ರಾಷ್ಟ್ರ ನಿರ್ಮಾಣದತ್ತ ಭಾರತದ ಭಾರತದ ಯುವಜನತೆಗೆ ನಿರಂತರವಾಗಿ ಪ್ರೇರಣೆ ನೀಡುತ್ತಿರುವ ಎನ್‌ಸಿಸಿ: ಪ್ರಧಾನಮಂತ್ರಿ
ಜಾಗತಿಕ ಒಳಿತಿಗೆ ಭಾರತದ ಯುವಕರು ಒಂದು ಶಕ್ತಿ ಎನಿಸಿದ್ದಾರೆ: ಪ್ರಧಾನಮಂತ್ರಿ
ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ಯುವಜನತೆ ಎದುರಿಸುತ್ತಿರುವ ಅನೇಕ ಅಡೆತಡೆಗಳನ್ನು ತೆಗೆದುಹಾಕುವತ್ತ ನಾವು ಕೆಲಸ ಮಾಡಿದ್ದು, ಇದು ಭಾರತದ ಯುವಕರ ಸಾಮರ್ಥ್ಯವನ್ನು ಹೆಚ್ಚಿಸಿದೆ: ಪ್ರಧಾನಮಂತ್ರಿ
ಈ ಅಮೃತ ಕಾಲದಲ್ಲಿ, ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಒಂದೇ ಒಂದು ಗುರಿ- ವಿಕಸಿತ ಭಾರತ, ನಮ್ಮ ಪ್ರತಿಯೊಂದು ನಿರ್ಧಾರಕ್ಕೂ ಮಾನದಂಡ, ಹಾಗೆಯೇ ನಮ್ಮ ಪ್ರತಿಯೊಂದು ಕ್ರಿಯೆಯೂ ವಿಕಸಿತ ಭಾರತವೇ ಆಗಿರಬೇಕು: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ವಾರ್ಷಿಕ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಪ್ರಧಾನಮಂತ್ರಿ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದ ಶ್ರೀ ಮೋದಿ ಅವರು ಅತ್ಯುತ್ತಮ ಕೆಡೆಟ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಎನ್‌ಸಿಸಿ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಗಳು, 18 ಸ್ನೇಹಪರ ರಾಷ್ಟ್ರಗಳಿಂದ ಸುಮಾರು 150 ಕೆಡೆಟ್‌ಗಳಿದ್ದು, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ "ಮೇರಾ ಯುವ ಭಾರತ್" (ಎಂವೈ ಭಾರತ್) ಪೋರ್ಟಲ್ ಮೂಲಕ ವರ್ಚುವಲ್ ಆಗಿ ದೇಶದ ಎಲ್ಲ ಭಾಗಗಳಿಂದ ಪಾಲ್ಗೊಂಡಿದ್ದ ಯುವಜನತೆಯನ್ನೂ ಅವರು ಅಭಿನಂದಿಸಿದರು. 

"ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆಯಾಗಿರುವುದು ಒಂದು ಸಾಧನೆ" ಎಂದು ಬಣ್ಣಿಸಿದ ಪ್ರಧಾನ ಮಂತ್ರಿಗಳು, ಭಾರತವು ಗಣರಾಜ್ಯವಾಗಿ 75 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷದ ಗಣರಾಜ್ಯೋತ್ಸವವು ಬಹಳ ವಿಶೇಷವಾಗಿದ್ದು, ಈ ನೆನಪುಗಳು ಜೀವನಪರ್ಯಂತ ಸ್ಮರಣೆಯಲ್ಲಿ ಉಳಿಯುತ್ತವೆ ಮತ್ತು ಕೆಡೆಟ್‌ಗಳು ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸಿದ್ದಕ್ಕಾಗಿ ಹೆಮ್ಮೆಪಡುತ್ತಾರೆ ಎಂದು ಅವರು ಹೇಳಿದರು. ಪ್ರಶಸ್ತಿಗಳನ್ನು ಗೆದ್ದ ಕೆಡೆಟ್‌ಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಇಂದು ಎನ್‌ಸಿಸಿಯ ಹಲವಾರು ಅಭಿಯಾನಗಳಿಗೆ ಚಾಲನೆ ನೀಡುವ ಅವಕಾಶ ಸಿಕ್ಕಿದೆ. ಇಂತಹ ಅಭಿಯಾನಗಳು ಭಾರತದ ಪರಂಪರೆಯನ್ನು ಯುವಕರ ಆಕಾಂಕ್ಷೆಗಳೊಂದಿಗೆ ಸಂಪರ್ಕಿಸುತ್ತವೆ. ಈ ಅಭಿಯಾನಗಳಲ್ಲಿ ಭಾಗಿಯಾಗಿರುವ ಎಲ್ಲಾ ಕೆಡೆಟ್‌ಗಳಿಗೆ ಶುಭಾಶಯ ತಿಳಿಸುವುದಾಗಿ ಹೇಳಿದರು.

