छोटा सा भी गहना होगा ना? अच्छी एक चीज होगी। तो संभाल करके रखेगी खुद भी पहनेगी नहीं, वो सोचती है कि जब मेरी पोती की शादी होगी तो मैं उसको यह दूंगी। मेरी नाती की शादी होगी, तो मैं उसको दूंगी। यानि तीन पीढ़ी का सोच करके वह खुद अपना हक भी नहीं भोगती,  बचा के रखती है, ताकि अपने नाती, नातिन को भी दे सके। यह मेरे देश का स्वभाव है। मेरे देश के लोग कर्ज कर करके जिंदगी जीने के शौकीन लोग नहीं हैं। मेहनत करके जरूरत के हिसाब से खर्च करते हैं। और बचाने के स्वभाव के हैं। भारत के मूलभूत चिंतन पर, भारत के मूलभूत संस्कार पर कांग्रेस पार्टी कड़ा प्रहार करने जा रही है। और उन्होंने कल यह बयान क्यों दिया है उसका एक कारण है। यह उनकी सोच बहुत पुरानी है। और जब आप पुरानी चीज खोजोगे ना? और ये जो फैक्ट चेक करने वाले हैं ना मोदी की बाल की खाल उधेड़ने में लगे रहते हैं, कांग्रेस की हर चीज देखिए। आपको हर चीज में ये बू आएगी। मोदी की बाल की खाल उधेड़ने में टाइम मत खराब करो। लेकिन मैं कहना चाहता हूं। यह कल तूफान उनके यहां क्यों मच गया,  जब मैंने कहा कि अर्बन नक्सल शहरी माओवादियों ने कांग्रेस पर कब्जा कर लिया तो उनको लगा कि कुछ अमेरिका को भी खुश करने के लिए करना चाहिए कि मोदी ने इतना बड़ा आरोप लगाया, तो बैलेंस करने के लिए वह उधर की तरफ बढ़ने का नाटक कर रहे हैं। लेकिन वह आपकी संपत्ति को लूटना चाहते हैं। आपके संतानों का हक आज ही लूट लेना चाहते हैं। क्या आपको यह मंजूर है कि आपको मंजूर है जरा पूरी ताकत से बताइए उनके कान में भी सुनाई दे। यह मंजूर है। देश ये चलने देगा। आपको लूटने देगा। आपके बच्चों की संपत्ति लूटने देगा।

साथियों,

जितने साल देश में कांग्रेस की सरकार रही, आपके हक का पैसा लूटा जाता रहा। लेकिन भाजपा सरकार आने के बाद अब आपके हक का पैसा आप लोगों पर खर्च हो रहा है। इस पैसे से छत्तीसगढ़ के करीब 13 लाख परिवारों को पक्के घर मिले। इसी पैसे से, यहां लाखों परिवारों को मुफ्त राशन मिल रहा है। इसी पैसे से 5 लाख रुपए तक का मुफ्त इलाज मिल रहा है। मोदी ने ये भी गारंटी दी है कि 4 जून के बाद छत्तीसगढ़ के हर परिवार में जो बुजुर्ग माता-पिता हैं, जिनकी आयु 70 साल हो गई है। आज आप बीमार होते हैं तो आपकी बेटे और बेटी को खर्च करना पड़ता है। अगर 70 साल की उम्र हो गई है और आप किसी पर बोझ नहीं बनना चाहते तो ये मोदी आपका बेटा है। आपका इलाज मोदी करेगा। आपके इलाज का खर्च मोदी करेगा। सरगुजा के ही करीब 1 लाख किसानों के बैंक खाते में किसान निधि के सवा 2 सौ करोड़ रुपए जमा हो चुके हैं और ये आगे भी होते रहेंगे।

