ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ನವೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೆಹಲಿ ಐಐಟಿಯ ವಾರ್ಷಿಕ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದು, ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವರು ಸಮಾರಂಭದಲ್ಲಿ ಹಾಜರಿರುತ್ತಾರೆ.
ಘಟಿಕೋತ್ಸವವನ್ನು ಸಂಸ್ಥೆಯ ದೋಗ್ರಾ ಹಾಲ್ ನಲ್ಲಿ ಸೀಮಿತ ಹಾಜರಾತಿಯೊಂದಿಗೆ ವ್ಯಕ್ತಿಶಃ ಸಮಾರಂಭದೊಂದಿಗೆ ಹೈಬ್ರೀಡ್ ವಿಧಾನದಲ್ಲಿ ಸಮಾವೇಶವನ್ನು ನಡೆಸಲಾಗುತ್ತಿದ್ದು ಎಲ್ಲಾ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಅವರ ಪೋಷಕರು, ವಿಶಿಷ್ಟ ಹಳೆಯ ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಅತಿಥಿಗಳನ್ನು ಆನ್ ಲೈನ್ ವೆಬ್ ಕಾಸ್ಟ್ ಮೂಲಕ ತಲುಪಲಿದೆ. ಘಟಿಕೋತ್ಸವದಲ್ಲಿ ಪಿಎಚ್.ಡಿ., ಎಂ.ಟೆಕ್, ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿ, ಎಂ.ಬಿ.ಎ ಮತ್ತು ಬಿಟೆಕ್ ನ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಸಂಸ್ಥೆಯು ರಾಷ್ಟ್ರಪತಿಗಳ ಚಿನ್ನದ ಪದಕ, ನಿರ್ದೇಶಕರುಗಳ ಚಿನ್ನದ ಪದಕ, ಡಾ. ಶಂಕರ ದಯಾಳ್ ಶರ್ಮಾ ಚಿನ್ನದ ಪದಕ, ಪರಿಪೂರ್ಣತೆಯ ಹತ್ತು ಚಿನ್ನದ ಪದಕ ಮತ್ತು ಸಂಸ್ಥೆಯ ಬೆಳ್ಳಿ ಪದಕವನ್ನು ಪದವಿ ಪಡೆಯುತ್ತಿರುವ ಪ್ರತಿಭಾವಂತರಿಗೆ ಪ್ರದಾನ ಮಾಡಲಿದೆ.