 

ಭಾರತದ ಸ್ವಾತಂತ್ರ್ಯದ ಸರಿಸುಮಾರಿನ ಸಮಯದಲ್ಲೇ ಎನ್‌ಸಿಸಿ ಕೂಡ ಸ್ಥಾಪನೆಯಾಯಿತು ಎಂದ ಶ್ರೀ ಮೋದಿ ಅವರು, ದೇಶದ ಸಂವಿಧಾನ ಅಸ್ತಿತ್ವಕ್ಕೆ ಬರುವ ಮೊದಲೇ ಎನ್‌ಸಿಸಿ ತನ್ನ ಪ್ರಯಾಣ ಆರಂಭಿಸಿತ್ತು. ಗಣರಾಜ್ಯದ ಈ 75 ವರ್ಷಗಳಲ್ಲಿ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರೇರಣೆ ನೀಡುವ ಜತೆಗೆ ನಾಗರಿಕ ಕರ್ತವ್ಯಗಳ ಮಹತ್ವವನ್ನು ಒತ್ತಿ ಹೇಳಿದೆ ಎಂದು ಶ್ರೀ ಮೋದಿ ಹೇಳಿದರು. ಅದೇರೀತಿ, ಎನ್‌ಸಿಸಿ ಭಾರತದ ಯುವಕರಿಗೆ ರಾಷ್ಟ್ರ ನಿರ್ಮಾಣದಲ್ಲಿ ಸ್ಫೂರ್ತಿ ನೀಡಿದೆ ಮತ್ತು ಅವರಿಗೆ ಶಿಸ್ತಿನ ಮಹತ್ವವನ್ನು ಕಲಿಸಿದೆ. ಇತ್ತೀಚಿನ ವರ್ಷಗಳಲ್ಲಿ ಎನ್‌ಸಿಸಿಯ ವ್ಯಾಪ್ತಿ ಮತ್ತು ಜವಾಬ್ದಾರಿಗಳನ್ನು ವಿಸ್ತರಿಸಲು ಸರ್ಕಾರ ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಎನ್‌ಸಿಸಿಯನ್ನು ಗಡಿ ಪ್ರದೇಶಗಳು ಮತ್ತು ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ, 170ಕ್ಕೂ ಹೆಚ್ಚು ಗಡಿ ತಾಲೂಕುಗಳು ಮತ್ತು ಸುಮಾರು 100 ಕರಾವಳಿ ತಾಲೂಕುಗಳು ಈಗ ಎನ್‌ಸಿಸಿ ಪ್ರಾತಿನಿಧ್ಯ ಹೊಂದಿವೆ ಎಂದು ಅವರು ಗಮನ ಸೆಳೆದರು. ಈ ಜಿಲ್ಲೆಗಳಲ್ಲಿನ ಯುವ ಎನ್‌ಸಿಸಿ ಕೆಡೆಟ್‌ಗಳಿಗೆ ವಿಶೇಷವಾಗಿ ತರಬೇತಿ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕಾಗಿ ಮೂರು ಸಶಸ್ತ್ರ ಪಡೆಗಳನ್ನು ಅಭಿನಂದಿಸುವುದಾಗಿ ಪ್ರಧಾನ ಮಂತ್ರಿಗಳು ಹೇಳಿದರು. ಈ ಉಪಕ್ರಮವು ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಸಾವಿರಾರು ಯುವಜನತೆಗೆ ಪ್ರಯೋಜನ ನೀಡಿದೆ. ಎನ್‌ಸಿಸಿಯಲ್ಲಿನ ಸುಧಾರಣೆಗಳು ಕೆಡೆಟ್‌ಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಶ್ರೀ ಮೋದಿ ಹೇಳಿದರು, 2014ರಲ್ಲಿ ಸುಮಾರು 14 ಲಕ್ಷದಷ್ಟಿದ್ದ ಎನ್‌ಸಿಸಿ ಕೆಡೆಟ್‌ಗಳ ಸಂಖ್ಯೆ ಇಂದು 20 ಲಕ್ಷ ದಾಟಿದೆ. ಅದರಲ್ಲಿ 8 ಲಕ್ಷಕ್ಕೂ ಹೆಚ್ಚು ಬಾಲಕಿಯರಿದ್ದಾರೆ. ಎನ್‌ಸಿಸಿ ಕೆಡೆಟ್‌ಗಳು ವಿಪತ್ತು ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಜತೆಗೆ  ಕ್ರೀಡಾ ಜಗತ್ತಿನಲ್ಲೂ ಶ್ರೇಷ್ಠರಾಗಿದ್ದಾರೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು. ಎನ್‌ಸಿಸಿ ವಿಶ್ವದ ಅತಿದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆಯಾಗಿದೆ ಎಂಬುದಾಗಿಯೂ ಅವರು ಸಂತಸ ವ್ಯಕ್ತಪಡಿಸಿದರು.