साथियों, 

सरगुजा में करीब 400 बसाहटें ऐसी हैं जहां पहाड़ी कोरवा परिवार रहते हैं। पण्डो, माझी-मझवार जैसी अनेक अति पिछड़ी जनजातियां यहां रहती हैं, छत्तीसगढ़ और दूसरे राज्यों में रहती हैं। हमने पहली बार ऐसी सभी जनजातियों के लिए, 24 हज़ार करोड़ रुपए की पीएम-जनमन योजना भी बनाई है। इस योजना के तहत पक्के घर, बिजली, पानी, शिक्षा, स्वास्थ्य, कौशल विकास, ऐसी सभी सुविधाएं पिछड़ी जनजातियों के गांव पहुंचेंगी। 

साथियों, 

10 वर्षों में भांति-भांति की चुनौतियों के बावजूद, यहां रेल, सड़क, अस्तपताल, मोबाइल टावर, ऐसे अनेक काम हुए हैं। यहां एयरपोर्ट की बरसों पुरानी मांग पूरी की गई है। आपने देखा है, अंबिकापुर से दिल्ली के ट्रेन चली तो कितनी सुविधा हुई है।

साथियों,

10 साल में हमने गरीब कल्याण, आदिवासी कल्याण के लिए इतना कुछ किया। लेकिन ये तो सिर्फ ट्रेलर है। आने वाले 5 साल में बहुत कुछ करना है। सरगुजा तो ही स्वर्गजा यानि स्वर्ग की बेटी है। यहां प्राकृतिक सौंदर्य भी है, कला-संस्कृति भी है, बड़े मंदिर भी हैं। हमें इस क्षेत्र को बहुत आगे लेकर जाना है। इसलिए, आपको हर बूथ पर कमल खिलाना है। 24 के इस चुनाव में आप का ये सेवक नरेन्द्र मोदी को आपका आशीर्वाद चाहिए, मैं आपसे आशीर्वाद मांगने आया हूं। आपको केवल एक सांसद ही नहीं चुनना, बल्कि देश का उज्ज्वल भविष्य भी चुनना है। अपनी आने वाली पीढ़ियों का भविष्य चुनना है। इसलिए राष्ट्र निर्माण का मौका बिल्कुल ना गंवाएं। सर्दी हो शादी ब्याह का मौसम हो, खेत में कोई काम निकला हो। रिश्तेदार के यहां जाने की जरूरत पड़ गई हो, इन सबके बावजूद भी कुछ समय आपके सेवक मोदी के लिए निकालिए। भारत के लोकतंत्र और उज्ज्वल भविष्य के लिए निकालिए। आपके बच्चों की गारंटी के लिए निकालिए और मतदान अवश्य करें। अपने बूथ में सारे रिकॉर्ड तोड़नेवाला मतदान हो। इसके लिए मैं आपसे प्रार्थना करता हूं। और आग्राह है पहले जलपान फिर मतदान। हर बूथ में मतदान का उत्सव होना चाहिए, लोकतंत्र का उत्सव होना चाहिए। गाजे-बाजे के साथ लोकतंत्र जिंदाबाद, लोकतंत्र जिंदाबाद करते करते मतदान करना चाहिए। और मैं आप को वादा करता हूं। 

भाइयों-बहनों  

मेरे लिए आपका एक-एक वोट, वोट नहीं है, ईश्वर रूपी जनता जनार्दन का आर्शीवाद है। ये आशीर्वाद परमात्मा से कम नहीं है। ये आशीर्वाद ईश्वर से कम नहीं है। इसलिए भारतीय जनता पार्टी को दिया गया एक-एक वोट, कमल के फूल को दिया गया एक-एक वोट, विकसित भारत बनाएगा ये मोदी की गारंटी है। कमल के निशान पर आप बटन दबाएंगे, कमल के फूल पर आप वोट देंगे तो वो सीधा मोदी के खाते में जाएगा। वो सीधा मोदी को मिलेगा।      

भाइयों और बहनों, 

7 मई को चिंतामणि महाराज जी को भारी मतों से जिताना है। मेरा एक और आग्रह है। आप घर-घर जाइएगा और कहिएगा मोदी जी ने जोहार कहा है, कहेंगे। मेरे साथ बोलिए...  भारत माता की जय! 

भारत माता की जय! 

भारत माता की जय!