 

21ನೇ ಶತಮಾನದಲ್ಲಿ ಭಾರತದ ಯುವಕರು ದೇಶ ಮತ್ತು ಪ್ರಪಂಚದ ಅಭಿವೃದ್ಧಿಯನ್ನು ನಿರ್ಧರಿಸುತ್ತಾರೆ ಎಂದ ಪ್ರಧಾನ ಮಂತ್ರಿಗಳು, "ಭಾರತೀಯ ಯುವಕರು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವುದು ಮಾತ್ರವಲ್ಲದೆ, ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿದ್ದಾರೆ" ಎಂದು ಬಣ್ಣಿಸಿದರು. ಕಳೆದ ದಶಕದಲ್ಲಿ, ಭಾರತೀಯ ಯುವಕರು 1.5 ಲಕ್ಷ ಸ್ಟಾರ್ಟ್‌ಅಪ್‌ಗಳು ಮತ್ತು 100ಕ್ಕೂ ಹೆಚ್ಚು ಯುನಿಕಾರ್ನ್‌ ಸಂಸ್ಥೆಗಳಗಳನ್ನು ಸ್ಥಾಪಿಸಿದ್ದಾರೆ ಎಂಬುದಾಗಿ ಪತ್ರಿಕೆಗಳಲ್ಲಿನ ವರದಿಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, 200ಕ್ಕೂ ಹೆಚ್ಚು ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳ ನೇತೃತ್ವವನ್ನು ಭಾರತೀಯ ಸಂಜಾತ ಜನರು ವಹಿಸಿದ್ದಾರೆ. ಜಾಗತಿಕ ಜಿಡಿಪಿಗೆ ಟ್ರಿಲಿಯನ್‌ಗಟ್ಟಲೆ ರೂಪಾಯಿಗಳನ್ನು ಕೊಡುಗೆಯಾಗಿ ನೀಡುತ್ತವೆ ಮತ್ತು ಲಕ್ಷಾಂತರ ಜನರ ಜೀವನ ಮಟ್ಟ ಸುಧಾರಿಸಲು ನೆರವಾಗುತ್ತಿವೆ. ಭಾರತೀಯ ವಿಜ್ಞಾನಿಗಳು, ಸಂಶೋಧಕರು ಮತ್ತು ಶಿಕ್ಷಕರು ಜಾಗತಿಕ ಪ್ರಗತಿಯ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಯಾವುದೇ ವಲಯದಲ್ಲಿ, ಭಾರತದ ಯುವಜನತೆಯ ಪ್ರತಿಭೆ ಮತ್ತು ಶಕ್ತಿ ಇಲ್ಲದೆಯೇ ಪ್ರಪಂಚದ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅದಕ್ಕಾಗಿಯೇ ಭಾರತೀಯ ಯುವಜನತೆಯನ್ನು ʼಜಾಗತಿಕ ಒಳಿತಿಗಾಗಿ ಶಕ್ತಿ' ಎಂದು ಕರೆಯುತ್ತಾರೆ ಎಂದು ಶ್ಲಾಘಿಸಿದರು.

ಅನಗತ್ಯ ಅಡೆತಡೆಗಳನ್ನು ನಿವಾರಿಸಿದಾಗ ಒಬ್ಬ ವ್ಯಕ್ತಿಯ ಅಥವಾ ದೇಶದ ಶಕ್ತಿ ಹೆಚ್ಚಾಗುತ್ತದೆ. ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ಯುವಜನತೆ ಎದುರಿಸುತ್ತಿರುವ ಅನೇಕ ಅಡೆತಡೆಗಳನ್ನು ತೊಡೆದು ಹಾಕಲಾಗಿದ್ದು, ಇದು ಯುವಜನತೆ ಮತ್ತು ರಾಷ್ಟ್ರದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. 2014ರಲ್ಲಿ, ಬಹಳಷ್ಟು ಯುವ ಸಮೂಹ ಸುಮಾರು 10-12 ವರ್ಷ ವಯಸ್ಸಿನವರಾಗಿದ್ದರು ಮತ್ತು ಅಂದಿನ ಪರಿಸ್ಥಿತಿಗಳ ಬಗ್ಗೆ ಅವರ ಕುಟುಂಬಗಳನ್ನು ಕೇಳಬೇಕು ಎಂದು ಹೇಳಿದರು. ದಾಖಲೆ ದೃಢೀಕರಣದ ಉದಾಹರಣೆ ನೀಡಿದ ಪ್ರಧಾನ ಮಂತ್ರಿಗಳು, ಅಲ್ಲಿಯವರೆಗೆ ಪ್ರವೇಶ, ಪರೀಕ್ಷೆಗಳು ಮತ್ತು ನೇಮಕಾತಿಗಳಿಗಾಗಿ ದಾಖಲೆಗಳನ್ನು ಗೆಜೆಟೆಡ್ ಶ್ರೇಣಿಯ ಅಧಿಕಾರಿಯಿಂದ ದೃಢೀಕರಿಸಬೇಕಾಗಿದ್ದುದು ಬಹಳ ಸಂಕೀರ್ಣ ಪ್ರಕ್ರಿಯೆಯಾಗಿತ್ತು. ನಮ್ಮ ಸರಕಾರವು ಈ ಸಮಸ್ಯೆಯನ್ನು ಪರಿಹರಿಸಿದೆ. ಈಗ ದಾಖಲೆಗಳ ಸ್ವಯಂ ದೃಢೀಕರಣಕ್ಕೆ ಅವಕಾಶ ನೀಡಿದೆ. ವಿದ್ಯಾರ್ಥಿವೇತನ ವಿತರಣೆಯಲ್ಲಿನ ಅನೇಕ ಸಮಸ್ಯೆಗಳೊಂದಿಗೆ, ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ಯುವಜನತೆ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಏಕ- ಗವಾಕ್ಷಿ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಈ ಹಳೆಯ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ಹೇಳಿದರು. ವಿಷಯ ಆಯ್ಕೆಗೆ ಸಂಬಂಧಪಟ್ಟ ಮತ್ತೊಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಈ ಹಿಂದೆ, ಬೋರ್ಡ್ ಪರೀಕ್ಷೆಗಳ ನಂತರ ವಿಷಯವನ್ನು ಆಯ್ಕೆ ಮಾಡಿಕೊಂಡ ನಂತರ, ಅದನ್ನು ಬದಲಾಯಿಸುವುದು ಕಷ್ಟಕರವಾಗಿತ್ತು, ಆದರೆ ಈಗ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಒಬ್ಬರು ತಮ್ಮ ಇಚ್ಛೆಯಂತೆ ವಿಷಯಗಳನ್ನು ಬದಲಾಯಿಸಿಕೊಂಡು ಅಧ್ಯಯನ ನಡೆಸುವಷ್ಟು ಸಡಿಲಿಕೆ ಒದಗಿಸಿದೆ ಎಂದು ಹೇಳಿದರು.

 

ಒಂದು ದಶಕದ ಹಿಂದೆ, ಯುವಜನತೆ ಬ್ಯಾಂಕ್ ಸಾಲಗಳನ್ನು ಸುಲಭವಾಗಿ ಪಡೆಯುವುದು ಕಷ್ಟಕರವಾಗಿತ್ತು. ಏಕೆಂದರೆ ಬ್ಯಾಂಕ್‌ಗಳು ಸಾಲಗಳನ್ನು ನೀಡುವ ಮೊದಲು ಖಾತರಿ ಕೇಳುತ್ತಿದ್ದವು. 2014ರಲ್ಲಿ ನಾನು ಪ್ರಧಾನ ಮಂತ್ರಿಯಾದಾಗ, ದೇಶದ ಯುವಜನತೆಯ  ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೆ. ಅದರಂತೆ ಸರ್ಕಾರವು ಬ್ಯಾಂಕ್ ಖಾತರಿಗಳಿಲ್ಲದೆ ಸಾಲಗಳನ್ನು ಒದಗಿಸುವ ಮುದ್ರಾ ಯೋಜನೆಯನ್ನು ಪರಿಚಯಿಸಿತು ಎಂದು ಅವರು ಹೇಳಿದರು. ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಹಂಚಿಕೊಂಡ ಪ್ರಧಾನ ಮಂತ್ರಿಗಳು ಆರಂಭದಲ್ಲಿ ₹10 ಲಕ್ಷದವರೆಗಿನ ಸಾಲಗಳನ್ನು ಖಾತರಿಗಳಿಲ್ಲದೆ ನೀಡಲಾಗುತ್ತಿತ್ತು ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ಈ ಮಿತಿಯನ್ನು ₹20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, ಮುದ್ರಾ ಯೋಜನೆಯಡಿ ₹40 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದ್ದು, ಲಕ್ಷಾಂತರ ಯುವಜನತೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಸಹಾಯ ಮಾಡಲಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

ಯುವಕರ ಭವಿಷ್ಯದ ದೃಷ್ಟಿಯಿಂದ ಚುನಾವಣಾ ವ್ಯವಸ್ಥೆಯ ಮಹತ್ವದ ಬಗ್ಗೆಯೂ ಒತ್ತಿ ಹೇಳಿದ ಶ್ರೀ ಮೋದಿ, ಎರಡು ದಿನಗಳ ಹಿಂದೆ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗಿದ್ದು, ಅನೇಕ ಯುವಜನತೆ ಮೊದಲ ಬಾರಿಗೆ ಮತದಾರರಾದರು. ಮತದಾರರ ದಿನದ ಉದ್ದೇಶ ಗರಿಷ್ಠ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಎಂದು ಅವರು ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಚುನಾವಣೆಗಳನ್ನು ನಡೆಸುತ್ತಿದ್ದರೂ, ಕೆಲವು ತಿಂಗಳಿಗೊಮ್ಮೆ ಆಗಾಗ್ಗೆ ನಡೆಯುವ ಚುನಾವಣೆಗಳು ಸವಾಲುಗಳನ್ನು ತಂದೊಡ್ಡುತ್ತವೆ. ಆರಂಭದಲ್ಲಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆಯುತ್ತಿದ್ದವು. ಆದರೆ ಈ ಮಾದರಿ ಬದಲಾದ ಬಳಿಕ ದೇಶಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಿತು ಎಂದು ಅವರು ವಿವರಿಸಿದರು. ಆಗಾಗ್ಗೆ ನಡೆಯುವ ಚುನಾವಣೆಗಳಿಗೆ ಮತದಾರರ ಪಟ್ಟಿಗಳನ್ನು ಪರಿಷ್ಕರಿಸುವ ಅಗತ್ಯವಿತ್ತು ಮತ್ತು ಚುನಾವಣೆಗೆ ಸಂಬಂಧಪಟ್ಟ ಅನೇಕ ಕಾರ್ಯಗಳನ್ನು ಒಳಗೊಂಡಿತ್ತು. ಇದಕ್ಕಿಂರಲೂ ಹೆಚ್ಚಾಗಿ ಶಿಕ್ಷಕರ ಕರ್ತವ್ಯಗಳು, ಅಧ್ಯಯನಗಳು ಮತ್ತು ಪರೀಕ್ಷೆಗೆ ಸಿದ್ಧತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪುನರಾವರ್ತಿತ ಚುನಾವಣೆಗಳು ಆಡಳಿತಾತ್ಮಕ ತೊಂದರೆಗಳನ್ನೂ ಸೃಷ್ಟಿಸುತ್ತವೆ. ಹಾಗಾಗಿ ದೇಶವು ಪ್ರಸ್ತುತ "ಒಂದು ರಾಷ್ಟ್ರ, ಒಂದು ಚುನಾವಣೆ" ಎಂಬ ಪರಿಕಲ್ಪನೆಯ ಬಗ್ಗೆ ಚರ್ಚಿಸುತ್ತಿದೆ. ಭಾರತದ ಯುವಜನತೆ ಈ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದರು, ಏಕೆಂದರೆ ಇದು ಅವರ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಮೆರಿಕದಂತಹ ದೇಶಗಳಲ್ಲಿ, ಹೊಸ ಸರ್ಕಾರ ರಚನೆಗೆ ದಿನಾಂಕವನ್ನು ನಿಗದಿಪಡಿಪಡಿಸುವ ಜತೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ ಎಂದು ಅವರು ಉಲ್ಲೇಖಿಸಿದರು. ಅದೇ ರೀತಿ, ಕಾಲೇಜುಗಳು ಅಥವಾ ಶಾಲೆಗಳಲ್ಲಿ, ವಿದ್ಯಾರ್ಥಿ ಪರಿಷತ್ತಿನ ಚುನಾವಣೆಗಳು ಒಂದೇ ಬಾರಿಗೆ ಪೂರ್ಣಗೊಳ್ಳುತ್ತವೆ. ಪ್ರತಿ ತಿಂಗಳು ಚುನಾವಣೆ ನಡೆಯುವಂತಹ ಸ್ಥಿತಿಯು ತಮ್ಮ ಅಧ್ಯಯನದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಚಿಂತಿಸಲು ಹಾಗೂ "ಒಂದು ರಾಷ್ಟ್ರ, ಒಂದು ಚುನಾವಣೆ" ಚರ್ಚೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

 

 

21ನೇ ಶತಮಾನದ ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಈ ಬದಲಾವಣೆಗೆ ಅನುಗುಣವಾಗಿ ನಡೆಯುವುದು ಅತ್ಯಗತ್ಯ ಎಂದು ಹೇಳಿದ ಶ್ರೀ ಮೋದಿ, ಈ ಪರಿವರ್ತನೆಯಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು. ಕಲೆ, ಸಂಶೋಧನೆ ಅಥವಾ ನಾವೀನ್ಯತೆ ಯಾವುದೇ ಆಗಿರಲಿ, ಪ್ರತಿಯೊಂದು ವಲಯದಲ್ಲೂ ಯುವಜನತೆ ತಮ್ಮ ಹೊಸ ವಿಚಾರಗಳು ಮತ್ತು ಸೃಜನಶೀಲತೆಯ ಮೂಲಕ ಹೊಸ ಶಕ್ತಿಯನ್ನು ತರಬೇಕು. ರಾಜಕೀಯ ಕ್ಷೇತ್ರವು ಮತ್ತೊಂದು ನಿರ್ಣಾಯಕ ಕ್ಷೇತ್ರವಾಗಿದೆ ಎಂದ ಪ್ರಧಾನ ಮಂತ್ರಿಗಳು, ಹೊಸ ಸಲಹೆಗಳು ಮತ್ತು ಹೊಸ ವಿಚಾರಗಳೊಂದಿಗೆ ಯುವಜನತೆ ರಾಜಕೀಯವನ್ನು ಪ್ರವೇಶಿಸುವುದು ಸದ್ಯದ ಅಗತ್ಯವಾಗಿದೆ ಎಂದು ಹೇಳಿದರು. ಹಾಗೆಯೇ, ಒಂದು ಲಕ್ಷ ಯುವಕರು ರಾಜಕೀಯ ಕ್ಷೇತ್ರವನ್ನು ಸೇರಬೇಕೆಂದು ತಾವು ಈ ಹಿಂದೆ ಕೆಂಪು ಕೋಟೆಯಲ್ಲಿ ನಿಂತು ಮಾಡಿದ ಭಾಷಣದ ಮೂಲಕ ನೀಡಿದ ಕರೆಯನ್ನು ಪುನರುಚ್ಚರಿಸಿದರು. "ವಿಕ್ಷಿತ ಭಾರತ: ಯುವ ನಾಯಕರ ಸಂವಾದ"ದ ಹೊತ್ತಿನಲ್ಲೇ ಯುವಜನತೆಯೇ ಶಕ್ತಿ ಎಂದು ಪ್ರಧಾನಿ ಮೋದಿ ಉದ್ಘರಿಸಿದರು. ದೇಶಾದ್ಯಂತ ಲಕ್ಷಾಂತರ ಯುವಕರು ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಪ್ರತಿಯೊಂದು ವೃತ್ತಿಯ ಜನರಿಗೆ "ಭಾರತದ ಸ್ವಾತಂತ್ರ್ಯ" ಎಂಬ ಒಂದೇ ಗುರಿ ಇತ್ತು. ಅದೇ ರೀತಿ, ಈ ಅಮೃತ ಕಾಲದಲ್ಲಿ, ನಮ್ಮ ಏಕೈಕ ಉದ್ದೇಶ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಎಂಬುದಾಗಿರಬೇಕು. ಹಾಗಾಗಿ ಪ್ರತಿಯೊಂದು ನಿರ್ಧಾರ ಮತ್ತು ಕ್ರಿಯೆಯು ಈ ಗುರಿ ಸಾಧನೆಯ ಅಳತೆಗೋಲು ಆಗಬೇಕು ಎಂದು ಅವರು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು, ಗುಲಾಮಗಿರಿಯ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸುವುದು, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, ಭಾರತದ ಏಕತೆಗಾಗಿ ಕಾರ್ಯ ನಿರ್ವಹಿಸುವುದು ಮತ್ತು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದು - ಈ ಪಂಚ ಪ್ರಾಣಗಳನ್ನು ಸ್ಮರಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು,  ಈ ಪಂಚ ಪ್ರಾಣಗಳು ಪ್ರತಿಯೊಬ್ಬ ಭಾರತೀಯನಿಗೂ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಮೊದಲು ತಾವು ವೀಕ್ಷಿಸಿದ ಸಾಂಸ್ಕೃತಿಕ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಮೋದಿ ಅವರು, ಇದು ದೇಶದ ಮಹತ್ವದ ಶಕ್ತಿಯಾದ "ಏಕ ಭಾರತ ಶ್ರೇಷ್ಠ ಭಾರತ" ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರಯಾಗದಲ್ಲಿ ನಡೆಯುತ್ತಿರುವ ಮಹಾ ಕುಂಭವು ರಾಷ್ಟ್ರದ ಏಕತೆಯನ್ನು ಸಂಕೇತಿಸುತ್ತದೆ. ಇದನ್ನು "ಏಕತೆಯ ಕುಂಭ" ಎನ್ನಬಹುದಾಗಿದ್ದು, ದೇಶದ ಪ್ರಗತಿಗೆ ಈ ಏಕತೆ ಅತ್ಯಗತ್ಯ,ʼʼ ಎಂದು ಹೇಳಿದರು.

ಕರ್ತವ್ಯಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವ ಮಹತ್ವವನ್ನು ಸಾರಿ ಹೇಳಿದ ಪ್ರಧಾನ ಮಂತ್ರಿಗಳು, ಭವ್ಯ ಮತ್ತು ವೈವಿಧ್ಯವಾಗಿ ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವನ್ನು ಕರ್ತವ್ಯಗಳ ಆಧಾರದ ಮೇಲೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಪ್ರಧಾನ ಮಂತ್ರಿಗಳು ದೇಶದ ಕೆಡೆಟ್‌ಗಳು ಮತ್ತು ಯುವಕರನ್ನು ಪ್ರೇರೇಪಿಸಲು ಬರೆದ ಕೆಲವು ಸಾಲುಗಳನ್ನು ನೆನಪಿಸಿಕೊಂಡರು. ಹಾಗೆಯೇ ಎಲ್ಲರಿಗೂ ಉಜ್ವಲ ಭವಿಷ್ಯಕ್ಕಾಗಿ ಹಾರೈಸುವುದಾಗಿ ಹೇಳಿ ಅವರು ಭಾಷಣ ಮುಕ್ತಾಯಗೊಳಿಸಿದರು.

 

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಸೇಠ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಸೇನಾ ಪಡೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ, ಎನ್‌ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್ ಮತ್ತು ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿನ್ನೆಲೆ

ಈ ವರ್ಷದ ಗಣರಾಜ್ಯೋತ್ಸವ ಶಿಬಿರದಲ್ಲಿ ಒಟ್ಟು 2361 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು, ಇದರಲ್ಲಿ 917 ಬಾಲಕಿಯರ ಕೆಡೆಟ್‌ಗಳು ಕೂಡ ಸೇರಿದ್ದು, ಗರಿಷ್ಠ ಸಂಖ್ಯೆಯಲ್ಲಿ ಮಹಿಳಾ ಕೆಡೆಟ್‌ಗಳ ಪಾಲ್ಗೊಳ್ಳುವಿಕೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಮಂತ್ರಿ ರ್ಯಾಲಿಯಲ್ಲಿ ಈ ಕೆಡೆಟ್‌ಗಳ ಭಾಗವಹಿಸುವಿಕೆಯು ನವದೆಹಲಿಯಲ್ಲಿ ಒಂದು ತಿಂಗಳ ಕಾಲ ನಡೆದ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರ 2025ರ ಯಶಸ್ವಿ ಪರಾಕಾಷ್ಠೆಯನ್ನು ಗುರುತಿಸುತ್ತದೆ. ಈ ವರ್ಷದ ಎನ್‌ಸಿಸಿ ಪಿಎಂ ರ್ಯಾಲಿಯ ಧ್ಯೇಯ 'ಯುವ ಶಕ್ತಿ, ವಿಕಸಿತ ಭಾರತ'.

 

ರಾಷ್ಟ್ರ ನಿರ್ಮಾಣದ ಕಡೆಗೆ ಎನ್‌ಸಿಸಿಯ ಬದ್ಧತೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು 800ಕ್ಕೂ ಹೆಚ್ಚು ಕೆಡೆಟ್‌ಗಳು ಆ ದಿನ ಪ್ರದರ್ಶಿಸಿದರು. 18 ಸ್ನೇಹಮಯಿ ರಾಷ್ಟ್ರಗಳಿಂದ 144 ಯುವ ಕೆಡೆಟ್‌ಗಳು ಭಾಗವಹಿಸಿದ್ದು ಈ ವರ್ಷದ ರ‍್ಯಾಲಿಗೆ ವಿಶೇಷ ಮೆರುಗು ನೀಡಿತ್ತು.

ಮೇರಾ ಯುವ (ಎಂವೈ) ಭಾರತ್, ಶಿಕ್ಷಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ 650ಕ್ಕೂ ಹೆಚ್ಚು ಸ್ವಯಂಸೇವಕರು ಎನ್‌ಸಿಸಿ ಪಿಎಂ ರ‍್ಯಾಲಿಯಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's services exports rise by 12.7 pc in April despite West Asia crisis: RBI

Media Coverage

India's services exports rise by 12.7 pc in April despite West Asia crisis: RBI
NM on the go

Nm on the go

Always be the first to hear from the PM. Get the App Now!
...
Prime Minister greets people of Goa on Goa Statehood Day
May 30, 2026

The Prime Minister, Shri Narendra Modi, today extended his greetings to the people of Goa on the occasion of Goa Statehood Day.

The Prime Minister said that Goa is widely known for its vibrant culture, rich heritage, natural beauty and warm-hearted people.

The Prime Minister noted that the occasion is an opportunity to remember with gratitude all those who worked tirelessly for the progress and identity of Goa.

The Prime Minister expressed hope that Goa will continue to prosper and play an important role in building a Viksit Bharat.

Shri Modi also prayed for the good health and prosperity of every Goan.

The Prime Minister wrote on X;

“Greetings to the people of Goa on the special occasion of Goa Statehood Day. Goa’s vibrant culture, rich heritage, natural beauty and warm-hearted people are widely known. This day is also an opportunity to remember with gratitude all those who worked tirelessly for its progress and identity. May Goa continue to prosper and play an important role in building a Viksit Bharat. Praying for the good health and prosperity of every Goan.”